Category Archives: Blog

Your blog category

ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ ಶೆಟ್ಟಿ: ಕಾವ್ಯಾ ಖಡಕ್ ತಿರುಗೇಟು – Kannada News | Gilli Nata friend Kavya Shaiva says Rakshitha Shetty has over confidence in BBK 12

ಈ ಬಾರಿ ಬಿಗ್ ಬಾಸ್ ಗೆಲ್ಲೋದು ಯಾರು ಎಂಬ ಚರ್ಚೆ ಜೋರಾಗಿದೆ. ಗಿಲ್ಲಿ ನಟ (Gilli Nata) ಅವರೇ ಈ ಬಾರಿ ವಿನ್ ಆಗುತ್ತಾರೆ ಎಂಬುದು ಬಹುತೇಕರ ಅಭಿಪ್ರಾಯ. ಕಾಮಿಡಿ ಮೂಲಕ ಅವರು ಎಲ್ಲರನ್ನೂ ರಂಜಿಸುತ್ತಿದ್ದಾರೆ. ವೀಕ್ಷಕರಿಗೆ ಅವರ ಕಾಮಿಡಿ ಇಷ್ಟ ಆಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಹತ್ತಿರ ಆಗುತ್ತಿರುವಾಗ ಪೈಪೋಟಿ ಹೆಚ್ಚಿದೆ. ಗಿಲ್ಲಿ ನಟ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸುವುದಾಗಿ ರಕ್ಷಿತಾ ಶೆಟ್ಟಿ (Rakshitha Shetty) ಹೇಳಿದ್ದಾರೆ. ಅವರಿಗೆ ಕಾವ್ಯ ಶೈವ ಮಾತಿನ ಪಂಚ್ ನೀಡಿದ್ದಾರೆ. ‘ಬಿಗ್ ಬಾಸ್ ಮನೆಯಲ್ಲಿ ಅವಳು ಇಲ್ಲದೇ ಸ್ಪಾರ್ಕ್ ಇರಲ್ಲ ಎಂಬ ಭ್ರಮೆಯಲ್ಲಿ ಇದ್ದಾಳೆ. ಕಾನ್ಫಿಡೆನ್ಸ್ ಇರಬೇಕು. ಆದರೆ ಅವಳಿಗೆ ಓವರ್ ಕಾನ್ಫಿಡೆನ್ಸ್ ಇದೆ’ ಎಂದು ಕಿಚ್ಚ ಸುದೀಪ್ ಎದುರಲ್ಲೇ ಕಾವ್ಯ (Kavya Shaiva) ಅವರು ಹೇಳಿದ್ದಾರೆ. ಭಾನುವಾರದ (ಡಿ.21) ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್ – Kannada News | Sameer Minhas brings up a superb Century Against India

ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ಅಂಡರ್-19 ಏಷ್ಯಾಕಪ್ ಫೈನಲ್​ ಪಾಕಿಸ್ತಾನ್ ತಂಡದ ಆರಂಭಿಕ ದಾಂಡಿಗ ಸಮೀರ್ ಮಿನ್​ಹಾಸ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕ್ ತಂಡಕ್ಕೆ ಸಮೀರ್ ಮಿನ್​ಹಾಸ್ ಉತ್ತಮ ಆರಂಭ ಒದಗಿಸಿದರು.

ಆರಂಭದಿಂದಲೇ ಅತ್ಯುತ್ತಮ ಹೊಡೆತಗಳೊಂದಿಗೆ ಗಮನ ಸೆಳೆದ ಸಮೀರ್ ಮಿನ್​ಹಾಸ್ ಕೇವಲ 71 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದ ಬಳಿಕ ಕೂಡ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಸಮೀರ್ 113 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 17 ಫೋರ್​ಗಳೊಂದಿಗೆ 172 ರನ್ ಬಾರಿಸಿದರು.

ಈ ಸ್ಫೋಟಕ ಸೆಂಚುರಿ ನೆರವಿನೊಂದಿಗೆ ಪಾಕಿಸ್ತಾನ್ ತಂಡವು 45 ಓವರ್​ಗಳ ಮುಕ್ತಾಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 319 ರನ್ ಕಲೆಹಾಕಿದೆ.

ಭಾರತ ಅಂಡರ್-19 ಪ್ಲೇಯಿಂಗ್ 11: ಆಯುಷ್ ಮ್ಹಾತ್ರೆ (ನಾಯಕ),  ವೈಭವ್ ಸೂರ್ಯವಂಶಿ , ಆರೋನ್ ಜಾರ್ಜ್ , ವಿಹಾನ್ ಮಲ್ಹೋತ್ರಾ , ವೇದಾಂತ್ ತ್ರಿವೇದಿ , ಅಭಿಜ್ಞಾನ್ ಕುಂದು (ವಿಕೆಟ್ ಕೀಪರ್) , ಕಾನಿಷ್ಕ್ ಚೌಹಾಣ್ , ಹೆನಿಲ್ ಪಟೇಲ್ , ಖಿಲನ್ ಪಟೇಲ್ , ದೀಪೇಶ್ ದೇವೇಂದ್ರನ್ , ಕಿಶನ್ ಕುಮಾರ್ ಸಿಂಗ್.

ಪಾಕಿಸ್ತಾನ್ ಅಂಡರ್-19 ಪ್ಲೇಯಿಂಗ್ 11: ಸಮೀರ್ ಮಿನ್​ಹಾಸ್,  ಹಮ್ಝ ಝಹೂರ್ (ವಿಕೆಟ್ ಕೀಪರ್) , ಉಸ್ಮಾನ್ ಖಾನ್ ,
ಅಹ್ಮದ್ ಹುಸೇನ್ , ಫರ್ಹಾನ್ ಯೂಸುಫ್ (ನಾಯಕ) , ಹುಜೈಫಾ ಅಹ್ಸಾನ್ , ನಿಖಾಬ್ ಶಫೀಕ್ , ಮೊಹಮ್ಮದ್ ಶಯಾನ್ , ಅಬ್ದುಲ್ ಸುಭಾನ್ , ಮೊಹಮ್ಮದ್ ಸಯ್ಯಮ್ , ಅಲಿ ರಾಝ.

Source link

ಟ್ರೈನ್ ಟಿಕೆಟ್ ಬೆಲೆ ಪ್ರತೀ ಕಿಮೀಗೆ 1-2 ಪೈಸೆ ಹೆಚ್ಚಳ; ಡಿ. 26ರಿಂದ ಹೊಸ ದರ ಜಾರಿ – Kannada News | Indian Railways hikes fares for long distance travel, revised rates from Dec 26th

ನವದೆಹಲಿ, ಡಿಸೆಂಬರ್ 21: ರೈಲು ಪ್ರಯಾಣ ಮುಂದಿನ ದಿನಗಳಲ್ಲಿ ತುಸು ದುಬಾರಿಯಾಗಲಿದೆ. ರೈಲು ಪ್ರಯಾಣ ಟಿಕೆಟ್ ದರಗಳಲ್ಲಿ ಅಲ್ಪ ಏರಿಕೆ ಮಾಡಲು ಭಾರತೀಯ ರೈಲ್ವೇಸ್ (Indian Railways) ನಿರ್ಧರಿಸಿದೆ. ದೂರ ಪ್ರಯಾಣದ ದರಗಳನ್ನು ಏರಿಕೆ ಮಾಡಲಾಗುತ್ತಿದೆ. ಸಬರ್ಬನ್ ರೈಲುಗಳ ದರಗಳಲ್ಲಿ ಬದಲಾವಣೆ ಇರುವುದಿಲ್ಲ. ಡಿಸೆಂಬರ್ 26ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ.

ವರದಿ ಪ್ರಕಾರ 215 ಕಿಮೀ ದೂರದವರೆಗಿನ ಜನರಲ್ ಕ್ಲಾಸ್ ಕಂಪಾರ್ಟ್ಮೆಂಟ್​ಗಳ ಟಿಕೆಟ್ ಬೆಲೆಗಳಲ್ಲಿ ಬದಲಾವಣೆ ಇರುವುದಿಲ್ಲ. ಅದಕ್ಕೂ ಹೆಚ್ಚಿನ ದೂರದ ಪ್ರಯಾಣವಾದರೆ, 215 ಕಿಮೀ ಮೇಲ್ಪಟ್ಟಿರುವ ಪ್ರತೀ ಒಂದು ಕಿಮೀಗೆ ಒಂದು ಪೈಸೆಯಷ್ಟು ದರ ಏರಿಕೆ ಆಗಲಿದೆ. ಅಂದರೆ ಪ್ರತೀ ನೂರು ಕಿಮೀ ಹೆಚ್ಚುವರಿ ದೂರಕ್ಕೆ ಒಂದು ರೂನಷ್ಟು ಬೆಲೆ ಏರಿಕೆ ಆಗಲಿದೆ. ಇದು ಜನರಲ್ ಕ್ಲಾಸ್ ಟಿಕೆಟ್​ಗಳಿಗೆ ಮಾಡಲಾಗಿರುವ ಏರಿಕೆ.

ಇದನ್ನೂ ಓದಿ: ಮೊಟ್ಟೆ ಸೇವನೆಯಿಂದ ಕ್ಯಾನ್ಸರ್​ ಬರಲ್ಲ: FSSAI ಸ್ಪಷ್ಟನೆ

ಇನ್ನು, ಎಸಿ ಕೋಚ್​ಗಳಿಗೆ ಟಿಕೆಟ್ ದರ ಪ್ರತೀ ಕಿಮೀಗೆ ಎರಡು ಪೈಸೆಯಷ್ಟು ಏರಿಕೆ ಮಾಡಲಾಗಿದೆ. ಮೇಲ್ ಟ್ರೇನ್​ಗಳು ಅಥವಾ ಎಕ್ಸ್​ಪ್ರೆಸ್ ಟ್ರೈನುಗಳಲ್ಲಿನ ನಾನ್ ಎಸಿ ಕೋಚ್​ಗಳಿಗೂ ಟಿಕೆಟ್ ದರ 2 ಪೈಸೆ ಏರಿಕೆ ಮಾಡಲಾಗಿದೆ. ಈ ಕೋಚ್​ಗಳಲ್ಲಿ ಟಿಕೆಟ್ ದರ ಪ್ರತೀ 50 ಕಿಮೀ ದೂರಕ್ಕೆ 1 ಒಂದು ರೂ ಹೆಚ್ಚುವರಿ ದರ ಸೇರ್ಪಡೆಯಾಗುತ್ತದೆ.

ಈ ಪರಿಷ್ಕೃತ ಟಿಕೆಟ್ ದರದ ನಂತರವೂ ಭಾರತದಲ್ಲಿ ರೈಲು ಪ್ರಯಾಣ ಇನ್ನಿತರ ಸಾರಿಗೆ ವ್ಯವಸ್ಥೆಗಿಂತ ಕಡಿಮೆಯೇ ಇರುತ್ತದೆ. ಈ ಅಲ್ಪ ಏರಿಕೆಯಿಂದ ಭಾರತೀಯ ರೈಲ್ವೆಗೆ ವಾರ್ಷಿಕವಾಗಿ 600 ಕೋಟಿ ರೂನಷ್ಟು ಆದಾಯ ಹೆಚ್ಚಳ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಡಾವೋಸ್ ಸಭೆಗೆ ಭಾರತದಿಂದ ಪ್ರಬಲ ತಂಡ; 100ಕ್ಕೂ ಹೆಚ್ಚು ಉದ್ಯಮಿಗಳು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ನಿಯೋಗದಲ್ಲಿ

ರೈಲ್ವೇಸ್​ನ ಹೆಚ್ಚುವರಿ ವೆಚ್ಚ ಸರಿದೂಗಿಸಲು ಟಿಕೆಟ್ ದರ ಏರಿಕೆ

ಭಾರತೀಯ ರೈಲ್ವೇಸ್ ಸಂಸ್ಥೆ ಕಳೆದ ಒಂದು ದಶಕದಲ್ಲಿ ತನ್ನ ಜಾಲವನ್ನು ಸಾಕಷ್ಟು ವಿಸ್ತರಿಸಿದೆ. ಟ್ರೈನುಗಳ ಸಂಖ್ಯೆ ಹೆಚ್ಚಿಸಿದೆ. ಮಾನವ ಸಂಪನ್ಮೂಲಗಳನ್ನೂ ಹೆಚ್ಚಿಸಿದೆ. ಮಾನವ ಸಂಪನ್ಮೂಲ ವೆಚ್ಚ 1,15,000 ಕೋಟಿ ರೂಗೆ ಏರಿದೆ. ಪಿಂಚಣಿ ವೆಚ್ಚ 60,000 ಕೋಟಿ ರೂ ಆಗಿದೆ. 2024-25ರಲ್ಲಿ ಅದರ ಕಾರ್ಯಾಚರಣೆಗಳ ಒಟ್ಟೂ ವೆಚ್ಚ 2.63 ಲಕ್ಷ ಕೋಟಿ ರೂಗೆ ಏರಿದೆ. ಈ ವೆಚ್ಚ ಹೆಚ್ಚಳವನ್ನು ಸರಿದೂಗಿಸಲು ರೈಲ್ವೇಸ್ ಟಿಕೆಟ್ ಪ್ರಯಾಣ ದರವನ್ನು ಏರಿಸುತ್ತಿದೆ. ಜುಲೈ ತಿಂಗಳಲ್ಲೂ ರೈಲ್ವೆ ಟಿಕೆಟ್ ಪ್ರಯಾಣ ದರವನ್ನು ಪರಿಷ್ಕರಿಸಿ ಪೈಸೆ ಲೆಕ್ಕದಲ್ಲಿ ಬೆಲೆ ಏರಿಕೆ ಮಾಡಲಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮನರೇಗಾ ಯೋಜನೆ ಹೆಸರು ಬದಲಾವಣೆ: ಕೇಂದ್ರದ ಕ್ರಮಕ್ಕೆ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ – Kannada News | MNREGA Scheme Name Change: Mallikarjun Kharge Sparks on Central Government

ಕಲಬುರಗಿ, ಡಿಸೆಂಬರ್​ 21: ಮನರೇಗಾ ವಿಧೇಯಕ​ ಬಗ್ಗೆ ಇನ್ನೂ ಸಾಕಷ್ಟು ಚರ್ಚೆ ಮಾಡಬೇಕಿತ್ತು. ಮನರೇಗಾ ಯೋಜನೆ ತೆಗೆದು ಜಿ-ರಾಮ್​ ಜಿ ಬಿಲ್​ನ್ನು ತರಾತುರಿಯಲ್ಲಿ ಜಾರಿಗೆ ತಂದಿದ್ದಾರೆ. ಇದರಿಂದ ದೇಶದ ಬಡ ಜನರಿಗೆ ತೊಂದರೆಯಾಗುತ್ತಿದೆ ಎಂದು ಕೇಂದ್ರದ ಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯೋಜನೆಯಲ್ಲಿ ಗಾಂಧಿ ಹೆಸರು ಇದ್ದಿದ್ದರೆ ಏನು ತೊಂದರೆ ಆಗ್ತಿತ್ತು. ಜಿ ರಾಮ್ ಜಿ ಹೆಸರು ಇಟ್ಟು ಏನು ಸಾಧನೆ ಮಾಡಿದ್ದೀರಿ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್ – Kannada News | DCM D.K. Shivakumar Launches Pulse Polio Campaign in Karnataka

ಬೆಂಗಳೂರು, ಡಿಸೆಂಬರ್ 21: ಇಂದಿನಿಂದ ಪಲ್ಸ್ ಪೋಲಿಯೋ ಅಭಿಯಾನ ಆರಂಭವಾಗಿದ್ದು, ಪುಟ್ಟ ಮಕ್ಕಳಿಗೆ ಪೋಲಿಯೋ ಲಸಿಕೆ  ಹಾಕುವ ಮೂಲಕ ಈ ಮಹತ್ವದ ಅಭಿಯಾನಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದಕ್ಕೆ ಚಾಲನೆ ನೀಡಿದರು. ಲಸಿಕೆ ಹಾಕುವ ಮುನ್ನ ಡಿ.ಕೆ. ಶಿವಕುಮಾರ್ ಮಕ್ಕಳನ್ನು ಮುದ್ದಾಡಿದ್ದು, ಪೋಲಿಯೋ ಹನಗಳನ್ನು ಹಾಕಿದ ನಂತರ ಮಕ್ಕಳಿಗೆ ಚಾಕೊಲೇಟ್‌ಗಳು ಮತ್ತು ಸಿಹಿ ತಿನಿಸುಗಳನ್ನು ನೀಡಲಾಯಿತು.  ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮೊಮ್ಮಗಳಿಗೂ ಪೋಲಿಯೋ ಹನಿಗಳನ್ನು ನೀಡಲಾಯಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Yearly Horoscope 2026: 2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ – Kannada News | Leo Horoscope 2026: Dr. Basavaraj Gurujis Yearly Predictions

2026ರ ವರ್ಷವು ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರಲಿದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ. ಈ ವರ್ಷದಲ್ಲಿ ಗ್ರಹಗಳ ಸಂಚಾರವು ಜೀವನದ ವಿವಿಧ ಕ್ಷೇತ್ರಗಳ ಮೇಲೆ ಪ್ರಭಾವ ಬೀರಲಿದೆ. ಗುರು ಗ್ರಹವು ಜೂನ್ ಎರಡನೇ ತಾರೀಖಿನ ತನಕ ಲಾಭ ಸ್ಥಾನದಲ್ಲಿ ಇದ್ದು, ನಂತರ 12ನೇ ಮನೆಗೆ (ದ್ವಾದಶ ಸ್ಥಾನ) ಪ್ರವೇಶಿಸಲಿದ್ದಾನೆ. ಅಷ್ಟಮ ಶನಿ ವರ್ಷವಿಡೀ ಮುಂದುವರಿದರೆ, ರಾಹು 7ನೇ ಮನೆಯಿಂದ 6ನೇ ಮನೆಗೆ, ಕೇತು 1ನೇ ಮನೆಯಿಂದ 12ನೇ ಮನೆಗೆ ಸಂಚರಿಸಲಿದ್ದಾರೆ.

ಒಟ್ಟಾರೆಯಾಗಿ, ಸಿಂಹ ರಾಶಿಯವರು ಕೆಟ್ಟ ದಾರಿಯಿಂದ ಒಳ್ಳೆಯ ದಾರಿಗೆ ಪ್ರವೇಶಿಸುವ ಶುಭ ಕಾಲವಿದು. ಜವಾಬ್ದಾರಿಗಳು ಹೆಚ್ಚಾಗುತ್ತವೆಯಾದರೂ, ಮಾನಸಿಕ ಶಾಂತಿ ಮತ್ತು ಒತ್ತಡಗಳಲ್ಲಿ ಇಳಿಕೆ ಕಂಡುಬರುತ್ತದೆ. ಆರ್ಥಿಕ ಪ್ರಗತಿ ಮತ್ತು ಬಹು ದಿನಗಳ ಆಸೆಗಳು ಈಡೇರುವ ಸಾಧ್ಯತೆಗಳಿವೆ. ದುಸ್ಥಾನದಲ್ಲಿ ಪಾಪಗ್ರಹಗಳಿದ್ದಾಗ, ದುರಾಸೆಗೆ ಕಡಿವಾಣ ಹಾಕಿ, ಪ್ರಯತ್ನಗಳಿಗೆ ಒತ್ತು ನೀಡಿದರೆ ದ್ವಿಗುಣ ಅದೃಷ್ಟ ಪ್ರಾಪ್ತಿಯಾಗಲಿದೆ. ಇದು ಸಿಂಹ ರಾಶಿಯವರಿಗೆ ಒಂದು ಪುನರ್ಜನ್ಮದ ಕಾಲ ಎಂದೂ ಗುರೂಜಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನೋರಾ ಫತೇಹಿ ಕಾರು ಅಪಘಾತ: ಈಗ ಹೇಗಿದೆ ನಟಿಯ ಪರಿಸ್ಥಿತಿ? – Kannada News | Actress Nora Fatehi gives her health update after car accident in Mumbai

ಖ್ಯಾತ ನಟಿ ನೋರಾ ಫತೇಹಿ (Nora Fatehi) ಅವರ ಅಭಿಮಾನಿಗಳಿಗೆ ಇದು ಕಹಿ ಸುದ್ದಿ. ಮುಂಬೈನಲ್ಲಿ ನೋರಾ ಚಲಿಸುತ್ತಿದ್ದ ಕಾರು ಅಪಘಾತಕ್ಕೆ (Car Accident) ಒಳಗಾಗಿದೆ. ಕುಡಿದು ಕಾರು ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬನು ನೋರಾ ಅವರ ಕಾರಿಗೆ ಬಂದು ಡಿಕ್ಕಿ ಹೊಡೆದಿದ್ದಾನೆ. ಹಾಡುಹಗಲು 3 ಗಂಟೆಗೆ ಈ ಘಟನೆ ನಡೆದಿದೆ. ಇದರಿಂದಾಗಿ ನೋರಾ ಫತೇಹಿ ಅವರಿಗೆ ಚಿಕ್ಕ-ಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಅವರು ಸುರಕ್ಷಿತವಾಗಿದ್ದಾರೆ. ಆದರೆ ಅವರು ಈ ಘಟನೆಯಿಂದ ಆತಂತಕ್ಕೆ ಒಳಗಾಗಿದ್ದಾರೆ. ಕುಡಿದು ವಾಹನ ಚಾಲನೆ ಮಾಡಬೇಡಿ ಎಂದು ತಮ್ಮ ಅಭಿಮಾನಿಗಳಿಗೆ ನೋರಾ ಫತೇಹಿ ಬುದ್ಧಿಮಾತು ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ನೋರಾ ಫತೇಹಿ ಅವರು ಪ್ರಯಾಣ ಮಾಡುತ್ತಿದ್ದರು. ಆಗ ಇನ್ನೊಂದು ಕಾರು ಬಂದು ಡಿಕ್ಕಿ ಹೊಡಿದಿದೆ. ಕೂಡಲೇ ನೋರಾ ಫತೇಹಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ವೈದ್ಯರು ಕೂಡಲೇ ಸಿ.ಟಿ. ಸ್ಕ್ಯಾನ್ ಮಾಡಿದರು. ಇಂಟರನಲ್​ ಬ್ಲೀಡಿಂಗ್ ಆಗಿರಬಹುದೇ ಎಂಬುದನ್ನು ಪರೀಕ್ಷಿಸಿದರು.

ನೋರಾ ಫತೇಹಿ ಅವರಿಗೆ ಯಾವುದೇ ರೀತಿಯಲ್ಲಿ ಗಂಭೀರ ಗಾಯಗಳು ಆಗಿಲ್ಲ ಎಂಬುದು ವೈದ್ಯರ ತಪಾಸಣೆಯಿಂದ ತಿಳಿದುಬಂತು. ಪ್ರಥಮ ಚಿಕಿತ್ಸೆ ಪಡೆದು ಸುಧಾರಿಸಿಕೊಂಡ ಬಳಿಕ ಅವರು ಈ ಮೊದಲೇ ಒಪ್ಪಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ನೋರಾ ಫತೇಹಿ ಅವರಿಗೆ ಅಪಘಾತ ಆಗಿದೆ ಎಂಬ ಸುದ್ದಿ ತಿಳಿದು ಅವರ ಅಭಿಮಾನಿಗಳಿಗೆ ಆತಂಕ ಆಗಿತ್ತು. ಈಗ ಸ್ವತಃ ನೋರಾ ಫತೇಹಿ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

‘ನಾನು ಈಗ ಚೆನ್ನಾಗಿದ್ದೇನೆ, ಬದುಕಿದ್ದೇನೆ’ ಎಂದು ಹೇಳುವ ಮೂಲಕ ಅಭಿಮಾನಿಗಳ ಆತಂಕವನ್ನು ನೋರಾ ಫತೇಹಿ ಅವರು ದೂರು ಮಾಡಿದ್ದಾರೆ. ಕುಡಿದು ವಾಹನ ಚಾಲನೆ ಮಾಡುವವರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದರೂ ಕೂಡ ನೇರಾ ಫತೇಹಿ ಅವರು ಕೆಲಸಕ್ಕೆ ಮರಳಿದ್ದಾರೆ.

ಇದನ್ನೂ ಓದಿ: ನೋರಾ ಫತೇಹಿ ಇಂಗ್ಲೀಷ್ ಹಾಡಿನ ಚಿತ್ರೀಕರಣ: ವಿಡಿಯೋ ನೋಡಿ

ಹಲವು ಪ್ರಾಜೆಕ್ಟ್​​ಗಳಲ್ಲಿ ನೋರಾ ಫತೇಹಿ ಅವರು ಬ್ಯುಸಿ ಆಗಿದ್ದಾರೆ. ನಟಿಯಾಗಿ ಮಾತ್ರವಲ್ಲದೇ ಡ್ಯಾನ್ಸರ್ ಆಗಿ ಅವರು ಹೆಚ್ಚು ಫೇಮಸ್ ಆಗಿದ್ದಾರೆ. ವಿದೇಶಿ ಮ್ಯೂಸಿಕ್ ಸೆಲೆಬ್ರಿಟಿಗಳ ಜೊತೆ ಕೂಡ ಅವರು ಕೈಜೋಡಿಸಿದ್ದಾರೆ. ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆನಡಾ ಮೂಲದ ಅವರಿಗೆ ಈಗ 33 ವರ್ಷ ವಯಸ್ಸು. 80 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೋಗಿ ದೃಷ್ಟಿ ತೆಗಿಯಿರಿ… ಶುಭ್​ಮನ್ ಗಿಲ್​ಗೆ ಸುನಿಲ್ ಗವಾಸ್ಕರ್ ಸಲಹೆ – Kannada News | Sunil Gavaskar’s heartfelt advice to Shubman Gill

ಟಿ20 ವಿಶ್ವಕಪ್​ಗಾಗಿ ಭಾರತ ತಂಡವನ್ನು ಘೋಷಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ ಶುಭ್​ಮನ್ ಗಿಲ್​ಗೆ ಸ್ಥಾನ ಲಭಿಸಿಲ್ಲ. ಅಚ್ಚರಿ ಎಂದರೆ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಗಿಲ್ ಭಾರತ ಟಿ20 ತಂಡದ ಉಪನಾಯಕರಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಟಿ20 ವಿಶ್ವಕಪ್​ನಲ್ಲೂ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೀಗ ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಹಾಗೂ ಟಿ20 ವಿಶ್ವಕಪ್​ಗೆ ಪ್ರಕಟಿಸಲಾದ ತಂಡದಲ್ಲಿ ಗಿಲ್​ಗೆ ಸ್ಥಾನ ನೀಡಲಾಗಿಲ್ಲ.

ಇತ್ತ ಶುಭ್​ಮನ್ ಗಿಲ್​ಗೆ ಭಾರತ ಟಿ20 ವಿಶ್ವಕಪ್ ತಂಡದಲ್ಲಿ ಚಾನ್ಸ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್. ಅಷ್ಟೇ ಅಲ್ಲದೆ ಗವಾಸ್ಕರ್ ಹೆಸರಿಸಿದ ಟಿ20 ವಿಶ್ವಕಪ್ ತಂಡದಲ್ಲಿ ಗಿಲ್ ಅವರನ್ನು ಆರಂಭಿಕರಾಗಿ ಕೂಡ ಆಯ್ಕೆ ಮಾಡಿದ್ದರು. ಆದರೆ ಭಾರತ ತಂಡ ಪ್ರಕಟವಾದಾಗ ಗವಾಸ್ಕರ್ ಅಚ್ಚರಿ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಚಾನೆಲ್​ ಚರ್ಚೆಯಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್, ಇದು ಆಶ್ಚರ್ಯಕರ ಸಂಗತಿ. ಅವರು (ಗಿಲ್) ಒಬ್ಬ ಶ್ರೇಷ್ಠ, ಗುಣಮಟ್ಟದ ಬ್ಯಾಟ್ಸ್‌ಮನ್.  2024 ರ ಟಿ 20 ವಿಶ್ವಕಪ್ ನಂತರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದಾಗ್ಯೂ ಅವರು ಸೌತ್ ಆಫ್ರಿಕಾ ವಿರುದ್ಧದ ಕೆಲವು ಪಂದ್ಯಗಳಲ್ಲಿ ರನ್​ಗಳಿಸಲು ಹೆಣಗಾಡಿದ್ದಾರೆ ನಿಜ. ಆದರೆ ಕ್ಲಾಸ್ ಶಾಶ್ವತ, ಫಾರ್ಮ್ ತಾತ್ಕಾಲಿಕ,” ಎಂದು ನೆನಪಿಟ್ಟುಕೊಳ್ಳಬೇಕು.

ಇತ್ತೀಚೆಗೆ ನಾನು ಅಹಮದಾಬಾದ್‌ನಿಂದ ಹಿಂತಿರುಗುವಾಗ ಗಿಲ್ ಕೂಡ ವಿಮಾನದಲ್ಲಿದ್ದರು. ಈ ವೇಳೆಯೇ ನಾನು ಗಿಲ್‌ಗೆ ತಮ್ಮ ಮನೆಯಲ್ಲಿ ಹಿರಿಯ ವ್ಯಕ್ತಿಯಿಂದ ಕಣ್ಣು ದೃಷ್ಟಿ ತೆಗೆಯುವಂತೆ ಸೂಚಿಸಿದ್ದೆ. ನಾನು ಈ ಕೆಟ್ಟ ದೃಷ್ಟಿಯನ್ನೆಲ್ಲಾ ನಂಬುತ್ತೇನೆ. ಹೀಗಾಗಿ ಈಗಲೂ ಶುಭ್​ಮನ್ ಗಿಲ್​ ಮನೆಗೆ ಹೋಗಿ ಅಜ್ಜಿ ಅಥವಾ ಹಿರಿಯ ವ್ಯಕ್ತಿಯಿಂದ ಕೆಟ್ಟ ದೃಷ್ಟಿ ತೆಗೆಯಬೇಕೆಂದು ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: WTC ಅಂಕ ಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತ ಕೆಳಗೆ ಟೀಮ್ ಇಂಡಿಯಾ

ಇನ್ನು ಶುಭ್​ಮನ್ ಗಿಲ್ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಕೈ ಬಿಡಲು ಮುಖ್ಯ ಕಾರಣ ಕಳಪೆ ಪ್ರದರ್ಶನ. ಸೌತ್ ಆಫ್ರಿಕಾ ವಿರುದ್ಧದ ಸರಣಿಯ ಮೂರು ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿದ್ದ ಗಿಲ್ ಕಲೆಹಾಕಿದ್ದು ಕೇವಲ 32 ರನ್​ಗಳು ಮಾತ್ರ. ಹೀಗಾಗಿಯೇ ಅವರನ್ನು ಟಿ20 ತಂಡದಿಂದ ಕೈ ಬಿಡಲಾಗಿದೆ. ಅವರ ಬದಲಿಗೆ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

Source link

Video: ಕರುವಿನೊಂದಿಗೆ ವಾಕಿಂಗ್ ಹೊರಟ ಯುವಕ, ವೈರಲ್ ಆಯ್ತು ದೃಶ್ಯ – Kannada News | Young man goes for a walk with a calf, video goes viral

ವಾಕಿಂಗ್‌ ವೇಳೆ ಮನೆಯ ಮುದ್ದಿನ ಶ್ವಾನಗಳನ್ನು (Dog) ತಮ್ಮೊಂದಿಗೆ ಕರೆದುಕೊಂಡು ಬರುವವರನ್ನು ನೀವು ನೋಡಿರುತ್ತೀರಿ. ವಾಕಿಂಗ್‌ಗೆಂದು ಬಂದ ಸಂದರ್ಭದಲ್ಲಿ ಮಾಲೀಕ ಹಾಗೂ ಶ್ವಾನಗಳ ನಡುವಿನ ಪ್ರೀತಿ ಹಾಗೂ ಬಾಂಧವ್ಯಕ್ಕೆ ಈ ಕೆಲ ದೃಶ್ಯಗಳು ಸಾಕ್ಷಿಯಾಗುತ್ತವೆ. ಆದರೆ ಇಲ್ಲೊಬ್ಬ ಯುವಕನು ವಾಕಿಂಗ್‌ಗೆ ಶ್ವಾನವನ್ನು ಕರೆದುಕೊಂಡು ಹೋಗಿಲ್ಲ. ಬದಲಾಗಿ ಪುಟಾಣಿ ಕರುವಿನೊಂದಿಗೆ (calf) ಸಂಜೆಯ ವೇಳೆ ವಾಕಿಂಗ್‌ಗೆ ತೆರಳಿರುವ ದೃಶ್ಯ ವೈರಲ್ ಆಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಸೌರಭ್ ಜೈನ್ (Sourabh Jain) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಯುವಕನೊಬ್ಬ ಸಂಜೆಯ ವಾಕಿಂಗ್‌ಗೆ ಸಮಯದಲ್ಲಿ ಪುಟಾಣಿ ಕರುವನ್ನು ತನ್ನೊಂದಿಗೆ ಕರೆದುಕೊಂಡು ಬಂದಿರುವುದನ್ನು ಕಾಣಬಹುದು. ಅಲ್ಲಿದ್ದ ಜನರು ಕರುವನ್ನು ನೋಡುತ್ತಾ ನಿಂತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಪುಟ್ಟ ಕಂದಮ್ಮನಿಗೆ ಅಮ್ಮ ಎಂದು ಹೇಳಲು ಕಲಿಸುತ್ತಿದ್ದಂತೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಶ್ವಾನ

ಈ ವಿಡಿಯೋ 1.2 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇಂಟರ್ನೆಟ್‌ನಲ್ಲಿ ಇವತ್ತಿನ ಬೆಸ್ಟ್ ವಿಡಿಯೋ ಎಂದಿದ್ದಾರೆ. ಮತ್ತೊಬ್ಬರು, ಮುದ್ದಾಗಿದೆ ಈ ದೃಶ್ಯ ಎಂದರೆ ಇನ್ನೊಬ್ಬರು, ಶ್ವಾನ ಪ್ರೇಮಿಗಳು ಇದನ್ನು ನೋಡಿ ಅಳ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:57 pm, Sun, 21 December 25

Source link

‘ಟಾಕ್ಸಿಕ್’ ಚಿತ್ರದಿಂದ ನಟಿ ಕಿಯಾರಾ ಅಡ್ವಾಣಿ ಫಸ್ಟ್ ಲುಕ್ ಬಿಡುಗಡೆ – Kannada News | Yash starrer Toxic movie team released Kiara Advani first look as Nadia

‘ರಾಕಿಂಗ್ ಸ್ಟಾರ್’ ಯಶ್ (Yash) ಅಭಿನಯದ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಹತ್ತಿರ ಆಗುತ್ತಿದೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ‘ಕೆಜಿಎಫ್: ಚಾಪ್ಟರ್ 2’ ಬಳಿಕ ಯಶ್ ನಟಿಸಿದ ಸಿನಿಮಾ ಆದ್ದರಿಂದ ‘ಟಾಕ್ಸಿಕ್’ (Toxic) ಮೇಲೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಈಗ ‘ಟಾಕ್ಸಿಕ್’ ಸಿನಿಮಾದ ನಾಯಕಿ ಕಿಯಾರಾ ಅಡ್ವಾಣಿ (Kiara Advani) ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದರಿಂದ ಕುತೂಹಲ ಹೆಚ್ಚಿಸಲಾಗಿದೆ. ಗ್ಲಾಮರಸ್ ಆದ ಗೆಟಪ್​​ನಲ್ಲಿ ಕಿಯಾರಾ ಅಡ್ವಾಣಿ ಅವರು ಕಾಣಿಸಿಕೊಂಡಿದ್ದಾರೆ.

ನಟಿ ಕಿಯಾರಾ ಅಡ್ವಾಣಿ ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಬಾಲಿವುಡ್ ಮಾತ್ರವಲ್ಲದೇ ಸೌತ್ ಸಿನಿಮಾರಂಗದಲ್ಲೂ ಅವರು ಹೆಸರು ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಯಶ್ ಜೊತೆ ಅಭಿನಯಿಸಿದ್ದು, ಆ ಕಾರಣದಿಂದ ‘ಟಾಕ್ಸಿಕ್’ ಸಿನಿಮಾ ಇನ್ನಷ್ಟು ವಿಶೇಷ ಎನಿಸಿಕೊಂಡಿದೆ. ಫಸ್ಟ್ ಲುಕ್ ನೋಡಿ ಕಿಯಾರಾ ಅಡ್ವಾಣಿ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಅವರು ನಾಡಿಯಾ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಸರ್ಕಸ್ ಹಿನ್ನೆಲೆಯಲ್ಲಿ ಅವರ ಫಸ್ಟ್ ಲುಕ್ ಪೋಸ್ಟರ್ ಮೂಡಿಬಂದಿದೆ. ಕಿಯಾರಾ ಮುಖದಲ್ಲಿ ಏನೋ ಆತಂಕ ಕಾಣಿಸುವಂತಿದೆ. ಆ ಮೂಲಕ ಇದು ಕೇವಲ ಗ್ಲಾಮರ್ ಪಾತ್ರವಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಈ ಚಿತ್ರದಲ್ಲಿ ಕಿಯಾರಾ ಅವರ ನಟನೆಗೆ ಹೆಚ್ಚು ಮಹತ್ವ ಸಿಗಲಿದೆ. ಇದು ಅವರ ವೃತ್ತಿಜೀವನದ ಅತ್ಯುತ್ತಮ ಪಾತ್ರ ಆಗಲಿದೆ ಎಂಬ ನಿರೀಕ್ಷೆ ಇದೆ.

ಈ ಸಿನಿಮಾಗೆ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ನಾಡಿಯಾ ಎಂಬ ಪಾತ್ರದ ಬಗ್ಗೆ ಅವರು ಮಾತನಾಡಿದ್ದಾರೆ. ‘ಕೆಲವು ಪಾತ್ರಗಳು ಸಿನಿಮಾಗೆ ಮಾತ್ರ ಸೀಮಿತ ಅಲ್ಲ. ಅವು ಕಲಾವಿದರಿಗೂ ಹೊಸ ಆಯಾಮ ನೀಡುತ್ತವೆ. ಈ ಪಾತ್ರಕ್ಕೆ ಕಿಯಾರಾ ಅಡ್ವಾಣಿ ಅವರು ನ್ಯಾಯ ಒದಗಿಸಿದ್ದಾರೆ. ಅದಕ್ಕಾಗಿ ನನಗೆ ಅವರ ಬಗ್ಗೆ ಹೆಮ್ಮೆ ಇದೆ’ ಎಂದು ಗೀತು ಹೇಳಿದ್ದಾರೆ.

ಇದನ್ನೂ ಓದಿ: ಮಗಳಿಗೆ ಸರಾಯಾಹ್ ಎಂದು ಹೆಸರಿಟ್ಟ ಸಿದ್ದಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ

ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಏಕಕಾಲಕ್ಕೆ ‘ಟಾಕ್ಸಿಕ್’ ಸಿನಿಮಾ ಸಿದ್ಧವಾಗುತ್ತಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಮುಂತಾದ ಭಾಷೆಗಳಿಗೆ ಡಬ್ ಆಗುತ್ತಿದೆ. ಈ ಸಿನಿಮಾದ ಬರವಣಿಗೆಯಲ್ಲಿ ನಿರ್ದೇಶಕಿ ಗೀತೂ ಮೋಹನ್​ದಾಸ್ ಜೊತೆ ಯಶ್ ಕೂಡ ಕೈ ಜೋಡಿಸಿದ್ದಾರೆ. ಆ ಕಾರಣದಿಂದಲೂ ಅಭಿಮಾನಿಗಳಿಗೆ ನಿರೀಕ್ಷೆ ಜಾಸ್ತಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link