ಬೆಂಗಳೂರು/ದಾವಣಗೆರೆ, (ಮಾರ್ಚ್ 27): ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆ ರಂಗೇರಿದ್ದು, ಇನ್ನೊಂದೆಡೆ ಕಾಂಗ್ರೆಸ್ಗೆ ಮುಸ್ಲಿಂ ಮತಗಳ ಆತಂಕ ಕಾಡುತ್ತಿದೆ. ಯಾಕಂದ್ರೆ ತಮ್ಮ ಸಮುದಾಯಕ್ಕೆ ಟಿಕೆಟ್ ಕೈತಪ್ಪಿದ್ದರಿಂದ ಮುಸ್ಲಿಮರು ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದು, ಬರೋಬ್ಬರಿ 14 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಸಾಧಿಕ್ ಪೈಲ್ವಾನ್ ಪ್ರಮುಖರಾಗಿದ್ದು, ಕಾಂಗ್ರೆಸ್ ವೋಟ್ ಬ್ಯಾಂಕ್ ಒಡೆಯುತ್ತಾರೆ ಎನ್ನುವ ಭಯ ಇತ್ತು. ಆದ್ರೆ, ಇದೀಗ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಂಧಾನ ಯಶಸ್ವಿಯಾಗಿದ್ದು, ಪೈಲ್ವಾನ್ ಬಂಡಾಯ ಶಮನ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಆದ್ರೆ, ಪೈಲ್ವಾನ್ ಹೆಸರು ಮಾತ್ರ ಕಣದಲ್ಲಿ ಇರುತ್ರೆ.
ಶಾಸಕರಾದ ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್ ನಿನ್ನೆ (ಮಾರ್ಚ್ 27) ದಾವಣಗೆರೆಯಲ್ಲಿ ಸಾಧಿಕ್ ಪೈಲ್ವಾನ್ ನಿವಾಸಕ್ಕೆ ತೆರಳಿ ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದ್ದರು. ಆದ್ರೆ, ಅದು ಸಾಧ್ಯವಾಗಿಲ್ಲ. ಹೀಗಾಗಿ ಸಾಧಿಕ್ ಅವರನ್ನು ಸಿಎಂ ಬಳಿಕ ಕರೆತಂದು ಬಂಡಾಯ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಸಾಧಿಕ್ ಪೈಲ್ವಾನ್ ಈ ಬಗ್ಗೆ ಯಾವುದೇ ಮಾತನಾಡದೇ ಸಂಜೆ ಹೇಳುತ್ತೇನೆಂದು ಮೌನವಾಗಿ ತೆರಳಿದ್ದಾರೆ.
ಸಂಧಾನ ಸಭೆ ಬಳಿಕ ಮಾಧ್ಯಗಳಿಗೆ ರಿಜ್ವಾನ್ ಅರ್ಷದ್ ಪ್ರತಿಕ್ರಿಯಿಸಿ, ನಾವು ಸಲೀಂ ಅಹ್ಮದ್ ಅವರು ಹೋಗಿ ಭೇಟಿ ಮಾಡಿ ಬಂದಿದ್ವಿ. ಸಾಧಿಕ್ ಪೈಲ್ವಾನ್ ಸಮೇತ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿದ್ದೇವೆ. ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಗೆ ಲಾಭ ಆಗಬಾರದು. ಇದೇ ವಿಚಾರವಾಗಿ ಅವರು ಸಿಎಂ ಜೊತೆ ಮಾತಾಡಿದ್ದಾರೆ. ಸಂಜೆ 4 ಗಂಟೆಗೆ ಅವರು ಕೆಪಿಸಿಸಿ ತೆರಳಿ ತಮ್ಮ ಮನಸ್ಸಿನ ಮಾತುಗಳನ್ನ ಹಂಚಿಕೊಳ್ಳುತ್ತಾರೆ. ಸಾಧಿಕ್ ಒಪ್ಪಿಕೊಂಡಿದ್ದಾರೆ. ಶಮನ ಆಗುತ್ತೆ ಎಂದು ನಿನ್ನೆಯೇ ಹೇಳಿದ್ವಿ. ನಾವು ಹೇಳಿದ್ಮೇಲೆ ಒಪ್ಪಿಕೊಂಡು ಇಲ್ಲಿಗೆ ಬಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಜೊತೆ ಇವರದ್ದು 40 ವರ್ಷ ಸಂಬಂಧ. ಡಿಸಿಎಂ, ಸುರ್ಜೇವಾಲಾ ಜೊತೆಗೂ ಮಾತಾಡುತ್ತಾರೆ ಎಂದರು.
ರಾಮ್ ಚರಣ್ (Ram Charan) ಹುಟ್ಟುಹಬ್ಬ ಇಂದು (ಮಾರ್ಚ್ 27). ಅವರ ನಟನೆಯ ಹೊಸ ಸಿನಿಮಾ ‘ಪೆದ್ದಿ’ಯ ಟೀಸರ್ ಇಂದು ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಬಿಡುಗಡೆ ಆಗಿದ್ದ ಹಾಡು, ಟೀಸರ್ ನೋಡಿ, ‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್ ಅವರದ್ದು ಹಳ್ಳಿ ಕ್ರಿಕೆಟಿಗನೊಬ್ಬನ ಪಾತ್ರ ಎಂದುಕೊಂಡಿದ್ದರು ಅಭಿಮಾನಿಗಳು. ಆದರೆ ಈಗ ಬಿಡುಗಡೆ ಆಗಿರುವ ಟೀಸರ್ನಲ್ಲಿ ರಾಮ್ ಚರಣ್ ಕುಸ್ತಿ ಪಟುವಾಗಿ ಕಾಣಿಸಿಕೊಂಡಿದ್ದಾರೆ. ಕುಸ್ತಿ ಪಟುವಿನಂತೆ ಲಂಗೋಟಿ ಧರಿಸಿ, ಕಟ್ಟುಮಸ್ತಾದ ದೇಹ ಪ್ರದರ್ಶಿಸುತ್ತಾ ಅಖಾಡದಲ್ಲಿ ಕುಸ್ತಿ ಆಡುತ್ತಿದ್ದಾರೆ.
‘ಪೆದ್ದಿ’ ಸಿನಿಮಾನಲ್ಲಿ ಶಿವರಾಜ್ ಕುಮಾರ್ ಸಹ ನಟಿಸುತ್ತಿದ್ದಾರೆ. ಶಿವರಾಜ್ ಕುಮಾರ್ ಅವರ ಪಾತ್ರದ ಪೋಸ್ಟರ್ ಅನ್ನು ಈ ಹಿಂದೆ ಬಿಡುಗಡೆ ಮಾಡಲಾಗಿತ್ತು. ಶಿವಣ್ಣನ ಪಾತ್ರದ ಹೆಸರು ಗೌರನಾಯ್ಡು ಎಂದಿದೆ. ಆದರೆ ಶಿವಣ್ಣನ ಪಾತ್ರ ಎಂಥಹದ್ದು ಎಂಬ ವಿಷಯ ಬಹಿರಂಗವಾಗಿರಲಿಲ್ಲ. ಇದೀಗ ಸಿನಿಮಾದ ಹೊಸ ಟೀಸರ್ ಬಿಡುಗಡೆ ಆದ ಬಳಿಕ ಶಿವಣ್ಣನ ಪಾತ್ರದ ಬಗ್ಗೆ ಸುಳಿವು ದೊರೆತಿದೆ.
ಶಿವರಾಜ್ ಕುಮಾರ್ ಅವರು ‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್ ಪಾತ್ರದ ಗುರುವಿನ ಪಾತ್ರದಲ್ಲಿ ನಟಿಸಿದ್ದಾರೆ. ಇಂದು ಬಿಡುಗಡೆ ಆಗಿರುವ ಟೀಸರ್ನಲ್ಲಿ ರಾಮ್ ಚರಣ್ ಕುಸ್ತಿ ಪಟುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಾಮ್ ಚರಣ್ಗೆ ಕುಸ್ತಿ ಹೇಳಿಕೊಡುವ ಗುರುವಾಗಿ ಶಿವರಾಜ್ ಕುಮಾರ್ ನಟಿಸಿದ್ದಾರೆ. ‘ಪೆದ್ದಿ’ ಸಿನಿಮಾದ ಟೀಸರ್ ಕನ್ನಡದಲ್ಲಿಯೂ ಬಿಡುಗಡೆ ಆಗಿದ್ದು, ಕನ್ನಡ ಟೀಸರ್ನಲ್ಲಿ ಖುದ್ದು ಶಿವರಾಜ್ ಕುಮಾರ್ ಅವರೇ ಧ್ವನಿ ನೀಡಿದ್ದಾರೆ. ‘ಕುಸ್ತಿ ಅಂದರೆ ಬ್ಯಾಟಿನಿಂದ ಬಾಲ್ನ ಹೊಡೆಯೋ ಆಟ ಅಲ್ಲ’ ಎಂದು ರಾಮ್ ಚರಣ್ಗೆ ಕುಸ್ತಿಯ ಮಹತ್ವ ಹೇಳುವ ಸಂಭಾಷಣೆಯನ್ನು ಟೀಸರ್ನಲ್ಲಿ ಶಿವಣ್ಣ ಹೇಳಿದ್ದಾರೆ.
‘ಪೆದ್ದಿ’ ಸಿನಿಮಾದ ನಿರ್ದೇಶಕ ಬುಚ್ಚಿಬಾಬು ಸನಾ ಅವರು ಪಾತ್ರಕ್ಕೆ ಶಿವರಾಜ್ ಕುಮಾರ್ ಅವರೇ ಬೇಕೆಂದು ಕಾದು ಅವರಿಂದ ನಟನೆ ಮಾಡಿಸಿಕೊಂಡಿದ್ದಾರೆ. ಸಿನಿಮಾದ ಮುಹೂರ್ತ ನಡೆಯುವ ಮುಂಚೆಯೇ ನಿರ್ದೇಶಕ ಬುಚ್ಚಿಬಾಬು ಸನಾ ಶಿವಣ್ಣನವರನ್ನು ಭೇಟಿಯಾಗಿ ಕತೆ ವಿವರಿಸಿದ್ದರು. ಆ ಬಳಿಕ ಶಿವಣ್ಣ ಆಪರೇಷನ್ಗಾಗಿ ಅಮೆರಿಕಕ್ಕೆ ತೆರಳಿದರು. ಕೆಲ ತಿಂಗಳ ಕಾಲ ವಿಶ್ರಾಂತಿ ತೆಗೆದುಕೊಂಡರು. ಅನಾರೋಗ್ಯದಿಂದ ದೇಹತೂಕವನ್ನೂ ಕಳೆದುಕೊಂಡರು. ಅಷ್ಟೆಲ್ಲ ಆದರೂ ಸಹ ಬುಚ್ಚಿಬಾಬು ಸನಾ, ಆ ಪಾತ್ರಕ್ಕೆ ಶಿವಣ್ಣನೇ ಇರಬೇಕೆಂದು ಕಾದು, ಶಿವಣ್ಣನ ಮನೆಗೆ ಬಂದು ಲುಕ್ ಟೆಸ್ಟ್ ಸಹ ಮಾಡಿದ್ದರು. ಕೊನೆಗೆ ಶಿವರಾಜ್ ಕುಮಾರ್ ಅವರು ಗೌರನಾಯ್ಡು ಪಾತ್ರಕ್ಕೆ ಬಣ್ಣ ಹಚ್ಚಿದರು.
‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್, ಶಿವರಾಜ್ ಕುಮಾರ್ ಜೊತೆಗೆ ಜಾನ್ಹವಿ ಕಪೂರ್ ಸಹ ನಟಿಸಿದ್ದಾರೆ. ಜಗಪತಿ ಬಾಬು, ಬೊಮನ್ ಇರಾನಿ ಇನ್ನೂ ಕೆಲವು ಪ್ರತಿಭಾವಂತ ಕಲಾವಿದರು ಸಿನಿಮಾನಲ್ಲಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದೆ.
ಬೆಂಗಳೂರು, ಮಾರ್ಚ್ 27: ಗೃಹಸಚಿವ ಡಾ. ಜಿ. ಪರಮೇಶ್ವರ್ ಒಡೆತನದ ಸಿದ್ದಾರ್ಥ ಮೆಡಿಕಲ್ ಕಾಲೇಜು ಸೇರಿ ಕೋಲಾರ ಮತ್ತು ಬೆಂಗಳೂರಿನ ವಿವಿಧ ಆರ್ಟಿಒ ಕಚೇರಿಗಳಿಗೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿಯಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಇಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು, ನಮ್ಮ ಸಹೋದರ ಡಾ.ಅಬ್ದುಲ್ಗೆ ಅವಮಾನಮಾಡಿರುವ ಹಿನ್ನೆಲೆ 15 ಸಿಲಿಂಡರ್ ತುಂಬಿರುವ ಐಇಡಿ ಪ್ಲಾಂಟ್ ಮಾಡಿದ್ದೇವೆ. ಇಸ್ಲಾಮಿಕ್ ಪ್ರಾರ್ಥನಾ ಸಮಯ ಮಧ್ಯಾಹ್ನ 2 ಗಂಟೆಗೆ SSIMST ಉಡಾಯಿಸಲಾಗುವುದು. ನಾವು ಕೇವಲ ಕಟ್ಟಡವನ್ನು ಮಾತ್ರ ನಾಶಮಾಡಲು ಮುಂದಾಗಿದ್ದು, ಹೀಗಾಗಿ ಸಾಧ್ಯವಾದರೆ ಎಲ್ಲಾ ವಿದ್ಯಾರ್ಥಿಗಳನ್ನು ಹೊರಗಡೆ ಕಳಿಸಿ ಎಂದು ತಿಳಿಸಲಾಗಿದೆ. ಈ ಹಿನ್ನೆಲೆ ಬಾಂಬ್ ನಿಷ್ಕ್ರಿಯ ದಳ, ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಬೆಂಗಳೂರಿನ ಆರ್ಟಿಒ ಕಚೇರಿಗಳಿಗೂ ಗಾಯತ್ರಿ_ಶಾಬಾಜ್@Hotmail.com ಐಡಿಯಿಂದ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಯಶವಂತಪುರ, ರಾಜಾಜಿನಗರ, ಕೋರಮಂಗಲ ಸೇರಿ ನಗರದ ಹಲವು ಆರ್ಟಿಒ ಕಚೇರಿಗಳನ್ನು ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಫೋಟಿಸುವುದಾಗಿ ಇ-ಮೇಲ್ ಕಳುಹಿಸಲಾಗಿದೆ. 10 ಬಾಂಬ್ ಸ್ಫೋಟಗೊಳ್ಳುತ್ತೆಂದು ದುಷ್ಕರ್ಮಿಗಳು ಎಚ್ಚರಿಸಿದ್ದಾರೆ. ಬಾಂಬ್ ಬೆದರಿಕೆ ಇ-ಮೇಲ್ ಬಂದಿರುವ ಹಿನ್ನೆಲೆ ಕೋರಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್. ದೀಪಕ್ ಹೆಚ್ಎಸ್ಆರ್ ಲೇಔಟ್ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕಚೇರಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ನೂರಾರು ಸಾರ್ವಜನಿಕರು ವಿವಿಧ ಕೆಲಸ ಕಾರ್ಯಗಳಿಗಾಗಿ ಬರುತ್ತಾರೆ. ಹೀಗಾಗಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ಅಪರಿಚಿತ ಇ-ಮೇಲ್ ಐಡಿಯಿಂದ ಕೋಲಾರ ಆರ್ಟಿಒ ಕಚೇರಿಗೂ ಇದೇ ರೀತಿಯ ಬೆದರಿಕೆ ಬಂದಿದೆ. ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ಅಬ್ದುಲ್ ಮೊಹ್ಮದ್ಗೆ ಮತ್ತು ತಮಿಳುನಾಡಿನ ಸಿಎಂ ಎಂ.ಕೆ.ಸ್ಟಾಲಿನ್ ಬೆಂಬಲಿಗರಿಗೆ ಅವಮಾನ ಮಾಡಿರುವ ಕಾರಣ 10 ವಿಷದ ಬಾಂಬ್ಗಳನ್ನು ಸ್ಫೋಟಿಸೋದಾಗಿ ತಿಳಿಸಲಾಗಿದೆ. ಸ್ಥಳಕ್ಕೆ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗೆ ಬಾಂಬ್ ಬೆದರಿಕೆ ಪ್ರಕರಣಗಳು ಮೇಲಿಂದ ಮೇಲೆ ರಾಜ್ಯದಲ್ಲಿ ವರದಿಯಾಗ್ತಿರೋದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
2026 ರ ಐಪಿಎಲ್ ಆರಂಭಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಲೀಗ್ನ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುತ್ತಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಆರ್ಸಿಬಿಗೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ವೇಗದ ಬೌಲರ್ ನುವಾನ್ ತುಷಾರ ಲೀಗ್ನಿಂದ ಹೊರಬೀಳುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಗಾಯದಿಂದ ಬಳಲುತ್ತಿರುವ ನುವಾನ್ ತುಷಾರ ಪ್ರಸ್ತುತ ಚೇತರಿಕೆಯ ಹಾದಿಯಲಿದ್ದಾರೆ. ಹೀಗಾಗಿ ಅವರು ಸಂಪೂರ್ಣ ಚೇತರಿಸಿಕೊಳ್ಳುವರೆಗೂ ಅವರಿಗೆ ಐಪಿಎಲ್ನಲ್ಲಿ ಆಡಲು ಎನ್ಒಸಿ ನೀಡಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ನಿರಾಕರಿಸಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಇತ್ತೀಚೆಗೆ ಕಟ್ಟುನಿಟ್ಟಾದ ಫಿಟ್ನೆಸ್ ನೀತಿಯನ್ನು ಜಾರಿಗೆ ತಂದಿದೆ, ಅದಕ್ಕಾಗಿಯೇ ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಶ್ರೀಲಂಕಾ ಮಂಡಳಿಯ ಈ ನಿರ್ಧಾರ ಆರ್ಸಿಬಿಗೆ ದೊಡ್ಡ ಹೊಡೆತವಾಗಿದೆ.
ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರ ಐಪಿಎಲ್ನಲ್ಲಿ ಭಾಗವಹಿಸುವ ಮೊದಲು ಫಿಟ್ನೆಸ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಯಿತು, ಆದರೆ ಅವರು ವಿಫಲರಾಗಿದ್ದಾರೆ. ಹೀಗಾಗಿ ಶ್ರೀಲಂಕಾ ಮಂಡಳಿ ಅವರಿಗೆ ಎನ್ಒಸಿ ನೀಡಲು ನಿರಾಕರಿಸಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಹೊಸ ನೀತಿಯ ಪ್ರಕಾರ, ಎಲ್ಲಾ ಆಟಗಾರರು ಯಾವುದೇ ವಿದೇಶಿ ಫ್ರಾಂಚೈಸ್ ಲೀಗ್ನಲ್ಲಿ ಭಾಗವಹಿಸಲು ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು, ಒಂದು ವೇಳೆ ಅದರಲ್ಲಿ ಅವರು ವಿಫಲವಾದರೆ ಅಂತಹ ಆಟಗಾರರಿಗೆ ಎನ್ಒಸಿ ನೀಡದಂತೆ ಮಂಡಳಿ ತೀರ್ಮಾನಿಸಿದೆ.
ನುವಾನ್ ತುಷಾರ ಐಪಿಎಲ್ನಿಂದ ಹೊರಗುಳಿದರೆ ಆರ್ಸಿಬಿ ಬೌಲಿಂಗ್ ವಿಭಾಗ ದುರ್ಬಲವಾಗಿ ಕಾಣಲಿದೆ. ಏಕೆಂದರೆ ಮತ್ತೊಬ್ಬ ವೇಗಿ ಜೋಶ್ ಹೇಜಲ್ವುಡ್ ಕೂಡ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇವರಿಬ್ಬರ ಅನುಪಸ್ಥಿತಿಯಲ್ಲಿ ಆರ್ಸಿಬಿ ಯಾರನ್ನು ಆಡಿಸಲಿದೆ ಎಂಬುದು ಪ್ರಶ್ನಾರ್ಥಕವಾಗಿದೆ.
ಇದೆಲ್ಲದರ ನಡುವೆ ಒಳ್ಳೆಯ ಸುದ್ದಿ ಅಂದರೆ ಜೋಶ್ ಹೇಜಲ್ವುಡ್ ಬೆಂಗಳೂರಿನಲ್ಲಿ ತಂಡವನ್ನು ಕೂಡಿಕೊಂಡಿದ್ದಾರೆ. ಆದಾಗ್ಯೂ ಅವರು ಪ್ರಸ್ತುತ ಫಿಟ್ ಆಗಿಲ್ಲ. ಇದರಿಂದ ಮೊದಲ ನಾಲ್ಕೈದು ಪಂದ್ಯಗಳಲ್ಲಿ ಅವರು ಆಡುವುದು ಅನುಮಾನವಾಗಿದೆ. ಇದರ ಜೊತೆಗೆ ಇದೀಗ ನುವಾನ್ ತುಷಾರಗೆ ಎನ್ಒಸಿ ಸಿಗದಿರುವುದು ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಬೆಂಗಳೂರು, (ಮಾರ್ಚ್ 27): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಟಿ.ಬೇಗೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ತರಗತಿಯಲ್ಲೇ ಮೆಡಿಕಲ್ ವಿದ್ಯಾರ್ಥಿನಿಗೆ ಪ್ರೇಮ ನಿವೇದನೆ ಮಾಡಿದ್ದ ಪ್ರಾಧ್ಯಾಪಕ ಅಬ್ದುಲ್ ನನ್ನು ನೆಲಮಂಗಲ ಗ್ರಾಮಾಂತರ ಠಾಣೆ ಪೋಲೀಸರು ಬಂಧಿಸಿದ್ದಾರೆ. ತರಗತಿ ನಡೆಯುತ್ತಿದ್ದಾಗಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರೊಫೆಸರ್ ಅಬ್ದುಲ್ ಪ್ರಪೋಸ್ ಮಾಡಿದ್ದ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ ತರಗತಿಯಲ್ಲೇ ಪ್ರಶ್ನೆ ಮಾಡಿದ್ದು, ನಂತರ ಪ್ರೊಫೆಸರ್‌ಗೆ ಚಪ್ಪಲಿಯಿಂದ ಥಳಿಸಿದ್ದಳು. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ಸದ್ಯ ಮೈಕ್ರೋಬಯಾಲಾಜಿ ವಿಷಯದ ಪ್ರಾಧ್ಯಾಪಕ ನೆಲಮಂಗಲ ನಿವಾಸಿ ಅಬ್ದುಲ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಮಾರ್ಚ್ 23ರಂದು ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ ಕಾಲೇಜಿನಲ್ಲಿ ಡಾ. ಅಬ್ದುಲ್ ರೆಹಮಾನ್ ಷರೀಫ್ ಎಂಬ ಪ್ರಾಧ್ಯಾಪಕ, ತರಗತಿ ನಡೆಯುತ್ತಿದ್ದಾಗಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರೊಫೆಸರ್ ಅಬ್ದುಲ್ ಪ್ರಪೋಸ್ ಮಾಡಿದ್ದ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ ತರಗತಿಯಲ್ಲೇ ಪ್ರಶ್ನೆ ಮಾಡಿದ್ದಳು. ಈ ಹಿಂದೆ ನೀನು ನನಗೆ ಪ್ರಪೋಸ್ ಮಾಡಿಲ್ವಾ ಎಂದು ಪ್ರಾಧ್ಯಾಪಕ ವಿದ್ಯಾರ್ಥಿನಿಯನ್ನು ಕೇಳಿದ್ದು, ಸಾಕ್ಷಿಗೆ ಸಿಸಿಟಿವಿ ದೃಶ್ಯವಿದೆ ಎಂದಿದ್ದನು. ಕೋಪಗೊಂಡ ವಿದ್ಯಾರ್ಥಿನಿ ಸಿಸಿಟಿವಿ ವಿಡಿಯೋ ತೋರಿಸು ಎಂದಿದ್ದಾಳೆ. ಈ ಬಗ್ಗೆ ನಾಳೆ ಮಾತನಾಡುತ್ತೇನೆ ಎಂದು ಹೇಳಿ ಪ್ರಾಧ್ಯಾಪಕ ಕ್ಲಾಸ್ನಿಂದ ಹೊರಗೆ ಹೋಗಿದ್ದನು. ಈ ಘಟನೆಯಿಂದ ತೀವ್ರವಾಗಿ ಆಕ್ರೋಶಗೊಂಡು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದರು.
ಅಬ್ದುಲ್ ಮಾತುಗಳಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯ ಸಹಪಾಠಿಗಳು ಸ್ತ್ರೀಕುಲಕ್ಕೆ ಗೌರವ ಇಲ್ಲವೇ? ಎಂದು ಪ್ರಶ್ನಿಸಿದ್ದು, ಕಾಲೇಜು ಕ್ಯಾಂಪಸ್‌ನಲ್ಲಿಯೇ ಅಟ್ಟಾಡಿಸಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೇ ಸ್ವತಃ ವಿದ್ಯಾರ್ಥಿನಿಯೇ ಚಪ್ಪಲಿ ಸೇವೆ ಮಾಡಿದ್ದಾಳೆ. ವಿದ್ಯಾರ್ಥಿಗಳಿಂದ ಧರ್ಮದೇಟು ತಿಂದ ಬಳಿಕ ಅಬ್ದುಲ್ ಅಲ್ಲಿಂದ ಓಡಿ ಹೋಗಿದ್ದಾನೆ. ಘಟನೆ ನಂತರ ಕಾಲೇಜು ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಮಾಹಿತಿ ಬೆನ್ನಲ್ಲೇ ನೆಲಮಂಗಲ ಗ್ರಾಮಾಂತರ ಪೊಲೀಸರು ಕಾಲೇಜಿಗೆ ಭೇಟಿ ನೀಡಿದ್ದು, ಘಟನೆ ಕುರಿತು ವಾಸ್ತವಾಂಶಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಪ್ರಾಧ್ಯಾಪಕ ಅಬ್ದುಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಅವರ ಗೆಳತಿ, ನಟಿ ಮಾಹಿಕಾ ಶರ್ಮಾ ಅವರು ಮುಂಬೈನ ಸುಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಈ ಜೋಡಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದೆ. ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಹಾರ್ದಿಕ್ ಮತ್ತು ಮಾಹಿಕಾ ಒಂದೇ ಶಾಲನ್ನು ಹಂಚಿಕೊಂಡಿರುವುದು ನೆರೆದಿದ್ದವರ ಗಮನ ಸೆಳೆಯಿತು. ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದ ಈ ಜೋಡಿಯ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ.
ಹಾರ್ದಿಕ್ ಸಾಂಪ್ರದಾಯಿಕ ಕುರ್ತಾ ಧರಿಸಿದ್ದರೆ, ಮಾಹಿಕಾ ಶರ್ಮಾ ಸಲ್ವಾರ್ ಸೂಟ್‌ನಲ್ಲಿ ಕಂಗೊಳಿಸಿದರು. ಭಕ್ತರೊಂದಿಗೆ ಹಾರ್ದಿಕ್ ಹಸ್ತಲಾಘವ ಮಾಡಿ ಆತ್ಮೀಯವಾಗಿ ಮಾತನಾಡಿದರು. ಕಳೆದ ಕೆಲವು ತಿಂಗಳುಗಳಿಂದ ಹಾರ್ದಿಕ್ ಮತ್ತು ಮಾಹಿಕಾ ಡೇಟಿಂಗ್ ಮಾಡುತ್ತಿರುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದವು. ಇತ್ತೀಚೆಗೆ ಮಾಹಿಕಾ ಕೈಬೆರಳಲ್ಲಿ ವಜ್ರದ ಉಂಗುರ ಕಂಡಿದ್ದರಿಂದ ಇವರಿಬ್ಬರ ನಿಶ್ಚಿತಾರ್ಥವಾಗಿದೆಯೇ ಎಂಬ ಚರ್ಚೆಯೂ ನಡೆದಿತ್ತು. ಆದರೆ ಮಾಹಿಕಾ ಅದನ್ನು ನಿರಾಕರಿಸಿದ್ದರು.
Team India Star allrounder Hardik Pandya with Girlfriend Mahieka Sharma visited before Semifinal vs Eng in Siddhivinayak Temple Mumbai#hardikpandyapic.twitter.com/VE9AKe88hQ
ವಿಶೇಷವೆಂದರೆ, ಹಾರ್ದಿಕ್ ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಅವರ 34ನೇ ಹುಟ್ಟುಹಬ್ಬದಂದೇ ಈ ಜೋಡಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ. ಮಾಹಿಕಾ ಶರ್ಮಾ ಭಾರತೀಯ ದೂರದರ್ಶನ ಮತ್ತು ಚಲನಚಿತ್ರ ರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಹಾಗೂ ಮಾಡೆಲ್ ಮಾಹಿಕಾ ಅವರು ಅಸ್ಸಾಂನವರು. ಅವರು ತಮ್ಮ ವೃತ್ತಿಜೀವನವನ್ನು ಮಾಡೆಲಿಂಗ್ ಮೂಲಕ ಆರಂಭಿಸಿದರು ಮತ್ತು ‘ಮಿಸ್ ಟೀನ್ ನಾರ್ತ್ ಈಸ್ಟ್’ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ನವದೆಹಲಿ, ಮಾರ್ಚ್ 27: ಬಹುತೇಕ ಎಲ್ಲಾ ದೇಶಗಳು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಚಿಂತತವಾಗಿವೆ , ಏಕೆಂದರೆ ಇದು ಬಹುತೇಕ ಎಲ್ಲಾ ದೇಶಗಳಲ್ಲಿ ಎಲ್‌ಪಿಜಿ ಅನಿಲ ಮತ್ತು ಪೆಟ್ರೋಲ್(Petrol) ಮತ್ತು ಡೀಸೆಲ್ ಸಮಸ್ಯೆಗಳು ಉಂಟಾಗುತ್ತಿವೆ.ಭಾರತದಲ್ಲಿಯೂ ಜನರು ಎಲ್‌ಪಿಜಿ ಪಡೆಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಕೆಲವೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ಬಗ್ಗೆ ವದಂತಿಗಳು ಹರಡಿ, ಜನರು ಪೆಟ್ರೋಲ್ ಪಂಪ್‌ಗಳಿಗೆ ಗುಂಪುಗೂಡುವಂತೆ ಮಾಡಲಾಗುತ್ತಿದೆ.
ಸರ್ಕಾರವು ಎಲ್‌ಪಿಜಿ ಅನಿಲ ಅಥವಾ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಿಲ್ಲ ಮತ್ತು ಸಾಕಷ್ಟು ಸ್ಟಾಕ್ ಹೊಂದಿದೆ ಎಂದು ಸ್ಪಷ್ಟಪಡಿಸಿದೆ. ಏತನ್ಮಧ್ಯೆ, ಮತ್ತೊಂದು ಚರ್ಚೆಯ ವಿಷಯವು ವೇಗವನ್ನು ಪಡೆಯುತ್ತಿದೆ. ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸುವ ಸಾಧ್ಯತೆ ಇದೆ ಎನ್ನುವ ವದಂತಿ ವೇಗವಾಗಿ ಹಬ್ಬುತ್ತಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ನಮ್ಮ ಬಳಿ ಅಂತಾ ಯಾವ ಪ್ರಸ್ತಾಪವೂ ಇಲ್ಲ, ಲಾಕ್‌ಡೌನ್ ಹೇರುವ ಸಾಧ್ಯತೆಯೇ ಇಲ್ಲ ಎಂದು ಹೇಳಿದ್ದಾರೆ.
ಇಂದು ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು, ದೇಶಾದ್ಯಂತ ಯಾವುದೇ ಲಾಕ್‌ಡೌನ್ ಇರುವುದಿಲ್ಲ ಎಂದು ಹೇಳಿದರು. ಪ್ರಧಾನಿ ಮೋದಿ ಸ್ವತಃ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಪೆಟ್ರೋಲ್(Petrol) ಮತ್ತು ಡೀಸೆಲ್(Diesel) ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದು, ಇದರಿಂದಾಗಿ ಪ್ರತಿ ಲೀಟರ್ ಪೆಟ್ರೋಲ್‌ಗೆ 3 ರೂಪಾಯಿ ಮತ್ತು ಡೀಸೆಲ್ ಸುಂಕ ಶೂನ್ಯಕ್ಕೆ ಇಳಿದಿದೆ. ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಮತ್ತು ಅದರ ಪರಿಣಾಮವಾಗಿ ಟೆಹ್ರಾನ್ ಹಾರ್ಮುಜ್ ಜಲಸಂಧಿಯ ಮೇಲೆ ಹೇರಿದ ದಿಗ್ಬಂಧನದಿಂದ ಉಂಟಾದ ಜಾಗತಿಕ ಇಂಧನ ಬಿಕ್ಕಟ್ಟಿನಿಂದಾಗಿ ಬೆಲೆ ಏರಿಕೆಯಾಗುವ ಭೀತಿಯ ಮಧ್ಯೆ ಈ ಕಡಿತ ಮಾಡಲಾಗಿದೆ. ಪೆಟ್ರೋಲ್ ಲೀಟರ್‌ಗೆ 13 ರೂ.ನಿಂದ 3 ರೂ.ಗೆ ಇಳಿಸಲಾಗಿದೆ.
ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನತೆ ಮತ್ತು ಅಮೆರಿಕ-ಇರಾನ್ ಯುದ್ಧದ ಬೆದರಿಕೆಯಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 114 ಡಾಲರ್ಗಿಂತ ಹೆಚ್ಚಿದ್ದವು. ಡೀಸೆಲ್ ಮೇಲಿನ ಸುಂಕ 10 ರೂ.ನಿಂದ ಶೂನ್ಯಕ್ಕೆ ಇಳಿಕೆಯಾಗಿದೆ.
ಮಧ್ಯಪ್ರಾಚ್ಯದ ಯುದ್ಧದ ಮಧ್ಯೆ, ಸಾಮಾನ್ಯ ಜನರಿಗೆ ರಿಲೀಫ್ ನೀಡಲು ಸರ್ಕಾರ ಒಂದು ಪ್ರಮುಖ ಹೆಜ್ಜೆ ಇಟ್ಟಿದೆ. ಶುಕ್ರವಾರ ಬೆಳಗ್ಗೆ, ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂ. ನಷ್ಟು ಕಡಿಮೆ ಮಾಡಿದೆ. ಈ ಕ್ರಮದ ನಂತರ, ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 3 ರೂ.ಗೆ ಇಳಿಸಲಾಗಿದೆ ಮತ್ತು ಡೀಸೆಲ್ ಮೇಲೆ ಅದು ಈಗ ಶೂನ್ಯವಾಗಿರುತ್ತದೆ. ಪ್ರಸ್ತುತ, ಪೆಟ್ರೋಲ್ ಮೇಲೆ ಲೀಟರ್‌ಗೆ 13 ರೂ. ಮತ್ತು ಡೀಸೆಲ್ ಮೇಲೆ ಲೀಟರ್‌ಗೆ 10 ರೂ. ಅಬಕಾರಿ ಸುಂಕವಿತ್ತು.
ಉಡುಪಿ, ಮಾರ್ಚ್ 27: ಯಕ್ಷಗಾನ (Yakshagana) ಪ್ರದರ್ಶನ ನಡೆಯುತ್ತಿರುವ ವೇಳೆ ಪ್ರೇಕ್ಷಕರು ಶಿಳ್ಳೆ ಊದಿದ್ದಕ್ಕೆ ಹಿರಿಯ ಕಲಾವಿದರೊಬ್ಬರು ವೇಷದಲ್ಲಿದ್ದುಕೊಂಡೇ ವೇದಿಕೆಯಿಂದಲೇ ಬೈದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರು ಕುಂದಾಪುರದ ಹೆನ್ನಾಬೈಲಿನಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇನ್ನೇನು ಭಾಗವತರ ಪದ್ಯ ಮುಗಿದು ಅರ್ಥ ಹೇಳಲು ವೇಷಧಾರಿ ಸಿದ್ಧನಾದಾಗ ಪ್ರೆಕ್ಷಕರು ಶಿಳ್ಳೆ ಊದಿದ್ದಾರೆ. ಆಗ ಹಿರಿಯ ಕಲಾವಿದ ಉಜಿರೆ ಅಶೋಕ್ ಭಟ್ (Ujire Ashok Bhat) ಸಿಟ್ಟಿಗೆದ್ದು ಪ್ರೇಕ್ಷಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಉಜಿರೆ ಅಶೋಕ್ ಭಟ್ ಹೇಳಿದ್ದೇನು?
‘ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗ್ತೇನೆ. ದೊಂಬರಾಟ ಅಲ್ಲ ಇದು. ನಾನು ಆಗಿನಿಂದ ಚೌಕಿಯಲ್ಲಿದ್ದುಕೊಂಡು ಗಮನಿಸುತ್ತಿದ್ದೇನೆ. ಸಭ್ಯ ಸಭೆಯನ್ನು ಬಯಸುತ್ತೇನೆ. ನನಗೆ ದಾಕ್ಷಿಣ್ಯ ಯಾರದ್ದೂ ಇಲ್ಲ. ಇಲ್ಲಿ ಯಾಕೆ ಕುಣಿಯುತ್ತಿದ್ದೇವೆ ಗೊತ್ತುಂಟಾ ನಿಮಗೆ? ಯಾರು ಆಟ ಆಡಿಸುವವರು? ಏನೆಂದು ಯೋಚನೆ ಮಾಡಿದ್ದೀರಿ ನೀವು? ಈ ಕ್ಷೇತ್ರದಲ್ಲಿ ನಮ್ಮ ತಿರುಗಾಟ ಎಷ್ಟು ಗೊತ್ತಿದೆಯಾ ನಿಮಗೆ? ಏನದು ಶಿಳ್ಳೆ? ಕೋಳಿಕಟ್ಟವಾ ಅಲ್ಲ ಕಂಬಳವಾ? ಯಾರದು? ಏನು ಆಲೋಚನೆ ಮಾಡಿದ್ದೀರಿ ನೀವು. ಯಾರದು ಶಿಳ್ಳೆ ಹಾಕಿದವ? ಆಗದಿದ್ದರೆ ಹೋಗು ಬನ್ಸ್ ತಿಂದು. ಭಾಗವತರ ಕಂಠ ಹಾಳು ಮಾಡುತ್ತೀರಾ? ಸಭ್ಯ ಸಭೆ ಅರ್ಥ ಮಾಡಿಕೊಳ್ಳಬೇಕು. ಹುಚ್ಚರನ್ನು ಬೆಳೆಸಬೇಡಿ. ಕಲಾ ಪ್ರೇಕ್ಷಕರನ್ನು ಬೆಳೆಸಿ. ನಾವು ಕೆಲಸ ಇಲ್ಲದ್ದಕ್ಕೆ ಇಲ್ಲಿ ಬಂದು ಬೆವರು ಹರಿಸಿ ಕುಣಿಯುವುದಲ್ಲ. ಅವರಿಗೆ ವಿಸಿಲ್, ದುಡ್ಡು ಕೊಟ್ಟವರು ಯಾರು? ಧಾರ್ಮಿಕ ಭಾಷಣ ಮಾಡಬೇಕೋ ಒಂದು ಗಂಟೆ ಅಥವಾ ಯಕ್ಷಗಾನ ಮಾಡಬೇಕೋ? ಏನು ಹೇಳುತ್ತೀರಿ ಹಿರಿಯರೇ? ಆಲೋಚನೆ ಮಾಡಿ’ ಎಂದು ಉಜಿರೆ ಅಶೋಕ ಭಟ್ ಹೇಳಿದ್ದಾರೆ.
ಉಜಿರೆ ಅಶೋಕ ಭಟ್ ಮಾತಿನ ವಿಡಿಯೋ ಇಲ್ಲಿ ನೋಡಿ
ಈ ವಿಚಾರ ಈಗ ವ್ಯಾಪಕ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಅನೇಕ ಕಲಾಭಿಮಾನಿಗಳು ಉಜಿರೆಯವರ ಮಾತನ್ನು ಸಮರ್ಥಿಸಿದ್ದರೆ ಇನ್ನು ಅನೇಕರು ವಿರೋಧಿಸಿದ್ದಾರೆ. ಇನ್ನು ಕೆಲವರು ಹೇಳಿದ ವಿಚಾರ ಸರಿಯಾದರೂ ಮಾತನಾಡಿದ ರೀತಿ ಸರಿ ಇಲ್ಲ ಎಂದಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಜೋರಾಯ್ತು ಚರ್ಚೆ
‘ದಯವಿಟ್ಟು ತಪ್ಪು ಮಾಹಿತಿ ಹರಡುವುದು ಸರಿಯಲ್ಲ. ಇದು ಶಿಳ್ಳೆ ಹಾಕಿ ಪ್ರೋತ್ಸಾಹಿಸಿದ್ದಲ್ಲ. ತುಂಬಾ ಹೊತ್ತಿನಿಂದ ಪ್ರದರ್ಶನಕ್ಕೆ ಅಡ್ಡಿ ಮಾಡುತ್ತಿದ್ದ ವಿಷಯ. ಚೌಕಿಯಲ್ಲಿರುವಾಗಲೇ ಗಮನಿಸಿದ್ದೆ ಅಂತ ಅಶೋಕ ಭಟ್ರು ಹೇಳಿದ್ರು. ಇದು ಜಾತ್ರೆಗಳಲ್ಲಿ ಮಕ್ಕಳು ಊದುವ ಪೀಪಿ ತಂದು, ಯಕ್ಷಗಾನಕ್ಕೆ ಅಡ್ಡಿ ಮಾಡಿದ್ದು. ಚಪ್ಪಾಳೆ, ಶಿಳ್ಳೆಗೆ ಮಿತಿ ಬೇಕಷ್ಟೆ. ಈ ರೀತಿ ಊದಿದ್ದವರು ಯಕ್ಷಗಾನ ಆಸ್ವಾದಿಸುವವರಲ್ಲ’ ಎಂದು ಫೇಸ್ಬುಕ್ ಪೋಸ್ಟೊಂದಕ್ಕೆ ಕಲಾವಿದರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ‘ಅಡ್ದಿ ಮಾಡಿದವರಿಗೆ ಗದರಿದ್ದಾರೆ ಅಂದುಕೊಳ್ಳೋಣ. ಕಂಬಳದ ಸುದ್ದಿ ಯಾಕೆ? ಕೋಳಿ ಅಂಕದ ಸುದ್ದಿ ಯಾಕೆ? ಡೊಂಬರಾಟದ ಸುದ್ದಿ ಯಾಕೆ ಯಕ್ಷಗಾನ ವೇದಿಕೆಯಲ್ಲಿ? ಕಂಬಳ, ಕೋಳಿ ಅಂಕ, ಡೊಂಬರಾಟ ಅಂದ್ರೇನು ಟೇಕನ್ ಫಾರ್ ಗ್ರೇಂಟೆಡ್ ಅಂತಾ ಅಂದುಕೊಂಡ್ರಾ’ ಎಂಬ ಕಮೆಂಟ್ ಸಹ ವ್ಯಕ್ತವಾಗಿದೆ.
‘ಅವರು ಇಡೀ ಯಕ್ಷಗಾನ ಕಲಾಭಿಮಾನಿಗಳಿಗೆ ಅವಮಾನ ಆಗುವಂತೆ ಮಾತನಾಡಿದ್ದಾರೆ. ಬನ್ಸ್ ತಿಂದು ಹೋಗು ಎಂದು ಮೂದಲಿಸಿದ್ದು ಇವರ ದುರಹಂಕಾರದ ಪರಮಾವಧಿಯಾಗಿದೆ. ಅದರ ಜೊತೆಗೆ ಜಾನಪದ ಕ್ರೀಡೆಯಾದ ಕಂಬಳವನ್ನು ಅವಮಾನಿಸಿದ್ದಾರೆ. ಇವರ ಈ ಕೃತ್ಯವನ್ನು ಯಕ್ಷಗಾನದ ಅಭಿಮಾನಿಗಳು ಖಂಡಿತವಾಗಿ ಖಂಡಿಸಬೇಕು. ಇವರನ್ನು ಯಾರು ಸಹ ಯಾವುದೇ ಸಭೆ ಸಮಾರಂಭಗಳಿಗೆ ಅತಿಥಿಯಾಗಿ ವೇದಿಕೆಗೆ ಆಹ್ವಾನಿಸಬೇಡಿ’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಸಂಭಾಷಣೆ ವೇಳೆ ಶಿಳ್ಳೆ ಹೊಡೆದು ತೊಂದರೆ ಕೊಟ್ಟರೆ ತಪ್ಪು, ಇಲ್ಲಿ ಹಾಗೇನು ಆಗಿಲ್ಲ . ಪ್ರೇಕ್ಷರನ್ನು ಬೈದಿದ್ದು ತಪ್ಪು. ಯಕ್ಷಗಾನ ಬೆಳಕಿನ ಸೇವೆ. ಒಂದು ಯಕ್ಷಗಾನ ಬಯಲಾಟ ಮಾಡಬೇಕಾದರೆ 5 ಲಕ್ಷ ರೂ. ಬೇಕು, ಎಲ್ಲಿಯೋ ಸಾಲ ಮಾಡಿ ಸೇವೆ ಮಾಡಿಸಿದವರಿಗೆ ಆಟ ನೋಡಲು ಅವಕಾಶ ಸಿಗುವುದಿಲ್ಲ , ನಿಮ್ಮ ಅನುಕೂಲಕ್ಕೆ ತಕ್ಕಂತೆ 12 ಗಂಟೆಗೆ ಮುಗಿಸುವುದು ತಪ್ಪಲ್ಲವೇ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ, ಕಲಾವಿದರು ವೇಷಧಾರಿಯಾಗಿದ್ದುಕೊಂಡೇ ವೇದಿಕೆಯಿಂದಲೇ ಪ್ರೇಕ್ಷಕರಿಗೆ ಕ್ಲಾಸ್ ತೆಗೆದುಕೊಂಡ ಈ ವಿಚಾರ ಸದ್ಯ ಕಲಾವಲಯದಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವುದಂತೂ ನಿಜ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ದಾವಣಗೆರೆ, (ಮಾರ್ಚ್ 27): ದಾವಣಗೆರೆ (Davanagere) ಬೆಣ್ಣೆ ದೋಸೆಯಂತೆ ಸಲೀಸಾಗಿ ಉಪಚುನಾವಣೆ (Davanagere South By Poll) ಗೆದ್ದು ಬೀಗಲು ಮುಂದಾಗಿದ್ದ ಕಾಂಗ್ರೆಸ್ಗೆ ದಾವಣಗೆರೆ ದಕ್ಷಿಣ ಕ್ಷೇತ್ರ ಬಿಸಿತುಪ್ಪವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರ್ ಗೆ ಮುಸ್ಲಿಂ (Muslim) ಮತಗಳು ಕೈತಪ್ಪುವ ಆತಂಕ ಶುರುವಾಗಿದೆ. ಯಾಕಂದ್ರೆ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರೋ ಸಾದಿಕ್ ಪೈಲ್ವಾನ್, ನಾಮಪತ್ರ ವಾಪಸ್ ಪಡೆಯದೆ, ತಮ್ಮ ಸ್ಪರ್ಧೆಯ ನಿಲುವು ಅಚಲ ಎಂದು ಸಂದೇಶ ಸಾರಿದ್ದಾರೆ. ಅಲ್ಲದೇ ಪೈಲ್ವಾನ್ ಸೇರಿದಂತೆ ಬರೋಬ್ಬರಿ 14 ಮುಸ್ಲಿಂ ಅಭ್ಯರ್ಥಿಗಳು ದಾವಣಗೆರೆ ದಕ್ಷಿಣ ಕಣದಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್ಗೆ ಆತಂಕವಾಗಿರುವುದು ಸಾಮಾನ್ಯ. ನಿನ್ನೆ (ಮಾರ್ಚ್ 26) ಕಾಂಗ್ರೆಸ್ನ ನಾಯಕರು ಖುದ್ದು ಸಾದಿಕ್ ಮನೆಗೆ ಬಂದು ಸಂಧಾನಕ್ಕೆ ಯತ್ನಿಸಿದ್ದಾರೆ. ಈ ವೇಳೆ ಸಾದಿಕ್ ಬೆಂಬಲಿಗರು ಗೋ ಬ್ಯಾಕ್ ಘೋಷಣೆ ಕೂಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮುಸ್ಲಿಂ ಸಮುದಾಯ ರಾಜ್ಯ ನಾಯಕ ಸಿಎಂ ಇಬ್ರಾಹಿಂ ಸಹ ದಾಣಗೆರೆ ಅಖಾಡಕ್ಕಿಳಿಯಲಿದ್ದು, ಪಕ್ಷೇತರ ಅಭ್ಯರ್ಥಿ ಅಭ್ಯರ್ಥಿ ಖಾಲಿದ್ ಆದಿಲ್ ಪಾಷಾ ಪರ ಪ್ರಚಾರ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಿಂದ ಕಾಂಗ್ರೆಸ್ಗೆ ಮತ್ತಷ್ಟು ಆತಂಕ ಎದುರಾಗಿದೆ.
ಯಾಕಂದ್ರೆ, ಸಿಎಂ ಇಬ್ರಾಹಿಂದ ಸಹ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು, ಜಮೀರ್ ಅಹಮ್ಮದ್ ಖಾನ್ ಹೇಗೋ ಹಾಗೇ ಇಬ್ರಾಹಿಂ ಸಹ ತಮ್ಮ ಸಮುದಾಯದಲ್ಲಿ ಹಿಡಿತ ಹೊಂದಿದ್ದಾರೆ. ಹೀಗಾಗಿ ಇಬ್ರಾಹಿಂ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡಿ ಗೆಲ್ಲಿಸುವ ಶಕ್ತಿ ಇಲ್ಲವಾದರೂ ಮುಸ್ಲಿಂ ಮತಗಳನ್ನ ಸೆಳೆದ ಕಾಂಗ್ರೆಸ್ ಸೋಲಿಗೆ ಕಾರಣವಾಗಬಹುದು. ಹೀಗಾಗಿ ಸಿಎಂ ಇಬ್ರಾಹಿಂದ ನಡೆ ತೀವ್ರ ಕುತೂಹಲ ಮೂಡಿಸಿದೆ.
ದಾವಣಗೆರೆ, (ಮಾರ್ಚ್ 27): ದಾವಣಗೆರೆ (Davanagere) ಬೆಣ್ಣೆ ದೋಸೆಯಂತೆ ಸಲೀಸಾಗಿ ಉಪಚುನಾವಣೆ (Davanagere South By Poll) ಗೆದ್ದು ಬೀಗಲು ಮುಂದಾಗಿದ್ದ ಕಾಂಗ್ರೆಸ್ಗೆ ದಾವಣಗೆರೆ ದಕ್ಷಿಣ ಕ್ಷೇತ್ರ ಬಿಸಿತುಪ್ಪವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರ್ ಗೆ ಮುಸ್ಲಿಂ (Muslim) ಮತಗಳು ಕೈತಪ್ಪುವ ಆತಂಕ ಶುರುವಾಗಿದೆ. ಯಾಕಂದ್ರೆ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರೋ ಸಾದಿಕ್ ಪೈಲ್ವಾನ್, ನಾಮಪತ್ರ ವಾಪಸ್ ಪಡೆಯದೆ, ತಮ್ಮ ಸ್ಪರ್ಧೆಯ ನಿಲುವು ಅಚಲ ಎಂದು ಸಂದೇಶ ಸಾರಿದ್ದಾರೆ. ಅಲ್ಲದೇ ಪೈಲ್ವಾನ್ ಸೇರಿದಂತೆ ಬರೋಬ್ಬರಿ 14 ಮುಸ್ಲಿಂ ಅಭ್ಯರ್ಥಿಗಳು ದಾವಣಗೆರೆ ದಕ್ಷಿಣ ಕಣದಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್ಗೆ ಆತಂಕವಾಗಿರುವುದು ಸಾಮಾನ್ಯ. ನಿನ್ನೆ (ಮಾರ್ಚ್ 26) ಕಾಂಗ್ರೆಸ್ನ ನಾಯಕರು ಖುದ್ದು ಸಾದಿಕ್ ಮನೆಗೆ ಬಂದು ಸಂಧಾನಕ್ಕೆ ಯತ್ನಿಸಿದ್ದಾರೆ. ಈ ವೇಳೆ ಸಾದಿಕ್ ಬೆಂಬಲಿಗರು ಗೋ ಬ್ಯಾಕ್ ಘೋಷಣೆ ಕೂಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮುಸ್ಲಿಂ ಸಮುದಾಯ ರಾಜ್ಯ ನಾಯಕ ಸಿಎಂ ಇಬ್ರಾಹಿಂ ಸಹ ದಾಣಗೆರೆ ಅಖಾಡಕ್ಕಿಳಿಯಲಿದ್ದು, ಪಕ್ಷೇತರ ಅಭ್ಯರ್ಥಿ ಅಭ್ಯರ್ಥಿ ಖಾಲಿದ್ ಆದಿಲ್ ಪಾಷಾ ಪರ ಪ್ರಚಾರ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಿಂದ ಕಾಂಗ್ರೆಸ್ಗೆ ಮತ್ತಷ್ಟು ಆತಂಕ ಎದುರಾಗಿದೆ.
ಯಾಕಂದ್ರೆ, ಸಿಎಂ ಇಬ್ರಾಹಿಂದ ಸಹ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು, ಜಮೀರ್ ಅಹಮ್ಮದ್ ಖಾನ್ ಹೇಗೋ ಹಾಗೇ ಇಬ್ರಾಹಿಂ ಸಹ ತಮ್ಮ ಸಮುದಾಯದಲ್ಲಿ ಹಿಡಿತ ಹೊಂದಿದ್ದಾರೆ. ಹೀಗಾಗಿ ಇಬ್ರಾಹಿಂ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡಿ ಗೆಲ್ಲಿಸುವ ಶಕ್ತಿ ಇಲ್ಲವಾದರೂ ಮುಸ್ಲಿಂ ಮತಗಳನ್ನ ಸೆಳೆದ ಕಾಂಗ್ರೆಸ್ ಸೋಲಿಗೆ ಕಾರಣವಾಗಬಹುದು. ಹೀಗಾಗಿ ಸಿಎಂ ಇಬ್ರಾಹಿಂದ ನಡೆ ತೀವ್ರ ಕುತೂಹಲ ಮೂಡಿಸಿದೆ.