IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 11ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ರಚಂಡ ಜಯ ಸಾಧಿಸಿದೆ. ಈ ಸೋಲಿನ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡವು ವಿಶೇಷ ದಾಖಲೆಯೊಂದನ್ನು ನಿರ್ಮಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 250 ರನ್ ಕಲೆಹಾಕಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ 200+ ಸ್ಕೋರ್ಗಳಿಸಿದ ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರು.
ಹೀಗೆ ಆರ್‌ಸಿಬಿ ಬರೆದ ಈ ದಾಖಲೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗಂಟೆಗಳ ಅಂತರದಲ್ಲೇ ಅಳಿಸಿ ಹಾಕಿರುವುದು ವಿಶೇಷ. ಅಂದರೆ ಆರ್‌ಸಿಬಿ ನೀಡಿದ 250 ರನ್‌ಗಳ ಗುರಿ ಬೆನ್ನತ್ತಿದ ಸಿಎಸ್‌ಕೆ ತಂಡವು 19.4 ಓವರ್‌ಗಳಲ್ಲಿ 207 ರನ್ ಗಳಿಸಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು 200+ ಸ್ಕೋರ್ಗಳಿಸಿ ದಾಖಲೆಯನ್ನು ಮತ್ತೊಮ್ಮೆ ತಮ್ಮದಾಗಿಸಿಕೊಂಡರು.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 274 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಟ್ಟು 36 ಬಾರಿ 200+ ಸ್ಕೋರ್ಗಳಿಸಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಬಾರಿ 200+ ಸ್ಕೋರ್ಗಳಿಸಿದ ತಂಡವೆಂಬ ದಾಖಲೆ ನಿರ್ಮಿಸಿದ್ದರು.
ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಸಿಎಸ್‌ಕೆ ಪಡೆಯು 257 ಪಂದ್ಯಗಳಲ್ಲಿ 37 ಬಾರಿ 200+ ಸ್ಕೋರ್ ಗಳಿಸಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಇನ್ನೂರಕ್ಕಿಂತ ಅಧಿಕ ಸ್ಕೋರ್ಗಳಿಸಿ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಬೆಂಗಳೂರು (ಏ. 06): ಇಂಡಿಯನ್ ಪ್ರೀಮಿಯರ್ ಲೀಗ್ 2026 ಅನ್ನು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು ಅತ್ಯಂತ ದುಬಾರಿ ತಂತ್ರದೊಂದಿಗೆ ಪ್ರಾರಂಭಿಸಿತು. ಆದರೆ ಮೊದಲ ಮೂರು ಪಂದ್ಯಗಳ ನಂತರ, ಈ ನಡೆ ಉಲ್ಟಾ ಹೊಡೆದಂತೆ ಕಾಣುತ್ತದೆ. ರಾಜಸ್ಥಾನ್ ರಾಯಲ್ಸ್ ಜೊತೆಗಿನ ಪ್ರಮುಖ ವ್ಯಾಪಾರ ಒಪ್ಪಂದದಲ್ಲಿ ಸಿಎಸ್‌ಕೆ ಸಂಜು ಸ್ಯಾಮ್ಸನ್ ಅವರನ್ನು 18 ಕೋಟಿಗೆ ಸಹಿ ಹಾಕಿತು. ಸಂಜು ಮತ್ತು ನಾಯಕ ರುತುರಾಜ್ ಗಾಯಕ್ವಾಡ್ (₹18 ಕೋಟಿಗೆ ಉಳಿಸಿಕೊಂಡ) ಜೋಡಿಯನ್ನು ಬಳಸಿಕೊಂಡು ಎದುರಾಳಿ ಬೌಲರ್‌ಗಳನ್ನು ಬೆವರು ಸುರಿಸಬೇಕೆಂಬುದು ಆಡಳಿತ ಮಂಡಳಿಯ ಯೋಜನೆಯಾಗಿತ್ತು. ಅದರಂತೆ ₹36 ಕೋಟಿ ಮೌಲ್ಯದ ಈ ಆರಂಭಿಕ ಜೋಡಿಯ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟಿದ್ದರು, ಆದರೆ ವಾಸ್ತವ ಇದಕ್ಕೆ ವಿರುದ್ಧವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಭಾನುವಾರದ ಪಂದ್ಯದಲ್ಲಿ, ಎಸ್ಕೆ ತಂಡವು 251 ರನ್‌ಗಳ ಕಠಿಣ ಗುರಿಯನ್ನು ಎದುರಿಸಿತು. ಇಷ್ಟು ದೊಡ್ಡ ಮೊತ್ತವನ್ನು ಬೆನ್ನಟ್ಟಲು ಬಲವಾದ ಆರಂಭದ ಅಗತ್ಯವಿತ್ತು, ಆದರೆ ಸಂಜು ಸ್ಯಾಮ್ಸನ್ ಮತ್ತು ರುತುರಾಜ್ ಗಾಯಕ್ವಾಡ್ ಜೋಡಿ ಮತ್ತೊಮ್ಮೆ ನಿರಾಶೆಗೊಳಿಸಿತು.
ನಾಯಕ ರುತುರಾಜ್ ಕೇವಲ 7 ರನ್‌ಗಳಿಗೆ ಔಟಾದರು, ಸಂಜು ಸ್ಯಾಮ್ಸನ್ ಕೇವಲ 9 ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡರು. ಇವರಿಬ್ಬರ ಕಳಪೆ ಪ್ರದರ್ಶನದೊಂದಿಗೆ, ಎಸ್ಕೆ ತಂಡದ ಪವರ್‌ಪ್ಲೇ ಸಂಪೂರ್ಣ ವಿಫಲವಾಯಿತು ಮತ್ತು ತಂಡವು ಪಂದ್ಯದ ಆರಂಭದಲ್ಲಿಯೇ ರೇಸ್‌ನಿಂದ ಹೊರಬಿತ್ತು.
ಸಂಜು-ರುತು ಮೊದಲ ಎರಡು ಪಂದ್ಯಗಳಲ್ಲಿಯೂ ವಿಫಲ
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸಿಎಸ್‌ಕೆ ತಂಡದ ಮೊದಲ ಪಂದ್ಯದಲ್ಲೂ ಈ ಜೋಡಿ ವಿಫಲವಾಯಿತು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಲಾ 6 ರನ್ ಗಳಿಸಿದರು. ಎರಡನೇ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ವಿರುದ್ಧ ಸ್ಯಾಮ್ಸನ್ 7 ರನ್‌ಗಳಿಗೆ ಮತ್ತು ರುತುರಾಜ್ 28 ರನ್‌ಗಳಿಗೆ ಔಟಾದರು. ಪರಿಣಾಮವಾಗಿ, ಈ ಜೋಡಿ ಮೊದಲ ಮೂರೂ ಪಂದ್ಯದಲ್ಲಿ ಸಂಪೂರ್ಣ ವಿಫಲವಾಗಿದೆ.
ಐಪಿಎಲ್ 2026 ರ ಮೊದಲ ಮೂರು ಪಂದ್ಯಗಳನ್ನು ನೋಡಿದರೆ, ಈ 36 ಕೋಟಿ ರೂಪಾಯಿ ಜೋಡಿ ತಂಡದ ಅತಿದೊಡ್ಡ ದೌರ್ಬಲ್ಯವಾಗಿ ಹೊರಹೊಮ್ಮಿದೆ. ಚೆನ್ನೈನ ಎಲ್ಲೋ ಜೆರ್ಸಿಯಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸುವ ನಿರೀಕ್ಷೆಯಿದ್ದ ಸಂಜು ಸ್ಯಾಮ್ಸನ್ ಇಲ್ಲಿಯವರೆಗೆ ರನ್ ಗಳಿಸಲು ಪರದಾಡಿದ್ದಾರೆ.
ಏತನ್ಮಧ್ಯೆ, ನಾಯಕ ಗಾಯಕ್ವಾಡ್ ಮೇಲಿನ ಹೆಚ್ಚಿನ ಧಾರಣ ವೆಚ್ಚ ಮತ್ತು ನಾಯಕತ್ವದ ಒತ್ತಡವು ಅವರ ಬ್ಯಾಟಿಂಗ್ ಮೇಲೆ ಸ್ಪಷ್ಟವಾಗಿ ಪರಿಣಾಮ ಬೀರುತ್ತಿದೆ. ತಂಡದ ಅಗ್ರ ಕ್ರಮಾಂಕದ ಕುಸಿತವು ಮಧ್ಯಮ ಕ್ರಮಾಂಕದ ಮೇಲೆ ಒತ್ತಡವನ್ನು ಹೆಚ್ಚಿಸಿದೆ, ಇದು ಸಿಎಸ್‌ಕೆ ಗೆಲುವಿನ ಹಾದಿಯನ್ನು ಹೆಚ್ಚು ಕಷ್ಟಕರವಾಗಿಸಿದೆ. ಇವೆಲ್ಲದರ ಜೊತೆಗೆ ಅನುಭವಿ, ಮಾಜಿ ನಾಯಕ ಎಂಎಸ್ ಧೋನಿ ಅವರ ಅಲಭ್ಯತೆ ತಂಡದಲ್ಲಿ ಎದ್ದು ಕಾಣುತ್ತಿದೆ. ಇಂಜುರಿಯಿಂದ ಗುಣಮುಖರಾಗಿ ಧೋನಿ ಮುಂದಿನ ಪಂದ್ಯಕ್ಕಾದರೂ ಲಭ್ಯರಿರುತ್ತಾರಾ?, ಸಿಎಸ್‌ಕೆ ಗೆಲುವಿನ ಲಯಕ್ಕೆ ಮರಳುತ್ತ ಎಂಬುದು ನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏ. 6: ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪಂದ್ಯವು ಕೇವಲ ಮೈದಾನಕ್ಕಷ್ಟೇ ಸೀಮಿತವಾಗಿರಲಿಲ್ಲ, ಗ್ಯಾಲರಿಯಲ್ಲೂ ಅಭಿಮಾನಿಗಳ ನಡುವೆ ಭಾರಿ ಜಿದ್ದಾಜಿದ್ದಿಗೆ ಸಾಕ್ಷಿಯಾಯಿತು. ಪಂದ್ಯದ ವೇಳೆ ಆರ್‌ಸಿಬಿ ತಂಡವು ಭರ್ಜರಿ ಸಿಕ್ಸರ್ ಸಿಡಿಸಿದಾಗ ಕೆಂಪು ಜರ್ಸಿ ತೊಟ್ಟಿದ್ದ ಆರ್‌ಸಿಬಿ ಅಭಿಮಾನಿ ಯುವತಿಯೊಬ್ಬರು ಸಂಭ್ರಮಿಸಿದ ರೀತಿ ಈಗ ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ತಮ್ಮ ಎದುರಿಗೇ ಕುಳಿತಿದ್ದ ಹಳದಿ ಜರ್ಸಿ ತೊಟ್ಟ ಸಿಎಸ್‌ಕೆ ಅಭಿಮಾನಿಗಳತ್ತ ನೋಡಿ ಆಕೆ ಬಿಂದಾಸ್ ಆಗಿ ಡ್ಯಾನ್ಸ್ ಮಾಡುವ ಮೂಲಕ ಆರ್‌ಸಿಬಿ ತಂಡದ ಪವರನ್ನು ಪ್ರದರ್ಶಿಸಿದ್ದಾರೆ. ವಿಡಿಯೋದಲ್ಲಿ ಕಂಡುಬರುವಂತೆ, ಸಿಎಸ್‌ಕೆ ಅಭಿಮಾನಿಗಳು ಮೌನವಾಗಿದ್ದರೂ, ಆರ್‌ಸಿಬಿ ಯುವತಿ ಮಾತ್ರ ಎದೆಯುಬ್ಬಿಸಿ “ಆರ್‌ಸಿಬಿ.. ಆರ್‌ಸಿಬಿ..” ಎಂದು ಕೂಗುತ್ತಾ ಕುಣಿದಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಆರ್‌ಸಿಬಿ ಅಭಿಮಾನಿಗಳು “ನಮ್ಮ ಬೆಂಗಳೂರು, ನಮ್ಮ ಹವಾ” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಗ್ಯಾಲರಿ ಇಡೀ ಕೆಂಪು ಬಣ್ಣದಿಂದ ತುಂಬಿಹೋಗಿದ್ದು, ಅಭಿಮಾನಿಗಳ ಕಿರುಚಾಟಕ್ಕೆ ಕ್ರೀಡಾಂಗಣವೇ ನಡುಗುತ್ತಿತ್ತು.
ವಾಷಿಂಗ್ಟನ್, ಏಪ್ರಿಲ್ 6: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಇರಾನ್‌ಗೆ ಹೊಸ ಬೆದರಿಕೆ ಹಾಕಿದ್ದಾರೆ. ಒಪ್ಪಂದಕ್ಕೆ ಬನ್ನಿ ಅಥವಾ ಶರಣಾಗಿ ಇಲ್ಲವಾದಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ಮಾರಕ ದಾಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಮೆರಿಕವು ಇರಾನ್‌ನ ಇಂಧನ ಸೌಲಭ್ಯಗಳ ಮೇಲೆ ಪ್ರಮುಖ ದಾಳಿಯನ್ನು ನಡೆಸಬಹುದು, ಇದರಿಂದಾಗಿ ಇಡೀ ದೇಶದ ವಿದ್ಯುತ್ ಸರಬರಾಜಿನಲ್ಲಿ ಅಡ್ಡಿ ಉಂಟಾಗಬಹುದು ಎನ್ನುವ ಭಯ ಉಂಟಾಗಿದೆ. ಇರಾನ್ ಹಿಂದೆ ಸರಿಯಲು ಸಿದ್ಧವಿಲ್ಲ.
ಮಾರ್ಚ್ 26 ರಂದು ಟ್ರಂಪ್ 10 ದಿನಗಳ ಅಂತಿಮ ಎಚ್ಚರಿಕೆ ನೀಡಿದ್ದರು. ನಂತರ, ಭಾನುವಾರ ಏಪ್ರಿಲ್ 4 ರಂದು, ಅವರು ಅಂತಿಮ 48 ಗಂಟೆಗಳ ಎಚ್ಚರಿಕೆಯನ್ನು ನೀಡಿದ್ದಾರೆ.
ಹಾರ್ಮುಜ್ ಚೋಕ್ ಪಾಯಿಂಟ್, ಬುಶೆಹರ್ ಪರಮಾಣು ಸ್ಥಾವರ, ದಕ್ಷಿಣ ಪಾರ್ಸ್ ಅನಿಲ ಕ್ಷೇತ್ರ, ಖಾರ್ಕ್ ದ್ವೀಪದ ತೈಲ ಕೇಂದ್ರ, ಅಬದಾನ್ ಸಂಸ್ಕರಣಾಗಾರ, ಬಂದರ್ ಅಬ್ಬಾಸ್ ಸಂಸ್ಕರಣಾಗಾರ, ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ನೆಲೆಗಳ ಮೇಲೆ ದಾಳಿ ಮಾಡುವುದಾಗಿ ಅಮೆರಿಕ ಹೇಳಿದೆ.
ರಿಯಾದ್ ನಲ್ಲಿರುವ ಸಿಐಎ ಸ್ಟೇಷನ್ ಮೇಲೆ ಇರಾನ್ ದಾಳಿ ನಡೆಸಿದೆ. ಪ್ರಪಂಚದಾದ್ಯಂತದ ಹೆಚ್ಚಿನ ಅಮೇರಿಕನ್ ರಾಜತಾಂತ್ರಿಕ ಪೋಸ್ಟ್ ಗಳಂತೆ ರಿಯಾದ್‌ನಲ್ಲಿರುವ ಅಮೇರಿಕನ್ ರಾಯಭಾರ ಕಚೇರಿಯು ತನ್ನದೇ ಆದ ವಾಯು ರಕ್ಷಣಾ ವ್ಯವಸ್ಥೆಯನ್ನು ನಿರ್ವಹಿಸುವುದಿಲ್ಲ.
ಒಂದೇ ನಿಮಿಷದ ಅಂತರದಲ್ಲಿ 2 ಡ್ರೋನ್ ದಾಳಿ ನಡೆಸಲಾಗಿದೆ. ಎರಡನೇ ಡ್ರೋನ್ ಮೊದಲ ದಾಳಿಯಿಂದ ಉಂಟಾದ ರಂಧ್ರದೊಳಗೆ ನೇರವಾಗಿ ನುಗ್ಗಿ ಸ್ಫೋಟಿಸಿತು. ದಾಳಿ ಮುಗಿಯುವಷ್ಟರಲ್ಲಿ ರಿಯಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಮೂರು ಮಹಡಿಗಳು ಗಂಭೀರವಾಗಿ ಹಾನಿಗೊಳಗಾಗಿದ್ದವು ಮತ್ತು ಅದರೊಳಗಿನ ಸಿಐಎ ಕಚೇರಿಗೂ ಹೊಡೆತ ಬಿದ್ದಿತ್ತು.
ಫೆಬ್ರವರಿ 28ರಂದು ಯುದ್ಧ ಆರಂಭವಾದ ನಂತರ, ಇರಾನ್ ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ನೆಲೆಗಳು ಮತ್ತು ರಾಯಭಾರ ಕಚೇರಿಗಳ ಮೇಲೆ ತನ್ನ ಅತಿ ವ್ಯಾಪಕ ದಾಳಿಗಳನ್ನು ನಡೆಸಿದೆ. ರಿಯಾದ್ ಮಾತ್ರವಲ್ಲ, ಬಾಗ್ದಾದ್, ದುಬೈ, ಕುವೈತ್ ಮತ್ತು ಇರಾಕ್ ಕುರ್ಡಿಸ್ತಾನದ ಎರ್ಬಿಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗಳನ್ನೂ ಇರಾನಿಯನ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಗುರಿಯಾಗಿಸಿವೆ.
ಆ ದಾಳಿಗಳಲ್ಲಿ ಯಾವುದೂ ಅಮೆರಿಕನ್ ಸಾವುಗಳಿಗೆ ಕಾರಣವಾಗದಿದ್ದರೂ, ಈ ಪ್ರದೇಶದ ಅಮೆರಿಕ ನೆಲೆಗಳ ಮೇಲೆ ತೆಹ್ರಾನ್ ನಡೆಸಿದ ದಾಳಿಗಳು ಏಳು ಅಮೆರಿಕ ಸೈನಿಕರ ಸಾವಿಗೆ, ನೂರಾರು ಮಂದಿಯ ಗಾಯಗಳಿಗೆ ಕಾರಣವಾಗಿದ್ದು, ವಿಮಾನಗಳು ಮತ್ತು ರಕ್ಷಣಾ ಸಾಧನಗಳಿಗೆ ಕೋಟ್ಯಂತರ ಡಾಲರ್ ಮೌಲ್ಯದ ಹಾನಿಯನ್ನುಂಟುಮಾಡಿವೆ.
ಇನ್ನೊಂದೆಡೆ ಹಾರ್ಮುಜ್ ಜಲಸಂಧಿಯನ್ನು ಓಪನ್ ಮಾಡಲು ಇರಾನ್‌ಗೆ ನೀಡಿರುವ 48 ಗಂಟೆಗಳ ಗಡುವು ಸೋಮವಾರ ಅಂತ್ಯವಾಗುತ್ತಿದೆ. ಇದರ ಬೆನ್ನಲ್ಲೇ, ಇರಾನ್‌ಗೆ ಕಠಿಣ ಪದಗಳಲ್ಲಿ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪುನಃ ಇರಾನ್‌ಗೆ ಹೊಸ ಬೆದರಿಕೆ ಹಾಕಿ, ವಿದ್ಯುತ್ ಘಟಕಗಳು, ಪವರ್ ಪ್ಲಾಂಟ್‌ಗಳು ಮತ್ತು ದೇಶದ ಪ್ರಮುಖ ಸೇತುವೆಗಳನ್ನು ಏಕಕಾಲದಲ್ಲಿ ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಒಪ್ಪಂದ ಮಾಡಿಕೊಳ್ಳದಿದ್ದರೆ, ಅಮೆರಿಕ ಇಡೀ ದೇಶವನ್ನೇ ನಾಶಮಾಡಬಹುದು ಎಂದು ಟ್ರಂಪ್ ಹೇಳಿದ್ದಾರೆ. ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳಂತಹ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಬಹುದು ಎಂದು ಅವರು ಸುಳಿವು ನೀಡಿದ್ದಾರೆ.
ವಾಷಿಂಗ್ಟನ್, ಏಪ್ರಿಲ್ 06: ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನ(White House)ದ ಬಳಿ ಗುಂಡಿನ ಚಕಮಕಿ ನಡೆದಿದೆ. ಆ ಸಮಯದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದೊಳಗೆ ಇದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಘಟನೆಯ ಬಳಿಕ ಭದ್ರತಾ ಸಂಸ್ಥೆಗಳನ್ನು ಹೆಚ್ಚಿನ ಎಚ್ಚರಿಕೆ ನೀಡಲಾಗಿದೆ. ಭಾನುವಾರ ಮುಂಜಾನೆ ಶ್ವೇತಭವನದ ಎದುರಿನ ಲಫಯೆಟ್ಟೆ ಪಾರ್ಕ್ ಬಳಿ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಬಂದೂಕುಧಾರಿ ತಲೆಮರೆಸಿಕೊಂಡಿದ್ದಾನೆ ಮತ್ತು ಪ್ರಸ್ತುತ ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಶ್ವೇತಭವನದಲ್ಲಿ ಕಾರ್ಯಾಚರಣೆಗಳು ಎಂದಿನಂತೆ ಮುಂದುವರಿದಿದ್ದರೂ, ಭದ್ರತಾ ಕ್ರಮಗಳನ್ನು ಗಮನಾರ್ಹವಾಗಿ ಬಿಗಿಗೊಳಿಸಲಾಗಿದೆ.
ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ ಮತ್ತು ಯುಎಸ್ ಪಾರ್ಕ್ ಪೊಲೀಸರೊಂದಿಗೆ ಕೆಲಸ ಮಾಡುತ್ತಿರುವ ತನ್ನ ತಂಡವು ಶಂಕಿತ ವ್ಯಕ್ತಿ ಮತ್ತು ವಾಹನಕ್ಕಾಗಿ ಹುಡುಕಾಟ ನಡೆಸುತ್ತಿದೆ ಎಂದು ಸೀಕ್ರೆಟ್ ಸರ್ವಿಸ್ ವರದಿ ಮಾಡಿದೆ.
ಗುಂಡಿನ ದಾಳಿಯ ಹಿಂದಿನ ಉದ್ದೇಶವೂ ಸ್ಪಷ್ಟವಾಗಿಲ್ಲ. ಕಳೆದ ಕೆಲವು ವಾರಗಳಿಂದ ನವೀಕರಣಕ್ಕಾಗಿ ಲಫಯೆಟ್ಟೆ ಪಾರ್ಕ್ ಮುಚ್ಚಲ್ಪಟ್ಟಿದೆ ಮತ್ತು ಪ್ರಸ್ತುತ ಬ್ಯಾರಿಕೇಡ್‌ಗಳಿಂದ ಆವೃತವಾಗಿದೆ. ಇನ್ನೊಂದೆಡೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ ಊಹಾಪೋಹಗಳನ್ನು ಶ್ವೇತಭವನ ತಳ್ಳಿಹಾಕಿದೆ.
ಕೆಲವು ಎಕ್ಸ್ ಪೋಸ್ಟ್ಗಳಲ್ಲಿ ಟ್ರಂಪ್ ಅವರನ್ನು ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ ಎಂದು ಹೇಳಿಕೊಂಡಿದ್ದವು. ಈ ವೀಡಿಯೊ 2024 ರಲ್ಲಿ ಟ್ರಂಪ್ ಗುಂಡಿನ ದಾಳಿಯಲ್ಲಿ ಗಾಯಗೊಂಡ ನಂತರ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿರುವ ಆಸ್ಪತ್ರೆಯಿಂದ ಬಿಡುಗಡೆಯಾದಾಗ ತೆಗೆದ ವಿಡಿಯೋ ಎಂದು ಹೇಳಲಾಗುತ್ತಿದೆ.
ಶ್ವೇತಭವನವು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ, ಆದರೆ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಜುಲೈ 13, 2024 ರಂದು, ಒಂದು ರ್ಯಾಲಿಯಲ್ಲಿ ಗುಂಡು ಅವರ ಹತ್ತಿರ ಹಾದುಹೋಗಿತ್ತು ಕಿವಿ ಭಾಗಕ್ಕೆ ಪೆಟ್ಟಾಗಿತ್ತು. ರಯಾನ್ ರೋತ್ ಎಂಬ ವ್ಯಕ್ತಿಯನ್ನು ಅವರ ಗಾಲ್ಫ್ ಕ್ಲಬ್ ಬಳಿ ದಾಳಿ ನಡೆಸಲು ಯೋಜಿಸಿದ್ದಕ್ಕಾಗಿ ಬಂಧಿಸಲಾಗಿತ್ತು.
ಕಳೆದ ಎರಡು ತಿಂಗಳುಗಳಿಂದ ಇಸ್ರೇಲ್-ಅಮೆರಿಕ ಸೇರಿ ಇರಾನ್ ಮೇಲೆ ದಾಳಿ ನಡೆಸುತ್ತಿದೆ, ಇರಾನ್ ಕೂಡ ಪ್ರತೀಕಾರ ತೀರಿಸಿಕೊಳ್ಳಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದೆ. ಈ ಸಂದರ್ಭದಲ್ಲಿ ಶ್ವೇತಭವನದ ಬಳಿ ನಡೆದ ದಾಳಿಯು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬೆಂಗಳೂರು (ಏ. 06): ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಭಾನುವಾರದ ಪಂದ್ಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದು, ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 43 ರನ್‌ಗಳಿಂದ ಸೋಲಿಸಿತು. ಈ ಮೂಲಕ ಆರ್‌ಸಿಬಿ ಟೂರ್ನಿಯಲ್ಲಿ ಸತತ ಎರಡನೇ ಜಯ ಕಂಡು ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದೆ. ಅತ್ತ ಸಿಎಸ್‌ಕೆ ಈ ಋತುವಿನಲ್ಲಿ ಸತತ ಮೂರನೇ ಸೋಲನ್ನು ಅನುಭವಿಸಿತು. 251 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ 19.4 ಓವರ್‌ಗಳಲ್ಲಿ 207 ರನ್‌ಗಳಿಗೆ ಆಲೌಟ್ ಆಯಿತು. ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ಸೋಲಿನ ನಂತರ ನಿರಾಶೆಗೊಂಡರು.
ಆರ್‌ಸಿಬಿ ವಿರುದ್ಧದ ಸೋಲಿನ ಬಳಿಕ ರುತುರಾಜ್ ಗಾಯಕ್ವಾಡ್ ಹೇಳಿದ್ದೇನು?
ತಮ್ಮ ಬ್ಯಾಟಿಂಗ್ ಮತ್ತು ತಂಡದ ಹೋರಾಟದ ಬಗ್ಗೆ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ರುತುರಾಜ್, “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗೂ ಆಶ್ಚರ್ಯವಾಯಿತು. ಸರ್ಫರಾಜ್ ಖಾನ್, ಪ್ರಶಾಂತ್ ವೀರ್, ಜೇಮಿ ಓವರ್ಟನ್ ಮತ್ತು ಸ್ವಲ್ಪ ಮಟ್ಟಿಗೆ ಶಿವಂ ದುಬೆ ಉತ್ತಮ ಹೋರಾಟ ತೋರಿಸಿದರು ಮತ್ತು ಕೊನೆಯವರೆಗೂ ಪ್ರಯತ್ನಪಟ್ಟರು. ನಾನು ಮೇಲಿನ ಕ್ರಮಾಂಕದಲ್ಲಿ ಸ್ವಲ್ಪ ಉತ್ತಮ ಕೊಡುಗೆ ನೀಡಿದ್ದರೆ, ಯಾರಿಗೆ ಗೊತ್ತು, ಬಹುಶಃ ನಾವು ಈ ಗುರಿಯನ್ನು ಸಾಧಿಸಬಹುದಿತ್ತು. ಆದ್ದರಿಂದ, ಇಂದಿನ ಸೋಲಿನ ಜವಾಬ್ದಾರಿ ಖಂಡಿತವಾಗಿಯೂ ನನ್ನ ಮೇಲಿದೆ.” ಎಂದು ಹೇಳಿದ್ದಾರೆ.
ಪಂದ್ಯದ ತಿರುವು ಆರ್‌ಸಿಬಿ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಅವರ ಪ್ರದರ್ಶನ ಎಂದು ರುತುರಾಜ್ ಹೇಳಿದರು. “ಅನ್ಶುಲ್ ಕಾಂಬೋಜ್ ತಮ್ಮ (ಡೇವಿಡ್) ವಿಕೆಟ್ ಅನ್ನು ಬಹುತೇಕ ತೆಗೆದುಕೊಂಡರು. ಅದು ನೋ-ಬಾಲ್ ಆಗಿ ಬದಲಾಯಿತು ಎಂಬುದು ದುರದೃಷ್ಟಕರ. ಆದರೆ ಆ ಜೀವದಾನದ ನಂತರ, ಅವರು ಮೈದಾನದ ಪ್ರತಿಯೊಂದು ಮೂಲೆಗೂ ಹೊಡೆತಗಳನ್ನು ಹೊಡೆದರು. ಅವರು ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು.”
ಫೀಲ್ಡಿಂಗ್ ದೋಷಗಳು ಮತ್ತು ವಿರಾಟ್ ಕೊಹ್ಲಿಗೆ ನೀಡಿದ ಜೀವದಾನ ಸೋಲಿಗೆ ಪ್ರಮುಖ ಕಾರಣ ಎಂದು ರುತುರಾಜ್ ಉಲ್ಲೇಖಿಸಿದರು. “ನಾವು ವಿರಾಟ್ ಕೊಹ್ಲಿಯನ್ನು ಇನ್ನಿಂಗ್ಸ್‌ನ ಆರಂಭದಲ್ಲಿಯೇ ಕ್ಯಾಚ್ ಹಿಡಿದಿದ್ದರೆ, ನಮಗೆ ಆವೇಗ ಸಿಗುತ್ತಿತ್ತು. ಇದರ ಹೊರತಾಗಿಯೂ, 13-14ನೇ ಓವರ್‌ವರೆಗೆ ಪಂದ್ಯ ನಮ್ಮ ಕೈಯಲ್ಲಿತ್ತು ಎಂದು ನಾನು ಭಾವಿಸುತ್ತೇನೆ, ಆದರೆ ಅಲ್ಲಿಂದ ಆವೇಗ ಸಂಪೂರ್ಣವಾಗಿ ಆರ್‌ಸಿಬಿ ಪರವಾಗಿ ಬದಲಾಯಿತು, ನಾವು ಹಿಂದೆ ಬಿದ್ದೆವು” ಎಂದು ಅವರು ಹೇಳಿದರು.
ಆರ್‌ಸಿಬಿ ನೀಡಿದ್ದ 251 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ನಾಯಕ ರುತುರಾಜ್ ಗಾಯಕ್ವಾಡ್ ಕೇವಲ 7 ರನ್‌ಗಳಿಗೆ ಔಟಾದರು. ಮತ್ತೊಂದೆಡೆ, ಸಂಜು ಸ್ಯಾಮ್ಸನ್ 5 ಎಸೆತಗಳಲ್ಲಿ 9 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಆಯುಷ್ ಮ್ಹಾತ್ರೆ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಕಾರ್ತಿಕ್ ಶರ್ಮಾ ಸತತ ಮೂರನೇ ಪಂದ್ಯದಲ್ಲೂ ನಿರಾಸೆ ಮೂಡಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ದಾಂಡಿಗರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಇತಿಹಾಸ ಬರೆದಿದೆ. ಅದು ಕೂಡ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ವಿರುದ್ಧ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 11ನೇ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ಈ ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ ಆರ್‌ಸಿಬಿ ದಾಂಡಿಗರು 20 ಓವರ್‌ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 250 ರನ್ಗಳು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 250 ರನ್ಗಳಿಸಿದ ಮೊದಲ ತಂಡವೆಂಬ ಹೆಗ್ಗಳಿಕೆ ಆರ್‌ಸಿಬಿ ಪಾಲಾಯಿತು.
ಕಳೆದ 18 ವರ್ಷಗಳಲ್ಲಿ ಸಿಎಸ್‌ಕೆ ವಿರುದ್ಧ ಯಾವುದೇ ತಂಡ 235 ಕ್ಕಿಂತ ಹೆಚ್ಚಿನ ಸ್ಕೋರ್ಗಳಿಸಲು ಸಾಧ್ಯವಾಗಿರಲಿಲ್ಲ. 2014 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ 2024 ರಲ್ಲಿ ಗುಜರಾತ್ ಟೈಟಾನ್ಸ್ ತಂಡವು 231 ರನ್ಗಳಿಸಿದ್ದು ಈವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.
ಆದರೆ ಈ ಬಾರಿ ಆರ್‌ಸಿಬಿ ದಾಂಡಿಗರು ಸಿಎಸ್‌ಕೆ ತಂಡದ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗಾಗಿಸಿದ್ದಾರೆ. 20 ಓವರ್‌ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್‌ಗಳನ್ನು ಚೆಂಡಾಡುವ ಮೂಲಕ ಬರೋಬ್ಬರಿ 250 ರನ್ ಚಚ್ಚಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ 5 ಬಾರಿಯ ಚಾಂಪಿಯನ್ ಸಿಎಸ್‌ಕೆ ವಿರುದ್ಧ 250 ರನ್ ಕಲೆಹಾಕಿದ ಮೊದಲ ತಂಡವೆಂಬ ಹೆಗ್ಗಳಿಕೆಯನ್ನು ಆರ್‌ಸಿಬಿ ತಂಡ ತನ್ನದಾಗಿಸಿಕೊಂಡಿದೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 6, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಚೌತಿ ತಿಥಿಯಾಗಿದೆ. ಇಂದು ಡಾ. ಬಸವರಾಜ ಗುರೂಜಿಯವರು ಪ್ರತಿ ರಾಶಿಯವರಿಗೂ ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ವಿವರವಾದ ಸಲಹೆಗಳನ್ನು ನೀಡಿದ್ದಾರೆ.
ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಯಾವ ಹುತ್ತಕ್ಕೆ ಹಾಲೆರೆಯಬೇಕು, ಯಾವ ಹುತ್ತಕ್ಕೆ ಪೂಜೆ ಮಾಡಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ.ಹುತ್ತಕ್ಕೆ ಹಾಲೆರೆಯುವುದು, ನೈವೇದ್ಯ ಅರ್ಪಿಸುವುದು ಸಾಮಾನ್ಯ ಆಚರಣೆಗಳು. ಹುತ್ತಗಳಲ್ಲಿ ಎರಡು ಮುಖ್ಯ ವಿಧಗಳಿವೆ: ದೊಡ್ಡ ಕಿಂಡಿಗಳನ್ನು ಹೊಂದಿರುವ ಹುತ್ತಗಳನ್ನು ಹೆಣ್ಣು ಹುತ್ತ ಎಂದೂ, ಗೋಪುರದ ಆಕಾರದಲ್ಲಿ ಬೆಳೆಯುವ ಹುತ್ತಗಳನ್ನು ಗಂಡು ಹುತ್ತ ಎಂದೂ ಪರಿಗಣಿಸಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಹುತ್ತದಲ್ಲಿ ತಪಸ್ಸು ಮಾಡಿದ ಕಾರಣ ಅವರಿಗೆ ವಾಲ್ಮೀಕಿ ಎಂಬ ಹೆಸರು ಬಂತು ಎಂಬ ನಂಬಿಕೆಯಿದೆ.
ನಾಗದೋಷ ನಿವಾರಣೆ, ಸಂತಾನ ಪ್ರಾಪ್ತಿ, ಚರ್ಮ ಮತ್ತು ಕಣ್ಣಿನ ತೊಂದರೆಗಳು, ಕುಜದೋಷ ನಿವಾರಣೆ ಹಾಗೂ ಸುಖ ಶಾಂತಿ ನೆಮ್ಮದಿಗಾಗಿ ಹುತ್ತ ಪೂಜೆ ಮಾಡಲಾಗುತ್ತದೆ. ಪೂರ್ವಜರು ಹುತ್ತಗಳನ್ನು ಶಕ್ತಿ ಕೇಂದ್ರಗಳೆಂದು ಕರೆದಿದ್ದಾರೆ. ಇವುಗಳಲ್ಲಿ ತ್ರಿಶಕ್ತಿಗಳ ಸಂಗಮವಿರುತ್ತದೆ ಎಂದು ನಂಬಲಾಗಿದೆ. ಅರಳಿ ಮರದ ಬಳಿ, ದೇವಾಲಯದ ಸನಿಹ, ನವಗ್ರಹಗಳ ಪಕ್ಕ, ಮತ್ತು ನಾಗರ ಕಲ್ಲುಗಳ ಹತ್ತಿರ ಇರುವ ಹುತ್ತಗಳು ಅತ್ಯಂತ ಪವಿತ್ರ ಮತ್ತು ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಈ ಜಾಗಗಳಲ್ಲಿ ಸುಬ್ರಹ್ಮಣ್ಯ ಮತ್ತು ಆದಿಶಕ್ತಿಯ ಆವಾಸ ಇರುತ್ತದೆ ಎಂಬ ನಂಬಿಕೆಯಿದೆ. ಮಂಗಳವಾರ, ಶುಕ್ರವಾರ, ನಾಗರ ಪಂಚಮಿ, ಷಷ್ಠಿ, ಸುಬ್ರಹ್ಮಣ್ಯ ಷಷ್ಠಿ, ಸಂಕಷ್ಟಹರ ಚತುರ್ಥಿ ದಿನಗಳಂದು ಹುತ್ತ ಪೂಜೆ ಮಾಡಲಾಗುತ್ತದೆ. ಎಂದು ಗುರೂಜಿ ಹೇಳಿದ್ದಾರೆ.