Category Archives: Blog

Your blog category

ದೃಶ್ಯಂ 3: ಮೋಹನ್​ಲಾಲ್ ಕಾರ್ ನಂಬರ್​ನಿಂದ ರೈತನಿಗೆ ಮಾನಸಿಕ ಕಿರಿಕಿರಿ; ದಾಖಲಾಯ್ತು ದೂರು – Kannada News | Mohanlal Drishyam 3 movie Legal Trouble Car Registration Number Plate row

ಮಲಯಾಳಂ ಚಿತ್ರರಂಗದಲ್ಲಿ ಇತ್ತೀಚೆಗಷ್ಟೇ ತೆರೆಕಂಡು ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಸೂಪರ್ ಸ್ಟಾರ್ ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ (Drishyam 3) ಸಿನಿಮಾ ಈಗ ಅನಿರೀಕ್ಷಿತ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಚಿತ್ರದಲ್ಲಿ ಜಾರ್ಜ್‌ಕುಟ್ಟಿ (ಮೋಹನ್‌ಲಾಲ್) ಚಲಾಯಿಸುವ ಕಾರಿನ ನಂಬರ್ (Drishyam 3 Car Number) ಪ್ಲೇಟನ್ನು ತನ್ನ ಅನುಮತಿಯಿಲ್ಲದೆ ಬಳಸಲಾಗಿದೆ ಎಂದು ಇಡುಕ್ಕಿ ಜಿಲ್ಲೆಯ ರೈತರೊಬ್ಬರು ಪೊಲೀಸ್ ದೂರು ದಾಖಲಿಸಿದ್ದಾರೆ.

ಕೇರಳದ ಇಡುಕ್ಕಿ ಜಿಲ್ಲೆಯ ಕುಂಚಿತ್ತಣ್ಣಿ ನಿವಾಸಿ, ರೈತ ಆರ್.ಡಿ. ರಾಜೀವ್ ಎಂಬುವರು ಮುನ್ನಾರ್ ಪೊಲೀಸರಿಗೆ ಚಿತ್ರದ ನಿರ್ಮಾಪಕ ಆಂಟೋನಿ ಪೆರುಂಬಾವೂರ್ ಮತ್ತು ನಿರ್ದೇಶಕ ಜೀತು ಜೋಸೆಫ್ ವಿರುದ್ಧ ಅಧಿಕೃತ ದೂರು ನೀಡಿದ್ದಾರೆ. ‘ದೃಶ್ಯಂ 3’ ಚಿತ್ರದಲ್ಲಿ ಮೋಹನ್‌ಲಾಲ್ ಅವರ ಪಾತ್ರ ಚಲಾಯಿಸುವ ವಾಹನಕ್ಕೆ ಬಳಸಿರುವ ‘KL 69 D 2772’ ನೋಂದಣಿ ಸಂಖ್ಯೆ ತಮಗೆ ಸೇರಿದ್ದಾಗಿದೆ ಎಂದು ರಾಜೀವ್ ಆರೋಪಿಸಿದ್ದಾರೆ.

ರಾಜೀವ್ ಅವರ ಸ್ನೇಹಿತರು ಥಿಯೇಟರ್‌ನಲ್ಲಿ ಸಿನಿಮಾ ನೋಡುತ್ತಿದ್ದಾಗ ಈ ನಂಬರ್ ಪ್ಲೇಟ್ ಗಮನಿಸಿ ಅವರಿಗೆ ತಿಳಿಸಿದ್ದಾರೆ. ತದನಂತರ ಸ್ವತಃ ರಾಜೀವ್ ಅವರೇ ಚಿತ್ರವನ್ನು ವೀಕ್ಷಿಸಿ ಈ ವಿಷಯವನ್ನು ಖಚಿತಪಡಿಸಿಕೊಂಡಿದ್ದಾರೆ. ವಿಶೇಷವೆಂದರೆ, ರಾಜೀವ್ ಅವರದ್ದು, ಬಿಳಿ ಬಣ್ಣದ ಮಹೀಂದ್ರಾ ಸ್ಕಾರ್ಪಿಯೋ ಕಾರು. ಚಿತ್ರದಲ್ಲಿ ಇದೇ ನಂಬರ್ ಅನ್ನು ಮತ್ತೊಂದು ಮಾಡೆಲ್‌ನ ವಾಹನಕ್ಕೆ ಬಳಸಲಾಗಿದೆ.

ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿದ್ದಂತೆ ಇತ್ತ ರಾಜೀವ್ ಅವರಿಗೆ ಮಾನಸಿಕ ಕಿರಿಕಿರಿ ಶುರುವಾಗಿದೆ. ಸಾರ್ವಜನಿಕರು ಮತ್ತು ಯುವ ಪೀಳಿಗೆಯವರು ರಸ್ತೆಯಲ್ಲಿ ಅವರ ಕಾರನ್ನು ನೋಡಿದಾಗ ‘ದೃಶ್ಯಂ ವಾಹನ’ ಎಂದು ಕರೆಯುತ್ತಿದ್ದು, ಅವರನ್ನು ‘ದೃಶ್ಯಂ ರಾಜೀವ್’ ಎಂದು ಚುಡಾಯಿಸುತ್ತಿದ್ದಾರಂತೆ. ಸಿನಿಮಾದ ಕಾಲ್ಪನಿಕ ಕ್ರಿಮಿನಲ್ ಕಥೆಯೊಂದಿಗೆ ತನ್ನ ವಾಹನದ ನಂಬರ್ ಲಿಂಕ್ ಆಗಿರುವುದರಿಂದ ಭವಿಷ್ಯದಲ್ಲಿ ತನಗೆ ಕಾನೂನು ತೊಡಕುಗಳು ಎದುರಾಗಬಹುದು ಎಂದು ರಾಜೀವ್ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕನ್ನಡಕ್ಕೆ ಬರಲ್ಲ ದೃಶ್ಯಂ 3; ನಿರ್ದೇಶಕ ಜೀತು ಜೋಸೆಫ್ ಬಿಚ್ಚಿಟ್ಟ ಅಸಲಿ ಕಾರಣ

ತಮ್ಮ ದೂರಿನೊಂದಿಗೆ ವಾಹನದ ಅಸಲಿ ಆರ್‌ಸಿ (RC) ಪ್ರತಿಯನ್ನು ಪೊಲೀಸರಿಗೆ ಸಲ್ಲಿಸಿರುವ ರಾಜೀವ್, ಚಿತ್ರತಂಡ ತನಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಮತ್ತು ವಿವಾದಿತ ನಂಬರ್ ಪ್ಲೇಟ್ ಇರುವ ದೃಶ್ಯಗಳನ್ನು ತಕ್ಷಣವೇ ಚಿತ್ರದಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲಿಯವರೆಗೆ ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ಮುನ್ನಾರ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶನಿಯ ಮನೆಯಲ್ಲಿ ರಾಹುವಿನ ನಕ್ಷತ್ರದಲ್ಲಿಯೇ ರಾಹುವಿನ ಸಂಚಾರ .. ಆಗಲಿದೆ ಅನೇಕ ಚಮತ್ಕಾರ… – Kannada News | June Astrology Forecast 2026: Rahu, Shani, Guru, Shukra Effects on Your Zodiac

ಜೂನ್ ತಿಂಗಳಲ್ಲಿ ಕುಂಭ ರಾಶಿಯಲ್ಲಿ ರಾಹುವಿನ ಸಂಚಾರವಾಗಲಿದ್ದು ಶನಿ, ರವಿ, ಗುರು ಮತ್ತು ಶುಕ್ರರ ವಿವಿಧ ವರ್ಗ ಪ್ರಭಾವಗಳಲ್ಲಿ ಸಂಚರಿಸುವುದರಿಂದ, ಹನ್ನೆರಡು ರಾಶಿಗಳ ಮೇಲೆ ಮಿಶ್ರ ಫಲಗಳು ಉಂಟಾಗಲಿವೆ. ಶತಭಿಷಾ ನಕ್ಷತ್ರದಲ್ಲಿ ಇದ್ದು, ಇದರ ಅಧಿಪತಿ ರಾಹುವೇ ಆಗಿರುವುದು ವಿಶೇಷ.

​ಮೇಷ ರಾಶಿ

​ಆದಾಯದ ಮೂಲಗಳು ಹೆಚ್ಚಲಿವೆ. ಹಳೆಯ ಬಾಕಿ ವಸೂಲಾಗಲಿದೆ. ಸ್ನೇಹಿತರಿಂದ ಮತ್ತು ಹಿರಿಯರಿಂದ ಉತ್ತಮ ಬೆಂಬಲ ಸಿಗಲಿದೆ. ಆದರೆ, ಉದ್ಯೋಗದಲ್ಲಿ ಸ್ವಲ್ಪ ಒತ್ತಡವಿರುತ್ತದೆ. ಆರೋಗ್ಯದ ಕಡೆ ಗಮನವಿರಲಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಒಟ್ಟಾರೆಯಾಗಿ ಇದು ನಿಮಗೆ ಪ್ರಗತಿಯನ್ನು ನೀಡುವ ಸುಂದರವಾದ ಮತ್ತು ಲಾಭದಾಯಕ ತಿಂಗಳಾಗಿದೆ.

ವೃಷಭ ರಾಶಿ

​ಉದ್ಯೋಗ ಕ್ಷೇತ್ರದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರಲಿವೆ. ಕಠಿಣ ಪರಿಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ. ವ್ಯಾಪಾರದಲ್ಲಿ ಹೊಸ ಹೂಡಿಕೆಗೆ ಉತ್ತಮ ಸಮಯವಿದು. ಆದರೆ, ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ತಾಳ್ಮೆಯಿಂದ ವರ್ತಿಸುವುದು ಒಳ್ಳೆಯದು. ನಾಯಕತ್ವದ ಗುಣಗಳು ನಿಮಗೆ ಸಮಾಜದಲ್ಲಿ ಗೌರವವನ್ನು ತಂದುಕೊಡಲಿವೆ.

ಮಿಥುನ ರಾಶಿ

​ದೂರದ ಪ್ರಯಾಣ ಅಥವಾ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಭಾಗ್ಯೋದಯಕ್ಕೆ ಹೊಸ ಅವಕಾಶಗಳು ಸಿಗಲಿವೆ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಕಚೇರಿಯಲ್ಲಿ ಮೇಲಧಿಕಾರಿಗಳೊಂದಿಗೆ ವಾದ ಮಾಡಬೇಡಿ. ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿರುತ್ತದೆ. ಕಠಿಣ ಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಶಿವನ ಆರಾಧನೆಯು ನಿಮಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ.

ಕರ್ಕಾಟಕ ರಾಶಿ

​ಆರೋಗ್ಯದ ಬಗ್ಗೆ ಅತಿಯಾದ ಜಾಗ್ರತೆ ಇರಲಿ. ಹಠಾತ್ ಧನನಷ್ಟ ಅಥವಾ ಹಠಾತ್ ಧನಲಾಭದ ಸಾಧ್ಯತೆ ಇದೆ. ವಾಹನ ಚಾಲನೆ ಮಾಡುವಾಗ ಎಚ್ಚರದಿಂದಿರಿ. ವಿನಾಕಾರಣ ಯಾರೊಂದಿಗೂ ಜಗಳಕ್ಕೆ ಹೋಗಬೇಡಿ. ಮಾನಸಿಕವಾಗಿ ಸ್ವಲ್ಪ ಆತಂಕವಿರಬಹುದು. ಆದರೆ, ಆಧ್ಯಾತ್ಮಿಕ ಚಿಂತನೆಗಳು ನಿಮಗೆ ಧೈರ್ಯ ನೀಡುತ್ತವೆ. ಹಿರಿಯರ ಮಾರ್ಗದರ್ಶನವನ್ನು ತಪ್ಪದೇ ಪಾಲಿಸಿ.

ಸಿಂಹ ರಾಶಿ

​ವೈವಾಹಿಕ ಜೀವನದಲ್ಲಿ ಮತ್ತು ಪಾಲುದಾರಿಕೆ ವ್ಯವಹಾರದಲ್ಲಿ ಮಿಶ್ರ ಫಲವಿರಲಿದೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಸಾರ್ವಜನಿಕ ಜೀವನದಲ್ಲಿ ನಿಮ್ಮ ಕೀರ್ತಿ ಹೆಚ್ಚಲಿದೆ. ಹೊಸ ಒಪ್ಪಂದಗಳಿಗೆ ಸಹಿ ಮಾಡುವ ಮುನ್ನ ಯೋಚಿಸಿ. ಉದ್ಯೋಗದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಬಹುದು. ಅನಗತ್ಯ ಕೋಪವನ್ನು ನಿಯಂತ್ರಿಸುವುದು ಈ ತಿಂಗಳು ಅತ್ಯಂತ ಅವಶ್ಯಕವಾಗಿದೆ.

ಕನ್ಯಾ ರಾಶಿ

​ಶತ್ರುಗಳ ಮೇಲೆ ಜಯ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಹಳೆಯ ಸಾಲಗಳಿಂದ ಮುಕ್ತಿ ಪಡೆಯುವಿರಿ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಆದರೆ, ಸಣ್ಣಪುಟ್ಟ ವಿಷಯಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಕೋರ್ಟ್ ಕಚೇರಿ ಕೆಲಸಗಳು ಸುಲಭವಾಗಿ ಬಗೆಹರಿಯಲಿವೆ. ಆರ್ಥಿಕವಾಗಿ ಲಾಭದಾಯಕ ದಿನಗಳು ಇವಾಗಿವೆ.

​ತುಲಾ ರಾಶಿ

​ಮಕ್ಕಳ ವಿಷಯದಲ್ಲಿ ಸ್ವಲ್ಪ ಕಳವಳ ಉಂಟಾಗಬಹುದು. ಪ್ರೇಮ ಜೀವನದಲ್ಲಿ ತಪ್ಪು ತಿಳುವಳಿಕೆಗಳು ಬರದಂತೆ ನೋಡಿಕೊಳ್ಳಿ. ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ನಷ್ಟದ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಉದ್ಯೋಗದಲ್ಲಿ ಬುದ್ಧಿವಂತಿಕೆಯಿಂದ ಕೆಲಸ ನಿರ್ವಹಿಸಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ಆದಾಯವು ಸಾಮಾನ್ಯವಾಗಿದ್ದರೂ, ಸೃಜನಶೀಲ ಕೆಲಸಗಳಿಗೆ ಉತ್ತಮ ಮನ್ನಣೆ ದೊರೆಯಲಿದೆ.

ವೃಶ್ಚಿಕ ರಾಶಿ

​ಸ್ಥಿರ ಆಸ್ತಿ ಅಥವಾ ವಾಹನ ಖರೀದಿಯ ಯೋಗವಿದೆ. ತಾಯಿಯ ಆರೋಗ್ಯದಲ್ಲಿ ಏರುಪೇರಾಗಬಹುದು, ಎಚ್ಚರವಿರಲಿ. ಮನೆಯಲ್ಲಿ ಶಾಂತಿ ಕದಡದಂತೆ ತಾಳ್ಮೆಯಿಂದಿರಿ. ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ಧನಲಾಭಕ್ಕೆ ಹೊಸ ಮಾರ್ಗಗಳು ಸುಲಭವಾಗಿ ಸಿಗಲಿವೆ. ಹಳೆಯ ಸ್ನೇಹಿತರ ಭೇಟಿ ಮನಸ್ಸಿಗೆ ಸಂತೋಷ ನೀಡಲಿದೆ. ಸಾರ್ವಜನಿಕವಾಗಿ ನಿಮ್ಮ ಗೌರವ ವೃದ್ಧಿಸಲಿದೆ.

ಧನು ರಾಶಿ

​ನಿಮ್ಮ ಆತ್ಮವಿಶ್ವಾಸ ಮತ್ತು ಪರಾಕ್ರಮ ಹೆಚ್ಚಾಗಲಿದೆ. ಸಹೋದರರೊಂದಿಗೆ ಬಾಂಧವ್ಯ ಸುಧಾರಿಸಲಿದೆ. ಸಣ್ಣ ಪ್ರಯಾಣಗಳು ಲಾಭದಾಯಕವಾಗಿರುತ್ತವೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಕೀರ್ತಿ ಹೆಚ್ಚಾಗಲಿದೆ. ಉದ್ಯೋಗ ಬದಲಾವಣೆಗೆ ಇದು ಸಕಾಲ. ನಿಮ್ಮ ಸೃಜನಶೀಲ ಆಲೋಚನೆಗಳಿಗೆ ಸೂಕ್ತವಾದ ಮನ್ನಣೆ ಸಿಗಲಿದೆ. ಆರ್ಥಿಕ ಪರಿಸ್ಥಿತಿ ತುಂಬಾ ಉತ್ತಮವಾಗಿರುತ್ತದೆ.

ಮಕರ ರಾಶಿ

​ಮಾತಿನ ಮೇಲೆ ನಿಗಾ ಇರಲಿ, ಇಲ್ಲದಿದ್ದರೆ ಸಂಬಂಧಗಳು ಹಾಳಾಗಬಹುದು. ಆರ್ಥಿಕವಾಗಿ ಆದಾಯ ಹೆಚ್ಚಿದರೂ, ಅಷ್ಟೇ ವೇಗವಾಗಿ ಖರ್ಚು ಕೂಡ ಆಗಬಹುದು. ಕಣ್ಣು ಅಥವಾ ಹಲ್ಲಿನ ನೋವು ಕಾಣಿಸಿಕೊಳ್ಳಬಹುದು. ಕೌಟುಂಬಿಕ ವಿಷಯಗಳಲ್ಲಿ ಹಿರಿಯರ ಸಲಹೆ ಪಡೆದು ಮುನ್ನಡೆಯಿರಿ. ಹೂಡಿಕೆ ಮಾಡುವಾಗ ಜಾಗರೂಕರಾಗಿರಿ. ಕಠಿಣ ಪರಿಶ್ರಮದಿಂದ ಮಾತ್ರ ಧನಸಂಗ್ರಹ ಮಾಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಉದ್ಯೋಗ ಭವಿಷ್ಯ: ಜೂನ್ 14ರಿಂದ 20ರವರೆಗೆ ಈ ರಾಶಿಯವರಿಗೆ ಸಿಗಲಿದೆ ಪ್ರಮೋಷನ್; ನಿಮ್ಮ ರಾಶಿಯ ಉದ್ಯೋಗ ಯೋಗ ಹೇಗಿದೆ?

ಕುಂಭ ರಾಶಿ

​ರಾಹು ನಿಮ್ಮ ರಾಶಿಯಲ್ಲೇ ಇರುವುದರಿಂದ ಮಾನಸಿಕ ಗೊಂದಲಗಳು ಹೆಚ್ಚಾಗಬಹುದು. ಯಾವುದೇ ಪ್ರಮುಖ ನಿರ್ಧಾರಗಳನ್ನು ಯೋಚಿಸಿ ತೆಗೆದುಕೊಳ್ಳಿ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಆದಾಗ್ಯೂ, ಸಂಗಾತಿಯೊಂದಿಗೆ ಸಣ್ಣ ವೈಮನಸ್ಸು ಬರಬಹುದು. ತಾಳ್ಮೆ ಮತ್ತು ಸಕಾರಾತ್ಮಕ ಆಲೋಚನೆಗಳಿಂದ ಎಲ್ಲ ಸವಾಲುಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ.

ಮೀನ ರಾಶಿ

​ವಿದೇಶಿ ಮೂಲಗಳಿಂದ ಲಾಭ ಸಿಗಲಿದೆ. ಆದರೆ, ಅನಗತ್ಯ ಖರ್ಚುಗಳು ಹೆಚ್ಚಾಗಲಿವೆ. ನಿದ್ರಾಹೀನತೆ ಅಥವಾ ಕಣ್ಣಿನ ತೊಂದರೆ ಕಾಡಬಹುದು. ಕೋರ್ಟ್ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಯಾರೊಂದಿಗೂ ಜಾಮೀನು ಇರಬೇಡಿ. ಆಧ್ಯಾತ್ಮಿಕ ಕಾರ್ಯಗಳಿಗಾಗಿ ಹಣ ವ್ಯಯಿಸುವಿರಿ. ವೃತ್ತಿಜೀವನದಲ್ಲಿ ಸಣ್ಣ ಸವಾಲುಗಳು ಎದುರಾಗಬಹುದು. ಹಿರಿಯರ ಆಶೀರ್ವಾದ ಮತ್ತು ದೈವಭಕ್ತಿ ನಿಮ್ಮನ್ನು ಕಷ್ಟಗಳಿಂದ ಪಾರು ಮಾಡುತ್ತದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾರ್ಮುಜ್‌ನಿಂದ ಹೊರಟ ಭಾರತೀಯ ಹಡಗುಗಳ ಮೇಲೆ ಇರಾನ್​ನಿಂದ ಡ್ರೋನ್ ದಾಳಿ; ಟ್ರಂಪ್ ಆರೋಪ – Kannada News | Totally Unacceptable Donald Trump blames Iran Drones attack on Indian Ships Leaving Hormuz

ವಾಷಿಂಗ್ಟನ್, ಜೂನ್ 12: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಹಾರ್ಮುಜ್ ಜಲಸಂಧಿಯಿಂದ ಹೊರಟಿದ್ದ ಭಾರತೀಯ ಹಡಗುಗಳನ್ನು ಗುರಿಯಾಗಿಸಿಕೊಂಡು ಇರಾನ್ (Iran) ಡ್ರೋನ್‌ಗಳು ದಾಳಿ ನಡೆಸಿವೆ ಎಂದು ಆರೋಪಿಸಿದ್ದಾರೆ. ತಮ್ಮ ‘ಟ್ರುತ್ ಸೋಷಿಯಲ್’ ಜಾಲತಾಣದಲ್ಲಿ ಹಂಚಿಕೊಂಡಿರುವ ಕಠಿಣ ಪದಗಳ ಪೋಸ್ಟ್‌ನಲ್ಲಿ ಅವರು ಈ ಆಪಾದಿತ ಘಟನೆಯನ್ನು ಖಂಡಿತವಾಗಿಯೂ ಒಪ್ಪಲು ಸಾಧ್ಯವಿಲ್ಲ ಎಂದು ಕರೆದಿದ್ದಾರೆ. ಈ ಬಗ್ಗೆ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಟ್ರಂಪ್, “ಹಾರ್ಮುಜ್ ಜಲಸಂಧಿಯಿಂದ ಹೊರಡುತ್ತಿದ್ದ ಭಾರತೀಯ ಹಡಗುಗಳ ಮೇಲೆ ನಿನ್ನೆ ರಾತ್ರಿ ನಡೆದ ಇರಾನ್‌ನ ಡ್ರೋನ್ ದಾಳಿಯನ್ನು ಸೌಜನ್ಯಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ಹಾರ್ಮುಜ್ ಜಲಸಂಧಿಯನ್ನು ದಾಟಿ ಹೊರಡುತ್ತಿದ್ದ ಭಾರತೀಯ ನಾವಿಕರಿದ್ದ ವಾಣಿಜ್ಯ ಹಡಗುಗಳ ಮೇಲೆ ಇರಾನ್‌ನ ಮಾನವರಹಿತ ಡ್ರೋನ್‌ಗಳು ದಾಳಿ ನಡೆಸಿವೆ. ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಮುಗ್ಧ ನಾವಿಕರು ಮತ್ತು ವಾಣಿಜ್ಯ ಸರಕು ಸಾಗಣೆಯ ಮೇಲೆ ನಡೆಯುತ್ತಿರುವ ಇಂತಹ ಕೃತ್ಯಗಳು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲದ ಪ್ರಚೋದನೆಯಾಗಿದೆ ಎಂದು ಟ್ರಂಪ್ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್​ನ ಹಲವು ಪ್ರದೇಶಗಳ ಮೇಲೆ ಮತ್ತೆ ಅಮೆರಿಕ ದಾಳಿ, ಹಾರ್ಮುಜ್ ಜಲಸಂಧಿ ಮತ್ತೆ ಬಂದ್

ಕಳೆದ 4 ದಿನಗಳಲ್ಲಿ ಒಮಾನ್ ಕರಾವಳಿಯ ಬಳಿ ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಣಿಜ್ಯ ಹಡಗುಗಳ ಮೇಲೆ ಮೂರು ದಾಳಿಗಳು ನಡೆದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷರ ಈ ಇತ್ತೀಚಿನ ಹೇಳಿಕೆ ಹೊರಬಿದ್ದಿದೆ. ಈ ದಾಳಿಗಳ ಪೈಕಿ ಒಂದರಲ್ಲಿ ಮೂವರು ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡಿದ್ದರು. ಶಾಂತಿ ಒಪ್ಪಂದದ ಬಗ್ಗೆ ಇರಾನ್ ಸುಳ್ಳು ಸುದ್ದಿ ಹರಡುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಇದರ ಜೊತೆಗೆ, ಹಾರ್ಮುಜ್ ಜಲಸಂಧಿಯ ಬಳಿ ಭಾರತೀಯ ಹಡಗುಗಳನ್ನು ಗುರಿಯಾಗಿಸಿಕೊಂಡು ಇರಾನ್ ಪಡೆಗಳು ಡ್ರೋನ್ ದಾಳಿ ನಡೆಸಿವೆ ಎಂದೂ ಅಮೆರಿಕ ಅಧ್ಯಕ್ಷ ಟ್ರಂಪ್ ಆರೋಪಿಸಿದ್ದಾರೆ.

ಇರಾನ್ ಒಪ್ಪಂದದ ನಿಯಮಗಳ ಬಗ್ಗೆ ಹರಿದಾಡುತ್ತಿರುವ ವರದಿಗಳು ಸುಳ್ಳು. ಅವು ಲಿಖಿತ ರೂಪದಲ್ಲಿ ಒಪ್ಪಿಕೊಂಡಿರುವ ನಿಯಮಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಟ್ರಂಪ್ ಟ್ರುತ್ ಸೋಷಿಯಲ್‌ನಲ್ಲಿ ಪ್ರತಿಪಾದಿಸಿದ್ದಾರೆ. ಒಪ್ಪಂದದ ಕುರಿತು ಇರಾನ್ ನೀಡಿರುವ ಹೇಳಿಕೆಗಳು ಅಗೌರವಯುತ ಎಂದಿರುವ ಅವರು, ಇರಾನ್ ಅಪನಂಬಿಕೆಯಿಂದ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್; ಅಮೆರಿಕ ದಾಳಿಗೆ ಇರಾನ್ ಪ್ರತೀಕಾರ

ಹಾರ್ಮುಜ್ ಜಲಸಂಧಿಯಿಂದ ಹೊರಬರುತ್ತಿದ್ದ ಭಾರತೀಯ ಹಡಗುಗಳನ್ನು ಗುರಿಯಾಗಿಸಿಕೊಂಡು ನಡೆದ ಡ್ರೋನ್ ದಾಳಿಯ ವಿಷಯವನ್ನೂ ಟ್ರಂಪ್ ಪ್ರಸ್ತಾಪಿಸಿದ್ದಾರೆ. ಇದನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ ಎಂದು ಕರೆದಿರುವ ಅವರು, ಇಂತಹ ಕ್ರಮಗಳು ತಕ್ಷಣವೇ ನಿಲ್ಲಬೇಕು ಎಂದು ಎಚ್ಚರಿಸಿದ್ದಾರೆ. ಹಾರ್ಮುಜ್ ಜಲಸಂಧಿಯ ಬಳಿ ಭಾರತೀಯ ಸಿಬ್ಬಂದಿಯಿದ್ದ 3 ಹಡಗುಗಳ ಮೇಲೆ ತಾವು ಬಾಂಬ್ ದಾಳಿ ನಡೆಸಿರುವುದನ್ನು ಅಮೆರಿಕ ಒಪ್ಪಿಕೊಂಡ ಬೆನ್ನಲ್ಲೇ ಈ ಹೇಳಿಕೆ ಬಂದಿದೆ. ಆ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕೋರ್ಟ್ ತೀರ್ಪು ಬರೋ ಮುನ್ನವೇ ಮಡಿವಾಳ ಬಾಂಬ್ ಸ್ಫೋಟ ಕೇಸ್‌ನ ಶಂಕಿತ ಉಗ್ರ ಸಾವು – Kannada News | 2008 Madiwala bomb blast case accused And suspected terrorist Abdul Khader dies In Bengaluru Jail

ಬೆಂಗಳೂರು, (ಜೂನ್ 12): ಇನ್ನೇನು ಕೋರ್ಟ್​​​ ತೀರ್ಪು ನೀಡುವ ಮೊದಲೇ 2008ರ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ (Madiwala bomb blast case) ಆರೋಪಿ ಹಾಗೂ ಶಂಕಿತ ಉಗ್ರ (suspected terrorist)  ಸಾವನ್ನಪ್ಪಿದ್ದಾನೆ. ಅಬ್ದುಲ್ ಖಾದರ್ (60) ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಸಂಬಂಧ 2010ರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ((Parappana Agrahara Central Jail) ನ್ಯಾಯಾಂಗ ಬಂಧನದಲ್ಲಿದ್ದ ಅಬ್ದುಲ್ ಖಾದರ್‌ಗೆ ಇಂದು (ಜೂನ್ 12) ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಅಬ್ದುಲ್​ನನ್ನು ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದ್ರೆ, ಮಾರ್ಗಮಧ್ಯೆ ಹೃದಯಾಘಾತದಿಂದ ಅಬ್ದುಲ್ ಖಾದರ್ ಮೃತಪಟ್ಟಿದ್ದಾನೆ.

ಮುಖ್ಯಾಂಶಗಳು

  • ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಶಂಕಿತ ಉಗ್ರ ಸಾವು
  • ಶಂಕಿತ ಭಯೋತ್ಪಾದಕ ಅಬ್ದುಲ್ ಖಾದರ್(60) ಅನಾರೋಗ್ಯದಿಂದ ಸಾವು
  • 2008ರ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಆರೋಪಿ
  • 2010ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಅಬ್ದುಲ್ ಖಾದರ್

ಅಬ್ದುಲ್ ಖಾದರ್​​​ ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ತಕ್ಷಣ ಜೈಲು ಅಧಿಕಾರಿಗಳು ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ ಮಾರ್ಗ ಮಧ್ಯೆಯೇ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರಿಗೆ ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಬ್ದುಲ್ ಖಾದರ್ ವಿರುದ್ಧದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಅಂತಿಮ ಹಂತದಲ್ಲಿದ್ದು, ಇನ್ನೂ ಕೆಲವೇ ದಿನಗಳಲ್ಲಿ ತೀರ್ಪು ಪ್ರಕಟವಾಗುವ ಸಾಧ್ಯತೆ ಇತ್ತು. ಆದರೆ ನ್ಯಾಯಾಲಯದ ತೀರ್ಪು ಹೊರಬೀಳುವ ಮುನ್ನವೇ ಅಬ್ದುಲ್ ಖಾದರ್ ಕೊನೆಯುಸಿರೆಳೆದಿದ್ದಾನೆ.

ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆ ನಿವಾಸಿಯಾಗಿದ್ದ ಅಬ್ದುಲ್ ಖಾದರ್, 2008ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದ. ಈ ಸಂಬಂಧ ರಾಷ್ಟ್ರೀಯ ತನಿಖಾ ದಳ (NIA) ಅಬ್ದುಲ್ ಖಾದರ್ ನನ್ನು ಬಂಧಿಸಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಹಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಎಚ್​ಎಎಲ್​ಗೆಯೇ ಚಳ್ಳೆಹಣ್ಣು ತಿನಿಸಲು ಯತ್ನಿಸಿದ ಹೈದರಾಬಾದ್ ಕಂಪನಿ; ತೇಜಸ್ ಯುದ್ಧವಿಮಾನದ ಬಿಡಿಭಾಗ ಪೂರೈಕೆಯಲ್ಲಿ ವಂಚನೆ; ದೂರು ದಾಖಲು – Kannada News | HAL Exposes Tejas Mark 1A Fake Parts Scam: Tec Aero Devices Sued for Forgery

ಬೆಂಗಳೂರು, ಜೂನ್ 12: ಭಾರತದ ಲಘು ಯುದ್ಧ ವಿಮಾನ ‘ತೇಜಸ್ ಮಾರ್ಕ್-1ಎ’ (Tejas Mark-1A) ಯೋಜನೆಗೆ ಬಿಡಿಭಾಗಗಳನ್ನು ಪೂರೈಸುವ ಹೈದರಾಬಾದ್ ಮೂಲದ ‘ಟೆಕ್ ಏರೋ ಡಿವೈಸಸ್’ (Tec Aero Devices) ಕಂಪನಿಯು ನಕಲಿ ಗುಣಮಟ್ಟದ ವರದಿಗಳನ್ನು ನೀಡಿದೆ ಎಂದು ಆರೋಪಿಸಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಬೆಂಗಳೂರಿನಲ್ಲಿ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ (Cheating and Forgery) ಮೊಕದ್ದಮೆ ಹೂಡಿದೆ.

ಹೆಚ್‌ಎಎಲ್‌ನ ಏರ್‌ಕ್ರಾಫ್ಟ್ ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್ ರಾಣು ಗುಪ್ತಾ ಅವರು ನೀಡಿದ ದೂರಿನ ಆಧಾರದ ಮೇಲೆ, ಟೆಕ್ ಏರೋ ಡಿವೈಸಸ್ ಕಂಪನಿಯ ಸಿಇಒ ಎಂ. ಶಿವರಾಮ ಪ್ರಸಾದ್ ವಿರುದ್ಧ ಬೆಂಗಳೂರಿನ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಕಂಪನಿಯು ಒಟ್ಟು 172 ಬಿಡಿಭಾಗಗಳಿಗೆ ಸಂಬಂಧಿಸಿದಂತೆ 199 ನಕಲಿ ಲ್ಯಾಬ್ ಟೆಸ್ಟ್ ವರದಿಗಳನ್ನು ಸೃಷ್ಟಿಸಿ ಸಲ್ಲಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಂಧ್ರ ಕಂಪನಿಯ ಕಳ್ಳಾಟ ಪತ್ತೆಯಾಗಿದ್ದು ಹೇಗೆ?

ಹೆಚ್‌ಎಎಲ್ ಕಂಪನಿಯು ಮಾರ್ಚ್ 2022 ರಿಂದ ಸೆಪ್ಟೆಂಬರ್ 2023 ರ ನಡುವೆ ಈ ಕಂಪನಿಗೆ 18 ಪರ್ಚೇಸ್ ಆರ್ಡ್​ಗಳನ್ನು (Purchase Orders) ನೀಡಿತ್ತು. ವಿಮಾನದ ಬಿಡಿಭಾಗಗಳ ಭದ್ರತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಅದರ ಸಾಮರ್ಥ್ಯ, ಗಡಸುತನ (Hardness), ಮತ್ತು ತುಕ್ಕು ನಿರೋಧಕ ಶಕ್ತಿಯ ಮೂಲ ವರದಿಗಳನ್ನು ಹೆಚ್‌ಎಎಲ್ ಕೇಳಿತ್ತು. ಆದರೆ ಸರಬರಾಜುದಾರರು ಅಸಲಿ ದಾಖಲೆಗಳನ್ನು ನೀಡಲು ವಿಫಲರಾಗಿದ್ದಾರೆ.

ಇದನ್ನೂ ಓದಿ: ಮೇ ತಿಂಗಳಲ್ಲಿ ಬೆಲೆ ಏರಿಕೆಗೆ ಇನ್ನಷ್ಟು ವೇಗ; ರೀಟೇಲ್ ಹಣದುಬ್ಬರ ಶೇ. 3.93 ದಾಖಲು

ಅನುಮಾನಗೊಂಡ ಹೆಚ್‌ಎಎಲ್ ಅಧಿಕಾರಿಗಳು, ಟೆಕ್ ಏರೋ ಡಿವೈಸಸ್ ಹೆಸರಿಸಿದ ಹೈದರಾಬಾದ್‌ನ ‘ಆಕ್ಸಿಸ್ ಇನ್ಸ್‌ಪೆಕ್ಷನ್ ಸೊಲ್ಯೂಷನ್ಸ್’ ಎಂಬ ಟೆಸ್ಟಿಂಗ್ ಏಜೆನ್ಸಿಯಲ್ಲಿ ನವೆಂಬರ್ 2023 ರಲ್ಲಿ ಆಡಿಟ್ ನಡೆಸಿದ್ದಾರೆ. ಆಗ ಆಕ್ಸಿಸ್ ಸಂಸ್ಥೆಯು, “ನಾವು ಈ ಯಾವುದೇ ವರದಿಗಳನ್ನು ನೀಡಿಲ್ಲ, ನಮ್ಮ ಹೆಸರು ಮತ್ತು ಸಹಿಯನ್ನು ದುರುಪಯೋಗಪಡಿಸಿಕೊಂಡು ನಕಲಿ ರಿಪೋರ್ಟ್ ತಯಾರಿಸಲಾಗಿದೆ” ಎಂದು ಲಿಖಿತವಾಗಿ ಸ್ಪಷ್ಟಪಡಿಸಿದೆ.

ತಪ್ಪು ಒಪ್ಪಿಕೊಂಡ ಕಂಪನಿ

ಹೆಚ್‌ಎಎಲ್ ತನಿಖೆ ತೀವ್ರಗೊಳಿಸಿದಾಗ, ಟೆಕ್ ಏರೋ ಡಿವೈಸಸ್‌ನ ಪ್ರತಿನಿಧಿಗಳು ನವೆಂಬರ್ 22, 2023 ರಂದು ಹೆಚ್‌ಎಎಲ್‌ಗೆ ಕ್ಷಮಾಪಣಾ ಪತ್ರ ನೀಡಿದ್ದರು. ಅದರಲ್ಲಿ ತಮ್ಮ ಉದ್ಯೋಗಿಯೊಬ್ಬರು ಮಾಡಿದ ತಪ್ಪಿನಿಂದಾಗಿ ನಕಲಿ ವರದಿಗಳನ್ನು ಸಬ್ಮಿಟ್ ಮಾಡಲಾಗಿತ್ತು ಎಂದು ಒಪ್ಪಿಕೊಂಡು, ಕ್ಷಮಿಸುವಂತೆ ಕೋರಿದ್ದರು.

ಹೆಚ್‌ಎಎಲ್ ತೆಗೆದುಕೊಂಡ ಕಠಿಣ ಕ್ರಮಗಳು

  • ನಕಲಿ ವರದಿಗಳು ಸಾಬೀತಾದ ತಕ್ಷಣ ಹೆಚ್‌ಎಎಲ್ ಈ ಕಂಪನಿಯನ್ನು ತನ್ನ ಅನುಮೋದಿತ ಪೂರೈಕೆದಾರರ ಪಟ್ಟಿಯಿಂದ ತೆಗೆದುಹಾಕಿದೆ ಮತ್ತು ಮಾರ್ಚ್ 10, 2027 ರವರೆಗೆ (3 ವರ್ಷಗಳ ಕಾಲ) ವ್ಯವಹಾರ ನಡೆಸದಂತೆ ನಿಷೇಧಿಸಿದೆ.
  • ಈ ಬಿಡಿಭಾಗಗಳಿಗೆ ಸಂಬಂಧಿಸಿದಂತೆ ಹೆಚ್‌ಎಎಲ್ ಇದುವರೆಗೆ ಯಾವುದೇ ಹಣವನ್ನು (Payments) ಆ ಕಂಪನಿಗೆ ಪಾವತಿಸಿಲ್ಲ.
  • ಆಂತರಿಕ ಸಮಾಲೋಚನೆಗಳ ನಂತರ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯ ಇದಾಗಿರುವುದರಿಂದ ಕಂಪನಿ ಮತ್ತು ಅದರ ಸಿಇಒ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

ಇದನ್ನೂ ಓದಿ: ಷೇರುಬಜಾರಿನಲ್ಲಿ ಭಾರಿ ಗೂಳಿ ಓಟ; ಗರಿಬಿಚ್ಚಿದ ಸೆನ್ಸೆಕ್ಸ್, ನಿಫ್ಟಿ; ಮಾರುಕಟ್ಟೆಯ ಭರ್ಜರಿ ಆಟಕ್ಕೆ ಕಾರಣಗಳೇನು?

ಭಾರತದ ಮಿಲಿಟರಿ ಶಕ್ತಿಗೆ ಸಂಬಂಧಿಸಿದ ಘಟನೆ ಇದು…

‘ತೇಜಸ್ ಮಾರ್ಕ್-1ಎ’ ಭಾರತೀಯ ವಾಯುಪಡೆಯ ಅತ್ಯಂತ ಮಹತ್ವದ ದೇಶೀಯ ಯುದ್ಧ ವಿಮಾನ ಯೋಜನೆಯಾಗಿದೆ. ವಿಮಾನದ ಸುರಕ್ಷತೆಯಲ್ಲಿ ಬಿಡಿಭಾಗಗಳ ಗುಣಮಟ್ಟ ಅತ್ಯಂತ ಪ್ರಮುಖ ಪಾತ್ರ ವಹಿಸುವುದರಿಂದ ಈ ವಂಚನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸದ್ಯಕ್ಕೆ ಯಾವುದೇ ವಿಮಾನದ ಸುರಕ್ಷತೆಗೆ ಧಕ್ಕೆಯಾಗಿಲ್ಲ ಮತ್ತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕುತೂಹಲದ ಸಂಗತಿ ಎಂದರೆ, ಇದೇ ಹೈದರಾಬಾದ್ ಕಂಪನಿಯು ಈ ಮೊದಲು ದೊಡ್ಡ ದೊಡ್ಡ ಕಂಪನಿಗಳಿಗೆ ಇನ್ನೂ ದೊಡ್ಡ ದೊಡ್ಡ ಬಿಡಿಭಾಗಗಳನ್ನು ಪೂರೈಸಿದೆಯಂತೆ. ಅವುಗಳಲ್ಲಿಯೂ ಅದು ಗೋಲ್ಮಾಲ್ ನಡೆಸಿದ್ದಾರಾ ಇಲ್ಲವಾ ಎಂಬುದು ಗೊತ್ತಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಆರಂಭಿಕನಾಗಿ 16 ಸಾವಿರ ರನ್; ರೋಹಿತ್ ಶರ್ಮಾಗೆ ಬೇಕು ಕೇವಲ 6 ರನ್

Source link

ಉದ್ಯೋಗ ಭವಿಷ್ಯ: ಜೂನ್ 14ರಿಂದ 20ರವರೆಗೆ ಈ ರಾಶಿಯವರಿಗೆ ಸಿಗಲಿದೆ ಪ್ರಮೋಷನ್; ನಿಮ್ಮ ರಾಶಿಯ ಉದ್ಯೋಗ ಯೋಗ ಹೇಗಿದೆ? – Kannada News | June 3rd Week Job Predictions: Planetary Influences for Your Career Future

ಜೂನ್ 14ರಿಂದ ಜೂನ್‌ 20ರವರೆಗೆ ಜೂನ್ ತಿಂಗಳ ಮೂರನೇ ವಾರವಾಗಿದ್ದು ಕುಜನು ಬುಧನು ಸ್ವಕ್ಷೇತ್ರ, ಗುರುವು ಉಚ್ಚನಾಗಿ, ರಾಹುವೂ ಉನ್ನತಸ್ಥಾನದಲ್ಲಿ ಇದ್ದುದರ ಫಲವಾಗಿ ಔದ್ಯೋಗಿಕ ಶ್ರಮಕ್ಕೆ ತಕ್ಕಂತೆ ಲಾಭ, ಸ್ಥಾನಮಾನಗಳು ಬರಲಿವೆ. ಉತ್ಸಾಹದ ವಾರವಿದಾಗಲಿದೆ.

​ಮೇಷ ರಾಶಿ

​ಸ್ವಸ್ಥಾನದ ಮಂಗಳನಿಂದಾಗಿ ನಿಮ್ಮಲ್ಲಿ ಅದ್ಭುತ ಕಾರ್ಯಕ್ಷಮತೆ ಮತ್ತು ನಾಯಕತ್ವ ಗುಣಗಳು ಹೆಚ್ಚಲಿವೆ. ಹೊಸ ಜವಾಬ್ದಾರಿಗಳು ಹುಡುಕಿಕೊಂಡು ಬರುತ್ತವೆ. ಉದ್ಯೋಗದಲ್ಲಿ ನಿಮ್ಮ ನಿರ್ಧಾರಗಳಿಗೆ ಮನ್ನಣೆ ಸಿಗಲಿದೆ. ಸಹೋದ್ಯೋಗಿಗಳನ್ನು ಮುನ್ನಡೆಸಲು ಇದು ಸೂಕ್ತ ಸಮಯ.

ವೃಷಭ ರಾಶಿ

​ಬುಧ ಮತ್ತು ಸೂರ್ಯನ ಧನಸ್ಥಾನದ ಪ್ರಭಾವದಿಂದಾಗಿ ವಾಣಿಜ್ಯ ಮತ್ತು ಆರ್ಥಿಕ ಕ್ಷೇತ್ರಗಳ ಉದ್ಯೋಗಿಗಳಿಗೆ ಉತ್ತಮ ಪ್ರಗತಿ ಇದೆ. ಮಾತಿನ ಚಾತುರ್ಯದಿಂದ ಹೊಸ ವ್ಯವಹಾರಗಳು ಕೈಗೂಡಲಿವೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ.

ಮಿಥುನ ರಾಶಿ

​ನಿಮ್ಮ ರಾಶಿಯಲ್ಲೇ ಸೂರ್ಯ ಮತ್ತು ಬುಧನ ಯುತಿ ಇರುವುದರಿಂದ ಬುದ್ಧಿವಂತಿಕೆ ಮತ್ತು ಸಂವಹನ ಕಲೆಗೆ ತಕ್ಕ ಪ್ರತಿಫಲ ಸಿಗಲಿದೆ. ಐಟಿ ಹಾಗೂ ಸಂಶೋಧನಾ ವಲಯದವರಿಗೆ ಹೊಸ ಆಫರ್ ಸಿಗಬಹುದು. ಕಠಿಣ ಪರಿಶ್ರಮಕ್ಕೆ ತಕ್ಕ ಮನ್ನಣೆ ದೊರೆಯಲಿದೆ.

ಕರ್ಕಾಟಕ ರಾಶಿ

​ಗುರು ಮತ್ತು ಶುಕ್ರರ ಅನುಗ್ರಹ ನಿಮ್ಮ ರಾಶಿಯ ಮೇಲಿರುವುದರಿಂದ ಉದ್ಯೋಗದಲ್ಲಿ ಸ್ಥಿರತೆ ಇರಲಿದೆ. ಕಲಾತ್ಮಕ, ಶಿಕ್ಷಣ ಹಾಗೂ ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಬಡ್ತಿಯ ಯೋಗವಿದೆ. ದೂರದ ಪ್ರಯಾಣದಿಂದ ವೃತ್ತಿಬದುಕಿನಲ್ಲಿ ಲಾಭದಾಯಕ ಬದಲಾವಣೆಗಳು ಕಂಡುಬರಲಿವೆ.

ಸಿಂಹ ರಾಶಿ

​ಲಾಭಸ್ಥಾನದಲ್ಲಿ ಬುಧ-ಆದಿತ್ಯ ಯೋಗವಿರುವುದರಿಂದ ಉದ್ಯೋಗದಲ್ಲಿ ಉತ್ತಮ ಆದಾಯ ಹಾಗೂ ಆರ್ಥಿಕ ಪ್ರಗತಿ ಕಂಡುಬರುತ್ತದೆ. ಹೊಸ ಯೋಜನೆಗಳನ್ನು ಆರಂಭಿಸಲು ಸೂಕ್ತ ಸಮಯ. ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ಸಿಗಲಿದ್ದು, ನಿಮ್ಮ ಶ್ರಮಕ್ಕೆ ಮೇಲಧಿಕಾರಿಗಳಿಂದ ಶ್ಲಾಘನೆ ವ್ಯಕ್ತವಾಗಲಿದೆ.

ಕನ್ಯಾ ರಾಶಿ

​ಹತ್ತನೇ ಮನೆಯಲ್ಲಿ ಬುಧನ ಬಲವಿರುವುದರಿಂದ ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಯಶಸ್ಸು ಸಿಗಲಿದೆ. ಬ್ಯಾಂಕಿಂಗ್ ಮತ್ತು ಅಕೌಂಟ್ಸ್ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಜವಾಬ್ದಾರಿಗಳು ಬರಬಹುದು. ನಿಮ್ಮ ಕೌಶಲ್ಯ ಪ್ರದರ್ಶಿಸಲು ಉತ್ತಮ ಅವಕಾಶಗಳು ಸೃಷ್ಟಿಯಾಗಲಿವೆ.

ತುಲಾ ರಾಶಿ

​ಭಾಗ್ಯಸ್ಥಾನದ ಸೂರ್ಯನಿಂದಾಗಿ ಉದ್ಯೋಗದಲ್ಲಿ ಭಾಗ್ಯೋದಯವಾಗಲಿದೆ. ವಿದೇಶಿ ವಿನಿಮಯ ಅಥವಾ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ಪ್ರಗತಿ ಇರುತ್ತದೆ. ದೀರ್ಘಕಾಲದ ವೃತ್ತಿಪರ ಸಮಸ್ಯೆಗಳು ಬಗೆಹರಿದು ನೆಮ್ಮದಿ ಸಿಗಲಿದೆ. ಹೊಸ ಕೌಶಲ್ಯಗಳನ್ನು ಕಲಿಯುವಿರಿ.

​ವೃಶ್ಚಿಕ ರಾಶಿ

​ಷಷ್ಠಮದಲ್ಲಿ ಮಂಗಳನ ಸಂಚಾರವಿರುವುದರಿಂದ ಉದ್ಯೋಗದಲ್ಲಿ ಎದುರಾಗುವ ಸ್ಪರ್ಧೆ ಹಾಗೂ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವಿರಿ. ಕಠಿಣ ಪರಿಶ್ರಮದಿಂದ ಅಸಾಧ್ಯವಾದ ಕೆಲಸವನ್ನೂ ಪೂರ್ಣಗೊಳಿಸುವಿರಿ. ಆದರೆ, ಕಚೇರಿಯಲ್ಲಿ ಅನಗತ್ಯ ವಾದವಿವಾದಗಳಿಂದ ದೂರವಿರುವುದು ಒಳಿತು.

ಇದನ್ನೂ ಓದಿ: ಕೇತುವಿನ ಮೇಲಿದೆ ಕುಜನ ದೃಷ್ಟಿ: ಯಾರಿಗೆ ಒಲಿಯಲಿದೆ ಪೂರ್ಣ ರಾಜಯೋಗ? ಯಾರಿಗೆ ಧನಲಾಭ?

ಧನು ರಾಶಿ

​ಸಪ್ತಮ ಸ್ಥಾನದಲ್ಲಿ ಸೂರ್ಯ ಮತ್ತು ಬುಧನ ಪ್ರಭಾವ ಇರುವುದರಿಂದ ಜಂಟಿ ವ್ಯವಹಾರ ಹಾಗೂ ಸಾರ್ವಜನಿಕ ಸಂಪರ್ಕ ಉದ್ಯೋಗಿಗಳಿಗೆ ಲಾಭದಾಯಕವಾಗಿದೆ. ಕಚೇರಿಯಲ್ಲಿ ಗೌರವ ಮತ್ತು ಗೌರವಧನ ಹೆಚ್ಚಾಗುವ ಸಾಧ್ಯತೆ ಇದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕಲು ದಿನಗಳು ಪೂರಕವಾಗಿವೆ.

ಮಕರ ರಾಶಿ

​ಪಂಚಮದಲ್ಲಿ ಗುರು ಮತ್ತು ಶುಕ್ರರ ಶುಭ ದೃಷ್ಟಿಯಿಂದಾಗಿ ವೃತ್ತಿರಂಗದಲ್ಲಿ ನಿಮ್ಮ ಕ್ರಿಯಾಶೀಲತೆ ಹೆಚ್ಚಲಿದೆ. ಕಚೇರಿಯ ರಾಜಕೀಯದಿಂದ ದೂರವಿದ್ದು ನಿಮ್ಮ ಕೆಲಸದ ಕಡೆಗೆ ಗಮನ ಹರಿಸಿ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ತಡವಾಗಿಯಾದರೂ ಖಂಡಿತವಾಗಿಯೂ ಕೈ ಸೇರಲಿದೆ.

ಕುಂಭ ರಾಶಿ

​ಪಂಚಮ ಬುಧನಿಂದಾಗಿ ಸಲಹಾ ಕ್ಷೇತ್ರ ಹಾಗೂ ಬರವಣಿಗೆ ವೃತ್ತಿಯಲ್ಲಿರುವವರಿಗೆ ಅಪಾರ ಯಶಸ್ಸು ಸಿಗಲಿದೆ. ಉದ್ಯೋಗದಲ್ಲಿ ನಿಮ್ಮ ಐಡಿಯಾಗಳಿಗೆ ಮನ್ನಣೆ ಸಿಗಲಿದೆ. ಕೌಶಲ್ಯಾಭಿವೃದ್ಧಿಗೆ ಪೂರಕವಾದ ವಾತಾವರಣ ಇರಲಿದ್ದು, ಹೊಸ ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.

ಮೀನ ರಾಶಿ

​ನಿಮ್ಮ ರಾಶಿಯಲ್ಲಿ ಶನಿಯಿರುವುದರಿಂದ ಉದ್ಯೋಗದಲ್ಲಿ ಕೆಲಸದ ಒತ್ತಡ ಕೊಂಚ ಹೆಚ್ಚಿರಲಿದೆ. ತಾಳ್ಮೆಯಿಂದ ಕೆಲಸ ನಿರ್ವಹಿಸುವುದು ಅತ್ಯಗತ್ಯ. ಆದರೆ, ಚತುರ್ಥದ ಸೂರ್ಯ-ಬುಧರ ಪ್ರಭಾವದಿಂದಾಗಿ ಭೂ ವ್ಯವಹಾರ ಮತ್ತು ಆಡಳಿತ ವಲಯದವರಿಗೆ ಪ್ರಗತಿ ಕಂಡುಬರಲಿದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಧಾನವಾಗಿ ನಡೆಯುವುದಕ್ಕೂ ಕಿವಿ ಸರಿಯಾಗಿ ಕೇಳಿಸದಿರುವುದಕ್ಕೂ ಸಂಬಂಧವಿದೆಯೇ? – Kannada News | Hearing Loss May Affect Balance And Walking Speed, Study Suggests

ಬಹಳ ಮಂದಿ ಕೇಳುವ ಶಕ್ತಿ ಕಡಿಮೆಯಾಗುವುದು ಅಥವಾ ಕಿವಿ ಸರಿಯಾಗಿ ಕೇಳಿಸದಿರುವುದು (Hearing Loss) ಕೇವಲ ಕಿವಿಗೆ ಸಂಬಂಧಿಸಿದ ಸಮಸ್ಯೆ ಎಂದು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಕೇಳುವ ಶಕ್ತಿ ಕಡಿಮೆಯಾಗುವುದು ದೇಹದ ಸಮತೋಲನ, ನಡೆಯುವ ವೇಗ ಮತ್ತು ದೈನಂದಿನ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತದೆ. ವಿಶೇಷವಾಗಿ ವಯೋವೃದ್ಧರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಹೈದರಾಬಾದ್‌ನ ಯಶೋದ ಆಸ್ಪತ್ರೆಯ ಎಂಡೋಸ್ಕೋಪಿಕ್ ಇ ಎನ್ ಟಿ ಸ್ಪೆಷಲಿಸ್ಟ್ ಡಾ. ಕೆವಿಎಸ್‌ಎಸ್‌ಆರ್‌ಕೆ ಶಾಸ್ತ್ರಿ ಅವರು ಹೇಳುವ ಪ್ರಕಾರ, ಕಿವಿಯ ಒಳಭಾಗದಲ್ಲಿರುವ ಸಮತೋಲನ ವ್ಯವಸ್ಥೆ (Inner Ear Balance System) ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ದೇಹದ ಚಲನೆ ಮತ್ತು ಬ್ಯಾಲೆನ್ಸ್ ಮೇಲೆ ಪರಿಣಾಮ ಬೀಳುತ್ತದೆ ಎಂದಿದ್ದಾರೆ.

ಕೇಳುವ ಶಕ್ತಿ ಕಡಿಮೆಯಾದರೆ ಏನೆಲ್ಲಾ ಆಗುತ್ತದೆ?

ಸಮತೋಲನ ಕಳೆದುಕೊಳ್ಳುವ ಸಾಧ್ಯತೆ: ನಮ್ಮ ಒಳಕಿವಿಯಲ್ಲಿ ದೇಹದ ಸಮತೋಲನ ಕಾಪಾಡುವ ವಿಶೇಷ ವ್ಯವಸ್ಥೆ ಇರುತ್ತದೆ. ಕೇಳುವ ಶಕ್ತಿ ಕಡಿಮೆಯಾದಾಗ ಸುತ್ತಮುತ್ತಲಿನ ಪರಿಸರದ ಅರಿವು ಕಡಿಮೆಯಾಗುತ್ತದೆ. ಇದರಿಂದ ನಡೆಯುವಾಗ ತಡಕಾಡುವುದು, ಕೆಳಗೆ ಬೀಳುವ ಅಪಾಯ ಹೆಚ್ಚಾಗುತ್ತದೆ.

ಮೆದುಳಿನ ಮೇಲೆ ಹೆಚ್ಚುವರಿ ಒತ್ತಡ: ಸ್ಪಷ್ಟವಾಗಿ ಕೇಳಿಸದಿದ್ದರೆ ಎದುರಿನವರ ಮಾತು ಅರ್ಥಮಾಡಿಕೊಳ್ಳಲು ಮೆದುಳು ಹೆಚ್ಚು ಕೆಲಸ ಮಾಡಬೇಕು. ಇದರಿಂದ ಮಾನಸಿಕ ಹಾಗೂ ದೈಹಿಕ ದಣಿವು ಉಂಟಾಗುತ್ತದೆ. ಕ್ರಮೇಣ ಇದು ಆತ್ಮವಿಶ್ವಾಸ ಮತ್ತು ದೈಹಿಕ ಚಟುವಟಿಕೆಗಳನ್ನೂ ಕಡಿಮೆ ಮಾಡುತ್ತದೆ.

ನಿಷ್ಕ್ರಿಯ ಜೀವನಶೈಲಿ: ಕೇಳುವ ಸಮಸ್ಯೆಯಿಂದ ಕೆಲವರು ಜನರು ಇರುವ ಕಡೆ ಹೋಗುವುದನ್ನೇ ನಿಲ್ಲಿಸುತ್ತಾರೆ. ಇದರಿಂದ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ಪರಿಣಾಮವಾಗಿ ಸ್ನಾಯುಗಳು ಮತ್ತು ಸಂಧಿಗಳು ದುರ್ಬಲವಾಗಿ ನಡೆಯುವ ವೇಗ ನಿಧಾನಗೊಳ್ಳುತ್ತದೆ.

ಇದನ್ನೂ ಓದಿ: ಪ್ರತಿದಿನ ನೀವೂ ಕೂಡ ಈ ತಪ್ಪುಗಳನ್ನು ಮಾಡುತ್ತಿದ್ದರೆ ಕಿವಿ ಕೇಳಿಸದಿರಬಹುದು ಎಚ್ಚರ!

ನಡೆಯುವ ವೇಗವೂ ಆರೋಗ್ಯದ ಸೂಚನೆ:

ತಜ್ಞರ ಪ್ರಕಾರ, ಒಬ್ಬ ವ್ಯಕ್ತಿ ಎಷ್ಟು ವೇಗವಾಗಿ ನಡೆಯುತ್ತಾನೆ ಎಂಬುದು ಮೆದುಳು, ನರಮಂಡಲ, ಹೃದಯ ಮತ್ತು ಶ್ವಾಸಕೋಶಗಳ ಕಾರ್ಯಕ್ಷಮತೆಯ ಸೂಚಕವಾಗಿದೆ. ಸಂಶೋಧನೆಗಳ ಪ್ರಕಾರ, ಕೇಳುವ ಶಕ್ತಿ ಕಡಿಮೆಯಿರುವವರು ಸಾಮಾನ್ಯರಿಗಿಂತ ನಿಧಾನವಾಗಿ ನಡೆಯುವ ಸಾಧ್ಯತೆ ಹೆಚ್ಚು. ಜಾನ್ಸ್ ಹಾಪ್ಕಿನ್ಸ್ ಅಧ್ಯಯನದ ಪ್ರಕಾರ, ಸಣ್ಣ ಮಟ್ಟಿನ ಕೇಳುವ ಶಕ್ತಿ ಕುಂದಿದವರಲ್ಲಿಯೂ ಕೆಳಗೆ ಬೀಳುವ ಅಪಾಯ ಮೂರು ಪಟ್ಟು ಹೆಚ್ಚಿರುತ್ತದೆ. ಕೇಳುವ ಶಕ್ತಿ ಇನ್ನಷ್ಟು ಕುಂದಿದಂತೆ ಈ ಅಪಾಯವೂ ಹೆಚ್ಚಾಗುತ್ತದೆ.

ಸಮಸ್ಯೆಯನ್ನು ತಡೆಗಟ್ಟಲು ಏನು ಮಾಡಬೇಕು?

  • ನಿಯಮಿತವಾಗಿ ಕಿವಿ ಪರೀಕ್ಷೆ ಮಾಡಿಸಿಕೊಳ್ಳಿ
  • ಅಗತ್ಯವಿದ್ದರೆ ಹಿಯರಿಂಗ್ ಏಡ್ಸ್ ಬಳಸಿರಿ
  • ಹೆಚ್ಚು ಶಬ್ದ ಇರುವ ಸ್ಥಳಗಳಿಂದ ದೂರವಿರಿ
  • ದೈಹಿಕವಾಗಿ ಚುರುಕಾಗಿ ಇರಿ
  • ಸಮತೋಲನ ವ್ಯಾಯಾಮಗಳನ್ನು ಮಾಡಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನನಗಿಂತ ಕೆಟ್ಟವರು ಯಾರೂ ಇರುವುದಿಲ್ಲ; ಬಂಗಾಳದಲ್ಲಿ ಹಿಂಸಾಚಾರ ನಡೆಸುವವರಿಗೆ ಸಿಎಂ ಸುವೇಂದು ಅಧಿಕಾರಿ ಎಚ್ಚರಿಕೆ – Kannada News | West Bengal CM Suvendu Adhikaris tough warning on violence and vandalism in state

ಕೊಲ್ಕತ್ತಾ, ಜೂನ್ 12: ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳ ವೇಳೆ ಉಂಟಾದ ಭಾರಿ ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸ ಕೃತ್ಯಗಳ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಸುವೇಂದು ಅಧಿಕಾರಿ (Suvendu Adhikari) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ದುಷ್ಕರ್ಮಿಗಳಿಗೆ ಅತ್ಯಂತ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ. ‘ಬಂಗಾಳದಲ್ಲೂ ಕಾಶ್ಮೀರದಂತೆ ಕಲ್ಲು ತೂರಾಟ ಅಂತ್ಯವಾಗಲಿದೆ’ ಎಂದು ಹಿಂಸಾಚಾರ ನಡೆಸುವವರಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬಂಗಾಳದಲ್ಲಿ ನಡೆದ ಪ್ರತಿಭಟನೆಯೊಂದರ ಸಂದರ್ಭದಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದು, ಉದ್ರಿಕ್ತ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತ್ತು. ಈ ಘಟನೆಯಲ್ಲಿ 10 ಪೊಲೀಸರು ಮತ್ತು ಮೂವರು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (CAPF) ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದರು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಲಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಸುವೇಂದು ಅಧಿಕಾರಿ ಕಠಿಣ ಕ್ರಮಗಳ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ ಹೊಸ ಇತಿಹಾಸ: ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಇಂದು ಪ್ರಮಾಣ ವಚನ

“ಈ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರವಾಗಿ ಕಲ್ಲು ತೂರಾಟ ಮತ್ತು ಹಿಂಸಾಚಾರಗಳು ನಡೆಯುತ್ತಿದ್ದವು. ಆದರೆ ಈಗ ಅಲ್ಲಿ ಅಂತಹ ಕೃತ್ಯಗಳು ಸಂಪೂರ್ಣವಾಗಿ ನಿಂತಿವೆ. ಅದೇ ಮಾದರಿಯಲ್ಲಿ ಪಶ್ಚಿಮ ಬಂಗಾಳದಲ್ಲೂ ಇಂತಹ ಅರಾಜಕತೆ ಮತ್ತು ಕಾನೂನುಬಾಹಿರ ಕೃತ್ಯಗಳನ್ನು ಶಾಶ್ವತವಾಗಿ ಕೊನೆಗಾಣಿಸಲಾಗುವುದು” ಎಂದು ಸುವೇಂದು ಅಧಿಕಾರಿ ಕಠಿಣ ಸಂದೇಶ ರವಾನಿಸಿದ್ದಾರೆ. “ತಪ್ಪು ಮಾಡಿದರೆ ತಮ್ಮ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೆಲವರು ಭಾವಿಸಿದ್ದರು. ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ. ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಹೊಸ ಅಪರಾಧ ಕಾನೂನು (BNSS) ಚೌಕಟ್ಟಿನ ಅಡಿಯಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಕೆಲಸ ಮಾಡಲಿವೆ. ಹಿಂಸಾಚಾರ ನಡೆಸಿದ ಯಾರೊಬ್ಬರನ್ನೂ ಬಿಡುವುದಿಲ್ಲ” ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಬಳಿಕ ಮಹಾರಾಷ್ಟ್ರದಲ್ಲೂ ರಾಜಕೀಯ ಹೈಡ್ರಾಮ, ಏಕನಾಥ್ ಶಿಂಧೆ ಬಣದ ಸಂಪರ್ಕದಲ್ಲಿದ್ದಾರಾ ಶಿವಸೇನೆಯ 7 ಸಂಸದರು

ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಸುಮಾರು 40ಕ್ಕೂ ಹೆಚ್ಚು ದಂಗೆಕೋರರನ್ನು ಬಂಧಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಇತರರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಹಿಂಸಾಚಾರವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಕೊಲ್ಕತ್ತಾ ಪೊಲೀಸ್ ವ್ಯವಸ್ಥೆಯನ್ನು ಆಧುನೀಕರಿಸಲಾಗುವುದು ಮತ್ತು ಅವರಿಗೆ ಉತ್ತಮ ಮೂಲಸೌಕರ್ಯ ಹಾಗೂ ಅತ್ಯಾಧುನಿಕ ತಾಂತ್ರಿಕ ಬೆಂಬಲವನ್ನು ಒದಗಿಸಲಾಗುವುದು. ಸಾರ್ವಜನಿಕ ಶಾಂತಿಗೆ ಭಂಗ ತರುವ ಮತ್ತು ಕಾನೂನನ್ನು ಕೈಗೆತ್ತಿಕೊಳ್ಳುವ ಯಾವುದೇ ಶಕ್ತಿಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ತೃಣಮೂಲ ಕಾಂಗ್ರೆಸ್ (TMC) ನಾಯಕರು ರಾಜ್ಯದಲ್ಲಿ ನಡೆಯುತ್ತಿರುವ ಅಶಾಂತಿಗೆ ಬಿಜೆಪಿ ನಾಯಕರ ಪ್ರಚೋದನಾಕಾರಿ ಹೇಳಿಕೆಗಳೇ ಕಾರಣ ಎಂದು ಆರೋಪಿಸಿದ್ದು, ರಾಜ್ಯದಲ್ಲಿ ರಾಜಕೀಯ ಸಂಘರ್ಷ ಮುಂದುವರಿದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:31 pm, Fri, 12 June 26

Source link

ಪಾಠ ಕೇಳುವಾಗಲೇ ವಿದ್ಯಾರ್ಥಿನಿಯರ ಮೇಲೆ ಕುಸಿದ ಕಾಲೇಜು ಕಟ್ಟಡದ ಮೇಲ್ಛಾವಣಿಯ ಪ್ಲಾಸ್ಟರ್: ತಪ್ಪಿದ ಭಾರಿ ಅನಾಹುತ – Kannada News | Ceiling Plaster Collapses During Class at Kalaburagi Government Girls PU College; 5 Injured

ಕುಸಿದ ಕಾಲೇಜು ಕಟ್ಟಡದ ಮೇಲ್ಛಾವಣಿಯ ಪ್ಲಾಸ್ಟರ್Image Credit source: Tv9 Kannada

ಕಲಬುರಗಿ, ಜೂನ್​​ 12: ಪಾಠ ಕೇಳುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಕಾಲೇಜು ಕಟ್ಟಡದ ಮೇಲ್ಛಾವಣಿಯ ಪ್ಲಾಸ್ಟರ್​​ ಕುಸಿದಿರುವ ಆಘಾತಕಾರಿ ಘಟನೆ ಕಲಬುರಗಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ. ಘಟನೆ ವೇಳೆ 80ಕ್ಕೂ ಅಧಿಕ ಯುವತಿಯರು ಕೊಠಡಿಯಲ್ಲಿದ್ದರು ಎನ್ನಲಾಗಿದ್ದು, ಅದೃಷ್ಟವಶಾತ್​​ ಸಂಭವನೀಯ ಭಾರಿ ಅನಾಹುತವೊಂದು ತಪ್ಪಿದೆ. ಐವರು ವಿದ್ಯಾರ್ಥಿಗಳಿಗೆ ಈ ವೇಳೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗ್ತಿದೆ.

ಈ ಕಾಲೇಜಿನಲ್ಲಿ ಸುಮಾರು 2 ಸಾವಿರ ಜನ ವಿದ್ಯಾರ್ಥಿನಿಯರಿದ್ದು, ಬಹುತೇಕ ಗ್ರಾಮೀಣ ಭಾಗದ ಹೆಣ್ಣು ಮಕ್ಕಳೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹೀಗಿದ್ದರೂ ಕಾಲೇಜಿನ ಕಟ್ಟಡವೇ ವಿದ್ಯಾರ್ಥಿನಿಗಳ ಪಾಲಿಗೆ ಕಂಟಕವಾಗಿ ಮಾರ್ಪಟ್ಟಿದೆ. ಇಂದು ಬೆಳಗ್ಗೆ ಎಂದಿನಂತೆ ಪಿಯುಸಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಕ್ಲಾಸ್ ರೂಮ್​​ಗೆ ಬಂದಿದ್ದರು. ಕೊಠಡಿಗೆ ಬಂದ ಪ್ರಾಧ್ಯಾಪಕರೂ ಪಾಠ ಶುರುಮಾಡಿದ್ದರು. ಈ ವೇಳೆ ಏಕಾ ಏಕಿ ಮೇಲ್ಛಾವಣಿಯ ಪ್ಲಾಸ್ಟರ್​​ ಕುಸಿದಿದ್ದು, ಘಟನೆಯಲ್ಲಿ ಪೂಜಾ, ಶೀತಲ್, ಸೃಷ್ಟಿ, ಸ್ನೇಹಾ ಹಾಗೂ ದಿವ್ಯಾ ಎಂಬ ಐದು ಜನ ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಕೂಡಲೇ ಕಲಬುರಗಿಯ ಜಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಟ್ರಾಮಾ ಕೇರ್‌ ಸೆಂಟರ್​​ಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಲಂಚ ಪಡೆಯುತ್ತಿದ್ದಾಗ ರೆಡ್​ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಎಎಸ್​ಐ, ಕಾನ್​ಸ್ಟೇಬಲ್

8 ವರ್ಷಗಳ ಹಿಂದಷ್ಟೇ ನಿರ್ಮಿಸಿರುವ ಕಟ್ಟಡ

ಇನ್ನು ಈ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ನಿರ್ಮಾಣ ಮಾಡಿ ಇನ್ನೂ 8 ವರ್ಷಗಳೂ ಕಳೆದಿಲ್ಲ. ಹೀಗಿದ್ದರೂ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಈ ಹಿಂದೆಯೂ ಇದೇ ರೀತಿ ಪ್ಲಾಸ್ಟರ್​​ ಕುಸಿದಿತ್ತು. ಆದರೆ ಆ ಸಮಯದಲ್ಲಿ ಕೊಠಡಿಯಲ್ಲಿ ಯಾರು ಇಲ್ಲದ ಕಾರಣ ಅನಾಹುತ ತಪ್ಪಿತ್ತು. ಈಗ ಅದೇ ರೂಂನ ಪಕ್ಕದ ಕೊಠಡಿಯಲ್ಲಿ ಘಟನೆ ನಡೆದಿದೆ. ಬಹುತೇಕ ಕ್ಲಾಸ್​​ ರೂಂಗಳ ಸ್ಥಿತಿ ಹೀಗೆ ಇರುವ ಕಾರಣ ವಿದ್ಯಾರ್ಥಿನಿಯರು ಜೀವ ಕೈಯಲ್ಲಿ ಹಿಡಿದೇ ಪಾಠ ಕೇಳಬೇಕಾದ ಸ್ಥಿತಿ ಇಲ್ಲಿನದು. ಹೀಗಾಗಿ ಸಂಬಂಧಪಟ್ಟವರು ಈ ಸಂಬಂಧ ತುರ್ತಾಗಿ ಎಚ್ಚೆತ್ತುಕೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ತನಿಖೆಗೆ ಶಾಸಕರ ಆಗ್ರಹ

ಘಟನೆ ಬೆನ್ನಲ್ಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿರುವ ಶಾಸಕ ಅಲ್ಲಮಪ್ರಭು ಪಾಟೀಲ್‌, ಕಾಲೇಜು ಕಟ್ಟಡದ ಕಾಮಗಾರಿ ಸಂಬಂಧ ತನಿಖೆಗೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link