ಆರ್ಸಿಬಿಗೆ ನವಿ ಯುಪಿಐ ಮತ್ತೊಮ್ಮೆ ಅಧಿಕೃತ ಪೇಮೆಂಟ್ಸ್ ಪಾರ್ಟ್ನರ್; ಈ ಬಾರಿ ಫಾಸ್ಟೆಸ್ಟ್ ಮೊಮೆಂಟ್ ಗೇಮ್
ಬೆಂಗಳೂರು, ಮಾರ್ಚ್ 26: ಹೊಸ ಮಾಲೀಕರನ್ನು ಪಡೆದಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ಐಪಿಎಲ್ ಫ್ರಾಂಚೈಸಿಯು ತನ್ನ ಅಧಿಕೃತ ಪೇಮೆಂಟ್ಸ್ ಪಾರ್ಟ್ನರ್ ಆಗಿ ನವಿ ಯುಪಿಐ (Navi UPI App) ಅನ್ನು ಉಳಿಸಿಕೊಂಡಿದೆ. 2026ರ ಐಪಿಎಲ್ ಸೀಸನ್ನಲ್ಲಿ ನವಿ ಯುಪಿಐ ‘ಫಾಸ್ಟೆಸ್ಟ್ ಮೊಮೆಂಟ್ ಆಫ್ ದಿ ಮ್ಯಾಚ್’ (Fastest Moment of the Match powered by Navi UPI) ಪ್ರಶಸ್ತಿಯನ್ನು ಪರಿಚಯಿಸಲಿದೆ. ಪಂದ್ಯಕ್ಕೆ ತಿರುವು ಕೊಟ್ಟಂತಹ ಅತ್ಯಂತ ನಿರ್ಣಾಯಕವಾದ, ಬಹಳ ಪರಿಣಾಮಕಾರಿ ಕ್ಷಣಕ್ಕೆ ಕಾರಣವಾದ ಆಟಗಾರನನ್ನು ಗುರುತಿಸಿ…