Category Archives: Blog

Your blog category

ಚೈತ್ರಾ ಪತಿಯಿಂದಲೂ ಕಿರುಕುಳ ಉಂಟಾಗಿದೆ; ತಂದೆಯ ಆರೋಪ – Kannada News | Chaithra Kundapura Father Alleges her Husband Also gave Harassment

ಚೈತ್ರಾ ಕುಂದಾಪುರ ಅವರ ತಂದೆ ಕೋರ್ಟ್ ಹೋಗಿದ್ದರು ಮತ್ತು ಮಗಳಿಂದ ಕಿರುಕುಳ ಆಗುತ್ತದೆ ಎಂದಿದ್ದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ಈಗ ಚೈತ್ರಾ ತಂದೆ ಮಾತನಾಡಿದ್ದು, ‘ನನಗೆ ಚೈತ್ರಾ ಪತಿ ಶ್ರೀಕಾಂತ್ ಅವರಿಂದಲೂ ಕಿರುಕುಳ ಆಗುತ್ತಿದೆ’ ಎಂದು ಹೇಳಿದನ್ನು ಕಾಣಬಹುದು.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೇಶೀಯ ಏಕದಿನ ಟೂರ್ನಿಗೆ ದೆಹಲಿ, ಮುಂಬೈ ತಂಡಗಳು ಪ್ರಕಟ

Source link

‘ಕಿಂಗ್’ ಸಿನಿಮಾ ಬಿಡುಗಡೆಗೂ ಮುನ್ನವೇ ಹಾಡು ಸೋರಿಕೆ? – Kannada News | Shah Rukh Khan And Deepika Padukone King Movie AI Video Goes viral

‘ಕಿಂಗ್’ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್‌ಪ್ರೆಸ್’, ‘ಪಠಾಣ್’ ಮತ್ತು‘ ಹ್ಯಾಪಿ ನ್ಯೂ ಇಯರ್’ ಚಿತ್ರಗಳಲ್ಲಿ ಇವರು ಒಟ್ಟಿಗೆ ನಟಿಸಿದ್ದಾರೆ.‘ಜವಾನ್’ ಸಿನಿಮಾದಲ್ಲೂ ಶಾರುಖ್-ದೀಪಿಕಾ ಕಾಂಬಿನೇಷನ್ ಇದೆ. ಈ ಜೋಡಿ ‘ಕಿಂಗ್’ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ಈ ಚಿತ್ರದ ಹಾಡಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊ ಕಿಂಗ್ ಚಿತ್ರದ ಸೋರಿಕೆಯಾದ ಹಾಡು ಎಂದು ಹೇಳಲಾಗುತ್ತಿದೆ. ಆದರೆ, ಇದರ ಅಸಲಿಯತ್ತ ಬೇರೆಯೇ ಇದೆ.

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ರೊಮ್ಯಾಂಟಿಕ್ ಹಾಡು ಗಮನ ಸೆಳೆದಿದೆ. ಇವರು ಡ್ಯಾನ್ಸ್ ಮಾಡುತ್ತಿದ್ದು ಹಿನ್ನೆಲೆಯಲ್ಲಿ ಒಂದು ಹಾಡು ಪ್ಲೇ ಆಗುತ್ತಿದೆ. ಇಬ್ಬರ ನಡುವಿನ ಚುಂಬನ ದೃಶ್ಯವೂ ವೀಡಿಯೊದಲ್ಲಿ ಕಂಡುಬರುತ್ತದೆ. ಈ ಕಾರಣದಿಂದಾಗಿ, ಸೋರಿಕೆಯಾದ ಈ ವೀಡಿಯೊ ನಿಜವಾಗಿಯೂ ‘ಕಿಂಗ್’ ಚಿತ್ರದ್ದೇ ಎಂದು ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿದೆ.

ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ ಶಾರುಖ್ ಹಾಗೂ ದೀಪಿಕಾ ರಿಯಲ್ ಎಂಬಂತೆ ಕಾಣಿಸಿಕೊಂಡಿದ್ದಾರೆ. ವೀಡಿಯೊದ ಟೋನ್ ಸಂಪೂರ್ಣವಾಗಿ ಸಿನಿಮೀಯ ಮತ್ತು ರೋಮ್ಯಾಂಟಿಕ್ ಆಗಿದೆ. ಇದು ಕಿಂಗ್ ಚಿತ್ರದ ಸೋರಿಕೆಯಾದ ಹಾಡು ಎಂದು ಹಲವರು ಭಾವಿಸುತ್ತಿದ್ದಾರೆ. ಆದಾಗ್ಯೂ, ಈ ವೀಡಿಯೊ ಯಾವುದೇ ರೀತಿಯಲ್ಲಿ ‘ಕಿಂಗ್’ ಚಿತ್ರದ ಭಾಗವಲ್ಲ. ಇದು AI- ರಚಿತವಾದ ಫ್ಯಾನ್ ಎಡಿಟ್ ಮಾಡಿದ ವೀಡಿಯೊ ಎಂದು ತಿಳಿದುಬಂದಿದೆ. ಇದರಲ್ಲಿ ಶಾರುಖ್ ಖಾನ್ ಅವರ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ ‘ಜವಾನ್’ ಚಿತ್ರದಂತೆಯೇ ಕಾಣುತ್ತದೆ. ವೀಡಿಯೊವನ್ನು ನೈಜವಾಗಿ ಕಾಣುವಂತೆ ಮಾಡಲು ತಂತ್ರಜ್ಞಾನವನ್ನು ಬಳಸಿಕೊಂಡು ಇಬ್ಬರ ಮುಖವನ್ನು ಎಡಿಟ್ ಮಾಡಲಾಗಿದೆ.

AI Grok ಸೇರಿದಂತೆ ಹಲವಾರು ಪರಿಕರಗಳು ವೈರಲ್ ವೀಡಿಯೊವನ್ನು ತನಿಖೆ ಮಾಡಿವೆ. ಅವರು ವೀಡಿಯೊ ನಕಲಿ ಮತ್ತು ಅಭಿಮಾನಿಗಳಿಂದ ನಿರ್ಮಿತ ಎಂದು ಹೇಳುತ್ತಾರೆ. ಚಿತ್ರದ ಯಾವುದೇ ಹಾಡುಗಳು ಅಥವಾ ದೃಶ್ಯಗಳು ಸೋರಿಕೆಯಾಗಿಲ್ಲ.

ವೀಡಿಯೊ ಕಾಣಿಸಿಕೊಂಡ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಉತ್ಸಾಹದಿಂದ ಪ್ರತಿಕ್ರಿಯಿಸಿದರು. ಅನೇಕ ಅಭಿಮಾನಿಗಳು ಈ ವೀಡಿಯೊವನ್ನು AI ನಿಂದ ರಚಿಸಲಾಗಿದೆ ಎಂದು ತಕ್ಷಣವೇ ಗುರುತಿಸಿದರು. ಕೆಲವರು ಇದನ್ನು ತಮಾಷೆಯೆಂದು ಕಂಡುಕೊಂಡರೆ, ಇತರರು ಇಂತಹ ನಕಲಿ ವೀಡಿಯೊಗಳ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ತಂತ್ರಜ್ಞಾನದ ಈ ಯುಗದಲ್ಲಿ, ನಿಜವಾದ ಮತ್ತು ನಕಲಿ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಹೆಚ್ಚು ಕಷ್ಟಕರವಾಗುತ್ತಿದೆ ಎಂದು ಜನರು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಓಡಿದ ಆರೋಪಿ – Kannada News | Man Flees From Parked Police Van in MP, Video Goes Viral

ಭೋಪಾಲ್, ಡಿಸೆಂಬರ್ 20: ಬಂಧಿತ ವ್ಯಕ್ತಿಯೊಬ್ಬ ಪೊಲೀಸ್ ಕಸ್ಟಡಿಯಿಂದ ವಿಚಿತ್ರವಾಗಿ ತಪ್ಪಿಸಿಕೊಳ್ಳುವ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ. ರಸ್ತೆಯಲ್ಲಿ ಪೊಲೀಸರು ತಮ್ಮ ವಾಹನವನ್ನು ನಿಲ್ಲಿಸಿದ್ದರು. ಆ ವೇಳೆ ಆರೋಪಿ ಓಡಿ ಹೋಗಿದ್ದಾನೆ. ಹಿಂದೆ ಪೊಲೀಸರು ಓಡಿದ್ದಾರೆ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿಲ್ಲ.ಈ ಘಟನೆ ಯಾವುದೋ ಸಿನಿಮಾದಂತೆ ಕಾಣಿಸುತ್ತದೆ.

ಮಧ್ಯಪ್ರದೇಶದ ಹೋಶಂಗಾಬಾದ್ ಹೊರವಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ ಆದರೆ ಸ್ಥಳದ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.ಈ ಕ್ಲಿಪ್ ವಿಡಿಯೋದಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನವನ್ನು ತೋರಿಸಲಾಗಿದ್ದು, ಕೆಲವು ಪೊಲೀಸರು ವಾಹನದ ಆಸು ಪಾಸಿನಲ್ಲಿದ್ದರು ಆಗ ವ್ಯಕ್ತಿ ವಾಹನದಿಂದ ಕೆಳಗಿಳಿದು ಓಡಲು ಶುರು ಮಾಡುತ್ತಾನೆ. ಇದು ನಿಜವಾದ ಘಟನೆಯೋ ಅಥವಾ ಮನರಂಜನೆಗಾಗಿ ಸಿದ್ಧಪಡಿಸಿರುವ ಸ್ಕ್ರಿಪ್ಟೋ ಎನ್ನುವ ಮಾಹಿತಿ ಲಭ್ಯವಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ತುಂಬಾನೇ ಕೆಳಮಟ್ಟದಲ್ಲಿ ಯೋಚಿಸಿದ್ರಾ ರಕ್ಷಿತಾ ಶೆಟ್ಟಿ? ನೆಟ್ಟಿಗರ ಕ್ಲಾಸ್ – Kannada News | Rakshitha Shetty’s Low Level Big Boss Act: Netizens Slam Makeup Brush Incident

ರಕ್ಷಿತಾ ಶೆಟ್ಟಿ (Rakshita Shetty) ಅವರ ಆಟದಲ್ಲಿ ಸಂಪೂರ್ಣ ಬದಲಾವಣೆ ಕಾಣುತ್ತಿದೆ. ಮೊದಲಿನ ರಕ್ಷಿತಾ ಶೆಟ್ಟಿಗೂ ಈಗಿನ ರಕ್ಷಿತಾ ಶೆಟ್ಟಿಗೂ ತುಂಬಾನೇ ವ್ಯತ್ಯಾಸ ಇದೆ. ಇದನ್ನು ಅನೇಕರು ಗಮನಿಸಿದ್ದಾರೆ. ಈಗ ಅವರು ನಡೆದುಕೊಂಡ ರೀತಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಅನೇಕರು ರಕ್ಷಿತಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅವರು ತುಂಬಾನೇ ಕೆಳಮಟ್ಟದಲ್ಲಿ ಯೋಚಿಸುತ್ತಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ರಕ್ಷಿತಾ ಶೆಟ್ಟಿ ಅವರು ಸದ್ಯ ಸೀಕ್ರೆಟ್ ರೂಂನಲ್ಲಿ ಇದ್ದಾರೆ. ಈ ವಾರ ಅವರು ಮತ್ತೆ ಬಿಗ್ ಬಾಸ್ ಮನೆ ಒಳಗೆ ಪ್ರವೇಶಿಸೋ ಸಾಧ್ಯತೆ ಇದೆ. ಡಿಸೆಂಬರ್ 19ರ ಎಪಿಸೋಡ್​​ನಲ್ಲಿ ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್​​ಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದರು. ಇದರ ಅನುಸಾರ ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಸೀಕ್ರೆಟ್ ರೂಂನಿಂದ ಬಿಗ್ ಬಾಸ್ ಮನೆ ಒಳಗೆ ತೆರಳಿ ಕಸ ಹರಡಿ ಬರಬೇಕು.

ಇದನ್ನು ಕೇಳುತ್ತಿದ್ದಂತೆ ರಕ್ಷಿತಾ ಶೆಟ್ಟಿ ಅವರು ಸಾಕಷ್ಟು ಎಗ್ಸೈಟ್ ಆದರು. ಸಿಕ್ಕಿದ್ದೇ ಚಾನ್ಸ್ ಎಂದು ಇಡೀ ಮನೆಯ ತುಂಬಾ ಥರ್ಮಕೋಲ್ ಚೂರು, ಪೇಪರ್ ಕಸವನ್ನು ಹರಡಿದರು. ಬಿಗ್ ಬಾಸ್ ಕೊಟ್ಟ ಟಾಸ್ಕ್ ಆದ್ದರಿಂದ ಮಾಡಲೇಬೇಕಿತ್ತು. ಆದರೆ, ಅವರು ಕೆಲವು ಮಹಿಳಾ ಸ್ಪರ್ಧಿಗಳ ವೈಯಕ್ತಿಕ ಮೇಕಪ್ ಬ್ರಶ್​​ಗಳನ್ನು ನೆಲಕ್ಕೆ ಹರಡಿದ್ದಾರೆ. ಇದನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ‘ನಿನಗೆ ಮಾನ-ಮಾರ್ಯಾದೆ ಏನೂ ಇಲ್ಲ’; ಗಿಲ್ಲಿಗೆ ಗಂಭೀರವಾಗಿಯೇ ಹೇಳಿದ ಕಾವ್ಯಾ

ಬ್ರಶ್​ಗಳು ನೆಲದ ಮೇಲೆ ಬಿದ್ದಿದ್ದನ್ನು ನೋಡುತ್ತಿದ್ದಂತೆ ರಾಶಿಕಾಗೆ ಸಾಕಷ್ಟು ಬೇಸರ ಆಯಿತು. ‘ಅವೆಲ್ಲ ನನ್ನ ಬ್ರಶ್​​ಗಳು. ಇದನ್ನು ಹೇಗೆ ಮರು ಜೋಡಿಸೋದು’ ಎಂದು ಅವರು ತಮ್ಮನ್ನು ತಾವು ಕೇಳಿಕೊಂಡರು. ಎಲ್ಲಕ್ಕಿಂತ ಮುಖ್ಯವಾಗಿ ಆ ಎಲ್ಲಾ ಬ್ರಶ್​​ಗಳು ಮುಖಕ್ಕೆ ಬಳಕೆ ಮಾಡೋದು. ನೆಲಕ್ಕೆ ಬಿದ್ದಾಗ ಧೂಳು-ಮಣ್ಣುಗಳು ಅದಕ್ಕೆ ಸೇರಿಕೊಳ್ಳಬಹುದು. ನಂತರ ಅದನ್ನು ಮುಖಕ್ಕೆ ಬಳಕೆ ಮಾಡಿದರೆ ಅಲರ್ಜಿ ಆಗಬಹುದು. ಇನ್ನು ಕಷ್ಟ ಪಟ್ಟು ದುಡಿದ ಹಣದಿಂದ ಮೇಕಪ್​ ಕಿಟ್​​ಗಳನ್ನು ಖರೀದಿ ಮಾಡಿರುತ್ತಾರೆ. ಇದನ್ನು ಹಾಳು ಮಾಡೋದು ಎಷ್ಟು ಸರಿ ಎಂದು ಅನೇಕರು ಕೇಳಿದ್ದಾರೆ. ರಕ್ಷಿತಾ ಈ ಕೀಳು ಬುದ್ಧಿಯನ್ನು ಬಿಡಬೇಕು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಪ್ರಾಣಿಗಳ ಮೇಲೆ ಸ್ವಲ್ಪ ದಯೆ ಇರಲಿ, ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ – Kannada News | Prayagraj Incident: Stray Dog Killed at Judge’s Residence, Guard Questioned

ಪ್ರಯಾಗ್​ರಾಜ್, ಡಿಸೆಂಬರ್ 20: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಬೆನಿಗಂಜ್ ಪ್ರದೇಶದಲ್ಲಿ ನ್ಯಾಯಮೂರ್ತಿ ಮನೆ ಎದುರು ಭದ್ರತಾ ಸಿಬ್ಬಂದಿ ಬೀದಿ ನಾಯಿಯನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮನೆ ಎದುರು ಹೊಸದಾಗಿ ನಿರ್ಮಿಸಲಾಗುತ್ತಿರುವ ರಸ್ತೆಯ ಮೇಲೆ ನಾಯಿ ನಡೆದಾಡಿದ್ದಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದೆ. ಸಿಸಿಟಿವಿಯಲ್ಲಿ ಭದ್ರತಾ ಸಿಬ್ಬಂದಿ ಬೀದಿ ನಾಯಿಯನ್ನು ಬೆನ್ನಟ್ಟುತ್ತಾ ಬಂದು ಗುಂಡು ಹಾರಿಸಿರುವುದನ್ನು ಕಾಣಬಹುದು.

ನಾಯಿಯನ್ನು ಕೊಲ್ಲುವುದು ಶಿಕ್ಷಾರ್ಹ ಅಪರಾಧ ಮತ್ತು ಇದಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಹೇಳುವ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರಾಣಿ ರಕ್ಷಕ ವಿದಿತ್ ಶರ್ಮಾ ಒತ್ತಾಯಿಸಿದ್ದಾರೆ. ಭದ್ರತಾ ಸಿಬ್ಬಂದಿಯನ್ನು ರಾಜೇಂದ್ರ ಪಾಂಡೆ ಎಂದು ಗುರುತಿಸಲಾಗಿದೆ. ಆತ ಅಲಹಾಬಾದ್ ಹೈಕೋರ್ಟ್​​ನ ನ್ಯಾಯಮೂರ್ತಿ ಕೈಲಾಶ್ ನಾಥ್ ಸಿನ್ಹಾ ಅವರ ಮನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸೂಪರ್ ಶರ್ಮಾ… ಅಭಿಷೇಕ್ ಆರ್ಭಟಕ್ಕೆ ವಿಶ್ವ ದಾಖಲೆ ಉಡೀಸ್ – Kannada News | Abhishek Sharma Breaks Tim David’s World Record

ಟಿ೨೦ ಕ್ರಿಕೆಟ್‌ನಲ್ಲಿ ಅಭಿಷೇಕ್ ಶರ್ಮಾ (Abhishek Sharma) ಆರ್ಭಟ ಮುಂದುವರೆದಿದೆ. ಅದು ಸಹ ಸಿಡಿಲಬ್ಬರದ ಬ್ಯಾಟಿಂಗ್‌ನೊಂದಿಗೆ. ಅಂದರೆ ಅತ್ಯುತ್ತಮ ಸ್ಟ್ರೈಕ್ ರೇಟ್​ನೊಂದಿಗೆ ಇದೀಗ ಅಭಿ, ಟಿಮ್ ಡೇವಿಡ್ ಅವರ ವಿಶ್ವ ದಾಖಲೆಯನ್ನು ಉಡೀಸ್ ಮಾಡಿದ್ದಾರೆ.

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ನಿಲ್ಲದ ಶೀತದಲೆಯ ಅಬ್ಬರ; 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​! – Kannada News | Bengaluru temperature :Extreme cold weather Karnataka, Orange alert for 5 districts, yellow alert for 10

ರಾಜ್ಯದಲ್ಲಿ ನಿಲ್ಲದ ಶೀತದಲೆಯ ಅಬ್ಬರ; 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​!

ಬೆಂಗಳೂರು, ಡಿಸೆಂಬರ್ 20: ರಾಜ್ಯದೆಲ್ಲೆಡೆ ಶೀತದಲೆ (Weather Forecast) ಅಬ್ಬರಿಸುತ್ತಿದ್ದು, ಚಳಿಯ ಪ್ರಭಾವದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರಿನಲ್ಲೂ ಮೈಕೊರೆಯುವ ಚಳಿ ಜನರನ್ನು ಬೆಂಬಿಡದೆ ಕಾಡುತ್ತಿದ್ದು, ಮೋಡ ಮುಸುಕಿದ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ. ಕಲಬುರಗಿ, ರಾಯಚೂರು ಸೇರಿದಂತೆ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಿರುವ ಇಲಾಖೆ, 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಿದೆ.

ಯಾವ ಜಿಲ್ಲೆಗಳಿಗೆ ಅಲರ್ಟ್​?

ಬೀದರ್, ಕಲಬುರಗಿ, ರಾಯಚೂಎಉ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಚಳಿಯ ಪ್ರಮಾಣ ಹೆಚ್ಚಿದ್ದು, ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಬೆಳಗಾವಿ, ಬಾಗಲಕೋಟೆ, ಕೊಪ್ಪಳ, ಗದಗ, ಧಾರವಾಡ, ಹಾವೇರಿ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಿದೆ.

ಎಲ್ಲೆಲ್ಲಿ ಒಣ ಹವೆ

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಮುಂದುವರೆದ ಚಳಿ

ಕಳೆದ ಕೆಲ ದಿನಗಳಿಂದ ರಾಜಧಾನಿಯ ವಾತಾವರಣ ಜನರನ್ನು ಗಡ ಗಡ ನಡುಗಿಸುತ್ತಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ. ಈ ಮಧ್ಯೆ ಬೆಂಗಳೂರಿನ ತಾಪಮಾನ ಕನಿಷ್ಠ 15°C ಇದ್ದು, ಗರಿಷ್ಠ 27°C ಇರಲಿದೆ ಎಂದು ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಿಪರೀತ ಸೊಳ್ಳೆ ಕಾಟ, ಮಹಾನಗರ ಪಾಲಿಕೆಗೆ ದೂರು ಕೊಡಲು ಸತ್ತ ಸೊಳ್ಳೆಗಳೊಂದಿಗೆ ಬಂದ ವ್ಯಕ್ತಿ – Kannada News | Raipur Man’s Mosquito Protest: Dead Bugs to Civic Body Amid Dengue Fear

ರಾಯ್​ಪುರ, ಡಿಸೆಂಬರ್ 20: ವಿಪರೀತ ಸೊಳ್ಳೆ ಕಾಟ ಎಷ್ಟು ಬಾರಿ ದೂರು ಕೊಟ್ಟರೂ ಯಾವುದೇ ಪ್ರಯೋಜನವೇ ಆಗಿಲ್ಲವೆಂದು ವ್ಯಕ್ತಿಯೊಬ್ಬರು ಸತ್ತ ಸೊಳ್ಳೆ(Mosquito)ಗಳನ್ನು ಹಿಡಿದು ಮುನ್ಸಿಪಲ್ ಕಾರ್ಪೊರೇಷನ್ ಕಚೇರಿಗೆ ಹೋಗಿರುವ ಘಟನೆ ಛತ್ತೀಸ್​ಗಢದ ರಾಯ್ಪುರದಲ್ಲಿ ನಡೆದಿದೆ. ರಾಯ್‌ಪುರದ ವಾಮನ್‌ರಾವ್ ಲಾಖೆ ವಾರ್ಡ್‌ನಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿತ್ತು. ದೌಲಾಲ್ ಪಟೇಲ್ ಎಂಬ ಆ ವ್ಯಕ್ತಿ, ತನ್ನನ್ನು ಕಚ್ಚಿದ ಸೊಳ್ಳೆಗಳು ಡೆಂಗ್ಯೂ ಬರಬಹುದೆಂಬ ಭಯದಲ್ಲಿದ್ದ. ಗಾಬರಿಗೊಂಡು ಮೊದಲು ವೈದ್ಯರನ್ನು ಸಂಪರ್ಕಿಸಿದ್ದಾರೆ. ವೈದ್ಯರು ಸೊಳ್ಳೆಗಳನ್ನು ಪರೀಕ್ಷಿಸಲು ಸಲಹೆ ನೀಡಿದ್ದಾರೆ.

ಸಾಮಾಜಿಕ ಕಾರ್ಯಕರ್ತ ವಿಜಯ್ ಸೋನಾ ಮತ್ತು ಪುರಸಭೆಯ ವಿರೋಧ ಪಕ್ಷದ ನಾಯಕ ಆಕಾಶ್ ತಿವಾರಿ ಅವರೊಂದಿಗೆ ಪಟೇಲ್, ಪಾಲಿಥಿನ್ ಚೀಲದಲ್ಲಿ ಸುರಕ್ಷಿತವಾಗಿ ಸೊಳ್ಳೆಗಳನ್ನು ಪ್ರಧಾನ ಕಚೇರಿಯಲ್ಲಿ ಆರೋಗ್ಯ ಅಧಿಕಾರಿಗೆ ನೀಡಿದರು. ಮಹಾನಗರ ಪಾಲಿಕೆ ಅಧಿಕಾರಿಗಳು ಕೂಡಲೇ ವೈದ್ಯರನ್ನು ಸಂಪರ್ಕಿಸಿ ಭಯವನ್ನು ನಿವಾರಿಸಲು ಪ್ರಯತ್ನಿಸಿದ್ದಾರೆ. ವರದಿಯು ಸ್ವಲ್ಪ ಸಮಾಧಾನ ತಂದಿತು ಏಕೆಂದರೆ ಕೀಟಗಳು ಡೆಂಗ್ಯೂ ವಾಹಕಗಳಲ್ಲ, ಸಾಮಾನ್ಯ ಸೊಳ್ಳೆಗಳು ಎಂದು ಕಂಡುಬಂದಿದೆ.
ತಿವಾರಿ ಆರೋಗ್ಯದ ಅಪಾಯಗಳ ಬಗ್ಗೆ ಚಿಂತಿತರಾಗಿದ್ದರು.

ಆರೋಗ್ಯದ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಟೇಲ್ ಮೊದಲು ವೈದ್ಯರನ್ನು ಸಂಪರ್ಕಿಸಿದರು, ಅವರು ಸೊಳ್ಳೆಗಳನ್ನು ಪರೀಕ್ಷಿಸಲು ಸಲಹೆ ನೀಡಿದರು. ಈ ಸಲಹೆಯನ್ನು ಅಕ್ಷರಶಃ ಸ್ವೀಕರಿಸಿದ ಪಟೇಲ್, ಕೀಟಗಳನ್ನು ಸ್ವತಃ ಅಧಿಕಾರಿಗಳ ಬಳಿಗೆ ತರಲು ನಿರ್ಧರಿಸಿದರು.

ಮತ್ತಷ್ಟು ಓದಿ: World Mosquito Day 2025: ಸೊಳ್ಳೆಗಳ ದಿನವನ್ನು ಆಚರಿಸೋದೇಕೆ ಗೊತ್ತಾ? ಇದರ ಹಿಂದೆಯೂ ಇದೆ ಒಂದು ಕಾರಣ

ವಿರೋಧ ಪಕ್ಷಗಳು ತಿರುಗೇಟು
ಈ ಘಟನೆಯು ನಗರದ ಸೊಳ್ಳೆ ನಿಯಂತ್ರಣ ವ್ಯವಸ್ಥೆಯ ಸಂಪೂರ್ಣ ವೈಫಲ್ಯವನ್ನು ಬಹಿರಂಗಪಡಿಸಿದೆ ಎಂದು ವಿರೋಧ ಪಕ್ಷದ ನಾಯಕ ಆಕಾಶ್ ತಿವಾರಿ ಹೇಳಿದರು. ಒಂದೆಡೆ, ಜನರಿಗೆ ‘ಸ್ವಚ್ಛ ರಾಯ್‌ಪುರ, ಸುಂದರ ರಾಯ್‌ಪುರ’ ಕನಸನ್ನು ತೋರಿಸಲಾಗುತ್ತದೆ. ಮತ್ತೊಂದೆಡೆ, ನಾಗರಿಕರು ಸೊಳ್ಳೆಗಳನ್ನು ಹಿಡಿದು ಪುರಸಭೆಯ ಕಚೇರಿಗೆ ತರುವಂತಾಗುತ್ತಿದೆ. ಸೊಳ್ಳೆಗಳ ಕಾಟ ಆತಂಕಕಾರಿ ಮಟ್ಟವನ್ನು ತಲುಪಿದ್ದು, ಜನರು ಡೆಂಗ್ಯೂ ಮತ್ತು ಮಲೇರಿಯಾದ ನಿರಂತರ ಭಯದಲ್ಲಿದ್ದಾರೆ ಎಂದು ನಿವಾಸಿಗಳು ಹೇಳಿದರು.

ಅದೇ ಪ್ರದೇಶದ ಯುವಕನೊಬ್ಬ ಕೆಲವು ವರ್ಷಗಳ ಹಿಂದೆ ಸೊಳ್ಳೆಯಿಂದ ಹರಡುವ ಕಾಯಿಲೆಯಿಂದ ಸಾವನ್ನಪ್ಪಿದ್ದನ್ನು ಸ್ಥಳೀಯರು ನೆನಪಿಸಿಕೊಂಡರು. ರಾಜಧಾನಿ ಇಷ್ಟೊಂದು ಕಳಪೆ ಸ್ಥಿತಿಯಲ್ಲಿದ್ದರೆ, ಸಣ್ಣ ಪಟ್ಟಣಗಳ ಪರಿಸ್ಥಿತಿ ಇನ್ನೆಷ್ಟು ಹದಗೆಟ್ಟಿರಬಹುದು ಎಂದು ತಿವಾರಿ ಕೇಳಿದ್ದಾರೆ. ರಾಯ್‌ಪುರ ಮುನ್ಸಿಪಲ್ ಕಾರ್ಪೊರೇಷನ್ ಒಂದು ಹೇಳಿಕೆಯಲ್ಲಿ, ಪೀಡಿತ ಪ್ರದೇಶಗಳಲ್ಲಿ ಫಾಗಿಂಗ್ ಮತ್ತು ಲಾರ್ವಾ ವಿರೋಧಿ ಸಿಂಪಡಣೆಯನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿದೆ.

ಆದಾಗ್ಯೂ, ಸೊಳ್ಳೆ ನಿಯಂತ್ರಣಕ್ಕಾಗಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದರೂ, ತೆರೆದ ಚರಂಡಿಗಳು ಮತ್ತು ಕಳಪೆ ಒಳಚರಂಡಿ ಆದರ್ಶ ಸಂತಾನೋತ್ಪತ್ತಿ ಸ್ಥಳಗಳನ್ನು ಒದಗಿಸುತ್ತಲೇ ಇದೆ ಎಂದು ನಿವಾಸಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

Published On – 7:28 am, Sat, 20 December 25

Source link

Bangalore Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿಂದು ಪವರ್ ಕಟ್, ಇಲ್ಲಿದೆ ವಿವರ – Kannada News | Bangalore Power Cut Today: BESCOM Announces Power Outage in Several Areas on December 20

ಬೆಂಗಳೂರು, ಡಿಸೆಂಬರ್ 20: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ. ಈ ಬಗ್ಗೆ ಬೆಸ್ಕಾಂ (BESCOM) ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಕೆಲವು ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ರ ವರೆಗೆ ಹಾಗೂ ಇನ್ನು ಕೆಲವು ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ ಪವರ್ ಕಟ್ ಇರಲಿದೆ.

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಪವರ್ ಕಟ್?

ಎಸ್1-ನಿಮ್ಹಾನ್ಸ್ ಕಿದ್ವಾಯಿ, ಜಯದೇವ, ರಾಜೀವ್‌ಗಾಂಧಿ, ಸಂಜಯಗಾಂಧಿ ಮತ್ತು ಇಂದಿರಾ ಗಾಂಧಿ ಆಸ್ಪತ್ರೆ, 1, 2, 3, 4, 9 ಟಿ ಬ್ಲಾಕ್, ಸೋಮೇಶ್ವರನಗರ, ವಿಲ್ಸನ್ ಗಾರ್ಡನ್ ರಸ್ತೆ, ಬನ್ನೇರುಘಟ್ಟ ರಸ್ತೆ, ಆರ್.ವಿ ರಸ್ತೆ, ಐಎಎಸ್ ಕಾಲೊನಿ, ಕೆಎಎಸ್ ಕಾಲೊನಿ, ಎನ್.ಎನ್.ಪಾಳ್ಯ ಕೈಗಾರಿಕಾ ಪ್ರದೇಶ, ಬಿಎಚ್​ಇಎಲ್ ಲೇಔಟ್, ಎಸ್​​ಆರ್‌ಕೆ ಗಾರ್ಡನ್ಸ್ ತಿಲಕ್ ನಗರ, ಶಾಂತಿ ವಾರ್ಕ್ ಮತ್ತು ಅಪಾರ್ಟ್ ಮೆಂಟ್, ರಂಕಾ ಕಾಲೊನಿ ರಸ್ತೆ, ಜಿಆರ್‌ಬಿ ಮುಖ್ಯರಸ್ತೆ, ಜೈನ ದೇವಾಲಯ ರಸ್ತೆ, ಬಿಟಿಎಂ 4ನೇ ಹಂತದ ಕೆಲವು ಭಾಗಗಳು, ಬಿಟಿಎಂ 2ನೇ ಹಂತ, ಮಂತ್ರಿ ಅಪಾರ್ಟ್ ಮೆಂಟ್, ಶೋಭಾ ಅಪಾರ್ಟ್ ಮೆಂಟ್, ವೆಗಾಸಿಟಿ ಮಾಲ್, ಬನ್ನೇರುಘಟ್ಟ ಮುರುಗುರಪ್ಪನ ಪಾಳ್ಯ, ಉತ್ತರಹಳ್ಳಿ ಪೂರ್ಣ ಪ್ರಜ್ಞಾ ಲೇಔಟ್, ಬನಶಂಕರಿ 6ನೇ ಹಂತ, ಶ್ರೀನಗರ, ಹೊಸಕರಹಳ್ಳಿ, ತ್ಯಾಗರಾಜನಗರ, ಬಸವನಗುಡಿ, ಕತ್ರಿಗುಪ್ಪೆ, ಗಿರಿನಗರ 4ನೇ ಹಂತ, ಐಟಿಐ ಲೇಔಟ್, 100 ಆಡಿ ವರ್ಮುಲ ರಸ್ತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4 ಗಂಟೆ ವರೆಗೆ ವಿದ್ಯುತ್ ಕಡಿತ ಇರಲಿದೆ.

ಬ್ರಿಗೇಟ್ ರಸ್ತೆ, ಕೇಂಬ್ರಿಡ್ಜ್ ರಸ್ತೆ, ಕ್ಯಾಸಲ್ ಸ್ಟ್ರೀಟ್, ಚರ್ಚ್ ಸ್ಟ್ರೀಟ್, ಕಮರ್ಶಿಯಲ್ ಸ್ಟ್ರೀಟ್, ಡಿಕನ್ಸನ್ ರಸ್ತೆ, ಇನ್‌ಫೆಂಟ್ರಿ ರಸ್ತೆ, ಈಶ್ವರ ಲೇಔಟ್, ಜೋಗುಪಾಳ್ಯ, ಕಾಮರಾಜ ರಸ್ತೆ, ಎಂ.ಜಿ.ರಸ್ತೆ (ಚಿನ್ನಸ್ವಾಮಿ ಸೇಡಿಯಂ ಸಮೀಪದ ಭಾಗ ಸಹಿತ). ಮ್ಯೂಸಿಯಂ ರಸ್ತೆ, ಪ್ಲೇನ್ ಸ್ಟ್ರೀಟ್, ಪ್ರೆಸ್ಟೀಜ್ ಹೆರ್ಮಿಟೇಜ್ ಅಪಾರ್ಟ್‌ಮೆಂಟ್, ರಿಚ್ಯಂಡ್ ಟೌನ್, ಯೂನಿಯನ್ ಸ್ಟ್ರೀಟ್, ವೆಲಿಂಗ್ಟನ್ ರಸ್ತೆ, ವುಡ್ ಸ್ಟ್ರೀಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ: ಕಾಂಗ್ರೆಸ್ ಮುಖಂಡನ ವಿರುದ್ಧ ಪ್ರಕರಣ ದಾಖಲು

ಭಾರತೀಯ ಸಿಟಿ ಸ್ಟೇಷನ್ ವ್ಯಾಪ್ತಿಯ – ಭಾರತೀಯ ಸಿಟಿ ಎಂಟ್ರೆನ್ಸ್ / ಮುಖ್ಯರಸ್ತೆ, ಭಾರತೀಯ ಸಿಟಿ ಬ್ಯಾಕ್ ಗೇಟ್, ಆರ್ಮಿ ಕಾಲೇಜ್, ಸ್ಟಮ್ ಬೋರ್ಡ್, ಕೆಎಂಪಿ ಲೇಔಟ್, ಕಿಂಗ್‌ಸ್ಟನ್ ರೆಸಿಡೆನ್ಸಿ, ಮದರ್ ಥೆರೇಸಾ ಲೇಔಟ್, ನಾಗೇನಹಳ್ಳಿ ಕೆರೆ, ರೀಜೆನ್ಸಿ ಪಾರ್ಕ್ ಲೇಔಟ್, ಅಂಜನಪ್ಪ ಲೇಔಟ್, ಸಿಎಸ್‌ಐ ಲೇಔಟ್, ನಕ್ಷತ್ರ ಲೇಔಟ್, ಲಾಯರ್ ಲೇಔಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link