Category Archives: Blog

Your blog category

ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರು: ಮಾರ್ಚ್ 5ರಂದು ಬೃಹತ್ ಹೋರಾಟಕ್ಕೆ ಕರೆ – Kannada News | Contractors Call for Massive Strike on March 5 Over Delayed Bill Payments

ಗುತ್ತಿಗೆದಾರರ ಸಂಘದ ಪೂರ್ವಭಾವಿ ಸಭೆImage Credit source: tv9 kannada

ಮಂಡ್ಯ, ಫೆಬ್ರವರಿ 11: ರಾಜ್ಯ ಸರ್ಕಾರ ಬಿಲ್ ಬಾಕಿ ಉಳಿಸಿಕೊಂಡ ವಿಚಾರವಾಗಿ ಸರ್ಕಾರದ ವಿರುದ್ಧ ಗುತ್ತಿಗೆದಾರರು ಸಮರಕ್ಕೆ ಮುಂದಾಗಿದ್ದಾರೆ. ಸಾವಿರಾರು ಕೋಟಿ ರೂ ಬಾಕಿ ಬಿಲ್ ಬಿಡುಗಡೆ (Pending Bills) ಮಾಡದ ಹಿನ್ನೆಲೆ ರಾಜ್ಯ ಕಾಂಗ್ರೆಸ್​​ ಸರ್ಕಾರದ ವಿರುದ್ಧ ತಿರುಗಿಬಿದ್ದ ಗುತ್ತಿಗೆದಾರರು, ಮಾರ್ಚ್ 5ರಂದು ಬೃಹತ್ ಹೋರಾಟಕ್ಕೆ ಕರೆ (Contractors Protest) ನೀಡಿದ್ದಾರೆ.

ಮಂಡ್ಯದ ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮಾರ್ಚ್ 5ರಂದು ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿದೆ.

ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ

ಸಭೆ ಬಳಿಕ ಮಾತನಾಡಿದ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್, ಸರ್ಕಾರ ಗುತ್ತಿಗೆದಾರರ 37 ಸಾವಿರ ಕೋಟಿ ರೂ ಬಾಕಿ ಉಳಿಸಿಕೊಂಡಿದೆ. ಮಂಡ್ಯ ಜಿಲ್ಲೆಯಲ್ಲಿ ಗುತ್ತಿಗೆದಾರರ 950 ಕೋಟಿ ರೂ ಹಣ ಬಾಕಿ ಇದೆ. ಹೀಗಾಗಿ ಗುತ್ತಿಗೆದಾರರಿಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಸಣ್ಣಪುಟ್ಟ ಗುತ್ತಿಗೆ ಕೆಲಸ ಮಾಡಿದ್ರೂ ನಮಗೆ ದುಡ್ಡು ಕೊಡುತ್ತಿಲ್ಲ. ಸಾಲಸೋಲ ಮಾಡಿ ಕೆಲಸ ಮಾಡಿದ್ದೇವೆ, ಈಗ ಬಡ್ಡಿ ಕಟ್ಟಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಕಿ ಬಿಲ್ ಕ್ಲಿಯರ್ ಮಾಡದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಸ್ಥಗಿತ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರ ಸಂಘ

ಸಮಸ್ಯೆ ಸರಿಪಡಿಸುವಂತೆ ಮನವಿ ಮಾಡಿದರೆ ಯಾರೂ ಆಲಿಸುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಈಗ ಕಮಿಷನ್ ಹಾವಳಿ ಹೆಚ್ಚಾಗಿದೆ. ಈ ಹಿಂದೆ ನಮ್ಮ ಬೆನ್ನಿಗೆ ನಿಂತು ಈಗ ಅವರೇ ಭ್ರಷ್ಟರಾಗಿದ್ದಾರೆ. ನಮ್ಮಿಂದಲೇ ಅಧಿಕಾರಕ್ಕೆ ಬಂದವರು ನಮ್ಮನ್ನೇ ಕಡೆಗಣಿಸಿದ್ದಾರೆ. ಸರ್ಕಾರ ಎಚ್ಚೆತ್ತು ತಕ್ಷಣವೇ ಬಾಕಿ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಸರ್ಕಾರಕ್ಕೆ ಆರ್.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಗುತ್ತಿಗೆದಾರರಿಗೆ ಯಾಕೆ ಬಿಲ್ ಬಿಡುಗಡೆಯಾಗುತ್ತಿಲ್ಲ? ಕಾರಣ ಕೊಟ್ಟ ಹಣಕಾಸು ಇಲಾಖೆ ಕಾರ್ಯದರ್ಶಿ

ಈ ವಿಚಾರವಾಗಿ ಇತ್ತೀಚಿನ ರಾಜ್ಯ ಗುತ್ತಿಗೆದಾರರ ಪ್ರತಿನಿಧಿ ಸಂಘವು ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಸುಮಾರು 33 ಸಾವಿರ ಕೋಟಿ ರೂ ಮೊತ್ತದ ಪಾವತಿಗಳು ಇನ್ನೂ ಬಾಕಿ ಉಳಿದಿವೆ ಎಂದು ಗಮನಸೆಳೆದಿದ್ದರು. ಜೊತೆಗೆ ತಕ್ಷಣವೇ ಈ ಬಾಕಿ ಹಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಸಂಘ ಒತ್ತಾಯಿಸಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಲ್ಲಿ ಮೂರುವರೆ ಗಂಟೆಗೆ ಒಂದು ಆತ್ಮಹತ್ಯೆ: ಬೆಚ್ಚಿ ಬೀಳಿಸುವಂತಿದೆ ಅಂಕಿ-ಅಂಶ – Kannada News | Suicide Crisis in Bengaluru: One Life Lost Every 3.5 Hours, Says Report

ಬೆಂಗಳೂರು, ಫೆಬ್ರವರಿ 11: ಐಟಿ ಸಿಟಿ ಬೆಂಗಳೂರಲ್ಲಿ ಆತ್ಮಹತ್ಯೆ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಏರಿಕೆ ಕಾಣುತ್ತಿದ್ದು, ಅಂಕಿ-ಅಂಶಗಳು ಬೆಚ್ಚಿಬೀಳಿಸುವಂತಿವೆ. ವರದಿಗಳ ಪ್ರಕಾರ, ನಗರದಲ್ಲಿ ಸರಾಸರಿ ಮೂರುವರೆ ಗಂಟೆಗೆ ಒಂದು ಆತ್ಮಹತ್ಯೆ ನಡೆಯುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 9,450 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ವರ್ಷಕ್ಕೆ ಸರಾಸರಿ ಎರಡು ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಗೃಹ ಇಲಾಖೆಯ ಮಾಹಿತಿಯಂತೆ, ಪ್ರತಿದಿನವೂ ಸುಮಾರು ಆರುರಿಂದ ಏಳು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ.

ಬೆಂಗಳೂರಲ್ಲಿ ನಡೆದ ಆತ್ಮಹತ್ಯೆ ಕೇಸ್​​ಗಳ ಅಂಕಿ-ಅಂಶ

ವರ್ಷ ಪ್ರಕರಣಗಳ ಸಂಖ್ಯೆ
2022 2,370
2023 2,313
2024 2,403
2025 2,300+

ಇದನ್ನೂ ಓದಿ: ಬೆಂಗಳೂರಿನಲ್ಲಿ ಶಾಲಾ ಬಸ್​ ಹರಿದು ಮಕ್ಕಳಿಬ್ಬರು ಸಾವು; ಹಾಲು ತರಲು ಹೊರಟ್ಟಿದ್ದವರು ದುರಂತ ಅಂತ್ಯ

ಆತ್ಮಹತ್ಯೆ ಪ್ರಕರಣ ಏರಿಕೆಗೆ ಕಾರಣಗಳೇನು?

ತಜ್ಞರ ಅಭಿಪ್ರಾಯದಂತೆ, ಮಾನಸಿಕ ಆರೋಗ್ಯ ಸಮಸ್ಯೆಗಳು, ಕುಟುಂಬ ಕಲಹಗಳು, ಆರ್ಥಿಕ ಸಂಕಷ್ಟ, ಸಂಬಂಧಗಳ ಭಂಗ ಹಾಗೂ ಭಾವನಾತ್ಮಕ ಒತ್ತಡಗಳು ಆತ್ಮಹತ್ಯೆ ಕೇಸ್​​ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (NIMHANS) ನೀಡಿದ ಮಾಹಿತಿಯಂತೆ, ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಸುಮಾರು ಮೂರನೇ ಒಂದು ಭಾಗ ಜನರಿಗೆ ಮಾನಸಿಕ ಅಸ್ವಸ್ಥತೆಗಳ ಹಿನ್ನೆಲೆ ಇದೆ. ಉಳಿದವರಲ್ಲಿ ಆರ್ಥಿಕ ಸಮಸ್ಯೆಗಳು, ರಿಲೇಶನ್​​ಸೀಪ್​​ ಬ್ರೇಕಪ್​​ ಹಾಗೂ ತೀವ್ರ ಭಾವನಾತ್ಮಕ ಒತ್ತಡ ಪ್ರಮುಖ ಕಾರಣಗಳಾಗಿವೆ.

ನಗರದಲ್ಲಿ ನಡೆದ ಬಹುತೇಕ ಆತ್ಮಹತ್ಯೆ ಪ್ರಕರಣಗಳನ್ನು ಗಮನಿಸಿದಾಗ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟವರ ಸಂಖ್ಯೆಯೇ ಬಹಳ ದೊಡ್ದದಿದೆ. ಒಟ್ಟು ಪ್ರಕರಣಗಳಲ್ಲಿ ಶೇಕಡಾ 86ರಷ್ಟು ಮಂದಿ ಪ್ರಾಣ ಕಳೆದುಕೊಳ್ಳಲು ಈ ವಿಧಾನವನ್ನೇ ಆಯ್ದುಕೊಂಡಿದ್ದಾರೆ. ವಿಷ ಸೇವನೆ ಮತ್ತು ಎತ್ತರದ ಕಟ್ಟಡಗಳಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಕೇಸ್​​ಗಳು ನಂತರದ ಸ್ಥಾನದಲ್ಲಿವೆ. ರೈಲು ಹಳಿಗಳ ಮೇಲೆ ಜಿಗಿಯುವುದು, ಬೆಂಕಿಯಿಂದ ಸುಟ್ಟುಕೊಂಡು ಮೃತಪಟ್ಟ ಪ್ರಕರಣಗಳೂ ಹೆಚ್ಚಿವೆ ಎನ್ನಲಾಗಿದೆ.

ಸಹಾಯವಾಣಿ ಆರಂಭ

ಆತ್ಮಹತ್ಯೆ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, NIMHANS ವತಿಯಿಂದ ಟೆಲಿ-ಮನಸ್ (Tele-MANAS) ಹೆಲ್ಪ್‌ಲೈನ್ ಆರಂಭಿಸಲಾಗಿದೆ. ಆತ್ಮಹತ್ಯೆ ಯೋಚನೆಗಳು ಅಥವಾ ಮಾನಸಿಕ ಸಂಕಷ್ಟ ಎದುರಿಸುತ್ತಿರುವವರು ತಕ್ಷಣ ಸಹಾಯಕ್ಕಾಗಿ 14416 / 1800-891-4416 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಟೈಮ್ಸ್​​ ನೌ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:05 pm, Wed, 11 February 26

Source link

ಬಜೆಟ್ ನಡುವೆ ಶಾಸಕರಿಂದ ವಿದೇಶ ಪ್ರವಾಸ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಕೆಶಿ ಆಪ್ತ – Kannada News | DK Shivakumar Close Aide HC Balakrishna Reacts On Karnataka Congress MLAs foreign trip

ನವದೆಹಲಿ, (ಫೆಬ್ರವರಿ 11): ಕರ್ನಾಟಕ ಕಾಂಗ್ರೆಸ್​​​ನಲ್ಲಿ ಕುರ್ಚಿ ಕಿತ್ತಾಟ ಜೋರಾಗಿದ್ದು, ಇದೀಗ ದೆಹಲಿ ಅಂಗಳ ತಲುಪಿದೆ. ಸಿಎಂ ಪಟ್ಟಕ್ಕಾಗಿ ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್ ರಾಹುಲ್​ ಗಾಂಧಿ ಮನವೊಲಿಕೆಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಸಿದ್ಧತೆಗಳನ್ನು ನಡೆಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್​​ನಲ್ಲಿ ಶಾಸಕರ ವಿದೇಶ ಪ್ರವಾಸ ಭಾರೀ ಸಂಚಲನ ಮೂಡಿಸಿದೆ. ಹೌದು…ಅಧ್ಯಯನ ಹೆಸರಿನಲ್ಲಿ ಕೆಲ ಶಾಸಕರು ಫಾರಿನ್ ಟ್ರಿಪ್ ಹೋಗಲು ಮುಂದಾಗಿದ್ದಾರೆ. ಇನ್ನು ಈ ಬಗ್ಗೆ ಡಿಕೆ ಶಿವಕುಮಾರ್ ಆಪ್ತ ಶಾಸಕ ಎಚ್​​ಸಿ ಬಾಲಕೃಷ್ಣ ಮಾತನಾಡಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Source link

‘ವಲವಾರ’ ನೋಡಲು ಹೋಗಿ: ‘ಯಾವ ನಾಯಿಗೆ ಬೇಕು ನಿನ್ನ ಟಿಕೆಟ್’ ಎನ್ನಿ – Kannada News | Veerakaputra Srinivas supports Kannada movie Valavara viral Facebook post

‘ಕನ್ನಡದಲ್ಲಿ ಒಳ್ಳೆ ಸಿನಿಮಾಗಳು ಬರಲ್ಲ’ ಪರಭಾಷೆ ಸಿನಿಮಾಗಳನ್ನು ನೋಡುವ ಕನ್ನಡಿಗರ ಕಾಮನ್ ಡೈಲಾಗ್ ಇದು. ಆದರೆ ಒಳ್ಳೆ ಕನ್ನಡ ಸಿನಿಮಾಗಳು ಬಂದಾಗ ಈ ‘ಸಿನಿಮಾ ಪ್ರೇಮಿ’ಗಳು ಜಾಣ ಕುರುಡು ಪ್ರದರ್ಶಿಸುತ್ತಾರೆ. ಈಗ ಮತ್ತೊಮ್ಮೆ ಇದು ಸಾಬೀತಾಗಿದೆ. ಕನ್ನಡದಲ್ಲಿ ‘ವಲವಾರ’ ಹೆಸರಿನ ಸುಂದರ, ಅಪ್ಪಟ ಕನ್ನಡ ಸಿನಿಮಾ ಒಂದು ಬಿಡುಗಡೆ ಆಗಿದೆ. ಆದರೆ ಮತ್ತದೆ ಸಮಸ್ಯೆ, ಸಿನಿಮಾ ಮಂದಿರಕ್ಕೆ ಜನ ಬರುತ್ತಿಲ್ಲ. ಆದರೆ ಕೆಲವು ನಿಜವಾದ ಸಿನಿಮಾ ಪ್ರೇಮಿಗಳು, ಕನ್ನಡ ಮನಸುಗಳು, ಅಪ್ಪಟ ಕನ್ನಡ ಸಿನಿಮಾಕ್ಕೆ ಎಂದಿನಂತೆ ಈ ಬಾರಿಯೂ ಬೆಂಬಲಿಸುತ್ತಿದ್ದು, ಜನರನ್ನು ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ.

ತಮ್ಮ ಕನ್ನಡದ ಕೆಲಸಗಳು ಹಾಗೂ ವಿಷ್ಣುವರ್ಧನ್ ಸ್ಮಾರಕಕ್ಕಾಗಿ ಹೋರಾಟಗಳಿಂದ ಗುರುತಿಸಿಕೊಂಡಿರುವ ವೀರಕಪುತ್ರ ಶ್ರೀನಿವಾಸ್ ಅವರು ಫೇಸ್​​ಬುಕ್​​ನಲ್ಲಿ ‘ವಲವಾರ’ ಸಿನಿಮಾ ಬಗ್ಗೆ ಪೊಸ್ಟ್ ಒಂದನ್ನು ಹಂಚಿಕೊಂಡಿದ್ದು, ಆ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. ‘ವಲವಾರ’ ಸಿನಿಮಾ ವೀಕ್ಷಿಸಿರುವ ವೀರಕಪುತ್ರ ಶ್ರೀನಿವಾಸ್ ಅವರು ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದು, ಸಿನಿಮಾಕ್ಕೆ ತಾವೇ ಟಿಕೆಟ್ ಕೊಡಿಸುವುದಾಗಿ ಸಹ ಹೇಳಿದ್ದಾರೆ. ಆದರೆ ಅವರಿಂದ ಟಿಕೆಟ್ ಪಡೆಯುವ ಮುನ್ನ ಅವರ ಫೇಸ್​​ಬುಕ್​​ನಲ್ಲಿ ಬರೆದಿರುವ ಪೋಸ್ಟ್ ಒಮ್ಮೆ ಓದಿಕೊಳ್ಳಿ..

ವೀರಕಪುತ್ರ ಶ್ರೀನಿವಾಸ್ ಅವರ ಫೇಸ್​​ಬುಕ್ ಪೋಸ್ಟ್

ಯಾವ ನಾಯಿಗೆ ಬೇಕೋ ನಿನ್ನ ಟಿಕೇಟ್…

ಈ ಸಿನಿಮಾವನ್ನು ಗೆಲ್ಲಿಸಿಕೊಳ್ಳದಿದ್ದ ಮೇಲೆ, ಉತ್ತಮ ಸಿನಿಮಾಗಳು ಬರುತ್ತಿಲ್ಲ ಎಂದು ಆರೋಪಿಸುವ ಹಕ್ಕು ನಮಗಿಲ್ಲ. ಇದು ಸಿನಿಮಾವಲ್ಲ; 70-90 ರ ನಡುವಿನಲ್ಲಿ ಹಳ್ಳಿಯಲ್ಲಿ ಹುಟ್ಟಿದ ಪ್ರತಿ ಬಡವನ ಕತೆ! ಇಲ್ಲಿ ನಿಮ್ಮ ಅಮ್ಮ ನಿಮಗೆ ಹೊಸ ರೂಪದಲ್ಲಿ ಸಿಗುತ್ತಾರೆ. ನೀವಾಕೆಯನ್ನು ಅಪ್ಪಿ ಅಳುವಿರಿ. ನಿಮ್ಮ ಬಾಲ್ಯ ನಿಮಗೆ ಟನ್ ಗಟ್ಟಲೆ ವಾಪಸ್ ಸಿಗುತ್ತದೆ. ನೀವದನ್ನು ಅಪ್ಪಿ ನಗುವಿರಿ. ಆ ಊರು, ಆ ಕೆರೆ, ಆ ಹಸು, ಆ ಹೊಲ, ಆ ಕೋಳಿ, ಅದೊಂದು ಪೊದೆ… ಎಲ್ಲವೂ ನಮ್ಮದೇ! ಒಂದು ಫೀಲ್ ಗುಡ್ ಮೂವಿ.

ಇವತ್ತು ಸಂಜೆ 7.30ಕ್ಕೆ ವೇಗ ಸಿಟಿ ಮಾಲ್ನಲ್ಲಿ ಈ ಸಿನಿಮಾವನ್ನು ನಾನು ಮತ್ತೊಮ್ಮೆ ನಿಮ್ಮ ಜೊತೆ ನೋಡಬೇಕೆನಿಸಿದೆ. ಬರ್ತೀರಾ ಪ್ಲೀಸ್…? ಟಿಕೆಟ್ ನಾನೇ ಕೊಡಿಸುವೆ.

ಅಥವಾ

ಸಂಪತ್ತಿಗೆ ಸವಾಲ್ ಸಿನಿಮಾದ ಡಾ.ರಾಜ್ ಅವರ ಸ್ಟೈಲಿನಲ್ಲಿ ಯಾವ ನಾಯಿಗೇ ಬೇಕೋ ನಿನ್ನ ಟಿಕೆಟ್! ಯಾವ ನಾಯಿಗೆ ಬೇಕೋ… ಅಂತ ಬೈದಾದರೂ ಬಂದು ನಿಮ್ಮದೇ ಹಣದಲ್ಲಿ ಸಿನಿಮಾ ನೋಡಿ. ಒಟ್ನಲ್ಲಿ ನೋಡಿ! ಏಕೆಂದರೆ ಇದು ಕನ್ನಡಕ್ಕಾಗಿ ಮಾತ್ರವಲ್ಲ; ನಮಗಾಗಿಯೂ ಹೌದು. ಬರ್ತೀರಾ?

ವೀರಕಪುತ್ರ ಶ್ರೀನಿವಾಸ್ ಅವರ ಈ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. ಚಿತ್ರಸಾಹಿತಿ, ನಿರ್ದೇಶಕ ಕವಿರಾಜ್, ಮಾಜಿ ಬಿಗ್​​ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಇನ್ನೂ ಹಲವಾರು ಮಂದಿ ವೀರಕಪುತ್ರ ಶ್ರೀನಿವಾಸ್ ಅವರ ಈ ಪೋಸ್ಟ್​​ ಅನ್ನು ಹಂಚಿಕೊಳ್ಳುತ್ತಿರುವ ಜೊತೆಗೆ ಸಿನಿಮಾ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಸಹ ದಾಖಲಿಸುತ್ತಿದ್ದಾರೆ.

ಇದನ್ನೂ ಓದಿ:‘ವಲವಾರ’ ಸಿನಿಮಾ ವಿಮರ್ಶೆ; ಹಾಸ್ಯ, ಭಾವನೆಗಳ ಮಿಶ್ರಣ; ಬಾಲ್ಯ ನೆನಪಿಸೋ ಪಯಣ

ವಲವಾರ ಸಿನಿಮಾ ಬಗ್ಗೆ

ಸುನತ್ ಗೌಡ ಎಂಬುವರು ನಿರ್ದೇಶಿಸಿರುವ ‘ವಲವಾರ’ ಸಿನಿಮಾ ಅಪ್ಪಟ ಹಳ್ಳಿಗಾಡಿನ ಆಪ್ತವಾದ ಸಿನಿಮಾ. ಒಂದು ಹಸು ಹಾಗೂ ಇಬ್ಬರು ಮಕ್ಕಳು ಹಾಗೂ ತಂದೆಯ ನಡುವಿನ ಕತೆಯನ್ನು ಸಿನಿಮಾ ಒಳಗೊಂಡಿದೆ. ಹಲವಾರು ಮಂದಿ ‘ವಲವಾರ’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಒಳ್ಳೆಯ ಕನ್ನಡ ಸಿನಿಮಾಕ್ಕೆ ಇದೀಗ ಕನ್ನಡಿಗರ ಬೆಂಬಲ ಬೇಕಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿ ಪ್ಯಾನ್ ನಿಯಮಗಳ ಬದಲಾವಣೆ ಗಮನಿಸಿ… – Kannada News | New Income Tax law, key PAN rules changes for common people

ನವದೆಹಲಿ, ಫೆಬ್ರುವರಿ 11: ಸರ್ಕಾರ ಆದಾಯ ತೆರಿಗೆ ಕಾನೂನಿನಲ್ಲಿ (New Income Tax rules) ಕೆಲ ಸುಧಾರಣೆಗಳನ್ನು ಮಾಡುತ್ತಿದ್ದು, ಹೊಸ ಕರಡು ನಿಯಮಗಳನ್ನು ರೂಪಿಸಿದೆ. ಇವು ಸಾರ್ವಜನಿಕ ಪರಾಮರ್ಶೆಗೆ ಒಳಪಡುತ್ತಿದ್ದು, ಅಂತಿಮ ನಿಯಮಗಳು 2026ರ ಏಪ್ರಿಲ್ 1ರಿಂದ ಜಾರಿಗೆ ಬರುತ್ತವೆ. ಈ ಪ್ರಸ್ತಾಪಿತ ನಿಯಮಗಳಲ್ಲಿ ಕೆಲ ಪ್ಯಾನ್ ನಿಯಮಗಳ ಬದಲಾವಣೆಗಳೂ ಇವೆ. ನಿಮ್ಮ ಹಣಕಾಸು ಸ್ಥಿತಿ ಗತಿ ಮತ್ತು ವರ್ತನೆಯ ಮೇಲೆ ಪರಿಣಾಮ ಬೀರಬಲ್ಲ ನಿಯಮಗಳೂ ಇದರಲ್ಲಿವೆ. ಕ್ಯಾಷ್ ಡೆಪಾಸಿಟ್ ಮಿತಿ, ವಾಹನ ಖರೀದಿ, ಇನ್ಷೂರೆನ್ಸ್ ಇತ್ಯಾದಿ ವಿಚಾರದಲ್ಲಿ ಪ್ಯಾನ್ ಬಳಕೆ ಕುರಿತಾದ ಬದಲಾವಣೆಗಳಿವು.

ಕ್ಯಾಷ್ ಡೆಪಾಸಿಟ್ ಮತ್ತು ವಿತ್​ಡ್ರಾಯಲ್ ಮಿತಿಯಲ್ಲಿ ಭಾರೀ ಹೆಚ್ಚಳ

ಒಬ್ಬ ವ್ಯಕ್ತಿ ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಕ್ಯಾಷ್ ಡೆಪಾಸಿಟ್ ಮಾಡಿದಾಗ ಅಥವಾ ವಿತ್​ಡ್ರಾ ಮಾಡಿದಾಗ ಪ್ಯಾನ್ ಅನ್ನು ನಮೂದಿಸಬೇಕು ಎನ್ನುವ ಪ್ರಸ್ತಾಪ ಇದೆ. ಈಗಿರುವ ನಿಯಮ ಪ್ರಕಾರ, ದಿನಕ್ಕೆ 50,000 ರೂ ಹಾಗೂ ಹೆಚ್ಚಿನ ಮೊತ್ತದ ಡೆಪಾಸಿಟ್​ಗೆ ಪ್ಯಾನ್ ತೋರಿಸಬೇಕು.

ವಾಹನ ಖರೀದಿಯಲ್ಲೂ ಮಿತಿ ಹೆಚ್ಚಳ

ಮೋಟಾರು ವಾಹನ ಖರೀದಿಸುವಾಗ, ಅದರ ಮೌಲ್ಯ 5 ಲಕ್ಷ ರೂಗಿಂತ ಹೆಚ್ಚಿದ್ದರೆ ಆಗ ಆ ಹಣ ಪಾವತಿಸುವಾಗ ಪ್ಯಾನ್ ತೋರಿಸಬೇಕು ಎಂದು ಹೊಸ ನಿಯಮದಲ್ಲಿ ಪ್ರಸ್ತಾಪಿಸಲಾಗಿದೆ. ಈಗಿರುವ ನಿಯಮದ ಪ್ರಕಾರ ಯಾವುದೇ ಮೌಲ್ಯದ ಯಾವುದೇ ವಾಹನದ ಖರೀದಿಯಾದರೂ ಪ್ಯಾನ್ ತೋರಿಸುವುದು ಕಡ್ಡಾಯ.

ಇದನ್ನೂ ಓದಿ: ಹೂಡಿಕೆಗಳು ಎತ್ತ..? ಕುಗ್ಗಿದ ಈಕ್ವಿಟಿ ಮ್ಯೂಚುವಲ್ ಫಂಡ್​ಗಳು; ಹಿಗ್ಗಿದ ಗೋಲ್ಡ್ ಇಟಿಎಫ್​ಗಳು

ಹೋಟೆಲ್, ಸಭಾಂಗಣಗಳ ಪಾವತಿಯಲ್ಲಿ…

ಹೋಟೆಲ್, ರೆಸ್ಟೋರೆಂಟ್, ಬ್ಯಾಂಕ್ವೆಟ್ ಹಾಲ್, ಕನ್ವೆನ್ಷನ್ ಸೆಂಟರ್, ಈವೆಂಟ್ ಮ್ಯಾನೇಜರ್ ಇತ್ಯಾದಿ ಸೇವೆಗಳಿಗೆ ಹಣ ಪಾವತಿಸುವಾಗ ಅದರ ಮೌಲ್ಯ 50,000 ರೂ ಇದ್ದರೆ ಪ್ಯಾನ್ ನೀಡಬೇಕು. ಆದರೆ, ಹೊಸ ನಿಯಮದಲ್ಲಿ ಈ ಮಿತಿಯನ್ನು ಒಂದು ಲಕ್ಷ ರೂಗೆ ಏರಿಸಲಾಗಿದೆ.

ರಿಯಲ್ ಎಸ್ಟೇಟ್ ವಹಿವಾಟು

ಸದ್ಯ ನೀವು ಖರೀದಿಸಿರುವ ಅಥವಾ ಮಾರುತ್ತಿರುವ ಸೈಟು, ಮನೆಯ ಬೆಲೆ 10 ಲಕ್ಷ ರೂ ದಾಟಿದಾಗ ಪ್ಯಾನ್ ನೀಡಬೇಕು. ಈಗ ಇದರ ಮಿತಿಯನ್ನು 20 ಲಕ್ಷ ರೂಗೆ ಏರಿಸುವ ಪ್ರಸ್ತಾಪ ಮಾಡಲಾಗಿದೆ.

ಪ್ಯಾನ್ ವ್ಯಾಪ್ತಿಗೆ ಇನ್ಷೂರೆನ್ಸ್ ಅಕೌಂಟ್

ಇನ್ಷೂರೆನ್ಸ್ ಪಾಲಿಸಿ ಮಾಡಿಸುವಾಗಲೇ ಪ್ಯಾನ್ ತೋರಿಸಬೇಕು ಎನ್ನುವ ನಿಯಮದ ಪ್ರಸ್ತಾಪ ಮಾಡಲಾಗಿದೆ. ಈಗಿರುವ ನಿಯಮದ ಪ್ರಕಾರ, ಲೈಫ್ ಇನ್ಷೂರೆನ್ಸ್ ಪ್ರೀಮಿಯಮ್ ಹಣ ವರ್ಷಕ್ಕೆ 50,000 ರೂ ಮೀರಿದಾಗ ಮಾತ್ರ ಪ್ಯಾನ್ ನೀಡಬೇಕು ಎಂದಿದೆ.

ಇದನ್ನೂ ಓದಿ: ಭಾರತಕ್ಕೆ ದಿಢೀರ್ ಪೆಟ್ರೋಲಿಯಂ ಪೂರೈಕೆ ನಿಂತು ಹೋದರೆ, ಎಷ್ಟು ದಿನಕ್ಕೆ ಆಗುವಷ್ಟು ಪೆಟ್ರೋಲ್ ರಿಸರ್ವ್ ಇದೆ ಗೊತ್ತಾ?

ಹೊಸ ಆದಾಯ ತೆರಿಗೆ ಕಾಯ್ದೆ 2026ರ ಏಪ್ರಿಲ್​ನಿಂದ ಜಾರಿಗೆ ಬರುತ್ತದೆ. ಇದರಲ್ಲಿ ನಿಯಮಗಳನ್ನು ಸರಳ ಹಾಗೂ ಸುಲಭಗೊಳಿಸಲಾಗಿದೆ. ಕ್ರಿಪ್ಟೋ ವಹಿವಾಟುಗಳ ಮಾಹಿತಿಯನ್ನು ಆದಾಯ ತೆರಿಗೆ ಸಲ್ಲಿಸುವುದು, ಸಿಬಿಡಿಸಿಯನ್ನು (ಇ-ರುಪಾಯಿ) ಮಾನ್ಯವಾದ ಎಲೆಕ್ಟ್ರಾನಿಕ್ ಪೇಮೆಂಟ್ ವಿಧಾನವೆಂದು ಅಧಿಕೃತವಾಗಿ ಪರಿಗಣಿಸುವುದು ಇತ್ಯಾದಿ ಹಲವು ಪ್ರಸ್ತಾಪಗಳು ಈ ಕರಡು ನಿಯಮಗಳಲ್ಲಿ ಇವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕುಡಿದ ಮತ್ತಿನಲ್ಲಿ ಗೆಳೆಯ ಒಳಚರಂಡಿಯ ಮ್ಯಾನ್​ಹೋಲ್​ಗೆ ಬಿದ್ದಿದ್ದೇ ತಿಳಿಯಲಿಲ್ಲ! – Kannada News | Rohini Sewer Death case Drunk Man Did not Notice his Friend Fall In Manhole

ನವದೆಹಲಿ, ಫೆಬ್ರವರಿ 11: ದೆಹಲಿಯ ರೋಹಿಣಿ ಪ್ರದೇಶದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ರೋಹಿಣಿ ಸೆಕ್ಟರ್ 32ರಲ್ಲಿ ತೆರೆದ ಒಳಚರಂಡಿ ಮ್ಯಾನ್‌ಹೋಲ್‌ಗೆ (Manhole) ಬಿದ್ದು ಕಾರ್ಮಿಕ ಸಾವನ್ನಪ್ಪಿದ್ದಾರೆ. ಮೃತರನ್ನು ಬಿಹಾರದ ಸಮಸ್ತಿಪುರ ಜಿಲ್ಲೆಯ ನಿವಾಸಿ ಬಿರ್ಜು ಕುಮಾರ್ ರೈ ಎಂದು ಗುರುತಿಸಲಾಗಿದೆ. ಈ ಘಟನೆ ಸೋಮವಾರ ಸಂಜೆ ಬೇಗಂಪುರ ಪ್ರದೇಶದ ಮಹಾಶಕ್ತಿ ಕಾಳಿ ದೇವಸ್ಥಾನದ ಬಳಿ ಸಂಭವಿಸಿದೆ. ಬಿರ್ಜು ಕುಮಾರ್ ಸೋಮವಾರ ಸಂಜೆ ರೋಹಿಣಿ ಸೆಕ್ಟರ್ 32ರಲ್ಲಿ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಬಿರ್ಜು ಆಕಸ್ಮಿಕವಾಗಿ ತೆರೆದ ಒಳಚರಂಡಿ ಮ್ಯಾನ್‌ಹೋಲ್‌ಗೆ ಬಿದ್ದರು. ಆದರೆ, ಅವರ ಮುಂದೆ ನಡೆಯುತ್ತಿದ್ದ ಅವರ ಸ್ನೇಹಿತನಿಗೆ ಈ ಘಟನೆಯ ಬಗ್ಗೆ ತಿಳಿದೇ ಇರಲಿಲ್ಲ. ಕುಡಿದ ನಶೆಯಲ್ಲಿದ್ದ ಆತ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗಿದ್ದರಿಂದ ಗೆಳೆಯ ಬಿದ್ದ ವಿಷಯವೇ ಗೊತ್ತಾಗಲಿಲ್ಲ. ಈ ವಿಷಯ ಮಂಗಳವಾರ ಅವರ ಗಮನಕ್ಕೆ ಬಂದಿತು.

ಬಿರ್ಜು ಒಳಚರಂಡಿಗೆ ಬಿದ್ದ ವಿಷಯವನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಘಟನೆಯ ಬಗ್ಗೆ ತಿಳಿಸಲಾಯಿತು. ಸುಮಾರು ಮೂರು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ನಂತರ ಬಿರ್ಜು ಅವರ ಶವವನ್ನು ಒಳಚರಂಡಿಯಿಂದ ಹೊರತೆಗೆಯಲಾಯಿತು. ಈ ಘಟನೆಯ ನಂತರ ಸರ್ಕಾರ ತೆರೆದ ಮ್ಯಾನ್‌ಹೋಲ್ ಅನ್ನು ಮುಚ್ಚಿ, ಹೆಚ್ಚಿನ ಅಪಘಾತಗಳನ್ನು ತಪ್ಪಿಸಲು ಪ್ರದೇಶದ ಸುತ್ತಲೂ ಕಲ್ಲುಗಳನ್ನು ಹಾಕಿತು.

ಇದನ್ನೂ ಓದಿ: ದೆಹಲಿ ಉದ್ಯಮಿಯ ಕೊಲೆ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ

ದೆಹಲಿ ಪೊಲೀಸರ ಪ್ರಕಾರ, ಇಬ್ಬರೂ ವ್ಯಕ್ತಿಗಳು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರು ಹಗಲಿನಲ್ಲಿಯೇ ಮದ್ಯ ಸೇವಿಸಿದ್ದರು. ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಆ ಸ್ಥಳದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಹಿಂದೆ ನಡೆಯುತ್ತಿದ್ದ ಕಾರ್ಮಿಕ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದರೂ ಮುಂದೆ ಇದ್ದವನಿಗೆ ಏನಾಯಿತು ಎಂದು ತಿಳಿದಿರಲಿಲ್ಲ. ಈ ವಿಷಯದಲ್ಲಿ ನಿರ್ಲಕ್ಷ್ಯಕ್ಕಾಗಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಜಿತ್​​​ ಪವಾರ್​​​ ಸಾವು ಪ್ರಕರಣದ ಹೊಸ ಅಪ್ಡೇಟ್​​​: ವಿಮಾನ ಪತನದ ಕೊನೆಯ ವಿಡಿಯೋ ವೈರಲ್ – Kannada News | Ajit Pawar Baramati Crash: Viral Video Reveals Fog, ILS Shortage Under Scrutiny

ಮಹಾರಾಷ್ಟ್ರ, ಫೆ.11: ಬಾರಾಮತಿಯಲ್ಲಿ ಜನವರಿ 28, 2026 ರಂದು ಸಂಭವಿಸಿದ ಭೀಕರ ವಿಮಾನ ಪತನದಿಂದ ಡಿಸಿಎಂ ಅಜಿತ್​​​ ಪವಾರ್​​​ ಸಾವನ್ನಪ್ಪಿದ್ದರು. ಇದೀಗ ವಿಮಾನ ಪತನದ ಪ್ರಮುಖ ವಿಡಿಯೋ ವೈರಲ್​​ ಆಗಿದೆ. ಇದು ಇಡೀ ದೇಶವನ್ನೇ ಬೆಚ್ಚಿಬೀಳಿಸಿವೆ. ವಿಮಾನ ನಿಲ್ದಾಣದ ಸಮೀಪವಿರುವ ಸಿಸಿ ಟಿವಿ ಕ್ಯಾಮರಾದಲ್ಲಿ ಬೆಳಿಗ್ಗೆ 8:46 ರ ಸುಮಾರಿಗೆ ಈ ದೃಶ್ಯ ಸೆರೆಯಾಗಿದೆ. ವಿಮಾನವು ರನ್‌ವೇ ಹತ್ತಿರ ಬರುತ್ತಿದ್ದಂತೆ ಹತೋಟಿ ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿ, ಕ್ಷಣಾರ್ಧದಲ್ಲಿ ಬೆಂಕಿಯ ಉಂಡೆಯಾಗಿ (Fireball) ಮಾರ್ಪಡುವುದನ್ನು ವಿಡಿಯೋ ತೋರಿಸುತ್ತದೆ. ವಿಡಿಯೋದಲ್ಲಿ ದಟ್ಟವಾದ ಮಂಜು ಕವಿದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದು ಪೈಲಟ್‌ಗೆ ರನ್‌ವೇ ಗುರುತಿಸಲು ತೊಂದರೆಯಾಗಿರಬಹುದು ಎಂಬ ಶಂಕೆಯನ್ನು ಬಲಪಡಿಸಿದೆ.ವಿಮಾನದ ‘ಬ್ಲ್ಯಾಕ್ ಬಾಕ್ಸ್’ ಅನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದ್ದು, ಅದರ ದತ್ತಾಂಶವನ್ನು ವಿಶ್ಲೇಷಿಸಲಾಗುತ್ತಿದೆ. ಇದು ಅಪಘಾತದ ನಿಖರ ಕಾರಣವನ್ನು ತಿಳಿಸಲಿದೆ. ಬಾರಾಮತಿ ವಿಮಾನ ನಿಲ್ದಾಣದಲ್ಲಿ ಸುಧಾರಿತ ಲ್ಯಾಂಡಿಂಗ್ ವ್ಯವಸ್ಥೆಗಳ (ILS) ಕೊರತೆ ಇರುವುದು ಮತ್ತು ಪ್ರತಿಕೂಲ ಹವಾಮಾನದ ನಡುವೆಯೂ ವಿಮಾನ ಹಾರಾಟಕ್ಕೆ ಅನುಮತಿ ನೀಡಿದ್ದು ತನಿಖೆಯ ಪ್ರಮುಖ ಭಾಗವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bharat Bodhan AI Conclave 2026: ಶಿಕ್ಷಣದಲ್ಲಿ ಎಐ ಕ್ರಾಂತಿ; ಕೇಂದ್ರ ಶಿಕ್ಷಣ ಸಚಿವಾಲಯದಿಂದ AI ಸಮಾವೇಶಕ್ಕೆ ಸಿದ್ಧತೆ – Kannada News | Bharat Bodhan AI Conclave 2026: AI Integration for Indian Education Transformation

ಕೃತಕ ಬುದ್ಧಿಮತ್ತೆ (AI) ವಿಶ್ವಾದ್ಯಂತ ವೇಗವಾಗಿ ಪ್ರಭಾವ ಬೀರುತ್ತಿರುವ ತಂತ್ರಜ್ಞಾನವಾಗಿ ಹೊರಹೊಮ್ಮಿದೆ. ಮುಂಬರುವ ದಶಕಗಳು AI ಯುಗವಾಗಿರಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂಟರ್ನೆಟ್ ಕ್ರಾಂತಿಗಿಂತಲೂ ಹೆಚ್ಚಿನ ಪರಿಣಾಮವನ್ನು ಬೀರುವ ಶಕ್ತಿ AI ಗೆ ಇದೆ ಎನ್ನಲಾಗುತ್ತಿದೆ. ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ AI ಮಹತ್ವದ ಬದಲಾವಣೆಗಳನ್ನು ತರುತ್ತಿದೆ. ಈ ಹಿನ್ನೆಲೆ ಭಾರತ ಸರ್ಕಾರವೂ AI ತಂತ್ರಜ್ಞಾನವನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಹೆಜ್ಜೆಗಳನ್ನು ಇಡುತ್ತಿದೆ.

ಕೇಂದ್ರ ಶಿಕ್ಷಣ ಸಚಿವಾಲಯವು ‘ಭಾರತ್ ಬೋಧನ್ AI ಕಾನ್ಕ್ಲೇವ್ 2026’ ಎಂಬ ಎರಡು ದಿನಗಳ ಮಹತ್ವದ ಸಮಾವೇಶವನ್ನು ಆಯೋಜಿಸಲು ಮುಂದಾಗಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿ AI ಬಳಕೆಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ನಡೆಯುವ ರಾಷ್ಟ್ರಮಟ್ಟದ ವೇದಿಕೆಯಾಗಿದೆ.

ಫೆಬ್ರವರಿ 16ರಿಂದ 20ರವರೆಗೆ ನಡೆಯಲಿರುವ ‘AI ಇಂಪ್ಯಾಕ್ಟ್ ಶೃಂಗಸಭೆ’ಗೆ ಪೂರ್ವಭಾವಿ ಕಾರ್ಯಕ್ರಮವಾಗಿ ಈ ಕಾನ್ಕ್ಲೇವ್ ಆಯೋಜಿಸಲಾಗುತ್ತಿದೆ. ಫೆಬ್ರವರಿ 12 ಮತ್ತು 13ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಈ ಸಮಾವೇಶ ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಶಿಕ್ಷಣ ತಜ್ಞರು, ನೀತಿ ನಿರೂಪಕರು, ಸಂಶೋಧಕರು, ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮ ಕ್ಷೇತ್ರದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಈ ಕಾನ್ಕ್ಲೇವ್‌ನ ಮುಖ್ಯ ಉದ್ದೇಶ ಶಿಕ್ಷಣದಲ್ಲಿ AI ತಂತ್ರಜ್ಞಾನವನ್ನು ಹೇಗೆ ಸಮಗ್ರವಾಗಿ ಅಳವಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಚರ್ಚೆ ನಡೆಸುವುದು. ‘AI-ಸಕ್ರಿಯಗೊಳಿಸಿದ ಶಿಕ್ಷಣ’ (AI-enabled education) ಕುರಿತ ಕಾರ್ಯತಂತ್ರದ ಪಾಲುದಾರಿಕೆಗಳನ್ನು ನಿರ್ಮಿಸುವುದು, ಹೊಸ ಆವಿಷ್ಕಾರಗಳನ್ನು ಪರಿಚಯಿಸುವುದು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ವಿಸ್ತರಿಸುವುದು ಇದರ ಪ್ರಮುಖ ಗುರಿಯಾಗಿದೆ. ಶಿಕ್ಷಣ ಪರಿಸರ ವ್ಯವಸ್ಥೆಯ ಸಿದ್ಧತೆ, ಅವಕಾಶಗಳು ಮತ್ತು ಸ್ಕೇಲಬಿಲಿಟಿ ಬಗ್ಗೆ ವಿಶೇಷ ಅಧಿವೇಶನಗಳೂ ನಡೆಯಲಿವೆ.

ಇದನ್ನೂ ಓದಿ: ಬಡ ಮಕ್ಕಳಿಗೆ ವಿದ್ಯಾ ದೇವತೆಯಾದ ಭಾರತೀಯ ಶಿಕ್ಷಕಿಗೆ ವಿಶ್ವ ಮನ್ನಣೆ: ‘ಜಾಗತಿಕ ಶಿಕ್ಷಕ ಪ್ರಶಸ್ತಿ’ ಪಡೆದ ರೂಬಲ್ ನಾಗಿ

ಹೊಸ ಶಿಕ್ಷಣ ನೀತಿ 2020 (NEP 2020) ಅನುಸಾರ ಶಿಕ್ಷಣದಲ್ಲಿ ಡಿಜಿಟಲ್ ಹಾಗೂ ತಂತ್ರಜ್ಞಾನ ಆಧಾರಿತ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು AI ಪ್ರಮುಖ ಪಾತ್ರ ವಹಿಸಲಿದೆ. ಈ ಕಾನ್ಕ್ಲೇವ್ ನೀತಿ ನಿರೂಪಕರು ಮತ್ತು ಶಿಕ್ಷಣ ತಜ್ಞರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಜವಾಬ್ದಾರಿಯುತ ಹಾಗೂ ಸಮಾನಾವಕಾಶ ಕಲಿಕೆಯನ್ನು ಉತ್ತೇಜಿಸುವ ದಿಸೆಯಲ್ಲಿ ಮಾರ್ಗದರ್ಶನ ನೀಡಲಿದೆ.

ಒಟ್ಟಿನಲ್ಲಿ, ‘ಭಾರತ್ ಬೋಧನ್ AI ಕಾನ್ಕ್ಲೇವ್ 2026’ ಭಾರತದಲ್ಲಿ ಶಿಕ್ಷಣ ಕ್ಷೇತ್ರದ ಡಿಜಿಟಲ್ ಪರಿವರ್ತನೆಗೆ ಹೊಸ ದಿಕ್ಕು ತೋರಿಸುವ ಮಹತ್ವದ ಹೆಜ್ಜೆಯಾಗಿ ಪರಿಣಮಿಸುವ ನಿರೀಕ್ಷೆಯಿದೆ. AI ಸಹಾಯದಿಂದ ಗುಣಮಟ್ಟದ, ಸುಲಭ ಮತ್ತು ಸಮಗ್ರ ಶಿಕ್ಷಣವನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಇದು ಮಹತ್ವದ ಮೈಲುಗಲ್ಲಾಗಲಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

‘ಕಾಂಡಂ ಹೇಳಿಕೆ ವಿಷಯದಲ್ಲಿ ತಾಯಿ ಸ್ಥಾನದಲ್ಲಿರುವ ಜಯಮಾಲಾಗೆ ಕ್ಷಮೆ ಕೇಳುತ್ತೇನೆ’; ಚಕ್ರವರ್ತಿ ಚಂದ್ರಚೂಡ್

ಚಕ್ರವರ್ತಿ ಚಂದ್ರಚೂಡ್ ಅವರು ನೀಡಿದ ಹೇಳಿಕೆ ಚರ್ಚೆಗೆ ಕಾರಣ ಆಗಿತ್ತು. ನಿರ್ಮಾಪಕರೇ ಹೀರೋಗಳಿಗೆ ಕಾಂಡಂ ಸಪ್ಲೈ ಮಾಡ್ತಾರೆ ಎಂದು ಹೇಳಿದ್ದರು. ‘ಈ ರೀತಿಯ ವಾಕ್ಯ ರಚನೆ ಆಗಬಾರದಿತ್ತು. ತಾಯಿ ಸ್ಥಾನದಲ್ಲಿ ಇರುವ ಜಯಮಾಲಾಗೆ ಕ್ಷಮೆ ಕೇಳುತ್ತೇನೆ’ ಎಂದು ಅವರು ಹೇಳಿದ್ದಾರೆ.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs NAM: ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಖಚಿತ – Kannada News | India’s Playing XI For Namibia Match in T20 World Cup 2026

T20 World Cup 2026: ಟಿ20 ವಿಶ್ವಕಪ್​ನ 18ನೇ ಪಂದ್ಯದಲ್ಲಿ ಭಾರತ ಮತ್ತು ನಮೀಬಿಯ ತಂಡಗಳು ಮುಖಾಮುಖಿಯಾಗಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ತನ್ನ ಆಡುವ ಬಳಗದಲ್ಲಿ 2 ಬದಲಾವಣೆ ಮಾಡುವುದು ಬಹುತೇಕ ಖಚಿತ. ಏಕೆಂದರೆ ಮೊದಲ ಪಂದ್ಯದಿಂದ ಹೊರಗುಳಿದಿದ್ದ ಜಸ್​ಪ್ರೀತ್ ಬುಮ್ರಾ ಈ ಮ್ಯಾಚ್​ನಲ್ಲಿ ಕಣಕ್ಕಿಳಿಯುವುದು ಕನ್ಫರ್ಮ್​ ಆಗಿದೆ.  ಅತ್ತ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಅಭಿಷೇಕ್ ಶರ್ಮಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ನಿರೀಕ್ಷಿಸಬಹುದು.

ಅದರಂತೆ ನಮೀಬಿಯ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಇನ್ನು ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಬ್ಯಾಟ್ ಬೀಸಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯಲಿದ್ದಾರೆ.

ಆರನೇ ಕ್ರಮಾಂಕದಲ್ಲಿ ರಿಂಕು ಸಿಂಗ್ ಆಡಿದ್ರೆ, ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆಯಲಿದ್ದಾರೆ. ಇನ್ನು ಜಸ್​ಪ್ರೀತ್ ಬುಮ್ರಾ ಆಗಮನದಿಂದಾಗಿ ನಮೀಬಿಯ ವಿರುದ್ಧದ ಪಂದ್ಯದಿಂದ ಮೊಹಮ್ಮದ್ ಸಿರಾಜ್ ಹೊರಗುಳಿಯಬೇಕಾಗಿ ಬರಬಹುದು. ಇನ್ನುಳಿದಂತೆ ಅರ್ಷದೀಪ್ ಸಿಂಗ್ ಹಾಗೂ ವರುಣ್ ಚಕ್ರವರ್ತಿ ಆಡುವ ಬಳಗದಲ್ಲಿ ಸ್ಥಾನ ಪಡೆಯಬಹುದು. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • ಇಶಾನ್ ಕಿಶನ್
  • ಸಂಜು ಸ್ಯಾಮ್ಸನ್
  • ತಿಲಕ್ ವರ್ಮಾ
  • ಸೂರ್ಯಕುಮಾರ್ ಯಾದವ್
  • ರಿಂಕು ಸಿಂಗ್
  • ಹಾರ್ದಿಕ್ ಪಾಂಡ್ಯ
  • ಶಿವಂ ದುಬೆ
  • ಅಕ್ಷರ್ ಪಟೇಲ್
  • ಜಸ್​ಪ್ರೀತ್ ಬುಮ್ರಾ
  • ಅರ್ಷದೀಪ್ ಸಿಂಗ್
  • ವರುಣ್ ಚಕ್ರವರ್ತಿ.

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

ಎಷ್ಟು ಗಂಟೆಗೆ ಪಂದ್ಯ ಶುರು?

ಭಾರತ ಮತ್ತು ನಮೀಬಿಯ ನಡುವಣ ಪಂದ್ಯವು ರಾತ್ರಿ 7 ಗಂಟೆಗೆ ಶುರುವಾಗಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯದ ಟಾಸ್ ಪ್ರಕ್ರಿಯೆ 6.30 ಕ್ಕೆ ನಡೆಯಲಿದೆ. ಇನ್ನು ಈ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಗೆದ್ದರೆ ಸೂಪರ್-8 ಕ್ಕೇರುವುದು ಬಹುತೇಕ ಖಚಿತವಾಗಲಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್‌ನಲ್ಲಿ ನ್ಯೂಝಿಲೆಂಡ್ ಆರಂಭಿಕರ ವಿಶ್ವ ದಾಖಲೆಯ ಚೇಸಿಂಗ್

ಏಕೆಂದರೆ ಭಾರತ ತಂಡವು ತನ್ನ ಮುಂದಿನ ಎರಡು ಪಂದ್ಯಗಳನ್ನು ಪಾಕಿಸ್ತಾನ್ ಹಾಗೂ ನೆದರ್​ಲೆಂಡ್ಸ್ ವಿರುದ್ಧ ಆಡಲಿದ್ದು, ಈ ಎರಡೂ ಪಂದ್ಯಗಳಲ್ಲೂ ಟೀಮ್ ಇಂಡಿಯಾದ ಗೆಲುವನ್ನು ನಿರೀಕ್ಷಿಸಬಹುದು.

Source link