Category Archives: Blog

Your blog category

ನನ್ನ ಲೈಫ್​​​​ ಹೇಗಾಗಿದೆ ಅಂದ್ರೆ: ಒಂದು ಕಡೆ ಅಪ್ಪ ಇಲ್ಲ, ಇನ್ನೊಂದು ಕಡೆ ಅಮ್ಮನಿಗೆ ಅನಾರೋಗ್ಯ, ಕೈಯಲ್ಲಿ ಕೆಲಸ ಇಲ್ಲ – Kannada News | Unemployed Youth in Dharwad Demand Action on Vacant Posts, Criticise Government

ಧಾರವಾಡ, ಫೆ.24: ಸರ್ಕಾರಿ ಹುದ್ದೆಗಳ ಭರ್ತಿಗಾಗಿ ನಿರುದ್ಯೋಗಿ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಶ್ರೀನಗರ ವೃತ್ತದಿಂದ ಜುಬಿಲಿ ವೃತ್ತದವರೆಗೆ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರತಿಭಟನೆಗೆ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ದೊರೆತಿದ್ದು, ವಿದ್ಯಾರ್ಥಿಗಳ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯೊಬ್ಬರು ತಮ್ಮ ನೋವನ್ನು ಹಂಚಿಕೊಳ್ಳುತ್ತಾ, “ನಾನು ಕಳೆದ ಮೂರು ವರ್ಷಗಳಿಂದ ಓದಲು ಬಂದಿದ್ದೇನೆ. ನನ್ನ ತಂದೆ ಇಲ್ಲ. ನನ್ನ ತಾಯಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬದ ದೊಡ್ಡ ಮಗನಾಗಿ ನಾನು ಸಾಲ ಮಾಡಿ ಓದುತ್ತಿದ್ದೇನೆ. ನಾವು ಬೆಳಿಗ್ಗೆ ಟಿಫಿನ್ ಮಾಡಿದರೆ ರಾತ್ರಿ ಊಟ ಮಾಡಲು ಕಷ್ಟಪಡುವ ಪರಿಸ್ಥಿತಿ ಇದೆ” ಎಂದು ಕಣ್ಣೀರು ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಪ್ರಸ್ತಾಪಿಸಿದ ವಿದ್ಯಾರ್ಥಿ, “ಸಿದ್ದರಾಮಯ್ಯನವರು ತಮ್ಮ ಮೊಮ್ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ರಾಜಕೀಯ ಕಾರ್ಯಕ್ರಮಗಳಿಗೆ ಕರೆದೊಯ್ಯುತ್ತಾರೆ. ನಮ್ಮಂತಹ ಬಡ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವವರು ಯಾರು?” ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ನಿರುದ್ಯೋಗಿಗಳಿಗೆ ನೀಡಿರುವ ನುಡಿದಂತೆ ನಡೆ ಭರವಸೆಯ 3,000 ರೂಪಾಯಿ ಆರ್ಥಿಕ ನೆರವು ಬೇಕಾಗಿಲ್ಲ, ಬದಲಾಗಿ ಉದ್ಯೋಗ ಬೇಕು ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಅಹಿಂದ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಹೆಸರಿನಲ್ಲಿ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ವಿದ್ಯಾರ್ಥಿಗಳು, ಈ ವರ್ಗದ ಜನರಿಗೇ ಸರ್ಕಾರಿ ಉದ್ಯೋಗಗಳ ಅತಿ ಹೆಚ್ಚು ಅಗತ್ಯವಿದೆ. ಅವರಿಗೆ ಉದ್ಯೋಗ ನೀಡಲು ಸರ್ಕಾರ ಏಕೆ ವಿಫಲವಾಗಿದೆ ಎಂದು ಕೇಳಿದ್ದಾರೆ. 2019ರಲ್ಲಿ ನಡೆದ ಕೆಪಿಎಸ್‌ಸಿ ಎಸ್‌ಡಿಎ ಮತ್ತು ಎಫ್‌ಡಿಎ ಪರೀಕ್ಷೆಗಳ ನೇಮಕಾತಿಯ ಬಗ್ಗೆಯೂ ಇನ್ನೂ ಸ್ಪಷ್ಟತೆ ಇಲ್ಲ ಎಂದು ದೂರಿದ್ದಾರೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳಿದ್ದರೂ, ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದೆ. ಸುಮಾರು 2,20,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ಸರ್ಕಾರ ಜನತೆಗೆ ದ್ರೋಹ ಮಾಡುತ್ತಿದೆ. ಇದು ಕಾಂಗ್ರೆಸ್ ಸರ್ಕಾರಕ್ಕೆ ಭ್ರಷ್ಟತೆಯ ಹೆಸರನ್ನು ತರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಮ್ಮ ದುಡ್ಡಲ್ಲಿ ನಿಮ್ಮ ಬೇಳೆ ಬೇಯಿಸಿಕೊಳ್ಳಬೇಡಿ, ಮಕ್ಕಳ ಬಾಳಲ್ಲಿ ಆಟವಾಡಬೇಡಿ” ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡ್ರಗ್ಸ್, ಅತ್ಯಾಚಾರ, ಮತಾಂತರ; ಭೋಪಾಲ್​​ನ ಅಕ್ಕ-ತಂಗಿಯರ ಲೈಂಗಿಕ ಜಾಲ ಪತ್ತೆ – Kannada News | From Slum To Villa Drugged forced to convert Bhopal Sisters Arrested for Sex Racket

ನವದೆಹಲಿ, ಫೆಬ್ರವರಿ 24: ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನಲ್ಲಿ ಒಂದು ಘಟನೆ ಆಘಾತಕಾರಿ ಅಲೆಗಳನ್ನು ಎಬ್ಬಿಸಿದೆ. ಭೋಪಾಲ್‌ನ (Bhopal) ಇಬ್ಬರು ಸಹೋದರಿಯರನ್ನು ಅತ್ಯಾಚಾರ, ಬಲವಂತದ ಮತಾಂತರ ಮತ್ತು ಯುವತಿಯರಿಗೆ ಉದ್ಯೋಗ ನೀಡುವ ನೆಪದಲ್ಲಿ ಲೈಂಗಿಕ ಜಾಲ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ಬ್ಯೂಟಿಷಿಯನ್ ಮತ್ತು ಮಹಿಳೆಯೊಬ್ಬರು ನೀಡಿದ 2 ಪ್ರತ್ಯೇಕ ದೂರುಗಳಿಂದಾಗಿ ಭೋಪಾಲ್‌ನಲ್ಲಿ ಇಬ್ಬರು ಸಹೋದರಿಯರು ಮತ್ತು ಅವರ ಗ್ಯಾಂಗ್ ನಡೆಸುತ್ತಿದ್ದ ಲೈಂಗಿಕ ಮತ್ತು ಧಾರ್ಮಿಕ ಮತಾಂತರ ಜಾಲ ಬಯಲಾಗಿದೆ.

ಛತ್ತೀಸ್‌ಗಢದ 21 ವರ್ಷದ ಮತ್ತು ಭೋಪಾಲ್‌ನ 30 ವರ್ಷದ ಮಹಿಳೆಯರ ವಿರುದ್ಧ ಉದ್ಯೋಗದ ಭರವಸೆ ನೀಡಿ, ನಂತರ ಡ್ರಗ್ಸ್ ಸೇವಿಸಿ, ಅತ್ಯಾಚಾರ ಮಾಡಿಸಿ ಮತ್ತು ಬಲವಂತವಾಗಿ ಮತಾಂತರಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಕ್ಕ-ತಂಗಿಯರಾದ ಅಫ್ರೀನ್ ಮತ್ತು ಅಮ್ರೀನ್ ಅವರನ್ನು ಬಂಧಿಸಲಾಗಿದೆ. ಆದರೆ ಇನ್ನೂ ಮೂವರು ಪರಾರಿಯಾಗಿದ್ದಾರೆ.

ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲದ ಹಿನ್ನೆಲೆಯ ಹುಡುಗಿಯರನ್ನು ಗುರಿಯಾಗಿಸಿಕೊಳ್ಳುತ್ತಿದ್ದ ಈ ಇಬ್ಬರು ಸಹೋದರಿಯರು ಉದ್ಯೋಗದ ಭರವಸೆ ನೀಡಿ ಅವರನ್ನು ನಂಬಿಸಿ, ಅವರ ವಿಶ್ವಾಸ ಗಳಿಸಿ, ನಂತರ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು. ಅಮ್ರೀನ್ ತನ್ನ ಜೊತೆ ರೂಂನಲ್ಲಿದ್ದ 21 ವರ್ಷದ ಬ್ಯೂಟಿಷಿಯನ್‌ ಅನ್ನು ನವೆಂಬರ್ 2025ರಲ್ಲಿ ತನ್ನ ಸಂಬಂಧಿಕರನ್ನು ಭೇಟಿ ಮಾಡಲು ಭೋಪಾಲ್‌ನ ಅಬ್ಬಾಸ್ ನಗರಕ್ಕೆ ಕರೆದೊಯ್ದಿದ್ದಳು. ಅಲ್ಲಿ, ಅಮ್ರೀನ್‌ಳ ಸಹೋದರ ಬಿಲಾಲ್ ಚಹಾದಲ್ಲಿ ಡ್ರಗ್ಸ್ ಬೆರೆಸಿ ಆಕೆ ಪ್ರಜ್ಞಾಹೀನಳಾದ ನಂತರ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ.

ಅದರ ಮುಂದಿನ ತಿಂಗಳು, ಅಮ್ರೀನ್ ಆಕೆಯನ್ನು ವೈಯಕ್ತಿಕ ಕೆಲಸದ ನೆಪದಲ್ಲಿ ಅಹ್ಮದಾಬಾದ್‌ಗೆ ಕರೆದೊಯ್ದಳು. ಅಲ್ಲಿ ಯಾಸಿರ್ ಎಂಬ ವ್ಯಕ್ತಿಯ ಪರಿಚಯವಾಯಿತು. ಅವನು ಕೂಡ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಅಮ್ರೀನ್‌ಳ ಆಪ್ತ ಸಹಾಯಕ ಚಂದನ್ ಯಾದವ್ ಕೂಡ ಆಗಸ್ಟ್ 2025 ಮತ್ತು ಜನವರಿ 2026ರ ನಡುವೆ ಹಲವು ಬಾರಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ. ಈ ವಿಷಯವನ್ನು ಯಾರಿಗೂ ಹೇಳದಂತೆ ಆಕೆಗೆ ಬೆದರಿಕೆ ಹಾಕಲಾಗಿತ್ತು. ಅತ್ಯಾಚಾರ ನಡೆಸುವಾಗ ಫೋಟೋಗಳನ್ನು ತೆಗೆದುಕೊಂಡು ಬ್ಲಾಕ್​ಮೇಲ್ ಮಾಡುತ್ತಿದ್ದರು ಎಂದು ಕೂಡ ಆಕೆ ದೂರಿನಲ್ಲಿ ಆರೋಪಿಸಿದ್ದಾಳೆ.

ಇದನ್ನೂ ಓದಿ: ಡಾಕ್ಟರ್ ಆಗು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ, ತಂಗಿ ಎದುರೇ ದೇಹ ಕತ್ತರಿಸಿ ಡ್ರಮ್​​ನಲ್ಲಿಟ್ಟ

ಇದಿಷ್ಟೇ ಅಲ್ಲದೆ, ಬಲವಂತವಾಗಿ ಪಬ್​ಗೆ ಕರೆದುಕೊಂಡು ಹೋಗುತ್ತಿದ್ದ ಅವರು ಡ್ರಗ್ಸ್ ಸೇವಿಸುವಂತೆ ಒತ್ತಾಯಿಸುತ್ತಿದ್ದರು. ಅಲ್ಲಿ ಲೈಂಗಿಕ ದೌರ್ಜನ್ಯವನ್ನು ಕೂಡ ನಡೆಸುತ್ತಿದ್ದರು. ಹಾಗೇ, ಅವಳಿಗೆ ಆಕೆಯ ಧರ್ಮವನ್ನು ಬದಲಾಯಿಸುವಂತೆ ಮತ್ತು ಬುರ್ಖಾ ಧರಿಸುವಂತೆ ಒತ್ತಾಯಿಸುತ್ತಿದ್ದರು. ಕೊನೆಗೂ ಆಕೆ ಅವರಿಂದ ತಪ್ಪಿಸಿಕೊಂಡು ಜನವರಿ ತಿಂಗಳಲ್ಲಿ ಅಲ್ಲಿಂದ ಪರಾರಿಯಾದಳು. ಕೊನೆಗೆ ಫೆಬ್ರವರಿಯಲ್ಲಿ ಅವಳು ಭೋಪಾಲ್‌ಗೆ ಹಿಂತಿರುಗಿ, ಬಾಗ್ಸೆವಾನಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಳು. ಇದರಿಂದಲೇ ಆ ಸಹೋದರಿಯರ ದಂಧೆ ಬಯಲಾಯಿತು.

ಅಮ್ರೀನ್ ಮನೆಯಲ್ಲಿ ಮನೆಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ ಮತ್ತೊಬ್ಬಳು ಮಹಿಳೆ ಕೂಡ ಈ ಆರಂಭದಲ್ಲಿ ಇದೇ ರೀತಿಯ ದೂರು ದಾಖಲಿಸಿದ್ದಳು. ಆಕೆ ಕೂಡ ಯಾಸಿರ್, ಬಿಲಾಲ್ ಮತ್ತು ಚಂದನ್ ತನಗೆ ಡ್ರಗ್ಸ್​ ಸೇವಿಸುವಂತೆ ಒತ್ತಾಯಿಸಿದ್ದಾರೆ, ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ. ಆಕೆ ಪೊಲೀಸರಿಗೆ ವೀಡಿಯೊ ಪುರಾವೆಗಳನ್ನು ಸಹ ಒದಗಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮೂವರು ಪುರುಷರು ಮತ್ತು ಸಹೋದರಿಯರ ವಿರುದ್ಧ ಅತ್ಯಾಚಾರ, ಕ್ರಿಮಿನಲ್ ಪಿತೂರಿ ಮತ್ತು ಬಲವಂತದ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಇದನ್ನೂ ಓದಿ: ಒಡಿಶಾದ ನವವಧು ಕಿಡ್ನಾಪ್​ ಪ್ರಕರಣಕ್ಕೆ ಹೊಸ ತಿರುವು; ಪ್ರಿಯಕರನ ಜೊತೆ ಸೇರಿ ಮಾಡಿದ ಪ್ಲಾನ್ ಅಂತಿಂಥದ್ದಲ್ಲ!

ಭೋಪಾಲ್‌ನ ಹೋಶಂಗಾಬಾದ್‌ನಲ್ಲಿರುವ ದುಬಾರಿ ಸಾಗರ್ ರಾಯಲ್ ವಿಲ್ಲಾಸ್ ಕಾಲೋನಿಯಲ್ಲಿರುವ ಐಷಾರಾಮಿ ಫ್ಲಾಟ್‌ನಲ್ಲಿ ಸಹೋದರಿಯರು ವಾಸಿಸುತ್ತಿದ್ದರು. ಈ ಇಬ್ಬರು ಸಹೋದರಿಯರ ಚಟುವಟಿಕೆಗಳು ಬಹಳ ಅನುಮಾನವನ್ನು ಹುಟ್ಟುಹಾಕಿದ್ದವು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಪುರುಷರು ಮತ್ತು ಚಿಕ್ಕ ಹುಡುಗರು ಆಗಾಗ ತಡರಾತ್ರಿ ಅವರ ಫ್ಲಾಟ್‌ಗೆ ಭೇಟಿ ನೀಡುತ್ತಿದ್ದರು ಎಂದು ನೆರೆಹೊರೆಯವರು ಹೇಳಿದ್ದಾರೆ.

ಬುರ್ಖಾ ಧರಿಸಿದ ಮಹಿಳೆಯರು ಹೆಚ್ಚಾಗಿ ಫ್ಲಾಟ್‌ಗೆ ಭೇಟಿ ನೀಡುತ್ತಿರುವುದು ಕಂಡುಬಂದರೂ ಅಫ್ರೀನ್ ಮತ್ತು ಅಮ್ರೀನ್ ಮಾತ್ರ ಯಾವಾಗಲೂ ಜೀನ್ಸ್ ಧರಿಸುತ್ತಿದ್ದರು ಎಂದು ನಿವಾಸಿಗಳು ಹೇಳಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ಸ್ಥಳೀಯ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ಶುರುವಾಗಿದೆ. ಭೋಪಾಲ್‌ನಲ್ಲಿ ಮಹಿಳೆಯರು ಮತ್ತು ಯುವತಿಯರಿಗಾಗಿ ಜಾಗೃತಿ ಅಭಿಯಾನಗಳನ್ನು ಸಂಘಟನೆ ಪ್ರಾರಂಭಿಸಲಿದೆ ಎಂದು ಹಿಂದೂ ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ತಿವಾರಿ ಹೇಳಿದ್ದಾರೆ. ನೆರೆಹೊರೆಯ ಮಟ್ಟದಲ್ಲಿ ಮಹಿಳಾ ಬ್ರಿಗೇಡ್‌ಗಳನ್ನು ರಚಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಒಂದು ಕಾಲದಲ್ಲಿ ಅಬ್ಬಾಸ್ ನಗರದ ಸಾಧಾರಣ ಸ್ಲಮ್​ನಲ್ಲಿ ವಾಸಿಸುತ್ತಿದ್ದ ಈ ಸಹೋದರಿಯರು ಇತ್ತೀಚೆಗೆ ಭೋಪಾಲ್‌ನ ಸಾಗರ್ ರಾಯಲ್ ವಿಲ್ಲಾದಲ್ಲಿರುವ ಐಷಾರಾಮಿ ವಿಲ್ಲಾಕ್ಕೆ ಸ್ಥಳಾಂತರಗೊಂಡಿದ್ದರು ಎಂದು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ. ಲೈಂಗಿಕ ಜಾಲದ ಮೂಲಕವೇ ಅವರಿಬ್ಬರೂ ಅಕ್ರಮವಾಗಿ ಹಣ ಸಂಪಾದಿಸಿದ್ದರು ಎಂದು ತಿಳಿದುಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಸಾರಿಗೆ ನೌಕರರಾಯ್ತು ಈಗ ಗುತ್ತಿಗೆದಾರರ ಸರದಿ: ಬಾಕಿ ಬಿಲ್​​ಗೆ ಆಗ್ರಹಿಸಿ ಮಾ.6ರಂದು ಪ್ರತಿಭಟನೆಗೆ ಕರೆ – Kannada News | Contractors’ Bill Crisis: Karnataka Government Owes Rupees 37000 Crore; Protest Planned March 6

ಗುತ್ತಿಗೆದಾರರ ಸಂಘದಿಂದ ಸುದ್ದಿಗೋಷ್ಠಿImage Credit source: Tv9 Kannada

ತುಮಕೂರು, ಫೆಬ್ರವರಿ 24: ಬಾಕಿ ಬಿಲ್​​ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿರುವ ಗುತ್ತಿಗೆದಾರರ ಸಂಘ, ಮಾ. 6ರಂದು ಪ್ರತಿಭಟನೆ ನಡೆಸಲು ಮುಂದಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ತುಮಕೂರು ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರ ಸುಮಾರು 37 ಸಾವಿರ ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.

ಈ ಸರ್ಕಾರದ ಕೆಲವು ಇಲಾಖೆಗಳಲ್ಲಿ ಪ್ಯಾಕೇಜ್ ಸಿಸ್ಟಮ್ ಅವ್ಯಾಹತವಾಗಿ ನಡೆಯುತ್ತಿದ್ದು, ಗುತ್ತಿಗೆದಾರರ ಸಮಸ್ಯೆಗಳನ್ನು ಪರಿಹರಿಸುವಂತೆ ಹಲವಾರು ಬಾರಿ ಮನವಿ ಕೊಟ್ಟರೂ ಸರ್ಕಾರ ಸ್ಪಂದಿಸುತ್ತಿಲ್ಲ. ಸೌಜನ್ಯಕ್ಕೂ ನಮ್ಮನ್ನು ಕರೆದು ಮಾತನಾಡುವ ಕೆಲಸ ಆಗಿಲ್ಲ. ನಮಗೆ ಜಿಎಸ್‌ಟಿ ಸೇರಿದಂತೆ ಮತ್ತಿತರ ಸಮಸ್ಯೆಗಳಿದ್ದು, ಮುಖ್ಯಮಂತ್ರಿಗಳ ಜೊತೆ ಮಾತನಾಡಿದರೂ ಯಾವುದೇ ಸಮಸ್ಯೆ ಬಗೆಹರಿಯುತ್ತಿಲ್ಲ. ಹೀಗಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿರೋದಾಗಿ ಸಂಘ ತಿಳಿಸಿದೆ. ಸುಮಾರು 15 ಸಾವಿರ ಜನ ಸೇರಿ ಬೆಂಗಳೂರಿನ ಫ್ರೀಡಂ ಪಾರ್ಕ್​​ನಲ್ಲಿ ಪ್ರತಿಭಟನೆ ನಡೆಸೋದಾಗಿ ಮಾಹಿತಿ ನೀಡಿದೆ.

ಇದನ್ನೂ ಓದಿ: ಬಾಕಿ ಬಿಲ್ ಕ್ಲಿಯರ್ ಮಾಡದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಸ್ಥಗಿತ; ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರ ಸಂಘ

ಯಾವ್ಯಾವ ಇಲಾಖೆಯಲ್ಲಿ ಎಷ್ಟು ಹಣ ಬಾಕಿ?

  • ಲೋಕೋಪಯೋಗಿ ಇಲಾಖೆ (PWD) – 8,370.76 ಕೋಟಿ ರೂ.
  • ಬೃಹತ್ ನೀರಾವರಿ ಇಲಾಖೆ – 13,000 ಕೋಟಿ ರೂ.
  • ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ – 3,800 ಕೋಟಿ ರೂ.
  • ಸಣ್ಣ ನೀರಾವರಿ ಇಲಾಖೆ – 3,000 ಕೋಟಿ ರೂ.
  • ನಗರಾಭಿವೃದ್ಧಿ ಇಲಾಖೆ – 2,000 ಕೋಟಿ ರೂ.
  • ವಸತಿ ಇಲಾಖೆ – 2,600 ಕೋಟಿ ರೂ.
  • ಕಾಮಗಾರಿ ಇಲಾಖೆ – 2,000 ಕೋಟಿ ರೂ.
  • ಜಿಬಿಎ – 2,600 ಕೋಟಿ ರೂ.

ಮೇಲಿನ ಎಲ್ಲಾ ಇಲಾಖೆಗಳು ಸೇರಿ ಗುತ್ತಿಗೆದಾರರಿಗೆ ಬಾಕಿ ಬಿಲ್​​ ಮೊತ್ತ ಒಟ್ಟು 37,370.76 ಕೋಟಿ ರೂಪಾಯಿಗಳಿವೆ. ಇದರಿಂದ ಗುತ್ತಿಗೆದಾರರು ವಿಷ ಕುಡಿಯಬೇಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸುಮಾರು 16 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೂರಾರು ಜನ ಗುತ್ತಿಗೆದಾರರು ಮನೆ-ಮಠ ಬಿಟ್ಟುಹೋಗಿದ್ದಾರೆ. ಹೀಗಾಗಿ ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಮುಷ್ಕರ ಮಾಡುತ್ತಿದ್ದೇವೆ. ಒಂದು ದಿನ ಶಾಂತಿಯುತವಾಗಿ ಪ್ರತಿಭಟನೆ ನಡೆಯಲಿದ್ದು, ಸರ್ಕಾರ ಸ್ಪಂದಿಸದಿದ್ದರೆ ಉಗ್ರವಾದ ಹೋರಾಟ ಮಾಡೋದಾಗಿ ಸಂಘ ತಿಳಿಸಿದೆ. ತುಮಕೂರು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಲರಾಮಯ್ಯ ಸೇರಿದಂತೆ, ರಾಜ್ಯ ಮತ್ತು ಜಿಲ್ಲಾ ಸಂಘದ ಪದಾಧಿಕಾರಿಗಳು ಈ ವೇಳೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶಾರಂಗ್ ಶಕ್ತಿ ಖರೀದಿಸಿದ ಎಲ್​ಎಟಿ ಏರೋಸ್ಪೇಸ್; ಅಗ್ಗದ ವಿಮಾನ ತಯಾರಿಸುವ ಹಾದಿಯಲ್ಲಿ ಜೊಮಾಟೊ ಸಂಸ್ಥಾಪಕ – Kannada News | Deepinder Goyal’s LAT Aerospace acquires Sharang Shakti, a defence startup

ನವದೆಹಲಿ, ಫೆಬ್ರುವರಿ 24: ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಮಾಲಕತ್ವದ ಮತ್ತೊಂದು ಕಂಪನಿಯಾದ ಎಲ್​ಎಟಿ ಏರೋಸ್ಪೇಸ್ ಇದೀಗ ಡಿಫೆನ್ಸ್ ಸೆಕ್ಟರ್​ನ ಸ್ಟಾರ್ಟಪ್​ವೊಂದನ್ನು ಖರೀದಿಸಿದೆ. ಗುರುಗ್ರಾಮ್​ನಲ್ಲಿರುವ ಶಾರಂಗ್ ಶಕ್ತಿ ಎನ್ನುವ ಹೊಸ ಡಿಫೆನ್ಸ್ ರೋಬೋಟಿಕ್ಸ್ ಸ್ಟಾರ್ಟಪ್ ಅನ್ನು ಖರೀದಿ ಮಾಡಿದೆ. ಮುಂದಿನ ತಲೆಮಾರಿನ ನಾಗರಿಕ ವಿಮಾನಯಾನ ಪ್ಲಾಟ್​ಫಾರ್ಮ್​ಗಳನ್ನು ನಿರ್ಮಿಸುವ ದೂರಗಾಮಿ ಗುರಿ ಹೊಂದಿರುವ ಎಲ್​ಎಟಿ ಏರೋಸ್ಪೇಸ್​ಗೆ ಇದು ಮಹತ್ವದ ಹೆಜ್ಜೆ ಎನಿಸಿದೆ.

ಡಿಫೆನ್ಸ್ ಏವಿಯೇಶನ್​ನಲ್ಲಿರುವ ಕಂಪನಿಗಳು ಸಿವಿಲ್ ಏವಿಯೇಶನ್​ಗೆ ಬರುವುದು ಕಡಿಮೆ. ದೀಪಿಂದರ್ ಗೋಯಲ್ ಅವರ ಮಹತ್ವಾಕಾಂಕ್ಷೆಯ ಎಲ್​ಎಟಿ ಏರೋಸ್ಪೇಸ್ ಇಂತಹದ್ದೊಂದು ರಿಸ್ಕ್ ತೆಗೆದುಕೊಂಡಿದೆ. ಗೋಯಲ್ ಪ್ರಕಾರ, ವಿಮಾನಯಾನದ ಪ್ರಮುಖ ತಂತ್ರಜ್ಞಾನಗಳು ಎರಡಕ್ಕೂ ಸಾಮಾನ್ಯವಾಗಿರುತ್ತವೆ.

ಶಾರಂಗ್ ಶಕ್ತಿ ಕಂಪನಿ 2023ರಲ್ಲಿ ಆರಂಭವಾಗಿದೆ. ಇದು ಇನ್ನೂ ಆರಂಭಿಕ ಹಂತದಲ್ಲಿದ್ದು, ಕೆಲ ಪ್ರಮುಖ ತಂತ್ರಜ್ಞಾನಗಳನ್ನು ಸ್ವಂತವಾಗಿ ಅಭಿವೃದ್ದಿಪಡಿಸಿದೆ. ಈ ಹಂತದಲ್ಲಿ ಎಲ್​ಎಟಿ ಎರೋಸ್ಪೇಸ್ ಈ ಸ್ಟಾರ್ಟಪ್ ಅನ್ನು ಖರೀದಿ ಮಾಡಿರುವುದು ಗಮನಾರ್ಹ. ಈ ತಂತ್ರಜ್ಞಾನ ಸಾಮರ್ಥ್ಯವನ್ನು ಬಳಸಿ ಡಿಫೆನ್ಸ್ ಮತ್ತು ಸಿಲಿಲ್ ಏವಿಯೇಶನ್ ವಿಮಾನಗಳನ್ನು ತಯಾರಿಸುವ ಆಶಯದಲ್ಲಿದೆ.

ದೀಪಿಂದರ್ ಗೋಯಲ್ ಅವರು ಜೊಮಾಟೊದ ಸಂಸ್ಥಾಪಕರು. ಬ್ಲಿಂಕಿಟ್ ಇತ್ಯಾದಿ ಕಂಪನಿಗಳನ್ನೂ ಖರೀದಿಸಿದ್ದಾರೆ. ಎಟರ್ನಲ್ ಅಡಿಯಲ್ಲಿ ಈ ಕಂಪನಿಗಳಿವೆ. ದೀಪಿಂದರ್ ಅವರು ಎಟರ್ನಲ್ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿ, ಎಲ್​ಎಟಿ ಏರೋಸ್ಪೇಸ್ ಹಾಗು ಇತರ ಪ್ರಾಜೆಕ್ಟ್​ಗಳಲ್ಲಿ ನಿರತರಾಗಿದ್ದಾರೆ.

ಸಣ್ಣ ಗಾತ್ರದ ಎಲೆಕ್ಟ್ರಿಕ್ ವಿಮಾನಗಳನ್ನು ನಿರ್ಮಿಸಿ, ಅಗ್ಗದ ದರಕ್ಕೆ ಪ್ರಯಾಣಾವಕಾಶ ಕಲ್ಪಿಸುವುದು ದೀಪಿಂದರ್ ಗೋಯಲ್ ಅವರಿಗಿರುವ ಮಹತ್ವಾಕಾಂಕ್ಷೆ. ಸಣ್ಣ ಪುಟ್ಟ ಪಟ್ಟಣಗಳ ನಡುವೆ ವಿಮಾನ ಹಾರಾಟ ಆರಂಭಿಸುವುದು ಅವರ ಗುರಿ. ಬಸ್ಸು, ಕ್ಯಾಬ್​ಗಳಂತೆ ಸಾಮಾನ್ಯ ಜನರು ವಿಮಾನಗಳ ಬಳಸುವಂತಾಗಬೇಕು ಎಂಬುದು ಅವರ ಉದ್ದೇಶ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಐಪಿಎಲ್ ಆರಂಭಕ್ಕೂ ಮುನ್ನ ಲಕ್ನೋ ತಂಡದ ಹೊಸ ಲೋಗೋ ಅನಾವರಣ – Kannada News | LSG New Logo Revealed: Lucknow Super Giants Unveil Symbolism for IPL Success

2026 ರ ಟಿ20 ವಿಶ್ವಕಪ್ ಮುಗಿದ ಬಳಿಕ ಕೆಲವೇ ಕೆಲವು ದಿನಗಳಲ್ಲಿ ಐಪಿಎಲ್ ಸೀಸನ್ ಆರಂಭವಾಗಲಿದೆ. ವೇಳಾಪಟ್ಟಿ ಕೂಡ ಇಷ್ಟರಲ್ಲೇ ಪ್ರಕಟವಾಗಲಿದೆ. ಸಧ್ಯದ ಮಾಹಿತಿ ಪ್ರಕಾರ ಮಾರ್ಚ್​ ಕೊನೆಯ ವಾರದಿಂದ ಐಪಿಎಲ್ ಆರಂಭವಾಗಬಹುದು. ಆದರೆ ಅದಕ್ಕೂ ಮುನ್ನ, ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ತನ್ನ ಲೋಗೋವನ್ನು ಬದಲಾಯಿಸಿದೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಲಕ್ನೋ ತಂಡದ ಹಿಂದಿನ ಲೋಗೋದಲ್ಲಿ ರೆಕ್ಕೆಗಳ ನಡುವೆ ಬ್ಯಾಟ್ ಮತ್ತು ಚೆಂಡನ್ನು ಒಳಗೊಂಡಿತ್ತು. ಇದೀಗ ಹೊಸ ಲೋಗೋ ಲಕ್ನೋ ಮತ್ತು ಉತ್ತರ ಪ್ರದೇಶದ ಸಂಸ್ಕೃತಿಯನ್ನು ಸಾಕಾರಗೊಳಿಸುವ ಮೂರು ಚಿಹ್ನೆಗಳನ್ನು ಒಳಗೊಂಡಿದೆ. ಎಡ ಮತ್ತು ಬಲಭಾಗದಲ್ಲಿರುವ ರೆಕ್ಕೆಗಳು ಗರುಡನನ್ನು ಪ್ರತಿನಿಧಿಸುತ್ತವೆ, ಮಧ್ಯದಲ್ಲಿ ರಾಜತ್ವ ಮತ್ತು ಶಕ್ತಿಯನ್ನು ಸಂಕೇತಿಸುವ ಕಿರೀಟ ಮತ್ತು ಮಧ್ಯದಲ್ಲಿ ಆನೆ, LSG ತಂಡದೊಂದಿಗೆ ಗಣೇಶನ ಉಪಸ್ಥಿತಿಯನ್ನು ಸಂಕೇತಿಸುತ್ತದೆ.

ಆರ್‌ಪಿಎಸ್‌ಜಿ ಗ್ರೂಪ್‌ನ ಉಪಾಧ್ಯಕ್ಷ ಶಾಶ್ವತ್ ಗೋಯೆಂಕಾ, ಹೊಸ ಲೋಗೋ ಇಡೀ ಎಲ್‌ಎಸ್‌ಜಿ ತಂಡದ ಚೈತನ್ಯವನ್ನು ಸಾಕಾರಗೊಳಿಸುತ್ತದೆ ಎಂದಿದ್ದಾರೆ. ‘ಲೋಗೋದಲ್ಲಿರುವ ಹದ್ದು, ತಂಡವು ಹೊಸ ಎತ್ತರವನ್ನು ತಲುಪಲು ಸ್ಫೂರ್ತಿ ನೀಡುತ್ತದೆ, ಮಧ್ಯದಲ್ಲಿರುವ ಕಿರೀಟವು ತಂಡದ ದೃಢನಿಶ್ಚಯ ಮತ್ತು ಹೆಮ್ಮೆಯನ್ನು ಸಂಕೇತಿಸುತ್ತದೆ ಮತ್ತು ಆನೆ ಈ ಪ್ರದೇಶದ ಶಕ್ತಿಯನ್ನು ಪ್ರತಿನಿಧಿಸುತ್ತದೆ ಎಂದು ಅವರು ವಿವರಿಸಿದ್ದಾರೆ.

2022 ರಲ್ಲಿ ಐಪಿಎಲ್​ಗೆ ಪಾದಾರ್ಪಣೆ ಮಾಡಿದ ಲಕ್ನೋ ತಂಡವು ಇನ್ನೂ ಒಂದೇ ಒಂದು ಸೀಸನ್ ಗೆದ್ದಿಲ್ಲ. 2022 ಮತ್ತು 2023 ರಲ್ಲಿ ಪ್ಲೇಆಫ್ ತಲುಪಿತ್ತಾದರೂ ಪ್ರಶಸ್ತಿಯನ್ನು ಗೆಲ್ಲುವಲ್ಲಿ ವಿಫಲವಾಗಿತ್ತು. ಆ ನಂತರ 2024 ಮತ್ತು 2025 ರ ಐಪಿಎಲ್ ಸೀಸನ್‌ಗಳಲ್ಲಿ, ಲಕ್ನೋ ಸೂಪರ್ ಜೈಂಟ್ಸ್ 7 ನೇ ಸ್ಥಾನದಲ್ಲಿ ಮುಗಿಸಿತ್ತು. ಪ್ರಸ್ತುತ, 10 ಐಪಿಎಲ್ ತಂಡಗಳಲ್ಲಿ, ಫೈನಲ್ ತಲುಪದ ಏಕೈಕ ತಂಡ ಲಕ್ನೋ. ಹೊಸ ಲೋಗೋ ಅವರ ಅದೃಷ್ಟವನ್ನು ಬದಲಾಯಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಮತ್ತೊಂದು ಪವರ್​ಫುಲ್ ಪಾತ್ರದ ಪರಿಚಯ: ಯಾರಿದು ಬೀರ? – Kannada News | Balaji Manohar as BHEERA in Yash starrer Toxic movie

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಟೀಸರ್​​ ತುಂಬೆಲ್ಲ ಯಶ್ ಆವರಿಸಿಕೊಂಡಿದ್ದಾರೆ. ಯಶ್ ಅವರ ಎರಡು ಲುಕ್​​ಗಳ ಸಖತ್ ವೈರಲ್ ಆಗಿವೆ. ‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ಜೊತೆಗೆ ಹಲವು ನಟಿಯರು ನಟಿಸಿದ್ದು, ಟೀಸರ್​ ಬಿಡುಗಡೆಗೆ ಮುಂಚೆಯೇ ನಟಿಯರ ಲುಕ್​​ಗಳನ್ನು ಅವರ ಪಾತ್ರದ ಕಿರು ಪರಿಚಯವನ್ನು ಮಾಡಿಕೊಡಲಾಗಿತ್ತು. ಇದೀಗ ಸಿನಿಮಾದ ಇತರೆ ಕೆಲವು ಪ್ರಮುಖ ಪಾತ್ರಗಳ ಕಿರು ಪರಿಚಯ ಮಾಡಿಕೊಡುತ್ತಿದೆ ಚಿತ್ರತಂಡ. ಇದೀಗ ‘ಬೀರ’ ಹೆಸರಿನ ಪಾತ್ರದ ಲುಕ್ ಬಿಡುಗಡೆ ಮಾಡಲಾಗಿದೆ.

ಕನ್ನಡ ಮಾತ್ರವಲ್ಲದೆ ಪ್ಯಾನ್ ಇಂಡಿಯಾ ಪೋಷಕ ನಟ ಎನಿಸಿಕೊಂಡಿರುವ ಬಾಲಾಜಿ ಮನೋಹರ್ ಅವರ ಪಾತ್ರದ ಪೋಸ್ಟರ್ ಅನ್ನು ಇದೀಗ ಯಶ್ ಸೇರಿದಂತೆ ಚಿತ್ರತಂಡ ಹಂಚಿಕೊಂಡಿದೆ. ಅದ್ಭುತ ನಟರಾಗಿರುವ ಬಾಲಾಜಿ ಮನೋಹರ್ ಅವರು ‘ಬೀರ’ ಹೆಸರಿನ ಪವರ್​ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಬಿಡುಗಡೆ ಆಗಿರುವ ಅವರ ಲುಕ್​​ ಸಖತ್ ಆಗಿದೆ. ಹಳದಿ ಬಣ್ಣದ ಟಿಂಟ್ ಹೊಂದಿರುವ ದೊಡ್ಡ ಗ್ಲಾಸು ಧರಿಸಿ, ಬಾಯಲ್ಲಿ ಸಿಗಾರ್ ಇರಿಸಿಕೊಂಡು ರಗಡ್ ಆಗಿ ಕಾಣಿಸಿಕೊಂಡಿದ್ದಾರೆ ಬಾಲಾಜಿ. ಟೀಸರ್​​ನಲ್ಲಿ ಕಾಣುತ್ತಿರುವ ರಾಯಲ್ ಸರ್ಕಸ್ ಕಂಪೆನಿಯ ಮಾಲೀಕ ಈ ಬೀರ ಇರಬಹುದೇ ಎಂಬ ಅನುಮಾನ ಮೂಡುವಂತಿದೆ ಅವರ ಲುಕ್.

ಬಾಲಾಜಿ ಮನೋಹರ್ ಅವರು ಹಲವಾರು ಕನ್ನಡದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಇನ್ನೂ ಕೆಲ ಭಾಷೆಗಳ ಸಿನಿಮಾಗಳಲ್ಲಿಯೂ ನಟಿಸಿದ್ದು, ತಮ್ಮ ಅದ್ಭುತ ನಟನೆಯಿಂದ ಸಿನಿ ಪ್ರೇಮಿಗಳ ಮೆಚ್ಚುಗೆ ಗಳಿಸಿದ್ದಾರೆ. ‘ಲೂಸಿಯಾ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನೆನಪುಳಿಯುವ ಪಾತ್ರಗಳಲ್ಲಿ ಅವರು ನಟಿಸಿದ್ದಾರೆ. ಇದೀಗ ಅವರು ‘ಟಾಕ್ಸಿಕ್’ ಸಿನಿಮಾನಲ್ಲಿ ಪವರ್​ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಾಜಿ ಮನೋಹರ್ ಮಾತ್ರವೇ ಅಲ್ಲದೆ ಅಕ್ಷಯ್ ಒಬೆರಾಯ್, ಸುದೇವ್ ನಾಯರ್ ಅವರುಗಳು ಸಹ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿದ್ದು, ಅವರ ಪಾತ್ರದ ಪೋಸ್ಟರ್​​ಗಳನ್ನು ಸಹ ಬಿಡುಗಡೆ ಮಾಡಲಾಗಿದೆ.

ಯಶ್ ಅವರು ರಾಯ ಹೆಸರಿನ ಪಾತ್ರದ ಜೊತೆಗೆ ‘ಟಿಕೆಟ್’ ಹೆಸರಿನ ಪಾತ್ರದಲ್ಲಿಯೂ ನಟಿಸಿದ್ದು, ಎರಡೂ ಪಾತ್ರಗಳ ಲುಕ್ ಈಗಾಗಲೇ ರಿವೀಲ್ ಆಗಿದೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ಸಹ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾ ನಿರ್ದೇಶನ ಮಾಡಿರುವುದು ಗೀತು ಮೋಹನ್​​ದಾಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಲೆ ಮಹದೇಶ್ವರನಿಗೆ ಮಹಾಮೋಸ: ಸಚಿವರ ಕೈಗೆ ರೆಡ್​​​ ಹ್ಯಾಂಡ್​​ ಆಗಿ ಸಿಕ್ಕಿಬಿದ್ದ ಗುತ್ತಿಗೆದಾರರು – Kannada News | K. Venkatesh Angered by MM Hills Poor Work: Minister Demands Action on Contractor

ಚಾಮರಾಜನಗರ, ಫೆ.24: ರಾಜ್ಯದ ಪವಿತ್ರ ಯಾತ್ರಾಸ್ಥಳಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟದಲ್ಲಿ (Malai Mahadeshwara Hills) ನಡೆಯುತ್ತಿರುವ ವಿವಿಧ ಕಾಮಗಾರಿಗಳಲ್ಲಿ ಕಳಪೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದ ಸಚಿವ ಕೆ. ವೆಂಕಟೇಶ್, ಬೆಟ್ಟದಲ್ಲಿ ಪ್ರಗತಿಯಲ್ಲಿರುವ ತಿರುಪತಿ ಮಾದರಿಯ ಕ್ಯೂ ಲೈನ್ (ಸರತಿ ಸಾಲು) ಬ್ಲಾಕ್ ನಿರ್ಮಾಣ, ಮಾದಪ್ಪನ ಪ್ರತಿಮೆ ಹಾಗೂ ವಜ್ರಮಲೆ ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿದರು.

ವಜ್ರಮಲೆಯಲ್ಲಿ ನಡೆಯುತ್ತಿರುವ ಪೀಠೋಪಕರಣಗಳ ಕಾಮಗಾರಿಯನ್ನು ಸಚಿವರು ಸೂಕ್ಷ್ಮವಾಗಿ ಗಮನಿಸಿದಾಗ, ಒಪ್ಪಂದದಂತೆ ತೇಗದ ಮರಗಳನ್ನು ಬಳಸುವ ಬದಲು ಬಿಳಿ ಮರಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಇದರಿಂದ ಕೋಪಗೊಂಡ ಸಚಿವರು, “ಭಕ್ತರ ಹಣದಲ್ಲಿ ಇಂತಹ ಕಳಪೆ ಕೆಲಸ ಸಹಿಸುವುದಿಲ್ಲ” ಎಂದು ಕಿಡಿಕಾರಿದರು. ಕೂಡಲೇ ಕಾಮಗಾರಿಯ ಗುಣಮಟ್ಟವನ್ನು ಮರುಪರಿಶೀಲಿಸುವಂತೆ ಮತ್ತು ತಪ್ಪಿತಸ್ಥ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಕೇಸ್​​ನಲ್ಲಿ ಜೈಲು ಪಾಲಾಗಿದ್ದ ಮ್ಯೂಸಿಕ್ ಮೈಲಾರಿಗೆ ಬಿಗ್ ರಿಲೀಫ್

ಸುಮಾರು 45 ಕೋಟಿ ರೂ. ವೆಚ್ಚದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ತಿರುಪತಿ ಮಾದರಿಯ ಕ್ಯೂ ಕಾಂಪ್ಲೆಕ್ಸ್ ನಿರ್ಮಾಣವಾಗುತ್ತಿದೆ. ಈ ಕಾಮಗಾರಿ ಮುಂದಿನ ಒಂದು ತಿಂಗಳೊಳಗೆ ಪೂರ್ಣಗೊಳ್ಳಲಿದ್ದು, ಇಲ್ಲಿ ಶೌಚಾಲಯ, ಕುಡಿಯುವ ನೀರು ಮತ್ತು ಆಸನದ ವ್ಯವಸ್ಥೆ ಇರಲಿದೆ. ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ 90 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ದಾಸೋಹ ಭವನ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಬೆಟ್ಟದಲ್ಲಿ ಸಂಗ್ರಹವಾಗುವ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ಮರುಬಳಕೆ ಮಾಡಲು ಖಾಸಗಿ ಏಜೆನ್ಸಿಗಳ ಮೂಲಕ ಸಮಗ್ರ ಯೋಜನೆ ರೂಪಿಸಲಾಗುತ್ತಿದೆ. ಒಟ್ಟಾರೆಯಾಗಿ, ಮಾದಪ್ಪನ ಬೆಟ್ಟವನ್ನು ಮಾದರಿ ಯಾತ್ರಾಸ್ಥಳವನ್ನಾಗಿ ಮಾಡಲು ಸರ್ಕಾರ ಮುಂದಾಗಿದ್ದರೂ, ಕಾಮಗಾರಿಗಳಲ್ಲಿ ನಡೆಯುತ್ತಿರುವ ಇಂತಹ ಕಳಪೆ ಕೆಲಸಗಳು ಭಕ್ತರ ಆಕ್ರೋಶಕ್ಕೆ ಕಾರಣವಾಗಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೆಣ್ಣು ಮಕ್ಕಳು ತಮ್ಮ ತಂದೆಯಿಂದ ಕಲಿಯುವ ಗುಣಗಳಿವು – Kannada News | Daughter learns these qualities from father

ಮಗಳಿಗೆ ಅಪ್ಪನೆಂದರೆ (father) ವಿಶೇಷ ಪ್ರೀತಿ, ಗೌರವ. ಆಕೆಯ ಪಾಲಿಗೆ ಅಪ್ಪನೇ ಸೂಪರ್‌ ಹೀರೋ. ತಂದೆಗೂ ಅಷ್ಟೆ ಮುದ್ದಿನ ಮಗಳೆಂದರೆ ಎಲ್ಲಿಲ್ಲದ ಪ್ರೀತಿ. ಮಗಳನ್ನು ಪ್ರೀತಿಸುವ, ಮುದ್ದಿಸುವುದರ ಜೊತೆ ಜೊತೆಗೆ ತಂದೆ ಹಲವಾರು ಜೀವನ ಮೌಲ್ಯಗಳನ್ನು ಸಹ ಕಲಿಸುತ್ತಾನೆ. ಹೆಣ್ಣು ಮಕ್ಕಳು ತಮ್ಮ ತಂದೆ ಕಲಿಸಿಕೊಡುವ ಜೀವನ ಮೌಲ್ಯಗಳನ್ನು ಮಾತ್ರವಲ್ಲ, ತಮ್ಮ ತಂದೆಯ ಗುಣಗಳನ್ನು ಸಹ ಕಲಿಯುತ್ತಾರಂತೆ. ಹೆಣ್ಣು ಮಕ್ಕಳು ತಮ್ಮ ತಂದೆಯಿಂದ ಕಲಿಯುವ ಅ ಗುಣಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಮಗಳಾದವಳು ತನ್ನ ಅಪ್ಪನಿಂದ ಕಲಿಯುವ ಗುಣಗಳಿವು:

ದಿಟ್ಟ ನಿರ್ಧಾರ: ತಂದೆ ನೀಡುವ ಸ್ವಾತಂತ್ರ್ಯ ಮತ್ತು ನಂಬಿಕೆಯು ಮಗಳಿಗೆ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ದಿಟ್ಟ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹೇಗೆ ಎಂಬುದನ್ನು ಸಹ ಆಕೆ ತಂದೆಯನ್ನು ನೋಡಿಯೇ ಕಲಿಯುತ್ತಾಳೆ.

ಕಠಿಣ ಪರಿಶ್ರಮ: ತನ್ನ ತಂದೆಯ ಕಠಿಣ ಪರಿಶ್ರಮವನ್ನು ನೋಡಿ ಮಗಳು ಕಷ್ಟಪಟ್ಟು ಕೆಲಸ ಮಾಡಿದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದು ಕಲಿಯುತ್ತಾಳೆ. ತನ್ನ ತಂದೆಯಂತೆಯೇ ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಲು ಬಯಸುತ್ತಾಳೆ.

ಒಳ್ಳೆಯ ನಡವಳಿಕೆ: ತಂದೆಯ ನಡವಳಿಕೆಯನ್ನೇ ಮಕ್ಕಳು ಸಹ ಕಲಿಯುವುದು. ಇದು ನೇರವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಪ್ರತಿಯೊಬ್ಬ ತಂದೆಯೂ ಉತ್ತಮ ನಡವಳಿಕೆಯನ್ನು ಬೆಳೆಸಿಕೊಳ್ಳಬೇಕು.

ಗೌರವ: ಇತರರು ತನ್ನ ತಂದೆಗೆ ನೀಡುವ ಗೌರವ, ಹಾಗೂ ತಂದೆ ಇತರರನ್ನು ಗೌರವದಿಂದ ನಡೆಸಿಕೊಳ್ಳುವುದನ್ನು ನೋಡಿ ತಾನು ಹಿರಿಯರಿಗೆ ಗೌರವ ಕೊಡಬೇಕು ಎಂಬುದನ್ನು ಕಲಿಯುತ್ತಾಳೆ. ತಂದೆಯಂತೆ ಸಮಾಜದಲ್ಲಿ ಗೌರವವನ್ನು ಗಳಿಸಲು ಒಳ್ಳೆಯ ಕೆಲಸಗಳನ್ನು ಮಾಡಲು ಪ್ರೇರಿತಳಾಗುತ್ತಾಳೆ.

ಆತ್ಮವಿಶ್ವಾಸ: ಪ್ರತಿ ಹೆಣ್ಣು ಮಕ್ಕಳು ಸಹ ತಮ್ಮ ತಂದೆಯಂತೆ ಸಮಾಜದಲ್ಲಿ ಆತ್ಮವಿಶ್ವಾಸದಿಂದ ಬದುಕುವುದು ಹೇಗೆ, ಕಷ್ಟಗಳನ್ನು ಎದುರಿಸಿ ನಿಲ್ಲುವುದು ಹೇಗೆ ಎಂಬುದನ್ನು ಕಲಿಯುತ್ತಾರೆ. ಒಟ್ಟಿನಲ್ಲಿ ತಂದೆಯ ಆತ್ಮವಿಶ್ವಾಸವೇ ಮಗಳ ಬದುಕಿಗೆ ಪ್ರೇರಣೆ.

ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಅಂಶಗಳೇ ಮುಖ್ಯ ಕಾರಣ

ಕುಟುಂಬದ ಮೇಲಿನ ಪ್ರೀತಿ: ತಂದೆಯಾದವನು ತನ್ನ ತಂದೆತಾಯಿ, ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಂಡರೆ, ಮಗಳು ಸಹ ತಂದೆಯಂತೆ ತನ್ನ ಕುಟುಂಬಕ್ಕೆ ಪ್ರೀತಿ ನೀಡುತ್ತಾಳೆ, ಕುಟುಂಬದ ಪ್ರಾಮುಖ್ಯತೆಯನ್ನು ಕಲಿಯುತ್ತಾಳೆ.

ಭಾವನೆಗಳ ಮೇಲಿನ ನಿಯಂತ್ರಣ: ತಾಯಿಗಿಂತ ತಂದೆಗೆ ತನ್ನ ಭಾವನೆಗಳ ಮೇಲೆ ಹೆಚ್ಚಿನ ನಿಯಂತ್ರಣವಿರುತ್ತದೆ. ಈ ಮೂಲಕ ಮಗಳು ಯಾವುದೇ ಪರಿಸ್ಥಿತಿಯನ್ನು ತನ್ನ ತಂದೆ ಹೇಗೆ ಕೂಲ್‌ ಆಗಿ ನಿಭಾಯಿಸುತ್ತಾರೆ ಎಂಬುದುನ್ನು ನೋಡುತ್ತಾಳೆ. ಯಾವುದೇ ಪರಿಸ್ಥಿತಿಯನ್ನು ತಾಳ್ಮೆಯಿಂದ ಹೇಗೆ ನಿಭಾಯಿಸುವುದು ಎಂಬುದನ್ನು ಸಹ ಆಕೆ ಕಲಿಯುತ್ತಾಳೆ.

ನಿಜವಾದ ಪ್ರೀತಿ: ತಂದೆ ತೋರುವ ನಿಸ್ವಾರ್ಥ ಪ್ರೀತಿ ಮಗಳ ಭವಿಷ್ಯದ ಸಂಬಂಧಕ್ಕೆ ಸ್ಫೂರ್ತಿ ನೀಡುತ್ತದೆ. ಆಕೆ ತನ್ನ ತಂದೆಯಂತೆ ಪ್ರೀತಿ, ಕಾಳಜಿ ತೋರುವ ಜೀವನ ಸಂಗಾತಿಯನ್ನೇ ಆರಿಸಲು ಬಯಸುತ್ತಾಳೆ. ಒಟ್ಟಾರೆಯಾಗಿ ಆಕೆಗೆ ತನ್ನ ನಿಜವಾದ ಪ್ರೀತಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ranji Trophy Final: ಕರ್ನಾಟಕವನ್ನು ದಿನವಿಡೀ ಕಾಡಿದ ಜಮ್ಮು ಕಾಶ್ಮೀರ ಬ್ಯಾಟರ್ಸ್ – Kannada News | Ranji Final Day 1: J&K Dominates Karnataka in Hubballi with Pundir’s Century

ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಮ್ಮು ಮತ್ತು ಕಾಶ್ಮೀರ ತಂಡ ಮೊದಲ ದಿನದಾಟದಂತ್ಯಕ್ಕೆ ಕೇವಲ 2 ವಿಕೆಟ್ ಕಳೆದುಕೊಂಡು 284 ರನ್ ಕಲೆಹಾಕಿದೆ. ಇತ್ತ ಕರ್ನಾಟಕ ತಂಡ ಅನುಭವಿ ಬೌಲಿಂಗ್ ವಿಭಾಗವನ್ನೇ ಹೊಂದಿದ್ದರೂ ತನ್ನ ತವರು ನೆಲದಲ್ಲಿ ಎದುರಾಳಿ ತಂಡವನ್ನು ಕಟ್ಟಿಹಾಕುವಲ್ಲಿ ವಿಫಲವಾಗಿದೆ. ಇನ್ನು ಜಮ್ಮ ಮತ್ತು ಕಾಶ್ಮೀರ ತಂಡದ ಪರ ಅಜೇಯ ಶತಕ ಬಾರಿಸಿರುವ ಶುಭಂ ಪುಂಡೀರ್ 117 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಅವರ ಜೊತೆಗೆ ಅಬ್ದುಲ್ ಸಮದ್ ಕೂಡ 52 ರನ್ ಗಳಿಸಿ ಅಜೇಯರಾಗಿದ್ದಾರೆ. ಕರ್ನಾಟಕ ಪರ ವೇಗಿ ಪ್ರಸಿದ್ಧ್ ಕೃಷ್ಣ 2 ವಿಕೆಟ್ ಕಬಳಿಸಿದ್ದನ್ನು ಬಿಟ್ಟರೆ, ಉಳಿದವರು ವಿಕೆಟ್ ಬರ ಎದುರಿಸಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಮೊದಲ ದಿನ 87 ಓವರ್‌ಗಳು ಬ್ಯಾಟಿಂಗ್ ಮಾಡಿದ ಜಮ್ಮು ಮತ್ತು ಕಾಶ್ಮೀರ 2 ವಿಕೆಟ್‌ಗಳ ನಷ್ಟಕ್ಕೆ 284 ರನ್ ಗಳಿಸಿತು. ಆದಾಗ್ಯೂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡ 18 ರನ್‌ಗಳಾಸಿದ್ದಾಗ ತಂಡದ ಮೊದಲ ವಿಕೆಟ್ ಪತನವಾಯಿತು. ಕಮ್ರಾನ್ ಇಕ್ಬಾಲ್ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಜೊತೆಯಾದ ಶುಭಂ ಪುಂಡಿರ್ ಮತ್ತು ಯಾವರ್ ಹಸನ್ ಎರಡನೇ ವಿಕೆಟ್‌ಗೆ 139 ರನ್‌ಗಳ ಜೊತೆಯಾಟ ನೀಡಿದರು.

ಆದರೆ 88 ರನ್ ಬಾರಿಸಿದ್ದ ಯಾವರ್ ಹಸನ್ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದಿತ್ತು. ಆ ಬಳಿಕ ಬಂದ ನಾಯಕ ಪರಾಸ್ ಡೋಗ್ರಾ 9 ರನ್ ಗಳಿಸಿದ್ದಾಗ ಗಾಯಕ್ಕೆ ತುತ್ತಾಗಿ ನಿವೃತ್ತರಾದರು. ಆ ನಂತರ ತಂಡದ ಇನ್ನಿಂಗ್ಸ್ ನಿಭಾಯಿಸಿದ ಶುಭಂ ಪುಂಡೀರ್ ಮತ್ತು ಅಬ್ದುಲ್ ಸಮದ್ ತಂಡವನ್ನು 250 ರನ್​ಗಳ ಗಡಿ ದಾಟಿಸಿದರು. ಇಬ್ಬರೂ ಅಜೇಯ 105 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ದಿನದಾಟದಂತ್ಯಕ್ಕೆ ಶುಭಂ ಪುಂಡೀರ್ ಔಟಾಗದೆ 117 ಮತ್ತು ಅಬ್ದುಲ್ ಸಮದ್ ಔಟಾಗದೆ 52 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Published On – 6:01 pm, Tue, 24 February 26

Source link

‘iPhone ಬಾಯ್‌ಫ್ರೆಂಡ್ ಕೊಡಿಸಿದ್ದಾ’?: ಹುಡುಗಿಯರು ಸ್ವಂತ ಹಣದಲ್ಲಿ ಏನು ಖರೀದಿಸುವುದಿಲ್ವಾ? ಸಿಟ್ಟಾದ ಬೆಂಗಳೂರಿನ ಯುವತಿ – Kannada News | Societal Bias: Why Are Women’s Expensive Purchases Attributed to Men’s Wealth?

ಬೆಂಗಳೂರು, ಫೆ.24: ಈ ಹುಡುಗಿಯರು ಹೊಸ ಫೋನ್​, ಬಟ್ಟೆ, ಅಥವಾ ಯಾವುದೇ ವಸ್ತು ತೆಗೆದುಕೊಂಡರು ಯಾರೂ ಗಿಫ್ಟ್​​ ಕೊಟ್ಟದ್ದು ಎಂದು ಪ್ರಶ್ನೆಗಳು ಬರುತ್ತದೆ. ಆರ್ಥಿಕವಾಗಿ ಎಷ್ಟೇ ಸದೃಢರಾದರೂ, ಅವರ ದುಬಾರಿ ವಸ್ತುಗಳ ಖರೀದಿಯನ್ನು ಸಮಾಜವು ಇಂದಿಗೂ ಅವರ ಜೀವನದಲ್ಲಿರುವ ಪುರುಷನ ಯಶಸ್ಸಿಗೆ ಹೋಲಿಸುತ್ತಾರೆ. ಇದೀಗ ಮಹಿಳೆಯರು ಸ್ವಂತವಾಗಿ ಏನನ್ನು ಖರೀದಿ ಮಾಡುವುದಿಲ್ಲ ಎಂಬ ಪ್ರಶ್ನೆ ಎದ್ದಿದೆ. ಈ ಪ್ರಶ್ನೆಯನ್ನು ಮಾಡಿರುವುದು ಬೆಂಗಳೂರಿನ ಅನು ಎಂಬುವವರು. ಅನು ಅವರು ಇತ್ತೀಚೆಗೆ ತಮ್ಮ ಸ್ವಂತ ದುಡಿಮೆಯ ಹಣದಿಂದ ಹೊಸ iPhone ಒಂದನ್ನು ಖರೀದಿಸಿದ್ದರು. ಅದನ್ನು ನೋಡಿದ ಅವರ ಐದು ವರ್ಷಗಳ ಹಳೆಯ ಸ್ನೇಹಿತ, “ಸಖತ್ ಆಗಿದೆ ಗುರು, ನಿನ್ನ ಬಾಯ್‌ಫ್ರೆಂಡ್ ಕೊಡಿಸಿದ್ದಾ?” ಎಂದು ಕೇಳಿದ್ದಾನೆ.

ಗೆಳಯನ ಮಾತಿಗೆ ಸಿಟ್ಟಾದ ಅನು, ಅಲ್ಲ ನಿನಗೆ ಯಾಕೆ ನಾನು ಖರೀದಿ ಮಾಡಿರಬಹುದು ಎಂದು ಅನ್ನಿಸಿಲ್ಲ ಎಂದು ಕೇಳಿದ್ದಾರೆ. ಅದಕ್ಕೆ ಆ ಸ್ನೇಹಿತ, “ನಿನ್ನವನು ಶ್ರೀಮಂತನಿದ್ದಾನೆ, ನೀನು ಅವನನ್ನು ಆರಿಸಿಕೊಂಡಿದ್ದೇ ಅದಕ್ಕೆ ಅಲ್ವಾ?” ಎಂದು ಉಡಾಫೆಯಿಂದ ಉತ್ತರಿಸಿದ್ದಾನೆ. ಅನು ಅವರು ಹೇಳಿರುವ ಪ್ರಕಾರ, ಅವನಿಗೆ ಕೆಲಸ ಇಲ್ಲದಾಗ, ಹೋದ ಕಡೆಯಲ್ಲಾ ಇವರೇ ಬಿಲ್ ಪಾವತಿಸುತ್ತಿದ್ದರು. ಇಷ್ಟಾದರೂ ಆತ ಮಹಿಳೆಯ ಸ್ವಾವಲಂಬನೆಯನ್ನು ಒಪ್ಪದೆ, ಬಾಯ್‌ಫ್ರೆಂಡ್ ಶ್ರೀಮಂತಿಕೆ ಬಗ್ಗೆ ಮಾತನಾಡಿದ್ದು ಅನು ಅವರಿಗೆ ಬೇಸರ ಉಂಟು ಮಾಡಿದೆ.

ಇದನ್ನೂ ಓದಿ: ಬೆಂಗಳೂರು ಜೀವನ ಇಷ್ಟೊಂದು ದುಬಾರಿನಾ?; ತಿಂಗಳ ಖರ್ಚು 70 ಸಾವಿರ ರೂ., ಪಟ್ಟಿ ಬಿಚ್ಚಿಟ್ಟ ಯುವಕ

ಇಲ್ಲಿದೆ ವೈರಲ್​​ ಪೋಸ್ಟ್​;

ನಮ್ಮ ಸಾಧನೆಗಳ ಹಿಂದೆ ಒಬ್ಬ ಪುರುಷನಿದ್ದಾನೆ ಎಂದು ಬಿಂಬಿಸುವುದು ಯಾವಾಗ ನಿಲ್ಲುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ. ಅನು ಅವರ ಈ ಪೋಸ್ಟ್ 45,000 ಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ಇವರ ಈ ಪೋಸ್ಟ್​​ಗೆ ಮಿಶ್ರ ಪ್ರಕ್ರಿಯೆಗಳು ಬಂದಿದೆ. “ಮಹಿಳೆಯರು ಮನೆ, ಕಾರು ಕೊಂಡರೂ ಜನರು ಅದನ್ನು ಗಂಡ ಅಥವಾ ತಂದೆ ಕೊಡಿಸಿದ್ದು ಎಂದುಕೊಳ್ಳುತ್ತಾರೆ. ಈ ಪಿತೃಪ್ರಧಾನ ಮನಸ್ಥಿತಿ ಬದಲಾಗಬೇಕು” ಎಂದು ಮಹಿಳೆಯರು ಬೆಂಬಲ ಹೇಳುತ್ತಾರೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. “ಇತ್ತೀಚಿನ ದಿನಗಳಲ್ಲಿ ಅನೇಕ ಯುವತಿಯರು ದುಬಾರಿ ಉಡುಗೊರೆಗಳನ್ನು ನಿರೀಕ್ಷಿಸುತ್ತಾರೆ, ಹಾಗಾಗಿ ಸ್ನೇಹಿತ ಹಾಗೆ ಹೇಳಿರಬಹುದು” ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link