AI Robots Training: ತಲೆಗೆ ಫೋನ್ ಕಟ್ಟಿಕೊಂಡು AIಗೆ ಅಡುಗೆ ಕಲಿಸುತ್ತಿರುವ ಭಾರತೀಯ ಮಹಿಳೆಯರು; ಗಂಟೆಗೆ ಸಿಗುತ್ತೆ 250ರೂ. ವೇತನ! – Kannada News | Indians Train AI Robots for Home: Women Earn 250 Rs per Hour Recording Daily Chores
AIಗೆ ಅಡುಗೆ ಕಲಿಸುತ್ತಿರುವ ಭಾರತೀಯ ಮಹಿಳೆಯರುImage Credit source: R. Satish Babu/AFP ಭವಿಷ್ಯದ ದಿನಗಳಲ್ಲಿ ಮನೆಯ ಕೆಲಸಗಳನ್ನು ಸುಲಭವಾಗಿ ನಿಭಾಯಿಸಬಲ್ಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಚಾಲಿತ ರೋಬೋಟ್‌ಗಳ ಅಭಿವೃದ್ಧಿಯಲ್ಲಿ ಭಾರತೀಯರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ತಲೆಗೆ ಸ್ಮಾರ್ಟ್‌ಫೋನ್ ಅಥವಾ ಕ್ಯಾಮೆರಾ ಕಟ್ಟಿಕೊಂಡು ದೈನಂದಿನ ಕೆಲಸಗಳನ್ನು ವಿಡಿಯೋ ರೂಪದಲ್ಲಿ ದಾಖಲಿಸುವ ಮೂಲಕ ಮಹಿಳೆಯರು ರೋಬೋಟ್‌ಗಳಿಗೆ ಮನುಷ್ಯರಂತೆ ಕೆಲಸ ಮಾಡುವ ತರಬೇತಿ ನೀಡುತ್ತಿದ್ದಾರೆ. ಒಂದು ಗಂಟೆಯ ವಿಡಿಯೋಗೆ 250ರೂ. ಸಂಭಾವನೆ: ಅಲ್ ಜಜೀರಾ ವರದಿಯ ಪ್ರಕಾರ, ತಮಿಳುನಾಡಿನ ರಾಜಧಾನಿ…