Category Archives: Blog

Your blog category

Sanju Samson: ನನ್ನ ಈ ಪ್ರದರ್ಶನಕ್ಕೆ ‘ಅವರೇ’ ಕಾರಣ..!

Sanju Samson: ನನ್ನ ಈ ಪ್ರದರ್ಶನಕ್ಕೆ ‘ಅವರೇ’ ಕಾರಣ..!

T20 World Cup 2026: ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಮೂರನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದ ಹಿಂದಿನ ರೂವಾರಿ ಸಂಜು ಸ್ಯಾಮ್ಸನ್. ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದ ಸ್ಯಾಮ್ಸನ್ ನಿರ್ಣಾಯಕ ಹಂತದಲ್ಲಿ ಕಣಕ್ಕಿಳಿದು ಅಬ್ಬರಿಸುವ ಮೂಲಕ ಟೀಮ್ ಇಂಡಿಯಾಗೆ ಚಾಂಪಿಯನ್ ಪಟ್ಟ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ಮುಂಬೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಮ್ಯಾಚ್​ನಲ್ಲಿ 89 ರನ್ ಬಾರಿಸಿದ ಸ್ಯಾಮ್ಸನ್, ಫೈನಲ್​​ನಲ್ಲೂ ನ್ಯೂಝಿಲೆಂಡ್ ವಿರುದ್ಧ ಅಬ್ಬರಿಸಿದರು.

ಅಹಮದಾಬಾದ್​ನಲ್ಲಿ ನಡೆದ ಈ ಫೈನಲ್ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 46 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 89 ರನ್ ಸಿಡಿಸಿದರು. ಈ ಸ್ಫೋಟಕ ಇನಿಂಗ್ಸ್ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 255 ರನ್ ಪೇರಿಸಿತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು ಕೇವಲ 159 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 96 ರನ್​ಗಳ ಅಮೋಘ ಗೆಲುವಿನೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಇತ್ತ ಚಾಂಪಿಯನ್ ಪಟ್ಟದೊಂದಿಗೆ ಸಂಜು ಸ್ಯಾಮ್ಸನ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಈ ಪ್ರಶಸ್ತಿ ಪಡೆದು ಮಾತನಾಡಿದ ಸಂಜು, ನನ್ನ ಈ ಪ್ರದರ್ಶನಕ್ಕೆ ಸಚಿನ್ ತೆಂಡೂಲ್ಕರ್ ಅವರೇ ಕಾರಣ ಎಂದಿದ್ದಾರೆ.

ನ್ಯೂಝಿಲೆಂಡ್ ವಿರುದ್ಧದ ಸರಣಿಯ ವೈಫಲ್ಯದ ನಂತರ ಆತ್ಮವಿಶ್ವಾಸ ಕಳೆದುಕೊಂಡಿದ್ದ ನಾನು ಸಚಿನ್ ತೆಂಡೂಲ್ಕರ್ ಅವರಿಗೆ ಕರೆ ಮಾಡಿದ್ದೆ. ಈ ವೇಳೆ ಅವರು  ನನಗೆ ಮಾನಸಿಕ ಸ್ಥೈರ್ಯ ತುಂಬಿದ್ದರು.

ಸಚಿನ್ ಅವರು ಪಂದ್ಯದ ಮೇಲಿನ ಹಿಡಿತ ಮತ್ತು ಮಾನಸಿಕ ಸ್ಪಷ್ಟತೆಯ ಬಗ್ಗೆ ನನ್ನೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದರು. ಅಷ್ಟೇ ಅಲ್ಲದೆ ಫೈನಲ್ ಪಂದ್ಯದ ಹಿಂದಿನ ರಾತ್ರಿ ಕೂಡ ಸಚಿನ್ ಅವರಿಗೆ ಕರೆ ಮಾಡಿದ್ದೆ. ಈ ವೇಳೆಯೂ ಅವರು ನನಗೆ ಆತ್ಮವಿಶ್ವಾಸ ತುಂಬಿದ್ದರು.

ಕಳೆದ ಎರಡು ತಿಂಗಳುಗಳಿಂದ ನಾನು ಸಚಿನ್ ಸರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಅದರಲ್ಲೂಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ತಂಡದಿಂದ ಹೊರಗಿಟ್ಟಾಗ ಅವರು ನನಗೆ ಮಾನಸಿಕವಾಗಿ ದೃಢವಾಗಿರಲು ಮತ್ತು ಸರಿಯಾದ ಮನಸ್ಥಿತಿ  ಬೆಳೆಸಿಕೊಳ್ಳಲು ಮಾರ್ಗದರ್ಶನ ನೀಡಿದರು.

ಅವರಂತಹ ದಂತಕಥೆಯಿಂದ ಮಾರ್ಗದರ್ಶನ ಪಡೆಯುವುದು ನನಗೆ ಸಿಕ್ಕ ದೊಡ್ಡ ವರ. ಅವರು ನನಗೆ ಪಂದ್ಯದ ಮೇಲಿನ ಹಿಡಿತ ಮತ್ತು ತಯಾರಿಯ ಬಗ್ಗೆ ಸ್ಪಷ್ಟತೆ ನೀಡಿದರು. ಅಲ್ಲದೆ ನ್ಯೂಝಿಲೆಂಡ್ ವಿರುದ್ಧದ ಸರಣಿಯ ವೈಫಲ್ಯದ ಬಳಿಕ ನಾನು ಮಾನಸಿಕವಾಗಿ ಕುಗ್ಗಿದ್ದಾಗ ಸಚಿನ್ ಅವರ ಮಾತುಗಳು ನನ್ನಲ್ಲಿ ಮತ್ತೆ ನಂಬಿಕೆ ಮೂಡಿಸಿದವು.

ಇದನ್ನೂ ಓದಿ: ಹಿಸ್ಟರಿ… ಹಿಸ್ಟರಿ… ಹಿಸ್ಟರಿ… ವಿಶ್ವಕಪ್​ನಲ್ಲೂ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ

ನನ್ನಂತಹ ಆಟಗಾರನಿಗೆ ಕ್ರಿಕೆಟ್ ದಂತಕಥೆಯಿಂದ ಸಿಕ್ಕಂತಹ ಮಾರ್ಗದರ್ಶನದಿಂದಾಗಿ ನಾನು ಇಂದು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಸಂಜು ಸ್ಯಾಮ್ಸನ್ ತಿಳಿಸಿದ್ದಾರೆ.

 

Source link

Bengaluru Air Quality: ಇನ್ನೂ ಕಳಪೆ ಮಟ್ಟಕ್ಕಿಳಿದ ಬೆಂಗಳೂರಿನ ವಾಯು ಗುಣಮಟ್ಟ!

ಬೆಂಗಳೂರು, ಮಾರ್ಚ್​ 09: ರಾಜ್ಯದೆಲ್ಲೆಡೆ ಬಿಸಿಲಿನ ಬೇಗೆ ಹೆಚ್ಚಾಗಿದ್ದು ಈ ತಿಂಗಳು ಪೂರ್ತಿ ಇದೇ ವಾತಾವರಣ ಇರಲಿದೆ. ಈ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾಯು ಗುಣಮಟ್ಟ (Bengaluru Air Quality) ಕುಸಿತ ಕಂಡಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಕಳಪೆ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರು, ಕಲಬುರ್ಗಿ, ಬಳ್ಳಾರಿ ಸೇರಿದಂತೆ ಹಲವೆಡೆ ಇಂದು ವಾಯು ಗುಣಮಟ್ಟ 150 ದಾಟಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 174ಕ್ಕೆ ತಲುಪಿದೆ. ಕೆಲ ದಿನಗಳಿಂದ ಉಡುಪಿ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಏರ್ ಕ್ವಾಲಿಟಿ ತೀರಾ ಕಳಪೆ ಮಟ್ಟಕ್ಕೆ ಇಳಿದಿತ್ತು. ಆದರೆ ಇಂದು ಅದೇ ಉಡುಪಿ, ಮಂಗಳೂರು, ಕಲಬುರ್ಗಿ ಸೇರಿದಂತೆ ಹಲವೆಡೆಯ ವಾಯು ಗುಣಮಟ್ಟ 150ಕ್ಕಿಂತ ಹೆಚ್ಚಾಗಿದೆ. ಕಲಬುರ್ಗಿಯ AQI 151 ಇದ್ದು, 200ರ ಗಡಿ ತಲುಪುವ ಆತಂಕ ಎದುರಾಗಿದೆ. ಆದರೆ ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –174
  • ಮಂಗಳೂರು-171
  • ಮೈಸೂರು –162
  • ಬೆಳಗಾವಿ – 156
  • ಕಲಬುರ್ಗಿ-151
  • ಶಿವಮೊಗ್ಗ – 176
  • ಬಳ್ಳಾರಿ – 156
  • ಹುಬ್ಬಳ್ಳಿ- 161
  • ಉಡುಪಿ –164
  • ವಿಜಯಪುರ –164

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಲ್ಲಿ ಮಾತನಾಡಲು ಬಿಡದ ಫ್ಯಾನ್ಸ್​​ಗೆ ಎಚ್ಚರಿಕೆ ನೀಡಿದ ಜೂ.ಎನ್​ಟಿಆರ್

ಟಾಲಿವುಡ್ ನಟ ಜೂನಿಯರ್ ಎನ್​​ಟಿಆರ್ (JR NTR) ಅವರು ಭಾನುವಾರ (ಮಾರ್ಚ್ 8) ಬೆಂಗಳೂರಿಗೆ ಆಗಮಿಸಿದ್ದರು. ಕಿಮ್ಸ್ ಆಸ್ಪತ್ರೆಯ ಹೊಸ ಘಟಕದ ಉದ್ಘಾಟನೆಗಾಗಿ ಅವರು ಇಲ್ಲಿಗೆ ಬಂದಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡುವಾಗ ಅಭಿಮಾನಿಗಳು ಇದಕ್ಕೆ ಅವಕಾಶ ಕೊಡಲಿಲ್ಲ. ಒಂದೇ ಸಮನೆ ಕೂಗುತ್ತಿದ್ದರು. ಆಗ ಜೂನಿಯರ್ ಎನ್​​ಟಿಆರ್ ಅವರು ಖಡಕ್ ಎಚ್ಚರಿಕೆ ನೀಡಿದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಜೂನಿಯರ್​ ಎನ್​​ಟಿಆರ್ ಕಿಮ್ಸ್ ಘಟಕ ಉದ್ಘಾಟನೆಗೆ ಬರಲು ಒಂದು ಕಾರಣವೂ ಇತ್ತು. 1983ರಲ್ಲಿ ಜೂ ಎನ್​​​ಟಿಆರ್ ಅವರ ತಾತ ಎನ್​​ಟಿಆರ್ ಅವರೇ ಕಿಮ್ಸ್​​ಗೆ ಅಡಿಗಲ್ಲು ಹಾಕಿದ್ದರು. 2009ರಲ್ಲಿ ಜೂ ಎನ್​​ಟಿಆರ್ ಭಾರಿ ರಸ್ತೆ ಅಪಘಾತಕ್ಕೆ ಒಳಾಗಾದಾಗ ಅವರು ಕಿಮ್ಸ್​​ನಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಇದೇ ಕಾರಣಕ್ಕೆ ಇಂದು ಕಿಮ್ಸ್​​ನ ಹೊಸ ಘಟಕದ ಉದ್ಘಾಟನೆಗೆ ಅವರು ಆಗಮಿಸಿದ್ದರು. ಅವರನ್ನು ಅಭಿಮಾನಿಗಳು ಖುಷಿಯಿಂದ ಸ್ವಾಗತಿಸಿದರು. ಅವರನ್ನು ನೋಡಲು ಜನ ಸಾಗರವೇ ನೆರೆದಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜೂ ಎನ್​​ಟಿಆರ್: ಬಂದಿದ್ದೇಕೆ? ಆಡಿದ ಮಾತುಗಳೇನು?

ಮಾರ್ಚ್ 8 ಮಹಿಳಾ ದಿನಾಚರಣೆ ಆಗಿತ್ತು. ಹೀಗಾಗಿ ಆ ಬಗ್ಗೆ ಅವರು ಮಾತನಾಡಿದರು. ‘ಮಹಿಳೆಯರನ್ನು ಹೇಗೆ ಗೌರವಿಸಬೇಕು ಎಂದು ಪದೇ ಪದೇ ಹೇಳುವುದು ತನಗೆ ಇಷ್ಟವಿಲ್ಲ. ಪ್ರತಿಯೊಬ್ಬ ಪುರುಷನೂ ಆ ಸಂಸ್ಕೃತಿಯೊಂದಿಗೆ ಹುಟ್ಟಬೇಕು’ ಎಂದರು. ಅಲ್ಲದೆ, ತಮ್ಮ ಮಕ್ಕಳಿಗೂ ಮಹಿಳೆಯರನ್ನು ಗೌರವಿಸುವುದನ್ನು ಹೇಳಿಕೊಡೋದಾಗಿ ಹೇಳಿದರು. ಸಿನಿಮಾ ಮಾತ್ರವಲ್ಲದೆ ಹೊರಗೆಯೂ ತುಂಬಾ ಸಾಧಾರಣವಾಗಿ ವರ್ತಿಸುವ ಎನ್​​​​ಟಿಆರ್, ಮಹಿಳೆಯರ ಸುರಕ್ಷತೆ ಮತ್ತು ಗೌರವದ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದ್ದಕ್ಕಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರು ತಮ್ಮ ಅಭಿಮಾನಿಗಳ ಬಗ್ಗೆಯೂ ಮಾತನಾಡಿದರು ಮತ್ತು ಮನೆಗೆ ಎಚ್ಚರಿಕೆಯಿಂದ ಹೋಗುವಂತೆ ಸಲಹೆ ನೀಡಿದರು.

ಜೂನಿಯರ್ ಎನ್​​ಟಿಆರ್ ಅವರು ಮಾತು ಆರಂಭಿಸುವಾಗ ಫ್ಯಾನ್ಸ್ ಅವರ ಹೆಸರನ್ನು ಕೂಗಿದರು.. ಆಗ ಫ್ಯಾನ್ಸ್ ಜೂನಿಯರ್ ಎನ್​​ಟಿಆರ್ ಅವರಿಗೆ ಮಾತನಾಡಲು ಅವಕಾಶ ನೀಡಿಲ್ಲ. ಸುಮ್ಮನಿರಿ, ಸುಮ್ಮನಿರಿ ಎಂದು ಖಡಕ್ ಎಚ್ಚರಿಕೆ ನೀಡಿದ ಬಳಿಕ ಫ್ಯಾನ್ಸ್ ಸುಮ್ಮನಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಇಂದೂ ಒಣ ಹವೆ, ತಾಪಮಾನದಲ್ಲಿ ಏರಿಕೆ

ಬೆಂಗಳೂರು, ಮಾರ್ಚ್​ 09: ಆದರೆ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣ ಹವೆ (Weather Forecast) ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇಂದು ಬೆಂಗಳೂರಿನಲ್ಲಿ ತಾಪಮಾನದಲ್ಲಿ ಕೊಂಚ ಏರಿಕೆಯಾಗಬಹುದು ಎಂದು ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಹಲವು ದಿನಗಳಿಂದ ತಾಪಮಾನ ಹೆಚ್ಚಿದ್ದು, ಕೆಲ ದಿನಗಳಿಂದ ಒಣ ಹವೆಯ ವಾತಾವರಣವೇ ಕಂಡುಬಂದಿದೆ.

ಎಲ್ಲೆಲ್ಲಿ ಒಣ ಹವೆ?

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದಿನಿಂದ ಕೆಲ ದಿನ ರಾಜ್ಯದಲ್ಲಿ ಶುಷ್ಕ ವಾತಾವರಣವೇ ಇರಲಿದೆ ಎಂದು ಇಲಾಖೆ ತಿಳಿಸಿದ್ದು, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಮಾರ್ಚ್​ ಎರಡನೇ ವಾರದಲ್ಲಿ ತಾಪಮಾನ ಹೆಚ್ಚಳ

ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.

ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Source link

ಹಿಸ್ಟರಿ… ಹಿಸ್ಟರಿ… ಹಿಸ್ಟರಿ… ವಿಶ್ವಕಪ್​ನಲ್ಲೂ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ

Source link

Daily Devotional: ಶುಭಕಾರ್ಯಗಳಲ್ಲಿ ಗಂಡಸರು ಅಂಗವಸ್ತ್ರ ಯಾಕೆ ಧರಿಸಬೇಕು?

ಬೆಂಗಳೂರು, ಮಾರ್ಚ್​​ 09​​​​​: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಶುಭಕಾರ್ಯಗಳಲ್ಲಿ ಗಂಡಸರು ಅಂಗವಸ್ತ್ರ ಯಾಕೆ ಧರಿಸಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಶುಭಕಾರ್ಯಗಳಲ್ಲಿ ಪುರುಷರು ಅಂಗವಸ್ತ್ರ ಧರಿಸುವುದರ ಮಹತ್ವವು ಅನಾದಿಕಾಲದಿಂದಲೂ ಆಚರಣೆಯಲ್ಲಿರುವ ಸಂಪ್ರದಾಯವಾಗಿದೆ. ಪೂಜೆ, ಹೋಮ, ಹವನ, ವಿವಾಹ ಹಾಗೂ ಗೃಹಪ್ರವೇಶದಂತಹ ಸಂದರ್ಭಗಳಲ್ಲಿ ಪುರುಷರು ಭುಜದ ಮೇಲೆ ಅಂಗವಸ್ತ್ರವನ್ನು ಧರಿಸುತ್ತಾರೆ. ಈ ವಸ್ತ್ರವು ಕೇಸರಿ ಅಥವಾ ಬಿಳಿ ಬಣ್ಣದ್ದಾಗಿರಬಹುದು. ಅಂಗವಸ್ತ್ರ ಧರಿಸುವುದು ಕೇವಲ ಸಂಪ್ರದಾಯವಲ್ಲ, ಬದಲಿಗೆ ಸಂಕಲ್ಪ, ವ್ರತ ಹಾಗೂ ಗುರಿಯ ಸಂಕೇತವಾಗಿದೆ.

ಇದು ಸೂರ್ಯ ಮತ್ತು ಚಂದ್ರರ ಶಕ್ತಿಯನ್ನು ಜಾಗೃತಗೊಳಿಸಲು ಸಹಾಯ ಮಾಡುತ್ತದೆ. ಕಾರ್ಯಕ್ರಮಗಳಲ್ಲಿ ಅಂಗವಸ್ತ್ರ ಧರಿಸಿ ಕುಳಿತಾಗ ಏಕಾಗ್ರತೆ ಹೆಚ್ಚುತ್ತದೆ, ಶಿಸ್ತು ಮೂಡುತ್ತದೆ, ಮನಸ್ಸು ನಿರ್ಮಲವಾಗಿ ಚಂಚಲತೆ ಕಡಿಮೆಯಾಗುತ್ತದೆ. ದೇವಸ್ಥಾನಗಳಲ್ಲಿ ಅಥವಾ ಮನೆಯಲ್ಲಿ ದೇವರ ಮುಂದೆ ಕುಳಿತಾಗ ಸಾತ್ವಿಕ ಗುಣಗಳು ವೃದ್ಧಿಯಾಗುತ್ತವೆ. ಪೂಜಾ ಸಮಯದಲ್ಲಿ ಸಕಾರಾತ್ಮಕ ಶಕ್ತಿಗಳು ಶರೀರದಲ್ಲಿ ಸೇರಿ ಪೂಜೆಯ ಫಲವನ್ನು ಉತ್ತಮಗೊಳಿಸುತ್ತವೆ. ಬಿಳಿಯ ವಸ್ತ್ರ ಚಂದ್ರನ ಸಂಕೇತವಾದರೆ, ಕೇಸರಿ ವಸ್ತ್ರ ಕುಜನ ಸಂಕೇತವಾಗಿದೆ. ಸಾಮಾನ್ಯವಾಗಿ ಬಿಳಿಯ ವಸ್ತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಅಂಗವಸ್ತ್ರವು ಏಕಾಗ್ರತೆ, ಶಕ್ತಿ ಹಾಗೂ ಭಕ್ತಿಯನ್ನು ತರುತ್ತದೆ ಎಂದು ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

 

Source link

Horoscope Today 9​​​​​th​​ March​: ಇಂದು ಈ ರಾಶಿಯವರಿಗೆ ಅಪಾಯಗಳಿಂದ ಮುಕ್ತಿ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 9​​​​​, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಪಾಲ್ಗುಣ ಮಾಸ, ಶಿಶಿರ ಋತು, ಕೃಷ್ಣಪಕ್ಷ, ಷಷ್ಠಿ, ವಿಶಾಖ ನಕ್ಷತ್ರ, ವ್ಯಾಗತ ಯೋಗ ಮತ್ತು ಗಜ ಕರಣ ಇರತಕ್ಕಂತಹ ಈ ದಿನದ ರಾಹುಕಾಲ ಬೆಳಗಿನ 7 ಗಂಟೆ 59 ನಿಮಿಷದಿಂದ 9 ಗಂಟೆ 29 ನಿಮಿಷದವರೆಗೆ ಇರಲಿದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಮತ್ತು ಶುಭ ಕಾಲವು ಮಧ್ಯಾಹ್ನ 3 ಗಂಟೆ 30 ನಿಮಿಷದಿಂದ 4 ಗಂಟೆ 59 ನಿಮಿಷದ ತನಕ ಇರುತ್ತದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ತುಲಾ ರಾಶಿಯಲ್ಲಿ ಸಂಚರಿಸಲಿದ್ದಾನೆ ಎಂದು ಗುರೂಜಿ ಹೇಳಿದ್ದಾರೆ.

ಇಂದು ಸೋಮವಾರ ಶಿವನ ಕೃಪೆಗೆ ಪಾತ್ರರಾಗುವ ದಿನವಾಗಿದೆ. ಡಾ. ಬಸವರಾಜ ಗುರೂಜಿ ಅವರು ಮೇಷದಿಂದ ಮೀನ ರಾಶಿಯವರೆಗಿನ ಎಲ್ಲ ರಾಶಿಗಳ ಆರ್ಥಿಕ ಸ್ಥಿತಿ, ವೈವಾಹಿಕ ಜೀವನ, ವೃತ್ತಿ ಅವಕಾಶಗಳು, ಆರೋಗ್ಯ, ಕುಟುಂಬ ಸಂಬಂಧಗಳು, ಅದೃಷ್ಟ ಬಣ್ಣ, ಅದೃಷ್ಟ ಸಂಖ್ಯೆ ಮತ್ತು ಶುಭ ಮಂತ್ರಗಳ ಕುರಿತು ವಿವರವಾದ ಮಾಹಿತಿಯನ್ನು ಒದಗಿಸಿದ್ದಾರೆ

 

Source link

ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ರಾಜಕೀಯ ಪ್ರವೇಶ; ಜೆಡಿಯು ಪಕ್ಷಕ್ಕೆ ಸೇರ್ಪಡೆ

ಪಾಟ್ನಾ, ಮಾರ್ಚ್ 8: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಗ, 50 ವರ್ಷದ ನಿಶಾಂತ್ ಕುಮಾರ್ (Nishant Kumar) ರಾಜಕೀಯ ಪ್ರಯಾಣ ಆರಂಭಿಸಿದ್ದಾರೆ. ಇಂದು ಭಾನುವಾರ ಜೆಡಿಯು ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ನಿತೀಶ್ ಕುಮಾರ್ ಅವರು ದಶಕಗಳ ನಂತರ ರಾಜ್ಯ ರಾಜಕಾರಣ ತೊರೆದು ರಾಜ್ಯಸಭೆಗೆ ಹೋಗಲು ಅಣಿಯಾಗಿರುವ ಹೊತ್ತಲ್ಲಿ ಅವರ ಪುತ್ರನ ರಾಜಕೀಯ ಪ್ರವೇಶವಾಗಿದೆ.

‘ಸಕ್ರಿಯ ಸದಸ್ಯನಾಗಿ ಪಕ್ಷವನ್ನು ನೋಡಿಕೊಳ್ಳಲು ಪ್ರಯತ್ನಿಸುತ್ತೇನೆ. ನನ್ನ ತಂದೆ ರಾಜ್ಯಸಭೆಗೆ ಹೋಗಲು ನಿರ್ಧರಿಸಿದ್ದಾರೆ. ಅದು ಅವರ ವೈಯಕ್ತಿಕ ನಿರ್ಧಾರ. ಅದನ್ನು ಗೌರವಿಸುತ್ತೇನೆ. ಅವರ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡುತ್ತೇವೆ. ಪಕ್ಷ ಹಾಗೂ ಜನರ ವಿಶ್ವಾಸ ಉಳಿಸಿಕೊಳ್ಳಲು ಮತ್ತು ಸಂಘಟನೆಯನ್ನು ಬಲಪಡಿಸಲು ಯತ್ನಿಸುತ್ತೇನೆ’ ಎಂದು 50 ವರ್ಷದ ನಿಶಾಂತ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಡಾರ್ಜಿಲಿಂಗ್​​ನಲ್ಲಿ ರಾಷ್ಟ್ರಪತಿ ಮುರ್ಮು ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ, ವರದಿ ಕೇಳಿದ ಗೃಹ ಕಾರ್ಯದರ್ಶಿ

ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರಂತೆ ನಿತೀಶ್ ಕುಮಾರ್ ಪುತ್ರನೂ ಕೂಡ ಚುನಾವಣಾ ರಾಜಕೀಯದಿಂದ ದೂರವೇ ಇದ್ದವರು. ಸಿದ್ದರಾಮಯ್ಯರಂತೆ ನಿತೀಶ್ ಕುಮಾರ್ ಕೂಡ ವಂಶ ಪಾರಂಪರ್ಯ ರಾಜಕೀಯವನ್ನು ಕಟುವಾಗಿ ವಿರೋಧಿಸುತ್ತಾ ಬಂದವರು. ಆದರೆ, ತಮ್ಮ ರಾಜಕೀಯ ಕೊನೆಯ ದಿನಗಳಲ್ಲಿ ಅವರ ಮಕ್ಕಳು ರಾಜಕೀಯ ಪ್ರವೇಶ ಮಾಡಿದ್ದಾರೆ.

ಡಿಸಿಎಂ ಆಗುತ್ತಾರಾ ನಿಶಾಂತ್?

ಎಂಜಿನಿಯರಿಂಗ್ ಓದಿರುವ ನಿಶಾಂತ್ ಕುಮಾರ್ ಅವರು ನೇರ ರಾಜಕಾರಣಕ್ಕೆ ಹೊಸಬರಾದರೂ ಅಪ್ಪನ ರಾಜಕೀಯ ಮಾರ್ಗದರ್ಶನ ಇದ್ದೇ ಇರುತ್ತದೆ. ಸುದ್ದಿಗಳ ಪ್ರಕಾರ ನಿಶಾಂತ್ ಕುಮಾರ್ ಅವರಿಗೆ ಡಿಸಿಎಂ ಸ್ಥಾನ ನೀಡಲಾಗಬಹುದು. ಬಿಜೆಪಿ-ಜೆಡಿಯು ಮೈತ್ರಿಕೂಟದ ಈ ಸರ್ಕಾರದಲ್ಲಿ ಬಿಜೆಪಿಯಿಂದ ಮುಖ್ಯಮಂತ್ರಿ ಆಗಬಹುದು ಎನ್ನಲಾಗಿದೆ. ಇದೇನಾದರೂ ನಿಜವಾದಲ್ಲಿ ಬಿಹಾರದಲ್ಲಿ ಬಿಜೆಪಿ ಪ್ರಪ್ರಥಮ ಬಾರಿಗೆ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿದಂತಾಗುತ್ತದೆ.

ಇದನ್ನೂ ಓದಿ: ಇರಾನ್ ಯುದ್ಧ: ಬೆಂಬಲಕ್ಕೆ ಬ್ರಿಟನ್ ಹಿಂದೇಟು; ಇದನ್ನು ಮರೆಯಲ್ಲ ಎಂದ ಟ್ರಂಪ್

ನಿತೀಶ್ ಕುಮಾರ್ ಅವರ ಪೂರ್ಣ ರಾಜಕಾರಣ…

ನಿತೀಶ್ ಕುಮಾರ್ ಎರಡು ದಶಕಗಳ ಕಾಲ ಬಿಹಾರ ಮುಖ್ಯಮಂತ್ರಿಯಾಗಿದ್ದಾರೆ. ಬಿಹಾರದ ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಸಂಸತ್​ನಲ್ಲಿ ಲೋಕಸಭಾ ಸದಸ್ಯರಾಗಿದ್ದಾರೆ. ರಾಜ್ಯಸಭೆಯೊಂದು ಮಾತ್ರವೇ ಬಾಕಿ ಇದೆ. ಈಗ ಆ ಮನೆಯ ಸದಸ್ಯನಾಗಹೊರಟಿದ್ದಾರೆ. ಈ ರೀತಿ ನಾಲ್ಕು ಮನೆಗಳ ಸದಸ್ಯರಾದ ಕೆಲವೇ ಬಿಹಾರೀ ರಾಜಕಾರಣಗಳ ಸಾಲಿಗೆ ನಿತೀಶ್ ನಿಲ್ಲಲಿದ್ದಾರೆ. ಆರ್​ಜೆಡಿಯ ಲಾಲೂ ಪ್ರಸಾದ್ ಯಾದವ್ ಮತ್ತು ಬಿಜೆಪಿಯ ಸುಶೀಲ್ ಮೋದಿ ಅವರು ಈ ದಾಖಲೆ ಹೊಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

1 ರೂಪಾಯಿಯ ನೋಟು ನೀಡಿದ್ರೆ ಬ್ರಾಂಡೆಡ್ ಶೂ: ಮಳಿಗೆ ಮುಂದೆ ಜನಜಂಗುಳಿ, ನಂತರ ಆಗಿದ್ದೇನು?

ಕೋಯಿಕ್ಕೋಡ್, ಮಾ.8: ಕೇವಲ ಒಂದು ರೂಪಾಯಿಯ ನೋಟು ನೀಡಿದರೆ ಬ್ರಾಂಡೆಡ್ ಶೂಗಳನ್ನು ನೀಡುವುದಾಗಿ ಘೋಷಿಸಿದ್ದ ಮಳಿಗೆಯೊಂದರ ಮುಂದೆ ಸಾವಿರಾರು ಜನ ಜಮಾಯಿಸಿದ್ದು, ಪರಿಸ್ಥಿತಿ ಕೈಮೀರಿದ ಕಾರಣ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಕೋಯಿಕ್ಕೋಡ್‌ನ ಮಾನಂಚಿರ ಪ್ರದೇಶದಲ್ಲಿರುವ ‘ಟ್ರೆಂಡ್ ಫ್ಯಾಕ್ಟರಿ’ (Trend Factory) ಎಂಬ ಪಾದರಕ್ಷೆ ಮಳಿಗೆಯು ತನ್ನ ಪುನರಾರಂಭದ ಪ್ರಯುಕ್ತ ಈ ವಿಚಿತ್ರ ಆಫರ್ ಘೋಷಿಸಿತ್ತು. ಇನ್‌ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ವ್ಲಾಗರ್‌ಗಳ ಮೂಲಕ ಈ ಸುದ್ದಿ ಭಾರಿ ವೈರಲ್ ಆಗಿತ್ತು. ಇದನ್ನು ನೋಡಿ ಮಲಪ್ಪುರಂ, ಕಣ್ಣೂರು ಮತ್ತು ವಯನಾಡ್‌ನಂತಹ ಜಿಲ್ಲೆಗಳಿಂದಲೂ ನೂರಾರು ಯುವಕರು ಮತ್ತು ಮಕ್ಕಳು ಆಗಮಿಸಿದ್ದರು.ಬೆಳಿಗ್ಗೆ 10 ಗಂಟೆಗೆ ಮಳಿಗೆ ತೆರೆಯುವುದಾಗಿ ಹೇಳಿದ್ದರೂ, ಜನರು ಬೆಳಗಿನ ಜಾವ 2:00 ಅಥವಾ 3:00 ಗಂಟೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ಮಳಿಗೆಯ ಮುಂದೆ ಸೇರಿದ ಸಾವಿರಾರು ಜನರಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಮಳಿಗೆ ತೆರೆಯುತ್ತಿದ್ದಂತೆ ಜನರು ಒಳ ನಗ್ಗಲು ಪ್ರಯತ್ನಿಸಿದರು, ಇದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಘಟನೆಯಲ್ಲಿ ಕೆಲವು ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಕನ್ಯಾ ರಾಶಿಗೆ ಈ ವರ್ಷ ಹೇಗಿರಲಿದೆ?

2026ರ ಪರಾಭವ ನಾಮ ಸಂವತ್ಸರದ ಯುಗಾದಿಯ ಕನ್ಯಾ ರಾಶಿ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿಯವರು ವಿವರಿಸಿದ್ದಾರೆ. ಉತ್ತರಾ, ಹಸ್ತಾ, ಚಿತ್ತಾ ನಕ್ಷತ್ರದವರಿಗೆ ಈ ಭವಿಷ್ಯ ಅನ್ವಯಿಸುತ್ತದೆ. ಈ ವರ್ಷ ಕನ್ಯಾ ರಾಶಿಯವರಿಗೆ ಮಿಶ್ರಫಲಗಳು ಇರಲಿವೆ. ಆದಾಯ 8 ಇದ್ದರೆ, ವ್ಯಯ 9 ಇರಲಿದೆ. ಆರೋಗ್ಯ ಉತ್ತಮವಾಗಿರುತ್ತದೆ. ಸುಖ-ದುಃಖಗಳು ಸಮ ಪ್ರಮಾಣದಲ್ಲಿರುತ್ತವೆ.

ಗುರು ಗ್ರಹದ ಸಂಚಾರ ಮತ್ತು ರಾಶ್ಯಾಧಿಪತಿ ಬುಧನ ಪ್ರಭಾವದಿಂದ ಆರ್ಥಿಕವಾಗಿ ಪ್ರಗತಿ, ಉದ್ಯೋಗದಲ್ಲಿ ಯಶಸ್ಸು, ಬಡ್ತಿ, ಪ್ಯಾಕೇಜ್ ಬದಲಾವಣೆ, ವಿದೇಶ ಯೋಗ, ಮತ್ತು ಮಕ್ಕಳ ಸಂತಾನ ಯೋಗ ಕೂಡಿಬರುತ್ತದೆ. ಸರ್ಕಾರಿ ನೌಕರರು, ಶಿಕ್ಷಣ, ಆರೋಗ್ಯ ಕ್ಷೇತ್ರದವರು, ಡಾಕ್ಟರ್, ಸರ್ಜನ್‌ಗಳು, ಸಿವಿಲ್ ಇಂಜಿನಿಯರ್‌ಗಳು, ಬಿಲ್ಡರ್‌ಗಳು ಮತ್ತು ಮಾರ್ಕೆಟಿಂಗ್ ವೃತ್ತಿಯವರಿಗೆ ವಿಶೇಷವಾಗಿ ಶುಭಫಲಗಳು ದೊರೆಯುತ್ತವೆ. ಪ್ರಯಾಣದಿಂದ ಲಾಭ, ವಾಹನ ಯೋಗ, ಮತ್ತು ತಂದೆ-ತಾಯಿಗಳ ಆಶೀರ್ವಾದ ಇರಲಿದೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link