RCB vs CSK: ಟಿಮ್ ಡೇವಿಡ್ ಡೇವಿಲ್ ಬ್ಯಾಟಿಂಗ್ಗೆ ಸಿಎಸ್ಕೆ ಅಲ್ಲೋಲ ಕಲ್ಲೋಲ; ವಿಡಿಯೋ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಇಂದು ಬೌಂಡರಿ ಹಾಗೂ ಸಿಕ್ಸರ್ಗಳ ಮಳೆಗೆ ಸಾಕ್ಷಿಯಾಯಿತು. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಸ್ಫೋಟಕ ದಾಂಡಿಗ ಟಿಮ್ ಡೇವಿಡ್ ಸಿಎಸ್ಕೆ ಬೌಲರ್ಗಳು ಮೈದಾನದಲ್ಲೇ ಅಳುವಂತೆ ಮಾಡಿದರು. ಡೇವಿಡ್ ಸುನಾಮಿಗೆ ಸಿಲುಕಿದ ಸಿಎಸ್ಕೆ ಬೌಲರ್ಗಳು ದಿಕ್ಕೆ ತೋಚದವರಂತ್ತಾಗಿ ಡೇವಿಡ್ ಬಾರಿಸುವ ಸಿಕ್ಸರ್ಗಳನ್ನು ಮೂಕ ವಿಸ್ಮಿತರಾಗಿ ನಿಂತು ನೋಡಬೇಕಾಯಿತು. ಈ ಪಂದ್ಯದಲ್ಲಿ ಆರ್ಸಿಬಿ ಪರ ಎಲ್ಲಾ ಬ್ಯಾಟರ್ಗಳು ಅಮೋಘ ಪ್ರದರ್ಶನ ನೀಡಿದರು. ಹೀಗಾಗಿ ವಿಕೆಟ್ ಪತನದ ಬಳಿಕವೂ ಆ ಬಳಿಕ ಬಂದ ಬ್ಯಾಟ್ಸ್ಮನ್ಗಳು ಯಾವುದೇ…