Category Archives: Blog

Your blog category

ಹಸೆಮಣೆ ಏರಲಿದ್ದಾರೆ ಶರ್ಮಿಳಾ ಮಾಂಡ್ರೆ, ವರ ತಮಿಳು ಸಿನಿಮಾ ನಿರ್ಮಾಪಕ – Kannada News | Sharmila Mandre getting married to Tamil movie producer Sudhan

ಕನ್ನಡದ ಜನಪ್ರಿಯ ನಟಿ ಶರ್ಮಿಳಾ ಮಾಂಡ್ರೆ (Sharmila Mandre) ಮದುವೆ ಆಗಲಿದ್ದಾರೆ. ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ನಟಿಸಿರುವ ಶರ್ಮಿಳಾ ಮಾಂಡ್ರೆ ಇದೀಗ ತಮಿಳುನಾಡಿನ ಸೊಸೆ ಆಗಲಿದ್ದಾರೆ. ಶರ್ಮಿಳಾ ಮಾಂಡ್ರೆ ಅವರ ನಿಶ್ಚಿತಾರ್ಥ ನಿಶ್ಚಯವಾಗಿದ್ದು, ಇದೇ ತಿಂಗಳ 25ನೇ ತಾರೀಖಿನಂದು ಕುಟುಂಬಸ್ಥರ ಸಮ್ಮುಖದಲ್ಲಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ ನಡೆಯಲಿದೆ.

ಶರ್ಮಿಳಾ ಮಾಂಡ್ರೆ ಅವರು ತಮಿಳುನಾಡಿನ ಸೊಸೆಯಾಗಿ ಹೋಗಲಿದ್ದು, ತಮಿಳು ಚಿತ್ರರಂಗದ ನಿರ್ಮಾಪಕ ಸುಧನ್ ಸುಂಧರಮ್ ಅವರ ಕೈ ಹಿಡಿಯಲಿದ್ದಾರೆ. ಸುಧನ್ ಅವರು ಕೆಲ ವರ್ಷಗಳ ಹಿಂದೆ ಬಿಡುಗಡೆ ಆಗ ಬ್ಲಾಕ್ ಬಸ್ಟರ್ ಸಿನಿಮಾ ‘ಮಹಾರಾಜ’ದ ನಿರ್ಮಾಪಕ ಆಗಿದ್ದಾರೆ. ‘ಮಹಾರಾಜ’ ಮಾತ್ರವಲ್ಲದೆ ಇತ್ತೀಚೆಗೆ ಸೂಪರ್ ಹಿಟ್ ಆದ ತಮಿಳು ಸಿನಿಮಾ ‘ತಾಕ್ ಕಿಳವಿ’ಗೂ ಇವರು ಸಹ ನಿರ್ಮಾಪಕರು. ಕೆಲವೇ ದಿನಗಳಲ್ಲಿ ಇವರ ನಿಶ್ಚಿತಾರ್ಥ ನಡೆಯಲಿದ್ದು, ಮದುವೆ ಸಹ ಇದೇ ವರ್ಷದಲ್ಲಿ ನೆರವೇರಲಿದೆ.

ಸುಧನ್ ಅವರು ಪ್ಯಾಷನ್ ಸ್ಟುಡಿಯೋಸ್ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದು, ಸಿನಿಮಾ ನಿರ್ಮಾಣ ಮತ್ತು ವಿತರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಮಹಾರಾಜ’ ಮಾತ್ರವಲ್ಲದೆ, ತಮಿಳಿನ ‘ಬೆಂಜ್’, ‘ಇರೈವನ್’, ಇನ್ನೂ ಕೆಲ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇದೀಗ ನಟಿ ಶರ್ಮಿಳಾ ಮಾಂಡ್ರೆ ಅವರನ್ನು ವಿವಾಹವಾಗುತ್ತಿದ್ದಾರೆ.

ಇದನ್ನೂ ಓದಿ:ಲೈವ್ ಮ್ಯೂಸಿಕ್ ಶೋ ಎಂಜಾಯ್ ಮಾಡಿದ ನಟಿ ಶರ್ಮಿಳಾ ಮಾಂಡ್ರೆ

2007 ರಲ್ಲಿ ಬಿಡುಗಡೆ ಆದ ‘ಸಜನಿ’ ಸಿನಿಮಾ ಮೂಲಕ ನಟನೆ ಆರಂಭಿಸಿದ ಶರ್ಮಿಳಾ ಮಾಂಡ್ರೆ ಹಲವು ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ತಮಿಳಿನ ‘ಅದೃಷ್ಟಶಾಲಿ’ ಮತ್ತು ‘ದಸರಾ’ ಹೆಸರಿನ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ ನಟಿ ಮಾತ್ರವೇ ಅಲ್ಲದೆ ನಿರ್ಮಾಪಕಿಯೂ ಆಗಿದ್ದು ತಮಿಳಿನಲ್ಲಿ ನಾಲ್ಕು ಸಿನಿಮಾ ನಿರ್ಮಿಸಿದ್ದಾರೆ. ಕನ್ನಡದಲ್ಲಿ ‘ದಸರಾ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ತಮಿಳಿನ ‘ಕಾದಲ್ ಕೊಂಜಂ ತೂಕಲಾ’ ಹೆಸರಿನ ತಮಿಳು ಸಿನಿಮಾವನ್ನೂ ಸಹ ನಿರ್ಮಾಣ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Jagannath Rath Yatra 2026: ಪುರಿ ಜಗನ್ನಾಥನ ವಿಗ್ರಹಗಳು ಕೈಗಳಿಲ್ಲದೇ ಅಪೂರ್ಣವಾಗಿರಲು ಕಾರಣವೇನು ಗೊತ್ತಾ? – Kannada News | Puri Jagannath Temple: Rath Yatra 2026 Dates and Mysterious Incomplete Idols

ಪುರಿ ಜಗನ್ನಾಥನ ವಿಗ್ರಹಗಳು ಅಪೂರ್ಣImage Credit source: Pinterest

ಭಾರತದ ಪವಿತ್ರ ಚಾರ್ ಧಾಮ್‌ಗಳಲ್ಲಿ ಒಂದಾದ ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯವು ವಿಶ್ವಪ್ರಸಿದ್ಧವಾಗಿದೆ. ಇಲ್ಲಿ ಸಾಕ್ಷಾತ್ ಶ್ರೀಕೃಷ್ಣನನ್ನು ಜಗನ್ನಾಥನ (ಜಗದ ಒಡೆಯ) ರೂಪದಲ್ಲಿ ಆರಾಧಿಸಲಾಗುತ್ತದೆ. ಈ ಗರ್ಭಗುಡಿಯಲ್ಲಿ ಜಗನ್ನಾಥನೊಂದಿಗೆ ಆತನ ಹಿರಿಯ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರೆಯೂ ಒಟ್ಟಿಗೆ ಕುಳಿತು ಭಕ್ತರಿಗೆ ದರ್ಶನ ನೀಡುತ್ತಾರೆ. ಈ ಪುಣ್ಯಕ್ಷೇತ್ರದ ವಿಗ್ರಹಗಳು ನೋಡಲು ವಿಚಿತ್ರವಾಗಿ ಮತ್ತು ಅಪೂರ್ಣವಾಗಿ ಕಂಡರೂ, ಅವುಗಳ ಹಿಂದೆ ಅಪ್ರತಿಮ ಭಕ್ತಿ ಮತ್ತು ಬ್ರಹ್ಮಾಂಡದ ರಹಸ್ಯ ಅಡಗಿದೆ.

ಜಗನ್ನಾಥ ರಥಯಾತ್ರೆಯ ಸಂಭ್ರಮ:

ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಬಿದಿಗೆಯಂದು ಜಗನ್ನಾಥ ದೇವರ ಭವ್ಯ ರಥಯಾತ್ರೆ ಜರುಗುತ್ತದೆ. ಈ ಬಾರಿ 2026 ರಲ್ಲಿ, ಜಗನ್ನಾಥ ರಥಯಾತ್ರೆಯು ಜುಲೈ 16 ರಂದು ಅತ್ಯಂತ ವೈಭವದಿಂದ ಆರಂಭವಾಗಲಿದ್ದು, ಜುಲೈ 24 ರವರೆಗೆ ಭಕ್ತಿಭಾವದಿಂದ ಮುಂದುವರಿಯಲಿದೆ. ಈ ಒಂಬತ್ತು ದಿನಗಳ ಕಾಲ ಜಗನ್ನಾಥ, ಬಲಭದ್ರ ಮತ್ತು ಸುಭದ್ರೆಯರು ಪ್ರತ್ಯೇಕ ರಥಗಳಲ್ಲಿ ಕುಳಿತು ಜನ್ಮಸ್ಥಳವಾದ ಗುಂಡಿಚಾ ದೇವಸ್ಥಾನಕ್ಕೆ ಪ್ರಯಾಣ ಬೆಳೆಸುತ್ತಾರೆ. ಈ ರಥೋತ್ಸವವನ್ನು ಕಣ್ಣುಂಬಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಪುರಿಗೆ ಹರಿದುಬರುತ್ತಾರೆ.

ಜಗನ್ನಾಥನ ವಿಗ್ರಹಗಳು ಅಪೂರ್ಣ?

ಮಾಳವ ದೇಶದ ರಾಜ ಇಂದ್ರದ್ಯುಮ್ನನು ದೇವಸ್ಥಾನವನ್ನು ನಿರ್ಮಿಸಿ ವಿಗ್ರಹಗಳನ್ನು ಕೆತ್ತಲು ಮುಂದಾದಾಗ, ಸಾಕ್ಷಾತ್ ದೇವಶಿಲ್ಪಿ ವಿಶ್ವಕರ್ಮನು ವೃದ್ಧ ಕುಶಲಕರ್ಮಿಯ ವೇಷದಲ್ಲಿ ರಾಜನ ಬಳಿಗೆ ಬಂದನು. ವಿಶ್ವಕರ್ಮನು ವಿಗ್ರಹಗಳನ್ನು ಕೆತ್ತಲು ಒಂದು ಕಠಿಣ ಷರತ್ತನ್ನು ವಿಧಿಸಿದನು. “ನಾನು 21 ದಿನಗಳಲ್ಲಿ ಈ ಮೂರು ಪ್ರತಿಮೆಗಳನ್ನು ಪೂರ್ಣಗೊಳಿಸುತ್ತೇನೆ. ಆದರೆ, ನಾನು ಒಂದೇ ಕೋಣೆಯಲ್ಲಿ ಒಬ್ಬಂಟಿಯಾಗಿ ಕೆಲಸ ಮಾಡುತ್ತೇನೆ, ಅಲ್ಲಿಯವರೆಗೆ ಯಾರೂ ಬಾಗಿಲು ತೆರೆಯಬಾರದು” ಎಂದನು. ರಾಜನು ಇದಕ್ಕೆ ಒಪ್ಪಿದನು. ಪ್ರತಿದಿನ ಕೋಣೆಯ ಒಳಗಿನಿಂದ ಉಳಿ ಮತ್ತು ಸುತ್ತಿಗೆಯ ಶಬ್ದ ಕೇಳಿಸುತ್ತಿತ್ತು. ಆದರೆ, ಕೆಲವು ದಿನಗಳ ನಂತರ ಇದ್ದಕ್ಕಿದ್ದಂತೆ ಒಳಗಿನಿಂದ ಶಬ್ದ ಬರುವುದು ನಿಂತುಹೋಯಿತು.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಒಳಗಿದ್ದ ವೃದ್ಧ ಶಿಲ್ಪಿಗೆ ಏನಾಯಿತೋ ಎಂಬ ಆತಂಕ ಮತ್ತು ಕುತೂಹಲದಿಂದ ರಾಜ ಇಂದ್ರದ್ಯುಮ್ನನು ತಡೆಯಲಾರದೆ 21 ದಿನಗಳು ಮುಗಿಯುವ ಮುನ್ನವೇ ಕೋಣೆಯ ಬಾಗಿಲು ತೆರೆದನು. ಅಷ್ಟರಲ್ಲಿ ದೇವಶಿಲ್ಪಿ ವಿಶ್ವಕರ್ಮನು ಅಲ್ಲಿಂದ ಮಾಯವಾಗಿದ್ದನು ಮತ್ತು ಜಗನ್ನಾಥ, ಬಲಭದ್ರ, ಸುಭದ್ರೆಯರ ವಿಗ್ರಹಗಳು ಕೈಕಾಲುಗಳಿಲ್ಲದೆ ಅರ್ಧಕ್ಕೆ ನಿಂತಿದ್ದವು. ರಾಜನು ತನ್ನ ಆತುರದ ನಿರ್ಧಾರಕ್ಕೆ ತೀವ್ರವಾಗಿ ಪಶ್ಚಾತ್ತಾಪಪಟ್ಟನು. ಆದರೆ, ಅಶರೀರವಾಣಿಯ ಮೂಲಕ ಇದನ್ನು ದೈವೇಚ್ಛೆ ಎಂದು ತಿಳಿದ ರಾಜನು, ಅದೇ ಅಪೂರ್ಣ ವಿಗ್ರಹಗಳನ್ನು ಮಂದಿರದಲ್ಲಿ ಪ್ರತಿಷ್ಠಾಪಿಸಿದನು. ಅಂದಿನಿಂದ ಇಂದಿನವರೆಗೂ ಜಗತ್ತಿನ ಒಡೆಯನಾದ ಆ ಜಗನ್ನಾಥನನ್ನು ಭಕ್ತರು ಅದೇ ವಿಚಿತ್ರ, ಅಪೂರ್ಣ ಹಾಗೂ ಅತ್ಯಂತ ಸುಂದರ ರೂಪದಲ್ಲಿ ಭಕ್ತಿಯಿಂದ ಪೂಜಿಸುತ್ತಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:27 am, Wed, 17 June 26

Source link

ಜೂ. ಎನ್‌ಟಿಆರ್ ಕೈತಪ್ಪಿದ ದೊಡ್ಡ ಚಿತ್ರ? ತಮಿಳು ನಟ ಸೂರ್ಯನ ಎಂಟ್ರಿ – Kannada News | Nelson Dilipkumar’s Next: Is Suriya Replacing Jr. NTR After ‘Jailer 2’?

ತಮಿಳಿನ ಖ್ಯಾತ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಸದ್ಯ ‘ಜೈಲರ್ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಅವರ ಮುಂದಿನ ಬಿಗ್ ಬಜೆಟ್ ಸಿನಿಮಾದ ಕುರಿತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೊಸದೊಂದು ಬಿಸಿಬಿಸಿ ಚರ್ಚೆ ಆರಂಭವಾಗಿದೆ. ನೆಲ್ಸನ್ ಅವರ ಮುಂದಿನ ಪ್ರಾಜೆಕ್ಟ್‌ಗೆ ಗ್ಲೋಬಲ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಬದಲಿಗೆ ಕಾಲಿವುಡ್ ನಟ ಸೂರ್ಯ (Suriya) ನಾಯಕರಾಗಿ ನಟಿಸಲಿದ್ದಾರೆ ಎಂಬ ಬಲವಾದ ಸುದ್ದಿಯೊಂದು ಹರಿದಾಡುತ್ತಿದೆ.

2025ರಲ್ಲಿ ನಿರ್ಮಾಪಕ ನಾಗವಂಶಿ ಅವರು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದಲ್ಲಿ ಹೊಸ ಚಿತ್ರವೊಂದನ್ನು ನಿರ್ಮಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದರು. ಈ ಬೆನ್ನಲ್ಲೇ, ಆ ಚಿತ್ರಕ್ಕೆ ಟಾಲಿವುಡ್‌ನ ಜೂನಿಯರ್ ಎನ್‌ಟಿಆರ್ ಅವರೇ ಹೀರೋ ಎಂಬ ವದಂತಿಗಳು ಜೋರಾಗಿದ್ದವು. ಆದರೆ, ಚಿತ್ರತಂಡದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿರಲಿಲ್ಲ.

ಈಗ ಕೇಳಿಬರುತ್ತಿರುವ ಲೇಟೆಸ್ಟ್ ಮಾಹಿತಿಯ ಪ್ರಕಾರ, ಜೂನಿಯರ್ ಎನ್‌ಟಿಆರ್ ಜಾಗಕ್ಕೆ ಸೂರ್ಯ ಅವರ ಹೆಸರು ಕೇಳಿ ಬರುತ್ತಿದೆ. ‘ಜೈಲರ್ 2’ ಮುಗಿದ ತಕ್ಷಣವೇ ನೆಲ್ಸನ್ ಮತ್ತು ಸೂರ್ಯ ಕಾಂಬಿನೇಷನ್‌ನ ಹೊಸ ಸಿನಿಮಾ ಸೆಟ್ಟೇರಲಿದೆ ಎನ್ನಲಾಗುತ್ತಿದೆ. ಆದರೆ ಈ ವರದಿಗಳು ಇನ್ನೂ ಅಧಿಕೃತವಾಗಿ ಸಾಬೀತಾಗಬೇಕಿದೆ.

ಇದನ್ನೂ ಓದಿ: ‘ಕರುಪ್ಪು’ ಚಿತ್ರ ಥಿಯೇಟರ್​​​ನಲ್ಲಿ ಹಿಟ್​, ಒಟಿಟಿಯಲ್ಲಿ ಫ್ಲಾಪ್

ಸೂರ್ಯ ಸದ್ಯ ‘ಕರುಪ್ಪು’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಜೂನ್ 12 ರಿಂದ ಸ್ಟ್ರೀಮಿಂಗ್ ಆಗುತ್ತಿದ್ದು, ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಇದರ ಬೆನ್ನಲ್ಲೇ ಸೂರ್ಯ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಬಿಡುಗಡೆಗೆ ಸಜ್ಜಾಗಿದೆ.

ಜೂನಿಯರ್ ಎನ್‌ಟಿಆರ್ ಕೈಯಲ್ಲಿದೆ ಪ್ರಶಾಂತ್ ನೀಲ್ ಅವರ ‘ಡ್ರ್ಯಾಗನ್’!

ಇತ್ತ ಜೂನಿಯರ್ ಎನ್‌ಟಿಆರ್ ಅವರು ಪ್ರಶಾಂತ್ ನೀಲ್ ನಿರ್ದೇಶನದ ಬಿಗ್ ಆಕ್ಷನ್ ಎಂಟರ್‌ಟೈನರ್ ‘ಡ್ರ್ಯಾಗನ್’ ಸಿನಿಮಾಗಾಗಿ ಸಜ್ಜಾಗುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಇದರ ಫಸ್ಟ್ ಗ್ಲಿಂಪ್ಸ್‌ನಲ್ಲಿ ಎನ್‌ಟಿಆರ್ ಅಬ್ಬರಿಸಿದ್ದಾರೆ. 1967ರ ಅಂತರರಾಷ್ಟ್ರೀಯ ಅಫೀಮು ದಂಧೆ ಮತ್ತು ಅಪರಾಧ ಲೋಕದ ಹಿನ್ನೆಲೆಯಲ್ಲಿ ಈ ಸಿನಿಮಾ ಮೂಡಿಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉದ್ಧವ್ ಬಣಕ್ಕೆ ‘ಬಂಡಾಯ’ ಭೀತಿ: ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದ ಯುಬಿಟಿ – Kannada News | Maharashtra Political Crisis: Uddhav Thackeray Writes to Speaker to Halt Rebel MPs

ಮುಂಬೈ, ಜೂನ್ 17: ಮಹಾರಾಷ್ಟ್ರ ರಾಜಕೀಯದಲ್ಲಿ ಆಂತರಿಕ ಭಿನ್ನಾಭಿಪ್ರಾಯ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (UBT) ಪಕ್ಷವು ತನ್ನ ಸಂಸದರು ಪಕ್ಷಾಂತರ ಮಾಡದಂತೆ ತಡೆಯಲು ದೆಹಲಿಯಲ್ಲಿ ದೊಡ್ಡ ರಾಜಕೀಯ ಹೆಜ್ಜೆ ಇಟ್ಟಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಶಿವಸೇನೆ (UBT) ಔಪಚಾರಿಕ ಪತ್ರ ಬರೆದಿದ್ದು, ಸಂಸತ್ತಿನಲ್ಲಿ ತಮ್ಮನ್ನು ಮಾತ್ರ ಅಧಿಕೃತ ರಾಜಕೀಯ ಪಕ್ಷವೆಂದು ಗುರುತಿಸಬೇಕೆಂದು ಕಟ್ಟುನಿಟ್ಟಿನ ಒತ್ತಾಯ ಮಾಡಿದೆ.

ಸ್ಪೀಕರ್‌ಗೆ ಬರೆದ ಪತ್ರದಲ್ಲಿ ಏನಿದೆ?
ಪಕ್ಷದ ಹಿರಿಯ ಸಂಸದ ಹಾಗೂ ಸಂಸದೀಯ ನಾಯಕ ಅರವಿಂದ್ ಸಾವಂತ್ ಅವರು ಸ್ಪೀಕರ್‌ಗೆ ಈ ಅಧಿಕೃತ ಪತ್ರವನ್ನು ಸಲ್ಲಿಸಿದ್ದಾರೆ. ಶಿವಸೇನೆ (UBT) ಇಂದ ಒಡೆದು ಹೋಗುವ ಯಾವುದೇ ಬಂಡಾಯ ಗುಂಪು ಅಥವಾ ಸ್ವತಂತ್ರ ಬಣಕ್ಕೆ ಲೋಕಸಭೆಯಲ್ಲಿ ಯಾವುದೇ ಪ್ರತ್ಯೇಕ ಗುರುತು, ಸ್ಥಾನಮಾನ ಅಥವಾ ಸೌಲತ್ತುಗಳನ್ನು ನೀಡಬಾರದು ಎಂದು ಪತ್ರದಲ್ಲಿ ಕೋರಲಾಗಿದೆ.

ಒಂದು ವೇಳೆ ಬಂಡಾಯ ಸಂಸದರು ವಿಶೇಷ ಸ್ಥಾನಮಾನ ಕೋರಿ ಸ್ಪೀಕರ್ ಅವರನ್ನು ಸಂಪರ್ಕಿಸಿದರೆ, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮೂಲ ಶಿವಸೇನೆ (UBT) ಪಕ್ಷಕ್ಕೆ ತನ್ನ ವಾದ ಮಂಡಿಸಲು ಮುಕ್ತ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಸಂವಿಧಾನದ ಹತ್ತನೇ ವೇಳಾಪಟ್ಟಿಯಡಿ (ಪಕ್ಷಾಂತರ ವಿರೋಧಿ ಕಾಯ್ದೆ) ಕಾನೂನು ಕ್ರಮ ಕೈಗೊಳ್ಳುವ ಹಕ್ಕನ್ನು ಕಾಯ್ದಿರಿಸಿಕೊಳ್ಳಲಾಗಿದೆ ಎಂದೂ ಪತ್ರದಲ್ಲಿ ತಿಳಿಸಲಾಗಿದೆ.

ಮತ್ತಷ್ಟು ಓದಿ: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಬಿರುಗಾಳಿ, ಉದ್ಧವ್ ಬಣದ ಸಂಸದರ ಫೋನ್ ಆಫ್, ದೆಹಲಿಯತ್ತ ಎಲ್ಲರ ಚಿತ್ತ

ಜೂನ್ 19ರ ಶಿವಸೇನೆ ಸಂಸ್ಥಾಪನಾ ದಿನದಂದೇ ಪಕ್ಷಾಂತರ?
ಮೂಲಗಳ ಪ್ರಕಾರ, ಉದ್ಧವ್ ಬಣದ ಒಟ್ಟು ಏಳು ಸಂಸದರು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಜೊತೆ ಸಂಪರ್ಕದಲ್ಲಿದ್ದಾರೆ. ಸಂಸದರಾದ ಸಂಜಯ್ ದಿನಾ ಪಾಟೀಲ್, ಸಂಜಯ್ ದೇಶಮುಖ್, ನಾಗೇಶ್ ಪಾಟೀಲ್ ಅಷ್ಟಿಕರ್, ಓಂರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕ್ಚೌರೆ ಮತ್ತು ಸಂಜಯ್ ಜಾಧವ್ ಅವರು ಬುಧವಾರ ದೆಹಲಿಯಲ್ಲಿ ಸಂಸದ ಶ್ರೀಕಾಂತ್ ಶಿಂಧೆ ನಿವಾಸದಲ್ಲಿ ಸಭೆ ಸೇರಲಿದ್ದಾರೆ.

ಈ ಬಂಡಾಯ ಗುಂಪು ಮೊದಲು ಲೋಕಸಭೆಯಲ್ಲಿ ಪ್ರತ್ಯೇಕ ಬಣ ರಚಿಸಿಕೊಂಡು, ನಂತರ ಜೂನ್ 19 ರಂದು (ಶಿವಸೇನೆಯ ಸಂಸ್ಥಾಪನಾ ದಿನ) ಅಧಿಕೃತವಾಗಿ ಶಿಂಧೆ ಬಣದೊಂದಿಗೆ ವಿಲೀನಗೊಳ್ಳುವ ಸಾಧ್ಯತೆಯಿದೆ.

ಮಹಾರಾಷ್ಟ್ರದಲ್ಲಿ ಬಿರುಸಾದ ಆಪರೇಷನ್ ಟೈಗರ್
ಕೇವಲ ಸಂಸದರಷ್ಟೇ ಅಲ್ಲದೆ, ಉದ್ಧವ್ ಬಣದ ಹಲವಾರು ಶಾಸಕರು ಕೂಡ ಪ್ರತಿಸ್ಪರ್ಧಿ ಶಿಬಿರದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಆಡಳಿತಾರೂಢ ಮೈತ್ರಿಕೂಟವು ಇದಕ್ಕೆ ಆಪರೇಷನ್ ಟೈಗರ್ ಎಂಬ ಸಂಕೇತನಾಮ ನೀಡಿದ್ದು, ಇದು ಇಡೀ ಮಹಾರಾಷ್ಟ್ರ ರಾಜಕೀಯದ ಚಿತ್ರಣವನ್ನೇ ಬದಲಿಸುವ ಮುನ್ಸೂಚನೆ ನೀಡಿದೆ.

ಶಾಸಕರು ಕೈಕೊಡುವುದನ್ನು ತಡೆಯಲು ಅಲರ್ಟ್ ಆಗಿರುವ ಉದ್ಧವ್ ಠಾಕ್ರೆ, ಜೂನ್ 22 ರಂದು ಸಂಜೆ 4 ಗಂಟೆಗೆ ಮುಂಬೈನ ಪಕ್ಷದ ಕಚೇರಿ ‘ಶಿವಾಲಯ’ದಲ್ಲಿ ತಮ್ಮ ಎಲ್ಲಾ ಶಾಸಕರ ತುರ್ತು ಸಭೆ ಕರೆದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪ್ರವಾಸಿಗರ ಸುರಕ್ಷತೆಗೆ ಆದ್ಯತೆ: ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ; ಇಲ್ಲಿದೆ ಮಾಹಿತಿ – Kannada News | No Touching, Feeding or Bathing: New Safety Rules Issued for Karnataka Elephant Camps

ಸಾಂದರ್ಭಿಕ ಚಿತ್ರImage Credit source: captainscrown.com

ಬೆಂಗಳೂರು, ಜೂನ್​​ 17: ರಾಜ್ಯದ ಆನೆ ಶಿಬಿರಗಳು, ಸೆರೆಯಲ್ಲಿರುವ ಆನೆಗಳ ನಿರ್ವಹಣಾ ಕೇಂದ್ರಗಳು ಹಾಗೂ ಸಾರ್ವಜನಿಕ ವೀಕ್ಷಣಾ ಕೇಂದ್ರಗಳಿಗಾಗಿ ಕರ್ನಾಟಕ ಅರಣ್ಯ ಇಲಾಖೆ ಮೊದಲ ಬಾರಿಗೆ ಕರ್ನಾಟಕ ಆನೆ ಶಿಬಿರ ಸುರಕ್ಷತಾ ನಿಯಮಾವಳಿ (Karnataka Elephant Camp Safety Protocol) ಜಾರಿಗೊಳಿಸಿದೆ. ಇದರನ್ವಯ ಇನ್ನು ಮುಂದೆ ಪ್ರವಾಸಿಗರು ಆನೆಗಳನ್ನು ವೀಕ್ಷಿಸಲು ಕನಿಷ್ಠ 30 ಅಡಿ ಅಂತರ ಕಾಯ್ದುಕೊಳ್ಳಬೇಕು. ಆನೆಗಳಿಗೆ ಸ್ನಾನ ಮಾಡಿಸುವುದು, ಮುಟ್ಟುವುದು ಅಥವಾ ಆಹಾರ ನೀಡುವುದು ಸಂಪೂರ್ಣ ನಿಷೇಧವಾಗಿರಲಿದೆ.

ಪ್ರವಾಸಿಗರು ಗುರುತಿಸಲಾದ ಗ್ರೀನ್ ಝೋನ್ (ವೀಕ್ಷಣಾ ಪ್ರದೇಶ)ನಲ್ಲೇ ನಿಂತು ಆನೆಗಳನ್ನು ವೀಕ್ಷಿಸಬೇಕು. ಆನೆಗಳು ಹಾಗೂ ಪ್ರವಾಸಿಗರ ಚಟುವಟಿಕೆಗಳನ್ನು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಮೇಲ್ವಿಚಾರಣೆ ಮಾಡಿ ದಾಖಲಿಸಲಾಗುತ್ತದೆ.ಸಾರ್ವಜನಿಕ ವೀಕ್ಷಣೆಗಾಗಿ ಯಾವುದೇ ಶಿಬಿರದಲ್ಲಿ 10ಕ್ಕಿಂತ ಹೆಚ್ಚು ಆನೆಗಳನ್ನು ಪ್ರದರ್ಶಿಸಲು ಅವಕಾಶ ಇರುವುದಿಲ್ಲ.

ಇದನ್ನೂ ಓದಿ: ದುಬಾರೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ವೇಳೆ ಅವುಗಳ ನಡುವೆ ಸಿಲುಕಿ ಮಹಿಳೆ ಸಾವು

ದುಬಾರೆ ದುರಂತದ ಬಳಿಕ ಹೊಸ ನಿಯಮ

ಮೇ 19ರಂದು ದುಬಾರೆ ಆನೆ ಶಿಬಿರದಲ್ಲಿ ತಮಿಳುನಾಡಿನ ಪ್ರವಾಸಿಗರೊಬ್ಬರು ಮೃತಪಟ್ಟಿದ್ದ ಘಟನೆ ಹಿನ್ನೆಲೆಯಲ್ಲಿ ಈ ಸುರಕ್ಷತಾ ನಿಯಮಾವಳಿಯನ್ನು ಜಾರಿಗೊಳಿಸಲಾಗಿದೆ. ಶಿಬಿರಗಳಿಗೆ ನಿಯಮಗಳನ್ನು ಪಾಲಿಸಲು 15 ದಿನಗಳ ಗಡುವು ನೀಡಲಾಗಿದೆ. ಬಳಿಕ ಪರಿಶೀಲನೆ ನಡೆಸಿ ಪ್ರಮಾಣೀಕರಣ ನೀಡಲಾಗುವುದು. ಅನುಮತಿ ಸಿಗುವವರೆಗೆ ಶಿಬಿರಗಳ ಕಾರ್ಯಾಚರಣೆಗೆ ಅವಕಾಶ ಇರುವುದಿಲ್ಲ ಎಂದು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಅವರು, ತಿಳಿಸಿದ್ದಾರೆ.

ಪ್ರವಾಸಿಗರಿಗೆ ಸಮಯ ಹಾಗೂ ಸಂಖ್ಯಾ ಮಿತಿ

ಹೊಸ ನಿಯಮಗಳ ಅನ್ವಯ ಶಿಬಿರದ ಸಾಮರ್ಥ್ಯ, ಆನೆಗಳ ಸಂಖ್ಯೆ ಹಾಗೂ ಪ್ರವಾಸಿಗರ ದಟ್ಟಣೆ ಆಧರಿಸಿ ಪ್ರವಾಸಿಗರ ಬ್ಯಾಚ್‌ಗಳು ಹಾಗೂ ಸಮಯ ನಿಗದಿಪಡಿಸಲಾಗುತ್ತದೆ. ಗ್ರೀನ್ ಝೋನ್‌ನಲ್ಲಿ ಒಂದೇ ಸಮಯದಲ್ಲಿ 50 ರಿಂದ 75 ಪ್ರವಾಸಿಗರಿಗೆ ಮಾತ್ರ ಅವಕಾಶ ಇರಲಿದ್ದು, ವೀಕ್ಷಣಾ ಅವಧಿ 20 ರಿಂದ 30 ನಿಮಿಷಕ್ಕೆ ಸೀಮಿತವಾಗಿರಲಿದೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Ashada Masa: ಆಷಾಢ ಮಾಸದಲ್ಲಿ ಚಿನ್ನದ ಬೆಲೆ ಕುಸಿಯುವುದೇಕೆ? ಈ ಸಮಯದಲ್ಲಿ ಖರೀದಿಸುವುದು ಅಶುಭವೇ? – Kannada News | Gold and Silver Prices Plummet in Aashadha: Seize the Low Price Opportunity

ಆಷಾಢ ಮಾಸದಲ್ಲಿ ಚಿನ್ನದ ಬೆಲೆImage Credit source: Pinterest

ಭಾರತೀಯ ಆರ್ಥಿಕತೆ ಮತ್ತು ಸಂಸ್ಕೃತಿಯಲ್ಲಿ ಹಳದಿ ಲೋಹಕ್ಕೆ (ಚಿನ್ನ) ಯಾವಾಗಲೂ ವಿಶೇಷ ಹಾಗೂ ಪವಿತ್ರವಾದ ಸ್ಥಾನವಿದೆ. ಆದರೆ ಆಷಾಢ ಬಂತು ಅಂದ್ರೆ ಸಾಕು ಚಿನ್ನ, ಬೆಳ್ಳಿ ದರಗಳು ಸಾಮಾನ್ಯವಾಗಿ ಕಡಿಮೆ ಆಗುತ್ತದೆ.  ಆಷಾಢ ಮಾಸ ಜುಲೈ 15 ರಿಂದ ಆರಂಭವಾಗುತ್ತಿದೆ. ಸಾಮಾನ್ಯವಾಗಿ ಈ ಮಾಸದಲ್ಲಿ ಯಾವುದೇ ರೀತಿಯ ಸಾಂಪ್ರದಾಯಿಕ ಶುಭ ಸಂದರ್ಭಗಳು ಬರುವುದಿಲ್ಲ. ಮದುವೆ, ಉಪನಯನ, ಗೃಹಪ್ರವೇಶದಂತಹ ಯಾವುದೇ ದೊಡ್ಡ ಹಬ್ಬ ಹರಿದಿನಗಳು ಅಥವಾ ಮಂಗಲ ಕಾರ್ಯಗಳು ಈ ತಿಂಗಳಲ್ಲಿ ನಡೆಯುವುದಿಲ್ಲ. ಪರಿಣಾಮವಾಗಿ, ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ದೈನಂದಿನ ಖರೀದಿ ತೀರಾ ಕಡಿಮೆಯಾಗುತ್ತದೆ.

ಅಷ್ಟೇ ಅಲ್ಲದೆ, ಸನಾತನ ಸಂಪ್ರದಾಯದಲ್ಲಿ ಆಷಾಢವನ್ನು ಕೆಲವರು ‘ಶೂನ್ಯ ಮಾಸ’ ಅಥವಾ ‘ಅಶುಭ ಮಾಸ’ ಎಂದು ಭಾವಿಸುವುದರಿಂದ, ಈ ಅವಧಿಯಲ್ಲಿ ಹೊಸ ಆಭರಣಗಳನ್ನು ಖರೀದಿಸಲು ಮಾನಸಿಕವಾಗಿ ಅಷ್ಟಾಗಿ ಮುಂದಾಗುವುದಿಲ್ಲ. ಗ್ರಾಹಕರಿಲ್ಲದೆ ಜ್ಯುವೆಲ್ಲರಿ ಶೋರೂಮ್‌ಗಳು ಖಾಲಿ ಇರುವುದರಿಂದ, ಸ್ಥಳೀಯವಾಗಿ ಹಳದಿ ಲೋಹದ ಬೇಡಿಕೆ ಕುಸಿದು ಬೆಲೆಯೂ ಇಳಿಕೆಯ ಹಾದಿ ಹಿಡಿಯುತ್ತದೆ,

ಈ ಆಷಾಡ ಮಾಸವನ್ನು ಆರ್ಥಿಕ ತಜ್ಞರು ಮತ್ತು ಆಧ್ಯಾತ್ಮಿಕ ಚಿಂತಕರು ಎರಡು ವಿಭಿನ್ನ ಹಾಗೂ ಸುಂದರ ದೃಷ್ಟಿಕೋನಗಳಿಂದ ನೋಡುತ್ತಾರೆ. ಬೆಲೆ ತೀರಾ ಕುಸಿದಾಗ ಒಂದೇ ಬಾರಿ ದೊಡ್ಡ ಮೊತ್ತದ ಹಣ ಹಾಕದೆ, ಹಂತ ಹಂತವಾಗಿ ಸ್ವಲ್ಪ ಸ್ವಲ್ಪವೇ ಚಿನ್ನ ಖರೀದಿಸುವುದು ಜಾಣತನ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಆಷಾಢವನ್ನು ಕೇವಲ “ಅಶುಭ” ಎಂದು ದೂರ ಇಡುವ ಮುನ್ನ ಒಂದು ಪ್ರಮುಖ ವಿಷಯವನ್ನು ಗ್ರಾಹಕರು ನೆನಪಿನಲ್ಲಿಡಬೇಕು. ಈ ಮಾಸದಲ್ಲಿ ಮದುವೆಗಳು ನಡೆಯದಿದ್ದರೂ, ದೇವಿಯ ಆರಾಧನೆಗೆ ಮತ್ತು ಶಕ್ತಿ ಪೂಜೆಗೆ ಇದು ಅತ್ಯಂತ ಪವಿತ್ರವಾದ ಸಮಯವಾಗಿದೆ. ಬಾಣವನ್ನು ಮುಂದಕ್ಕೆ ಬಿಡುವ ಮುನ್ನ ಬಿಲ್ಲನ್ನು ಹಿಂದಕ್ಕೆ ಎಳೆದಂತೆ ಪ್ರಸ್ತುತ ಮಾರುಕಟ್ಟೆಯ ಈ ಬೆಲೆ ಇಳಿಕೆಯಾಗಿದೆ.

ಮುಂದಿನ ದಿನಗಳಲ್ಲಿ ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಹಬ್ಬಗಳ ಸರಣಿ ಶುರುವಾಗುತ್ತದೆ ಮತ್ತು ಆಗ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಮತ್ತೆ ಗಗನಕ್ಕೇರುವ ಸಾಧ್ಯತೆ ಇರುತ್ತದೆ. ವಿವೇಚನೆಯುಳ್ಳ ಗ್ರಾಹಕರು ಈ ಆಷಾಢದ ಶಾಂತ ಅವಧಿಯನ್ನು ಬಳಸಿಕೊಂಡು, ಕಡಿಮೆ ದರದಲ್ಲಿ ಲಕ್ಷ್ಮಿ ಸ್ವರೂಪದ ಚಿನ್ನವನ್ನು ಖರೀದಿಸಿ ಭವಿಷ್ಯದ ಐಶ್ವರ್ಯವನ್ನು ಭದ್ರಪಡಿಸಿಕೊಳ್ಳಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:37 am, Wed, 17 June 26

Source link

Video: ಮಹಿಳೆ ಅಡುಗೆ ಮಾಡುತ್ತಿರುವ ಹೊತ್ತಲ್ಲೇ ಸಿಡಿದ ಪ್ರೆಶರ್ ಕುಕ್ಕರ್ – Kannada News | Pressure Cooker Blast: Viral Video Sparks Kitchen Safety Debate and ISI Mark Importance

ಶಾಜಾಪುರ, ಜೂನ್ 17: ಮಹಿಳೆ ಅಡುಗೆ ಮಾಡುತ್ತಿರುವ ಹೊತ್ತಲ್ಲೇ ಪ್ರೆಶರ್ ಕುಕ್ಕರ್(Cooker) ಸ್ಫೋಟಗೊಂಡು, ಕುಕ್ಕರ್​ನಲ್ಲಿರುವ ಪದಾರ್ಥ ಮಹಿಳೆಯ ಮೇಲೆ ಹಾರಿರುವ ವಿಡಿಯೋ ವೈರಲ್ ಆಗಿದ್ದು, ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ವಿಡಿಯೋದಲ್ಲಿ ಕಾಣಿಸುವಂತೆ ಆರಂಭದಲ್ಲಿ ಎಲ್ಲವೂ ಸಾಮಾನ್ಯವಾಗಿ ಇರುತ್ತದೆ. ಮಹಿಳೆ ಕುಕ್ಕರ್ ಪಕ್ಕದ ಮತ್ತೊಂದು ಒಲೆಯ ಮೇಲೆ ಪಾತ್ರೆಯೊಂದನ್ನು ಇಡಲು ಹೋದ ತಕ್ಷಣವೇ, ಪ್ರೆಶರ್ ಕುಕ್ಕರ್ ಭೀಕರವಾಗಿ ಸ್ಫೋಟಗೊಂಡಿದೆ.

ಸ್ಫೋಟದ ತೀವ್ರತೆಗೆ ಇಡೀ ಅಡುಗೆಮನೆ ಕ್ಷಣಾರ್ಧದಲ್ಲಿ ದಟ್ಟವಾದ ಹೊಗೆಯಿಂದ ತುಂಬಿಹೋಗುತ್ತದೆ. ವಿಡಿಯೋ ನೋಡಿದಾಗ ಮಹಿಳೆಗೆ ತೀವ್ರ ಗಾಯಗಳಾಗಿರುವ ಸಾಧ್ಯತೆ ದಟ್ಟವಾಗಿ ಕಾಣಿಸುತ್ತದೆ
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಅಡುಗೆಮನೆಯ ಸುರಕ್ಷತೆಯ ಬಗ್ಗೆ ತೀವ್ರ ಚರ್ಚೆ ಆರಂಭಿಸಿದ್ದಾರೆ ಮತ್ತು ತಮ್ಮದೇ ಆದ ಕಾರಣ ಹಾಗೂ ಸಲಹೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಜನರು ಕೆಲವು ರೂಪಾಯಿಗಳನ್ನು ಉಳಿಸಲು ಐಎಸ್‌ಐ (ISI) ಮುದ್ರೆ ಇಲ್ಲದ ಕಳಪೆ ಗುಣಮಟ್ಟದ ಅಥವಾ ಸ್ಥಳೀಯ ಕುಕ್ಕರ್‌ಗಳನ್ನು ಖರೀದಿಸುವುದೇ ಇಂತಹ ಸ್ಫೋಟಗಳಿಗೆ ಮುಖ್ಯ ಕಾರಣ ಎಂದು ಹಲವರು ಹೇಳಿದ್ದಾರೆ.

ಕುಕ್ಕರ್ ಹಳೆಯದಾದರೂ ಅದರ ವಾಷರ್ (Gasket) ಮತ್ತು ಸೇಫ್ಟಿ ವಾಲ್ವ್ ಅನ್ನು ಸಕಾಲಕ್ಕೆ ಬದಲಾಯಿಸದೆ ನಿರ್ಲಕ್ಷಿಸುವುದರಿಂದ ಗಾಳಿಯ ಒತ್ತಡ ಹೊರಹೋಗದೆ ಈ ರೀತಿ ಆಗುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಓದಿ: ಅಡುಗೆಮನೆಯಲ್ಲಿ ಕುಕ್ಕರ್​​ ನಿಮಗೆ ಕಾಟ ಕೊಡುತ್ತಿದೆಯಾ? ಹಾಗಾದರೆ ಇಲ್ಲಿದೆ ಕೆಲವು ಸೂಪರ್ ಟಿಪ್ಸ್!

ಗ್ಯಾಸ್ ಸ್ಟೌವ್ ಅನ್ನು ಯಾವಾಗಲೂ ಸಿಲಿಂಡರ್‌ನ ಮೇಲ್ಭಾಗದ ಮಟ್ಟದಲ್ಲಿ ಇಡಬೇಕು. ಸಿಲಿಂಡರ್ ಪಕ್ಕದಲ್ಲೇ ಒಲೆ ಇಟ್ಟಿರುವುದೂ ಈ ದುರಂತಕ್ಕೆ ಕಾರಣ ಇರಬಹುದು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ವಿಡಿಯೋ

ಈ ವಿಡಿಯೋ ಪ್ರತಿಯೊಬ್ಬರಿಗೂ ದೊಡ್ಡ ಪಾಠವಾಗಿದೆ. ಅಡುಗೆಮನೆಯಲ್ಲಿ ಪ್ರೆಶರ್ ಕುಕ್ಕರ್ ಬಳಸುವಾಗ ಅದರ ವಿಸ್ಲಿಂಗ್ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಪರೀಕ್ಷಿಸುವುದು ಮತ್ತು ಬ್ರಾಂಡೆಡ್ ಪಾತ್ರೆಗಳನ್ನೇ ಬಳಸುವುದು ಜೀವ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಕಡ್ಡಾಯವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  

Source link

Breaking News Today Live: ರಾಜ್ಯ ರಾಜಕೀಯದ ಮಹಾಸಮರ, ಮೆಸ್ಸಿ ಹೊಸ ಇತಿಹಾಸ: ಇಲ್ಲಿವೆ ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | TV9 Kannada News Live 17 June 2026 Karnataka Politics, Weather, MLC Polls Latest Updates

ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಬಲ್ಲ ವಿಧಾನಪರಿಷತ್ ಚುನಾವಣೆಯ ಮಹಾ ಕಣಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜೂನ್ 18ರ ಮಹಾಸಮರಕ್ಕೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಭರ್ಜರಿ ಲೆಕ್ಕಾಚಾರ ನಡೆಸಿವೆ. ಇತ್ತ, ಅಂತರರಾಷ್ಟ್ರೀಯ ಫುಟ್‌ಬಾಲ್ ಅಂಗಳದಲ್ಲಿ ಅರ್ಜೆಂಟೀನಾದ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಹ್ಯಾಟ್ರಿಕ್ ಗೋಲುಗಳ ಭರ್ಜರಿ ದಾಖಲೆಯೊಂದಿಗೆ ಹೊಸ ಇತಿಹಾಸ ಬರೆದಿದ್ದಾರೆ. ಇನ್ನು ಸ್ಯಾಂಡಲ್‌ವುಡ್ ಹಿರಿಯ ನಟ ದೊಡ್ಡಣ್ಣ ಅವರ ನಿಧನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾನೂನು ಬಿಸಿ ಮುಟ್ಟಿದೆ. ರಾಷ್ಟ್ರೀಯ ರಾಜಕಾರಣದಲ್ಲಿ ತೃಣಮೂಲ ಕಾಂಗ್ರೆಸ್‌ನ (TMC) ಬಿಕ್ಕಟ್ಟು ತಾರಕಕ್ಕೇರಿದ್ದು, ಬಂಡಾಯ ಸಂಸದರು ವಿಲೀನಗೊಳ್ಳಲಿರುವ NCPI ಪಕ್ಷಕ್ಕೆ ಜ್ಯೋತಿಪ್ರಕಾಶ್ ಚಟರ್ಜಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Source link

ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್​ನಲ್ಲಿ 5 ಬದಲಾವಣೆ..! – Kannada News | ENG vs NZ 2nd Test: 5 Changes in England Playing XI

ನ್ಯೂಝಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಐದು ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಯೊಂದಿಗೆ ಮೂವರು ಆಟಗಾರರು ಇಂಗ್ಲೆಂಡ್ ಪರ ಪಾದಾರ್ಪಣೆ ಮಾಡಲಿದ್ದಾರೆ. ಈ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 115 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ನಡೆದ ಹೈ ಡ್ರಾಮಾದಿಂದಾಗಿ ಇದೀಗ ಪ್ಲೇಯಿಂಗ್ ಇಲೆವೆನ್​ನಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿದೆ.

ಇಷ್ಟೊಂದು ಬದಲಾವಣೆ ಯಾಕೆ?

ಶಿಸ್ತು ಉಲ್ಲಂಘನೆ, ಗಾಯ ಹಾಗೂ ಪಿತೃತ್ವ ರಜೆಯ ಕಾರಣದಿಂದಾಗಿ ಲಾರ್ಡ್ಸ್ ಟೆಸ್ಟ್ ಗೆದ್ದ ತಂಡದಲ್ಲಿದ್ದ ಐದು ಪ್ರಮುಖ ಆಟಗಾರರು ಇಂಗ್ಲೆಂಡ್ ತಂಡದಿಂದ ಹೊರಬಿದ್ದಿದ್ದಾರೆ.

ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮತ್ತು ಪ್ರಮುಖ ವೇಗಿ ಗಸ್ ಅಟ್ಕಿನ್ಸನ್ ಇಬ್ಬರನ್ನೂ ತಂಡದ ನಿಯಮಾವಳಿಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಈ ಪಂದ್ಯದಿಂದ ಕೈಬಿಡಲಾಗಿದೆ. ಈ ಇಬ್ಬರು ಆಟಗಾರರು ಮಧ್ಯರಾತ್ರಿಯ ಕರ್ಫ್ಯೂ ನಿಯಮ ಮೀರಿ ಪಬ್​ನಲ್ಲಿ ಪಾರ್ಟಿ ಮಾಡಿದ್ದರು. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಇವರ ಮೇಲೆ ಕಠಿಣ ಶಿಸ್ತು ಕ್ರಮ ಜರುಗಿಸಿದೆ.

ಇನ್ನು ಮೊದಲ ಪಂದ್ಯದಲ್ಲಿ ಅದ್ಭುತವಾಗಿ ಆಡಿದ್ದ ವಿಕೆಟ್‌ಕೀಪರ್-ಬ್ಯಾಟರ್ ಜೇಮಿ ಸ್ಮಿತ್ ಅವರ ಪತ್ನಿ ಮಂಗಳವಾರವಷ್ಟೇ ಮಗುವಿಗೆ ಜನ್ಮ ನೀಡಿದ್ದಾರೆ. ಹಾಗಾಗಿ ಅವರು ಪಿತೃತ್ವ ರಜೆಯ ಮೇರೆಗೆ ತವರಿಗೆ ಮರಳಿದ್ದಾರೆ.

ಹಾಗೆಯೇ ಮೊದಲ ಪಂದ್ಯದಲ್ಲಿ ಮಿಂಚಿನ ದಾಳಿ ಸಂಘಟಿಸಿದ್ದ ಒಲ್ಲಿ ರಾಬಿನ್ಸನ್ ಮಂಡಿ ನೋವಿನಿಂದ ಬಳಲುತ್ತಿರುವುದರಿಂದ ವಿಶ್ರಾಂತಿ ನೀಡಲಾಗಿದೆ.

ಮತ್ತೊಂದೆಡೆ ಕೆನ್ನಿಂಗ್ಟನ್ ಓವಲ್ ಮೈದಾನದ ಪಿಚ್ ಸಂಪೂರ್ಣವಾಗಿ ವೇಗದ ಬೌಲಿಂಗ್‌ಗೆ ಹೆಚ್ಚು ಸಹಕಾರಿಯಾಗಿರುವ ಕಾರಣ ತಂಡದಲ್ಲಿದ್ದ ಏಕೈಕ ಸ್ಪಿನ್ನರ್  ಬಶೀರ್ ಅವರನ್ನು ಆಡುವ ಬಳಗದಿಂದ ಕೈಬಿಡಲಾಗಿದೆ.

ಬದಲಿ ಆಟಗಾರರು ಯಾರು?

ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಇಂಗ್ಲೆಂಡ್ ಪರ ಐವರು ಆಟಗಾರರು ಕಣಕ್ಕಿಳಿಯಲಿದ್ದಾರೆ. ಅಂದರೆ ಮೊದಲ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಳ್ಳದ 5 ಆಟಗಾರರು ಈ ಬಾರಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಆ ಆಟಗಾರರು ಯಾರೆಂದರೆ…

  • ಜೋರ್ಡನ್ ಕಾಕ್ಸ್ (ವಿಕೆಟ್ ಕೀಪರ್ ಬ್ಯಾಟರ್)
  • ಸನ್ನಿ ಬೇಕರ್ (ವೇಗದ ಬೌಲರ್)
  • ಜೇಮ್ಸ್ ರೀವ್ (ವಿಕೆಟ್ ಕೀಪರ್ ಬ್ಯಾಟರ್)
  • ಜೋಫ್ರಾ ಆರ್ಚರ್ (ವೇಗದ ಬೌಲರ್​)
  • ಮ್ಯಾಥ್ಯೂ ಫಿಶರ್ (ವೇಗದ ಬೌಲರ್)

ಜೋ ರೂಟ್ ಹೆಗಲಿಗೆ ನಾಯಕತ್ವ:

ಈ ಪಂದ್ಯದಿಂದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅಮಾನತಾಗಿರುವ ಹಿನ್ನೆಲೆಯಲ್ಲಿ ಅನುಭವಿ ಆಟಗಾರ ಜೋ ರೂಟ್ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಹೀಗಾಗಿ ತಂಡದ ಸಂಪೂರ್ಣ ಜವಾಬ್ದಾರಿ ರೂಟ್ ಹೆಗಲೇರಲಿದೆ. ಏಕೆಂದರೆ ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್​ನಲ್ಲಿರುವ ಆಟಗಾರರ ಒಟ್ಟು ಟೆಸ್ಟ್ ಅನುಭವ 281 ಪಂದ್ಯಗಳು ಮಾತ್ರ. ಇದರಲ್ಲಿ ಜೋ ರೂಟ್ ಒಬ್ಬರದ್ದೇ 164 ಪಂದ್ಯಗಳಿವೆ. ಅಂದರೆ ಇಂಗ್ಲೆಂಡ್ ತಂಡವು ಅನಾನುಭವಿ ಬಳಗದೊಂದಿಗೆ ನ್ಯೂಝಿಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ.

ಇದನ್ನೂ ಓದಿ: ಗೋಲುಗಳ ಮೇಲೆ ಗೋಲು… ವಿಶ್ವ ದಾಖಲೆ ಸರಿಗಟ್ಟಿದ ಮೆಸ್ಸಿ..!

ಇಂಗ್ಲೆಂಡ್ ಪ್ಲೇಯಿಂಗ್ 11: ಬೆನ್ ಡಕೆಟ್, ಎಮಿಲಿಯೊ ಗೇ, ಜೇಕಬ್ ಬೆಥೆಲ್, ಜೋ  ರೂಟ್ (ನಾಯಕ) ಹ್ಯಾರಿ ಬ್ರೂಕ್, ಜೇಮ್ಸ್ ರೀವ್ (ವಿಕೆಟ್‌ಕೀಪರ್), ಜೋರ್ಡನ್ ಕಾಕ್ಸ್, ಜೋಫ್ರಾ ಆರ್ಚರ್, ಮ್ಯಾಥ್ಯೂ ಫಿಶರ್, ಸನ್ನಿ ಬೇಕರ್, ಜೋಶ್ ಟಂಗ್.

Source link

ಹೆಚ್​​.ಸಿ. ಮಹದೇವಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ: ರಾಜ್ಯಪಾಲರಿಗೆ ದೂರು ಸಲ್ಲಿಕೆ – Kannada News | Corruption Complaint Filed with Karnataka Governor Against Congress Leader H.C. Mahadevappa Over Tender Scams

ಬೆಂಗಳೂರು, ಜೂನ್​​ 17: ಕಾಂಗ್ರೆಸ್ ಶಾಸಕ H.C.ಮಹದೇವಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ಬೆಂಗಳೂರು ನಿವಾಸಿಯೊಬ್ಬರು ಈ ಸಂಬಂಧ ರಾಜ್ಯಪಾಲರಿಗೆ ದೂರು ಸಲ್ಲಿಕೆ ಮಾಡಿದ್ದಾರೆ. ಹೆಚ್​.ಸಿ.ಮಹದೇವಪ್ಪ ಸಚಿವರಾಗಿದ್ದ ಅವಧಿಯಲ್ಲಿ ಸಾಮಾಜಿಕ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS) ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮ/ಮಂಡಳಿಯ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ, ಭ್ರಷ್ಟಾಚಾರ, ದಾಖಲೆಗಳ ನಕಲಿ ಸೃಷ್ಟಿ ಹಾಗೂ ಅಧಿಕಾರ ದುರುಪಯೋಗ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮನವಿಯ ಪ್ರಕಾರ, ಹೆಚ್.ಸಿ. ಮಹದೇವಪ್ಪ ಅವರು ಸಾಮಾಜಿಕ ಕಲ್ಯಾಣ ಸಚಿವರಾಗಿದ್ದ ಅವಧಿಯಲ್ಲಿ KREIS ಅಡಿಯಲ್ಲಿ ನಡೆದ ಹಲವು ಟೆಂಡರ್‌ಗಳನ್ನು ಪಾರದರ್ಶಕ ಹಾಗೂ ಸ್ಪರ್ಧಾತ್ಮಕ ಪ್ರಕ್ರಿಯೆಯ ಬದಲು ನಿರ್ದಿಷ್ಟ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಅನುಕೂಲವಾಗುವಂತೆ ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸಂಸ್ಥೆಗಳು ನಕಲಿ, ತಿರುಚಿದ ಹಾಗೂ ನಕಲಿ ಅನುಭವ ಪ್ರಮಾಣಪತ್ರಗಳು, ಯೋಜನೆ ಪೂರ್ಣಗೊಳಿಸಿದ ದಾಖಲೆಗಳು ಮತ್ತು ಇತರೆ ಪೂರಕ ಮಾಹಿತಿ ನೀಡಿ ಟೆಂಡರ್ ಅರ್ಹತೆ ಪಡೆದಿವೆ ಎಂದೂ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ನಾಳೆಯೇ ಪರಿಷತ್​​ ಚುನಾವಣೆ; 5ನೇ ಅಭ್ಯರ್ಥಿ ಗೆಲುವಿಗೆ ‘ಕೈ’ ತಂತ್ರ, ಏಕೈಕ ಕ್ಯಾಂಡಿಡೇಟ್​​ ವಿಜಯಕ್ಕೆ ಜೆಡಿಎಸ್​​ ಕಸರತ್ತು

ಹೀಗಾಗಿ ಸ್ವತಂತ್ರ, ನಿಷ್ಪಕ್ಷಪಾತ ಮತ್ತು ಕಾಲಮಿತಿಯೊಳಗಿನ ತನಿಖೆ ನಡೆಸುವಂತೆ ಹಾಗೂ ಟೆಂಡರ್ ಪ್ರಕ್ರಿಯೆ, ಅರ್ಹತಾ ದಾಖಲೆಗಳು, ಸರ್ಕಾರಿ ಅಧಿಕಾರಿಗಳ ಪಾತ್ರ, GeM ಪೋರ್ಟಲ್ ನಿಯಮ ಪಾಲನೆ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಅಲ್ಲದೆ, ಆರೋಪಗಳು ಸಾಬೀತಾದಲ್ಲಿ ಸಾರ್ವಜನಿಕ ನಿಧಿಗೆ ಉಂಟಾದ ನಷ್ಟವನ್ನು ವಸೂಲಿ ಮಾಡುವುದರ ಜೊತೆಗೆ ಹೆಚ್.ಸಿ. ಮಹದೇವಪ್ಪ ಅವರನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link