ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಫಲ; ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ? – Kannada News | West Asia crisis, gold rate prediction from experts
ನವದೆಹಲಿ, ಮಾರ್ಚ್ 2: ಪಶ್ಚಿಮ ಏಷ್ಯನ್ ಪ್ರದೇಶದಲ್ಲಿ ಯುದ್ಧದ ವಾತಾವರಣ ಹೀಗೇ ಮುಂದುವರಿದರೆ ಚಿನ್ನದ ಬೆಲೆ (Gold Rates) ಹೈಜಂಪ್ ಮಾಡಿಕೊಂಡು ಸಾಗಬಹುದು ಎಂದು ಪರಿಣಿತರು ಊಹಿಸಿದ್ದಾರೆ. ಈಗಾಗಲೇ ಹೂಡಿಕೆದಾರರು ಗೋಲ್ಡ್ ಇಟಿಎಫ್ಗಳನ್ನು ಹಣ ಹಾಕುವುದನ್ನು ಹೆಚ್ಚಿಸಿದ್ದಾರೆ. ಇದು ಇನ್ನೂ ಬಹಳಷ್ಟು ಹೆಚ್ಚಬಹುದು. ಡಾಲರ್ ಎದುರು ರುಪಾಯಿ ಮೌಲ್ಯದ ಕುಸಿತದ ಪರಿಣಾಮವೂ ಚಿನ್ನದ ಬೆಲೆ ಮೇಲೆ ಆಗಲಿದೆ. 20,000 ರೂ ಸಮೀಪಕ್ಕೆ ಚಿನ್ನದ ಬೆಲೆ? ಸ್ಪಾಟ್ ಗೋಲ್ಡ್ ಬೆಲೆ ಒಂದು ಔನ್ಸ್ಗೆ 5,400 ಯುಎಸ್ ಡಾಲರ್ ಇದೆ….