ಪ್ರೇಯಸಿ ಮದ್ವೆ ಮಂಟಪಕ್ಕೆ ಬರುವಷ್ಟರಲ್ಲೇ ಬೇರೊಂದು ಯುವತಿಗೆ ತಾಳಿಕಟ್ಟಿದ್ದ ಪ್ರಿಯಕರ ಅರೆಸ್ಟ್ – Kannada News | Man Arrested For Cheating His Girlfriend And Marrying Other Woman In Chikkamagaluru
ಚಿಕ್ಕಮಗಳೂರು, (ಡಿಸೆಂಬರ್ 23): ಪ್ರೇಯಸಿಗೆ ವಂಚಿಸಿ ಬೇರೆ ಯುವತಿ ಜತೆ ಮದುವೆಯಾಗಿದ್ದ ಶರತ್ ಎನ್ನುವಾತನ್ನು ಪೊಲೀಸರು ಬಂಧಿಸಿದ್ದು, ಸದ್ಯ ಕೋರ್ಟ್ ನವವಿವಾಹಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಚಿಕ್ಕಮಗಳೂರಿನ (Chikkamagaluru) ಶರತ್ ಎನ್ನುವಾತ ಯುವತಿಯನ್ನು ಪ್ರೀತಿಸಿದ್ದ. ಅಲ್ಲದೇ ಮದುವೆಯಾಗುವುದಾಗಿ ಆಕೆಯನ್ನು ಲೈಂಗಿಕವಾಗಿ ಸಹ ಬಳಿಸಿಕೊಂಡಿದ್ದ. ಆದ್ರೆ, ಏಕಾಏಕಿ ಶರತ್ ಇದೇ ಡಿಸೆಂಬರ್ 14ರಂದು ಚಿಕ್ಕಮಗಳೂರಿನ ದೊಡ್ಡೇಗೌಡ ಕಲ್ಯಾಣಮಂಟಪದಲ್ಲಿ ಬೇರೊಂದು ಯುವತಿ ಜತೆ ಮದುವೆಯಾಗಿದ್ದ. ಪ್ರಿಯಕರನ ಮದುವೆ ವಿಚಾರ ತಿಳಿಯುತ್ತಿದ್ದಂತೆಯೇ ಪ್ರೇಯಸಿ ಮದುವೆ ಮಂಟಪಕ್ಕೆ ಬಂದು ವಿರೋಧ ವ್ಯಕ್ತಪಡಿಸಿದ್ದಳು. ಆದ್ರೆ,…