Category Archives: Blog

Your blog category

ಗೃಹೇತರ ಬಳಕೆಯ ಎಲ್​ಪಿಜಿ, ಹೆಚ್ಚುವರಿ ಶೇ. 20 ಹಂಚಿಕೆ; ಒಟ್ಟು ಪೂರೈಕೆ ಶೇ. 70ಕ್ಕೆ ಏರಿಕೆ

ಗೃಹೇತರ ಬಳಕೆಯ ಎಲ್​ಪಿಜಿ, ಹೆಚ್ಚುವರಿ ಶೇ. 20 ಹಂಚಿಕೆ; ಒಟ್ಟು ಪೂರೈಕೆ ಶೇ. 70ಕ್ಕೆ ಏರಿಕೆ

ನವದೆಹಲಿ, ಮಾರ್ಚ್ 27: ಹಾರ್ಮುಜ್ ಜಲಸಂಧಿಯಿಂದ ಎಲ್​ಪಿಜಿ ಹೊತ್ತು ಒಂದೊಂದೇ ಭಾರತೀಯ ಎಲ್​ಪಿಜಿ ಟ್ಯಾಂಕರ್​ಗಳು ಹೊರಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅನಿಲ ಕೊರತೆಯ ಸಮಸ್ಯೆ ಸ್ವಲ್ಪ ಕಡಿಮೆ ಆಗಿದೆ. ಇದರ ಪರಿಣಾಮವಾಗಿ ಕೈಗಾರಿಕೆ ಮತ್ತಿತರ ಗೃಹೇತರ ಕ್ಷೇತ್ರಗಳಿಗೆ ಎಲ್​ಪಿಜಿ ಪೂರೈಕೆಯನ್ನು ಹಂತ ಹಂತವಾಗಿ ಹೆಚ್ಚಿಸುತ್ತಿದೆ. ಪೆಟ್ರೋಲಿಯಂ ಸಚಿವಾಲಯ ಇವತ್ತು ಹೊರಡಿಸಿದ ಪ್ರಕಟಣೆಯಲ್ಲಿ ಗೃಹೇತರ ಎಲ್​ಪಿಜಿ ಹಂಚಿಕೆಯನ್ನು ಶೇ. 20ರಷ್ಟು ಹೆಚ್ಚಿಸುವ ಪ್ರಸ್ತಾವ ಇರುವುದಾಗಿ ತಿಳಿಸಿದೆ. ಈ ಹೆಚ್ಚುವರಿ ಶೇ. 20 ಅನ್ನು ನಿರ್ದಿಷ್ಟ ಕ್ಷೇತ್ರಗಳಿಗೆ ಉದ್ದೇಶಿಸಿ ಹಂಚಿಕೆ ಮಾಡಲಾಗುತ್ತಿದೆ.

ಇದರೊಂದಿಗೆ, ಸರ್ಕಾರವು ಗೃಹೇತರ ಎಲ್​ಪಿಜಿ ಹಂಚಿಕೆಯ ಮಟ್ಟ ಶೇ. 70ಕ್ಕೆ ಏರಿದೆ. ಅಂದರೆ, ಬಿಕ್ಕಟ್ಟು ಶುರುವಾಗುವ ಮುನ್ನ ಮಾಡಲಾಗುತ್ತಿದ್ದ ಹಂಚಿಕೆಗೆ ಹೋಲಿಸಿದರೆ, ಅದರ ಶೇ. 70ರ ಪೂರೈಕೆ ಮಟ್ಟ ಮುಟ್ಟಲಾಗಿದೆ. ಬಿಕ್ಕಟ್ಟು ಉದ್ಭವವಾದಾಗ ಸರ್ಕಾರವು ಹಂಚಿಕೆಯನ್ನು ಶೇ. 40ಕ್ಕೆ ಮೊಟಕುಗೊಳಿಸಿತ್ತು. ನಂತರ, ಪಿಎನ್​ಜಿ ಸೌಕರ್ಯ ಅಭಿವೃದ್ಧಿಗೆ ಮುಂದಾಗುವ ರಾಜ್ಯಗಳಿಗೆ ಹಂಚಿಕೆಯನ್ನು ಶೇ. 10ರಷ್ಟು ಹೆಚ್ಚಿಸಿತು. ಇದೀಗ ಹೆಚ್ಚುವರಿ ಶೇ. 20 ಅನ್ನು ಹಂಚಿಕೆ ಮಾಡಿದೆ.

ಹೆಚ್ಚುವರಿ ಶೇ. 20 ಎಲ್​ಪಿಜಿ ಈ ಕ್ಷೇತ್ರಗಳಿಗೆ ಸಲ್ಲಿಕೆ

ನೈಸರ್ಗಿಕ ಅನಿಲ ಬಳಕೆ ಸಾಧ್ಯವಿಲ್ಲದ, ಮತ್ತು ಎಲ್​ಪಿಜಿ ಬಳಕೆ ಅನಿವಾರ್ಯವಾಗಿರುವ ಉದ್ಯಮಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಎಲ್​ಪಿಜಿ ಹಂಚಿಕೆ ಮಾಡಲಾಗಿದೆ. ಕಾರ್ಮಿಕರು ಹೆಚ್ಚು ಇರುವ ಮತ್ತು ಇತರ ಉದ್ದಿಮೆಗಳಿಗೆ ಪೂರಕವಾಗಿರುವಂತಹ ಉಕ್ಕು, ಆಟೊಮೊಬೈಲ್, ಟೆಕ್ಸ್​ಟೈಲ್ ಡೈ, ಕೆಮಿಕಲ್, ಪ್ಲಾಸ್ಟಿಕ್ ಉದ್ಯಮಗಳಿಗೆ ಹಂಚಿಕೆ ಮಾಡಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಎಲ್​ಪಿಜಿ ಅತ್ಯಗತ್ಯವಾಗಿರುವ ಕೈಗಾರಿಕೆಗಳಿಗೆ ಮೊದಲ ಪ್ರಾಶಸ್ತ್ಯ ಇರುತ್ತದೆ.

ಇದನ್ನೂ ಓದಿ: ಅಬಕಾರಿ ಸುಂಕ ಕಡಿಮೆಗೊಂಡರೂ ಪೆಟ್ರೋಲ್, ಡೀಸಲ್ ಬೆಲೆಯಲ್ಲಿ ಆಗಲ್ಲ ಇಳಿಕೆ; ಏನು ಕಾರಣ?

ಎಲ್​ಪಿಜಿಗೂ ಪೈಪ್ಡ್ ಗ್ಯಾಸ್​ಗೂ ಏನು ವ್ಯತ್ಯಾಸ?

ಪೈಪ್ಡ್ ಗ್ಯಾಸ್ ಅಥವಾ ಪಿಎನ್​ಜಿ ಮತ್ತು ಎಲ್​ಎನ್​ಜಿ ನೈಸರ್ಗಿಕ ಅನಿಲಗಳಾಗಿವೆ. ಇವುಗಳ ಅರ್ಧಕ್ಕಿಂತ ಹೆಚ್ಚು ಉತ್ಪಾದನೆ ಸ್ಥಳೀಯವಾಗಿ ಆಗುತ್ತದೆ. ಆಮದು ಮೇಲಿನ ಅವಲಂಬನೆ ಕಡಿಮೆ. ಅತ್ತ, ಎಲ್​ಪಿಜಿ ಪೆಟ್ರೋಲಿಯಂ ಅನಿಲವಾಗಿದೆ. ಇದರ ಅಗತ್ಯದಲ್ಲಿ ಹೆಚ್ಚಿನದನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಅದರಲ್ಲೂ ಗಲ್ಫ್ ರಾಷ್ಟ್ರಗಳ ಮೇಲೆ ಅವಲಂಬನೆ ಹೆಚ್ಚು. ಈಗ ಗಲ್ಫ್​ನಲ್ಲೇ ಬಿಕ್ಕಟ್ಟು ಉದ್ಭವವಾಗಿರುವುದರಿಂದ ಭಾರತಕ್ಕೆ ಎಲ್​ಪಿಜಿ ಸಂಕಟ ಹೆಚ್ಚಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪಾಕಿಸ್ತಾನ ಪ್ರೀಮಿಯರ್​​ ಲೀಗ್​​ಗೆ ಇದೆಂಥ ಗತಿ; ಬೆವರಿಗೆ ಬಿಡ್ತು ಜೆರ್ಸಿ ಬಣ್ಣ, ಬಾಲ್​ ಕಲರೇ ಚೇಂಜ್

ಪಾಕಿಸ್ತಾನ ಪ್ರೀಮಿಯರ್ ಲೀಗ್ ಸದ್ಯ ಚರ್ಚೆಯಲ್ಲಿದೆ. ಈ ಸೀಸನ್​ ಅಲ್ಲಿ ಫ್ಯಾನ್ಸ್​​ಗೆ ಎಂಟ್ರಿ ಇಲ್ಲ. ಕಾಸ್ಟ್ ಕಟಿಂಗ್ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಇಸ್ರೇಲ್​, ಅಮೆರಿಕ-ಇರಾನ್ ಯುದ್ಧದಿಂದ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಕಾಣಿಸಿದ್ದು, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬೆನ್ನಲ್ಲೇ ಒಂದು ಪಿಎಸ್​ಎಲ್​ ಎಷ್ಟು ಬಡ ಲೀಗ್ ಎಂಬುದು ಸಾಬೀತಾಗಿದೆ. ಆಟಗಾರರ ಬೆವರಿಗೆ ಶರ್ಟ್ ಬಣ್ಣ ಬಿಟ್ಟುಕೊಂಡಿದೆ.

2008ರ ಐಪಿಎಲ್​​​ನಲ್ಲಿ ಪಾಕ್ ಆಟಗಾರರು ಕೂಡ ಇದ್ದರು. ಆದರೆ, ಅದೇ ವರ್ಷ ಪಾಕ್ ಬೆಂಬಲಿತ ಉಗ್ರರು ಮುಂಬೈ ಮೇಲೆ ದಾಳಿ ಮಾಡಿದ ಬಳಿಕ ಪಾಕಿಸ್ತಾನ ಆಟಗಾರರನ್ನು ಐಪಿಎಲ್​​ನಿಂದ ಹೊರಕ್ಕೆ ಇಡಲಾಯಿತು. ವರ್ಷ ಕಳೆದಂತೆ ಐಪಿಎಲ್ ತನ್ನ ಖ್ಯಾತಿ ಹೆಚ್ಚಿಸಿಕೊಳ್ಳುತ್ತಾ ಹೋಯಿತು. ಈ ಸಂದರ್ಭದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುತ್ತಿರಲಿಲ್ಲ. ಈ ಅವಧಿಯಲ್ಲಿ ಪಾಕ್ ಆಟಗಾರರು ಖಾಲಿ ಕೂರಬೇಕಿತ್ತು ಅಥವಾ ಜಿಂಬಾಬ್ವೆ ಜೊತೆ ಸರಣಿ ಆಡಬೇಕಿತ್ತು. ಹೀಗಾಗಿ, 2016ರಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ ಆರಂಭಿಸಲಾಯಿತು.

ಇದನ್ನೂ ಓದಿ: ಪಾಕಿಸ್ತಾನ್ ಸೂಪರ್ ಲೀಗ್ ಉದ್ಘಾಟನಾ ಪಂದ್ಯ ನೋಡಲು ಒಬ್ಬರೂ ಬರಲಿಲ್ಲ

ಐಪಿಎಲ್​​​ನಲ್ಲಿ ಅವಕಾಶ ಸಿಗದ ಕೆಲ ವಿದೇಶಿ ಆಟಗಾರರು ಹಾಗೂ ಪಾಕಿಸ್ತಾನ ಆಟಗಾರರು ಇದರಲ್ಲಿ ಆಡುತ್ತಿದ್ದಾರೆ. ವರ್ಷ ಕಳೆದಂತೆ ಪಾಕಿಸ್ತಾನ ಸೂಪರ್ ಲೀಗ್ ಸಂಕಷ್ಟ ಅನುಭವಿಸುತ್ತಿದೆ. ಈ ಬಾರಿ ಫ್ಯಾನ್ಸ್​​ಗಳಿಗೂ ಅವಕಾಶ ನೀಡಿಲ್ಲ. ಹೀಗಿರುವಾಗಲೇ ಆಟಗಾರರಿಗೆ ನೀಡಲಾದ ಜೆರ್ಸಿ ಗುಣಮಟ್ಟದ ಬಗ್ಗೆ ಚರ್ಚೆ ನಡೆದಿದೆ.

ಮಾರ್ಚ್ 26ರ ಉದ್ಘಾಟನಾ ಪಂದ್ಯದಲ್ಲಿ ಲಾಹೋರ್ ಹಾಗೂ ಹೈದರಾಬಾದ್ ಕಿಂಗ್ಸ್​​ಮನ್ ಮುಖಾಮುಖಿ ಆಗಿದ್ದವು. ಆಗ ಇದ್ದಕ್ಕಿಂದ ಬಿಳಿ ಬಾಲ್ ಬಣ್ಣ ಬದಲಿಸಿದೆ. ಇದನ್ನು ನೋಡಿ ಅಂಪೈರ್​​​ಗಳು ಶಾಕ್ ಆದರು. ಆ ಬಳಿಕ ತಿಳಿದು ಬಂದಿದ್ದೇನೆಂದರೆ ಬಾಲ್​​​ನ ಆಟಗಾರರು ಬಟ್ಟೆಗೆ ಉಜ್ಜಿದಾಗ ಅದು ಬಣ್ಣ ಬಿಟ್ಟಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರೋಲ್ ಆಗುತ್ತಿದೆ.

ಇನ್ನಷ್ಟು ಕ್ರಿಕೆಟ್​​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

115 ರೂ. ಪೊಂಗಲ್​​ಗೆ 158 ರೂ ಶುಲ್ಕ: ಮಾಜಿ ಸಂಸದೆ ಸುಮಲತಾ ಅಂಬರೀಶ್ ಆಕ್ರೋಶ

ಬೆಂಗಳೂರು, (ಮಾರ್ಚ್ 27): ಆನ್‌ಲೈನ್ ಫುಡ್ ಡೆಲಿವರಿ (Online Food) ಸೇವೆಗಳಲ್ಲಿ ಡೆಲಿವರಿ ಚಾರ್ಜ್, ಪ್ಯಾಕಿಂಗ್ ಶುಲ್ಕ, ಪ್ಲಾಟ್‌ಫಾರ್ಮ್ ಫೀ, ಜಿಎಸ್‌ಟಿ ಸೇರಿದಂತೆ ಹಲವು ವಿಧದ ಹೆಚ್ಚುವರಿ ಶುಲ್ಕಗಳು ಸೇರಿಸುವುದು ಸಾಮಾನ್ಯವಾಗಿದೆ. ಆದರೆ ಕೆಲವೊಮ್ಮೆ ಈ ಶುಲ್ಕಗಳು ಆಹಾರದ ಮೂಲ ಬೆಲೆಯನ್ನೇ ಮೀರಿ ಹೋಗುತ್ತಿರುವುದರಿಂದ ಗ್ರಾಹಕರ ಅಸಮಾಧಾನ ಹೆಚ್ಚುತ್ತಿದೆ. ಅದು ಇದೀಗ ಮಾಜಿ ಸಂಸದೆ ಸುಮಲತಾ ಅಂಬರೀಶ್ (Sumalath Ambareesh) ಅವರಿಗೂ ಅನುಭವವಾಗಿದೆ. ಹೌದು…ತಾವು ಆರ್ಡರ್ ಮಾಡಿದ್ದ ಪೊಂಗಲ್​​​ ದರಕ್ಕಿಂತ ಹೆಚ್ಚು ಇತರೆ ಶುಲ್ಕು ವಿಧಿಸಿದ ಸ್ವಿಗ್ಗಿ (Swiggy) ವಿರುದ್ಧ ಸುಮಲತಾ ಅಂಬರೀಶ್ ಅಸಮಾಧಾನ ಹೊರಹಾಕಿದ್ದು, ಆಹಾರದ ಮೂಲ ಬೆಲೆಗೆ ಹೋಲಿಸಿದರೆ ಅತಿಯಾದ ಡೆಲಿವರಿ ಹಾಗೂ ಇತರೆ ಶುಲ್ಕಗಳನ್ನು ವಿಧಿಸಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

115 ರೂ. ಪೊಂಗಲ್​​ಗೆ 158 ರೂ ಶುಲ್ಕ

ಸುಮಲತಾ ಅಂಬರೀಶ್ ಅವರು ರಾಮೇಶ್ವರಂ ಕೆಫೆಯಿಂದ ಪೊಂಗಲ್ ಆರ್ಡರ್ ಮಾಡಿದ್ದರು. ಆರ್ಡರ್ ಮಾಡಿದ ಆಹಾರದ ಮೂಲ ಬೆಲೆ 115 ರೂಪಾಯಿ ಮಾತ್ರವಾಗಿದ್ದರೂ, ಸ್ವಿಗ್ಗಿ ಐಟಂ ಹಾಗೂ ಇತರೆ ಶುಲ್ಕ ಸೇರಿಸಿ ಒಟ್ಟು 273 ರೂ. ವಸೂಲಿ ಮಾಡಿದೆ. ಅಂದರೆ ಮೂಲ 115 ರೂಪಾಯಿಯ ಪೊಂಗಲ್​​​ಗೆ 158 ರೂ. ಶುಲ್ಕ ವಿಧಿಸಲಾಗಿದೆ. ಇದರಿಂದ ಆಹಾರದ ಬೆಲೆಯಿಗಿಂತಲೂ ಹೆಚ್ಚು ಮೊತ್ತವನ್ನು ಡೆಲಿವರಿ ಹಾಗೂ ಇತರೆ ಶುಲ್ಕಗಳ ಹೆಸರಿನಲ್ಲಿ ಪಡೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಸಿದ್ದಾರೆ.

ಇದನ್ನೂ ನೋಡಿ: ಕೇಂದ್ರ ನಮ್ಮನ್ನ ಕೊಲೆ ಮಾಡ್ತಿದೆ: ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಿದ್ದಕ್ಕೆ ಡಿಕೆಶಿ ಕೆಂಡಾಮಂಡಲ

ಈ ಕುರಿತು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, 115 ರೂಪಾಯಿಯ ಪೊಂಗಲ್‌ಗೆ 273 ಯಾಕೆ? ಆಹಾರದ ಬೆಲೆಯಿಗಿಂತ ಡಬಲ್ ಚಾರ್ಜ್ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ಗ್ರಾಹಕರಿಗೆ ಪಾರದರ್ಶಕ ಬೆಲೆ ಮಾಹಿತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸುಮಲತಾ ಅವರ ಪೋಸ್ಟ್​​ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ತಮ್ಮದೇ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ. ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದಾಗಿ ತಿಳಿಸಿದ್ದಾರೆ. ಕೆಲವರು ಫುಡ್ ಡೆಲಿವರಿ ಕಂಪನಿಗಳು ಪಾರದರ್ಶಕ ದರ ವ್ಯವಸ್ಥೆಯನ್ನು ಅನುಸರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಅಯೋಧ್ಯೆ, ರಾಮಲಲ್ಲಾನಿಗೆ ಸೂರ್ಯ ತಿಲಕ; ಇಲ್ಲಿದೆ ಅದ್ಭುತ ವಿಡಿಯೋ!

ಅಯೋಧ್ಯೆ ಸೇರಿದಂತೆ ದೇಶಾದ್ಯಂತ ಶ್ರೀ ರಾಮನವಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನೂತನ ರಾಮ ಮಂದಿರದಲ್ಲಿ ಬಾಲರಾಮಲಲ್ಲಾನ ವಿಗ್ರಹದ ಹಣೆಯ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಸ್ಪರ್ಶಿಸಿ, ಸೂರ್ಯ ತಿಲಕವಿಟ್ಟಂತೆ ಭಾಸವಾದ ಐತಿಹಾಸಿಕ ಕ್ಷಣಕ್ಕೆ ಅಯೋಧ್ಯೆ ಸಾಕ್ಷಿಯಾಯಿತು. ಈ ಅದ್ಭುತ ದೃಶ್ಯದ ವಿಡಿಯೋ ಇಲ್ಲಿದೆ ನೋಡಿ

ರಾಮಲಲ್ಲಾನ ವಿಗ್ರಹದ ಹಣೆಗೆ ಸೂರ್ಯನ ಕಿರಣಗಳು ಬೀಳುವಂತೆ ವಿಶೇಷ ವಾಸ್ತು ವಿನ್ಯಾಸ ಮಾಡಲಾಗಿದೆ. ಐಐಟಿ, ಭಾರತೀಯ ತಂತ್ರಜ್ಞಾನ ಸಂಸ್ಥೆ ವಿಜ್ಞಾನಿಗಳು ಮತ್ತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ನ ತಜ್ಞರು ಜಂಟಿಯಾಗಿ ಈ ಆಪ್ಟೋ-ಮೆಕ್ಯಾನಿಕಲ್ ಸಿಸ್ಟಮ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಮಂದಿರದ ಶಿಖರದ ಮೇಲ್ಭಾಗದಲ್ಲಿ ಅಳವಡಿಸಲಾಗಿರುವ ಕನ್ನಡಿಗಳು ಮತ್ತು ಲೆನ್ಸ್‌ಗಳ ಮೂಲಕ ಸೂರ್ಯನ ಬೆಳಕು ಗರ್ಭಗುಡಿಯನ್ನು ಪ್ರವೇಶಿಸಿ, ಸರಿಯಾಗಿ ಮಧ್ಯಾಹ್ನ 12 ಗಂಟೆಗೆ ಬಾಲರಾಮನ ಹಣೆಯ ಮೇಲೆ 58 ಮಿಲಿಮೀಟರ್ ಗಾತ್ರದ ತಿಲಕವಾಗಿ ಗೋಚರಿಸಿತು.

51 ಇಂಚು ಎತ್ತರದ ಬಾಲರಾಮನ ವಿಗ್ರಹವನ್ನು ನಮ್ಮ ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕಪ್ಪು ಶಿಲೆಯಲ್ಲಿ ಕೆತ್ತಿದ್ದಾರೆ. ವಾಲ್ಮೀಕಿ ರಾಮಾಯಣದ ಪ್ರಕಾರ, ಶ್ರೀರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಮಧ್ಯಾಹ್ನ 12 ಗಂಟೆಗೆ ಜನಿಸಿದನು ಎಂಬ ಪ್ರತೀತಿಯ ಹಿನ್ನೆಲೆಯಲ್ಲಿ, ಪ್ರತಿ ವರ್ಷ ರಾಮನವಮಿಯಂದು ಇದೇ ರೀತಿ ಸೂರ್ಯ ತಿಲಕವು ಗೋಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಇದು ಆಧುನಿಕ ವಿಜ್ಞಾನ ಮತ್ತು ಪ್ರಾಚೀನ ಸಂಪ್ರದಾಯದ ಅದ್ಭುತ ಸಂಗಮಕ್ಕೆ ಸಾಕ್ಷಿಯಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಮನವಮಿ, ಅಯೋಧ್ಯೆಯಲ್ಲಿ ಬಾಲರಾಮನ ಹಣೆಗೆ ಸೂರ್ಯ ತಿಲಕ, ಕಣ್ತುಂಬಿಕೊಂಡ ಪ್ರಧಾನಿ ಮೋದಿ

ನವದೆಹಲಿ, ಮಾರ್ಚ್​ 27: ಈ ವರ್ಷ, ಅಯೋಧ್ಯೆ(Ayodhya)ಯಲ್ಲಿ ರಾಮ ನವಮಿ ಕೇವಲ ಧಾರ್ಮಿಕ ಹಬ್ಬವಾಗಿರಲಿಲ್ಲ, ಜನರು ವರ್ಷಗಳ ಕಾಲ ನೆನಪಿನಲ್ಲಿಟ್ಟುಕೊಳ್ಳುವ ಕ್ಷಣವಾಗಿದೆ. ದೇವಾಲಯ ಸಂಕೀರ್ಣದಾದ್ಯಂತ ಜೈ ಶ್ರೀ ರಾಮ್ ಎಂಬ ಘೋಷಣೆಗಳು ಪ್ರತಿಧ್ವನಿಸುತ್ತಿದ್ದಂತೆ, ಬಾಲ ರಾಮನ ಹಣೆಗೆ ಸೂರ್ಯನ ರಶ್ಮಿ ತಿಲಕ ಇಟ್ಟಿತ್ತು. ಈ ಕ್ಷಣವನ್ನು ಪ್ರಧಾನಿ ಮೋದಿ ಕಣ್ತುಂಬಿಕೊಂಡರು. ಈ ಸಂಪೂರ್ಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ತಿಂಗಳುಗಳ ಸಂಶೋಧನೆ ಬೇಕಾಯಿತು.

ಇದನ್ನು ರೂರ್ಕಿಯಲ್ಲಿರುವ ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್‌ಐ) ಮತ್ತು ಬೆಂಗಳೂರಿನ ತಜ್ಞರು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದಾರೆ. ಸೂರ್ಯನ ವೇಗ, ಕೋನ ಮತ್ತು ಸಮಯದ ನಿಖರವಾದ ಲೆಕ್ಕಾಚಾರಗಳಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಒಂದು ಸೆಕೆಂಡಿನ ದೋಷವು ಸಹ ಇಡೀ ದೃಶ್ಯದ ಮೇಲೆ ಪರಿಣಾಮ ಬೀರುತ್ತಿತ್ತು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಈ ತಿಲಕವು ಪ್ರಾಣ-ಪ್ರತಿಷ್ಠೆಯ ನಂತರ ಎರಡನೇ ಬಾರಿಗೆ ಬಾಲರಾಮನ ಹಣೆಗೆ ಸೂರ್ಯ ತಿಲಕ ಬಿದ್ದಿದೆ. ಸೂರ್ಯ ತಿಲಕದ ನಂತರ, ರಾಮ ಲಲ್ಲಾಗೆ 56 ಭಕ್ಷ್ಯಗಳನ್ನು ಅರ್ಪಿಸಲಾಗುತ್ತದೆ. ಬೆಳಗ್ಗೆ 5.30ಕ್ಕೆ ರಾಮಲಲ್ಲಾಗೆ ಆರತಿ ಮಾಡಲಾಯಿತು. ಭಗವಂತನ ವಿಗ್ರಹಕ್ಕೆ ಹಳದಿ ಬಟ್ಟೆ ಹೊದಿಸಲಾಗಿತ್ತು. ಭಕ್ತರು ಬೆಳಗ್ಗೆ 5 ರಿಂದ ರಾತ್ರಿ 11 ರವರೆಗೆ, ಅಂದರೆ ಒಟ್ಟು 18 ಗಂಟೆಗಳ ಕಾಲ ರಾಮಲಲ್ಲಾ ದರ್ಶನ ಪಡೆಯಲು ಸಾಧ್ಯವಾಗುತ್ತದೆ.

ಮತ್ತಷ್ಟು ಓದಿ: ಬಂಗಾಳದಲ್ಲಿ ಬಾಬರಿ ಮಸೀದಿ ವಿವಾದದ ಬೆನ್ನಲ್ಲೇ ಅಯೋಧ್ಯೆ ಶೈಲಿಯ ರಾಮ ಮಂದಿರ ನಿರ್ಮಾಣಕ್ಕೆ ಸಿದ್ಧತೆ

ಈ ಹಿಂದೆ ದರ್ಶನ ಸಮಯ ಬೆಳಗ್ಗೆ 6.30 ರಿಂದ ರಾತ್ರಿ 9.30 ರವರೆಗೆ ಇತ್ತು. ರಾಮಲಲ್ಲಾ ದರ್ಶನ ಪಡೆಯಲು ಸುಮಾರು 10 ಲಕ್ಷ ಜನರು ರಾಮ ಜನ್ಮಭೂಮಿ ಸಂಕೀರ್ಣಕ್ಕೆ ಹೋಗಿದ್ದಾರೆ. ರಾಮ ಪಥ, ಭಕ್ತಿ ಪಥ ಮತ್ತು ಜನ್ಮಭೂಮಿ ಪಥ್ಗಳಲ್ಲಿ ಭಾರಿ ಜನಸಂದಣಿ ಕಂಡುಬರುತ್ತಿದ್ದು, ಉದ್ದನೆಯ ಸರತಿ ಸಾಲುಗಳು ಸೃಷ್ಟಿಯಾಗಿವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಹನಿಮೂನ್ ಮುಗಿಸಿ ಒಟ್ಟಿಗೆ ಕೆಲಸಕ್ಕೆ ಮರಳಿದ ವಿಜಯ್-ರಶ್ಮಿಕಾಗೆ ಭರ್ಜರಿ ಸ್ವಾಗತ

ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ ದಂಪತಿ ಕಳೆದ ತಿಂಗಳು ಬಲು ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಜೈಪುರದಲ್ಲಿ ನಡೆದ ಇವರ ಮದುವೆ ದೇಶದಾದ್ಯಂತ ಸುದ್ದಿ ಆಗಿತ್ತು, ರಶ್ಮಿಕಾ-ವಿಜಯ್ ಅವರ ಫೋಟೊಗಳು ಸಖತ್ ವೈರಲ್ ಆಗಿದ್ದವು. ಬಳಿಕ ಹೈದರಾಬಾದ್​​ನಲ್ಲಿ ಅದ್ಧೂರಿ ರಿಸೆಪ್ಷನ್ ಸಹ ನಡೆಯಿತು. ವಿವಾಹದ ಬಳಿಕ ಥಾಯ್ಲೆಂಡ್​​ಗೆ ಹನಿಮೂನ್ ಪ್ರವಾಸಕ್ಕೂ ಸಹ ಈ ಜೋಡಿ ಹೋಗಿ ಬಂತು. ಇದೀಗ ಮದುವೆಯಾಗಿ ತಿಂಗಳ ಬಳಿಕ ಇಬ್ಬರೂ ಕೆಲಸಕ್ಕೆ ಮರಳಿದ್ದಾರೆ. ರಶ್ಮಿಕಾ ಮತ್ತು ವಿಜಯ್ ಒಟ್ಟಿಗೆ ‘ರಣಬಲಿ’ ಸಿನಿಮಾನಲ್ಲಿ ನಟಿಸುತ್ತಿದ್ದು, ಸೆಟ್​​ಗೆ ಒಟ್ಟಿಗೆ ಮರಳಿದ್ದಾರೆ. ನವ ವಧು-ವರರನ್ನು ಆರತಿ ಮಾಡುವ ಮೂಲಕ ಸೆಟ್​​ಗೆ ಸ್ವಾಗತಿಸಿರುವುದು ವಿಶೇಷ.

ಮದುವೆಗೆ ಮುಂಚೆ ಈ ಜೋಡಿ ‘ರಣಬಲಿ’ ಸಿನಿಮಾ ಒಪ್ಪಿಕೊಂಡಿದ್ದರು. ಇದೀಗ ಮದುವೆ ಬಳಿಕ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, ಒಟ್ಟಿಗೆ ಸೆಟ್​​ಗೆ ಬಂದಿದ್ದಾರೆ. ‘ರಣಬಲಿ’ ಒಂದು ಪಿರಿಯಡ್ ಆಕ್ಷನ್ ಡ್ರಾಮಾ ಆಗಿದ್ದು, ರಾಹುಲ್ ಸಂಕೃತ್ಯನ್ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಒಂದು ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ಗಮನ ಸೆಳೆದಿತ್ತು. ಮದುವೆ ಬಳಿಕ ಇಬ್ಬರೂ ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ. ಜೊತೆಗೆ ಇಬ್ಬರೂ ಒಟ್ಟಿಗೆ ನಟಿಸುತ್ತಿರುವ ಮೂರನೇ ಸಿನಿಮಾ ಇದಾಗಿದೆ.

ಇದನ್ನೂ ಓದಿ:ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹಕ್ಕೆ ಅಂತಿಮವಾಗಿ ಖರ್ಚಾಗಿದ್ದೆಷ್ಟು?

ವಿಜಯ್ ಹಾಗೂ ರಶ್ಮಿಕಾ ಅವರಿಗೆ ‘ರಣಬಲಿ’ ಸೆಟ್​​ನಲ್ಲಿ ಆರತಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿಡಿಯೋನಲ್ಲಿ ರಶ್ಮಿಕಾ, ಹಣೆಗೆ ಕುಂಕುಮ, ಕೆನ್ನೆಗೆ ಅರಿಶಿಣ ಧರಿಸಿ ಬಹಳ ಖುಷಿಯಿಂದ ಆರತಿ ಮಾಡಿಸಿಕೊಂಡಿದ್ದಾರೆ. ಜೊತೆಯಲ್ಲಿ ವಿಜಯ್ ದೇವರಕೊಂಡ ಸಹ ಇದ್ದಾರೆ. ಇಡೀ ಚಿತ್ರತಂಡ ನೂತನ ವಧು-ವರರಿಗೆ ಮದುವೆಯ ಶುಭಾಶಯಗಳನ್ನು ಕೋರಿದೆ.

ರಶ್ಮಿಕಾ ಮಂದಣ್ಣ ನಟಿಸಿರುವ ‘ಕಾಕ್​​ಟೇಲ್ 2’ ಸಿನಿಮಾ ಮುಂದಿನ ತಿಂಗಳು ಬಿಡುಗಡೆ ಆಗಲಿದೆ. ಇದೀಗ ಅವರು ‘ರಣಬಲಿ’ ಸಿನಿಮಾನಲ್ಲಿ ನಟಿಸಲು ಆರಂಭಿಸಿದ್ದಾರೆ. ಇದರ ಜೊತೆಗೆ ಇನ್ನೂ ಒಂದು ಹಿಂದಿ ಸಿನಿಮಾ ಹಾಗೂ ಅಲ್ಲು ಅರ್ಜುನ್ ಜೊತೆಗೆ ಅಟ್ಲಿ ನಿರ್ದೇಶಿಸಲಿರುವ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ಸಹ ನಟಿಸಲಿದ್ದಾರೆ. ಇನ್ನು ವಿಜಯ್ ದೇವರಕೊಂಡ ‘ರಣಬಲಿ’ಯ ಜೊತೆಗೆ ‘ರೌಡಿ ಜನಾರ್ಧನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ರಣಬಲಿ’ ಬಳಿಕ ರಶ್ಮಿಕಾ ಮತ್ತು ವಿಜಯ್ ಅವರು ಒಟ್ಟಿಗೆ ‘ಗೀತಾ ಗೋವಿಂದಂ 2’ ಸಿನಿಮಾನಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರೋಹಿತ್ ಶರ್ಮಾ ತೂಕ ಇಳಿಸಿಕೊಂಡಿದ್ದು ನೋಡಿ ಶಾಕ್ ಆದ ನೀತಾ ಅಂಬಾನಿ; ಹೇಳಿದ್ದೇನು ನೋಡಿ?

ಟೀಂ ಇಂಡಿಯಾ ಆಟಗಾರ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ರೋಹಿತ್ ಶರ್ಮ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಬದಲಾವಣೆ. ಈ ಮೊದಲು ಅವರ ದೇಹದ ಕಾರಣಕ್ಕೆ ಟೀಕೆ ಮಾಡಲಾಗುತ್ತಿತ್ತು. ಅವರಿಗೆ ಹೊಟ್ಟೆ ಇದೆ, ವಡಾಪಾವ್ ತಿಂತಾರೆ ಎಂದೆಲ್ಲ ಟೀಕಿಸಲಾಗಿತ್ತು. ಆದರೆ, ಈಗ ಅವರ ದೇಹದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಫಿಟ್ನೆಸ್​​ಗೆ ತುಂಬಾನೇ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇದನ್ನು ನೋಡಿ ನೀತಾ ಅಂಬಾನಿ ಕೂಡ ಶಾಕ್ ಆಗಿದ್ದಾರೆ.

ಈಗಾಗಲೇ ಟೆಸ್ಟ್ ಹಾಗೂ ಟಿ20ಗೆ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದಾರೆ. ಅವರು ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. ಅವರು ಈಗ ತಮ್ಮ ಫಿಟ್ನೆಸ್​ ಬಗ್ಗೆ ಹೆಚ್ಚು ಗಮನ ಹರಿಸಿದಂತೆ ಕಾಣಿಸುತ್ತಿದೆ. ‘ನಿಮ್ಮನ್ನು ನೋಡಿದ್ರೆ ಯಂಗ್ ಬಾಯ್ ರೀತಿ ಕಾಣಿಸ್ತೀರಾ’ ಎಂದು ನೀತಾ ಹೇಳಿರುವ ವಿಡಿಯೋ ಗಮನ ಸೆಳೆದಿದೆ. ಐಪಿಎಲ್​ ಆರಂಭದ ಸಂದರ್ಭದಲ್ಲಿ ರೋಹಿತ್ ಪ್ರ್ಯಾಕ್ಟಿಸ್ ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

 

Source link

RRB Recruitment 2026: ಭಾರತೀಯ ರೈಲ್ವೆ ಇಲಾಖೆಯಲ್ಲಿ 11ಸಾವಿರಕ್ಕೂ ಅಧಿಕ ಭರ್ಜರಿ ನೇಮಕಾತಿ; 10th ಪಾಸಾಗಿದ್ರೆ ಸಾಕು!

ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯು (RRB) ದೇಶದಾದ್ಯಂತ ಯುವಜನತೆಗೆ ದೊಡ್ಡ ಮಟ್ಟದ ಉದ್ಯೋಗಾವಕಾಶವನ್ನು ಕಲ್ಪಿಸಿದೆ. ರೈಲ್ವೆ ಇಲಾಖೆಯ ವಿವಿಧ ವಲಯಗಳಲ್ಲಿ ಖಾಲಿ ಇರುವ ಒಟ್ಟು 11,127 ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಈ ನೇಮಕಾತಿಯು ಬೆಂಗಳೂರು, ಸಿಕಂದರಾಬಾದ್, ಮುಂಬೈ, ಚೆನ್ನೈ ಸೇರಿದಂತೆ ದೇಶದ ಪ್ರಮುಖ 21 ರೈಲ್ವೆ ಮಂಡಳಿಗಳ ವ್ಯಾಪ್ತಿಯಲ್ಲಿ ನಡೆಯಲಿದ್ದು, ಬೃಹತ್ ಸಂಖ್ಯೆಯ ಹುದ್ದೆಗಳು ಲಭ್ಯವಿರುವುದು ವಿಶೇಷವಾಗಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಈ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ಇದರೊಂದಿಗೆ ಸಂಬಂಧಪಟ್ಟ ಟ್ರೇಡ್‌ಗಳಲ್ಲಿ ಐಟಿಐ (ITI) ಅಥವಾ ಡಿಪ್ಲೊಮಾ ವಿದ್ಯಾರ್ಹತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳ ವಯೋಮಿತಿಯನ್ನು ಜುಲೈ 1, 2026 ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷಗಳ ನಡುವೆ ನಿಗದಿಪಡಿಸಲಾಗಿದೆ. ಸರ್ಕಾರದ ನಿಯಮದಂತೆ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ನೇಮಕಾತಿ; 70 ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತು ದಿನಾಂಕಗಳು:

ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ಮೇ 15 ರಿಂದ ಆರಂಭವಾಗಲಿದ್ದು, ಆಸಕ್ತರು ಜೂನ್ 14 ರೊಳಗೆ ತಮ್ಮ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಆರಂಭಿಕ ವೇತನವು ತಿಂಗಳಿಗೆ ರೂ. 19,900 ರಿಂದ ಪ್ರಾರಂಭವಾಗಲಿದ್ದು, ಇದರೊಂದಿಗೆ ಕೇಂದ್ರ ಸರ್ಕಾರದ ಇತರೆ ಎಲ್ಲಾ ಭತ್ಯೆಗಳು ಮತ್ತು ಸೌಲಭ್ಯಗಳು ಆಯ್ಕೆಯಾದ ಸಿಬ್ಬಂದಿಗೆ ಲಭ್ಯವಿರಲಿವೆ.

ಆಯ್ಕೆ ವಿಧಾನ ಮತ್ತು ಪರೀಕ್ಷೆ:

ಸಹಾಯಕ ಲೋಕೋ ಪೈಲಟ್ ಹುದ್ದೆಗೆ ಆಯ್ಕೆಯಾಗಲು ಅಭ್ಯರ್ಥಿಗಳು ವಿವಿಧ ಹಂತದ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಮೊದಲ ಮತ್ತು ಎರಡನೇ ಹಂತದ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಗಳು (CBT 1 & 2), ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್, ಮೂಲ ದಾಖಲೆಗಳ ಪರಿಶೀಲನೆ ಹಾಗೂ ಕಟ್ಟುನಿಟ್ಟಾದ ವೈದ್ಯಕೀಯ ಪರೀಕ್ಷೆಗಳು ಒಳಗೊಂಡಿರುತ್ತವೆ. ಈ ಎಲ್ಲಾ ಹಂತಗಳಲ್ಲಿ ಯಶಸ್ವಿಯಾದ ಅಭ್ಯರ್ಥಿಗಳನ್ನು ಅಂತಿಮವಾಗಿ ಹುದ್ದೆಗೆ ಪರಿಗಣಿಸಲಾಗುತ್ತದೆ. ಪರೀಕ್ಷಾ ಪಠ್ಯಕ್ರಮ ಮತ್ತು ಅರ್ಜಿ ಶುಲ್ಕದ ಬಗ್ಗೆ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಪೂರ್ಣ ಪ್ರಮಾಣದ ಅಧಿಸೂಚನೆಯಲ್ಲಿ ಪ್ರಕಟವಾಗಲಿದೆ.

ಅಧಿಕೃತ ವೆಬ್​ಸೈಟ್​ ಲಿಂಕ್​ಗಾಗಿ ಇಲ್ಲಿ ಕ್ಲಿಕ್​ ಮಾಡಿ

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇಂದ್ರ ನಮ್ಮನ್ನ ಕೊಲೆ ಮಾಡ್ತಿದೆ: ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಿದ್ದಕ್ಕೆ ಡಿಕೆಶಿ ಕೆಂಡಾಮಂಡಲ

ಬೆಂಗಳೂರು, (ಮಾರ್ಚ್ 27): ಕೇಂದ್ರ ಸರ್ಕಾರ ಪೆಟ್ರೋಲ್(Petrol) ಮತ್ತು ಡೀಸೆಲ್(Diesel) ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದು, ಇದರಿಂದಾಗಿ ಪ್ರತಿ ಲೀಟರ್ ಪೆಟ್ರೋಲ್‌ಗೆ 3 ರೂಪಾಯಿ ಮತ್ತು ಡೀಸೆಲ್‌ ಸುಂಕ ಶೂನ್ಯಕ್ಕೆ ಇಳಿದಿದೆ. ಆದ್ರೆ, ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲೆಕ್ಷನ್​ಗಾಗಿ ತೈಲ ಬೆಲೆಯ ಅಬಕಾರಿ ಸುಂಕ ಕಡಿಮೆ ಮಾಡಿದ್ದಾರೆ. ತೈಲ ಬೆಲೆ ಜಾಸ್ತಿ ಮಾಡಿಬಿಟ್ಟು ಕೇಂದ್ರ ನಮ್ಮನ್ನು ಕೊಲೆ ಮಾಡುತ್ತಿದೆ.ಕಂಪನಿಯವರು ಕೂಡ ಜಾಸ್ತಿ ಮಾಡಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಇನ್ನು ಡೀಸೆಲ್​ಗಿಲ್ಲ ಅಬಕಾರಿ ಸುಂಕ! ಪೆಟ್ರೋಲ್ ಸುಂಕ ಭಾರಿ ಕಡಿತ: ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ

Source link

Video: ಬೆಂಕಿಯಿಂದ ಏಳು ಜನರನ್ನು ರಕ್ಷಿಸಲು ಸುತ್ತಿಗೆಯಿಂದ ಛಾವಣಿ ಒಡೆದು ನುಗ್ಗಿದ ಯುವಕರು

ವಿಯೆಟ್ನಾಂ, ಮಾರ್ಚ್​ 27: ವಿಯೆಟ್ನಾಂನ ಬೃಹತ್ ವಸತಿ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿತ್ತು, ಎಲ್ಲರೂ ಭಯಭೀತರಾಗಿದ್ದರು. ಆದರೆ ಇಬ್ಬರು ಯುವಕರು ಇದ್ಯಾವುದನ್ನೂ ಲೆಕ್ಕಿಸದೆ ಸುತ್ತಿಗೆಯಿಂದ ಮೇಲ್ಛಾವಣಿ ಒಡೆದು ಅದರ ಮೂಲಕ ಹೋಗಿ ಏಳು ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೋದಲ್ಲಿ ಯುವಕರು ತಾರಸಿ ಮೇಲೆ ಹೋಗಿ ಛಾವಣಿಗೆ ಸುತ್ತಿಗೆಯಿಂದ ಪದೇ ಪದೇ ಹೊಡೆಯುತ್ತಿರುವುದನ್ನು ಕಾಣಬಹುದು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

Source link