Category Archives: Blog

Your blog category

ಸಹ ಸ್ಪರ್ಧಿಗಳ ಕುಟುಂಬದವರ ಹಾರೈಕೆ: ಕೊನೆಗೂ ಕ್ಯಾಪ್ಟನ್ ಆದ ಗಿಲ್ಲಿ – Kannada News | Bigg Boss Kannada: Gilli became house captain by family members vote

ಈ ವಾರ ಬಿಗ್​​ಬಾಸ್ (Bigg Boss) ಮನೆಯಲ್ಲಿ ಫ್ಯಾಮಿಲಿ ವಾರವಾಗಿತ್ತು. ಮನೆಯ ಸದಸ್ಯರಿಗೆ ಯಾವುದೇ ಟಾಸ್ಕ್ ಇರಲಿಲ್ಲ. ಆದರೆ ಮನೆಯ ಸದಸ್ಯರ ಓಟಿನ ಆಧಾರದ ಮೇಲೆ ಮನೆಯ ಕ್ಯಾಪ್ಟನ್ ಆಯ್ಕೆ ನಡೆದಿದೆ. ಮನೆಗೆ ಬಂದ ಸ್ಪರ್ಧಿಗಳ ಕುಟುಂಬದವರೇ ಈ ಬಾರಿ ಕ್ಯಾಪ್ಟನ್ ಆಯ್ಕೆ ಮಾಡಬೇಕಿತ್ತು. ಅದರಂತೆ ಯಾರಿಗೆ ಯಾರು ಕ್ಯಾಪ್ಟನ್ ಆಗಬೇಕು ಎಂದು ಎಲ್ಲರೂ ಸೂಚಿಸಿದರು. ಈ ವೇಳೆ ಗಿಲ್ಲಿಗೆ ಹೆಚ್ಚು ಓಟು ಬಂದಿತ್ತು, ಅಶ್ವಿನಿ ಅವರಿಗೂ ಸಹ ಹೆಚ್ಚು ಮತಗಳು ಬಂದಿದ್ದವು.

ಅಂತಿಮವಾಗಿ ಅಶ್ವಿನಿ ಮತ್ತು ಗಿಲ್ಲಿ ನಡುವೆ ಅಂತಿಮ ಕ್ಯಾಪ್ಟೆನ್ಸಿ ಟಾಸ್ಕ್ ನಡೆದಿದ್ದು, ಟಾಸ್ಕ್​​ನಲ್ಲಿ ಗಿಲ್ಲಿ ಗೆಲುವು ಸಾಧಿಸಿ ಮೊಟ್ಟ ಮೊದಲ ಬಾರಿಗೆ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಗಿಲ್ಲಿ ಕ್ಯಾಪ್ಟನ್ ಆಗಿರುವ ಎಪಿಸೋಡ್ ಇನ್ನೂ ಪ್ರಸಾರ ಆಗಿಲ್ಲವಾದರೂ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿ ನಡೆದಿದೆ. ಇಂದು (ಡಿಸೆಂಬರ್ 27) ಬೆಳಿಗ್ಗೆ ಬಿಡುಗಡೆ ಮಾಡಿರುವ ಪ್ರೋಮೊನಲ್ಲಿ ಸಹ ಗಿಲ್ಲಿ ಕ್ಯಾಪ್ಟನ್ ಆಗಿದ್ದನ್ನೇ ಹಾಕಲಾಗಿದೆ.

ಅಂತೂ ಇಂತು ಮೊಟ್ಟ ಮೊದಲ ಬಾರಿಗೆ ಗಿಲ್ಲಿ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಬೇರೆಯವರು ಕ್ಯಾಪ್ಟನ್ ಆದಾಗೆಲ್ಲ ಗಿಲ್ಲಿ ಟಾರ್ಗೆಟ್ ಆಗಿರುತ್ತಿದ್ದರು. ಗಿಲ್ಲಿಯಿಂದ ಕೆಲಸ ತೆಗೆಸುವುದೇ ಬೇರೆ ಕ್ಯಾಪ್ಟನ್​​ಗಳಿಗೆ ಹರ ಸಾಹಸ ಆಗಿರುತ್ತಿತ್ತು. ರಘು, ರಾಶಿಕಾ ಇನ್ನೂ ಕೆಲವರು ಕ್ಯಾಪ್ಟನ್ ಆಗಿದ್ದಾಗೆಲ್ಲ ಗಿಲ್ಲಿಯನ್ನು ಸಖತ್ ಆಗಿ ಗೋಳು ಹೊಯ್ದು ಕೊಂಡಿದ್ದೂ ಸಹ ಇದೆ. ಆದರೆ ಈಗ ಸ್ವತಃ ಗಿಲ್ಲಿಯೇ ಕ್ಯಾಪ್ಟನ್ ಆಗಿದ್ದು, ಅವರು ಕ್ಯಾಪ್ಟೆನ್ಸಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.

ಇದನ್ನೂ ಓದಿ:ಗಿಲ್ಲಿ ಬಗ್ಗೆ ಇದ್ದ ದೊಡ್ಡ ಅನುಮಾನ ಕ್ಲಿಯರ್ ಮಾಡಿದ ತಂದೆ-ತಾಯಿ

ಗಿಲ್ಲಿ ಕ್ಯಾಪ್ಟನ್ ಆಗಿರುವುದು ಮನೆಯ ಕೆಲವರಿಗೆ ಇಷ್ಟವಾದರೆ ಇನ್ನು ಕೆಲವರಿಗೆ ಇಷ್ಟವಾದಂತಿಲ್ಲ. ರಘು ಹಾಗೂ ಸೂರಜ್ ಅವರು ‘ಗಿಲ್ಲಿ ಹೇಗೋ ಟಾಸ್ಕ್ ಆಡಿ ಗೆದ್ದು ಕ್ಯಾಪ್ಟನ್ ಆಗುವುದಿಲ್ಲ ಆದರೆ ಹೀಗಾದರೂ ಕ್ಯಾಪ್ಟನ್ ಆಗಲಿ ಎಂದು ಬಿಗ್​ಬಾಸ್ ಹೀಗೆ ಮಾಡಿದ್ದಾರೆ’ ಎಂದೆಲ್ಲ ಮಾತನಾಡಿದ್ದಾರೆ.

ಆದರೆ ಗಿಲ್ಲಿಯ ದುರಾದೃಷ್ಟಕ್ಕೆ, ಗಿಲ್ಲಿ ಕ್ಯಾಪ್ಟನ್ ಆದ ವಾರವೇ ಸುದೀಪ್ ಅವರು ಬಿಗ್​​ಬಾಸ್​​ಗೆ ಗೈರಾಗಿದ್ದಾರೆ. ಈ ವಾರ ಸುದೀಪ್ ಅವರು ಬಿಗ್​​ಬಾಸ್ ನಡೆಸಲು ಬರುತ್ತಿಲ್ಲ. ಪ್ರತಿ ವಾರವೂ ಸುದೀಪ್ ಅವರು ಬಂದಾಗ ಹೊಸ ಕ್ಯಾಪ್ಟನ್​​ಗೆ ಶುಭಾಶಯ ಕೋರುವುದು ಸಾಮಾನ್ಯ. ಆದರೆ ಗಿಲ್ಲಿ ಕ್ಯಾಪ್ಟನ್ ಆದಾಗಲೇ ಸುದೀಪ್ ಅವರು ಗೈರಾಗಿ, ಗಿಲ್ಲಿ ಅವಕಾಶದಿಂದ ವಂಚಿತರಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಕಾಂಗ್ರೆಸ್ ಸರ್ಕಾರದ ‘ಬುಲ್ಡೋಜರ್ ರಾಜ್’ ನೀತಿಯಿಂದ ಬೀದಿಗೆ ಬಂದ ಮುಸ್ಲಿಂ ಕುಟುಂಬ: ಪಿಣರಾಯಿ ವಿಜಯನ್ ಆಕ್ರೋಶ – Kannada News | Bengaluru Demolition: Pinarayi Vijayan Condemns Karnataka’s ‘Bulldozer Policy’

ಬೆಂಗಳೂರು, ಡಿ.27: ಕರ್ನಾಟಕದ ರಾಜ್ಯ ಸರ್ಕಾರಕ್ಕೂ ಉತ್ತರ ಪ್ರದೇಶದ ಗಾಳಿ ಬಿಸಿದೆ. ಅಲ್ಲಿನ ಬುಲ್ಡೋಜರ್ ನೀತಿಯನ್ನು ಇಲ್ಲೂ ತರುವ ಕೆಲಸ ನಡೆಯುತ್ತಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾಂಗ್ರೆಸ್​​​ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನ (Bengaluru) ಯಲಹಂಕದ ಕೋಗಿಲು ಗ್ರಾಮದ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್‌ನಲ್ಲಿರುವ ಮುಸ್ಲಿಂ ವಸತಿಗಳನ್ನು ನೆಲಸಮ ಮಾಡಿರುವುದು ತುಂಬಾ ದುಃಖಕರ ವಿಚಾರ, ಅಲ್ಲಿ ಮುಸ್ಲಿಂ ಕುಟುಂಬಗಳು ಹಲವು ವರ್ಷಗಳಿಂದ ವಾಸಿಸುತ್ತಿದ್ದವು. ಇದೀಗ ಏಕಾಏಕಿ ಬಂದು ಮನೆಗಳನ್ನು ನೆಲಸಮ ಮಾಡಿದ್ರೆ ಅವರು ಎಲ್ಲಿಗೆ ಹೋಗಬೇಕು. ಈ ಚಳಿಯಲ್ಲಿ ಮಕ್ಕಳ, ಮಹಿಳೆಯರನ್ನು ಬೀದಿಗೆ ಹಾಕಿದ್ದಾರೆ ಎಂದು ಅವರು ಸೋಶಿಯಲ್​​ ಮೀಡಿಯಾದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಕ್ಸ್​​​ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ. “ಬೆಂಗಳೂರಿನ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್‌ನಲ್ಲಿ ವರ್ಷಗಳಿಂದ ವಾಸಿಸುತ್ತಿದ್ದ ಮುಸ್ಲಿಂ ಕುಟುಂಬಗಳನ್ನು ಬೀದಿಗೆ ಹಾಕಿ,”ಬುಲ್ಡೋಜರ್ ರಾಜ್” ಕ್ರಮವನ್ನು ಅನುಸರಿಸುತ್ತಿದ್ದಾರೆ. ದುಃಖಕರ ವಿಚಾರವೆಂದರೆ ಸಂಘ ಪರಿವಾರದ ಅಲ್ಪಸಂಖ್ಯಾತ ವಿರೋಧಿ ರಾಜಕೀಯವನ್ನು ಈಗ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೂಡ ಮಾಡುತ್ತಿದೆ. ಭಯ ಮತ್ತು ಕ್ರೂರತೆಯ ಬಲದ ಮೂಲಕ ಆಡಳಿತ ನಡೆಸುವಾಗ, ಸಾಂವಿಧಾನಿಕ ಮೌಲ್ಯಗಳು ಮತ್ತು ಮಾನವ ಘನತೆಯು ಮೊದಲ ಬಲಿಪಶುಗಳಾಗುತ್ತವೆ. ಈ ಮೋಸದ ಪ್ರವೃತ್ತಿಯನ್ನು ವಿರೋಧಿಸಲು ಮತ್ತು ಸೋಲಿಸಲು ಎಲ್ಲಾ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಶಕ್ತಿಗಳು ಒಟ್ಟಾಗಿ ಒಟ್ಟುಗೂಡಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಶೆಡ್‌, ಶೀಟ್‌ ಮನೆಗಳು ನೆಲಸಮ: ಸಿಡಿದೆದ್ದ ಸ್ಥಳೀಯರು

150ಕ್ಕೂ ಹೆಚ್ಚು ಅಕ್ರಮ ಶೆಡ್‌, ಶೀಟ್‌ ಮನೆಗಳು ನೆಲಸಮ:

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೋಗಿಲು ಬಂಡೆ ಬಳಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಗೆ ಮೀಸಲಿಟ್ಟ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ 150ಕ್ಕೂ ಅಧಿಕ ಶೆಡ್‌ ಹಾಗೂ ಶೀಟ್‌ ಮನೆಗಳನ್ನು ಶನಿವಾರ ತೆರವುಗೊಳಿಸಲಾಗಿದೆ.ಕೋಗಿಲು ಬಳಿ ಇರುವ 14.36 ಎಕರೆ ಜಮೀನಿನಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯಿಂದ ಬಯೋ ಮೆಥನೈಸೇಶನ್ ಪ್ಲಾಂಟ್, ಅನಿಮಲ್ ರೆಂಡರಿಂಗ್, ಅನಿಮಲ್ ಇನ್ಸಿನರೇಷನ್, ಎಳನೀರು ಬುರುಡೆ ಸಂಸ್ಕರಣಾ ಮತ್ತು ಸ್ಯಾನಿಟರಿ ತ್ಯಾಜ್ಯ ಸಂಸ್ಕರಣಾ ಸೌಲಭ್ಯಗಳನ್ನು ನಿರ್ಮಾಣ ಮಾಡಬೇಕು ಎಂಬ ಯೋಜನೆಯನ್ನು ಹಾಕಿತ್ತು. ಈ ಪ್ರದೇಶದಲ್ಲಿ ಸುಮಾರು 5 ಎಕರೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ 150 ಕ್ಕೂ ಹೆಚ್ಚು ಶೆಡ್, ಮನೆಗಳನ್ನು 9 ಟ್ರ್ಯಾಕ್ಟರ್, 9 ಜೆಸಿಬಿ ಯಂತ್ರ ಬಳಸಿ ನೆಲಸಮಗೊಳಿಸಲಾಗಿದೆ. ಇದೀಗ ಅಲ್ಲಿ ಸ್ಥಳೀಯು ಸರ್ಕಾರದ ಈ ಕ್ರಮದ ವಿರುದ್ಧ ರೂಚ್ಚಿಗೆದ್ದು, ಪ್ರತಿಭಟನೆ ಮಾಡಿದ್ದಾರೆ. ಯಾವುದೇ ನೋಟಿಸ್​​ ನೀಡದೆ, ಏಕಾಏಕಿ ಬಂದು ಮನೆ ಕೆಡವಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾವೇರಿ: 2 ವಾರಗಳಿಂದ ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಗ್ರಾಮಸ್ಥರು ಮಾಡಿದ್ದೇನು ನೋಡಿ! – Kannada News | Haveri: Villagers Patrol Nights with Sticks as Serial House Thefts Continue for Two Weeks

ಹಾವೇರಿ, ಡಿಸೆಂಬರ್ 27: ಹಾವೇರಿ ಜಿಲ್ಲೆಯ ಮಾರನಬೀಡ ಗ್ರಾಮದಲ್ಲಿ ಮನೆ ಕಳ್ಳತನದ ಹಾವಳಿ ತೀವ್ರಗೊಂಡಿದೆ. ಕಳೆದ ಎರಡು ವಾರಗಳಿಂದ ಸರಣಿ ಕಳ್ಳತನಗಳು ವರದಿಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಇದರ ಪರಿಣಾಮವಾಗಿ, ಹಗಲಿನಲ್ಲಿ ಹೊಲಗಳಲ್ಲಿ ದುಡಿದು ಬಳಲಿದರೂ, ರಾತ್ರಿಯಿಡೀ ನಿದ್ದೆಗೆಟ್ಟು ತಮ್ಮ ಮನೆಗಳ ರಕ್ಷಣೆಗೆ ನಿಂತಿದ್ದಾರೆ. ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ, ಗ್ರಾಮಸ್ಥರು ದೊಣ್ಣೆ ಮತ್ತು ಕೋಲುಗಳನ್ನು ಹಿಡಿದು ಗ್ರಾಮದಾದ್ಯಂತ ಗಸ್ತು ತಿರುಗುತ್ತಿದ್ದಾರೆ.

ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ನೆರವು ಸಿಗದ ಕಾರಣ, ತಮ್ಮ ಆಸ್ತಿಪಾಸ್ತಿಗಳನ್ನು ಕಳ್ಳರಿಂದ ರಕ್ಷಿಸಿಕೊಳ್ಳಲು ತಾವೇ ಗಸ್ತು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಹಾವೇರಿ ನಗರ, ನರೇಗಲ್ಲ ಮತ್ತು ತವರಮರಳಿಹಳ್ಳಿಗಳಲ್ಲೂ ಇದೇ ರೀತಿ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಕಳ್ಳರ ಕಾಟದಿಂದ ಭಯದಲ್ಲಿ ಜೀವಿಸುವಂತಾಗಿದ್ದು, ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತು ಭದ್ರತೆ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಿಕೆಲ್ಟನ್ ಸೆಂಚುರಿ ಸಿಡಿಸಿದರೂ ಸೋತ ಎಂಐ ಪಡೆ – Kannada News | Ryan Rickelton slams Century in SA20 Opener

ಸೌತ್ ಆಫ್ರಿಕಾ ಟಿ20 ಲೀಗ್​ನ ಹಾಲಿ ಚಾಂಪಿಯನ್ಸ್ ಎಂಐ ಕೇಪ್​ಟೌನ್ ವಿರುದ್ಧ ಡರ್ಬನ್​ ಸೂಪರ್ ಜೈಂಟ್ಸ್ ಭರ್ಜರಿ ಜಯ ಸಾಧಿಸಿದೆ. ಕೇಪ್​ಟೌನ್​ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಡರ್ಬನ್ ಸೂಪರ್ ಜೈಂಟ್ಸ್ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಡರ್ಬನ್ ಸೂಪರ್ ಜೈಂಟ್ಸ್ ಪರ ಡೆವೊನ್ ಕಾನ್ವೆ 64 ರನ್ ಬಾರಿಸಿದರೆ, ಕೇನ್ ವಿಲಿಯಮ್ಸನ್ 40 ರನ್​ಗಳ ಕೊಡುಗೆ ನೀಡಿದರು. ಇನ್ನು ಮಾರ್ಕ್ರಾಮ್ 35 ರನ್ ಕಲೆಹಾಕಿದರೆ, ಇವಾನ್ ಜೋನ್ಸ್ 33 ರನ್​ಗಳ ರನ್​ಗಳಿಸಿದರು. ಈ ಮೂಲಕ ಡರ್ಬನ್ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 232 ರನ್ ಕಲೆಹಾಕಿತು.

233 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಎಂಐ ಕೇಪ್​ಟೌನ್ ಪರ ಆರಂಭಿಕನಾಗಿ ರಯಾನ್ ರಿಕೆಲ್ಟನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 63 ಎಸೆತಗಳನ್ನು ಎದುರಿಸಿದ ರಿಕೆಲ್ಟನ್ 11 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 113 ರನ್ ಬಾರಿಸಿದರು. ಇದಾಗ್ಯೂ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಎಂಐ ಕೇಪ್​ಟೌನ್ ತಂಡವು 20 ಓವರ್​ಗಳಲ್ಲಿ 217 ರನ್​ಗಳಿಸಿ 15 ರನ್​ಗಳಿಂದ ಸೋಲೊಪ್ಪಿಕೊಂಡಿತು.

 

 

Source link

Bengaluru Air Quality: ಬೆಂಗಳೂರಿನಲ್ಲಿ ಹೆಚ್ಚಿದ ಕಳಪೆ ಏರ್ ಕ್ವಾಲಿಟಿ, ಜಿಬಿಎ ನಿರ್ಧಾರ ಏನು? – Kannada News | Bangalore Air Pollution Crisis: Bengaluru’s increasing vehicle is also causing poor air quality, GBA to take action

ಬೆಂಗಳೂರಿನಲ್ಲಿ ಹೆಚ್ಚಿದ ಕಳಪೆ ಏರ್ ಕ್ವಾಲಿಟಿ, ಜಿಬಿಎ ನಿರ್ಧಾರ ಏನು?

ಬೆಂಗಳೂರು, ಡಿಸೆಂಬರ್ 27: ಹಲವು ದಿನಗಳಿಂದ ಬೆಂಗಳೂರಿನ ಗಾಳಿಯ ಗುಣಮಟ್ಟದಲ್ಲಿ (Bengaluru Air Quality) ಹೆಚ್ಚಿನ ಏರುಪೇರಾಗುತ್ತಲೇ ಇದೆ. ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ (AQI) ಇಂದಿನ ಗಾಳಿಯ ಗುಣಮಟ್ಟ 173 ಇದ್ದು, ನಗರದ ಹಲವು ಭಾಗಗಳಲ್ಲಿ ಇದಕ್ಕೂ ಕಳಪೆ ಏರ್ ಕ್ವಾಲಿಟಿ ಕಂಡುಬರುತ್ತಿದೆ. ಕಳೆದ 4 ವರ್ಷಗಳಲ್ಲಿ ಈ ವರ್ಷವೇ ಗಾಳಿಯ PM (Particulate Matter) ಪ್ರಮಾಣ ಸಹ ಮಿತಿ ಮೀರಿದೆ. ಇಂದೂ ಸಹ PM2.5 87 ಇದ್ದರೆ, PM10 121 ಇದೆ. ಕಳೆದ ಕೆಲ ದಿನಕ್ಕೆ ಹೋಲಿಸಿದರೆ ಇಂದಿನ ಏರ್ ಕ್ವಾಲಿಟಿ ಸುಧಾರಿಸಿದೆ ಎನಿಸಿದರೂ WHO ಪ್ರಕಾರ ಈ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿದೆ.

ವಾಯುಮಾಲಿನ್ಯ ತಡೆಗೆ ಜಿಬಿಎ ಮುಂದು

ಬೆಂಗಳೂರಿನಲ್ಲಿ 1.2 ಕೋಟಿ ದಾಟಿರುವ ವಾಹನಗಳಿಂದ ಹೊರಸೂಸುವ ಹೊಗೆ ನಗರದ ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿದೆ. ಸಂಚಾರ ದಟ್ಟಣೆ ಹೆಚ್ಚಿರುವ ಸಿಲ್ಕ್ ಬೋರ್ಡ್ ಮತ್ತು ವೈಟ್‌ಫೀಲ್ಡ್‌ನಂತಹ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವು ನಗರದ ಸರಾಸರಿಗಿಂತ 30% ಹೆಚ್ಚು ದಾಖಲಾಗುತ್ತಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗಾಳಿಯ ಗುಣಮಟ್ಟ 150 ದಾಟಿದರೆ ಶ್ವಾಸಕೋಶ ಕಾಯಿಲೆಯ ಜೊತೆಗೆ ಹೃದಯ ಸಂಬಂಧಿ ರೋಗಗಳೂ ಬರಬಹುದೆಂದು ತಜ್ಞರು ಹೇಳುತ್ತಾರೆ.

ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಕಾರಣ ಪತ್ತೆಹಚ್ಚಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಕೈಗೊಂಡಿದೆ. ನಗರದೆಲ್ಲೆಡೆ 85 ಮೆಟ್ರೋ ನಿಲ್ದಾಣ, 55 ಬಿಎಂಟಿಸಿ ಟಿಟಿಎಂಸಿ, ಪ್ರಮುಖ ರಸ್ತೆ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಸೆನ್ಸರ್ ಅಳವಡಿಕೆ ನಡೆಯಲಿದೆ. ಪ್ರತಿ ಮಾಪನಕ್ಕೆ ಗರಿಷ್ಠ 3 ಲಕ್ಷ ರೂ. ವೆಚ್ಚವಾಗಲಿದ್ದು, ಒಟ್ಟು 15 ಕೋಟಿ ರೂ. ವೆಚ್ಚದಲ್ಲಿ ವಾಯುಮಾಲಿನ್ಯ ತಪಾಸಣಾ ಉಪಕರಣ ಖರೀದಿಸಲು ನಿರ್ಧರಿಸಲಾಗಿದೆ.

ಕಳಪೆ ಏರ್ ಕ್ವಾಲಿಟಿಯಿಂದ ಶ್ವಾಸಕೋಶದ ಕ್ಯಾನ್ಸರ್

PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –173
  • ಮಂಗಳೂರು – 154
  • ಮೈಸೂರು – 132
  • ಬೆಳಗಾವಿ – 161
  • ಕಲಬುರ್ಗಿ – 105
  • ಶಿವಮೊಗ್ಗ – 92
  • ಬಳ್ಳಾರಿ – 201
  • ಹುಬ್ಬಳ್ಳಿ- 108
  • ಉಡುಪಿ –142
  • ವಿಜಯಪುರ –82

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:22 am, Sat, 27 December 25

Source link

ವಾಹನ ಸವಾರರೇ ಎಚ್ಚರ: ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ ಟ್ರಾಫಿಕ್ ಪೊಲೀಸರು! – Kannada News | Bengaluru Traffic Alert: Police Intensify Drunk and Drive Checks Across the City

ಬೆಂಗಳೂರು, ಡಿಸೆಂಬರ್ 27: ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದಾದ್ಯಂತ ಪೊಲೀಸರು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ತೀವ್ರಗೊಳಿಸಿದ್ದಾರೆ. ನಗರದ ಪ್ರಮುಖ ಜಂಕ್ಷನ್‌ಗಳು ಮತ್ತು ವೃತ್ತಗಳಲ್ಲಿ, ಅದರಲ್ಲೂ ವಿಶೇಷವಾಗಿ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮೆಜೆಸ್ಟಿಕ್ ಸಂಪರ್ಕಿಸುವ ಜಂಕ್ಷನ್‌ಗಳಲ್ಲಿ ಈ ಚೆಕ್‌ಗಳನ್ನು ನಡೆಸಲಾಗುತ್ತಿದೆ. ಕಳೆದ ಒಂದು ವಾರದಿಂದಲೂ ಬೆಂಗಳೂರಿನಲ್ಲಿ ನಿರಂತರವಾಗಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆಗಳು ನಡೆಯುತ್ತಿದ್ದು, ಪ್ರತಿದಿನ ಸರಾಸರಿ 500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಕುಡಿದು ವಾಹನ ಚಲಾಯಿಸುತ್ತಿರುವುದು ಕಂಡುಬಂದಲ್ಲಿ ವಾಹನವನ್ನು ಜಪ್ತಿ ಮಾಡುವುದರ ಜೊತೆಗೆ 10,000 ರೂಪಾಯಿ ದಂಡ ವಿಧಿಸಲಾಗುತ್ತಿದೆ. ಹೊಸ ವರ್ಷಾಚರಣೆ ಮುಗಿಯುವವರೆಗೂ ಈ ತಪಾಸಣೆಗಳು ಪ್ರತಿದಿನವೂ ಮುಂದುವರಿಯಲಿವೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್​​ಬಾಸ್ ಮನೆಯಲ್ಲಿ ಆಯ್ತು ಸಾಕ್ಷಾತ್ಕಾರ: ತಪ್ಪುಗಳ ಒಪ್ಪಿಕೊಂಡ ರಘು – Kannada News | Bigg Boss Kannada 12: Raghu realize what mistake he made outside

ಬಿಗ್​​ಬಾಸ್ (Bigg Boss) ಮನೆ ಎಂದರೆ ಅದು ಜಗಳದ ಮನೆ, ಕಚ್ಚಾಟ, ಗೆಲುವಿಗಾಗಿ ಪರಸ್ಪರ ಕಾಲೆಳೆತದ ಮನೆ ಎಂಬ ಅಭಿಪ್ರಾಯ ಇದೆ. ಆದರೆ ಬಿಗ್​​ಬಾಸ್ ಮನೆ ಕೇವಲ ಜಗಳಕ್ಕೆ ಮಾತ್ರವಲ್ಲ, ತಮ್ಮನ್ನು ತಾವು ಅರಿತುಕೊಳ್ಳಲು, ತಪ್ಪುಗಳನ್ನು ತಿದ್ದಿಕೊಳ್ಳಲು ಹೊಸ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಹ ಸಹಾಯ ಮಾಡುತ್ತದೆ. ಈ ಹಿಂದೆ ಸಹ ಹಲವು ಸ್ಪರ್ಧಿಗಳಿಗೆ ತಮ್ಮ ತಪ್ಪುಗಳನ್ನು ಅರ್ಥ ಮಾಡಿಕೊಳ್ಳಲು ಬಿಗ್​​ಬಾಸ್ ಮನೆ ಸಹಾಯ ಮಾಡಿದೆ. ಹೊರಗೆ ಅಹಂಕಾರ, ಸಿಟ್ಟಿನಿಂದ ಮೆರೆದವರಿಗೆ ಬಿಗ್​​ಬಾಸ್ ಮನೆ ತಾಳ್ಮೆ, ಸಹನೆ ಕಲಿಸಿದೆ. ಇದೀಗ ಬಿಗ್​​ಬಾಸ್ ಸ್ಪರ್ಧಿ ಆಗಿರುವ ರಘು ಅವರೂ ಸಹ ಬಿಗ್​​ಬಾಸ್ ಮನೆಗೆ ಬಂದು, ಹೊರಗೆ ತಾವು ಮಾಡುತ್ತಿದ್ದ ತಪ್ಪಿನ ಅರಿವು ಮೂಡಿಸಿಕೊಂಡಿದ್ದಾರೆ.

ರಘು ಅವರು ವೈಲ್ಡ್ ಕಾರ್ಡ್ ಎಂಟ್ರಿ ರೂಪದಲ್ಲಿ ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ನಟರಾಗಿರುವ ರಘು ಅವರು ಈ ಹಿಂದೆ ಅಡುಗೆಗೆ ಸಂಬಂಧಿಸಿದ ರಿಯಾಲಿಟಿ ಶೋ ಗೆದ್ದು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ರಘು ಅವರು ಬಿಗ್​​ಬಾಸ್ ಮನೆಯಲ್ಲಿ ಚೆನ್ನಾಗಿ ಆಡುತ್ತಿದ್ದಾರೆ. ಟಾಸ್ಕ್ ಆಗಲಿ, ಮನೆ ಕೆಸವಾಗಲಿ, ಅಡುಗೆ ಮಾಡುವುದಾಗಲಿ ಎಲ್ಲದಕ್ಕೂ ಸೈ. ಯಾರೇ ರೇಗಿಸಲಿ, ತಕರಾರು ಮಾಡಲಿ ತಾಳ್ಮೆಯಿಂದ ಆಟ ಆಡುತ್ತಿದ್ದಾರೆ ರಘು. ಆದರೆ ಅವರು ಹೊರಗೆ ಹೀಗೆ ಇರಲಿಲ್ಲವಂತೆ. ಈ ಬಗ್ಗೆ ಅವರ ಕುಟುಂಬದವರು ಮಾತನಾಡಿದ್ದಾರೆ.

ಇದನ್ನೂ ಓದಿ:ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು

ರಘು ಅವರ ಪುತ್ರ ಮತ್ತು ಪತ್ನಿ ಬಿಗ್​​ಬಾಸ್ ಮನೆಗೆ ಬಂದಿದ್ದರು. ಈ ವೇಳೆ ಮಾತನಾಡಿದ ರಘು ಅವರ ಪತ್ನಿ, ‘ನಾನು ನೋಡಿರುವ ರಘು ಅವರಿಗೂ ಬಿಗ್​​ಬಾಸ್ ಮನೆಯಲ್ಲಿರುವ ರಘು ಅವರಿಗೂ ಅಜಗಜಾಂತರ ವ್ಯತ್ಯಾಸ ಇದೆ. ಮನೆಯಲ್ಲಿ ರಘು ಬಹಳ ಸಿಟ್ಟಿನ ವ್ಯಕ್ತಿ, ನಮ್ಮೊಂದಿಗೆ ಸರಿಯಾಗಿ ಮಾತನಾಡುವುದು ಸಹ ಇಲ್ಲ. ಎಲ್ಲದಕ್ಕೂ ರೇಗುತ್ತಿರುತ್ತಾರೆ. ಆದರೆ ಇಲ್ಲಿ ಅವರು ಬಹಳ ತಾಳ್ಮೆಯಿಂದ ಇದ್ದಾರೆ’ ಎಂದಿದ್ದಾರೆ.

‘ಯಾರಾದರೂ ಅವರ ಮೇಲೆ ಮಲಗಿಕೊಂಡರೆ, ಗಡ್ಡ ಮುಟ್ಟಿದರೆ, ಅವರ ದೇಹದ ಬಗ್ಗೆ, ವ್ಯಾಯಾಮದ ಬಗ್ಗೆ ಟೀಕೆ ಮಾಡಿದರೂ ಸಹ ಸುಮ್ಮನಿದ್ದಾರೆ. ಆದರೆ ಮನೆಯಲ್ಲಿ ಇವರು ಬಂದು ಗಾಡಿ ನಿಲ್ಲಿಸಿದರೂ ಸಹ ನಮಗೆ ಭಯ ಆಗುತ್ತಿರುತ್ತದೆ, ಕೈ ನಡುಗುತ್ತಿರುತ್ತದೆ ಅಷ್ಟು ಸಿಟ್ಟು ಮಾಡಿಕೊಳ್ಳುತ್ತಾರೆ. ಮಾತ್ರವಲ್ಲ ಯಾವೊಂದು ಕೆಲಸ ಸಹ ಮಾಡುವುದಿಲ್ಲ. ಬೆಡ್​​ನಿಂದ ಎದ್ದು ಫ್ಯಾನ್ ಸಹ ಆನ್ ಮಾಡಿಕೊಳ್ಳುವುದಿಲ್ಲ, ಅದಕ್ಕೂ ನನ್ನನ್ನು ಕರೆಯುತ್ತಾರೆ. ಮಾತನಾಡಲು ಬಂದರೆ ಸರಿಯಾಗಿ ಮಾತನಾಡುವುದಿಲ್ಲ, ಮಗ ಆಟ ಆಡಲು ಕರೆದರೂ ಹೋಗುವುದಿಲ್ಲ. ಆದರೆ ಇಲ್ಲಿ ಎಲ್ಲ ಮಾಡುತ್ತಿದ್ದಾರೆ ಎಂದಿದ್ದಾರೆ.

ಕುಟುಂಬದವರು ಹೋದ ಬಳಿಕ ರಘು ಸಹ ಈ ವಿಷಯವಾಗಿ ಮಾತನಾಡಿದ್ದು, ‘ನಾನು ಮನೆಯವರೊಟ್ಟಿಗೆ ಸರಿಯಾಗಿ ವರ್ತಿಸಲಿಲ್ಲ. ಅವರು ಮಾತನಾಡಲು ಬಂದಾಗ ನಾನು ಅವರೊಟ್ಟಿಗೆ ಮಾತನಾಡಿಲ್ಲ, ಮಗನೊಟ್ಟಿಗೆ ಆಟ ಸಹ ಆಡಲಿಲ್ಲ ಆದರೆ ನಾನು ಎಂಥಹ ತಪ್ಪು ಮಾಡಿದೆ ಎಂದು ನನಗೆ ಅರ್ಥ ಆಗಿದೆ’ ಎಂದು ಹೇಳಿಕೊಂಡಿದ್ದಾರೆ. ಆ ಮೂಲಕ ಹೊರಗೆ ತಾವು ಮಾಡಿದ ತಪ್ಪಿನ ಅರಿವು ಮಾಡಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:13 am, Sat, 27 December 25

Source link

‘45’ ಮತ್ತು ‘ಮಾರ್ಕ್’ ಸಿನಿಮಾ ಎರಡನೇ ದಿನ ಗಳಿಸಿದ್ದೆಷ್ಟು? – Kannada News | Sudeep’s Mark and Shiva Rajkumar’s 45 movie second day collection

ಕನ್ನಡದ ಎರಡು ದೊಡ್ಡ ಸಿನಿಮಾಗಳು ಈ ವಾರ ಬಿಡುಗಡೆ ಆಗಿವೆ. ಶಿವರಾಜ್ ಕುಮಾರ್ (Shiva Rajkumar), ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟನೆಯ ‘45’ ಮತ್ತು ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಬಿಡುಗಡೆ ಆಗಿದೆ. ಎರಡೂ ಸಹ ಬಹಳ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ಮತ್ತು ಪರಸ್ಪರ ಸ್ಪರ್ಧೆಯ ಮೇರೆಗೆ ಒಂದೇ ದಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿವೆ. ಹಾಗಾಗಿ ಎರಡೂ ಸಿನಿಮಾಗಳ ಕಲೆಕ್ಷನ್ ಮೇಲೆ ಸಹಜವಾಗಿಯೇ ಕಣ್ಣಿದೆ. ಮೊದಲ ದಿನ ಉತ್ತಮ ಗಳಿಕೆಯನ್ನೇ ಮಾಡಿರುವ ಈ ಸಿನಿಮಾಗಳು ಎರಡನೇ ದಿನ ಅಂದರೆ ಶುಕ್ರವಾರ ಬಾಕ್ಸ್ ಆಫೀಸ್​​ನಲ್ಲಿ ಗಳಿಸಿದ್ದೆಷ್ಟು?

ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಬಿಡುಗಡೆ ಆದ ಮೊದಲ ದಿನ ಅಂದರೆ ಗುರುವಾರ ಸುಮಾರು 7.50 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಆದರೆ ಎರಡನೇ ದಿನ ಸಿನಿಮಾದ ಕಲೆಕ್ಷನ್ ಕುಸಿದಿದೆ. ಮೊದಲ ದಿನ ಗುರುವಾರ ಕ್ರಿಸ್​​ಮಮಸ್ ರಜೆ ಇದ್ದ ಕಾರಣ ಸಹಜವಾಗಿಯೇ ಸಿನಿಮಾದ ಕಲೆಕ್ಷನ್ ಹೆಚ್ಚಾಗಿತ್ತು. ಆದರೆ ಶುಕ್ರವಾರ 3.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವೀಕ್ ಡೇನಲ್ಲಿ ಇದು ಸಾಮಾನ್ಯ ಕಲೆಕ್ಷನ್ ಏನಲ್ಲ. ಶನಿವಾರ ಮತ್ತು ಭಾನುವಾರ ಕಲೆಕ್ಷನ್ ಮತ್ತೆ ಏರಿಕೆ ಆಗುವ ಸಾಧ್ಯತೆ ದಟ್ಟವಾಗಿದೆ.

ಇನ್ನು ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಬಿಡುಗಡೆ ಆದ ದಿನ ಅಂದರೆ ಗುರುವಾರ 5.50 ಸಿನಿಮಾ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನು ಎರಡನೇ ದಿನ ಅಂದರೆ ಶುಕ್ರವಾರ ‘45’ ಸಿನಿಮಾ 2.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಶುಕ್ರವಾರ ವಾರದ ದಿನವಾದ್ದರಿಂದ ಈ ಕಲೆಕ್ಷನ್ ಕಡಿಮೆಯೇನಲ್ಲ. ಶನಿವಾರ ಮತ್ತು ಭಾನುವಾರ ಮತ್ತೆ ರಜೆ ದಿನಗಳು ಇರುವುದರಿಂದ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:ಶಿವರಾಜ್ ಕುಮಾರ್ ಭೇಟಿಯಾದ ದರ್ಶನ್ ಪುತ್ರ ವಿನೀಶ್: ವಿಡಿಯೋ ನೋಡಿ

ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗಿದ್ದು, ಒಂದರ ಕಲೆಕ್ಷನ್ ಮೇಲೆ ಇನ್ನೊಂದು ಸಿನಿಮಾ ಪ್ರಭಾವ ಬೀರುವುದು ಸಾಮಾನ್ಯ. ಆದರೆ ಈಗ ಹೋಗುತ್ತಿರುವ ರೀತಿ ನೋಡಿದರೆ ಎರಡೂ ಸಿನಿಮಾಗಳು ಒಂದು ಉತ್ತಮ ಗಳಿಕೆ ಮಾಡುವ ಭರವಸೆ ಮೂಡಿಸಿವೆ. ಎರಡೂ ಸಿನಿಮಾಗಳ ಬಗ್ಗೆ ಪ್ರೇಕ್ಷಕರು ಧನಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ ಎರಡೂ ಸಿನಿಮಾಗಳು ಉತ್ತಮ ಗಳಿಕೆ ಮಾಡುವ ದಟ್ಟ ಸಾಧ್ಯತೆ ಇದೆ.

‘ಮಾರ್ಕ್’ ಸಿನಿಮಾನಲ್ಲಿ ಸುದೀಪ್ ನಟಿಸಿದ್ದು, ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಅಜನೀಶ್ ಅವರ ಸಂಗೀತವಿದೆ. ಪರಭಾಷೆಯ ಜನಪ್ರಿಯ ಕಲಾವಿದರಾದ ಯೋಗಿ ಬಾಬು, ಶೈನ್ ಟಾಮ್ ಚಾಕೊ ಇನ್ನೂ ಕೆಲವರು ನಟಿಸಿದ್ದಾರೆ. ಇನ್ನು ‘45’ ಸಿನಿಮಾವನ್ನು ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಅವರ ಮೊದಲ ಸಿನಿಮಾ ಇದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಲ್ಮಾನ್ ಖಾನ್ ಜನ್ಮದಿನದ ಪಾರ್ಟಿಯಲ್ಲಿ ಧೋನಿ ಸೇರಿದಂತೆ ಹಲವರು ಭಾಗಿ – Kannada News | Salman Khan Arrange Birthday Party At Panvel MS Dhoni And Other Attend party

ಸಲ್ಲು ಬರ್ತ್​ಡೇಗೆ ಬಂದ ಸೆಲೆಬ್ರಿಟಿಗಳು

ನಟ ಸಲ್ಮಾನ್ ಖಾನ್ (Salman Khan) ಅವರು ಇಂದು (ಡಿಸೆಂಬರ್ 27) ತಮ್ಮ 60ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ಅವರು ತಮ್ಮ ಪನ್ವೇಲ್​ ಫಾರ್ಮ್​​ಹೌಸ್​​ನಲ್ಲಿ ಅದ್ದೂರಿ ಪಾರ್ಟಿ ಆಯೋಜನೆ ಮಾಡಿದ್ದರು ಎಂಬುದು ವಿಶೇಷ. ಇದನ್ನು ಸಲ್ಮಾನ್ ಖಾನ್ ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ ಎಂಬ ವಿಷಯ ಅನೇಕರಿಗೆ ತಿಳಿದಿದೆ. ಅವರು ಪ್ರತಿವರ್ಷ ತಮ್ಮ ಫಾರ್ಮ್​​ಹೌಸ್​​ನ್ಲಿ ಈ ಪಾರ್ಟಿ ಆಯೋಜನೆ ಮಾಡಿ, ಸೆಲೆಬ್ರಿಟಿಗಳಿಗೆ ಆಹ್ವಾನ ನೀಡುತ್ತಾರೆ. ಈ ಬಾರಿಯೂ ಅದು ಮುಂದುವರಿದಿದೆ.

ಸಲ್ಮಾನ್ ಖಾನ್ ಅವರು ಖಾಸಗಿ ಪಾರ್ಟಿಯನ್ನು ಆಯೋಜನೆ ಮಾಡಿದ್ದರು. ಆಪ್ತರು, ಗೆಳೆಯರು ಹಾಗೂ ಚಿತ್ರರಂಗದ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಿದ್ದಾರೆ. ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಮೊದಲು ಈ ಪಾರ್ಟಿಗೆ ಬಂದರು. ಅವರ ಸಹೋದರಿ ಅರ್ಪಿತಾ ಖಾನ್ ಶರ್ಮಾ ಅವರು ಪತಿ ಆಯುಷ್ ಶರ್ಮಾ ಜೊತೆ ಬಂದರು. ಅವರ ಮಕ್ಕಳು ಕೂಡ ಜೊತೆಯಲ್ಲೇ ಇದ್ದರು. ಸೋಹೈಲ್ ಖಾನ್, ಅವರ ಮಗ ನಿರ್ವಾಣ್ ಖಾನ್, ಅರ್ಬಾಜ್ ಖಾನ್ ಕೂಡ ಬಂದರು.

ಸಿನಿಮಾ ಇಂಡಸ್ಟ್ರಿಯವರಾದ ರಣದೀಪ್ ಹೂಡಾ ಅವರು ತಮ್ಮ ಪತ್ನಿ ಲಿನ್ ಜೊತೆ ಆಗಮಿಸಿದರು. ಜೆನಿಲಿಯಾ ಹಾಗೂ ಸಲ್ಮಾನ್ ಖಾನ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಅವರು ಕೂಡ ಪಾರ್ಟಿಗೆ ಹಾಜರಾದರು. ಇನ್ನು ಈ ಪಾರ್ಟಿಯ ಮುಖ್ಯ ಹೈಲೈಟ್ ಎಂಎಸ್ ಧೋನಿಯೇ ಆಗಿದ್ದರು. ಮಾಜಿ ಕ್ರಿಕೆಟರ್ ಆಗಿರುವ ಅವರು ಪತ್ನಿ ಸಾಕ್ಷಿ ಜೊತೆ ಬಂದರು. ಸಲ್ಮಾನ್ ಖಾನ್​​ಗೂ ಧೋನಿಗೂ ವಿಶೇಷ ಗೆಳೆತನ ಇದೆ. ಈ ಮೊದಲು ಧೋನಿ ಜನ್ಮದಿನದಂದು ಸಲ್ಲು ಜತೆ ಕೇಕ್ ಕತ್ತರಿಸಿದ್ದರು. 2024ರಲ್ಲಿ ಈ ಘಟನೆ ನಡೆದಿತ್ತು.

ಇದನ್ನೂ ಓದಿ: 3 ಸಾವಿರ ಕೋಟಿ ಒಡೆಯ ಸಲ್ಮಾನ್ ಖಾನ್; ಹೂಡಿಕೆಗಳನ್ನು ನೋಡಿದ್ರೆ ತಲೆತಿರುಗುತ್ತೆ

ಇನ್ನು, ರಮೇಶ್ ತೌರಾಣಿ, ಟಬು. ನಿಖಿ ದ್ವಿವೇದಿ, ಮಹೇಶ್ ಮಂಜ್ರೇಕರ್ ಸೇರಿದಂತೆ ಸಲ್ಮಾನ್ ಆಪ್ತ ಬಳಗದ ಅನೇಕರು ಈ ಬರ್ತ್​ಡೇಯಲ್ಲಿ ಕಾಣಿಸಿಕೊಂಡರು.ಎಲ್ಲರೂ ಸಲ್ಲುಗೆ ವಿಶ್ ಮಾಡಿ, ಪಾರ್ಟಿಯನ್ನು ಎಂಜಾಯ್ ಮಾಡಿ ತೆರಳಿದ್ದಾರೆ. ಸಲ್ನಾನ್ ಖಾನ್ ಫಾರ್ಮ್​​ಹಸ್ ಮುಂಬೈ ಹೊರ ವಲಯದಲ್ಲಿ ಇದೆ. ಕೊವಿಡ್ ಸಮಯದಲ್ಲಿ ಅವರು ಇಲ್ಲಿಯೇ ಇದ್ದರು ಮತ್ತು ಕೃಷಿ ಮಾಡುತ್ತಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

3468 ಎಸೆತಗಳಲ್ಲಿ ವಿಶ್ವ ದಾಖಲೆ ಬರೆದ ಹ್ಯಾರಿ ಬ್ರೂಕ್ – Kannada News | Harry Brook Creates New World Record In Test Cricket

ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೂಲಕ ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್​ಮನ್ ಹ್ಯಾರಿ ಬ್ರೂಕ್ (Harry Brook) ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ಆಸೀಸ್ ದಾಂಡಿಗ ಆ್ಯಡಂ ಗಿಲ್​ಕ್ರಿಸ್ಟ್ ಅವರ ವರ್ಲ್ಡ್​ ರೆಕಾರ್ಡ್ ಮುರಿಯುವ ಮೂಲಕ ಎಂಬುದು ವಿಶೇಷ.

Source link