ಮೊಬೈಲ್ ಕೊಡಲ್ಲ, ನಾನೇ ಸೆಲ್ಫೀ ತೆಗೀತೀನಿ! ಮಹಿಳೆಯ ಫೋನ್ ಕಸಿದ ಮಂಗನ ಕೆಲಸಕ್ಕೆ ನೆಟ್ಟಿಗರು ಫಿದಾ; ವಿಡಿಯೋ ವೈರಲ್!
ಗುಜರಾತ್‌ನ ಪಠಾಣ್ ಜಿಲ್ಲೆಯಲ್ಲಿ ಒಂದು ಕುತೂಹಲಕಾರಿ ಘಟನೆ ನಡೆದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಮೂಲಗಳ ಮಾಹಿತಿಯ ಪ್ರಕಾರ, ಪಠಾಣ್ ಬಳಿಯ ಅಘರ್ ಗ್ರಾಮದಲ್ಲಿ ಮಹಿಳೆಯೊಬ್ಬರು ಮೊಬೈಲ್ ಫೋನ್‌ನೊಂದಿಗೆ ನಿಂತಿದ್ದಾಗ ಇದ್ದಕ್ಕಿದ್ದಂತೆ ಮುಸುವಗಳ (ಕೋತಿಗಳ ಒಂದು ಪ್ರಭೇದ) ಗುಂಪು ಅಲ್ಲಿಗೆ ಬಂದಿದೆ. ಈ ಸಮಯದಲ್ಲಿ, ಒಂದು ಕೋತಿ ಮಹಿಳೆಯ ಕೈಯಿಂದ ಮೊಬೈಲ್ ಫೋನ್ ಕಸಿದುಕೊಂಡಿದೆ. ನಂತರ ನಡೆದ ಘಟನೆ ಅಲ್ಲಿದ್ದ ಜನರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಕೋತಿ ಮೊಬೈಲ್ ಅನ್ನು ಒಂದು ಬದಿಯಲ್ಲಿ ಹಿಡಿದುಕೊಂಡು…