Category Archives: Blog

Your blog category

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾರಾಟ; ಶೀಘ್ರವೇ ಆರ್​​ಸಿಬಿ ಹೆಸರು ಬದಲಾವಣೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾರಾಟ; ಶೀಘ್ರವೇ ಆರ್​​ಸಿಬಿ ಹೆಸರು ಬದಲಾವಣೆ?

ಆದಿತ್ಯ ಬಿರ್ಲಾ ಸಮೂಹ ಸುಮಾರು 16,706 ಕೋಟಿ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರ್ಯಾಂಚೈಸಿಯನ್ನು ಖರೀದಿ ಮಾಡಿದೆ. ಇವರ ಜೊತೆ ಬ್ಲ್ಯಾಕ್‌ಸ್ಟೋನ್ ಇಕ್ವಿಟಿ ಫರ್ಮ್‌, ಅಮೆರಿಕದ ಹೂಡಿಕೆದಾರ ಡೇವಿಡ್‌ ಬ್ಲಿಟ್ಝರ್ ಒಡೆತನದ ಬೋಲ್ಟ್‌ ವೆಂಚರ್ಸ್‌ ಮತ್ತು ಟೈಮ್ಸ್‌ ಆಫ್‌ ಇಂಡಿಯಾ ಮಾಧ್ಯಮ ಸಮೂಹ ಕೂಡ ಖರೀದಿಯಲ್ಲಿ ಕೈ ಜೋಡಿಸಿದೆ. ಈಗ ಆರ್​​ಸಿಬಿ ಹೆಸರು ಬದಲಾವಣೆ ಸಾಧ್ಯತೆ ಬಲವಾಗಿ ಕಾಣಿಸುತ್ತಿದೆ. ಮಾರ್ಚ್ 28ರಂದು ಆರ್​​ಸಿಬಿ ಈ ಸೀಸನ್​​ನ ಮೊದಲ ಪಂದ್ಯ ಆಡಲಿದೆ. ಅದಕ್ಕೂ ಮೊದಲು ಮಾರಾಟ ವಹಿವಾಟು ನಡೆದಿದೆ.

ಆರ್​​ಸಿಬಿ ಒಡೆತನವು ಈ ಮೊದಲು ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ (ಯುಎಸ್‌ಎಲ್‌) ಬಳಿ ಇತ್ತು. ಈ ಕಂಪನಿಯು ಲಂಡನ್ ಮೂಲದ ಯುಕೆ–ಡಿಯಾಜಿಯೊದ ಅಂಗಸಂಸ್ಥೆಯಾಗಿದೆ. ಯುಎಸ್‌ಎಲ್‌ ಮದ್ಯ ತಯಾರಿಕಾ ಕಂಪನಿ. ಹೀಗಾಗಿ, ತಮ್ಮ ವಿಸ್ಕಿ ಬ್ರ್ಯಾಂಡ್ ರಾಯಲ್ ಚಾಲೆಂಜ್ ಅಥವಾ ಆರ್​​ಸಿ ಪ್ರಮೋಷನ್ ಮಾಡುವ ಉದ್ದೇಶದಿಂದ ರಾಯಲ್ ಚಾಲೆಂಜರ್ಸ್ ಎಂದು ತಂಡಕ್ಕೆ ಹೆಸರನ್ನು ಇಟ್ಟಿದ್ದರು ವಿಜಯ್ ಮಲ್ಯ. ಈಗ ಐಪಿಎಲ್ ತಂಡ ಬೇರೆಯವರ ತೆಕ್ಕೆಗೆ ಹೋಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬ ಹೆಸರೇ ಇದ್ದರೆ ಈಗಲೂ ರಾಯಲ್ ಚಾಲೆಂಜ್ ಬ್ರ್ಯಾಂಡ್ ಪ್ರಮೋಷನ್ ಮಾಡಿದಂತೆ ಆಗುತ್ತದೆ. ಈ ಕಾರಣದಿಂದ ಆದಿತ್ಯ ಬಿರ್ಲಾ ಗ್ರೂಪ್ ಹೆಸರು ಬದಲಾವಣೆ ಮಾಡುವ ನಿರ್ಧಾರಕ್ಕೆ ಬರಬಹುದು. ಈ ಮೊದಲು ಸಾಕಷ್ಟು ಐಪಿಎಲ್ ತಂಡಗಳ ಹೆಸರು ಬದಲಾದ ಉದಾಹರಣೆ ಇದೆ. ಸದ್ಯ ಆರ್​​ಸಿಬಿಯ ಪುರುಷ ಹಾಗೂ ಮಹಿಳಾ ತಂಡ ಎರಡನ್ನೂ ಆದಿತ್ಯ ಬಿರ್ಲಾ ಖರೀದಿ ಮಾಡಿದೆ.

ಇದನ್ನೂ ಓದಿ: ಕಾಲ್ತುಳಿತದಲ್ಲಿ ಮೃತಪಟ್ಟ ಅಭಿಮಾನಿಗಳಿಗೆ ಆರ್​ಸಿಬಿಯಿಂದ ವಿಶೇಷ ನಮನ: ವಿಡಿಯೋ ನೋಡಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬುದು ಈಗ ಕೇವಲ ಹೆಸರಾಗಿ ಉಳಿದುಕೊಂಡಿಲ್ಲ, ಅದೊಂದು ಭಾವನೆ ಆಗಿದೆ. ಅದರಲ್ಲೂ ಆರ್​​​ಸಿಬಿ ಎಂಬ ಶಬ್ದಕ್ಕೆ ತೂಕ ಹೆಚ್ಚು. ಮುಂದಿನ ದಿನಗಳಲ್ಲಿ ಆರ್​​​ಸಿಬಿ ಎಂಬ ಶಾರ್ಟ್​ಫಾರ್ಮ್ ಬರುವಂತೆ ಆದಿತ್ಯ ಬಿರ್ಲಾ ಗ್ರೂಪ್ ಹೆಸರನ್ನು ಬದಲಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಈ ಮೊದಲು ಡಿಯಾಜಿಯೊ ತನ್ನ ಹೇಳಿಕೆಯಲ್ಲಿ ಆರ್​​​ಸಿಬಿ ಮಾರಾಟ ವಿಷಯವನ್ನು ಉಲ್ಲೇಖ ಮಾಡಿತ್ತು. ತಮ್ಮ ಕಂಪನಿಗೂ, ಕ್ರಿಕೆಟ್ ಕ್ಷೇತ್ರಕ್ಕೂ ಯಾವುದೇ ಸಂಬಂಧ ಇಲ್ಲದ ಕಾರಣ ಮಾರ್ಚ್ 31ರೊಳಗೆ ತಂಡವನ್ನು ಮಾರುವುದಾಗಿ ಡಿಯಾಜಿಯೊ ಕಳೆದ ನವೆಂಬರ್​​​ನಲ್ಲಿ ಹೇಳಿತ್ತು.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಮೆರಿಕ ಯುದ್ಧ ಗೆದ್ದಿದೆ, ಇರಾನಿನ ನೌಕಾಪಡೆ, ವಾಯುಪಡೆ ಸಂಪೂರ್ಣ ನಾಶವಾಗಿದೆ ಎಂದ ಟ್ರಂಪ್

ವಾಷಿಂಗ್ಟನ್, ಮಾರ್ಚ್ 25: ಪಶ್ಚಿಮ ಏಷ್ಯಾದಲ್ಲಿ ಯುದ್ಧ ಉಲ್ಬಣಗೊಳ್ಳುತ್ತಿದ್ದರೂ, ಡೊನಾಲ್ಡ್​ ಟ್ರಂಪ್(Donald Trump) ಮಾತ್ರ ತಾವೇ ಯುದ್ಧ ಗೆದ್ದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಇರಾನಿನ ನೌಕಾಪಡೆ, ವಾಯುಪಡೆ ಸಂಪೂರ್ಣವಾಗಿ ನಾಶವಾಗಿದೆ ಎಂದರು. ಗೃಹ ಭದ್ರತಾ ಕಾರ್ಯದರ್ಶಿಯ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಟ್ರಂಪ್, ನಾವು ಈಗ ಮಾತುಕತೆ ನಡೆಸುತ್ತಿದ್ದೇವೆ ಇರಾನ್ ಒಪ್ಪಂದ ಮಾಡಿಕೊಳ್ಳಲು ಸಿದ್ಧವಿದೆ.

ಅವರ ನೌಕಾಪಡೆ ಹೋಗಿದೆ, ಅವರ ವಾಯುಪಡೆ ಹೋಗಿದೆ, ಅವರ ಸಂವಹನ ಹೋಗಿದೆ ಅವರ ಶಕ್ತಿ ಬಹುತೇಕ ಕುಸಿದಿದೆ ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ ಜತೆಗಿನ ಶಾಂತಿ ಮಾತುಕತೆಗಳು ಯಶಸ್ವಿಯಾಗುತ್ತೆ ಎನ್ನುವ ನಂಬಿಕೆ ಇದೆ, ನಾವು ಯುದ್ಧ ಕೊನೆಗೊಳಿಸುತ್ತೇವೆ, ಆದರೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಇರಾನ್ ಒಪ್ಪಂದಕ್ಕೆ ಉತ್ಸುಕವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್ ಸ್ವತಃ ಮಾತುಕತೆಗಳನ್ನು ಪ್ರಾರಂಭಿಸಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಇದಕ್ಕೂ ಮೊದಲು, ಮುಂದಿನ ಐದು ದಿನಗಳವರೆಗೆ ಇರಾನಿನ ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಗೆ ಅವರು ನಿಷೇಧ ಹೇರಿದ್ದಾರೆ. ಈ ಸಮಯದಲ್ಲಿ ಒಪ್ಪಂದಕ್ಕೆ ಬರಬಹುದು ಎನ್ನಲಾಗಿದೆ.

ಮತ್ತಷ್ಟು ಓದಿ: ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್; ಇರಾನ್ ಮೇಲಿನ ಯುದ್ಧ, ಹಾರ್ಮುಜ್ ಜಲಸಂಧಿಯ ಬಗ್ಗೆ ಚರ್ಚೆ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಮಾತುಕತೆ ನಡೆಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ, ಮಾತುಕತೆ ಕುರಿತು ಟ್ರಂಪ್ ಅವರ ಹೇಳಿಕೆಯನ್ನು ಇರಾನ್ ವಿದೇಶಾಂಗ ಸಚಿವಾಲಯ ತಿರಸ್ಕರಿಸಿದೆ.

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ದಾಳಿಗಳು ಮುಂದುವರೆದಿದ್ದು, ದಕ್ಷಿಣ ಟೆಹ್ರಾನ್‌ನಲ್ಲಿ ನಡೆದ ಒಂದು ದಾಳಿಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಮತ್ತು 28 ಜನರು ಗಾಯಗೊಂಡಿದ್ದಾರೆ. ಇರಾನ್ ವಾಯು ಪ್ರದೇಶದ ಮೇಲೆ ಅಮೆರಿಕದ ಪಡೆಗಳು ನಿಯಂತ್ರಣ ಹೊಂದಿವೆ.

ನಮ್ಮ ವಿಮಾನಗಳು ಟೆಹ್ರಾನ್ ಮೇಲೆ ಹಾರುತ್ತಿವೆ.ಆದರೆ ಈ ಬಗ್ಗೆ ಅವರಿಗೆ ಏನೂ ಮಾಡಲು ಸಾಧ್ಯವಿಲ್ಲ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇರಾನ್ ಈ ಷರತ್ತಿಗೆ ಒಪ್ಪಿಕೊಂಡಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ಧರ್ಮ ಮತ್ತು ಅಧರ್ಮ ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಧರ್ಮ ಮತ್ತು ಅಧರ್ಮ ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಇಂದು ಅನೇಕರಲ್ಲಿ ಧರ್ಮ ಮತ್ತು ಅಧರ್ಮಗಳಲ್ಲಿ ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ ಎಂಬ ಪ್ರಶ್ನೆ ಕಾಡುತ್ತದೆ. ಶಾರ್ಟ್‌ಕಟ್‌ಗಳ ಮೂಲಕ ಯಶಸ್ಸು ಸಾಧಿಸುವ ಅಧರ್ಮದ ಮಾರ್ಗಗಳು ತಾತ್ಕಾಲಿಕವಾಗಿ ಜಯವನ್ನು ತಂದುಕೊಟ್ಟಂತೆ ಕಂಡರೂ, ಧರ್ಮದ ಹಾದಿಯಲ್ಲಿನ ಕಷ್ಟಗಳು ಸಹಜವಾಗಿ ಕಾಣುತ್ತವೆ. ಸನಾತನ ಧರ್ಮದ ಇತಿಹಾಸವು ಶ್ರೀರಾಮಚಂದ್ರ, ಸತ್ಯ ಹರಿಶ್ಚಂದ್ರ ಮತ್ತು ಧರ್ಮರಾಯರಂತಹ ಮಹನೀಯರು ಧರ್ಮ ಮಾರ್ಗದಲ್ಲಿ ಅನುಭವಿಸಿದ ಕಷ್ಟಗಳನ್ನು ನೆನಪಿಸುತ್ತದೆ. ಆದರೂ, ಅಂತಿಮವಾಗಿ ಧರ್ಮಕ್ಕೇ ಜಯ ಎಂಬುದನ್ನು ಅವರ ಜೀವನ ಚರಿತ್ರೆಗಳು ಸಾಬೀತುಪಡಿಸುತ್ತವೆ. ಅಂತಿಮ ಜಯ ಧರ್ಮಕ್ಕೇ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

 

Source link

Horoscope Today: ಇಂದು ಈ ರಾಶಿಯವರು ಇಂದು ತಾಳ್ಮೆ ಕಳೆದುಕೊಳ್ಳಬೇಡಿ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 25​, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಸಪ್ತಮಿ ತಿಥಿ, ಮೃಗಶಿರಾ ನಕ್ಷತ್ರ, ಸೌಭಾಗ್ಯ ಯೋಗ, ವಣಿಕ ಕರಣಗಳನ್ನು ಒಳಗೊಂಡಿದೆ. ಇಂದು ರವಿ ಮೀನ ರಾಶಿಯಲ್ಲಿ, ಚಂದ್ರ ಮಿಥುನ ರಾಶಿಯಲ್ಲಿ ಸಂಚರಿಸಲಿದ್ದಾರೆ. ಸಂತಾನ ಸಪ್ತಮಿ, ಸೂರ್ಯ ದವನಾರ್ಪಣೆ, ಹಾಗೂ ನವಿಲೆ ಆಂಜನೇಯ ಸ್ವಾಮಿ, ಕಿಕ್ಕೇರಿ ಮಹಾಲಕ್ಷ್ಮಿ, ಸೂರತ್ಕಲ್ ಮಹಮ್ಮಾಯಿ ರಥೋತ್ಸವಗಳ ಪರ್ವ ದಿನವಾಗಿದೆ ಎಂದು ಬಸವರಜ ಗುರೂಜಿ ಹೇಳಿದ್ದಾರೆ.

 

Source link

IPL 2026: ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಮ್ಯಾಚ್, ಮಾರ್ಚ್ 28ಕ್ಕೆ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್

ಬೆಂಗಳೂರು, ಮಾರ್ಚ್ 25: ಮಾರ್ಚ್ 28ಕ್ಕೆ ಐಪಿಎಲ್ (IPL 2026) ಆರಂಭವಾಗಲಿದ್ದು, ಬೆಂಗಳೂರಿನ (Bangalore) ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಎಸ್​ಆರ್​ಎಚ್ ಮಧ್ಯೆ ಮ್ಯಾಚ್ ನಡೆಯಲಿದೆ. ಪಂದ್ಯಕ್ಕೆ ನಗರ ಪೊಲೀಸರು ಭಾರೀ ಭದ್ರತೆ ಒದಗಿಸುತ್ತಿದ್ದು, ಸಂಚಾರ ಸಮಸ್ಯೆ ನಿರ್ವಹಣೆಗೂ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರು ಟ್ರಾಫಿಕ್ ಅಡ್ವೈಸರಿ ಪ್ರಕಟಿಸಿದ್ದು, ಅಭಿಮಾನಿಗಳ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ.

ಕಳೆದ ವರ್ಷದ ಕಾಲ್ತುಳಿತ ಘಟನೆ ಮರುಕಳಿಸದಂತೆ ಈ ಬಾರಿ ಬಿಗಿ ಭದ್ರತೆ, ಎಐ ಕ್ಯಾಮರಾ ಕಣ್ಗಾವಲು, ಹೆಚ್ಚಿನ ಪ್ರವೇಶ ದ್ವಾರಗಳು ಹಾಗೂ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಯಾವ ರಸ್ತೆಗಳಲ್ಲಿ ಸಂಚಾರ ಬಂದ್?

ಮಾರ್ಚ್ 28 ಹಾಗೂ ಏಪ್ರಿಲ್ 5ರಂದು ಕೆಳಗಿನ ರಸ್ತೆಗಳು ಸಂಪೂರ್ಣ ಅಥವಾ ಭಾಗಶಃ ಬಂದ್ ಆಗಲಿವೆ;

  • ಕ್ವೀನ್ಸ್ ರಸ್ತೆ ಸಂಪೂರ್ಣ ನಿರ್ಬಂಧ
  • ಬಾಳೆಕುಂದ್ರಿ ರಸ್ತೆ ಮತ್ತು ಸಿಟಿಓ ಜಂಕ್ಷನ್ ಬಂದ್
  • ಎಂ.ಜಿ ರಸ್ತೆ – ಅನಿಲ್ ಕುಂಬಳೆ ವೃತ್ತದಿಂದ ಜಂಕ್ಷನ್ ವರೆಗೆ ನಿಷೇಧ
  • ಲಿಂಕ್ ರಸ್ತೆ ಮೂಲಕ ಎಂ.ಜಿ ರಸ್ತೆ ಹಾಗೂ ಕಬ್ಬನ್ ರಸ್ತೆ ಸಂಪರ್ಕ ಬಂದ್
  • ರಾಜಭವನ ರಸ್ತೆ, ಟಿ. ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ ನಿಷೇಧ
  • ಸೆಂಟ್ರಲ್ ಸ್ಟ್ರೀಟ್ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧ
  • ಲ್ಯಾವೆಲ್ಲೆ ರಸ್ತೆ – ಕ್ವೀನ್ ವೃತ್ತದಿಂದ ವಿಠ್ಠಲ್ ಮಲ್ಯ ರಸ್ತೆವರೆಗೆ ಬಂದ್
  • ಕಸ್ತೂರಬಾ ರಸ್ತೆ – ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದವರೆಗೆ ಬಂದ್
  • ಸೇಂಟ್ ಮಾರ್ಕ್ಸ್ ರಸ್ತೆ – ಕ್ಯಾಶ್ ಫಾರ್ಮಸಿ ಜಂಕ್ಷನ್‌ನಿಂದ ಅನಿಲ್ ಕುಂಬಳೆ ವೃತ್ತದವರೆಗೆ ನಿಷೇಧ
  • ಕಬ್ಬನ್ ಪಾರ್ಕ್ ಒಳಗಿನ ಕಿಂಗ್ ರಸ್ತೆ ಹಾಗೂ ಪ್ರೆಸ್ ಕ್ಲಬ್ ಮುಂಭಾಗ ಬಂದ್
  • ಬಾಲಭವನ್ ಮುಂಭಾಗ ಫೌಂಟೇನ್ ರಸ್ತೆ ಪಾರ್ಕಿಂಗ್ ನಿಷೇಧ

ಪಾರ್ಕಿಂಗ್ ವ್ಯವಸ್ಥೆ ಎಲ್ಲೆಲ್ಲಿ?

  • ಸೆಂಟ್ ಜೋಸೆಫ್ ಇಂಡಿಯನ್ ಹೈ ಸ್ಕೂಲ್ ಮೈದಾನ
  • ಸೆಂಟ್ ಜೋಸೆಫ್ ಸ್ಕೂಲ್ ಮೈದಾನ
  • ಫ್ರೀಡಂ ಪಾರ್ಕ್ MLCP ಪಾರ್ಕಿಂಗ್
  • ಗರುಡ ಮಾಲ್ ಪಾರ್ಕಿಂಗ್
  • ಶಿವಾಜಿನಗರ ಬಸ್ ನಿಲ್ದಾಣ (1ನೇ ಮಹಡಿ)

ಈ ಸ್ಥಳಗಳಲ್ಲಿ ಬೆಳಿಗ್ಗೆ 11ರಿಂದ ರಾತ್ರಿ 9ರವರೆಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಪ್ರವೇಶ ಮತ್ತು ನಿರ್ಗಮನ ದ್ವಾರಗಳ ವಿವರ

ಪ್ರವೇಶ ದ್ವಾರಗಳು

  • E1, E2, E3, E18, E19, E22
  • E11 ರಿಂದ E17 ವರೆಗೆ

ನಿರ್ಗಮನ ದ್ವಾರಗಳು

  • E5, E8, E9, E9A

ವಿಶೇಷ ಪ್ರವೇಶ

  • E10 ಗೇಟ್ – ಆಟಗಾರರು, ವಿಐಪಿ ಮತ್ತು ಪ್ರಮುಖರಿಗೆ ಮಾತ್ರ

ಕ್ಯಾಬ್ ಪಿಕ್‌ಅಪ್ & ಡ್ರಾಪ್ ಪಾಯಿಂಟ್‌ಗಳು

  • BRV ಗ್ರೌಂಡ್ (ಗೇಟ್ 6)
  • ಮಾಣಿಕ್ ಷಾ ಪರೇಡ್ ಗ್ರೌಂಡ್ (ಗೇಟ್ 3)

ಇತರೆ ಮುಖ ಸೂಚನೆಗಳು

  • ಪ್ರತಿ 3 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸಂಚಾರ
  • ಪಂದ್ಯ ಆರಂಭಕ್ಕೂ 4 ಗಂಟೆಗಳ ಮುಂಚೆಯೇ ಪ್ರವೇಶ
  • ಟಿಕೆಟ್ ಹೊಂದಿರುವವರಿಗೆ ಮಾತ್ರ ಪ್ರವೇಶ (ಆನ್‌ಲೈನ್ ಟಿಕೆಟ್ ಮಾತ್ರ)
  • 500ಕ್ಕೂ ಹೆಚ್ಚು ಸಿಸಿಟಿವಿ ಹಾಗೂ ಎಐ ಕಣ್ಗಾವಲು ವ್ಯವಸ್ಥೆ
  • 9 ಅಂಬ್ಯುಲೆನ್ಸ್ ಮತ್ತು ವೈದ್ಯಕೀಯ ತಂಡ ಸಿದ್ಧ

ಪಂದ್ಯ ದಿನ ಹೆಚ್ಚಿನ ಜನಸಂದಣಿ ಇರುವುದರಿಂದ ಸಾರ್ವಜನಿಕರು ಸಾಧ್ಯವಾದಷ್ಟು ಮೆಟ್ರೋ ಬಳಸಬೇಕು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಟ್ರಾಫಿಕ್ ಸಮಸ್ಯೆ ತಪ್ಪಿಸಲು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಆರ್‌ಸಿಬಿ ಇತಿಹಾಸದಲ್ಲಿ ಹೊಸ ಯುಗ: ಬಿರ್ಲಾ ಗ್ರೂಪ್​​​ಗೆ 16,600 ಕೋಟಿ ರೂ.ಗೆ ಮಾರಾಟವಾಯ್ತು ಬೆಂಗಳೂರು ತಂಡ!

ಒಟ್ಟಿನಲ್ಲಿ, ಈ ಬಾರಿ ಐಪಿಎಲ್ ಪಂದ್ಯವನ್ನು ಸುರಕ್ಷಿತವಾಗಿ ಹಾಗೂ ಸುಗಮವಾಗಿ ನಡೆಸಲು ಪೊಲೀಸರು ಮತ್ತು ಆಯೋಜಕರು ವ್ಯಾಪಕ ಸಿದ್ಧತೆ ಕೈಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರು ದಿನಕ್ಕೆ 900 ಕೋಟಿ ಗಳಿಸಿದ ‘ಧುರಂಧರ್ 2’; ಆದರೂ, ಒಂದು ವಿಷಯದಲ್ಲಿ ಚಿತ್ರಕ್ಕೆ ಸೋಲು

‘ಧುರಂಧರ್ 2’ ಸಿನಿಮಾ (Dhurandhar 2 Movie) ಬಾಕ್ಸ್ ಆಫೀಸ್​​ನಲ್ಲಿ ಊಹೆಗೂ ಮೀರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾದ ಒಟ್ಟಾರೆ ಕಲೆಕ್ಷನ್ ವಿಶ್ವಮಟ್ಟದಲ್ಲಿ ಬರೋಬ್ಬರಿ 900 ಕೋಟಿ ರೂಪಾಯಿ ಆಗಿದೆ. ಅದು ಕೂಡ ಕೇವಲ ಆರು ದಿನಗಳಲ್ಲಿ. ಈ ಸಿನಿಮಾ ಅರಬ್ ರಾಷ್ಟ್ರಗಳಲ್ಲಿ ಬ್ಯಾನ್ ಆಗಿದೆ. ಆದಾಗ್ಯೂ ಸಿನಿಮಾದ ಗಳಿಕೆಗೆ ಯಾವುದೇ ತೊಂದರೆ ಆಗಿಲ್ಲ. ಆದರೆ, ಒಂದು ವಿಷಯದಲ್ಲಿ ‘ಧುರಂಧರ್ 2’ ಸೋತು ಹೋಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹಾಗಾದರೆ ಅದು ಯಾವ ವಿಷಯದಲ್ಲಿ? ಆ ಬಗ್ಗೆ ಇಲ್ಲಿದೆ ವಿವರ.

‘ಧುರಂಧರ್ 2’ ಸಿನಿಮಾನ ಆದಿತ್ಯಧಾರ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ರಣವೀರ್ ಸಿಂಗ್ ಹೀರೋ. ಸಾರಾ ಅರ್ಜುನ್ ಚಿತ್ರದ ನಾಯಕಿ. ‘ಧುರಂಧರ್’ ಸಿನಿಮಾ ರಿಲೀಸ್​​ಗೂ ಮೊದಲೇ ಸಾಕಷ್ಟು ನೆಗೆಟಿವ್ ಪಡೆದುಕೊಂಡಿತು. ಆದರೆ, ಸಿನಿಮಾ ಗೆಲ್ಲುವಲ್ಲಿ ಯಶಸ್ವಿ ಆಯಿತು. ಮೊದಲ ಭಾಗದ ಕಲೆಕ್ಷನ್ 1300 ಕೋಟಿ ರೂಪಾಯಿ. ಈಗ ಚಿತ್ರದ ಸೀಕ್ವೆಲ್ ಆರೇ ದಿನಕ್ಕೆ 900 ಕೋಟಿ ರೂಪಾಯಿ ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ಮೊದಲ ಭಾಗದ ಕಲೆಕ್ಷನ್ ಹಿಂದಿಕ್ಕಲಿದೆ.

‘ಧುರಂಧರ್ 2’ ಸಿನಿಮಾದ ಭಾರತದ ಗ್ರಾಸ್ ಕಲೆಕ್ಷನ್ 600 ಕೋಟಿ ರೂಪಾಯಿ ದಾಟಿದೆ. ಹಿಂದಿ ಚಿತ್ರವೊಂದು ಈ ಮಟ್ಟದಲ್ಲಿ ಗಳಿಕೆ ಮಾಡುತ್ತಿರುವುದು ಇದೇ ಮೊದಲು. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ಸತತ ಸೋಲುಗಳಿಂದ ಕಂಗಾಲಾಗಿದ್ದ ಬಾಲಿವುಡ್​​ಗೆ ಈ ಸಿನಿಮಾ ಮೂಲಕ ಒಂದು ದೊಡ್ಡ ಚೇತರಿಕೆ ಸಿಕ್ಕಿದೆ.

ಇದನ್ನೂ ಓದಿ: ‘ಧುರಂಧರ್ 2’ ಚಿತ್ರಕ್ಕೆ ಸಂಕಷ್ಟ: ಆ ಒಂದು ದೃಶ್ಯದಿಂದ ಸಿಖ್ ಧರ್ಮದ ಭಾವನೆಗೆ ಧಕ್ಕೆ

ಆದರೆ, ‘ಧುರಂಧರ್ 2’ ಸಿನಿಮಾ ಒಂದು ವಿಷಯದಲ್ಲಿ ಸೋತಿದೆ. ಅದು ಯಾವ ವಿಷಯ ಅನ್ನುತ್ತೀರಾ? ಸ್ಥಳೀಯ ಭಾಷೆಗಳಲ್ಲಿ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿಲ್ಲ. ಹೌದು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗೆ ಡಬ್ ಆದ ವರ್ಷನ್​​ಗಳು ಪ್ರಭಾವ ಬೀರಲು ವಿಫಲವಾಗಿವೆ. ಕನ್ನಡ ವರ್ಷನ್ ರಿಲೀಸ್ ನಾನಾಕಾರಣದಿಂದ ಮುಂದಕ್ಕೆ ಹೋಗಿತ್ತು. ಇತ್ತೀಚೆಗಷ್ಟೇ ಸಿನಿಮಾ ರಿಲೀಸ್ ಆಗಿದೆ. ಇದು ಕೂಡ ಹೆಚ್ಚು ಜನರನ್ನು ತಲುಪದೆ ಇರಲು ಕಾರಣ ಆಗಿರಬಹುದು ಎಂದು ಊಹಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಳಗಾವಿ, ಹಾವೇರಿಯಲ್ಲಿ ಧಾರಾಕಾರ ಮಳೆ: ನದಿಯಂತಾದ ರಸ್ತೆಗಳು, ಬೈಕ್​ಗಳು ಮುಳುಗಡೆ

ಬೆಳಗಾವಿ, ಹಾವೇರಿ, ಮಾರ್ಚ್ 25: ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬೆಳಗಾವಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಡೇಬಜಾರ್ ಮಾರುಕಟ್ಟೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಏಕಾಏಕಿ ಬಂದ ಮಳೆಯಿಂದಾಗಿ ರಸ್ತೆಬದಿ ವ್ಯಾಪಾರ ಮಾಡುತ್ತಿದ್ದ ತರಕಾರಿ ವ್ಯಾಪಾರಸ್ಥರು ತರಕಾರಿಗಳನ್ನು ಬಿಟ್ಟು ಮನೆಗೆ ತೆರಳಬೇಕಾಯಿತು. ಪೋರ್ಟ್ ರಸ್ತೆಯಲ್ಲಿನ ಅಂಗಡಿಗಳಿಗೂ ಚರಂಡಿ ನೀರು ನುಗ್ಗಿದ್ದು, ವ್ಯಾಪಾರಸ್ಥರು ಪರದಾಡಿದ್ದಾರೆ. ನಗರದ ರಸ್ತೆಗಳು ನದಿಯಂತೆ ಮಾರ್ಪಟ್ಟಿದ್ದು, ಹಲವು ಬೈಕ್​ಗಳು ಮುಳುಗಡೆಯಾಗಿವೆ. ಅಕಾಲಿಕ ಮಳೆಯಿಂದ ಬೆಳಗಾವಿ ನಗರ ನಿವಾಸಿಗಳು ತೀವ್ರ ತೊಂದರೆಗೊಳಗಾಗಿದ್ದಾರೆ.

ಇದೇ ರೀತಿ, ಹಾವೇರಿ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಭಾರಿ ಅನಾಹುತಕ್ಕೆ ಕಾರಣವಾಗಿದೆ. ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಮಳೆಯ ರಭಸಕ್ಕೆ ಸಂತೆಯಲ್ಲಿದ್ದ ಬದನೆಕಾಯಿ, ಟೊಮ್ಯಾಟೊ ಸೇರಿದಂತೆ ಹಲವು ತರಕಾರಿಗಳು ಕೊಚ್ಚಿ ಹೋಗಿ ನಾಶವಾಗಿವೆ. ರಸ್ತೆಗಳಲ್ಲಿ ನೀರು ತುಂಬಿಕೊಂಡ ಕಾರಣ ವಾಹನ ಸವಾರರು ಮತ್ತು ತರಕಾರಿ ವ್ಯಾಪಾರಸ್ಥರು ತಮ್ಮ ಸರಕುಗಳನ್ನು ರಕ್ಷಿಸಲು ಪರದಾಡಬೇಕಾಯಿತು. ಮಳೆಯಿಂದಾಗಿ ಹಾವೇರಿಯಲ್ಲಿಯೂ ಜನಜೀವನಕ್ಕೆ ಅಡ್ಡಿಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 25ರ ದಿನಭವಿಷ್ಯ

ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 25ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮ ನಿಯಂತ್ರಣದಲ್ಲಿ ಇರುವಂಥ ವಿಷಯಗಳನ್ನು ಮಾತ್ರ ಕಾಳಜಿ ಮಾಡಿ. ಕೈ ಅಳತೆ ಮೀರಿದ ವಿಚಾರಗಳ ತಲೆ ಕೆಡಿಸಿಕೊಳ್ಳಬೇಡಿ. ನೀವು ಸಮಸ್ಯೆಗಳು ಅಂತ ಏನನ್ನು ಅಂದುಕೊಂಡಿರುತ್ತೀರೋ ವಾಸ್ತವಕ್ಕಿಂತ ಹೆಚ್ಚು ಉತ್ಪ್ರೇಕ್ಷೆ ಮಾಡಿಕೊಳ್ಳುತ್ತಿದ್ದೀರಿ ಎಂಬುದು ಗಮನಕ್ಕೆ ಬರಲಿದೆ. ಮದುವೆಗೆ ಪ್ರಯತ್ನಿಸುತ್ತಿರುವ ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧಗಳ ರೆಫರೆನ್ಸ್ ದೊರೆಯಲಿದೆ. ದುಡ್ಡಿನ ಖರ್ಚು ಮಾಡುವಾಗ ಯಾವ ಉದ್ದೇಶಕ್ಕೆ ಮಾಡುತ್ತಿದ್ದೀರಿ ಎಂಬ ಸ್ಪಷ್ಟತೆ ಇರಲಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಇತರರು ನಿಮಗೆ ನೀಡುವ ಗೌರವವನ್ನು ಸಾಧನೆ ಎಂದುಕೊಳ್ಳುವ ಮುನ್ನ ಅದರಿಂದ ನಿಮ್ಮ ಮೇಲೆ ಆಗುವ ಪ್ರಭಾವ ಏನು ಎಂಬುದನ್ನು ಆಲೋಚಿಸಿ. ಈ ದಿನ ಸಾಧ್ಯವಾದಷ್ಟೂ ಕೋಪವನ್ನು ಮಾಡಿಕೊಳ್ಳಬೇಡಿ ಹಾಗೂ ಅಹಂಕಾರ ನಿಮ್ಮ ತಲೆಗೆ ಏರದಂತೆ ನೋಡಿಕೊಳ್ಳಿ. ಈ ಎರಡೂ ನೋಡಿಕೊಂಡರೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ದೇವತಾ ಕಾರ್ಯಗಳಿಗಾಗಿ ಸ್ನೇಹಿತರು- ಸಂಬಂಧಿಗಳ ಮನೆಗೆ ಆಹ್ವಾನ ಬರಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಈ ದಿನ ನಿಮ್ಮ ಮಾತು ಮತ್ತು ನಿರ್ಧಾರಗಳು ಉದ್ಯೋಗ ಸ್ಥಳದಲ್ಲಿ ಆಗಬೇಕಾದ ಕೆಲಸದ ಗತಿಯನ್ನೇ ಬದಲಿಸಲಿದೆ. ವ್ಯಾಪಾರ- ವ್ಯವಹಾರ ಅಂತ ಬಂದಲ್ಲಿ ಭವಿಷ್ಯವನ್ನು ಗಮನ ಇಟ್ಟುಕೊಂಡು ಜಾಣ್ಮೆಯಿಂದ ಮಾತನಾಡಿ. ಸಹೋದ್ಯೋಗಿಗಳು ಸಹ ನಿಮ್ಮ ಅಭಿಪ್ರಾಯಕ್ಕೆ ಸಮ್ಮತ ನೀಡುವ ಸಾಧ್ಯತೆಯಿದೆ. ಹಣಕಾಸಿನ ನಿರ್ಧಾರಗಳಲ್ಲಿ ಸಂಯಮದಿಂದ ವರ್ತಿಸಿದರೆ ಲಾಭ ತಂದು ಕೊಡಲಿದೆ. ಕುಟುಂಬ ಸದಸ್ಯರಿಗೆ ನೀವು ನೀಡುವ ಬೆಂಬಲ ಬಹಳ ಮುಖ್ಯವಾಗುತ್ತದೆ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 25ರ ದಿನಭವಿಷ್ಯ

ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 25ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನೀವು ಇತರರ ಜೊತೆಗೆ ಸ್ಪರ್ಧಿಸಬೇಕಿಲ್ಲ, ಆದರೆ ನಿಮ್ಮ ಸ್ಪರ್ಧೆ ಇರುವುದು ಈ ಹಿಂದೆ ಮಾಡಿದ ತಪ್ಪುಗಳಿಂದ ಆಚೆ ಬರುವುದರಲ್ಲಿ, ನಿರ್ಧಾರ ಮಾಡಿದಂತೆಯೇ ಬದುಕುವುದರಲ್ಲಿ ಎಂಬ ವಿಷಯ ಈ ದಿನ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ನೀವು ಯಾವುದೇ ಕ್ಷೇತ್ರಕ್ಕೆ ಸಂಬಂಧಪಟ್ಟವರೇ ಆಗಿದ್ದರೂ ಹೆಚ್ಚಿನ ಶ್ರಮವನ್ನು ಹಾಕಲೇಬೇಕಾಗುತ್ತದೆ. ದಂಪತಿಗಳು- ಪ್ರೀತಿ, ಪ್ರೇಮದಲ್ಲಿ ಇರುವವರು ನಿಮ್ಮ ಒಳಗಿನ ಪ್ರೀತಿಯನ್ನು ಸಾಬೀತು ಮಾಡುವುದಕ್ಕೆ ಅಂತಲೇ ಹೆಚ್ಚು ಸಮಯವನ್ನು ಮೀಸಲಿಡುತ್ತೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಉದ್ಯಮಿಗಳಿಗೆ ಹಾಗೂ ಉದ್ಯೋಗಿಗಳಿಗೆ ಬಹಳ ಉತ್ತಮವಾದ ದಿನ ಇದಾಗಿರುತ್ತದೆ. ನಿಮ್ಮ ಯೋಜನೆಗಳು ಹಾಗೂ ಅದನ್ನು ಅನುಷ್ಠಾನಕ್ಕೆ ತರುವುದಕ್ಕೆ ಏನು ಮಾಡಬೇಕು ಎಂಬುದನ್ನು ಹೇಳುವ ರೀತಿ ಎಲ್ಲರನ್ನೂ ಆಕರ್ಷಿಸುತ್ತದೆ. ನಿಮ್ಮ ಜಡ್ಜ್ ಮೆಂಟ್ ಬಹಳ ಚೆನ್ನಾಗಿರುತ್ತದೆ. ಆದ್ದರಿಂದ ಅನಿಸಿದ್ದನ್ನು ಹೇಳುವುದಕ್ಕೆ ಹಿಂಜರಿಕೆ ಬೇಡ. ಷೇರು ಮಾರುಕಟ್ಟೆ- ಮ್ಯೂಚುವಲ್ ಫಂಡ್ ಇಂಥದ್ದರಲ್ಲಿ ಈ ಹಿಂದೆ ಯಾವಾಗಲೋ ನೀವು ಮಾಡಿದ್ದ ಸಣ್ಣ ಹೂಡಿಕೆ ಒಳ್ಳೆ ಲಾಭ ತಂದುಕೊಡಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಮನೆಯಲ್ಲಿನ ವಾತಾವರಣ ಪ್ರಶಾಂತವಾಗಿ ಇರುವಂತೆ ನೋಡಿಕೊಳ್ಳಿ. ನೀವು ಪ್ರೀತಿಸುವವರು ಏನು ಹೇಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೋ ಅದನ್ನು ಅರ್ಥ ಮಾಡಿಕೊಂಡಲ್ಲಿ ಸಂಬಂಧ ಗಾಢವಾಗುತ್ತದೆ- ಪರಸ್ಪರ ವಿಶ್ವಾಸ ಹೆಚ್ಚಾಗುತ್ತದೆ. ಸೂರ್ಯನ ಬೆಳಕಲ್ಲಿ ಸ್ವಲ್ಪವಾದರೂ ಸಮಯವನ್ನು ಕಳೆಯಿರಿ. ಉದ್ಯೋಗ ಸ್ಥಳದಲ್ಲಿ ತೋರಿದ ಬುದ್ಧಿವಂತಿಕೆಗೆ ಗೌರವವನ್ನು ಪಡೆಯಲಿದ್ದೀರಿ. ಬೇರೆಯವರು ಮಾಡಿದ ತಪ್ಪನ್ನು ದೊಡ್ಡದು ಮಾಡುವುದಕ್ಕೆ ಹೋಗಬೇಡಿ. ಇತರರ ಮಿತಿಯನ್ನು ಅರಿತು, ಕ್ಷಮಿಸಿ- ನಿಮ್ಮಿಂದ ಸಾಧ್ಯವಾಗುವ ಸಹಾಯ ಮಾಡುವುದಕ್ಕೆ ಪ್ರಯತ್ನಿಸಿ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 25ರ ದಿನಭವಿಷ್ಯ

ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 25ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮ ಸಂಗಾತಿಯ ಬಗ್ಗೆ ಇರುವಂಥ ಕಾಳಜಿಯನ್ನು ವ್ಯಕ್ತಿಪಡಿಸುವಾಗ ಅದು ಪೊಸೆಸಿವ್ ನೆಸ್ ಅನಿಸದಂತೆ ನೋಡಿಕೊಳ್ಳಿ. ಬಾಯಿರುಚಿಗೆ ಬಿದ್ದು, ಅಧಿಕ ಪ್ರಮಾಣದ ಆಹಾರ ಸೇವನೆ ಮಾಡುವುದಕ್ಕೆ ಹೋಗಬೇಡಿ. ದೇಹದ ತೂಕ ಮತ್ತು ನಿಮ್ಮ ಆರೋಗ್ಯ ಪರಿಸ್ಥಿತಿಯ ಕಡೆಗೂ ಲಕ್ಷ್ಯವನ್ನು ನೀಡಿ. ಅಧ್ಯಾತ್ಮದ ಕಡೆಗೆ ಮನಸ್ಸು ವಾಲಲಿದೆ. ಮೌನ- ಧ್ಯಾನಕ್ಕೆ ಒತ್ತು ನೀಡಲಿದ್ದೀರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರುವಂಥ ಹಾಗೂ ಒಳಿತು ಆಗುವಂಥ ಹೊಸ ವಿಚಾರಗಳನ್ನು ಹೊಸ ಜನರು ತೆಗೆದುಕೊಂಡು ಬರಲಿದ್ದಾರೆ. ಇಷ್ಟು ಸಮಯ ನಿಮ್ಮ ಮಾತನ್ನು ಯಾರು ಕೇಳಿಸಿಕೊಳ್ಳುತ್ತಾರೆ ಅಂತೇನಾದರೂ ನೀವು ಅಂದುಕೊಳ್ಳುತ್ತಾ ಇದ್ದಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರೆಯಲಿದೆ. ಇಂಥ ಸಂದರ್ಭದಲ್ಲಿ ನೀವು ಮಾತನಾಡುವ ವಿಷಯ ಹಾಗೂ ಬಳಸುವ ಪದಗಳ ಕಡೆಗೆ ಗಮನವನ್ನು ನೀಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಕೆಲಸಗಳು ನಿಧಾನ ಗತಿಯಲ್ಲಿಯೇ ಸಾಗಿದರೂ ಫಲಗಳು ಉತ್ತಮ ರೀತಿಯಲ್ಲಿ ದೊರೆಯಲಿದೆ. ಆರ್ಥಿಕ ವಿಷಯಗಳಲ್ಲಿ ನಿಮ್ಮ ಬುದ್ಧಿವಂತಿಕೆ ನಿರ್ಧಾರಗಳು ಭವಿಷ್ಯದಲ್ಲಿ ದೊಡ್ಡ ಅನುಕೂಲಕ್ಕೆ- ಲಾಭಕ್ಕೆ ಕಾರಣ ಆಗಲಿವೆ. ನಿಮ್ಮ ಸಹನೆ ಹಾಗೂ ಎಷ್ಟು ಮಾತನಾಡಬೇಕೋ ಅಷ್ಟನ್ನು ಮಾತ್ರ ಮಾತನಾಡುವ ರೀತಿಯಿಂದಾಗಿ ಕುಟುಂಬದಲ್ಲಿ ನೆಮ್ಮದಿ ನೆಲೆಸಿರುತ್ತದೆ. ಎಲ್ಲರ ಬಗ್ಗೆ ನೀವು ತೋರುವ ಗೌರವ ಹಾಗೂ ತೆಗೆದುಕೊಳ್ಳುವ ಕಾಳಜಿಯಿಂದ ಇತರರಿಗೆ ನಿಮ್ಮ ಮೇಲೆ ಪ್ರೀತಿ- ಗೌರವ ಹೆಚ್ಚಿಸುತ್ತದೆ.

ಲೇಖನ- ಸ್ವಾತಿ ಎನ್.ಕೆ.

Source link