Category Archives: Blog

Your blog category

Video: ತಾಂತ್ರಿಕ ದೋಷ, ನಿಂತಿದ್ದ ರೈಲಿನಿಂದ ಇಳಿದ ಪ್ರಯಾಣಿಕನ ಮೇಲೆ ಹರಿದ ಮತ್ತೊಂದು ರೈಲು

Video: ತಾಂತ್ರಿಕ ದೋಷ, ನಿಂತಿದ್ದ ರೈಲಿನಿಂದ ಇಳಿದ ಪ್ರಯಾಣಿಕನ ಮೇಲೆ ಹರಿದ ಮತ್ತೊಂದು ರೈಲು

ಇಟಾವಾ, ಏಪ್ರಿಲ್ 06: ತಾಂತ್ರಿಕ ದೋಷದಿಂದಾಗಿ ನಿಂತಿದ್ದ ರೈಲಿನಿಂದ ಇಳಿದ ಯುವಕನೊಬ್ಬನಿಗೆ ಮತ್ತೊಂದು ರೈಲು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ. ಅಪಘಾತದ ಬಗ್ಗೆ ರೈಲ್ವೆ ಪೊಲೀಸರು ಯುವಕನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.ಓಖಾ-ಗುವಾಹಟಿ ಎಕ್ಸ್‌ಪ್ರೆಸ್ ಇಟಾವಾದಿಂದ ಕಾನ್ಪುರಕ್ಕೆ ಡೌನ್ ಲೈನ್‌ನಲ್ಲಿ ಪ್ರಯಾಣಿಸುತ್ತಿತ್ತು. ಪ್ರಯಾಣದ ಸಮಯದಲ್ಲಿ, 13 ನೇ ಕೋಚ್‌ನ ಚಕ್ರಗಳಿಂದ ಇದ್ದಕ್ಕಿದ್ದಂತೆ ಹೊಗೆ ಬರಲು ಪ್ರಾರಂಭಿಸಿತ್ತು.

ಪ್ರಯಾಣಿಕರು ಹೊಗೆಯಿಂದ ಗಾಬರಿಗೊಂಡರು, ಮತ್ತು ಅನೇಕರು ಭಯದಿಂದ ತಮ್ಮ ಆಸನಗಳಿಂದ ಎದ್ದರು. ತಾಂತ್ರಿಕ ತಂಡವನ್ನು ಸ್ಥಳಕ್ಕೆ ಕರೆಸಿ ಹೊಗೆಯನ್ನು ನಂದಿಸಲಾಯಿತು. ಈ ಸಮಯದಲ್ಲಿ ರೈಲು 10 ನಿಮಿಷಗಳ ಕಾಲ ನಿಂತಿತು. ರೈಲು ನಿಂತಾಗ, ಅನೇಕ ಪ್ರಯಾಣಿಕರು ಇಳಿದರು.

ತಾಂತ್ರಿಕ ದೋಷವನ್ನು ಸರಿಪಡಿಸಿದ ನಂತರ ರೈಲು ಮುಂದೆ ಚಲಿಸಿದ ತಕ್ಷಣ, ಪ್ರಯಾಣಿಕರಲ್ಲಿ ರೈಲು ಹತ್ತಲು ನೂಕುನುಗ್ಗಲು ಉಂಟಾಯಿತು. ಈ ಮಧ್ಯೆ, ಇನ್ನೊಂದು ಮಾರ್ಗವನ್ನು ದಾಟಿ ರೈಲು ಹತ್ತಲು ಓಡುತ್ತಿದ್ದ ಪ್ರಯಾಣಿಕನೊಬ್ಬನಿಗೆ ಕಾನ್ಪುರದಿಂದ ಇಟಾವಾ ಕಡೆಗೆ ಬರುತ್ತಿದ್ದ ಸೀಲ್ಡಾ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಮೃತರನ್ನು ದಿಲಾವರ್ ಹುಸೇನ್ ಎಂದು ಗುರುತಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಿಗರೇಟ್ ವಿಚಾರವಾಗಿ ಎರಡು ಗುಂಪಿನ ನಡುವೆ ಹೊಡೆದಾಟ! ಓರ್ವ ಸಾವು

ಮಂಡ್ಯ , ಏಪ್ರಿಲ್ 06: ಕ್ಷುಲ್ಲಕ ಕಾರಣಗಳು ಹಾಗೂ ಆಸ್ತಿ ವಿವಾದಗಳಿಂದ ಮಂಡ್ಯದಲ್ಲಿ (Mandya) ಎರಡು ಪ್ರತ್ಯೇಕ ಹಿಂಸಾತ್ಮಕ ಘಟನೆಗಳು ನಡೆದಿದ್ದು, ಒಬ್ಬ ಯುವಕ ಸಾವನ್ನಪ್ಪಿದ್ದಾನೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮದ್ದೂರು ಮತ್ತು ಕೆ.ಆರ್.ಪೇಟೆಯಲ್ಲಿ ಮಾರಾಮಾರಿ ನಡೆದಿದ್ದು, ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಎರಡೂ ಘಟನೆಗಳಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜಿ ಸಂಧಾನ ನಡೆಯುತ್ತಿರುವಾಗಲೇ ಮತ್ತೆ ಗಲಾಟೆ

ಮದ್ದೂರು ಪಟ್ಟಣದ ಪಟೇಲ್ ಸಾಮಿಲ್ ಸಮೀಪ ಎರಡು ಯುವಕರ ಗುಂಪುಗಳ ನಡುವೆ ಗಲಾಟೆ ನಡೆದಿದೆ. ಪರಿಣಾಮವಾಗಿ ಮರಳಿಗ ಗ್ರಾಮದ ಯಶವಂತ್ ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗೊರವನಹಳ್ಳಿ ಗ್ರಾಮದ ದರ್ಶನ್ ಮತ್ತು ಸಚಿನ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೆಲ ದಿನಗಳ ಹಿಂದೆ ಬಾರ್‌ನಲ್ಲಿ ಸಿಗರೇಟ್ ವಿಚಾರವಾಗಿ ಎರಡು ಗುಂಪಿನ ಯುವಕರ ನಡುವೆ ಗಲಾಟೆ ನಡೆದಿತ್ತು. ಇದೇ ವಿಷಯಕ್ಕೆ ಕಳೆದ ರಾತ್ರಿ ರಾಜಿ ಮಾತುಕತೆ ನಡೆಯುವ ವೇಳೆ ಮತ್ತೆ ಜಗಳವಾಗಿದೆ. ಈ ಸಂದರ್ಭದಲ್ಲಿ ಯುವಕರು ದೊಣ್ಣೆಗಳಿಂದ ಪರಸ್ಪರ ದಾಳಿ ನಡೆಸಿಕೊಂಡಿದ್ದು, ಪರಿಣಾಮವಾಗಿ ಯಶವಂತ್ ಮೃತಪಟ್ಟಿದ್ದಾನೆ. ಮದ್ದೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಜೆ ಶೋಭಾರಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣ: ಮತ್ತೆರಡು ಸ್ಫೋಟಕ ವಿಡಿಯೋ ಬಿಡುಗಡೆ! ಕಾಂಗ್ರೆಸ್ ಮುಖಂಡನ ಕೈವಾಡ ಇದೆ ಎಂದ ಯುವತಿ

ಆಸ್ತಿ ಸಂಬಂಧ ಇನ್ನೊಂದು ಗಲಾಟೆ!

ಇನ್ನೊಂದು ಘಟನೆ ಕೆ.ಆರ್.ಪೇಟೆ ತಾಲೂಕಿನ ನಾಟನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪಿತ್ರಾರ್ಜಿತ ಆಸ್ತಿ ಸಂಬಂಧ ರಸ್ತೆ ಬಿಡುವ ವಿಚಾರವಾಗಿ ದಾಯಾದಿಗಳ ನಡುವೆ ಉಂಟಾದ ಜಗಳ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಈ ವೇಳೆ ಸಂಬಂಧಿಕರು ಮಾರಕಾಸ್ತ್ರಗಳಿಂದ ಪರಸ್ಪರ ದಾಳಿ ನಡೆಸಿಕೊಂಡಿದ್ದಾರೆ. ಪರಿಣಾಮವಾಗಿ ಸೋಮೇಗೌಡ, ವಸಂತ್ ಮತ್ತು ನಿಶಾಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಪ್ರಕರಣದಲ್ಲಿ ಉಗ್ರೇಗೌಡ, ವೇಣು, ನೂತನ್, ಪ್ರಕಾಶ್ ಮತ್ತು ಸೋಮೇಶ್ ಎಂಬವರ ವಿರುದ್ಧ ದೂರು ದಾಖಲಾಗಿದ್ದು, ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪೇರಳೆ ಹಣ್ಣು ಕದ್ದಿದ್ದಕ್ಕೆ ಬಾಲಕಿಗೆ ಇಂಥಾ ಶಿಕ್ಷೆಯೇ?

ಉನಾ, ಏಪ್ರಿಲ್ 06: ಪೇರಳೆ(Guava) ಹಣ್ಣು ಕದ್ದಿದ್ದಕ್ಕೆ ಬಾಲಕಿಗೆ ಶಿಕ್ಷೆ ನೀಡಿರುವ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ನಡೆದಿದೆ. ಮನೆಯ ಹೊರಗಿರುವ ಮರದಲ್ಲಿ ಪೇರಳೆ ಹಣ್ಣು ಕದ್ದಿದ್ದಕ್ಕೆ ನಿವೃತ್ತ ಸೇನಾ ಅಧಿಕಾರಿಯೊಬ್ಬರು ಅಪ್ರಾಪ್ತ ಬಾಲಕಿಗೆ ಕಠಿಣ ಶಿಕ್ಷೆ ನೀಡಿದ್ದಾರೆ. ಆಕೆಯನ್ನು ಕಟ್ಟಿಹಾಕಿ ಥಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಬಾಲಕಿ ವಲಸೆ ಕುಟುಂಬದ ಮಗಳು, ಆರೋಪಿಯ ನಿವಾಸದ ಬಳಿಯ ಮರದಿಂದ ಪೇರಳೆ ಹಣ್ಣುಗಳನ್ನು ಕಿತ್ತುಕೊಂಡಿದ್ದು ಆಕೆಯ ಅಪರಾಧ ಎಂದು ಹೇಳಲಾಗಿದೆ.

ಆರೋಪಿಯು ಬಾಲಕಿಯನ್ನು ತನ್ನ ಮನೆಯೊಳಗೆ ಕರೆದೊಯ್ದು, ಸರಪಳಿಯಿಂದ ಮೆಟ್ಟಿಲುಗಳಿಗೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯ ಯುವಕನೊಬ್ಬ ಘಟನೆಯ ವೀಡಿಯೊವನ್ನು ರೆಕಾರ್ಡ್ ಮಾಡಿದ್ದು, ಅದು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.

ವೀಡಿಯೊದಲ್ಲಿ, ಬಾಲಕಿ ಅಳುತ್ತಾ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯೊಂದಿಗೆ ತನ್ನನ್ನು ಉಳಿಸಲು ಬೇಡಿಕೊಳ್ಳುವುದನ್ನು ಕಾಣಬಹುದು, ಆದರೆ ಆರೋಪಿಯು ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಾನೆ, ವೀಡಿಯೊ ಚಿತ್ರೀಕರಿಸುತ್ತಿರುವ ವ್ಯಕ್ತಿಯು ಹಲ್ಲೆಯ ಬಗ್ಗೆ ಆರೋಪಿಯನ್ನು ಪ್ರಶ್ನಿಸುತ್ತಿರುವುದನ್ನು ಸಹ ಕೇಳಬಹುದು.

ಮತ್ತಷ್ಟು ಓದಿ: ನಿಮ್ಮ ಮನೆಯ ಪೇರಳೆ ಮರದಲ್ಲಿ ಹಣ್ಣು ಬಿಡುತ್ತಿಲ್ಲವೇ? ಹೀಗೆ ಮಾಡಿ

ಘಟನೆಯ ಬಗ್ಗೆ ಮಕ್ಕಳ ಸಹಾಯವಾಣಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ರೋಹಿತ್ ಹೇಳಿದ್ದಾರೆ. ಅವರ ಪ್ರಕಾರ, ಆರೋಪಿ ನಂತರ ಬಾಲಕಿ ಕುಟುಂಬಕ್ಕೆ ಕ್ಷಮೆಯಾಚಿಸಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ನಿವೃತ್ತ ಸೇನಾಧಿಕಾರಿಯನ್ನು ವಿಚಾರಣೆಗೆ ಒಳಪಡಿಸಿದರು, ಬಾಲಕಿಯ ಕುಟುಂಬದ ಹೇಳಿಕೆಗಳನ್ನು ದಾಖಲಿಸಿಕೊಂಡರು ಮತ್ತು ಬಾಲಕಿಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಿದರು.ಆರೋಪಿಗಳ ವಿರುದ್ಧ ಸಂಬಂಧಿತ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

2 ಸಾವಿರ ರೂ. ಬರುತ್ತೇ ಎಂದು ಖುಷಿ ಪಡಬೇಡಿ: ಮಹಿಳೆಯರಿಗೆ ದೊಡ್ಡ ಎಚ್ಚರಿಕೆ ನೀಡಿದ ಕುಮಾರಸ್ವಾಮಿ

ಬಾಗಲಕೋಟೆ, ಏ.6: ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಭರ್ಜರಿ ಪ್ರಚಾರ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳು ಭವಿಷ್ಯದ ಪೀಳಿಗೆಗೆ ಸಾಲದ ಹೊರೆ ಹೆಚ್ಚಿಸುತ್ತವೆ ಎಂದು ಅವರು ಎಚ್ಚರಿಸಿದರು. ಪ್ರಸ್ತುತ ಸರ್ಕಾರವು 8.17 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಕುಟುಂಬ ರಾಜಕಾರಣದ ಬಗ್ಗೆ ಸಿದ್ದರಾಮಯ್ಯನವರನ್ನು ಟೀಕಿಸಿದ ಕುಮಾರಸ್ವಾಮಿ, ಅವರ ಪುತ್ರನನ್ನು ರಾಜಕೀಯಕ್ಕೆ ತಂದಿರುವುದನ್ನು ಪ್ರಶ್ನಿಸಿದರು. ಅಹಿಂದ ಸಮುದಾಯದ ಹೆಸರನ್ನು ಅಧಿಕಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಬೆಳಕಿಗೆ ಬಂದ ವಾಲ್ಮೀಕಿ ಅಭಿವೃದ್ಧಿ ನಿಗಮದ 87 ಕೋಟಿ ರೂಪಾಯಿ ಹಗರಣ ಮಾಡಿದ್ದಾರೆ ಎಂದು ಹೇಳಿದರು. ವೀರಣ್ಣ ಚರಂತಿಮಠ ಅವರನ್ನು ಶಿಕ್ಷಣ ತಜ್ಞ ಎಂದು ಶ್ಲಾಘಿಸಿದ ಕುಮಾರಸ್ವಾಮಿ, ಅವರು ಈ ಭಾಗದ ಅನೇಕ ಕುಟುಂಬಗಳ ಮಕ್ಕಳಿಗೆ ವಿದ್ಯೆ ನೀಡಿ ಬದುಕಿಗೆ ದಾರಿ ತೋರಿದ್ದಾರೆ ಎಂದರು. ರಾಜ್ಯದ ಗೌರವವನ್ನು ಉಳಿಸಲು ಮತ್ತು ಉತ್ತಮ ಆಡಳಿತಕ್ಕಾಗಿ ಚರಂತಿಮಠ ಅವರನ್ನು ಆಯ್ಕೆ ಮಾಡುವಂತೆ ಬಾಗಲಕೋಟೆ ಮತದಾರರಲ್ಲಿ ಕುಮಾರಸ್ವಾಮಿ ಮನವಿ ಮಾಡಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಇದು ನಾಚಿಕೆಗೇಡಿನ ವಿಷಯ’; ಧನುಶ್ ಜೊತೆ ಕಿತ್ತಾಡಿದ ನಯನಾತಾರ ಬಗ್ಗೆ ಪತಿ ಅಸಮಾಧಾನ?

ತಮಿಳು ನಟ ಧನುಶ್ (Dhanush) ಹಾಗೂ ನಯನತಾರಾ-ವಿಘ್ನೇಶ್ ಶಿವನ್ ಮಧ್ಯೆ ಕಿರಿಕ್ ಆಗಿತ್ತು. ನೆಟ್​​ಫ್ಲಿಕ್ಸ್ ಅಲ್ಲಿ ರಿಲೀಸ್ ಆದ ನಯನತಾರಾ ಅವರ ಮದುವೆ ಡಾಕ್ಯುಮೆಂಟರಿಯಲ್ಲಿ ಧನುಶ್ ಸಿನಿಮಾದ ಸೆಟ್​​ ದೃಶ್ಯ ಒಂದನ್ನು ಹಾಕಲಾಗಿತ್ತು. ಈ ಸಂಬಂಧ ಧನುಶ್ ಕೇಸ್ ದಾಖಲು ಮಾಡಿದ್ದರು. ಆ ಬಳಿಕ ಇವರ ಸಂಬಂಧ ಹದಗೆಟ್ಟಿದೆ. ಈ ಬಗ್ಗೆ ವಿಘ್ನೇಶ್ ಶಿವನ್ ಮಾತನಾಡಿದ್ದಾರೆ. ಈ ಕಿತ್ತಾಟ ತಮಗೆ ದೊಡ್ಡ ನಷ್ಟ ತಂದಿದೆ ಎಂದು ವಿಘ್ನೇಶ್ ಹೇಳಿದ್ದಾರೆ.

2015ರಲ್ಲಿ ‘ನಾನುಮ್ ರೌಡಿ ದಾನ್’ ಸಿನಿಮಾ’ ತೆರೆಗೆ ಬಂತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ವಿಘ್ನೇಶ್ ಶಿವನ್. ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಧನುಶ್. ನಯನತಾರಾ ಈ ಚಿತ್ರದ ನಾಯಕಿ. ವಿಘ್ನೇಶ್-ನಯನತಾರಾ ಮಧ್ಯೆ ಪ್ರೀತಿ ಮೂಡಿದ್ದು ಇದೇ ಸಿನಿಮಾದಲ್ಲಿ. ಈ ಚಿತ್ರದ ಶೂಟಿಂಗ್ ದೃಶ್ಯವನ್ನು ‘ನೆಟ್​ಫ್ಲಿಕ್ಸ್’ ಡಾಕ್ಯುಮೆಂಟರಿ ‘ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್’ನಲ್ಲಿ ಬಳಕೆ ಮಾಡಲಾಗಿತ್ತು. ಇದಕ್ಕೆ ಧನುಶ್ ಒಪ್ಪಿಗೆ ನೀಡಿರಲಿಲ್ಲ. ಈ ದೃಶ್ಯ ಬಳಸಿದ್ದಕ್ಕಾಗಿ ನಯನತಾರಾಗೆ ಮತ್ತು ನೆಟ್​ಫ್ಲಿಕ್ಸ್​ಗೆ 10 ಕೋಟಿ ರೂಪಾಯಿ ನೀಡುವಂತೆ ಧನುಶ್ ಬೇಡಿಕೆ ಇಟ್ಟಿದ್ದರು.

ಈ ಘಟನೆ ಬಗ್ಗೆ ವಿಘ್ನೇಶ್ ಮಾತನಾಡಿದ್ದಾರೆ. ‘ನಿಮ್ಮ ಜೊತೆ ಒಳ್ಳೆ ರೀತಿಯಲ್ಲಿ ಇದ್ದವರನ್ನು ಕಳೆದುಕೊಂಡರೆ ಅದು ನಾಚಿಕೆಗೇಡಿನ ಸಂಗತಿ. ಎಲ್ಲೋ ಒಂದು ಕಡೆ ತಪ್ಪು ನಡೆದಿದೆ’ ಎಂದು ಅವರು ಹೇಳಿಕೊಂಡಿದ್ದಾರೆ. ಈ ಮೂಲಕ ಜಗಳಕ್ಕೆ ಮೂಲ ಕಾರಣರಾದ ಪತ್ನಿ ನಯನಾತಾರಾ ಬಗ್ಗೆಯೇ ಅವರಿಗೆ ಬೇಸರ ಇದೆಯೇ ಎಂಬ ಪ್ರಶ್ನೆ ಮೂಡಿದೆ.

ಭಿನ್ನಾಭಿಪ್ರಾಯಗಳ ಹೊರತಾಗಿಯೂ, ವಿಘ್ನೇಶ್ ಅವರು ಧನುಷ್ ಬಗ್ಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ವೃತ್ತಿಜೀವನದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಿದ್ದಾರೆ. ‘ಅವರು ಇಲ್ಲದಿದ್ದರೆ ನಾನು ಇಲ್ಲಿ ಇರುತ್ತಿರಲಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ: ನಯನಾತಾರಾಗೆ ದೊಡ್ಡ ಹಿನ್ನಡೆ: ಧನುಷ್ ಪರವಾಗಿ ತೀರ್ಪು ನೀಡಿದ ಕೋರ್ಟ್

ವಿಘ್ನೇಶ್ ಶಿವನ್ ಅವರಿಗೆ ಧನುಷ್ ಅವರ ಬಗ್ಗೆ ಅಪಾರ ಗೌರವ ಇದೆ. ಅಲ್ಲದೆ, ಅವರನ್ನು ಕಳೆದುಕೊಂಡಿದ್ದಕ್ಕೆ ಸಾಕಷ್ಟು ಬೇಸರ ಕೂಡ ಇದೆ. ಕ್ಷಮೆ ಕೇಳಿ ಈ ಪ್ರಕರಣವನ್ನು ಕೊನೆಗೊಳಿಸಿಕೊಳ್ಳುತ್ತಾರಾ ಅಥವಾ ಇವರ ಕಿತ್ತಾಟ ಹೀಗೆಯೇ ಮುಂದುವರೆಯುತ್ತದೆಯೇ ಎಂಬುದು ಸದ್ಯದ ಪ್ರಶ್ನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಐಪಿಎಲ್​ನಲ್ಲಿ ಯಾರಿಂದಲೂ ಸಾಧ್ಯವಾಗದ ದಾಖಲೆ ಬರೆದ ಸರ್ಫರಾಝ್ ಖಾನ್

Source link

ಕರ್ನಾಟಕ ಹವಾಮಾನ ವರದಿ: ಇಂದೂ ಗುಡುಗು ಸಹಿತ ಮಳೆಯಾಗುವ ಸಂಭವ; 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​!

ಬೆಂಗಳೂರು, ಏಪ್ರಿಲ್ 06: ಹಲವು ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾರ್ಭಟ  (Weather Forecast)ಕಾಣಸಿಗುತ್ತಿದೆ. ಅಂತೆಯೇ ಇಂದೂ ಸಹ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​? ​

ಕಲಬುರ್ಗಿ, ಧಾರವಾಡ, ಗದಗ, ಶಿವಮೊಗ್ಗ ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದ್ದರಿಂದ ಈ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ.

ಇದನ್ನೂ ಓದಿ 1,2,3,4,5,6,7 ಈ ದಿನದಂದು ಮಧ್ಯಾಹ್ನದ ನಂತರ ಬರಲಿದೆ ಗುಡುಗು ಸಹಿತ ಮಳೆ; ಎಲ್ಲೆಲ್ಲಿ ಮಳೆಯಾಗಬಹುದು?

ಎಲ್ಲೆಲ್ಲಿ ಮಳೆ

ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಸೇರದಂತೆ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ರಾಯಚೂರು ಮತ್ತು ಕಲ್ಬುರ್ಗಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ಚಾಮರಾಜನಗರ, ಮೈಸೂರು, ಮಂಡ್ಯ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ಕೋಲಾರದಲ್ಲಿ 30-40 ಕೀ.ಮಿ/ಗಂ ವೇಗದಲ್ಲಿ ಗಾಳಿ ಮಳೆ ಜೋರಾಗಿರಲಿದೆ. ಉಳಿದೆಡೆ ಒಣ ಹವೆಯ ವಾತಾವರಣವಿರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಜಿನಿಯನ್ನು ಹೆಗಲಮೇಲೆ ಇಟ್ಟು ಬಸ್ಕಿ ಹೊಡೆದ ಪತಿ ಅರುಣ್

ಅಮೃತವರ್ಷಿಣಿ ರಜಿನಿ ಅವರು ಈಗ ಪತಿ ಅರುಣ್ ಜೊತೆ ‘ಜೋಡಿ ನಂಬರ್ 1’ ಶೋಗೆ ಬಂದಿದ್ದಾರೆ. ಈ ಶೋ ಸಖತ್ ಫನ್ ಆಗಿದೆ. ಈ ಶೋನಲ್ಲಿ ಅರುಣ್ ಹಾಗೂ ರಜಿನಿಗೆ ಅದ್ದೂರಿ ಸ್ವಾಗತ ಸಿಕ್ಕಿತು. 10 ಜೋಡಿಗಳ ಜೊತೆ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಈ ಶೋನಲ್ಲಿ ರಜಿನಿ ಅವರನ್ನು ಭುಜದ ಮೇಲೆ ಇಟ್ಟುಕೊಂಡು ಬಸ್ಕಿ ತೆಗೆದಿದ್ದಾರೆ ಅರುಣ್. ಇದನ್ನು ನೋಡಿ ಜಡ್ಜ್​​ಗಳು ಕೂಡ ಕಂಗಾಲಾದರು. ಆ ಸಂದರ್ಭದ ವಿಡಿಯೋ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗೆಳತಿಯ ಕತ್ತು ಸೀಳಿ ಪ್ರಿಯಕರ ಪರಾರಿ

ಲಕ್ನೋ, ಏಪ್ರಿಲ್ 06: ಯುವಕನೊಬ್ಬ ತನ್ನ ಗೆಳತಿಯ ಕತ್ತು ಸೀಳಿ ಕೊಲೆ(Murder) ಮಾಡಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆಕೆಯ ಪ್ರಿಯಕರ ಮತ್ತವನ ಸ್ನೇಹಿತರು ಸೇರಿ ಈ ಕೃತ್ಯವೆಸಗಿದ್ದಾರೆ. ಇಬ್ಬರ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ನಡೆಯುತ್ತಲೇ ಇತ್ತು. ಆಕೆಗಿನ್ನು 17 ವರ್ಷ ವಯಸ್ಸು. ಶನಿವಾರ ರಾತ್ರಿ ಡಿಯೋರಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳು ಬಾಲಕಿಯ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ನೌತನ್ ಹಥಿಯಾಗಢ ಗ್ರಾಮದ ನಿವಾಸಿ ಅಂಜಲಿಯನ್ನು ಶಿವಂ ಸಿಂಗ್ ಮತ್ತು ಅವರ ಸಹಚರರು ಆಕೆಯನ್ನು ಕೊಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ, ಬಾಲಕಿ ತನ್ನ ತಂಗಿ ಮತ್ತು ಸಹೋದರನೊಂದಿಗೆ ಸಹೋದರ್ ಪಟ್ಟಿ ಚೌಕ್ ಬಳಿ ಮೊಬೈಲ್ ಫೋನ್ ರಿಪೇರಿ ಮಾಡಿಸಲೆಂದು ಹೋಗಿದ್ದರು. ಬೈಕ್​ನಲ್ಲಿ ಬಂದ ಇಬ್ಬರು ಯುವಕರು ಅವರನ್ನು ಥಳಿಸಲು ಶುರುಮಾಡಿದ್ದರು.

ಚಾಕುವನ್ನು ನೋಡಿ ಮಕ್ಕಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಆರೋಪಿಗಳು ಅವರನ್ನು ಗೋಧಿ ಹೊಲಕ್ಕೆ ಓಡಿಸಿ, ಬಾಲಕಿಯನ್ನು ಹಿಡಿದು, ಆಕೆಯ ಕುತ್ತಿಗೆಗೆ ಇರಿದಿದ್ದಾರೆ. ಸಹೋದರ ತಮ್ಮ ಮನೆಯ ಕಡೆಗೆ ಓಡಲು ಪ್ರಯತ್ನಿಸಿದಾಗ, ದಾಳಿಕೋರರು ಬಾಲಕಿಯ ಕತ್ತು ಸೀಳಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಮತ್ತಷ್ಟು ಓದಿ: ಬೈಕ್​​ ಟಚ್​ ನೆಪ: ಚಾಕು ಇರಿದು ವ್ಯಕ್ತಿಯ ಬರ್ಬರ ಕೊಲೆ; ಹುಡುಗಿ ವಿಚಾರಕ್ಕೆ ಹರಿಯಿತಾ ನೆತ್ತರು?

ಕುಟುಂಬಸ್ಥರು ಸ್ಥಳಕ್ಕೆ ತಲುಪುವ ಹೊತ್ತಿಗೆ ಬಾಲಕಿ ಮೃತಪಟ್ಟಿದ್ದರು. ನಂತರ, ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಕಳೆದ ನಾಲ್ಕು ವರ್ಷಗಳಿಂದ ಹುಡುಗಿ ಮತ್ತು ಸಿಂಗ್ ನಡುವೆ ಸಂಬಂಧವಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಪರಾರಿಯಾಗಿರುವ ಸಿಂಗ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕುಟುಂಬದ ದೂರಿನ ಆಧಾರದ ಮೇಲೆ, ಸಿಂಗ್ ಮತ್ತು ಅವರ ಸಹಚರನ ವಿರುದ್ಧ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಕೊಲೆ ಪ್ರಕರಣ ದಾಖಲಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಾನು ಔಟ್ ಆಗಿದ್ದೇ ಒಳ್ಳೆದಾಯ್ತು! ದೇವದತ್ ಪಡಿಕ್ಕಲ್ ಅಚ್ಚರಿಯ ಹೇಳಿಕೆ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಜಯ ಸಾಧಿಸಿದೆ. ಅದು ಸಹ ತನ್ನ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೀನಾಯವಾಗಿ ಸೋಲಿಸುವ ಮೂಲಕ. ಈ ಪಂದ್ಯದ ನಡುವೆ ಆರ್​ಸಿಬಿ ತಂಡದ ಬ್ಯಾಟರ್ ದೇವದತ್ ಪಡಿಕ್ಕಲ್ ನೀಡಿದ ಹೇಳಿಕೆಯೊಂದು ಇದೀಗ ಭಾರೀ ವೈರಲ್ ಆಗಿದೆ.

ನಾನು ಔಟ್ ಆಗಿದ್ದೇ ಒಳ್ಳೆದಾಯ್ತು!

ಈ ಪಂದ್ಯದ ಮಧ್ಯಂತರ ವಿರಾಮದ ವೇಳೆ ಮಾತನಾಡಿದ ದೇವತ್ ಪಡಿಕ್ಕಲ್, “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಆ ಸಮಯದಲ್ಲಿ ಔಟ್ ಆಗಿದ್ದೇ ಒಂದು ರೀತಿಯಲ್ಲಿ ಒಳ್ಳೆದಾಯ್ತು ಅನಿಸುತ್ತಿದೆ. ಯಾಕೆಂದರೆ, ನಾನು ಔಟ್ ಆದ ಮೇಲೆ ಆಗಮಿಸಿದ ಟಿಮ್ ಡೇವಿಡ್ ಅಬ್ಬರಿಸಿದ ರೀತಿ ಮತ್ತು ಬ್ಯಾಟಿಂಗ್ ಮಾಡಿದ ವೇಗ ನಿಜಕ್ಕೂ ಅದ್ಭುತವಾಗಿತ್ತು,” ಎಂದು ಮುಗುಳ್ನಗುತ್ತಾ ತಮ್ಮ ಸಹ ಆಟಗಾರನ ಆಟವನ್ನು ಕೊಂಡಾಡಿದ್ದಾರೆ.

ವಿರಾಟ್ ಕೊಹ್ಲಿ ಔಟಾದ ಬಳಿಕ ಕ್ರೀಸ್​ಗೆ ಆಗಮಿಸಿದ  ದೇವದತ್ ಪಡಿಕ್ಕಲ್ ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ್ದರು. ಇದಾದ ಬಳಿಕ ಬಿರುಸಿನಿಂದ ಬ್ಯಾಟ್ ಬೀಸಿದ ಪಡಿಕ್ಕಲ್ 29 ಎಸೆತಗಳಲ್ಲಿ 50 ರನ್ ಬಾರಿಸಿ ಔಟಾದರು.

ಇತ್ತ ಪಡಿಕ್ಕಲ್ ಔಟಾದ ನಂತರ ಕ್ರೀಸ್​ಗೆ ಬಂದ ಟಿಮ್ ಡೇವಿಡ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. 15ನೇ ಓವರ್‌ನಿಂದ ಬ್ಯಾಟಿಂಗ್ ಆರಂಭಿಸಿದ ಟಿಮ್ ಡೇವಿಡ್ ಸಿಎಸ್‌ಕೆ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.

ಕೇವಲ 25 ಎಸೆತಗಳನ್ನು ಎದುರಿಸಿದ ಟಿಮ್ ಡೇವಿಡ್ 8 ಭರ್ಜರಿ ಸಿಕ್ಸರ್​ ಹಾಗೂ 3 ಫೋರ್​ಗಳೊಂದಿಗೆ ಅಜೇಯ 70 ರನ್ ಬಾರಿಸಿದರು. ಅಲ್ಲದೆ  ರಜತ್ ಪಾಟಿದಾರ್ (48* ರನ್, 19 ಎಸೆತ) ಜೊತೆಗೂಡಿ ಕೊನೆಯ 6 ಓವರ್‌ಗಳಲ್ಲಿ ಬರೋಬ್ಬರಿ 99 ರನ್ ಚಚ್ಚಿದರು. ಈ ಮೂಲಕ ಆರ್​ಸಿಬಿ ತಂಡ 20 ಓವರ್​ಗಳಲ್ಲಿ 250 ರನ್ ಕಲೆಹಾಕಿತು.

ಭರ್ಜರಿ ದಾಖಲೆ:

ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ RCB ಈ ಸೀಸನ್‌ನ ಗರಿಷ್ಠ ಮೊತ್ತವಾದ 250/3 ರನ್‌ಗಳನ್ನು ದಾಖಲಿಸಿತು. ಇದು ಐಪಿಎಲ್ ಇತಿಹಾಸದಲ್ಲಿ ಸಿಎಸ್‌ಕೆ ವಿರುದ್ಧ ದಾಖಲಾದ ಅತ್ಯಧಿಕ ಮೊತ್ತವೂ ಹೌದು.

ಪಂದ್ಯದ ಫಲಿತಾಂಶ:

ಬೃಹತ್ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 207 ರನ್‌ಗಳಿಗೆ ಆಲೌಟ್ ಆಗುವ ಮೂಲಕ 43 ರನ್‌ಗಳ ಸೋಲೊಪ್ಪಿಕೊಂಡಿತು. ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ (3/41) ಅಮೋಘ ಬೌಲಿಂಗ್ ಪ್ರದರ್ಶಿಸಿ, ಐಪಿಎಲ್‌ನಲ್ಲಿ 200 ವಿಕೆಟ್ ಪಡೆದ ಮೊದಲ ವೇಗಿ ಎಂಬ ಇತಿಹಾಸ ಬರೆದರು.

ಇದನ್ನೂ ಓದಿ: VIDEO: ವಿರಾಟ್ ಕೊಹ್ಲಿಯನ್ನು ಕೆಣಕಿ ಕೆಟ್ಟ CSK

ಸಂಕ್ಷಿಪ್ತ ಸ್ಕೋರ್ ಕಾರ್ಡ್:

  • RCB: 250/3 (20 ಓವರ್) – ಟಿಮ್ ಡೇವಿಡ್ 70*, ಪಡಿಕ್ಕಲ್ 50.
  • CSK: 207/10 (19.4 ಓವರ್) – ಭುವನೇಶ್ವರ್ ಕುಮಾರ್ 3/41.

 

Source link