ಕಾರಿಗಾಗಿ ದಂಪತಿ ಮಧ್ಯೆ ಗಲಾಟೆ: ಮದ್ವೆಯಾದ ಹತ್ತೇ ತಿಂಗಳಿಗೆ ತಂಗಿ ಗಂಡನನ್ನೇ ಕೊಂದ ಬಾಮೈದ
ಆನೇಕಲ್, ಏಪ್ರಿಲ್ 06: ಕಾರು ಖರೀದಿ ವಿಚಾರವಾಗಿ ಬಾಮೈದನಿಂದ ಭಾವನನ್ನು ಕೊಲೆ (murder) ಮಾಡಿರುವಂತಹ ಘಟನೆ ಆಂಧ್ರದ ಇಂದೂಪುರ ಪೊಲೀಸ್ ಠಾಣವ್ಯಾಪ್ತಿಯ ಮೇಳ್ಯ ಬಳಿ ನಡೆದಿದೆ. ವಿನಯ್ ಕುಮಾರ್ (37) ಕೊಲೆಯಾದ ವ್ಯಕ್ತಿ. ಬಾಮೈದ ರಾಜು ಮತ್ತು ಅವನ ಗ್ಯಾಂಗ್ನಿಂದ ಕೊಲೆ ಮಾಡಲಾಗಿದ್ದು, ರಾಜು, ವೇಣು, ಶ್ರೇಯಸ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇಂದೂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಡೆದಿದ್ದೇನು? ಬೆಂಗಳೂರು ಉತ್ತರ ತಾಲೂಕಿ ಚಿಕ್ಕಬಾಣಾವರದ ನಿವಾಸಿಗಳಾದ ರಂಗಶಾಮಪ್ಪ ಮತ್ತು ಸೌಭಾಗ್ಯಮ್ಮ ದಂಪತಿಯ ಮೂರನೇ ಮಗ ವಿನಯ್…