Headlines

ಅಪಾರ್ಟ್​ಮೆಂಟ್ ನಿವಾಸಿಗಳಿಗೆ ಬೀದಿ ನಾಯಿಗಳ ಕಾಟ: ಮಕ್ಕಳು, ವೃದ್ಧರ ಮೇಲೆ ಮನಸೋ ಇಚ್ಛೆ ದಾಳಿ – Kannada News | Stray Dog Menace Grips Bengalurus Ahad Serenity Apartment Residents

ಬೆಂಗಳೂರು, ಮಾರ್ಚ್​​ 04: ಅಹದ್ ಸೆರೆನಿಟಿ ಅಪಾರ್ಟ್​ಮೆಂಟ್ ನಿವಾಸಿಗಳು ಬೀದಿ ನಾಯಿಗಳ ಹಾವಳಿಯಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ನಿವಾಸಿಗಳು ನಾಯಿಗಳ ಕಾಟದಿಂದ ಮುಕ್ತಿ ಕೋರಿ ಪ್ರತಿಭಟನೆ ನಡೆಸಿದ್ದಾರೆ. ಮಕ್ಕಳು ಮತ್ತು ವಯಸ್ಕರ ಮೇಲೆ ಬೀದಿ ನಾಯಿಗಳು ಗುಂಪು ಗುಂಪಾಗಿ ಬಂದು ದಾಳಿ ಮಾಡುತ್ತಿರುವುದು ದೈನಂದಿನ ಸಮಸ್ಯೆಯಾಗಿದೆ ಎಂದು ದೂರಿದ್ದಾರೆ. ತಮ್ಮ ಮಗಳ ಮೇಲೆ 24 ದಿನಗಳ ಹಿಂದೆ ನಾಯಿಗಳು ದಾಳಿ ಮಾಡಿ ಕೈ ಮುರಿದ ಘಟನೆಯನ್ನು ಇದೇ ವೇಳೆ ನಿವಾಸಿ ಒಬ್ಬರು ಹಂಚಿಕೊಂಡಿದ್ದಾರೆ….

Read More

ಮಧ್ಯಪ್ರಾಚ್ಯ ಬಿಕ್ಕಟ್ಟು; ಭಾರತೀಯರಿಗಾಗಿ ನಿಯಂತ್ರಣ ಕೊಠಡಿ ಸ್ಥಾಪಿಸಿದ ಮೋದಿ ಸರ್ಕಾರ – Kannada News | Iran Israel war: Modi Government sets up control room for Indians issues helpline numbers

ನವದೆಹಲಿ, ಮಾರ್ಚ್ 4: ಇಸ್ರೇಲ್-ಯುಎಸ್-ಇರಾನ್ ಸಂಘರ್ಷ (Iran Conflict) ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ. ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದಲ್ಲಿನ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ವಿಶೇಷ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಈ ಪ್ರದೇಶದಲ್ಲಿನ ಭಾರತೀಯ ಪ್ರಜೆಗಳಿಗೆ ಸಹಾಯ ಒದಗಿಸಲು ವಿದೇಶಾಂಗ ಸಚಿವಾಲಯ (MEA) ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಕೂಡ ನೀಡಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್​ನಲ್ಲಿ ಕೆಲವು ವಿವರಗಳನ್ನು ಹಂಚಿಕೊಂಡಿದ್ದು, “ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು…

Read More

ರಜಾ ದಿನಗಳಲ್ಲಿ ಬೆಕ್ಕುಗಳಿಗೆ ಆಹಾರ ಕೊಟ್ಟು 21 ಲಕ್ಷ ರೂ.ಗಳಿಸಿದ ವ್ಯಕ್ತಿ – Kannada News | Holiday Cat Care King: Chinese Man Makes Rs 21 Lakhs in Pet Feeding Business

ಚೀನಾ, ಮಾರ್ಚ್​ 04: ಸಾಮಾನ್ಯವಾಗಿ ಬೆಕ್ಕು(Cat) ಅಥವಾ ನಾಯಿಯನ್ನು ಬಹುತೇಕ ಎಲ್ಲರ ಮನೆಯಲ್ಲಿ ಸಾಕುತ್ತಾರೆ. ತಾವೇ ಆಹಾರ ಕೊಟ್ಟು ಮನೆಯ ಮಕ್ಕಳಂತೆ ಅವುಗಳನ್ನು ನೋಡಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವು ಶ್ರೀಮಂತರು ಅವುಗಳಿಗಾಗಿ ಸಹಾಯಕರನ್ನು ನೇಮಿಸಿಕೊಂಡಿರುತ್ತಾರೆ. ಚೀನಾ ವ್ಯಕ್ತಿಯೊಬ್ಬರು ರಜಾ ದಿನಗಳಲ್ಲಿ ಬೆಕ್ಕುಗಳಿಗೆ ಆಹಾರ ಕೊಟ್ಟು ಬರೋಬ್ಬರಿ 21 ಲಕ್ಷ ರೂ. ಗಳಿಸಿರುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ, ಬೆಕ್ಕುಗಳನ್ನು ನೋಡಿಕೊಳ್ಳುವ ಮತ್ತು ಆಹಾರ ನೀಡುವ ಕೆಲಸವು ಉದ್ಯಮವಾಗಿ ಬೆಳೆದಿದೆ. ಅದರಲ್ಲಿ…

Read More

ಟಿ20 ವಿಶ್ವಕಪ್​ ನಡುವೆ ಊರಿಗೆ ತೆರಳಿ ಸಿಕ್ಕಾಕೊಂಡ ನ್ಯೂಝಿಲೆಂಡ್ ಆಟಗಾರ – Kannada News | NZ vs SA: Has Matt Henry rejoined New Zealand squad?

T20 World Cup 2026: ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಂದು (ಮಾ.4) ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ನಿರ್ಣಾಯಕ ಪಂದ್ಯದಲ್ಲಿ ನ್ಯೂಝಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಕಣಕ್ಕಿಳಿಯಲಿದ್ದಾರಾ? ಎಂಬುದೇ ಈಗ ದೊಡ್ಡ ಪ್ರಶ್ನೆ. ಏಕೆಂದರೆ ಮಂಗಳವಾರ ಸಂಜೆ ತನಕ ಹೆನ್ರಿ ನ್ಯೂಝಿಲೆಂಡ್ ತಂಡವನ್ನು ಕೂಡಿಕೊಂಡಿರಲಿಲ್ಲ. ಇಂಗ್ಲೆಂಡ್ ವಿರುದ್ಧದ ಸೂಪರ್-8 ಪಂದ್ಯದ ಮುಕ್ತಾಯದ ಬೆನ್ನಲ್ಲೇ ಮ್ಯಾಟ್ ಹೆನ್ರಿ ನ್ಯೂಝಿಲೆಂಡ್​ಗೆ ತೆರಳಿದ್ದರು. ತಮ್ಮ ಎರಡನೇ ಮಗುವಿನ…

Read More

ಅರ್ಜುನ್ ಕಪೂರ್ ಟ್ರೋಲ್ ಮಾಡಿದವರಿಗೆ ತಂಗಿ ಜಾನ್ವಿಯ ಎಚ್ಚರಿಕೆ – Kannada News | Janhvi kapoor Supports His Step Brother Arjun Kapoor Over Troll

ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಯಾರನ್ನು ಯಾವ ಕಾರಣಕ್ಕಾಗಿ ಟ್ರೋಲ್ ಮಾಡಲಾಗುತ್ತದೆ ಎಂದು ಹೇಳಲಾಗುವುದಿಲ್ಲ. ಅದರಲ್ಲೂ ಸೆಲೆಬ್ರಿಟಿಗಳನ್ನು ಹೆಚ್ಚಾಗಿ ಗುರಿಯಾಗಿಸಿಕೊಳ್ಳಲಾಗುತ್ತದೆ. ಕಲಾ ಜಗತ್ತಿನಲ್ಲಿ ಕೆಲವು ಸೆಲೆಬ್ರಿಟಿಗಳು ಇದ್ದಾರೆ, ಅವರು ಏನು ಮಾಡಿದರೂ ಅಥವಾ ಹೇಳಿದರೂ, ಯಾವಾಗಲೂ ಟ್ರೋಲ್​​ಗೆ ಗುರಿಯಾಗಿರುತ್ತಾರೆ. ಅಂತಹ ಒಂದು ಹೆಸರು ಅರ್ಜುನ್ ಕಪೂರ್ (Arjun Kapoor). ಅರ್ಜುನ್ ಕಪೂರ್ ಅವರ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ವೈಫಲ್ಯದಿಂದಾಗಿ ಆಗಾಗ್ಗೆ ಟ್ರೋಲ್ ಆಗುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರ ಹೆಸರಿನಲ್ಲಿ ಹಲವಾರು ಮೀಮ್ಸ್ ಮತ್ತು ಮೀಮ್ಸ್ ಪುಟಗಳು…

Read More

Video: ಹೆತ್ತವರನ್ನು ತಾನು ಕೆಲಸ ಮಾಡುವ ಮೈಕ್ರೋಸಾಫ್ಟ್‌ ಆಫೀಸ್‌ ತೋರಿಸಲು ಕರೆತಂದ ಮಗಳು – Kannada News | Hyderabad: Daughter takes parents to show them around Microsoft Office in Hyderabad

ತಂದೆ ತಾಯಿಗೆ ತಮ್ಮ ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ (job) ಪಡೆದು ಜೀವನದಲ್ಲಿ ಸೆಟಲ್ ಆಗಬೇಕೆನ್ನುವ ಆಸೆಯಿರುತ್ತದೆ. ಅದರಂತೆ ಮಕ್ಕಳು ಬದುಕು ಕಟ್ಟಿಕೊಂಡರೆ ಹೆತ್ತವರಿಗೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ. ಭಾವನಾತ್ಮಕ ಕ್ಷಣಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಮೈಕ್ರೋಸಾಫ್ಟ್ ಉದ್ಯೋಗಿಯೊಬ್ಬರು ಪೋಷಕರನ್ನು ಹೈದರಾಬಾದ್‌ನ (Hyderabad) ತಮ್ಮ ಆಫೀಸಿಗೆ ಕರೆದುಕೊಂಡು ಹೋಗಿದ್ದಾರೆ. ಹೆತ್ತವರು ಹೆಮ್ಮೆ ಪಡುವಂತೆ ಮಾಡಿದ ಮಗಳ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತನೇಯಾ ಸೋನಿ (taneyasoni_vlogs) ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋಗೆ ಕನಸು…

Read More

ಭಾರತದ ಷೇರುಪೇಟೆ ಭರ್ಜರಿ ಕುಸಿತ; 8 ಲಕ್ಷ ಕೋಟಿ ರೂ ನಷ್ಟ; ಶೇ 80 ಷೇರುಗಳಿಗೆ ಹಿನ್ನಡೆ – Kannada News | Stock market nifty, sensex down by 2pc, investors face 8 trillion Rs loss

ನವದೆಹಲಿ, ಮಾರ್ಚ್ 4: ಭಾರತದ ಈಕ್ವಿಟಿ ಮಾರುಕಟ್ಟೆಯಲ್ಲಿ (Stock Market) ಕರಡಿ ಕುಣಿತ ಮುಂದುವರಿದಿದೆ. ಇಂದು ಬಿಎಸ್​ಇ ಮತ್ತು ಎನ್​ಎಸ್​ಇಯ ಹೆಚ್ಚಿನ ಸೂಚ್ಯಂಕಗಳು ಕೆಂಪು ಬಣ್ಣಕ್ಕೆ ತಿರುಗಿವೆ. ನಿಫ್ಟಿ, ಸೆನ್ಸೆಕ್ಸ್ ಶೇ. 2ರವರೆಗೂ ಕುಸಿತ ಕಂಡಿವೆ. ಹೂಡಿಕೆದಾರರಿಗೆ ಬರೋಬ್ಬರಿ 8 ಲಕ್ಷ ಕೋಟಿ ರೂ ನಷ್ಟ ಎದುರಾಗಿದೆ. ಇರಾನ್ ಯುದ್ಧ ನಡೆಯುತ್ತಿರುವುದರಿಂದ ಷೇರು ಮಾರುಕಟ್ಟೆ ಕುಸಿತ ಅನಿರೀಕ್ಷಿತವೇನಲ್ಲ. ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಎಲ್ಲಾ ಷೇರು ಮಾರುಕಟ್ಟೆಗಳು ಹಿನ್ನಡೆ ಕಾಣುತ್ತಿವೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್ ಸೂಚ್ಯಂಕ 1,523…

Read More

KAS ಗ್ರೂಪ್ ಎ,ಬಿ ಪರೀಕ್ಷೆ ರಿಸಲ್ಟ್ ವಿರುದ್ಧ ವಿದ್ಯಾರ್ಥಿಗಳ ಅಪಸ್ವರ: ಸಿಬಿಐ ತನಿಖೆಗೆ ಒತ್ತಾಯ – Kannada News | KPSC KAS Results: Students Allege Corruption, Demand CBI Probe for Irregularities

ಬೆಂಗಳೂರು, ಮಾರ್ಚ್​​ 04: ಗೆಜೆಟೆಡ್​​ ಪ್ರೊಬೇಷನರಿ ಗ್ರೂಪ್ ಎ ಮತ್ತು ಬಿ ವೃಂದದ 384 ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ 1:3 ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿ ಪಟ್ಟಿಯನ್ನು ನಿನ್ನೆ ಪ್ರಕಟಿಸಲಾಗಿದೆ. ಸದ್ಯ ಈ ಫಲಿತಾಂಶ ವಿರುದ್ಧ ವಿದ್ಯಾರ್ಥಿಗಳು ಅಪಸ್ವರ ಎತ್ತಿದ್ದಾರೆ. ಒಂದೇ ಕುಟುಂಬದ ಕೆಲವರು ಆಯ್ಕೆ ಆಗಿರುವ ಬಗ್ಗೆ ಗಂಭೀರ ಆರೋಪ ಮಾಡಲಾಗಿದ್ದು, CBI ತನಿಖೆಗೆ ಒತ್ತಾಯಿಸಿದ್ದಾರೆ. ಮತ್ತಷ್ಟು ಮಾಹಿತಿ ಅಪ್​​ಡೇಟ್ ಆಗಲಿದೆ. Source link

Read More

ದೊಡ್ಡಬಳ್ಳಾಪುರ ಬಳಿ ಕಲ್ಲಂಗಡಿ ಕ್ಯಾಂಟರ್ ಪಲ್ಟಿ, ಹಣ್ಣು ಹೊತ್ತೊಯ್ದ ಜನ! – Kannada News | Watermelon Canter Overturns in Doddaballapura, Driver Escapes Unhurt

ದೊಡ್ಡಬಳ್ಳಾಪುರ, ಮಾರ್ಚ್​ 04: ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಲ್ಲಂಗಡಿ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿಯಾದ ಘಟನೆ ದೊಡ್ಡಬಳ್ಳಾಪುರ ಹೊರ ವಲಯದಲ್ಲಿ ನಡೆದಿದೆ.ದೊಡ್ಡಬಳ್ಳಾಪುರ ಹೊರ ವಲಯದ ಮೇಷ್ಟ್ರು ಮನೆ ಸರ್ಕಲ್‌ ಬಳಿ ಈ ಅಪಘಾತ ಸಂಭವಿಸಿದೆ. ಚೆನ್ನೈನಿಂದ ದಾವಣಗೆರೆಯ ಹೊನ್ನಾಳಿಗೆ ಕಲ್ಲಂಗಡಿ ಸಾಗಿಸುತ್ತಿದ್ದ ಈ ಕ್ಯಾಂಟರ್, ಅನಿರೀಕ್ಷಿತವಾಗಿ ನಿಯಂತ್ರಣ ಕಳೆದುಕೊಂಡಿದೆ. ವೇಗವಾಗಿ ಬರುತ್ತಿದ್ದ ಕ್ಯಾಂಟರ್ ಹೆದ್ದಾರಿಯಲ್ಲಿದ್ದ ಮೂರು ಡಿವೈಡರ್‌ಗಳನ್ನು ದಾಟಿ ಪಕ್ಕದ ಪಳ್ಳಕ್ಕೆ ಬಂದು ಬಿದ್ದಿದೆ. ಅಪಘಾತದ ತೀವ್ರತೆಗೆ ಕ್ಯಾಂಟರ್‌ನಲ್ಲಿದ್ದ ಸಾವಿರಾರು ಕಲ್ಲಂಗಡಿಗಳು ರಸ್ತೆಯ ಮೇಲೆ ಹಾಗೂ ಸುತ್ತಮುತ್ತ…

Read More

‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಿಕೆ ನಿರ್ಧಾರಕ್ಕೆ ಕಾರಣವೇನು? – Kannada News | Why Toxic movie release postponed what is the reason

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ ಎನಿಸಿಕೊಂಡಿತ್ತು. ಸಿನಿಮಾದ ಟೀಸರ್, ಪೋಸ್ಟರ್, ಹಾಡುಗಳು ಬಿಡುಗಡೆ ಆಗಿ ಸಿನಿಮಾಕ್ಕೆ ಹೈಪ್ ನೀಡಿದ್ದವು. ಸಿನಿಮಾ ನೋಡಲು ಪ್ರೇಕ್ಷಕರು ಸಹ ತುದಿಗಾಲಲ್ಲಿ ಎದುರು ನೋಡುತ್ತಿದ್ದರು. ಮಾರ್ಚ್ 19ರಂದು ‘ಟಾಕ್ಸಿಕ್’ ಬಿಡುಗಡೆ ಆಗಲಿತ್ತು, ಸಿನಿಮಾದ ವಿತರಣೆ ಹಕ್ಕುಗಳ ಮಾರಾಟ ಸಹ ಆಗಿಬಿಟ್ಟಿತ್ತು. ಆದರೆ ಇದೀಗ ಹಠಾತ್ತನೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿದೆ. ಇದು ಯಶ್ ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ ಸಿನಿಮಾ ಪ್ರೇಮಿಗಳಿಗೂ ಸಹ ಸಾಕಷ್ಟು ಬೇಸರ…

Read More