Category Archives: Blog

Your blog category

ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ – Kannada News | Bengaluru to Get 50 km Elevated Corridor; DK Shivakumar Announces

ಬೆಂಗಳೂರು, ಡಿಸೆಂಬರ್​ 22: ದೇಶದಲ್ಲೇ ಪ್ರಥಮ ಬಾರಿಗೆ 50 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar)​​ ಹೇಳಿದ್ದಾರೆ. ಮೆಟ್ರೋ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ತಿಂಗಳು ಸುಮಾರು 100 ಕಿ.ಮೀ ಉದ್ದದ ಮೆಟ್ರೋ ಮೂರನೇ ಹಂತದ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗುವುದು. ಈ ಯೋಜನೆಯಲ್ಲಿ ಎಲಿವೇಟೆಡ್ ಕಾರಿಡಾರ್ ಸಹ ಸೇರಿದೆ. ವಿಶೇಷವಾಗಿ, ಒಟ್ಟು 50 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಾಣವು ಈ ಯೋಜನೆಯ ಭಾಗವಾಗಿದೆ ಎಂದರು.

ಈ ಹಿಂದೆ 6 ಕಿ.ಮೀ ಎಲಿವೇಟೆಡ್ ಮಾರ್ಗ ನಿರ್ಮಿಸಲಾಗಿದ್ದು, ಈಗ 42 ರಿಂದ 43 ಕಿ.ಮೀ ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾಗಲಿದೆ. ಇಷ್ಟು ದೊಡ್ಡ ಮೊತ್ತದ ಎಲಿವೇಟೆಡ್ ಕಾರಿಡಾರ್ ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ. ಈ ಯೋಜನೆಗಳು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದರ ಜೊತೆಗೆ, ರೈಲು ಮತ್ತು ಮೆಟ್ರೋ ಪ್ರಯಾಣಿಕರಿಗೂ ಅನುಕೂಲ ಕಲ್ಪಿಸುವ ಗುರಿ ಹೊಂದಿವೆ ಎಂದು ಡಿ.ಕೆ. ಶಿವಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: ಡಿಕೆಶಿ ಪರ ಹಿಂದುಳಿದ ಮಠಾಧೀಶರಿಂದ ಬ್ಯಾಟಿಂಗ್; ಹೈಕಮಾಂಡ್​ಗೆ ಪತ್ರ ಬರೆದು ಪೋಸ್ಟ್

2027ರ ವೇಳೆಗೆ ಮತ್ತೊಂದು 38 ಕಿ.ಮೀ ಮಾರ್ಗ ಪೂರ್ಣಗೊಳ್ಳಲಿದ್ದು, ಇದು ವಿಮಾನ ನಿಲ್ದಾಣ ರಸ್ತೆಯನ್ನು ಸಹ ಒಳಗೊಂಡಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಒಟ್ಟು 175 ಕಿ.ಮೀ ಮೆಟ್ರೋ ಚಾಲನೆಗೆ ಬರಲಿದೆ. ಇದಲ್ಲದೆ, ತಾವರೆಕೆರೆ, ವಾಗ್ಮಿ ರೋಡ್, ಬಿಡದಿ, ನೆಲಮಂಗಲದಂತಹ ಪ್ರದೇಶಗಳಿಗೆ ಮೆಟ್ರೋ ವಿಸ್ತರಣೆಯ ಯೋಜನೆಗಳಿದ್ದು, ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಹುಬ್ಬಳ್ಳಿ ಮರ್ಯಾದೆ ಹತ್ಯೆ: ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ – Kannada News | Hubballi Honor Killing Case: Husband Vivekananda Reacts after funeral of His Wife Manya

ಹುಬ್ಬಳ್ಳಿ, (ಡಿಸೆಂಬರ್ 22): ಹುಬ್ಬಳ್ಳಿ ನಡೆದ ಮರ್ಯಾದೆ ಹತ್ಯೆ (Hubballi Honor Killing) ಇಡೀ ರಾಜ್ಯವನ್ನೇ ಬಿಚ್ಚಿಬೀಳಿಸಿದೆ. 22 ವರ್ಷ ವಯಸ್ಸಿನ ಮಾನ್ಯ ಹಾಗೂ ವಿವೇಕಾನಂದ ಇಬ್ಬರೂ ಧಾರವಾಡ (Dharwad) ಜಿಲ್ಲೆಯ ಹುಬ್ಬಳ್ಳಿ (Hubballi) ತಾಲೂಕಿನ ಇನಾಂ ವೀರಾಪುರ ಗ್ರಾಮದವರು. ಯುವತಿ ಲಿಂಗಾಯತ ಸಮಾಜಕ್ಕೆ ಸೇರಿದ್ರೆ.. ಯುವಕ ದಲಿತನಾಗಿದ್ದ. ಡಿಗ್ರಿ ಓದುವಾಗಲೇ ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು. ಮನೆಯವರ ಬೆದರಿಕೆಗೂ ಬಗ್ಗದಷ್ಟು ಆಳವಾಗಿ ಇಬ್ಬರ ನಡುವೆ ಪ್ರೀತಿ ಬೇರೂರಿತ್ತು. ಮಾನ್ಯ, ವಿವೇಕಾನಂದನ ಬಿಟ್ಟು ಬದುಕಲ್ಲ ಅಂತಾ ಹಠ ಹಿಡಿದ್ದಳು. ವಿವೇಕಾನಂದನಿಗೆ ನನ್ನ ನೀನು ಮದುವೆಯಾಗದೇ ಇದ್ರೆ ಆತ್ಮಹತ್ಯೆ ಮಾಡಿಕೊಳ್ತೀನಿ ಅಂತ ಹಠಕ್ಕೆ ಬಿದ್ದಾಗ, ವಿವೇಕಾನಂದ ಜುಲೈ 19ರಂದು ಹುಬ್ಬಳ್ಳಿಯಲ್ಲಿ ಮಾನ್ಯಳನ್ನ ರಿಜಿಸ್ಟರ್ ಮ್ಯಾರೇಜ್ ಆಗಿದ್ದ. ಆದ್ರೆ, ಇದೀಗ ಹೆತ್ತ ತಂದೆಯೇ ಮಗಳ ಬದುಕಿಗೆ ಮುಳ್ಳಾಗಿದ್ದಾನೆ.

ಹೌದು..ನಿನ್ನೆ(ಡಿಸೆಂಬರ್ 21) ಸಂಜೆ ಮಾನ್ಯಾಳ ತಂದೆ ಪ್ರಕಾಶ್ ಗೌಡ ಪಾಟೀಲ್ ಸಂಬಂಧಿಕರಾದ ವೀರನಗೌಡ ಪಾಟೀಲ್, ಮತ್ತು ಅರುಣ್ ಗೌಡ ಪಾಟೀಲ್ ಸೇರಿ, ವಿವೇಕಾನಂದನ ಮನೆ ಮೇಲೆ ದಾಳಿ ಮಾಡಿದ್ದು, ವಿವೇಕಾನಂದ ಹಾಗೂ ಅವನ ತಾಯಿ ಜಯಶ್ರೀ ಹಾಗೂ ತಂದೆ ಸುಭಾಷ್ ಮೇಲೆ ಹಲ್ಲೆ ಮಾಡಿದ್ದಾರೆ. ಹಾಗೇ ಮಗಳು 6 ತಿಂಗಳ ಗರ್ಭಿಣಿ ಅನ್ನೋದನ್ನು ನೋಡದ ರಾಕ್ಷಸ ತಂದೆ ಪ್ರಕಾಶ್ ಗೌಡ, ಕಬ್ಬಿಣದ ಪೈಪ್ ಹಾಗೂ ಗುದ್ದಲಿಯಿಂದ ಮಗಳ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಮಾನ್ಯ ಸಾವನ್ನಪ್ಪಿದ್ದು, ಇಂದು (ಡಿಸೆಂಬರ್ 22) ಅಂತ್ಯಕ್ರಿಯೆ ಸಹ ನಡೆಯಿತು.

ಇದನ್ನೂ ನೋಡಿ: ಹುಬ್ಬಳ್ಳಿ ಮರ್ಯಾದೆ ಹತ್ಯೆ: ಕೊನೆ ಸಲ ಮಗಳ ಮುಖ ನೋಡಲು ಬಾರದ ಪೋಷಕರು, ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ

ಪತಿ ವಿವೇಕಾನಂದನೇ ಅಂತ್ಯಕ್ರಿಯೆಯ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿ ಅಂತಿಮವಾಗಿ ಪತ್ನಿ ಮಾನ್ಯಗಳ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾನೆ. ಬಳಿಕ ಟಿವಿ9ಗೆ ಜೊತೆ ಮಾತನಾಡಿರುವ ವಿವೇಕಾನಂದ, ಘಟನೆಯ ಭೀಕರತೆಯನ್ನು ಬಿಚ್ಚಿಟ್ಟು ಕಣ್ಣೀರಿಟ್ಟಿದ್ದಾನೆ. ಹಾಗಾದ್ರೆ, ಪ್ರೀತಿಸಿ ಮದುವೆ ಬಳಿಕ ಏನೆಲ್ಲಾ ಕಷ್ಟಗಳನ್ನ ಅನುವಿಸಿದ ಎನ್ನುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಒಂದು ಸಂಸ್ಥೆ ಹೇಗೆ ಕಾರ್ಯನಿರ್ವಹಿಸಬೇಕು? ಕಾರ್ಪೊರೇಟ್ ಲೋಕಕ್ಕೆ ಮಾದರಿಯಾದ ಡಿಆರ್​ಡಿಒ – Kannada News | DRDO shows how research and development, deep tech, intellectual properties help save big money

ಭಾರತದ ರಕ್ಷಣಾ ಇಲಾಖೆಯ ಆರ್ ಅಂಡ್ ಡಿ ಅಂಗವಾಗಿರುವ ಡಿಆರ್​ಡಿಒ (DRDO) ಐದು ವರ್ಷದಲ್ಲಿ ಭಾರತದ ವೆಚ್ಚವನ್ನು 2.64 ಲಕ್ಷ ಕೋಟಿ ರೂನಷ್ಟು ಉಳಿಸಿದೆ ಎನ್ನುವ ಒಂದು ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಸಂಸದೀಯ ಸಮಿತಿಯೊಂದು ಇತ್ತೀಚೆಗೆ ಈ ವಿಚಾರವನ್ನು ಬಹಿರಂಗಪಡಿಸಿದೆ. ಭಾರತದಲ್ಲಿ ದೇಶೀಯವಾಗಿ ರೂಪಿತವಾಗುತ್ತಿರುವ ಅನೇಕ ಶಸ್ತ್ರಾಸ್ತ್ರ ತಂತ್ರಜ್ಞಾನ ಹಾಗೂ ಮಿಲಿಟರಿ ಉತ್ಪನ್ನಗಳಲ್ಲಿ ಡಿಆರ್​ಡಿಒ ಹೆಸರು ಬಹುತೇಕ ಇದ್ದೇ ಇರುತ್ತದೆ. ಬಹಳ ಕ್ಷಮತೆ ಹಾಗೂ ಹೊಸತನಕ್ಕೆ ಉದಾಹರಣೆಯಾಗಿ ಡಿಆರ್​ಡಿಒ ಇದೆ.

ಆರ್ ಅಂಡ್ ಎಷ್ಟು ಮುಖ್ಯ ಎಂದು ತೋರಿಸಿಕೊಟ್ಟಿದೆ ಡಿಆರ್​ಡಿಒ

ಡಿಆರ್​ಡಿಒ ಅಥವಾ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ ದೇಶೀಯವಾಗಿ ಮಿಲಿಟರಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಡಿಆರ್​ಡಿಒ ಕಾರ್ಯಚಟುವಟಿಕೆ ತೀರಾ ಗರಿಗೆದರಿದೆ. ಈ ಹಿಂದೆ ಶಸ್ತ್ರಾಸ್ತ್ರ ತಯಾರಿಕೆಗೆ ಬೇಕಾದ ತಂತ್ರಜ್ಞಾನದ ಕೊರತೆ ಇತ್ತು. ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳದೇ ವಿಧಿ ಇರಲಿಲ್ಲ. ಆದರೆ, ಡಿಆರ್​ಡಿಒ ಅನೇಕ ತಂತ್ರಜ್ಞಾನಗಳನ್ನು ತಾನೇ ಸ್ವಂತವಾಗಿ ಆವಿಷ್ಕರಿಸಿದೆ. ಇದರ ಪರಿಣಾಮವಾಗಿ ಇಂದು ಹಲವಾರು ಶಸ್ತ್ರಾಸ್ತ್ರಗಳು ಭಾರತದಲ್ಲೇ ತಯಾರಾಗುತ್ತಿವೆ. ಇದರಿಂದ ಭಾರತಕ್ಕೆ ಶಸ್ತ್ರಾಸ್ತ್ರ ಆಮದು ವೆಚ್ಚ ಗಣನೀಯವಾಗಿ ತಗ್ಗಿದೆ.

ಹತ್ತು ಹದಿನೈದು ವರ್ಷಗಳ ಹಿಂದೆ ಭಾರತವು ಶಸ್ತ್ರಾಸ್​ತ್ರಗಳ ಆಮದು ಅತಿಹೆಚ್ಚು ಮಾಡುತ್ತಿತ್ತು. ಈಗ ವಿಶ್ವದ ಅತಿದೊಡ್ಡ ಮಿಲಿಟರಿ ರಫ್ತುದಾರ ದೇಶಗಳ ಸಾಲಿಗೆ ಸೇರ್ಪಡೆಯಾಗುತ್ತಿದೆ.

ಇದನ್ನೂ ಓದಿ: ನ್ಯೂಜಿಲೆಂಡ್ ಜೊತೆಗೂ ಟ್ರೇಡ್ ಡೀಲ್ ಮುಗಿಸಿದ ಭಾರತ; ಈ ವರ್ಷದಲ್ಲೇ ಭಾರತಕ್ಕಿದು 3ನೇ ಎಫ್​ಟಿಎ

ಡಿಆರ್​ಡಿಒ ಅಭಿವೃದ್ಧಿಪಡಿಸಿದ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳಿಗೆ ಲೆಕ್ಕ ಇಲ್ಲ. ತೇಜಸ್ ಎಲ್​ಸಿಎ, ಅಗ್ನಿ ಕ್ಷಿಪಣಿ, ಪೃಥ್ವಿ ಕ್ಷಿಪಣಿ, ಬ್ರಹ್ಮೋಸ್ ಕ್ಷಿಪಣಿ, ಆಕಾಶ್, ಅಸ್ತ್ರ ಕ್ಷಿಪಣಿಗಳು, ಪಿನಾಕಾ ರಾಕೆಟ್, ಆ್ಯಂಟಿ ಟ್ಯಾಂಕ್ ಸಿಸ್ಟಂ, ಹೈಪರ್​ಸಾನಿಕ್ ಕ್ಷಿಪಣಿ, ಹಲವು ರಾಡಾರ್ ಸಿಸ್ಟಂಗಳು, ಎಲೆಕ್ಟ್ರಾನಿಕ್ ವಾರ್​ಫೇರ್ ಟೆಕ್ನಾಲಜಿಗಳ ಆವಿಷ್ಕಾರದಲ್ಲಿ ಡಿಆರ್​ಡಿಒದ ರಿಸರ್ಚ್​ನ ಪಾತ್ರ ಬಹಳಷ್ಟಿದೆ.

ಡಿಆರ್​ಡಿಒ ಬಳಿ ಹಲವು ಇಂಟೆಲೆಕ್ಷುಯಲ್ ಪ್ರಾಪರ್ಟಿ ರೈಟ್, ಡೀಪ್ ಟೆಕ್​ಗಳು ಇವೆ. ಡಿಆರ್​ಡಿಒ ಸ್ಥಳೀಯವಾಗಿ ಎಂಎಸ್​ಎಂಇಗಳಿಂದ ಬಿಡಿಭಾಗಗಳನ್ನು ತಯಾರಿಸಿಕೊಂಡು ತರಿಸಿಕೊಳ್ಳುತ್ತದೆ. ಹೀಗಾಗಿ, ಸ್ಥಿರವಾದ ಮತ್ತು ಸುಲಭವಾದ ಸಪ್ಪೈ ಚೈನ್ ವ್ಯವಸ್ಥೆ ಇದೆ. ಸಣ್ಣ ಉದ್ದಿಮೆಗಳಿಗೆ ಅದು ತರಬೇತಿಯನ್ನೂ ನೀಡುತ್ತದೆ. ತಾನು ಆವಿಷ್ಕರಿಸಿದ ತಂತ್ರಜ್ಞಾನವನ್ನು ವಿವಿಧ ಉದ್ದಿಮೆಗಳಿಗೆ ಕೊಟ್ಟು ಆ ಮೂಲಕ ಉತ್ಪನ್ನಗಳ ತಯಾರಿಕೆಯ ಪ್ರಮಾಣ ಹೆಚ್ಚಾಗುವಂತೆ ಮಾಡುತ್ತದೆ. ಉದ್ಯಮ ವಲಯವೂ ಬೆಳೆಯುತ್ತದೆ.

ಇದನ್ನೂ ಓದಿ: ಬೆಂಗಳೂರಿನ ಐಫೋನ್ ಫ್ಯಾಕ್ಟರಿಯಲ್ಲಿ ಕ್ಷಿಪ್ರವೇಗದಲ್ಲಿ 30,000 ಉದ್ಯೋಗಿಗಳ ನೇಮಕ; ಭಾರತದಲ್ಲಿ ಸಿಕ್ಕಾಪಟ್ಟೆ ಆಗುತ್ತಿದೆ ಐಟಿ ಹೈರಿಂಗ್

ಕಾರ್ಪೊರೇಟ್ ಕಂಪನಿಗಳಿಗೆ ನಿದರ್ಶನ…

ಡಿಆರ್​ಡಿಒದ ಈ ಕಾರ್ಯವೈಖರಿಯು ಕಾರ್ಪೊರೇಟ್ ಕ್ಷೇತ್ರಕ್ಕೆ ಮಾದರಿಯಾಗಬಹುದು. ಹೆಚ್ಚಿನ ಕಾರ್ಪೊರೇಟ್ ಕಂಪನಿಗಳು ಆರ್ ಅಂಡ್ ಡಿಗೆ ಒತ್ತು ಕೊಡುತ್ತಿಲ್ಲ. ಇದರಿಂದ ಟೆಕ್ನಾಲಜಿ ಆಮದು ವೆಚ್ಚ ಹೆಚ್ಚುತ್ತದೆ. ಕಂಪನಿಗಳ ಅಂತಿಮ ಲಾಭದ ಮಾರ್ಜಿನ್ ಕಡಿಮೆ ಆಗುತ್ತದೆ. ಈ ಕಂಪನಿಗಳು ರಿಸರ್ಚ್​ಗೆ ಒಂದಷ್ಟು ವೆಚ್ಚ ಮಾಡಿದರೆ ಅದರಿಂದ ಉತ್ತಮ ತಂತ್ರಜ್ಞಾನ ಆವಿಷ್ಕರಿಸಿ ಜಾಗತಿಕವಾಗಿ ಪೈಪೋಟಿ ನಡೆಸಲು ಸಾಧ್ಯವಾಗುತ್ತದೆ ಎಂಬುದು ತಜ್ಞರ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಲು ಮನೆಯಲ್ಲಿ ಈ ಗಿಡಗಳನ್ನು ನೆಡಿ – Kannada News | Planting these plants can help you get rid of the menace of lizards

ಸೊಳ್ಳೆ, ಹಲ್ಲಿ (lizards), ಜಿರಳೆ, ಇಲಿ ಇವೆಲ್ಲವೂ ಪ್ರತಿ ಮನೆಗೂ ಕರೆಯದೆ ಬರುವ ಅತಿಥಿಗಳು ಅಂತಾನೇ ಹೇಳಬಹುದು. ಒಮ್ಮೆ ಮನೆಯೊಳಗೆ ನುಸುಳಿದರೆ ಸಾಕು ಇವು ಸಿಕ್ಕಾಪಟ್ಟೆ ಕಿರಿಕಿರಿ ಉಂಟು ಮಾಡುತ್ತವೆ. ಇವುಗಳನ್ನು ಓಡಿಸುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ಗೋಡೆಯ ಮೇಲೆ ಓಡಾಡುವ ಹಲ್ಲಿಗಳು ಯಾವಾಗ ಮೈ ಮೇಲೆ ಬೀಳುತ್ತವೋ, ತಯಾರಿಸಿಟ್ಟ ಆಹಾರದ ಮೇಲೆ ಬೀಳುತ್ತವೋ ಎಂಬ ಸಣ್ಣ ಭಯ ಎಲ್ಲರಲ್ಲೂ ಇದ್ದೇ ಇರುತ್ತದೆ.  ಅದಕ್ಕಾಗಿ ಇವುಗಳನ್ನು ಓಡಿಸಲು ಹಲವರು ಅನೇಕಾರು ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ನೀವು ಸಹ ಇದೇ ರೀತಿ ಹಲ್ಲಿಗಳ ಕಾಟದಿಂದ ಬೇಸತ್ತಿದ್ದೀರಾ? ಹಾಗಿದ್ರೆ ಈ ಮನೆಯಲ್ಲಿ ಈ ಗಿಡಗಳನ್ನು ನೆಡಿ. ಈ ಗಿಡಗಳು ವಿಶಿಷ್ಟವಾದ ವಾಸನೆಯನ್ನು ಹೊಂದಿದ್ದು, ಇವು ಹಲ್ಲಿಗಳನ್ನು ನೈಸರ್ಗಿಕವಾಗಿ ದೂರವಿಡಲು ಸಹಾಯ ಮಾಡುತ್ತವೆ.

ಹಲ್ಲಿಗಳನ್ನು ಓಡಿಸಲು ಈ ಗಿಡಗಳನ್ನು ಮನೆಯಲ್ಲಿ ನೆಡಿ:

ಲ್ಯಾವೆಂಡರ್‌ ಸಸ್ಯ: ಲ್ಯಾವೆಂಡರ್‌ ಬಲವಾದ ವಾಸನೆ ಹಾಗೂ ಲಿನೂಲ್ ಎಂಬ ಸಂಯುಕ್ತವನ್ನು ಹೊಂದಿದ್ದು, ಇದು ಪ್ರಬಲವಾದ ನೈಸರ್ಗಿಕ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಈ ವಾಸನೆಯನ್ನು ಹಲ್ಲಿಗಳು, ಇತರ ಕೀಟಗಳು ಇಷ್ಟಪಡುವುದಿಲ್ಲ. ಹಾಗಾಗಿ ನೀವು ಕಿಟಕಿಗಳ ಬಳಿ, ಮನೆಯ ಬಾಲ್ಕನಿ, ಪ್ರವೇಶದ್ವಾರದ ಬಳಿ ಇಡಬಹುದು. ಇದರ ಸುವಾಸನೆಯು ಹಲ್ಲಿಗಳನ್ನು ದೂರವಿಡುವುದಲ್ಲದೆ ನಿಮ್ಮ ಮನೆಗೆ ತಾಜಾ ಸುವಾಸನೆಯನ್ನು ನೀಡುತ್ತದೆ.

ತುಳಸಿ ಗಿಡ: ತುಳಸಿಯ ಕಟುವಾದ ಮತ್ತು ವಿಶಿಷ್ಟವಾದ ವಾಸನೆಯು ಹಲ್ಲಿಗಳಿಗೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ಇದು ಹಲ್ಲಿಗಳನ್ನು ಮಾತ್ರವಲ್ಲದೆ, ಸೊಳ್ಳೆಗಳು ಮತ್ತು ಇತರೆ ಕೀಟಗಳನ್ನು ಮನೆಯಿಂದ ದೂರವಿಡುತ್ತದೆ. ಅಡುಗೆಮನೆಯ ಕಿಟಕಿಗಳು, ಬಾಲ್ಕನಿಗಳು, ಪ್ರವೇಶ ದ್ವಾರದ ಬಳಿ  ಕುಂಡಗಳಲ್ಲಿ ತುಳಸಿ ಗಿಡವನ್ನು ನೆಡಿ. ಈ ಸಸ್ಯವು ನೈಸರ್ಗಿಕವಾಗಿ ಮನೆಯನ್ನು ರಕ್ಷಿಸುವುದಲ್ಲದೆ ಪರಿಸರವನ್ನು ಶುದ್ಧೀಕರಿಸುತ್ತದೆ.

ಪುದೀನಾ ಗಿಡ: ಪುದೀನಾದಲ್ಲಿರುವ ಬಲವಾದ ಮೆಂಥಾಲ್ ವಾಸನೆಯು ಹಲ್ಲಿಗಳ ಸೂಕ್ಷ್ಮ ಇಂದ್ರಿಯಗಳಿಗೆ ಅತ್ಯಂತ ಅಹಿತಕರವಾಗಿದೆ. ಹಾಗಾಗಿ ಮನೆಯ ಆರ್ದ್ರ ಪ್ರದೇಶಗಳಾದ ಸ್ನಾನಗೃಹದ ಕಿಟಕಿ ಅಥವಾ ಅಡುಗೆಮನೆಯ ಬಳಿ ಪುದೀನಾ ಗಿಡಗಳನ್ನು ಕುಂಡದಲ್ಲಿ ನೆಡಿ. ಹೆಚ್ಚುವರಿಯಾಗಿ, ನೀವು ಕೆಲವು ಹನಿ ಪುದೀನಾ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ ಹಲ್ಲಿಗಳು ಓಡಾಡುವ ಸ್ಥಳಗಳಲ್ಲಿ ಸ್ಪ್ರೇ ಮಾಡಬಹುದು.

ರೋಸ್ಮೆರಿ ಗಿಡ: ರೋಸ್ಮರಿಯು ಕಟುವಾದ ವಾಸನೆಯನ್ನು ಹಲ್ಲಿಗಳು ಮಾತ್ರವಲ್ಲದೆ ನೊಣಗಳು, ಸೊಳ್ಳೆಗಳು ಸಹ ಇಷ್ಟಪಡುವುದಿಲ್ಲ.  ಹಾಗಾಗಿ ಈ ಹಲ್ಲಿಗಳನ್ನು ಪರಿಣಾಮಕಾರಿಯಾಗಿ ಓಡಿಸಲು ನೀವು ರೋಸ್ಮೆರಿ ಗಿಡಗಳನ್ನು ಕುಂಡದಲ್ಲಿ ನೆಟ್ಟು  ಮನೆಯ ಬಾಲ್ಕನಿ, ಕಿಟಕಿಗಳ ಬಳಿ ಇಡಬಹುದು.

ಇದನ್ನೂ ಓದಿ: ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರಬಾರದೆಂದರೆ ಸರಳ ಸಲಹೆಯನ್ನು ಪಾಲಿಸಿ

ಚೆಂಡು ಹೂವಿನ ಗಿಡ: ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ, ಚೆಂಡು ಹೂಗಳ ಪರಿಮಳವು ಕೀಟಗಳು ಮತ್ತು ಹಲ್ಲಿಗಳನ್ನು ಸಹ ಹಿಮ್ಮೆಟ್ಟಿಸುತ್ತದೆ. ಹಾಗಾಗಿ ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಲು ಮನೆ ಸುತ್ತಲೂ ಚೆಂಡು ಹೂವಿನ ಗಿಡ ನೆಡಿ.

ಲೆಮನ್‌ಗ್ರಾಸ್: ಲೆಮನ್‌ಗ್ರಾಸ್ ಸಿಟ್ರೊನೆಲ್ಲಾ ಎಣ್ಣೆಯನ್ನು ಹೊಂದಿರುತ್ತದೆ, ಇದು ಪ್ರಬಲವಾದ ನೈಸರ್ಗಿಕ ಕೀಟ ನಿವಾರಕವಾಗಿದೆ. ಇದರ ಬಲವಾದ, ಸಿಟ್ರಸ್ ಪರಿಮಳವು ಹಲ್ಲಿಗಳಿಗೆ ತುಂಬಾ ಕಿರಿಕಿರಿಯನ್ನು ಉಂಟುಮಾಡುತ್ತವೆ. ಹಾಗಾಗಿ ನೀವು ಮನೆ ಬಳಿ ಈ ಗಿಡಗಳನ್ನು ನೆಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಂಗ್ಲಾದೇಶದಲ್ಲಿ ಉಸ್ಮಾನ್ ಹಾದಿ ಹತ್ಯೆ ಬೆನ್ನಲ್ಲೇ ಮತ್ತೊಬ್ಬ ಯುವ ನಾಯಕನ ತಲೆಗೆ ಗುಂಡೇಟು – Kannada News | Bangladesh violence Another youth leader Motaleb Sikder shot in head days after Osman Hadis killing

ಢಾಕಾ, ಡಿಸೆಂಬರ್ 22: ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಅಶಾಂತಿ ಹುಟ್ಟುಹಾಕಿದ ಷರೀಫ್ ಉಸ್ಮಾನ್ ಬಿನ್ ಹಾದಿ ಹತ್ಯೆಯ ಕೆಲವು ದಿನಗಳ ನಂತರ ಇಂದು ಬಾಂಗ್ಲಾದೇಶದಲ್ಲಿ (Bangladesh) ಮತ್ತೊಬ್ಬ ಯುವ ನಾಯಕನ ಮೇಲೆ ಗುಂಡು ಹಾರಿಸಲಾಗಿದೆ. ಯುವ ನಾಯಕನನ್ನು ಬಾಂಗ್ಲಾದೇಶದ ರಾಷ್ಟ್ರೀಯ ನಾಗರಿಕ ಪಕ್ಷದ ಖುಲ್ನಾ ವಿಭಾಗೀಯ ಮುಖ್ಯಸ್ಥ ಮೋತಲೆಬ್ ಸಿಕ್ದರ್ ಎಂದು ಗುರುತಿಸಲಾಗಿದೆ. ಅವರ ತಲೆಗೆ ಗುಂಡು ಹಾರಿಸಲಾಗಿದೆ.

ಮೋತಲೆಬ್ ಸಿಕ್ದರ್ ಅವರ ತಲೆಯ ಎಡಭಾಗಕ್ಕೆ ಗುಂಡು ಹಾರಿಸಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರು ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಎನ್‌ಸಿಪಿಯ ಕಾರ್ಮಿಕರ ಸಂಘಟನೆಯ ನಾಯಕ 42 ವರ್ಷದ ಮೊಹಮ್ಮದ್ ಮೋತಲೆಬ್ ಸಿಕ್ದರ್ ಅವರ ಮೇಲೆ ಇಂದು ಮಧ್ಯಾಹ್ನ 12.15ರ ಸುಮಾರಿಗೆ ಖುಲ್ನಾದ ಸೋನದಂಗ ಪ್ರದೇಶದ ಮನೆಯೊಂದರಲ್ಲಿ ಗುಂಡು ಹಾರಿಸಲಾಯಿತು.

ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ವ್ಯಕ್ತಿಯ ಹತ್ಯೆ; ಯೂನಸ್ ಸರ್ಕಾರದಿಂದ 7 ಜನರ ಬಂಧನ

32 ವರ್ಷದ ಹಾದಿ ಇಂಕಿಲಾಬ್ ಮೊಂಚೊ ಸ್ಥಾಪಕರಾಗಿದ್ದು, ಅವರು ಪದಚ್ಯುತ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಶೇಖ್ ಹಸೀನಾ ಅವರ ಸರ್ಕಾರದ ಪತನಕ್ಕೆ ಕಾರಣವಾಯಿತು. ಫೆಬ್ರವರಿ 12ರ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ಲಾನ್ ಮಾಡಿದ್ದ ಹಾದಿಗೆ ಈ ತಿಂಗಳ ಆರಂಭದಲ್ಲಿ ಢಾಕಾದಲ್ಲಿ ಪ್ರಚಾರ ನಡೆಸುತ್ತಿದ್ದಾಗ ತಲೆಗೆ ಗುಂಡು ಹಾರಿಸಲಾಗಿತ್ತು. ತಕ್ಷಣ ಹಾದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಅವರನ್ನು ಸಿಂಗಾಪುರಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ಕಳೆದ ವಾರ ನಿಧನರಾದರು. ಅವರ ಸಾವು ಬಾಂಗ್ಲಾದೇಶದಾದ್ಯಂತ ಭಾರಿ ಪ್ರತಿಭಟನೆಗಳನ್ನು ಹುಟ್ಟುಹಾಕಿತು. ಹಾದಿಯ ಹಂತಕರು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂದು ಅವರ ಬೆಂಬಲಿಗರು ಆರೋಪಿಸಿ, ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು. ಆದರೆ, ಈ ಆರೋಪವನ್ನು ಭಾರತ ತಳ್ಳಿಹಾಕಿತ್ತು.

ಇದನ್ನೂ ಓದಿ: Video: ವಿಪಕ್ಷ ನಾಯಕ ಉಸ್ಮಾನ್ ಹಾದಿ ಹತ್ಯೆ, ಮತ್ತೆ ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ

ಹಾದಿ ಅವರ ಅಂತ್ಯಕ್ರಿಯೆಯನ್ನು ಶನಿವಾರ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಸಮ್ಮುಖದಲ್ಲಿ ಬಿಗಿ ಭದ್ರತೆಯ ನಡುವೆ ನಡೆಸಲಾಯಿತು. ಹಾದಿಯ ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಯೂನಸ್ ಭರವಸೆ ನೀಡಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಬಹಿರಂಗವಾಗಿ ಇಂಗ್ಲೆಂಡ್‌ ತಂಡದ ಮಾನ ಕಳೆದ ರೋಹಿತ್ ಶರ್ಮಾ – Kannada News | Rohit Sharma Mocks England’s Ashes Failure: Test Struggles in Australia

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡುವೆ ನಡೆಯುತ್ತಿರುವ ಆಶಸ್ ಸರಣಿಯಲ್ಲಿ ಇಂಗ್ಲೆಂಡ್‌ ತಂಡ 3-0 ಅಂತರದ ಹಿನ್ನಡೆ ಅನುಭವಿಸಿದೆ. ಆಸೀಸ್ ನೆಲದಲ್ಲಿ ಆತಿಥೇಯರ ದಾಳಿಗೆ ನಲುಗಿ ಹೋಗಿರುವ ಇಂಗ್ಲೆಂಡ್‌ ಆಡಿರುವ 3 ಪಂದ್ಯಗಳಲ್ಲೂ ಏಕಪಕ್ಷೀಯ ಸೋಲು ಅನುಭವಿಸಿದೆ. ಹೀಗಾಗಿ ಟೆಸ್ಟ್ ಕ್ರಿಕೆಟ್ ದಿಕ್ಕು ಬದಲಿಸಲು ಹೊರಟಿದ್ದ ಇಂಗ್ಲೆಂಡ್‌ ದಿಕ್ಕಾಪಾಲಾಗಿರುವುದು ವಿಶ್ವ ಕ್ರಿಕೆಟ್ ಮುಂದೆ ನಗೆಪಾಟಲಿಗೀಡಾಗಿದೆ. ಇದೀಗ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕೂಡ ಇಂಗ್ಲೆಂಡ್‌ ತಂಡವನ್ನು ಬಹಿರಂಗವಾಗಯೇ ಅಣಕಿಸಿದ್ದಾರೆ.

ರೋಹಿತ್ ಶರ್ಮಾ ಇತ್ತೀಚೆಗೆ ಗುರುಗ್ರಾಮದಲ್ಲಿ ನಡೆದ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರೋಹಿತ್, ತಮ್ಮ ಅನುಭವಗಳು ಮತ್ತು ತಮ್ಮ ವೃತ್ತಿಜೀವನದುದ್ದಕ್ಕೂ ಎದುರಿಸಿದ ಸವಾಲುಗಳನ್ನು ಹಂಚಿಕೊಂಡರು. ಹಾಗೆಯೇ ಆಸ್ಟ್ರೇಲಿಯಾದಲ್ಲಿ ಆಡಿದ ಅನುಭವದ ಬಗ್ಗೆಯೂ ಮಾತನಾಡಿದ ರೋಹಿತ್, ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಅಣಕಿಸಿದರು.

ಆಸ್ಟ್ರೇಲಿಯಾದಲ್ಲಿ ಆಡಿದ ಅನುಭವಗಳ ಮಾತನಾಡಿದ ರೋಹಿತ್ ಬ್ರಿಸ್ಬೇನ್‌ನಲ್ಲಿ ಟೀಂ ಇಂಡಿಯಾದ ಟೆಸ್ಟ್ ಗೆಲುವಿನ ಬಗ್ಗೆ ಉಲ್ಲೇಖಿಸುತ್ತಾ, ‘ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಡುವುದು, ವಿಶೇಷವಾಗಿ ಟೆಸ್ಟ್ ಕ್ರಿಕೆಟ್ ಆಡುವುದು ತುಂಬಾ ಕಷ್ಟ. ಟೆಸ್ಟ್ ಕ್ರಿಕೆಟ್ ಸ್ವತಃ ತುಂಬಾ ಸವಾಲಿನದ್ದಾಗಿದೆ, ಏಕೆಂದರೆ ನೀವು ಐದು ದಿನವೂ ಗಮನಹರಿಸಬೇಕು. ಅದರಲ್ಲೂ ಆಸ್ಟ್ರೇಲಿಯಾದಲ್ಲಿ ಆಡುವುದು ಅತ್ಯಂತ ಕಷ್ಟ. ನೀವು ಬೇಕಿದ್ದರೆ ಈ ಬಗ್ಗೆ ಇಂಗ್ಲೆಂಡ್ ಬಳಿ ಕೇಳಿ ತಿಳಿದುಕೊಳ್ಳಬಹುದು. ಆದ್ದರಿಂದ, ಆ ಪಂದ್ಯ ಮತ್ತು ಆಸ್ಟ್ರೇಲಿಯಾದಲ್ಲಿ ಸರಣಿಯನ್ನು ಗೆಲ್ಲುವುದು ನಮಗೆಲ್ಲರಿಗೂ ದೊಡ್ಡ ಸಾಧನೆಯಾಗಿದೆ. ಅದರಿಂದ ನಾವು ಬಹಳಷ್ಟು ಕಲಿತಿದ್ದೇವೆ’ ಎಂದಿದ್ದಾರೆ.

ವಾಸ್ತವವಾಗಿ ರೋಹಿತ್ ನೀಡಿದ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎನ್ನಬಹುದು. ಏಕೆಂದರೆ ತನ್ನ ಬಾಝ್ ಬಾಲ್ ಕ್ರಿಕೆಟ್ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಸಂಚಲನ ಮೂಡಿಸಿದ್ದ ಇಂಗ್ಲೆಂಡ್‌, ಟೆಸ್ಟ್ ಮಾದರಿಯಲ್ಲಿ ಹೇಳ ಹೆಸರಿಲ್ಲದಂತೆ ಕಣ್ಮರೆಯಾಗಿದೆ. ಬಲಿಷ್ಠ ತಂಡಗಳೆದುರು ಇಂಗ್ಲೆಂಡ್‌ ಆಟ ನಡೆಯುತ್ತಿಲ್ಲ. ಅದರಲ್ಲೂ ಪ್ರತಿಷ್ಠಿತ ಆಶಸ್ ಸರಣಿಯಲ್ಲಿ ಇಂಗ್ಲೆಂಡ್‌ ಪ್ರದರ್ಶನವೂ ವಿಶೇಷವಾಗಿಲ್ಲ.
ಕಳೆದ ಏಳೆಂಟು ವರ್ಷಗಳಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾದಲ್ಲಿ ಐದು ಟೆಸ್ಟ್ ಪಂದ್ಯಗಳು ಮತ್ತು ಎರಡು ಸರಣಿಗಳನ್ನು ಗೆದ್ದಿದ್ದರೂ, 2010-11 ರಿಂದ ಇಂಗ್ಲೆಂಡ್, ಆಸ್ಟ್ರೇಲಿಯಾದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಈ ಅವಧಿಯಲ್ಲಿ ಇಂಗ್ಲೆಂಡ್‌ ತಂಡ ಸತತ 17 ಟೆಸ್ಟ್ ಸೋಲುಗಳನ್ನು ಅನುಭವಿಸಿರುವುದು ಅವರ ಕಳಪೆ ಆಟಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಬ್ಬಳ್ಳಿ ಮರ್ಯಾದೆ ಹತ್ಯೆ: ಕೊನೆ ಸಲ ಮಗಳ ಮುಖ ನೋಡಲು ಬಾರದ ಪೋಷಕರು, ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ – Kannada News | Hubballi Honor Killing Case: Husband Vivekananda make all funeral process of Manya

ಹುಬ್ಬಳ್ಳಿ, (ಡಿಸೆಂಬರ್ 22): ಹುಬ್ಬಳ್ಳಿಯ (Hubballi) ಮಾನ್ಯ ಹಾಗೂ ವಿವೇಕಾನಂದ ಇವರಿಬ್ಬರು ಜಾತಿ ಗಡಿ ಮೀರಿ ಪ್ರೀತಿ ಮಾಡಿದ್ರು.. ಹೆತ್ತವರನ್ನ ಎದುರುಹಾಕಿಕೊಂಡು ಮದುವೆಯನ್ನೂ ಮಾಡಿಕೊಂಡಿದ್ರು. ಮದುವೆಯಾಗಿ 7 ತಿಂಗಳು ಕಳೆದಿತ್ತು. ಯುವತಿ ಸಹ 6 ತಿಂಗಳ ಗರ್ಭಿಣಿಯಾಗಿದ್ಳು. ಆದ್ರೆ ಜಾತಿ ಅಮಲು ತಲೆಗೇರಿಸಿಕೊಂಡಿದ್ದ ಯುವತಿ ತಂದೆ, ಗರ್ಭಿಣಿ ಮಗಳನ್ನೇ ಬಡಿದುಕೊಂದಿದ್ದಾನೆ. ಈ ಮರ್ಯಾದೆಗೇಡು ಹತ್ಯೆಗೆ ಹುಬ್ಬಳ್ಳಿ( Hubballi Honor Killing) ಬೆಚ್ಚಿಬಿದ್ದಿದೆ.

ಬಿಗಿ ಪೊಲೀಸ್ ಬಂದೋಬಸ್ತ್​​​ ನಲ್ಲೇ ಇನಾಮ್‌ ವೀರಾಪುರ ಗ್ರಾಮದ ಹಳ್ಳದಲ್ಲಿ ಮಾನ್ಯಾಳ ಅಂತ್ಯಕ್ರಿಯೆ ಆಗಿದ್ದು, ಹುಟ್ಟಿಸಿ ಬೆಳೆಸಿದ್ದ ಮಗಳ ಅಂತಿಮದರ್ಶನಕ್ಕೂ ಮಾನ್ಯಾ ಪೋಷಕರು ಬಂದಿಲ್ಲ. ಹೀಗಾಗಿ ಹತ್ಯೆಯಾದ ವಿವೇಕಾನಂದ ಕುಟುಂಬಸ್ಥರೇ ಮಾನ್ಯಾಳ ಶವಸಂಸ್ಕಾರ ನೆರವೇರಿಸಿದ್ದಾರೆ. ಪತಿ ವಿವೇಕಾನಂದ ದೊಡ್ಮನಿ ಮಾನ್ಯಾಳ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಗೋಳಾಡಿದ್ದು, ಪತಿ ವಿವೇಕಾನಂದ ಮಾನ್ಯಾಳನ್ನು ಪ್ರೀತಿಸಿ ಕೊನೆಯವರೆಗೂ ಕೈಬಿಟ್ಟಿಲ್ಲ. ಈ ಸನ್ನಿವೇಶ ನೆರೆದವರ ಕಣ್ಣಲ್ಲಿ ನೀರು ತರಿಸಿದೆ.

ಇದನ್ನೂ ಓದಿ: ದಲಿತ ಯುವಕನ ಪ್ರೀತಿಸಿ ಮದುವೆಯಾಗಿದ್ದಕ್ಕೆ ಗರ್ಭಿಣಿ ಮಗಳ ಕ್ರೂರವಾಗಿ ಹತ್ಯೆಗೈದ ತಂದೆ: ಪೈಶಾಚಿಕ ಕೃತ್ಯಕ್ಕೆ ಬೆಚ್ಚಿಬಿದ್ದ ಧಾರವಾಡ

Source link

ಮುಸ್ಲಿಮರಿಗೆ ‘ವಂದೇ ಮಾತರಂ’ ಹಾಡು ನೋವುಂಟು ಮಾಡುತ್ತದೆ ಎಂದು ಬದಲಾವಣೆ ಮಾಡಿದ್ರು: ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ, ಡಿ.22: ವಂದೇ ಮಾತರಂಗೆ 150 ವರ್ಷಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಈ ಹಿಂದೆ ಚರ್ಚೆಯಾಗಿತ್ತು. ಇದೀಗ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಈ ಬಗ್ಗೆ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಧಾನಸಭೆಯಲ್ಲಿ ಮಾತನಾಡಿದ್ದು, ಕಾಂಗ್ರೆಸ್​​​ ವಿರುದ್ಧ ಟೀಕೆ ಮಾಡಿದ್ದಾರೆ. ಜಿನ್ನಾ ಕಾಂಗ್ರೆಸ್‌ನಲ್ಲಿ ಇರುವವರೆಗೂ, ವಂದೇ ಮಾತರಂ ನಿರ್ಣಾಯಕ ವಿವಾದದ ಅಂಶವಾಗಿರಲಿಲ್ಲ. ಅವರು ಕಾಂಗ್ರೆಸ್ ತೊರೆದ ತಕ್ಷಣ, ಜಿನ್ನಾ ಅದನ್ನು ಮುಸ್ಲಿಂ ಲೀಗ್‌ನ ಸಾಧನವನ್ನಾಗಿ ಮಾಡಿಕೊಂಡರು ಮತ್ತು ಉದ್ದೇಶಪೂರ್ವಕವಾಗಿ ಹಾಡಿಗೆ ಕೋಮು ಬಣ್ಣವನ್ನು ನೀಡಿದರು. ಹಾಡು ಹಾಗೆಯೇ ಉಳಿಯಿತು, ಆದರೆ ಕಾರ್ಯಸೂಚಿ ಬದಲಾಯಿತು ಎಂದು ಹೇಳಿದರು. ಅಕ್ಟೋಬರ್ 15, 1937 ರಂದು, ಲಕ್ನೋದಲ್ಲಿ, ಮೊಹಮ್ಮದ್ ಅಲಿ ಜಿನ್ನಾ ವಂದೇ ಮಾತರಂ ವಿರುದ್ಧ ಧ್ವನಿ ಎತ್ತಿದರು, ಮತ್ತು ಆ ಸಮಯದಲ್ಲಿ, ಪಂಡಿತ್ ನೆಹರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅಕ್ಟೋಬರ್ 20, 1937ರಂದು, ನೆಹರು ಅವರು ಸುಭಾಷ್ ಚಂದ್ರ ಬೋಸ್‌ಗೆ ಪತ್ರ ಬರೆದು, ವಂದೇ ಮಾತರಂ ಹಾಡಿ ಮುಸ್ಲಿಮರಿಗೆ ನೋವು ಆಗುವ ವಿಚಾರಗಳು ಇದೆ ಎಂದು ಹೇಳಿದ್ದಾರೆ. ಅಕ್ಟೋಬರ್ 26, 1937 ರಂದು, ಕಾಂಗ್ರೆಸ್ ಹಾಡಿನ ಭಾಗಗಳನ್ನು ತೆಗೆದುಹಾಕಲು ನಿರ್ಧರಿಸಿತು. ಇದನ್ನು ಸದ್ಭಾವನೆಯ ಸೂಚಕ ಎಂದು ಕರೆಯಲಾಗುತ್ತಿತ್ತು, ಆದರೆ ವಾಸ್ತವದಲ್ಲಿ, ಇದು ಸಮಾಧಾನದ ಮೊದಲ ಅಧಿಕೃತ ನಿದರ್ಶನವಾಗಿತ್ತು. ಅಂದು ‘ದೇಶಭಕ್ತರು’ ಇದರ ವಿರುದ್ಧ ಪ್ರತಿಭಟಿಸಿದರು. ಹಾಡನ್ನು ಬದಲಾಯಿಸಲು ಜಿನ್ನಾ ಬೇಡಿಕೆಗಳನ್ನು ಎತ್ತಿದ್ದು, ಆ ಸಮಯದಲ್ಲಿ, ಕಾಂಗ್ರೆಸ್ ಇದರ ಬಗ್ಗೆ ಮೌನವಾಗಿತ್ತು, ಪರಿಣಾಮವಾಗಿ ಅವರಿಗೆ ಈ ಮೌನವೇ ಧೈರ್ಯ ತುಂಬಿತು. ಇದು ಭಾರತದ ವಿಭಜನೆಗೆ ಅಡಿಪಾಯ ಹಾಕಿತು ಎಂದು ಹೇಳಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಚಿನ್ನದ ಬೆಲೆ 13,500 ರೂನಿಂದ 31,500 ರೂಗೆ ಏರುತ್ತಾ? ಎಡ್ ಯಾರ್ದೆನಿ ಭವಿಷ್ಯ – Kannada News | Gold price prediction by Ed Yardeni, says the rates might cross 10,000 USD per ounce in 4 years

ನವದೆಹಲಿ, ಡಿಸೆಂಬರ್ 22: ಚಿನ್ನದ ಬೆಲೆ (gold rate) ಕಳೆದ ಒಂದು ವರ್ಷದಲ್ಲಿ ಅಸಾಮಾನ್ಯ ರೀತಿಯಲ್ಲಿ ಓಡಿದೆ. ಈ ಭರ್ಜರಿ ಓಟ ಹೀಗೆ ಮುಂದುವರಿಯುತ್ತಾ ಎನ್ನುವುದು ಹಲವರಿಗೆ ಇರುವ ಪ್ರಶ್ನೆಯಾಗಿದೆ. ಯಾರ್ದೇನಿ ರಿಸರ್ಚ್ ಸಂಸ್ಥೆಯ ಮುಖ್ಯಸ್ಥರಾದ ಎಡ್ ಯಾರ್ದೇನಿ ಅವರ ಪ್ರಕಾರ ಚಿನ್ನದ ಬೆಲೆ 2029ರಲ್ಲಿ ಗ್ರಾಮ್​ಗೆ 31,000 ರೂ ದಾಟಿ ಹೋಗಬಹುದು.

ಸದ್ಯ ಅಮೆರಿಕದ ನ್ಯೂಯಾರ್ಕ್​ನ ಕಮಾಡಿಟಿ ಎಕ್ಸ್​ಚೇಂಜ್​ನಲ್ಲಿ (ಸರಕು ವಿನಿಮಯ ಕೇಂದ್ರ) ಚಿನ್ನದ ಬೆಲೆ ಒಂದು ಔನ್ಸ್​ಗೆ 4,400 ಡಾಲರ್ ಇದೆ. 2029ರಲ್ಲಿ ಇದರ ಬೆಲೆ ಒಂದು ಔನ್ಸ್​ಗೆ 10,000 ಡಾಲರ್​ಗೆ ಏರಬಹುದು ಎಂಬುದ ಎಡ್ ಯಾರ್ಡೇನಿ ಅವರು ಮಾಡಿರುವ ಅಂದಾಜು.

ಒಂದು ಔನ್ಸ್ ಎಂದರೆ 28.3495 ಗ್ರಾಮ್. ಒಂದು ಔನ್ಸ್​ಗೆ 10,000 ಡಾಲರ್ ಎಂದರೆ, ಒಂದು ಗ್ರಾಮ್​ಗೆ ಸುಮಾರು 352 ಡಾಲರ್ ಆಗುತ್ತದೆ. ಭಾರತೀಯ ಕರೆನ್ಸಿಯಲ್ಲಿ 31,740 ರೂ ಆಗುತ್ತದೆ. ಎಡ್ ಯಾರ್ದೆನಿ ಭವಿಷ್ಯ ನಿಜವಾದಲ್ಲಿ ಮುಂದಿನ ಮೂರು ವರ್ಷದಲ್ಲಿ ಒಂದು ಗ್ರಾಮ್ ಚಿನ್ನದ ಬೆಲೆ 31,000 ರೂ ಅಥವಾ 32,000 ರೂ ದಾಟಿ ಹೋಗಬಹುದು. ಭಾರತದಲ್ಲಿ ಸದ್ಯ ಒಂದು ಗ್ರಾಮ್ ಚಿನ್ನದ ಬೆಲ 13,500 ರೂನಷ್ಟಿದೆ. ಎರಡೂವರೆ ಪಟ್ಟು ಬೆಲೆ ಅಧಿಕಗೊಳ್ಳಬಹುದು.

ಇದನ್ನೂ ಓದಿ: Gold Rate Today Bangalore: ಚಿನ್ನದ ಬೆಲೆ 10 ಗ್ರಾಮ್​ಗೆ 1,000 ರೂ ಏರಿಕೆ; ಇಲ್ಲಿದೆ ದರಪಟ್ಟಿ

2025ರಲ್ಲಿ ಚಿನ್ನದ ಬೆಲೆ ಶೇ. 67ರಷ್ಟು ಹೆಚ್ಚಿದೆ. ಇತ್ತೀಚಿನ ಕೆಲ ವರ್ಷಗಳಿಂದ ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ಒಳ್ಳೆಯ ಲಾಭ ಸಿಗುತ್ತಾ ಬಂದಿದೆ.

ಭಾರತದ ಷೇರು ಮಾರುಕಟ್ಟೆ ಬಗ್ಗೆ ಯಾರ್ದೆನಿ ನಿರೀಕ್ಷೆ

ಮಾರುಕಟ್ಟೆ ವಿಶ್ಲೇಷಕರಾಗಿರುವ ಎಡ್ ಯಾರ್ದೆನಿ ಅವರು ಭಾರತದ ಈಕ್ವಿಟಿ ಮಾರುಕಟ್ಟೆ ಬಗ್ಗೆ ಬಹಳ ಸಕಾರಾತ್ಮಕವಾಗಿದ್ದಾರೆ. ಹಲವು ವರ್ಷಗಳಿಂದ ಇಲ್ಲಿಯ ಮಾರುಕಟ್ಟೆ ಬಹಳ ಪ್ರಬಲವಾಗಿ ಬೆಳೆದಿದೆ. 2026ರಲ್ಲಿ ಇದು ಸ್ಥಿರಗೊಳ್ಳುವ ವರ್ಷ ಎಂಬುದು ಅವರ ಭಾವನೆ.

ಅಮೆರಿಕದೊಂದಿಗೆ ಟ್ರೇಡ್ ಮಾಡಿಕೊಳ್ಳಲು ಯಶಸ್ವಿಯಾಗಿಬಿಟ್ಟರೆ ಭಾರತದ ಈಕ್ವಿಟಿ ಮಾರುಕಟ್ಟೆ ಹೊಸ ಎತ್ತರಕ್ಕೆ ಹೋಗುತ್ತದೆ ಎಂದು ಹೇಳುವ ಅವರು, ಭಾರತ ಹಾಗೂ ಚೀನಾ ಈ ಎರಡೂ ದೇಶಗಳ ಮಾರುಕಟ್ಟೆಗಳು ಉತ್ತಮ ಅವಕಾಶ ಕೊಡುತ್ತವೆ ಎಂದಿದ್ದಾರೆ. ಹಾಗೆಯೇ, ಅವರು ಆ ಎರಡು ದೇಶಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕೆಂದರೆ ಭಾರತಕ್ಕೇ ಆದ್ಯತೆ ಕೊಡುತ್ತಾರಂತೆ.

ಇದನ್ನೂ ಓದಿ: ಬೆಂಗಳೂರಿನ ಐಫೋನ್ ಫ್ಯಾಕ್ಟರಿಯಲ್ಲಿ ಕ್ಷಿಪ್ರವೇಗದಲ್ಲಿ 30,000 ಉದ್ಯೋಗಿಗಳ ನೇಮಕ; ಭಾರತದಲ್ಲಿ ಸಿಕ್ಕಾಪಟ್ಟೆ ಆಗುತ್ತಿದೆ ಐಟಿ ಹೈರಿಂಗ್

‘ಭಾರತದಲ್ಲಿ ಹೂಡಿಕೆ ಮಾಡುವುದು ನನ್ನ ಆದ್ಯತೆ. ಅದು ಯಾಕೆಂದರೆ, ಚೀನಾದಲ್ಲಿರುವುದಕ್ಕಿಂತ ಉತ್ತಮವಾದ ಕಾನೂನು ಮತ್ತು ಕಾರ್ಪೊರೇಟ್ ಸಿಸ್ಟಂ ಭಾರತದಲ್ಲಿ ಇದೆ’ ಎಂದು ಯಾರ್ದೆನಿ ರಿಸರ್ಚ್ ಸಂಸ್ಥೆಯ ಅಧ್ಯಕ್ಷರೂ ಆದ ಅವರು ವಿಶ್ಲೇಷಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ – Kannada News | Rashika Shetty says Gilli Nata is cunning in Bigg Boss Kannada Season 12 show

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಫಿನಾಲೆ ಸಮೀಪಿಸುತ್ತಿದೆ. ನಟಿ ರಾಶಿಕಾ ಶೆಟ್ಟಿ (Rashika Shetty) ಅವರು ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ವಾರದ ನಾಮಿನೇಷನ್ ಪ್ರಕ್ರಿಯೆ ವೇಳೆ ಗಿಲ್ಲಿಯನ್ನು ರಾಶಿಕಾ ನಾಮಿನೇಟ್ ಮಾಡಿದ್ದಾರೆ. ಇದಕ್ಕೆ ಅವರು ಕಾರಣ ನೀಡಿದ್ದಾರೆ. ‘ಗಿಲ್ಲಿ ಪ್ರತಿ ದಿನ ಒಂದೊಂದು ಪಾತ್ರ ಮಾಡುತ್ತಿದ್ದಾನೆ. ಅವನು ಬಹಳ ದೊಡ್ಡ ಕುತಂತ್ರಿ’ ಎಂದು ರಾಶಿಕಾ ಶೆಟ್ಟಿ ಅವರು ಹೇಳಿದ್ದಾರೆ. ಇಷ್ಟು ದಿನ ಸೀಕ್ರೆಟ್ ರೂಮ್​​ನಲ್ಲಿ ಇದ್ದ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಅವರು ಈಗ ಪುನಃ ಬಿಗ್ ಬಾಸ್ ಮನೆಗೆ ಬಂದು ಆಟ ಮುಂದುವರಿಸಿದ್ದಾರೆ. ಅತಿಥಿಗಳಾಗಿ ತೆರಳಿದ್ದ ಚೈತ್ರಾ ಕುಂದಾಪುರ ಮತ್ತು ರಜತ್ ಅವರು ಹೊರಗೆ ಬಂದಿದ್ದಾರೆ. ಗಿಲ್ಲಿ ನಟ (Gilli Nata) ಅವರೇ ಈ ಬಾರಿ ಬಿಗ್ ಬಾಸ್ ಟ್ರೋಫಿ ಗೆಲ್ಲುತ್ತಾರೆ ಎಂಬ ಅಭಿಪ್ರಾಯ ಜೋರಾಗಿದೆ. ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಮುಂತಾದವರು ಕೂಡ ಕಠಿಣ ಪೈಪೋಟಿ ನೀಡುತ್ತಿದ್ದಾರೆ. ಡಿಸೆಂಬರ್ 22ರ ಬಿಗ್ ಬಾಸ್ ಸಂಚಿಕೆಯ ಪ್ರೋಮೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link