Headlines

ಇಷ್ಟು ಫೇಮ್ ಸಿಕ್ಕರೂ ಸಿನಿಮಾಗಳಲ್ಲಿ ಏಕೆ ನಟಿಸಲ್ಲ? ಕಾರಣ ತಿಳಿಸಿದ ಹನುಮಂತ – Kannada News | Why Bigg Boss Fame Hanumantha Rejected Movie Offers? Shocking Reason Revealed

ಸಾಕಷ್ಟು ಫೇಮ್ ಸಿಕ್ಕ ಹೊರತಾಗಿಯೂ ಹನುಮಂತ ಅವರು ಸಿನಿಮಾ ಮಾಡುತ್ತಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ಕಡ್ಡಿ ಮುರಿದಂತೆ ಹೇಳಿದ್ದಾರೆ. ‘ದೊಡ್ಡ ದೊಡ್ಡ ಹೀರೋಗಳ ಸಿನಿಮಾಗಳೇ ಓಡುತ್ತಿಲ್ಲ. ಹೀಗಿರುವಾಗ ನಮ್ಮ ಸಿನಿಮಾಗಳನ್ನು ಯಾರು ನೋಡುತ್ತಾರೆ? ಚೆನ್ನಾಗಿರುವ ಆಫರ್​​​ಗಳೇ ಬಂದಿದ್ದವು. ಆದರೆ, ನಾನು ಒಪ್ಪಿಕೊಂಡಿಲ್ಲ. ನನ್ನ ಬದಲು ಇನ್ಯಾರೋ ಮಾಡ್ತಾರೆ. ಅವರಿಗೂ ಚಾನ್ಸ್ ಸಿಕ್ಕಂತೆ ಆಗುತ್ತದೆ. ನಾನು ಊರಲ್ಲಿ ಇದ್ದೆ. ಮನೆ ಕಟ್ಟಿಸುತ್ತಾ ಇದ್ದೇನೆ’ ಎಂದಿದ್ದಾರೆ ಅವರು. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source…

Read More

Gold Rate: ಚಿನ್ನದ ಬೆಲೆ ಸತತ ಎರಡನೇ ದಿನ ಇಳಿಕೆ; 25 ರೂ ತಗ್ಗಿದ ಬಂಗಾರದ ದರ – Kannada News | Gold Price Today on 17th June 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜೂನ್ 17: ಚಿನ್ನದ ಬೆಲೆ ಸತತ ಎರಡನೇ ದಿನ ಇಳಿಕೆಯಾಗಿದೆ. ನಿನ್ನೆಯಂತೆ ಇವತ್ತೂ ಸ್ವಲ್ಪ ತಗ್ಗಿದೆ. ನಿನ್ನೆ ಗ್ರಾಮ್​ಗೆ 15 ರೂ ಇಳಿದಿದ್ದ ಬಂಗಾರದ ದರ (Gold Rates) ಇವತ್ತು 25 ರೂ ಕಡಿಮೆಗೊಂಡಿದೆ. ಎರಡು ದಿನದಲ್ಲಿ 40 ರೂ ಇಳಿದಂತಾಗಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಇದರ ಬೆಲೆ ಹೆಚ್ಚಳ ಆಗಿರುವುದು ವಿಶೇಷ. ಬೆಳ್ಳಿ ಬೆಲೆ ನಿನ್ನೆಯಂತೆ ಇವತ್ತೂ ಬದಲಾವಣೆಗೊಂಡಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,38,500 ರುಪಾಯಿ…

Read More

Video: ಸಹರಾ ಮರುಭೂಮಿಯಲ್ಲಿ ಒಂಟೆ ಮೇಲೆ ಕುಳಿತು ಝೂಮ್ ಮೀಟಿಂಗ್ ಹಾಜರಾದ ಉದ್ಯೋಗಿ – Kannada News | Man sits on camel in Sahara desert to participate in Zoom meeting

ಕೆಲವರಿಗೆ ಕೆಲಸದ ಒತ್ತಡ (Work stress) ಎಷ್ಟು ಇರುತ್ತದೆ ಅಂದ್ರೆ ವೈಯುಕ್ತಿಕ ಜೀವನವನ್ನು ಎಂಜಾಯ್ ಮಾಡಲು ಟೈಮ್ ಇಲ್ಲ. ಇನ್ನು ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಂತೂ ಲ್ಯಾಪ್ ಟಾಪ್ ಬಿಟ್ಟು ಕದಲಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿಯು ಸಹರಾ ಮರುಭೂಮಿಯಲ್ಲಿ (Sahara desert) ಒಂಟೆ ಮೇಲೆ ಕುಳಿತು ಆಫೀಸಿನ ಝೂಮ್ ಮೀಟಿಂಗ್‌ಗೆ ಹಾಜರಾಗಿದ್ದಾನೆ. ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದ್ದು, ಕೆಲಸದ ಮೇಲಿನ ಶ್ರದ್ಧೆ ಅಂದ್ರೆ ಇದು ಎಂದು ಕಾಮೆಂಟ್ ಮಾಡಿದ್ದಾರೆ. ಪ್ರಣವ್‌ (Pranav) ಹೆಸರಿನ ಎಕ್ಸ್‌ ಖಾತೆಯಲ್ಲಿ…

Read More

ಪರಿಷತ್ ಚುನಾವಣೆ: ಜೆಡಿಎಸ್​​ನಿಂದ ಕಾಂಗ್ರೆಸ್​​ ಶಾಸಕರ ಸಂಪರ್ಕ ಸುದ್ದಿ ಸುಳ್ಳೆಂದ ಹೆಚ್​​ಡಿಕೆ

ಬೆಂಗಳೂರು, ಜೂನ್​​ 17: ಪರಿಷತ್ ಚುನಾವಣೆಗೆ ಜೆಡಿಎಸ್ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಆಪರೇಷನ್ ನಡೆಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಜೆಡಿಎಸ್ ಪಕ್ಷ ಇಂತಹ ಯಾವುದೇ ಆಪರೇಷನ್ ನಡೆಸುತ್ತಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಅವರ ಕೈಯಲ್ಲಿದೆ. ಮ್ಯಾನ್ ಪವರ್, ಮಸಲ್ ಪವರ್, ಹಣದ ಪವರ್ ಎಲ್ಲಾ ಇಟ್ಕೊಂಡವ್ರೆ. ಅವರ ಮುಂದೆ ನಾವು ಫೈಟ್ ಮಾಡಕ್ಕಾಗುತ್ತಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಜೆಡಿಎಸ್ ತನ್ನ ಪಕ್ಷದ ಮತಗಳು ಚಲ್ಲಾಪಿಲ್ಲಿ ಆಗಬಾರದು, ಒಟ್ಟಾಗಿರಬೇಕು ಎಂಬ ಉದ್ದೇಶದಿಂದಲೇ…

Read More

‘ನರಗಳು ಬ್ಲಾಕ ಆಗಿವೆ’; ಆರೋಗ್ಯದ ಬಗ್ಗೆ ಸೋನು ನಿಗಮ್ ಆತಂಕಕಾರಿ ಮಾಹಿತಿ – Kannada News | Sonu Nigam’s Nerve Problem: Singer Faces Health Challenge, Vows to Perform

ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ಸದ್ಯ ತೀವ್ರವಾದ ನರಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದಾಗ್ಯೂ, ಅವರು ತಾವು ಮುಂಚಿತವಾಗಿ ಒಪ್ಪಿಕೊಂಡಿರುವ ಸಂಗೀತ ಕಚೇರಿಯನ್ನು ರದ್ದುಗೊಳಿಸದೆ, ಎಂದಿನಂತೆ ವೇದಿಕೆ ಏರಲು ಸಜ್ಜಾಗಿದ್ದಾರೆ. ಮುಂಬೈನಲ್ಲಿ ನಡೆಯಲಿರುವ ಲೈವ್ ಪರ್ಫಾರ್ಮೆನ್ಸ್‌ಗೂ ಮುನ್ನ ಸೋನು ನಿಗಮ್ ಅವರು ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಆರೋಗ್ಯದ ಸ್ಥಿತಿಯ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ನೋವಿನ ನಡುವೆ ಚಿಕಿತ್ಸೆ: ಸೋನು ನಿಗಮ್ ಮಾತು ತಮ್ಮ ಅನಾರೋಗ್ಯದ ಕುರಿತು ಮಾತನಾಡಿರುವ ಸೋನು ನಿಗಮ್, ‘ನನ್ನ ನರಗಳು…

Read More

ಗುಜರಾತ್: ಭೀಕರ ರಸ್ತೆ ಅಪಘಾತ, ಲಾರಿಗೆ ಡಿಕ್ಕಿ ಹೊಡೆದ ಸ್ಲೀಪರ್ ಬಸ್, ಆರು ಪ್ರಯಾಣಿಕರು ಸಾವು – Kannada News | Deadly Highway Collision in Vadodara Leaves Six Dead and Several Injured

ವಡೋದರಾ, ಜೂನ್ 17: ಗುಜರಾತ್‌ನ ವಡೋದರಾ-ಜರೋಡ್ ಹೆದ್ದಾರಿಯಲ್ಲಿ ಇಂದು ಮುಂಜಾನೆ ಅತ್ಯಂತ ಭೀಕರ ರಸ್ತೆ ಅಪಘಾತ(Accident)ವೊಂದು ಸಂಭವಿಸಿದೆ. ಚಲಿಸುತ್ತಿದ್ದ ಟ್ರಕ್‌ಗೆ (ಲಾರಿ) ಐಷಾರಾಮಿ ಸ್ಲೀಪರ್ ಬಸ್ಸೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಎಂಟಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಐಷಾರಾಮಿ ಖಾಸಗಿ ಬಸ್ ರಾಜಸ್ಥಾನದ ಬನ್ಸ್ವಾರಾದಿಂದ ಗುಜರಾತ್‌ನ ಸೂರತ್ ನಗರಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಜರೋಡ್ ಬಳಿಯ ಹೆದ್ದಾರಿಯಲ್ಲಿರುವ ಕೋಟಂಬಿ ಗ್ರಾಮದ ಹತ್ತಿರ ಬಸ್…

Read More

ಡೆಬಿಟ್​​ ಕಾರ್ಡ್​​ ವಂಚನೆ: ಉಡುಪಿಯ ವ್ಯಕ್ತಿಗೆ 2.12 ಲಕ್ಷ ರೂಪಾಯಿ ದೋಖಾ; ದೂರು ದಾಖಲು – Kannada News | Udupi Man Duped of 2.12 Lakh in Debit Card Fraud After Hospital Payment

ಉಡುಪಿ, ಜೂನ್​​ 17: ರಾಜ್ಯದಲ್ಲಿ ಇತ್ತೀಚೆಗೆ ಸೈಬರ್​​ ವಂಚನೆ ಪ್ರಕರಗಳ ಮೇಲಿಂದ ಮೇಲೆ ವರದಿಯಾಗುತ್ತಿದ್ದು, ಪೊಲೀಸರು ಚಾಪೆ ಕೆಳಗೆ ತೂರಿದರೆ ವಂಚಕರು ರಂಗೋಲಿ ಕೆಳಗೆ ನುಗ್ಗುವ ಕೆಲಸ ಮಾಡುತ್ತಿದ್ದಾರೆ. ಸೈಬರ್​​ ಫ್ರಾಡ್​​ಗಳೀಗ ನಾನಾ ರೂಪಗಳನ್ನು ಪಡೆದುಕೊಂಡಿದ್ದು, ಜನಸಾಮಾನ್ಯರನ್ನು ಸುಲಭವಾಗಿ ಯಾಮಾರಿಸುವ ಕೆಲಸಗಳು ನಡೆಯುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಉಡುಪಿಯಲ್ಲೊಂದು ಪ್ರಕರಣ ನಡೆದಿದೆ. ಡೆಬಿಟ್ ಕಾರ್ಡ್ ಮೂಲಕ ವಂಚನೆ ನಡೆಸಿರುವ ಖದೀಮರು ವ್ಯಕ್ತಿಯೋರ್ವರ ಖಾತೆಯಿಂದ ಬರೋಬ್ಬರಿ 2 ಲಕ್ಷ ರೂಪಾಯಿ ಹಣ ದೋಚಿದ್ದಾರೆ. ದೂರುದಾರರು ಜೂನ್ 3ರಂದು…

Read More

Video: ರಾಂಚಿಯ ಆರ್‌ಎಸ್‌ಎಸ್ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ – Kannada News | Ranchi RSS Office Petrol Bomb Attack: Investigation Underway After Midnight Incident

ರಾಂಚಿ, ಜೂನ್ 17: ಜಾರ್ಖಂಡ್ ರಾಜಧಾನಿ ರಾಂಚಿಯ ನಿವಾರಣ್‌ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ್ರಾಂತೀಯ ಕಚೇರಿಯ ಮೇಲೆ ಮಂಗಳವಾರ ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ಸಕಾಲದಲ್ಲಿ ಮುನ್ನೆಚ್ಚರಿಕೆ ವಹಿಸಿದ್ದರಿಂದ ಯಾವುದೇ ಪ್ರಾಣಾಪಾಯ ಅಥವಾ ದೊಡ್ಡ ಪ್ರಮಾಣದ ಆಸ್ತಿ ಹಾನಿ ಸಂಭವಿಸಿಲ್ಲ. ಮಂಗಳವಾರ ಮಧ್ಯರಾತ್ರಿ ಸುಮಾರು 12.36 ರ ವೇಳೆಗೆ ಈ ದಾಳಿ ನಡೆದಿದೆ. ಬುಧವಾರ ಮುಂಜಾನೆ ಆರ್‌ಎಸ್‌ಎಸ್ ಸ್ವಯಂಸೇವಕರು ಪ್ರಾರ್ಥನೆಗಾಗಿ ಸಭಾಂಗಣಕ್ಕೆ ಹೋದಾಗ ಅಲ್ಲಿ ಪೆಟ್ರೋಲ್ ತುಂಬಿದ್ದ ಬಾಟಲಿಗಳು ಪತ್ತೆಯಾಗಿವೆ. ಇದರಿಂದ…

Read More

ಗೋಲು ಬಾರಿಸಿ ಕ್ಷಮೆಯಾಚಿಸಿದ ಯಾಸಿನ್ ಅಯಾರಿ..! – Kannada News | FIFA Wodld Cup 2026: Yasin Ayari Apologizes After Scoring Against Tunisia

FIFA World Cup 2026: ಫಿಫಾ ವಿಶ್ವಕಪ್‌ನಲ್ಲಿ ಸ್ವೀಡನ್ ಪರ ಮೊದಲ ಪಂದ್ಯದಲ್ಲೇ ಎರಡು ಗೋಲು ಬಾರಿಸಿ ಯಾಸಿನ್ ಅಯಾರಿ ಸಖತ್ ಸುದ್ದಿಯಾಗಿದ್ದಾರೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ 2 ಭರ್ಜರಿ ಗೋಲು ದಾಖಲಿಸಿದರೂ ಸಂಭ್ರಮಿಸದೇ ಇರುವುದು. ಬದಲಾಗಿ ಎದುರಾಳಿ ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ್ದಾರೆ. ಮೆಕ್ಸಿಕೋದ ಎಸ್ಟಾಡಿಯೊ ಬಿಬಿವಿಎ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್ ‘ಎಫ್’ ಪಂದ್ಯದಲ್ಲಿ ಟ್ಯುನಿಝಿಯಾ ಮತ್ತು ಸ್ವೀಡನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಸ್ವೀಡನ್ ತಂಡವು 5-1 ಅಂತರದಿಂದ…

Read More

ಹಸೆಮಣೆ ಏರಲಿದ್ದಾರೆ ಶರ್ಮಿಳಾ ಮಾಂಡ್ರೆ, ವರ ತಮಿಳು ಸಿನಿಮಾ ನಿರ್ಮಾಪಕ – Kannada News | Sharmila Mandre getting married to Tamil movie producer Sudhan

ಕನ್ನಡದ ಜನಪ್ರಿಯ ನಟಿ ಶರ್ಮಿಳಾ ಮಾಂಡ್ರೆ (Sharmila Mandre) ಮದುವೆ ಆಗಲಿದ್ದಾರೆ. ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ನಟಿಸಿರುವ ಶರ್ಮಿಳಾ ಮಾಂಡ್ರೆ ಇದೀಗ ತಮಿಳುನಾಡಿನ ಸೊಸೆ ಆಗಲಿದ್ದಾರೆ. ಶರ್ಮಿಳಾ ಮಾಂಡ್ರೆ ಅವರ ನಿಶ್ಚಿತಾರ್ಥ ನಿಶ್ಚಯವಾಗಿದ್ದು, ಇದೇ ತಿಂಗಳ 25ನೇ ತಾರೀಖಿನಂದು ಕುಟುಂಬಸ್ಥರ ಸಮ್ಮುಖದಲ್ಲಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ ನಡೆಯಲಿದೆ. ಶರ್ಮಿಳಾ ಮಾಂಡ್ರೆ ಅವರು ತಮಿಳುನಾಡಿನ ಸೊಸೆಯಾಗಿ ಹೋಗಲಿದ್ದು, ತಮಿಳು ಚಿತ್ರರಂಗದ ನಿರ್ಮಾಪಕ ಸುಧನ್ ಸುಂಧರಮ್ ಅವರ ಕೈ ಹಿಡಿಯಲಿದ್ದಾರೆ. ಸುಧನ್ ಅವರು ಕೆಲ ವರ್ಷಗಳ ಹಿಂದೆ ಬಿಡುಗಡೆ…

Read More