ಸಿಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ – Kannada News | Chitradruga Bus Accident: Some passengers great escaped form sea bird bus tragedy

ಚಿತ್ರದುರ್ಗ, (ಡಿಸೆಂಬರ್ 25): ಜಿಲ್ಲೆಯ ಹಿರಿಯೂರು (Hiriyuru) ಬಳಿ ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತದಲ್ಲಿ ಹಲವು ಸಾವು ನೋವು ಸಂಭವಿಸಿವೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟ್ಟಿದ್ದ ಸಿಬರ್ಡ್​ ಬಸ್ ಗೆ ಲಾಡಿ ಬಂದು ಗುದ್ದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಬಸ್​​​ ಸುಟ್ಟು ಕರಕಲಾಗಿದೆ. ದುರಂತದಲ್ಲಿ ಈವರೆಗೂ ಐವರ ಮೃತದೇಹಗಳು ಪತ್ತೆಯಾಗಿದ್ದು, ಕೆಲವರು ದುರಂತ ಗಾಯಗೊಂಡಿದ್ದಾರೆ. ಆದ್ರೆ, ಒಟ್ಟು ಎಷ್ಟು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನುವ ನಿಖರ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಪೊಲೀಸ್, ಸೋಕೋ ತಂಡ ಪರಿಶೀಲನೆ ನಡೆಸಿದೆ….

Read More

Maoists Encounter: ಒಡಿಶಾದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಐವರು ನಕ್ಸಲರ ಹತ್ಯೆ – Kannada News | Anti naxal operation in Odisha, 5 Maoists killed, 3 rifles recovered

ಭುಬನೇಶ್ವರ್, ಡಿಸೆಂಬರ್ 25: ಒಡಿಶಾದ ಕಂಧಮಾಲ್ ಜಿಲ್ಲೆಯ ವಿವಿಧೆಡೆ ನಿನ್ನೆ ಮತ್ತು ಇಂದು ನಡೆದ ಎರಡು ದಿನಗಳ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ (Anti-Naxal operation) ಐವರು ಮಾವೋವಾದಿ ಹೋರಾಟಗಾರರು ಹತರಾಗಿದ್ದಾರೆ. ನಿನ್ನೆ ಬುಧವಾರ ಬೆಲಗಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುಮ್ಮ ಅರಣ್ಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರನ್ನು ಕೊಲ್ಲಲಾಗಿದೆ. ಇಂದು ಗುರುವಾರ ಚಾಕಪಾದ್ ಪೊಲೀಸ್ ಠಾಣೆ ವ್ಯಾಪ್ತಿಯ ನಾರಿಗ್ ಜೊಲ್ಲ ಅರಣ್ಯ ಪ್ರದೇಶದಲ್ಲಿ ನಡೆದ ಎನ್​ಕೌಂಟರ್​​ನಲ್ಲಿ ಮೂವರು ನಕ್ಸಲರು ಹತ್ಯೆಯಾಗಿದ್ದಾರೆ. ಈ ಎರಡು ದಿನಗಳ ಕಾರ್ಯಾಚರಣೆಯಲ್ಲಿ…

Read More

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತೆ ಕಣಕ್ಕಿಳಿಯುವುದು ಯಾವಾಗ? – Kannada News | When will Virat Kohli and Rohit Sharma play next?

ವಿಜಯ ಹಝಾರೆ ಟೂರ್ನಿಯ ಮೂಲಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ದೇಶೀಯ ಕ್ರಿಕೆಟ್​ಗೆ ಮರಳಿದ್ದಾರೆ. ಬೆಂಗಳೂರಿನ ಸಿಒಇ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕಿಂಗ್ ಕೊಹ್ಲಿ ದೆಹಲಿ ಪರ ಕಣಕ್ಕಿಳಿದರೆ, ಜೈಪುರದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ರೋಹಿತ್ ಶರ್ಮಾ ಬ್ಯಾಟ್ ಬೀಸಿದ್ದರು. ವಿಶೇಷ ಎಂದರೆ ಈ ಇಬ್ಬರು ದಿಗ್ಗಜರು ಮೊದಲ ಮ್ಯಾಚ್​ನಲ್ಲೇ ಶತಕ ಸಿಡಿಸಿದ್ದಾರೆ. ಆಂಧ್ರ ಪ್ರದೇಶ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ 101 ಎಸೆತಗಳಲ್ಲಿ 3…

Read More

SBI Recruitment 2025: SBIನಲ್ಲಿ 996 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗೆ ನೇಮಕಾತಿ; ಪದವೀಧರರು ಅರ್ಹರು! – Kannada News | SBI SCO Recruitment 2025: Last Date Extended for 996 Graduate Officer Posts!

ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವ ಪದವೀಧರರಿಗೆ ಗುಡ್​ ನ್ಯೂಸ್​ ಇಲ್ಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ SCO ಹುದ್ದೆಯ ನೋಂದಣಿ ಗಡುವನ್ನು ವಿಸ್ತರಿಸಿದೆ. ಇನ್ನೂ ಅರ್ಜಿ ಸಲ್ಲಿಸದ ಆಸಕ್ತ ಅಭ್ಯರ್ಥಿಗಳಿಗೆ ಇದು ಸುವರ್ಣ ಅವಕಾಶ. ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ sbi.co.in ಗೆ ಭೇಟಿ ನೀಡುವ ಮೂಲಕ ಜನವರಿ 5 ರವರೆಗೆ ಅರ್ಜಿ ಸಲ್ಲಿಸಬಹುದು. ಎಸ್‌ಬಿಐ 996 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಿದೆ . ಅರ್ಹತೆ ಮತ್ತು ವಯಸ್ಸಿನ ಮಿತಿ: ಎಸ್‌ಬಿಐ ಹೊರಡಿಸಿದ ಅಧಿಕೃತ ಹುದ್ದೆಯ…

Read More

ರಾಜ್ಯದಲ್ಲಿವೆ 6,675 ಏಕೋಪಾಧ್ಯಾಯ ಶಾಲೆಗಳು, 188 ಸ್ಕೂಲ್​​ಗಳಲ್ಲಿ ಶೂನ್ಯ ದಾಖಲಾತಿ – Kannada News | Karnataka Education Crisis: 6,675 Single Teacher Schools, 188 with Zero Admissions

ಬೆಂಗಳೂರು, ಡಿಸೆಂಬರ್​​ 25: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ 6,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಕೇವಲ ಒಬ್ಬರೇ ಶಿಕ್ಷಕರಿದ್ದಾರೆ. ಹಿಂದಿನ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಇಂತಹ ಶಾಲೆಗಳ ಸಂಖ್ಯೆ ಸುಮಾರು 1,200ರಷ್ಟು ಹೆಚ್ಚಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ. 2024–25ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ 5,412 ಏಕ ಶಿಕ್ಷಕ ಶಾಲೆಗಳಿದ್ದರೆ, ಈ ಬಾರಿ ಆ ಸಂಖ್ಯೆ 6,675ಕ್ಕೆ ಏರಿಕೆಯಾಗಿದೆ. ಅಂದರೆ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ 1,263 ಹೆಚ್ಚಳವಾಗಿವೆ. ರಾಜ್ಯದಲ್ಲಿ ಸುಮಾರು 49,000 ಸರ್ಕಾರಿ ಶಾಲೆಗಳಿದ್ದು, ಅಂಕಿ ಅಂಶಗಳ…

Read More

ಜಿಗಣೆಯಿಂದ ಕಚ್ಚಿಸಿಕೊಳ್ಳುವುದರಿಂದ ಕ್ಯಾನ್ಸರ್ ಅನ್ನು ಗುಣಪಡಿಸಬಹುದೇ? ಇಲ್ಲಿದೆ ತಜ್ಞರ ಅಭಿಪ್ರಾಯ – Kannada News | Exploring Leech Therapy’s Role in Cancer Care

ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಕಾಯಿಲೆಗಳಿಂದ ಜನ ಬಳಲುತ್ತಿದ್ದಾರೆ. ಇದಕ್ಕೆ ಈಗಿನವರ ಜೀವನಶೈಲಿಯೇ ಕಾರಣವಾಗಿರಬಹುದು. ಕೆಲವು ರೋಗಗಳನ್ನು ಮನೆಮದ್ದಿನಿಂದ ಇನ್ನು ಕೆಲವನ್ನು ವೈದ್ಯರ ಸಲಹೆ ಮತ್ತು ಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಆದರೆ ಕೆಲವು ರೋಗಗಳ ಇಲಾಜಿಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅದರಲ್ಲಿಯೂ ಅವುಗಳನ್ನು ಬುಡದಿಂದ ಕಿತ್ತು ಹಾಕುವುದರ ಜೊತೆಗೆ ದೇಹದ ಮೇಲೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗದಂತೆ ನೋಡಿಕೊಳ್ಳುವುದು ಸಹ ಮುಖ್ಯವಾಗುತ್ತದೆ. ಈ ರೀತಿ ರೋಗಗಳನ್ನು ವಾಸಿ ಮಾಡಲು ಪರಿಣಾಮಕಾರಿ ಉಪಚಾರಗಳಲ್ಲಿ ಜಿಗಣೆ ಚಿಕಿತ್ಸೆಯೂ (Leech Therapy’s)…

Read More

Bangalore Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಡಿಸೆಂಬರ್ 26ಕ್ಕೆ ಪವರ್ ಕಟ್ – Kannada News | Bangalore Power Cut on December 26: Electricity Outage in These Areas Due to BESCOM Maintenance

ಬೆಂಗಳೂರು, ಡಿಸೆಂಬರ್ 25: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ವ್ಯಾಪ್ತಿಯಲ್ಲಿ ಡಿಸೆಂಬರ್ 26, 2025ರಂದು ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ. 66/11 ಕೆವಿ ಕಗ್ಗೇನಹಳ್ಳಿ ಸಬ್‌ಸ್ಟೇಷನ್ ಕೇಬಲ್ ನಿರ್ವಹಣಾ ಕಾರ್ಯ ಹಿನ್ನೆಲೆಯಲ್ಲಿ ಈ ವಿದ್ಯುತ್ ವ್ಯತ್ಯಯ ಸಂಭವಿಸಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಜತೆಗೆ, ಎಕ್ಸ್​ ಸಂದೇಶದ ಮೂಲಕವೂ ಮಾಹಿತಿ ನೀಡಿದೆ. ಎಷ್ಟು ಗಂಟೆಯಿಂದ ಎಷ್ಟು ಗಂಟೆ ವರೆಗೆ ಪವರ್ ಕಟ್? ಬೆಸ್ಕಾಂ ಪ್ರಕಟಣೆಯಲ್ಲಿ ನೀಡಿದ ಮಾಹಿತಿ ಪ್ರಕಾರ, ಡಿಸೆಂಬರ್ 26ರಂದು ಬೆಳಗ್ಗೆ 11…

Read More

‘ಡೆವಿಲ್’ ಬಳಿಕ ರೇಟಿಂಗ್ ಕೊಡದಂತೆ ಕೋರ್ಟ್​​ನಿಂದ ಆರ್ಡರ್ ತಂದ ‘45’, ‘ಮಾರ್ಕ್​​’ – Kannada News | Kannada Films Block BookMyShow Ratings: Mark and 45 Use Court Order to Combat Hate Reviews

ಬುಕ್ ಮೈ ಶೋ ಮೊದಲಾದ ರೇಟಿಂಗ್ ನೋಡಿ ಜನರು ಸಿನಿಮಾ ವೀಕ್ಷಿಸಲು ತೆರಳೋದು ಸಾಮಾನ್ಯ. ಆದರೆ, ಈಗ ಅದಕ್ಕೆ ಬ್ರೇಕ್ ಬೀಳುತ್ತಿದೆ. ಬುಕ್ ಮೈ ಶೋನಲ್ಲಿ ಬರೋ ರೇಟಿಂಗ್ ಎಂದು ಹೇಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ದ್ವೇಷದ ಕಾರಣಕ್ಕೆ ಅನೇಕರು ಸುಳ್ಳು ರೇಟಿಂಗ್ ಕೊಟ್ಟ ಉದಾಹರಣೆ ಇದೆ. ಇದೇ ಕಾರಣದಿಂದ ಸಿನಿಮಾ ತಂಡದವರು ಈ ವಿಷಯದಲ್ಲಿ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಈಗ ‘45’ (45 Movie) ಹಾಗೂ ‘ಮಾರ್ಕ್’ ಟೀಂ ಇದೇ ತಂತ್ರ ಉಪಯೋಗಿಸಿದೆ. ಡಿಸೆಂಬರ್ 11ರಂದು ತೆರೆಗೆ ಬಂದ…

Read More

Viral: ಕೋವಿಡ್ ತಂದ ಸಂಕಷ್ಟ; ರ‍್ಯಾಪಿಡೋ ಚಾಲಕನಾಗಿ ಬದುಕು ಕಟ್ಟಿಕೊಂಡ ಉದ್ಯಮಿ – Kannada News | Losses in the industry due to Covid; Businessman takes up Rapido driving career

ಜೀವನ ಎಂದ ಮೇಲೆ ಏರಿಳಿತಗಳು ಸಹಜ. ಬದುಕು ಕೆಲವೊಮ್ಮೆ ಒಂದರ ಮೇಲೆ ಒಂದರಂತೆ ಹೊಡೆತಗಳನ್ನು ತಂದೊಡ್ದುತ್ತದೆ. ಎಲ್ಲವನ್ನು ಎದುರಿಸಿ ನಿಲ್ಲಬೇಕು ಅಷ್ಟೇ. ಹೌದು, ಹೋಟೆಲ್ ಮ್ಯಾನೇಜ್ ಮೆಂಟ್ ಪದವಿ ಮಾಡಿ, ಸ್ಟಾರ್ಟ್‌ಅಪ್ (startup) ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದ ಉದ್ಯಮಿಗೆ ಕೋವಿಡ್ ಹೊಡೆತ ತಂದೊಟ್ಟಿತು. ಇದಾದ ಬಳಿಕ ಬದುಕಿಗಾಗಿ ಅವಲಂಬಿಸಿದ್ದು ರ‍್ಯಾಪಿಡೋ ಚಾಲಕ ವೃತ್ತಿ. ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದ ಚಿರಾಗ್ (Chiraag) ಎಂಬ ವ್ಯಕ್ತಿಗೆ ಈ ಚಾಲಕನ ಬದುಕಿನ ಕಥೆ ಕೇಳಿ ಶಾಕ್‌ ಆಗಿದೆ. ಈ…

Read More

ಚಾಮರಾಜನಗರದಲ್ಲಿ ಬೋನಿಗೆ ಬಿದ್ದ ಹುಲಿ: ಹುಲಿರಾಯನ ನೋಡಲು ಮುಗಿಬಿದ್ದ ಜನ – Kannada News | Bandipur Tiger Menace Ends: Chamarajanagar Captures Feral Big Cat in Cage

ಚಾಮರಾಜನಗರ, ಡಿ.25: ದಿನ ದಿಂದ ದಿನಕ್ಕೆ ಗಡಿ ನಾಡು ಚಾಮರಾಜನಗರದಲ್ಲಿ ಹುಲಿಯ ಉಪಟಳ ಹೆಚ್ಚಾಗಿದೆ. ಇದೀಗ ಮತ್ತೊಂದು ಹುಲಿ ದೇಪಾಪುರ ಗ್ರಾಮದ ಹೊರ ವಲಯದ ಬೋನಿಗೆ ಬಿದ್ದಿದೆ. ಇನ್ನು ಹುಲಿಯನ್ನು ನೋಡಲು ಕಿಕ್ಕಿರಿದು ಗ್ರಾಮಸ್ಥರು ಸೇರಿದ್ದಾರೆ. ಇನ್ನು ಜನರನ್ನು ನೋಡಿ ಬೋನಿನಲ್ಲಿದ್ದ ಹುಲಿ ಕೂಡ ಘರ್ಜನೆ ಮಾಡಿದೆ. ಈ ಹುಲಿ ಘರ್ಜನೆ ಹಾಗೂ ಹಾರಾಟವನ್ನು ನೋಡಿ ಜನರು ಕೂಡ ಬೆಚ್ಚಿಬಿದ್ದಿದ್ದಾರೆ. ಕಳೆದ ಎರೆಡು ಮೂರು ತಿಂಗಳಿಂದ ಆಗಾಗ ಕಾಣಿಸಿಕೊಂಡು ಭಯ ಹುಟ್ಟಿಸಿದ್ದ ಹುಲಿ, ಇದೀಗ ಅರಣ್ಯಾಧಿಕಾರಿಗಳು ಇಟ್ಟಿದ್ದ…

Read More