Category Archives: Blog

Your blog category

‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ – Kannada News | Do Not call me a hero I am just an artist Says Gilli Nata In Super Hit Movie Event

ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ ಅವರು ‘ಸೂಪರ್ ಹಿಟ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಗೆ ಅವರು ಕೂಡ ಆಗಮಿಸಿದ್ದರು. ಅವರು ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ನಾಯಕ ನಟ ಎಂದು ಅವರನ್ನು ಕರೆಯಲಾಯಿತು. ‘ದಯವಿಟ್ಟು ನಾಯಕ ನಟ ಎಂದು ಕರೀಬೇಡಿ ಭಯ ಆಗುತ್ತದೆ. ನಾನು ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದೇನೆ ಅಷ್ಟೇ’ ಎಂದು ಗಿಲ್ಲಿ ನಟ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಮ್ಮದೇ ಸಿನಿಮಾ ಪ್ರಚಾರಕ್ಕೆ ಗಿಲ್ಲಿ ನಟ ಯಾಕೆ ಹೋಗಿಲ್ಲ? ಕೊನೆಗೂ ಸಿಕ್ತು ಉತ್ತರ – Kannada News | Gilli Nata reaction to Sarkari Shale H8 movie complaint against him in KFCC

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಿಂದ ಗಿಲ್ಲಿ ನಟ ಪಡೆದ ಜನಪ್ರಿಯತೆ ಅಪಾರ. ಆ ರಿಯಾಲಿಟಿ ಶೋಗೆ ಹೋಗುವುದಕ್ಕೂ ಮುನ್ನವೇ ಗಿಲ್ಲಿ ಅವರು ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಈಗ ಆ ಸಿನಿಮಾಗಳ ಬಗ್ಗೆ ಟಾಕ್ ಶುರು ಆಗಿದೆ. ಗಿಲ್ಲಿ ನಟ (Gilli Nata) ಅಭಿನಯದ ‘ಸರ್ಕಾರಿ ಶಾಲೆ ಹೆಚ್​8’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಆ ಚಿತ್ರದಲ್ಲಿ ಗಿಲ್ಲಿ ಅವರಿಗೆ ಒಂದು ಪಾತ್ರವಿದೆ. ಆದರೆ ಸಿನಿಮಾದ ಪ್ರಚಾರಕ್ಕೆ ಗಿಲ್ಲಿ ನಟ ಬಂದಿಲ್ಲ ಎಂದು ಚಿತ್ರತಂಡ ಗರಂ ಆಗಿದೆ. ಕರ್ನಾಟಕ ಚಲನಚಿತ್​ರ ವಾಣಿಜ್ಯ ಮಂಡಳಿಗೆ ದೂರು ಕೂಡ ನೀಡಲಾಗಿದೆ. ಆ ಬಗ್ಗೆ ಗಿಲ್ಲಿ ನಟ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಗಿಲ್ಲಿ ನಟ ಪ್ರಮುಖ ಪಾತ್ರ ಮಾಡಿರುವ ‘ಸೂಪರ್ ಹಿಟ್’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಆ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಗಿಲ್ಲಿ ಅವರಿಗೆ ಹಲವು ಪ್ರಶ್ನೆ ಎದುರಾಯಿತು. ‘ಸರ್ಕಾರಿ ಶಾಲೆ ಹೆಚ್​8’ ಚಿತ್ರದ ಪ್ರಚಾರಕ್ಕೆ ಯಾಕೆ ಹೋಗಿಲ್ಲ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದರು.

‘ಸರ್ಕಾರಿ ಶಾಲೆ ಹೆಚ್​8 ಸಿನಿಮಾ ಮಾಡಿ ನನ್ನ ಪ್ರಕಾರ 2ರಿಂದ ಎರಡೂವರೆ ವರ್ಷ ಆಗಿರಬಹುದು. ಅದರಲ್ಲಿ ನಟನೆ ಮಾಡಿದ್ದೇನೆ. ನಾನು ನನ್ನ ಬೈಟ್ಸ್ ಕಳಿಸಿದ್ದೇನೆ. ಹಾಗಿದ್ದರೂ ಕೂಡ ಅವರು ಯಾಕೆ ದೂರು ನೀಡಿದರೋ ಗೊತ್ತಿಲ್ಲ. ನನಗೂ ಒಂದಷ್ಟು ಕೆಲಸಗಳ ಒತ್ತಡ ಇತ್ತು. ನಾನು ಫೋನ್ ಎತ್ತಿಲ್ಲ ಎಂಬ ಕಾರಣಕ್ಕೆ ಪಾಪ ಅವರಿಗೆ ಆ ರೀತಿ ಆಗಿರಬಹುದು. ಅವರದ್ದು ತಪ್ಪಿಲ್ಲ’ ಎಂದು ಗಿಲ್ಲಿ ನಟ ಹೇಳಿದ್ದಾರೆ.’

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ತಮ್ಮ ವಿರುದ್ಧ ದೂರು ದಾಖಲಾಗಿದ್ದರೂ ಕೂಡ ಗಿಲ್ಲಿ ನಟ ಅವರು ‘ಸರ್ಕಾರಿ ಶಾಲೆ ಹೆಚ್8’ ಚಿತ್ರತಂಡವನ್ನು ಸಂಪರ್ಕಿಸಲಿಲ್ಲ. ‘ಬೇರೆ ಕೆಲಸಗಳಲ್ಲಿ ನಾನು ಒಂದಷ್ಟು ಬ್ಯುಸಿ ಆದೆ. ವಾಣಿಜ್ಯ ಮಂಡಳಿಗೆ ನಾನು ಉತ್ತರ ಕೊಡಬೇಕಿತ್ತು. ಅದನ್ನು ನೀಡಿದ್ದೇನೆ’ ಎಂದು ಗಿಲ್ಲಿ ನಟ ಅವರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮುಗಿದು ಇಷ್ಟು ದಿನವಾದ್ರೂ ಕಡಿಮೆ ಆಗಿಲ್ಲ ಗಿಲ್ಲಿ ನಟ ಹವಾ

ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅನೇಕರು ಫಿದಾ ಆಗಿದ್ದರು. ಹಲವು ಅಭಿಮಾನಿಗಳು ಗಿಲ್ಲಿಯ ಭಾವಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡಿದ್ದರು. ಆ ಪೈಕಿ ಒಬ್ಬ ಅಭಿಮಾನಿಯನ್ನು ಭೇಟಿ ಆಗುವುದಾಗಿ ಗಿಲ್ಲಿ ಹೇಳಿದ್ದರು. ಆದರೆ ಬಿಗ್ ಬಾಸ್ ಮುಗಿದು ಇಷ್ಟು ದಿನ ಕಳೆದರೂ ಆ ಅಭಿಮಾನಿಯನ್ನು ಗಿಲ್ಲಿ ಭೇಟಿ ಆಗಿಲ್ಲ. ಅದಕ್ಕೂ ಅವರು ಸ್ಪಷ್ಟನೆ ನೀಡಿದ್ದಾರೆ. ‘ವಾಹಿನಿ ಕಡೆಯಿಂದ ಅವರೆಲ್ಲರನ್ನೂ ಕರೆಸಲು ಪ್ಲ್ಯಾನ್ ಆಗಿತ್ತು. ಆ ಅಭಿಮಾನಿಗೂ ಕರೆ ಮಾಡಲಾಗಿತ್ತು. ಆದರೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಎಲ್ಲರನ್ನೂ ಭೇಟಿ ಆಗುತ್ತೇನೆ. ತಕ್ಷಣಕ್ಕೆ ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ’ ಎಂದಿದ್ದಾರೆ ಗಿಲ್ಲಿ ನಟ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 3:46 pm, Mon, 9 February 26

Source link

PSI ಬಳಿಕ ಆರ್ಮಿ ಪರೀಕ್ಷೆಯಲ್ಲೂ ಕಳ್ಳಾಟ: ಎಲೆಕ್ಟ್ರಾನಿಕ್ ಡಿವೈಸ್​​ ಪತ್ತೆ – Kannada News | Army Group C Exam Cheating: 18 Candidates inquiry by Bengaluru Halasuru Police Probe

ಬೆಂಗಳೂರು, ಫೆಬ್ರವರಿ 09: ಆರ್ಮಿ ಗ್ರೂಪ್ ಸಿ ಹುದ್ದೆ ಪರೀಕ್ಷೆ (Army Group C exam) ವೇಳೆ ಕಳ್ಳಾಟ ಆರೋಪ ಹಿನ್ನೆಲೆ 18 ಪರೀಕ್ಷಾರ್ಥಿಗಳನ್ನು (examinee) ಕರೆತಂದ ಬೆಂಗಳೂರಿನ ಹಲಸೂರು ಠಾಣಾ ಪೊಲೀಸರು ವಿಚಾರಣೆ ಮಾಡಿದ್ದಾರೆ. ಫೆಬ್ರವರಿ 08ರಂದು ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆದಿತ್ತು. ಈ ವೇಳೆ ಮೊಬೈಲ್, ಎಲೆಕ್ಟ್ರಿಕ್ ಡಿವೈಸ್ ಬಳಸಿ ನಕಲು ಮಾಡಿರುವ ಆರೋಪ ಕೇಳಿಬಂದಿದೆ. ಮೂರು ಮೊಬೈಲ್ ಹಾಗೂ ಎಲೆಕ್ಟ್ರಿಕ್ ಡಿವೈಸ್​​ ಜಪ್ತಿ ಮಾಡಲಾಗಿದೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರೀಕ್ಷಾ ಆವರಣದಲ್ಲಿ ಎಲೆಕ್ಟ್ರಾನಿಕ್ ಡಿವೈಸ್​ಗಳು ಪತ್ತೆ

ಸುರೇಂಧರ್​, ಸಂದೀಪ್ ಬಿನ್ ರಾಜೇಶ್, ಮೊಂಟಿ, ಅಜಯ್ ಕುಮಾರ್ , ಅನುಜ್, ರಾಹುಲ್ ರಾಜೇಂದ್ರ, ಸುಮೀತ್, ಅಮನ್, ಅಂಕಿತ್, ಯೋಗೇಶ್, ವಿಕಾಸ್, ಅಂಕಿತ್, ಅಮನ್ ರೇದು, ರಜತ್, ವಿನಯ್, ಅಂಕಿತ್,
ಅಮನ್ ಕುಮಾರ್ ನಕಲು ಮಾಡಿದ ಪರೀಕ್ಷಾರ್ಥಿಗಳು ಎನ್ನಲಾಗುತ್ತಿದೆ.

ಇದನ್ನೂ ಓದಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ 139 ಬೋಧಕ ಹುದ್ದೆಗಳು; ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಶೇ. 75ರಷ್ಟು ಮೀಸಲಾತಿ

ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಪರೀಕ್ಷೆ ಬರೆದಿರುವುದು ಪತ್ತೆ ಆಗಿದೆ. ಪರೀಕ್ಷಾ ಆವರಣದಲ್ಲಿ ಎಲೆಕ್ಟ್ರಾನಿಕ್ ಡಿವೈಸ್​ಗಳು ಪತ್ತೆ ಆಗಿವೆ. ಅಲ್ಲದೇ ಅಮನ್ ಮತ್ತು ರಜತ್ ಬ್ಯಾಗ್​​ಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಪತ್ತೆ ಆಗಿವೆ.

ಎಫ್ಐಆರ್​ ದಾಖಲು

ಸದ್ಯ ಕರ್ನಲ್ ಮತ್ತು ಸೆಕ್ಯೂರಿಟಿ ಆಫೀಸರ್​​ ಫಾರ್​​ ಕಮಾಂಡೆಂಟ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಜ್ಯೋತಿರ್ಲಿಂಗಮ್​​ ಎಂಬುವವರು ನೀಡಿದ ದೂರಿನ ಮೇರೆಗೆ ಎಫ್ಐಆರ್​ ದಾಖಲಾಗಿದೆ. ಹಲಸೂರಿನ 515 ಆರ್ಮಿ ಬೇಸ್ ವರ್ಕ್​​ಶಾಪ್​ನಲ್ಲಿ ಸಿವಿಲ್ ಡಿಫೆನ್ಸ್ ಎಂಪ್ಲಾಯಿ ರೆಕ್ರೂಟ್ಮೆಂಟ್​ನ ಗ್ರೂಪ್ ಸಿಯ ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗಳ ನೇರ ನೇಮಕಾತಿಗಾಗಿ ಫೆಬ್ರವರಿ 08ರಂದು ಲಿಖಿತ ಪರೀಕ್ಷೆ ನಡೆದಿತ್ತು.

ಇದನ್ನೂ ಓದಿ: Home Guard Recruitment 2026: ಶಿವಮೊಗ್ಗದಲ್ಲಿ ಗೃಹರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ;10th ಪಾಸಾಗಿದ್ರೆ ಸಾಕು!

ಬೆಳಗ್ಗೆ 10 ಗಂಟೆಯಿಂದ 12 ಗಂಟೆಗಳವರೆಗೆ ನಡೆದಿತ್ತು. ಪರೀಕ್ಷೆ ಸಮಯದಲ್ಲಿ ಒಟ್ಟು 18 ಜನ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಪರೀಕ್ಷೆ ಬರೆದಿರುವುದು ಪತ್ತೆ ಆಗಿದೆ ಎನ್ನಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:54 pm, Mon, 9 February 26

Source link

ವಾರಾಣಸಿಯಲ್ಲಿ ಬುಲ್ಡೋಜರ್ ದಾಳಿ ಖಂಡಿಸಿ ತನ್ನ ಅಂಗಡಿಗೆ ತಾನೇ ಬೆಂಕಿ ಹಚ್ಚಿದ ವ್ಯಾಪಾರಿ – Kannada News | Man Sets his own Shop Ablaze Pours Petrol On Himself Amid Bulldozer Action begins In Varanasi

ವಾರಾಣಸಿ, ಫೆಬ್ರವರಿ 9: ಉತ್ತರ ಪ್ರದೇಶದ ವಾರಾಣಸಿಯ (Varanasi) ದಾಲ್ಮಂಡಿಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಸರ್ಕಾರ ಬುಲ್ಡೋಜರ್ ಬಳಸಿ ಮನೆಗಳನ್ನು ಕೆಡವಲು ಪ್ರಾರಂಭಿಸಿದೆ. ಇಂದು, ಪುರಸಭೆ ಗುರುತಿಸಿದ ಶಿಥಿಲಗೊಂಡ ಮನೆಗಳಲ್ಲಿ 21 ಮನೆಗಳನ್ನು ನೆಲಸಮ ಮಾಡಲಾಗಿದೆ. ಇದು ಒಂದೇ ದಿನದಲ್ಲಿ ದಾಲ್ಮಂಡಿಯಲ್ಲಿ ನಡೆದ ಅತಿದೊಡ್ಡ ಕಾರ್ಯಾಚರಣೆಯಾಗಿದೆ. ಇದನ್ನು ಖಂಡಿಸಿ ಸ್ಥಳೀಯ ಅಂಗಡಿಯವರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಆಡಳಿತ ಅಧಿಕಾರಿಗಳಿಂದ 10 ದಿನಗಳ ಕಾಲಾವಕಾಶ ಕೋರುತ್ತಿದ್ದಾರೆ. ಆದರೂ ಅಧಿಕಾರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ. ಹೀಗಾಗಿ, ಕಾರ್ಯಾಚರಣೆಯ ಸಮಯದಲ್ಲಿ ಅಂಗಡಿ ಮಾಲೀಕರೊಬ್ಬರು ತಮ್ಮ ಮೇಲೆ ಪೆಟ್ರೋಲ್ ಸುರಿದುಕೊಂಡು, ಮನೆಗೂ ಬೆಂಕಿ ಹಚ್ಚಿದ್ದಾರೆ. ತಮ್ಮ ಮೈಗೂ ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ನಮ್ಮ ತಪ್ಪೇನು? ನೀವು ನಮ್ಮನ್ನು ಕೊಲ್ಲುತ್ತೀರಾ? ನೀವು ರಸ್ತೆ ಅಗಲೀಕರಣ ಮಾಡಲು ಬಯಸಿದರೆ ನೀವು ಜನರ ಜೀವನವನ್ನು ನಾಶ ಮಾಡುತ್ತೀರಾ? ಸರ್ಕಾರ ನಮ್ಮನ್ನು ನಾಶ ಮಾಡುತ್ತಿದೆ. ಅವರು ನಮ್ಮ ಜೀವನಕ್ಕೆ ಆಧಾರವಾಗಿದ್ದ ಅಂಗಡಿಯನ್ನೇ ಕಸಿದುಕೊಂಡಿದೆ. ನಮಗೆ ಸರ್ಕಾರ ಯಾವುದೇ ಸೂಚನೆ ನೀಡಿಲ್ಲ ಎಂದು ಆ ವ್ಯಾಪಾರಿ ಅಳುತ್ತಾ ಕಿರುಚಾಡಿದ್ದಾರೆ. ಜನರೆಲ್ಲ ಅವರನ್ನು ಕೆಳಗಿಳಿಯಲು ಎಷ್ಟೇ ಬೇಡಿಕೊಂಡರೂ ಅವರು ಕೆಳಗೆ ಇಳಿಯಲಿಲ್ಲ.

ಇದನ್ನೂ ಓದಿ: ಕಾಲೇಜಿನೊಳಗೇ ಯುವತಿಯನ್ನು ಕೊಂದು, ತಾನೂ ಶೂಟ್ ಮಾಡಿಕೊಂಡ ಪಂಜಾಬ್​​ನ ಕಾನೂನು ವಿದ್ಯಾರ್ಥಿ

ಗಲಾಟೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು 4 ಪೊಲೀಸ್ ಠಾಣೆಗಳ ಪಡೆಗಳನ್ನು ನಿಯೋಜಿಸಿದೆ. ಅಲ್ಲಿ ಮಹಿಳಾ ಸಿಬ್ಬಂದಿ ಸೇರಿದಂತೆ 500 ಪೊಲೀಸ್ ಸಿಬ್ಬಂದಿ ಇದ್ದಾರೆ. ಪರಿಸ್ಥಿತಿಯನ್ನು ಡ್ರೋನ್‌ಗಳ ಮೂಲಕವೂ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಇದಕ್ಕೂ ಮೊದಲು, ಜನವರಿ 21ರಂದು 8 ಮನೆಗಳನ್ನು ಒಟ್ಟಿಗೆ ಕೆಡವಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸ್ಪಿರಿಟ್’ ಸಿನಿಮಾದಿಂದ ಪ್ರಕಾಶ್ ರಾಜ್ ಹೊರಬಂದಿಲ್ಲ; ಸ್ಪಷ್ಟನೆ ನೀಡಿದ ನಟ – Kannada News | Prakash Raj dismissed rumours of his exit from Spirit movie ft Prabhas

ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ‘ಸ್ಪಿರಿಟ್’ (Spirit) ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಪ್ರಭಾಸ್ ನಟನೆಯ ಈ ಸಿನಿಮಾದ ಪಾತ್ರವರ್ಗದ ಬಗ್ಗೆ ಜನರಿಗೆ ಗೊಂದಲ ಮೂಡಿದೆ. ಈ ಮೊದಲು ನಾಯಕಿ ಆಗಿದ್ದ ದೀಪಿಕಾ ಪಡುಕೋಣೆ ಅವರು ಚಿತ್ರತಂಡದಿಂದ ಹೊರನಡೆದರು. ಆ ಬಳಿಕ ತೃಪ್ತಿ ದಿಮ್ರಿ ಅವರನ್ನು ಆಯ್ಕೆ ಮಾಡಲಾಯಿತು. ಈಗ ‘ಸ್ಪಿರಿಟ್’ ಸಿನಿಮಾದಿಂದ ಹಿರಿಯ ನಟ ಪ್ರಕಾಶ್ ರಾಜ್ (Prakash Raj) ಅವರು ಹೊರ ನಡೆದಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅದಕ್ಕೆ ಈಗ ಸ್ವತಃ ಪ್ರಕಾಶ್ ರಾಜ್ ಅವರು ಸ್ಪಷ್ಟನೆ ನೀಡಿದ್ದಾರೆ. ವದಂತಿಯನ್ನು ಅವರು ತಳ್ಳಿಹಾಕಿದ್ದಾರೆ.

ಗಾಸಿಪ್ ಏನು? ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತು ನಟ ಪ್ರಕಾಶ್ ರಾಜ್ ಅವರ ನಡುವೆ ಭಿನ್ನಾಭಿಪ್ರಾಯ ಮೂಡಿತಂತೆ. ಒಂದು ದೃಶ್ಯದ ಚಿತ್ರೀಕರಣ ನಡೆಯುತ್ತಿರುವಾಗಲೇ ಅವರಿಬ್ಬರ ನಡುವೆ ವಾದ ಆಯಿತಂತೆ. ಅದರಿಂದಾಗಿ ಪ್ರಕಾಶ್ ರಾಜ್ ಅವರು ಚಿತ್ರತಂಡದಿಂದ ಹೊರಗೆ ಬರಲು ನಿರ್ಧರಿಸಿದರಂತೆ. ಈ ರೀತಿಯಾಗಿ ಗಾಸಿಪ್ ಹಬ್ಬಿದೆ.

ಆದರೆ ಸ್ವತಃ ಪ್ರಕಾಶ್ ರಾಜ್ ಅವರು ‘ಹಿಂದೂಸ್ತಾನ್ ಟೈಮ್ಸ್’ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಇವೆಲ್ಲವೂ ನಾನ್​ಸೆನ್ಸ್ ಊಹಾಪೋಹಗಳು. ಅದರ ಬಗ್ಗೆ ನನಗೆ ಗೊತ್ತಿಲ್ಲ’ ಎಂದು ಪ್ರಕಾಶ್ ರಾಜ್ ಅವರು ಹೇಳಿದ್ದಾರೆ. ಆ ಮೂಲಕ, ತಾವು ಇನ್ನೂ ಚಿತ್ರತಂಡದ ಭಾಗವಾಗಿರುವುದಾಗಿ ಅವರು ಹೇಳಿದ್ದಾರೆ. ಈ ವಿಷಯ ತಿಳಿದು ಪ್ರಕಾಶ್ ರಾಜ್ ಅವರ ಅಭಿಮಾನಿಗಳಿಗೆ ಸಮಾಧಾನ ಆಗಿದೆ.

ಪ್ರಕಾಶ್ ರಾಜ್ ಅವರು ಪ್ರತಿಭಾನ್ವಿತ ನಟ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಇಂಗ್ಲಿಷ್ ಭಾಷೆಗಳನ್ನು ಅವರು ನಿರರ್ಗಳವಾಗಿ ಮಾತನಾಡುತ್ತಾರೆ. ಇದರಿಂದ ಚಿತ್ರತಂಡಗಳಿಗೆ ಅನುಕೂಲ ಆಗುತ್ತದೆ. ಪಾತ್ರವರ್ಗದಲ್ಲಿ ಪ್ರಕಾಶ್ ರಾಜ್ ಇದ್ದರೆ ಅಂಥ ಸಿನಿಮಾಗಳ ಮೆರುಗು ಹೆಚ್ಚುತ್ತದೆ. ವಿಲನ್ ಮತ್ತು ಪೋಷಕ ಪಾತ್ರಗಳ ಮೂಲಕ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ.

ಇದನ್ನೂ ಓದಿ: ಪ್ರಭಾಸ್ ‘ಸ್ಪಿರಿಟ್’ ಸಿನಿಮಾನಲ್ಲಿ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟಿ

‘ಎಕ್ಸ್’ (ಟ್ವಿಟರ್) ಖಾತೆಯಲ್ಲೂ ಪ್ರಕಾಶ್ ರಾಜ್ ಅವರು ಸ್ಪಷ್ಟನೆ ನೀಡಿದ್ದಾರೆ. ‘ಸ್ಪಿರಿಟ್ ಸಿನಿಮಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ಗಮನಕ್ಕೆ.. ನಾವು ಇನ್ನೂ ನನ್ನ ಪಾತ್ರದ ಶೂಟಿಂಗ್ ಕೂಡ ಆರಂಭಿಸಿಲ್ಲ. ಆದರೆ ನೀವು ವದಂತಿ ಸೃಷ್ಟಿಸುತ್ತಿದ್ದೀರಿ’ ಎಂದು ಪ್ರಕಾಶ್ ರಾಜ್ ಅವರು ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ – Kannada News | KL Rahul Century Powers Karnataka to Ranji Semis vs Mumbai

ರಣಜಿ ಟ್ರೋಫಿಯ ನಾಲ್ಕನೇ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ಹಾಗೂ ಮುಂಬೈ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕರ್ನಾಟಕ ತಂಡದ ಪರ ಕೆಎಲ್ ರಾಹುಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ಸಂಕಷ್ಟದಿಂದ ತಂಡಕ್ಕೆ ನೆರವಾದರು. ಎರಡನೇ ಇನ್ನಿಂಗ್ಸ್​ನಲ್ಲಿ 130 ರನ್‌ ಬಾರಿಸಿದ ರಾಹುಲ್, ಈ ಶತಕದೊಂದಿಗೆ ಕರ್ನಾಟಕ ತಂಡದ ಗೆಲುವನ್ನು ಖಚಿತಪಡಿಸಿದರು. ಮುಂಬೈ ನೀಡಿದ 325 ರನ್‌ಗಳ ಗುರಿಯನ್ನು ಬೆನ್ನಟ್ಟಿ ಕರ್ನಾಟಕ 4 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಇದು ಕೆಎಲ್ ರಾಹುಲ್ ಪ್ರಥಮ ದರ್ಜೆ ವೃತ್ತಿಜೀವನದ 25ನೇ ಶತಕ ಎಂಬುದು ಮತ್ತಷ್ಟು ವಿಶೇಷವಾಗಿತ್ತು.

ಈ ಗೆಲುವಿನೊಂದಿಗೆ ಕರ್ನಾಟಕ ಸೆಮಿಫೈನಲ್‌ಗೆ ತಲುಪಿದೆ. ಕೆಎಲ್ ರಾಹುಲ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಈ ಶತಕ ಬಾರಿಸಿದ್ದು ಅವರ ಬ್ಯಾಟಿಂಗ್ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ಏಕೆಂದರೆ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್​ನಲ್ಲಿ ಶತಕ ಬಾರಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ರಾಹುಲ್ ಈ ಕೆಲಸ ಮಾಡಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಕೆಎಲ್ ರಾಹುಲ್ ತಮ್ಮ ಇನ್ನಿಂಗ್ಸ್‌ನಲ್ಲಿ 14 ಬೌಂಡರಿಗಳು ಮತ್ತು ಒಂದು ಸಿಕ್ಸ್ ಬಾರಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಈ ರೀತಿಯ ಜನರಿಂದ ದೂರವಿದ್ದಷ್ಟು ಒಳ್ಳೆಯದು ಎನ್ನುತ್ತಾರೆ ಚಾಣಕ್ಯ – Kannada News | Chanakya Niti: Never help such people, it’s better to stay away from them

ಸಹಾಯ (help) ಮಾಡುವುದು ಒಳ್ಳೆಯ ಗುಣ. ಹೌದು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮಾನವೀಯತೆ. ಆದರೆ ಇಂತಹ ಕೆಲವೊಂದಿಷ್ಟು ಜನರಿಗೆ ಯಾವುದೇ ಕಾರಣಕ್ಕೂ ಸಹಾಯ ಮಾಡಬಾರದು ಅಂತಹ ಜನರಿಂದ ಸಾಧ್ಯವಾದಷ್ಟು ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಆಚಾರ್ಯ ಚಾಣಕ್ಯರು ಸಲಹೆ ನೀಡಿದ್ದಾರೆ. ಚಾಣಕ್ಯರು ಹೇಳುವಂತೆ ಯಾವ ರೀತಿಯ ಜನರಿಗೆ ಸಹಾಯ ಮಾಡಬಾರದು, ಅಂತಹ ಜನರಿಂದ ಯಾವ ಕಾರಣಕ್ಕಾಗಿ ದೂರವಿರಬೇಕು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಇಂತಹ ಜನರಿಗೆ ಸಹಾಯ ಮಾಡಬಾರದು:

ಮೂರ್ಖ ವ್ಯಕ್ತಿ: ಆಚಾರ್ಯ ಚಾಣಕ್ಯರು ಮೂರ್ಖ ವ್ಯಕ್ತಿಯಿಂದ ಆದಷ್ಟು ದೂರವಿರಬೇಕು ಎಂದು ಸಲಹೆ ನೀಡಿದ್ದಾರೆ. ಏಕೆಂದರೆ ಮೂರ್ಖನಿಗೆ ನಿಮ್ಮ ಸಹಾಯದ ಮಹತ್ವ ಅರ್ಥವಾಗುವುದಿಲ್ಲ, ಇಂತಹವರಿಗೆ ಉಪಕಾರ ಮಾಡುವುದೇ ನಿಷ್ಪ್ರಯೋಜಕ. ಆದ್ದರಿಂದ ಇಂತಹ ಜನರಿಂದ ದೂರವಿರುವುದೇ ತುಂಬಾ ಒಳ್ಳೆಯದು.

ಕೆಟ್ಟ ಸ್ವಭಾವದ ವ್ಯಕ್ತಿ: ಕೆಟ್ಟ ಸ್ವಭಾವದ ಯಾರಾದರೂ ನಿಮಗೆ ತಿಳಿದಿದ್ದರೆ, ಅವರಿಂದ ದೂರವಿರುವುದು ತುಂಬಾ ಒಳ್ಳೆಯದು. ಅಂತಹ ಜನರಿಗೆ ಸಹಾಯ ಮಾಡುವುದು ಅಥವಾ ಒಳ್ಳೆಯದನ್ನು ಮಾಡುವುದು ಸಹ ಹಾನಿಯನ್ನುಂಟುಮಾಡುತ್ತದೆ. ಅಂತಹ ಜನರೊಂದಿಗೆ ಸಂಪರ್ಕದಲ್ಲಿದ್ದರೆ ಸಮಾಜ ಮತ್ತು ಕುಟುಂಬ ವರ್ಗದಲ್ಲಿ ನಿಮ್ಮ ಗೌರವ ಹಾಳಾಗುತ್ತದೆ. ಇದು ಅವಮಾನಕ್ಕೆ ಸಹ ಕಾರಣವಾಗಬಹುದು. ಜೊತೆಗೆ ಅಂತಹ ಜನರ ಸಹವಾಸ ಮಾಡಿದರೇ ನೀವು ಕೂಡ ಕೆಟ್ಟ ಬುದ್ಧಿಯನ್ನು ಕಲಿಯುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಕೆಟ್ಟ ಸ್ವಭಾವದ ಜನರಿಂದ ದೂರವಿರಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ..

ಅನಗತ್ಯವಾಗಿ ದುಃಖಿತನಾಗಿರುವ ವ್ಯಕ್ತಿ: ತಮ್ಮ ಜೀವನದಲ್ಲಿ ಅತೃಪ್ತರಾಗಿರುವ ಮತ್ತು ನಿರಂತರವಾಗಿ ದುಃಖಿತನಾಗಿರುವ ವ್ಯಕ್ತಿ ಇತರರ ಪ್ರಗತಿಯನ್ನು ನೋಡಿ ಅಸೂಯೆ ಪಡುತ್ತಾನೆ. ಆದ್ದರಿಂದ ಇಂತಹ ಸ್ವಭಾವದ ವ್ಯಕ್ತಿಗಳಿಂದ ದೂರವಿರಿ ಎಂದು ಆಚಾರ್ಯ ಚಾಣಕ್ಯರು ಸಲಹೆ ನೀಡಿದ್ದಾರೆ. ಅವರು ಇತರರ ಸಂತೋಷವನ್ನು ಅಸೂಯೆಪಡುತ್ತಾರೆ ಮತ್ತು ಶಪಿಸುತ್ತಾರೆ. ಹೀಗಾಗಿ, ಅಸೂಯೆ ಭಾವನೆಗಳನ್ನು ಹೊಂದಿರುವ ಮತ್ತು ಅತೃಪ್ತರಾಗಿರುವವರಿಂದ ದೂರವಿರುವುದು ನಮಗೆ ಒಳ್ಳೆಯದು.

ಇದನ್ನೂ ಓದಿ: ಯಶಸ್ಸು, ಶ್ರೀಮಂತಿಕೆ ಬಯಸುವವರು ರಾತ್ರಿ ಮಲಗುವ ಮುನ್ನ ಕೆಲಸಗಳನ್ನು ಮಾಡಲೇಬೇಕು

ಕೋಪಗೊಂಡ ಅಥವಾ ಮುಂಗೋಪದ ಜನರು:  ಆಚಾರ್ಯ ಚಾಣಕ್ಯರು ಕೋಪದ ಸ್ವಭಾವ ಹೊಂದಿರುವ ವ್ಯಕ್ತಿಯನ್ನು ಎಂದಿಗೂ ಹತ್ತಿರ ಸೇರಿಸಬಾರದು ಎಂದು ಸಲಹೆ ನೀಡಿದ್ದಾರೆ. ಮನುಷ್ಯನ ದೊಡ್ಡ ಶತ್ರು ಕೋಪ. ಕೋಪವು ವ್ಯಕ್ತಿಯ ತರ್ಕಿಸುವ ಮತ್ತು ಗ್ರಹಿಸುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಕೋಪಗೊಂಡ ವ್ಯಕ್ತಿಯು ತನ್ನನ್ನು ಮತ್ತು ಇತರರನ್ನು ನೋಯಿಸಿಕೊಳ್ಳುತ್ತಾನೆ. ಈ ವ್ಯಕ್ತಿ ವಿರೋಧಿಗಳಿಗಿಂತ ಹೆಚ್ಚು ಅಪಾಯಕಾರಿ ಆದ್ದರಿಂದ ಇಂತಹ ವ್ಯಕ್ತಿಗಳಿಂದ ದೂರವಿದ್ದಷ್ಟು ಒಳ್ಳೆಯದು.

ಮಾದಕ ವ್ಯಸನಿಗಳು: ಮಾದಕ ವ್ಯಸನಿಗಳಿಗೆ ಸಹಾಯ ಮಾಡದಂತೆ ಆಚಾರ್ಯ ಚಾಣಕ್ಯ ಸಲಹೆ ನೀಡಿದ್ದಾರೆ. ಅಂತಹ ಜನರು ಎಂದಾದರೂ ಸಹಾಯ ಕೇಳಿದರೆ, ನಿರಾಕರಿಸುವುದು ಉತ್ತಮ. ಏಕೆಂದರೆ ಅಂತಹ ಜನರು, ಮಾದಕತೆಯ ಪ್ರಭಾವದಲ್ಲಿ, ಉಳಿದೆಲ್ಲವನ್ನೂ ಮರೆತು ನೀರಿನಂತೆ ಹಣವನ್ನು ಖರ್ಚು ಮಾಡುತ್ತಾರೆ. ಅಲ್ಲದೆ ಇವರಿಂದ ಇತರರಿಗೆ ಹಾನಿಯೇ ಹೆಚ್ಚು. ಆದ್ದರಿಂದ ಅಂತಹ ಜನರಿಗೆ ಎಂದಿಗೂ ಸಹಾಯ ಮಾಡಬಾರದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಮಲಾಕರ ಭಟ್​​​ಗೆ ಮತ್ತೋರ್ವ ಮಹಿಳೆ, ಪಡ್ಡೆ ಹುಡುಗರ ಜತೆ ಸುಚಿತ್ರಾ: ಇಬ್ಬರ ಕಮದಾಟ, ಕಳ್ಳಾಟ ಬಯಲಿಗೆ – Kannada News | Siddapura Vasanth Naik Murder Case: reveals Astrologer kamalakara bhat And Lover suchitra illicit relationship With Others

ಕಾರವಾರ, (ಫೆಬ್ರವರಿ 09): ಸಿದ್ದಾಪುರ ವಸಂತ್ ನಾಯ್ಕ್ ಕೊಲೆ ಪ್ರಕರಣದ (Vasanth Naik Murder Case) ರೂವಾರಿಗಳಾದ ಕಮಲಾಕರ ಭಟ್ (Kamalakar Bhat) ಮತ್ತು ಸುಚಿತ್ರ (Sucitra) ಗ್ಯಾಂಗ್ ಅಂದರ್ ಆಗಿ ಬರೋಬ್ಬರಿ ಇವತ್ತು ಏಳು ದಿನ. ಈ ‌ನಡುವೆ ಇಬ್ಬರ ಕಳ್ಳಾಟದ ಆಡಿಯೋ, ಪೊಟೋಗಳು ಒಂದೊಂದೆ ಆಗಿ ರಿವೀಲ್ ಆಗುತ್ತಿವೆ. ಹೌದು.. ರೀಲ್ಸ್ ರಾಣಿ ಸುಚಿತ್ರಳ ನವಟಂಕಿ ಆಟಗಳು ಒಂದೆರಡಲ್ಲ, ಇದರ‌ ಬಲೆಯಲ್ಲಿ ಬಿದ್ದು ಮೋಸ‌ಹೋದ‌ ಅದೆಷ್ಟೋ ಯುವಕರ ಗುಂಪೇ ಇದೆ. ಆದ್ರೆ ಮರ್ಯಾದೆಗೆ ಅಂಜಿ ಯಾವುದು ಪ್ರಕರಣ ಬೆಳಕಿಗೆ ಬರುತ್ತಿಲ್ಲ. ಈ ನಡುವೆ ಸುಚಿತ್ರ ಪರ ಪುರುಷರ ಸಹವಾಸ ಮಾಡಿ ವಂಚಿಸಲು ಏನೆಲ್ಲ ಪ್ಲ್ಯಾನ್ ಮಾಡಿದ್ದಳು ಎಂದು ಒಮ್ಮೆ ಕೆದಕಿದ್ರೆ ಒಂದು ದೊಡ್ಡ ಸರಣಿ ಪುಟವೇ ತೆರೆದುಕೊಳ್ಳುತ್ತದೆ. ಮದುವೆ ಆಗಿದ್ದ ಸುಚಿತ್ರಾ ಹುಡುಗರನ್ನ ಬಿಳಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಿದ್ದಳಂತೆ. ಪಡ್ಡೆ ಹುಡುಗರಿಗಾಗಿ ತನ್ನ ಹೆಸರನ್ನೆ ಬದಲಿಸಿಕೊಂಡಿದ್ದಳಂತೆ ಸುಚಿತ್ರ. ಸುರೇಖಾ ಅಂತ ಇದ್ದ ತನ್ನ ಹೆಸರನ್ನ ಸುಚಿತ್ರಾ ಅಂತ ಮಾಡಿಕೊಂಡಿದ್ದು, ಮದುವೆ ಸರ್ಟಿಫಿಕೇಟ್ ನಲ್ಲಿ ಅವಳದ್ದು ಸುರೇಖಾ ಅಂತ ಹೆಸರಿದೆ, ಆ ಸುರೇಖಾ ನನ್ನ ಅಕ್ಕ ಅಂತ ತನ್ನ ಫೋಟೋ ವನ್ನೆ ತೊರಿಸುತ್ತಿದ್ದಳಂತೆ.

ಜ್ಯೋತಿಷ್ಯ ಹೇಳ್ಕೊಂಡಿದ್ದ ಕಮಲಾಕರ ಭಟ್ರು, ಶಿರಸಿ ಮೂಲದ ಮಹಿಳೆ ಜೊತೆ 9 ವರ್ಷ ಸಂಬಂಧದಲ್ಲಿದ್ರಾ? ಈ ವಿಷ್ಯ ತಿಳಿದು ಸುಚಿತ್ರಾ, ಕಮಲಾಕರ ಭಟ್ರಿಗೆ ಕ್ಲಾಸ್ ತೆಗೆದುಕೊಂಡಿದ್ರಾ? ಭಟ್ರಿಗೆ ಆ ಮಹಿಳೆ ಕರೆ ಮಾಡಿದ್ದಕ್ಕೆ ಸುಚಿತ್ರಾ ಸಿಟ್ಟಿಗೆದ್ದಿದ್ಲಾ? ಇಷ್ಟೆಲ್ಲಾ ಆದ್ಮೇಲೆ ಶಿರಸಿ ಮೂಲದ ಮಹಿಳೆಯನ್ನ ಕಮಲಾಕರ ಭಟ್ರು ದೂರವಿಟ್ಟುಬಿಟ್ರಾ? ಸುಚಿತ್ರಾಗಾಗಿ ಆ ಮಹಿಳೆಗೆ ಕಮಲಾಕರ ಭಟ್ ಅವಾಚ್ಯ ಶಬ್ಧಗಳಿಂದಲೂ ನಿಂದಿಸಿದ್ರಾ? ಎನ್ನುವ ಅನುಮಾನ ಶುರುವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಆಡಿಯೋವೊಂದು ವೈರಲ್ ಆಗಿದೆ. ಮತ್ತೊಂದೆಡೆ ರೀಲ್ಸ್ ರಾಣಿ ಸುಚಿತ್ರಾ ನೌಟಂಕಿ ಆಟಗಳನ್ನಾಡುತ್ತಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಕಮಲಾಕರ್ ಭಟ್ ಮಾತ್ರವಲ್ಲ, ಕಲಬುರಗಿಯ ಜಮೀನ್ದಾರನ ಜೊತೆಗೂ ಸುಚಿತ್ರಾ ಲವ್ವಿಡವ್ವಿ

ಪಡ್ಡೆ ಹುಡುಗರಿಗೆ ಗಾಳ ಹಾಕ್ತಿದ್ದ ಸುಚಿತ್ರಾ

ಮದುವೆ ಆಗಿದ್ರೂ ಪಡ್ಡೆ ಹುಡುಗರಿಗೆ ಗಾಳ ಹಾಕುತ್ತಿದ್ದಳಂತೆ. ಇದಕ್ಕಾಗೇ ಸುರೇಖಾ ಅಂತಿದ್ದ ಹೆಸರನ್ನ ಸುಚಿತ್ರಾ ಅಂತ ಬದಲಿಸಿದ್ದಳು. ಸುರೇಖಾ ನನ್ನ ಅಕ್ಕ ಅಂತ ತನ್ನದೇ ಫೋಟೋ ತೋರಿಸಿ, ನಾವಿಬ್ಬರೂ ಟ್ವಿನ್ಸ್ ಆಗಿದ್ವಿ ಎಂದು ಕಥೆ ಕಟ್ಟಿದ್ದಳು. ಅಕ್ಕ ಸಾವನ್ನಪ್ಪಿದ ಬಳಿಕ ಮಕ್ಕಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಈ ಮಕ್ಕಳ ತಂದೆ ಮಹೇಶ್ ಬೆಂಗಳೂರಿನಲ್ಲಿ ಇರ್ತಾರೆ ಎಂದು ಒಂದೊಂದೇ ರೀಲ್ ಬಿಡುತ್ತಾ ಯುವಕರಿಗೆ ಗಾಳ ಹಾಕಿದ್ದಾಳೆ.

ಚೆಂದದ ಯುವಕರ ಫೋಟೋಗೆ ತಾನೇ ಕಮೆಂಟ್ ಹಾಕುತ್ತಿದ್ದ ಸುಚಿತ್ರಾ, ಪ್ರೀತಿ ಹೆಸರಲ್ಲಿ ತಲೆ ಕೆಡಿಸಿ, ತನ್ನ ಬಲೆಗೆ ಹಾಕಿಕೊಂಡು ಸುಲಿಗೆ ಮಾಡುತ್ತಿದ್ದಳು ಎನ್ನಲಾಗಿದೆ. ಇಷ್ಟೇ ಅಲ್ಲದೇ ಯುವಕರ ಬಳಿ ತನ್ನ ಕಷ್ಟವನ್ನೆಲ್ಲಾ ಹೇಳಿಕೊಂಡು, ನೇರವಾಗಿ ತನ್ನ ಮನೆಗೆ ಕರೆಯುತ್ತಿದ್ದಳು ಎನ್ನುವುದು ಸಹ ಗೊತ್ತಾಗಿದೆ.

ಕಮಲಾಕರ್ ಭಟ್ ನ ಪುರಾಣ

ಇನ್ನು ಇವಳದ್ದು ಒಂದು ಕಥೆಯಾದ್ರೆ ಈಕೆಯ ಪ್ರಿಯಕರ ಕಮಲಾಕರ್ ಭಟ್ ನ ಪುರಾಣವೇ ಇನ್ನೊಂದು. ಕಮಲಾಕರ ಭಟ್ ಕಾಮಪುರಾಣದ ಆಡಿಯೋ ರಿಲೀಸ್ ಆಗಿದ್ದು, ಜೀವನ ಪೂರ್ತಿ ಇರುವುದಾದ್ರೆ ಇವಳ ಜೊತೆಗೆ ಎಂದಿರುವ ಕಮಲಾಕರ ಭಟ್, ದಿನ ಬಂದು ಹೋಗುವವರ ತರ ಇವಳಲ್ಲ ಎಂದಿರುವ ಆಡಿಯೋ‌ ಈಗ ಸಖತ್ ವೈರಲ್ ಆಗಿತ್ತಿದೆ. ಸುಚಿತ್ರಳ ಚಪ್ಪಲಿ ಎಷ್ಟು ಪ್ರಮಾಣದಲ್ಲಿದೆ ಅದು ಕೂಡ ನಂಗೆ ಗೊತ್ತು ಎಂದಿರುವ ಭಟ್, ಸುಚಿತ್ರಳನ್ನ ಬಿಟ್ಟುಕೊಡೋಕೆ ಆಗದ ರೀತಿಯಲ್ಲಿ ಮಾತಾಡಿದ್ದಾನೆ. ಆದ್ರೆ ಈತ ಸುಚಿತ್ರಳ ಮೊದಲು ಇನ್ನೊಂದು ಮಹಿಳೆಯ ಜೊತೆ ಸಂಬಂಧ ಹೊಂದಿದ್ದನಂತೆ.

9 ವರ್ಷ ಕಾಲ ಶಿರಸಿ ಮೂಲದ ಮಹಿಳೆಯ ಜೊತೆಗೆ ಇದ್ದ ಕಮಲಾಕರ ಜೀವನದಲ್ಲಿ, ಸುಚಿತ್ರಾ ಎಂಟ್ರಿ ಕೊಟ್ಟ ಬಳಿಕ ಆ ಮಹಿಳೆಯನ್ನ ಕಮಲಾಕರ ದೂರ ಮಾಡಿದ್ದ ಎಂಬ ಆರೋಪ ಇದೆ. ಸುಚಿತ್ರ ಎಂಟ್ರಿಯಾದ ಮೇಲೆ ಕಮಲಾಕರನಿಗೆ ಆಗಾಗ ಕರೆ ಮಾಡುತ್ತಿದ್ದಳಂತೆ ಆ ಶಿರಸಿ ಮಹಿಳೆ. ಮಹಿಳೆ ಕರೆ ಮಾಡುವುದು ಸುಚಿತ್ರಾಗೆ ಗೊತ್ತಾದ ಬಳಿಕ ಭಟ್ ನಿಗೆ ಕ್ಲಾಸ್ ತೊಗೊಂಡಿದ್ದಳಂತೆ. ಸುಚಿತ್ರಾಳ ಭಯಕ್ಕೆ ಭಟ್, ಆಕೆಯ ಮುಂದೆಯೇ ಮಹಿಳೆಗೆ ಆಡಿಯೋ ಮೆಸೆಜ್ ಕಳಿಸಿದ್ದನಂತೆ . ಸುಚಿತ್ರ ಖೆಡ್ಡಾಗೆ ಬಿದ್ದ ಬಳಿಕ ಶಿರಸಿ ಮೂಲದ ಮಹಿಳೆಯನ್ನ ಸಂಪೂರ್ಣವಾಗಿ ತಿರಸ್ಕರಿಸಿದ್ದ ಎಂದು ತಿಳಿದುಬಂದಿದೆ.

ಒಟ್ಟಾರೆ ಸಿದ್ದಾಪುರ ವಸಂತ್ ನಾಯ್ಕ್‌ ಕೊಲೆಯಾದ ಬಳಿಕ ಸುಚಿತ್ರಾ ಮತ್ತು ಕಮಲಾಕರ ಭಟ್ ಹಿಂದಿನ ಒಂದೊಂದೆ ಕಮದಾಟ, ಕಳ್ಳಾಟ ಬಯಲಿಗೆ ಬೀಳುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೊಡವೆಗಳು ಹೆಚ್ಚಾಗಿ ಕಂಡುಬರುವುದಕ್ಕೆ ಕಾರಣವೇನು ಗೊತ್ತಾ? ಅವುಗಳನ್ನು ತಡೆಯಲು ಈ ರೀತಿ ಮಾಡಿ – Kannada News | Stop Acne Breakouts: Simple Skincare Hacks

ಇಂದಿನ ಒತ್ತಡದ ಜೀವನ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಅನಿಯಮಿತ ದಿನಚರಿ, ಮೊದಲು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ತಡರಾತ್ರಿ ಎಚ್ಚರವಾಗಿರುವುದು, ಹೆಚ್ಚು ಜಂಕ್ ಫುಡ್ ಸೇವಿಸುವುದು, ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯುವುದು ಮತ್ತು ಮಾನಸಿಕ ಒತ್ತಡ ಸೇರಿದಂತೆ ನಾನಾ ರೀತಿಯ ಕಾರಣಗಳು ಚರ್ಮದ ಆರೋಗ್ಯವನ್ನು ಹಾಳು ಮಾಡುತ್ತದೆ. ಈ ರೀತಿಯ ಅಭ್ಯಾಸಗಳಿಂದ ಮುಖದ ಮೇಲೆ ಆಗಾಗ ಮೊಡವೆಗಳು (Acne) ಕಾಣಿಸಿಕೊಳ್ಳುತ್ತದೆ, ಇದು ಯುವಕರು ಮತ್ತು ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದ್ದರೂ ಕೂಡ ಇದನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಏಕೆಂದರೆ ಇದು ಕ್ರಮೇಣ ಚರ್ಮದ ನೈಸರ್ಗಿಕ ಹೊಳಪನ್ನು ಕಡಿಮೆ ಮಾಡುತ್ತದೆ. ಅಷ್ಟೇಅಲ್ಲ, ಇದು ಕಲೆಗಳಿಗೆ ಕಾರಣವಾಗಬಹುದು. ಸಮಯಕ್ಕೆ ಸರಿಯಾಗಿ ಪರಿಹರಿಸದಿದ್ದರೆ, ಈ ಸಮಸ್ಯೆ ದೀರ್ಘಕಾಲದವರೆಗೆ ಮುಂದುವರೆಯುತ್ತದೆ. ಹಾಗಾಗಿ ಮೊಡವೆ ಕಂಡುಬರುವುದಕ್ಕೆ ಕಾರಣ ಮತ್ತು ಅವುಗಳನ್ನು ತಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಮೊಡವೆ ಹೆಚ್ಚಾಗಿ ಕಂಡುಬರಲು ಕಾರಣವೇನು?

ಮ್ಯಾಕ್ಸ್ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ. ಸೌಮ್ಯ ಸಚ್‌ದೇವ ಹೇಳುವ ಪ್ರಕಾರ, ಚರ್ಮದ ಮೇಲೆ ಮೊಡವೆ ಹೆಚ್ಚಾಗಲು ಹಲವಾರು ಕಾರಣಗಳಿರಬಹುದು. ಅದರಲ್ಲಿ ಹಾರ್ಮೋನುಗಳ ಬದಲಾವಣೆಯೂ ಒಂದು. ಇದು ಮುಟ್ಟಿನ ಸಮಯದಲ್ಲಿ, ಗರ್ಭಾವಸ್ಥೆಯಲ್ಲಿ ಅಥವಾ ಒತ್ತಡದ ಸಮಯದಲ್ಲಿ ಗಮನಾರ್ಹವಾಗಿ ಕಂಡುಬರುತ್ತದೆ. ಇದರ ಜೊತೆಗೆ, ಹುರಿದ, ಮಸಾಲೆಯುಕ್ತ ಮತ್ತು ತುಂಬಾ ಸಿಹಿ ಆಹಾರಗಳು ಸಹ ಮೊಡವೆ ಹೆಚ್ಚಳಕ್ಕೆ ಕಾರಣವಾಗಬಹುದು. ಜೊತೆಗೆ ಮುಖವನ್ನು ಪದೇ ಪದೇ ಸ್ಪರ್ಶಿಸುವುದು ಅಥವಾ ಕೊಳಕು ಕೈಗಳಿಂದ ಸ್ಪರ್ಶಿಸುವುದು ಕೂಡ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ. ಮೇಕಪ್ ಅನ್ನು ಸರಿಯಾಗಿ ತೆಗೆದುಹಾಕದಿರುವುದು ಮತ್ತು ಎಣ್ಣೆಯುಕ್ತ ಚರ್ಮದ ಮೇಲೆ ಕ್ರೀಮ್‌ಗಳನ್ನು ಹಚ್ಚುವುದು, ನಿದ್ರೆಯ ಕೊರತೆ ಮತ್ತು ಕಡಿಮೆ ನೀರು ಕುಡಿಯುವುದು ಕೂಡ ಮೊಡವೆಗಳ ಸಮಸ್ಯೆಯನ್ನು ಹೆಚ್ಚಿಸಬಹುದು. ಕೆಲವರಲ್ಲಿ, ಆನುವಂಶಿಕ ಕಾರಣಗಳಿಂದಲೂ ಮೊಡವೆಗಳು ಕಾಣಿಸಿಕೊಳ್ಳುತ್ತವೆ.

ಇದನ್ನೂ ಓದಿ: ಹುಡುಗಿಯರೇ… ಈ ರೀತಿ ಮಾಡಿದರೆ ಮುಖದಲ್ಲಿ ಎಷ್ಟೇ ಮೊಡವೆಗಳಿದ್ದರೂ ಮಾಯವಾಗಿ ಮುಖದ ಕಾಂತಿ ಹೆಚ್ಚುತ್ತದೆ

ಮೊಡವೆಯನ್ನು ತಡೆಯುವುದು ಹೇಗೆ?

ಸಾಮಾನ್ಯವಾಗಿ ಮೊಡವೆಗಳನ್ನು ತಡೆಗಟ್ಟಲು, ಮೊದಲು ದಿನಚರಿಯನ್ನು ಸುಧಾರಿಸಿಕೊಳ್ಳಿ. ಪ್ರತಿದಿನ ಸೌಮ್ಯವಾದ ಫೇಸ್ ವಾಶ್‌ನಿಂದ ಮುಖವನ್ನು ಸ್ವಚ್ಛಗೊಳಿಸಿ ಮತ್ತು ಮೇಕಪ್ ತೆಗೆದ ನಂತರವೇ ನಿದ್ರೆ ಮಾಡಿ. ಹುರಿದ ಮತ್ತು ಜಂಕ್ ಫುಡ್ ಅನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ, ಆಹಾರದಲ್ಲಿ ಹಸಿರು ತರಕಾರಿ ಮತ್ತು ಹಣ್ಣುಗಳನ್ನು ಸೇರಿಸಿ. ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಒತ್ತಡ ಕಡಿಮೆ ಮಾಡಲು ಯೋಗ ಮತ್ತು ವ್ಯಾಯಾಮ ಮಾಡಿ. ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಉತ್ಪನ್ನಗಳನ್ನು ಬಳಸಿ. ಮೊಡವೆ ದೀರ್ಘಕಾಲದ ವರೆಗೆ ಗುಣವಾಗದಿದ್ದರೆ ಮನೆಮದ್ದುಗಳನ್ನು ಮಾತ್ರ ಅವಲಂಬಿಸಬೇಡಿ. ಚರ್ಮರೋಗ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chikkaballapur: ಕುಡಿದ ಅಮಲಿನಲ್ಲಿ ಕದಿಯಲು ಹೋದ ಮನೆಯಲ್ಲೇ ಬೆಚ್ಚಗೆ ಮಲಗಿದ ಕಳ್ಳ! – Kannada News | Drunk Thief Naps in Stolen House: Chikkaballapur’s Bizarre Burglary

ಚಿಕ್ಕಬಳ್ಳಾಪುರ, ಫೆಬ್ರವರಿ 09: ಕಳ್ಳತನಕ್ಕೆ ಹೋಗೋ ಖದೀಮರು ಪಕ್ಕಾ ಪ್ಲ್ಯಾನ್​​ ಮಾಡಿಕೊಂಡೇ ಅಖಾಡಕ್ಕಿಳಿಯುತ್ತಾರೆ. ಮನೆಯಲ್ಲಿ ಯಾರಿದ್ದಾರಾ? ಇಲ್ಲವಾ? ಎನ್ನುವ ಮಾಹಿತಿಗಳ ಸಂಗ್ರಹದ ಜೊತೆ ಯಾವ ಸಮಯ ಕಳ್ಳತನಕ್ಕೆ ಸೂಕ್ತ ಎಂಬಿತ್ಯಾದಿ ತಮ್ಮದೇ ಲೆಕ್ಕಾಚಾರಗಳನ್ನು ಹಾಕಿಕೊಂಡು ರಾಬರಿ ನಡೆಸುವ ಅದೆಷ್ಟೋ ಪ್ರಕರಣಗಳ ಬಗ್ಗೆ ನಾವು ಕೇಳಿದ್ದೇವೆ. ಒಂದೇ ಒಂದು ಸಾಕ್ಷಿಯೂ ಪೊಲೀಸರಿಗೆ ಸಿಗದಂತೆ ಎಸ್ಕೇಪ್​​ ಆಗುವ ಘಟನೆಗಳ ಬಗ್ಗೆಯೂ ತಿಳಿದಿದ್ದೇವೆ. ಆದ್ರೆ ಇಲ್ಲೊಬ್ಬ ಖದೀಮ ಎಣ್ಣೆ ನಶೆಯಲ್ಲಿ ಕಳ್ಳತನಕ್ಕೆಂದು ಮನೆಗೆ ನುಗ್ಗಿದ್ದ ವೇಳೆ ನಿದ್ದೆ ಬಂದ ಕಾರಣ ಅಲ್ಲೇ ಬೆಚ್ಚಗೆ ಮಲಗಿ ತಗಲಾಕಿಕೊಂಡಿದ್ದಾನೆ.

ಹೌದು, ಇಂತಹದ್ದೊಂದು ಘಟನೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಸಾಕ್ಷಿಯಾಗಿದೆ. ಇಲ್ಲಿನ ಹಳೇ RTO ಕಚೇರಿ ಬಳಿಯ ಪ್ರೇಮನಾಥ ಎಂಬುವರ ಮನೆಯಲ್ಲಿ ಕಳ್ಳತನ ನಡೆಸಲೆಂದು ಇಬ್ಬರು ಖದೀಮರು ತೆರಳಿದ್ದರು. ಮನೆಯ ಮೇಲಿನ ರೇಕ್ ಕತ್ತರಿಸಿ ಒಳಗೆ ಕೂಡ ನುಗ್ಗಿದ್ದರು. ಬಳಿಕ ಮನೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ನಗದು ದೋಚಿ ಓರ್ವ ಕಳ್ಳ ಪರಾರಿಯಾಗಿದ್ದರೆ, ಮತ್ತೊಬ್ಬ ಅದೇ ಮನೆಯಲ್ಲಿ ನಿದ್ದೆಗೆ ಜಾರಿದ್ದಾನೆ. ಇತ್ತ ಮನೆಗೆ ಕಳ್ಳರು ನುಗ್ಗಿರುವ ಅನುಮಾನದಿಂದ ಮಾಲೀಕ ಪ್ರೇಮನಾಥನಿಗೆ ಕರೆ ಮಾಡಿ ನೆರೆ ಮನೆಯವರು ವಿಷಯ ತಿಳಿಸಿದ್ದಾರೆ. ಕೆಲಸದ ನಿಮಿತ್ತ ಹೈದರಾಬಾದ್ ಗೆ ತೆರಳಿದ್ದ ಅವರು, ರಾತ್ರೋ ರಾತ್ರಿ ಮನೆಗೆ ಹಿಂದಿರುಗಿದ್ದಾರೆ. ಇನ್ನು ಮನೆಗೆ ಪ್ರೇಮನಾಥ ಎಂಟ್ರಿಯಾಗ್ತಿದ್ದಂತೆ ಅವರಿಗೆ ಆಶ್ಚರ್ಯವಾಗಿದೆ. ಕಳ್ಳತನಕ್ಕೆಂದು ಬಂದಾತ ಮನೆಯಲ್ಲೇ ಮಲಗಿದ್ದನ್ನು ನೋಡಿದ ಅವರು, ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ವ್ಯಕ್ತಿ ಗೌರಿಬಿದನೂರಿನ ನದಿದಡ ವಾರ್ಡ್​ನ ದೇವರಾಜು ಎಂಬುದು ಗೊತ್ತಾಗಿದ್ದು, ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ದರೋಡೆ; ಫ್ಲಿಪ್‌ಕಾರ್ಟ್​​ನ ಲಕ್ಷಾಂತರ ರೂ ಮೌಲ್ಯದ ವಸ್ತುಗಳ ಕಳ್ಳತನ

ಜ್ಯುವೆಲ್ಲರಿ ದರೋಡೆ ನಡೆಸಿದ್ದ ಆರೋಪಿಗಳ ಬಂಧನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರಾಮ್​ದೇವ್ ಜ್ಯುವೆಲ್ಲರಿಗೆ ನುಗ್ಗಿ ಗನ್​​ ತೋರಿಸಿ ದರೋಡೆ ನಡೆಸಿದ್ದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅನೂಪ್, ರವಿ, ಅಂಕಿತ್, ಅರುಣ್ ಸೇರಿದಂತೆ ಐವರು ಖಾಕಿ ಬಲೆಗೆ ಬಿದ್ದಿದ್ದು, ಬಂಧಿತರು ರಾಜಸ್ಥಾನ ಮೂಲದವರು ಎಂಬುದು ಗೊತ್ತಾಗಿದೆ. ಈ ಪೈಕಿ ಆರೋಪಿ ಅಂಕಿತ್​​ ಮಾದನಾಯಕನಹಳ್ಳಿ ವಾಸವಿದ್ದು, ಕಚೋರಿ ಮಾರಿ ಜೀವನ ಸಾಗಿಸುತ್ತಿದ್ದ. ಈ ರೀತಿ ಎಷ್ಟು ದಿನ ಜೀವನ ಸಾಗಿಸೋದು ಎಂದು ನಿರ್ಧರಿಸಿ ದರೋಡೆ ಪ್ಲಾನ್ ಮಾಡಿದ್ದ. ಈ ವೇಳೆ ರಾಜಸ್ಥಾನದಲ್ಲಿ ರವಿ ಎಂಬಾತನ ಪರಿಚಯವಾಗಿದ್ದು, ಆತನ ಬಳಿ ಇದ್ದ ಪಿಸ್ತೂಲೇ ಇವರ ಬಂಡವಾಳವಾಗಿತ್ತು ಎಂಬುದು ತನಿಖೆ ವೇಳೆ ಬಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:14 pm, Mon, 9 February 26

Source link