Headlines

Vande Mataram New Guidelines: ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂನ 6 ಚರಣಗಳನ್ನು ಹಾಡುವುದು ಕಡ್ಡಾಯ – Kannada News | Vande Mataram Mandatory: Home Ministry Directive for Govt Events and Schools, 6 Stanzas Before National Anthem

ಅಮಿತ್ ಶಾ ಹಾಗೂ ಇತರೆ ನಾಯಕರುImage Credit source: Frontline ನವದೆಹಲಿ, ಫೆಬ್ರವರಿ 11: ರಾಷ್ಟ್ರಗೀತೆ ‘ಜನಗಣಮನ’ದಂತೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ (Vande Mataram)ಗೀತೆಯನ್ನು ಹಾಡುವುದು ಕೂಡ ಕಡ್ಡಾಯಗೊಳಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಆದೇಶದಲ್ಲಿ, ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂನ 6 ಚರಣಗಳನ್ನು ಹಾಡಬೇಕು ಎಂದು ಹೇಳಲಾಗಿದೆ. ಹಾಗೆಯೇ ಗೀತೆಯನ್ನು ನುಡಿಸಿದರೆ ಅಥವಾ ಹಾಡಿದರೆ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂದು ತಿಳಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯವು ತನ್ನ ನಿರ್ದೇಶನದಲ್ಲಿ ಆರು ಚರಣಗಳನ್ನು…

Read More

ಕಾಂಗ್ರೆಸ್​ನಲ್ಲಿ ತಾರಕಕ್ಕೇರಲಿದೆ ಕುರ್ಚಿ ಕದನ: ಟೂರ್ ಪಾಲಿಟಿಕ್ಸ್ Vs ರೆಸಾರ್ಟ್ ಪಾಲಿಟಿಕ್ಸ್​ಗೆ ಬಣಗಳ ಸಿದ್ಧತೆ – Kannada News | Karnataka Congress Rift Deepens: Tour Politics vs Resort Politics Amid Leadership Change Buzz

ಕಾಂಗ್ರೆಸ್​ನಲ್ಲಿ ತಾರಕಕ್ಕೇರಲಿದೆ ಕುರ್ಚಿ ಕದನ!Image Credit source: tv9 ಬೆಂಗಳೂರು, ಫೆಬ್ರವರಿ 11: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ಕುರ್ಚಿ ಕದನ ತಾರಕಕ್ಕೇರುವ ಸುಳಿವುಗಳು ಗೋಚರಿಸುತ್ತಿವೆ. ಟೂರ್ ಪಾಲಿಟಿಕ್ಸ್ ಹಾಗೂ ರೆಸಾರ್ಟ್ ಪಾಲಿಟಿಕ್ಸ್ ಜತೆಗೆ ಆಂತರಿಕ ಸಂಘರ್ಷ ತೀವ್ರಗೊಳ್ಳುವ ಸಾಧ್ಯತೆ ಗೋಚರಿಸಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಶಾಸಕರ ವಿದೇಶ ಪ್ರವಾಸ ಯೋಜನೆ ಇನ್ನೂ ಜೀವಂತವಾಗಿದ್ದು, ಇದು ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ದಾರಿ ಮಾಡಿಕೊಡಲಿದೆ ಎಂದು ಹೇಳಲಾಗುತ್ತಿದೆ. ಬರೋಬ್ಬರಿ 35 ಶಾಸಕರು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸಕ್ಕೆ ಸಿದ್ಧತೆ…

Read More

ರಣವೀರ್​ಗೆ ನೀಡಿದ ಭದ್ರತೆಯಿಂದ ನೆರೆಯವರಿಗೆ ತೊಂದರೆ; ಬದಲಾಗುತ್ತಾ ದಂಪತಿ ಮನೆ? – Kannada News | Ranveer Singh Threat: Extortion and Police Security Boost Amid ‘Dhurandhar 2’ Buzz

ಮುಂಬರುವ ಚಿತ್ರ ‘ಧುರಂಧರ್ 2’ಗಾಗಿ (Dhurandhar 2) ಸುದ್ದಿಯಲ್ಲಿರುವ ನಟ ರಣವೀರ್ ಸಿಂಗ್ ಅವರಿಗೆ ಗಂಭೀರ ಬೆದರಿಕೆ ಎದುರಾಗಿದೆ. ರಣವೀರ್ ಸಿಂಗ್ ಅವರಿಗೆ ವಾಟ್ಸಾಪ್‌ನಲ್ಲಿ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದ್ದು, ಕೋಟ್ಯಂತರ ರೂಪಾಯಿ ಪರಿಹಾರ ನೀಡುವಂತೆ ಕೇಳಲಾಗಿದೆ. ಈ ಘಟನೆಯ ನಂತರ, ಮುಂಬೈ ಪೊಲೀಸರು ತಕ್ಷಣ ಕ್ರಮ ಕೈಗೊಂಡು ರಣವೀರ್ ಸಿಂಗ್ ಮನೆಯ ಹೊರಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಈ ರೀತಿಯ ಘಟನೆ ಮರುಕಳಿಸುತ್ತಿರುವುದರಿಂದ ಹಳೆಯ ಬಾಲಿವುಡ್ ಸ್ಥಿತಿ ಮರಳುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ನಿರ್ಮಾಪಕ-ನಿರ್ದೇಶಕ ರೋಹಿತ್…

Read More

Bank Strike: ಫೆಬ್ರವರಿ 12ರಂದು ರಾಷ್ಟ್ರವ್ಯಾಪಿ ಬ್ಯಾಂಕ್​ ಮುಷ್ಕರ, ಕಾರಣವೇನು? – Kannada News | Banking Services May Face Disruptions on February 12, Here is Why

ನವದೆಹಲಿ, ಫೆಬ್ರವರಿ 12: ತುರ್ತು ಬ್ಯಾಂಕ್(Bank) ಕೆಲಸಗಳಿದ್ದರೆ ಇಂದೇ ಮುಗಿಸಿಕೊಳ್ಳಿ, ನಾಳೆಗೆ ಮುಂದೂಡಿದರೆ ಕಷ್ಟವಾಗಬಹುದು. ಬ್ಯಾಂಕ್​ಗಳ ಖಾಸಗೀಕರಣ ಮತ್ತು ಕಾರ್ಮಿಕ ಸಂಹಿತೆಯನ್ನು ವಿರೋಧಿಸಿ ಫೆಬ್ರವರಿ 12ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ ನಡೆಯಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ದೇಶದ ಪ್ರಮುಖ ಬ್ಯಾಂಕುಗಳು ಫೆ. 12 ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿವೆ. ಸೇವೆಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಯಾವುದೇ ತುರ್ತು ಬೇಕಿಂಗ್ ಕೆಲಸವನ್ನು ಮುಂಚಿತವಾಗಿ ಪೂರ್ಣಗೊಳಿಸಬೇಕೆಂದು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ  ಸೂಚನೆ ನೀಡಿವೆ. ಹಿಂದೂ ಮಜ್ದೂರ್…

Read More

ಉದ್ಯಮಿಗಳಿಂದ ಲಕ್ಷ ಲಕ್ಷ ಹಣ ಪಡೆದು ಟೋಪಿ ಹಾಕುತ್ತಿದ್ದ ಪೀಟರ್ ಡ್ಯಾಡಿ ಮನೆ ಮೇಲೆ ಸಿಐಡಿ ದಾಳಿ! – Kannada News | CID Raids Peter Daddy’s House in Bengaluru: Businessman Accused of Lakhs in Land Fraud

ಉದ್ಯಮಿಗಳಿಂದ ಲಕ್ಷ ಲಕ್ಷ ಹಣ ಪಡೆದು ಟೋಪಿ ಹಾಕುತ್ತಿದ್ದ ಪೀಟರ್ ಡ್ಯಾಡಿ ಮನೆ ಮೇಲೆ ಸಿಐಡಿ ದಾಳಿ! ಬೆಂಗಳೂರು, ಫೆಬ್ರವರಿ 11: ಉದ್ಯಮಿಗೆ ಕೋಟ್ಯಾಂತರ ಮೌಲ್ಯದ ಜಮೀನು ವ್ಯವಹಾರದಲ್ಲಿ ವಂಚನೆ ನಡೆಸಿದ ಆರೋಪದಡಿ ಪೀಟರ್ ಡ್ಯಾಡಿ (Peter Daddy) ಎಂಬಾತನ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ನಿನ್ನೆ (ಫೆ.10) ದಾಳಿ (CID raid) ನಡೆಸಿದ್ದಾರೆ. ಪುಲಿಕೇಶಿನಗರದಲ್ಲಿರುವ ಮನೆ ಮೇಲೆ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಕಮಿಷನ್ ಹೆಸರಿನಲ್ಲಿ ಲಕ್ಷಾಂತರ…

Read More

Abhishek Sharma: ಅಭಿಷೇಕ್ ಶರ್ಮಾ ಆಸ್ಪತ್ರೆಗೆ ದಾಖಲು – Kannada News | Team India Player Abhishek Sharma was admitted in hospital

ಭಾರತ ತಂಡದ ಸ್ಫೋಟಕ ದಾಂಡಿಗ ಅಭಿಷೇಕ್ ಶರ್ಮಾ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವ ಆಟಗಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೀಗಾಗಿ ನಾಳೆ (ಫೆ.12) ನಡೆಯಲಿರುವ ನಮೀಬಿಯ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎನ್ನಬಹುದು. ಯುಎಸ್​ಎ ವಿರುದ್ಧದ ಪಂದ್ಯದ ಬಳಿಕ ಟೀಮ್ ಇಂಡಿಯಾ ಆಟಗಾರರು ದ್ವಿತೀಯ ಪಂದ್ಯಕ್ಕಾಗಿ ಭಾನುವಾರ ದೆಹಲಿಗೆ ಆಗಮಿಸಿದ್ದಾರೆ. ದೆಹಲಿಯ ತಮ್ಮ ನಿವಾಸದಲ್ಲಿ ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಭೋಜನಾ ಕೂಟ ಏರ್ಪಡಿಸಿದ್ದರು. ಈ ಡಿನ್ನರ್…

Read More

ಅಬ್ಬಬ್ಬಾ, ಯಶ್ ಬುದ್ಧಿವಂತಿಕೆ ಮೆಚ್ಚಲೇಬೇಕು; ಈ ಡೀಲ್​​​ನಿಂದ ‘ಟಾಕ್ಸಿಕ್​​’ಗೆ ದೊಡ್ಡ ಲಾಭ – Kannada News | Toxic Movie: Yash’s Smart Deal with Fars Film for Global Reach and 105 Crore Rights

‘ಟಾಕ್ಸಿಕ್’ ಸಿನಿಮಾ (Toxic Movie) ರಿಲೀಸ್​​ಗೆ ಇನ್ನು ಒಂದು ತಿಂಗಳು ಬಾಕಿ ಇದೆ. ಈಗಾಗಲೇ ಸಿನಿಮಾಗೆ ಸಿದ್ಧತೆ ಜೋರಾಗಿ ನಡೆದಿದೆ. ಈ ಸಿನಿಮಾ ನೋಡಲು ಫ್ಯಾನ್ಸ್ ಕಾದಿದ್ದಾರೆ. ಈ ಚಿತ್ರದ ವಿದೇಶಿ ಹಂಚಿಕೆ ಹಕ್ಕನ್ನು ಫಾರ್ಸ್ ಫಿಲ್ಮ್ ಬರೋಬ್ಬರಿ 105 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಈ ಡೀಲ್​​ನ ಹಿಂದೆ ಸಾಕಷ್ಟು ಲೆಕ್ಕಾಚಾರ ಇದೆ ಎಂದು ವರದಿ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ. ‘ಟಾಕ್ಸಿಕ್’ ಸಿನಿಮಾ ಕೇಲವ ಭಾರತದ ಭಾಷೆಗಳಲ್ಲಿ ಮಾತ್ರವಲ್ಲದೆ, ಇಂಗ್ಲಿಷ್ ಅಲ್ಲೂ ರಿಲೀಸ್…

Read More

ಕಾಂಗ್ರೆಸ್ ಕುರ್ಚಿ ಕಾಳಗ ದೆಹಲಿಗೆ ಶಿಫ್ಟ್: ದೆಹಲಿ ತಲುಪುತ್ತಿದ್ದಂತೆಯೇ ಡಿಕೆಶಿ ನಂಬರ್ ಗೇಮ್! – Kannada News | Karnataka Congress Power Struggle Shifts to Delhi: DK Shivakumar Starts ‘Number Game’ Amid CM Change Buzz

ಬೆಂಗಳೂರು, ಫೆಬ್ರವರಿ 11: ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಪೈಪೋಟಿ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಲಕ್ಷಣ ಕಾಣಿಸಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಅಸ್ಸಾಂ ಚುನಾವಣಾ ಉಸ್ತುವಾರಿ ನೆಪದಲ್ಲಿ ದೆಹಲಿಗೆ ತೆರಳಿದ್ದು, ಹೈಕಮಾಂಡ್ ನಾಯಕರ ಪೈಕಿ ಕೆಲವ ಭೇಟಿಯಾಗಿದ್ದಾರೆ ಎನ್ನಲಾಗಿದೆ. ದೆಹಲಿಗೆ ತಲುಪುಸುತ್ತಿದ್ದಂತೆಯೇ ಅವರು ‘136’ ಎಂಬ ಸಂಖ್ಯೆಯನ್ನು ಉಲ್ಲೇಖಿಸಿ ನಂಬರ್ ಗೇಮ್ ಆರಂಭಿಸಿದ್ದಾರೆ. ಇದೇ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಲಸಂಪನ್ಮೂಲ ಹಾಗೂ ಬೆಂಗಳೂರು ಅಭಿವೃದ್ಧಿ ಇಲಾಖೆಗಳ ಬಜೆಟ್ ಸಭೆ ನಡೆಸಿದ್ದು, ಡಿ.ಕೆ….

Read More

ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಶಾಲೆಯಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು – Kannada News | Deadly School Shooting in British Columbia Leaves 10 Dead

ಒಟ್ಟಾವಾ, ಫೆಬ್ರವರಿ 11: ಕೆನಡಾದ  ಬ್ರಿಟಿಷ್ ಕೊಲಂಬಿಯಾದ ಟಂಬ್ಲರ್ ರಿಡ್ಜ್​ ಪಟ್ಟಣದಲ್ಲಿರುವ ಶಾಲೆಯಲ್ಲಿ ಅಪರಿಚಿತ ದುಷ್ಕರ್ಮಿಯಿಂದ ಸಾಮೂಹಿಕ ಗುಂಡಿನ ದಾಳಿ(Firing) ನಡೆದಿದ್ದು, ಘಟನೆಯಲ್ಲಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಬ್ಬ ಶಂಕಿತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಹಾಗೂ ಉದ್ದೇಶ ಹಾಗೂ ಸಂದರ್ಭಗಳ ಕುರಿತು ಅಧಿಕಾರಿಗಳು ಮಾಹಿತಿಯನ್ನು ಇನ್ನೂ ನೀಡಿಲ್ಲ, ಸುಮಾರು 24 ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟಂಬ್ಲರ್ ರಿಡ್ಜ್…

Read More

ಅಲೆನ್ ಆರ್ಭಟಕ್ಕೆ ಅಭಿಷೇಕ್ ವಿಶ್ವ ದಾಖಲೆ ಉಡೀಸ್ – Kannada News | Finn Allen Breaks Abhishek Sharma’s World Record

ಇದೀಗ ಈ ದಾಖಲೆಯನ್ನು ಫಿನ್ ಅಲೆನ್ ಮುರಿದಿದ್ದಾರೆ. ಕೇವಲ 2854 ಎಸೆತಗಳಲ್ಲಿ 5 ಸಾವಿರ ಪೂರೈಸುವ ಮೂಲಕ ಅಲೆನ್ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗವಾಗಿ 5000 ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದೀಗ ಐದು ಸಾವಿರ ರನ್​ಗಳ ಸರದಾರರ ಪಟ್ಟಿಯಲ್ಲಿ ಅಲೆನ್ ಹಾಗೂ ಅಭಿಷೇಕ್ ಮೊದಲೆರಡು ಸ್ಥಾನಗಳಲ್ಲಿದ್ದು, ಯಾರು ವೇಗವಾಗಿ 6 ಸಾವಿರ ರನ್​ಗಳಿಸಲಿದ್ದಾರೆ ಎಂಬುದೇ ಈಗ ಕುತೂಹಲ. Source link

Read More