Headlines

Video: ಬೆಂಗಳೂರಿನಲ್ಲಿ ತಡರಾತ್ರಿ ಯುವತಿಯ ನೆರವಿಗೆ ಬಂದ ಅಪರಿಚಿತರು

ಬೆಂಗಳೂರು, ಏಪ್ರಿಲ್ 06: ಹೆಣ್ಣು ಮಕ್ಕಳ ಜತೆ ಕೆಲ ಆಟೋ, ಟ್ಯಾಕ್ಸಿ ಚಾಲಕರು ಸೇರಿದಂತೆ ಪುಂಡಪೋಕರಿಗಳು ಅಹಿತಕರವಾಗಿ ವರ್ತಿಸುವ ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಬೆಂಗಳೂರು (Bengaluru) ನಗರವು ದೇಶದ ಅತ್ಯಂತ ಕಾಳಜಿಯುಳ್ಳ ಹಾಗೂ ಜವಾಬ್ದಾರಿಯುತ ನಗರಗಳಲ್ಲಿ ಒಂದಾಗಿದೆ ಎಂಬುದನ್ನು ಮತ್ತೆ ನೆನಪಿಸಿದೆ. ಇದಕ್ಕೆ ಕಾರಣವಾಗಿದ್ದು ಯುವತಿಯೂ ಹಂಚಿಕೊಂಡ ಈ ವಿಡಿಯೋ. ತಡರಾತ್ರಿ ಒಬ್ಬಂಟಿಯಾಗಿದ್ದ ವೇಳೆ ಈ ಯುವತಿಯ ಸುರಕ್ಷತೆಗಾಗಿ ಇಬ್ಬರು ಅಪರಿಚಿತರು ಬಂದಿದ್ದಾರೆ. ಅಪರಿಚಿತ ವ್ಯಕ್ತಿಗಳು ತೋರಿದ ಕಾಳಜಿ ಕಂಡು ಯುವತಿಯೂ ಫಿದಾ ಆಗಿದ್ದಾರೆ….

Read More

ಓಟಿಪಿಯಿಂದ ಬದುಕಿತು ಬಡಜೀವ: 3 ದಿನ ಬಳಿಕ ಬಾವಿಯೊಳಗಿಂದ ಪವಾಡ ಸದೃಶರಾಗಿ ಬದುಕಿ ಬಂದ ವೃದ್ಧ

ಉಡುಪಿ, ಏಪ್ರಿಲ್ 06: ‘ಮುಳುಗುವವನಿಗೆ ಹುಲ್ಲು ಕಡ್ಡಿ ಕೂಡ ಆಸರೆ’ ಎನ್ನುವಂತೆ ಅದೊಂದು ಗ್ಯಾಸ್ ಸಿಲಿಂಡರ್​ ಒಟಿಪಿಯಿಂದ ವೃದ್ಧ ಜೀವವೊಂದು ದೊಡ್ಡ ಅಪಾಯದಿಂದ ಬದುಕಿಬಂದಿದೆ. ಆಯತಪ್ಪಿ ಬಾವಿಗೆ ಬಿದ್ದಿದ್ದ ವ್ಯಕ್ತಿಯನ್ನು ಗ್ಯಾಸ್ ಸಿಲಿಂಡರ್ (Gas cylinder) ಒಟಿಪಿಯಿಂದ ರಕ್ಷಣೆ ಮಾಡಲಾಗಿದೆ. ಆ ಮೂಲಕ ಅಪರೂಪದ ಘಟನೆಗೆ ಉಡುಪಿ (udupi) ಜಿಲ್ಲೆ ಸಾಕ್ಷಿ ಆಗಿದೆ. ಸದ್ಯ ರಕ್ಷಣೆಗೊಳಗಾದ ವೃದ್ಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಡೆದಿದ್ದೇನು? ಉಡುಪಿ ನಗರದ ಕೊಡವೂರು ವಾರ್ಡ್ ಕಂಬ್ಳಕಟ್ಟದಲ್ಲಿ ನಿರ್ಜನ ಪ್ರದೇಶದ ಮನೆಯಲ್ಲಿ ಶೀನಿವಾಸ್​​ ಆಚಾರ್ಯ(62)…

Read More

ಸಮರ್ಥ್​​​ ನನ್ನು ಗೆಲ್ಲಿಸಿದ್ರೆ ಮುಂದೆ ಸಮಸ್ಯೆ ಆಗಲಿದೆ: ಕಾಂಗ್ರೆಸ್ ಕಾರ್ಯಕರ್ತರಿಗೆ ಜೋಶಿ ಮಹತ್ವದ ಕರೆ

ದಾವಣಗೆರೆ, (ಏಪ್ರಿಲ್ 06): ಮನೆಯಲ್ಲಿ ಇವರ ತಾತ ಇದ್ದಾಗ ಎಂಎಲ್ ಎ , ಮಂತ್ರಿ. ಈಗ ಮತ್ತೆ ಮಗ ಶಾಸಕ ಆದರೆ ದಾವಣಗೆರೆ ಅಕ್ಕ ಪಕ್ಕದ ಕ್ಷೇತ್ರದಲ್ಲಿ ಅವರದೇ ಟಿಕೆಟ್ ಕೊಟ್ಟು ಇಡೀ ದಾವಣಗೆರೆ (Davanagere) ಕಬ್ಜಾ ಮಾಡಿಕೊಳ್ಳುತ್ತಾರೆ. ಈ ಹುಡುಗ ಗೆದ್ದರೆ ಹಿ ಈಸ್ ಅ ಸ್ಮಾಲ್ ಬಾಯ್. ಕಾಂಗ್ರೆಸ್ ಪಕ್ಷದವರು ಬಾಗಲಕೋಟೆಯಲ್ಲಿ ಅಹಿಂದ , ಇಲ್ಲಿ ಗೋವಿಂದ. ಟೇಕನ್ ಫಾರ್ ಗ್ರಾಂಟೆಡ್ ಇವರದ್ದು. ಇಲ್ಲಿ ಯಾರೂ ಸಮರ್ಥರಿರಲಿಲ್ಲವಾ? ನಿಮ್ಮ ಮನೆ ತನಕ್ಕೆ ಆಗಬೇಕಿತ್ತಾ? ಅಲ್ಲಿ…

Read More

ದೆಹಲಿ ವಿಧಾನಸಭೆಯಲ್ಲಿ ಭದ್ರತಾ ಲೋಪ; ಗೇಟ್ ಮುರಿದು ಒಳಗೆ ನುಗ್ಗಿ, ಹೂಗುಚ್ಛ ಇಟ್ಟು ಹೋದ ಕಾರು ಚಾಲಕ!

ನವದೆಹಲಿ, ಏಪ್ರಿಲ್ 6: ಇಂದು ಮಧ್ಯಾಹ್ನ ದೆಹಲಿ ವಿಧಾನಸಭೆಯಲ್ಲಿ (Delhi Assembly) ಗಂಭೀರ ಭದ್ರತಾ ಲೋಪ ಕಂಡುಬಂದಿದೆ. ಉತ್ತರ ಪ್ರದೇಶದ ನೋಂದಣಿ ನಂಬರ್ ಹೊಂದಿರುವ ಅಪರಿಚಿತ ಕಾರು ಗೇಟ್ ಅನ್ನು ಮುರಿದು ಒಳಗೆ ನುಗ್ಗಿದೆ. ಭದ್ರತಾ ಸಿಬ್ಬಂದಿ ನೋಡನೋಡುತ್ತಿದ್ದಂತೆ ಕಾರು ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಆಫೀಸ್ ಬಳಿ ತೆರಳಿದೆ. ಈ ಘಟನೆ ಕೋಲಾಹಲಕ್ಕೆ ಕಾರಣವಾಯಿತು. ಆ ಕಾರು, ಚಾಲಕ ಮತ್ತು ಘಟನೆಯ ಹಿಂದಿನ ಕಾರಣಗಳನ್ನು ಗುರುತಿಸಲು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಭದ್ರತಾ ವ್ಯವಸ್ಥೆಗಳ…

Read More

ITR Filing 2026: ಹೊಸ ವರ್ಷಕ್ಕೆ ಐಟಿಆರ್ ಫಾರ್ಮ್​ಗಳಲ್ಲಿ ಈ ಕೆಲ ಬದಲಾವಣೆಗಳನ್ನು ಗಮನಿಸಿ

ನವದೆಹಲಿ, ಏಪ್ರಿಲ್ 6: ಹೊಸ ಹಣಕಾಸು ವರ್ಷ ಆರಂಭವಾಗಿದ್ದು, ಈಗ ಟ್ಯಾಕ್ಸ್ ರಿಟರ್ನ್ ಸಲ್ಲಿಸುವ ಸಮಯದ ಆರಂಭ. ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಐಟಿಆರ್ ಫಾರ್ಮ್​ಗಳನ್ನು ನೋಟಿಫೈ ಮಾಡಿದೆ. ಈ ಫಾರ್ಮ್​ಗಳಲ್ಲಿ ಕೆಲ ಬದಲಾವಣೆಗಳಾಗಿವೆ. ಪ್ರಕ್ರಿಯೆ ಸರಳಗೊಳಿಸಲಾಗಿರುವುದು, ಕಾನೂನು ಬದ್ಧತೆ ನಿಯಮ (compliance rules) ಕಠಿಣಗೊಳಿಸಿರುವುದು ಇತ್ಯಾದಿ ಬದಲಾವಣೆಗಳಿವೆ. ಆದರೆ, ಫಾರ್ಮ್​ಗಳ ಸಂಖ್ಯೆಯಲ್ಲಿ ಬದಲಾವಣೆ ಆಗಿಲ್ಲ. ಅಂದಹಾಗೆ, ಐಟಿ ರಿಟರ್ನ್ ಸಲ್ಲಿಸಲು ಜುಲೈ 31ರವರೆಗೆ ಕಾಲಾವಕಾಶ ಇರುತ್ತದೆ. ಹೀಗಾಗಿ, ಐಟಿಆರ್ ಫಾರ್ಮ್​ಗಳಲ್ಲಿ ಮಾಡಲಾಗಿರುವ ಕೆಲ ಪ್ರಮುಖ…

Read More

ಅಮೆರಿಕ ಮತ್ತು ಇಸ್ರೇಲ್ ವರ್ತನೆ ಆಧುನಿಕ ಅನಾಗರಿಕತೆಯ ಪ್ರತಿಬಿಂಬ; ಇರಾನ್ ಟೀಕೆ

ಟೆಹ್ರಾನ್, ಏಪ್ರಿಲ್ : ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಇಂದು ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್‌ನ ನಡವಳಿಕೆ ಮತ್ತು ಹೇಳಿಕೆ ಎರಡರಲ್ಲೂ ಆಧುನಿಕ ಅನಾಗರಿಕತೆ ಗೋಚರಿಸುತ್ತಿದೆ ಎಂದು ಟೀಕಿಸಿದ್ದಾರೆ. ಎಎನ್​ಐಗೆ ನೀಡಿದ ಲಿಖಿತ ಸಂದರ್ಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಬಾಂಬ್ ಹಾಕುವುದಾಗಿ ನೀಡಿದ ಬೆದರಿಕೆ ಮತ್ತು ಟೆಹ್ರಾನ್ ಬಳಿಯ ಪ್ರಮುಖ ಸೇತುವೆಯನ್ನು ನಾಶಪಡಿಸಲಾಗಿದೆ ಎಂಬ ಅವರ ಇತ್ತೀಚಿನ ಹೇಳಿಕೆ ಬಗ್ಗೆ ಮಾತನಾಡಿದ್ದಾರೆ. “ನಮ್ಮದು ಸಾವಿರಾರು ವರ್ಷಗಳ…

Read More

ಬಾಡಿಗೆಗೆ ಹೋಗಿದ್ದ ವೇಳೆ ಕಿರಿಕ್​: ಹಿಂಬಾಲಿಸಿಕೊಂಡು ಬಂದು ದೊಣ್ಣೆ, ಮಾರಕಾಸ್ತ್ರಗಳಿಂದ ಕನ್ನಡಿಗರ ಮೇಲೆ ದಾಳಿ

ಆನೇಕಲ್, ಏಪ್ರಿಲ್​ 06: ಕನ್ನಡಿಗರನ್ನು ಹಿಂಬಾಲಿಸಿಕೊಂಡು ಬಂದ ತಮಿಳುನಾಡಿನ ಗೂಂಡಾಗಳು ಟಿಟಿ ವಾಹನವನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಚಾಲಕನಿಗೆ ಮಾರಣಾಂತಿಕವಾಗಿ ಹಲ್ಲೆ (attack) ಮಾಡಿ ದರ್ಪ ಮೆರೆದಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಟೋಲ್​ ಬಳಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರ ಹಿಡಿದು ಟಿಟಿ ವಾಹನ ಹಿಂಬಾಲಿಸಿ ಬಂದಿದ್ದ ತಮಿಳಿಗರು, ಮಹಿಳೆಯರು, ಮಕ್ಕಳು ಇದ್ದಾರೆಂದು ಗೋಗರೆದರೂ ಬಿಡದೆ ಟಿಟಿ ವಾಹನದ ಗಾಜು ಪುಡಿಗೈದು ಅಟ್ಟಹಾಸ ಮೆರೆದಿದ್ದಾರೆ. ಸದ್ಯ ಚಾಲಕ ರಾಮಕೃಷ್ಣ…

Read More

ಅತಿಯಾಗಿ ಯೋಚನೆ ಮಾಡುವ ಅಭ್ಯಾಸ ನಿಮಗಿದ್ರೆ ಮುಂದೊಂದು ದಿನ ಈ ರೋಗಗಳು ಬರುವುದು ಗ್ಯಾರೆಂಟಿ!

ಇಂದಿನ ಕಾಲದಲ್ಲಿ ಹಲವರಿಗೆ ಅತಿಯಾಗಿ ಯೋಚಿಸುವ ಅಭ್ಯಾಸವಿದೆ (Overthinking). ಚಿಕ್ಕ ವಿಷಯವಾಗಲಿ ಅಥವಾ ದೊಡ್ಡದಾಗಿರಲಿ ಅದರ ಬಗ್ಗೆ ಅತಿಯಾಗಿ ಯೋಚನೆ ಮಾಡುತ್ತಾರೆ. ಆದರೆ ಇದು ಅಷ್ಟಾಗಿ ಯಾರ ಅರಿವಿಗೂ ಬರುವುದಿಲ್ಲ. ಇನ್ನು ಕೆಲವರು ಇದನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ. ಆದರೆ ಅದು ಸರಿಯಲ್ಲ, ಆರೋಗ್ಯ ತಜ್ಞರು ಹೇಳುವ ಪ್ರಕಾರ, ಈ ರೀತಿಯ ಅಭ್ಯಾಸ ನಿಧಾನವಾಗಿ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಸಾಮಾನ್ಯವಾಗಿ ಸಣ್ಣ ಸಣ್ಣ ವಿಷಯಗಳನ್ನು ಮತ್ತೆ ಮತ್ತೆ ಯೋಚಿಸುವುದರಿಂದ ಮನಸ್ಸಿನಲ್ಲಿ ಒತ್ತಡ ಉಂಟಾಗುತ್ತದೆ. ಇದರಿಂದ ದೇಹ…

Read More

‘ದಿಲ್‌ದಾರ್’ ಸಿನಿಮಾ ಟೀಸರ್​ನಲ್ಲಿ ಶ್ರೇಯಸ್ ಮಂಜು ಆ್ಯಕ್ಷನ್ ಭರಿತ ಎಂಟ್ರಿ

ಖ್ಯಾತ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಮಂಜು (Shreyas Manju) ಅವರು ಚಿತ್ರರಂಗದಲ್ಲಿ ನಟನಾಗಿ ಸಕ್ರಿಯರಾಗಿದ್ದಾರೆ. ‘ಪಡ್ಡೆಹುಲಿ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟ ಅವರು ಈಗ ಬೇರೆ ಬೇರೆ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಶ್ರೇಯಸ್ ಮಂಜು ನಟಿಸುತ್ತಿರುವ ‘ದಿಲ್​ದಾರ್’ (Dildar) ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ಅದರ ಝಲಕ್ ತೋರಿಸಲು ಟೀಸರ್ ರಿಲೀಸ್ ಆಗಿದೆ. ಶ್ರೇಯಸ್ ಮಂಜು ಅವರು ಬರ್ತ್​ಡೇ (ಏಪ್ರಿಲ್ 5) ಪ್ರಯುಕ್ತ ಟೀಸರ್ ಬಿಡುಗಡೆ ಆಗಿದ್ದು…

Read More

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಪತ್ರಗಳ ಮರುಪರಿಶೀಲನೆಗೆ ಹೈಕೋರ್ಟ್ ಆದೇಶ

ಬೆಂಗಳೂರು/ಚಿಕ್ಕಮಗಳೂರು, (ಏಪ್ರಿಲ್ 06): ಕೋಲಾರದ ಮಾಲೂರು ವಿಧಾನಸಭಾ ಕ್ಷೇತ್ರದ ಫಲಿತಾಂಶ ತಕರಾರು ಪ್ರಕರಣ ಸುಖಾಂತ್ಯ ಕಂಡಿದೆ. ಇದರ ಬೆನ್ನಲ್ಲೇ ಇದೀಗ ಶೃಂಗೇರಿ ವಿಧಾನಸಭಾ ಕ್ಷೇತ್ರದ (Sringeri Assembly constituency) ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಆಯ್ಕೆ ಅಸಿಂಧು ಕೋರಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಅವರು ಸಲ್ಲಿಸಿದ್ದ  ತಕರಾರು ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ (Karnataka High Court),  279 ಅಂಚೆ ಮತಪತ್ರಗಳನ್ನು 2 ವಾರದಲ್ಲಿ ಮರುಪರಿಶೀಲನೆ ಮಾಡಿ ಫಲಿತಾಂಶ ಪ್ರಕಟಿಸುವಂತೆ ಆದೇಶ ಹೊರಡಿಸಿದೆ. ಹೀಗಾಗಿ ಫಲಿತಾಂಶ ಏನಾಗಲಿದೆ…

Read More