ನಿರ್ದೇಶಕರಾದ ಗುರು ದೇಶಪಾಂಡೆ ಹಾಗೂ ರಾಘವೇಂದ್ರ ನಾಯ್ಕ್ ಅವರು ‘ಲವ್ ಮಾಕ್ಟೇಲ್ 3’ ಚಿತ್ರದ ಕಥೆ ನಮ್ಮದು ಎಂದು ಹೇಳಿದ್ದಾರೆ. ಆದರೆ, ಇದನ್ನು ಕೃಷ್ಣ ಅಲ್ಲಗಳೆದಿದ್ದಾರೆ. ಗುರು ದೇಶಪಾಂಡೆ ರಿಮೇಕ್ ಸಿನಿಮಾ ಮಾಡುವ ವ್ಯಕ್ತಿ ಎಂದು ಟೀಕಿಸಿದ್ದಾರೆ. ಇದಕ್ಕೆ ಗುರು ದೇಶಪಾಂಡೆ ತಿರುಗೇಟು ಕೊಟ್ಟಿದ್ದಾರೆ. ‘ಈ ಮೊದಲು ನಾನು ಸಿನಿಮಾ ಮಾಡುವಾಗ ಚಾನ್ಸ್ ಕೊಡಿ ಕೊಡಿ ಎಂದು ಕೇಳಿಕೊಂಡಿದ್ರಿ. ಆಗ ಗುರು ದೇಶಪಾಂಡೆ ರಿಮೇಕ್ ಸಿನಿಮಾ ಮಾಡ್ತಾರೆ ಅನ್ನೋದು ಗೊತ್ತಿರಲಿಲ್ಲವೇ? ಪದೇ ಪದೇ ಚಾನ್ಸ್ ಕೊಡಿ ಅಂತ ಕೇಳಿದ್ರಲ್ಲ’ ಎಂದು ತಿರುಗೇಟು ಕೊಟ್ಟಿದ್ದಾರೆ ಅವರು.
ಬೆಂಗಳೂರು, ಮಾರ್ಚ್ 26: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬುಧವಾರ ಭಾರಿ ಆಲಿಕಲ್ಲು ಮಳೆ ಸುರಿದಿದೆ. ಬಿಸಿಲು ನಾಡು ಎಂದೇ ಹೆಸರಾದ ಕಲಬುರಗಿ ಮತ್ತು ಧಾರವಾಡ ಜಿಲ್ಲೆಗಳು ಜಮ್ಮು ಕಾಶ್ಮೀರದಂತಹ ಹಿಮಾವೃತ ಪ್ರದೇಶಗಳಂತೆ ಕಾಣಿಸಿ ಗಮನ ಸೆಳೆದಿವೆ. ಕಲಬುರಗಿ ಜಿಲ್ಲೆಯ ಚನ್ನೂರು ಗ್ರಾಮದಲ್ಲಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಇಡೀ ಪ್ರದೇಶವು ಹಿಮದ ರಾಶಿಯಿಂದ ಆವರಿಸಿತ್ತು. ರಸ್ತೆಗಳ ಮೇಲೆಲ್ಲ ಮಂಜುಗಡ್ಡೆ ರಾಶಿ ಕಾಣಿಸಿದೆ. ಸಾಮಾನ್ಯವಾಗಿ ಕಾಣಸಿಗದ ಈ ಪ್ರಮಾಣದ ಆಲಿಕಲ್ಲು ಮಳೆಯು ಸ್ಥಳೀಯ ಜನಜೀವನದ ಮೇಲೆ ಪರಿಣಾಮ ಬೀರಿದೆ. ವಿಜಯಪುರ ಜಿಲ್ಲೆಯಲ್ಲಿ ಈ ಮಳೆಯಿಂದಾಗಿ ದ್ರಾಕ್ಷಿ ಬೆಳೆ ವ್ಯಾಪಕವಾಗಿ ನಾಶವಾಗಿದ್ದು, ರೈತರಿಗೆ ದೊಡ್ಡ ನಷ್ಟವನ್ನುಂಟು ಮಾಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ವಾಷಿಂಗ್ಟನ್, ಮಾರ್ಚ್ 26: ಇರಾನ್ ಜೊತೆಗಿನ ಯುದ್ಧ ಆರಂಭವಾದಾಗಿನಿಂದ ದಿನ ಬೆಳಗಾದರೆ ಹೊಸ ಹೊಸ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುವುದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ (Donald Trump) ರೂಢಿಯಾಗಿಬಿಟ್ಟಿದೆ! ಪಶ್ಚಿಮ ಏಷ್ಯಾ ಯುದ್ಧವು ಇಂದು 27ನೇ ದಿನಕ್ಕೆ ಕಾಲಿಟ್ಟಿದೆ. ಇರಾನ್ ನಮ್ಮ ಮುಂದೆ ಮಂಡಿಯೂರಿದೆ, ಆದರೆ, ಅದನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ ಎಂದು ಹೇಳಿರುವ ಟ್ರಂಪ್ ಇರಾನ್ಗೆ ಜೀವಭಯ ಕಾಡುತ್ತಿದೆ ಎಂದಿದ್ದಾರೆ. ಹಾಗೇ, “ಇರಾನ್ನ ಸುಪ್ರೀಂ ನಾಯಕ ನಾನೇ ಆಗಬೇಕೆಂದು ಇರಾನ್ ಬಯಸಿತ್ತು. ಆದರೆ ನಾನೇ ಅದಕ್ಕೆ ಒಪ್ಪಲಿಲ್ಲ” ಎಂಬ ಹೇಳಿಕೆಯನ್ನೂ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಅಮೆರಿಕದಲ್ಲಿ ರಿಪಬ್ಲಿಕನ್ ನಿಧಿಸಂಗ್ರಹಣೆಯಲ್ಲಿ ಮಾತನಾಡಿದ ಟ್ರಂಪ್, “ಇರಾನ್ ನಮ್ಮ ಜೊತೆ ಮಾತುಕತೆ ನಡೆಸುತ್ತಿದೆ. ಆದರೆ ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಹೆದರುತ್ತಿದೆ. ಅವರು ಒಪ್ಪಂದವನ್ನು ಮಾಡಿಕೊಳ್ಳಲು ಕಾತುರರಾಗಿದ್ದಾರೆ. ಒಂದುವೇಳೆ ಆ ವಿಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡರೆ ತಮ್ಮದೇ ಜನರು ತಮ್ಮನ್ನು ಸಾಯಿಸುತ್ತಾರೆ ಎಂಬ ಭಯ ಇರಾನ್ ನಾಯಕರನ್ನು ಕಾಡುತ್ತಿದೆ. ಹೀಗಾಗಿಯೇ ಅವರು ಒಪ್ಪಂದಕ್ಕೆ ಸಿದ್ಧವಿಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ.
ಇರಾನ್ ಮಾತ್ರ ಅಮೆರಿಕ ತನ್ನ ಜೊತೆ ಯಾವುದೇ ರೀತಿಯ ಕದನವಿರಾಮದ ಮಾತುಕತೆ ನಡೆಸಿಲ್ಲ, ನಾವು ಅದಕ್ಕೆ ಒಪ್ಪುವುದೂ ಇಲ್ಲ. ಕದನವಿರಾಮದ ದಿನದ ಬಗ್ಗೆ ಹಾಗೂ ಷರತ್ತುಗಳ ಬಗ್ಗೆ ಟ್ರಂಪ್ ನಿರ್ಧಾರ ಮಾಡಲು ನಾವು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದೆ. ಹಾಗೇ ಯುದ್ಧ ನಿಲ್ಲಿಸಲು ಒಪ್ಪಲು ತಾನೇ 5 ಷರತ್ತುಗಳನ್ನು ಕೂಡ ವಿಧಿಸಿದೆ.
ಇದರ ಜೊತೆಗೆ ಟ್ರಂಪ್ ಇನ್ನೊಂದು ಶಾಕಿಂಗ್ ಹೇಳಿಕೆಯನ್ನೂ ನೀಡಿದ್ದಾರೆ. “ನಾವು ನಿಮ್ಮನ್ನು ಇರಾನ್ನ ಮುಂದಿನ ಸುಪ್ರೀಂ ಲೀಡರ್ ಮಾಡಲು ಬಯಸುತ್ತೇವೆ ಎಂದು ಇರಾನ್ ನಾಯಕರು ಹೇಳಿದ್ದರು. ಆದರೆ, ನಾನು ನೋ, ಥ್ಯಾಂಕ್ಸ್. ನನಗೆ ಅದು ಬೇಡ” ಎಂದು ಹೇಳಿದ್ದೆ ಎಂದಿದ್ದಾರೆ.
ಕಳೆದ ತಿಂಗಳು ಅಲಿ ಖಮೇನಿ ಹತ್ಯೆಯ ನಂತರ ಇರಾನ್ ನಾಯಕತ್ವದಲ್ಲಿನ ಅನಿಶ್ಚಿತತೆಯ ಮಧ್ಯೆ ಈ ಹೇಳಿಕೆಗಳು ಬಂದಿವೆ. ಅವರ ಮಗ ಮೊಜ್ತಾಬಾ ಖಮೇನಿ ಅವರನ್ನು ಸುಪ್ರೀಂ ಲೀಡರ್ ಆಗಿ ಬಡ್ತಿ ನೀಡಲಾಯಿತು. ಆದರೆ, ಯುದ್ಧ ಪ್ರಾರಂಭವಾದಾಗಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮಡಿಕೇರಿ, ಮಾರ್ಚ್ 26: ಮಡಿಕೇರಿ ನಗರದ ಹೊರವಲಯದಲ್ಲಿ ಹುಲಿ ಓಡಾಟ ಕಂಡುಬಂದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಿದೆ. ಇಬ್ಬನಿವಳವಾಡಿ, ಸಿಂಕೋನ ಹಾಗೂ ಕಗ್ಗೋಡ್ಲು ಸುತ್ತಮುತ್ತ ಪ್ರದೇಶಗಳಲ್ಲಿ ಹುಲಿ ಕಾಣಿಸಿಕೊಂಡಿರುವ ಮಾಹಿತಿ ಹಿನ್ನೆಲೆ, ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ. ಜನರಲ್ಲಿ ಆತಂಕ ಉಂಟಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಟ್ಟು ನಿಟ್ಟಿನ ನಿಗಾವಹಿಸಲಾಗಿದೆ. ಕಾರ್ಯಾಚರಣೆಗೆ ಮೂರು ಸಾಕಾನೆಗಳನ್ನು ಬಳಸಲಾಗುತ್ತಿದ್ದು, ದಟ್ಟ ಅರಣ್ಯ ಪ್ರದೇಶಗಳಲ್ಲಿ ಹುಲಿಯ ಚಲನವಲನ ಪತ್ತೆ ಮಾಡಲು ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಥರ್ಮಲ್ ಡ್ರೋನ್ ಮೂಲಕವೂ ಹುಲಿಯ ಹಾದಿ ಮತ್ತು ಚಲನವಲನಗಳನ್ನು ನಿಗಾವಹಿಸಲಾಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಮುದ್ದು ಮಕ್ಕಳ (little kids) ಆಟ ತುಂಟಾಟಗಳನ್ನು ನೋಡುವುದೇ ಚಂದ. ಹೆತ್ತವರು ಕೂಡ ಮಕ್ಕಳ ಆಟ ಪಾಠಗಳನ್ನು ಕಣ್ಣು ತುಂಬಿಸಿಕೊಳ್ಳುತ್ತಾರೆ. ಈ ಪುಟ್ಟ ಮಕ್ಕಳ ಮುದ್ದು ಮುದ್ದಾದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಮುದ್ದಾದ ಕ್ಲಿಪಿಂಗ್ ವೈರಲ್ ಆಗಿದ್ದು, ಸ್ಕೂಲ್ ಅಸೆಂಬ್ಲಿಯಲ್ಲಿ ಮಕ್ಕಳು ಕೈ ಜೋಡಿಸಿಕೊಂಡು ನಿಂತುಕೊಂಡರೆ, ಪುಟಾಣಿಯೊಂದು ಲಾಲಿಪಾಪ್ ತಿನ್ನೋದ್ರಲ್ಲಿ ಬ್ಯುಸಿಯಾಗಿದೆ. ಈ ಪುಟ್ಟ ಬಾಲಕನ ವಿಡಿಯೋ ನೋಡುತ್ತಿದ್ದಂತೆ ನೆಟ್ಟಿಗರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.
Shubham_kr_rana ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಸ್ಕೂಲ್ ಅಸೆಂಬ್ಲಿಯಲ್ಲಿ ಮಕ್ಕಳೆಲ್ಲಾ ಸಾಲಾಗಿ ನಿಂತಿರುವುದನ್ನು ಕಾಣಬಹುದು. ಮಕ್ಕಳೆಲ್ಲಾ ಕೈ ಜೋಡಿಸಿ ನಿಂತು ಪ್ರಾರ್ಥನೆಗೆ ಸಜ್ಜಾದರೆ, ಆದರೆ ಪುಟಾಣಿಯೊಂದು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಲಾಲಿ ಪಾಪ್ ಸವಿಯೋದ್ರಲ್ಲಿಯೇ ಬುಸ್ಯಿಯಾಗಿರುವುದನ್ನು ಕಾಣಬಹುದು. ಲಾಲಿಪಾಪ್ ತಿಂದ ಬಳಿಕ ಕಡ್ಡಿಯನ್ನು ಜೇಬಿಗೆ ಹಾಕಿ ಕಣ್ಣು ಮುಚ್ಚಿ ಕೈ ಜೋಡಿಸಿ ನಿಂತುಕೊಂಡಿದೆ. ಅಲ್ಲೇ ಇದ್ದವರು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಈ ವಿಡಿಯೋ 1.1 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಕದ್ದು ತಿನ್ನುವ ಮಜಾನೇ ಬೇರೆ ಎಂದರೆ, ಮತ್ತೊಬ್ಬರು, ಕ್ಯಾಮೆರಾ ಮ್ಯಾನ್ ಪ್ರೈವಸಿ ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮುಗ್ಧತೆ ಮನಸ್ಸಿಗೆ ಹತ್ತಿರವಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾ.26: ನಮ್ಮ ಹಿಂದೂ ಸನಾತನ ಸಂಪ್ರದಾಯಗಳು, ಸಂಸ್ಕೃತಿ ಮತ್ತು ಪರಂಪರೆಗಳು ಅನೇಕ ವಿಧಿ ವಿಧಾನಗಳನ್ನು ಒಳಗೊಂಡಿವೆ. ಇವುಗಳ ಹಿಂದಿರುವ ಸಾಮಾಜಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಹಿನ್ನೆಲೆಗಳನ್ನು ಆಳವಾಗಿ ಅರ್ಥೈಸಿಕೊಂಡಾಗ, ಆ ಆಚರಣೆಗಳಿಗೆ ಇನ್ನಷ್ಟು ಮಹತ್ವ ಮತ್ತು ಗೌರವ ದೊರೆಯುತ್ತದೆ. ಅಂತಹ ವಿಶಿಷ್ಟ ವಿಧಿವಿಧಾನಗಳಲ್ಲಿ ವಿವಾಹದ ಸಮಯದಲ್ಲಿ ವಧು ವರರ ತಲೆಯ ಮೇಲೆ ಜೀರಿಗೆ ಬೆಲ್ಲವನ್ನು ಇಡುವ ಆಚರಣೆ ಅತ್ಯಂತ ಪ್ರಮುಖವಾಗಿದೆ. ಇದರ ಹಿಂದೆ ಒಂದು ಸುಂದರವಾದ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಹಿನ್ನೆಲೆಯಿದೆ ಎಂದು ಬಸವರಜ ಗುರೂಜಿ ಹೇಳಿದ್ದಾರೆ.
ವಿವಾಹವೆಂಬುದು ಜೀವನದ ಒಂದು ಮಹತ್ತರ ಘಟ್ಟ. ಇದು ಕೇವಲ ಎರಡು ವ್ಯಕ್ತಿಗಳ ಮಿಲನವಲ್ಲ, ಬದಲಿಗೆ ಎರಡು ಕುಟುಂಬಗಳ ಸಂಯೋಗ ಮತ್ತು ಹೊಸ ಜವಾಬ್ದಾರಿಗಳ ಆರಂಭ. ಮದುವೆಗೆ ಮುನ್ನ ಯೌವನ ಸಹಜವಾದ ಮುಗ್ಧತೆ, ನಿರ್ಲಕ್ಷ್ಯ ಮತ್ತು ಜವಾಬ್ದಾರಿಯ ಕೊರತೆ ಇರುವುದು ಸಹಜ. ಆದರೆ ವಿವಾಹ ಬಂಧನಕ್ಕೆ ಒಳಗಾದ ನಂತರ ಜೀವನ ಸಂಗಾತಿಯೊಂದಿಗೆ ಹೊಸ ಜೀವನವನ್ನು ನಡೆಸಬೇಕಾದಾಗ, ಹೊಸ ಜವಾಬ್ದಾರಿಗಳು ಎದುರಾಗುತ್ತವೆ. ಈ ಸಂದರ್ಭದಲ್ಲಿ ಜೀರಿಗೆ ಬೆಲ್ಲವನ್ನು ತಲೆಯ ಮೇಲೆ ಇಡುವ ಆಚರಣೆಯು ವಿಶೇಷ ಪಾತ್ರ ವಹಿಸುತ್ತದೆ.
ಈ ವಿಧಿಯು ತಲೆಯ ಮೇಲ್ಭಾಗದಲ್ಲಿರುವ ಸಹಸ್ರಾರ ಚಕ್ರವನ್ನು ಜಾಗೃತಗೊಳಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಸಹಸ್ರಾರ ಚಕ್ರವು ಜಾಗೃತಗೊಂಡಾಗ, ಮೆದುಳಿನಲ್ಲಿ ಧನಾತ್ಮಕ ಶಕ್ತಿಗಳು ಪ್ರಚೋದಿತವಾಗುತ್ತವೆ. ಇದು ನವದಂಪತಿಗಳಲ್ಲಿ ನಾನು ಮದುವೆಯಾಗಿದ್ದೇನೆ, ನನಗೆ ಜವಾಬ್ದಾರಿಗಳು ಹೆಚ್ಚಾಗಿವೆ ಎಂಬ ಪ್ರಜ್ಞೆಯನ್ನು ಮೂಡಿಸುತ್ತದೆ. ಈ ಪ್ರಜ್ಞೆಯಿಂದ ಆದಾಯ ಗಳಿಸುವುದು, ಖರ್ಚುಗಳನ್ನು ನಿಭಾಯಿಸುವುದು, ಆರ್ಥಿಕ ನಿರ್ವಹಣೆ ಸೇರಿದಂತೆ ವೈವಾಹಿಕ ಜೀವನದ ಎಲ್ಲಾ ಆಯಾಮಗಳನ್ನು ಸಮರ್ಥವಾಗಿ ನಿರ್ವಹಿಸುವ ಆಲೋಚನೆಗಳು ಮೂಡುತ್ತವೆ.
ಜೀರಿಗೆ ಮತ್ತು ಬೆಲ್ಲಕ್ಕೆ ವೈಯಕ್ತಿಕವಾಗಿಯೂ ವಿಶಿಷ್ಟ ಗುಣಗಳಿವೆ. ಜೀರಿಗೆಯು ದೇಹದಲ್ಲಿರುವ ಋಣಾತ್ಮಕ ಶಕ್ತಿಗಳನ್ನು ಹೊರಹಾಕಲು ಸಹಾಯಕವಾಗಿದೆ. ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ತಲೆಸುತ್ತು, ವಾಕರಿಕೆ, ಆಲಸ್ಯದಂತಹ ಸಮಸ್ಯೆಗಳನ್ನು ನಿವಾರಿಸಲು ಜೀರಿಗೆ ನೀರನ್ನು ಕುಡಿಯುವ ರೂಢಿ ಇದೆ. ಬೆಲ್ಲವು ದೇಹಕ್ಕೆ ಉಷ್ಣತೆಯನ್ನು ನೀಡಿ ಶಕ್ತಿಯನ್ನು ಒದಗಿಸುತ್ತದೆ. ಆದರೆ ವಿವಾಹದಲ್ಲಿ ಈ ಜೀರಿಗೆ ಬೆಲ್ಲವನ್ನು ತಿನ್ನಲು ನೀಡುವುದಿಲ್ಲ, ಬದಲಿಗೆ ತಲೆಯ ಮೇಲೆ ಸಾಂಕೇತಿಕವಾಗಿ ಇಡಲಾಗುತ್ತದೆ. ಇದರ ಮುಖ್ಯ ಉದ್ದೇಶ ದೈಹಿಕ ಪ್ರಯೋಜನಗಳಿಗಿಂತ ಹೆಚ್ಚಾಗಿ ಮಾನಸಿಕ ಮತ್ತು ಆಧ್ಯಾತ್ಮಿಕ ಶುದ್ಧೀಕರಣ.
ಇಲ್ಲಿದೆ ನೋಡಿ ವಿಡಿಯೋ:
ತಲೆಯ ಮೇಲೆ ಜೀರಿಗೆ ಬೆಲ್ಲವನ್ನು ಇಡುವುದರಿಂದ ನವದಂಪತಿಗಳ ನಡುವೆ ಅನ್ಯೋನ್ಯತೆ ಹೆಚ್ಚುತ್ತದೆ, ಅವರ ಮನಸ್ಸುಗಳಲ್ಲಿರುವ ಋಣಾತ್ಮಕ ಆಲೋಚನೆಗಳು ದೂರವಾಗಿ, ಸಕಾರಾತ್ಮಕ ಚಿಂತನೆಗಳು ಬೆಳೆಯುತ್ತವೆ. ಇದು ಅವರ ಭಾವನೆಗಳಿಗೆ ವಿಶೇಷ ಶಕ್ತಿಯನ್ನು ನೀಡಿ, ಪರಸ್ಪರ ತಿಳುವಳಿಕೆ ಮತ್ತು ಪ್ರೀತಿಯನ್ನು ವೃದ್ಧಿಸುತ್ತದೆ.
ಹೀಗಾಗಿ, ನಮ್ಮ ಪ್ರಾಚೀನ ಸಂಪ್ರದಾಯಗಳು ಕೇವಲ ಕಾಲ್ಪನಿಕ ಆಚರಣೆಗಳಲ್ಲ. ಅವು ಜೀವನದಲ್ಲಿ ಧನಾತ್ಮಕ ಶಕ್ತಿಗಳನ್ನು ಪ್ರಚೋದಿಸುವ, ವ್ಯಕ್ತಿತ್ವವನ್ನು ಸುಧಾರಿಸುವ ಮತ್ತು ಉತ್ತಮ ಸಮಾಜವನ್ನು ರೂಪಿಸುವ ಉದ್ದೇಶವನ್ನು ಹೊಂದಿವೆ. ಜೀರಿಗೆ ಬೆಲ್ಲದ ಈ ವಿಧಿಯು ಮಾನಸಿಕವಾಗಿ ದಂಪತಿಗಳನ್ನು ಪರಿವರ್ತಿಸಿ, ಜವಾಬ್ದಾರಿಯುತ ಮತ್ತು ಪ್ರೀತಿಯ ಜೀವನವನ್ನು ನಡೆಸಲು ಪ್ರೇರೇಪಿಸುತ್ತದೆ ಎಂಬುದಕ್ಕೆ ಒಂದು ಉತ್ತಮ ನಿದರ್ಶನವಾಗಿದೆ. ಈ ಪದ್ಧತಿ ಮುಂದಿನ ಪೀಳಿಗೆಗಳಿಗೂ ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ತಿಳಿಸುತ್ತದೆ. ಸರ್ವೇ ಜನಾಃ ಸುಖಿನೋ ಭವಂತು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್‌ಎಲ್) ಕಂಪನಿಯು ತನ್ನ ಹಿಡಿತದಲ್ಲಿ ಇದ್ದ ಆರ್‌ಸಿಬಿ (RCB) ಒಡೆತನವನ್ನು ಸಂಪೂರ್ಣವಾಗಿ ಮಾರಾಟ ಮಾಡಿದೆ. ಆದಿತ್ಯ ಬಿರ್ಲಾ ಸಮೂಹ ಸುಮಾರು 16,706 ಕೋಟಿ ರೂಪಾಯಿಗೆ ಆರ್‌ಸಿಬಿ ಫ್ರ್ಯಾಂಚೈಸಿಯನ್ನು ಖರೀದಿ ಮಾಡಿದೆ. ಈ ಮೂಲಕ ಹೊಸ ಕ್ಷೇತ್ರಕ್ಕೆ ಆದಿತ್ಯ ಬಿರ್ಲಾ ಕಾಲಿಟ್ಟಿದೆ. ಆದಿತ್ಯ ಬಿರ್ಲಾ ಜೊತೆ ಅಮೆರಿಕದ ಹೂಡಿಕೆದಾರ ಡೇವಿಡ್ ಬ್ಲಿಟ್ಝರ್ ಒಡೆತನದ ಬೋಲ್ಟ್ ವೆಂಚರ್ಸ್, ಬ್ಲ್ಯಾಕ್‌ಸ್ಟೋನ್ ಇಕ್ವಿಟಿ ಫರ್ಮ್, ಟೈಮ್ಸ್ ಆಫ್ ಇಂಡಿಯಾ ಮಾಧ್ಯಮ ಸಮೂಹ ಕೂಡ ಇದೆ. ಈ ಮಾರಾಟದ ಬೆನ್ನಲ್ಲೇ ಮಲ್ಯ ಟ್ವೀಟ್ ಮಾಡಿದ್ದಾರೆ.
ಬಿಸಿಸಿಐ ಐಪಿಎಲ್ ಆರಂಭಿಸೋ ಸಂಧರ್ಭದಲ್ಲಿ ಫ್ರಾಂಚೈಸಿಗಳನ್ನು ಮಾಡಿ, ಮಾರಲು ಮುಂದಾಯಿತು. ಆಗ ಮಲ್ಯ ಎರಡು ಫ್ರಾಂಚೈಸಿ ನೀಡುವಂತೆ ಬೇಡಿಕೆ ಇಟ್ಟರು. ಆದರೆ, ಒಬ್ಬರಿಗೆ ಒಂದು ತಂಡ ಮಾತ್ರ ಖರೀದಿಸುವ ಅವಕಾಶ ನೀಡಲಾಯಿತು. ಅದರಂತೆ ಮಲ್ಯ 450 ಕೋಟಿ ರೂಪಾಯಿ ನೀಡಿ ಒಂದು ತಂಡ ಖರೀದಿ ಮಾಡಿದರು. ರಾಯಲ್ ಚಾಲೆಂಜ್ ವಿಸ್ಕಿ ಬ್ರ್ಯಾಂಡ್ ಪ್ರಚಾರ ಮಾಡೋದು ಇವರ ಉದ್ದೇಶ ಆಗಿತ್ತು. ಈ ಕಾರಣದಿಂದ ರಾಯಲ್ ಚಾಲೆಂಜರ್ಸ್ ಅಂತ ಇಟ್ಟರು. ಮಲ್ಯಗೆ ಬೆಂಗಳೂರು ಹಿನ್ನೆಲೆ ಇರುವುದರಿಂದ ಬೆಂಗಳೂರು ಎಂಬುದನ್ನು ಸೇರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ತಂಡಕ್ಕೆ ಹೆಸರು ಇಟ್ಟರು. ವಿರಾಟ್ ಕೊಹ್ಲಿ ಖರೀದಿಯಲ್ಲೂ ಅವರು ಪ್ರಮುಖ ಪಾತ್ರವಹಿಸಿದ್ದರು. ಈಗ ತಂಡ ಮಾರಾಟ ಆಗಿದ್ದಕ್ಕೆ ಅವರು ಟ್ವೀಟ್ ಮಾಡಿದ್ದಾರೆ.
‘ಆರ್‌ಸಿಬಿಯ ಹೊಸ ಮಾಲೀಕರಿಗೆ ನನ್ನ ಹೃತ್ಪೂರ್ವಕವಾಗಿ ಅಭಿನಂದನೆಗಳು. ಐಪಿಎಲ್‌ನಲ್ಲಿ ಅತ್ಯಂತ ಅಮೂಲ್ಯವಾದ ಫ್ರಾಂಚೈಸಿಯನ್ನು ಖರೀದಿಸಿದ ನಿಮಗೆ ಶುಭ ಹಾರೈಸುತ್ತೇನೆ. ನಾನು 2008ರಲ್ಲಿ ಫ್ರಾಂಚೈಸಿಯನ್ನು 450 ಕೋಟಿ ರೂಪಾಯಿಗೆ ಖರೀದಿಸಿದೆ. ಆಗ ಬಹುತೇಕರು ನನ್ನನ್ನು ನೋಡಿ ನಕ್ಕರು. ನನ್ನ ಹೂಡಿಕೆ ವ್ಯರ್ಥ ಎಂದು ಟೀಕಿಸಿದರು’ ಎಂದಿದ್ದಾರೆ ಅವರು.
I would like to heartily congratulate the new owners of RCB. I wish them the very best and Godspeed with the most valuable IPL franchise. When I bought the franchise in 2008 for INR 450 crores, most people laughed at me and criticised my investment as a vanity project. Behind my…
‘ರಾಯಲ್ ಚಾಲೆಂಜ್ ಬ್ರ್ಯಾಂಡ್ ಅನ್ನು ನಿರ್ಮಿಸಬೇಕು ಎಂದು ನನಗೆ ಬಹುವಾಗಿ ಇತ್ತು. ಈ ಕಾರಣದಿಂದ ನಾನು ತಂಡಕ್ಕೆ ಆರ್‌ಸಿಬಿ ಎಂದು ಹೆಸರಿಸಿದೆ. ನನ್ನ 450 ಕೋಟಿ ರೂಪಾಯಿ ಹೂಡಿಕೆ ಈಗ 16,500 ಕೋಟಿ ರೂಪಾಯಿಗಳಿಗೆ ಬೆಳೆದಿರುವುದನ್ನು ನೋಡಲು ಅಪಾರ ಸಂತೋಷವಾಗಿದೆ. ಆರ್‌ಸಿಬಿ ಯಾವಾಗಲೂ ನನ್ನ ಡಿಎನ್‌ಎಯ ಭಾಗವಾಗಿ ಉಳಿಯುತ್ತದೆ’ ಎಂದು ಮಲ್ಯ ಹೇಳಿದ್ದಾರೆ.
‘ಆರ್‌ಸಿಬಿ ತಂಡದ ಆಟಗಾರರು ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಎಲ್ಲಾ ಆರ್‌ಸಿಬಿ ಅಭಿಮಾನಿಗಳಿಗೆ, ಕೃತಜ್ಞತಾಪೂರ್ವಕ ಧನ್ಯವಾದಗಳು. ದಯವಿಟ್ಟು ಬೆಂಗಳೂರಿನ ಸಿಂಹ ಆರ್‌ಸಿಬಿಯನ್ನು ಬೆಂಬಲಿಸುವುದನ್ನು ಮುಂದುವರಿಸಿ, ನಮಸ್ಕಾರ’ ಎಂದು ಅವರು ಕೋರಿದ್ದಾರೆ.
ಅಪಸ್ಮಾರ ಅಥವಾ ಎಪಿಲೆಪ್ಸಿ (Epilepsy) ದೀರ್ಘಕಾಲದ ಮೆದುಳಿನ ಅಸ್ವಸ್ಥತೆಯಾಗಿದೆ. ನರಕೋಶಗಳು ಅಥವಾ ಮೆದುಳಿನ ಕೋಶಗಳಲ್ಲಿ ಉಂಟಾಗುವ ಹಠಾತ್ ಬದಲಾವಣೆಯಿಂದ ಅಪಸ್ಮಾರ ಸಂಭವಿಸುತ್ತದೆ. ಇದೊಂದು ನರವೈಜ್ಞಾನಿಕ ಕಾಯಿಲೆಯಾಗಿದ್ದು, ಸಕಾಲದಲ್ಲಿ ರೋಗ ನಿರ್ಣಯವನ್ನು ನೀಡುವ ಮೂಲಕ ಈ ಕಾಯಿಲೆಯನ್ನು ಗುಣಪಡಿಸಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಲ್ಲಿ ಬರೋಬ್ಬರಿ 50 ಮಿಲಿಯನ್ ಜನರು ಈ ಮೂರ್ಛೆ ರೋಗವನ್ನು ಹೊಂದಿದ್ದಾರೆ. ಇಂದಿಗೂ ಕೂಡ ಹೆಚ್ಚಿನವರು ಈ ರೋಗವನ್ನು ಶಾಪವೆಂದು ನಂಬುತ್ತಾರೆ. ಈ ನಿಟ್ಟಿನಲ್ಲಿ ಈ ರೋಗದ ಬಗ್ಗೆ ಇರುವ ಜನರ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು, ಮೂರ್ಛೆ ರೋಗ ಹಾಗೂ ಅದರ ಚಿಕಿತ್ಸಾ ವಿಧಾದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ಅಪಸ್ಮಾರ ರೋಗಿಗಳಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ಅವರಿಗೆ ಧೈರ್ಯವನ್ನು ತುಂಬಲು ಪ್ರತಿವರ್ಷ ಮಾರ್ಚ್ 26 ರಂದು ಪರ್ಪಲ್ ಡೇ ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ನೇರಳೆ ದಿನದ ಇತಿಹಾಸವೇನು?
ಪ್ರತಿ ವರ್ಷ ಮಾರ್ಚ್ 26 ರಂದು ನೇರಳೆ ಅಪಸ್ಮಾರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲು, ಜನರು ಅಪಸ್ಮಾರದ ಬಗ್ಗೆ ಜಾಗೃತಿ ಮೂಡಿಸಲು ನೇರಳೆ ಬಟ್ಟೆಗಳನ್ನು ಧರಿಸುತ್ತಾರೆ. ಈ ರೋಗವು ಲ್ಯಾವೆಂಡರ್ ಹೂವಿನಿಂದ ಪ್ರೇರಿತವಾಗಿದೆ ಮತ್ತು ಒಂಟಿತನವನ್ನು ಪ್ರತಿನಿಧಿಸುತ್ತದೆ. ಇದನ್ನು ಮೊದಲು 2008 ರಲ್ಲಿ ಅಪಸ್ಮಾರದಿಂದ ಬಳಲುತ್ತಿರುವ 9 ವರ್ಷದ ಹುಡುಗಿ ಕ್ಯಾಸಿಡಿ ಮೇಗನ್ ಪ್ರಾರಂಭಿಸಿದಳು.
ಕೆನಡಾದ ಒಂಬತ್ತು ವರ್ಷದ ಕ್ಯಾಸಿಡಿ ಮೇಗನ್, ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದಳು. ಆಕೆ ತನ್ನ ಈ ಕಾಯಿಲೆಯೊಂದಿಗಿನ ಹೋರಾಟದಿಂದ ಪ್ರೇರಿತರಾಗಿ 2008 ರಲ್ಲಿ ಪರ್ಪಲ್ ಡೇ ಅನ್ನು ಸ್ಥಾಪಿಸಿದಳು. ಕ್ಯಾಸಿಡಿಯ ಈ ಪ್ರಯತ್ನಗಳನ್ನು ಕೆನಡಾದ ಎಪಿಲೆಪ್ಸಿ ಅಸೋಸಿಯೇಷನ್ ಆಫ್ ದಿ ಮ್ಯಾರಿಟೈಮ್ಸ್ (EAM) ಹಾಗೂ ನ್ಯೂಯಾರ್ಕ್‌ನ ಅನಿತಾ ಕೌಫ್‌ಮನ್ ಫೌಂಡೇಶನ್ ಬೆಂಬಲಿಸಿದವು ಮತ್ತು ಅಂತಿಮವಾಗಿ ಆ ದಿನವು ಅಂತರರಾಷ್ಟ್ರೀಯ ಕಾರ್ಯಕ್ರಮವಾಯಿತು. ಅಂದಿನಿಂದ ಪ್ರತಿವರ್ಷ ಮಾರ್ಚ್ 26 ರಂದು ಪರ್ಪಲ್ ಡೇ ಅನ್ನು ಆಚರಿಸುತ್ತಾ ಬರಲಾಗುತ್ತಿದೆ.
ಅಪಸ್ಮಾರದ ನೇರಳೆ ದಿನವು ಮಹತ್ವದ್ದಾಗಿದೆ ಏಕೆಂದರೆ ಇದು ಅಪಸ್ಮಾರದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅದಕ್ಕೆ ಸಂಬಂಧಿಸಿದ ಸಾಮಾಜಿಕ ಕಳಂಕವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಅಪಸ್ಮಾರ ರೋಗಿಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ, ಸುಧಾರಿತ ಆರೋಗ್ಯ ಸೇವೆ, ಮಾನಸಿಕ ಆರೋಗ್ಯಕ್ಕೆ ಬೆಂಬಲವನ್ನು ನೀಡುವಲ್ಲಿ ಈ ಆಚರಣೆಯು ನಿರ್ಣಾಯಕ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲದೆ ಈ ದಿನ ಅಪಸ್ಮಾರ ಕಾಯಿಲೆ, ಅದರ ರೋಗನಿರ್ಣಯ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ.
ಮೂರ್ಛೆ ರೋಗದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಈ ದಿನದಂದು ಹಮ್ಮಿಕೊಳ್ಳಲಾಗುತ್ತದೆ.
ಈ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲು, ಜನರು ಅಪಸ್ಮಾರದ ಬಗ್ಗೆ ಜಾಗೃತಿ ಮೂಡಿಸಲು ನೇರಳೆ ಬಟ್ಟೆಗಳನ್ನು ಧರಿಸುತ್ತಾರೆ.
ಚಿಕ್ಕಮಗಳೂರು, ಮಾರ್ಚ್ 26: ಜಿಲ್ಲೆಯ ಹಲವೆಡೆ ಮತ್ತೆ ಕಾಡಾನೆಗಳ ಸಂಚಾರ ಜನರ ಆತಂಕಕ್ಕೆ ಕಾರಣವಾಗಿದ್ದು, ಮೂಡಿಗೆರೆ ತಾಲೂಕಿನ ಗೋಣಿಬೀಡು ವ್ಯಾಪ್ತಿಯಲ್ಲಿ 45ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿವೆ. ಬೇಲೂರು ಮಾರ್ಗವಾಗಿ ಬಂದಿರುವ 15ಕ್ಕೂ ಹೆಚ್ಚು ಕಾಡಾನೆಗಳು ಕಸ್ಕೆಬೈಲು, ಚಟ್ಟನಹಳ್ಳಿ, ಹುಲಿಹಂಡ್ಲು ಸೇರಿದಂತೆ ಹಲವೆಡೆ ಸಂಚಾರ ನಡೆಸುತ್ತಿದ್ದು, ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿರುವ ವಿಡಿಯೋ ಸಾರ್ವಜನಿಕರ ಮೊಬೈಲ್ನಲ್ಲಿ ಸೆರೆಯಾಗಿದೆ. ಮೂಡಿಗೆರೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಕಾಡಾನೆಗಳ ಸಂಚಾರ ಕಂಡುಬಂದಿದೆ.
ಮಂಗಳೂರು, ಮಾ.26: ಮಂಗಳೂರು: ತುಳುನಾಡಿನ ದೈವಾರಾಧನೆ ಎಂಬುದು ಕೇವಲ ಆಚರಣೆಯಲ್ಲ, ಅದೊಂದು ಅಪಾರ ನಂಬಿಕೆ ಮತ್ತು ಶಿಸ್ತಿನ ಪದ್ಧತಿ. ಇತ್ತೀಚೆಗೆ ದೈವದ ನೇಮೋತ್ಸವಗಳ ವೇಳೆ ವಿಡಿಯೋ ಮಾಡುವ ಮತ್ತು ಫೋಟೋ ತೆಗೆಯುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದು ದೈವದ ಅವಕೃಪೆಗೆ ಕಾರಣವಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. @chasing_roadss ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಹಿಳೆಯೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನೇಮೋತ್ಸವ ನಡೆಯುತ್ತಿದ್ದಾಗ ದೈವವು ಹಠಾತ್ತಾಗಿ ವಿಡಿಯೋ ಮಾಡುತ್ತಿದ್ದವರತ್ತ ತಿರುಗಿ ತೀವ್ರ ಆಕ್ರೋಶದಿಂದ ಎಚ್ಚರಿಕೆ ನೀಡಿದೆ. ವಿಡಿಯೋ ಹಂಚಿಕೊಂಡಿರುವ ಮಹಿಳೆಯ ಪ್ರಕಾರ, ಕೇವಲ ವಿಡಿಯೋ ಮಾಡಿದ್ದಕ್ಕೆ ಮಾತ್ರವಲ್ಲದೆ, ತಾನು ಕೆಂಪು ಬಣ್ಣದ ಬಟ್ಟೆ ಧರಿಸಿದ್ದಕ್ಕೂ ದೈವವು ಕೋಪಗೊಂಡಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ದೈವದ ಆವೇಶ ಮತ್ತು ಆಕ್ರೋಶ ಕಂಡು ನೆರೆದಿದ್ದ ಭಕ್ತರು ಒಂದು ಕ್ಷಣ ಸ್ತಬ್ಧರಾಗಿದ್ದಾರೆ. ಕರಾವಳಿಯ ದೈವಗಳ ಮುಂದೆ ನಿಲ್ಲುವಾಗ ಬಟ್ಟೆ, ನಡವಳಿಕೆ ಮತ್ತು ಮೌನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇತ್ತೀಚಿನ ‘ರೀಲ್ಸ್’ ಸಂಸ್ಕೃತಿಯು ಈ ಪವಿತ್ರ ಸಂಪ್ರದಾಯದ ಗಂಭೀರತೆಯನ್ನು ಹಾಳುಮಾಡುತ್ತಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.