IPL 2026: ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಮ್ಯಾಚ್, ಮಾರ್ಚ್ 28ಕ್ಕೆ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್

IPL 2026: ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಮ್ಯಾಚ್, ಮಾರ್ಚ್ 28ಕ್ಕೆ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್

ಬೆಂಗಳೂರು, ಮಾರ್ಚ್ 25: ಮಾರ್ಚ್ 28ಕ್ಕೆ ಐಪಿಎಲ್ (IPL 2026) ಆರಂಭವಾಗಲಿದ್ದು, ಬೆಂಗಳೂರಿನ (Bangalore) ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಎಸ್​ಆರ್​ಎಚ್ ಮಧ್ಯೆ ಮ್ಯಾಚ್ ನಡೆಯಲಿದೆ. ಪಂದ್ಯಕ್ಕೆ ನಗರ ಪೊಲೀಸರು ಭಾರೀ ಭದ್ರತೆ ಒದಗಿಸುತ್ತಿದ್ದು, ಸಂಚಾರ ಸಮಸ್ಯೆ ನಿರ್ವಹಣೆಗೂ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರು ಟ್ರಾಫಿಕ್ ಅಡ್ವೈಸರಿ ಪ್ರಕಟಿಸಿದ್ದು, ಅಭಿಮಾನಿಗಳ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ.

ಕಳೆದ ವರ್ಷದ ಕಾಲ್ತುಳಿತ ಘಟನೆ ಮರುಕಳಿಸದಂತೆ ಈ ಬಾರಿ ಬಿಗಿ ಭದ್ರತೆ, ಎಐ ಕ್ಯಾಮರಾ ಕಣ್ಗಾವಲು, ಹೆಚ್ಚಿನ ಪ್ರವೇಶ ದ್ವಾರಗಳು ಹಾಗೂ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಯಾವ ರಸ್ತೆಗಳಲ್ಲಿ ಸಂಚಾರ ಬಂದ್?

ಮಾರ್ಚ್ 28 ಹಾಗೂ ಏಪ್ರಿಲ್ 5ರಂದು ಕೆಳಗಿನ ರಸ್ತೆಗಳು ಸಂಪೂರ್ಣ ಅಥವಾ ಭಾಗಶಃ ಬಂದ್ ಆಗಲಿವೆ;

  • ಕ್ವೀನ್ಸ್ ರಸ್ತೆ ಸಂಪೂರ್ಣ ನಿರ್ಬಂಧ
  • ಬಾಳೆಕುಂದ್ರಿ ರಸ್ತೆ ಮತ್ತು ಸಿಟಿಓ ಜಂಕ್ಷನ್ ಬಂದ್
  • ಎಂ.ಜಿ ರಸ್ತೆ – ಅನಿಲ್ ಕುಂಬಳೆ ವೃತ್ತದಿಂದ ಜಂಕ್ಷನ್ ವರೆಗೆ ನಿಷೇಧ
  • ಲಿಂಕ್ ರಸ್ತೆ ಮೂಲಕ ಎಂ.ಜಿ ರಸ್ತೆ ಹಾಗೂ ಕಬ್ಬನ್ ರಸ್ತೆ ಸಂಪರ್ಕ ಬಂದ್
  • ರಾಜಭವನ ರಸ್ತೆ, ಟಿ. ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ ನಿಷೇಧ
  • ಸೆಂಟ್ರಲ್ ಸ್ಟ್ರೀಟ್ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧ
  • ಲ್ಯಾವೆಲ್ಲೆ ರಸ್ತೆ – ಕ್ವೀನ್ ವೃತ್ತದಿಂದ ವಿಠ್ಠಲ್ ಮಲ್ಯ ರಸ್ತೆವರೆಗೆ ಬಂದ್
  • ಕಸ್ತೂರಬಾ ರಸ್ತೆ – ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದವರೆಗೆ ಬಂದ್
  • ಸೇಂಟ್ ಮಾರ್ಕ್ಸ್ ರಸ್ತೆ – ಕ್ಯಾಶ್ ಫಾರ್ಮಸಿ ಜಂಕ್ಷನ್‌ನಿಂದ ಅನಿಲ್ ಕುಂಬಳೆ ವೃತ್ತದವರೆಗೆ ನಿಷೇಧ
  • ಕಬ್ಬನ್ ಪಾರ್ಕ್ ಒಳಗಿನ ಕಿಂಗ್ ರಸ್ತೆ ಹಾಗೂ ಪ್ರೆಸ್ ಕ್ಲಬ್ ಮುಂಭಾಗ ಬಂದ್
  • ಬಾಲಭವನ್ ಮುಂಭಾಗ ಫೌಂಟೇನ್ ರಸ್ತೆ ಪಾರ್ಕಿಂಗ್ ನಿಷೇಧ

ಪಾರ್ಕಿಂಗ್ ವ್ಯವಸ್ಥೆ ಎಲ್ಲೆಲ್ಲಿ?

  • ಸೆಂಟ್ ಜೋಸೆಫ್ ಇಂಡಿಯನ್ ಹೈ ಸ್ಕೂಲ್ ಮೈದಾನ
  • ಸೆಂಟ್ ಜೋಸೆಫ್ ಸ್ಕೂಲ್ ಮೈದಾನ
  • ಫ್ರೀಡಂ ಪಾರ್ಕ್ MLCP ಪಾರ್ಕಿಂಗ್
  • ಗರುಡ ಮಾಲ್ ಪಾರ್ಕಿಂಗ್
  • ಶಿವಾಜಿನಗರ ಬಸ್ ನಿಲ್ದಾಣ (1ನೇ ಮಹಡಿ)

ಈ ಸ್ಥಳಗಳಲ್ಲಿ ಬೆಳಿಗ್ಗೆ 11ರಿಂದ ರಾತ್ರಿ 9ರವರೆಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಪ್ರವೇಶ ಮತ್ತು ನಿರ್ಗಮನ ದ್ವಾರಗಳ ವಿವರ

ಪ್ರವೇಶ ದ್ವಾರಗಳು

  • E1, E2, E3, E18, E19, E22
  • E11 ರಿಂದ E17 ವರೆಗೆ

ನಿರ್ಗಮನ ದ್ವಾರಗಳು

  • E5, E8, E9, E9A

ವಿಶೇಷ ಪ್ರವೇಶ

  • E10 ಗೇಟ್ – ಆಟಗಾರರು, ವಿಐಪಿ ಮತ್ತು ಪ್ರಮುಖರಿಗೆ ಮಾತ್ರ

ಕ್ಯಾಬ್ ಪಿಕ್‌ಅಪ್ & ಡ್ರಾಪ್ ಪಾಯಿಂಟ್‌ಗಳು

  • BRV ಗ್ರೌಂಡ್ (ಗೇಟ್ 6)
  • ಮಾಣಿಕ್ ಷಾ ಪರೇಡ್ ಗ್ರೌಂಡ್ (ಗೇಟ್ 3)

ಇತರೆ ಮುಖ ಸೂಚನೆಗಳು

  • ಪ್ರತಿ 3 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸಂಚಾರ
  • ಪಂದ್ಯ ಆರಂಭಕ್ಕೂ 4 ಗಂಟೆಗಳ ಮುಂಚೆಯೇ ಪ್ರವೇಶ
  • ಟಿಕೆಟ್ ಹೊಂದಿರುವವರಿಗೆ ಮಾತ್ರ ಪ್ರವೇಶ (ಆನ್‌ಲೈನ್ ಟಿಕೆಟ್ ಮಾತ್ರ)
  • 500ಕ್ಕೂ ಹೆಚ್ಚು ಸಿಸಿಟಿವಿ ಹಾಗೂ ಎಐ ಕಣ್ಗಾವಲು ವ್ಯವಸ್ಥೆ
  • 9 ಅಂಬ್ಯುಲೆನ್ಸ್ ಮತ್ತು ವೈದ್ಯಕೀಯ ತಂಡ ಸಿದ್ಧ

ಪಂದ್ಯ ದಿನ ಹೆಚ್ಚಿನ ಜನಸಂದಣಿ ಇರುವುದರಿಂದ ಸಾರ್ವಜನಿಕರು ಸಾಧ್ಯವಾದಷ್ಟು ಮೆಟ್ರೋ ಬಳಸಬೇಕು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಟ್ರಾಫಿಕ್ ಸಮಸ್ಯೆ ತಪ್ಪಿಸಲು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಆರ್‌ಸಿಬಿ ಇತಿಹಾಸದಲ್ಲಿ ಹೊಸ ಯುಗ: ಬಿರ್ಲಾ ಗ್ರೂಪ್​​​ಗೆ 16,600 ಕೋಟಿ ರೂ.ಗೆ ಮಾರಾಟವಾಯ್ತು ಬೆಂಗಳೂರು ತಂಡ!

ಒಟ್ಟಿನಲ್ಲಿ, ಈ ಬಾರಿ ಐಪಿಎಲ್ ಪಂದ್ಯವನ್ನು ಸುರಕ್ಷಿತವಾಗಿ ಹಾಗೂ ಸುಗಮವಾಗಿ ನಡೆಸಲು ಪೊಲೀಸರು ಮತ್ತು ಆಯೋಜಕರು ವ್ಯಾಪಕ ಸಿದ್ಧತೆ ಕೈಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *