Category Archives: Blog

Your blog category

ದೈವಕ್ಕೆ ಅವಮಾನ ಮಾಡಿದ ಕೇಸ್: ಮಾರ್ಚ್ 9ರ ತನಕ ರಣವೀರ್ ಸಿಂಗ್ ನಿರಾಳ – Kannada News | Ranveer Singh gets relief till March 9 in Kantara Chapter 1 Daiva controversy

‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾದ ಬಗ್ಗೆ ಮಾತನಾಡುವಾಗ ನಟ ರಣವೀರ್ ಸಿಂಗ್ ಅವರು ದೈವಕ್ಕೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಂಡಿದ್ದರು. ಅವರ ವಿರುದ್ಧ ಕೇಸ್ ದಾಖಲಾಗಿತ್ತು. ಆ ಪ್ರಕರಣದಲ್ಲಿ ಮಾರ್ಚ್ 9ರವರೆಗೂ ರಣವೀರ್ ಸಿಂಗ್ ಅವರಿಗೆ ರಿಲೀಫ್ ಸಿಕ್ಕಿದೆ. ಕೇಸ್ ರದ್ದು ಕೋರಿ ರಣವೀರ್ ಸಿಂಗ್ ಅರ್ಜಿ ಸಲ್ಲಿಸಿದ್ದರು. ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆದಿದೆ. ಯುದ್ಧದಿಂದಾಗಿ ರಣವೀರ್ ಸಿಂಗ್ (Ranveer Singh) ಪರ ವಕೀಲರು ಇಂಗ್ಲೆಂಡ್‌ನಲ್ಲೇ ಉಳಿದಿದ್ದಾರೆ.

ವಿಮಾನವಿಲ್ಲದೇ ಭಾರತಕ್ಕೆ ವಾಪಸಾಗುತ್ತಿಲ್ಲವೆಂದು ಸಜನ್ ಪೂವಯ್ಯ ಹೇಳಿದ್ದಾರೆ. ‘ರಣವೀರ್ ಸಿಂಗ್‌ಗೆ ನೋಟಿಸ್ ನೀಡಿದ್ದೇವೆ, ಸಮಯ ಕೇಳಿದ್ದಾರೆ’ ಎಂದು ಸರ್ಕಾರದ ಪರ ಹೆಚ್ಚುವರಿ ಎಸ್‌ಪಿಪಿ ಬಿ.ಎನ್. ಜಗದೀಶ್ ಹೇಳಿಕೆ ನೀಡಿದ್ದಾರೆ. ಪೊಲೀಸರು ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಈ ಮೊದಲು ನೀಡಿದ್ದ ಆದೇಶವನ್ನು ಮಾರ್ಚ್ 9ರವರೆಗೆ ವಿಸ್ತರಣೆ ಮಾಡಿ ಕೋರ್ಟ್ ಆದೇಶಿಸಿದೆ.

ಏನಿದು ವಿವಾದ?
ಕಳೆದ ವರ್ಷ ನಡೆದ ಗೋವಾ ಚಲನಚಿತ್ರೋತ್ಸವದಲ್ಲಿ ರಣವೀರ್ ಸಿಂಗ್, ರಿಷಬ್ ಶೆಟ್ಟಿ ಮುಂತಾದವರು ಭಾಗಿಯಾಗಿದ್ದರು. ವೇದಿಕೆಯಲ್ಲಿ ಮಾತನಾಡುವಾಗ ರಣವೀರ್ ಸಿಂಗ್ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿನ ರಿಷಬ್ ಶೆಟ್ಟಿಯ ನಟನೆಯನ್ನು ಹೊಗಳಿದರು. ಮಾತಿನ ಭರದಲ್ಲಿ ಅವರು ದೈವದ ಅನುಕರಣೆ ಮಾಡಿ ತೋರಿಸಿದರು.

ರಣವೀರ್ ಸಿಂಗ್ ಅವರು ದೈವದ ಅನುಕರಣೆ ಮಾಡಿದ್ದು ಆಕ್ಷೇಪಾರ್ಹವಾಗಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಖಂಡಿಸಿದರು. ದೈವವನ್ನು ನಂಬುವ ಜನರ ಧಾರ್ಮಿಕ ಭಾವನೆಗಳಿಗೆ ನೋವು ಉಂಟಾಗಿದೆ ಎಂದು ಆರೋಪಿಸಿ ರಣವೀರ್ ಸಿಂಗ್ ವಿರುದ್ಧ ಕೇಸ್ ದಾಖಲಿಸಲಾಯಿತು. ಈ ಕೇಸ್​ ಕೈ ಬಿಡುವಂತೆ ರಣವೀರ್ ಸಿಂಗ್ ಅವರು ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: ಟಾಕ್ಸಿಕ್ Vs ಧುರಂದರ್ 2: ಅಡ್ವಾನ್ಸ್ ಬುಕಿಂಗ್​ನಲ್ಲಿ ಮುನ್ನಡೆ ಸಾಧಿಸಿದ ರಣವೀರ್ ಸಿಂಗ್ ಸಿನಿಮಾ

2025ರ ಡಿಸೆಂಬರ್ ತಿಂಗಳಲ್ಲಿ ರಣವೀರ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಯಿತು. ಹೈಗ್ರೌಂಡ್ಸ್ ಪೊಲೀಸರು ಎಫ್​ಐಆರ್ ದಾಖಲು ಮಾಡಿದರು. ಆ ಪ್ರಕರಣವನ್ನು ಕೈ ಬಿಡುವಂತೆ ಮನವಿ ಮಾಡಿರುವ ರಣವೀರ್ ಸಿಂಗ್ ಅವರು ಕೋರ್ಟ್ ಮೊರೆ ಹೋಗಿದ್ದಾರೆ. ಸದ್ಯಕ್ಕೆ ಮಾರ್ಚ್ 9ರವರೆಗೂ ಅವರಿಗೆ ರಿಲೀಫ್ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಧ್ಯಪ್ರಾಚ್ಯ ಯುದ್ಧಕ್ಕೆ ಗಡಗಡ ನಡುಗಿದ ಪಾಕಿಸ್ತಾನದ ಷೇರುಪೇಟೆ; ಒಂದೇ ದಿನ 15,000 ಅಂಕಗಳು ಪತನ; ಶೇ. 9ರಷ್ಟು ಸಂಪತ್ತು ನಷ್ಟ – Kannada News | Middle east crisis effect, Pakistan stock market down by 9pc in a single session

ಇಸ್ಲಾಮಾಬಾದ್, ಮಾರ್ಚ್ 2: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಜಾಗತಿಕವಾಗಿ ಎಲ್ಲಾ ಷೇರು ಮಾರುಕಟ್ಟೆಗಳನ್ನು ಅಲುಗಾಡಿಸುತ್ತಿದೆ. ಭಾರತದ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು ತತ್ತರಿಸಿವೆ. ಶೇ. 1-2ರಷ್ಟು ಕುಸಿತ ಕಂಡಿವೆ. ಆದರೆ, ಪಾಕಿಸ್ತಾನದ ಷೇರು ಮಾರುಕಟ್ಟೆ (Pakistan Stock Market) ಅತಿ ಹೆಚ್ಚು ಕರಡಿ ಕುಣಿತ ಕಂಡಿದೆ. ಇಂದು ಸೋಮವಾರದ ವಹಿವಾಟಿನಲ್ಲಿ ಪಾಕಿಸ್ತಾನ ಷೇರು ವಿನಿಮಯ ಕೇಂದ್ರದ ಕೆಎಸ್​ಇ-100 ಇಂಡೆಕ್ಸ್ (KSE-100 index) ಶೇ. 9ರಷ್ಟು ಕುಸಿತ ಕಂಡಿದೆ., ಕೆಎಸ್​ಇ-30 ಇಂಡೆಕ್ಸ್ ಕೂಡ ಕೆಳಗಿನ ಸರ್ಕ್ಯುಟ್ ಮಿತಿ ಮುಟ್ಟಿದೆ.

ಪಾಕಿಸ್ತಾನದ ಷೇರು ಮಾರುಕಟ್ಟೆ ಬಹಳ ಅಸ್ತಿರತೆಯಿಂದ ಕೂಡಿದೆ. ಇಲ್ಲಿ ಲಿಸ್ಟ್ ಆಗಿರುವ ಷೇರುಗಳ ಸಂಖ್ಯೆ ಕಡಿಮೆ ಇರುವುದರಿಂದ ವೊಲಾಟಾಲಿಟಿ ಅಥವಾ ಪ್ರಕ್ಷುಬ್ದತೆ ಅಥವಾ ಕುಲುಕಾಟ ತೀವ್ರವಾಗಿರುತ್ತದೆ.

ಇದನ್ನೂ ಓದಿ: ಜನವರಿವರೆಗೂ ಭಾರತದ ಒಟ್ಟಾರೆ ರಫ್ತು 720 ಬಿಲಿಯನ್ ಡಾಲರ್; ಹಿಂದಿನ ವರ್ಷದಕ್ಕಿಂತ ಶೇ. 6.15 ಹೆಚ್ಚಳ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಇಸ್ರೇಲ್, ಅಮೆರಿಕ, ಇರಾನ್ ಮಧ್ಯೆ ಮಾತ್ರ ಸೀಮಿತವಾಗಿಲ್ಲ. ಕೊಲ್ಲಿ ದೇಶಗಳನ್ನೂ ಇರಾನ್ ಗುರಿ ಮಾಡಿ ದಾಳಿ ಮಾಡುತ್ತಿರುವುದು ಪಾಕಿಸ್ತಾನೀಯರಿಗೆ ಅನಿರೀಕ್ಷಿತ ಬೆಳವಣಿಗೆ ಎನಿಸಿದೆ. ಪಾಕಿಸ್ತಾನದ ಹೆಚ್ಚಿನ ವ್ಯಾಪಾರ ವಹಿವಾಟು ಗಲ್ಫ್ ದೇಶಗಳೊಂದಿಗೆ ಇರುವುದರಿಂದ ಅಲ್ಲಿಯ ಬಿಕ್ಕಟ್ಟು ಈ ದೇಶಕ್ಕೆ ಅತಿಹೆಚ್ಚು ಬಾಧೆ ಉಂಟುಂ ಮಾಡುವ ವಿಚಾರ.

ಕುಸಿತದ ತೀವ್ರತೆಯಿಂದ ಟ್ರೇಡಿಂಗೇ ಬಂದ್

ಪಾಕಿಸ್ತಾನದ ಬ್ಯಾಂಕ್​ಗಳು, ಇಂಧನ ಸಂಸ್ಥೆಗಳು, ಸಿಮೆಂಟ್, ರಸಗೊಬ್ಬರ, ಆಟೊಮೊಬೈಲ್ ಅಸೆಂಬ್ಲಿಂಗ್, ವಿದ್ಯುತ್ ಕಂಪನಿಗಳ ಷೇರುಗಳಿಗೆ ಸೋಮವಾರ ತೀವ್ರ ಹಿನ್ನಡೆಯಾಗಿದೆ.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಫಲ; ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ?

ಕೆಎಸ್​ಇ-100 ಮತ್ತು ಕೆಎಸ್​ಇ-30 ಸೂಚ್ಯಂಕಗಳಲ್ಲಿ ಕುಸಿತ ಬಹಳ ತೀವ್ರವಾಗಿತ್ತು. ಹೂಡಿಕೆದಾರರು ಮನಬಂದಂತೆ ಷೇರುಗಳನ್ನು ಮಾರುತ್ತಿರುವ ಟ್ರೆಂಡ್ ಗೋಚರಿಸುತ್ತಿದ್ದಂತೆಯೇ ಟ್ರೇಡಿಂಗ್ ಅನ್ನೇ ನಿಲ್ಲಿಸಲಾಯಿತು. ಟ್ರೇಡಿಂಗ್ ಮುಂದುವರಿದಿದ್ದೇ ಆದಲ್ಲಿ ಪಾಕಿಸ್ತಾನದ ಷೇರು ಮಾರುಕಟ್ಟೆಯ ಕುಸಿತ ಇನ್ನಷ್ಟು ತೀವ್ರವಾಗಿರುತ್ತಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಗೋಪುರದ ಮೇಲೆ ಇರಾನ್ ದಾಳಿ – Kannada News | Bahrain skyscrapers tower on fire after Iran strike

ಬಹ್ರೇನ್, ಮಾರ್ಚ್ 2: ಬಹ್ರೇನ್‌ನಲ್ಲಿರುವ ಅಮೆರಿಕದ ಮಿಲಿಟರಿ ಸೌಲಭ್ಯಗಳು ಮತ್ತು ವಸತಿ ಗೋಪುರಗಳ ಮೇಲೆ ಇರಾನ್ (Iran Attack) ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. ಇದು ಮನಾಮದಲ್ಲಿರುವ ಅಮೆರಿಕದ ನೌಕಾಪಡೆಯ 5ನೇ ಪ್ರಧಾನ ಕಚೇರಿಯ ಬಳಿ ಅಪ್ಪಳಿಸಿತು. ಇರಾನಿನ ಮಿಲಿಟರಿ ನೆಲೆಗಳ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿದವು. ಈ ಸಂಘರ್ಷಕ್ಕೆ ನೇರ ಸಂಪರ್ಕ ಹೊಂದಿಲ್ಲದ ಬಹ್ರೇನ್ ಮೇಲೆ ಇರಾನ್ ದಾಳಿ ನಡೆಸಿದೆ. ಇಲ್ಲಿ ಅಮೆರಿಕದ ವಾಯುನೆಲೆ ಇರುವುದರಿಂದ ಇರಾನ್ ಅಟ್ಯಾಕ್ ಮಾಡಿದೆ. ಈ ದಾಳಿಯಿಂದ ಬಹ್ರೇನ್​ನ ಗಗನಚುಂಬಿ ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇರಾನ್ ತನ್ನ ವಿರುದ್ಧದ ಮಿಲಿಟರಿ ದಾಳಿಗಳನ್ನು ಬೆಂಬಲಿಸುವ ದೇಶಗಳಲ್ಲಿನ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿತ್ತು. ಇದು ಬಹ್ರೇನ್ ಮತ್ತು ಇತರ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿಗಳಿಗೆ ಕಾರಣವಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್ – Kannada News | Congress MLA satish sail Angry On His Party Minister Mankal Vaidya In KDP Meeting at Karwar

ಕಾರವಾರ, (ಮಾರ್ಚ್ 02): ಕಾಂಗ್ರೆಸ್ ಶಾಸಕರು ಹಾಗೂ ಸಚಿವ ನಡುವೆ ಹೊಂದಾಣಿಕೆ ಇಲ್ಲ. ಈ ಸಂಬಂಧ ಶಾಸಕರೇ ಕೆಲ ಸಚಿವರ ಮೇಲೆ ಸಿಎಂ ಸಿದ್ದರಾಮಯ್ಯಗೆ ದೂರು ನೀಡಿದ್ದರು. ಸಚಿವರು ಕೈಗೆ ಸಿಗಲ್ಲ. ಫೋನ್ ಮಾಡಿದ್ರೆ ರಿಸಿವ್ ಮಾಡಲ್ಲ ಅಂತೆಲ್ಲಾ ಆರೋಪಗಳನ್ನು ಮಾಡಿದ್ದಾರೆ. ಇದರ ಬೆನ್ನಲ್ಲೇ ಇದಕ್ಕೆ ಪೂರಕವೆಂಬಂತೆ ಉತ್ತರ ಕನ್ನಡ ಜಿಲ್ಲಾ ಕೆಡಿಪಿ ಸಭೆಯಲ್ಲಿ ಸಚಿವ ಮಾಂಕಾಳ್ ವೈದ್ಯ ವಿರುದ್ಧದವೇ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಗರಂ ಆಗಿದ್ದು, ಕೋಪಗೊಂಡು ಕೆಡಿಪಿ ಸಭೆಯಿಂದಲೇ ಹೊರ ನಡೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಖಾಲಿಯಾಗಿದೆ ಎಂಬುದನ್ನು ತಿಳಿಯಲು ಈ ಟ್ರಿಕ್ಸ್‌ ಪಾಲಿಸಿ

ಈಗಂತೂ ಪ್ರತಿಯೊಬ್ಬರ ಮನೆಯಲ್ಲೂ ಗ್ಯಾಸ್‌ (gas) ಒಲೆಯಲ್ಲಿಯೇ ಅಡುಗೆ ಮಾಡೋದು. ಈ ಗ್ಯಾಸ್‌ ಒಲೆ ಮತ್ತು ಗ್ಯಾಸ್ ಸಿಲಿಂಡರ್‌ ಅಡುಗೆ ಮನೆಯ ಅತ್ಯಗತ್ಯ ವಸ್ತು ಅಂತಾನೇ ಹೇಳಬಹುದು. ಈ ಸಿಲಿಂಡರ್‌ಗಳಲ್ಲಿ ಗ್ಯಾಸ್‌ ಎಷ್ಟು ಮುಗಿಯುತ್ತಿದೆ ಎಂಬುದನ್ನು ತಿಳಿಯಲು ಸಾಧ್ಯವಾಗದ ಕಾರಣ ಗ್ಯಾಸ್‌ ಯಾವಾಗ ಖಾಲಿಯಾಗುತ್ತೆ ಅನ್ನೋದನ್ನು ಅಂದಾಜಿಸುವುದೇ ಹಲವರಿಗೆ ಕಷ್ಟದ ಕೆಲಸ. ಗ್ಯಾಸ್‌ ತನ್ನಿಂದ ತಾನಾಗಿ ಆಫ್‌ ಆದಾಗಲೇ ಗ್ಯಾಸ್‌ ಮುಗಿದಿದೆ ಎನ್ನುವುದು ತಿಳಿಯುವುದು. ಹೀಗೆ ಅರ್ಜೆಂಟ್‌ ಅಡುಗೆ ಮಾಡುವ ಸಂದರ್ಭದಲ್ಲಿ ಅರ್ಧದಲ್ಲಿಯೇ ಎಲ್.ಪಿ.ಜಿ ಗ್ಯಾಸ್‌ ಸಿಲಿಂಡಿರ್‌ ಖಾಲಿಯಾಗಿ ಹಲವರು ಫಜೀತಿಗೆ ಸಿಲುಕುತ್ತಿರುತ್ತಾರೆ. ಹೀಗಿರುವಾಗ ಈ ಸಿಂಪಲ್‌ ಟ್ರಿಕ್ಸ್‌ ಪಾಲಿಸುವ ಮೂಲಕ ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್‌ ಖಾಲಿಯಾಗಿದೆ ಎಂಬುದನ್ನು ನಿಮಿಷಗಳಲ್ಲಿ ಕಂಡುಹಿಡಿಯಬಹುದು.

ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಖಾಲಿಯಾಗಿದೆ ಎಂದು ಕಂಡುಹಿಡಿಯುವುದು ಹೇಗೆ?

ನಿಮ್ಮ ಗ್ಯಾಸ್ ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಉಳಿದಿದೆ ಎಂಬುದನ್ನು ನಿರ್ಧರಿಸಲು ನೀವು  ಸರಳ ತಂತ್ರವನ್ನು ಬಳಸಬಹುದು. ಈ ತಂತ್ರವನ್ನು salve_6717 ಎಂಬ ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.  ಮೊದಲು, ಬಟ್ಟೆಯನ್ನು ನೀರಿನಲ್ಲಿ ನೆನೆಸಿ ಹಿಂಡಿ ತೆಗೆಯಿರಿ. ಒದ್ದೆಯಾದ ಬಟ್ಟೆಯಿಂದ ಸಿಲಿಂಡರ್ ಅನ್ನು ಚೆನ್ನಾಗಿ ಒದ್ದೆ ಮಾಡಿ, ಎರಡು ನಿಮಿಷ ಕಾಯಿರಿ. ಸಿಲಿಂಡರ್‌ನಲ್ಲಿ ಎಷ್ಟು ಭಾಗ ಒಣಗಿರುತ್ತದೆಯೋ ಅಷ್ಟು ಗ್ಯಾಸ್‌ ಖಾಲಿಯಾಗಿದೆ ಎಂದರ್ಥ. ಸಿಲಿಂಡರ್‌ನಿಂದ ನೀರು ಒಣಗಿದ್ದರೆ, ಯಾವುದೇ ಗ್ಯಾಸ್ ಉಳಿದಿಲ್ಲ ಎಂದರ್ಥ. ಗ್ಯಾಸ್ ತಂಪಾಗಿರುವುದರಿಂದ, ಸಿಲಿಂಡರ್‌ನಲ್ಲಿ ಗ್ಯಾಸ್‌ ಇರುವಷ್ಟು ಭಾಗ  ಒದ್ದೆಯಾಗಿ ಕಾಣುತ್ತದೆ, ಖಾಲಿ ಜಾಗ ಬೇಗನೆ ಒಣಗುತ್ತದೆ.

ವಿಡಿಯೋ ಇಲ್ಲಿದೆ ನೋಡಿ:‌

ಇದನ್ನೂ ಓದಿ: ನಿಮ್ಮ ಮನೆಯಂಗಳಕ್ಕೆ ಹಾವುಗಳು ಬರಬಾರದೆಂದರೆ, ಗಿಡವನ್ನು ನೆಡಿ

ಸಿಲಿಂಡರ್‌ನಲ್ಲಿ ಎಷ್ಟು ಅನಿಲ ಉಳಿದಿದೆ ಎಂದು ತಿಳಿಯಲಿರುವ ಬೇರೆ ಮಾರ್ಗಗಳು:

  • ಸಿಲಿಂಡರ್‌ನಲ್ಲಿ ಗ್ಯಾಸ್ ಮಟ್ಟವನ್ನು ಪರಿಶೀಲಿಸಲು ಸುಲಭ ಮತ್ತು ಜನಪ್ರಿಯ ಮಾರ್ಗವೆಂದರೆ ನೀರು. ಒಂದು ಗ್ಲಾಸ್ ಅಥವಾ ಮಗ್‌ನಲ್ಲಿ ನೀರಿನಿಂದ ತುಂಬಿಸಿ. ಈ ನೀರನ್ನು ಸಿಲಿಂಡರ್‌ನ ಮೇಲಿನಿಂದ ಕೆಳಕ್ಕೆ ನಿಧಾನವಾಗಿ ಸುರಿಯಿರಿ. ನಂತರ, ನಿಮ್ಮ ಕೈಯಿಂದ ಸಿಲಿಂಡರ್ ಅನ್ನು ಮೇಲಿನಿಂದ ಕೆಳಕ್ಕೆ ಸ್ಪರ್ಶಿಸಿ. ಸಿಲಿಂಡರ್ ತಂಪಾಗಿರುವ ಜಾಗದಷ್ಟು ಗ್ಯಾಸ್‌ ಇದೆ ಎಂದರ್ಥ.
  • ಸಿಲಿಂಡರ್ ಅನ್ನು ತೂಕ ಮಾಡುವ ಮೂಲಕ ಎಷ್ಟು ಗ್ಯಾಸ್ ಉಳಿದಿದೆ ಎಂಬುದನ್ನು ನೀವು ಪರೀಕ್ಷಿಸಬಹುದು. ಸಿಲಿಂಡರ್‌ನ ಒಟ್ಟು ತೂಕ ಮತ್ತು ಖಾಲಿ ತೂಕವನ್ನು ಸಿಲಿಂಡರ್‌ನಲ್ಲಿ ಮುದ್ರಿಸಲಾಗುತ್ತದೆ. ಎಷ್ಟು ಅನಿಲ ಉಳಿದಿದೆ ಎಂಬುದನ್ನು ನಿರ್ಧರಿಸಲು, ಒಟ್ಟು ತೂಕದಿಂದ ಖಾಲಿ ತೂಕವನ್ನು ಕಳೆಯಿರಿ. ಉದಾಹರಣೆಗೆ, ಒಟ್ಟು ತೂಕ5 ಕೆಜಿ ಮತ್ತು ಖಾಲಿ ತೂಕ 15.5 ಕೆಜಿ ಆಗಿದ್ದರೆ, ನಿಮ್ಮ ಸಿಲಿಂಡರ್‌ನಲ್ಲಿ ಸರಿಸುಮಾರು 13 ಕೆಜಿ ಅನಿಲ ಉಳಿದಿದೆ ಎಂದರ್ಥ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜನವರಿವರೆಗೂ ಭಾರತದ ಒಟ್ಟಾರೆ ರಫ್ತು 720 ಬಿಲಿಯನ್ ಡಾಲರ್; ಹಿಂದಿನ ವರ್ಷದಕ್ಕಿಂತ ಶೇ. 6.15 ಹೆಚ್ಚಳ – Kannada News | India’s overall exports in 10 months of this fy increase by over 6pc, says data

ನವದೆಹಲಿ, ಮಾರ್ಚ್ 2: ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ಭಾರತದ ರಫ್ತು (India’s exports) ಆರೋಗ್ಯಕರ ವೇಗದಲ್ಲಿ ಸಾಗಿದೆ. ಏಪ್ರಿಲ್​ನಿಂದ ಜನವರಿವರೆಗೆ ಸರಕು ಮತ್ತು ಸೇವೆಗಳ ಒಟ್ಟಾರೆ ರಫ್ತು 720.76 ಬಿಲಿಯನ್ ಡಾಲರ್ ಮುಟ್ಟಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 679.02 ಬಿಲಿಯನ್ ಡಾಲರ್ ರಫ್ತು ನಡೆದಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ. 6.15ರಷ್ಟು ರಫ್ತು ಹೆಚ್ಚಳ ಆಗಿದೆ.

ಜಾಗತಿಕ ಅನಿಶ್ಚಿತ ರಾಜಕೀಯ ಮತ್ತು ಆರ್ಥಿಕ ವಾತಾವರಣದಲ್ಲೂ ಭಾರತ ಪ್ರಬಲ ವ್ಯಾಪಾರ ಮುನ್ನಡೆ ಹೊಂದಿರುವುದು ಅದರ ನೀತಿ ಮತ್ತು ಆತ್ಮವಿಶ್ವಾಸ ಅಂಶಗಳು ಕಾರಣ ಎನಿಸಿವೆ.

ಏಪ್ರಿಲ್​ನಿಂದ ಜನವರಿವರೆಗೆ ಭಾರತದ ರಫ್ತು ಏರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಸರ್ವಿಸ್ ಸೆಕ್ಟರ್. ಈ ಅವಧಿಯಲ್ಲಿ ಭಾರತದಿಂದ ಸರ್ವಿಸ್ ರಫ್ತು 354.15 ಬಿಲಿಯನ್ ಡಾಲರ್ ಇದೆ. ಕಳೆದ ವರ್ಷ 320.28 ಬಿಲಿಯನ್ ಡಾಲರ್ ಇತ್ತು. ಈ ವರ್ಷ ಅದು ಶೇ. 10.57ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಫಲ; ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ?

ಸರ್ವಿಸ್ ಟ್ರೇಡ್​ನಲ್ಲಿ ಭಾರತ ಸರ್​ಪ್ಲಸ್ ಹೊಂದಿದೆ. ಅಂದರೆ ಆಮದಿಗಿಂತ ರಫ್ತು ಹೆಚ್ಚಿದೆ. 2024-25ರ ಒಂದು ಹಣಕಾಸು ವರ್ಷದಲ್ಲಿ 387.5 ಬಿಲಿಯನ್ ಡಾಲರ್ ಮೊತ್ತದ ಸರ್ವಿಸ್ ರಫ್ತು ಆಗಿತ್ತು. ಅದು ಈವರೆಗಿನ ಅತಿಹೆಚ್ಚು ರಫ್ತು ಮೊತ್ತ ಎನಿಸಿದೆ. ಆ ವರ್ಷ ಟ್ರೇಡ್ ಸರ್​ಪ್ಲಅಸ್ ಬರೋಬ್ಬರಿ 188.8 ಬಿಲಿಯನ್ ಡಾಲರ್ ದಾಖಲಾಗಿತ್ತು. ಅಂದರೆ, ಆಮದಿಗಿಂತ ರಫ್ತು 188.8 ಬಿಲಿಯನ್ ಡಾಲರ್ ಹೆಚ್ಚು ಇದೆ.

ಈ ಹಣಕಾಸು ವರ್ಷದಲ್ಲಿ ಸರ್ವಿಸ್ ರಫ್ತು ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ. ಫೆಬ್ರುವರಿ ಮತ್ತು ಮಾರ್ಚ್ ತಿಂಗಳು ಬಾಕಿ ಇದ್ದು, 2024-25ರ 387.5 ಬಿಲಿಯನ್ ಡಾಲರ್ ರಫ್ತು ದಾಖಲೆಯ್ನು ಮುರಿಯಲು 34 ಬಿಲಿಯನ್ ಡಾಲರ್ ಮಾತ್ರವೇ ಬೇಕು.

ಸರಕುಗಳ ರಫ್ತು ಸಾಧಾರಣ ಏರಿಕೆ ಕಂಡಿದೆ. ಆದರೆ, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ರಫ್ತು ವೇಗವಾಗಿ ಹೆಚ್ಚಿದೆ. ಫಾರ್ಮಾ, ಎಂಜಿನಿಯರಿಂಗ್ ಸರಕು, ಪೆಟ್ರೋಲಿಯಂ, ಜವಳಿ, ಆಟೊಮೊಬೈಲ್ ರಫ್ತುಗಳೂ ಕೂಡ ಉತ್ತಮ ಪ್ರಗತಿ ಕಂಡಿವೆ.

ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಸಿಕ್ಕಾಪಟ್ಟೆ ಏರಿಕೆ; ಬ್ಯಾರಲ್​ಗೆ ಒಂದು ಡಾಲರ್ ಬೆಲೆ ಹೆಚ್ಚಿದಂತೆ ಭಾರತಕ್ಕೆ ಹೊರೆ ಎಷ್ಟು ಹೆಚ್ಚುತ್ತೆ ಗೊತ್ತಾ?

ಕಳೆದ ಮೂರು ವರ್ಷದಲ್ಲಿ ಭಾರತವು ಒಂಬತ್ತು ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. 38 ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಇದೆ. ಈ ದೇಶಗಳ ಜಿಡಿಪಿ ಒಟ್ಟುಗೂಡಿಸಿದರೆ ಜಾಗತಿಕವಾಗಿ ಜಿಡಿಪಿಯ ಶೇ. 70ರಷ್ಟಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​ – Kannada News | US confirms its 3 fighter jets shot down says Kuwait did it mistakenly video is here

ಕುವೈತ್, ಮಾರ್ಚ್ 2: ಕುವೈತ್ ತನ್ನ ವ್ಯಾಪ್ತಿಯೊಳಗೆ ಬಂದ ಅಮೆರಿಕದ 3 ಫೈಟರ್​ ಜೆಟ್​​ಗಳನ್ನು ಹೊಡೆದುರುಳಿಸಿದೆ. ಅಮೆರಿಕದ (US Attack) ಬೆಂಬಲಿತ ದೇಶವಾಗಿರುವ ಕುವೈತ್ ಮಿಸ್ ಆಗಿ ಈ ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದೆ ಎಂದು ಯುಎಸ್​ ಖಚಿತಪಡಿಸಿದೆ. ಪ್ರತಿ ವಿಮಾನದಲ್ಲಿದ್ದ ಎಲ್ಲ ಏರ್‌ಕ್ರೂ ಸದಸ್ಯರು ಸುರಕ್ಷಿತವಾಗಿ ಹೊರಹಾರಲ್ಪಟ್ಟಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕುವೈತ್ ಮಿಸ್ಟೇಕ್ ಆಗಿ ನಮ್ಮ ಜೆಟ್​​ಗಳ ಮೇಲೆ ದಾಳಿ ನಡೆಸಿದೆ ಎಂದು ಅಮೆರಿಕ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ದುಬೈನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಸಿದ್ದರಾಮಯ್ಯ ಆಗ್ರಹ: ಪ್ರಧಾನಿ ಮೋದಿಗೆ ಬರೆದ 2 ಪುಟಗಳ ಪತ್ರದಲ್ಲಿರೋದೇನು? – Kannada News | Siddaramaiah Demands Safe Return of Indians from Middle East; Letter to PM Modi

ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರImage Credit source: Google

ಬೆಂಗಳೂರು, ಮಾರ್ಚ್​​ 02: ಮಧ್ಯಪ್ರಾಚ್ಯದ ದೇಶಗಳಲ್ಲಿ ಯುದ್ಧ ಹಿನ್ನೆಲೆ ದುಬೈನಲ್ಲಿ ಸಿಲುಕಿರುವ ಕನ್ನಡಿಗರನ್ನು ರಕ್ಷಿಸಿ ಸುರಕ್ಷಿತವಾಗಿ ಕರೆತರುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಎರಡು ಪುಟಗಳ ಪತ್ರ ಬರೆದಿದ್ದಾರೆ. ಮಧ್ಯಪ್ರಾಚ್ಯ ಭಾಗದಲ್ಲಿ ನೆಲೆಸಿರುವ ಕನ್ನಡಿಗರು ಮತ್ತು ಭಾರತೀಯರ ಬಗ್ಗೆ ಸಿಎಂ ಆತಂಕ ವ್ಯಕ್ತಪಡಿಸಿದ್ದು, ಅನೇಕ ದೇಶಗಳು ತಮ್ಮ ವಾಯುಮಾರ್ಗವನ್ನು ಬಂದ್ ಮಾಡಿರುವುದರಿಂದ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ದುಬೈನಂತಹ ಪ್ರಮುಖ ಸ್ಥಳಗಳಲ್ಲಿ ಸಾವಿರಾರು ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಅವರ ರಕ್ಷಣೆಗೆ ಕೂಡಲೇ ಮುಂದಾಗಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಪ್ರಧಾನಿಗೆ ಸಿಎಂ ಬರೆದ ಪತ್ರದಲ್ಲೇನಿದೆ?

ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ವೇಗವಾಗಿ ಹೆಚ್ಚುತ್ತಿರುವ ಭೌಗೋಳಿಕ-ರಾಜಕೀಯ ಉದ್ವಿಗ್ನತೆ ಹಾಗೂ ಅದರ ಪರಿಣಾಮವಾಗಿ ಆ ಪ್ರದೇಶಗಳಲ್ಲಿ ವಾಸಿಸುವ, ಉದ್ಯೋಗದಲ್ಲಿರುವ, ವಿದ್ಯಾಭ್ಯಾಸ ಮಾಡುತ್ತಿರುವ ಹಾಗೂ ಪ್ರಯಾಣಕ್ಕೆಂದು ತೆರಳಿರುವ ಕನ್ನಡಿಗರು ಸೇರಿದಂತೆ ಭಾರತೀಯ ಪ್ರಜೆಗಳ ಮೇಲೆ ಉಂಟಾಗುತ್ತಿರುವ ಪರಿಣಾಮ ಕುರಿತು ನಾನು ಗಂಭೀರ ಆತಂಕ ವ್ಯಕ್ತಪಡಿಸುತ್ತೇನೆ.

ಇದನ್ನೂ ಓದಿ: ಮಧ್ಯ ಪ್ರಾಚ್ಯದಲ್ಲಿ ಯುದ್ಧ; ಪರದೇಶದಲ್ಲಿ ಸಿಲುಕಿ ಕನ್ನಡಿಗರ ಪರದಾಟ, ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ

ನಾಗರಿಕ ವಿಮಾನಯಾನ ಸಚಿವಾಲಯದಿಂದ ಇತ್ತೀಚೆಗೆ ಹೊರಡಿಸಲಾದ ಸೂಚನೆಗಳ ಪ್ರಕಾರ, ಪಶ್ಚಿಮ ಏಷ್ಯಾದ ಅನೇಕ ದೇಶಗಳು ತಮ್ಮ ವಾಯುಪ್ರದೇಶದಲ್ಲಿ ನಿರ್ಬಂಧಗಳು ಮತ್ತು NOTAM ಪ್ರಕಟಿಸಿರುವುದರಿಂದ ಅಂತರರಾಷ್ಟ್ರೀಯ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮವಾಗಿ ಯುಎಇ (ದುಬೈ) ಸೇರಿದಂತೆ ಅನೇಕ ಕಡೆ ಕನ್ನಡಿಗರು ಸೇರಿದಂತೆ ಹಲವಾರು ಭಾರತೀಯರು ಸಿಲುಕಿಕೊಂಡಿದ್ದಾರೆ. ಪ್ರಸ್ತುತದ ಘಟನೆಗಳಿಂದಾಗಿ ಅನಿಶ್ಚಿತತೆ ಮತ್ತು ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳ ಕಚೇರಿಯಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ತುರ್ತು ಸಮನ್ವಯ ಸಾಧಿಸಿ ಕನ್ನಡಿಗರು ಸೇರಿದಂತೆ ಭಾರತೀಯರ ಸುರಕ್ಷತೆ ಹಾಗೂ ಅಗತ್ಯವಿದ್ದರೆ ಸ್ವದೇಶಕ್ಕೆ ಮರಳಿಸುವ ಕ್ರಮಗಳ ಕುರಿತು ಮನವಿ ಮಾಡಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯಕ್ಕೂ ವಿಮಾನಯಾನ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಸಹಾಯಕ್ಕೆ ವಿನಂತಿಸಲಾಗಿದೆ.

ಪರಿಸ್ಥಿತಿಯ ಗಂಭೀರತೆ ಮತ್ತು ಅಸ್ಥಿರತೆಯನ್ನು ಮನಗಂಡು, ಕನ್ನಡಿಗರು ಸೇರಿದಂತೆ ಭಾರತೀಯ ಪ್ರಜೆಗಳ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಪ್ರಭಾವಿತ ಪ್ರದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿ ಮತ್ತು ವಾಣಿಜ್ಯ ದೂತಾವಾಸಗಳ ಮೂಲಕ ನಿರಂತರ ಮೇಲ್ವಿಚಾರಣೆ, ರಕ್ಷಣಾ ಕ್ರಮಗಳು ಮತ್ತು ಮಾರ್ಗದರ್ಶನ ಒದಗಿಸಬೇಕು. ಅಗತ್ಯವಿದ್ದಲ್ಲಿ ಆದ್ಯತೆ ಆಧಾರದ ಮೇಲೆ ವಿಶೇಷ ವಿಮಾನಗಳ ಮೂಲಕ ಸುರಕ್ಷಿತ ಹಾಗೂ ಸಮಯೋಚಿತವಾಗಿ ನಾಗರಿಕರನ್ನು ವಾಪಸು ಕರೆತರಲು ಸಿದ್ಧತೆ ಮಾಡಿಕೊಳ್ಳಬೇಕು.ವಿದೇಶಾಂಗ ವ್ಯವಹಾರಗಳ ಸಚಿವಾಲಯ, ನಾಗರಿಕ ವಿಮಾನಯಾನ ಸಚಿವಾಲಯ, ರಾಜ್ಯ ಸರ್ಕಾರಗಳು ಮತ್ತು ವಿಮಾನಯಾನ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಲು ಅಂತರ್-ಸಚಿವಾಲಯ ಕಾರ್ಯಪಡೆ ರಚನೆ ಆಗಬೇಕು. ಸಿಲುಕಿರುವ ಕನ್ನಡಿಗರು ಸೇರಿದಂತೆ ಭಾರತೀಯರ ನೋಂದಣಿ, ಟ್ರ್ಯಾಕಿಂಗ್ ಹಾಗೂ ಕುಟುಂಬಗಳಿಗೆ ತಕ್ಷಣದ ಮಾಹಿತಿ ನೀಡಲು ಕೇಂದ್ರೀಕೃತ ಡಿಜಿಟಲ್ ವ್ಯವಸ್ಥೆ ರೂಪಿಸುವುದು ಸೇರಿದಂತೆ ವಿಮಾನಯಾನ ಸಂಸ್ಥೆಗಳ ಹೆಚ್ಚುವರಿ ಶುಲ್ಕ ಮನ್ನಾ ಮಾಡುವುದು ಹಾಗೂ ಅಗತ್ಯವಿದ್ದಲ್ಲಿ ಮಾನವೀಯ ನೆರವು ಒದಗಿಸುವಂತೆ ಸೂಚನೆ ನೀಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:24 pm, Mon, 2 March 26

Source link

ವಿಮಾನಗಳು ರದ್ದಾಗಿದ್ರೂ ಯುದ್ಧ ಭೂಮಿಯಿಂದ ಬೆಂಗಳೂರಿಗೆ ಬಂದಿಳಿದ ಶಾಸಕ: ಬಂದಿದ್ಹೇಗೆ ಗೊತ್ತಾ? – Kannada News | MLA ac Srinivas lands in Bengaluru from war zone despite cancelled flights: Do you know how he got there

ಕೆಂಪೇಗೌಡ ವಿಮಾನ ನಿಲ್ದಾಣ, ಶಾಸಕ ಎಸಿ ಶ್ರೀನಿವಾಸ್Image Credit source: tv9 kannada

ದೇವನಹಳ್ಳಿ, ಮಾರ್ಚ್​​ 02: ಕಳೆದ ಮೂರು ದಿನಗಳಿಂದ ಇರಾನ್ ಮೇಲೆ ಇಸ್ರೇಲ್​ ಮತ್ತು ಅಮೆರಿಕಾ ಜಂಟಿ ದಾಳಿ (Israel-Iran Conflict) ಮಾಡುತ್ತಿರುವ ಕಾರಣ ವಿಮಾನ ಹಾರಾಟ ರದ್ದಾಗಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ. ತವರಿಗೆ ವಾಪಸ್​ ಆಗದೆ ಪರದಾಡುತ್ತಿರುವ ಬೆನ್ನಲ್ಲೆ ಓರ್ವ ಶಾಸಕ ಮಾತ್ರ ಯುದ್ಧ ಭೂಮಿಯಿಂದ ಗ್ರೇಟ್​ ಎಸ್ಕೇಪ್​ ಆಗಿ ಬಂದಿದ್ದಾರೆ. ಆ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 24 ವಿಮಾನಗಳ ಹಾರಾಟ ರದ್ದಾಗಿವೆ.

ಯುದ್ಧ ಹಿನ್ನೆಲೆ ಕ್ಷಣಕ್ಷಣಕ್ಕೂ ಆತಂಕ ಹೆಚ್ಚುತ್ತಿದೆ. ದುಬೈ ಏರ್‌ಪೋರ್ಟ್​ನಲ್ಲೆ ಮೂರು ದಿನಗಳಿಂದ ಕನ್ನಡಿಗರು ವಿಮಾನಗಳಿಲ್ಲದೆ ತವರಿಗೆ ಬರಲಾಗದೆ ಪರದಾಡುತ್ತಿದ್ದಾರೆ. ಕೆಂಪೇಗೌಡ ಏರ್‌ಪೋರ್ಟ್​ನಿಂದಲೂ ತವರಿಗೆ ಹೋಗಲು ಟಿಕೆಟ್ ಬುಕ್ ಮಾಡಿಕೊಂಡಿದ್ದ ಪ್ರಯಾಣಿಕರು ವಿಮಾನಗಳ ಹಾರಾಟವಿಲ್ಲದೆ ಕಂಗಾಲಾಗಿದ್ದಾರೆ. ಇಂದು ಸಹ 24 ವಿಮಾನಗಳು ಹಾರಾಟ ನಡೆಸದೆ ನಿಂತಲ್ಲೆ ನಿಂತಿವೆ.

ಯುದ್ಧ ಭೂಮಿಯಿಂದ ಗ್ರೇಟ್ ಎಸ್ಕೇಪ್

ಜೆಡಿಎಸ್ ಪರಿಷತ್ ಸದಸ್ಯ ಭೋಜೇಗೌಡ, ಡ್ರೋನ್ ಪ್ರತಾಪ್ ಸೇರಿದಂತೆ ನೂರಾರು ಕನ್ನಡಿಗರು ತವರಿಗೆ ಬರಲಾಗದೆ ದುಬೈನಲ್ಲಿ ಸಿಲುಕಿ ಪರದಾಡುತ್ತಿರುವ ಬೆನ್ನಲ್ಲೆ ಆರು ದಿನದ ಹಿಂದೆ ದುಬೈಗೆ ತೆರಳಿದ್ದ ಪುಲಕೇಶಿ ನಗರ ಶಾಸಕ ಎಸಿ ಶ್ರೀನಿವಾಸ್​​, ಮಸ್ಕಟ್ ಮೂಲಕ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಮೊದಲೇ ಗೋಲ್ಡನ್ ವೀಸಾ ಪಡೆದುಕೊಂಡು ದುಬೈಗೆ ತೆರಳಿದ್ದ ಕಾರಣ ಯದ್ಧ ಭೂಮಿಯಿಂದ ಹರಸಾಹಸ ಪಟ್ಟು 6 ಗಂಟೆಗಳ ಕಾಲ ರಸ್ತೆ ಪ್ರಯಾಣ ಮಾಡಿ ಮಸ್ಕಟ್ ಸೇರಿದ್ದಾರೆ. ಜೊತೆಗೆ ಮಸ್ಕಟ್​ನಿಂದ ವಿಮಾನದಲ್ಲಿ ಇಂದು ಬೆಳಗ್ಗೆ 09 ಗಂಟೆ ಬೆಂಗಳೂರು ತಲುಪುವ ಮೂಲಕ ನಿಟ್ಟುಸಿರುವ ಬಿಟ್ಟಿದ್ದು, ಸುರಕ್ಷಿತವಾಗಿ ಮನೆ ಸೇರಿದ್ದಾರೆ.

24 ವಿಮಾನಗಳು ರದ್ದು

ಕೆಐಎಬಿಯಿಂದ ದುಬೈ ಸೇರಿದಂತೆ ಹೊರದೇಶಗಳಿಗೆ ತೆರಳಲು ಆಗಮಿಸಿರುವ ಪ್ರಯಾಣಿಕರು ಸದ್ಯ ಪರದಾಡುತ್ತಿದ್ದಾರೆ. ಯುದ್ಧ ಹಿನ್ನೆಲೆ ಇಂದು ಸಹ ಇರಾನ್​ನಲ್ಲಿ ವಾಯುನೆಲೆ ಓಪನ್ ಆಗಿಲ್ಲ. ಹೀಗಾಗಿ ಕೆಂಪೇಗೌಡ ಏರ್‌ಪೋರ್ಟ್​ನಿಂದ ದುಬೈ, ದೋಹಾ, ಅಬುಧಾಬಿ, ಜಿದ್ದಾ, ಬಹ್ರೇನ್ ಸೇರಿದಂತೆ ಹಲವೆಡೆ ತೆರಳಬೇಕಿದ್ದ 24 ವಿಮಾನಗಳು ರದ್ದಾಗಿವೆ.

ಇದನ್ನೂ ಓದಿ: ಇಸ್ರೇಲ್​​-ಇರಾನ್ ಮಧ್ಯೆ ಯುದ್ಧ: ದುಬೈ ಏರ್​ಪೋರ್ಟ್​​​ನಲ್ಲಿ ಕುಟುಂಬ ಸಮೇತ ಸಿಲುಕಿದ ​​ಭೋಜೇಗೌಡ

ಇನ್ನು ಕಳೆದ ಎರಡು ದಿನಗಳಿಂದ ವಿಮಾನ ರದ್ದಾಗಿದ್ದ ಕಾರಣ ಇಂದು ಹಾರಾಟ ಮಾಡಬಹುದು ಅಂತ ಬಂದಿದ್ದ ಪ್ರಯಾಣಿಕರು ಸಹ ರದ್ಧಾಗಿದ್ದರಿಂದ ವಾಪಸ್​ ಆಗಿದ್ದಾರೆ. ಏರ್‌ಪೋರ್ಟ್​ನ ಟರ್ಮಿನಲ್ 2ರಲ್ಲಿ ಗಂಟೆಗಟ್ಟಲೇ ಕಾದು ಸುಸ್ತಾದ ಪ್ರಯಾಣಿಕರು ಏರ್ ಇಂಡಿಯಾ ಎಕ್ಸ್ಪ್ರೆಸ್​ ಕೌಂಟರ್​ನಲ್ಲಿ ತಮ್ಮ ಟಿಕೆಟ್ ಮರು ಬುಕ್ಕಿಂಗ್ ಹಾಗೂ ರದ್ದು ಮಾಡುವ ಬಗ್ಗೆ ಮಾಹಿತಿ ಪಡೆದು ಮನೆಗಳತ್ತ ವಾಪಸ್ ಆದರು.

ಇದನ್ನೂ ಓದಿ: ಬೆಂಗಳೂರಿನಿಂದ ವಿದೇಶಕ್ಕೆ ಹೋಗುವ, ಬರುವ ಒಟ್ಟು 24 ವಿಮಾನಗಳು ರದ್ದು: ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

ಒಟ್ಟಾರೆ ಮೂರನೇ ದಿನ ಕೂಡ ದುಬೈನಿಂದ ಯಾವುದೇ ವಿಮಾನಗಳು ಟೇಕ್ ಆಫ್​ ಆಗದಿರುವುದು, ಪ್ರಯಾಣಿಕರು ತವರು ಸೇರುವ ತವಕದಲ್ಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಿಂಬೆ ನೀರು ಕುಡಿಯುವುದರಿಂದ ದೇಹ ನಿಜವಾಗಿಯೂ ಡಿಟಾಕ್ಸ್ ಆಗುತ್ತದೆಯೇ? ಇಲ್ಲಿದೆ ಆಯುರ್ವೇದ ತಜ್ಞರ ಅಭಿಪ್ರಾಯ – Kannada News | Lemon Water and Detox: What’s the Truth?

ನಿಂಬೆ (Lemon) ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂಬುದು ತಿಳಿದ ವಿಚಾರ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಆಂಟಿ- ಆಕ್ಸಿಡೆಂಟ್ ಗುಣಗಳೂ ಇವೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಂಬೆ ನೀರಿನ ಅನೇಕ ಪ್ರಯೋಜನಗಳನ್ನು ಹೇಳಲಾಗುತ್ತಿದ್ದು, ನಿಯಮಿತವಾಗಿ ನಿಂಬೆ ನೀರು (Lemon Water) ಕುಡಿಯುವುದರಿಂದ ದೇಹದಲ್ಲಿನ ವಿಷಪದಾರ್ಥಗಳು ಸುಲಭವಾಗಿ ಹೊರಹೋಗುತ್ತವೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಇದು ಎಷ್ಟು ಸತ್ಯ, ನಿಂಬೆ ನೀರು ನಿಜವಾಗಿಯೂ ಪರಿಣಾಮಕಾರಿ ಔಷಧಿಯೇ, ದೇಹ ನಿಜವಾಗಿಯೂ ಡಿಟಾಕ್ಸ್ ಆಗುತ್ತದೆಯೇ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಈ ಕುರಿತು ಆಯುರ್ವೇದ ತಜ್ಞರು ನೀಡಿದ ಮಾಹಿತಿ ಈ ಸ್ಟೋರಿಯಲ್ಲಿದೆ.

ದೆಹಲಿ ಮೂಲದ ಆಯುರ್ವೇದ ತಜ್ಞೆ ಡಾ. ಚಂಚಲ್ ಶರ್ಮಾ ಹೇಳುವ ಪ್ರಕಾರ, ಈ ರೀತಿಯ ಉಪಾಯ ಎಲ್ಲರಿಗೂ ಸಮಾನವಾಗಿ ಪ್ರಯೋಜನಕಾರಿಯಾಗುವುದಿಲ್ಲ. ಪ್ರತಿಯೊಬ್ಬರ ದೇಹದ ಸ್ವಭಾವ ಮತ್ತು ಕಾರ್ಯಪದ್ಧತಿ ವಿಭಿನ್ನವಾಗಿರುತ್ತದೆ. ನಮ್ಮ ದೇಹದಲ್ಲಿರುವ ಕಿಡ್ನಿ, ಯಕೃತ್ತು (ಲಿವರ್) ಮತ್ತು ಜೀರ್ಣಾಂಗ ವ್ಯವಸ್ಥೆಗಳು ಸ್ವಾಭಾವಿಕವಾಗಿಯೇ ದೇಹದಲ್ಲಿನ ಕಸದ ಪದಾರ್ಥಗಳನ್ನು ಹೊರಹಾಕುವ ಕೆಲಸ ಮಾಡುತ್ತವೆ. ನಿಂಬೆ ನೀರು ಈ ಪ್ರಕ್ರಿಯೆಗೆ ಸಹಾಯ ಮಾಡಬಹುದು, ಆದರೆ ಇದರಿಂದ ದೇಹ ಸಂಪೂರ್ಣವಾಗಿ ಡಿಟಾಕ್ಸ್ ಆಗುತ್ತದೆ ಎಂದು ಹೇಳುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ನಿಂಬೆ ನೀರು ಕುಡಿಯುವುದರಿಂದ ಸಿಗುವ ಪ್ರಯೋಜನಗಳು:

ಜೀರ್ಣಕ್ರಿಯೆ ಸುಧಾರಣೆ: ನಿಂಬೆ ವಿಟಮಿನ್ ಸಿಯ ಪ್ರಾಕೃತಿಕ ಮೂಲವಾಗಿದೆ. ಇದರಲ್ಲಿರುವ ಆಂಟಿ- ಆಕ್ಸಿಡೆಂಟ್ ಗುಣಗಳು ಜೀರ್ಣಕ ಎನ್ಜೈಮ್‌ಗಳನ್ನು ಚುರುಕುಗೊಳಿಸಿ, ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ನೀಡಲು ಸಹಾಯ ಮಾಡುತ್ತವೆ.

ಯಕೃತ್ತಿಗೆ ಒಳ್ಳೆಯದು: ಕೆಲವರು ನಿಂಬೆ ನೀರು ಯಕೃತ್ತನ್ನು ಶುದ್ಧಗೊಳಿಸುತ್ತದೆ ಎಂದು ನಂಬುತ್ತಾರೆ. ತಜ್ಞರು ಹೇಳುವ ಪ್ರಕಾರ, ಇದು ಜೀರ್ಣಶಕ್ತಿಯನ್ನು ಹೆಚ್ಚಿಸುವ ಮೂಲಕ ದೇಹದಲ್ಲಿನ ವಿಷಪದಾರ್ಥಗಳನ್ನು ಹೊರಹಾಕಲು ನೆರವಾಗುತ್ತದೆ.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ನಿಂಬೆ ಜ್ಯೂಸ್ ಕುಡಿಯುತ್ತಿದ್ದೀರಾ? ಹಾಗಿದ್ದರೆ ಈ ಮಾಹಿತಿ ನಿಮಗಾಗಿ

ತೂಕ ನಿಯಂತ್ರಣ: ತೂಕ ಕಡಿಮೆ ಮಾಡಲು ಪ್ರಯತ್ನಿಸುವವರು ನಿಂಬೆ ನೀರನ್ನು ನಿಯಮಿತವಾಗಿ ಕುಡಿಯಬಹುದು. ಇದು ಮೆಟಾಬಾಲಿಸಂ ಚುರುಕುಗೊಳಿಸಲು ಸಹಾಯ ಮಾಡುತ್ತದೆ ಹಾಗೂ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

ಪ್ರತಿದಿನ ನಿಂಬೆ ನೀರು ಕುಡಿಯಬೇಕೇ?

ನಿಂಬೆ ನೀರನ್ನು ಕುಡಿಯುವುದರಿಂದ ಹಲವಾರು ರೀತಿಯ ಲಾಭಗಳಿದ್ದರೂ, ಅದನ್ನು ಪ್ರತಿದಿನ ಕುಡಿಯಲೇಬೇಕು ಎಂಬ ಅನಿವಾರ್ಯವಿಲ್ಲ. ವಾರದಲ್ಲಿ ನಾಲ್ಕು ರಿಂದ ಐದು ದಿನ ಕುಡಿದರೆ ಸಾಕು ಎಂದು ತಜ್ಞರು ಹೇಳುತ್ತಾರೆ. ಆಮ್ಲತ್ವ (ಆಸಿಡಿಟಿ), ಗ್ಯಾಸ್ಟ್ರಿಕ್ ಸಮಸ್ಯೆಗಳು ಅಥವಾ ಹಲ್ಲು ನೋವಿನ ಸಮಸ್ಯೆ ಇರುವವರು ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಸೇವಿಸುವುದನ್ನು ತಪ್ಪಿಸಬೇಕು. ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಹೊಟ್ಟೆ ಉರಿ ಉಂಟಾಗುವ ಸಾಧ್ಯತೆ ಇದೆ. ಜೊತೆಗೆ ನಿಂಬೆ ನೀರಿಗೆ ಸಕ್ಕರೆ ಅಥವಾ ಹೆಚ್ಚು ಉಪ್ಪು ಸೇರಿಸಬಾರದು. ಒಟ್ಟಾರೆ, ನಿಂಬೆ ನೀರು ಆರೋಗ್ಯಕ್ಕೆ ಸಹಾಯಕವಾದ ಪಾನೀಯವಾಗಿದ್ದರೂ, ದೇಹವನ್ನು ಸಂಪೂರ್ಣವಾಗಿ ಡಿಟಾಕ್ಸ್ ಮಾಡುತ್ತದೆ ಎಂಬ ಹೇಳಿಕೆ ವೈಜ್ಞಾನಿಕವಾಗಿ ದೃಢಪಟ್ಟಿಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link