Video: ಟ್ರಕ್ ಚಾಲಕ ಬ್ರೇಕ್ ಹಾಕದೇ ಇದ್ದಿದ್ರೆ ಥಾರ್ ಮೇಲೆ ಕುಳಿತು ಪುಂಡಾಟ ಮಾಡುತ್ತಿದ್ದವರ ಪ್ರಾಣವೇ ಹೋಗ್ತಿತ್ತು – Kannada News | Truck Driver’s Timely Brake Saves Youths Riding Atop Moving SUV in Haryana
ಹರಿಯಾಣ, ಫೆಬ್ರವರಿ 11: ಎದುರಿದ್ದ ಟ್ರಕ್ ಬ್ರೇಕ್ ಹಾಕಿಲ್ಲವೆಂದಾದರೆ ಮೂವರ ಪ್ರಾಣವೂ ಹೋಗಿರೋದು. ಒಂದಷ್ಟು ಯುವಕರು ಮಹಿಂದ್ರಾ ಥಾರ್ ಒಳಗೆ ಉಳಿದ ಮೂವರು ಥಾರ್ ಮೇಲೆ ಕುಳಿತಿದ್ದರು. ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕ ಎದುರು ಬರುತ್ತಿದ್ದ ಟ್ರಕ್ ನೋಡಿ ಎಡಕ್ಕೆ ಗಾಡಿ ತಿರುಗಿಸಿದ್ದಾನೆ. ಕೂಡಲೇ ಥಾರ್ ಮೇಲಿದ್ದ ಮೂವರು ಯುವಕರು ನೆಲಕ್ಕೆ ಬಿದ್ದಿದ್ದಾರೆ. ಆ ಸಮಯಕ್ಕೆ ಸರಿಯಾಗಿ ಟ್ರಕ್ ಚಾಲಕ ಕೂಡ ಬ್ರೇಕ್ ಹಾಕಿದ ಪರಿಣಾಮ ಮೂವರ ಜೀವ ಉಳಿದಿದೆ. ಇಲ್ಲವಾದಲ್ಲಿ ಎಲ್ಲಾ ಮೂವರ ತಲೆ ಮೇಲೆ…