Category Archives: Blog

Your blog category

ಮಂಗಳೂರಿನಲ್ಲಿ ಕೆಂಡದಂತಹ ಬಿಸಿಲು: ಕರಾವಳಿ ಕರ್ನಾಟಕಕ್ಕೆ ಶಾಖಾಘಾತದ ಎಚ್ಚರಿಕೆ

ಮಂಗಳೂರಿನಲ್ಲಿ ಕೆಂಡದಂತಹ ಬಿಸಿಲು: ಕರಾವಳಿ ಕರ್ನಾಟಕಕ್ಕೆ ಶಾಖಾಘಾತದ ಎಚ್ಚರಿಕೆ

ಮಂಗಳೂರು, ಏಪ್ರಿಲ್ 3: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಾದ್ಯಂತ ರಣಬಿಸಿಲು ಜನರನ್ನು ಹೈರಾಣಾಗಿಸಿದೆ. ದಿನದಿಂದ ದಿನಕ್ಕೆ ತಾಪಮಾನ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಸಾರ್ವಜನಿಕರು ಉರಿ ಸೆಕೆಗೆ ಬೆವೆತು ಹೋಗಿದ್ದಾರೆ. ಈ ನಡುವೆ ಉಷ್ಣಾಂಶ ಹೆಚ್ಚಳದಿಂದಾಗಿ ‘ಶಾಖಾಘಾತ (Heat Stroke)’ ಸಂಭವಿಸುವ ಸಾಧ್ಯತೆ ಇರುವ ಬಗ್ಗೆ ಆರೋಗ್ಯ ಇಲಾಖೆ ತೀವ್ರ ಮುನ್ನೆಚ್ಚರಿಕೆ ನೀಡಿದೆ.

ಒಂದು ಪ್ರದೇಶದ ಸಾಮಾನ್ಯ ಉಷ್ಣತೆಗಿಂತ 4.5 ಡಿಗ್ರಿ ಸೆಲ್ಶಿಯಸ್​ನಿಂದ 6.4 ಡಿಗ್ರಿ ಸೆಲ್ಶಿಯಸ್​​ನಷ್ಟು ತಾಪಮಾನ ಹೆಚ್ಚಾದಲ್ಲಿ ಶಾಖಾಘಾತ ಸಂಭವಿಸುತ್ತದೆ. ದಕ್ಷಿಣ ಕನ್ನಡದಲ್ಲಿ ಈಗಾಗಲೇ ಉಷ್ಣಾಂಶವು 40 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿದೆ. ಇದರ ಪರಿಣಾಮವಾಗಿ ಮೈಮೇಲೆ ಬೆವರುಸಾಲೆ, ಮಾಂಸಖಂಡಗಳ ಸೆಳೆತ, ತಲೆಸುತ್ತುವಿಕೆ ಉಂಟಾಗಬಹುದು. ತೀವ್ರತರದ ಹಂತದಲ್ಲಿ ಇದು ಎದೆಯ ಸೆಳೆತ ಹಾಗೂ ಹೃದಯಾಘಾತಕ್ಕೂ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಆರೋಗ್ಯ ಇಲಾಖೆಯ ಮಾರ್ಗಸೂಚಿಯಲ್ಲಿ ಏನೇನಿದೆ?

  • ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಅನಗತ್ಯವಾಗಿ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ.
  • ಸಾಕಷ್ಟು ನೀರು ಕುಡಿಯಿರಿ. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೇಟೆಡ್ ಪಾನೀಯಗಳಿಂದ ದೂರವಿರಿ.
  • ಹಗುರವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ, ಟೋಪಿ ಮತ್ತು ಕನ್ನಡಕ ಬಳಸಿ.
  • ಮಕ್ಕಳನ್ನು ಮಧ್ಯಾಹ್ನದ ಬಿಸಿಲಿನಲ್ಲಿ ಆಟವಾಡಲು ಬಿಡಬೇಡಿ.

ಮೀನುಗಾರಿಕೆಗೂ ಬಿಸಿಲ ಬಿಸಿ

ಬಿಸಿಲಿನ ತಾಪ ಕೇವಲ ಮನುಷ್ಯರಿಗಷ್ಟೇ ಅಲ್ಲ, ಮೀನುಗಾರಿಕೆಗೂ ಹೊಡೆತ ನೀಡಿದೆ. ಸಮುದ್ರದ ಮೇಲ್ಮೈ ನೀರು ಬಿಸಿಯಾಗುತ್ತಿರುವುದರಿಂದ ಮೀನುಗಳು ಸಮುದ್ರದಾಳಕ್ಕೆ ಹೋಗಿ ಸೇರುತ್ತಿವೆ. ಇದರಿಂದಾಗಿ ಮೀನುಗಾರರ ಬಲೆಗೆ ಮೀನುಗಳು ಬೀಳುತ್ತಿಲ್ಲ, ಇದು ಮೀನುಗಾರರನ್ನು ಆತಂಕಕ್ಕೆ ತಳ್ಳಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಇಂದು ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ; 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​!

ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಶಾಖಾಘಾತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡಲು ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಜನರು ಅತೀ ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸೂಚಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಅಪ್ಪನಿಗೆ ತನ್ನ ತಾಯಿ ಮೆಲ್ಲನೆ ಹೊಡೆಯುತ್ತಿದ್ದಂತೆ ಜೋರಾಗಿ ಗದರಿದ ಕಂದಮ್ಮ

ಪ್ರತಿಯೊಬ್ಬ ಅಪ್ಪನಿಗೆ (father) ಮುದ್ದಿನ ಮಗಳು ಪುಟ್ಟ ರಾಜಕುಮಾರಿಯೇ. ಹೆಣ್ಣು ಮಕ್ಕಳ ಪಾಲಿಗೆ ತಂದೆಯೇ ಎಲ್ಲಾ ಆಗಿರುತ್ತಾರೆ. ಅಪ್ಪನಿಗೂ ಮಗಳೆಂದರೆ ಜೀವಕ್ಕಿಂತ ಹೆಚ್ಚು. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ತಂದೆಯ ಮಡಿಲಿನಲ್ಲಿ ಮಲಗಿರುವ ಕಂದಮ್ಮನು ತನ್ನ ಅಮ್ಮನಿಗೆ ಗದರಿದೆ. ತನ್ನ ಅಮ್ಮನು ಅಪ್ಪನಿಗೆ ಮೆಲ್ಲನೆ ಒಂದೇಟು ಹೊಡೆಯುತ್ತಿದ್ದಂತೆ ಈ ಪುಟಾಣಿ ತನ್ನದೇ ಭಾಷೆಯಲ್ಲಿ ಬೈಯಲು ಶುರು ಮಾಡಿದೆ. ಈ ಪುಟಾಣಿಯ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

baby-doll-udhra ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿಯೂ ತನ್ನ ತಂದೆಯ ಮಡಿಲಿನಲ್ಲಿ ಮಲಗಿದೆ. ಇದೇ ವೇಳೆ ಮಹಿಳೆಯೂ ಪುಟಾಣಿ ಬಳಿ, ಇದು ನಿನ್ನ ಅಪ್ಪನಾ ಎಂದು ಹೇಳುತ್ತಾ ಮೆಲ್ಲನೆ ಒಂದೇಟು ತನ್ನ ಗಂಡನಿಗೆ ಹೊಡೆದಿದ್ದಾಳೆ. ಅಪ್ಪನಿಗೆ ಅಮ್ಮನು ಹೊಡೆಯುತ್ತಿದ್ದಂತೆ ಕೋಪದಲ್ಲಿ ಪುಟಾಣಿ ತನ್ನದೇ ಭಾಷೆಯಲ್ಲಿ ಬೈಯುತ್ತಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಡುರಸ್ತೆಯಲ್ಲೇ ಕೋಪಿಸಿಕೊಂಡ ಮಗಳನ್ನು ರಮಿಸಿ ಸಮಾಧಾನ ಪಡಿಸಿದ ತಂದೆ

ಈ ವಿಡಿಯೋ ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದಿದ್ದು, ಒಬ್ಬ ಬಳಕೆದಾರ ಅಪ್ಪನ ಮೇಲೆ ಎಷ್ಟು ಪ್ರೀತಿಯಿದೆ ಎಂದರೆ, ಮತ್ತೊಬ್ಬರು, ಮತ್ತೆ ಮತ್ತೆ ನೋಡಬೇಕೇನಿಸುವ ವಿಡಿಯೋ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮಗಳ ಪ್ರೀತಿ ತಾಯಿ ಪ್ರೀತಿ ಸಮ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಆಮೇಲೆ ಶಾಂತಿ ಜಪ ಮಾಡಿ, ಮೊದಲು ನಮ್ಮ ಸಾಲ ವಾಪಸ್ ಕೊಡಿ ಎಂದು ಪಾಕಿಸ್ತಾನವನ್ನು ಕೇಳಿದ ಯುಎಇ

ಇಸ್ಲಾಮಾಬಾದ್, ಏಪ್ರಿಲ್ 03: ಅಮೆರಿಕ, ಇಸ್ರೇಲ್-ಇರಾನ್ ನಡುವೆ ಶಾಂತಿ ಸ್ಥಾಪನೆಗೆ ಮುಂದಾಗಿರುವ ಪಾಕಿಸ್ತಾನ(Pakistan)ಕ್ಕೆ ಯುಎಇ ದೊಡ್ಡ ಶಾಕ್ ಕೊಟ್ಟಿದೆ. ಪಾಕಿಸ್ತಾನಕ್ಕೆ ನೀಡಿದ್ದ ಸಾಲವನ್ನು ಹಿಂದಿರುಗಿಸುವಂತೆ ಯುಎಇ ಒತ್ತಡ ಹಾಕುತ್ತಿದೆ ಎಂದು ವರದಿಯಾಗಿದೆ. ಏಪ್ರಿಲ್ 17ರ ಒಳಗೆ ಸಾಲವನ್ನು ವಾಪಸ್ ಕೊಡಿ ಎಂದು ಕೇಳಿದೆ. ಅಷ್ಟೇ ಅಲ್ಲದೆ ಪಾಕಿಸ್ತಾನಕ್ಕೆ ಹೆಚ್ಚಿನ ಬಡ್ಡಿ ಕೂಡ ವಿಧಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇರಾನ್ ಮತ್ತು ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧವನ್ನು ಸಾಧ್ಯವಾದಷ್ಟು ಬೇಗ ಕೊನೆಗೊಳಿಸಲು ಪಾಕಿಸ್ತಾನ ಬಯಸುತ್ತದೆ. ಈ ಉದ್ದೇಶಕ್ಕಾಗಿ, ಅದು ಈಜಿಪ್ಟ್, ಟರ್ಕಿ ಮತ್ತು ಇತರ ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಇರಾನ್‌ನಲ್ಲಿ ಯುದ್ಧ ನಡೆಯುತ್ತಿರುವ ಮಧ್ಯೆ, ಯುಎಇ ಪಾಕಿಸ್ತಾನದ ಮೇಲೆ ತನ್ನ ಹಣವನ್ನು ಮರುಪಾವತಿಸುವಂತೆ ಒತ್ತಡ ಹೇರಿದೆ. ವಾಸ್ತವವಾಗಿ, 2018 ರಲ್ಲಿ, ಯುಎಇ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಸಾಲವನ್ನು ನೀಡಿತ್ತು.

ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಪ್ರಕಾರ, ಯುಎಇ ಪ್ರತಿ ವರ್ಷ ಈ ಸಾಲದ ಮೇಲೆ 130 ಮಿಲಿಯನ್ ಡಾಲರ್ ಬಡ್ಡಿಯನ್ನು ವಿಧಿಸಿತ್ತು. ನಂತರ ಯುಎಇ ಬಡ್ಡಿದರವನ್ನು ಶೇಕಡಾ 3 ರಿಂದ 6.5 ಕ್ಕೆ ಹೆಚ್ಚಿಸಿತ್ತು. ನಂತರ ಯುಎಇ ಬಡ್ಡಿದರವನ್ನು ಶೇಕಡಾ 3 ರಿಂದ 6.5 ಕ್ಕೆ ಹೆಚ್ಚಿಸಿತು. ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯ ನಂತರ, ಮಧ್ಯಪ್ರಾಚ್ಯದ ಅನೇಕ ಭಾಗಗಳು ಯುದ್ಧ ಪೀಡಿತವಾಗಿವೆ.

ಮತ್ತಷ್ಟು ಓದಿ: ಅಮೆರಿಕ-ಇರಾನ್ ಸಂಘರ್ಷ: ಭೂತದ ಬಾಯಲ್ಲಿ ಭಗವದ್ಗೀತೆಯಂತೆ ಶೆಹಬಾಜ್ ಬಾಯಲ್ಲಿ ಶಾಂತಿ ಮಂತ್ರ

ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮುಂದುವರಿಸಿದ್ದರೂ, ಇರಾನ್ ಇಸ್ರೇಲ್ ಜೊತೆಗೆ ಪ್ರದೇಶದಾದ್ಯಂತ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ. ಇರಾನ್‌ನ ಪ್ರಾಕ್ಸಿಗಳಾದ ಹೆಜ್ಬೊಲ್ಲಾ ಮತ್ತು ಹೌತಿಗಳು ಸಹ ಈ ಸಂಘರ್ಷದಲ್ಲಿ ಸಕ್ರಿಯರಾಗಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದವನ್ನು ಮಧ್ಯಸ್ಥಿಕೆ ವಹಿಸುವಲ್ಲಿ ಪಾಕಿಸ್ತಾನ ವಿಫಲವಾಗುತ್ತಿರುವಂತೆ ತೋರುತ್ತಿದೆ. ಒಪ್ಪಂದದಲ್ಲಿ ರಷ್ಯಾ ಪಾಕಿಸ್ತಾನವನ್ನು ಬದಲಾಯಿಸಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವೈಯಕ್ತಿಕವಾಗಿ ಒಪ್ಪಂದದ ಮಧ್ಯಸ್ಥಿಕೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವುದು ಸೇರಿದಂತೆ ಅಮೆರಿಕದ ಕೆಲವು ಬೇಡಿಕೆಗಳನ್ನು ಈಡೇರಿಸಿದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ದೇಶನದ ಮೇರೆಗೆ ವ್ಯಾನ್ಸ್ ಖಾಸಗಿಯಾಗಿ ಕದನ ವಿರಾಮಕ್ಕೆ ಸಿದ್ಧರಿರುವುದಾಗಿ ಸೂಚಿಸಿದ್ದಾರೆ ಎಂದು ಮೂಲವು  ರಾಯಿಟರ್ಸ್‌ಗೆ ತಿಳಿಸಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ ಪಾಕಿಸ್ತಾನಕ್ಕೆ ಎರಡು ತಿಂಗಳ ಅವಧಿಗೆ 2 ಬಿಲಿಯನ್ ಡಾಲರ್ ಠೇವಣಿಯ ಅಲ್ಪಾವಧಿಯ ರೋಲ್‌ಓವರ್‌ಗೆ ಒಪ್ಪಿಕೊಂಡಿತ್ತು. ಏಪ್ರಿಲ್ 17 ಕೊನೆಯ ದಿನಾಂಕವಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

SSLC ಪರೀಕ್ಷೆಯ ತೃತೀಯ ಭಾಷೆ ಅಂಕಕ್ಕೆ ಕೊಕ್: ನಿರ್ಧಾರ ಪರಿಶೀಲಿಸುವಂತೆ ಸಿಎಸ್​​ಗೆ ರಾಜ್ಯಪಾಲರ ಪತ್ರ

ಬೆಂಗಳೂರು, ಏಪ್ರಿಲ್​​ 03: SSLC ಹಿಂದಿ ಪರೀಕ್ಷೆಗೆ ಅಂಕಗಳ ಬದಲು ಗ್ರೇಡ್​ ನೀಡುವ ರಾಜ್ಯ ಸರ್ಕಾರದ ನಿರ್ಧಾರ ವಿಚಾರ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿಗೆ ರಾಜ್ಯಪಾಲರು ಪತ್ರ ಬರೆದಿದ್ದಾರೆ. ಈ ಕುರಿತು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಲೆಟರ್​​ ಬರೆದಿದ್ದು, ಸರ್ಕಾರದ ನಿರ್ಧಾರವನ್ನು ಮರು ಪರಿಶೀಲನೆ ಮಾಡುವಂತೆ ತಿಳಿಸಲಾಗಿದೆ.  SSLC ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕಗಳನ್ನು ನೀಡದೆ ಕೇವಲ ಗ್ರೇಡ್‌ ನೀಡುವ ನಿರ್ಧಾರವನ್ನು ಮರು ಪರಿಶೀಲಿಸಿ. ಭಾಷಾವೈವಿಧ್ಯತೆ, ಜಾಗೃತಿ, ಬೌದ್ಧಿಕ ಬೆಳವಣಿಗೆಯನ್ನು ಬೆಳೆಸುವಲ್ಲಿ ತೃತೀಯ ಭಾಷೆಯು ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಗ್ರೇಡ್‌ ನೀಡಿದರೆ ಶೈಕ್ಷಣಿಕ ಪ್ರಾಮುಖ್ಯತೆ ಕಡಿಮೆ ಮಾಡಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ ಸರ್ಕಾರದ ಈ ನಿರ್ಧಾರ ವಿದ್ಯಾರ್ಥಿಗಳು ಕಲಿಯುವ ಆಸಕ್ತಿಯ ಮೇಲೆ ಪರಿಣಾಮ ಬೀರಬಹುದು. ಶಿಕ್ಷಣದ ಮೇಲೆ ಬೀರುವ ಪರಿಣಾಮ ಬಗ್ಗೆ ಪೋಷಕರಿಗೂ ಆತಂಕ ಇದ್ದು, ರಾಜ್ಯಪಾಲರು ಈ ವಿಷಯವನ್ನು ಗಮನಿಸಿದ್ದಾರೆ. ಹೀಗಾಗಿ ಶೈಕ್ಷಣಿಕ, ಆಡಳಿತಾತ್ಮಕ ಅಂಶ ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಸಂಬಂಧಿತ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಶೈಕ್ಷಣಿಕ ಉದ್ದೇಶಗಳಿಗೆ ಅನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಿಎಸ್​ಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: SSLC ತೃತೀಯ ಭಾಷೆ ವಿವಾದ; ಹೈಕೋರ್ಟ್ ಮೆಟ್ಟಿಲೇರಿದ ಸರ್ಕಾರದ ‘ಗ್ರೇಡಿಂಗ್’ ನಿರ್ಧಾರ

ಎಸ್​​ಎಸ್​ಎಲ್​​ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಬಾರದು ಮತ್ತು ಅಂಕ ಪಟ್ಟಿಯಿಂದ ಹೊರಗಿಡುವಂತೆ ವಿವಿಧ ಕನ್ನಡ ಪರ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿದ್ದವು. ಆ ಬೆನ್ನಲ್ಲೇ ಎಸ್​​ಎಸ್​​ಎಲ್​ಸಿ ಪರೀಕ್ಷೆಗೆ 525 ಅಂಕಗಳು ನಿಗದಿ ಮಾಡಿ, ತೃತೀಯ ಭಾಷೆಯ ಅಂಕಕ್ಕೆ ಸರ್ಕಾರ ಕೊಕ್​ ನೀಡಿತ್ತು. ಇನ್ನು ಮುಂದೆ ತೃತೀಯ ಭಾಷೆಯ (ಹಿಂದಿ, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಮತ್ತು ಮರಾಠಿ) ಅಂಕಗಳನ್ನು ಒಟ್ಟು ಅಂಕಗಳಿಗೆ ಪರಿಗಣಿಸಲಾಗುವುದಿಲ್ಲ. ಬದಲಿಗೆ ತೃತೀಯ ಭಾಷೆ ಪರೀಕ್ಷೆಯ ಅಂಕವನ್ನು ಗ್ರೇಡ್ ಮೂಲಕ ನೀಡಲಾಗುತ್ತದೆ. ಆದರೆ ವಿದ್ಯಾರ್ಥಿಗಳು ತೃತೀಯ ಭಾಷೆಯ ಪರೀಕ್ಷೆಯನ್ನು ಬರೆಯುವುದು ಕಡ್ಡಾಯ ಎಂದು ಶಿಕ್ಷಣ ಇಲಾಖೆ ಹೇಳಿರೋದು ಭಾರಿ ಚರ್ಚೆಗೂ ಗ್ರಾಸವಾಗಿತ್ತು. ಕರ್ನಾಟಕ ಹೈಕೋರ್ಟ್​​ನಲ್ಲಿ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸಲ್ಲಿಕೆಯಾಗಿರುವ ನಡುವೆ ರಾಜ್ಯಪಾಲರ ಕಡೆಯಿಂದ ಬಂದಿರುವ ಈ ಪತ್ರ ಪ್ರಾಮುಖ್ಯತೆ ಪಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆಸಿ ಕುಟುಂಬದವರ ಮೇಲೆ ಹಲ್ಲೆ

ಚಿತ್ರದುರ್ಗ, ಏಪ್ರಿಲ್ 03: ಜಿಲ್ಲೆಯ ಭರಮಸಾಗರ ಗ್ರಾಮದಲ್ಲಿ ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗಲಾಟೆ ಸಂಭವಿಸಿದೆ. ಬೇವಿನಹಳ್ಳಿಯ ತೀರ್ಥೇಶ್ವರ ನಾಯ್ಕ್ ತಮ್ಮ ಅತ್ತೆ ಮಗಳು ಭಾವನಾ ಜೊತೆ ಫೆಬ್ರವರಿ 8ರಂದು ರಿಜಿಸ್ಟರ್ ಮದುವೆಯಾಗಿದ್ದರು. ಆದರೆ ಭಾವನಾ ಪೋಷಕರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿ, ತೀರ್ಥೇಶ್ವರ ವಿರುದ್ಧ ಮತಾಂತರ ಆರೋಪ ಮಾಡಿದ್ದಾರೆ. ನಿನ್ನೆ ರಾಜಿ ಸಂಧಾನಕ್ಕೆ ಕರೆದು ಗಲಾಟೆ ನಡೆದಿದ್ದು, ಯುವತಿಯ ದೊಡ್ಡಪ್ಪ ಮಲ್ಲೇಶ್ ನಾಯ್ಕ್ ಸೇರಿದಂತೆ ಮೂವರಿಗೆ ಗಾಯಗಳಾಗುವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತೀರ್ಥೇಶ್ವರ ನಾಯ್ಕ್ ಮತ್ತು ಅವರ ಕುಟುಂಬದ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಈ ವೇಳೆ ನಡೆದ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಮೈಮೇಲೆ ಹರಿದು ಕಾರು, ಕೆಲವೇ ಕ್ಷಣಗಳಲ್ಲಿ ಪವಾಡವೆಂಬಂತೆ ಎದ್ದು ನಿಂತ ಬಾಲಕ

ಇಂದೋರ್, ಏಪ್ರಿಲ್ 03: ಇಂದೋರ್​ನ ವಸತಿ ಪ್ರದೇಶದಲ್ಲಿ ನಡೆದ ಅಪಘಾತ ಎದೆ ಝೆಲ್ಲೆನಿಸುವಂತಿದೆ. ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕನ ಮೇಲೆ ಕಾರೊಂದು ಹರಿದಿದೆ. ಆದರೆ ಕೆಲವೇ ಕ್ಷಣಗಳಲ್ಲಿ ಬಾಲಕ ಎದ್ದು ನಿಂತಿರುವುದು ಪವಾಡವೇ ಸರಿ. ಆರೋಪಿ ಚಾಲಕ ಕಾರನ್ನು ನಿಲ್ಲಿಸಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಅಲ್ಲಿ ವೈದ್ಯರು ಮಗುವನ್ನು ಪರೀಕ್ಷಿಸಿದ್ದಾರೆ. ಬಾಲಕನ ಕಾಲಿನಲ್ಲಿ ಮೂಳೆ ಮುರಿತವಾಗಿದೆ. ಈ ಘಟನೆ ಮಂಗಳವಾರ ಮಧ್ಯಾಹ್ನ ಬಾಂಬೆ ಆಸ್ಪತ್ರೆಯ ಹಿಂಭಾಗದ ಐಷಾರಾಮಿ ಶಾಂತಿ ನಿಕೇತನ ಕಾಲೋನಿಯಲ್ಲಿ ನಡೆದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ತಾಯಾಣೆ’ ಏನೋ ಭಿನ್ನವಾಗಿ ಮಾಡುತ್ತಿದ್ದಾರೆ ಡಾಲಿ ಮತ್ತು ಗೆಳೆಯರು

ಡಾಲಿ ಧನಂಜಯ್ (Daali Dhananjay) ನಟ ಹಾಗೂ ನಿರ್ಮಾಪಕರಾಗಿ ಸದಾ ಹೊಸತನಕ್ಕೆ ತುಡಿಯುವ ವ್ಯಕ್ತಿ. ಸೀಮಿತ ಬಜೆಟ್​​ನಲ್ಲಿ ಹೊಸ ರೀತಿಯ ಕತೆಗಳನ್ನು ಹೇಳುತ್ತಲೇ ಬರುತ್ತಿದ್ದಾರೆ. ತಾವು ನಿರ್ಮಾಣ ಮಾಡುವ ಜೊತೆಗೆ ಸಿನಿಮಾದ ಭಿನ್ನ ಪಾತ್ರಗಳಲ್ಲಿ ನಟಿಸುತ್ತಾ ಪ್ರತಿಭಾವಂತರಿಗೆ ವೇದಿಕೆಯನ್ನು ಕಲ್ಪಿಸುತ್ತಾ ಬರುತ್ತಿದ್ದಾರೆ. ‘ಬಡವರ ಮಕ್ಳು ಬೆಳಿಬೇಕು’ ಎಂಬ ಮಾತಿಗೆ ಬದ್ಧವಾಗಿ ನಡೆದುಕೊಳ್ಳುತ್ತಾ ಸಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೆ ‘ಹೆಗ್ಗಣ ಮುದ್ದು’ ಸಿನಿಮಾ ಘೋಷಿಸಿದ ಡಾಲಿ ಧನಂಜಯ್ ಇದೀಗ ಮತ್ತೊಂದು ಹೊಸ ಸಿನಿಮಾವನ್ನು ತಮ್ಮ ನಿರ್ಮಾಣ ಸಂಸ್ಥೆಯಿಂದ ಘೋಷಿಸಿದ್ದು, ಈ ಸಿನಿಮಾಕ್ಕೆ ಡಾಲಿಯ ಎಲ್ಲ ಗೆಳೆಯರು ಒಂದಾಗಿದ್ದಾರೆ.

ಡಾಲಿ ಧನಂಜಯ್ ಮತ್ತು ಅವರ ಮೈಸೂರಿನ ಗೆಳೆಯರು ಕೆಇಬಿ ಹೆಸರಿನ ಯೂಟ್ಯೂಬ್ ಚಾನೆಲ್ ಮಾಡಿ ತಮಾಷೆಯ, ಜಾಗೃತಿಯ ಕಂಟೆಂಟ್ ಹಂಚಿಕೊಳ್ಳುತ್ತಿದ್ದರು. ಇದೀಗ ಆ ಕೆಇಬಿ ಮತ್ತು ಡಾಲಿ ಧನಂಜಯ್ ಅವರ ಡಾಲಿ ಪಿಕ್ಚರ್ಸ್ ಜೊತೆಯಾಗಿ ಹೊಸ ಸಿನಿಮಾ ಘೋಷಣೆ ಮಾಡಿದ್ದು, ಕೆಲ ದಿನಗಳ ಹಿಂದಷ್ಟೆ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದರು. ಪೋಸ್ಟರ್​​ನಲ್ಲಿ ಯಾರ ಮುಖವನ್ನೂ ತೋರಿಸಿರಲಿಲ್ಲ ಬದಲಿಗೆ ನಟರೆಲ್ಲ ಕ್ಯಾಮೆರಾಗಿ ಹಿಮ್ಮುಖವಾಗಿ ನಿಂತಿದ್ದರು. ಸಿನಿಮಾದ ಹೆಸರನ್ನು ಸಹ ಬೇರೆ ಬೇರೆ ಭಾಷೆಗಳಲ್ಲಿ ನೀಡಲಾಗಿತ್ತು. ಜೊತೆಗೆ ಸಿನಿಮಾದ ಹೆಸರು ಗೆಸ್ ಮಾಡಿ ಎಂಬ ಸವಾಲನ್ನು ಸಹ ಚಿತ್ರತಂಡವು ಪ್ರೇಕ್ಷಕರಿಗೆ ನೀಡಿತ್ತು.

ಇದನ್ನೂ ಓದಿ:ನಾನ್ ವೆಜ್ ತಿಂದ ವಿಷಯ ವೈರಲ್; ಡಾಲಿ ಧನಂಜಯ್ ದೂರಿದ್ದು ಯಾರನ್ನ?

ಇದೀಗ ಎಲ್ಲ ನಟರ ಮುಖವನ್ನು ತೋರಿಸಲಾಗಿದ್ದು, ಜೊತೆಗೆ ಸಿನಿಮಾದ ಹೆಸರನ್ನು ಸಹ ಅನಾವರಣ ಮಾಡಲಾಗಿದೆ. ಡಾಲಿ ಪಿಕ್ಚರ್ಸ್ ಮತ್ತು ಕೆಇಬಿ ಒಟ್ಟಿಗೆ ಪ್ರೆಸೆಂಟ್ ಮಾಡುತ್ತಿರುವ ಈ ಸಿನಿಮಾದ ಹೆಸರು ‘ಮದರ್ ಪ್ರಾಮಿಸ್’ ಕನ್ನಡದಲ್ಲಿ ಹೇಳುವುದಾದರೆ ‘ತಾಯಾಣೆ’. ಸಿನಿಮಾದ ಪೋಸ್ಟರ್ ನೋಡಿದರೆ ಇದು ಹಾಸ್ಯಮಯ, ಭಾವುಕ ಜೊತೆಗೆ ಥ್ರಿಲ್ಲರ್ ಅಂಶವೂ ಇರುವ ಕತೆ ಎನಿಸುತ್ತದೆ.

ಮೈಸೂರು ಪೂರ್ಣ ಈ ಸಿನಿಮಾದ ಚಿತ್ರಕತೆ ಬರೆದಿದ್ದು, ಅವರೇ ನಿರ್ದೇಶನವನ್ನೂ ಮಾಡಲಿದ್ದಾರೆ. ಸಿನಿಮಾನಲ್ಲಿ ಮೈಸೂರು ಪೂರ್ಣ, ನಾಗಭೂಷಣ, ವಿನಯಾ ಪ್ರಸಾದ್, ಡಾಲಿ ಧನಂಜಯ್, ಗುರುದತ್ ಇವರುಗಳ ಜೊತೆಗೆ ಇನ್ನೂ ಹಲವು ಜನಪ್ರಿಯ ಹಾಸ್ಯ ನಟರುಗಳು ಸಹ ಸಿನಿಮಾನಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಸಿದ್ದರಾಮಯ್ಯ ಸರ್ಕಾರದ ಲೂಟಿ ನೋಡಿಯೇ ಕೆಂಪಣ್ಣ ಸತ್ಹೋಗ್ಬಿಟ್ಟ’: ಮಾಜಿ ಸಂಸದ ಪ್ರತಾಪಸಿಂಹ

ಬಾಗಲಕೋಟೆ, ಏ.3: ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರ ನಡೆಸಿದ ಮಾಜಿ ಸಂಸದ ಪ್ರತಾಪಸಿಂಹ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರ ಹೆಸರಷ್ಟೇ ಹಿಂದೂ, ಆದರೆ ಅವರ ಗುಣನಡತೆಗಳಲ್ಲಿ ಹಿಂದೂ ಧರ್ಮದ ಯಾವ ಲಕ್ಷಣವೂ ಕಾಣಿಸುತ್ತಿಲ್ಲ ಎಂದು ಪ್ರತಾಪಸಿಂಹ ಆರೋಪಿಸಿದರು. ಯುಗಾದಿ ಮತ್ತು ದೀಪಾವಳಿ ದಿನದಂದು ಮಾಂಸಾಹಾರ ಸೇವಿಸುವ ಬಗ್ಗೆಯೂ ಟೀಕೆ ಮಾಡಿದ್ದಾರೆ. ಈಗ ಕಾಂಗ್ರೆಸ್ ಪಕ್ಷದವರು ಹಿಂದುತ್ವವನ್ನು ಮಂತ್ರ ಜಪಿಸುತ್ತಿದ್ದಾರೆ ಎಂದು ಟೀಕಿಸಿದ ಪ್ರತಾಪಸಿಂಹ, ನಾಗಮಂಗಲದಲ್ಲಿ ಗಣೇಶ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ ನಡೆದಾಗ ಸಣ್ಣಪುಟ್ಟ ಘಟನೆ ಎಂದು ಮುಖ್ಯಮಂತ್ರಿ ಅವರು ಹೇಳಿದ್ದರು. ಅಲ್ಲದೆ, ಸ್ಥಳಕ್ಕೆ ಭೇಟಿ ನೀಡಲಿಲ್ಲ. ಮದ್ದೂರಿನಲ್ಲಿ ಮಸೀದಿ ಮೇಲೆ ಕಲ್ಲು ತೂರಾಟ, ಅಣ್ಣಮ್ಮ ಜಾತ್ರೆ ಮೇಲೆ ಕಲ್ಲು ತೂರಾಟ, ಶಿವಾಜಿ ಜಯಂತಿಯಂದು ಚಪ್ಪಲಿ ಮತ್ತು ಕಲ್ಲು ತೂರಾಟ ನಡೆದಾಗ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಸದಸ್ಯರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನವರು ನಿಜವಾದ ಹಿಂದುಗಳಾಗಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದರು ಎಂದು ಅವರು ಹೇಳಿದರು.ಇಡೀ ರಾಜ್ಯದಲ್ಲಿ ಸಮಸ್ಯೆಗಳ ಆಗರವಿದೆ. ರಾಜ್ಯದಲ್ಲಿ ಸಾಲದ ಪ್ರಮಾಣ ಹೆಚ್ಚಾಗಿದ್ದು, ಪ್ರತಿ ಹುಟ್ಟುವ ಮಗುವಿನ ತಲೆಮೇಲೆ ₹1.17 ಲಕ್ಷ ಸಾಲವಿದೆ. ರಾಜ್ಯದ ಒಟ್ಟು ಸಾಲ ₹8.25 ಲಕ್ಷ ಕೋಟಿ ತಲುಪಿದೆ. ಕೆಂಗಲ್ ಹನುಮಂತಯ್ಯನವರಿಂದ ಬಸವರಾಜ್ ಬೊಮ್ಮಾಯಿ ಅವರವರೆಗಿನ ಎಲ್ಲಾ ಮುಖ್ಯಮಂತ್ರಿಗಳು ಮಾಡಿದ ಸಾಲಕ್ಕಿಂತ ಸಿದ್ದರಾಮಯ್ಯ ಅವರು ಮಾಡಿದ ಸಾಲವೇ ಜಾಸ್ತಿಯಾಗಿದೆ. ಸಿದ್ದರಾಮಯ್ಯ ಅವರು “ಸಾಲಾರಾಮಯ್ಯ” ಆಗಿದ್ದಾರೆ ಎಂದು ಅವರು ಟೀಕಿಸಿದರು. ಕಳೆದ ಮೂರು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ, ರಸ್ತೆ ಅಥವಾ ಕುಡಿಯುವ ನೀರಿನ ವ್ಯವಸ್ಥೆಯೂ ಸುಧಾರಿಸಿಲ್ಲ ಎಂದು ಪ್ರತಾಪಸಿಂಹ ಆರೋಪಿಸಿದರು.

ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಕಲಹದ ಬಗ್ಗೆಯೂ ಪ್ರತಾಪಸಿಂಹ ಗಮನ ಸೆಳೆದರು. ಮುಖ್ಯಮಂತ್ರಿ ಸ್ಥಾನಕ್ಕಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವೆ ಒಬ್ಬರು ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಳ್ಳಲು ಯತ್ನಿಸುತ್ತಿದ್ದರೆ, ಇನ್ನೊಬ್ಬರು ಆ ಕುರ್ಚಿಯನ್ನು ಎಳೆಯಲು ಯತ್ನಿಸುತ್ತಿದ್ದಾರೆ. ಅವರಿಬ್ಬರ ಹೊಡೆದಾಟ ಬಿಟ್ಟರೆ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ಪ್ರತಾಪಸಿಂಹ ಹೇಳಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 40% ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ ಈಗಿನ ಸರ್ಕಾರದ “ಲೂಟಿ” ನೋಡಿದ ಬಳಿಕ ಸತ್ತೋ ಹೋಗಿಬಿಟ್ಟ ಮನುಷ್ಯ ಎಂದು ಪ್ರತಾಪಸಿಂಹ ಪರೋಕ್ಷವಾಗಿ ಭ್ರಷ್ಟಾಚಾರವನ್ನು ಆರೋಪಿಸಿದರು. ಇದೀಗ ಈ ಹೇಳಿಕೆ ವಿವಾದಕ್ಕೀಡಾಗಬಹುದು ಎಂದು ಹೇಳಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕನ್ನಡದಿಂದ ಬಣ್ಣದ ಬದುಕು ಆರಂಭಿಸಿದ ನಟಿ ‘ರಾಮಾಯಣ’ದಲ್ಲಿ ಶೂರ್ಪನಖಿ

‘ರಾಮಾಯಣ’ ಚಿತ್ರ ಬಾಲಿವುಡ್‌ನಲ್ಲಿ ಅತ್ಯಂತ ಪ್ರತಿಷ್ಠಿತ ಚಿತ್ರ. ಹಿಂದಿ ಪ್ರೇಕ್ಷಕರು ಮಾತ್ರವಲ್ಲದೆ ತೆಲುಗು ಮತ್ತು ಕನ್ನಡ ಪ್ರೇಕ್ಷಕರು ಕೂಡ ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕ ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಈ ಚಿತ್ರದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದಿಂದ ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳು ಚಿತ್ರದ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸಿವೆ. ಇತ್ತೀಚೆಗೆ, ಈ ಚಿತ್ರದ ಟೀಸರ್ ಬಿಡುಗಡೆಯಾಯಿತು. ರಾಮಾಯಣ ಚಿತ್ರದ ಟೀಸರ್ ಅನ್ನು ಹನುಮಾನ್ ಜಯಂತಿಯಂದು ಬಿಡುಗಡೆ ಮಾಡಲಾಯಿತು. ಈ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ.ಈ ಚಿತ್ರದಲ್ಲಿ ಶೂಪರ್ನಖಿಯಾಗಿ ಪ್ರಮುಖ ನಟಿಯೊಬ್ಬರು ಅಭಿಮಾನಿಸಿದ್ದಾರೆ.

‘ರಾಮಾಯಣ’ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ಅದ್ಭುತವಾಗಿ ಕಾಣಿಸಿಕೊಂಡರು. ಅದೇ ರೀತಿ, ಸಾಯಿ ಪಲ್ಲವಿ ಕೂಡ ಸೀತೆಯಾಗಿ ಗಮನ ಸೆಳೆಯಲಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ಅವರ ಲುಕ್ ಬಹಿರಂಗಗೊಂಡಿಲ್ಲ. ಯಶ್ ಈ ಚಿತ್ರದ ಸಹ-ನಿರ್ಮಾಪಕರಾಗಿಯೂ ಆಗಿದ್ದಾರೆ. ಈ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರು ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ. ‘ರಾಮಾಯಣ’ ಚಿತ್ರವನ್ನು ನಿತೀಶ್ ತಿವಾರಿ ನಿರ್ದೇಶಿಸುತ್ತಿದ್ದಾರೆ.

ಶೂರ್ಪನಖಿ ಪಾತ್ರದಲ್ಲಿ ಸ್ಟಾರ್ ನಾಯಕಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಅವರು ಬೇರೆ ಯಾರೂ ಅಲ್ಲ, ರಾಕುಲ್ ಪ್ರೀತ್ ಸಿಂಗ್. ಈ ಹಿಂದೆ, ಕಾಜಲ್ ಅಗರ್ವಾಲ್ ಅವರನ್ನು ಈ ಪಾತ್ರಕ್ಕೆ ಪರಿಗಣಿಸಲಾಗಿತ್ತು ಎಂದು ಹೇಳಲಾಗಿತ್ತು. ಆದರೆ ಈಗ ಅವರ ಜಾಗಕ್ಕೆ ರಕುಲ್ ಪ್ರವೇಶಿಸಿದ್ದಾರೆ. ಸೀತೆಗಿಂತ ಶೂರ್ಪನಖಿ ಹೆಚ್ಚು ಸುಂದರಿ ಎಂಬ ಕಾರಣಕ್ಕೆ ಕಾಜಲ್ ಅವರನ್ನು ಕೈಬಿಡಲಾಗಿದೆ ಎಂದು ಬಿ-ಟೌನ್‌ನಲ್ಲಿ ಹೇಳಲಾಗುತ್ತಿದೆ. ರಾಕುಲ್ ಅವರ ಸ್ಥಾನದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಜನರ ಬಳಿ ದುಡ್ಡಿಲ್ಲ’; ತಮ್ಮ ಸಿನಿಮಾ ಫ್ಲಾಪ್ ಆಗೋದಕ್ಕೆ ಕಾರಣ ನೀಡಿದ ರಾಕುಲ್ ಪ್ರೀತ್ ಸಿಂಗ್

ರಾಕುಲ್ ಪ್ರೀತ್ ಸಿಂಗ್ ಅವರು ‘ಗಿಲ್ಲಿ’ ಮೊದಲ ಸಿನಿಮಾದಲ್ಲಿ ನಟಿಸಿದರು. ಇದು ಕನ್ನಡದ ಸಿನಿಮಾ. ಆ ಬಳಿಕ ಅವರು ಸ್ಯಾಂಡಲ್​ವುಡ್​ನಲ್ಲಿ ಕಾಣಿಸಿಕೊಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ

ಕೋಲಾರ, ಏಪ್ರಿಲ್ 3: ಕೋಲಾರದ ಸೆಷನ್ಸ್ ಕೋರ್ಟ್​ ಒಳಗೆ ಕಬೋರ್ಡ್​​ನಲ್ಲಿ ದಾಖಲೆಗಳ ಮಧ್ಯೆ ಹಾವು ಕಾಣಿಸಿಕೊಂಡು ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಉರಗ ರಕ್ಷಕ ನಾಗರಾಜ್, ಅದು ಕೇರೆ ಹಾವು ಎಂಬುದನ್ನು ಗಮನಿಸಿದ್ದು, ಅದನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಅಲ್ಲದೆ, ಕೇರೆ ಹಾವಿನ ಬಗ್ಗೆ ಜಾಗೃತಿಯ ಮಾತುಗಳನ್ನಾಡಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link