Category Archives: Blog

Your blog category

ಜನವರಿ 21ರವರೆಗೆ ಜಸ್​ಪ್ರೀತ್ ಬುಮ್ರಾಗೆ ವಿಶ್ರಾಂತಿ – Kannada News | Jasprit Bumrah will rest till January 21.

ದೇಶೀಯ ಅಂಗಳದ ಏಕದಿನ ಟೂರ್ನಿ ವಿಜಯ ಹಝಾರೆ ಟೂರ್ನಿಗೆ ಚಾಲನೆ ದೊರೆತಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಕಣಕ್ಕಿಳಿದಿದ್ದಾರೆ. ಇದಾಗ್ಯೂ ಜಸ್​ಪ್ರೀತ್ ಬುಮ್ರಾ ಮಾತ್ರ ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ. ಅಂದರೆ ಬುಮ್ರಾ ಈ ಬಾರಿ ಕೂಡ ದೇಶೀಯ ಟೂರ್ನಿಯಲ್ಲಿ ಕಣಕ್ಕಿಳಿಯುವುದಿಲ್ಲ ಎಂಬುದು ಖಚಿತವಾಗಿದೆ.

ವಿಜಯ ಹಝಾರೆ ಟೂರ್ನಿಯಿಂದ ಜಸ್​ಪ್ರೀತ್ ಬುಮ್ರಾ ಹೊರಗುಳಿದಿದ್ದಾರೆ. ಬಿಸಿಸಿಐ ಅವರಿಗೆ ವಿಶ್ರಾಂತಿ ನೀಡಿರುವ ಕಾರಣ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂದು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್​ನ ಕಾರ್ಯದರ್ಶಿ ಅನಿಲ್ ಪಟೇಲ್ ತಿಳಿಸಿದ್ದಾರೆ. ಹೀಗಾಗಿ ಪ್ರಸ್ತುತ ನಡೆಯುತ್ತಿರುವ ಏಕದಿನ ಟೂರ್ನಿಯಲ್ಲಿ ಬುಮ್ರಾ ಕಾಣಿಸಿಕೊಳ್ಳುತ್ತಿಲ್ಲ.

ಬುಮ್ರಾ ಮತ್ತೆ ಮೈದಾನಕ್ಕಿಳಿಯುವುದು ಯಾವಾಗ?

ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದ ಜಸ್​ಪ್ರೀತ್ ಬುಮ್ರಾ ಟಿ20 ಸರಣಿಯ ಮೂಲಕ ಕಂಬ್ಯಾಕ್ ಮಾಡಿದ್ದರು. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಬುಮ್ರಾ ಮೂರು ಮ್ಯಾಚ್​ಗಳಲ್ಲಿ ಕಣಕ್ಕಿಳಿದಿದ್ದರು. ಇದೀಗ ಭಾರತ ತಂಡ ನ್ಯೂಝಿಲೆಂಡ್ ವಿರುದ್ಧದ ಸರಣಿಗಾಗಿ ಸಜ್ಜಾಗುತ್ತಿದೆ.

ನ್ಯೂಝಿಲೆಂಡ್ ವಿರುದ್ಧದ ಸರಣಿಯು ಜನವರಿ 11 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಮೊದಲಿಗೆ ಮೂರು ಏಕದಿನ ಪಂದ್ಯಗಳನ್ನಾಡಲಾಗುತ್ತದೆ. ಇದಾದ ಬಳಿಕ 5 ಮ್ಯಾಚ್​ಗಳ ಟಿ20 ಸರಣಿ ನಡೆಯಲಿದೆ.

ಆದರೆ ಈ ಸರಣಿಯ ಮೊದಲ ಮೂರು ಪಂದ್ಯಗಳಿಗೆ ಜಸ್​ಪ್ರೀತ್ ಬುಮ್ರಾ ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ. ಅಂದರೆ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆಯೂ ಬುಮ್ರಾಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಹೀಗಾಗಿ ಟೀಮ್ ಇಂಡಿಯಾ ವೇಗಿ ಟಿ20 ಸರಣಿ ವೇಳೆ ಮತ್ತೆ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಭಾರತ ಮತ್ತು ನ್ಯೂಝಿಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿ ಶುರುವಾಗುವುದು ಜನವರಿ 21 ರಿಂದ. ಅಲ್ಲಿಯವರೆಗೆ ಜಸ್​ಪ್ರೀತ್ ಬುಮ್ರಾಗೆ ವಿಶ್ರಾಂತಿ ಕಲ್ಪಿಸಲು ಟೀಮ್ ಇಂಡಿಯಾ ಆಯ್ಕೆ ಸಮಿತಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಬುಮ್ರಾಗೆ ವಿಶ್ರಾಂತಿ ಯಾಕೆ?

ಜಸ್​ಪ್ರೀತ್ ಬುಮ್ರಾ ಟೀಮ್ ಇಂಡಿಯಾದ ಪ್ರಮುಖ ವೇಗಿ. ಕಳೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ವೇಳೆ ಅವರು ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ದೀರ್ಘಾವಧಿಯ ಪಂದ್ಯಗಳನ್ನಾಡುತ್ತಿರುವುದರಿಂದ ಅವರಿಗೆ ಈ ಸಮಸ್ಯೆ ಎದುರಾಗಿತ್ತು.

ಇದನ್ನೂ ಓದಿ: ಭಾರತದ ವಿರುದ್ಧದ ಸರಣಿಯಿಂದ ಕೇನ್ ವಿಲಿಯಮ್ಸನ್ ಹೊರಗುಳಿದಿದ್ದೇಕೆ?

ಇದೇ ಕಾರಣದಿಂದ ಬುಮ್ರಾ ಅವರನ್ನು ಪ್ರಮುಖ ಸರಣಿಗಳಲ್ಲಿ ಮಾತ್ರ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಅದರಂತೆ ಮುಂಬರುವ ಟಿ20 ವಿಶ್ವಕಪ್​ಗೂ ಮುನ್ನ ಜಸ್​ಪ್ರೀತ್ ಬುಮ್ರಾಗೆ ಹೆಚ್ಚಿನ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದ್ದು, ಹೀಗಾಗಿ ವಿಜಯ ಹಝಾರೆ ಟೂರ್ನಿ ಹಾಗೂ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಟೀಮ್ ಇಂಡಿಯಾ ವೇಗಿಯನ್ನು ಹೊರಗಿಡಲಾಗಿದೆ.

Published On – 10:25 am, Wed, 24 December 25

Source link

ಕೃಷಿ ಅಧಿಕಾರಿಯೋ, ಕುಬೇರನೋ! ಲೋಕಾಯುಕ್ತ ದಾಳಿ ವೇಳೆ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ – Kannada News | Lokayukta Raid on Vijayapura Agriculture Officer Exposes ₹2.5 Crore Disproportionate Assets

ವಿಜಯಪುರ, ಡಿಸೆಂಬರ್ 24: ವಿಜಯಪುರ ಜಿಲ್ಲೆಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಾಳಪ್ಪ ಯರಝರಿ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಆದಾಯಕ್ಕಿಂತ ಹೆಚ್ಚುವರಿಯಾಗಿ ಮಾಡಿಟ್ಟ 2.50 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಬಾಗೇವಾಡಿಯ ಕೃಷಿ ಇಲಾಖೆಯ ಈ ಅಧಿಕಾರಿಯ ಮನೆಯಲ್ಲಿ ಕಂತೆ ಕಂತೆ ಹಣ, ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ಲೋಕಾಯುಕ್ತ ತಂಡ ವಶಪಡಿಸಿಕೊಂಡಿದೆ. ದಾಳಿ ವೇಳೆ 29.48 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಮತ್ತು ನಗದು ಪತ್ತೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ವಿರುದ್ಧದ ಸರಣಿಯಿಂದ ಕೇನ್ ವಿಲಿಯಮ್ಸನ್ ಹೊರಗುಳಿದಿದ್ದೇಕೆ? – Kannada News | Why Kane Williamson isn’t part of New Zealand’s squad

ಭಾರತದ ವಿರುದ್ಧದ ಸರಣಿಗಾಗಿ ನ್ಯೂಝಿಲೆಂಡ್ ತಂಡಗಳನ್ನು ಪ್ರಕಟಿಸಲಾಗಿದೆ. ಈ ತಂಡಗಳಲ್ಲಿ ಸ್ಟಾರ್ ಆಟಗಾರ ಕೇನ್ ವಿಲಿಯಮ್ಸನ್ ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ. ಅನುಭವಿ ಆಟಗಾರನಾಗಿದ್ದರೂ ಟೀಮ್ ಇಂಡಿಯಾ ವಿರುದ್ಧದ ಸರಣಿಯಿಂದ ವಿಲಿಯಮ್ಸನ್ ಹೊರಗುಳಿದಿದ್ದೇಕೆ? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ…

ಕೇನ್ ವಿಲಿಯಮ್ಸನ್ ನ್ಯೂಝಿಲೆಂಡ್ ಕ್ರಿಕೆಟ್ ಬೋರ್ಡ್​ ಜೊತೆ ಸಾಂದರ್ಭಿಕ ಕಾಂಟ್ರಾಕ್ಟ್ ಒಪ್ಪಂದದಲ್ಲಿದ್ದಾರೆ. ಅಂದರೆ ನ್ಯೂಝಿಲೆಂಡ್ ಪರ ಆಡಬೇಕಾ ಅಥವಾ ಬೇಡವಾ ಎಂಬುದನ್ನು ನಿರ್ಧರಿಸುವ ಹಕ್ಕು ಅವರಿಗಿದೆ. ಈ ಒಪ್ಪಂದದಿಂದಾಗಿ ನ್ಯೂಝಿಲೆಂಡ್ ಕ್ರಿಕೆಟ್ ಬೋರ್ಡ್​ ನೀವು ಆಡಲೇಬೇಕು ಎಂದು ಒತ್ತಾಯ ಮಾಡುವಂತಿಲ್ಲ.

ಅತ್ತ ಭಾರತದ ವಿರುದ್ಧದ ಸರಣಿಯ ವೇಳೆ ಸೌತ್ ಆಫ್ರಿಕಾ ಟಿ20 ಲೀಗ್ ಕೂಡ ನಡೆಯುತ್ತಿದೆ. ಈ ಲೀಗ್​ನಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿಯಲು ಕೇನ್ ವಿಲಿಯಮ್ಸನ್ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ಭಾರತದ ವಿರುದ್ಧದ ಸರಣಿಯಿಂದ ಹೊರಗುಳಿದು, ಅವರು ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಇದೇ ಕಾರಣದಿಂದಾಗಿ ಜನವರಿ 11 ರಿಂದ ಶುರುವಾಗಲಿರುವ ಭಾರತದ ವಿರುದ್ಧದ ಸರಣಿಯಲ್ಲಿ ವಿಲಿಯಮ್ಸನ್ ಕಾಣಿಸಿಕೊಳ್ಳುವುದಿಲ್ಲ.

ಟೀಮ್ ಇಂಡಿಯಾ ವಿರುದ್ಧದ ಸರಣಿಗೆ ನ್ಯೂಝಿಲೆಂಡ್ ತಂಡ ಹೀಗಿದೆ:

ನ್ಯೂಝಿಲೆಂಡ್ ಏಕದಿನ ತಂಡ: ಮೈಕೆಲ್ ಬ್ರೇಸ್‌ವೆಲ್ (ನಾಯಕ), ಆದಿ ಅಶೋಕ್, ಕ್ರಿಸ್ಟಿಯನ್ ಕ್ಲಾರ್ಕ್, ಜೋಶ್ ಕ್ಲಾರ್ಕ್ಸನ್, ಡೆವೊನ್ ಕಾನ್ವೆ, ಝ್ಯಾಕ್ ಫೌಲ್ಕ್ಸ್, ಮಿಚ್ ಹೇ (ವಿಕೆಟ್ ಕೀಪರ್), ಕೈಲ್ ಜೇಮಿಸನ್, ನಿಕ್ ಕೆಲ್ಲಿ, ಜೇಡನ್ ಲೆನಾಕ್ಸ್, ಡೇರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರೇ, ವಿಲ್ ಯಂಗ್.

ನ್ಯೂಝಿಲೆಂಡ್ ಟಿ20 ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ (ವಿಕೆಟ್ ಕೀಪರ್), ಜೇಕಬ್ ಡಫಿ, ಝ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಬೆವೊನ್ ಜೇಕಬ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಟಿಮ್ ರಾಬಿನ್ಸನ್, ಇಶ್ ಸೋಧಿ.

ಭಾರತ vs ನ್ಯೂಝಿಲೆಂಡ್ ಏಕದಿನ ಸರಣಿ ವೇಳಾಪಟ್ಟಿ

  • ಮೊದಲ ಏಕದಿನ ಪಂದ್ಯ – ಜನವರಿ 11 – ವಡೋದರಾ – ಮಧ್ಯಾಹ್ನ 1:30
  • ಎರಡನೇ ಏಕದಿನ ಪಂದ್ಯ – ಜನವರಿ 14 – ರಾಜ್‌ಕೋಟ್ – ಮಧ್ಯಾಹ್ನ 1:30
  • ಮೂರನೇ ಏಕದಿನ ಪಂದ್ಯ – ಜನವರಿ 18 – ಇಂದೋರ್ – ಮಧ್ಯಾಹ್ನ 1:30

ಇದನ್ನೂ ಓದಿ: ಸೂಪರ್ ಶರ್ಮಾ… ಅಭಿಷೇಕ್ ಆರ್ಭಟಕ್ಕೆ ವಿಶ್ವ ದಾಖಲೆ ಉಡೀಸ್

ಭಾರತ vs ನ್ಯೂಝಿಲೆಂಡ್ ಟಿ20 ಸರಣಿ ವೇಳಾಪಟ್ಟಿ

  • ಮೊದಲ ಟಿ20 ಪಂದ್ಯ – ಜನವರಿ 21 – ನಾಗ್ಪುರ – ರಾತ್ರಿ 7:00
  • ಎರಡನೇ ಟಿ20 ಪಂದ್ಯ – ಜನವರಿ 23 – ರಾಯ್ಪುರ – ರಾತ್ರಿ 7:00
  • ಮೂರನೇ ಟಿ20 ಪಂದ್ಯ – ಜನವರಿ 25 – ಗುವಾಹಟಿ – ರಾತ್ರಿ 7:00
  • ನಾಲ್ಕನೇ ಟಿ20 ಪಂದ್ಯ – ಜನವರಿ 28 – ವಿಶಾಖಪಟ್ಟಣ – ರಾತ್ರಿ 7:00
  • ಐದನೇ ಟಿ20 ಪಂದ್ಯ – ಜನವರಿ 31 – ತಿರುವನಂತಪುರಂ – ರಾತ್ರಿ 7:00

Source link

Video: ಚಿನ್ನ, ಬೆಳ್ಳಿ, ವಜ್ರಗಳಿಂದ ಕೂಡಿದ ಬಾಲರಾಮನ ವಿಗ್ರಹವನ್ನು ಅಯೋಧ್ಯೆಯ ರಾಮ ಮಂದಿರಕ್ಕೆ ದಾನ ಮಾಡಿದ ಕರ್ನಾಟಕದ ಭಕ್ತ – Kannada News | Anonymous Devotee From Karnataka Donates Precious Ram Lalla Idol to Ayodhya Ram Temple

ಅಯೋಧ್ಯೆ, ಡಿಸೆಂಬರ್ 24: ಅಯೋಧ್ಯೆಯ ರಾಮಲಲ್ಲಾ ದೇವಾಲಯ ಆವರಣ ಚಿನ್ನ, ಬೆಳ್ಳಿ, ವಜ್ರಗಳಿಂದ ಮಾಡಲಾದ ಭವ್ಯವಾದ ವಿಗ್ರಹ ಪ್ರತಿಷ್ಠಾಪನೆಗೆ ಸಾಕ್ಷಿಯಾಗಲಿದೆ. ವಜ್ರಗಳು, ಪಚ್ಚೆಗಳು ಮತ್ತು ಇತರ ಅಮೂಲ್ಯ ರತ್ನಗಳಿಂದ ಕೂಡಿದ 10 ಅಡಿ ಎತ್ತರ, 8 ಅಡಿ ಅಗಲದ ಈ ಪ್ರತಿಮೆಯನ್ನು ಕರ್ನಾಟಕದ ಭಕ್ತರೊಬ್ಬರು ದಾನ ಮಾಡಿದ್ದು ಮಂಗಳವಾರ ಸಂಜೆ ನಗರಕ್ಕೆ ತರಲಾಗಿದೆ. ದಕ್ಷಿಣ ಭಾರತದ ಸಾಂಪ್ರದಾಯಿಕ ಶಿಲ್ಪಕಲೆ ತಂತ್ರಗಳನ್ನು ಬಳಸಿ ರಚಿಸಲಾದ ಈ ಪ್ರತಿಮೆಯ ಮೌಲ್ಯ ಅಂದಾಜು 25–30 ಕೋಟಿ ರೂ. ಎನ್ನಲಾಗಿದೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಡಾ. ಅನಿಲ್ ಮಿಶ್ರಾ, ದಾನಿ ಯಾರೆಂಬುದು ತಿಳಿದಿಲ್ಲ ಎಂದಿದ್ದಾರೆ. ತಿಮೆಯ ತೂಕವನ್ನು ಅಳೆಯಲಾಗುತ್ತಿದೆ, ಆದರೂ ಅದು ಸುಮಾರು ಐದು ಕ್ವಿಂಟಾಲ್‌ಗಳಷ್ಟಿದೆ. ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಡಿಸೆಂಬರ್ 29, 2025 ರಿಂದ ಜನವರಿ 2, 2026 ರವರೆಗೆ ಆಚರಿಸಲಾಗುವ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆಯ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಷ್ಠಾ ದ್ವಾದಶಿಗೆ ಸಿದ್ಧತೆಗಳು ಪ್ರಾರಂಭವಾಗಿವೆ.

ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶ್ರೀ ರಾಮ ಅಭಿಷೇಕ, ಶೃಂಗಾರ, ಭೋಗ ಮತ್ತು ಪ್ರಕತ್ಯ ಆರತಿ ಸೇರಿವೆ, ಇವುಗಳನ್ನು ಬೆಳಗ್ಗೆ 9.30 ರಿಂದ ಮಧ್ಯಾಹ್ನ ಆರತಿಯವರೆಗೆ ಗರ್ಭಗುಡಿಯಲ್ಲಿ ನಡೆಸಲಾಗುತ್ತದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಜಯಲಕ್ಷ್ಮೀ ಮನೆ ತುಂಬೆಲ್ಲಾ ಲಕ್ಷ್ಮೀ ಕೃಪಾಕಟಾಕ್ಷ! 53 ಆಸ್ತಿ, 2 ಕೋಟಿ ರೂ. ಮೌಲ್ಯದ ಲೇಔಟ್, ಇನ್ನೂ ಏನೇನು ಸಿಕ್ತು ಗೊತ್ತಾ? – Kannada News | Lokayukta Raid Exposes Massive Assets: Raichur Sub Division AEE Found With 53 Properties and Rs 2 Crore Layout

ವಿಜಯಪುರ ಕೃಷಿ ಇಲಾಖೆ ಅಧಿಕಾರಿ ಮಲ್ಲಪ್ಪ ಯರಝರಿ ನಿವಾಸದಲ್ಲಿ ಸಿಕ್ಕ ಸಂಪತ್ತು

ಬೆಂಗಳೂರು, ಡಿಸೆಂಬರ್ 24: ಕಣ್ಣು ಕುಕ್ಕುವಂಥ ಬಂಗಲೆ, ಎಕರೆಗಟ್ಟಲೆ ಫಾರ್ಮ್​ ಹೌಸ್, ಮನೆ ಮನೆಯಲ್ಲೂ ಶೋಧ, ಬೈಕ್​, ಕಾರಲ್ಲೂ ತಲಾಶ್, ಕಚೇರಿಗಳಲ್ಲೂ ಪರಿಶೀಲನೆ. ಭ್ರಷ್ಟಾಚಾರದ ಆರೋಪ ಹೊತ್ತ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು (Lokayukta Raid) ಮಂಗಳವಾರ ಬೆಳ್ಳಂಬೆಳಗ್ಗೆಯಿಂದಲೇ ಶಾಕ್ ನೀಡಿದ್ದಾರೆ. ನಸುಕಿನಲ್ಲಿ ದಾಳಿ ನಡೆಸಿ ಶುರುವಾದ ಪರಿಶೀಲನೆ ತಡರಾತ್ರಿ ವರೆಗೂ ನಡೆದಿದೆ. ಈ ವೇಳೆ, ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ಹಲವು ಅಧಿಕಾರಿಗಳ ಬಳಿ ಸಂಪತ್ತಿನ ಖಜಾನೆಗಳೇ ಪತ್ತೆಯಾಗಿವೆ.

ರಾಯಚೂರು ಜಿಲ್ಲೆ ಸಿಂಧನೂರು ಸಬ್ ಡಿವಿಷನ್ ಎಇಇ ವಿಜಯಲಕ್ಷ್ಮೀ ಬಳಿ ಒಂದಲ್ಲ, ಎರಡಲ್ಲ ಸುಮಾರು 53 ಕಡೆ ಆಸ್ತಿ ಇರುವುದು ಪತ್ತೆಯಾಗಿದೆ. ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ರಾಯಚೂರಿನ 5 ಕಡೆ ದಾಳಿ ನಡೆಸಿದ್ದಾರೆ. ವಿಜಯಲಕ್ಷ್ಮೀ ಸಂಬಂಧಿಕರ ಮನೆ, ತಂಗಿ ಮನೆ, ಯಾದಗಿರಿಯಲ್ಲಿ ಖಾಸಗಿ ಲೇಔಟ್, ಫಾರ್ಮ್​ ಹೌಸ್​ಗಳ ದಾಖಲೆ ಪರಿಶೀಲಿಸಿದ್ದಾರೆ. ದಾಳಿ ವೇಳೆ ವಿಜಯಲಕ್ಷ್ಮೀ ಮನೆಯಲ್ಲಿರಲಿಲ್ಲ. ಸೊಸೆಗೆ ಡೆಲಿವರಿ ಅಂತಾ ಬೇರಡೆ ತೆರಳಿದ್ದರು. ಫೋನ್ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಕೂಡಲೇ ಬರುವಂತೆ ಸೂಚಿಸಿದ್ದರು. ಯಾದಗಿರಿಯಲ್ಲಿ 2 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಲೇಔಟ್, 290 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳು ಪತ್ತೆಯಾಗಿವೆ.

ಬಾಗಲಕೋಟೆ ಜಿ.ಪಂ. ಯೋಜನಾ ನಿರ್ದೇಶಕ ಎಸ್.ಎಂ.ಕಾಂಬಳೆ‌ ಮನೆ ಮತ್ತು ಗದಗ ಜಿಲ್ಲೆ ನರಗುಂದದ ಮನೆ ಮೇಲೂ ದಾಳಿ ಮಾಡಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದ್ದಾರೆ. ದಾಳಿ ವೇಳೆ ಅಂದಾಜು 1 ಕೋಟಿ ರೂಪಾಯಿಗೂ ಹೆಚ್ಚಿನ ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ. 278 ಗ್ರಾಂ ಬಂಗಾರದ ಆಭರಣ, 494 ಗ್ರಾಂ ಬೆಳ್ಳಿಯ ಆಭರಣ, 1 ದ್ವಿಚಕ್ರ ವಾಹನ, 15 ಖಾಲಿ ನಿವೇಶನಗಳು ಹಾಗೂ 3 ಮನೆಗಳು ಇರುವುದು ಪತ್ತೆಯಾಗಿದೆ.

ವಿಜಯಪುರ ಕೃಷಿ ಇಲಾಖೆ ಅಧಿಕಾರಿ ಮಲ್ಲಪ್ಪ ಯರಝರಿ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನವರಸಪೂರ ಬಡಾವಣೆ, ತೋಟದ ಮನೆ, ಮಾವನ ಮನೆ, ಕಚೇರಿ, ಕಾರು, ಬೈಕ್​ಗಳ ದಾಖಲಾತಿ ಪರಿಶೀಲಿಸಿದ್ದಾರೆ. ಈ ವೇಳೆ ಆದಾಯಕ್ಕಿಂತ ಹೆಚ್ಚಿನ 2.50 ಕೋಟಿ ರೂ. ಆಸ್ತಿ ಗಳಿಕೆ ಮಾಡಿರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ, ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಅಧಿಕಾರಿಗಳು

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಕೋಲ್ ಸಿರ್ಸಿ ಗ್ರೂಪ್ ಗ್ರಾಮ ಸೇವಾ ಸಹಕಾರಿ ಸಂಘ ನಿಯಮಿತದ ಸಿಇಒ ಮಾರುತಿ ಯಶವಂತ್ ಮಾಲ್ವಿ ಕಚೇರಿ ಮತ್ತು ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಉಡುಪಿ, ಮಂಗಳೂರು, ಕಾರವಾರ ಲೋಕಾಯುಕ್ತ ಅಧಿಕಾರಿಗಳು ಏಕ ಕಾಲದಲ್ಲಿ ರೇಡ್ ಮಾಡಿ ಪರಿಶೀಲಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:31 am, Wed, 24 December 25

Source link

ಬೆಂಗಳೂರಿನಲ್ಲಿ ಮತ್ತೆ ಶುರುವಾಯಿತು ವ್ಹೀಲಿಂಗ್ ಹುಚ್ಚಾಟ: ಆಟೋ ಚಾಲಕನನ್ನು ಬಂಧಿಸಿದ ಪೊಲೀಸರು – Kannada News | Auto Driver Held for Dangerous Wheelie Stunt in Bengaluru; Police Action

ಬೆಂಗಳೂರು, ಡಿ.24: ಬೆಂಗಳೂರಿನಲ್ಲಿ ವ್ಹೀಲಿಂಗ್ (wheelie stunt) ಹುಚ್ಚು ಕಡಿಮೆ ಆಗಿತ್ತು. ಇದೀಗ ಮತ್ತೆ ಶುರುವಾಗಿದೆ. ಹದಿಯರೆದ ಹುಡುಗರು ರಸ್ತೆಯಲ್ಲಿ ವ್ಹೀಲಿಂಗ್ ಮಾಡಿಕೊಂಡು ಇತರ ಸವಾರರಿಗೆ ತೊಂದರೆ ಮಾಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕವಾಗಿ ಕೂಡ ಆಕ್ರೋಶಗಳು ವ್ಯಕ್ತವಾಗಿತ್ತು. ಪೊಲೀಸರು ಕೂಡ ಕಟ್ಟನಿಟ್ಟಿನ ಕ್ರಮವನ್ನು ತೆಗೆದುಕೊಂಡು ವ್ಹೀಲಿಂಗ್ ಮಾಡುವವರಿಗೆ ಸರಿಯಾದ ಶಿಕ್ಷೆ ನೀಡುತ್ತಿದ್ದರು. ಸ್ವಲ್ಪ ದಿನಗಳಿಂದ ಈ ವ್ಹೀಲಿಂಗ್ ಹುಚ್ಚು ಕಡಿಮೆ ಆಗಿತ್ತು. ಇದೀಗ ಮತ್ತೆ ಶುರುವಾಗಿದೆ. 28 ವರ್ಷದ ಆಟೋ ರಿಕ್ಷಾ ಚಾಲಕ ವ್ಹೀಲಿಂಗ್ ಸ್ಟಂಟ್‌ ಮಾಡಲು ಹೋಗಿ ಪೊಲೀಸರ ಕೈಯಲ್ಲಿ ತಗ್ಲಾಕೊಂಡಿದ್ದಾನೆ. ತಾನು ಮಾಡಿದ ವ್ಹೀಲಿಂಗ್ ಸ್ಟಂಟ್‌ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದನ್ನು ನೋಡಿದ ಪೊಲೀಸರು ಆತನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ಕೆಆರ್ ಪುರಂನ ಪ್ಲೇಗ್ ಮಾರಮ್ಮ ಬೀದಿಯ ನಿವಾಸಿ ಉದಯ್ ವಿಕ್ರಮ್ ಎ ಎಂಬ ಆರೋಪಿಯ ವಿರುದ್ಧ ಸೋಮವಾರ ಕಾನೂನಿನ ಹಲವು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಸಾರ್ವಜನಿಕ ಮಾರ್ಗದಲ್ಲಿ ಅತಿವೇಗ ಅಥವಾ ನಿರ್ಲಕ್ಷ್ಯದ ಚಾಲನೆ/ಸವಾರಿ) ಸೆಕ್ಷನ್ 281, ಜೊತೆಗೆ ಭಾರತೀಯ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 184 (ಅಪಾಯಕಾರಿ ಚಾಲನೆ) ಮತ್ತು 189 (ರೇಸಿಂಗ್/ವೇಗದ ಪ್ರಯೋಗಗಳು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: ಎಮಿಷನ್ ಸರ್ಟಿಫಿಕೇಟ್‌ ಇಲ್ಲ, ಪರ್ಮಿಟ್ ಇಲ್ಲ! ಪರಿವಾಹನ್ ದೋಷದಿಂದ ವಾಹನ ಮಾಲೀಕರ ಪರದಾಟ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಕಳೆದ ತಿಂಗಳು ಈತ ಸ್ನೇಹಿತನ ಸಹಾಯದಿಂದ ವ್ಹೀಲಿಂಗ್ ಸ್ಟಂಟ್‌ ಮಾಡುವುದನ್ನು ವಿಡಿಯೋ ಮಾಡಿಸಿಕೊಂಡು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದ, ಈ ವಿಡಿಯೋವನ್ನು ಹಂಚಿಕೊಂಡದ್ದೇ ಇದೀಗ ಆತನಿಗೆ ಸಂಕಷ್ಟಕ್ಕೆ ಕಾರಣವಾಗಿದೆ. ಇದೀಗ ಆಟೋವನ್ನು ಕೆಆರ್ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ವಶಕ್ಕೆ ಪಡೆಯಲಾಗಿದೆ. ನ್ಯಾಯಾಲಯವು ಪೊಲೀಸರಿಗೆ ನಿರ್ದೇಶನ ನೀಡಿದರೆ ಮಾತ್ರ ಅದನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನೊಂದು ಇಂತಹದೇ ಒಂದು ಘಟನೆಯೊಂದು ನಡೆದಿದೆ. ಸ್ಕೂಟರ್‌ನಲ್ಲಿ ಇಬ್ಬರು ವ್ಯಕ್ತಿಗಳು ಅಪಾಯಕಾರಿ ಸಾಹಸ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಕ್ಲಿಪ್ ಬೆಂಗಳೂರಿನದ್ದಾಗಿದೆ ಎಂದು ಹೇಳಲಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೆಲಿಗ್ರಾಂನಲ್ಲಿ ಹುಡುಗಿ ಬುಕ್ ಮಾಡಿದ್ದ ಯುವಕ ಆಕೆ ಮನೆಗೆ ಹೋಗಿ ಬಟ್ಟೆಬಿಚ್ಚುತ್ತಿದ್ದಂತೆ ಕಾದಿತ್ತು ಆಘಾತ! – Kannada News | Online Escort Scam in Bengaluru: RR Nagar Police Arrest 5 for Telegram Honey Trap Extortion

ಬೆಂಗಳೂರು, ಡಿಸೆಂಬರ್ 24: ಆನ್‌ಲೈನ್‌ನಲ್ಲಿ ವೇಶ್ಯಾವಾಟಿಕೆ ದಂಧೆಗೆ ಸಂಬಂಧಿಸಿದಂತೆ ಬೆಂಗಳೂರಿನ (Bangalore) ಆರ್‌ಆರ್ ನಗರ ಪೊಲೀಸರು (RR Nagar Police)  ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಮೋಹದ ಬಲೆಗೆ ಬೀಳಿಸಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್‌ನ ಇಬ್ಬರು ಯುವತಿಯರು ಸೇರಿ ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಸುಮಲತಾ ಅಲಿಯಾಸ್ ಅಂಜಲಿ (28), ಹರ್ಷಿಣಿ ಅಲಿಯಾಸ್ ಸ್ವೀಟಿ (26) ಹಾಗೂ ಅವರ ಸಹಚರರಾದ ಜಗದೀಶ್ (35), ಮಂಜುನಾಥ್ (30) ಮತ್ತು ಲೋಕೇಶ್ (32) ಎಂದು ಗುರುತಿಸಲಾಗಿದೆ.

ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ ಈ ಖತರ್ನಾಕ್ ಗ್ಯಾಂಗ್ ಅನ್ನು ಸೆರೆ ಹಿಡಿದಿದ್ದಾರೆ. ಆರೋಪಿಗಳು ಟೆಲಿಗ್ರಾಂ ಮೂಲಕ ಯುವಕರನ್ನು ಸಂಪರ್ಕಿಸಿ ಆನ್‌ಲೈನ್‌ನಲ್ಲಿ ಹುಡುಗಿಯರನ್ನು ಬುಕ್ ಮಾಡುವಂತೆ ಪ್ರೇರೇಪಿಸಿ, ನಂತರ ಸುಲಿಗೆ ನಡೆಸುತ್ತಿದ್ದರು.

ಬಂಧಿತ ಆರೋಪಿಗಳು

ಡಿಸೆಂಬರ್ 1ರಂದು ಟೆಲಿಗ್ರಾಂನ ಒಂದು ಗ್ರೂಪ್ ಮೂಲಕ ಹುಡುಗಿಯನ್ನು ಬುಕ್ ಮಾಡಿದ್ದ ಯುವಕ, ಆಕೆ ನೀಡಿದ ವಿಳಾಸಕ್ಕೆ ತೆರಳಿದ್ದ. ಅಲ್ಲಿ ಬಟ್ಟೆ ಬಿಚ್ಚುತ್ತಿದ್ದಂತೆಯೇ ಆಕೆ 20 ಸಾವಿರ ರೂ. ನಗದು ಮತ್ತು ಮೊಬೈಲ್‌ನ್ನು ಕಿತ್ತುಕೊಂಡು, ಬಳಿಕ ‘1 ಲಕ್ಷ ರೂ. ಕೊಡು, ಇಲ್ಲವಾದರೆ ನಮ್ಮ ಕಡೆಯವರನ್ನು ಕರೆಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾಳೆ. ಈ ವೇಳೆ ಯುವಕ ತನ್ನ ಮೊಬೈಲ್ ವಾಪಸ್ ಪಡೆದು ಅಲ್ಲಿಂದ ಪರಾರಿಯಾಗಿದ್ದ.

ತಪ್ಪಿನಿಂದ ಕಲಿಯದ ಪಾಠ: ಹುಡುಗಿ ಹುಡುಕಿ ಹೊರಟನಿಗೆ ಮತ್ತೆ ಶಾಕ್

ಮೊದಲ ಘಟನೆಯಿಂದ ಪಾಠ ಕಲಿಯದ ಯುವಕ, ಡಿಸೆಂಬರ್ 20ರಂದು ಮತ್ತೆ ಟೆಲಿಗ್ರಾಂ ಮೂಲಕ ಮತ್ತೊಬ್ಬ ಹುಡುಗಿಯನ್ನು ಬುಕ್ ಮಾಡಿದ್ದ. ಆಕೆ ಸೂಚಿಸಿದಂತೆ ಆರ್‌ಆರ್ ನಗರದಲ್ಲಿರುವ ಸ್ಥಳಕ್ಕೆ ತೆರಳಿದ್ದ. ಅಲ್ಲಿ ಹಳೆಯ ಹುಡುಗಿ, ಹೊಸ ಹುಡುಗಿ ಹಾಗೂ ಮೂವರು ಯುವಕರು ಏಕಾಏಕಿ ಆಗಮಿಸಿ ಯುವಕನ ಮೇಲೆ ಹಲ್ಲೆ ನಡೆಸಿ 20 ಸಾವಿರ ರೂ. ಕಸಿದುಕೊಂಡಿದ್ದಾರೆ. ಜೊತೆಗೆ 1 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿ ಕಾರಿನಲ್ಲಿ ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದಾರೆ.

ಇದನ್ನೂ ಓದಿ: ಮಗುವಿಗೆ ಜನ್ಮ ನೀಡಿದ 10ನೇ ಕ್ಲಾಸ್ ವಿದ್ಯಾರ್ಥಿನಿ: ಶಾಲಾ ಬಸ್ ಡ್ರೈವರ್​ನಿಂದಲೇ​​​ ನೀಚ ಕೃತ್ಯ

ಯುವಕ ಕೂಗಿಕೊಂಡಾಗ ಸ್ಥಳೀಯರು ತಕ್ಷಣ 112ಗೆ ಕರೆ ಮಾಡಿದ್ದು, ಕ್ಷಣಮಾತ್ರದಲ್ಲಿ ಸ್ಥಳಕ್ಕೆ ಬಂದ 112 ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಯುವಕನನ್ನು ರಕ್ಷಿಸಿದ್ದಾರೆ. ನಂತರ ಆರ್‌ಆರ್ ನಗರ ಪೊಲೀಸರು ಆರೋಪಿಗಳನ್ನು ಅಲ್ಲಿಯೇ ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

VHT ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ ಆಟಗಾರರ ಪಟ್ಟಿ ಇಲ್ಲಿದೆ – Kannada News | Indian players will feature in the Vijay Hazare Trophy 2025

ದೇಶೀಯ ಏಕದಿನ ಟೂರ್ನಿ ವಿಜಯ ಹಝಾರೆ ಟ್ರೋಫಿ ಇಂದಿನಿಂದ (ಡಿ.24) ಶುರುವಾಗಲಿದೆ. 32 ತಂಡಗಳ ಈ ನಡುವಣ ಈ ಕದನದಲ್ಲಿ ಈ ಬಾರಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಭಾರತೀಯ ಆಟಗಾರರು ಕೂಡ ದೇಶೀಯ ಟೂರ್ನಿಯಲ್ಲಿ ಕಾಣಿಸಿಕೊಳ್ಳುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ. ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಸರಣಿಗೂ ಮುನ್ನ ಭಾರತ ತಂಡದ ಆಟಗಾರರು ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಇಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಒಂದಷ್ಟು ಆಟಗಾರರು ವರ್ಷಗಳ ಬಳಿಕ ದೇಶೀಯ ಏಕದಿನ ಟೂರ್ನಿ ಆಡುತ್ತಿರುವುದು ವಿಶೇಷ. ಈ ಎಲ್ಲಾ ಆಟಗಾರರು ಮೊದಲ ದಿನವೇ ವಿವಿಧ ಭಾಗಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಅದರಲ್ಲೂ ದೆಹಲಿ ಪರ ವಿರಾಟ್ ಕೊಹ್ಲಿ, ರಿಷಭ್ ಪಂತ್ ಹಾಗೂ ಹರ್ಷಿತ್ ರಾಣಾ ಇದೇ ಮೊದಲ ಬಾರಿಗೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಮತ್ತೊಂದೆಡೆ ಮುಂಬೈ ಪರ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಸರ್ಫರಾಝ್ ಖಾನ್ ಮತ್ತು ಯಶಸ್ವಿ ಜೈಸ್ವಾಲ್ ಕಣಕ್ಕಿಳಿಯಲಿದ್ದಾರೆ. ಅದರಂತೆ ಈ ಬಾರಿಯ ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

  • ನಿತೀಶ್ ಕುಮಾರ್ ರೆಡ್ಡಿ – ಆಂಧ್ರ
  • ಹಾರ್ದಿಕ್ ಪಾಂಡ್ಯ – ಬರೋಡಾ
  • ಜಿತೇಶ್ ಶರ್ಮಾ – ಬರೋಡಾ
  • ಮೊಹಮ್ಮದ್ ಶಮಿ – ಬಂಗಾಳ
  • ಆಕಾಶ್ ದೀಪ್ – ಬಂಗಾಳ
  • ಶಹಬಾಝ್ ಅಹ್ಮದ್ – ಬಂಗಾಳ
  • ವಿರಾಟ್ ಕೊಹ್ಲಿ – ದೆಹಲಿ
  • ರಿಷಭ್ ಪಂತ್ – ದೆಹಲಿ
  • ಹರ್ಷಿತ್ ರಾಣಾ – ದೆಹಲಿ
  • ಇಶಾನ್ ಕಿಶನ್ – ಜಾರ್ಖಂಡ್
  • ಕೆಎಲ್ ರಾಹುಲ್ – ಕರ್ನಾಟಕ
  • ಪ್ರಸಿದ್ಧ್ ಕೃಷ್ಣ – ಕರ್ನಾಟಕ
  • ಸಂಜು ಸ್ಯಾಮ್ಸನ್ – ಕೇರಳ
  • ರುತುರಾಜ್ ಗಾಯಕ್ವಾಡ್ – ಮಹಾರಾಷ್ಟ್ರ
  • ರೋಹಿತ್ ಶರ್ಮಾ – ಮುಂಬೈ
  • ಯಶಸ್ವಿ ಜೈಸ್ವಾಲ್ – ಮುಂಬೈ
  • ಸೂರ್ಯಕುಮಾರ್ ಯಾದವ್ – ಮುಂಬೈ
  • ಶಿವಂ ದುಬೆ – ಮುಂಬೈ
  • ಸರ್ಫರಾಝ್ ಖಾನ್
  • ಶುಭಮನ್ ಗಿಲ್ – ಪಂಜಾಬ್
  • ಅಭಿಷೇಕ್ ಶರ್ಮಾ – ಪಂಜಾಬ್
  • ಅರ್ಷದೀಪ್ ಸಿಂಗ್ – ಪಂಜಾಬ್
  • ಸಾಯಿ ಸುದರ್ಶನ್ – ತಮಿಳುನಾಡು
  • ಧ್ರುವ್ ಜುರೆಲ್ – ಉತ್ತರ ಪ್ರದೇಶ
  • ರಿಂಕು ಸಿಂಗ್ – ಉತ್ತರ ಪ್ರದೇಶ

ಇದನ್ನೂ ಓದಿ: 15 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಕಣಕ್ಕಿಳಿಯುವುದು ಎಲ್ಲಿ?

ವಿಜಯ ಹಝಾರೆ ಟೂರ್ನಿಗೆ ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಕರುಣ್ ನಾಯರ್ (ಉಪನಾಯಕ), ದೇವದತ್ ಪಡಿಕ್ಕಲ್, ರವಿಚಂದ್ರಣ್ ಸ್ಮರಣ್, ಕೆಎಲ್ ಶ್ರೀಜಿತ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ವಿಜಯಕುಮಾರ್ ವೈಶಾಕ್, ಮನ್ವಂತ್ ಕುಮಾರ್, ಶ್ರೀಶ ಆಚಾರ್, ಅಭಿಲಾಷ್ ಶೆಟ್ಟಿ, ಬಿಆರ್ ಶರತ್, ಹರ್ಷಿಲ್ ಧರ್ಮನಿ, ಧ್ರುವ  ಪ್ರಭಾಕರ್, ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ.

Source link

ರಕ್ಷಿತಾ ತಾಯಿ ಬಳಿ ಮನಸಾರೆ ಕ್ಷಮೆ ಕೇಳಿದ ಧ್ರುವಂತ್ – Kannada News | Dhruvanth ask sorry to Rakshita Shetty Mother Over Old Kirik

ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಮಧ್ಯೆ ಆದ ಕಿರಿಕ್​​ಗಳು ಒಂದೆರಡಲ್ಲ. ರಕ್ಷಿತಾನ ಅಪ್ರಬುದ್ಧೆ ಎಂದೆಲ್ಲ ಧ್ರುವಂತ್ ಬೈದಿದ್ದು ಇದೆ. ಈಗ ರಕ್ಷಿತಾ ತಾಯಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಈ ವೇಳೆ ಧ್ರುವಂತ್ ಅವರು ರಕ್ಷಿತಾ ತಾಯಿ ಬಳಿ ಕ್ಷಮೆ ಕೇಳಿದ್ದಾರೆ. ‘ಬೆತ್ತ ತರಬೇಕಿತ್ತು’ ಎಂದು ಧ್ರುವಂತ್ ಹೇಳಿದರು. ಆಗ ಗಿಲ್ಲಿ, ‘ಆ ಬೆತ್ತದಲ್ಲಿ ನಿನಗೆ ಹೊಡೆಯುತ್ತಿದ್ದರು’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕಣಕ್ಕೆ: ಹೀಗಿದೆ ಪ್ಲೇಯಿಂಗ್ 11 – Kannada News | Andhra vs Delhi, Mumbai vs Sikkim, Jharkhand vs Karnataka Toss Update

ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಕಣಕ್ಕಿಳಿದಿದ್ದಾರೆ. ಬೆಂಗಳೂರಿನ ಸೆಂಟರ್ ಆಫ್ ಎಕ್ಸ್​ಲೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ದೆಹಲಿ ಮತ್ತು ಆಂಧ್ರ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ವಿರಾಟ್ ಕೊಹ್ಲಿ ಒಳಗೊಂಡಿರುವ ದೆಹಲಿ ತಂಡವು ಬೌಲಿಂಗ್ ಆಯ್ದುಕೊಂಡಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಈ ಕೆಳಗಿನಂತಿದೆ…

ದೆಹಲಿ (ಪ್ಲೇಯಿಂಗ್ XI): ಅರ್ಪಿತ್ ರಾಣಾ, ಪ್ರಿಯಾಂಶ್ ಆರ್ಯ, ವಿರಾಟ್ ಕೊಹ್ಲಿ, ನಿತೀಶ್ ರಾಣಾ, ರಿಷಭ್ ಪಂತ್ (ನಾಯಕ), ಆಯುಷ್ ಬದೋನಿ, ಸಿಮರ್ಜೀತ್ ಸಿಂಗ್, ಹರ್ಷ್ ತ್ಯಾಗಿ, ಇಶಾಂತ್ ಶರ್ಮಾ, ಪ್ರಿನ್ಸ್ ಯಾದವ್, ನವದೀಪ್ ಸೈನಿ.

ಆಂಧ್ರ (ಪ್ಲೇಯಿಂಗ್ XI): ಶ್ರೀಕರ್ ಭರತ್ (ವಿಕೆಟ್ ಕೀಪರ್), ಅಶ್ವಿನ್ ಹೆಬ್ಬಾರ್, ಶೇಕ್ ರಶೀದ್, ರಿಕಿ ಭುಯಿ, ನಿತೀಶ್ ಕುಮಾರ್ ರೆಡ್ಡಿ (ನಾಯಕ), ಸೌರಭ್ ಕುಮಾರ್, ಎಂ ಹೇಮಂತ್ ರೆಡ್ಡಿ, ಕೆಎಸ್​ ನರಸಿಂಹರಾಜು, ತ್ರಿಪುರಾಣ ವಿಜಯ್, ಸತ್ಯನಾರಾಯಣ ರಾಜು, ಎಸ್​ ಪ್ರಸಾದ್.

ಇನ್ನು ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮತ್ತೊಂದು ಪಂದ್ಯದಲ್ಲಿ ರೋಹಿತ್ ಶರ್ಮಾ ಒಳಗೊಂಡಿರುವ ಮುಂಬೈ ಹಾಗೂ ಸಿಕ್ಕಿಂ ತಂಡಗಳು ಕಣಕ್ಕಿಳಿದಿದೆ. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದಿರುವ ಸಿಕ್ಕಿಂ ಬ್ಯಾಟಿಂಗ್ ಆಯ್ದುಕೊಂಡಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಈ ಕೆಳಗಿನಂತಿದೆ…

ಮುಂಬೈ (ಪ್ಲೇಯಿಂಗ್ XI): ರೋಹಿತ್ ಶರ್ಮಾ, ಅಂಗ್​ಕ್ರಿಶ್ ರಘುವಂಶಿ, ಸರ್ಫರಾಝ್ ಖಾನ್, ಸಿದ್ಧೇಶ್ ಲಾಡ್, ಮುಶೀರ್ ಖಾನ್, ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಶಾರ್ದೂಲ್ ಠಾಕೂರ್ (ನಾಯಕ), ತುಷಾರ್ ದೇಶಪಾಂಡೆ, ಸಿಲ್ವೆಸ್ಟರ್ ಡಿಸೋಝ.

ಸಿಕ್ಕಿಂ (ಪ್ಲೇಯಿಂಗ್ XI): ಲೀ ಯೋಂಗ್ ಲೆಪ್ಚಾ (ನಾಯಕ), ಆಶಿಶ್ ಥಾಪಾ (ವಿಕೆಟ್ ಕೀಪರ್), ಅಮಿತ್ ರಾಜೇರಾ, ರಾಬಿನ್ ಲಿಂಬೂ, ಗುರಿಂದರ್ ಸಿಂಗ್, ಕ್ರಾಂತಿ ಕುಮಾರ್, ಪಲ್ಜೋರ್ ತಮಾಂಗ್, ಅಂಕುರ್ ಮಲಿಕ್, ಕೆ ಸಾಯಿ ಸಾತ್ವಿಕ್, ಎಂಡಿ ಸಪ್ತುಲ್ಲಾ, ಅಭಿಷೇಕ್ ಶಾ.

ಹಾಗೆಯೇ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮತ್ತೊಂದು ಪಂದ್ಯದಲ್ಲಿ ಕರ್ನಾಟಕ ಮತ್ತು ಜಾರ್ಖಂಡ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಇನ್ನು ಈ ಪಂದ್ಯಕ್ಕಾಗಿ ಕರ್ನಾಟಕ-ಜಾರ್ಖಂಡ್ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…

ಕರ್ನಾಟಕ (ಪ್ಲೇಯಿಂಗ್ XI): ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಧ್ರುವ್ ಪ್ರಭಾಕರ್, ವಿದ್ಯಾಧರ್ ಪಾಟೀಲ್, ವಿಜಯ್ ಕುಮಾರ್ ವೈಶಾಕ್, ಅಭಿಲಾಷ್ ಶೆಟ್ಟಿ.

ಇದನ್ನೂ ಓದಿ: ಗಿಲ್, ಗಂಭೀರ್ ಆಸೆಗೆ ತಣ್ಣೀರೆರಚಿದ ಮೂವರು ಆಯ್ಕೆಗಾರರು

ಜಾರ್ಖಂಡ್ (ಪ್ಲೇಯಿಂಗ್ XI): ಇಶಾನ್ ಕಿಶನ್ (ನಾಯಕ), ಕುಮಾರ್ ಕುಶಾಗ್ರಾ, ಶಿಖರ್ ಮೋಹನ್, ಉತ್ಕರ್ಷ್ ಸಿಂಗ್, ವಿರಾಟ್ ಸಿಂಗ್, ರಾಬಿನ್ ಮಿಂಝ್, ಅನುಕುಲ್ ರಾಯ್, ಶುಭ್ ಶರ್ಮಾ, ಸೌರಭ್ ಶೇಖರ್, ಸುಶಾಂತ್ ಮಿಶ್ರಾ, ವಿಕಾಶ್ ಸಿಂಗ್.

Source link