Headlines

ರಷ್ಯಾದಿಂದ 60 ಮಿಲಿಯನ್ ಬ್ಯಾರಲ್ ಕಚ್ಛಾ ತೈಲ ಖರೀದಿಸಿದ ಭಾರತ

ನವದೆಹಲಿ, ಮಾರ್ಚ್ 25: ಗಲ್ಫ್ ಭಾಗದಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ (Hormuz Strait) ಪರಿಸ್ಥಿತಿ ಇನ್ನೂ ತಿಳಿಯಾಗಿಲ್ಲದ ಹಿನ್ನೆಲೆಯಲ್ಲಿ ಭಾರತವು ತನ್ನ ಕಚ್ಛಾ ತೈಲ ಅಗತ್ಯಗಳನ್ನು ರಷ್ಯಾದಿಂದ ಪಡೆಯುತ್ತಿದೆ. ಮುಂದಿನ ತಿಂಗಳಿಗಾಗಿ ಭಾರತವು ರಷ್ಯಾದಿಂದ 60 ಮಿಲಿಯನ್ ಬ್ಯಾರಲ್ ಕಚ್ಛಾ ತೈಲವನ್ನು (Russian crude oil) ಖರೀದಿ ಮಾಡಿದೆ ಎಂದು ಬ್ಲೂಮ್​ಬರ್ಗ್ ಸುದ್ದಿ ಏಜೆನ್ಸಿಯು ವರದಿ ಮಾಡಿದೆ. ಇರಾನ್ ಯುದ್ಧಕ್ಕೆ ಮುನ್ನ ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿ ಮಾಡುತ್ತಿದ್ದ ಭಾರತ ಈಗ ಹೆಚ್ಚಿನ ದರ ತೆರಬೇಕಾಗಿದೆ. ಬ್ರೆಂಟ್…

Read More

‘ಲವ್ ಮಾಕ್ಟೆಲ್ 3’: ಕತೆ ಕದ್ದ ಆರೋಪ, ಕೇಸು ಹಾಕ್ತೀನಿ ಎಂದ ಡಾರ್ಲಿಂಗ್ ಕೃಷ್ಣ

ಡಾರ್ಲಿಂಗ್ ಕೃಷ್ಣ (Darling Krishna), ನಟಿಸಿ, ನಿರ್ಮಿಸಿ, ನಿರ್ದೇಶನವನ್ನೂ ಮಾಡಿರುವ ‘ಲವ್ ಮಾಕ್ಟೆಲ್ 3’ ಸಿನಿಮಾ ಕಳೆದ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು, ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ‘ಧುರಂಧರ್ 2’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳ ಅಬ್ಬರದ ನಡುವೆಯೂ ಸಹ ‘ಲವ್ ಮಾಕ್ಟೆಲ್ 3’ ಸಿನಿಮಾ ಜನರನ್ನು ಸೆಳೆಯುತ್ತಿದೆ. ಅಪ್ಪ-ಮಗಳ ಬಂಧದ ಬಗ್ಗೆ ಕತೆಯನ್ನು ‘ಲವ್ ಮಾಕ್ಟೆಲ್ 3’ ಸಿನಿಮಾ ಹೊಂದಿದ್ದು, ಸಿನಿಮಾದ ಕತೆಯನ್ನು ಡಾರ್ಲಿಂಗ್ ಕೃಷ್ಣ ಅವರೇ ಬರೆದಿದ್ದಾರೆ. ಆದರೆ ಇತ್ತೀಚೆಗೆ ನಿರ್ದೇಶಕ…

Read More

ರಾಹುಕಾಲ ಬಿಟ್ಟು ಬಜೆಟ್ ಮಂಡಿಸಿದ್ದು ನಿಜವೆಂದ ಸಿದ್ದರಾಮಯ್ಯ! ಕೊಟ್ಟ ಕಾರಣ ಏನು ಗೊತ್ತಾ?

ಬೆಂಗಳೂರು, ಮಾರ್ಚ್ 25: ರಾಹುಕಾಲವನ್ನು (Rahu Kaal) ತಪ್ಪಿಸುವುದಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬೆಳಗ್ಗೆ 10.15ಕ್ಕೆ ಬಜೆಟ್ (Karnataka Budget) ಮಂಡನೆ ಸಮಯ ನಿಗದಿಪಡಿಸಿದ್ದು ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಹೇಳಿದ್ದರು. ಇದೀಗ ವಿಧಾನಸಭೆಯಲ್ಲಿ ಕೂಡ ಆ ವಿಚಾರ ಚರ್ಚೆಯಾಗಿದೆ. ರಾಹುಕಾಲ ತಪ್ಪಿಸುವುದಕ್ಕಾಗಿಯೇ ಆ ಸಮಯ ನಿಗದಿ ಮಾಡಿದ್ದು ನಿಜ ಎಂದು ಖುದ್ದು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ! ಅಲ್ಲದೆ, ಅದಕ್ಕೆ ಕಾರಣವನ್ನು ಕೂಡ ಕೊಟ್ಟಿದ್ದಾರೆ. ಬಜೆಟ್ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಬುಧವಾರ ಉತ್ತರ ನೀಡಿದರು. ಇದೇ…

Read More

ಚುನಾವಣೆ ಫಲಿತಾಂಶದ ಮೇಲೆ ದಳಪತಿ ವಿಜಯ್ ಸಿನಿಮಾ ಭವಿಷ್ಯ ನಿರ್ಧಾರ

ದಳಪತಿ ವಿಜಯ್ ಕೊನೆಯ ಸಿನಿಮಾ ಎನ್ನಲಾಗಿದ್ದ ‘ಜನ ನಾಯಗನ್’ ರಿಲೀಸ್​​ಗೆ ಅಭಿಮಾನಿಗಳು ಕಾದಿದ್ದರು. ಆದರೆ, ಸಿನಿಮಾ ಸದ್ಯಕ್ಕಂತೂ ರಿಲೀಸ್ ಆಗೋದು ಅನುಮಾನವೇ. ಸದ್ಯ ವಿಜಯ್ ಅವರು ತಮಿಳುನಾಡು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಅವರು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಿರುವಾಗಲೇ ಅವರ ಸಿನಿಮಾ ಭವಿಷ್ಯ ಈಗಲೇ ಮುಗಿದಿಲ್ಲ ಎಂದು ಹೇಳಲಾಗುತ್ತಾ ಇದೆ. ಚುನಾವಣೆ ಫಲಿತಾಂಶ ಎಲ್ಲವನ್ನೂ ನಿರ್ಧಾರ ಮಾಡಲಿದೆ. ವಿಜಯ್ ಅವರು ರಾಜಕೀಯಕ್ಕೆ ಕಾಲಿಡಬೇಕು ಎಂದು ನಿರ್ಧರಿಸಿಯಾಗಿದೆ. ಟಿವಿಕೆ ಹೆಸರಿನ ಪಕ್ಷ ಸ್ಥಾಪಿಸಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಅವರ…

Read More

ಕಾಂಗ್ರೆಸ್ ಮುಖಂಡನ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ

ಕಾರವಾರ, ಮಾರ್ಚ್ 25: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೇಣಿ ಬಳಿ ಕಾಂಗ್ರೆಸ್ (Congress) ಮುಖಂಡ ಗೋಪಾಲಕೃಷ್ಣ ನಾಯ್ಕ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗೋಪಾಲಕೃಷ್ಣ ನಾಯ್ಕ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಗೋವಾ ನೋಂದಣಿಯ ಫೋರ್ಡ್ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ದಾಳಿ ನಡೆಸಿದ್ದಾರೆ. ಮೊದಲು ರಾಡ್‌ನಿಂದ ಹಲ್ಲೆ ನಡೆಸಿದ ಬಳಿಕ, ಚಾಕುವಿನಿಂದ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಸದ್ಯ, ಗಂಭೀರ ಗಾಯಗೊಂಡಿರುವ ಗೋಪಾಲಕೃಷ್ಣ ನಾಯ್ಕರನ್ನು ಅಂಕೋಲದ…

Read More

ಬೋರ್​ವೆಲ್ ಕೊರೆಯಲು ಹೋಗಿ ಮೆಟ್ರೋ ಸುರಂಗದಲ್ಲಿ 6 ಇಂಚು ರಂಧ್ರ ಸೃಷ್ಟಿ

ಪುಣೆ, ಮಾರ್ಚ್​ 25: ಮೆಟ್ರೋ(Metro) ಮಾರ್ಗದ ಮೇಲೆ ಬೋರ್​ವೆಲ್ ಕೊರೆಯಲು ಹೋಗಿ ಕೆಳಗೆ ಸುರಂಗ ಮಾರ್ಗದಲ್ಲಿ 6 ಇಂಚುಗಳಷ್ಟು ರಂಧ್ರ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ. ಖಡಕ್ ಪೊಲೀಸರು ಬೋರ್‌ವೆಲ್ ಗುತ್ತಿಗೆದಾರ ಮತ್ತು ಮನೆಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶಿವಾಜಿ ರಸ್ತೆಯ ಬಳಿ ಘಟನೆ ನಡೆದಿದೆ. ಶಿವಾಜಿನಗರ ಮತ್ತು ಸ್ವರ್ಗೇಟ್ ನಡುವಿನ ಭೂಗತ ಕಾರಿಡಾರ್‌ನ ಭಾಗವಾಗಿರುವ ಮಂಡೈ ಮೆಟ್ರೋ ನಿಲ್ದಾಣದ ಬಳಿಯ ಸುರಂಗ ರಚನೆಗೆ ಕೊರೆಯುವಿಕೆಯು ಹಾನಿಯನ್ನುಂಟುಮಾಡಿದೆ ಎಂದು ವರದಿಯಾಗಿದೆ. ಕೊರೆಯುವಿಕೆಯು 80 ರಿಂದ 100 ಅಡಿ…

Read More

ಸಚಿವರಾಗಿದ್ದೂ ಸಿನಿಮಾಗಳಲ್ಲಿ ನಟನೆ: ಪವನ್ ಬಗ್ಗೆ ಹೈಕೋರ್ಟ್ ಹೇಳಿದ್ದೇನು?

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಆಗಿರುವ ಪವನ್ ಕಲ್ಯಾಣ್ (Pawan Kalyan), ಕೆಲವು ಪ್ರಮುಖ ಸಚಿವ ಖಾತೆಗಳನ್ನು ನಿಭಾಯಿಸುತ್ತಿದ್ದಾರೆ. ಪವನ್ ಕಲ್ಯಾಣ್ ಅವರ ಮೇಲೆ ಭಾರಿ ದೊಡ್ಡ ಜವಾಬ್ದಾರಿ ಇದೆ. ಜನಸೇವೆಯನ್ನು ಮಾಡಲೆಂದು ಜನ ನಂಬಿಕೆ ಇಟ್ಟು ಅವರನ್ನು ಆರಿಸಿ ಕಳಿಸಿದ್ದಾರೆ. ಆದರೆ ಪವನ್ ಕಲ್ಯಾಣ್ ಅವರು ಡಿಸಿಎಂ ಆದ ಬಳಿಕ ಸಿನಿಮಾನಲ್ಲಿ ನಟಿಸುತ್ತಿದ್ದು, ಡಿಸಿಎಂ ಆದ ಬಳಿಕ ಅವರ ನಟನೆಯ ಮೂರು ಸಿನಿಮಾಗಳು ಬಿಡುಗಡೆ ಆಗಿವೆ. ಆದರೆ ಇದನ್ನು ವಿರೋಧಿಸಿ ನ್ಯಾಯಾಲಯದಲ್ಲಿ ಅರ್ಜಿ ಹಾಕಲಾಗಿತ್ತು. ಜವಾಬ್ದಾರಿಯುತ ಸ್ಥಾನದಲ್ಲಿರುವಾಗ ಸಿನಿಮಾಗಳಲ್ಲಿ…

Read More

ಪೆಟ್ರೋಲ್, ಡೀಸಲ್ ಕೊರತೆ ಇಲ್ಲ, ಗಾಬರಿ ಬೇಡ: ಪೆಟ್ರೋಲಿಯಂ ಕಂಪನಿಗಳಿಂದ ಸ್ಪಷ್ಟನೆ

ನವದೆಹಲಿ, ಮಾರ್ಚ್ 25: ದೇಶದ ಹಲವೆಡೆ ಎಲ್​ಪಿಜಿಗೆ ತತ್ವಾರವಾಗಿರುವಂತೆ, ಈಗ ಪೆಟ್ರೋಲ್ ಮತ್ತು ಡೀಸಲ್​ಗೂ ಜನರು ಹಾಹಾಕಾರ ಶುರುವಿಟ್ಟುಕೊಂಡಿದ್ದಾರೆ. ಪೆಟ್ರೋಲ್, ಡೀಸಲ್ ಕೊರತೆ ಇದೆ ಎನ್ನುವ ವದಂತೆ ಕೆಲ ನಗರ ಮತ್ತು ಪ್ರದೇಶಗಳಲ್ಲಿ ದಟ್ಟವಾಗಿ ಹಬ್ಬುತ್ತಿದೆ. ಹೈದರಾಬಾದ್ ಇತ್ಯಾದಿ ಕಡೆ ಜನರು ಪೆಟ್ರೋಲ್ ಬಂಕ್​ಗಳಿಗೆ ಮುಗಿಬಿದ್ದು ಫುಲ್ ಟ್ಯಾಂಕ್ ತುಂಬಿಸಿಕೊಳ್ಳಲು ಯತ್ನಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಬೆಂಗಳೂರಿನಲ್ಲೂ ಹಲವೆಡೆ ಜನರು ಪೆಟ್ರೋಲ್ ಬಂಕ್​ಗಳಲ್ಲಿ (Petrol) ಎಂದಿಗಿಂತ ಹೆಚ್ಚು ಕ್ಯೂ ನಿಂತಿರುವ ದೃಶ್ಯಗಳು ಕಂಡು ಬರುತ್ತಿವೆ. ಇದೇ ವೇಳೆ, ಪೆಟ್ರೋಲ್,…

Read More

ಕಮರ್ಷಿಯಲ್ ಅಷ್ಟೇ ಅಲ್ಲ, ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್ ಕೂಡ ಸಿಗ್ತಿಲ್ಲ: ಏಜೆನ್ಸಿಗಳ ಮುಂದೆ ಕಿಲೋಮೀಟರ್ ಉದ್ದದ ಕ್ಯೂ!

ಬೆಂಗಳೂರು, ಮಾರ್ಚ್ 25: ಕರ್ನಾಟಕದ ವಿವಿಧ ಕಡೆಗಳಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಸಮಸ್ಯೆ ತೀವ್ರಗೊಂಡಿದೆ. ಹಲವು ಜಿಲ್ಲೆಗಳಲ್ಲಿ ಸಿಲಿಂಡರ್ ಕೊರತೆ ಎದ್ದು ಕಾಣುತ್ತಿದೆ. ಕಲಬುರಗಿ, ಆಳಂದ, ಬಳ್ಳಾರಿ, ಸಂಡೂರು ಮತ್ತು ದಾವಣಗೆರೆಯ ಜಗಳೂರಿನಲ್ಲಿ ಜನರು ಗ್ಯಾಸ್ ಸಿಲಿಂಡರ್‌ಗಳಿಗಾಗಿ ಪರದಾಡುತ್ತಿದ್ದಾರೆ. ಇಂಡಿಯನ್ ಗ್ಯಾಸ್ ಏಜೆನ್ಸಿಗಳ ಮುಂದೆ ರಾತ್ರಿಯಿಡೀ ಸರತಿ ಸಾಲಿನಲ್ಲಿ ನಿಲ್ಲುವ ದೃಶ್ಯಗಳು ಕಂಡುಬಂದಿವೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರೂ ಸಹ ಸಿಲಿಂಡರ್ ಪಡೆಯಲು ಮಳೆ, ಗಾಳಿ, ಬಿಸಿಲನ್ನೂ ಲೆಕ್ಕಿಸದೆ ಕಾಯುತ್ತಿದ್ದಾರೆ. ಖಾಲಿ ಸಿಲಿಂಡರ್‌ಗಳನ್ನು ಕಿಲೋಮೀಟರ್‌ಗಟ್ಟಲೆ…

Read More

ಸಿಎಂ, ಡಿಸಿಎಂ ಜೊತೆ ಸಚಿವರ ಜೊತೆ ಶಾಸಕರ ಫೋಟೋಶೂಟ್ ಹೇಗಿತ್ತು ನೋಡಿ!

ಬೆಂಗಳೂರು, ಮಾರ್ಚ್​ 25: ಕರ್ನಾಟಕ ವಿಧಾನಸಭೆಯ ಮುಂಬರುವ ಬಜೆಟ್ 2026ರ ಅಧಿವೇಶನಕ್ಕೆ ಮುನ್ನ, ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಶಾಸಕರ ಸಮೂಹ ಫೋಟೋಶೂಟ್ ಆಯೋಜಿಸಲಾಗಿತ್ತು. ಈ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಶಾಸಕರು ಮತ್ತು ಸಚಿವರು ಭಾಗವಹಿಸಿದರು. ವಿಧಾನಸಭೆಯ ಸದಸ್ಯರು ಒಟ್ಟಾಗಿ ಕ್ಯಾಮರಾ ಮುಂದೆ ನಿಂತು ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿದರು. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More