ವಿಕೆಟ್ ಉರುಳುತ್ತಿದ್ದಂತೆ ದೇವರ ಫೋಟೋವನ್ನು ಹಣೆಗೊತ್ತಿ ಕೈ ಮುಗಿದ ಗೋಯೆಂಕಾ
ಐಪಿಎಲ್‌ನಲ್ಲಿ ಲಕ್ನೋ ತಂಡ ತನ್ನ ಪ್ರದರ್ಶನದಿಂದ ಸದ್ದು ಮಾಡಿದ್ದಕ್ಕಿಂತ ಹೆಚ್ಚಾಗಿ ಆ ತಂಡದ ಮಾಲೀಕ ಸಂಜೀವ್ ಗೋಯೆಂಕಾ ತಮ್ಮ ನಡವಳಿಕೆಗಳಿಂದ ಸುದ್ದಿಯಾಗಿದ್ದಾರೆ. ಈ ಹಿಂದಿನ ಸೀಸನ್ಗಳಲ್ಲಿ ತಂಡದ ನಾಯಕರನ್ನು ಕ್ರೀಡಾಂಗಣದಲ್ಲೇ ಬಹಿರಂಗವಾಗಿ ನಿಂಧಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಗೋಯೆಂಕಾ, ಈ ಆವೃತ್ತಿಯಲ್ಲೂ ಅದೇ ಪ್ರವೃತ್ತಿಯನ್ನು ಮುಂದುವರೆಸಿದ್ದರು. ಲಕ್ನೋ ತಂಡ ಡೆಲ್ಲಿ ವಿರುದ್ಧ ಸೋತಾಗ ತಂಡದ ನಾಯಕ ರಿಷಭ್ ಪಂತ್ಗೆ ಗೋಯೆಂಕಾ ಮೈದಾನದಲ್ಲೇ ಕ್ಲಾಸ್ ತೆಗೆದುಕೊಂಡಿದ್ದರು. ಇದನ್ನು ಗಮನಿಸಿದ್ದ ಬಿಸಿಸಿಐ, ಬಹಿರಂಗವಾಗಿ ಆಟಗಾರರನ್ನು ಅಥವಾ ನಾಯಕರನ್ನು ನಿಂಧಿಸಿದಂತೆ ಎಲ್ಲಾ…