Category Archives: Blog

Your blog category

ನಕಲಿ ದಾಖಲೆ ಸೃಷ್ಟಿಸಿ ಕೆಎಸ್​ಆರ್​ಟಿಸಿ ಸಿಬ್ಬಂದಿ ವರ್ಗಾವಣೆ: ಪರಿಶೀಲನೆ ಬಳಿಕ ಅಸಲಿ ಸತ್ಯ ಬಯಲು – Kannada News | KSRTC Staff Transferred Using Fake Documents; Truth Revealed After Verification

ಬೆಂಗಳೂರು, ಫೆಬ್ರವರಿ 16: ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಲಿದ್ದರು ಕೆಎಸ್​ಆರ್​ಟಿಸಿ (KSRTC) ಸಿಬ್ಬಂದಿ ವರ್ಗಾವಣೆ (Transfer) ನಡೆದಿರುವಂತಹ ಘಟನೆಯೊಂದು ನಗರದಲ್ಲಿ ನಡೆದಿದೆ. ಬೆಂಗಳೂರು ದಕ್ಷಿಣ ವಿಭಾಗದ ಮಾಗಡಿ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಚಾಲಕ ಕಂ ನಿರ್ವಾಹಕ ಎಂ.ಜಯದೇವರನ್ನು ಏಕಾಏಕಿ ಮಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಸದ್ಯ ಪರಿಶೀಲನೆ ವೇಳೆ ಯಾರೋ ಇವರ ಹೆಸರಿನಲ್ಲಿ ವರ್ಗಾವಣೆ ಅರ್ಜಿ ಸಲ್ಲಿಸಿರುವುದು ಪತ್ತೆಯಾಗಿದ್ದು, ವಿಧಾನಸೌಧ ಠಾಣೆಯಲ್ಲಿ ಸಚಿನ್ ಎಂಬುವವರ ವಿರುದ್ಧ ಕೇಸ್ ದಾಖಲಾಗಿದೆ.

ನಡೆದಿದ್ದೇನು? 

ಬೆಂಗಳೂರು ದಕ್ಷಿಣ ವಿಭಾಗದ ಮಾಗಡಿ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂ.ಜಯದೇವರನ್ನು ಏಕಾಏಕಿ ಮಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶಿಫಾರಸಿನ ಮೇಲೆ ವರ್ಗಾವಣೆ ಆಗಿತ್ತು.

ಇದನ್ನೂ ಓದಿ: ಪ್ರಯಾಣಿಕರಿಗೆ ಶಾಕ್ ಕೊಟ್ಟ ಕೆಎಸ್​ಆರ್​ಟಿಸಿ: ಇಂದಿನಿಂದಲೇ ಈ ದರ ಹೆಚ್ಚಳ

ವರ್ಗಾವಣೆ ಬಗ್ಗೆ ಅನುಮಾನ ಹಿನ್ನೆಲೆ ಜಯದೇವ ಪರಿಶೀಲನೆ ಮಾಡಿದ್ದಾರೆ. ವಿಧಾನಸೌಧದ ಸಚಿವರ ಕಚೇರಿಗೆ ಭೇಟಿ ನೀಡಿದ್ದ ಸಿಬ್ಬಂದಿ, ಜಯದೇವ ಹೆಸರಿನಲ್ಲಿ ಸಚಿವರು ಶಿಫಾರಸು ಮಾಡಿ ಪತ್ರ ನೀಡಿರುವುದು ಪತ್ತೆಯಾಗಿತ್ತು. ಹೀಗಾಗಿ ನಾನು ವರ್ಗಾವಣೆ ಕೋರಿ ಮನವಿ ಪತ್ರ ಸಲ್ಲಿಸಿಲ್ಲ. ಯಾರೋ ನನ್ನ ಹೆಸರಿನ ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ವಿಧಾನಸೌಧ ಠಾಣೆಗೆ ಜಯದೇವ ದೂರು ನೀಡಿದ್ದಾರೆ.

ದೂರಿನಲ್ಲೇನಿದೆ? 

ಈ ಹಿಂದೆ ನಾನು (ಜಯದೇವ) ಬೆಂಗಳೂರು ಕೇಂದ್ರೀಯ ವಿಭಾಗದ 6ನೇ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದಿನಾಂಕ 11.11.2025 ರಂದು ಮುಖ್ಯ ಸಂಚಾರ ವ್ಯವಸ್ಥಾಪಕರಾದ ಅಂತೋಣಿ ಜಾರ್ಜ್ ರವರು ನನ್ನನ್ನು ಏಕಾಏಕಿ ಬೆಂಗಳೂರು ಕೇಂದ್ರೀಯ ದಿಂದ ಮಂಗಳೂರು ವಿಭಾಗಕ್ಕೆ ವರ್ಗಾವಣೆ ಮಾಡಿದ್ದರು. ಈ ಬಗ್ಗೆ ಅನುಮಾನಗೊಂಡು ಪರಿಶೀಲನೆ ಮಾಡಿದಾಗ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಶಿಫಾರಸ್ಸಿನ ಮೇರೆಗೆ ನನ್ನ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಯಿತು.

ಇದನ್ನೂ ಓದಿ: ಬಿಗ್ ಶಾಕ್ ಕೊಟ್ಟ KSRTC: ನಾಳೆಯಿಂದಲೇ ನೂತನ ಪರಿಷ್ಕ್ರತ ದರ ಜಾರಿಗೆ

ನಂತರ ಕೆಎಸ್​​ಆರ್​​ಟಿಸಿ ಕೇಂದ್ರ ಕಚೇರಿಗೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಆರ್​ಟಿಐ ಮೂಲಕ ಅರ್ಜಿ ಸಲ್ಲಿಸಿ ದಾಖಲಾತಿಗಳನ್ನು ಪಡೆದು ಪರಿಶೀಲಿಸಿದಾಗ ನನ್ನ ಹೆಸರಿನಲ್ಲಿ ನಕಲಿ ಸಹಿ ಮಾಡಿ, ನಕಲಿ ದಾಖಲೆ ಸೃಷ್ಟಿ ಮಾಡಿ ನಾನು ಕೋರಿರುವಂತೆ ಕೌಟುಂಬಿಕ ಸಮಸ್ಯೆ ಹಿನ್ನಲೆಯಲ್ಲಿ ಬೆಂಗಳೂರು ಕೇಂದ್ರೀಯ ವಿಭಾಗದಿಂದ ಮಂಗಳೂರು ವಿಭಾಗಕ್ಕೆ ವರ್ಗಾವಣೆ ಮಾಡುವಂತೆ ದಿನಾಂಕ 24.09.2025 ರಂದು ಮನವಿ ಸಲ್ಲಿಸಿದ್ದು, ಸಚಿವರ ನಡವಳಿ ಪತ್ರ ಸ್ವೀಕರಿಸಿ ತೆಗೆದುಕೊಂಡು ಹೋದ ಸಚಿನ್ ನನ್ನು ವಿಚಾರಿಸಿ, ಸದರಿ ನಕಲಿ ದಾಖಲಾತಿಯನ್ನು ಸೃಷ್ಟಿಸಿ, ಸಚಿವರ ಕಚೇರಿಗೆ ಸಲ್ಲಿಸಿ ವರ್ಗಾವಣೆಗೆ ಕಾರಣರಾಗಿರುವ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಟೀಂ ಇಂಡಿಯಾವನ್ನು ಅತಿ ಹೆಚ್ಚು ಗೆಲುವಿನತ್ತ ಮುನ್ನಡೆಸಿದ ನಾಯಕ ಸೂರ್ಯ – Kannada News | Suryakumar Yadav Breaks Rohit’s Record: India Dominates 2026 T20 WC Under SKY

ಇದೀಗ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಇಂಡಿಯಾ 2026 ರ ಟಿ 20 ವಿಶ್ವಕಪ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದೆ. ಫೆಬ್ರವರಿ 15 ರಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ಸೋಲಿಸಿತು. ಈ ಗೆಲುವಿನೊಂದಿಗೆ ನಾಯಕ ಸೂರ್ಯಕುಮಾರ್ ಯಾದವ್, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ವಿಶಿಷ್ಠ ದಾಖಲೆಯನ್ನು ಬರೆದಿದ್ದಾರೆ.

Source link

2 ದಿನಗಳ ಭೇಟಿಗೆ ಫೆ. 25ರಂದು ಪ್ರಧಾನಿ ಮೋದಿ ಇಸ್ರೇಲ್​ಗೆ ಪ್ರವಾಸ – Kannada News | PM Modi to visit Israel on February 25 Netanyahu says India is enormously powerful and popular

ಟೆಲ್ ಅವಿವ್, ಫೆಬ್ರವರಿ 16: ಪ್ರಧಾನಿ ನರೇಂದ್ರ ಮೋದಿ (PM Modi) ಫೆಬ್ರವರಿ 25ರಿಂದ 26ರವರೆಗೆ ಎರಡು ದಿನಗಳ ಭೇಟಿಗಾಗಿ ಇಸ್ರೇಲ್‌ಗೆ ಪ್ರಯಾಣಿಸಲಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಂದು ಘೋಷಿಸಿದ್ದಾರೆ. ಅಮೇರಿಕನ್ ಯಹೂದಿ ಸಂಘಟನೆಗಳ ಅಧ್ಯಕ್ಷರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ನೆತನ್ಯಾಹು ಈ ಘೋಷಣೆ ಮಾಡಿದ್ದಾರೆ. “ಮುಂದಿನ ವಾರ ಇಲ್ಲಿಗೆ ಯಾರು ಬರುತ್ತಿದ್ದಾರೆ ಗೊತ್ತಾ? ಭಾರತದಿಂದ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ” ಎಂದು ನೆತನ್ಯಾಹು ಸಭೆಗೆ ತಿಳಿಸಿದ್ದಾರೆ.

“ಇಸ್ರೇಲ್ ಮತ್ತು ಭಾರತದ ನಡುವಿನ ಅಗಾಧ ಮೈತ್ರಿಯಿದೆ. ನಾವು ಎಲ್ಲಾ ರೀತಿಯ ಸಹಕಾರದ ಬಗ್ಗೆ ಚರ್ಚಿಸಲಿದ್ದೇವೆ. ಭಾರತವು ಒಂದು ಸಣ್ಣ ದೇಶವಲ್ಲ ಎಂದು ನಿಮಗೆಲ್ಲರಿಗೂ ತಿಳಿದಿದೆ. ಭಾರತ 1.4 ಬಿಲಿಯನ್ ಜನರನ್ನು ಹೊಂದಿದೆ. ಭಾರತವು ಅತ್ಯಂತ ಶಕ್ತಿಶಾಲಿ, ಅತ್ಯಂತ ಜನಪ್ರಿಯ ದೇಶವಾಗಿದೆ” ಎಂದು ಅವರು ಒತ್ತಿ ಹೇಳಿದರು.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಕರೆ ಮಾಡಿದ ಇಸ್ರೇಲ್ ಪಿಎಂ ನೆತನ್ಯಾಹು; ಗಾಜಾ ಶಾಂತಿ ಯೋಜನೆ ಕುರಿತು ಚರ್ಚೆ

ಪ್ರಧಾನಿ ಮೋದಿ ಅವರ ಇಸ್ರೇಲ್ ಭೇಟಿಯು ಉಭಯ ದೇಶಗಳ ನಡುವಿನ ಕಾರ್ಯತಂತ್ರ, ರಕ್ಷಣೆ ಮತ್ತು ತಾಂತ್ರಿಕ ಸಂಬಂಧಗಳಿಗೆ ಹೊಸ ಆವೇಗವನ್ನು ನೀಡುವ ನಿರೀಕ್ಷೆಯಿದೆ. ಇದು ಪ್ರಧಾನಿ ಮೋದಿ ಅವರ ಮೂರನೇ ಅವಧಿಯಲ್ಲಿ ಇಸ್ರೇಲ್‌ಗೆ ಅವರ ಮೊದಲ ಭೇಟಿಯಾಗಿದೆ. ಪ್ರಧಾನಿ ಮೋದಿ ಕೊನೆಯ ಬಾರಿಗೆ 2017ರಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ್ದರು. ಇದು ಎರಡೂ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 25 ವರ್ಷಗಳನ್ನು ಸೂಚಿಸುತ್ತದೆ.

ಕಳೆದ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಮತ್ತು ನೆತನ್ಯಾಹು ರಕ್ಷಣೆ, ಸೈಬರ್ ಭದ್ರತೆ, ಕೃಷಿ ಮತ್ತು ಭಯೋತ್ಪಾದನೆ ವಿರುದ್ಧ ಸಹಕಾರದ ಕುರಿತು ಮಾತುಕತೆ ನಡೆಸಿದ್ದರು. ಈ ಬಾರಿ, ಇಬ್ಬರೂ ನಾಯಕರು ಪಶ್ಚಿಮ ಏಷ್ಯಾದಲ್ಲಿನ ಭದ್ರತಾ ಪರಿಸ್ಥಿತಿಯ ಜೊತೆಗೆ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ನೆತನ್ಯಾಹುಗೆ ಪ್ರಧಾನಿ ಮೋದಿ ಕರೆ, ಭದ್ರತಾ ಸಂಪುಟ ಸಭೆಯನ್ನೇ ಬಿಟ್ಟು ಬಂದ ಇಸ್ರೇಲ್ ಪ್ರಧಾನಿ

ಕಳೆದ ವರ್ಷ ನವೆಂಬರ್‌ನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರ ಇಸ್ರೇಲ್ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಇಸ್ರೇಲ್ ರಕ್ಷಣಾ, ಕೈಗಾರಿಕಾ ಮತ್ತು ತಾಂತ್ರಿಕ ಸಹಕಾರವನ್ನು ಹೆಚ್ಚಿಸುವ ಒಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಚಿವ ಸ್ಥಾನಕ್ಕೆ ರಾಜೀನಾಮೆ: ಸ್ಪಷ್ಟನೆ ಕೊಟ್ಟ SS ಮಲ್ಲಿಕಾರ್ಜುನ್, ಹೇಳಿದ್ದೇನು? – Kannada News | Minister SS Mallikarjun Gives clarify about resign to ministerial post

ದಾವಣಗೆರೆ, (ಫೆಬ್ರವರಿ 16): ತೋಟಗಾರಿಕೆ, ಗಣಿ ಭೂವಿಜ್ಞಾನ ಇಲಾಖೆ ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದ್ದವು. ಅವರ ತಂದೆ ಶಾಮನೂರು ಶಿವಶಂಕರಪ್ಪ ಅವರ ನಿಧನದ ಬಳಿಕ ಎಲ್ಲಾ ಜವಾಬ್ದಾರಿಗಳು ಪುತ್ರ ಎಸ್​ಎಸ್​ ಮಲ್ಲಿಕಾರ್ಜುನ ಅವರ ಹೆಗಲಿಗೆ ಬಿದ್ದಿದ್ದು, ಈ ಒತ್ತಡಗಳಲ್ಲಿ ಸಚಿವ ಸ್ಥಾನ ನಿಭಾಯಿಸಲು ಕಷ್ಟವಾಗುತ್ತಿದೆ ಎಂದು ಎಸ್​ಎಸ್​ ಮಲ್ಲಿಕಾರ್ಜುನ ಅವರು ರಾಜೀನಾಮೆ ನೀಡಲು ಮುಂದಾಗಿದ್ದರು. ಆದ್ರೆ, ಇದಕ್ಕೆ ಸಿದ್ದರಾಮಯ್ಯ, ಆಕ್ಷೇಪಿಸಿದ್ದು, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ. ಇಂತಹ ಸಂದರ್ಭದಲ್ಲಿ ನೀವು ರಾಜೀನಾಮೆ ನೀಡಿದರೆ ಜನಕ್ಕೆ ಸರ್ಕಾರದ ಬಗ್ಗೆ ತಪ್ಪು ಸಂದೇಶ ಹೋಗುತ್ತೆ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಸ್ವತಃ ಎಸ್.ಎಸ್.ಮಲ್ಲಿಕಾರ್ಜುನ ಅವರೇ ಪ್ರತಿಕ್ರಿಯಿಸಿದ್ದು, ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂಬುದು ಶುದ್ಧ ಸುಳ್ಳು. ರಾಜೀನಾಮೆ ಕೊಡ್ತೇನೆಂದು ಸಿಎಂ ಬಳಿ ಹೋಗಿದ್ದೆ ಎಂಬುದು ಸುಳ್ಳು. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು. ಈ ಮೂಲಕ ರಾಜೀನಾಮೆ ನೀಡಲ್ಲ ಎಂದು ಕಂತೆ ಕಂತೆಗಳಿಗೆ ತೆರೆ ಎಳೆದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Chanakya Niti: ಈ ಗುಣಗಳು ವ್ಯಕ್ತಿಗೆ ಯಶಸ್ಸು, ಗೌರವವನ್ನು ತಂದುಕೊಡುತ್ತದೆ – Kannada News | Chanakya Niti: If you have these qualities, you will definitely be successful in life

ಯಶಸ್ಸನ್ನು (success) ಸಾಧಿಸಬೇಕು, ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಅದಕ್ಕಾಗಿ ಕಠಿಣ ಪರಿಶ್ರಮವನ್ನೂ ಪಡುತ್ತಾರೆ. ಪರಿಶ್ರಮದ ಜೊತೆಗೆ ದೃಢ ಮನಸ್ಸು ಸಾಧಿಸುವ ಛಲ ಇದ್ದರೆ ಮಾತ್ರ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ದೃಢ ಮನಸ್ಸಿನ ಜೊತೆಗೆ ಈ ಕೆಲವೊಂದಿಷ್ಟು ಗುಣಗಳನ್ನು ಸಹ ಬೆಳೆಸಿಕೊಳ್ಳಬೇಕು. ಅಂತಹ ಗುಣಗಳಿರುವ ಯಾರೇ ಆದರೂ ಸಹ ಜೀವನದಲ್ಲಿ ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುತ್ತಾರಂತೆ. ಹಾಗಿದ್ರೆ ಲೈಫಲ್ಲಿ ಸಕ್ಸಸ್‌ ಆಗಲು ಚಾಣಕ್ಯರು ಹೇಳಿರುವ ಯಾವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಅನ್ನೋದನ್ನು ನೋಡೋಣ ಬನ್ನಿ.

ಯಶಸ್ಸು ಗಳಿಸಲು ಬೆಳೆಸಿಕೊಳ್ಳಬೇಕಾದ ಗುಣಗಳಿವು:

ಕಷ್ಟದ ಸಮಯದಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳುವುದು: ಆಚಾರ್ಯ ಚಾಣಕ್ಯರ ಪ್ರಕಾರ, ಕಠಿಣ ಸನ್ನಿವೇಶಗಳು ನಿಜವಾಗಿಯೂ ವ್ಯಕ್ತಿಯನ್ನು ಪರೀಕ್ಷಿಸುತ್ತವೆ. ಮಾನಸಿಕವಾಗಿ ಬಲಿಷ್ಠವಾಗಿರುವ  ವ್ಯಕ್ತಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಎಂದಿಗೂ ಭಯಭೀತರಾಗುವುದಿಲ್ಲ, ಬದಲಾಗಿ ಶಾಂತ ಮತ್ತು ತಾಳ್ಮೆಯ ಮನಸ್ಥಿತಿಯಿಂದ ಇರುತ್ತಾರೆ. ಮತ್ತು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಬದಲಾಗಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ರೀತಿಯ ಗುಣವನ್ನು ಬೆಳೆಸಿಕೊಂಡರೆ ಜೀವನದಲ್ಲಿ ನೀವು ಸಹ ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುತ್ತೀರಿ.

ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು: ಚಾಣಕ್ಯರ ಪ್ರಕಾರ, ಕೋಪ, ಭಯ ಮತ್ತು ದುರಾಸೆಗಳು ವ್ಯಕ್ತಿಯ ದೊಡ್ಡ ಶತ್ರುಗಳು. ಆದ್ದರಿಂದ, ತಮ್ಮ ಭಾವನೆಗಳನ್ನು ಹೇಗೆ ನಿಯಂತ್ರಿಸಬೇಕೆಂದು ತಿಳಿದಿರುವವರು ಮಾತ್ರ ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಬಲವಾದ ಮನಸ್ಸಿನ ವ್ಯಕ್ತಿಗಳು ಕೋಪದಲ್ಲಿ ಏನನ್ನಾದರೂ ಮಾಡುವ ಅಥವಾ ಹೇಳುವ ಮೊದಲು ವಿಷಯಗಳನ್ನು ಎಚ್ಚರಿಕೆಯಿಂದ ಯೋಚಿಸಿ ಸಮಯ ಸಂದರ್ಭವನ್ನು ಅರ್ಥಮಾಡಿಕೊಳ್ಳುತ್ತಾರೆ. ಈ ಗುಣ ತಪ್ಪುಗಳಾಗುವುದನ್ನು ತಡೆಯುತ್ತದೆ ಮತ್ತು ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ.

ಹಿತಮಿತ ಮತ್ತು ಚಿಂತನಶೀಲ ಮಾತು: ಮಾತು ಬೆಳ್ಳಿ, ಮೌನ ಬಂಗಾರ ಎಂಬ ಮಾತಿದೆ. ಅದೇ ರೀತಿ ಹಿತಮಿತವಾಗಿ ಚಿಂತನಶೀಲರಾಗಿ ಮಾತನಾಡುವವರು ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಆಂತರಿಕ ಆಲೋಚನೆಗಳನ್ನು ಅಥವಾ ಜೀವನದ ಘಟನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳದಿರುವುದು ತುಂಬಾನೇ ಒಳ್ಳೆಯದು. ಹೆಚ್ಚು ಮಾತು ಮತ್ತು ಪ್ರತಿಯೊಂದು ವಿಷಯವನ್ನು ಹಂಚಿಕೊಳ್ಳುವ ಅಭ್ಯಾಸ ಹಾನಿಕಾರಕವಾಗಬಹುದು ಮತ್ತು ಯಶಸ್ಸಿಗೆ ತಡೆಯುಂಟು ಮಾಡಬಹುದು.

ಇದನ್ನೂ ಓದಿ: ಉಚಿತವಾಗಿ ಪಡೆಯುವ ವಸ್ತುಗಳು ಮನುಷ್ಯನನ್ನು ಹೇಗೆ ದುರ್ಬಲಗೊಳಿಸುತ್ತೆ ಗೊತ್ತಾ?

ನಿರಂತರ ಕಲಿಕೆ: ಚಾಣಕ್ಯ ನೀತಿಯ ಪ್ರಕಾರ, ಒಬ್ಬ ವ್ಯಕ್ತಿಯು ಕಲಿಯುವುದನ್ನು ನಿಲ್ಲಿಸಿದರೆ,  ಆತ ಎಂದಿಗೂ ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ನಿರಂತರವಾಗಿ ಹೊಸ ವಿಷಯಗಳನ್ನು, ಸಂಗತಿಗಳನ್ನು ಕಲಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು, ತಪ್ಪುಗಳಿಂದ, ಇತರರ ಅನುಭವಗಳಿಂದ ಜೀವನ ಪಾಠವನ್ನು ಕಲಿಯಬೇಕು, ಈ ಗುಣವನ್ನು ಬೆಳೆಸಿದರೆ ಮಾತ್ರ ಮಾನಸಿಕವಾಗಿ ಬಲಿಷ್ಠರಾಗಲು ಮತ್ತು ಯಶಸ್ಸನ್ನು ಗಳಿಸಲು ಸಾಧ್ಯ.

ಆತ್ಮ ವಿಶ್ವಾಸ: ಚಾಣಕ್ಯರ ಪ್ರಕಾರ, ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿಯು ಕಠಿಣ ಸಂದರ್ಭಗಳಲ್ಲಿಯೂ ಸಹ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ದೃಢ ಮನಸ್ಸಿನ ಜನರು ಇತರರ ಹುಸಿ ಮಾತುಗಳಿಗೆ ಪ್ರಭಾವಿತರಾಗುವುದಿಲ್ಲ ಬದಲಾಗಿ ಅವರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ಆತ್ಮವಿಶ್ವಾಸವು ಅವರನ್ನು ಇತರರಿಗಿಂತ ವಿಭಿನ್ನ ಮತ್ತು ಬಲಶಾಲಿಗಳನ್ನಾಗಿ ಮಾಡುತ್ತದೆ. ಮತ್ತು ಯಶಸ್ಸನ್ನು ಗಳಿಸಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru: ಉದ್ಯಮಿ ಮೇಲೆ ಕ್ಯಾಬ್​​ ಚಾಲಕನ ದೌರ್ಜನ್ಯ; ಎಸಿ ಹಾಕು ಎಂದಿದ್ದಕ್ಕೆ ಕಿರಿಕ್​​ – Kannada News | Bengaluru Taxi Driver Demands More: Startup Founder’s Complaint, App Ride Woes Exposed

ಬೆಂಗಳೂರು, ಫೆಬ್ರವರಿ 16: ಆ್ಯಪ್​​ ಬುಕಿಂಗ್​​ ಆಧಾರಿತ ಟ್ಯಾಕ್ಸಿ, ಆಟೋ ಸೇವೆಗಳ ವೇಳೆ ಹೆಚ್ಚಿನ ಹಣಕ್ಕೆ ಚಾಲಕರು ಪ್ರಯಾಣಿಕರನ್ನು ಪೀಡಿಸುವ ಘಟನೆಗಳು ಬೆಂಗಳೂರಲ್ಲಿ ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ಇದಕ್ಕೆ ಮತ್ತೊಂದು ಸೇರ್ಪಡೆಯಾಗಿದ್ದು, ಸ್ಟಾರ್ಟ್‌ಅಪ್ ಒಂದರ ಸಂಸ್ಥಾಪಕ ಹಾಗೂ ಸಿಇಒ ಧನಂಜಯ್ ಯಾದವ್ ಎಂಬವರು ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆ ಕ್ಯಾಬ್ ಪ್ರಯಾಣದಲ್ಲಿ ತಾವು ಸಂಭವಿಸಿದ ಆತಂಕಕಾರಿ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪ್ರಯಾಣದ ವೇಳೆ ತಾನು ಬಂಧಿ ಎಂಬ ಭಾವನೆ ತನಗೆ ಮೂಡಿದ್ದು, ದೆಹಲಿಯಲ್ಲಿಯ AI ಇಂಪ್ಯಾಕ್ಟ್ ಸಮಿಟ್‌ಗೆಂದು ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿರೋದಾಗಿ ಅವರು ಆರೋಪಿಸಿದ್ದಾರೆ.

ಹೆಚ್ಚಿನ ಹಣಕ್ಕೆ ಡಿಮ್ಯಾಂಡ್​​

ಅವರು ನೀಡಿರುವ ಮಾಹಿತಿ ಪ್ರಕಾರ ಏರ್​ಪೋರ್ಟ್​​ಗೆ ತೆರಲಲು ನಮ್ಮ ಯಾತ್ರಿ ಆ್ಯಪ್ ಮೂಲಕ ಎಸಿ ಕ್ಯಾಬ್ ಬುಕ್ ಮಾಡಿದ್ದರು. ಆದರೆ ಪ್ರಯಾಣದ ವೇಳೆ ಚಾಲಕ ಎಸಿ ಆನ್ ಮಾಡಲು ನಿರಾಕರಿಸಿದ್ದು, ಇದು ನಾನ್-ಎಸಿ ಬುಕ್ಕಿಂಗ್ ಎಂದು ತಿಳಿಸಿದ್ದಾನೆ. ಆಪ್‌ನಲ್ಲಿ ಎಸಿ ರೈಡ್ ಎಂದು ಸ್ಪಷ್ಟವಾಗಿ ತೋರಿಸುತ್ತಿದೆ ಎಂದರೂ ಆತ ಅದನ್ನು ಅಲ್ಲಗಳೆದಿದ್ದಾನೆ. ಜೊತೆಗೆ ಆ್ಯಪ್​​ ತೋರಿಸುತ್ತಿದ್ದ 844 ರೂಪಾಯಿಗಿಂತಲೂ ಅಧಿಕ ಹಣ ನೀಡುವಂತೆ ಪೀಡಿಸಿದ್ದಾನೆ. ಇದು ಮೀಟರ್​​ ಟ್ಯಾಕ್ಸಿ ಆಗಿರುವ ಕಾರಣ, ಪ್ರತಿ ಕಿಲೋಮೀಟರಿಗೆ 24 ರೂ. ಶುಲ್ಕವಿದೆ ಎಂದು ತಿಳಿಸಿದ್ದಾನೆ. ಈ ವೇಳೆ ಯಾದವ್ ಅವರು ಆ್ಯಪ್‌ನಲ್ಲಿ ತೋರಿಸಿದ ಮೊತ್ತವನ್ನೇ ಪಾವತಿಸುವುದಾಗಿ ಹೇಳಿದರೂ ಆತ ಒಪ್ಪಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಕೊನೆಗೂ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್

ಹೀಗಾಗಿ ಮತ್ತೊಂದು ಕ್ಯಾಬ್ ಬುಕ್ ಮಾಡಲು ವಾಹನ ನಿಲ್ಲಿಸುವಂತೆ ಕೇಳಿದಾಗ, 844 ರೂಪಾಯಿ ಹಣ ಸಂಪೂರ್ಣ ಮೊತ್ತ ಪಾವತಿಸದೇ ನೀವು ಇಳಿಯುವಂತಿಲ್ಲ ಎಂದು ಆತ ಹೇಳಿದ್ದು, ಕೊನೆಗೆ ವಿಮಾನ ನಿಲ್ದಾಣ ತಲುಪಬೇಕಾದ ಕಾರಣ ಆತ ಹೇಳಿದ್ದಕ್ಕೆ ತಾನು ಒಪ್ಪಿಕೊಳ್ಳಲೇಬೇಕಾಯಿತು ಎಂದು ಯಾದವ್ ಆರೋಪಿಸಿದ್ದಾರೆ. ಈ ಅನುಭವದಿಂದ ತಮಗೆ ಅಸುರಕ್ಷಿತ ಭಾವನೆ ಉಂಟಾಯಿತು ಎಂದೂ ಅವರು ತಿಳಿಸಿದ್ದಾರೆ. ಘಟನೆ ಬಗ್ಗೆ ದೂರು ದಾಖಲಿಸಿರುವ ಅವರು, ಚಾಲಕರ ಇಂತಹ ವರ್ತನೆ ವಿರುದ್ಧ ಅಧಿಕಾರಿಗಳು ಹಾಗೂ ಕ್ಯಾಬ್ ಸೇವಾ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳ ಸುರಕ್ಷತೆ ಹಾಗೂ ಜವಾಬ್ದಾರಿತನದ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಎಐ ಇಂಪ್ಯಾಕ್ಟ್ ಶೃಂಗಸಭೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ – Kannada News | PM Narendra Modi inaugurates 4th AI Impact Summit at Delhi

ನವದೆಹಲಿ, ಫೆಬ್ರುವರಿ 16: ನಾಲ್ಕನೇ ಆವೃತ್ತಿಯ ಎಐ ಇಂಪ್ಯಾಟ್ ಶೃಂಗಸಭೆಗೆ (AI Impact Summit) ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇವತ್ತಿನಿಂದ ಫೆಬ್ರುವರಿ 20ರವರೆಗೂ ಐದು ದಿನಗಳ ಕಾಲ ಭಾರತ್ ಮಂಟಪಂನಲ್ಲಿ ಈ ಸಮಿಟ್​ನ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ‘ಜನತೆ, ಭೂಮಿ ಮತ್ತು ಪ್ರಗತಿ’ ಥೀಮ್​ನಲ್ಲಿ ಈ ಶೃಂಗಸಭೆ ಆಯೋಜನೆಯಾಗುತ್ತಿದೆ.

ಹಿಂದಿನ ಮೂರು ಎಐ ಇಂಪ್ಯಾಕ್ಟ್ ಸಮಿಟ್​ಗಳು ಬ್ರಿಟನ್, ಕೊರಿಯಾ ಮತ್ತು ಫ್ರಾನ್ಸ್ ದೇಶಗಳಲ್ಲಿ ನಡೆದಿದ್ದವು. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಸಮಾವೇಶ ನಡೆಯುತ್ತಿರುವುದು. ಸಮಾವೇಶದಲ್ಲಿ ಏಳು ಅಂಶಗಳ ಥೀಮ್ ಒಳಗೊಳ್ಳಲಾಗಿದೆ. ಮಾನವ ಸಂಪನ್ಮೂಲ, ಒಳಗೊಳ್ಳುವಿಕೆ, ನಂಬಿಕೆ, ಪುಟಿದೇಳುವಿಕೆ, ವಿಜ್ಞಾನ, ಸಂಪನ್ಮೂಲ, ಸಾಮಾಜಿಕ ಒಳಿತು, ಈ ಅಂಶಗಳ ಆಧಾರದ ಮೇಲೆ ಜಾಗತಿಕ ಸಹಭಾಗಿತ್ವಗಳನ್ನು ಸೇರಿಸುವುದಕ್ಕೆ ಗಮನ ಕೊಡಲಾಗುತ್ತದೆ.

ಇದನ್ನೂ ಓದಿ: AI Impact Summit: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್

ಎಐ ಇಂಪ್ಯಾಕ್ಟ್ ಸಮಿಟ್​ನಲ್ಲಿ ಪ್ರತೀ ದಿನ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳು ನಡೆಯುತ್ತವೆ. ಎಐ ಕ್ಷೇತ್ರದಲ್ಲಿ ಆಗಿರುವ ಹೊಸ ಹೊಸ ಆವಿಷ್ಕಾರಗಳ ಪ್ರದರ್ಶನಗಳನ್ನು ಕಾಣಬಹುದು. ವಿವಿಧ ಸ್ಟಾರ್ಟಪ್​ಗಳು ತಮ್ಮ ಉತ್ಪನ್ನಗಳನ್ನು ತೋರ್ಪಡಿಸುತ್ತಿವೆ. 300ಕ್ಕೂ ಹೆಚ್ಚು ಪ್ರದರ್ಶಕರು ಈ ಸಮಾವೇಶದಲ್ಲಿ ಕಾರ್ಯನಿರತರಾಗಿರುತ್ತಾರೆ.

ವಿವಿಧ ದೇಶಗಳ ಪ್ರಧಾನಿ, ಅಧ್ಯಕ್ಷ ಅಥವಾ ಉನ್ನತ ಸ್ತರದ ನಾಯಕರುಗಳು, ಸಚಿವರುಗಳು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಓಪನ್ ಎಐ, ಗೂಗಲ್, ಎನ್​ವಿಡಿಯಾ, ಮೈಕ್ರೋಸಾಫ್ಟ್, ರಿಲಾಯನ್ಸ್, ಆಂಥ್ರೋಪಿಕ್ ಇತ್ಯಾದಿ ದೈತ್ಯ ಕಂಪನಿಗಳ ಪಾತಿನಿಧ್ಯವನ್ನು ನಿರೀಕ್ಷಿಸಬಹುದು.

ಇದನ್ನೂ ಓದಿ: ಭಾರತದ ಎಐ ಇಂಪ್ಯಾಕ್ಟ್ ಸಮಿಟ್​ಗೆ ಇಡೀ ಜಗತ್ತು ಆಕರ್ಷಿತವಾಗಿರುವುದು ಯಾಕೆ? ಅಂಥದ್ದೇನು ವಿಶೇಷತೆ ಇದೆ?

ಜಾಗತಿಕ ಟೆಕ್ ದಿಗ್ಗಜ ಸಂಸ್ಥೆಗಳು ಭಾರತದಲ್ಲಿ ಎಐ ಅಭಿವೃದ್ಧಿಗೆ ಬಂಡವಾಳ ಹೂಡಿಕೆ ಮಾಡಬಹುದು. ಭಾರತದ ಎಐ ಯೋಜನೆಗಳು ಜಗತ್ತಿನ ಗಮನ ಸೆಳೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಧಿಕಾರ ಹಂಚಿಕೆ ಮುಸುಕಿನ ಗುದ್ದಾಟದ ನಡುವೆ ರಾಜ್ಯ ಬಜೆಟ್​​ಗೆ ಅಧಿಕೃತ ಮುಹೂರ್ತ ಫಿಕ್ಸ್ – Kannada News | Karnataka Budget 2026 session set from March 6 to 27th, here Is Details

ಬೆಂಗಳೂರು, (ಫೆಬ್ರವರಿ 16): ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹಾಗೂ ಸಿಎಂ ಸಿದ್ದರಾಮಯ್ಯ (Siddaramaiah) ನಡುವಿನ ಅಧಿಕಾರ ಹಂಚಿಕೆ ಮುಸುಕಿನ ಗುದ್ದಾಟದ ಮಧ್ಯೆ 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ (Karnataka Budget 2026) ದಿನಾಂಕ ಫಿಕ್ಸ್​​ ಆಗಿದೆ. ಹಣಕಾಸು ಖಾತೆಯನ್ನ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾರ್ಚ್ 6ರಂದು ಬೆಳಗ್ಗೆ 10:15ಕ್ಕೆ ತಮ್ಮ ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದಾರೆ. ಈ ಬಗ್ಗೆ ವಿಧಾನಸಭೆ ಕಾರ್ಯದರ್ಶಿ ಇಂದು (ಫೆಬ್ರವರಿ 16) ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.

ದಾಖಲೆಯ 17ನೇ ಬಜೆಟ್​ ಮಂಡಿಸಲಿರುವ ಸಿದ್ದರಾಮಯ್ಯ

ಮಾರ್ಚ್ 6 ಬೆಳಗ್ಗೆ 10:15ಕ್ಕೆ ಬಜೆಟ್​ ಅಧಿವೇಶನ ಆರಂಭವಾಗಲಿದ್ದು, ಮಾರ್ಚ್ 27ಕ್ಕೆ ಅಂತ್ಯವಾಗಲಿದೆ. ಒಟ್ಟು 14 ದಿನ ನಡೆಯಲಿರುವ ಬಜೆಟ್ ಅಧಿವೇಶನ ನಡೆಯಲಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಈಗಾಗಲೇ 2026-27ನೇ ಸಾಲಿನ ಬಜೆಟ್​​​ ಮಂಡಿಸಲು ಸಕಲ ಸಿದ್ಧತೆ ನಡೆಸುತ್ತಿದ್ದು, ಸರಣಿ ಬಜೆಟ್ ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ. ಇನ್ನು ಈ ಬಾರಿ 17ನೇ ಸಲ ಬಜೆಟ್ ಮಂಡಿಸುವ ಮೂಲಕ ರಾಜ್ಯದಲ್ಲಿಯೇ ಅತಿಹೆಚ್ಚು ಬಜೆಟ್​ ಮಂಡಿಸಿದ ಸಿಎಂ ಅನ್ನೋ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಲಿದ್ದಾರೆ.

ಇದನ್ನೂ ಓದಿ: ಹರ್ ಘರ್ ಜಲ್ ಯೋಜನೆ ಹಳ್ಳ ಹಿಡಿಸಿದ ಅಧಿಕಾರಿಗಳು: ಕಾಮಗಾರಿ ಮುಗಿಸಿ 5 ವರ್ಷವಾದ್ರೂ ಬಾರದ ನೀರು

ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಹೊಂದಿದ್ದ ದೇವರಾಜ​ ಅರಸು ಅವರ​ ದಾಖಲೆಯನ್ನು ಸಿದ್ದರಾಮಯ್ಯ ಮುರಿದಿದ್ದಾರೆ. ದೇವರಾಜ ಅರಸು ಅವರು ಸತತವಾಗಿ ಏಳೂವರೆ ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ದೇವರಾಜ ಅರಸು ಅವರು 2,789 ದಿನ ಅಂದ್ರೆ 7 ವರ್ಷ- 239 ದಿನಗಳ (ಎರಡು ಅವಧಿ) ಕಾಲ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಸಿದ್ದರಾಮಯ್ಯ ಕೂಡ ಈಗಾಗಲೇ 7 ವರ್ಷ 239 ದಿನ ಪೂರೈಸಿ ಅರಸು ದಾಖಲೆ ಮುರಿದಿದ್ದಾರೆ.

ಕಾಂಗ್ರೆಸ್​ ಪಕ್ಷದ ಪ್ರಬಲ ನಾಯಕ ಸಿದ್ದರಾಮಯ್ಯ ಅವರು ತಮ್ಮದೇ ವರ್ಚಸ್ಸು, ಚಾತುರ್ಯತೆಯಿಂದ ಬೆಳೆದು ಬಂದಿದ್ದಾರೆ. 2013 ರಿಂದ 2018 ರವರ ಅವಧಿಯಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ರು. ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರೈಸಿದ್ದರು. ಬಳಿಕ ಮೇ 20, 2023 ರಂದು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹಸಿವಾಗುವುದು ಕಡಿಮೆ ಆಗಿದ್ಯಾ? ಹಾಗಿದ್ರೆ ನಿರ್ಲಕ್ಷ್ಯ ಮಾಡ್ಬೇಡಿ ಇದು ಗಂಭೀರ ಕಾಯಿಲೆ ಬರುವ ಮುನ್ಸೂಚನೆಯಾಗಿರಬಹುದು – Kannada News | Sudden Loss of Appetite: A Warning Sign?

ಕೆಲವರಿಗೆ ಇದ್ದಕ್ಕಿದ್ದಂತೆ ಹಸಿವು (Appetite) ಕಡಿಮೆಯಾಗುವುದು ಸಹಜ. ಅದಕ್ಕಾಗಿಯೇ ಜನ ಇದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸುತ್ತಾರೆ. ಆದರೆ ಅಪ್ಪಿತಪ್ಪಿಯೂ ಈ ರೀತಿ ಮಾಡಬಾರದು. ಏಕೆಂದರೆ ಇದು ಗಂಭೀರ ಸಮಸ್ಯೆಯ ಸಂಕೇತವೂ ಆಗಿರಬಹುದು. ಇದನ್ನು ಆಯಾಸ (Fatigue), ಹವಾಮಾನ ಅಥವಾ ದಿನಚರಿಯಲ್ಲಿನ ಬದಲಾವಣೆ ಎಂದು ಗಂಭೀರವಾಗಿ ಪರಿಗಣಿಸದಿದ್ದರೆ ಇದಕ್ಕೆ ತಕ್ಕ ದಂಡ ತೆರಬೇಕಾದ ಸಮಯ ಬರಬಹುದು. ಹೌದು, ಹಸಿವು ದೇಹದ ಅಗತ್ಯತೆ ಮತ್ತು ಆಂತರಿಕ ಸಮತೋಲನವನ್ನು ಸಂಕೇತಿಸುತ್ತದೆ. ದೇಹಕ್ಕೆ ಶಕ್ತಿಯ ಅಗತ್ಯವಿದ್ದಾಗ, ಹಸಿವಾಗುವುದು ಸಹಜ. ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಹಸಿವು ಕಡಿಮೆಯಾಗುತ್ತಿದ್ದರೆ, ಅದು ದೇಹದ ಶಕ್ತಿ, ರೋಗನಿರೋಧಕ ಶಕ್ತಿ ಮತ್ತು ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಅದನ್ನು ತಡೆಗಟ್ಟುವುದು ಬಹಳ ಮುಖ್ಯವಾಗಿದೆ. ಈ ವಿಷಯದ ಕುರಿತ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಸಮಯಕ್ಕೆ ಸರಿಯಾಗಿ ಮತ್ತು ಸರಿಯಾದ ಪ್ರಮಾಣದಲ್ಲಿ ಊಟ ಮಾಡದಿದ್ದರೆ ದೌರ್ಬಲ್ಯ, ತಲೆತಿರುಗುವಿಕೆ, ಕಿರಿಕಿರಿ ಮತ್ತು ಕೆಲಸದಲ್ಲಿ ಏಕಾಗ್ರತೆಯ ಕೊರತೆಯಂತಹ ಸಮಸ್ಯೆಗಳು ಉಂಟಾಗುತ್ತದೆ. ಜೊತೆಗೆ ದೇಹವು ಕ್ರಮೇಣ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಅಷ್ಟೇಅಲ್ಲ, ದೈನಂದಿನ ಕೆಲಸಗಳು ಸಹ ಭಾರವೆಂದು ಭಾಸವಾತ್ತವೆ. ದೀರ್ಘಕಾಲದ ಹಸಿವಿನ ಕೊರತೆಯು ತೂಕ ನಷ್ಟ ಮತ್ತು ಪೌಷ್ಟಿಕಾಂಶದ ಕೊರತೆಗೆ ಕಾರಣವಾಗಬಹುದು. ಇದು ಚರ್ಮ, ಕೂದಲು ಮತ್ತು ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಯಾವುದೇ ಸ್ಪಷ್ಟ ಕಾರಣವಿಲ್ಲದೆ ವ್ಯಕ್ತಿಗೆ ದಣಿದ ಮತ್ತು ಆಲಸ್ಯದ ಅನುಭವ ಆಗಬಹುದು. ಆದ್ದರಿಂದ, ಹಸಿವಿನಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಸಮಯಕ್ಕೆ ಸರಿಯಾಗಿ ಅವುಗಳ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ.

ಹಸಿವಿನ ಕೊರತೆಯು ಯಾವ ಕಾಯಿಲೆಯ ಸಂಕೇತ?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ನಿರಂತರವಾಗಿ ಹಸಿವು ಕಡಿಮೆಯಾಗುವುದು ಕೆಲವು ಆಂತರಿಕ ಕಾಯಿಲೆಗಳಿಗೆ ಸಂಬಂಧಿಸಿರಬಹುದು. ಅನಿಲ, ಆಮ್ಲೀಯತೆ ಅಥವಾ ಉಬ್ಬುವಿಕೆಯಂತಹ ಜೀರ್ಣಕಾರಿ ಸಮಸ್ಯೆಗಳು ಹಸಿವನ್ನು ಕಡಿಮೆ ಮಾಡಬಹುದು. ಥೈರಾಯ್ಡ್ ಅಸ್ವಸ್ಥತೆಗಳು ದೇಹದ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರಬಹುದು, ಇದು ಆಹಾರ ಸೇವಿಸಬೇಕು ಎಂಬ ಬಯಕೆಯನ್ನೇ ಕಡಿಮೆ ಮಾಡುತ್ತದೆ. ರಕ್ತಹೀನತೆಯ (ಕಬ್ಬಿಣದ ಕೊರತೆ) ಸಂದರ್ಭಗಳಲ್ಲಿ, ದೌರ್ಬಲ್ಯ ಮತ್ತು ಆಯಾಸವು ಸಾಮಾನ್ಯವಾಗಿ ಹಸಿವು ಕಡಿಮೆ ಮಾಡುವುದಕ್ಕೆ ಕಾರಣವಾಗುತ್ತದೆ. ಅಷ್ಟೇಅಲ್ಲ, ಯಕೃತ್ತು ಅಥವಾ ಮೂತ್ರಪಿಂಡಗಳಿಗೆ ಸಂಬಂಧಿಸಿದ ಸಮಸ್ಯೆಗಳು, ದೀರ್ಘಕಾಲದ ಸೋಂಕುಗಳು ಅಥವಾ ಹಾರ್ಮೋನುಗಳ ಅಸಮತೋಲನಗಳು ಸಹ ಹಸಿವಾಗದಿರುವುದಕ್ಕೆ ಕಾರಣವಾಗಬಹುದು. ಜೊತೆಗೆ ಒತ್ತಡ, ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಅಂಶಗಳು ಸಹ ಹಸಿವನ್ನು ನಿಗ್ರಹಿಸಬಹುದು.

ಇದನ್ನೂ ಓದಿ: ಶುಗರ್ ರಿಪೋರ್ಟ್ ನಾರ್ಮಲ್ ಬಂದ್ರೂ ಸುಸ್ತು ಅನಿಸುವುದಕ್ಕೆ ಈ ಹಿಡನ್ ಡಯಾಬಿಟಿಸ್ ಲಕ್ಷಣ ಕಾರಣವೇ?

ಈ ಸ್ಥಿತಿ ದೀರ್ಘಕಾಲದವರೆಗೆ ಮುಂದುವರಿದರೆ, ಅದನ್ನು ದೇಹ ನೀಡುತ್ತಿರುವ ಎಚ್ಚರಿಕೆಯ ಸಂಕೇತವೆಂದು ಪರಿಗಣಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಹಸಿವು ಕಡಿಮೆಯಾಗುವ ಸಮಸ್ಯೆ ಎರಡರಿಂದ ಮೂರು ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ, ತ್ವರಿತ ತೂಕ ನಷ್ಟ, ನಿರಂತರ ದೌರ್ಬಲ್ಯ ಅಥವಾ ತಲೆತಿರುಗುವಿಕೆ ಅಥವಾ ಊಟದ ನಂತರ ವಾಂತಿಯಾಗುತ್ತಿದ್ದರೆ ಅಥವಾ ಬಂದಂತೆ ಭಾಸವಾಗುತ್ತಿದ್ದರೆ, ವೈದ್ಯರನ್ನು ಆದಷ್ಟು ಬೇಗ ಭೇಟಿ ಮಾಡುವುದು ಒಳ್ಳೆಯದು.

ಹಸಿವು ಕಡಿಮೆಯಾಗದಂತೆ ತಡೆಯಲು ಏನು ಮಾಡಬಹುದು?

ಹಸಿವು ಚೆನ್ನಾಗಿ ಆಗಲು, ಪ್ರತಿದಿನ ನಿಯಮಿತ ಸಮಯಕ್ಕೆ ಊಟ ಮಾಡಬೇಕು. ದೀರ್ಘಕಾಲದವರೆಗೆ ಹಸಿವಿನಿಂದ ಇರಬಾರದು. ಹಣ್ಣು, ತರಕಾರಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್‌ಗಳನ್ನು ಒಳಗೊಂಡಿರುವ ಆಹಾರವನ್ನು ಸೇವನೆ ಮಾಡಬೇಕು. ಡೀಪ್-ಫ್ರೈಡ್ ಮತ್ತು ಜಂಕ್ ಫುಡ್ ತಿನ್ನುವುದನ್ನು ನಿಲ್ಲಿಸಬೇಕು. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು ಮತ್ತು ನಿದ್ರೆ ಚೆನ್ನಾಗಿ ಮಾಡಬೇಕು. ಇದೆಲ್ಲದರ ಜೊತೆಗೆ ಪ್ರತಿದಿನ ಸ್ವಲ್ಪ ನಡೆಯುವುದು ಅಥವಾ ಲಘು ವ್ಯಾಯಾಮ ಮಾಡಬೇಕು. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು, ಒತ್ತಡವನ್ನು ಕಡಿಮೆ ಮಾಡಲು, ಯೋಗ, ಧ್ಯಾನ ಅಥವಾ ನೀವು ಇಷ್ಟಪಡುವ ಕೆಲಸ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ನಿರ್ಧಾರ ಬದಲಿಸಿದ ಭೂಪೇನ್ ಬೋರಾ – Kannada News | Hours after resignation to Congress Bhupen Borah says reconsidering decision Rahul Gandhi Steps In

ನವದೆಹಲಿ, ಫೆಬ್ರವರಿ 16: ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕತ್ವದ ಹಸ್ತಕ್ಷೇಪದ ನಂತರ ತಮ್ಮ ರಾಜೀನಾಮೆಯನ್ನು ಮರುಪರಿಶೀಲಿಸುತ್ತಿರುವುದಾಗಿ ಅಸ್ಸಾಂ (Assam) ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಭೂಪೇನ್ ಬೋರಾ (Bhupen Borah) ಹೇಳಿದ್ದಾರೆ. ಎಐಸಿಸಿ ರಾಜ್ಯ ಉಸ್ತುವಾರಿ ಜಿತೇಂದ್ರ ಸಿಂಗ್ ಅವರು ತಮ್ಮ ರಾಜೀನಾಮೆಯನ್ನು ಪಕ್ಷದ ಹೈಕಮಾಂಡ್ ಅಂಗೀಕರಿಸಿಲ್ಲ ಎಂದು ಅವರು ದೃಢಪಡಿಸಿದ್ದಾರೆ.

ಭೂಪೇನ್ ಬೋರಾ ಅವರ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿತೇಂದ್ರ ಸಿಂಗ್, ರಾಜೀನಾಮೆಗೆ ಕಾರಣವಾದ ಕಳವಳಗಳನ್ನು ಪರಿಹರಿಸಲು ಕಾಂಗ್ರೆಸ್ ಹೈಕಮಾಂಡ್ ಭೂಪೇನ್ ಅವರೊಂದಿಗೆ ವಿವರವಾದ ಚರ್ಚೆಗಳನ್ನು ನಡೆಸಿದೆ ಎಂದು ಹೇಳಿದರು. ”ಪಕ್ಷದ ನಾಯಕರು ಭೂಪೇನ್ ಬೋರಾ ಅವರೊಂದಿಗೆ ಈ ವಿಷಯವನ್ನು ಚರ್ಚಿಸಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗೆ 15 ನಿಮಿಷಗಳ ಕಾಲ ಮಾತನಾಡಿದ್ದಾರೆ” ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Video: ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಭವಿಷ್ಯ

”ಇದು ನಮ್ಮ ಆಂತರಿಕ ವಿಷಯ. ಅವರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ನಾವು ವಿವರವಾಗಿ ಚರ್ಚಿಸಿದ್ದೇವೆ. ಅವರ ರಾಜೀನಾಮೆಯನ್ನು ಹಿಂಪಡೆಯಲು ಒಪ್ಪಿಕೊಂಡಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ” ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ. ಭೂಪೇನ್ ಬೋರಾ ಅವರು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಪಕ್ಷದ ಹೈಕಮಾಂಡ್​​ನಿಂದ ಹೆಚ್ಚು ಸಮಯವನ್ನು ಕೋರಿದ್ದಾರೆ ಎಂದು ಸೂಚಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕ​​ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು: ಬಿಜೆಪಿ ಪರಾಜಿತ ಅಭ್ಯರ್ಥಿ ಫುಲ್ ಖುಷ್, ಹೇಳಿದ್ದೇನು?

ತಮ್ಮ ನಿವಾಸದಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಭೂಪೇಂದ್ರ ಬೋರಾ, “ನನ್ನ ಹಳೆಯ ಸಹೋದ್ಯೋಗಿಗಳು ಮತ್ತು ಪಕ್ಷದ ಹೈಕಮಾಂಡ್ ನಾಯಕರು ನನ್ನ ಮನೆಗೆ ಬಂದಿದ್ದರು. ನಾನು ಅವರನ್ನು ಗೌರವಿಸುತ್ತೇನೆ. ನನ್ನ ಕುಟುಂಬದೊಂದಿಗೆ ಮಾತನಾಡಲು ಮತ್ತು ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲು ನಾಳೆ ಬೆಳಿಗ್ಗೆವರೆಗೆ ಸಮಯ ಕೇಳಿದ್ದೇನೆ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link