‘ಟಾಕ್ಸಿಕ್’ ಮೊದಲ ಹಾಡಿನಿಂದ ಯಶ್ ಅಭಿಮಾನಿಗಳಿಗೆ ನಿರಾಸೆ: ಕಾರಣ ಏನು? – Kannada News | Yash fans upset after Toxic team released only audio track of Tabaahi song
ಹತ್ತಾರು ಕಾರಣಗಳಿಂದ ‘ಟಾಕ್ಸಿಕ್’ (Toxic) ಸಿನಿಮಾ ಹೈಪ್ ಸೃಷ್ಟಿಸುತ್ತಿದೆ. ಈ ಸಿನಿಮಾದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಸಿನಿಮಾಗೆ ಗೀತು ಮೋಹನ್ದಾಸ್ ಅವರು ನಿರ್ದೇಶನ ಮಾಡಿದ್ದಾರೆ. ದೇಶಾದ್ಯಂತ ಇರುವ ಯಶ್ (Yash) ಅಭಿಮಾನಿಗಳು ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಟೀಸರ್ ನೋಡಿದ ಎಲ್ಲರಿಗೂ ಕೌತುಕ ಹೆಚ್ಚಿದೆ. ಆದರೆ ಮೊದಲ ಹಾಡು ಬಿಡುಗಡೆ ಆದ ಬಳಿಕ ಕೆಲವರಿಗೆ ನಿರಾಸೆ ಆಗಿದೆ. ಹೌದು, ಮಾರ್ಚ್ 2ರಂದು ರಿಲೀಸ್ ಆದ ‘ತಬಾಹಿ..’ (Tabaahi)…