Category Archives: Blog

Your blog category

‘ದಿ ಒಡೆಸ್ಸಿ’ ಪ್ರೀಮಿಯರ್ ಶೋಗಾಗಿ ಭಾರತಕ್ಕೆ ಬರ್ತಾರೆ ಕ್ರಿಸ್ಟೋಫರ್ ನೋಲನ್ – Kannada News | Christopher Nolan in Mumbai for ‘The Odyssey’ Premiere! India Gears for IMAX Spectacle

ಹಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರಿಗೆ (Christopher Nolan) ಭಾರತದಲ್ಲೂ ಭಾರಿ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಪ್ರತಿ ಸಿನಿಮಾಗಳಿಗೂ ಇಲ್ಲಿ ಅದ್ಭುತ ರೆಸ್ಪಾನ್ಸ್ ಸಿಗುತ್ತವೆ ಹಾಗೂ ಗಲ್ಲಾಪೆಟ್ಟಿಗೆಯಲ್ಲೂ ಒಳ್ಳೆಯ ಕಲೆಕ್ಷನ್ ಮಾಡುತ್ತವೆ. ಇದೀಗ ಭಾರತದ ಅಭಿಮಾನಿಗಳನ್ನು ಮತ್ತಷ್ಟು ಖುಷಿಪಡಿಸಲು ನೋಲನ್ ಅವರು ಇದೇ ಮೊದಲ ಬಾರಿಗೆ ತಮ್ಮ ಸಿನಿಮಾವೊಂದರ ಪ್ರಚಾರಕ್ಕಾಗಿ ಮುಂಬೈಗೆ ಲಗ್ಗೆ ಇಡುತ್ತಿದ್ದಾರೆ.

‘ದಿ ಒಡಿಸ್ಸಿ’ ಸಿನಿಮಾನ ಕ್ರಿಸ್ಟೋಫರ್ ನೋಲನ್ ನಿರ್ದೇಶನ ಮಾಡಿದ್ದಾರೆ. ಜುಲೈ 17ರಂದು ತೆರೆಗೆ ಬರುತ್ತಿರುವ ಈ ಚಿತ್ರಕ್ಕೆ ವಿಶ್ವ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಅದರ ಭಾಗವಾಗಿ ತಂಡ ಮುಂಬೈಗೆ ಬರುತ್ತಿದೆ. ಯೂನಿವರ್ಸಲ್ ಪಿಕ್ಚರ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಜುಲೈ ತಿಂಗಳಿನಲ್ಲಿ ಮುಂಬೈನಲ್ಲಿ ‘ದಿ ಒಡಿಸ್ಸಿ’ ಚಿತ್ರದ ಭವ್ಯ ಪ್ರೀಮಿಯರ್ ಶೋ ಆಯೋಜಿಸಲಾಗಿದೆ.

ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕ್ರಿಸ್ಟೋಫರ್ ನೋಲನ್ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ನೋಲನ್ ಜೊತೆಗೆ ಹಾಲಿವುಡ್‌ನ ಖ್ಯಾತ ನಟರಾದ ಮ್ಯಾಟ್ ಡಮನ್, ಟಾಮ್ ಹಾಲೆಂಡ್ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ನಿರ್ಮಾಪಕಿ ಎಮ್ಮಾ ಥಾಮಸ್ ಕೂಡ ಮುಂಬೈಗೆ ಆಗಮಿಸುತ್ತಿದ್ದಾರೆ. ಮುಂಬೈನ ಫೀನಿಕ್ಸ್ ಪಲ್ಲಾಡಿಯಮ್‌ನಲ್ಲಿರುವ ಪಿವಿಆರ್ ಐಕಾನ್ ಐಮ್ಯಾಕ್ಸ್ ಥಿಯೇಟರ್‌ನಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ಲಂಡನ್, ಪ್ಯಾರಿಸ್ ಮತ್ತು ನ್ಯೂಯಾರ್ಕ್‌ನಂತಹ ವಿಶ್ವದ ಪ್ರಮುಖ ನಗರಗಳ ಸಾಲಿನಲ್ಲಿ ಈಗ ಮುಂಬೈ ಕೂಡ ಸೇರ್ಪಡೆಯಾಗಿದ್ದು, ಈ ಈವೆಂಟ್ ಭಾರತದ ಸಿನಿಮಾ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಾಲಿವುಡ್ ಕಾರ್ಯಕ್ರಮವಾಗಿ ಮೂಡಿಬರಲಿದೆ.

ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿರುವ ‘ದಿ ಒಡಿಸ್ಸಿ’

ನೋಲನ್ ಅವರ ಈ ಹಿಂದಿನ ‘ಓಪನ್ ಹೈಮರ್’ ಸಿನಿಮಾ ಬರೋಬ್ಬರಿ 7 ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡು ಜಾಗತಿಕವಾಗಿ ಸಖತ್ ಸೌಂಡ್ ಮಾಡಿತ್ತು. ಅದರ ಬೆನ್ನಲ್ಲೇ ಬರುತ್ತಿರುವ ‘ದಿ ಒಡಿಸ್ಸಿ’ ಮೇಲೆ ಭಾರಿ ನಿರೀಕ್ಷೆಗಳಿವೆ. ಹೋಮರ್ ಅವರ ಪ್ರಸಿದ್ಧ ಇತಿಹಾಸ ಪ್ರಸಿದ್ಧ ಮಹಾಕಾವ್ಯವನ್ನು ಆಧರಿಸಿ ಈ ಸಿನಿಮಾವನ್ನು ಸಿದ್ಧಪಡಿಸಲಾಗಿದೆ. ಟ್ರಾಯ್ ನಗರದ ಪತನದ ನಂತರ ‘ಒಡಿಸ್ಸಿಯಸ್’ ಎಂಬ ನಾಯಕ ಹತ್ತು ವರ್ಷಗಳ ಕಾಲ ನಡೆಸುವ ಅಪಾಯಕಾರಿ ಸಾಹಸದ ಪ್ರಯಾಣದ ಕಥೆ ಇದರಲ್ಲಿದೆ.

ತಾಂತ್ರಿಕವಾಗಿಯೂ ಈ ಸಿನಿಮಾ ಹೊಸ ಮೈಲಿಗಲ್ಲು ಸೃಷ್ಟಿಸುತ್ತಿದೆ. ಸಂಪೂರ್ಣವಾಗಿ ಐಮ್ಯಾಕ್ಸ್ ಕ್ಯಾಮೆರಾಗಳಲ್ಲೇ ಚಿತ್ರೀಕರಣಗೊಂಡ ವಿಶ್ವದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಇನ್ನು ಚಿತ್ರದಲ್ಲಿ ಮ್ಯಾಟ್ ಡಮನ್, ಟಾಮ್ ಹಾಲೆಂಡ್ ಜೊತೆಗೆ ಅನ್ ಹ್ಯಾಥ್‌ವೇ, ರಾಬರ್ಟ್ ಪ್ಯಾಟಿನ್ಸನ್, ಜೆಂಡಾಯಾ ಮತ್ತು ಚಾರ್ಲಿಜ್ ಥೆರಾನ್ ಅವರಂತಹ ಸ್ಟಾರ್ ಕಲಾವಿದರು ನಟಿಸಿದ್ದಾರೆ.

ಇದನ್ನೂ ಓದಿ:  ಭಾರತದಲ್ಲಿ ಕ್ರಿಸ್ಟೋಫರ್ ನೋಲನ್ ಹೊಸ ಸಿನಿಮಾದ ಟಿಕೆಟ್ ಬೆಲೆ 3 ಸಾವಿರ ರೂಪಾಯಿಗೂ ಅಧಿಕ

ಭಾರತದಾದ್ಯಂತ ಈ ಚಿತ್ರದ ಐಮ್ಯಾಕ್ಸ್ ಸ್ಕ್ರೀನಿಂಗ್‌ಗಳ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ನೋಲನ್ ಅವರ ಹೊಸ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಭಾರತೀಯ ಚಿತ್ರಪ್ರೇಮಿಗಳು ಕಾತರರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟೆಲಿಗ್ರಾಮ್ ತಾತ್ಕಾಲಿಕ ನಿಷೇಧ: ಕೇಂದ್ರದ ನಿರ್ಧಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸಂಸ್ಥೆ – Kannada News | Telegram Challenges India’s NEET UG Re Exam Ban in Delhi High Court Today

ನವದೆಹಲಿ, ಜೂನ್ 17: ಭಾರತದಲ್ಲಿ ಜೂನ್ 21ರಂದು ನಡೆಯಲಿರುವ ನೀಟ್ ಯುಜಿ (NEET-UG 2026) ಮರು ಪರೀಕ್ಷೆಯ ಹಿನ್ನೆಲೆಯಲ್ಲಿ ಟೆಲಿಗ್ರಾಮ್ ಆ್ಯಪ್ ತಾತ್ಕಾಲಿಕವಾಗಿ ನಿರ್ಬಂಧಿಸಿರುವ ಕೇಂದ್ರ ಸಕರಕಾರದ ಆದೇಶವನ್ನು ಪ್ರಶ್ನಿಸಿ ಟೆಲಿಗ್ರಾಮ್ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದೆ. ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ತೇಜಸ್ ಕರಿಯಾ ನೇತೃತ್ವದ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಲಾಗಿದ್ದು, ನ್ಯಾಯಾಲಯವು ಇಂದು ನಂತರದ ಅವಧಿಯಲ್ಲಿ ಪ್ರಕರಣದ ತುರ್ತು ವಿಚಾರಣೆ ನಡೆಸಲು ಒಪ್ಪಿಕೊಂಡಿದೆ.

ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ತನಿಖೆಯನ್ನು ಕೇಂದ್ರ ತನಿಖಾ ದಳ (CBI) ನಡೆಸುತ್ತಿದೆ. ಈ ಹಿಂದೆ ಪರೀಕ್ಷೆ ನಡೆಯುವ ಮುನ್ನ ಪ್ರಶ್ನೆಪತ್ರಿಕೆಗಳನ್ನು ಪಿಡಿಎಫ್ (PDF) ರೂಪದಲ್ಲಿ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ ಹಂಚಿಕೊಳ್ಳಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

ಮುಂಬರುವ ಜೂನ್ 21ರ ಮರು ಪರೀಕ್ಷೆಯಲ್ಲೂ ಇಂತಹ ಯಾವುದೇ ಭದ್ರತಾ ಲೋಪಗಳು ಆಗಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಜೂನ್ 22ರವರೆಗೆ ಭಾರತದಲ್ಲಿ ಟೆಲಿಗ್ರಾಮ್ ಅನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಸರ್ಕಾರದ ಈ ದಿಢೀರ್ ಕ್ರಮದ ವಿರುದ್ಧ ಟೆಲಿಗ್ರಾಮ್ ಈಗ ನ್ಯಾಯಾಲಯದಿಂದ ಪರಿಹಾರ ಕೋರಿದೆ.

ಇನ್ನೊಂದೆಡೆ, ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಕೇಂದ್ರ ಸರ್ಕಾರದ ನಿರ್ಧಾರವನ್ನು ಸಂಪೂರ್ಣವಾಗಿ ಸ್ವಾಗತಿಸಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) 2020 ರ ಸೆಕ್ಷನ್ 69A ಅಡಿಯಲ್ಲಿ ದೇಶದ ಹಿತದೃಷ್ಟಿಯಿಂದ ಅತ್ಯಂತ ಅಲ್ಪಾವಧಿಗೆ ಮಾತ್ರ ಈ ನಿರ್ಬಂಧ ಹೇರಲಾಗಿದೆ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ. ಲಕ್ಷಾಂತರ ಪ್ರಾಮಾಣಿಕ ವಿದ್ಯರ್ಥಿಗಳಿಗೆ ನ್ಯಾಯ ಒದಗಿಸಲು ಮತ್ತು ಪರೀಕ್ಷೆಯ ಪಾರದರ್ಶಕತೆ ಕಾಪಾಡಲು ಈ ಕ್ರಮ ಅನಿವಾರ್ಯವಾಗಿತ್ತು ಎಂದು ಸಂಸ್ಥೆ ಹೇಳಿದೆ.

ಮತ್ತಷ್ಟು ಓದಿ: Telegram Ban: ಭಾರತದಲ್ಲಿ ಟೆಲಿಗ್ರಾಮ್​ಗೆ ತಾತ್ಕಾಲಿಕ ನಿಷೇಧ: ನೀಟ್ ಮರು ಪರೀಕ್ಷೆಗೂ ಮುನ್ನ ಕೇಂದ್ರದ ಕ್ರಮ

ಇತ್ತೀಚಿನ ವಾರಗಳಲ್ಲಿ ಟೆಲಿಗ್ರಾಮ್‌ನಲ್ಲಿ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ಹಲವು ಸಂಘಟಿತ ಚಾನೆಲ್‌ಗಳು ಸಕ್ರಿಯವಾಗಿದ್ದವು ಎಂದು ಎನ್‌ಟಿಎ ಮತ್ತು ಶಿಕ್ಷಣ ಸಚಿವಾಲಯ ನ್ಯಾಯಾಲಯಕ್ಕೆ ಮಾಹಿತಿ ನೀಡಿವೆ. ಈ ವಂಚಕರ ಜಾಲಗಳು ತಮ್ಮ ಚಾನೆಲ್‌ಗಳಿಗೆ ಪೇಪರ್ ಲೀಕ್ಡ್ ನೀಟ್, ರೀ-ನೀಟ್ 2026, ಖಾಸಗಿ ಮಾಫಿಯಾ ಹಾಗೂ ರೀ ನೀಟ್ ಮಾಫಿಯಾ ಎಂಬ ಹೆಸರುಗಳನ್ನು ಇಟ್ಟುಕೊಂಡು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುತ್ತಿದ್ದವು.

ಮರು ಪರೀಕ್ಷೆಯ ಸಮಯದಲ್ಲಿ ಇಂತಹ ಚಾನೆಲ್‌ಗಳು ಸುಳ್ಳು ವದಂತಿಗಳನ್ನು ಹರಡುವುದನ್ನು ಮತ್ತು ಪರೀಕ್ಷಾ ವ್ಯವಸ್ಥೆಗೆ ಧಕ್ಕೆ ತರುವುದನ್ನು ತಡೆಯಲು ಈ ತಾತ್ಕಾಲಿಕ ನಿಷೇಧ ಅತ್ಯಂತ ಅಗತ್ಯವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ 21ರ ನೀಟ್ ಮರು ಪರೀಕ್ಷೆಯಲ್ಲಿ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಜೂನ್ 22ರವರೆಗೆ ಟೆಲಿಗ್ರಾಮ್ ಆಪ್ ಅನ್ನು ಬ್ಯಾನ್ ಮಾಡಿದೆ. ಈ ಬ್ಯಾನ್ ತೆರವುಗೊಳಿಸುವಂತೆ ಕೋರಿ ಟೆಲಿಗ್ರಾಮ್ ಸಂಸ್ಥೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಹೈಕೋರ್ಟ್ ಇಂದು ಈ ಬಗ್ಗೆ ವಿಚಾರಣೆ ನಡೆಸಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:25 pm, Wed, 17 June 26

Source link

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಬಿದ್ದು 7 ಜನ ಸತ್ತ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು! – Kannada News | Bengaluru Bowring Hospital Wall: Negligence After 7 Deaths Sparks Safety Concerns

ಬೆಂಗಳೂರು, ಜೂನ್ 17: ಸುಮಾರು ಒಂದೂವರೆ ತಿಂಗಳ ಹಿಂದೆ ಬೆಂಗಳೂರಿನ ಶಿವಾಜಿ ನಗರದ ಬೌರಿಂಗ್ ಅಥವಾ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು ಬಳಿ ಸಂಭವಿಸಿದ ಬೃಹತ್ ಗೋಡೆ ಕುಸಿತದಲ್ಲಿ ಏಳು ಮಂದಿ ಮೃತಪಟ್ಟಿದ್ದರು. ಈ ಭೀಕರ ದುರಂತ ಸಂಭವಿಸಿದರೂ, ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಘಟನಾ ಸ್ಥಳದಿಂದ ಕೇವಲ 100-150 ಮೀಟರ್ ಅಂತರದಲ್ಲಿ, ಬೌರಿಂಗ್ ಆಸ್ಪತ್ರೆಯ ಮತ್ತೊಂದು ಗೋಡೆಯು ಬೃಹತ್ ಬಿರುಕು ಬಿಟ್ಟು ಬೀಳುವ ಹಂತ ತಲುಪಿದೆ.

ಈ ಅಪಾಯಕಾರಿ ಪ್ರದೇಶದಲ್ಲಿ ಜನಸಾಮಾನ್ಯರು, ವಿಶೇಷವಾಗಿ ಪಾದಚಾರಿಗಳು ನಿತ್ಯ ಓಡಾಡುತ್ತಿದ್ದಾರೆ. ಆದರೆ, ಯಾವುದೇ ಬ್ಯಾರಿಕೇಡ್‌ಗಳನ್ನಾಗಲಿ ಅಥವಾ ಮುನ್ನೆಚ್ಚರಿಕೆಯನ್ನಾಗಲಿ ಅಳವಡಿಸಿಲ್ಲ. ಮಳೆಗಾಲ ಮತ್ತೆ ಸಮೀಪಿಸುತ್ತಿದ್ದು, ಈ ಗೋಡೆ ಕುಸಿದು ಮತ್ತೊಂದು ದುರಂತ ಸಂಭವಿಸುವ ಭೀತಿಯಿದೆ. ಜಿಬಿಎ ಅಧಿಕಾರಿಗಳಿಗೆ ಮತ್ತು ಬೆಂಗಳೂರು ಕೇಂದ್ರ ನಗರಪಾಲಿಕೆ ಅಧಿಕಾರಿಗಳಿಗೆ ಇಂತಹ ಅಪಾಯಕಾರಿ ಪರಿಸ್ಥಿತಿಗಳ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಿರುವುದು ಆಘಾತಕಾರಿಯಾಗಿದೆ. ಪಾದಚಾರಿಗಳ ಜೀವಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ, ಕನಿಷ್ಠ ದುರಂತ ಸಂಭವಿಸಿದ ಪ್ರದೇಶದ ಸುತ್ತಮುತ್ತಲ ಗೋಡೆಗಳನ್ನಾದರೂ ಸುರಕ್ಷಿತಗೊಳಿಸುವ ಮೂಲಕ ಸಾರ್ವಜನಿಕರ ಜೀವಕ್ಕೆ ಭದ್ರತೆ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ISRO Recruitment 2026: ಇಸ್ರೋದಲ್ಲಿ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನ; ಬೆಂಗಳೂರಿನಲ್ಲಿ ಕೆಲಸ! – Kannada News | ISRO URSC JRF Recruitment 2026: Apply Online for 17 Junior Research Fellow Posts by July 11

ಇಸ್ರೋದಲ್ಲಿ ಉದ್ಯೋಗಾವಕಾಶImage Credit source: Pinterest

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ISRO) ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಸುವರ್ಣಾವಕಾಶ. ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಇಸ್ರೋದ ಪ್ರಮುಖ ಕೇಂದ್ರವಾದ ಯು.ಆರ್. ರಾವ್ ಉಪಗ್ರಹ ಕೇಂದ್ರ (URSC) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ (Online) ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯ ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ:

ಹುದ್ದೆಯ ವಿವರಗಳು:

  • ಸಂಸ್ಥೆಯ ಹೆಸರು: ಯು.ಆರ್. ರಾವ್ ಉಪಗ್ರಹ ಕೇಂದ್ರ (URSC) / ಇಸ್ರೋ (ISRO), ಬೆಂಗಳೂರು.
  • ಹುದ್ದೆಯ ಹೆಸರು: ಜೂನಿಯರ್ ರಿಸರ್ಚ್ ಫೆಲೋ (Junior Research Fellow – JRF)
  • ಒಟ್ಟು ಹುದ್ದೆಗಳ ಸಂಖ್ಯೆ: 17
  • ಉದ್ಯೋಗದ ಸ್ವರೂಪ: ಸಂಪೂರ್ಣವಾಗಿ ತಾತ್ಕಾಲಿಕ ಆಧಾರದ ಮೇಲೆ (Purely on Temporary Basis)

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ: ಜೂನ್ 12
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 11

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ನೋಂದಾಯಿಸಿಕೊಳ್ಳಬೇಕು. ಶೈಕ್ಷಣಿಕ ಅರ್ಹತೆ, ವಯೋಮಿತಿ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ವಿವರಗಳಿಗಾಗಿ ಇಸ್ರೋದ ಅಧಿಕೃತ ವೆಬ್‌ಸೈಟ್‌ಗೆ www.isro.gov.in ಭೇಟಿ ನೀಡಬಹುದು.

ವೆಬ್‌ಸೈಟ್‌ಗೆ ಭೇಟಿ ನೀಡಿದ ಬಳಿಕ “Career” ವಿಭಾಗವನ್ನು ಕ್ಲಿಕ್ ಮಾಡುವ ಮೂಲಕ ವಿವರವಾದ ಜಾಹೀರಾತನ್ನು ವೀಕ್ಷಿಸಬಹುದು ಹಾಗೂ ಆನ್‌ಲೈನ್ ಅರ್ಜಿಯನ್ನು ಸಬ್ಮಿಟ್ ಮಾಡಬಹುದು. ಆಸಕ್ತ ಅಭ್ಯರ್ಥಿಗಳು ಜುಲೈ 11 ರ ಒಳಗಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಲು ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:15 pm, Wed, 17 June 26

Source link

ಚಾಮರಾಜನಗರದಲ್ಲೊಂದು ಹೃದಯ ವಿದ್ರಾವಕ ಘಟನೆ: ಗ್ರೈಂಡರ್​​​ನಿಂದ ವಿದ್ಯುತ್​ ಪ್ರವಹಿಸಿ 4 ವರ್ಷದ ಬಾಲಕಿ ಸಾವು – Kannada News | Four Year Old Girl Dies From Grinder Electrocution in Chamarajanagar

ಚಾಮರಾಜನಗರ, ಜೂನ್​​ 17: ಗುಂಡ್ಲುಪೇಟೆ ತಾಲೂಕಿನ ಕಲಿಗೌಡನಹಳ್ಳಿಯಲ್ಲಿ ನಡೆದ ಹೃದಯ ವಿದ್ರಾವಕ ಘಟನೆಯಲ್ಲಿ ಗ್ರೈಂಡರ್​ನಿಂದ ವಿದ್ಯುತ್ ಪ್ರವಹಿಸಿ ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಪುಟ್ಟಮ್ಮ ಹಾಗೂ ಆನಂದ್ ದಂಪತಿಯ ಪುತ್ರಿ ಅದ್ವಿತಾ ಮೃತಪಟ್ಟ ದುರ್ದೈವಿ. ಮನೆಯಲ್ಲಿ ಆಟವಾಡುತ್ತಿದ್ದ ಅದ್ವಿತಾ ನೀರು ಕುಡಿಯಲು ಅಡುಗೆ ಮನೆಗೆ ತೆರಳಿದ್ದಳು. ಆ ಸಮಯದಲ್ಲಿ ಅಡುಗೆ ಮನೆಯಲ್ಲಿ ಆನ್ ಆಗಿದ್ದ ಗ್ರೈಂಡರ್ ಅನ್ನು ಮುಟ್ಟಿದ್ದಾಳೆ. ಗ್ರೈಂಡರ್ ಅನ್ನು ಮುಟ್ಟಿದ ತಕ್ಷಣವೇ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಅದ್ವಿತಾಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಿಬಿಎಲ್​ನಲ್ಲಿ ಬೇರೆ ಬೇರೆಯಾಗಿಯೇ ಕಣಕ್ಕಿಳಿಯಲಿವೆ ‘ಮೆಲ್ಬೋರ್ನ್’ ತಂಡಗಳು..! – Kannada News | BBL 2026: Melbourne Stars, Renegades Merger Off for Upcoming Summer

ಆಸ್ಟ್ರೇಲಿಯಾದ ಪ್ರತಿಷ್ಠಿತ ಟಿ20 ಟೂರ್ನಿ ಬಿಗ್ ಬ್ಯಾಷ್ ಲೀಗ್‌ನ (BBL) ಮುಂದಿನ ಸೀಸನ್‌ನಲ್ಲಿ ಮೆಲ್ಬೋರ್ನ್ ನಗರದ ಬದ್ಧ ವೈರಿಗಳಾದ ಮೆಲ್ಬೋರ್ನ್ ಸ್ಟಾರ್ಸ್ (Melbourne Stars) ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ (Melbourne Renegades) ತಂಡಗಳು ಪ್ರತ್ಯೇಕ ಹಾಗೂ ಸ್ವತಂತ್ರ ತಂಡಗಳಾಗಿಯೇ ಮುಂದುವರಿಯಲಿವೆ. ಈ ಎರಡು ಜನಪ್ರಿಯ ಫ್ರಾಂಚೈಸಿಗಳನ್ನು ಒಂದಾಗಿಸುವ ‘ವಿಲೀನ ಯೋಜನೆ’ಯನ್ನು ಕ್ರಿಕೆಟ್ ವಿಕ್ಟೋರಿಯಾ ಅಧಿಕೃತವಾಗಿ ಕೈಬಿಟ್ಟಿದೆ.

ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ರಾಜ್ಯ ಮಂಡಳಿಗಳ ಮುಖ್ಯಸ್ಥರ ನಡುವೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಲೀಗ್‌ನ ಖಾಸಗೀಕರಣದ ಹೈಬ್ರಿಡ್ ಮಾದರಿಗೆ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಆದರೆ, ಈ ನೀತಿಗಳ ಜಾರಿಗೆ ಹೆಚ್ಚಿನ ಸಮಯ ಬೇಕಾಗುವುದರಿಂದ, ಮುಂಬರುವ ಬಿಗ್ ಬ್ಯಾಷ್ ಲೀಗ್ ಟೂರ್ನಿಗಳಲ್ಲಿ ಎರಡೂ ತಂಡಗಳು ತಮ್ಮ ಹಳೆಯ ಬ್ರ್ಯಾಂಡಿಂಗ್, ಜರ್ಸಿ ಬಣ್ಣ ಹಾಗೂ ಸ್ಥಳೀಯ ಸ್ಪರ್ಧಾತ್ಮಕತೆಯೊಂದಿಗೆ ಸ್ವತಂತ್ರವಾಗಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ.

ದಿಢೀರ್ ತಿರುವು ಪಡೆದ ವಿಲೀನ!

ಕೇವಲ ಎರಡು ವಾರಗಳ ಹಿಂದೆ, ಕ್ರಿಕೆಟ್ ವಿಕ್ಟೋರಿಯಾ ಮಂಡಳಿಯು ಮೆಲ್ಬೋರ್ನ್ ಸ್ಟಾರ್ಸ್ ಬ್ರ್ಯಾಂಡ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಎರಡೂ ತಂಡಗಳನ್ನು ವಿಲೀನಗೊಳಿಸುವುದಾಗಿ ಘೋಷಿಸಿತ್ತು. ಈ ಘೋಷಣೆಯೊಂದಿಗೆ ಮುಂಬರುವ ಬಿಗ್ ಬ್ಯಾಷ್ ಲೀಗ್​ನಲ್ಲಿ ಮೆಲ್ಬೋರ್ನ್ ಹೆಸರಿನಲ್ಲಿ ಒಂದು ತಂಡ ಮಾತ್ರ ಕಣಕ್ಕಿಳಿಯಲಿದೆ ಎಂದು ತಿಳಿಸಲಾಗಿತ್ತು.

ಆದರೆ ಇದೀಗ, ಬಿಬಿಎಲ್ ಖಾಸಗೀಕರಣ, ಆಡಳಿತಾತ್ಮಕ ರಚನೆ ಮತ್ತು ಆಟಗಾರರ ವೇತನದ ಕುರಿತು ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ (ACA) ಜೊತೆಗಿನ ಮಾತುಕತೆಗಳು ಇನ್ನು ದೀರ್ಘಕಾಲದ ಪ್ರಕ್ರಿಯೆಯಾಗಿರುವುದರಿಂದ, ಈ ತರಾತುರಿಯ ನಿರ್ಧಾರವನ್ನು ಸದ್ಯಕ್ಕೆ ಕೈ ಬಿಡಲಾಗಿದೆ.

ಹೀಗಾಗಿ ಮುಂಬರುವ ಸೀಸನ್​ನಲ್ಲೂ ಮೆಲ್ಬೋರ್ನ್​ ತಂಡಗಳು ಬೇರೆ ಬೇರೆಯಾಗಿ ಕಣಕ್ಕಿಳಿಯಲಿದೆ. ಅದರಂತೆ ಬಿಗ್ ಬ್ಯಾಷ್ ಲೀಗ್​ನ 16ನೇ ಸೀಸನ್​ನಲ್ಲಿ ಮೆಲ್ಬೋರ್ನ್​ ಸ್ಟಾರ್ಸ್ ತಂಡ ಎಂದಿನಂತೆ ಹಸಿರು ಮತ್ತು ಮೆಲ್ಬೋರ್ನ್​​ ರೆನೆಗೇಡ್ಸ್ ತಂಡ ಕೆಂಪು ಜೆರ್ಸಿಯಲ್ಲಿ ಅಭಿಮಾನಿಗಳನ್ನು ರಂಜಿಸಲಿವೆ.

ಮೆಲ್ಬೋರ್ನ್​ ತಂಡಗಳ ಸ್ಟಾರ್​ ಆಟಗಾರರು:

ವಿಕ್ಟೋರಿಯಾ ಕ್ರಿಕೆಟ್ ಮಂಡಳಿಯ ಒಪ್ಪಂದದ ಪ್ರಕಾರ ಎರಡೂ ಫ್ರಾಂಚೈಸಿಗಳ ಪ್ರಮುಖ ಆಟಗಾರರು ತಮ್ಮ ಹಳೆಯ ತಂಡಗಳಲ್ಲೇ ಮುಂದುವರಿಯಲಿದ್ದಾರೆ. ಅದರಂತೆ ಮುಂಬರುವ ಸೀಸನ್​ನಲ್ಲಿ ಮೆಲ್ಬೋರ್ನ್​ ತಂಡಗಳ ಪರ ಕಣಕ್ಕಿಳಿಯಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

  • ಮೆಲ್ಬೋರ್ನ್ ಸ್ಟಾರ್ಸ್ (ಪುರುಷ ತಂಡ): ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಹಿಲ್ಟನ್ ಕಾರ್ಟ್‌ರೈಟ್, ಸ್ಯಾಮ್ ಹಾರ್ಪರ್
  • ಮೆಲ್ಬೋರ್ನ್ ಸ್ಟಾರ್ಸ್ (ಮಹಿಳಾ ತಂಡ):ಮೆಗ್ ಲ್ಯಾನಿಂಗ್, ಅನ್ನಾಬೆಲ್ ಸದರ್ಲ್ಯಾಂಡ್, ಕಿಮ್ ಗಾರ್ತ್, ಮರಿಝಾನೆ ಕಪ್.

ಇದನ್ನೂ ಓದಿ: ಗೋಲು ಬಾರಿಸಿ ಕ್ಷಮೆಯಾಚಿಸಿದ ಯಾಸಿನ್ ಅಯಾರಿ..!

  • ಮೆಲ್ಬೋರ್ನ್ ರೆನೆಗೇಡ್ಸ್ (ಪುರುಷ ತಂಡ):ಜೇಕ್ ಫ್ರೇಸರ್-ಮೆಕ್‌ಗುರ್ಕ್, ವಿಲ್ ಸದರ್ಲ್ಯಾಂಡ್, ಜೋಶ್ ಬ್ರೌನ್, ಜೇಸನ್ ಬೆಹ್ರೆನ್‌ಡಾರ್ಫ್.
  • ಮೆಲ್ಬೋರ್ನ್ ರೆನೆಗೇಡ್ಸ್ (ಮಹಿಳಾ ತಂಡ): ಸೋಫಿ ಮೊಲಿನಕ್ಸ್, ಜಾರ್ಜಿಯಾ ವೇರ್ಹ್ಯಾಮ್, ಕರ್ಟ್ನಿ ವೆಬ್, ನಿಕೋಲ್ ಫಾಲ್ಟಮ್.

Source link

ಉಚಿತ 5G ಅಪ್‌ಗ್ರೇಡ್ ಆಸೆಗೆ ಬಿದ್ದ ಬೆಂಗಳೂರು ವ್ಯಕ್ತಿಗೆ ಶಾಕ್: ಅಕೌಂಟ್ ಹ್ಯಾಕ್ ಮಾಡಿ 15 ಲಕ್ಷ ರೂ. ಸಾಲ ಪಡೆದ ಸೈಬರ್ ವಂಚಕರು! – Kannada News | Bengaluru Cyber Fraud: Man Seeking Free 5G Upgrade Duped of Rs 15 Lakh Loan

ಬೆಂಗಳೂರು, ಜೂನ್ 17: ಸ್ಮಾರ್ಟ್‌ಫೋನ್‌ನಲ್ಲಿ ಉಚಿತವಾಗಿ 4G ಯಿಂದ 5G ನೆಟ್‌ವರ್ಕ್‌ಗೆ ಅಪ್‌ಗ್ರೇಡ್ ಮಾಡಿಕೊಡುವುದಾಗಿ ನಂಬಿಸಿದ ಸೈಬರ್ ವಂಚಕನೊಬ್ಬ, ಬೆಂಗಳೂರಿನ (Bengaluru) ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 15 ಲಕ್ಷ ರೂಪಾಯಿ ಇನ್‌ಸ್ಟಂಟ್ ಲೋನ್ ಮಾಡಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ವಿಕ್ಟೋರಿಯಾ ಲೇಔಟ್ ನಿವಾಸಿ, 50 ವರ್ಷದ ವ್ಯಕ್ತಿ ಈ ಜಾಲಕ್ಕೆ ಬಲಿಯಾದವರಾಗಿದ್ದಾರೆ. ಕೇವಲ 30 ನಿಮಿಷಗಳ ಅವಧಿಯಲ್ಲಿ ವಂಚಕರು ಇವರ ಬ್ಯಾಂಕ್ ಖಾತೆಯನ್ನು ಸಂಪೂರ್ಣ ಹ್ಯಾಕ್ ಮಾಡಿ ಈ ಕೃತ್ಯ ಎಸಗಿದ್ದಾರೆ.

ಮುಖ್ಯಾಂಶಗಳು

  • ಉಚಿತ 5G ಅಪ್‌ಗ್ರೇಡ್ ಆಸೆಗೆ ಬಿದ್ದು ಬೆಂಗಳೂರು ಉದ್ಯೋಗಿ ಭಾರಿ ವಂಚನೆಗೊಳಗಾಗಿದ್ದಾರೆ.
  • ಸಿಮ್ ಕಾರ್ಡ್ ಹ್ಯಾಕ್ ಮಾಡಿ 15 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ.
  • ಸಾರ್ವಜನಿಕರು ಒಟಿಪಿ ಅಥವಾ ಗೌಪ್ಯ ವಿವರಗಳನ್ನು ಯಾರಿಗೂ ಹಂಚಿಕೊಳ್ಳಬಾರದು ಎಂದು ಎಚ್ಚರಿಕೆ.

4G ಯಿಂದ ಇ-ಸಿಮ್ (e-SIM) ವಂಚನೆಯ ಜಾಲ

ಜೂನ್ 13 ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಈ ವ್ಯಕ್ತಿಗೆ ಅಪರಿಚಿತ ಸಂಖ್ಯೆಯಿಂದ ಕರೆಯೊಂದು ಬಂದಿತ್ತು. ತಾನು ಪ್ರಮುಖ ಟೆಲಿಕಾಂ ಕಂಪನಿಯೊಂದರ ಕಾರ್ಯನಿರ್ವಾಹಕ ಎಂದು ಪರಿಚಯಿಸಿಕೊಂಡ ವಂಚಕ, ನಿಮ್ಮ ಮೊಬೈಲ್ ಸಿಮ್ ಅನ್ನು ಉಚಿತವಾಗಿ 5G ಗೆ ಅಪ್‌ಗ್ರೇಡ್ ಮಾಡಿಕೊಡುವುದಾಗಿ ಆಮಿಷ ಒಡ್ಡಿದ್ದ.

ಅವನ ಮಾತು ನಂಬಿದ್ದ ವ್ಯಕ್ತಿ ಆತ ಕೇಳಿದ ಇಐಡಿ (Embedded Identity Document) ಸಂಖ್ಯೆಯನ್ನು ನೀಡಿದ್ದಾರೆ. ಈ ಸಂಖ್ಯೆಯನ್ನು ಬಳಸಿಕೊಂಡು ವಂಚಕರು ವ್ಯಕ್ತಿಯ ಭೌತಿಕ ಸಿಮ್ ಅನ್ನು ತಕ್ಷಣವೇ ತಮ್ಮದೇ ಆದ ಬೇರೆ ಡಿವೈಸ್‌ನಲ್ಲಿ ‘ಇ-ಸಿಮ್’ (e-SIM) ಆಗಿ ಬದಲಾಯಿಸಿಕೊಂಡಿದ್ದಾರೆ. ಸಿಮ್ ಕಾರ್ಡ್ ವಂಚಕರ ಕೈ ಸೇರಿದ ಬೆನ್ನಲ್ಲೇ ವ್ಯಕ್ತಿಯ ಮೊಬೈಲ್ ನೆಟ್‌ವರ್ಕ್ ಕಡಿತಗೊಂಡಿದೆ.

ಕೇವಲ ಅರ್ಧ ಗಂಟೆಯಲ್ಲಿ 15 ಲಕ್ಷ ಸಾಲ!

ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯ ಸಂಪೂರ್ಣ ನಿಯಂತ್ರಣ ಸಾಧಿಸಿದ ಸೈಬರ್ ಅಪರಾಧಿಗಳು, ಅವರ ಬ್ಯಾಂಕಿಂಗ್ ವಿವರಗಳನ್ನು ಹ್ಯಾಕ್ ಮಾಡಿದ್ದಾರೆ. ಬಳಿಕ ವ್ಯಕ್ತಿಗೆ ತಿಳಿಯದಂತೆ ಅವರದೇ ಬ್ಯಾಂಕ್ ಖಾತೆಯ ಮೂಲಕ 15 ಲಕ್ಷ ರೂಪಾಯಿಗಳ ಇನ್‌ಸ್ಟಂಟ್ ಲೋನ್‌ಗೆ ಅರ್ಜಿ ಸಲ್ಲಿಸಿ, ಸಾಲ ಮಂಜೂರು ಮಾಡಿಸಿಕೊಂಡಿದ್ದಾರೆ.

ಮಂಜೂರಾದ 15 ಲಕ್ಷ ರೂ. ಸಾಲದ ಮೊತ್ತದಲ್ಲಿ ಸುಮಾರು 14.6 ಲಕ್ಷ ರೂ. ಖಾತೆಗೆ ಜಮೆಯಾಗಿದೆ. ವಂಚಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಮಧ್ಯಾಹ್ನ 3:30 ರ ವೇಳೆಗೆ ಆ ಖಾತೆಯಿಂದ 2.2 ಲಕ್ಷ ರೂಪಾಯಿಗಳನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಅದೃಷ್ಟವಶಾತ್, ತನ್ನ ಬ್ಯಾಂಕ್ ಖಾತೆಯಲ್ಲಿ ಏನೋ ಅಕ್ರಮ ನಡೆಯುತ್ತಿದೆ ಎಂಬುದನ್ನು ತಕ್ಷಣವೇ ಅರಿತ ವ್ಯಕ್ತಿ, ತಡಮಾಡದೆ ಬ್ಯಾಂಕ್ ಮತ್ತು ಸೈಬರ್ ಕ್ರೈಮ್ ಹೆಲ್ಪ್‌ಲೈನ್‌ಗೆ ದೂರು ನೀಡಿ ಖಾತೆಯನ್ನು ಫ್ರೀಜ್ ಮಾಡಿಸಿದ್ದಾರೆ. ಹೀಗಾಗಿ ಉಳಿದ ಹಣ ವಂಚಕರ ಪಾಲಾಗುವುದು ತಪ್ಪಿದೆ.

ಜೂನ್ 15 ರಂದು ಕೇಂದ್ರ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ದಾಖಲಿಸಿದ್ದು, ಸದ್ಯ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಭೌತಿಕ ಸಿಮ್ ಅನ್ನು ಇ-ಸಿಮ್ ಆಗಿ ಬದಲಾಯಿಸುವಾಗ ಸಾರ್ವಜನಿಕರು ಒಟಿಪಿ ಅಥವಾ ಯಾವುದೇ ಗೌಪ್ಯ ಸಂಖ್ಯೆಗಳನ್ನು ಹಂಚಿಕೊಳ್ಳಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗ್ಯಾರಂಟಿಗಳಿಗೆ ಹಣವಿಲ್ಲದ ಕಾರಣ ಪರಿಷ್ಕರಣೆ ಹೆಸರಲ್ಲಿ ಕತ್ತರಿ: ಬಿ.ವೈ. ವಿಜಯೇಂದ್ರ ಆರೋಪ – Kannada News | Vijayendra Criticises Karnataka Government Over Guarantee Schemes and Neglect of Poor

ಬೆಂಗಳೂರು, ಜೂನ್​​ 17: ಗ್ಯಾರಂಟಿ ಯೋಜನೆಗಳ ನಿರ್ವಹಣೆಗೆ ಹಣ ಕ್ರೋಢೀಕರಣದಲ್ಲಿ ರಾಜ್ಯ ಸರ್ಕಾರಕ್ಕೆ ತೊಂದರೆಯಾಗಿದೆ. ಹೀಗಾಗಿಯೇ ಸುಧಾರಣೆ ಹೆಸರಿನಲ್ಲಿ ಬಡವರಿಗೆ ನೀಡಲಾಗುವ ಯೋಜನೆಗಳಿಗೆ ಕತ್ತರಿ ಹಾಕಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. 1.5 ಲಕ್ಷಕ್ಕೂ ಹೆಚ್ಚು ಮಹಿಳೆಯರು ತೆರಿಗೆ ಪಾವತಿದಾರರು ಇದ್ದಾರೆ. ಅವರಿಗ್ಯಾಕೆ ಗ್ಯಾರಂಟಿ ಎಂದು ಪ್ರಶ್ನಿಸುತ್ತಿದ್ದಾರೆ. ಚುನಾವಣೆ ಸಂದರ್ಭ ಎಲ್ಲರಿಗೂ ಉಚಿತ ಎಂದು ಹೇಳಿದವರಿಗೆ ಈಗ ಇವೆಲ್ಲವೂ ನೆನಪಾಗುತ್ತಿದೆಯಾ? ಕೆಲವೆಡೆ ಅಕ್ರಮ ಆಗಿದೆ ಎಂದಾದರೆ ನಿಮ್ಮ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರುಗಳೇನು ಕತ್ತೆ ಕಾಯುತ್ತಿದ್ದರಾ? ಸರ್ಕಾರದಿಂದ ನೂರಾರು ಕೋಟಿ ಸಂಬಳ ಪಡೆದವರು ಏನು ಮಾಡುತ್ತಿದ್ದರು ಎಂದವರು ಪ್ರಶ್ನಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

Vasthu Tips: ಮನೆಯಲ್ಲಿ ನೀರಿನ ಕಾರಂಜಿ ಇಡುತ್ತಿದ್ದೀರಾ? ಹಾಗಾದ್ರೆ ಈ ದಿಕ್ಕುಗಳ ಬಗ್ಗೆ ತಿಳಿದಿರಲಿ! – Kannada News | Vastu Water Fountain Placement: Boost Home Prosperity and Peace with Feng Shui Tips

ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ನೀರಿನ ಕಾರಂಜಿಗಳನ್ನು (Water Fountain) ಅಳವಡಿಸುವ ಪ್ರವೃತ್ತಿ ಗಣನೀಯವಾಗಿ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ವಿಭಿನ್ನ ವಿನ್ಯಾಸಗಳಲ್ಲಿ ಲಭ್ಯವಿರುವ ಈ ಸುಂದರವಾದ ನೀರಿನ ಕಾರಂಜಿಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ವಾತಾವರಣವನ್ನು ಹೆಚ್ಚು ಶಾಂತಿಯುತ ಮತ್ತು ಆರಾಮದಾಯಕವಾಗಿಸುತ್ತವೆ. ಹರಿಯುವ ನೀರಿನ ನಿರಂತರ ಮಧುರವಾದ ಶಬ್ದವು ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.

ವಾಸ್ತು ಮತ್ತು ಫೆಂಗ್ ಶೂಯಿ ಪ್ರಕಾರ, ಹರಿಯುವ ನೀರನ್ನು ಸಕಾರಾತ್ಮಕ ಶಕ್ತಿ ಮತ್ತು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಜನರು ತಮ್ಮ ಮನೆಗಳಲ್ಲಿ ಕಾರಂಜಿಗಳನ್ನು ಇರಿಸಲು ಇಷ್ಟಪಡುತ್ತಾರೆ. ಆದರೆ, ಇದನ್ನು ವಾಸ್ತು ಪ್ರಕಾರ ಸರಿಯಾದ ದಿಕ್ಕಿನಲ್ಲಿ ಇಡುವುದು ಅಷ್ಟೇ ಮುಖ್ಯವಾಗಿದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಈ ದಿಕ್ಕುಗಳು ಅತ್ಯಂತ ಶುಭ:

  • ಉತ್ತರ ದಿಕ್ಕು (ಕುಬೇರನ ಮೂಲೆ): ಮನೆಯ ಉತ್ತರ ದಿಕ್ಕಿನಲ್ಲಿ ನೀರಿನ ಕಾರಂಜಿ ಇಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಉತ್ತರ ದಿಕ್ಕನ್ನು ಸಂಪತ್ತಿನ ದೇವನಾದ ಕುಬೇರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಾರಂಜಿಯನ್ನು ಇಲ್ಲಿ ಇಡುವುದರಿಂದ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚುತ್ತದೆ.
  • ಈಶಾನ್ಯ ದಿಕ್ಕು: ನೀರಿನ ಕಾರಂಜಿಯನ್ನು ಈಶಾನ್ಯ ದಿಕ್ಕಿನಲ್ಲಿಯೂ ಇಡಬಹುದು. ಈ ದಿಕ್ಕಿನಲ್ಲಿ ಜಲ ಕಾರಂಜಿ ಇಡುವುದರಿಂದ ಕುಟುಂಬಕ್ಕೆ ಸಂತೋಷ, ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ.
  • ಪೂರ್ವ ದಿಕ್ಕು: ಒಂದು ವೇಳೆ ಉತ್ತರ ಅಥವಾ ಈಶಾನ್ಯ ದಿಕ್ಕುಗಳಲ್ಲಿ ಸೂಕ್ತವಾದ ಸ್ಥಳವಿಲ್ಲದಿದ್ದರೆ, ನೀವು ಅದನ್ನು ಪೂರ್ವ ದಿಕ್ಕಿನಲ್ಲಿಯೂ ಇಡಬಹುದು.

ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ:

ಮನೆಯ ಮುಖ್ಯ ಸಭಾಂಗಣದಲ್ಲಿ (Living Room) ಅಥವಾ ಮುಖ್ಯ ಬಾಗಿಲಿನ ಒಳಭಾಗದಲ್ಲಿ ಕಾರಂಜಿಯನ್ನು ಇಡುವುದು ಸೂಕ್ತ. ಆದರೆ, ನೀರಿನ ಕಾರಂಜಿಯಿಂದ ಹರಿಯುವ ನೀರಿನ ದಿಕ್ಕು ಯಾವಾಗಲೂ ಮನೆಯ ಒಳಭಾಗದ ಕಡೆಗೆ ಇರಬೇಕು ಎಂಬುದನ್ನು ನೆನಪಿನಲ್ಲಿಡಿ. ಇದು ಸಂಪತ್ತು ಮನೆಗೆ ಹರಿದುಬರುವುದನ್ನು ಸೂಚಿಸುತ್ತದೆ. ನೀವು ಬಯಸಿದರೆ ಇದನ್ನು ಬಾಲ್ಕನಿ ಅಥವಾ ಉದ್ಯಾನದಲ್ಲೂ ಇಡಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೈದರಾಬಾದ್ ರಸ್ತೆಗೆ ‘ಡೊನಾಲ್ಡ್ ಟ್ರಂಪ್’ ಹೆಸರು: ರೇವಂತ್ ರೆಡ್ಡಿ ಸರ್ಕಾರದ ನಿರ್ಧಾರಕ್ಕೆ ತೀವ್ರ ರಾಜಕೀಯ ವಿರೋಧ – Kannada News | Hyderabad Road Named After Donald Trump: Telangana Govt Move Sparks Political Row

ಹೈದರಾಬಾದ್, ಜೂನ್ 17: ಜಾಗತಿಕ ಐಟಿ ಮತ್ತು ಹೂಡಿಕೆ ಹಬ್ ಆಗಿ ಬೆಳೆಯುತ್ತಿರುವ ಹೈದರಾಬಾದ್‌ನ ರಸ್ತೆಯೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ಹೆಸರಿಡಲು ತೆಲಂಗಾಣದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಆದರೆ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಈ ನಿರ್ಧಾರಕ್ಕೆ ಎಡಪಕ್ಷಗಳಿಂದ ತೀವ್ರ ರಾಜಕೀಯ ವಿರೋಧ ವ್ಯಕ್ತವಾಗಿದ್ದು, ಇದು ಕಾಂಗ್ರೆಸ್‌ನ ಸದ್ಧಾಂತಿಕ ನಿಲುವನ್ನೇ ಪ್ರಶ್ನಿಸುವಂತೆ ಮಾಡಿದೆ.

ಸರ್ಕಾರದ ನಿರ್ಧಾರವೇನು? ಯೋಜನೆ ಏನು?
ಹೈದರಾಬಾದ್‌ನ ಐಟಿ ಕಾರಿಡಾರ್‌ನಲ್ಲಿರುವ ಅಮೆರಿಕನ್ ಕಾನ್ಸುಲೇಟ್‌ಗೆ (ಅಮೆರಿಕ ರಾಯಭಾರ ಕಚೇರಿ) ಸಂಪರ್ಕ ಕಲ್ಪಿಸುವ ರಸ್ತೆಗೆ ‘ಡೊನಾಲ್ಡ್ ಟ್ರಂಪ್ ಅವೆನ್ಯೂ’ ಎಂದು ಹೆಸರಿಡಲು ತೆಲಂಗಾಣ ಸರ್ಕಾರ ತೀರ್ಮಾನಿಸಿದೆ. ಜುಲೈ 4ರ ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಗೆ ಕೆಲವು ದಿನಗಳ ಮುಂಚಿತವಾಗಿ, ಅಂದರೆ ಜೂನ್ 23 ರಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಅವರ ಸಮ್ಮುಖದಲ್ಲಿ ಈ ರಸ್ತೆಯನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ತೆಲಂಗಾಣ ಮತ್ತು ಅಮೆರಿಕ ನಡುವಿನ ವ್ಯಾಪಾರ ಹಾಗೂ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ತೆಲಂಗಾಣ ಸರ್ಕಾರದ ಈ ಹೆಜ್ಜೆಯನ್ನು ಸಿಪಿಐ(ಎಂ) ಹಿರಿಯ ನಾಯಕಿ ಎಂ.ಎ. ಬೇಬಿ ತೀವ್ರವಾಗಿ ಖಂಡಿಸಿದ್ದಾರೆ. ವಿಯೆಟ್ನಾಂ ಯುದ್ಧದ ಸಮಯದಲ್ಲಿ ಅಮೆರಿಕದ ಸಾಮ್ರಾಜ್ಯಶಾಹಿಯನ್ನು ವಿರೋಧಿಸಿ ಭಾರತವು ಕೋಲ್ಕತ್ತಾದ ಅಮೆರಿಕ ಕಾನ್ಸುಲೇಟ್ ರಸ್ತೆಗೆ ಕಮ್ಯುನಿಸ್ಟ್ ನಾಯಕ ‘ಹೋ ಚಿ ಮಿನ್ಹ್’ ಹೆಸರಿಟ್ಟಿದ್ದ ಇತಿಹಾಸವನ್ನು ಅವರು ನೆನಪಿಸಿದ್ದಾರೆ.

ಇಂದು ಇರಾನ್ ಬಿಕ್ಕಟ್ಟು, ಗಾಜಾ ಮಾರಣಹೋಮ ಮತ್ತು ವೆನೆಜುವೆಲಾದಲ್ಲಿ ಅಮೆರಿಕದ ದೌರ್ಜನ್ಯ ಮುಂದುವರೆದಿದೆ. ಇತ್ತೀಚೆಗಷ್ಟೇ ಅಮೆರಿಕದ ದಾಳಿಗೆ ಮೂವರು ಭಾರತೀಯ ನಾವಿಕರು ಬಲಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನಮ್ಮ ಕಾಲದ ಹಿಟ್ಲರ್‌ನಂತಿರುವ ಡೊನಾಲ್ಡ್ ಟ್ರಂಪ್ ಹೆಸರನ್ನು ರಸ್ತೆಗೆ ಇಡುತ್ತಿರುವುದು ಭಾರತದ ಸಾರ್ವಭೌಮತ್ವ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತರುವಂತಹದ್ದು ಎಂದು ಬೇಬಿ ಕಿಡಿಕಾರಿದ್ದಾರೆ. ಈ ನಿರ್ಧಾರವನ್ನು ತಕ್ಷಣವೇ ಹಿಂಪಡೆಯುವಂತೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಬೇಕು ಎಂದು ಅವರು ವಿನಂತಿಸಿದ್ದಾರೆ.

ಮತ್ತಷ್ಟು ಓದಿ: ಇಸ್ರೇಲ್ ಕೈಲಾಗದಿದ್ದರೆ ಸಿರಿಯಾ ನಿಭಾಯಿಸಲಿ; ಹೆಜ್ಬುಲ್ಲಾ ನಿಗ್ರಹಕ್ಕೆ ಟ್ರಂಪ್ ಐಡಿಯಾ

ಹೈದರಾಬಾದ್‌ನಲ್ಲಿ ಜಾಗತಿಕ ಕಂಪನಿಗಳ ಹೂಡಿಕೆ ಮಹಾಪೂರ
ಮತ್ತೊಂದೆಡೆ, ಅಮೆರಿಕ ಮತ್ತು ಜಾಗತಿಕ ಕಂಪನಿಗಳನ್ನು ಆಕರ್ಷಿಸುವಲ್ಲಿ ಹೈದರಾಬಾದ್ ಮುಂಚೂಣಿಯಲ್ಲಿದೆ. ಗೂಗಲ್, ಮೈಕ್ರೋಸಾಫ್ಟ್ ಮತ್ತು ಅಮೆಜಾನ್ ಮಾತ್ರವಲ್ಲದೆ ಇತ್ತೀಚಿನ ವರ್ಷಗಳಲ್ಲಿ ಕಾಸ್ಟ್ಕೊ, ಮೆಕ್‌ಡೊನಾಲ್ಡ್ಸ್, ವ್ಯಾನ್‌ಗಾರ್ಡ್ ಮತ್ತು ಟಿ-ಮೊಬೈಲ್‌ನಂತಹ ಫಾರ್ಚೂನ್ 500 ಕಂಪನಿಗಳು ನಗರದಲ್ಲಿ ತಮ್ಮ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (GCC) ಸ್ಥಾಪಿಸಿವೆ. ನಾಸ್ಕಾಂ (NASSCOM) ಸಂಸ್ಥೆಯ ‘GCC ಲ್ಯಾಂಡ್‌ಸ್ಕೇಪ್ ವರದಿ – 2026’ ಪ್ರಕಾರ, ಭಾರತದಲ್ಲಿ ಆರಂಭವಾದ ಹೊಸ ಬ್ಯಾಂಕಿಂಗ್ ಮತ್ತು ಆರ್ಥಿಕ ಸೇವಾ ಕೇಂದ್ರಗಳಲ್ಲಿ ಅರ್ಧದಷ್ಟು ಹೈದರಾಬಾದ್‌ನಲ್ಲೇ ಇವೆ.

ಇದೇ ಕಾರಣಕ್ಕೆ ಗೂಗಲ್ ಹಾಗೂ ಮೈಕ್ರೋಸಾಫ್ಟ್ ಕಂಪನಿಗಳ ಹೆಸರನ್ನೂ ಪ್ರಮುಖ ರಸ್ತೆಗಳಿಗೆ ಇಡಲು ಸರ್ಕಾರ ಆಲೋಚಿಸುತ್ತಿದೆ.

ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ಅವರು ರಾಷ್ಟ್ರಮಟ್ಟದಲ್ಲಿ ಅಮೆರಿಕದ ವಿದೇಶಾಂಗ ನೀತಿಗಳು ಮತ್ತು ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಗಳನ್ನು ಬಹಿರಂಗವಾಗಿ ಟೀಕಿಸುತ್ತಿರುತ್ತಾರೆ. ಆದರೆ, ಅದೇ ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಟ್ರಂಪ್ ಅವರಿಗೆ ರಸ್ತೆ ಹೆಸರಿಡುವ ಮೂಲಕ ಮಣೆ ಹಾಕುತ್ತಿರುವುದು ಈಗ ದೊಡ್ಡ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link