‘ಜನ ನಾಯಗನ್’ ಸಿನಿಮಾಗೆ ಇನ್ನೊಂದು ಶಾಕ್: ಕ್ಯಾನ್ಸಲ್ ಆಯ್ತಾ 120 ಕೋಟಿ ರೂ. ಒಟಿಟಿ ಡೀಲ್?
ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ (Jana Nayagan) ಚಿತ್ರವು ವಿವಾದಗಳ ಸುಳಿಯಲ್ಲಿ ಸಿಲುಕಿದೆ. ಸೆನ್ಸಾರ್ ಮಂಡಳಿಯ ಜೊತೆಗಿನ ಸಂಘರ್ಷದಿಂದಾಗಿ ಸಿನಿಮಾ ಬಿಡುಗಡೆ ವಿಳಂಬವಾಗುತ್ತಿದೆ. ಅಲ್ಲದೇ, ಚಿತ್ರದ ಡಿಜಿಟಲ್ ಪ್ರಸಾರ ಹಕ್ಕುಗಳನ್ನು ಹೊಂದಿದ್ದ ಪ್ರಮುಖ ಒಟಿಟಿ ಸಂಸ್ಥೆ ‘ಅಮೇಜಾನ್ ಪ್ರೈಮ್ ವಿಡಿಯೋ’ (Amazon Prime Video) ತನ್ನ ಒಪ್ಪಂದದಿಂದ ಹಿಂದೆ ಸರಿದಿದೆ ಎಂಬ ವದಂತಿಗಳು ಕಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿವೆ. ಇದರಿಂದಾಗಿ ದಳಪತಿ ವಿಜಯ್ (Thalapathy Vijay) ಅವರ ಅಭಿಮಾನಿಗಳಿಗೆ…