ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಇಂದು ಬೌಂಡರಿ ಹಾಗೂ ಸಿಕ್ಸರ್‌ಗಳ ಮಳೆಗೆ ಸಾಕ್ಷಿಯಾಯಿತು. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಸ್ಫೋಟಕ ದಾಂಡಿಗ ಟಿಮ್ ಡೇವಿಡ್ ಸಿಎಸ್ಕೆ ಬೌಲರ್ಗಳು ಮೈದಾನದಲ್ಲೇ ಅಳುವಂತೆ ಮಾಡಿದರು. ಡೇವಿಡ್ ಸುನಾಮಿಗೆ ಸಿಲುಕಿದ ಸಿಎಸ್ಕೆ ಬೌಲರ್ಗಳು ದಿಕ್ಕೆ ತೋಚದವರಂತ್ತಾಗಿ ಡೇವಿಡ್ ಬಾರಿಸುವ ಸಿಕ್ಸರ್‌ಗಳನ್ನು ಮೂಕ ವಿಸ್ಮಿತರಾಗಿ ನಿಂತು ನೋಡಬೇಕಾಯಿತು.
ಈ ಪಂದ್ಯದಲ್ಲಿ ಆರ್ಸಿಬಿ ಪರ ಎಲ್ಲಾ ಬ್ಯಾಟರ್ಗಳು ಅಮೋಘ ಪ್ರದರ್ಶನ ನೀಡಿದರು. ಹೀಗಾಗಿ ವಿಕೆಟ್ ಪತನದ ಬಳಿಕವೂ ಆ ಬಳಿಕ ಬಂದ ಬ್ಯಾಟ್ಸ್ಮನ್ಗಳು ಯಾವುದೇ ಒತ್ತಡವಿಲ್ಲದೆ ಮುಕ್ತವಾಗಿ ಬ್ಯಾಟ್ ಬೀಸಿದರು. ಅದರ ಪರಿಣಾಮ ಡೇವಿಡ್ ಅವರ ಬ್ಯಾಟಿಂಗ್ನಲ್ಲೂ ಕಂಡುಬಂತು. ಬಂದ ಬಂದವರೇ ಟಾಪ್ ಗೇರ್ನಲ್ಲಿ ಬ್ಯಾಟಿಂಗ್ ಶುರು ಮಾಡಿದ ಡೇವಿಡ್ ತಂಡದ ಸ್ಕೋರ್ ಬೋರ್ಡ್ನ ವೇಗ ಹೆಚ್ಚಿಸಿದರು.
15ನೇ ಓವರ್ನಲ್ಲಿ ಬ್ಯಾಟಿಂಗ್ಗೆ ಬಂದ ಡೇವಿಡ್ 17ನೇ ಓವರ್ನಿಂದ ಸಿಕ್ಸರ್‌ಗಳ ಮಳೆ ಸುರಿಸಲು ಶುರು ಮಾಡಿದರು. ಈ ಓವರ್ನ ಮೂರು, ನಾಲ್ಕು ಮತ್ತು ಐದನೇ ಎಸೆತಗಳಲ್ಲಿ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಹೀಗಾಗಿ ಈ ಓವರ್ನಲ್ಲಿ 21 ರನ್ಗಳು ಬಂದವು. 18ನೇ ಓವರ್ನಲ್ಲೂ ಅವರ ಬ್ಯಾಟ್ನಿಂದ ಒಂದು ಬೌಂಡರಿ ಹಾಗೂ ಸಿಕ್ಸರ್ ಬಂತು.
19ನೇ ಓವರ್ನಲ್ಲಿ ಉಗ್ರರೂಪ ತಾಳಿದ ಡೇವಿಡ್ ಈ ಓವರ್ನ ಐದು ಎಸೆತಗಳನ್ನು ಬೌಂಡರಿಗಟ್ಟಿದರು. ಇದರಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್‌ಗಳು ಸೇರಿದ್ದವು. ಹೀಗಾಗಿ ಈ ಓವರ್ನಲ್ಲಿ 30 ರನ್ಗಳು ಬಂದವು. ಹಾಗೆಯೇ ಇದೇ ಓವರ್ನಲ್ಲಿ ಡೇವಿಡ್ ಕೂಡ ಅರ್ಧಶತಕ ಪೂರೈಸಿದರು. ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ಬೌಂಎರಿ ಬಾರಿಸುವ ಮೂಲಕ ಡೇವಿಡ್ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು. ತಮ್ಮ ಇನ್ನಿಂಗ್ಸ್ನಲ್ಲಿ 25 ಎಸೆತಗಳನ್ನು ಎದುರಿಸಿದ ಡೇವಿಡ್ 3 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 70 ರನ್ ಬಾರಿಸಿದರು.
ಚಿನ್ನಸ್ವಾಮಿಯಲ್ಲಿ ಇಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲೋಕಲ್ ಬಾಯ್ ದೇವದತ್ ಪಡಿಕ್ಕಲ್ ಆರ್ಸಿಬಿ ಪರ ಅಬ್ಬರದ ಇನ್ನಿಂಗ್ಸ್ ಆಡಿದರು. ಎಂದಿನಂತೆ ವಿರಾಟ್ ಕೊಹ್ಲಿ ವಿಕೆಟ್ ಪತನದ ಬಳಿಕ ಬಂದ ಪಡಿಕ್ಕಲ್ ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 50 ರನ್ ಬಾರಿಸಿ ಔಟಾದರು. ಹಾಗೆಯೇ ಪಾಟಿದರ್ ಜೊತೆಗೂಡಿ ಅರ್ಧಶತಕದ ಜೊತೆಯಾಟವನ್ನು ಕಟ್ಟಿ ತಂಡವನ್ನು 150 ರನ್ಗಳ ಗಡಿ ದಾಟಿಸಿದರು. ಇದು ಈ ಆವೃತ್ತಿಯಲ್ಲಿ ಪಡಿಕ್ಕಲ್ ಅವರ ಎರಡನೇ ಅರ್ಧಶತಕವಾಗಿದೆ. ಮೊದಲ ಪಂದ್ಯದಲ್ಲೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಡಿಕ್ಕಲ್ 61 ರನ್ಗಳ ಇನ್ನಿಂಗ್ಸ್ ಆಡಿದ್ದರು.
ಬೆಂಗಳೂರು, ಏಪ್ರಿಲ್ 05: ದಿನದಿಂದ ದಿನಕ್ಕೆ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಇದಕ್ಕೆ ಸರಿಯಾಗಿ ಬ್ರೇಕ್ ಹಾಕಲು ಮುಂದಾಗಿರುವ ರೈಲ್ವೆ ಇಲಾಖೆ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವವರಿಗೆ ದಂಡ ಹಾಕಿದ್ದು, ಇದರಿಂದ 38 ಕೋಟಿ ರೂ ಆದಾಯ ಗಳಿಸಿದೆ. ಇತ್ತ ನೈರುತ್ಯ ರೈಲ್ವೆ ಇಲಾಖೆ (South Western Railway) ಬರೋಬ್ಬರಿ ಒಂಬತ್ತುವರೆ ಸಾವಿರ ಕೋಟಿ ರೂ ಆದಾಯ ಗಳಿಸಿದೆ.
ನೈರುತ್ಯ ರೈಲ್ವೆ ಮತ್ತು ಬೆಂಗಳೂರು ರೈಲ್ವೆ ವಲಯ ಭರ್ಜರಿ ಆದಾಯ
2025-26 ಸಾಲಿನಲ್ಲಿ ನೈರುತ್ಯ ರೈಲ್ವೆ ಮತ್ತು ಬೆಂಗಳೂರು ರೈಲ್ವೆ ವಲಯ ಭರ್ಜರಿ ಆದಾಯ ಗಳಿಸಿದೆ. ಈ ಆರ್ಥಿಕ ವರ್ಷದಲ್ಲಿ ನೈರುತ್ಯ ರೈಲ್ವೆ ವಿಭಾಗವು ಬರೋಬ್ಬರಿ 9,488 ಕೋಟಿ ರೂ ಆದಾಯ ಗಳಿಸಿದರೆ, ಬೆಂಗಳೂರು ರೈಲ್ವೆ ವಿಭಾಗವು 2,951 ಕೋಟಿ ರೂ ಆದಾಯ ಗಳಿಸಿದೆ. ಬೆಂಗಳೂರು ವಿಭಾಗವು 2025-26ನೇ ಸಾಲಿನಲ್ಲಿ ಟಿಕೆಟ್ ತಪಾಸಣೆಯಿಂದ 39.68 ಕೋಟಿ ರೂ ಆದಾಯ ಗಳಿಸಿದರೆ, ಪಾರ್ಸೆಲ್ನಿಂದ 140.31 ಕೋಟಿ ರೂ ಗಳಿಸಿದ್ದು, ಸರಕು ಸಾಗಣೆ ಆದಾಯವು 351.07 ಕೋಟಿ ರೂ ಗಳಿಸಲಾಗಿದೆ.
2024-25ರಲ್ಲಿ ಇದು 327.74 ಕೋಟಿ ರೂಪಾಯಿಗಳಾಗಿತ್ತು. ಪ್ರಯಾಣಿಕ ಆದಾಯವು ಸಹಾ ಏರಿಕೆಯನ್ನು ದಾಖಲಿಸಿದ್ದು 2025-26 ರಲ್ಲಿ 2420.55 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಾಣೇಶ್ ಮಾಹಿತಿ ನೀಡಿದ್ದಾರೆ.
ನೈಋತ್ಯ ರೈಲ್ವೆ ಕೋಟಿ ಕೋಟಿ ಆದಾಯ
2025–26ನೇ ಆರ್ಥಿಕ ವರ್ಷದಲ್ಲಿ ನೈಋತ್ಯ ರೈಲ್ವೆ ಸರಕು ಟಿಕೆಟ್ ಚೆಕ್ಕಿಂಗ್, ಪಾರ್ಸೆಲ್ ವಿಭಾಗದಲ್ಲಿ 9,488 ಕೋಟಿ ರೂ ಆದಾಯ ಗಳಿಸಿದೆ. ಈ ಬಾರಿ ನೈರುತ್ಯ ರೈಲ್ವೆ ವಲಯವು ಸರಕು-ಸಾಗಣೆಯಿಂದ 5,347.40 ಕೋಟಿ ರೂ, ಆದಾಯ ಗಳಿಸಿದ್ದರೆ 2024–25ರಲ್ಲಿ 4,672 ಕೋಟಿ ರೂ ಗಳಿಸಿತ್ತು. ಕಳೆದ ವರ್ಷದ ದಾಖಲೆಯನ್ನು ಈ ವರ್ಷ ಮೀರಿಸಿದೆ. ಪ್ರಯಾಣಿಕರ ವಿಭಾಗದಲ್ಲಿ ಆದಾಯವು 3,468 ಕೋಟಿಗೆ ಏರಿಕೆಯಾಗಿದೆ. ಪ್ರಯಾಣಿಕರ ಸಂಖ್ಯೆ 165.53 ಮಿಲಿಯನ್‌ನಿಂದ 176.93 ಮಿಲಿಯನ್‌ಗೆ ಹೆಚ್ಚಳವಾಗಿದ್ದು, ಕೋಚಿಂಗ್ ಆದಾಯ 329.5 ಕೋಟಿಗೆ ಏರಿದ್ದು, ಪಾರ್ಸೆಲ್ ಆದಾಯ 170.4 ಕೋಟಿಗೆ ಹೆಚ್ಚಾಗಿದೆ. ವಾಣಿಜ್ಯ ವಿವಿಧ ಆದಾಯವು 121.08 ಕೋಟಿಗೆ ಏರಿಕೆಯಾಗಿದೆ. ಟಿಕೆಟ್ ಪರಿಶೀಲನೆಯಿಂದ 70.76 ಕೋಟಿ ರೂ ಆದಾಯ ಗಳಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ 8,489 ಕೋಟಿಗಳಿಸಿದ್ದು, ನೈರುತ್ಯ ವಲಯ ಈ ಬಾರಿ 9,488 ಕೋಟಿ ರೂ ಆದಾಯ ಗಳಿಸಿದೆ.
ಒಟ್ಟಿನಲ್ಲಿ ಕಳೆದ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ನೈರುತ್ಯ ರೈಲ್ವೆ, ಬೆಂಗಳೂರು ರೈಲ್ವೆ ವಲಯ ಸಾವಿರಾರು ಕೋಟಿ ರೂ ಹೆಚ್ಚುವರಿ ಆದಾಯ ಗಳಿಸಿದ್ದು, ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಬಹುತೇಕ ಮಹಿಳೆಯರು ತಮ್ಮದೇ ವೈಯಕ್ತಿಕ ಆರೋಗ್ಯ, ನೈರ್ಮಲ್ಯ ಕುರಿತಾಗಿ ಬಹಿರಂಗವಾಗಿ ಮಾತನಾಡುವುದಿಲ್ಲ. ವಿಶೇಷವಾಗಿ ಪೀರಿಯಡ್ಸ್ ಅಥವಾ ಮುಟ್ಟಿನ ವಿಷಯವನ್ನು ಗುಟ್ಟು ಮಾಡುವುದು ಸಹ ಇದೆ. ಆದರೆ ಇತ್ತೀಚೆಗೆ ಕಾಲ, ಸಮಯ ಎಲ್ಲ ಬದಲಾಗುತ್ತಿದೆ. ಪೀರಿಯಡ್ಸ್ ಬಗ್ಗೆ ಮುಕ್ತವಾಗಿ ಮಾತನಾಡಲಾಗುತ್ತಿದೆ. ಆದರೆ ಇತ್ತೀಚೆಗೆ ತುಸು ಭಿನ್ನ ಸಮಸ್ಯೆ ಎದುರಾಗಿದೆ. ಕೆಲ ಮಹಿಳೆಯರು, ಪೀರಿಯಡ್ಸ್ ತಮ್ಮ ಯಶಸ್ಸಿಗೆ ಅಡ್ಡಿ ಎಂಬಂತೆ ಬಿಂಬಿಸುವುದೂ ಸಹ ಇದೆ. ಆದರೆ ನಟಿ ಶ್ರೀಲೀಲಾ, ಇಂಥಹವರಿಗೆ ತಕ್ಕ ಉತ್ತರ ನೀಡಿದ್ದಾರೆ.
ಇನ್ನೂ ಯುವ ನಟಿಯಾದರೂ ಸಹ ಸ್ಪಷ್ಟ ಯೋಚನೆ, ಆಲೋಚನೆಗಳನ್ನು ಹೊಂದಿರುವ ಶ್ರೀಲೀಲಾ, ಇತ್ತೀಚೆಗೆ ಮಹಿಳಾ ನೈರ್ಮಲ್ಯ ಕುರಿತಾದ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದರು. ಬಹುತೇಕ ಮಹಿಳೆಯರೇ ಇದ್ದ ಕಾರ್ಯಕ್ರಮದಲ್ಲಿ ಶ್ರೀಲೀಲಾಗೆ ಪೀರಿಯಡ್ಸ್ ಕುರಿತಾದ, ವಿಶೇಷವಾಗಿ ಸಿನಿಮಾ ಚಿತ್ರೀಕರಣದ ಸಂದರ್ಭಗಳಲ್ಲಿ ಪೀರಿಯಡ್ಸ್ ಅಡ್ಡಿ ಆಗುವುದಿಲ್ಲವೇ? ಎಂಬ ಪ್ರಶ್ನೆ ಎದುರಾಯ್ತು. ಅದಕ್ಕೆ ಶ್ರೀಲೀಲಾ ಕೊಟ್ಟ ಉತ್ತರ ಇದೀಗ ವೈರಲ್ ಆಗುತ್ತಿದೆ.
‘ನಾನು ಹಲವಾರು ಒಳ್ಳೆಯ ಹಾಡುಗಳಲ್ಲಿ ಡ್ಯಾನ್ಸ್ ಮಾಡಿದ್ದೇನೆ. ನನ್ನ ಹಿಟ್ ಆಗಿರುವ ಡ್ಯಾನ್ಸುಗಳೆಲ್ಲ ಬಹುತೇಕ ನನ್ನ ಪೀರಿಯಡ್ಸ್ ಸಮಯದಲ್ಲಿಯೇ ಚಿತ್ರೀಕರಣಗೊಂಡವು. ಆ ಸನ್ನಿವೇಶದಲ್ಲಿ ಚಿತ್ರೀಕರಿಸಿದ ಹಾಡುಗಳಿಗೆ ನನಗೆ ಹೆಚ್ಚು ಪ್ರಶಂಸೆ ಧಕ್ಕಿದೆ. ಪೀರಿಯಡ್ಸ್ ಎಂಬುದು ಒಬ್ಬ ಮಹಿಳೆಗೆ ನೆಪ ಆಗಬಾರದು. ಅದು ಸವಾಲಾಗಬೇಕು’ ಎಂದಿದ್ದಾರೆ ನಟಿ ಶ್ರೀಲೀಲಾ.
ಮುಂದುವರೆದು ಮಾತನಾಡಿ, ‘ನಾವು (ಮಹಿಳೆಯರು) ಸಮಾನವಾದ ಅವಕಾಶ, ಸಮಾನವಾದ ಶಕ್ತಿ, ಸಮಾನವಾದ ಹಕ್ಕುಗಳನ್ನು ಕೇಳುತ್ತಿರುವಾಗ ನಾವು ಪೀರಿಯಡ್ಸ್ ಅನ್ನು ನೆಪವಾಗಿ ಇರಿಸಿಕೊಂಡು ಹಿಂದುಳಿಯಲು ಹೇಗೆ ಸಾಧ್ಯ? ಮಹಿಳೆಯರಾದ ನಾವು ನಮ್ಮನ್ನು ನಾವು ದೈಹಿಕವಾಗಿ, ಮಾನಸಿಕ ಮಿತಿಗಳನ್ನು ಮೀರಬೇಕು. ನಮ್ಮನ್ನು ನಾವು ಪುಶ್ ಮಾಡಿಕೊಳ್ಳಬೇಕು. ನಮಗೆ ಪೀರಿಯಡ್ಸ್ ಎಂಬುದು ನೆಪ ಆಗಬಾರದು’ ಎಂದಿದ್ದಾರೆ ನಟಿ ಶ್ರೀಲೀಲಾ.
ನಟಿ ಶ್ರೀಲೀಲಾ, ಖುದ್ದು ವೈದ್ಯೆ ಸಹ ಆಗಿದ್ದಾರೆ. ಹಾಗಾಗಿಯೇ ಈ ವಿಷಯಗಳ ಬಗ್ಗೆ ಅವರಿಗೆ ಸ್ಪಷ್ಟತೆ ಇದೆ. ಮಾಹಿತಿ ಇದೆ, ಹಾಗೂ ಇಂಥಹಾ ವಿಷಯಗಳ ಬಗ್ಗೆ ಗಟ್ಟಿಯಾಗಿ ಮಾತನಾಡುವಷ್ಟು ಧೈರ್ಯವನ್ನು ಅವರ ಜ್ಞಾನ ಅವರಿಗೆ ನೀಡಿದೆ. ಶ್ರೀಲೀಲಾರ ಮಾತುಗಳಿಗೆ ಮೆಚ್ಚುಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 11 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ಗಳನ್ನು ಕಳೆದುಕೊಂಡು 250 ರನ್ ಕಲೆಹಾಕಿದೆ. ಈ ಮೂಲಕ ಸಿಎಸ್ಕೆಗೆ ದಾಖಲೆಯ 251 ರನ್ಗಳನ್ನು ಗುರಿಯಾಗಿ ನೀಡಿದೆ. ಇಂದು ಆರ್ಸಿಬಿ ಪರ ಬ್ಯಾಟಿಂಗ್ ಮಾಡಿದ ಪ್ರತಿಯೊಬ್ಬ ಬ್ಯಾಟರ್ ಕೂಡ ಅಬ್ಬರದ ಇನ್ನಿಂಗ್ಸ್ ಆಡಿದರು. ಇದರ ಫಲವಾಗಿ ಆರ್ಸಿಬಿ ಈ ಬೃಹತ್ ಗುರಿ ನೀಡಲು ಸಾಧ್ಯವಾಯಿತು.
ಕೊಡಗು, (ಏಪ್ರಿಲ್ 05): ಕೊಡಗಿನ ಅತಿ ಎತ್ತರದ ಶಿಖರ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ ಯುವತಿ ಶರಣ್ಯ ಕೊನೆಗೂ ಪತ್ತೆಯಾಗಿದ್ದಾರೆ. ಶರಣ್ಯ ಕಳೆದ ನಾಲ್ಕು ದಿನಗಳ ಹಿಂದೆ ಟ್ರೆಕ್ಕಿಂಗ್ ಮಾಡುವಾಗ ದಾರಿ ತಪ್ಪಿ ಅರಣ್ಯದಲ್ಲಿ ನಾಪತ್ತೆಯಾಗಿದ್ದರು. ಇವರಿಗಾಗಿ ಎಎನ್‌ಎಫ್ (ANF), ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸ್ವಯಂಸೇವಕರು ತಂಡೋಪತಂಡವಾಗಿ ಬೆಟ್ಟದ ಮೂಲೆ ಮೂಲೆಗಳಲ್ಲಿ ಹುಡುಕಾಟ ನಡೆಸಿದ್ದರು. ದಟ್ಟ ಮಂಜು ಮತ್ತು ಮಳೆಯ ನಡುವೆಯೂ ಕಾರ್ಯಾಚರಣೆ ತಂಡಗಳು ಹಗಲಿರುಳು ಶ್ರಮಿಸಿದ್ದವು. ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಮತ್ತು ಅರಣ್ಯದ ಹಾದಿಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಕುಡಿಯ ಜನಾಂಗದ ಯುವಕರು ಇಂದು ಅರಣ್ಯದ ಆಳ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಶರಣ್ಯ ಪತ್ತೆಯಾಗಿದ್ದಾರೆ. ಯುವತಿ ಆರೋಗ್ಯವಾಗಿದ್ದು, ಸದ್ಯ ಸ್ಥಳೀಯರು ಮತ್ತು ಅರಣ್ಯ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಅರಣ್ಯದಿಂದ ಹೊರಕ್ಕೆ ಕರೆತಂದಿದ್ದಾರೆ. ಈ ಮೂಲಕ ಕೊಡಗಿನ ದಟ್ಟ ಅರಣ್ಯದಲ್ಲಿ ನಡೆದಿದ್ದ ಬೃಹತ್ ಕಾರ್ಯಾಚರಣೆಗೆ ದೊಡ್ಡ ಯಶಸ್ಸು ಸಿಕ್ಕಂತಾಗಿದೆ.
ನಿಜವಾಯ್ತು ಮಲೆಕುಡಿಯ ಜನಾಂಗದ ದೈವವಾಣಿ
ಒಂದೆಡೆ ನಿರಂತರ ಕಾರ್ಯಚರಣೆ ನಡೆಸಿದರೂ ಶರಣ್ಯ ಸಿಳಿವು ಸಿಕ್ಕಿರಲಿಲ್ಲ. ಕೊನೆಗೆ ಮಲೆಕುಡಿಯ ಜನಾಂಗದ ಸಹ ದೈವದ ನಿನ್ನೆ(ಏಪ್ರಿಲ್ 04) ಮೊರೆ ಹೋಗಿದ್ದು, ಶರಣ್ಯ ಬಳಲಿ ಒಂದೆಡೆ ಆಶ್ರಯ ಪಡೆದಿದ್ದಾಳೆ. ಸುರಕ್ಷಿತವಾಗಿ ಸಿಗಲಿದ್ದಾಳೆ ಮಲೆ ತಚ್ಚನ್ ದೈವ ನುಡಿದಿತ್ತು. ದೈವವಾಣಿಯಂತೆ ಶರಣ್ಯ 24 ಗಂಟೆಯಲ್ಲೇ ಸುರಕ್ಷಿತವಾಗಿ ಪತ್ತೆಯಾಗಿದ್ದಾಳೆ. ಇದರೊಂದಿಗೆ ಮಲೆಕುಡಿಯ ಜನಾಂಗದ ದೈವವಾಣಿ ನಿಜವಾಗಿದ್ದು, ದೈವದ ಮೇಲಿನ ಭಕ್ತ ಮತ್ತಷ್ಟು ಹೆಚ್ಚಾಗಿದೆ.
ಕಾಡಿನಿಂದ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶರಣ್ಯ, ತಮಗಾದ ರೋಚಕ ಅನುಭವವನ್ನು ಹಂಚಿಕೊಂಡಿದ್ದಾರೆ. ‘ನಾನು ಆರೋಗ್ಯವಾಗಿದ್ದೇನೆ. ಕಾಡಿನಲ್ಲಿ ದಾರಿ ತಪ್ಪಿದಾಗ ನನ್ನ ಸ್ನೇಹಿತರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಫೋನ್ ಸ್ವಿಚ್ ಆಫ್ ಆಗಿತ್ತು. ನನ್ನ ಬಳಿ ಇದ್ದಿದ್ದು ಕೇವಲ ಒಂದು ಬಾಟಲಿ ನೀರು ಮಾತ್ರ. ರಕ್ಷಣಾ ತಂಡವು ನನ್ನನ್ನು ಹುಡುಕಲು ಡ್ರೋಣ್ ಬಳಸಬಹುದು ಎಂದು ನನಗೆ ತಿಳಿದಿತ್ತು. ಹಾಗಾಗಿ ಡ್ರೋಣ್‌ಗೆ ಕಾಣಿಸುವಂತಹ ಬಯಲು ಜಾಗದಲ್ಲೇ ನಾನು ಹೆಚ್ಚಾಗಿ ನಿಂತಿದ್ದೆ’ ಎಂದು ಅವರು ವಿವರಿಸಿದ್ದಾರೆ. ಅವರ ಈ ಸಮಯಪ್ರಜ್ಞೆಯೇ ಅವರ ಪ್ರಾಣ ಉಳಿಸಿದೆ ಎನ್ನಬಹುದು.
ರಕ್ಷಣಾ ಕಾರ್ಯಾಚರಣೆಯ ಯಶಸ್ಸು
ಶರಣ್ಯ ನಾಪತ್ತೆಯಾದ ದಿನದಿಂದಲೂ ಕೊಡಗು ಜಿಲ್ಲಾ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಎಎನ್‌ಎಫ್ (ನಕ್ಸಲ್ ನಿಗ್ರಹ ಪಡೆ) ಮತ್ತು ಸ್ಥಳೀಯ ನಿವಾಸಿಗಳು ಹಗಲಿರುಳು ಶೋಧ ನಡೆಸಿದ್ದರು. ಡ್ರೋಣ್, ಥರ್ಮಲ್ ಡ್ರೋಣ್ ಮತ್ತು ಶ್ವಾನ ದಳವನ್ನು ಬಳಸಲಾಗಿತ್ತು. ಕೊನೆಗೆ ಸ್ಥಳೀಯ ನಿವಾಸಿಗಳು ಕಾಡಿನ ಒಂದು ಭಾಗದಲ್ಲಿ ವಿಚಿತ್ರ ಶಬ್ದ ಕೇಳಿ ಅಲ್ಲಿಗೆ ಹೋಗಿ ನೋಡಿದಾಗ ಶರಣ್ಯ ಪತ್ತೆಯಾಗಿದ್ದಾರೆ. “ನಾವು ಶಬ್ದ ಕೇಳಿದ ಜಾಗಕ್ಕೆ ಹೋದಾಗ ಶರಣ್ಯ ಅಲ್ಲಿ ಕುಳಿತಿದ್ದರು,” ಎಂದು ಅವರನ್ನು ಪತ್ತೆ ಮಾಡಿದ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಹ ಸಂತಸಗೊಂಡಿದ್ದು, ಶಾರಣ್ಯ ಪತ್ತೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ತಂಡದಿಂದ ಬೇರ್ಪಟ್ಟು ದಾರಿ ತಪ್ಪಿದ್ದ ಶರಣ್ಯ
ಕೊಚ್ಚಿಯ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕೋಯಿಕ್ಕೋಡ್‌ನ ನಾದಾಪುರಂ ಮೂಲದ ಶರಣ್ಯ, ಏಪ್ರಿಲ್ 2 ರಂದು ಕೊಡಗಿಗೆ ಟ್ರೆಕ್ಕಿಂಗ್‌ಗಾಗಿ ಬಂದಿದ್ದರು. ಆನ್‌ಲೈನ್ ಮೂಲಕ ಟ್ರೆಕ್ಕಿಂಗ್ ಬುಕ್ ಮಾಡಿದ್ದ ಅವರು, ಅರಣ್ಯ ಇಲಾಖೆಯ ಅನುಮತಿಯೊಂದಿಗೆ 10 ಜನರ ತಂಡದ ಜೊತೆ ತಡಿಯಂಡಮೋಳ್ ಬೆಟ್ಟ ಹತ್ತಲು ಆರಂಭಿಸಿದ್ದರು. ಆದರೆ, ಬೆಟ್ಟದ ಮೇಲೆ ತಂಡದೊಂದಿಗೆ ಸಾಗುತ್ತಿದ್ದಾಗ ದಾರಿ ಮಧ್ಯೆ ನಾಯಿಯೊಂದರ ಜೊತೆ ಆಟವಾಡುತ್ತಾ ಶರಣ್ಯ ಹಿಂದೆ ಉಳಿದಿದ್ದರು. ಇದೇ ವೇಳೆ ಅವರು ತಂಡದಿಂದ ಬೇರ್ಪಟ್ಟು ದಾರಿ ತಪ್ಪಿದ್ದರು.
ವಿಜಯಪುರ, ಏಪ್ರಿಲ್ 05: ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಅನ್ನದಾತರ (Farmers) ಪಾಲಿಕೆ ಕಂಟಕವಾಗಿದೆ. ಎನ್ಟಿ ಪಿಸಿ (NTPC) ಕಾರಣದಿಂದ ರೈತರು ಕಣ್ಣೀರು ಹಾಕುತ್ತಿದ್ದಾರೆ. ಸ್ಥಾವರದ ಸುತ್ತಮುತ್ತಲದ ಕೊಳವೆ ಬಾವಿಗಳನ್ನು ನಂಬಿ ಕೃಷಿ ಮಾಡುತ್ತಿದ್ದವರಿಗೆ ಬರೆ ಬಿದ್ದಂತಾಗಿದೆ. ಸಮಸ್ಯೆಗಳ ಬಗ್ಗೆ ಎನ್ಟಿಪಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರೈತರ ಪಾಲಿನ ಜೀವ ಜಲ ವಿಷವಾಗುತ್ತಿದೆ.
ಎಸ್ಟಿಪಿಸಿ ನಿರ್ಮಾಣಕ್ಕೆ ಮೊದಲಿನಿಂದಲೂ ವಿರೋಧ
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಬಳಿ ಉಷ್ಣ ವಿದ್ಯುತ್ ಸ್ಥಾವರಕ್ಕೆ 2012 ಜೂನ್ 12ರಲ್ಲಿ ಶಿಲಾನ್ಯಾಸ ಮಾಡಲಾಗಿತ್ತು. 2017ರಲ್ಲಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಆರಂಭಿಸಲಾಗಿತ್ತು. ಎಸ್ಟಿಪಿಸಿ ನಿರ್ಮಾಣಕ್ಕೆ ಮೊದಲಿನಿಂದಲೂ ವಿರೋಧ ವ್ಯಕ್ತವಾಗಿತ್ತು. ಸರ್ಕಾರ ಹಾಗೂ ಎನ್ಟಿಪಿಸಿ ಅಧಿಕಾರಿಗಳು ಆಧುನಿಕ ತಂತ್ರಜ್ಞಾನದಿಂದ ಎಲ್ಲಾ ನಿರ್ವಹಣೆ ಮಾಡೋದಾಗಿ ಭರವಸೆ ನೀಡಿತ್ತು.
ವಿದ್ಯುತ್ ಉತ್ಪಾದನೆಯಿಂದ ಸ್ಥಾವರಗಳಿಂದ ಬರುವ ಹಾರು ಬೂದಿಯನ್ನು ನೀರಿನ ಮೂಲಕ ಅನತಿ ದೂರದಲ್ಲಿನ ಮಸೂತಿ ಗ್ರಾಮದ ಬಳಿ ಕೃತಕವಾಗಿ ನಿರ್ಮಾಣ ಮಾಡಿರುವ ಕೆರೆಗಳಲ್ಲಿ ಸಂಗ್ರಹ ಮಾಡಲಾಗುತ್ತದೆ. ಹಾರುಬೂದಿಯನ್ನು ನೀರಲ್ಲಿ ಮಿಶ್ರಣ ಮಾಡಿ ಉಷ್ಣ ವಿದ್ಯುತ್ ಸ್ಥಾವರದಿಂದ ನಾಲ್ಕು ಕಿ.ಮೀ ದೂರದಲ್ಲಿನ ಮಸೂತಿ ಗ್ರಾಮದ ಬಳಿ 1400 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ನಾಲ್ಕು ಕೆರೆಗಳಿಗೆ ಬಿಡಲಾಗುತ್ತಿದೆ. ಅಲ್ಲಿ ನೀರನ್ನು ಮತ್ತೆ ಫಿಲ್ಟರ್ ಮಾಡಿ ನೀರನ್ನು ಮರುಬಳಕೆ ಮಾಡಲಾಗುತ್ತದೆ.
ಹಾರುಬೂದಿ ಹೂಳಿನ ರೂಪದಲ್ಲಿ ಕೆರೆಯಲ್ಲಿ ಸಂಗ್ರಹವಾಗುತ್ತದೆ. ಅದನ್ನು ಸಿಮೆಂಟ್ ಫ್ಯಾಕ್ಟರಿಗೆ ಹಾಗೂ ಇಟ್ಟಿಗೆ ತಯಾರಿಕೆಗೆ ನೀಡಲಾಗುತ್ತದೆ. ಆದರೆ ಸಮಸ್ಯೆ ಇಲ್ಲಿಯೇ ಆರಂಭವಾಗಿದೆ. ಉಷ್ಣ ವಿದ್ಯುತ್ ಸ್ಥಾವರದ ಹಾರುಬೂದಿಯನ್ನು ಹೊತ್ತು ತಂದ ನೀರು ಕೆರೆಗಳಲ್ಲಿ ಸಂಗ್ರಹವಾಗುತ್ತಿದ್ದು, ಅದೇ ನೀರು ಕೆರೆಗಳ ಕೆಳಗಿನ ಭಾಗ ರೈತರ ಪಾಲಿಗೆ ವಿಷವಾಗುತ್ತಿದೆ.
ಶಾಕಿಂಗ್ ವರದಿ
ಹಾರುಬೂದಿಯನ್ನು ಸಂಗ್ರಹಿಸಿದ್ದ ಕೆರೆಗಳ ನೀರು ಸುತ್ತಮುತ್ತಲಿನ ಜಮೀನುಗಳಲ್ಲಿನ ತೆರೆದ ಬಾವಿ, ಕೊಳವೆ ಬಾವಿಗಳ ಅಂತರ್ಜಲದಲ್ಲಿ ಸೇರಿಕೊಂಡಿದೆ. ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿ ಜಮೀನಿನ ಮೇಲ್ಭಾಗದಲ್ಲಿ ಉಪ್ಪಿನಾಂಶ ಸಂಗ್ರಹವಾಗುತ್ತಾ ಹೋಗಿ ಸವಳು ಜವಳಾಗಿದೆ. ಇಲ್ಲಿ ಯಾವುದೇ ಬೆಳೆಯನ್ನು ಬೆಳೆಯಲು ಅಸಾಧ್ಯವಾಗಿದೆ. ಲಕ್ಷಾಂತರ ರೂ ಹಣ ಖರ್ಚು ಮಾಡಿದರೂ ಫಸಲು ಕುಂಠಿತಗೊಂಡಿದೆ. ಇದರಿಂದ ಬೇಸತ್ತ ರೈತರು ಇಲ್ಲಿನ ತೆರೆದ ಬಾವಿ ಹಾಗೂ ಕೊಳವೆ ಬಾವಿಯ ನೀರನ್ನು ಪ್ರಯೋಗಾಲಯದಲ್ಲಿ ಈ ಹಿಂದೆಯೇ ಪರೀಕ್ಷೆ ಮಾಡಿಸಿದಾಗ ಜನ, ಜಾನುವಾರುಗಳು ಸೇರಿದಂತೆ ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ಯೋಗ್ಯವಿಲ್ಲವೆಂಬ ಶಾಕಿಂಗ್ ವರದಿ ಬಂದಿದೆ.
ಒಂದೆಡೆ ಜಮೀನು ಹಾಳಾಗಿದೆ, ಮತ್ತೊಂದೆಡೆ ನಮ್ಮ ಭಾಗದ ಅಂತರ್ಜಲವೂ ವಿಷವಾಗುತ್ತಿದೆ ಎಂದು ರೈತರು ತೀವ್ರ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ತಮ್ಮದೇ ಜಮೀನಿನ ಬಾವಿ, ಕೊಳವೆ ಬಾವಿಯ ನೀರನ್ನು ಕುಡಿಯುತ್ತಿದ್ದರು. ಆದರೆ ಇದೀಗ ಹಾರುಬೂದಿಯ ಕೆರೆಗಳ ನೀರು ಈ ಭಾಗದ ಅಂತರ್ಜಲವನ್ನು ಸೇರಿಕೊಂಡಿರುವ ಕಾರಣ ಇಲ್ಲಿಯ ನೀರಿನ ಸ್ವಾದನೇ ಬದಲಾಗಿದೆ. ಆರೋಗ್ಯ ಸಮಸ್ಯೆಗಳು ಬಾಧಿಸುತ್ತಿವೆ. ಹಾರುಬೂದಿಯ ಸಂಗ್ರಹ ಮಾಡುವ ಕೆರೆಗಳ ನೀರು ಇಡೀ ರೈತಕುಲಕ್ಕೆ ವಿಷವಾಗಿದೆ.
ಉಷ್ಣ ವಿದ್ಯುತ್ ಸ್ಥಾವರದ ಹಾರುಬೂದಿಯ ಜೊತೆಗಿರುವ ಕೆಮಿಕಲ್ಸ್ ಸುತ್ತಮುತ್ತಲ ಭಾಗದ ಅಂತರ್ಜಲ ಸೇರುತ್ತಿರುವುದು ಮಾತ್ರ ಮಹಾದುರಂತವೇ ಆಗಿದೆ. ಸಮಸ್ಯೆಗೀಡಾದ ರೈತರ ಜಮೀನುಗಳನ್ನು ಸ್ವಾಧೀನ ಮಾಡಿಕೊಂಡು ರೈತರಿಗೆ ಸೂಕ್ತ ಪರಿಹಾರ ನೀಡುವುದೇ ಇದಕ್ಕೆ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ, ಎನ್ಟಿಪಿಸಿ ಹಾಗೂ ಜಿಲ್ಲಾಡಳಿತ ಯಾವ ಕ್ರಮತೆಗೆದುಕೊಳ್ಳುತ್ತಾರೋ ಕಾಯ್ದು ನೋಡಬೇಕಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 11 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಪರ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸಣ್ಣ ಆದರೆ ದಾಖಲೆ ಮುರಿಯುವ ಇನ್ನಿಂಗ್ಸ್ ಆಡಿದರು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 18 ಎಸೆತಗಳನ್ನು ಎದುರಿಸಿ 28 ರನ್ ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ್ದವು. ಈ ಮೂಲಕ ವಿರಾಟ್ ಕೊಹ್ಲಿ ಇಷ್ಟು ದಿನ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಇದೀಗ ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದೀಗ ಅವರು ಐಪಿಎಲ್ನಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಮಾತ್ರವಲ್ಲದೆ ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ.
ವಿರಾಟ್ ಕೊಹ್ಲಿ ಇಲ್ಲಿಯವರೆಗೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 36 ಪಂದ್ಯಗಳನ್ನಾಡಿದ್ದು, 1174 ರನ್ ಗಳಿಸಿದ್ದಾರೆ. ಇದು ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯಾಗಿದೆ. ಈ ಅವಧಿಯಲ್ಲಿ ಕೊಹ್ಲಿ ಸಿಎಸ್ಕೆ ವಿರುದ್ಧ 10 ಅರ್ಧಶತಕಗಳನ್ನು ಬಾರಿಸಿದ್ದಾರೆ.
ವಿರಾಟ್ಗೂ ಮೊದಲು ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 36 ಪಂದ್ಯಗಳಲ್ಲಿ ರೋಹಿತ್ ಶರ್ಮಾ ಒಂದು ಶತಕ ಮತ್ತು ಏಳು ಅರ್ಧಶತಕ ಸೇರಿದಂತೆ 1,161 ರನ್ ಗಳಿಸಿದ್ದಾರೆ. ಆದರೆ, ವಿರಾಟ್ ಈಗ ಅವರನ್ನು ಹಿಂದಿಕ್ಕಿದ್ದಾರೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 11 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಪರ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸಣ್ಣ ಆದರೆ ದಾಖಲೆ ಮುರಿಯುವ ಇನ್ನಿಂಗ್ಸ್ ಆಡಿದರು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 18 ಎಸೆತಗಳನ್ನು ಎದುರಿಸಿ 28 ರನ್ ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ್ದವು. ಈ ಮೂಲಕ ವಿರಾಟ್ ಕೊಹ್ಲಿ ಇಷ್ಟು ದಿನ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಇದೀಗ ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದೀಗ ಅವರು ಐಪಿಎಲ್ನಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಮಾತ್ರವಲ್ಲದೆ ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ.
ವಿರಾಟ್ ಕೊಹ್ಲಿ ಇಲ್ಲಿಯವರೆಗೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 36 ಪಂದ್ಯಗಳನ್ನಾಡಿದ್ದು, 1174 ರನ್ ಗಳಿಸಿದ್ದಾರೆ. ಇದು ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯಾಗಿದೆ. ಈ ಅವಧಿಯಲ್ಲಿ ಕೊಹ್ಲಿ ಸಿಎಸ್ಕೆ ವಿರುದ್ಧ 10 ಅರ್ಧಶತಕಗಳನ್ನು ಬಾರಿಸಿದ್ದಾರೆ.
ವಿರಾಟ್ಗೂ ಮೊದಲು ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 36 ಪಂದ್ಯಗಳಲ್ಲಿ ರೋಹಿತ್ ಶರ್ಮಾ ಒಂದು ಶತಕ ಮತ್ತು ಏಳು ಅರ್ಧಶತಕ ಸೇರಿದಂತೆ 1,161 ರನ್ ಗಳಿಸಿದ್ದಾರೆ. ಆದರೆ, ವಿರಾಟ್ ಈಗ ಅವರನ್ನು ಹಿಂದಿಕ್ಕಿದ್ದಾರೆ.
ನಿಧಿ ಸುಬ್ಬಯ್ಯ (Nidhi Subbaiah) ಕನ್ನಡದ ಜನಪ್ರಿಯ ನಟಿಯರಲ್ಲಿ ಒಬ್ಬರು. ‘ಪಂಚರಂಗಿ’, ‘ಅಣ್ಣಬಾಂಡ್’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದು ಸಣ್ಣ ಬ್ರೇಕ್ ಬಳಿಕ ಚಿತ್ರರಂಗಕ್ಕೆ ಮರಳಿರುವ ನಿಧಿ ಸುಬ್ಬಯ್ಯ ಕೆಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಬಿಗ್ಬಾಸ್ ಕನ್ನಡ ಶೋಗೂ ಸಹ ಹೋಗಿ ಬಂದರು ನಿಧಿ ಸುಬ್ಬಯ್ಯ. ನಟನೆಯ ಜೊತೆಗೆ ಪ್ರವಾಸ ನಿಧಿ ಸುಬ್ಬಯ್ಯ ಅವರ ಮೆಚ್ಚಿನ ಹವ್ಯಾಸ. ಇದೀಗ ಸಮುದ್ರದಾಳದಲ್ಲಿ ಈಜಾಟ ನಡೆಸಿ, ಸಮುದ್ರ ಜೀವಿಗಳೊಟ್ಟಿಗೆ ಮುಖಾ-ಮುಖಿ ಆಗಿದ್ದಾರೆ. ವಿಡಿಯೋ ನೋಡಿ…