Category Archives: Blog

Your blog category

ರಘು ಅವಕಾಶವಾದಿನಾ? ಇನ್​​ಸ್ಟಾ ಅನ್​ಫಾಲೋ ಮಾಡಿದ ಹಿಂದಿನ ಕಾರಣ ಹೇಳಿದ ಗಿಲ್ಲಿ ನಟ – Kannada News | Gilli Nata Clarifies To Why Raghu unfollow On Instagram

ನಟ ರಘು ಹಾಗೂ ಗಿಲ್ಲಿ ನಟ ಅವರು ಬಿಗ್ ಬಾಸ್ ಅಲ್ಲಿ ಸಾಕಷ್ಟು ಸುದ್ದಿ ಆದವರು. ಇಬ್ಬರೂ ಕೆಲವು ದಿನ ಒಟ್ಟಿಗೆ ಇದ್ದರು. ಇನ್ನೂ ಕೆಲವು ದಿನ ಕಿತ್ತಾಡಿಕೊಳ್ಳುತ್ತಿದ್ದನ್ನು ನೋಡಬಹುದು. ರಘು ಅವರು ಎಷ್ಟೇ ದ್ವೇಷ ತೋರಿಸಿದರೂ ಗಿಲ್ಲಿ ನಟ ಪ್ರೀತಿಯನ್ನೇ ಕೊಡುತ್ತಿದ್ದರು. ಬಿಗ್ ಬಾಸ್​ನಿಂದ ಹೊರ ಬಂದ ಬಳಿಕವೂ ಗಿಲ್ಲಿ ಹಾಗೂ ರಘು ಒಟ್ಟಾಗಿಯೇ ಇದ್ದರು. ರಘು ಅವರು ಈಗ ಗಿಲ್ಲಿಯನ್ನು ಅನ್​ಫಾಲೋ ಮಾಡಿದ್ದಾರೆ. ಈ ಬಗ್ಗೆ ಚರ್ಚೆ ನಡೆದಿದ್ದು ಗೊತ್ತೇ ಇದೆ. ಈ ವಿಷಯದ ಕುರಿತಂತೆ ಗಿಲ್ಲಿ ನಟ ಅವರು ಮಾತನಾಡಿದ್ದಾರೆ.

ಗಿಲ್ಲಿ ಅವರ ಮನಸ್ಸು ಹೇಗಿದೆ ಎಂಬುದನ್ನು ಮತ್ತೆ ಬಿಡಿಸಿ ಹೇಳಬೇಕಿಲ್ಲ. ಬಿಗ್ ಬಾಸ್ ಮನೆಯ ಒಳಗೆ ಇರಲಿ ಅಥವಾ ಹೊರಗೆ ಇರಲಿ ಅವರು ಎಂದಿಗೂ ಗಿಲ್ಲಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು ಕಾಣಿಸಿಯೇ ಇಲ್ಲ. ಈಗಲೂ ಅವರು ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ ಎಂದೇ ಹೇಳಬಹುದು. ಈಗ ಅನ್​​ಫಾಲೋ ಬಗ್ಗೆಯೂ ಅವರು ಜಾಗರೂಕವಾಗಿಯೇ ಮಾತನ್ನು ಆಡಿದ್ದಾರೆ.

‘ಅವರು ಏಕೆ ಅನ್​ಫಾಲೋ ಮಾಡಿದ್ರು ಅನ್ನೋದು ನಿಜಕ್ಕೂ ಗೊತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲೇ ಗೊತ್ತಾಗಿದ್ದು. ನಾನು ಸೋಶಿಯಲ್ ಮೀಡಿಯಾ ಬಳಸಲ್ಲ. ಪೋಸ್ಟ್​ ಮಾಡೋದಲ್ಲ ಮಾಡಲ್ಲ. ಅವರು ಫಾಲೋ ಮಾಡಿರ್ತಾರೆ, ನಾನು ಫಾಲೋ ಬ್ಯಾಕ್ ಮಾಡಿಲ್ಲ ಎಂದು ಅನ್​​ಫಾಲೋ ಮಾಡಿರಬಹುದು’ ಎಂದು ಗಿಲ್ಲಿ ನಟ ಹೇಳಿದ್ದಾರೆ.

ಇದನ್ನೂ ಓದಿ: ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಗಿಲ್ಲಿ ನಟ, ಅಶ್ವಿನಿ ಗೌಡ

ರಘು ಅವರು ಅವಕಾಶವಾದಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ. ಈ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ. ‘ರಘು ಅವರು ಮಗುವಿನ ರೀತಿಯ ಮನಸ್ಸು ಹೊಂದಿರುವವರು. ಅವರು ಯಾವಾಗಲೂ ಆ ರೀತಿ ಮಾಡಿದವರಲ್ಲ. ಅವರ ದೇಹಕ್ಕೂ ವೈಕ್ತಿತ್ವಕ್ಕೂ ಸಂಬಂಧವೇ ಇಲ್ಲ’ ಎಂದು ಒಳ್ಳೆಯ ಮಾತನ್ನು ಆಡಿದರು.
ಬಿಗ್ ಬಾಸ್ ಮನೆಯಲ್ಲಿ ರಘು ಅವರು ಚಪಾತಿ ಕೊಡದೆ ಇರುವುದು ಸಾಕಷ್ಟು ಚರ್ಚೆ ಆಗಿತ್ತು. ಆ ಬಗ್ಗೆ ಹೊರಗೆ ಬಂದ ಬಳಿಕ ರಘು ಅಚ್ಚರಿ ಹೊರಹಾಕಿದ್ದನ್ನು ನೀವು ನೋಡಬಹುದು. ಅದಕ್ಕೂ ಮೊದಲು ಅವರಿಗೆ ನಾನು ಮೂರು ರೊಟ್ಟಿ ಚಪಾತಿ ಕೊಟ್ಟಿದ್ದೆ ಎಂದು ಹೇಳಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:42 am, Thu, 26 February 26

Source link

Video: ಮಹಿಳೆಯಿಂದ ಹೆಚ್ಚುವರಿ ಹಣ ಪಡೆದು ಟಿಕೆಟ್ ಕೊಡದೆ ಕಳಿಸಿದ ರೈಲ್ವೆ ಬುಕಿಂಗ್ ಸಿಬ್ಬಂದಿ – Kannada News | Woman Claims Overcharging and Denial of Ticket at Delhi Railway Counter in Anand Vihar

ನವದೆಹಲಿ, ಫೆಬ್ರವರಿ 26: ರೈಲ್ವೆ ಟಿಕೆಟ್​ ಕೌಂಟರ್​​ನಲ್ಲಿರುವ  ಸಿಬ್ಬಂದಿ​ ಮಹಿಳೆಯಿಂದ ಹೆಚ್ಚುವರಿ ಹಣ ಪಡೆದು, ಟಿಕೆಟ್ ಕೂಡ ಕೊಡದೆ ಕಳುಹಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬಡ ಮಹಿಳೆಯೊಬ್ಬರು ರೈಲ್ವೆ ಟಿಕೆಟ್​ಗಾಗಿ ಬುಕಿಂಗ್ ಕ್ಲರ್ಕ್​​ಗೆ ಸಾವಿರ ರೂ. ನೀಡಿದ್ದರು. ಅವರಿಗೆ ಯಾವುದೇ ಟಿಕೆಟ್ ಕೊಡದೆ, 200 ರೂ. ಅವರಿಟ್ಟುಕೊಂಡು 800 ರೂ.ವಾಪಸ್ ಕೊಟ್ಟಿದ್ದಾರೆ.

ರೈಲ್ವೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಕೌಂಟರ್​​ನಲ್ಲಿ ಟಿಕೆಟ್ ಕೇಳಿದರೂ ಕೊಡದೆ ವಾಪಸ್ ಕಳುಹಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಆಕೆ 112ಕ್ಕೆ ಕರೆ ಮಾಡಿದರೂ ಕೂಡಲೇ ಸಹಾಯಕ್ಕೆ ಬರಲಿಲ್ಲ ಎಂದು ಆಕೆ ದೂರಿದ್ದಾರೆ. ಆಕೆ ಬಡ ಮಹಿಳೆ ಧ್ವನಿ ಎತ್ತುವುದಿಲ್ಲ ಎಂದು ಭಾವಿಸಿರಬೇಕು, ಇದು 200 ರೂ. ಪ್ರಶ್ನೆಯಲ್ಲ, ಇದು ದುರಹಂಕಾರ, ಶೋಷಣೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡಲೇ ಪರಿಶೀಲಿಸಬೇಕು, ಸಿಬ್ಬಂದಿಯನ್ನು ಅಮಾನತುಗೊಳಿಸಿ ಎಂದು ಒತ್ತಾಯಿಸಲಾಗುತ್ತಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

ದ್ವಿತೀಯ ಪಿಯು ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಆತಂಕ: ಪ್ರಶ್ನೆ ಪತ್ರಿಕೆ ಬೇಕಾದರೆ ಮೆಸೇಜ್ ಮಾಡಿ ಎಂಬ ಪೋಸ್ಟ್ ವೈರಲ್! – Kannada News | Karnataka PUC Paper Leak Fear: Students and Parents Warned Against Online Scams

ಬೆಂಗಳೂರು, ಫೆ.26: ಫೆಬ್ರವರಿ 28ರಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು (PUC exam 2026) ಆರಂಭವಾಗಲಿವೆ. ಆದರೆ, ಪರೀಕ್ಷೆಗೆ ಕೇವಲ ಎರಡು ದಿನ ಬಾಕಿ ಇರುವಾಗ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಶ್ನೆ ಪತ್ರಿಕೆ ಮಾರಾಟದ ಬಗ್ಗೆ ಪೋಸ್ಟ್ ಒಂದು ಹರಿದಾಡುತ್ತಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ‘ಡಾ. ಕನ್ನಡಿಗ’ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಿಡಿಗೇಡಿಯೊಬ್ಬ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡುವುದಾಗಿ ಪೋಸ್ಟ್ ಮಾಡಿದ್ದಾನೆ. “ಯಾವುದಾದರೂ ಪ್ರಶ್ನೆ ಪತ್ರಿಕೆ ಬೇಕು ಅಂದ್ರೆ ಮೆಸೇಜ್ ಮಾಡಿ. ಅಮೌಂಟ್ ಎಷ್ಟು ಅಂತ ಆಮೇಲೆ ಹೇಳ್ತಿನಿ” ಎಂದು ಈ ಕಿಡಿಗೇಡಿ ಬರೆದುಕೊಂಡಿದ್ದಾನೆ. ಇದೀಗ ಘಟನೆ ವಿದ್ಯಾರ್ಥಿಗಳಿಗೆ ಭಯ ಹುಟ್ಟಿಸಿದೆ. ಹಾಗೂ ಪರೀಕ್ಷಾ ಮಂಡಳಿಯ ಕೂಡ ಆತಂಕಕ್ಕೆ ಕಾರಣವಾಗಿದೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಕಷ್ಟಪಟ್ಟು ಓದುತ್ತಿರುವ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಬಹುದೇ ಎಂಬ ಭಯದಲ್ಲಿದ್ದಾರೆ. ಆದರೆ, ಈ ಕಿಡಿಗೇಡಿ ಯಾವ ವಿಷಯದ ಪ್ರಶ್ನೆ ಪತ್ರಿಕೆ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಪರೀಕ್ಷೆಯ ಸಮಯದಲ್ಲಿ ಇಂತಹ ಕಿಡಿಗೇಡಿಗಳು ಹಣ ಮಾಡುವ ಉದ್ದೇಶದಿಂದ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಥವಾ ನಕಲಿ ಪತ್ರಿಕೆಗಳನ್ನು ನೀಡಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಸಾಧ್ಯತೆ ಹೆಚ್ಚು. ಇಂತಹ ಜಾಲಗಳಿಗೆ ಸಿಲುಕಿ ಹಣ ಕಳೆದುಕೊಳ್ಳಬೇಡಿ ಮತ್ತು ನಿಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಇಲಾಖೆ ಹೇಳಿದೆ.

ಇದನ್ನೂ ಓದಿ: GST ಆಫೀಸರ್ ಹೆಸರಲ್ಲಿ ಲಕ್ಷ ಲಕ್ಷ ದೋಚಿದ ಹೌಸ್ ಕೀಪಿಂಗ್ ಸಿಬ್ಬಂದಿ! ಗುಟ್ಕಾ ವ್ಯಾಪಾರಿಗೆ ಬೆದರಿಸಿ ವಂಚನೆ

ಇನ್ನು ಇಂತಹ ಅನೇಕ ಘಟನೆಗಳು ರಾಜ್ಯದಲ್ಲಿ ಕಂಡು ಬರುತ್ತಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆಯುತ್ತಿದ್ದ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯ ಗಣಿತ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಅಧಿಕಾರಿಗಳಿಗೆ ದೊಡ್ಡ ಆಘಾತ ನೀಡಿತ್ತು. ಜನವರಿ 6, 2026 ರಂದು ಗಣಿತ ಪರೀಕ್ಷೆ ನಡೆಯುತ್ತಿದ್ದಾಗ ಈ ವಿಷಯ ಬೆಳಕಿಗೆ ಬಂದಿದೆ. ಶಿವಮೊಗ್ಗದ ಕಾಲೇಜುಗಳಿಗೆ ನೀಡಲಾಗಿದ್ದ ಪ್ರಶ್ನೆ ಪತ್ರಿಕೆಯ ಪ್ರತಿಯು ಪರೀಕ್ಷೆ ಆರಂಭವಾಗುವ ಮೊದಲೇ ವಾಟ್ಸಾಪ್ ಮೂಲಕ ಹರಿದಾಡಿತ್ತು. ಶಿವಮೊಗ್ಗದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (DDPUE) ಕಾಲೇಜುಗಳಿಗೆ ಭೇಟಿ ನೀಡಿದಾಗ ಈ ವಿಚಾರ ಗೊತ್ತಾಗಿದೆ. ಶಿವಮೊಗ್ಗ ಜಿಲ್ಲೆಯ ಕೋಡ್ ಹೊಂದಿದ್ದ ಪ್ರಶ್ನೆ ಪತ್ರಿಕೆಯು ತುಮಕೂರು ಜಿಲ್ಲೆಯಲ್ಲೂ ಚಲಾವಣೆಯಲ್ಲಿರುವುದು ಕಂಡುಬಂದಿದೆ. ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊರೆಯಾಗುತ್ತಿದ್ದರೂ ಗ್ಯಾರಂಟಿ ಕೊಡುತ್ತಿದ್ದೇವೆ, ಕೊಡುತ್ತೇವೆ: ಡಿಕೆಶಿ, ಸಿದ್ದರಾಮಯ್ಯ ಮಾತಿನ ಮರ್ಮ ಏನು? – Kannada News | Are Karnataka’s Guarantee Schemes a Financial Burden? DK Shivakumar and Siddaramaiah Clarify Amid Budget Debate

ಬೆಂಗಳೂರು, ಫೆಬ್ರವರಿ 26: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯಕ್ಕೆ ಆರ್ಥಿಕ ಹೊರೆಯಾಗಿದೆ ಎಂಬುದನ್ನು ಕೊನೆಗೂ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡರೇ? ಇಬ್ಬರೂ ಆಡಿರುವ ಮಾತುಗಳು ಇದಕ್ಕೆ ಪುಷ್ಟಿ ನೀಡಿವೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹೊರೆಯಾಗುತ್ತಿದ್ದರೂ, ಅವು ಜನರಿಗೆ ಆರ್ಥಿಕ ಬಲವನ್ನು ನೀಡಿವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ವರ್ಷಕ್ಕೆ 52 ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು ಮೊತ್ತವನ್ನು ಗ್ಯಾರಂಟಿಗಳಿಗಾಗಿ ಕೊಡಲಾಗುತ್ತಿದೆ, ಅದು ಬರ್ಡನ್ ಎಂದು ಅವರು ಹೇಳಿರಬಹುದು ಅಷ್ಟೆ. ಹಾಗಂತ ನಾವು ಗ್ಯಾರಂಟಿಗಳಿಗೆ ಅನುದಾನ ನಿಲ್ಲಿಸಿಲ್ಲ. ಗ್ಯಾರಂಟಿ ಯೋಜನೆಗಳಿಗೆ 1.20 ಲಕ್ಷ ಕೋಟಿ ರೂಪಾಯಿಗಳನ್ನು ಈಗಾಗಲೇ ಮೀಸಲಿಡಲಾಗಿದೆ ಮತ್ತು ಅಭಿವೃದ್ಧಿ ಕಾರ್ಯಗಳು ಮುಂದುವರಿಯಲಿವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಚಿತ್ರಕ್ಕೆ ‘UA’ ಸರ್ಟಿಫಿಕೇಟ್? ಇಲ್ಲಿದೆ ಅಸಲಿಯತ್ತು – Kannada News | Is Really Ravnveer Singh Dhurandhar 2 Movie Got UA Certificate here is the truth

ರಣವೀರ್ ಸಿಂಗ್ ಅವರ ‘ಧುರಂಧರ್’ ಚಿತ್ರದ ಭಾರಿ ಯಶಸ್ಸಿನ ನಂತರ, ಅವರ ಚಿತ್ರದ ಮುಂದುವರಿದ ಭಾಗದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಡಿಸೆಂಬರ್ 2025ರಲ್ಲಿ ಬಿಡುಗಡೆಯಾದ ‘ಧುರಂಧರ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ಗಳಿಸುವ ಮೂಲಕ ದಾಖಲೆ ನಿರ್ಮಿಸಿತು. ಇದರಿಂದಾಗಿ, ‘ಧುರಂಧರ್ 2’ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಈ ಚಿತ್ರದ ಎರಡನೇ ಭಾಗಕ್ಕೆ ಸೆನ್ಸಾರ್ ಆಗಿದೆ ಮತ್ತು ಕೆಲವು ದೃಶ್ಯಗಳನ್ನು ಕತ್ತರಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿತ್ತು. ಈ ಸುದ್ದಿ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿತ್ತು. ಆದರೆ, ಸದ್ಯದ ಮಾಹಿತಿ ಪ್ರಕಾರ, ಇದು ಫೇಕ್ ಎನ್ನಲಾಗಿದೆ.

ನಿರ್ದೇಶಕ ಆದಿತ್ಯ ಧಾರ್ ಅವರ ‘ಧುರಂಧರ್ 2’ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವಿದೆ. ಈ ಚಿತ್ರವು ಮಾರ್ಚ್ 19ರಂದು ಬಿಡುಗಡೆಯಾಗಲಿದೆ. ಇದರಿಂದಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ವದಂತಿಗಳು ಮತ್ತು ಹಕ್ಕುಗಳು ವೇಗವಾಗಿ ಹರಡುತ್ತಿವೆ. ಅದೇ ರೀತಿ, ಚಿತ್ರದ ಸೆನ್ಸಾರ್ ಪ್ರಮಾಣಪತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅನೇಕರು ಅದನ್ನು ನಂಬಿದ್ದರು. ಆದಾಗ್ಯೂ, ಈ ಪ್ರಮಾಣಪತ್ರದ ಹಿಂದಿನ ಸತ್ಯ ಬೇರೆಯೇ ಆಗಿದೆ. ವಾಸ್ತವವಾಗಿ, ‘ಧುರಂಧರ್ 2’ ಅನ್ನು ಇನ್ನೂ ಸೆನ್ಸಾರ್ ಮಂಡಳಿಗೆ ಕಳುಹಿಸಲಾಗಿಲ್ಲ.

ಚಿತ್ರದ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ, ಸೆನ್ಸಾರ್‌ಶಿಪ್ ಪ್ರಶ್ನೆಯೇ ಉದ್ಭವಿಸುವುದಿಲ್ಲ. ವೈರಲ್ ಆಗುತ್ತಿರುವ ಪ್ರಮಾಣಪತ್ರ ನಕಲಿ ಎಂದು ಸ್ಪಷ್ಟಪಡಿಸಲಾಗಿದ್ದು, ಅಭಿಮಾನಿಗಳು ಇಂತಹ ವದಂತಿಗಳನ್ನು ನಂಬಬೇಡಿ ಎಂದು ಮನವಿ ಮಾಡಲಾಗುತ್ತಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಪ್ರಮಾಣಪತ್ರ ಸುಳ್ಳು. ‘ಧುರಂಧರ್ 2’ ಚಿತ್ರಕ್ಕೆ A ಬದಲಿಗೆ UA 16+ ನೀಡಲಾಗಿದೆ ಎಂದು ಜನರು ಹೇಳಿದ್ದರು. ಮಾಧ್ಯಮ ವರದಿಗಳ ಪ್ರಕಾರ, ವೈರಲ್ ಆಗುತ್ತಿರುವ ಆನ್‌ಲೈನ್ ಪ್ರಮಾಣಪತ್ರವು ಚಿತ್ರದ ಮುಂದುವರಿದ ಭಾಗದದ್ದಲ್ಲ. ಕಳೆದ ವಾರದವರೆಗೂ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಮೊದಲ ಭಾಗ ಬಿಡುಗಡೆಯಾದಾಗ ಎ ಪ್ರಮಾಣಪತ್ರವನ್ನು ಪಡೆದಿತ್ತು, ಆದರೆ ಈಗ ಅದನ್ನು ಟಿವಿಯಲ್ಲಿ ತೋರಿಸಲು ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಇದನ್ನೂ ಓದಿ: ‘ಧುರಂಧರ್ 2’ ಬಿಡುಗಡೆಗೂ ಮುನ್ನ ನಟ ರಣವೀರ್ ಸಿಂಗ್​​ಗೆ ಬೆದರಿಕೆ

ನಿಯಮಗಳ ಪ್ರಕಾರ, ಟಿವಿಯಲ್ಲಿ ಚಿತ್ರವನ್ನು ಪ್ರದರ್ಶಿಸುವಾಗ, ಕೆಲವು ದೃಶ್ಯಗಳನ್ನು ಕತ್ತರಿಸಿ, ಅಸಭ್ಯ ಪದಗಳನ್ನು ಮ್ಯೂಟ್ ಮಾಡಬೇಕಾಗುತ್ತದೆ. ಇದು ಟಿವಿ ಆವೃತ್ತಿಯನ್ನು ಮಾಡುವಾಗ ಚಿತ್ರದ ರನ್-ಟೈಮ್ ಅನ್ನು 208 ನಿಮಿಷಗಳಿಗೆ ಇಳಿಸಿತು ಮತ್ತು ಅದು UA 16+ ಪ್ರಮಾಣಪತ್ರವನ್ನು ಪಡೆದುಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

45 ಎಸೆತಗಳಲ್ಲಿ ಪಾಕಿಸ್ತಾನ್ ತಂಡದ ಸೆಮಿಫೈನಲ್ ಭವಿಷ್ಯ – Kannada News | Pakistan semi final qualification scenario

T20 World Cup 2025: ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನ ಗ್ರೂಪ್-2 ರಿಂದ ಇಂಗ್ಲೆಂಡ್ ತಂಡವು ಸೆಮಿಫೈನಲ್​ಗೆ ಪ್ರವೇಶಿಸಿದರೆ, ಶ್ರೀಲಂಕಾ ತಂಡವು ಎಲಿಮಿನೇಟ್ ಆಗಿದೆ. ಇದೀಗ ದ್ವಿತೀಯ ತಂಡವಾಗಿ ಸೆಮಿಫೈನಲ್​ಗೇರಲು ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಪೈಪೋಟಿಯಲ್ಲಿ ನಿರ್ಣಾಯಕ ಪಾತ್ರವಹಿಸುವುದು ಇಂಗ್ಲೆಂಡ್ ಎಂಬುದು ವಿಶೇಷ.

ಅಂದರೆ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ಅನ್ನು ಮಣಿಸಿದರೆ ಮಾತ್ರ ಪಾಕಿಸ್ತಾನ್ ತಂಡಕ್ಕೆ ಸೆಮಿಫೈನಲ್​ಗೇರಲು ಅವಕಾಶ ದೊರೆಯಲಿದೆ. ಹೀಗಾಗಿ ಪಾಕ್ ತಂಡವು ಇಂಗ್ಲೆಂಡ್ ತಂಡದ ಗೆಲುವನ್ನು ಎದುರು ನೋಡಲಿದೆ.

ಒಂದು ವೇಳೆ ಇಂಗ್ಲೆಂಡ್ ತಂಡ ಗೆದ್ದರೂ ಪಾಕಿಸ್ತಾನ್ ತಂಡಕ್ಕೆ ನೇರವಾಗಿ ಸೆಮಿಫೈನಲ್​ಗೇರಲು ಅವಕಾಶ ದೊರೆಯುವುದಿಲ್ಲ. ಬದಲಾಗಿ ಶ್ರೀಲಂಕಾ ವಿರುದ್ಧ ಅಮೋಘ ಜಯ ಸಾಧಿಸಿ ನೆಟ್ ರನ್ ರೇಟ್ ಅನ್ನು ಹೆಚ್ಚಿಸಿಕೊಳ್ಳಲೇಬೇಕು. ಹಾಗಿದ್ರೆ ಪಾಕ್ ತಂಡದ ಸೆಮಿಫೈನಲ್ ಹಾದಿಯ ಲೆಕ್ಕಾಚಾರ ಹೇಗಿದೆ ಎಂದು ನೋಡುವುದಾದರೆ…

  • ನೆಟ್ ರನ್ ರೇಟ್: ಫೆಬ್ರವರಿ 27 ರಂದು ನಡೆಯುವ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ಅನ್ನು ಸೋಲಿಸಲೇಬೇಕು. ಆಗ ನ್ಯೂಜಿಲೆಂಡ್ 3 ಅಂಕಗಳಲ್ಲೇ ಉಳಿಯುತ್ತದೆ. ನಂತರ ಫೆಬ್ರವರಿ 28 ರಂದು ಪಾಕಿಸ್ತಾನವು ಶ್ರೀಲಂಕಾವನ್ನು ಸೋಲಿಸಿದರೆ, ಪಾಕಿಸ್ತಾನ್ ಕೂಡ 3 ಅಂಕಗಳನ್ನು ಪಡೆಯುತ್ತದೆ.
  • ಸವಾಲು: ನ್ಯೂಝಿಲೆಂಡ್ ತಂಡವು ಅತ್ಯುತ್ತಮ NRR (+3.050) ಹೊಂದಿದೆ. ಪಾಕಿಸ್ತಾನವು (-0.461) ಇದನ್ನು ಮೀರಿಸಲು ಸುಮಾರು 70 ರಿಂದ 80 ರನ್‌ಗಳ ಅಂತರದ ಗೆಲುವು ಸಾಧಿಸಬೇಕಾಗುತ್ತದೆ.
  • ಉದಾಹರಣೆ: ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ತಂಡವನ್ನು 40 ರನ್‌ಗಳಿಂದ ಸೋಲಿಸಿದರೆ, ಪಾಕಿಸ್ತಾನವು ಶ್ರೀಲಂಕಾ ವಿರುದ್ಧ ಸುಮಾರು 30 ರನ್‌ಗಳಿಂದ ಗೆಲ್ಲಬೇಕು (ಪಾಕಿಸ್ತಾನ್ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಗಳಿಸಿದರೆ).
  • ಅರ್ಹತೆ: ನ್ಯೂಝಿಲೆಂಡ್ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತು, ಪಾಕಿಸ್ತಾನವು ಶ್ರೀಲಂಕಾವನ್ನು ಭಾರಿ ಅಂತರದಿಂದ ಸೋಲಿಸಿದರೆ ಮಾತ್ರ ನೆಟ್ ರನ್ ರೇಟ್​ ಆಧಾರದಲ್ಲಿ 2ನೇ ತಂಡವಾಗಿ ಸೆಮಿಫೈನಲ್​ಗೆ ಅರ್ಹತೆ ಪಡೆಯಲಿದೆ.

ಪಾಕ್ ತಂಡದ ಚೇಸಿಂಗ್ ಲೆಕ್ಕಾಚಾರ:

ಒಂದು ವೇಳೆ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿ ನ್ಯೂಝಿಲೆಂಡ್ ತಂಡವನ್ನು ಸುಮಾರು 40 ರನ್‌ಗಳಿಂದ ಸೋಲಿಸಿದೆ ಎಂದು ಭಾವಿಸೋಣ. ಆಗ ಪಾಕಿಸ್ತಾನಕ್ಕೆ ಶ್ರೀಲಂಕಾ ವಿರುದ್ಧ ಈ ಕೆಳಗಿನ ಚೇಸಿಂಗ್ ಟಾರ್ಗೆಟ್ ಇರಲಿದೆ.

  • ಓವರ್‌ಗಳ ಲೆಕ್ಕಾಚಾರ: ಶ್ರೀಲಂಕಾ ತಂಡವು ಮೊದಲು ಬ್ಯಾಟಿಂಗ್ ಮಾಡಿ 160 ರನ್ ಗಳಿಸಿದರೆ, ಪಾಕಿಸ್ತಾನವು ಆ ಗುರಿಯನ್ನು ಸುಮಾರು 12.2 ರಿಂದ 13 ಓವರ್‌ಗಳಲ್ಲೇ ಬೆನ್ನಟ್ಟಬೇಕಾಗುತ್ತದೆ.
  • ಗುರಿಯ ಅಂತರ: ಪಾಕಿಸ್ತಾನವು ಕೇವಲ ಗೆದ್ದರೆ ಸಾಲದು, ಪಂದ್ಯದ ಒಟ್ಟು ಓವರ್‌ಗಳ ಪೈಕಿ ಕನಿಷ್ಠ 35-40% ಓವರ್‌ಗಳು ಬಾಕಿ ಇರುವಂತೆಯೇ ಗುರಿಯನ್ನು ತಲುಪಬೇಕು.
  • ಉದಾಹರಣೆ: ಶ್ರೀಲಂಕಾ ನೀಡಿದ ಗುರಿಯನ್ನು ಪಾಕಿಸ್ತಾನವು 40 ರಿಂದ 45 ಎಸೆತಗಳು ಬಾಕಿ ಇರುವಾಗಲೇ ತಲುಪಿದರೆ ಮಾತ್ರ ನ್ಯೂಝಿಲೆಂಡ್‌ನ ರನ್ ರೇಟ್ ಅನ್ನು ಹಿಂದಿಕ್ಕಲು ಸಾಧ್ಯವಾಗುತ್ತದೆ.

ಅಂದರೆ ರನ್​ಗಳ ಅಂತರದ ಗೆಲುವಿನ ಲೆಕ್ಕಾಚಾರ ನೋಡುವುದಾದರೆ ನ್ಯೂಝಿಲೆಂಡ್ ತಂಡವನ್ನು ನೆಟ್ ರನ್ ರೇಟ್​ನಲ್ಲಿ ಹಿಂದಿಕ್ಕಲು ಪಾಕಿಸ್ತಾನ್ ಕನಿಷ್ಠ 70 ರನ್​ಗಳ ಅಂತರದಿಂದ ಗೆಲ್ಲಬೇಕು. ಇನ್ನು ಓವರ್​ಗಳ ಲೆಕ್ಕಾಚಾರದಲ್ಲಿ ನೋಡುವುದಾದರೆ 12 ರಿಂದ 13 ಓವರ್​ಗಳಲ್ಲಿ 160 ರನ್​ಗಳ ಗುರಿ ಬೆನ್ನತ್ತಬೇಕು. ಅಂದರೆ ಕನಿಷ್ಠ 40 ರಿಂದ 45 ಎಸೆತಗಳು ಬಾಕಿ ಇರುವಂತೆ ಪಾಕಿಸ್ತಾನ್ ತಂಡ ಗೆದ್ದರೆ ಮಾತ್ರ ನೆಟ್​ ರನ್​ ರೇಟ್​ನಲ್ಲಿ ನ್ಯೂಝಿಲೆಂಡ್ ತಂಡವನ್ನು ಹಿಂದಿಕ್ಕಬಹುದು.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ಅನ್ನು ಎಷ್ಟು ದೊಡ್ಡ ಅಂತರದಿಂದ ಸೋಲಿಸುತ್ತದೆಯೋ, ಪಾಕಿಸ್ತಾನ ತಂಡಕ್ಕೆ ಚೇಸಿಂಗ್ ಮಾಡುವುದು ಅಷ್ಟು ಸುಲಭವಾಗುತ್ತದೆ. ಅಂದರೆ ನ್ಯೂಝಿಲೆಂಡ್ ತಂಡವು ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತರೆ ನೆಟ್ ರನ್ ರೇಟ್ ಕುಸಿತವಾಗಲಿದೆ. ಇದರಿಂದ ಪಾಕ್ ತಂಡದ ಟಾರ್ಗೆಟ್ ಕೂಡ ಬದಲಾಗಲಿದೆ.

ಇದನ್ನೂ ಓದಿ: ಹೀಗಾದ್ರೆ ಸೌತ್ ಆಫ್ರಿಕಾ ಕೂಡ ವಿಶ್ವಕಪ್‌ನಿಂದ ಹೊರ ಬೀಳಬಹುದು!

ಪಾಕಿಸ್ತಾನ್ ಯಾವಾಗ ಹೊರಬೀಳುತ್ತದೆ?

  • ನ್ಯೂಝಿಲೆಂಡ್ ತಂಡವು ಇಂಗ್ಲೆಂಡ್ ಅನ್ನು ಸೋಲಿಸಿದರೆ ಪಾಕ್ ತಂಡ ಟೂರ್ನಿಯಿಂದ ಹೊರಬೀಳಲಿದೆ.
  • ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾದರೂ ಕೂಡ ಪಾಕಿಸ್ತಾನ್ ತಂಡ ವಿಶ್ವಕಪ್​ನಿಂದ ಹೊರಬೀಳಲಿದೆ.
  • ಶ್ರೀಲಂಕಾ ವಿರುದ್ಧ ಸೋತರೆ ಅಥವಾ ಆ ಪಂದ್ಯ ಮಳೆಯಿಂದ ರದ್ದಾದರೆ ಪಾಕ್ ತಂಡದ ವಿಶ್ವಕಪ್ ಅಭಿಯಾನ ಅಂತ್ಯವಾಗಲಿದೆ.

Source link

ರಶ್ಮಿಕಾ-ವಿಜಯ್ ದೇವರಕೊಂಡ ಅರಿಶಿಣ ಶಾಸ್ತ್ರದ ಸುಂದರ ಚಿತ್ರಗಳು ಇಲ್ಲಿವೆ

Source link

GST ಆಫೀಸರ್ ಹೆಸರಲ್ಲಿ ಲಕ್ಷ ಲಕ್ಷ ದೋಚಿದ ಹೌಸ್ ಕೀಪಿಂಗ್ ಸಿಬ್ಬಂದಿ! ಗುಟ್ಕಾ ವ್ಯಾಪಾರಿಗೆ ಬೆದರಿಸಿ ವಂಚನೆ – Kannada News | Fake GST Officers Arrested in Bengaluru for Extorting Rs 5 Lakh from Gutka Trader

ಬೆಂಗಳೂರು, ಫೆಬ್ರವರಿ 26: ಜಿಎಸ್‌ಟಿ (GST) ಅಧಿಕಾರಿಗಳ ಹೆಸರಿನಲ್ಲಿ ಗುಟ್ಕಾ ವ್ಯಾಪಾರಿಯನ್ನು ಬೆದರಿಸಿ 5 ಲಕ್ಷ ರೂಪಾಯಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬೆಂಗಳೂರು (Bangalore) ಬನಶಂಕರಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆರೋಪಿಗಳು ಕೇಂದ್ರ ಸರ್ಕಾರದ ಜಿಎಸ್‌ಟಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.

ಬಂಧಿತರನ್ನು ದಾದಾಪೀರ್ ಮತ್ತು ನಾಗರಾಜ್ ಎಂದು ಗುರುತಿಸಲಾಗಿದೆ. ಇವರು ಬನಶಂಕರಿಯ ಬಿಎಂಟಿಸಿ ಬಸ್ ನಿಲ್ದಾಣದ ಕಟ್ಟಡದಲ್ಲಿರುವ ಜಿಎಸ್‌ಟಿ ಕಚೇರಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಈ ಹಿಂದೆ ಇಂದಿರಾನಗರ ಸೇರಿದಂತೆ ವಿವಿಧ ಕೇಂದ್ರ ಸರ್ಕಾರಿ ಕಚೇರಿಗಳಲ್ಲೂ ಕೆಲಸ ನಿರ್ವಹಿಸಿ ಅಧಿಕಾರಿಗಳ ವಿಶ್ವಾಸ ಗಳಿಸಿದ್ದರು. 2016ರಿಂದ ಬನಶಂಕರಿ ಜಿಎಸ್‌ಟಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಜಿಎಸ್‌ಟಿ ಇಂಟೆಲಿಜೆನ್ಸ್ ಅಧಿಕಾರಿಗಳ ಸೋಗಿನಲ್ಲಿ ಕೃತ್ಯ

ಪೊಲೀಸ್ ಮಾಹಿತಿ ಪ್ರಕಾರ, ಆರೋಪಿಗಳು ಜಿಎಸ್‌ಟಿ ಇಂಟೆಲಿಜೆನ್ಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಸೃಷ್ಟಿಸಿಕೊಂಡು ಪೀಣ್ಯ ಭಾಗದ ಗುಟ್ಕಾ ವ್ಯಾಪಾರಿಯೊಬ್ಬರ ಮನೆಗೆ ತೆರಳಿದ್ದರು. ‘ನೀವು ನಿಯಮ ಉಲ್ಲಂಘನೆ ಮಾಡಿದ್ದೀರಿ, ನಿಮ್ಮ ಗೋಡೌನ್ ಹಾಗೂ ಕಚೇರಿಗೆ ದಾಳಿ ಮಾಡುತ್ತೇವೆ’ ಎಂದು ಬೆದರಿಸಿ ಐದು ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದ್ದರು. ಭಯಗೊಂಡ ವ್ಯಾಪಾರಿ ಹಣ ನೀಡಿದ್ದಾನೆ ಎನ್ನಲಾಗಿದೆ.

ಕಚೇರಿಯಲ್ಲೇ ಹಣ ಇಟ್ಟು ಲಾಕ್!

ಹಣ ಪಡೆದ ಬಳಿಕ, ವಿಚಾರ ಯಾರಿಗಾದರೂ ತಿಳಿಸಿದರೆ ಮತ್ತೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಆರೋಪಿಗಳು ಆ ಹಣವನ್ನು ಮನೆಗೆ ತೆಗೆದುಕೊಂಡು ಹೋಗದೆ ಕಚೇರಿಯಲ್ಲಿಯೇ ಇಟ್ಟುಕೊಂಡಿದ್ದರು. ಇದೇ ವೇಳೆ ಜಿಎಸ್‌ಟಿ ಅಧಿಕಾರಿಗಳ ಪರಿಶೀಲನೆಯ ಸಂದರ್ಭದಲ್ಲಿ ಐದು ಲಕ್ಷ ರೂಪಾಯಿ ಪತ್ತೆಯಾಗಿ ಅನುಮಾನ ಮೂಡಿದೆ. ವಿಚಾರಣೆ ನಡೆಸಿದಾಗ ಆರೋಪಿಗಳು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.

ಈ ಸಂಬಂಧ ಜಿಎಸ್‌ಟಿ ಸೂಪರಿಂಟೆಂಡೆಂಟ್ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಇಬ್ಬರನ್ನೂ ಬಂಧಿಸಿದ್ದಾರೆ. ನಕಲಿ ಗುರುತಿನ ಚೀಟಿ ತಯಾರಿಸಲು ಇನ್ನಾರದರೂ ಸಹಾಯ ಮಾಡಿದ್ದಾರೆ? ಇಂತಹ ಕೃತ್ಯವನ್ನು ಇದಕ್ಕೂ ಮೊದಲು ನಡೆಸಿದ್ದಾರೆಯೇ? ಎಂಬ ಕುರಿತು ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಬೆಂಗಳೂರು: ಅಕ್ರಮ ವಲಸಿಗರ ವಿರುದ್ಧ ಪೊಲೀಸರ ಭರ್ಜರಿ ಬೇಟೆ, ಒಂದೇ ದಿನ 2000ಕ್ಕೂ ಹೆಚ್ಚು ಮಂದಿಯ ವಿಚಾರಣೆ

ಅಧಿಕಾರಿಗಳ ಹೆಸರಿನಲ್ಲಿ ಯಾರಾದರೂ ಹಣದ ಬೇಡಿಕೆ ಇಟ್ಟಲ್ಲಿ ಸಾರ್ವಜನಿಕರು ಸಂಬಂಧಿತ ಕಚೇರಿಯೊಂದಿಗೆ ದೃಢಪಡಿಸಿಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಚಲಿಸುವ ಕಾರಿನಿಂದ ತಂದೆಯನ್ನು ಹೊರಗೆಸೆದು, ಒದ್ದು, ಒಂಟಿಯಾಗಿ ಬಿಟ್ಟು ಹೋದ ಮಗ – Kannada News | Son Allegedly Pushes Father Out of Moving Car, Disturbing Video Surfaces

ಮಕ್ಕಳೇ ನಮ್ಮ ಭವಿಷ್ಯ ಎಂದುಕೊಂಡು ಕೇಳಿದ್ದೆಲ್ಲಾ ಕೊಡಿಸಿ, ಅವರನ್ನು ವಿದ್ಯಾವಂತರನ್ನಾಗಿ ಮಾಡಿ, ಬೆಟ್ಟದಷ್ಟು ಆಸೆ ಹೊತ್ತ ತಂದೆಯೊಬ್ಬರು ಬೀದಿಗೆ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ದುಷ್ಟ ಮಗನೊಬ್ಬ ಚಲಿಸುತ್ತಿರುವ ಕಾರಿನಿಂದ ತಂದೆಯನ್ನು ಹೊರಗೆಸೆದು, ರಸ್ತೆಯಲ್ಲೇ ಮನಬಂದಂತೆ ತಳಿಸಿ, ಅವರನ್ನು ಒಂಟಿಯಾಗಿ ಬಿಟ್ಟು ಹೋಗಿರುವ ಘಟನೆ ನಡೆದಿದೆ. ಮಗ ನಗರಕ್ಕೆ ಓದಲು ಹೋಗ್ತಿದ್ದಾನೆ, ಒಳ್ಳೆಯ ನೌಕರಿ ಪಡೆಯುತ್ತಾನೆ, ತನ್ನ ಕೊನೆಗಾಲದಲ್ಲಿ ನೆರವಾಗುತ್ತಾನೆ ಎನ್ನುವ ಆಸೆಯಲ್ಲಿದ್ದ ತಂದೆಯ ಕನಸು ನುಚ್ಚು ನೂಡು ಮಾಡಿರುವ ವಿಡಿಯೋ ಇದು. ಅಲ್ಲೇ ಹಿಂದೆ ಬರುತ್ತಿದ್ದ ಕಾರುನಿಂದ ವ್ಯಕ್ತಿಯೊಬ್ಬರು ಈ ವಿಡಿಯೋ ಮಾಡಿದ್ದು, ಅವರ ಸಹಾಯಕ್ಕೆ ಬಂದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಶ್ಮಿಕಾಗೆ ಅತ್ಯಂತ ಅಮೂಲ್ಯ ಉಡುಗೊರೆ ಕೊಟ್ಟ ವಿಜಯ್ ತಾಯಿ, ಭಾವುಕರಾದ ನಟಿ – Kannada News | Vijay Deverakonda mother gifted heirloom bangles to Rashmika Mandanna

ರಶ್ಮಿಕಾ ಮಂದಣ್ಣ (Rashmika Mandanna) ಇನ್ನು ಮುಂದೆ ತೆಲಂಗಾಣದ ಸೊಸೆ. ವಿಜಯ್ ದೇವರಕೊಂಡ ಅವರೊಟ್ಟಿಗೆ ಮದುವೆ ಆಗುತ್ತಿರುವ ರಶ್ಮಿಕಾ ತೆಲುಗು ಮನೆ ಸೇರುತ್ತಿದ್ದಾರೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ರಾಜಸ್ಥಾನದ ಉದಯಪುರದ ಅದ್ಧೂರಿ ಅರಮನೆಯಂಥಹ ರೆಸಾರ್ಟ್​​ನಲ್ಲಿ ಆಗುತ್ತಿದೆ. ಈ ಮದುವೆಯಲ್ಲಿ ರಶ್ಮಿಕಾ ಮತ್ತು ವಿಜಯ್ ಅವರ ಕುಟುಂಬ ಸದಸ್ಯರು, ಅತ್ಯಾಪ್ತ ಗೆಳೆಯರು ಮಾತ್ರವೇ ಭಾಗವಹಿಸಿದ್ದಾರೆ. ಎರಡೂ ಕುಟುಂಬದವರು ಪರಸ್ಪರ ಗೇಮ್​​​ಗಳನ್ನು ಆಡಿದ್ದಾರೆ. ಮೆಹಂದಿ, ಹಳದಿ, ಸಂಗೀತ್ ಕಾರ್ಯಕ್ರಮಗಳನ್ನು ಆಯೋಜಿಸಿ ಸಖತ್ ಎಂಜಾಯ್ ಮಾಡಿದ್ದಾರೆ. ಈ ಎಂಜಾಯ್​​ಮೆಂಟ್​​ಗಳ ಮಧ್ಯೆ ರಶ್ಮಿಕಾಗೆ ವಿಜಯ್ ತಾಯಿ ಅತ್ಯಂತ ಅಮೂಲ್ಯವಾದ ಉಡುಗೊರೆಯೊಂದನ್ನು ನೀಡಿದ್ದಾರೆ. ಉಡುಗೊರೆ ಪಡೆದ ರಶ್ಮಿಕಾ ಭಾವುಕರಾಗಿದ್ದಾರೆ.

ರಶ್ಮಿಕಾ ಮಂದಣ್ಣ ಅವರಿಗೆ ವಿಜಯ್ ದೇವರಕೊಂಡ ಅವರ ತಾಯಿ, ತಮ್ಮ ಕುಟುಂಬದಲ್ಲಿ ತಲೆ ತಲೆಮಾರುಗಳಿಂದಲೂ ಬಳುವಳಿಯಾಗಿ ಬಂದಿರುವ ಚಿನ್ನದ ಬಳೆಗಳನ್ನು ನೀಡಿದ್ದಾರೆ. ಈ ಬಳೆಗಳು ಕೆಲವು ತಲೆಮಾರುಗಳಿಂದಲೂ ಕುಟುಂಬದ ಸೊಸೆಯಾಗಿ ಬಂದವರಿಗೆ ಕೊಡಲಾಗುತ್ತಿದೆಯಂತೆ. ಅಂತೆಯೇ ಇದೀಗ ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ದೇವರಕೊಂಡ ತಮ್ಮ ಕುಟುಂಬದ ದೊಡ್ಡ ಸೊಸೆ ಆಗುತ್ತಿರುವ ರಶ್ಮಿಕಾ ಮಂದಣ್ಣಗೆ ಬಳೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸಂಗೀತ್ ಕಾರ್ಯಕ್ರಮದಲ್ಲಿ ಮಾಧವಿ ಅವರು ಸೊಸೆಗೆ ಬಳೆಗಳನ್ನು ಉಡುಗೊರೆಯಾಗಿ ನೀಡಿದ್ದು, ಹಲವು ತಲೆಮಾರುಗಳನ್ನು ಕಂಡಿರುವ, ದೇವರಕೊಂಡ ಕುಟುಂಬದ ಐತಿಹಾಸಿಕ ಮೌಲ್ಯವನ್ನು ಒಳಗೊಂಡಿರುವ ಸುಂದರವಾದ, ಅತ್ಯಂತ ಅಮೂಲ್ಯವೂ ಅಪರೂಪವೂ ಆಗಿರುವ ಬಳೆಗಳನ್ನು ಪಡೆದು ರಶ್ಮಿಕಾ ಅವರು ಭಾವುಕರಾಗಿ, ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆಗೆ ತೆರಳಿದ ಆಶಿಕಾ ರಂಗನಾಥ್

ಅಂದಹಾಗೆ ವಿಜಯ್ ಅವರ ಪೋಷಕರು ರಶ್ಮಿಕಾಗೆ ಹೊಸಬರೇನೂ ಅಲ್ಲ. ಕಳೆದ ಕೆಲ ವರ್ಷಗಳಿಂದಲೂ ಸಹ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಅವರ ಕುಟುಂಬದ ನಡುವೆ ಬಹಳ ಆತ್ಮೀಯತೆ ಅನ್ಯೋನ್ಯತೆ ಇದೆ. ಕೆಲ ವರ್ಷಗಳಿಂದಲೂ ಎಲ್ಲ ಹಬ್ಬಗಳನ್ನು ರಶ್ಮಿಕಾ, ವಿಜಯ್ ದೇವರಕೊಂಡ ಮನೆಯಲ್ಲಿಯೇ ಆಚರಿಸುತ್ತಿದ್ದರು. ವಿಜಯ್ ಅವರ ಮನೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ರಶ್ಮಿಕಾಗೆ ಆಹ್ವಾನ ಇದ್ದೇ ಇರುತ್ತಿತ್ತು. ಕಳೆದ ವರ್ಷ ವಿಜಯ್ ತಾಯಿಯ ಹುಟ್ಟುಹಬ್ಬಕ್ಕೆ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದರು. ವಿಜಯ್ ಅವರ ಪೋಷಕರೊಡನೆ ರಶ್ಮಿಕಾಗೆ ಬಹಳ ಆತ್ಮೀಯತೆ ಇದೆ. ಇದು ಮುಂದಿನ ಅವರ ದಾಂಪತ್ಯಕ್ಕೂ ಸಹಕಾರಿ ಆಗಬಹುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link