ಬೆಂಗಳೂರು, ಡಿಸೆಂಬರ್ 24: ಬೆಂಗಳೂರು (Bangalore) ನಗರದಲ್ಲಿ ಮಾದಕ ವಸ್ತು ಸಾಗಣೆ ಹಾಗೂ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಒಂದೇ ದಿನ ಮೂರು ವಿಭಿನ್ನ ಪ್ರಕರಣಗಳನ್ನು ಭೇದಿಸಿದ್ದು, ಆರೋಪಿಗಳನ್ನು ಬಂಧಿಸಿ ಅಪಾರ ಪ್ರಮಾಣದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಮುಖ ಪ್ರಕರಣವೊಂದರಲ್ಲಿ, ತಿನ್ನುವ ಬ್ರೆಡ್‌ನೊಳಗೆ ಕೊಕೇನ್ ಮರೆಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ನೈಜೀರಿಯನ್ ಮೂಲದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಒಲಾಜಿಡೆ ಎಸ್ತಾರ್, ಬ್ರೆಡ್ ಪೀಸ್‌ಗಳನ್ನು ಕಟ್ ಮಾಡಿ ಅದರೊಳಗೆ ಕೊಕೇನ್ ಇಟ್ಟು ಮುಂಬೈಯಿಂದ ಬೆಂಗಳೂರಿಗೆ ಖಾಸಗಿ ಬಸ್ ಮೂಲಕ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದಳು. ಆ ಸಂದರ್ಭದಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಕಾರ್ಯಾಚರಣೆ ವೇಳೆ ಸುಮಾರು 65 ಲಕ್ಷ ರೂ. ಮೌಲ್ಯದ 120 ಗ್ರಾಂ ಕೊಕೇನ್ ವಶಕ್ಕೆ ಪಡೆಯಲಾಗಿದೆ.
ಈ ಪ್ರಕರಣದಲ್ಲಿ, ಮಾದಕ ವಸ್ತುಗಳನ್ನು ಆಹಾರ ಪದಾರ್ಥಗಳ ಮೂಲಕ ಸಾಗಿಸುವ ಹೊಸ ತಂತ್ರ ಬಳಕೆಯಾಗಿರುವುದು ಪೊಲೀಸರಿಗೂ ಅಚ್ಚರಿ ಮೂಡಿಸಿದೆ.
ವಾರದ ದಿನಗಳಲ್ಲಿ ಪ್ರೊಫೆಸರ್, ವಾರಾಂತ್ಯದಲ್ಲಿ ಕಳ್ಳಿ!
ಇನ್ನೊಂದು ಪ್ರಕರಣದಲ್ಲಿ, ವಾರದ ದಿನಗಳಲ್ಲಿ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ರೇವತಿ ಎಂಬ ಮಹಿಳೆಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ರೇವತಿ ವಾರಾಂತ್ಯದಲ್ಲಿ ಮದುವೆ ನಡೆಯುವ ಕಲ್ಯಾಣಮಂಟಪಗಳಿಗೆ ಸಂಬಂಧಿಕಳಂತೆ ಪ್ರವೇಶಿಸಿ, ಅನುಮಾನ ಬಾರದಂತೆ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದಳು. ಕಳೆದ ನವೆಂಬರ್ 25ರಂದು ಬಸವನಗುಡಿಯ ದ್ವಾರಕನಾಥ್ ಕಲ್ಯಾಣಮಂಟಪದಲ್ಲಿ ನಡೆದ ಕಳ್ಳತನದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಕೆ.ಆರ್.ಪುರಂನಲ್ಲಿ ವಾಸವಾಗಿದ್ದ ರೇವತಿಯನ್ನು ಬಂಧಿಸಿ, 32 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಇರುಳುಗಣ್ಣೆಂದು ಹಗಲಲ್ಲೇ ಕಳ್ಳತನ ಮಾಡುತ್ತಿದ್ದವ ಅರೆಸ್ಟ್
ಇನ್ನೊಂದೆಡೆ, ‘ಇರುಳು ಕುರುಡು’ ಸಮಸ್ಯೆ ಎಂದು ಹೇಳಿಕೊಂಡು ಹಗಲಲ್ಲೇ ಮನೆ ಕಳ್ಳತನ ಮಾಡುತ್ತಿದ್ದ ಮೊಹಮ್ಮದ್ ಖಾನ್ ಎಂಬಾತನನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ. ಬೀಗ ಹಾಕಿದ್ದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಖಾನ್, ಇತ್ತೀಚೆಗೆ ಕಿರುತೆರೆ ನಟ ಪ್ರವೀಣ್ ಅವರ ಮನೆಯಲ್ಲಿ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ. ತನಿಖೆ ವೇಳೆ ಖಾನ್ ವಿರುದ್ಧ ಏಳು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಬಂಧಿತನಿಂದ 65.28 ಲಕ್ಷ ರೂ. ಮೌಲ್ಯದ 470 ಗ್ರಾಂ ಚಿನ್ನಾಭರಣ, 1.5 ಕೆಜಿ ಬೆಳ್ಳಿ ಹಾಗೂ 4.60 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ.
ಈ ಅಪರಾಧ ಪ್ರಕರಣಗಳ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದು, ನಗರದಲ್ಲಿ ಅಪರಾಧ ನಿಯಂತ್ರಣಕ್ಕೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಸಂಜಿತ್ ಹೆಗಡೆ ಅವರು ಗಾಯನದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಅವರು ಹೊಸ ಹೊಸ ಹಾಡುಗಳ ಮೂಲಕ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಬೆಂಗಳೂರಲ್ಲಿ ನಡೆದ ಅವರ ಕಾನ್ಸರ್ಟ್ಗೆ ಸಾಕಷ್ಟು ಜನರು ಸೇರಿದ್ದರು. ಇದು ಯಶಸ್ಸು ಕಂಡಿತ್ತು. ಇದರ ಕ್ಲಿಪ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದರಲ್ಲಿ ಗಮನ ಸೆಳೆದಿದ್ದು ‘ನಂಗೆ ಅಲ್ಲವ’ ಹಾಡು.
ಸಂಜಿತ್ ಹೆಗಡೆ ಈಗಾಗಲೇ ಸಾಕಷ್ಟು ಹಾಡುಗಳನ್ನು ಹೇಳಿದ್ದಾರೆ.ಆ ಪೈಕಿ ಸಾಕಷ್ಟು ಗಮನ ಸೆಳೆದಿದ್ದು, ‘ನಂಗೆ ಅಲ್ಲವ’ ಹಾಡು. ಅವರು ಯಾವುದೇ ವೇದಿಕೆ ಏರಿದರೂ ಈ ಹಾಡನ್ನು ಹಾಡುವಂತೆ ಕೇಳುತ್ತಾರೆ. ಈ ಹಾಡನ್ನು ಅವರು ಹುಡಗಿ ಒಬ್ಬರಿಗಾಗಿ ಕಂಪೋಸ್ ಮಾಡಿದ್ದರಂತೆ. ಅವರು ಈಗ ಅವರ ಜೊತೆ ಇಲ್ಲ.
ಈ ಹಾಡನ್ನು ಕಂಪೋಸ್ ಮಾಡಿದ್ದು ಸಂಜಿತ್ ಹೆಗಡೆ. ನಾಗಾರ್ಜುನ ಶರ್ಮ ಅವರು ಈ ಹಾಡನ್ನು ಬರೆದಿದ್ದಾರೆ. ಈ ಹಾಡನ್ನು ಯಾರಿಗಾಗಿ ಹೇಳಿದ್ದು ಎಂದು ಸಂಜಿತ್ ಹೆಗಡೆ ಅವರಿಗೆ ಕೇಳಲಾಯಿತು. ಈ ವೇಳೆ ಅವರು ಯಾವುದೇ ಮುಚ್ಚುಮರೆ ಇಲ್ಲದೆ ಉತ್ತರ ನೀಡಿದ್ದರು.
‘ನಂಗೆ ಅಲ್ಲವಾ ಸಂಜಿತ್ ಯಾರಿಗೆ ಹೇಳುತ್ತಾರೆ’ ಎಂದು ಸಂಜಿತ್ ಅವರಿಗೆ ಕೇಳಲಾಯಿತು. ‘ನಾನು ಮಾಡುವಾಗ ಒಂದು ಹುಡುಗಿ ಇದ್ದರು. ಈಗ ಅವಳು ನನ್ನಿಂದ ದೂರಾಗಿದ್ದಾಳೆ. ಆ ಟೈಮ್ ಅಲ್ಲಿ ಅವಳಿಗೆ ಹೇಳಿದ್ದು. ಈವಾಗ ಇನ್ನೊಬ್ಬರಿಗೆ ಹೇಳ್ತೀನಿ. ನೀವು ಇನ್ಯಾರಿಗೋ ಹೇಳ್ತೀರಾ’ ಎಂದು ಸಂಜಿತ್ ಹೇಳಿದ್ದಾರೆ.
‘ಆ ಹುಡುಗಿಯ ಹೆಸರು ಹೇಳೋದು ಬೇಡ.ನಾನು ಆ ವಿಷಯದಲ್ಲಿ ಖಾಸಗಿ ವ್ಯಕ್ತಿ. ಈಗ ಬೇರೆ ಯಾರೋ ಇದಾರೆ’ ಎಂದು ಒಪ್ಪಿಕೊಂಡರು ಸಂಜಿತ್ ಹೆಗಡೆ. ‘ನಂಗೆ ಅಲ್ಲವ’ ಹಾಡು 2024ರ ಜೂನ್ ಅಲ್ಲಿ ರಿಲೀಸ್ ಆಯಿತು. ಈ ಹಾಡು ಬರೋಬ್ಬರಿ 14 ಮಿಲಿಯನ್ ವೀಕ್ಷಣೆ ಕಂಡಿದೆ. ಜನರು ಸಂಜಿತ್ ಹೆಗಡೆ ಧ್ವನಿಯಲ್ಲಿ ಈ ಹಾಡನ್ನು ಕೇಳಲು ಬಯಸುತ್ತಾರೆ. ಇದು ಆಲ್ಬಂ ಸಾಂಗ್ ಎಂಬುದು ವಿಶೇಷ.
ವಿಕಾರಾಬಾದ್, ಡಿಸೆಂಬರ್ 24: ಟ್ರಕ್ ಒಂದು ನಿಯಂತ್ರಣ ತಪ್ಪಿ ಮಗುವಿನ ಮೇಲೆ ಪಲ್ಟಿ ಹೊಡೆದ ಘಟನೆ ತೆಲಂಗಾಣದ ವಿಕಾರಾಬಾದ್ನಲ್ಲಿ ನಡೆದಿದೆ. ವಾಹನವು ಸಮತೋಲನವನ್ನು ಕಳೆದುಕೊಂಡು, ಬಲಭಾಗದ ಟೈರ್‌ಗಳು ನೆಲದಿಂದ ಮೇಲಕ್ಕೆತ್ತಿ ಟ್ರಕ್ ವಾಹನಗಳ ಮೇಲೆ ಎಡಭಾಗಕ್ಕೆ ಉರುಳುತ್ತದೆ, ಕೆಲವು ವಾಹನಗಳು ನಜ್ಜುಗುಜ್ಜಾಗುತ್ತವೆ. ಟ್ರಕ್ ಪಲ್ಟಿಯಾಗುತ್ತಿದ್ದಂತೆ, ಭಾರವಾದ ಕಬ್ಬಿಣ ಅಥವಾ ಲೋಹದ ರ‍್ಯಾಕ್ ಕುಸಿದು ಮಗುವನ್ನು ಕೆಳಗೆ ಸಿಲುಕಿಸುತ್ತದೆ. ಆ ಕ್ಷಣ ತೀರಾ ಭಯಾನಕವಾಗಿದ್ದು ಜನರನ್ನು ಆಘಾತಗೊಳಿಸಿದೆ. ಬಿದ್ದ ಲೋಹದ ರ‍್ಯಾಕ್ ಅನ್ನು ಎತ್ತಿಕೊಂಡು ಮಗುವನ್ನು ಹೊರತೆಗೆಯುತ್ತಿರುವುದನ್ನು ಕಾಣಬಹುದು. ಅಪಘಾತದ ನಂತರ, ಸುಮಾರು ಎರಡು ಗಂಟೆಗಳ ಕಾಲ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿ, ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ಅನನುಕೂಲವಾಯಿತು.
ರಾಜ್ಯದೆಲ್ಲೆಡೆ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ
ಬೆಂಗಳೂರು, ಡಿಸೆಂಬರ್ 23: ಬೆಂಗಳೂರಿನ ಹಲವೆಡೆ ಮೈಕೊರೆಯುವ ಚಳಿಯಿದ್ದು (Weather Forecast) , ರಾಜ್ಯದಲ್ಲೂ ಶೀತದಲೆಯ ಅಬ್ಬರ ಹೆಚ್ಚಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಸೇರಿದಂತೆ ಕರಾವಳಿಯಲ್ಲೂ ಒಣಹವೆ ಇರಲಿದ್ದು, ತಾಪಮಾನದಲ್ಲೂ ಏರುಪೇರಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬೆಳಗಿನ ಸಮಯ ದಟ್ಟ ಮಂಜು ಕಾಣಿಸಿಕೊಲ್ಳುವ ಸಾಧ್ಯತೆ ಇದ್ದು, ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಬೇಕೆಂದು ಸೂಚಿಸಲಾಗಿದೆ.
ಬೆಂಗಳೂರಿನಲ್ಲಿ ಮಂಜು ಮುಸುಕಿದ ವಾತಾವರಣ
ಈ ಮಧ್ಯೆ ಬೆಂಗಳೂರಿನ ತಾಪಮಾನ ಕನಿಷ್ಠ 15°C ಇದ್ದು, ಗರಿಷ್ಠ 27°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ಕಳೆದ ಕೆಲ ದಿನಗಳಿಂದ ರಾಜಧಾನಿಯ ವಾತಾವರಣದಲ್ಲಿ ಸಾಕಷ್ಟು ಏರು ಪೇರಾಗುತ್ತಿದ್ದು, ಚಳಿಯ ಪ್ರಮಾಣ ಹೆಚ್ಚುತ್ತಿದೆ. ಇಂದು ಎಂದಿನಂತೆ ಚಳಿಯ ಜೊತೆಗೆ ಮಂಜು ಮುಸುಕಿದ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ.
ಎಲ್ಲೆಲ್ಲಿ ಒಣ ಹವೆ
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರತದ ವಿರುದ್ಧದ ಸರಣಿಗಾಗಿ ನ್ಯೂಝಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಜನವರಿ 11 ರಿಂದ ಶುರುವಾಗಲಿರುವ ಏಕದಿನ ಸರಣಿಯಲ್ಲಿ ನ್ಯೂಝಿಲೆಂಡ್ ತಂಡವನ್ನು ಮೈಕೆಲ್ ಬ್ರೇಸ್‌ವೆಲ್ ಮುನ್ನಡೆಸಲಿದ್ದಾರೆ. ಇನ್ನು ಟಿ20 ಸರಣಿಯಲ್ಲಿ ಮಿಚೆಲ್ ಸ್ಯಾಂಟ್ನರ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ವಿಶೇಷ ಎಂದರೆ ಈ ಎರಡು ತಂಡಗಳಲ್ಲೂ ನ್ಯೂಝಿಲೆಂಡ್ ತಂಡದ ಸ್ಟಾರ್ ಆಟಗಾರ ಕೇನ್ ವಿಲಿಯಮ್ಸನ್ ಕಾಣಿಸಿಕೊಂಡಿಲ್ಲ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್ಗೆ ವಿಲಿಯಮ್ಸನ್ ಆಯ್ಕೆಯಾಗುವುದು ಅನುಮಾನ ಎನ್ನಬಹುದು.
ಇನ್ನು ಏಕದಿನ ಸರಣಿ ವೇಳೆ ಮ್ಯಾಟ್ಹೆನ್ರಿ, ಮಾರ್ಕ್ ಚಾಪ್ಮನ್,ರಚಿನ್ರವೀಂದ್ರ ಮತ್ತು ನಾಯಕ ಮಿಚೆಲ್ ಸ್ಯಾಂಟ್ನರ್ಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿಯೇ ಮೂರು ಪಂದ್ಯಗಳ ಸರಣಿಯಲ್ಲಿ ಬ್ರೇಸ್‌ವೆಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅದರಂತೆ ಭಾರತದ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ತಂಡಗಳು ಈ ಕೆಳಗಿನಂತಿವೆ…
ಬೆಂಗಳೂರು, ಡಿಸೆಂಬರ್ 24: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹುದ್ದೆ ವಿಚಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಕೆಎನ್ ರಾಜಣ್ಣ (KN Rajanna) ಹಲವು ಬಾರಿ ಚರ್ಚೆ ನಡೆಸಿದ್ದು, ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಇದೀಗ ಅಪೆಕ್ಸ್ ಬ್ಯಾಂಕ್ಗೆ ಆಡಳಿತಾಧಿಕಾರಿ (ಎಒ) ನೇಮಕ ಮಾಡಿದ್ದಾರೆ. ಆ ಮೂಲಕ ಡಿಕೆ ಶಿವಕುಮಾರ್ಗೆ ಕೌಂಟರ್ ಕೊಟ್ಟಿದ್ದಾರೆ. ಸಹಕಾರ ಇಲಾಖೆಯ ಜವಾಬ್ದಾರಿ ಸಿದ್ದರಾಮಯ್ಯ ಬಳಿಯೇ ಇದ್ದು, ಕಾರ್ಯಚಟುವಟಿಕೆಯನ್ನು ಸಿಎಂ ಹೆಚ್ಚುವರಿ ಕಾರ್ಯದರ್ಶಿ ಜಿಯಾವುಲ್ಲಾಗೆ ವಹಿಸಲಾಗಿದೆ.
ಮಂಗಳವಾರ ಸಂಜೆ ಅಪೆಕ್ಸ್ ಬ್ಯಾಂಕ್ ಆಡಳಿತಾಧಿಕಾರಿಯಾಗಿ ಜಿಯಾವುಲ್ಲ ಅಧಿಕಾರ ಸ್ವೀಕರಿಸಿದ್ದಾರೆ. ಇದರೊಂದಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹುದ್ದೆಯ ಆಯ್ಕೆ ಮತ್ತಷ್ಟು ಜಟಿಲವಾದಂತಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಸಂಬಂಧಿಯಾಗಿರುವ ಎಂಎಲ್ಸಿ ರವಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಡಿಕೆ ಶಿವಕುಮಾರ್ಗೆ ರಾಜಣ್ಣ ಟಾಂಗ್
ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಾಡಿದ್ದು ನಾನೇ ಎಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಸಿಎಂ ನಿವಾಸ ಕಾವೇರಿಯಲ್ಲಿ ಪ್ರತಿಕ್ರಿಯಿಸಿದ ರಾಜಣ್ಣ, ಎಸ್ಎಂ ಕೃಷ್ಟ ಅವರ ಕಾಲದಲ್ಲಿ ನಾನು ಅಧ್ಯಕ್ಷ ಆಗಿದ್ದು. ಡಿಕೆ ಶಿವಕುಮಾರ್ ಅವರದ್ದು ಸಹಕಾರ ಇರಬಹುದು, ಇಲ್ಲ ಅಂತ ಏನಿಲ್ಲ. ಸಹಾಯ ಮಾಡಿದರೆ ನನಪಿಸಿಕೊಳ್ಳುವುದು ನನ್ನ ಗುಣ. ಅಂದು ಡಿಕೆಶಿ ಸಹಕಾರ ಸಚಿವರಾಗಿದ್ದರು, ಆಗ ಸಹಾಯ ಆಗಿದೆ. ಅಂದು ನಮಗೆ ಹೆಚ್ಚು ಸಹಾಯ ಮಾಡಿದ್ದು ಜಾಲಪ್ಪ, ಬಸವರಾಜು, ಪರಮ ಹಣದ. ಅವರು ಚುನಾವಣೆ ದಿನ ಎಸ್ಎಂ ಕೃಷ್ಣ ಮನವೊಲಿಸಿ ನನ್ನ ಅಧ್ಯಕ್ಷನನ್ನಾಗಿ ಮಾಡಿದರು ಎಂದು ಹೇಳಿದ್ದಾರೆ.
ಹಿಂದೆ ಸಿದ್ದರಾಮಯ್ಯ ಕೂಡ ನನ್ನನ್ನು ಅಧ್ಯಕ್ಷನಾಗಿ ಮಾಡಿದ್ದಾರೆ. ಅಲ್ಲಿ ಇರುವ ನಿರ್ದೇಶಕರು ಸೇರಿ ಆಯ್ಕೆ ಮಾಡಬೇಕಾಗಿರುವ ಹುದ್ದೆ ಅದು, ಸರ್ಕಾರ ಅಲ್ಲ. 21 ಜನ ನಮ್ಮನ್ನು ಆಯ್ಕೆ ಮಾಡಬೇಕು, ಸಲಹೆ ಮೇರೆಗೆ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ರಾಜಣ್ಣ ಟಾಂಗ್ ಕೊಟ್ಟರು.
ನಾಯಕತ್ವ ಬಿಕ್ಕಟ್ಟಿನ ಮಧ್ಯೆ ಹಳೇ ವಿಚಾರವನ್ನು ಡಿಕೆ ಶಿವಕುಮಾರ್ ಪ್ರಸ್ತಾಪ ಮಾಡಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, ಹಳೇ ವಿಚಾರ ದೇಶಕ್ಕೇ ಗೊತ್ತಿದೆ, ಯಾರೆಲ್ಲಾ ನೆರವಾಗಿದ್ದಾರೆ ಎಂಬುದನ್ನು ನಾನು ಮರೆಯಲ್ಲ ಎಂದರು.
ಹೈಕಮಾಂಡ್ ನಾಯಕರ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ದೆಹಲಿಗೆ ಹೋದಾಗ ಹೈಕಮಾಂಡ್ ನಾಯಕರ ಭೇಟಿ ಸಹಜ. ನಾನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಬೇಕೆಂದು ಆಸೆ ಪಟ್ಟಿಲ್ಲ. ಅದರ ಬಗ್ಗೆ ಸಿಎಂ ಸಿದ್ದರಾಮಯ್ಯನವರ ಜೊತೆ ಮಾತನಾಡಿಲ್ಲ ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬಿಗ್ಬಾಸ್ (Bigg Boss) ಮನೆಯಲ್ಲಿ ಈ ವಾರ ಫ್ಯಾಮಿಲಿ ವಾರ ಆಗಿದೆ. ರಾಶಿಕಾ ಅವರ ಸಹೋದರ ಮತ್ತು ಅವರ ತಾಯಿ ಅವರು ಬಿಗ್ಬಾಸ್ ಮನೆಗೆ ಬಂದಿದ್ದಾರೆ. ರಾಶಿಕಾ ಅವರ ಸಹೋದರನ ಎಂಟ್ರಿ ಸಖತ್ ಆಗಿದೆ. ರಾಶಿಕಾ ಅವರ ತಾಯಿಯೂ ಸಹ ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಮನೆ ಮಂದಿಯ ಜೊತೆಗೆಲ್ಲ ಬೆರೆತು ಮಾತನಾಡಿರುವ ರಾಶಿಕಾ ಅವರ ತಾಯಿ, ರಾಶಿಕಾ ಬಗ್ಗೆ ಕೆಲವು ಅಪರೂಪದ ವಿಷಯಗಳನ್ನು ಮನೆ ಮಂದಿಯ ಮುಂದೆ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…
ಬೆಂಗಳೂರು, ಡಿಸೆಂಬರ್ 23: ರಾಜ್ಯದಲ್ಲಿ ವಾಹನಗಳ ಮಾಲೀಕರು ಪ್ರಸ್ತುತ ಸಾರಿಗೆ ಇಲಾಖೆಯ ವಾಹನ್-4 ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಪರಿವಾಹನ್ ಪೋರ್ಟಲ್‌ನಲ್ಲಿ ವಾಹನಗಳ ಎಮಿಷನ್ ಸರ್ಟಿಫಿಕೇಟ್‌ಗಳು ನವೀಕರಣಗೊಳ್ಳದಿರುವುದು ಪ್ರಮುಖ ಸಮಸ್ಯೆಯಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಅವರು ಧ್ವನಿ ಎತ್ತಿದ್ದು, ಇದು ಹಲವು ತಿಂಗಳಿಂದ ವಾಹನ ಮಾಲೀಕರಿಗೆ ತಲೆನೋವಾಗಿದೆ ಎಂದಿದ್ದಾರೆ. ಈಗಾಗಲೇ ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳು, ಸಚಿವರು ಮತ್ತು ಆಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಗಿನ ಉಪಾಹಾರ ಎಷ್ಟು ಮುಖ್ಯವೋ, ರಾತ್ರಿ ಸೇವನೆ ಮಾಡುವಂತಹ ಆಹಾರವೂ ಕೂಡ ಅಷ್ಟೇ ಮುಖ್ಯವಾಗುತ್ತದೆ. ಹೌದು, ರಾತ್ರಿ ಊಟ (Dinner) ಮಾಡುವಾಗ ಮತ್ತು ಮಾಡಿದ ನಂತರ ಮಾಡುವ ತಪ್ಪುಗಳಿಂದಲೇ ಸಕ್ಕರೆ ಮಟ್ಟ, ಬಿಪಿ, ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ಆ ತಪ್ಪುಗಳು ಯಾವವು, ಇದರಿಂದ ದೇಹಕ್ಕಾಗುವ ತೊಂದರೆಗಳು ಯಾವವು, ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿ ಬದಲಾವಣೆ ಮಾಡಿಕೊಳ್ಳಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಕೆಲವು ಅಧ್ಯಯನಗಳು ಹೇಳುವ ಪ್ರಕಾರ ಜನರು 90% ಆಹಾರವನ್ನು ರಾತ್ರಿ ಸಮಯದಲ್ಲಿಯೇ ಸೇವನೆ ಮಾಡುತ್ತಾರೆ. ಏಕೆಂದರೆ ದಿನವಿಡೀ ಕಾರ್ಯನಿರತರಾಗಿರುವುದರಿಂದ, ರಾತ್ರಿ ಸಮಯದಲ್ಲಿ ಶಾಂತವಾಗಿ ಕುಳಿತು ತಿನ್ನಲು ಇಷ್ಟಪಡುತ್ತಾರೆ. ಅದರಲ್ಲಿಯೂ ಹೆಚ್ಚಿನವರು ಮಸಾಲೆಯುಕ್ತ ಆಹಾರಗಳಾದ ಬಿರಿಯಾನಿ, ಚಪಾತಿ ಈ ರೀತಿಯ ಆಹಾರವನ್ನು ಸೇವನೆ ಮಾಡುತ್ತಾರೆ. ಅಷ್ಟು ಮಾತ್ರವಲ್ಲ, ರಾತ್ರಿ ತಡವಾಗಿ ಊಟ ಮಾಡುತ್ತಾರೆ. ಜೊತೆಗೆ ಊಟ ಮಾಡಿದ ನಂತರ ಸೆಲ್‌ಫೋನ್‌ನಲ್ಲಿ ಸಮಯ ಕಳೆಯುತ್ತಾ ನೇರವಾಗಿ ಮಲಗುತ್ತಾರೆ. ಇವೆಲ್ಲವೂ ಆರೋಗ್ಯಕ್ಕೆ ಹಾನಿಕಾರವಾದಂತಹ ಅಭ್ಯಾಸ. ಸಾಮಾನ್ಯವಾಗಿ ಊಟ ಮತ್ತು ನಿದ್ರೆಯ ನಡುವೆ ಕನಿಷ್ಠ ಮೂರು ಗಂಟೆಗಳ ಅಂತರವಿರಬೇಕಾಗುತ್ತದೆ. ಹಾಗಾಗಿ ಈ ರೀತಿಯ ತಪ್ಪುಗಳನ್ನು ಮಾಡಬೇಡಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ:
ರಾತ್ರಿ ಬಿರಿಯಾನಿ, ಕಬಾಬ್‌ಗಳು ಮತ್ತು ಚಿಕನ್ 65 ನಂತಹ ಕರಿದ, ಡೀಪ್- ಫ್ರೈಡ್ ಆಹಾರಗಳನ್ನು ಸೇವನೆ ಮಾಡುವುದರಿಂದ. ಕೊಬ್ಬು ಶೇಖರಣೆ ಹೆಚ್ಚಾಗುತ್ತದೆ, ಅದರಲ್ಲಿಯೂ ಸ್ಯಾಚುರೇಟೆಡ್ ಕೊಬ್ಬು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯಲ್ಪಡುವ ಟ್ರಾನ್ಸ್ ಕೊಬ್ಬುಗಳು LDL ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ.
ಕರುಳಿನ ಚಲನೆಯ ಸಮಸ್ಯೆಗಳು:
ಸಿರ್ಕಾಡಿಯನ್ ಲಯದ ಪ್ರಕಾರ, ಸೂರ್ಯಾಸ್ತದ ನಂತರ, ದೇಹದ ಅಂಗಗಳು ವಿಶ್ರಾಂತಿ ಪಡೆಯಲು ಪ್ರಾರಂಭಿಸುತ್ತವೆ. ಆ ಸಮಯದಲ್ಲಿ, ರಾತ್ರಿ ಊಟವನ್ನು ತಡವಾಗಿ ಅಥವಾ ಹೆಚ್ಚೆಚ್ಚು ಆಹಾರಗಳ ಸೇವನೆ ಮಾಡುತ್ತಾರೆ. ಇದು ಜೀರ್ಣವಾಗದೆ ಹೊಟ್ಟೆಯಲ್ಲಿ ಉಳಿಯುತ್ತದೆ. ಬಳಿಕ ಜೀರ್ಣಾಂಗ ವ್ಯವಸ್ಥೆಯು ಮರುದಿನ ಬೆಳಿಗ್ಗೆ ಮತ್ತೆ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ರಾತ್ರಿ ಊಟ ಜೀರ್ಣವಾಗುವ ಮೊದಲು, ನಾವು ಉಪಾಹಾರ ಸೇವನೆ ಮಾಡುತ್ತೇವೆ. ಈ ರೀತಿಯಾದಾಗ ಇದು ಅನಿಲ, ಉಬ್ಬುವುದು ಮತ್ತು ಎದೆಯುರಿಯನ್ನು ಉಂಟುಮಾಡುತ್ತದೆ. ಇದು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಕೊಲೊನ್ ಕ್ಯಾನ್ಸರ್‌ಗೆ ಕಾರಣವಾಗಬಹುದು.
ಮಧುಮೇಹದ ಅಪಾಯ:
ಕಳಪೆ ಆಹಾರ ಪದ್ಧತಿ ಮಧುಮೇಹಕ್ಕೆ ಕಾರಣವಾಗುತ್ತದೆ. ರಾತ್ರಿಯಲ್ಲಿ ದೋಸೆ ಅಥವಾ ಚಪಾತಿಯಂತಹ ಕಾರ್ಬೋಹೈಡ್ರೇಟ್ ಭರಿತ ಆಹಾರಗಳ ಸೇವನೆ, ತಡವಾಗಿ ಆಹಾರ ಸೇವನೆ ಮಾಡುವುದು ಅಥವಾ ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕವಿರುವ ಆಹಾರವನ್ನು ಸೇವಿಸುವುದರಿಂದ ರಾತ್ರಿಯಿಡೀ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಬಹುದು. ಇದು ಬೆಳಿಗ್ಗೆ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗುತ್ತದೆ.
ತಡವಾಗಿ ಊಟ ಮಾಡುವುದು ಅಥವಾ ಮಲಗುವುದರಿಂದ ದೇಹದಲ್ಲಿ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಹೆಚ್ಚಾಗುತ್ತದೆ. ಒತ್ತಡ ಹೆಚ್ಚಾದಾಗ ರಕ್ತದೊತ್ತಡ ಹೆಚ್ಚಾಗುತ್ತದೆ. ಇದು ಹೃದಯಕ್ಕೆ ಒಳ್ಳೆಯದಲ್ಲ. ರಾತ್ರಿ ರಕ್ತದೊತ್ತಡದಲ್ಲಿ ಏರಿಳಿತಗಳು ಹೃದಯಾಘಾತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.
ಬೊಜ್ಜು ಸಂಬಂಧಿತ ಸಮಸ್ಯೆಗಳು:
ರಾತ್ರಿ ಸಮಯದಲ್ಲಿ ಬಿರಿಯಾನಿ, ಮಸಾಲೆಯುಕ್ತ ಆಹಾರಗಳು ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಹೆಚ್ಚಿನ ಕ್ಯಾಲೋರಿ ಇರುವ ಆಹಾರಗಳ ಸೇವನೆ ಮಾಡಿದಾಗ ಸ್ವಾಭಾವಿಕವಾಗಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಈ ಅಭ್ಯಾಸ ಮುಂದುವರಿದರೆ, ತೀವ್ರ ಬೊಜ್ಜಿನ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ.
ಈ ದಿನ ಒಂದಲ್ಲ ಒಂದು ಕಾರ್ಯದಲ್ಲಿ ನಿರತರಾಗಿ ಇರುತ್ತೀರಿ ಹಾಗೂ ಅವುಗಳು ಫಲದಾಯಕವಾಗಿಯೂ ಇರುತ್ತವೆ. ಏನಾದರೊಂದು ಕಾರಣಕ್ಕೆ ಬಾಕಿ ಉಳಿದು ಹೋದ ಕೆಲಸಗಳನ್ನು ಮುಗಿಸಲು ಅವಕಾಶ ಸಿಗುತ್ತದೆ. ನೀವು ಈಗಾಗಲೇ ಸಾಲ ನೀಡಿದ್ದಲ್ಲಿ ಅದರ ಹಣ ವಸೂಲಿ ಮಾಡುವುದಕ್ಕೆ ಅಥವಾ ಮುಖ್ಯವಾದ ವ್ಯವಹಾರ ಒಪ್ಪಂದ ಪೂರ್ಣ ಮಾಡಿಕೊಳ್ಳುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ನಿಮ್ಮ ಸಾಮರ್ಥ್ಯ ಗುರುತಿಸಲಾಗುತ್ತದೆ. ಹೆಚ್ಚಿನ ಜವಾಬ್ದಾರಿಗಳನ್ನು ಸಹ ವಹಿಸಬಹುದು. ಆದರೆ ನಿಮಗೆ ಈ ದಿನದ ಅತಿ ಮುಖ್ಯವಾದ ಎಚ್ಚರಿಕೆ ಏನೆಂದರೆ, ಯಾವುದೇ ವಿಚಾರದಲ್ಲಿಯೂ ಕೋಪ ಹಾಗೂ ಆತುರ ನಿಯಂತ್ರಣದಲ್ಲಿರಲಿ. ಕುಟುಂಬದ ಸದಸ್ಯರಿಂದ ನಿಮ್ಮ ನಿರ್ಧಾರಗಳಿಗೆ ಬೆಂಬಲ ಸಿಗುತ್ತದೆ. ರಕ್ತದೊತ್ತಡ ಅಥವಾ ಉರಿಮೂತ್ರದ ಸಮಸ್ಯೆ ಕಂಡುಬರಬಹುದು. ನೀವೇನಾದರೂ ಶಾಂತ ಮನಸ್ಥಿತಿಯಲ್ಲಿ ನಡೆದುಕೊಂಡರೆ ದಿನ ಸಂಪೂರ್ಣ ನಿಮ್ಮ ಪರವಾಗಿರುತ್ತದೆ.
ಕುಟುಂಬದ ಕಡೆಯಿಂದಲೂ ಉದ್ಯೋಗ ಸ್ಥಳದಲ್ಲಿಯೂ ಈ ದಿನ ಜವಾಬ್ದಾರಿಗಳ ಒತ್ತಡ ಹೆಚ್ಚಾಗುತ್ತದೆ. ಕೆಲಸದ ಕಾರಣದಿಂದ ಬೇಸರ ಆಗಬಹುದು. ಹಣಕಾಸಿನಲ್ಲಿ ಸಾಲ, ಕಂತು, ತೆರಿಗೆ ಪಾವತಿ ವಿಚಾರಗಳಿಗೆ ವಿಶೇಷವಾದ ಗಮನ ಕೊಡಿ. ವ್ಯಾಪಾರ- ವ್ಯವಹಾರದಲ್ಲಿ ಪ್ರಗತಿ ನಿಧಾನವಾಗಿರುತ್ತದೆ. ಕುಟುಂಬದ ಬೆಂಬಲ ಇದ್ದರೂ ನಿಮ್ಮ ಆಪ್ತರಿಗೆ ಅಂತ ಸಮಯ ಕೊಡಲು ಸಾಧ್ಯವಾಗದೇ ಅಸಮಾಧಾನಕ್ಕೆ ಕಾರಣ ಆಗಬಹುದು. ಸಂಧಿ ನೋವು ಅಥವಾ ಭುಜದ ನೋವು ಕಾಡಬಹುದು. ಶಿಸ್ತು ಮತ್ತು ಸಮಯಪಾಲನೆ ಇಟ್ಟುಕೊಂಡರೆ ದಿನ ನಿಮ್ಮ ಪಾಲಿಗೆ ಕೆಲವು ಅವಕಾಶಗಳು ಹುಡುಕಿಕೊಂಡು ಬರಲಿವೆ. ನಾನು ಮಾಡಿದ್ದೇ ಸರಿ ಎಂದು ಯಾವುದೇ ವಾದ ಮಾಡುವ ಮುನ್ನ ಅದಕ್ಕೆ ಸಂಬಂಧಿಸಿದಂತೆ ಕೆಲವು ಮುಖ್ಯ ವಿಚಾರಗಳನ್ನು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಸರ್ಕಾರಿ ಕೆಲಸ- ಕಾರ್ಯಗಳಲ್ಲಿ ಅತಿಯಾದ ಒತ್ತಡ ಹಾಕಬೇಡಿ.
ಹೆಚ್ಚು ಮಾತನಾಡದೆ, ಇತರರ ಜತೆಗೆ ಸೇರಿಕೊಳ್ಳದೆ ಏಕಾಂಗಿಯಾಗಿ ಇರುವುದಕ್ಕೆ ಬಯಸುತ್ತೀರಿ. ಈ ದಿನ ಮನಸ್ಸು ಹೆಚ್ಚು ಅಂತರ್ಮುಖಿ ಆಗಿರುತ್ತದೆ. ಒಂಟಿಯಾಗಿಯೇ ಕೆಲಸ- ಕಾರ್ಯಗಳನ್ನು ಮಾಡುವ ಆಸಕ್ತಿ ಹೆಚ್ಚಾಗುತ್ತದೆ. ಸಂಬಂಧಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳನ್ನು ಇವತ್ತಿನ ಮಟ್ಟಿಗೆ ಮುಂದೂಡುವುದು ಒಳಿತು. ಹಣಕಾಸಿನ ವಿಚಾರದಲ್ಲಿ ಷೇರು- ಮ್ಯೂಚುವಲ್ ಫಂಡ್ ಈ ರೀತಿ ಹೊಸ ಹೂಡಿಕೆ ಬೇಡ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ ಕಡಿಮೆ ಆಗಬಹುದು. ದೇಹದಲ್ಲಿ ನೀರಿನ ಅಂಶದ ಕೊರತೆ ಅಥವಾ ಮೂತ್ರಕೋಶಕ್ಕೆ ಸಂಬಂಧಿಸಿದ ಕೆಲವು ತೊಂದರೆಗಳನ್ನು ಅನುಭವಿಸುತ್ತೀರಿ. ಹಣದ ವಿಚಾರವಾಗಿ ಯಾರಿಗೆ ಮಾತು ನೀಡುವ ಮುಂಚಿತವಾಗಿ ಅದು ಸಾಧ್ಯವಾ- ಇಲ್ಲವಾ ಎಂಬ ಎಚ್ಚರಿಕೆ ಅಗತ್ಯ. ಅನಗತ್ಯ ಚರ್ಚೆಗಳಿಂದ ದೂರ ಉಳಿದರೆ ಮನಸ್ಸಿಗೆ ಶಾಂತಿ ಸಿಗುತ್ತದೆ. ದಿನವನ್ನು ಹೆಚ್ಚು ಧಾವಂತ ಇಲ್ಲದೆ ಕಳೆದರೆ ಒತ್ತಡ ಕಡಿಮೆಯಾಗುತ್ತದೆ.
ಈ ದಿನ ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳು ಮುಖ್ಯ ಸ್ಥಾನ ಪಡೆದುಕೊಳ್ಳುತ್ತವೆ. ಮನೆ ಖರ್ಚು, ಅಲಂಕಾರ ಅಥವಾ ದುರಸ್ತಿ ಬಗ್ಗೆ ಚರ್ಚೆ ನಡೆಯಬಹುದು. ದಿನಸಿ ಪದಾರ್ಥಗಳ ಖರೀದಿಯಲ್ಲಿ ಖರ್ಚು ಹೆಚ್ಚಾಗಲಿದೆ. ಸಾವಯವ ಉತ್ಪನ್ನಗಳ ಖರೀದಿಗಾಗಿಯೋ ಅಥವಾ ಒಣಹಣ್ಣುಗಳ ಖರೀದಿಗೋ ಹೆಚ್ಚು ಖರ್ಚು ಬರಲಿದೆ. ಇನ್ನು ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ಮುಂದಿನ ಆರು ತಿಂಗಳ ಒಳಗೆ ಬಡ್ತಿ ಸಿಗುವ ಬಗ್ಗೆ ಸೂಚನೆ ಸಿಗಲಿದೆ. ಭಾವುಕತೆಗೆ ಒಳಗಾಗಿ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ಸಂಬಂಧಗಳಲ್ಲಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಯುತ್ತದೆ. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಚರ್ಮ, ಕಣ್ಣು ಅಥವಾ ಹಾರ್ಮೋನ್ ಸಮಸ್ಯೆಗಳು ಕಾಡಬಹುದು. ದೈಹಿಕವಾದ ವಿಶ್ರಾಂತಿ ಮತ್ತು ಆಹಾರ ಸಮತೋಲನ ಅಗತ್ಯ. ಕುಟುಂಬಕ್ಕೆ ಸಮಯ ಕೊಟ್ಟರೆ ದಿನ ಸುಖಕರವಾಗುತ್ತದೆ.
ಇಡೀ ದಿನ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ಬಿಡುವಿಲ್ಲದಷ್ಟು ಕೆಲಸಗಳಲ್ಲಿ ತೊಡಗಿರುತ್ತೀರಿ. ಫೋನ್ ಕರೆಗಳು, ಸಂದೇಶಗಳು, ಭೇಟಿಗಳು ಜಾಸ್ತಿ ಆಗುತ್ತವೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಹೊಸ ಅವಕಾಶದ ಮಾತು ಬರಬಹುದು, ಆದರೆ ತಕ್ಷಣ ಒಪ್ಪಿಕೊಳ್ಳಬೇಡಿ. ಪ್ರಭಾವಿಗಳ ಸಂಪರ್ಕದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಇನ್ನು ಒಂದು ಕಡೆ ಹಣ ಬರುತ್ತದೆ, ಆದರೆ ಖರ್ಚು ಸಹ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಯಾಣ ಮಾಡುವಾಗ ಸಮಯ ಮತ್ತು ಹಣ ಎರಡಕ್ಕೂ ಲೆಕ್ಕವಿರಲಿ. ಆರೋಗ್ಯದ ದೃಷ್ಟಿಯಿಂದ ನಿದ್ರೆಗೆ ಕೊರತೆ ಅಥವಾ ತಲೆನೋವು ಕಾಡಬಹುದು. ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಹೂಡಿಕೆ ಮಾಡಬೇಕು ಎಂದೇನಾದರೂ ಇದ್ದಲ್ಲಿ ಆತುರಕ್ಕಿಂತ ವಿವೇಕ ಬಳಸಿದರೆ ಲಾಭದಾಯಕವಾಗುತ್ತದೆ. ಜತೆಗೆ ಫೈನಾನ್ಷಿಯಲ್ ಅಡ್ವೈಸರ್ ಗಳ ಸಲಹೆ- ಮಾರ್ಗದರ್ಶನ ಪಡೆದುಕೊಳ್ಳಲು ಆದ್ಯತೆಯನ್ನು ನೀಡಿ.
ಪ್ರಯಾಣದಲ್ಲಿ, ಉದ್ಯೋಗಕ್ಕೆ ಸಂಬಂಧಿಸಿದ ವಿಚಾರದಲ್ಲಿ ಏಕಾಏಕಿ ಸಿಟ್ಟು ಹೊರ ಹಾಕುವುದಕ್ಕೆ ಹೋಗಬೇಡಿ. ಈ ದಿನ ತಾಳ್ಮೆ ಬಹಳ ಅಗತ್ಯ. ಸರ್ಕಾರಿ ಕೆಲಸ, ದಾಖಲೆ ಅಥವಾ ಬ್ಯಾಂಕ್ ಸಂಬಂಧಿಸಿದ ವಿಚಾರಗಳಲ್ಲಿ ವಿಳಂಬ ಆಗಬಹುದು. ಹಣಕಾಸಿನ ವಿಷಯದಲ್ಲಿ ಸಣ್ಣ ಲಾಭದ ಸೂಚನೆ ಇದ್ದರೂ ಅದನ್ನು ಎಲ್ಲರಿಗೂ ಹೇಳಿಕೊಳ್ಳಬೇಡಿ. ನಿಮ್ಮಲ್ಲಿ ಕೆಲವರು ಚಿನ್ನ- ಬೆಳ್ಳಿ ಇತರ ಬೆಲೆ ಬಾಳುವ ಲೋಹದಲ್ಲಿ ಹೂಡಿಕೆ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಕೆಲಸ ನಿಧಾನವಾಗಿ ಸಾಗುತ್ತದೆ, ಆದರೆ ನಿಮ್ಮ ಕಡೆಯಿಂದ ತಪ್ಪು ಕಡಿಮೆ ಇರುತ್ತದೆ. ಬೆನ್ನು ಅಥವಾ ಕುತ್ತಿಗೆ ನೋವು ಕಾಡಬಹುದು, ಹೆಚ್ಚೆಚ್ಚು ವಾಹನ ಚಾಲನೆಯನ್ನು ತಪ್ಪಿಸಿ. ಕುಟುಂಬದವರ ಜೊತೆ ಸಮಯ ಕಳೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕ್ರೆಡಿಟ್ ಕಾರ್ಡ್ ಸಾಲ ಮಾಡದಂತೆ ಜಾಗ್ರತೆ ವಹಿಸಿ.
ಈ ದಿನ ಖರ್ಚಿನ ವಿಚಾರವೇ ಹೆಚ್ಚು ಯೋಚನೆಗೆ ಕಾರಣ ಆಗುತ್ತದೆ. ಕೆಲವು ಅನಿವಾರ್ಯ ವೆಚ್ಚಗಳನ್ನು ತಪ್ಪಿಸಲು ಸಾಧ್ಯವೇ ಆಗುವುದಿಲ್ಲ. ಉದ್ಯೋಗ ಅಥವಾ ವ್ಯವಹಾರದಲ್ಲಿ ನಿಮ್ಮ ಸಲಹೆಗೆ ಮೌಲ್ಯ ಸಿಗುತ್ತದೆ, ಆದರೆ ತಕ್ಷಣ ಫಲವನ್ನು ನಿರೀಕ್ಷಿಸಬೇಡಿ. ಹಳೆಯ ಸಂಪರ್ಕಗಳು ನಿಮಗೆ ಸಹಾಯ ಮಾಡಬಹುದು. ಈ ಹಿಂದೆ ನಿಮ್ಮ ಜೊತೆಗೆ ಕೆಲಸ ಮಾಡಿದ್ದಂಥ ವ್ಯಕ್ತಿಗಳೇ ಕೆಲವು ಆಕರ್ಷಕ ಆಫರ್ ಗಳನ್ನು ತರಲಿದ್ದಾರೆ. ನಿಮ್ಮ ಸ್ನೇಹಿತರು- ಸಂಬಂಧಿಕರ ಕುಟುಂಬದಲ್ಲಿನ ವಿಚಾರಗಳಲ್ಲಿ ಆಗಿರುವ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಮಧ್ಯಸ್ಥಿಕೆ ವಹಿಸಬೇಕಾದ ಸಂದರ್ಭ ಬರುತ್ತದೆ. ಆರೋಗ್ಯದ ದೃಷ್ಟಿಯಿಂದ ನಿಮ್ಮ ಆತ್ಮವಿಶ್ವಾಸ ಕಡಿಮೆ ಆಗುವಂಥ ಬೆಳವಣಿಗೆ ಆಗಬಹುದು. ಹೊಟ್ಟೆ ಅಥವಾ ತೂಕಕ್ಕೆ ಸಂಬಂಧಿಸಿದ ತೊಂದರೆ ಕಾಣಿಸಬಹುದು. ಹಣವನ್ನು ಹಿಡಿತದಲ್ಲಿ ಖರ್ಚು ಮಾಡಿದಲ್ಲಿ ಈ ದಿನ ನಿಮ್ಮ ನಿಯಂತ್ರಣದಲ್ಲಿಯೇ ಇರುತ್ತದೆ.
ಈ ದಿನ ನಿಮ್ಮ ಮನಸ್ಥಿತಿ ಹೇಗಿರುತ್ತದೋ ಅದು ನೀವು ಮಾಡುವ ಕೆಲಸದ ಮೇಲೆ ಪ್ರಭಾವ ಬೀರುತ್ತದೆ. ಒಂದು ವೇಳೆ ಬೇಡ ಎನಿಸಿ, ನಿಮ್ಮ ಮನಸ್ಸು ಒಪ್ಪದ ಕೆಲಸಗಳನ್ನೂ ಮಾಡಬೇಕಾದ ಅನಿವಾರ್ಯ ಎದುರಾಗಲಿದೆ. ವ್ಯಾಪಾರ- ವ್ಯವಹಾರಕ್ಕೆ ಸಂಬಂಧಿಸಿದಂತೆ ಬರಬೇಕಾದ ಹಣಕಾಸಿನ ವಿಷಯದಲ್ಲಿ ದೊಡ್ಡ ಬದಲಾವಣೆ ನಿರೀಕ್ಷೆ ಮಾಡಬಹುದು. ಒಂದು ವೇಳೆ ಬಾಕಿ ಹಣ ವಸೂಲಿಗೆ ಪ್ರಯತ್ನವನ್ನು ಪಟ್ಟರೆ ಫಲ ಸಿಗಲಿದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಲಹೆ ಹಾಗೂ ಅನುಭವದ ಮಾತುಗಳನ್ನು ಕೇಳಿಸಿಕೊಳ್ಳುವುದರಿಂದ ಉಪಯುಕ್ತವಾಗುತ್ತದೆ. ಕುಟುಂಬದಲ್ಲಿ ಹಿರಿಯರ ಸಲಹೆ ಕೇಳುವುದು ಒಳಿತು. ಸಂಬಂಧಗಳಲ್ಲಿ ಅತಿಯಾದ ಸಂಶಯ ಬೇಡ. ನಿದ್ರೆ ಸರಿಯಾಗಿ ಆಗದಿದ್ದರೆ ದಣಿವು ಹೆಚ್ಚಾಗುತ್ತದೆ. ಈ ದಿನ ಪ್ರೀತಿ- ಪ್ರೇಮದ ವಿಚಾರದಲ್ಲಿ ನಿಧಾನವಾಗಿ, ತಾಳ್ಮೆಯಿಂದ ವರ್ತಿಸಿದರೆ ನೆಮ್ಮದಿ ಇರುವುದಕ್ಕೆ ಸಾಧ್ಯವಾಗುತ್ತದೆ, ಜೊತೆಗೆ ಸಂಬಂಧಗಳಿಗೂ ಹಾನಿ ಆಗುವುದಿಲ್ಲ.
ಈ ದಿನ ಕೆಲಸದ ವಿಚಾರದಲ್ಲಿ ನೀವು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲೇ ಬೇಕು ಎಂಬ ಬೇಸಂದರ್ಭ ಬರುತ್ತದೆ. ಮುಂದೂಡುತ್ತಾ ಬಂದಿದ್ದ ಕೆಲವು ಜವಾಬ್ದಾರಿಗಳನ್ನು ಇಂದೇ ಮುಗಿಸಬೇಕಾಗುತ್ತದೆ. ಗಡುವಿನೊಳಗೆ ಉತ್ತರ ಹೇಳಬೇಕಾದ ಸಂಗತಿಗಳನ್ನು ಆದ್ಯತೆ ಮೇಲೆ ಮಾಡುತ್ತಾ ಬನ್ನಿ. ಇನ್ನು ವ್ಯವಹಾರದ ವಿಷಯಕ್ಕೆ ಬಂದಲ್ಲಿ ಲಾಭಕ್ಕಿಂತ ಸ್ಥಿರತೆ ಮುಖ್ಯವಾಗುತ್ತದೆ. ಹೊಸ ಸಾಲ ಅಥವಾ ಹೂಡಿಕೆ ನಿರ್ಧಾರವನ್ನು ಈ ದಿನದ ಮಟ್ಟಿಗೆ ಕೈ ಬಿಡುವುದು ಒಳಿತು. ಉದ್ಯೋಗದಲ್ಲಿ ಮೇಲಧಿಕಾರಿಗಳ ಜೊತೆ ನಿಮ್ಮ ಭವಿಷ್ಯದ ಬೆಳವಣಿಗೆ ಬಗ್ಗೆ ಮಾತುಕತೆ ನಡೆಯಬಹುದು; ಮಾತಿನಲ್ಲಿ ಸಂಯಮ ಇರಲಿ. ಕುಟುಂಬದ ಖರ್ಚು ಅಥವಾ ಆರೋಗ್ಯ ವಿಚಾರದಲ್ಲಿ ಸ್ವಲ್ಪ ಒತ್ತಡ ಬರುತ್ತದೆ. ಗಂಟಲು, ನಾಲಗೆ ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ತೊಂದರೆ ಕಾಣಿಸಬಹುದು. ಆಹಾರ ಸೇವನೆಯಲ್ಲಿ ಸ್ವಚ್ಛತೆಗೆ ಹಾಗೂ ಸಮಯ ಪಾಲನೆಗೆ ಗಮನವನ್ನು ನೀಡಿ.