Category Archives: Blog

Your blog category

ಪದೇ ಪದೇ ಹಸಿವಾಗುವುದು ಮಧುಮೇಹದ ಆರಂಭಿಕ ಲಕ್ಷಣವೇ? ಇಲ್ಲಿದೆ ತಜ್ಞರ ಉತ್ತರ – Kannada News | Early Warning Signs of Diabetes

ಊಟ ಮಾಡಿದ ಕೆಲವೇ ಗಂಟೆಗಳಲ್ಲಿ ಹಸಿವಾಗುವುದು ಅಥವಾ ಆಗಾಗ ಏನನ್ನಾದರೂ ತಿನ್ನಬೇಕೆಂಬ ಆಸೆಯಾಗುವುದು ಸಾಮಾನ್ಯವಲ್ಲ. ಇದು ದೇಹದಲ್ಲಿ ಇನ್ಸುಲಿನ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದರ ಸಂಕೇತವಾಗಿದೆ. ಹೌದು, ಇದು ಮಧುಮೇಹದ (Diabetes) ಸೂಚನೆಯೂ ಆಗಿರಬಹುದು. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ​​ಪ್ರಕಾರ, ಆಗಾಗ ಹಸಿವಾಗುವುದು ದೇಹದಲ್ಲಿನ ಸಕ್ಕರೆ ಮಟ್ಟದಲ್ಲಿ ವ್ಯತ್ಯಾಸ ಉಂಟಾಗಿ ಇನ್ಸುಲಿನ್ ಕಾರ್ಯ ದುರ್ಬಲಗೊಂಡಿದೆ ಎಂಬುದರ ಸಂಕೇತವಾಗಿದೆ. ಅಂದರೆ ದೇಹದಲ್ಲಿರುವ ಇನ್ಸುಲಿನ್ ಹಾರ್ಮೋನ್, ರಕ್ತದಲ್ಲಿನ ಗ್ಲೂಕೋಸ್ ಅನ್ನು ಜೀವಕೋಶಗಳಿಗೆ ಸರಿಯಾಗಿ ತಲುಪಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ, ದೇಹಕ್ಕೆ ಸರಿಯಾದ ಶಕ್ತಿ ಸಿಗುವುದಿಲ್ಲ ಇದರಿಂದ ಮೆದುಳು ಪದೇ ಪದೇ ಹಸಿವನ್ನು ಸಂಕೇತಿಸುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ, ಇದನ್ನು ಪಾಲಿಫೇಜಿಯಾ ಎಂದು ಕರೆಯಲಾಗುತ್ತದೆ. ಹಾಗಾದರೆ ಯಾವ ಯಾವ ಲಕ್ಷಣಗಳು ಮಧುಮೇಹದ ಎಚ್ಚರಿಕೆಯ ಸೂಚನೆಗಳಾಗಿರುತ್ತವೆ, ಈ ರೀತಿಯ ಸಮಸ್ಯೆಯನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೇಹದಲ್ಲಿ ಮಧುಮೇಹ ಆರಂಭವಾಗುವ ಮೊದಲು ಕೆಲವು ಲಕ್ಷಣಗಳು ಕಂಡುಬರುತ್ತವೆ. ಅನೇಕರು ಈ ಸಮಸ್ಯೆಯನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ. ಆದರೆ ಈ ರೀತಿ ಮಾಡುವುದು ಒಳ್ಳೆಯದಲ್ಲ, ಆರಂಭಿಕ ಹಂತದಲ್ಲಿದ್ದಾಗ ಆಹಾರದಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಈ ರೀತಿಯ ಕಾಯಿಲೆಗಳನ್ನು ತಡೆಯಬಹುದು. ಇಲ್ಲವಾದಲ್ಲಿ ಮಧುಮೇಹ ನಿಮ್ಮ ಜೀವನವನ್ನೇ ಹಾಳು ಮಾಡುತ್ತದೆ. ಅದಕ್ಕೆ ಯಾವುದೇ ರೀತಿಯ ಚಿಕಿತ್ಸೆ ಇಲ್ಲದಿರುವುದರಿಂದ ನೀವು ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಅದರ ಹೊರತಾಗಿ ಅದರಿಂದ ಮುಕ್ತಿ ಪಡೆಯಲು ಸಾಧ್ಯವಾಗುವುದಿಲ್ಲ ಹಾಗಾಗಿ ಕೆಲವು ಲಕ್ಷಣಗಳನ್ನು ನಿರ್ಲಕ್ಷಿಸಬಾರದು.

ಮಧುಮೇಹ ಸೂಚಿಸುವ ಲಕ್ಷಣಗಳು:

  • ಹಸಿವು ಹೆಚ್ಚಾಗುವುದರ ಜೊತೆಗೆ ಬಾಯಾರಿಕೆ ಹೆಚ್ಚಾಗುತ್ತದೆ.
  • ಆಗಾಗ ಮೂತ್ರ ವಿಸರ್ಜನೆ.
  • ದೌರ್ಬಲ್ಯ.
  • ದೃಷ್ಟಿ ಮಂದವಾಗುವುದು.

ಇದನ್ನೂ ಓದಿ: ಹೈಬಿಪಿ, ಡಯಾಬಿಟಿಸ್ ಕಿಡ್ನಿಗೆ ಹಾನಿ ಮಾಡುತ್ತದೆಯೇ? ನೀವು ತಿಳಿಯಬೇಕಾದ ವಿಷಯಗಳಿವು!

ಯಾರಿಗೆ ಹೆಚ್ಚಿನ ಅಪಾಯವಿದೆ?

  • ಕುಟುಂಬದಲ್ಲಿ ಯಾರಿಗಾದರೂ ಮಧುಮೇಹವಿದ್ದರೆ
  • ಬಹಳಷ್ಟು ಸಿಹಿತಿಂಡಿಗಳನ್ನು ತಿನ್ನುವುದು
  • ಅಧಿಕ ತೂಕ ಇರುವುದು
  • ವ್ಯಾಯಾಮ ಮಾಡದಿರುವುದು
  • ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತು ಕೆಲಸ ಮಾಡುವುದು

ತಡೆಯುವುದು ಹೇಗೆ?

  • ಆಹಾರದಲ್ಲಿ ಕಡಿಮೆ ಕೊಬ್ಬಿನಂಶ ಮತ್ತು ಹೆಚ್ಚು ಪ್ರೋಟೀನ್ ಸೇವಿಸಿ
  • ಪ್ರತಿದಿನ ಕನಿಷ್ಠ 15 ನಿಮಿಷ ವ್ಯಾಯಾಮ ಮಾಡಿ
  • ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಸೇವನೆ ಮಾಡಿ
  • ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ
  • ಸಕ್ಕರೆ ಮಟ್ಟವನ್ನು ಪರಿಶೀಲಿಸುತ್ತಿರಿ, ಹೆಚ್ಚಿದ್ದರೆ, ವೈದ್ಯರನ್ನು ಸಂಪರ್ಕಿಸಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಪ್ರಾಪ್ತೆ ಮೇಲೆ ಅತ್ಯಾಚಾರ ಕೇಸ್​​ನಲ್ಲಿ ಜೈಲು ಪಾಲಾಗಿದ್ದ ಮ್ಯೂಸಿಕ್ ಮೈಲಾರಿಗೆ ಬಿಗ್ ರಿಲೀಫ್ – Kannada News | Bagalkot Court Grants Bail to Singer music mailari In pocso case

ಬಾಗಲಕೋಟೆ, (ಫೆಬ್ರವರಿ 24): ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ  ಆರೋಪದ ಮೇಲೆ ಪೊಕ್ಸೋ ಪ್ರಕರಣದಲ್ಲಿ (pocso case) ಜೈಲು ಸೇರಿದ್ದ ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ಮ್ಯೂಸಿಕ್ ಮೈಲಾರಿಗೆ (Singer music mailari ) ಜಾಮೀನು ಸಿಕ್ಕಿದೆ. ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪಿ ಮ್ಯೂಸಿಕ್ ಮೈಲಾರಿಗೆ ಬಾಗಲಕೋಟೆ ಕೋರ್ಟ್​ ನ್ಯಾಯಾಧೀಶರಾದ ಪ್ರೀತಿ ಸಗರ ಜೋಷಿ ಅವರು ಕೆಲ ಷರತ್ತುಗಳನ್ನು ವಿಧಿಸಿ ಇಂದು (ಫೆಬ್ರವರಿ 24) ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. ಒಂದು ಲಕ್ಷ ಶ್ಯುರಿಟಿ ಬಾಂಡ್,ಪ್ರಾಷಿಕ್ಯೂಷನ್‌ ಮೇಲೆ ಪ್ರಭಾವ ಬೀರಬಾರದು, ಇದೇ ತರಹದ ಅಪರಾಧ ಮತ್ತೆ‌ ಮಾಡಬಾರದು ಎನ್ನುವ ಷರತ್ತುಗಳನ್ನು ವಿಧಿಸಲಾಗಿದೆ. ಇದರೊಂದಿಗೆ ಕಳೆದ ಡಿಸೆಂಬರ್​​ನಿಂದ ಜೈಲು ಪಾಲಾಗಿದ್ದ ಮೈಲಾರಿಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.

Source link

ಆದಾಯ ಕೊರತೆ ನೀಗಿಸಲು ಫ್ರೀಡಂ ಪಾರ್ಕ್ ಆವರಣ ಬಾಡಿಗೆ ನೀಡಲು ಮುಂದಾದ ಜಿಬಿಎ – Kannada News | GBA’s Plan to Commercially Rent Out Freedom Park Sparks Massive Opposition

ಬೆಂಗಳೂರು, ಫೆಬ್ರವರಿ 24: ಸಿಲಿಕಾನ್​​ ಸಿಟಿ ಬೆಂಗಳೂರಲ್ಲಿ ಪ್ರತಿಭಟನೆ ಅಂದ್ರೆ ಮೊದಲಿಗೆ ನೆನಪಾಗೋದೇ ಫ್ರೀಡಂ ಪಾರ್ಕ್​​. ರಾಜಕೀಯ ಪಕ್ಷಗಳಿಂದ ಹಿಡಿದು, ಸಂಘ ಸಂಸ್ಥೆಗಳು ಕೂಡ ಇದೇ ಜಾಗದಲ್ಲಿ ಪ್ರತಿಭಟನೆ ನಡೆಸುತ್ತವೆ. ಹೀಗಾಗಿ ಯಾವಾಗ ನೋಡಿದರೂ ಫ್ರೀಡಂ ಪಾರ್ಕ್​​ನಲ್ಲಿ ಒಂದಿಲ್ಲೊಂದು ಪ್ರೊಟೆಸ್ಟ್​​ ಇದ್ದೇ ಇರುತ್ತೆ. ಆದರೆ ಸದ್ಯದ ಮಾಹಿತಿಯ ಪ್ರಕಾರ ಇಡೀ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡೋದಕ್ಕೆ ಇರುವ ಏಕೈಕ ಈ ಜಾಗವನ್ನೂ ಹಣ ಸಂಪಾದನೆಗೆ ಬಳಕೆ ಮಾಡಿಕೊಳ್ಳಲು ತಯಾರಿ ನಡೆದಿದ್ದು, ಫ್ರೀಡಂ ಪಾರ್ಕ್​​ನ ಬಾಡಿಗೆ ನೀಡಲು ಜಿಬಿಎ ಮುಂದಾಗಿದೆ.

ಜಿಬಿಎ ಅಡಿಯ 5 ನಗರ ಪಾಲಿಕೆಗಳಿಗೆ ಆದಾಯ ಕೊರತೆ ನೀಗಿಸಲು ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಅದರಲ್ಲಿ ಇದೂ ಒಂದು ಎನ್ನಲಾಗಿದೆ. ಮಲ್ಟಿ ಲೆವೆಲ್ ಪಾರ್ಕಿಂಗ್ ನಿರ್ಮಾಣಕ್ಕೂ ಮೊದಲೇ ಈ ಭಾಗ ಪ್ರತಿಭಟನೆಗೆ ಮಾತ್ರ ಸೀಮಿತ ಮಾಡಬೇಕು ಎಂಬ ಒಪ್ಪಂದವಾಗಿತ್ತು. ಹೀಗಾಗಿ 10 ಸಾವಿರ ಮಂದಿ ಕೂರಬಹುದಾದ ಸಭಾಂಗಣವೂ ನಿರ್ಮಾಣವಾಗಿತ್ತು. ಆದರೀಗ ಇದೇ ಜಾಗವನ್ನು ವಾಣಿಜ್ಯ ಬಳಕೆಗೆ ನೀಡಲು ಜಿಬಿಎ ಮುಂದಾಗಿರೋದು ಪ್ರತಿಭಟನಾಕಾರರನ್ನು ಕೆರಳಿಸಿದೆ. ಈಗಾಗಲೇ ಫ್ರೀಡಂ ಪಾರ್ಕ್ ಆವರಣದಲ್ಲಿ ಪ್ರತಿಭಟನಾಕಾರರಿಗೆ ಕುಡಿಯುವ ನೀರು, ಶೌಚಾಲಯ ಸೇರಿ ಮೂಲಸೌಕರ್ಯಗಳಿಲ್ಲ. ಆದರೆ ಈ ಹೊಸ ಸಭಾಂಗಣ ಸುಸಜ್ಜಿತವಾಗಿದೆ. ಈಗ ಇದನ್ನೂ ದೂರ ಮಾಡಲು ಹೊರಟಿರುವ ಜಿಬಿಎ ನಡೆಗೆ ವ್ಯಾಪಕ ವಿರೋಧ ಕೇಳಿಬಂದಿದೆ.

ಇದನ್ನೂ ಓದಿ: ಬೆಂಗಳೂರು ಫ್ರೀಡಂ ಪಾರ್ಕ್ ಕ್ಲೋಸ್, ಹೋರಾಟಗಾರರ ಪರದಾಟ; ಕಾರಣ ಏನು ಗೊತ್ತೇ?

ಫ್ರೀಡಂ ಪಾರ್ಕ್ ಆವರಣದಲ್ಲಿನ ಪಾರ್ಕಿಂಗ್ ಮೇಲ್ಭಾಗದ ಜಾಗ ಬಾಡಿಗೆಗೆ ನೀಡಲು ಚಿಂತನೆ ನಡೆದಿದೆ. ಆದರೆ ಈಗಾಗಲೇ ಪ್ರತಿಭಟನೆ ಮಾಡಲು ಫ್ರೀಡಂ ಪಾರ್ಕ್ ಆವರಣದ ಕಿರಿದಾಗಿದ್ದು, ಹಲವು ಪ್ರತಿಭಟನೆಗಳ ವೇಳೆ ಸ್ಥಳಾವಕಾಶ ಕೊರತೆ ಉಂಟಾಗಿ ಪ್ರತಿಭಟನಾಕಾರರು ಪರದಾಟ ನಡೆಸಿದ ಉದಾಹರಣೆಗಳಿವೆ. ಹೀಗಿರುವಾಗ ಆದಾಯದ ಕೊರತೆ ನೆಪವೊಡ್ಡಿ ಪ್ರತಿಭಟನೆಗೆಂದೇ ಇರುವ ಜಾಗ ಬಾಡಿಗೆಗೆ ಕೊಡಲು ಹೊರಟ ಜಿಬಿಎ ನಿರ್ಧಾರದ ವಿರುದ್ಧ ಫ್ರೀಡಂ ಪಾರ್ಕ್ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಪ್ರತಿಭಟನಾ ಸ್ಥಳವನ್ನು ವಾಣಿಜ್ಯ ಉದ್ದೇಶಕ್ಕೆ ಬಿಟ್ಟು ಕೊಡುವುದಕ್ಕೆ ನಾವು ಒಪ್ಪಲ್ಲ ಎಂದು ಸಮಿತಿ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಹೇಳಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:26 pm, Tue, 24 February 26

Source link

ಶುಭ ಮುಹೂರ್ತದಲ್ಲಿ ಸೇವಾ ತೀರ್ಥದಲ್ಲಿ ಮೊದಲ ಸಭೆ ನಡೆಸಿದ ಪ್ರಧಾನಿ ಮೋದಿ; ಈ ದಿನದ ವಿಶೇಷವೇನು? – Kannada News | Yad Bhadram Tanna A Suva first meeting of the Central Cabinet was held at the newly constructed Seva Tirtha

ನವದೆಹಲಿ, ಫೆಬ್ರವರಿ 24: ನರೇಂದ್ರ ಮೋದಿ ಸಂಪುಟದ ಮೊದಲ ಸಭೆಯು ಹೊಸ ಪ್ರಧಾನ ಮಂತ್ರಿ ಕಚೇರಿಯಾದ ಸೇವಾ ತೀರ್ಥದಲ್ಲಿ (Seva Teertha) ನಡೆಯಿತು. ಹಿಂದೂ ಪಂಚಾಂಗದ ಪ್ರಕಾರ ಇಂದು ಬಹಳ ವಿಶೇಷವಾದ ದಿನವೂ ಹೌದು. ಇಂದಿನ ಸಂಪುಟ ಸಭೆಯಲ್ಲಿ ಸೇವಾ ಸಂಕಲ್ಪ ನಿರ್ಣಯವನ್ನು ಅಂಗೀಕರಿಸಲಾಯಿತು. ಕೇರಳವನ್ನು ಕೇರಳಂ ಎಂದು ಮರುನಾಮಕರಣ ಮಾಡಲು ಅನುಮೋದನೆ ನೀಡಲಾಯಿತು. ಶ್ರೀನಗರದಲ್ಲಿನ ಸಮಗ್ರ ವಿಮಾನ ನಿಲ್ದಾಣ ಟರ್ಮಿನಲ್ ಯೋಜನೆಗೆ ಸಹ ಅನುಮೋದನೆ ನೀಡಲಾಯಿತು.

ಸೇವಾ ತೀರ್ಥದಲ್ಲಿ ನಡೆದ ಮೊದಲ ಸಭೆಯ ಕುರಿತು ಪ್ರಧಾನಿ ಮೋದಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, “ಇಂದು ಯುಗಾಬ್ದ 5127, ವಿಕ್ರಮ್ ಸಂವತ್ 2082, ಫಾಲ್ಗುಣ ಶುಕ್ಲ ಅಷ್ಟಮಿಯಂದು ಕೇಂದ್ರ ಸಂಪುಟದ ಮೊದಲ ಸಭೆಯನ್ನು ಹೊಸದಾಗಿ ನಿರ್ಮಿಸಲಾದ ಸೇವಾ ತೀರ್ಥದಲ್ಲಿ ನಡೆಸಲಾಯಿತು. ದೇಶಕ್ಕಾಗಿ ಅನೇಕ ಅಭೂತಪೂರ್ವ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಗುಲಾಮಗಿರಿಯನ್ನು ಮೆಟ್ಟಿ ಹೊಸ ಇತಿಹಾಸ ಸೃಷ್ಟಿಸಿದ್ದೇವೆ; ಸೇವಾ ತೀರ್ಥದಲ್ಲಿ ಪ್ರಧಾನಿ ಮೋದಿ ಮೊದಲ ಭಾಷಣ

“ಸ್ಥಳೀಯ ಚಿಂತನೆ ಆಧುನಿಕ ವಿನ್ಯಾಸ ಮತ್ತು 1.4 ಶತಕೋಟಿ ದೇಶವಾಸಿಗಳ ಅನಂತ ಸಾಮರ್ಥ್ಯದ ಅಡಿಪಾಯದ ಮೇಲೆ ನಿರ್ಮಿಸಲಾದ ಸೇವಾ ತೀರ್ಥವು ರಾಷ್ಟ್ರೀಯ ಸೇವೆಯ ಕರ್ತವ್ಯ ಆಧಾರಿತ ಯಾಗವನ್ನು ನಿರಂತರವಾಗಿ ಮುನ್ನಡೆಸುತ್ತದೆ ಎಂದು ಸಚಿವ ಸಂಪುಟ ನಿರ್ಧರಿಸಿದೆ. ಈ ರಾಷ್ಟ್ರೀಯ ಯಾಗದಲ್ಲಿ ನಮ್ಮ ಮಂತ್ರ: ಯದ್ ಭದ್ರಮ್ ತನ್ನ್ ಆ ಸುವಾ. ಶುಭ ಮತ್ತು ಪ್ರಯೋಜನಕಾರಿಯಾದ ಹೊಸದೆಲ್ಲವನ್ನೂ ನಾವು ನಿರಂತರವಾಗಿ ಸ್ವೀಕರಿಸುವಂತಾಗಲಿ ಎಂದು ಇದರ ಅರ್ಥ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:24 pm, Tue, 24 February 26

Source link

ಧಾರವಾಡದಲ್ಲಿ ಉದ್ಯೋಗಾಂಕ್ಷಿಗಳ ಹೋರಾಟ ಬೆನ್ನಲ್ಲೇ 56 ಸಾವಿರ ಹುದ್ದೆ ಭರ್ತಿಗೆ ಮುಂದಾದ ಸಿದ್ದರಾಮಯ್ಯ – Kannada News | CM Siddaramaiah will be Announce 56 thousand Jobs appointment This Budget Says Minister Santosh lad In Dharwad

ಧಾರವಾಡ (ಫೆಬ್ರವರಿ 24): ಕಳೆದ ಕೆಲವು ದಿನಗಳಿಂದ ಧಾರವಾಡದಲ್ಲಿ (Dharwad) ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಸರಣಿ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿದ್ದರಾಮಯ್ಯ (Siddaramaiah) ಸರ್ಕಾರ, ಅಭ್ಯರ್ಥಿಗಳಿಗೆ ದೊಡ್ಡ ಸಮಾಧಾನಕರ ಸುದ್ದಿಯೊಂದನ್ನು ನೀಡಿದ್ದಾರೆ. ಈ ಬಜೆಟ್​​ನಲ್ಲಿ 56 ಸಾವಿರ ಹುದ್ದೆ ಭರ್ತಿಗೆ ನಿರ್ಧರಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ (Santosh lad )ಮಾಹಿತಿ ನೀಡಿದ್ದಾರೆ.

ಇನ್ನು ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಸಂತೋಷ ಲಾಡ್ , ಇದೀಗ ಸಿಎಂ 56 ಸಾವಿರ ಹುದ್ದೆ ಭರ್ತಿಗೆ ನಿರ್ಧರಿಸಿದ್ದಾರೆ. ಬರವ ಬಜೆಟ್‌ನಲ್ಲಿ ಈ ಬಗ್ಗೆ ಹೇಳುತ್ತಾರೆ.ಬಿಜೆಪಿ ಅಧಿಕಾರದಲ್ಲಿದ್ದಾಗ ಎಷ್ಟು ಹುದ್ದೆ ಭರ್ತಿ ಮಾಡಿತ್ತು? ಅವರು ಒಂದೇ ಒಂದು ಹುದ್ದೆ ತುಂಬಿಲ್ಲ. ಆದರೆ ಅವರೇನು ಮಾಡಿದರು? ಬಿಜೆಪಿಯವರದ್ದು ಬರೀ ಇದೇ ನಾಟಕ. ಯುವಕರ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಈಗ ರಾಜ್ಯ ಸರಕಾರ ಹುದ್ದೆ ತುಂಬಿಕೊಳ್ಳುತ್ತೆ ಎನ್ನುವುದು ಗೊತ್ತಾಗಿದೆ. ಅದಕ್ಕಾಗಿ ಇದೀಗ ಹೋರಾಟ ಶುರು ಮಾಡಿದ್ದಾರೆ. ನಾಳೆ ಸಿಎಂ ಅನೌನ್ಸ್ ಮಾಡಿದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮಿಂದಲೇ ಇದು ಆಗಿದ್ದು ಎಂದು ಬರೆದುಕೊಳ್ಳುತ್ತಾರೆ. ಇದೇ ಕಾರಣಕ್ಕೆ ಹೋರಾಟ ಮಾಡುತ್ತಾರೆ. ಯುವಕರ ಬೇಡಿಕೆ ಸರಿಯಾಗಿಯೇ ಇದೆ.ನಾವು ಅವರೊಂದಿಗೆ ಇದ್ದೇವೆ. ಇದೀಗ ಅವರು ರಾಜ್ಯ ಸರಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅದೇ ರೀತಿ ಕೇಂದ್ರದ ವಿರುದ್ಧವೂ ಹೋರಾಟ ಮಾಡಲಿ. ನಾನು ಯುವಕರಲ್ಲಿ ಮನವಿ ಮಾಡಿಕೊಳ್ಳುವೆ. ನಿಮ್ಮ ಹೋರಾಟ ಶಾಂತಿಯುತವಾಗಿರಲಿ ಎಂದು ಮನವಿ ಮಾಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೈವದ ಅನುಕರಣೆ ಮಾಡಿದ ಬಾಲಿವುಡ್ ಸ್ಟಾರ್ ರಣ್ವೀರ್​​ಗೆ ಹೈಕೋರ್ಟ್ ತರಾಟೆ – Kannada News | Karnataka High Court slams Ranveer Singh in hurting religious sentiment case

ಕಾಂತಾರ’ (Kantara) ಸಿನಿಮಾ ಕರಾವಳಿಯ ಸಂಸ್ಕೃತಿ, ದೈವದ ಆಚರಣೆಗಳನ್ನು ವಿಶ್ವದಾದ್ಯಂತ ಪರಿಚಯ ಮಾಡಿಸಿತು. ಆದರೆ ಸಿನಿಮಾ ನೋಡಿದ ಮಂದಿ ಕೆಲವರು ಹಾಸ್ಯಕ್ಕಾಗಿ, ಇನ್ನಿತರೆ ಕಾರಣಗಳಿಗಾಗಿ ದೈವದ ಅನುಕರಣೆ ಮಾಡಲು ಆರಂಭಿಸಿದರು. ಇದರಿಂದ ದೈವವನ್ನು ನಂಬುವ ಭಕ್ತರ ಭಾವನೆಗಳಿಗೆ ಧಕ್ಕೆ ಆಗುತ್ತದೆ ಎಂದು ಚಿತ್ರತಂಡ ಹೇಳಿದರೂ ಸಹ ಅನುಕರಣೆ ನಿಂತಿಲ್ಲ. ಕೆಲ ತಿಂಗಳ ಹಿಂದೆ ಬಾಲಿವುಡ್ ಸ್ಟಾರ್ ನಟ ರಣ್​​ವೀರ್ ಸಿಂಗ್ ಸಹ ಗೋವಾ ಸಿನಿಮೋತ್ಸವದಲ್ಲಿ ವೇದಿಕೆ ಮೇಲೆ ಅಸಭ್ಯವಾಗಿ ದೈವದ ಅನುಕರಣೆ ಮಾಡಿದ್ದರು. ಬಳಿಕ ಕ್ಷಮೆ ಕೇಳಿದರಾದರೂ ರಣ್​​ವೀರ್ ವಿರುದ್ಧ ದೂರುಗಳು ದಾಖಲಾಗಿದ್ದವು. ಇದೀಗ ಹೈಕೋರ್ಟ್​​ನಲ್ಲಿ ದೂರಿನ ವಿಚಾರಣೆ ನಡೆದಿದ್ದು, ರಣ್​​ವೀರ್​ ಅವರ ವರ್ತನೆಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಸ್ಟಾರ್ ಆಗಿದ್ದರೇನು ಕಾನೂನಿಗಿಂತಲೂ ಮೇಲಲ್ಲ ಎಂದಿದ್ದಾರೆ ನ್ಯಾಯಮೂರ್ತಿಗಳು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Lunar Eclipse 2026: ಮಾ.03 ಚಂದ್ರಗ್ರಹಣ; ಮೇಷ ರಾಶಿಯ ಮೇಲೆ ಗ್ರಹಣದ ಪ್ರಭಾವ ಹೇಗಿರಲಿದೆ? – Kannada News | Lunar Eclipse 2026: Astrological Forecast for Aries by Dr. Basavaraj Guruji

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿ ಅವರ ಪ್ರಕಾರ, 2026ರ ಕೇತುಗ್ರಸ್ತ ಚಂದ್ರಗ್ರಹಣವು ಮೇಷ ರಾಶಿಯವರಿಗೆ ಐದನೇ ಮನೆಯಲ್ಲಿ ಸಂಭವಿಸುತ್ತದೆ. ಇದು ಚಂದ್ರ ಮತ್ತು ಕೇತುವಿನ ಗ್ರಹಣವಾಗಿದ್ದು, ಅಶ್ವಿನಿ, ಭರಣಿ, ಕೃತಿಕಾ ನಕ್ಷತ್ರದವರ ಮೇಲೆ ಪರಿಣಾಮ ಬೀರುತ್ತದೆ. ಈ ಗ್ರಹಣದ ಪ್ರಭಾವವು 90 ದಿನಗಳ ಕಾಲ ಇರುತ್ತದೆ.

ಮೇಷ ರಾಶಿಯವರಿಗೆ ಈ ಗ್ರಹಣದಿಂದ ಆರ್ಥಿಕ ವಿಷಯಗಳಲ್ಲಿ ಜಾಗ್ರತೆ ಅಗತ್ಯ. ಮಾನಸಿಕವಾಗಿ ದುರಾಸೆಗಳನ್ನು ತಪ್ಪಿಸಬೇಕು ಮತ್ತು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ವೃತ್ತಿಯಲ್ಲಿ ಪ್ರಗತಿ, ಆದಾಯದಲ್ಲಿ ಏರಿಕೆ, ವ್ಯಾಪಾರದಲ್ಲಿ ಯಶಸ್ಸು, ಪ್ರೇಮ ಮತ್ತು ವಿವಾಹ ವಿಷಯಗಳಲ್ಲಿ ಶುಭವಾಗುವ ಸಾಧ್ಯತೆ ಇದೆ. ಅರ್ಧಂಬರ್ಧ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ಬಾಕಿ ವಸೂಲಿ ಆಗುತ್ತದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ಕುಟುಂಬದ ಬೆಂಬಲ ಉತ್ತಮವಾಗಿರುತ್ತದೆ. ಮಹಿಳೆಯರಿಗೆ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಗ್ರಹಣ ಶಾಂತಿಗಾಗಿ ಓಂ ನಮಃ ಶಿವಾಯ ಜಪವನ್ನು ಹೆಚ್ಚಾಗಿ ಮಾಡುವುದು, ಗ್ರಹಣವಾದ ಒಂದು ವಾರದೊಳಗೆ ಮಹಾಲಕ್ಷ್ಮಿಯ ದರ್ಶನ ಮಾಡುವುದು ಮತ್ತು ಬೆಲ್ಲ ಅಥವಾ ಖರ್ಜೂರವನ್ನು ದಾನ ಮಾಡುವುದು ಉತ್ತಮ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಸಿ ಎದುರು ಕಣ್ಣೀರು ಹಾಕಿ ನೋವು ತೋಡಿಕೊಂಡ ಉದ್ಯೋಗಾಕಾಂಕ್ಷಿ ಮಹಿಳೆ – Kannada News | Job aspirant Woman Tears Infront of DC at Dharwad

ಧಾರವಾಡ, (ಫೆಬ್ರವರಿ 24): ಕರ್ನಾಟಕದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ (Jobs) ಭರ್ತಿಗೆ ಆಗ್ರಹಿಸಿ ಇಂದು (ಫೆಬ್ರವರಿ 24) ವಿದ್ಯಾಕಾಶಿ ಧಾರವಾಡದಲ್ಲಿ (Dharwad) ಉದ್ಯೋಗಾಕಾಂಕ್ಷಿಗಳು ಸರ್ಕಾರದ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತಿದ್ದಾರೆ. ಸಾವಿರಾರು ಯುವಕ-ಯುವತಿಯರು ಜುಬಿಲಿ ವೃತ್ತಕ್ಕೆ ದೌಡಾಯಿಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಇನ್ನು ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್.ಸ್ನೇಹಲ್ ಆಗಮಿಸಿ ಉದ್ಯೋಗಾಕಾಂಕ್ಷಿಗಳ ಮನವಿ ಸ್ವೀಕರಿಸಿದರು. ಈ ವೇಳೆ ಜಿಲ್ಲಾಧಿಕಾರಿ ಆರ್.ಸ್ನೇಹಲ್ ಮುಂದೆ ಮಹಿಳಾ ಉದ್ಯೋಗಾಕಾಂಕ್ಷಿಯೊಬ್ಬರು ತಮ್ಮ ನೋವು ತೋಡಿಕೊಂಡು ಕಣ್ಣೀರಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದಂಪತಿ ಕೈ, ಕಾಲು ಕಟ್ಟಿ ಸಿನಿಮಾ ಮಾದರಿ ದರೋಡೆ: 4 ತಿಂಗಳ ಬಳಿಕ ಖಾಕಿ ಬಲೆಗೆ ಬಿದ್ದ ಖತರ್ನಾಕ್​​ ಗ್ಯಾಂಗ್​​ – Kannada News | Davangere Police Arrest Notorious Gang in Elderly Couple Robbery Case After Four Months

ದಾವಣಗೆರೆ, ಫೆಬ್ರವರಿ 24: ಚನ್ನಗಿರಿ ತಾಲೂಕಿನ ಕಾಕನೂರ ಗ್ರಾಮದದ ಒಂಟಿ ಮನೆಯಲ್ಲಿದ್ದ ವೃದ್ಧ ದಂಪತಿಯ ಕೈ ಕಾಲು ಕಟ್ಟಿ, ಹಿಂಸೆ ನೀಡಿ ಮನೆಯಲ್ಲಿದ್ದ ಸುಮಾರು 8 ಲಕ್ಷ 40 ಸಾವಿರ ಮೌಲ್ಯದ ಚಿನ್ನಾಭರಣ ದೋಚಿದ್ದ ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ತಮಿಳುನಾಡಿನ ಹೊಸೂರು ಬತ್ತಪಲ್ಲಿಯ ಶಿವಕುಮಾರ್, ಸೇಲಂ ಜಿಲ್ಲೆಯ ಕೇಶವನ್, ದಿಂಡಿಗಲ್ ಜಿಲ್ಲೆಯ ಅರುಣ್ ಪ್ರಶಾಂತ್, ತಿರುವಣ್ಣಾಮಲೈನ ಅರಸು ಹಾಗೂ ನಾಮಕ್ಕಲ್ ಕಲಾದೇವಿ ಬಂಧಿತ ಆರೋಪಿಗಳು. ಬಂಧಿತರಿಂದ ಬರೋಬ್ಬರಿ 14 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣ ಏನು?

ಸೆಪ್ಟೆಂಬರ್​​ 6,2025ರಂದು ಆರೋಪಿಗಳು ದರೋಡೆ ನಡೆಸಿದ್ದರು. ರಾತ್ರಿ ವೇಳೆ ಮನೆ ಬಾಗಿಲು ತೆರೆದಿರೋದು ನೋಡಿ ಒಳಗೆ ನುಗ್ಗಿದ್ದ ಐದುಜನ ಮುಸುಕುಧಾರಿಗಳ ಗ್ಯಾಂಗ್​​, ಟಿವಿ ನೋಡುತ್ತಿದ್ದ ಮಾದಪ್ಪ ಅವರನ್ನು ಪಂಚೆಯಿಂದ ಕಟ್ಟಿ ಬಳಿಕ ಅಡುಗೆ ಮನೆಯಲ್ಲಿದ್ದ ಸಾವಿತ್ರಮ್ಮ ಕೈ ಕಾಲುಗಳನ್ನು ಹಗ್ಗದಿಂದ ಬಿಗಿದು ರಾಬರಿ ನಡೆಸಿತ್ತು. ಇವರ ಮೈಮೇಲಿದ್ದ ಬಂಗಾರ ಮಾತ್ರವಲ್ಲದೆ ಜೀವ ಬೆದರಿಕೆ ಹಾಕಿ ಕಪಾಟಿನಲ್ಲಿದ್ದ ಒಡವೆಗಳನ್ನೂ ಆರೋಪಿಗಳು ದೋಚಿದ್ದರು. ದಂಪತಿಯ ಜೊತೆಗಿದ್ದ ಮಗ ಕೆಲಸದ ನಿಮಿತ್ತ ಹೊರ ಹೋಗಿದ್ದ ವೇಳೆಯೇ ಘಟನೆ ನಡೆದಿರೋದು ಕುಟುಂಬವನ್ನು ಬೆಚ್ಚಿಬೀಳಿಸಿತ್ತು. ಸರ್ಕಾರಿ ನೌಕರರಾಗಿದ್ದ ದಂಪತಿ ಕರಾವಳಿ ಕರ್ನಾಟಕ ಭಾಗದಲ್ಲಿಯೇ ಹಲವು ವರ್ಷ ವಾಸವಿದ್ದು, ನಿವೃತ್ತಿ ಬಳಿಕ ಇದ್ದೊಬ್ಬ ಪುತ್ರನ ಜೊತೆ ಬಂದು ತೋಟದ ಮನೆಯಲ್ಲಿ ನೆಲೆಸಿದ್ದರು.

ಇದನ್ನೂ ಓದಿ: 400 ಕೋಟಿ ರೂ. ದರೋಡೆ ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಬಂಧನ

ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದು, ಖದೀಮರನ್ನು ಖೆಡ್ಡಾಕ್ಕೆ ಕೆಡವುವಲ್ಲಿ ಕೊನೆಗೂ ಯಶಸ್ಸು ಕಂಡಿದ್ದಾರೆ. ಆರೋಪಿಗಳನ್ನು ತಮಿಳುನಾಡಿಗೇ ತೆರಳಿ ಬಂಧಿಸಲಾಗಿದ್ದು, ಇನ್ನೂ ಹಲವೆಡೆ ಈ ರೀತಿಯ ದರೋಡೆ ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಕೆಲ ಪೊಲೀಸ್ ಠಾಣೆಗಳಲ್ಲಿಯೂ ಇವರ ವಿರುದ್ಧ ಪ್ರಕರಣಗಳು ದಾಖಲಾಗಿರೋದು ಬೆಳಕಿಗೆ ಬಂದಿದೆ. ತಮಿಳುನಾಡು ಮೂಲದ ಈ ಗ್ಯಾಂಗ್ ಚಿತ್ರದುರ್ಗದ ಮೂಲಕ ಅಡಿಕೆನಾಡು ಚನ್ನಗಿರಿ ಪ್ರವೇಶ ಮಾಡಿತ್ತು ಎಂಬದು ಕೂಡ ಬಯಲಾಗಿದ್ದು, ಆರೋಪಿಗಳಿಗೆ ಸ್ಥಳೀಯರು ಯಾರಿಂದಾದರೂ ಸಹಕಾರ ಸಿಕ್ಕಿತ್ತಾ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಸಿಎಂ ಸ್ಪಂದನೆ: ಸಮಸ್ಯೆಗೆ ಬಿಜೆಪಿಯೇ ಕಾರಣ ಎಂದ ಸಿದ್ದರಾಮಯ್ಯ – Kannada News | CM Responds to Job Seekers Protests: Siddaramaiah Blames BJP for Karnataka Vacancy Crisis

ಉದ್ಯೋಗಾಂಕ್ಷಿಗಳ ಪ್ರತಿಭಟನೆಗೆ ಸಿಎಂ ಸ್ಪಂದನೆImage Credit source: Google

ಬೆಂಗಳೂರು, ಫೆಬ್ರವರಿ 24: ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳಿಂದ ಬೃಹತ್ ಪ್ರತಿಭಟನೆ ಬೆನ್ನಲ್ಲೇ,  ವಿಚಾರವನ್ನು ಗಂಭೀರವಾಗಿ ಪರಿಗಣಿಸಿರೋದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಅನೇಕ ಸರ್ಕಾರಿ ಉದ್ಯೋಗಾರ್ಥಿಗಳು ಅನುಭವಿಸುತ್ತಿರುವ ಆತಂಕ, ನಿರಾಶೆ ಮತ್ತು ಅನಿಶ್ಚಿತತೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಪ್ರತಿಯೊಂದು ಅರ್ಜಿಯ ಹಿಂದೆ ಒಂದು ಕನಸು, ಒಂದು ಕುಟುಂಬದ ಆಸೆ, ಹಲವು ವರ್ಷಗಳ ಪರಿಶ್ರಮ  ಮತ್ತು ಕರ್ನಾಟಕಕ್ಕೆ ಸೇವೆ ಸಲ್ಲಿಸುವ ಉದ್ದೇಶ ಇದೆ. ಮುಖ್ಯಮಂತ್ರಿಯಾಗಿ, ನಿಮ್ಮ ಪ್ರತಿಯೊಬ್ಬರ ಕಾಳಜಿಯೂ ನಮ್ಮ ಗಮನದಲ್ಲಿದೆ ಎಂದವರು ಹೇಳಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?

ಈ ಕುರಿತು ಎಕ್ಸ್​​ ಪೋಸ್ಟ್​​ ಮಾಡಿರುವ ಸಿದ್ದರಾಮಯ್ಯ, ನಾವು ಅಧಿಕಾರ ಸ್ವೀಕರಿಸಿದಾಗ 2.64 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಾಗಿದ್ದವು. ಇದು ಕೇವಲ ಒಂದೇ ದಿನಕ್ಕೆ ಉಂಟಾದ ಸಮಸ್ಯೆಯಲ್ಲ. ಹಿಂದಿನ ಬಿಜೆಪಿ ಸರ್ಕಾರದ ದೀರ್ಘಕಾಲದ ನಿರ್ಲಕ್ಷ್ಯದಿಂದಾಗಿ, ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಯಾವುದೇ ಸಮರ್ಪಕ ಯೋಜನೆ ರೂಪಿಸದೇ ಇದ್ದದ್ದರಿಂದ ಸಮಸ್ಯೆ ಉಂಟಾಗಿದೆ. ಹೀಗಿದ್ದರೂ ಬಿಜೆಪಿ ನಾಯಕರು ವಿದ್ಯಾರ್ಥಿಗಳನ್ನು ತಪ್ಪುದಾರಿಗೆಳೆಯಲು ಪ್ರಯತ್ನಿಸುತ್ತಿರುವುದು ಅತ್ಯಂತ ವಿಷಾದನೀಯ. ಉದ್ಯೋಗಾರ್ಥಿಗಳನ್ನು ತಮ್ಮ ಭವಿಷ್ಯದ ಸಿದ್ಧತೆಯತ್ತ ಗಮನ ಹರಿಸಲು ಪ್ರೋತ್ಸಾಹಿಸುವ ಬದಲು, ಅಶಾಂತಿ ಉಂಟುಮಾಡಲು ಯತ್ನಿಸುತ್ತಿದ್ದಾರೆ. 2019ರಿಂದ 2023ರ ನಡುವೆ ನಡೆದ ನೇಮಕಾತಿ ಅಕ್ರಮಗಳು ಮತ್ತು ಭ್ರಷ್ಟಾಚಾರ ಪ್ರಕರಣಗಳು ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಕುಗ್ಗಿಸಿದೆ. ಖಾಲಿ ಹುದ್ದೆಗಳ ನೇಮಕ ವಿಚಾರದಲ್ಲೂ ಹಿನ್ನೆಡೆಗೆ ಕಾರಣವಾಗಿದೆ. ನಮ್ಮ ಸರ್ಕಾರ ನೇಮಕಾತಿ ಪ್ರಕ್ರಿಯೆಯಲ್ಲಿ ವಿಶ್ವಾಸಾರ್ಹತೆ, ಪಾರದರ್ಶಕತೆ ಪುನಃ ಸ್ಥಾಪಿಸಲು ಬದ್ಧವಾಗಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ; ವಿಪಕ್ಷ ನಾಯಕ ಅಶೋಕ್​​ ಸ್ಫೋಟಕ ಆರೋಪ

ಅಲ್ಲದೆ, ಆಂತರಿಕ ಮೀಸಲಾತಿ ಕುರಿತಂತೆ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದ್ದ ಕಾರಣ ಕೆಲವು ನೇಮಕಾತಿ ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಯಿತು. ಸಂವಿಧಾನಬದ್ಧತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧವಾದ ಸರ್ಕಾರವಾಗಿ, ಸಾವಿರಾರು ಅಭ್ಯರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗುವ ನಿರ್ಧಾರಗಳನ್ನು ತುರ್ತಾಗಿ ತೆಗೆದುಕೊಳ್ಳುವ ಬದಲು ಕಾನೂನು ಚೌಕಟ್ಟಿನೊಳಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಲು ನಾವು ತೀರ್ಮಾನಿಸಿದ್ದೇವೆ. ಕಳೆದ 2.5 ವರ್ಷಗಳಲ್ಲಿ 40,000ಕ್ಕೂ ಹೆಚ್ಚು ನೇಮಕಾತಿಗಳನ್ನು ವಿವಿಧ ಇಲಾಖೆಗಳಲ್ಲಿ ಮಾಡಲಾಗಿದೆ. ಹಲವು ವರ್ಷಗಳಿಂದ ವಿಳಂಬದಿಂದ ಬಳಲುತ್ತಿರುವ ಅಭ್ಯರ್ಥಿಗಳ ಸಂಕಷ್ಟವನ್ನು ಮನಗಂಡು, ಮುಂದಿನ ನೇಮಕಾತಿಗಳಲ್ಲಿ ವಯೋಮಿತಿ ಮಿತಿಯನ್ನು 5 ವರ್ಷಕ್ಕಿಂತ ಹೆಚ್ಚು ಸಡಿಲಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಉಳಿದಿರುವ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ವೇಗವಾಗಿ ಮತ್ತು ಪಾರದರ್ಶಕವಾಗಿ ನಡೆಸುವ ಭರವಸೆಯನ್ನು ನೀಡುತ್ತಿದ್ದು, ಮುಂದಿನ ವರ್ಷಗಳಲ್ಲಿ ಹೆಚ್ಚಿನ ಹುದ್ದೆಗಳ ನೇಮಕಾತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆತ್ಮವಿಶ್ವಾಸ ಮತ್ತು ಸಹನೆಯೊಂದಿಗೆ ನಿಮ್ಮ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಸಿದ್ಧತೆಯತ್ತ ಗಮನ ಹರಿಸಿ. ಕರ್ನಾಟಕದ ಯುವಕರು ನಮ್ಮ ಭವಿಷ್ಯದ ಶಿಲ್ಪಿಗಳು. ನಿಮ್ಮ ಪರಿಶ್ರಮ ನಮಗೆ ಪ್ರೇರಣೆ. ನನ್ನ ಸರ್ಕಾರ ನಿಮ್ಮೊಂದಿಗೆ ಮಾತಿನಲ್ಲಿ ಮಾತ್ರವಲ್ಲ, ಕಾರ್ಯದಲ್ಲಿಯೂ ದೃಢವಾಗಿ ನಿಂತಿದೆ ಎಂದು ಸಿಎಂ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:02 pm, Tue, 24 February 26

Source link