ನವದೆಹಲಿ, ಮಾರ್ಚ್ 12: ಜಾಗತಿಕ ಇಂಧನ ಬಿಕ್ಕಟ್ಟಿನ ಮಧ್ಯೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಅವರ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಜೊತೆ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಇರಾನ್ ಭಾರತೀಯ ತೈಲ ಟ್ಯಾಂಕರ್‌ಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿ ನೀಡಿದೆ. ಇದರಿಂದ ಭಾರತಕ್ಕೆ ತೈಲ ಪೂರೈಕೆಯ ಸಮಸ್ಯೆಗೆ ಕೊಂಚ ಪರಿಹಾರ ಸಿಕ್ಕಂತಾಗಿದೆ.
ಯುನೈಟೆಡ್ ಸ್ಟೇಟ್ಸ್, ಯುರೋಪ್ ಮತ್ತು ಇಸ್ರೇಲ್‌ಗೆ ಸಂಬಂಧಿಸಿದ ಹಡಗುಗಳನ್ನು ಟಾರ್ಗೆಟ್ ಮಾಡುತ್ತಿರುವ ಇರಾನ್ ಅನೇಕ ತೈಲ ಟ್ಯಾಂಕರ್ಗಳ ಮೇಲೆ ದಾಳಿ ನಡೆಸಿದೆ. ಗಲ್ಫ್ ದೇಶಗಳ ಪ್ರಾದೇಶಿಕ ಸಂಘರ್ಷದ ನಡುವೆಯೂ ಭಾರತೀಯ ಧ್ವಜ ಹೊತ್ತ ಟ್ಯಾಂಕರ್‌ಗಳಾದ ಪುಷ್ಪಕ್ ಮತ್ತು ಪರಿಮಳ ಹಡಗುಗಳು ಈ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಸಾಗಿವೆ.
ಸತೀಶ್ (Satish) ಅವರು ಸದಾ ಸುದ್ದಿಯಲ್ಲಿರಲು ಬಯಸುತ್ತಾರೆ. ಇತ್ತೀಚೆಗೆ ಅವರು ಸುದೀಪ್ ಬಗ್ಗೆ ಆಡಿದ ಮಾತು ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು. ಈ ವಿಷಯದಲ್ಲಿ ಸಾಕಷ್ಟು ಚರ್ಚೆಗಳು ಕೂಡ ನಡೆದವು. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಬೆದರಿಕೆಗಳು ಬಂದವು. ಈಗ ತಾವು ಆ ರೀತಿ ಹೇಳಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.
‘ನಾನು, ಸರ್ ಬಗ್ಗೆ ಎಲ್ಲಿ ಹಗುರವಾಗಿ ಮಾತನಾಡಿದ್ದೇನೆ. ನಟರಿಗೆ ಕೊಂಬಿರುತ್ತದೆಯೇ ಎಂದು ನಾನು ಕೇಳಿದೆನೇ ಹೊರತು, ಸುದೀಪ್ ಸರ್ಗೆ ಕೇಳಿದ್ದಲ್ಲ. ಈ ಬಗ್ಗೆ ನಾನು ಟಿವಿ9 ಅಲ್ಲಿ ಮಾತನಾಡಿದ್ದೆ. ನಟರು ಮಾತ್ರ ಸಾಧಿಸೋದಾ? ಡಾಗ್ ಫಿಲ್ಡ್ ಅವರು, ವೈದ್ಯರು ಎಲ್ಲರೂ ಸಾಧನೆ ಮಾಡಿರ್ತಾರೆ. ಹೀಗಿರುವಾಗ ನಟರಿಗೆ ಮಾತ್ರ ಯಾಕೆ ಅಷ್ಟು ಗೌರವ ಕೊಡಬೇಕು ಎಂದು ನಾನೆ ಪ್ರಶ್ನೆ ಮಾಡಿದ್ದು. ಸೋಶಿಯಲ್ ಮೀಡಿಯಾದಲ್ಲ ಅದನ್ನು ತಿರುಚಲಾಗಿದೆ’ ಎಂದು ಸತೀಶ್ ಹೇಳಿದ್ದಾರೆ.
‘ಸುದೀಪ್ ಸರ್ ಅವರು ಎಲ್ಲಿಯವರೆಗೆ ಹೆಸರು ಮಾಡಿದ್ದಾರೆ? ಗೂಗಲ್ನಲ್ಲಿ ನಂಬರ್ 1 ಹೀರೋ ಅಂತ ಹುಡುಕಿದರೆ ಬರುವಂತಹ ಹಂತಕ್ಕೆ ಆಗಿದ್ದಾರಾ? ನಟ ಆದ ಮಾತ್ರಕ್ಕೆ ತಲೆ ಮೇಲೆ ಕೊಂಬು ಇರುತ್ತಾ? ನಾಯಿ ಪೀಲ್ಡ್ನಲ್ಲಿ ಪ್ರಪಂಚಕ್ಕೆ ನಂಬರ್ 1 ನಾನು ಅಂತ ಬರುತ್ತೇನೆ. ಅವರು ಕರ್ನಾಟಕಕ್ಕೆ ಇರಬಹುದು ಅಥವಾ ಅರ್ಧ ಭಾರತಕ್ಕೆ ಇರಬಹುದು. ಇಂಡಿಯಾಗೆ ನಂಬರ್ ಒನ್ ಹೀರೋ ಅಂತ ಗೂಗಲ್ನಲ್ಲಿ ಹಾಕಿದರೆ ಸುದೀಪ್ ಸರ್ ಬರುತ್ತಾರಾ’ ಎಂದು ಸತೀಶ್ ಪ್ರಶ್ನೆ ಮಾಡಿದ್ದರು. ವಿಡಿಯೋ ನೋಡಲು ಇಲ್ಲಿ ಕ್ಲಿಕ್ಮಾಡಿ.
ಈ ಹೇಳಿಕೆಯಿಂದ ಸುದೀಪ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ರಜತ್ ಹಾಗೂ ವಿನಯ್ ಗೌಡ ಸಿಟ್ಟಾಗಿದ್ದು, ಸತೀಶ್ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಆ ಬಳಿಕ ಸತೀಶ್ ಅವರು ಇಬ್ಬರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಸಾಮಾನ್ಯವಾಗಿ, ಹೊಸ ಕಚೇರಿ ಅಥವಾ ಅಂಗಡಿಯ ಉದ್ಘಾಟನೆಗಳಲ್ಲಿ ಟೇಪ್ ಕತ್ತರಿಸುವ ಪದ್ಧತಿಯೂ ಇದೆ. ಆದರೆ, ದೀಪ ಬೆಳಗುವ ಆಚರಣೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ಇದರ ಹಿಂದಿನ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.
“ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಜ್ಯೋತಿ ಜನಾರ್ದನಃ ದೀಪೋ ಹರತು ಮೇ ಪಾಪಾನಿ ಸಂಧ್ಯಾ ದೀಪ ನಮೋಸ್ತುತೇ” ಎಂಬ ಶ್ಲೋಕ ದೀಪದ ಅಂತರಾರ್ಥವನ್ನು ಗುರೂಜಿ ವಿವರಿಸಿದ್ದಾರೆ. ದೀಪವು ಪರಬ್ರಹ್ಮನ ಸ್ವರೂಪವಾಗಿದೆ, ಜನಾರ್ದನನ ಜ್ಯೋತಿಯಾಗಿದೆ ಮತ್ತು ಪಾಪಗಳನ್ನು ಹರಣ ಮಾಡುವ ಶಕ್ತಿಯನ್ನು ಹೊಂದಿದೆ ಎಂದು ಇದರ ಅರ್ಥ. ಭಗವಂತನಿಗೆ ಯಾವುದೇ ಆಹಾರವನ್ನು ಅರ್ಪಿಸಬೇಕಿದ್ದರೂ ಅಗ್ನಿಯ ಮುಖಾಂತರವೇ ಅರ್ಪಿಸಲಾಗುತ್ತದೆ. ಅಂತೆಯೇ, ದೀಪದ ಮೂಲಕ ಭಗವಂತನನ್ನು ಪ್ರಾರ್ಥಿಸಲಾಗುತ್ತದೆ. ದೀಪವು ಭಗವಂತನ ಸ್ವರೂಪವೆಂದು ಪರಿಗಣಿಸಲಾಗುತ್ತದೆ.
ದೀಪದ ಜ್ವಾಲೆಯು ಯಾವಾಗಲೂ ಊರ್ಧ್ವಮುಖವಾಗಿ, ಅಂದರೆ ಮೇಲ್ಮುಖವಾಗಿ ಉರಿಯುತ್ತದೆ. ಈ ಮೇಲ್ಮುಖ ಚಲನೆಯು ಅಭಿವೃದ್ಧಿ, ಪ್ರಗತಿ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಅನಾದಿ ಕಾಲದಿಂದಲೂ ನಮ್ಮ ಎಲ್ಲಾ ಕಾರ್ಯಕ್ರಮಗಳು ದೀಪ ಬೆಳಗುವುದರ ಮೂಲಕವೇ ಆರಂಭವಾಗುತ್ತವೆ. ಮನೆಯಲ್ಲಿ ಬೆಳಗಿನ ಜಾವ ಪೂಜೆ ಪ್ರಾರಂಭಿಸುವ ಮೊದಲು ದೀಪವನ್ನು ಬೆಳಗಿ ನಂತರವೇ ಪೂಜೆ ಮಾಡುವುದು ರೂಢಿಯಲ್ಲಿದೆ. ದೀಪಾವಳಿ ಹಬ್ಬದಲ್ಲಿ ಮನೆಯೆಲ್ಲಾ ದೀಪಗಳಿಂದ ಪ್ರಕಾಶಮಾನವಾಗುತ್ತದೆ, ಇದು ಶುಭವನ್ನು ಸೂಚಿಸುತ್ತದೆ.
ದೀಪವು ನಮಗೆ ಶಕ್ತಿ ತುಂಬುತ್ತದೆ ಮತ್ತು ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುತ್ತದೆ. ದೀಪವು ಗುರುವಿನ ಸಂಕೇತವೂ ಹೌದು. ದೀಪದಿಂದ ಹೊರಹೊಮ್ಮುವ ಬೆಳಕು ನಮ್ಮ ಅಜ್ಞಾನವನ್ನು ತೊಲಗಿಸಿ, ಜ್ಞಾನದ ಬೆಳಕನ್ನು ನೀಡುತ್ತದೆ. ಸಭೆ-ಸಮಾರಂಭಗಳಲ್ಲಿ ದೀಪ ಬೆಳಗುವ ಮೂಲಕ ಅಗ್ನಿದೇವರಿಗೆ “ನಾನು ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇನೆ, ನಿಮ್ಮ ಅನುಗ್ರಹ ಬೇಕು” ಎಂದು ಪ್ರಾರ್ಥಿಸಲಾಗುತ್ತದೆ. ಅಗ್ನಿದೇವರು ಪಂಚಭೂತಗಳಲ್ಲಿ ಒಂದಾಗಿದೆ (ಆಕಾಶ, ಭೂಮಿ, ಅಗ್ನಿ, ನೀರು, ವಾಯು). ಅಗ್ನಿಯು ಸೂರ್ಯನ ಸಂಕೇತವಾಗಿದ್ದು, ಈ ಪಂಚಭೂತಗಳನ್ನು ನಿರ್ವಹಣೆ ಮಾಡುವ ಶಕ್ತಿಯನ್ನು ಹೊಂದಿದೆ.
ಸಣ್ಣ ವ್ಯಾಪಾರವಿರಲಿ, ದೊಡ್ಡ ವ್ಯಾಪಾರವಿರಲಿ ಅಥವಾ ಬೀದಿ ವ್ಯಾಪಾರವಿರಲಿ, ಪ್ರತಿದಿನ ದೀಪ ಹಚ್ಚಿ ಅಂಗಡಿ ವ್ಯಾಪಾರ ಮಾಡುವುದು ಅನಿವಾರ್ಯವಲ್ಲ. ಆದರೆ, ಪ್ರಾರಂಭಿಕವಾಗಿ ದೀಪ ಬೆಳಗಿದಾಗ, ಆ ಜಾಗದಲ್ಲಿ ಮತ್ತು ಸುತ್ತಲೂ ಇರುವ ಅಷ್ಟ ದಿಕ್ಕುಗಳಲ್ಲಿನ ಋಣಾತ್ಮಕ ಶಕ್ತಿಗಳು ದೂರವಾಗಿ, ಧನಾತ್ಮಕ ಶಕ್ತಿಗಳು ಆಕರ್ಷಿತವಾಗುತ್ತವೆ. ರೈತರೂ ಸಹ ಬಿತ್ತನೆ ಬೀಜಗಳನ್ನು ಬಿತ್ತುವ ಮೊದಲು ಭೂಮಿಯಲ್ಲಿ ಎರಡು ದೀಪಗಳನ್ನು ಹಚ್ಚಿ ಪ್ರಾರ್ಥಿಸಿದಾಗ ಉತ್ತಮ ಫಸಲು ದೊರೆಯುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮನೆಯಲ್ಲಿ ಸಾಕುಪ್ರಾಣಿಗಳನ್ನು ಸಾಕುವುದು ಕೇವಲ ಹವ್ಯಾಸವಲ್ಲ, ಅದು ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಒಂದು ಮಾರ್ಗವೂ ಹೌದು. ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಪ್ರಾಣಿಗಳು ಮನೆಯಲ್ಲಿ ನೆಲೆಸುವುದರಿಂದ ಅಥವಾ ಅವುಗಳ ಸೇವೆ ಮಾಡುವುದರಿಂದ ದೈವಿಕ ಆಶೀರ್ವಾದದ ಜೊತೆಗೆ ಆರ್ಥಿಕ ಸಮೃದ್ಧಿಯೂ ಲಭಿಸುತ್ತದೆ. ಅಂತಹ ಅದೃಷ್ಟದ ಜೀವಿಗಳ ಕುರಿತಾದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.
ನಾಯಿ ಸಾಕುವುದು:
ಪ್ರಾಚೀನ ನಂಬಿಕೆಗಳ ಪ್ರಕಾರ, ನಾಯಿಗಳನ್ನು ಕಾಲಭೈರವನ ಸೇವಕರು ಮತ್ತು ನಿಷ್ಠೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ನಾಯಿಯನ್ನು ಸಾಕುವುದು ಅಥವಾ ಬೀದಿ ನಾಯಿಗಳಿಗೆ ಆಹಾರ ನೀಡುವುದು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರವಾಗಲು ನೆರವಾಗುತ್ತದೆ. ಇದು ಮನೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದಲ್ಲದೆ, ದುಷ್ಟ ಶಕ್ತಿಗಳಿಂದ ಕುಟುಂಬವನ್ನು ರಕ್ಷಿಸುತ್ತದೆ ಎಂಬ ನಂಬಿಕೆಯಿದೆ.
ಮೀನು:
ಮನೆಯಲ್ಲಿ ಮೀನಿನ ಅಕ್ವೇರಿಯಂ ಇಡುವುದು ಶಾಂತಿ ಮತ್ತು ಪ್ರಗತಿಯ ಸಂಕೇತ. ವಿಶೇಷವಾಗಿ ಗೋಲ್ಡ್ ಫಿಶ್ ಸಾಕುವುದು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ವಾಸ್ತು ಪ್ರಕಾರ, ಅಕ್ವೇರಿಯಂ ಅನ್ನು ಮನೆಯ ಈಶಾನ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಇರಿಸುವುದು ಅತ್ಯಂತ ಮಂಗಳಕರವಾಗಿದ್ದು, ಇದು ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ.
ಮೊಲ, ಆಮೆ ಸಾಕುವುದು:
ಮುಗ್ಧತೆಯ ಸಂಕೇತವಾದ ಮೊಲಗಳು ನೋಡಲು ಸುಂದರ ಮಾತ್ರವಲ್ಲ, ವಾಸ್ತು ದೃಷ್ಟಿಯಿಂದಲೂ ಅತ್ಯಂತ ಶ್ರೇಷ್ಠ. ಮೊಲಗಳು ಮನೆಯಲ್ಲಿದ್ದರೆ ನಕಾರಾತ್ಮಕತೆ ದೂರವಾಗಿ, ಸದಸ್ಯರ ನಡುವೆ ಪ್ರೀತಿ ಮತ್ತು ಸಾಮರಸ್ಯ ವೃದ್ಧಿಯಾಗುತ್ತದೆ. ಹಾಗೆಯೇ, ಸಂಪತ್ತು ಮತ್ತು ದೀರ್ಘಾಯುಷ್ಯದ ಪ್ರತೀಕವಾದ ಆಮೆಯು ವಿಷ್ಣುವಿನ ಅವತಾರವೆಂದೇ ಪ್ರಸಿದ್ಧ. ಮನೆಯ ಉತ್ತರ ದಿಕ್ಕಿನಲ್ಲಿ ಲೋಹ ಅಥವಾ ಸ್ಫಟಿಕದ ಆಮೆಯನ್ನು ಇರಿಸುವುದರಿಂದ ಆರ್ಥಿಕ ಅಡೆತಡೆಗಳು ನಿವಾರಣೆಯಾಗಿ ಹಣದ ಹರಿವು ಹೆಚ್ಚುತ್ತದೆ.
ಎಲ್ಲಕ್ಕಿಂತ ಮಿಗಿಲಾಗಿ, ಭಾರತೀಯ ಸಂಪ್ರದಾಯದಲ್ಲಿ ಹಸು ಸಾಕ್ಷಾತ್ ಮಹಾಲಕ್ಷ್ಮಿಯ ಸ್ವರೂಪ. ಗೋಸೇವೆ ಮಾಡುವ ಮನೆಯಲ್ಲಿ ಎಂದಿಗೂ ಶಾಂತಿ ಮತ್ತು ಸಮೃದ್ಧಿಗೆ ಕೊರತೆಯಿರುವುದಿಲ್ಲ ಎಂಬುದು ಹಿರಿಯರ ನಂಬಿಕೆ. ಈ ಪುಟ್ಟ ಜೀವಿಗಳ ಉಪಸ್ಥಿತಿಯು ನಿಮ್ಮ ಮನೆಯನ್ನು ಕೇವಲ ವಾಸಸ್ಥಳವಾಗಿ ಉಳಿಸದೆ, ಮಧುರವಾದ ಮತ್ತು ಸಮೃದ್ಧವಾದ ತಾಣವಾಗಿ ಬದಲಾಯಿಸುತ್ತದೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
‘ಧುರಂಧರ್ 2’ (Dhurandhar 2) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾ ಭಾರಿ ದೊಡ್ಡ ಹಿಟ್ ಆದ್ದರಿಂದ ‘ಧುರಂಧರ್ 2’ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿವೆ. ಸಿನಿಮಾದ ನಾಯಕ ‘ಹಂಝಾ’ ಮುಂದೇನು ಮಾಡುತ್ತಾನೆ ಎಂಬುದು ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಸಿನಿಮಾವನ್ನು ಆದಿತ್ಯ ಧರ್ ನಿರ್ದೇಶಿಸಿದ್ದು, ‘ಧುರಂಧರ್’ಗೆ ಮುಂದೆ ಆದಿತ್ಯ ನಿರ್ದೇಶಿಸಿದ್ದು ಒಂದೇ ಫೀಚರ್ ಫಿಲಂ ಅದುವೇ ‘ಉರಿ; ದಿ ಸರ್ಜಿಕಲ್ ಸ್ಟ್ರೈಕ್’. 2019 ರಲ್ಲಿ ಬಿಡುಗಡೆ ಆಗಿದ್ದ ‘ಉರಿ’ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಆದರೆ ಆ ಸಿನಿಮಾನಲ್ಲಿಯೇ ಅವರು ‘ಧುರಂಧರ್’ ಸಿನಿಮಾದ ಸ್ಪಷ್ಟ ಸುಳಿವು ನೀಡಿದ್ದರು.
‘ಉರಿ’ ಸಿನಿಮಾ, ಭಾರತೀಯ ಸೇನೆಯು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಮಾಡಿದ್ದ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ಆಧರಿಸಿದ ಸಿನಿಮಾ ಆಗಿದೆ. ಸಿನಿಮಾನಲ್ಲಿ, ಭಯೋತ್ಪಾದಕರು ಉರಿಯಲ್ಲಿ ಭಾರತೀಯ ಸೈನಿಕರ ಮೇಲೆ ದಾಳಿ ಮಾಡಿದ ಬಳಿಕ ಮೇಜರ್ ವಿಹಾನ್ ಸಿಂಗ್ ಶೇರ್ಗಿಲ್ (ವಿಕ್ಕಿ ಕೌಶಲ್) ‘ಸರ್ಜಿಕಲ್ ಸ್ಟ್ರೈಕ್’ಗಾಗಿ ಸಿದ್ಧತೆ ನಡೆಸಲು ಆರಂಭಿಸುತ್ತಾರೆ. ಆಗ ಫ್ಲೈಟ್ ಲೆಫ್ಟಿನೆಂಟ್ ಸೀರತ್ ಕೌರ್ (ಕೃತಿ ಕುಲ್ಹಾರಿ ) ಜೊತೆಗೆ ಮಾತನಾಡುತ್ತಾ, ‘ನಿಮ್ಮ ಕುಟುಂಬದವರು ಯಾರಾದರೂ ಸೈನ್ಯದಲ್ಲಿದ್ದಾರಾ? ಎಂದು ಕೇಳುತ್ತಾರೆ. ಆಗ ಲೆಫ್ಟಿನೆಂಟ್ ಸೀರತ್ ಕೌರ್, ‘ನನ್ನ ಪತಿ ಜಸ್ಕೀರತ್ ಸಿಂಗ್ ರಂಗಿ ಸೈನ್ಯದಲ್ಲಿದ್ದರು, ನೌಶೇರಾ ಸೆಕ್ಟರ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದರು’ ಎನ್ನುತ್ತಾರೆ.
‘ಧುರಂಧರ್’ ಸಿನಿಮಾನಲ್ಲಿ ನಾಯಕ ರಣ್ವೀರ್ ಸಿಂಗ್, ಪಾಕಿಸ್ತಾನದಲ್ಲಿ ತನ್ನ ಹೆಸರನ್ನು ‘ಹಂಝಾ ಅಲಿ’ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರ ನಿಜವಾದ ಹೆಸರು ಜಸ್ಕೀರತ್ ಸಿಂಗ್ ರಂಗಿ ಎಂದಾಗಿರುತ್ತದೆ. ಅದನ್ನು ಸಿನಿಮಾನಲ್ಲಿ ತೋರಿಸಲಾಗಿದೆ. ಈ ಲಿಂಕ್ಗಳನ್ನು ಜೋಡಿಸಿ ನೋಡುವುದಾದರೆ ಉರಿ ಘಟನೆ ನಡೆದಿರುವುದು 2016 ರಲ್ಲಿ ಆದರೆ ಅದಕ್ಕೆ ಮುಂಚೆಯೇ ಜಸ್ಕೀರತ್ ಸಿಂಗ್ ರಂಗಿ ನಿಧನ ಹೊಂದಿದ್ದಾರೆ. ಅದೂ ಪಾಕಿಸ್ತಾನದಲ್ಲಿ ಅಲ್ಲ ಬದಲಿಗೆ ಭಾರತದಲ್ಲಿ. ಅಂದರೆ ರಣ್ವೀರ್ ಸಿಂಗ್ ಪಾತ್ರ ಪಾಕಿಸ್ತಾನದಲ್ಲಿ ತನ್ನ ಮಿಷನ್ ಮುಗಿಸಿ ಭಾರತಕ್ಕೆ ವಾಪಸ್ಸಾಗಿ ಇಲ್ಲಿ ಭಯೋತ್ಪಾದಕರೊಟ್ಟಿಗೆ ಹೋರಾಡುವಾದ ನಿಧನ ಹೊಂದಿದೆ.
ಹಂಝಾ ಪಾತ್ರದ ಬಗ್ಗೆ ಸಾಕಷ್ಟು ಕುತೂಹಲ ಪ್ರೇಕ್ಷಕರಿಗೂ ಇದೆ. ಇದೀಗ ಬಿಡುಗಡೆ ಆಗಲಿರುವ ‘ಧುರಂಧರ್ 2’ ಸಿನಿಮಾನಲ್ಲಿ ಹಂಝಾ ಪಾತ್ರ ಪಾಕಿಸ್ತಾನಕ್ಕೆ ಹೋಗುವ ಮುಂಚಿನ ಕತೆಯನ್ನು ತೋರಿಸಲಾಗುವುದು ಎನ್ನಲಾಗುತ್ತಿದೆ. ‘ಧುರಂಧರ್ 2’ ಸಿನಿಮಾನಲ್ಲಿ ರಣ್ವೀರ್ ಸಿಂಗ್ ಪಾತ್ರ ಭಾರತದಲ್ಲಿ ಇದ್ದಾಗಿನ ಸಾಹಸಗಳು, ಅವರ ಪಾತ್ರದ ಹಿನ್ನೆಲೆ, ಮದುವೆ ದೃಶ್ಯಗಳನ್ನು ತೋರಿಸುವ ಸಾಧ್ಯತೆ ಇದೆ. ಅಲ್ಲದೆ, ಹಂಝಾನ ಮುಂದಿನ ಹೆಜ್ಜೆ ಏನಾಗಿರಲಿದೆ ಎಂಬುದನ್ನು ತೋರಿಸಲಾಗುತ್ತದೆಯಂತೆ.
ಗದಗ, ಮಾರ್ಚ್ 12: ನಕಲಿ ಲಾಟರಿ ಯೋಜನೆಯ ಮೂಲಕ ಜನರನ್ನು ಮೋಸಗೊಳಿಸುತ್ತಿರುವ ವಂಚಕ ಜಾಲ ಗದಗ ಜಿಲ್ಲೆಯಲ್ಲಿ ಸಕ್ರಿಯವಾಗಿದೆ ಎಂಬ ಆರೋಪ ಕೇಳಿಬಂದಿದೆ. ಖದೀಮರು ಕೇರಳ ಸರ್ಕಾರದ ಹೆಸರು ಮತ್ತು ಚಿಹ್ನೆಯನ್ನು ದುರುಪಯೋಗಪಡಿಸಿಕೊಂಡು ಲಾಟರಿ ಯೋಜನೆಯ ಹೆಸರಲ್ಲಿ ರ‍್ಯಾಂಡಮ್ ಮೊಬೈಲ್ ಸಂಖ್ಯೆಗಳಿಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ನೀವು 15 ಲಕ್ಷ ರೂ. ಲಾಟರಿ ಬಹುಮಾನ ಗೆದ್ದಿದ್ದೀರಿ ಎಂಬ ಮಾಹಿತಿ ಮೆಸೇಜ್ನಲ್ಲಿ ಇರಲಿದ್ದು,
ಜೊತೆಗೆ ಕೇರಳ ಸರ್ಕಾರದ ಚಿಹ್ನೆ ಹೊಂದಿರುವ PDF ಪ್ರಮಾಣಪತ್ರವನ್ನೂ ಕಳುಹಿಸಲಾಗುತ್ತಿದೆ. ಇದರಿಂದ ಲಾಟರಿ ನಿಜವಾದದ್ದು ಎಂಬ ಭಾವನೆ ಮೂಡಿಸಿ ವಂಚನೆ ಎಸಗಲಾಗುತ್ತಿದೆ ಎನ್ನಲಾಗಿದೆ.
ಹಣದ ಆಸೆಗೆ ಬಿದ್ದವರ ಬಳಿ ಬಹುಮಾನ ಪಡೆಯಲು 8,000 ಪ್ರೊಸೆಸಿಂಗ್ ಶುಲ್ಕ ಪಾವತಿಸಲು ಹೇಳಲಾಗುತ್ತದೆ. ಪ್ರಮಾಣಪತ್ರವನ್ನು ನಿಜವೆಂದು ನಂಬಿದ ಕೆಲವರು ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಗದಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಈ ರೀತಿಯ ವಂಚನೆ ಪ್ರಕರಣಗಳು ನಡೆಯುತ್ತಿದ್ದು, ಮೂಲಗಳ ಪ್ರಕಾರ ಒಮ್ಮೆ ಕರ್ನಾಟಕದಲ್ಲಿಯೂ ಪ್ರಸಿದ್ಧವಾಗಿದ್ದ ಕೇರಳ ಲಾಟರಿಗಳ ಜನಪ್ರಿಯತೆಯನ್ನು ದುರುಪಯೋಗಪಡಿಸಿಕೊಂಡು ವಂಚಕರು ಜನರನ್ನು ಸೆಳೆಯುತ್ತಿದ್ದಾರೆ. ಅನೇಕರು ಈ ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದ್ದರೂ ಭಯ ಅಥವಾ ನಾಚಿಕೆ ಕಾರಣದಿಂದ ಅನೇಕರು ಪೊಲೀಸರಿಗೆ ದೂರು ನೀಡಿಲ್ಲ ಎಂದು ತಿಳಿದುಬಂದಿದೆ.
ರೋಣ ಪಟ್ಟಣದ ನಿವಾಸಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿವರ ಹಂಚಿಕೊಂಡ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ಆ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಹಲವರು ತಮಗು ಕೂಡ ಇದೇ ರೀತಿಯ ಸಂದೇಶಗಳು ಬಂದಿವೆ ಎಂದು ತಿಳಿಸಿದ್ದಾರೆ. ಆದರೆ ಆ ಪೋಸ್ಟ್ ಬಳಿಕ ಡಿಲೀಟ್ ಆಗಿದೆ. ಹೆಸರು ಹೇಳಲು ಇಚ್ಛಿಸದೆ ಮಾತನಾಡಿರುವ ರೋಣದ ನಿವಾಸಿಯೊಬ್ಬರು, ಕೇರಳ ಸರ್ಕಾರದ ಲೋಗೋ ಇರುವ ಪ್ರಮಾಣಪತ್ರವೇ ಹಲವರನ್ನು ನಂಬುವಂತೆ ಮಾಡಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಸೈಬರ್ ವಂಚನೆಗಳ ಬಗ್ಗೆ ಪೊಲೀಸರು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದ್ದಾರೆ. ಸಂಶಯಾಸ್ಪದ ಲಾಟರಿ ಸಂದೇಶಗಳಿಗೆ ಪ್ರತಿಕ್ರಿಯಿಸಬಾರದು ಮತ್ತು ಎಚ್ಚರಿಕೆಯಿಂದಿರಬೇಕು ಎಂದು ಮನವಿ ಮಾಡಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಬೆಂಗಳೂರು, ಮಾರ್ಚ್ 12: ಅಮೆರಿಕ, ಇರಾನ್ ಹಾಗೂ ಇಸ್ರೇಲ್ ಯುದ್ಧದ ಪರಿಣಾಮವಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೊರತೆ (Gas Cylinder Crisis)ತೀವ್ರವಾಗಿದ್ದು, ಹೋಟೆಲ್ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಲಿಂಡರ್ ಸಿಗದೆ ಅಡುಗೆ ಮಾಡುವುದು ಹೇಗೆ, ಹೋಟೆಲ್ ನಡೆಸುವುದು ಹೇಗೆ ಎಂಬ ಆತಂಕ ಎಲ್ಲೆಡೆ ವ್ಯಾಪಿಸಿದೆ. ಗ್ಯಾಸ್ ಸರಬರಾಜಿನಲ್ಲಿ ಉಂಟಾದ ವ್ಯತ್ಯಯದಿಂದ ಹಲವು ಹೋಟೆಲ್‌ಗಳು ಮತ್ತು ಸಣ್ಣ ಉಪಹಾರ ಗೃಹಗಳು ಸಂಕಷ್ಟ ಅನುಭವಿಸುತ್ತಿವೆ. ಆದರೆ ಬೆಂಗಳೂರಿನ ಸಾಮಾಜಿಕ ಸಂಸ್ಥೆಯೊಂದಕ್ಕೆ ಮಾತ್ರ ಗ್ಯಾಸ್ ಕೊರತೆಯ ಬಿಸಿ ತಟ್ಟಿಲ್ಲ ಎಂಬುದು ವಿಶೇಷವಾಗಿದೆ.
20 ವರ್ಷಗಳ ಹಿಂದೆಯೆ ಎಲ್‌ಪಿಜಿ ಸಿಲಿಂಡರ್ಗೆ ಗುಡ್ ಬೈ!
ಈ ಗ್ಯಾಸ್ ಬಿಕ್ಕಟ್ಟಿನ ನಡುವೆಯೂ ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆ ಎಲ್‌ಪಿಜಿ ಗ್ಯಾಸ್ ಬಳಸದೇ, ಯಾವುದೇ ತೊಂದರೆಯಿಲ್ಲದೆ 70 ಸಾವಿರದಿಂದ ಒಂದು ಲಕ್ಷ ಮಕ್ಕಳಿಗೆ ಪ್ರತಿದಿನ ಬಿಸಿಯೂಟ ಸಿದ್ಧಪಡಿಸುತ್ತಿದೆ. ವಿಶೇಷವೆಂದರೆ ಈ ಅಡುಗೆಗೆ ಗ್ಯಾಸ್ ಸಿಲಿಂಡರ್ ಅಗತ್ಯವೇ ಇಲ್ಲ. ದೇಶದಾದ್ಯಂತ ಹರಡಿರುವ ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ತಲೆಕೆಡಿಸಿಕೊಳ್ಳದ ಸಂಸ್ಥೆ ಸ್ಟೀಮ್ ಕುಕ್ಕಿಂಗ್ ಪದ್ಧತಿಯ ಮೂಲಕ ಮಕ್ಕಳಿಗೆ ಮಿಡ್ ಡೇ ಮೀಲ್ಸ್ ನೀಡುತ್ತಿದೆ. ಈಗಿರುವ ತುರ್ತು ಪರಿಸ್ಥಿತಿಯಿಂದಾಗಿ ದೇಶದ ಜನ ಕಕ್ಕಾಬಿಕ್ಕಿಯಾಗಿದ್ದರೆ, ಈ ಸಂಸ್ಥೆ 2005ರಲ್ಲೇ ಎಲ್‌ಪಿಜಿ ಸಿಲಿಂಡರ್ ಬಳಕೆಗೆ ಗುಡ್‌ಬೈ ಹೇಳಿರುವ ಈ ಸಂಸ್ಥೆ ದೇಶದ ಮೊದಲ ಕಮ್ಯುನಿಟಿ ಕ್ಲೌಡ್ ಕಿಚನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಲಕ್ಷಾಂತರ ಜನರ ಅಡುಗೆ ಹೇಗೆ ಸಾಧ್ಯ?
ಇಲ್ಲಿ ಕಸದ ವಸ್ತುಗಳಿಂದ ತಯಾರಿಸಲಾದ ಬ್ರಿಕೆಟ್ಸ್ ಬಳಸಿ ಅಡುಗೆ ಮಾಡಲಾಗುತ್ತಿದೆ. ಹಿಂದೆ ದಿನಕ್ಕೆ 60 ಸಿಲಿಂಡರ್ ಹಾಗೂ ಸುಮಾರು 400 ಲೀಟರ್ ಡಿಸೆಲ್ ಅಗತ್ಯವಿದ್ದರೆ, ಈಗ ಪರಿಸರ ಸ್ನೇಹಿ ವಿಧಾನದಿಂದ ಅಡುಗೆ ನಡೆಯುತ್ತಿದೆ. ಇದೀಗ ಪ್ರತಿ ದಿನ 70 ಸಾವಿರ ಮಕ್ಕಳಿಗೆ ಮಿಡ್‌ಡೇ ಮೀಲ್ಸ್ ನೀಡುವುದರ ಜೊತೆಗೆ ನಗರದ 10 ಕಡೆಗಳಲ್ಲಿ ಅನ್ನದಾನವೂ ನಡೆಯುತ್ತಿದೆ. ಫಾಸಿಲ್ ಫ್ಯೂಯಲ್ ಫ್ರೀ ಅಡುಗೆ ವ್ಯವಸ್ಥೆ ಮೂಲಕ ಅದಮ್ಯ ಚೇತನ ಸಂಸ್ಥೆ ಸದ್ಯದ ಗ್ಯಾಸ್ ಬಿಕ್ಕಟ್ಟಿನ ಸಮಯದಲ್ಲಿ ಎಲ್ಲರಿಗೂ ಮಾದರಿಯಾಗಿದೆ.
ಬ್ರಿಕೆಟ್ಸ್ (Briquettes) ಎಂಬುದು ಮರದ ಪುಡಿ, ಕೃಷಿ ತ್ಯಾಜ್ಯ (ನೆಲ್ಲಿಕಾಯಿ ಚಿಪ್ಪು, ಕಡಲೆಕಾಯಿ ಸಿಪ್ಪೆ) ಅಥವಾ ಕಲ್ಲಿದ್ದಲು ಪುಡಿಯಿಂದ ತಯಾರಿಸಿದ ಇಂಧನ ಇಟ್ಟಿಗೆಗಳಾಗಿವೆ. ಇವು ಪರಿಸರ ಸ್ನೇಹಿಯಾಗಿರುವುದರ ಜೊತೆಗೆ ಕಡಿಮೆ ಹೊಗೆ ಮತ್ತು ಹೆಚ್ಚಿನ ಶಾಖವನ್ನು ನೀಡುವ ಪರ್ಯಾಯ ಇಂಧನ ಮೂಲಗಳಾಗಿವೆ. ಇವುಗಳನ್ನು ಉದ್ಯಮಗಳಲ್ಲಿ ಬಾಯ್ಲರ್‌ಗಳಿಗೆ, ಅಡುಗೆಗೆ ಹೆಚ್ಚಾಗಿ ಬಳಸಲಾಗುತ್ತದೆ. ಇದೇ ಕ್ರಮವನ್ನು ದೇಶದ ವಿವಿಧ ಹೋಟೆಲ್‌ಗಳು, ಪಿಜಿಗಳು ಅಳವಡಿಸಿಕೊಂಡರೆ ಸಧ್ಯದ ಪರಿಸ್ಥಿತಿ ಎದುರಿಸಲು ಸಹಾಯವಾಗುತ್ತದೆ.
ನಿಯತ್ತು ಎಂದರೆ ಮೊದಲು ನೆನಪಾಗುವುದೇ ಈ ಶ್ವಾನ (dog). ಮನುಷ್ಯರಿಗೆ ನಾಯಿಗಿಂತ ಹೆಚ್ಚು ಆಪ್ತರು ಬೇರಾರೂ ಇರಲಿಕ್ಕೆ ಸಾಧ್ಯವಿಲ್ಲ. ಶ್ವಾನಗಳು ಸ್ವಾಮಿ ನಿಷ್ಠೆಗೆ ಹೆಸರುವಾಸಿಯಾದ ಪ್ರಾಣಿ. ಮನೆಯ ಸದಸ್ಯರಂತೆ ಇರುವ ಈ ಶ್ವಾನವು ಒಂದು ತುತ್ತು ಹಾಕಿದ್ರೆ ಸಾಕು, ಜೀವನ ಪರ್ಯಂತ ಮಾಲೀಕನಿಗೆ ಋಣಿಯಾಗಿರುತ್ತದೆ ಎನ್ನುವುದಕ್ಕೆ ಈ ದೃಶ್ಯವೇ ಸಾಕ್ಷಿ. ತನ್ನ ಮೇಲೆ ಕಾಳಜಿ ತೋರುವ ವ್ಯಕ್ತಿ ಹೂವಿನ ಮಾಲೆ ಮಾರುತ್ತಿದ್ದರೆ, ಶ್ವಾನವು ಆ ಹಿರಿಜೀವಕ್ಕೆ ಸಹಾಯ ಮಾಡಿದೆ. ಈ ಹೃದಯ ಸ್ಪರ್ಶಿ ವಿಡಿಯೋ ನೆಟ್ಟಿಗರ ಕಣ್ಣಂಚಲಿ ನೀರು ತರಿಸಿದೆ.
Somanath kanrar ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ಶ್ವಾನ ಹಾಗೂ ವ್ಯಕ್ತಿಯ ನಡುವಿನ ಬಾಂಧವ್ಯವನ್ನು ನೋಡಬಹುದು. ಹಿರಿಯ ವ್ಯಕ್ತಿಯೊಬ್ಬರು ಹೂವಿನ ಮಾಲೆಯನ್ನು ಮಾರಾಟ ಮಾಡುತ್ತಿದ್ದಾರೆ. ಕಾರಿನಲ್ಲಿದ್ದ ವ್ಯಕ್ತಿಗೆ ಕೈಯಲ್ಲಿದ್ದ ಮಾಲೆಯನ್ನು ಕೊಡುತ್ತಿದ್ದರೆ, ಇತ್ತ ಶ್ವಾನವು ತನ್ನ ಬಾಯಲ್ಲಿ ಹೂವಿನ ಮಾಲೆಯೊಂದನ್ನು ಹಿಡಿದು ಪಕ್ಕದಲ್ಲಿ ನಿಂತುಕೊಂಡಿದೆ.
ಈ ವಿಡಿಯೋ ಹನ್ನೆರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ತುಂಬಾನೇ ಮುದ್ದಾಗಿದೆ ಎಂದಿದ್ದಾರೆ. ಮತ್ತೊಬ್ಬರು, ಪ್ರಾಣಿಗಳಿಗೆ ಅನ್ನ ಹಾಕಿ, ಅವುಗಳು ನಿಮ್ಮ ಕಷ್ಟ ಸುಖಕ್ಕೆ ಹೆಗಲಾಗುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇಂತಹ ದೃಶ್ಯಗಳನ್ನು ನೋಡಲು ಖುಷಿಯೆನಿಸುತ್ತದೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತಮನ್ನಾ ಭಾಟಿಯಾ (Tamannah Bhatia), ಪ್ರಸ್ತುತ ಭಾರತೀಯ ಚಿತ್ರರಂಗದ ನಂಬರ್ 1 ‘ಐಟಂ ಗರ್ಲ್’. ತಮನ್ನಾ ಭಾಟಿಯಾ ಐಟಂ ಹಾಡಿಗೆ ಡ್ಯಾನ್ಸ್ ಮಾಡಿದರೆಂದರೆ ಆ ಸಿನಿಮಾ ಸೂಪರ್ ಹಿಟ್, ಆ ಹಾಡು ಸಹ ಸೂಪರ್ ಹಿಟ್ ಆಗಿಯೇ ತೀರುತ್ತದೆ ಎಂಬುದು ನಿರ್ಮಾಪಕ, ನಿರ್ದೇಶಕರುಗಳ ನಂಬಿಕೆ. ಇದೇ ಕಾರಣಕ್ಕೆ ತಮನ್ನಾಗೆ ಈಗ ಸಿನಿಮಾಗಳಿಗಿಂತಲೂ ಐಟಂ ಹಾಡುಗಳ ಆಫರ್ ಹೆಚ್ಚು ಬರುತ್ತಿದೆ. ಅದು ಮಾತ್ರವೇ ಅಲ್ಲ, ತಮನ್ನಾ ಭಾಟಿಯಾ ಈಗ ಐಟಂ ಹಾಡಿಗೆ ಅತಿ ಹೆಚ್ಚು ಸಂಭಾವನೆ ಪಡೆವ ನಟಿ ಸಹ ಹೌದು.
ಗ್ಲಾಮರ್ ಕ್ವೀನ್ ಎಂದೇ ಖ್ಯಾತವಾಗಿರುವ ತಮನ್ನಾ ಭಾಟಿಯಾಗೆ ಇದೀಗ ಅವರ ಟ್ರೆಂಡ್ಗೆ ವಿರುದ್ಧವಾದ ಪಾತ್ರ ದೊರೆತಿದೆ. ತಮನ್ನಾ ಭಾಟಿಯಾ ಅಪ್ಪಟ ಗೃಹಿಣಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಅದೂ ಪೌರಾಣಿಕ ಮಾದರಿಯ ಕತೆ ಹೊಂದಿರುವ ಸಿನಿಮಾನಲ್ಲಿ. ನಟಿ ತಮನ್ನಾ ಭಾಟಿಯಾ ಸ್ವತಃ ಮಹಾನ್ ದೈವ ಭಕ್ತೆ. ಕುಟುಂಬದೊಂದಿಗೆ ದೇವಾಲಯಗಳಿಗೆ ಭೇಟಿ ಮಾಡುತ್ತಲೇ ಇರುತ್ತಾರೆ. ಇದೀಗ ಅವರಿಗೆ ದೇವರ ಮಹಿಮೆಯ ಕತೆಯುಳ್ಳ ಸಿನಿಮಾನಲ್ಲಿ ನಾಯಕಿ ಪಾತ್ರ ದೊರೆತಿದೆ.
ರವಿತೇಜ ನಟಿಸುತ್ತಿರುವ ‘ಇರುಮುಡಿ’ ಸಿನಿಮಾನಲ್ಲಿ ತಮನ್ನಾ ಭಾಟಿಯಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ‘ಇರುಮುಡಿ’ ಸಿನಿಮಾದ ಹೆಸರೇ ಸೂಚಿಸುತ್ತಿರುವಂತೆ ಈ ಸಿನಿಮಾ ಅಯ್ಯಪ್ಪ ಸ್ವಾಮಿಯ ಮಹಿಮೆಯ ಕುರಿತಾದ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ರವಿತೇಜ ನಾಯಕ, ನಾಯಕಿಯ ಪಾತ್ರದಲ್ಲಿ ತಮನ್ನಾ ಭಾಟಿಯಾ ನಟಿಸಿದ್ದು, ಅವರದ್ದು ತುಸುವೂ ಗ್ಲಾಮರ್ಗೆ ಅವಕಾಶ ಇಲ್ಲದ ಅಪ್ಪಟ ಗೃಹಿಣಿಯ ಪಾತ್ರವಂತೆ. ಜೊತೆಗೆ ಈ ಪಾತ್ರ ಸವಾಲಿನದ್ದೂ ಆಗಿರಲಿದೆ.
2015 ರಲ್ಲಿ ಬಿಡುಗಡೆ ಆಗಿದ್ದ ರವಿತೇಜ ನಟನೆಯ ‘ಬೆಂಗಾಲ್ ಟೈಗರ್’ ಸಿನಿಮಾನಲ್ಲಿ ರವಿತೇಜ ಮತ್ತು ತಮನ್ನಾ ಭಾಟಿಯಾ ಒಟ್ಟಿಗೆ ನಟಿಸಿದ್ದರು. ಇದೀಗ 11 ವರ್ಷಗಳ ಬಳಿಕ ಈ ಜೋಡಿ ಒಟ್ಟಿಗೆ ನಟಿಸುತ್ತಿದೆ. ಇದೀಗ ಚಿತ್ರೀಕರಣಗೊಳ್ಳುತ್ತಿರುವ ‘ಇರುಮುಡಿ’ ಸಿನಿಮಾವನ್ನು ಶಿವ ನಿರ್ವಾನ ನಿರ್ದೇಶನ ಮಾಡುತ್ತಿದ್ದಾರೆ. ಮಾಸ್ ಮಲಾಸ ಆಕ್ಷನ್ ಕಾಮಿಡಿ ಸಿನಿಮಾಗಳಲ್ಲೇ ನಟಿಸುತ್ತಿದ್ದ ರವಿತೇಜ ಅವರಿಗೂ ಸಹ ಈ ಸಿನಿಮಾ ಭಿನ್ನವಾದ ಸಿನಿಮಾ ಆಗಿರಲಿದೆ.
ಟೆಹ್ರಾನ್, ಮಾರ್ಚ್ 12: ಇರಾಕ್‌ನ ಖೋರ್ ಅಲ್ ಜುಬೈರ್ ಬಂದರಿನ ಬಳಿ ಇರಾನ್ನ ಹಡಗು ಅಮೆರಿಕದ ಒಡೆತನದ ಕಚ್ಚಾ ತೈಲ ಟ್ಯಾಂಕರ್ (Oil Tanker) ಸಫೀಯಾ ವಿಷ್ಣುವನ್ನು (Safesea Vishnu) ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇದರ ಜೊತೆಗೆ ಮಾಲ್ಡೀವ್ಸ್ನ ಇನ್ನೊಂದು ಟ್ಯಾಂಕರ್ ಮೇಲೂ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಭಾರತೀಯ ಪ್ರಜೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಗಲ್ಫ್ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧ ಮತ್ತೋರ್ವ ಭಾರತೀಯನನ್ನು ಬಲಿ ತೆಗೆದುಕೊಂಡಿದೆ. ಈ ದಾಳಿಯಲ್ಲಿ ಒಬ್ಬ ಭಾರತೀಯ ಪ್ರಜೆ ಪ್ರಾಣ ಕಳೆದುಕೊಂಡಿದ್ದು, ಹಡಗಿನಲ್ಲಿದ್ದ ಉಳಿದ 27 ಸಿಬ್ಬಂದಿಯನ್ನು ರಕ್ಷಿಸಿ ಬಸ್ರಾಗೆ ಸ್ಥಳಾಂತರಿಸಲಾಗಿದೆ.
ಜಾಗತಿಕ ಕಡಲ ಕಾರ್ಯಪಡೆಯ ಶೇ. 15ಕ್ಕಿಂತ ಹೆಚ್ಚು ಜನರು ಭಾರತೀಯರು ಇರುವುದರಿಂದ, ಮುಂದಿನ ಯಾವುದೇ ದಾಳಿಯಲ್ಲಿ ಇನ್ನಷ್ಟು ಭಾರತೀಯ ಪ್ರಜೆಗಳು ಅಪಾಯಗಳಿವೆ ಎಂದು ಮೂಲಗಳು ಎಚ್ಚರಿಸಿವೆ.
BREAKING: Just hours after Trump told Oil Tankers to enter the Strait of Hormuz, regardless of Iran’s threats, an oil tanker is reportedly targeted and decimated by Iran in the Persian Gulf, just past the Strait of Hormuz.
ಮೂಲಗಳ ಪ್ರಕಾರ, ಸಫೆಸಿಯಾ ವಿಷ್ಣು 2007ರಲ್ಲಿ ನಿರ್ಮಿಸಲಾದ ಕಚ್ಚಾ ತೈಲ ಟ್ಯಾಂಕರ್ ಆಗಿದೆ. ಈ ಹಡಗು 228.6 ಮೀಟರ್ ಉದ್ದ, 32.57 ಮೀಟರ್ ಅಗಲವಿದ್ದು, ಮಾರ್ಷಲ್ ದ್ವೀಪಗಳ ಧ್ವಜದ ಅಡಿಯಲ್ಲಿ ಸಾಗುತ್ತದೆ. ಇದು 42,010 ಒಟ್ಟು ಟನ್ ಮತ್ತು 73,976 ಡೆಡ್‌ವೈಟ್ ಟನ್ ಹೊಂದಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ