Category Archives: Blog

Your blog category

Exam Tips: ಎಕ್ಸಾಂನಲ್ಲಿ ಟೈಮ್ ಮ್ಯಾನೇಜ್​ಮೆಂಟ್ ಮಾಡೋಕೆ ಆಗ್ತಾ ಇಲ್ವಾ? ಶಿಕ್ಷಣ ತಜ್ಞರ ಸಲಹೆ ಇಲ್ಲಿದೆ – Kannada News | Dr Gururaj Karajagis Simple Tips for Exam Time Management and Focused Study

ಖ್ಯಾತ ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿಯವರು ಟಿವಿ9ನ ವಿಶೇಷ ಪಾಡ್‌ಕಾಸ್ಟ್‌ನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಸಮಯ ನಿರ್ವಹಣೆ ಮತ್ತು ಗೊಂದಲ ನಿವಾರಣೆ ಕುರಿತು ಸಲಹೆ ನೀಡಿದ್ದಾರೆ. ವಿದ್ಯಾರ್ಥಿಗಳು ಅನೇಕ ವಿಷಯಗಳನ್ನು ಕಲಿಯಲು ಪ್ರಯತ್ನಿಸಿ ಗೊಂದಲಕ್ಕೊಳಗಾಗುವುದನ್ನು ತಪ್ಪಿಸಲು, ಒಂದೇ ವಿಷಯದ ಮೇಲೆ ಆಳವಾಗಿ ಗಮನ ಹರಿಸುವಂತೆ ಅವರು ಸೂಚಿಸಿದ್ದಾರೆ.

ಪರೀಕ್ಷಾ ಸಮಯದಲ್ಲಿ ಉತ್ತರಗಳನ್ನು ಬರೆಯುವಾಗ ಸಮಯದ ಕೊರತೆ ಎದುರಾಗುವುದನ್ನು ತಪ್ಪಿಸಲು, ಅಂಕಗಳಿಗೆ ಅನುಗುಣವಾಗಿ ಉತ್ತರಗಳ ಉದ್ದವನ್ನು ನಿರ್ಧರಿಸಲು ಸಲಹೆ ನೀಡಲಾಗಿದೆ. ಹೆಚ್ಚಿನ ಉತ್ತರ ಬರೆಯುವುದರಿಂದ ಸಮಯ ವ್ಯರ್ಥವಾಗುತ್ತದೆ ಮತ್ತು ಇತರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ, ನಿಯಮಿತವಾಗಿ ಬರವಣಿಗೆ ಅಭ್ಯಾಸ ಮಾಡುವುದು ಅಕ್ಷರ ದೊಂಡುಗವನ್ನು ಸುಧಾರಿಸುತ್ತದೆ ಮತ್ತು ಬರವಣಿಗೆ ವೇಗವನ್ನು ಹೆಚ್ಚಿಸುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಬಡ ಮಕ್ಕಳಿಗೆ ವಿದ್ಯಾ ದೇವತೆಯಾದ ಭಾರತೀಯ ಶಿಕ್ಷಕಿಗೆ ವಿಶ್ವ ಮನ್ನಣೆ: ‘ಜಾಗತಿಕ ಶಿಕ್ಷಕ ಪ್ರಶಸ್ತಿ’ ಪಡೆದ ರೂಬಲ್ ನಾಗಿ

 

ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ನಿಷ್ಕ್ರಿಯ ಇಪಿಎಫ್ ಅಕೌಂಟ್​ಗಳಲ್ಲಿರುವ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ? – Kannada News | Inactive EPF accounts with balance of certain amount to get direct refund to bank account

ನವದೆಹಲಿ, ಫೆಬ್ರುವರಿ 24: ಇಪಿಎಫ್​ಒದಲ್ಲಿ (EPFO) ನಿಷ್ಕ್ರಿಯವಾಗಿರುವ ಪಿಎಫ್ ಅಕೌಂಟ್​ಗಳ ಸಂಖ್ಯೆ ಬಹಳ ಇದೆ. ಹೊಸ ಪಿಎಫ್ ಖಾತೆಗೆ ವರ್ಗಾವಣೆ ಆಗದ, ಹಾಗೂ ಮೂರು ವರ್ಷಗಳಿಂದ ಪ್ರೀಮಿಯಮ್ ಸಂದಾಯ ಆಗದೇ ಇರುವ ಖಾತೆಗಳು ಇನ್ಯಾಕ್ಟಿವ್ ಎನಿಸುತ್ತವೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಮಹತ್ವದ ತೀರ್ಮಾನ ಕೈಗೊಂಡಿದ್ದು, ಒಂದು ಸಾವಿರ ರೂವರೆಗೆ ಬ್ಯಾಲನ್ಸ್ ಇರುವ ನಿಷ್ಕ್ರಿಯ ಇಪಿಎಫ್ ಖಾತೆಯಲ್ಲಿರುವ ಹಣವನ್ನು ನೇರವಾಗಿ ರೀಫಂಡ್ ಮಾಡಲಿದೆ.

ಸರ್ಕಾರದ ಈ ಆಲೋಚನೆ ಉಪಯುಕ್ತವೆನಿಸಬಹುದು. ಒಂದು ಸಾವಿರ ರೂವರೆಗೆ ಬ್ಯಾಲನ್ಸ್ ಇರುವ ಇನಾಪರೇಟಿವ್ ಅಕೌಂಟ್​ಗಳ ಸಂಖ್ಯೆ 6 ಲಕ್ಷಕ್ಕಿಂತಲೂ ಹೆಚ್ಚಿದೆ. ಅವು ನಿರುಪಯುಕ್ತವಾಗಿ ಇರುವುದರ ಬದಲು ರೀಫಂಡ್ ಪಡೆದರೆ ಇಪಿಎಫ್ ಸದಸ್ಯರಿಗೆ ಅಲ್ಪ ಸಹಾಯವಾಗಬಹುದು.

ಇದನ್ನೂ ಓದಿ: ಷೇರುಪೇಟೆ ಕುಸಿತ; ಹೂಡಿಕೆದಾರರಿಗೆ 4 ಲಕ್ಷ ಕೋಟಿ ನಷ್ಟ; ಮಾರುಕಟ್ಟೆ ಕುಸಿಯಲು ಏನು ಕಾರಣ?

ರೀಫಂಡ್ ಪಡೆಯಲು ಏನೂ ಮಾಡಬೇಕಿಲ್ಲ…

ನಿಮ್ಮ ನಿಷ್ಕ್ರಿಯ ಇಪಿಎಫ್ ಅಕೌಂಟ್​ನಲ್ಲಿ ಹಣದ ಬ್ಯಾಲನ್ಸ್ 1,000 ರೂಗಿಂತ ಕಡಿಮೆ ಇದ್ದಲ್ಲಿ ಯೋಚನೆ ಬೇಡ. ತನ್ನಂತಾನೆ ಹಣವು ನಿಮ್ಮ ಬ್ಯಾಂಕ್ ಖಾತೆಗೆ ಬಂದು ಬೀಳುತ್ತದೆ. ನಿಮ್ಮ ಇಪಿಎಫ್ ಅಕೌಂಟ್​ಗೆ ಜೋಡಿತವಾದ ಬ್ಯಾಂಕ್ ಅಕೌಂಟ್​ಗೆ ಆ ಹಣ ಹೋಗುತ್ತದೆ. ಆ ಬ್ಯಾಂಕ್ ಅಕೌಂಟ್​ಗೆ ಆಧಾರ್ ಲಿಂಕ್ ಆಗಿರಬೇಕು.

ಇಪಿಎಫ್ ಅಕೌಂಟ್​ನಲ್ಲಿ ಹಣವು ಒಂದು ಸಾವಿರ ರೂಗಿಂತ ಹೆಚ್ಚಿದ್ದರೆ ಆಗ ಆಟೊಮ್ಯಾಟಿಕ್ ರೀಫಂಡ್ ಸಿಗುವುದಿಲ್ಲ. ಇಂಥ ಸಂದರ್ಭದಲ್ಲಿ ನೀವು ಹಣ ವಿತ್​ಡ್ರಾಗೆ ಅರ್ಜಿ ಸಲ್ಲಿಸಬೇಕಾಗಬಹುದು. ನೀವು ಸಕ್ರಿಯ ಇಪಿಎಫ್ ಅಕೌಂಟ್ ಹೊಂದಿದ್ದರೆ ಆಗ ಹಳೆಯ ನಿಷ್ಕ್ರಿಯ ಅಕೌಂಟ್ ಅನ್ನು ಸಕ್ರಿಯ ಅಕೌಂಟ್​ಗೆ ವಿಲೀನಗೊಳಿಸಬಹುದು.

ಇದನ್ನೂ ಓದಿ: ಐಡಿಯಾ ಯಾರದು ಅನ್ನೋದು ಮುಖ್ಯ ಅಲ್ಲ, ಅದನ್ನು ಜಾರಿಗೆ ತರೋನೇ ಜಾಣ: ಚ್ಯಾಟ್​ಜಿಪಿಟಿ ರೂವಾರಿ ಸ್ಯಾಮ್ ಆಲ್ಟ್​ಮ್ಯಾನ್ ಸಲಹೆ ಕೇಳಿ

ನಿಮ್ಮ ಇಪಿಎಫ್ ಖಾತೆ ನಿಷ್ಕ್ರಿಯವಾಗಿದೆಯಾ, ಪರಿಶೀಲಿಸುವ ಕ್ರಮ

  • ಇಪಿಎಫ್​ಒ ವೆಬ್​ಸೈಟ್​ಗೆ ಹೋಗಿ ‘ಸರ್ವಿಸಸ್’ – ‘ಫಾರ್ ಎಂಪ್ಲಾಯೀಸ್’ ಆಯ್ಕೆ ಮಾಡಿ.
  • ಯುಎಎನ್ ಮತ್ತು ಪಾಸ್ವರ್ಡ್ ಮೂಲಕ ಲಾಗಿನ್ ಆಗಿ
  • ‘ವ್ಯೂ ಪಾಸ್​ಬುಕ್’ ನೋಡಿ.

ಇಲ್ಲಿ ಮೂರು ವರ್ಷ ಕಾಲ ಕಂಪನಿ ವತಿಯಿಂದ ಯಾವುದೇ ಪ್ರೀಮಿಯಮ್ ಕೊಡುಗೆ ಬಂದಿಲ್ಲ ಎಂದಾದರೆ ಅದು ಇನಾಪರೇಟಿವ್ ಎನಿಸುತ್ತದೆ.

ಹಾಗೆಯೇ, ಉಮಾಂಗ್ ಆ್ಯಪ್​ನಲ್ಲೂ ನೀವು ಪಾಸ್ಬುಕ್ ವೀಕ್ಷಿಸಿ ಪರಿಶೀಲನೆ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತಡರಾತ್ರಿ ಗ್ರಾಮದಲ್ಲಿ ಓಡಾಡಿದ ಕಾಡಾನೆಗಳ ಹಿಂಡು! ಸಿಸಿ ಕ್ಯಾಮಾರದಲ್ಲಿ ದೃಶ್ಯ ಸೆರೆ – Kannada News | Wild Elephants Enter Mayaganahalli, CCTV Captures Movement

ರಾಮನಗರ, ಫೆಬ್ರವರಿ 24: ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಾಯಗಾನಹಳ್ಳಿ ಗ್ರಾಮದ ಬಳಿ ನಾಲ್ಕು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಭೀತಿ ಉಂಟಾಗಿದೆ. ತಡರಾತ್ರಿ ಸಮಯದಲ್ಲಿ ಕಾಡಿನಿಂದ ನಾಡಿಗೆ ಬಂದ ಗಜಪಡೆ ಗ್ರಾಮದಲ್ಲಿ ಸಂಚರಿಸುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಗೊಂಡಿವೆ. ಈ ಆನೆಗಳ ಹಿಂಡು ಬನ್ನೇರಘಟ್ಟ ಅರಣ್ಯ ಪ್ರದೇಶದಿಂದ ಗ್ರಾಮ ಭಾಗಕ್ಕೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಗ್ರಾಮದಲ್ಲಿ ಹಾದುಹೋಗಿದ ಆನೆಗಳು ಹಾನಿ ಉಂಟುಮಾಡುವ ಸಾಧ್ಯತೆ ಇರುವುದರಿಂದ ರೈತರು ಆತಂಕದಲ್ಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೇರಳದ ಹೆಸರು ಬದಲಾಗುತ್ತೆ, ಇನ್ಮುಂದೆ ಯಾವ ಹೆಸರಿನಿಂದ ಕರೀಬೇಕು ಗೊತ್ತಾ? – Kannada News | Kerala May Officially Become Keralam as Key Decision Looms

ತಿರುವನಂತಪುರಂ, ಫೆಬ್ರವರಿ 24: ಕೇರಳ(Kerala)ದಲ್ಲಿ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು ಕೇರಳ ರಾಜ್ಯದ ಹೆಸರೇ ಬದಲಾಗುವ ಸಾಧ್ಯತೆ ದಟ್ಟವಾಗಿದೆ. ಇನ್ನುಮುಂದೆ ಕೇರಳವನ್ನು ಕೇರಳಂ ಎಂದು ಕರೆಯಬೇಕಾಗುತ್ತದೆ. ಇಂದು ನಡೆಯುವ ಕೇಂದ್ರ ಸಚಿವ ಸಂಪುಟ ಸಭೆಯು ಕೇರಳದ ಹೆಸರನ್ನು “ಕೇರಳಂ” ಎಂದು ಬದಲಾಯಿಸುವ ಮಸೂದೆಯನ್ನು ಅನುಮೋದಿಸುವ ನಿರೀಕ್ಷೆಯಿದೆ.

ಈ ನಿರ್ಧಾರವನ್ನು ರಾಜ್ಯದ ಭಾಷಾ ಗುರುತು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅಧಿಕೃತವಾಗಿ ಗುರುತಿಸುವತ್ತ ಮಹತ್ವದ ಹೆಜ್ಜೆಯಾಗಿ ನೋಡಲಾಗುತ್ತಿದೆ.ಅಧಿಕೃತ ದಾಖಲೆಗಳಲ್ಲಿ ಹೆಸರನ್ನು ಬದಲಾಯಿಸಲು ಕೇರಳ ವಿಧಾನಸಭೆಯು ಈಗಾಗಲೇ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ ಎಂಬುದು ಗಮನಿಸಬೇಕಾದ ಸಂಗತಿ.

ಇಂದು ಸಚಿವ ಸಂಪುಟ ಇದನ್ನು ಅನುಮೋದಿಸಿದರೆ, ಸಂವಿಧಾನದ ಎಂಟನೇ ವೇಳಾಪಟ್ಟಿಯನ್ನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಅಂತಿಮ ಶಿಫಾರಸನ್ನು ಕಳುಹಿಸಲಾಗುತ್ತದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ 2024ರಲ್ಲಿ ರಾಜ್ಯದ ಹೆಸರನ್ನು ಬದಲಾಯಿಸುವ ಪ್ರಸ್ತಾಪವನ್ನು ಮಾಡಿದ್ದರು.

2024ರ ಜೂನ್ 25ರಂದು ವಿಧಾನಸಭೆಯು ಎರಡನೇ ಬಾರಿಗೆ ನಿರ್ಣಯವನ್ನು ಅಂಗೀಕರಿಸಿತು. ಕೇಂದ್ರ ಗೃಹ ಸಚಿವಾಲಯವು ಮೊದಲ ನಿರ್ಣಯವನ್ನು ಪರಿಶೀಲಿಸಿತು ಮತ್ತು ಕೆಲವು ತಿದ್ದುಪಡಿಗಳನ್ನು ನೀಡಿತ್ತು. ಕೇರಳವನ್ನು ಮಲಯಾಳಂನಲ್ಲಿ ಕೇರಳಂ ಎಂದು ಕರೆಯಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದರು.

ಮತ್ತಷ್ಟು ಓದಿ: Video: ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಭವಿಷ್ಯ

ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸಂಪುಟವು ಪ್ರಧಾನಿ ನರೇಂದ್ರ ಮೋದಿ ಜತೆಗೆ ಸಭೆ ನಡೆಸಲಿದೆ. ಈ ಸಭೆ ಸೇವಾತೀರ್ಥದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಫೆಬ್ರವರಿ 13ರಂದು ಪ್ರಧಾನಿಗಳ ಸೌತ್​ ಬ್ಲಾಕ್​​ನಲ್ಲಿಸಭೆ ನಡೆದಿತ್ತು.
ಕೇರಳ ಸರ್ಕಾರ ಸೋಮವಾರ ರಾಜ್ಯಸಭೆಯಲ್ಲಿ ನೇಟಿವಿಟಿ ಕಾರ್ಡ್​ ಮಸೂದೆಯನ್ನು ಮಂಡಿಸಿದ್ದು, ಇದನ್ನು ಐತಿಹಾಸಿಕ ಮತ್ತು ಅಪರೂಪದ ಶಾಸನ ಎಂದು ಕರೆದಿದೆ.

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದ ವಿಚಾರಣೆಯನ್ನು ಬಹಿಷ್ಕರಿಸಿದ್ದ ವಿರೋಧ ಪಕ್ಷದ ಯುಡಿಎಫ್ ಸದಸ್ಯರ ಅನುಪಸ್ಥಿತಿಯಲ್ಲಿ ಕಂದಾಯ ಸಚಿವ ಕೆ ರಾಜನ್ ಸ್ಥಳೀಯ ಗುರುತಿನ ಚೀಟಿ ಮಸೂದೆಯನ್ನು ಸದನದಲ್ಲಿ ಮಂಡಿಸಿದರು.
ಜನವರಿ 2026 ರಲ್ಲಿ, ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಪತ್ರ ಬರೆದಿದ್ದರು. ಬಿಜೆಪಿ ಮತ್ತು ಎನ್‌ಡಿಎ ಯಾವಾಗಲೂ ಕೇರಳದ ಸಂಪ್ರದಾಯಗಳು, ಸಂಸ್ಕೃತಿ ಮತ್ತು ನಂಬಿಕೆಯನ್ನು ರಕ್ಷಿಸಲು ನಿಂತಿವೆ ಎಂದು ಹೇಳಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ದಾವಣಗೆರೆ: ಗೋಗುದ್ದು ಗ್ರಾಮದಲ್ಲಿ ಹೃದಯಾಘಾತದಿಂದ 9ನೇ ತರಗತಿ ಬಾಲಕ ಸಾವು – Kannada News | Class 9 Student Dies of Suspected Heart Attack in Davanagere’s Goguddu Village

ದಾವಣಗೆರೆ, ಫೆಬ್ರವರಿ 24: ಕರ್ನಾಟಕದಲ್ಲಿ (Karnataka) ಇತ್ತೀಚೆಗೆ ಕಿರಿಯ ವಯಸ್ಸಿನವರಲ್ಲಿ ಹೃದಯಾಘಾತ (Heart Attack), ಅದರಿಂದಾಗಿ ಸಾವುಗಳು ಸಂಭವಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ಜೋರಾಗಿದೆ. ಇದರ ನಡುವೆಯೇ, ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದು ಗ್ರಾಮದಲ್ಲಿ 15 ವರ್ಷದ ಬಾಲಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಗೋಗುದ್ದು ಗ್ರಾಮದ ಚಮನ್‌ಸಾಬ್ ಮತ್ತು ಫಾತಿಮಾ ದಂಪತಿಯ ಪುತ್ರ ಮುಜಾಮಿಲ್ (15) ಮೃತ ಬಾಲಕ. ಆತ ರಾಜೀವ್ ಗಾಂಧಿ ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.

ಶಾಲೆಗೆ ರಜೆ ಹಿನ್ನೆಲೆ ಮನೆಗೆ ಬಂದಿದ್ದ ಮುಜಾಮಿಲ್ ಇಂದು ಮುಂಜಾನೆ ಬಹಿರ್ದೆಸೆಗೆ ತೆರಳಿದ್ದ ವೇಳೆ ಅಸ್ವಸ್ಥನಾಗಿ ಕುಸಿದುಬಿದ್ದಿದ್ದಾನೆ. ವಿಷಯ ತಿಳಿದ ಕುಟುಂಬಸ್ಥರು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೂ, ಮಾರ್ಗ ಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಪ್ರಾಥಮಿಕ ಮಾಹಿತಿಯಂತೆ, ಹೃದಯಾಘಾತವೇ ಸಾವಿಗೆ ಕಾರಣ ಎನ್ನಲಾಗಿದೆ.

ಈ ಘಟನೆ ಗೋಗುದ್ದು ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ಮಕ್ಕಳಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿರುವ ಬಗ್ಗೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಈ ಘಟನೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ

ಕರ್ನಾಟಕದಲ್ಲಿ ಇತ್ತೀಚೆಗೆ ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ಕಳೆದ ವರ್ಷ ಹಾಸನ ಜಿಲ್ಲೆಯೊಂದರಲ್ಲೇ ಒಂದೂವರೆ ತಿಂಳ ಅವಧಿಯಲ್ಲಿ ಸುಮಾರು 26 ಮಂದಿ ಹಾರ್ಟ್ ಅಟ್ಯಾಕ್​ನಿಂದ ಮೃತಪಟ್ಟಿದ್ದು ಆತಂಕ ಮೂಡಿಸಿತ್ತು. ಇದೇ ಜನವರಿಯಲ್ಲಿ ಚಾಮರಾಜನಗರದಲ್ಲಿ 8 ವರ್ಷದ ಬಾಲಕಿ ಶಾಲೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಳು. ಇಂತಹ ಘಟನೆಗಳ ತನಿಖೆಗಾಗಿ ಸರ್ಕಾರ ತಜ್ಞರ ಸಮಿತಿ ರಚಿಸಿದ್ದು, ಶಾಲೆಗಳಲ್ಲಿ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೃದಯ ತಪಾಸಣೆ ನಡೆಸಲು ಮತ್ತು ಸಿಪಿಆರ್ (CPR) ತರಬೇತಿ ನೀಡಲು ಮುಂದಾಗಿದೆ.

ಇದನ್ನೂ ಓದಿ: ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ಉದ್ಯಮಿಗೆ ಹೃದಯಾಘಾತ; ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಜ್ಞ ವೈದ್ಯರು ಸಹ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದ್ದು, ಪ್ರತಿದಿನ 30 ನಿಮಿಷಗಳ ನಡಿಗೆ, ಜಂಕ್ ಫುಡ್ ನಿಯಂತ್ರಣ ಮತ್ತು ಒತ್ತಡ ಮುಕ್ತ ಜೀವನ ಅಳವಡಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಏತನ್ಮಧ್ಯೆ, ಅತಿಯಾದ ಬೆವರುವಿಕೆ, ಎದೆ ಉರಿ (ಗ್ಯಾಸ್ಟ್ರಿಕ್ ಎಂದು ಭ್ರಮಿಸಬೇಡಿ), ಎಡಗೈ ಅಥವಾ ದವಡೆ ನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಮ್ ಇಂಡಿಯಾ ಕೇವಲ 11 ಓವರ್​ಗಳಲ್ಲಿ ಪಂದ್ಯ ಮುಗಿಸಬೇಕು! – Kannada News | How can India improve its Net Run Rate

ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ಭರ್ಜರಿ ಗೆಲುವಿನಿಂದಾಗಿ ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ. ಈ ಕಠಿಣತೆಯ ನಡುವೆ ಭಾರತ ತಂಡವು ಮುಂದಿನ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದರೆ ಮಾತ್ರ ಸೆಮಿಫೈನಲ್​ಗೇರಬಹುದು. ಅಂದರೆ ಟೀಮ್ ಇಂಡಿಯಾ ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಭಾರೀ ಅಂತರದಿಂದ ಗೆಲ್ಲಬೇಕು. ಈ ಮೂಲಕ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಬೇಕು. ಹೀಗೆ ಮಾಡಿದ್ರೆ ವೆಸ್ಟ್ ಇಂಡೀಸ್ ತನ್ನ ಮುಂದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಗೆದ್ದರೂ ಟೀಮ್ ಇಂಡಿಯಾಗೆ ನೆಟ್​ ರನ್ ರೇಟ್ ಮೂಲಕ ಸೆಮಿಫೈನಲ್​ಗೇರಬಹುದು.

ಪ್ರಸ್ತುತ ನೆಟ್ ರನ್​ ರೇಟ್​:

  • ವೆಸ್ಟ್ ಇಂಡೀಸ್: +5.350
  • ಸೌತ್ ಆಫ್ರಿಕಾ: +3.800
  • ಭಾರತ: – 3.800
  • ಝಿಂಬಾಬ್ವೆ: – 5.350

ಭಾರತ ತಂಡವು ತನ್ನ ಮುಂದಿನ ಪಂದ್ಯವನ್ನು ಝಿಂಬಾಬ್ವೆ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಝಿಂಬಾಬ್ವೆ ವಿಶ್ವಕಪ್ ಟೂರ್ನಿಯಿಂದ ಹೊರಬೀಳುವುದು ಬಹುತೇಕ ಖಚಿತವಾಗಲಿದೆ. ಆದರೆ ಇದಾಗ್ಯೂ ಟೀಮ್ ಇಂಡಿಯಾ ಸೌತ್ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಣ ಪಂದ್ಯದ ಫಲಿತಾಂಶವನ್ನು ಎದುರು ನೋಡಬೇಕು.

ಸೌತ್ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್​ ಗೆದ್ದರೆ ಟೀಮ್ ಇಂಡಿಯಾ ಅತ್ಯುತ್ತಮ ನೆಟ್ ರನ್ ರೇಟ್ ಹೊಂದಿದ್ದರೆ ಮಾತ್ರ ಸೆಮಿಫೈನಲ್​ಗೇರಲು ಅವಕಾಶ ಪಡೆಯಲಿದೆ. ಇದಕ್ಕಾಗಿ ಭಾರತ ತಂಡವು ಮುಂದಿನ ಎರಡು ಪಂದ್ಯಗಳಲ್ಲಿ ಭಾರೀ ಅಂತರದಿಂದ ಗೆಲ್ಲಬೇಕು.  ಟೀಮ್ ಇಂಡಿಯಾಗೆ ಅಗತ್ಯವಿರುವ ಗೆಲುವಿನ ಅಂತರದ ಅಂದಾಜು ಲೆಕ್ಕಾಚಾರ ಈ ಕೆಳಗಿನಂತಿದೆ…

  • ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಿ 200 ರನ್​ಗಳಿಸಿದರೆ, ಝಿಂಬಾಬ್ವೆ ತಂಡವನ್ನು ಕನಿಷ್ಠ 120 ರನ್​ಗಳ ಒಳಗೆ ಆಲೌಟ್ ಮಾಡಬೇಕು. ಇದರಿಂದ ಮೈನಸ್​ನಲ್ಲಿರುವ ನೆಟ್ ರನ್ ರೇಟ್​ ಅನ್ನು ಟೀಮ್ ಇಂಡಿಯಾ ಪ್ಲಸ್ ಮಾಡಿಕೊಳ್ಳಬಹುದು.
  • ಝಿಂಬಾಬ್ವೆ ತಂಡವು 150 ರನ್​ಗಳಿಸಿದರೆ, ಭಾರತ ತಂಡವು 151 ರನ್​ಗಳ ಗುರಿಯನ್ನು 10 ರಿಂದ 11 ಓವರ್​ಗಳಲ್ಲಿ ಚೇಸ್ ಮಾಡಬೇಕು. ಇದರಿಂದಾಗಿ ಕೂಡ ಭಾರತದ ನೆಟ್ ರನ್ ರೇಟ್​ ಗಮನಾರ್ಹವಾಗಿ ಸುಧಾರಿಸುತ್ತದೆ.
  • ವೆಸ್ಟ್ ಇಂಡೀಸ್ ತಂಡದ ನೆಟ್ ರನ್​ ರೇಟ್​ ಅನ್ನು ಹಿಂದಿಕ್ಕಲು ಕೂಡ ಟೀಮ್ ಇಂಡಿಯಾ ಬೃಹತ್ ಅಂತರದ ಗೆಲುವು ಕಾಣಬೇಕು.
  • ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ 200 ರನ್​ ಕಲೆಹಾಕಿದರೆ ಕನಿಷ್ಠ 80 ರನ್​ಗಳ ಅಂತರದ ಗೆಲುವು ದಾಖಲಿಸಬೇಕು.
  • ವೆಸ್ಟ್ ಇಂಡೀಸ್ ತಂಡವು ಭಾರತದ ವಿರುದ್ಧ 150 ರನ್​ಗಳಿಸಿದರೆ 12 ಓವರ್​ಗಳಲ್ಲಿ ಚೇಸ್ ಮಾಡಬೇಕಾಗುತ್ತದೆ.

ಅಂದರೆ ಇಲ್ಲಿ ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಂಡವನ್ನು 150 ರನ್​ಗಳಿಗೆ ನಿಯಂತ್ರಿಸಿ ಟೀಮ್ ಇಂಡಿಯಾ 11 ಓವರ್​ಗಳಲ್ಲಿ ಚೇಸ್ ಮಾಡಿ ಗೆದ್ದರೆ ಮಾತ್ರ ನೆಟ್ ರನ್ ರೇಟ್​ನಲ್ಲಿ ಗಮನಾರ್ಹಗ ಸುಧಾರಣೆ ಕಂಡು ಬರಲಿದೆ. ಹೀಗಾಗಿ ಮುಂದಿನ ಎರಡು ಪಂದ್ಯಗಳಲ್ಲೂ ಟೀಮ್ ಇಂಡಿಯಾ ಆಕ್ರಮಣಕಾರಿ ಬ್ಯಾಟಿಂಗ್​ ಪ್ರದರ್ಶಿಸಬೇಕಾಗುತ್ತದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿಯ ವಿಶ್ವ ದಾಖಲೆಯನ್ನೇ ಅಳಿಸಿ ಹಾಕಿದ ಬ್ರಿಯಾನ್ ಬೆನ್ನೆಟ್

ವಿಶೇಷ ಸೂಚನೆ: ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾ ನಡುವಣ ಪಂದ್ಯದ ಬಳಿಕವಷ್ಟೇ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆದ್ದರೆ ಅಥವಾ ಸೋತರೆ ಟೀಮ್ ಇಂಡಿಯಾದ ನೆಟ್ ರನ್ ರೇಟ್ ಲೆಕ್ಕಾಚಾರದಲ್ಲಿ ಬದಲಾವಣೆ ಕಂಡು ಬರಲಿದೆ. ಹೀಗಾಗಿ ವೆಸ್ಟ್ ಇಂಡೀಸ್-ಸೌತ್ ಆಫ್ರಿಕಾ ನಡುವಣ ಪಂದ್ಯದ ಬಳಿಕವಷ್ಟೇ ಟೀಮ್ ಇಂಡಿಯಾಗೆ ಕೊನೆಯ ಮ್ಯಾಚ್​ನಲ್ಲಿ ಎಷ್ಟು ರನ್​ಗಳ ಅಂತರದ ಗೆಲುವು ಅಗತ್ಯವಿದೆ ಎಂಬುದು ನಿರ್ಧಾರವಾಗಲಿದೆ.

Published On – 11:28 am, Tue, 24 February 26

Source link

‘ಗತ ವೈಭವ’ ನಾಯಕ ದುಶ್ಯಂತ್-ರಚನಾ ಮೆಹಂದಿ ಶಾಸ್ತ್ರದ ಫೋಟೋಗಳು

Source link

ಪಾಕಿಸ್ತಾನ್ ಗೆದ್ದರೆ ಸೆಮಿಫೈನಲ್ ಪಂದ್ಯ ಶಿಫ್ಟ್! – Kannada News | If Pakistan qualify, they will play Semi final 1 in Colombo

T20 World Cup 2026: ಟಿ20 ವಿಶ್ವಕಪ್​ನ ಮೊದಲ ಸುತ್ತಿನ ಪಂದ್ಯಗಳು ಮುಗಿದು ಸೂಪರ್-8 ಸುತ್ತು ಶುರುವಾಗಿದೆ. ಈ ಸುತ್ತಿನಲ್ಲಿ ಪಾಕಿಸ್ತಾನ್ ತಂಡ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್ ಪಂದ್ಯವು ಶಿಫ್ಟ್ ಆಗಲಿದೆ. ಅಂದರೆ ಟಿ20 ವಿಶ್ವಕಪ್​ನ ಮೊದಲ ಪಂದ್ಯಕ್ಕೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನವನ್ನು ನಿಗದಿ ಮಾಡಲಾಗಿದೆ.

ಇದಾಗ್ಯೂ ಪಾಕಿಸ್ತಾನ್ ತಂಡ ಮುಂದಿನ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಮೊದಲ ಸೆಮಿಫೈನಲ್ ಪಂದ್ಯವನ್ನು ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ಆಯೋಜಿಸಲಾಗುತ್ತದೆ.

ಪಂದ್ಯ ಶಿಫ್ಟ್ ಏಕೆ?

  • ತಟಸ್ಥ ಸ್ಥಳದ ನಿಯಮ: ಪ್ರಸ್ತುತ ಟಿ20 ವಿಶ್ವಕಪ್ ಅನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿದೆ. ಇದಾಗ್ಯೂ ಪಾಕಿಸ್ತಾನ್ ತಂಡವು ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಪಾಕ್ ತಂಡವು ಭಾರತದಲ್ಲಿ ಪಂದ್ಯಾವಳಿ ಆಡಲು ಹಿಂದೇಟು ಹಾಕಿರುವುದು.
  • ಕೊಲಂಬೊದಲ್ಲಿ ಸೆಮಿಫೈನಲ್: ಪಾಕಿಸ್ತಾನ್ ತಂಡವು ಸೆಮಿಫೈನಲ್​ಗೆ ಪ್ರವೇಶಿಸಿದರೆ ಆ ಪಂದ್ಯವನ್ನು ಕೊಲಂಬೊದಲ್ಲಿ ಆಯೋಜಿಸುವುದು ಪೂರ್ವ ನಿರ್ಧರಿತ. ಹೀಗಾಗಿ ಪಾಕ್ ತಂಡ ಸೆಮಿಫೈನಲ್​ಗೆ ಪ್ರವೇಶಿಸಿದರೆ ಆರ್​. ಪ್ರೇಮದಾಸ ಮೈದಾನದಲ್ಲಿ ಕಣಕ್ಕಿಳಿಯಲಿದೆ.

ಶ್ರೀಲಂಕಾ ಸೆಮಿಫೈನಲ್​ಗೆ ಬಂದರೆ?

ಶ್ರೀಲಂಕಾ ತಂಡವು ಸೆಮಿಫೈನಲ್​ಗೇರಿದರೂ ಸೆಮಿಫೈನಲ್ ಪಂದ್ಯವನ್ನು ಕೊಲಂಬೊದಲ್ಲಿ ಆಯೋಜಿಸಲಿದ್ದಾರೆ. ಇದಕ್ಕೆ ಮುಖ್ಯ ಕಾರಣ ಆತಿಥೇಯ ದೇಶವಾಗಿರುವುದು. ಆದರೆ ಮೊದಲ ಸೆಮಿಫೈನಲ್​ಗೆ ಭಾರತ ಮತ್ತು ಶ್ರೀಲಂಕಾ ಅರ್ಹತೆ ಪಡೆದರೆ ಆ ಪಂದ್ಯವನ್ನು ಕೊಲ್ಕತ್ತಾದಲ್ಲಿ ಆಯೋಜಿಸಲಾಗುತ್ತದೆ. ಅಂದರೆ ಇಲ್ಲಿ ಭಾರತ ಮೊದಲ ಸೆಮಿಫೈನಲ್​ಗೆ ಅರ್ಹತೆ ಪಡೆಯದೇ ಶ್ರೀಲಂಕಾ ಅರ್ಹತೆ ಪಡೆದಿದ್ದರೆ ಮಾತ್ರ ಮೊದಲ ಸೆಮಿಫೈನಲ್​ ಪಂದ್ಯವನ್ನು ಆರ್. ಪ್ರೇಮದಾಸ ಮೈದಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

ಶ್ರೀಲಂಕಾ, ಪಾಕಿಸ್ತಾನ್ ಬರದಿದ್ದರೆ?

ಶ್ರೀಲಂಕಾ ಮತ್ತು ಪಾಕಿಸ್ತಾನ್ ತಂಡಗಳು ಸೂಪರ್-8 ಸುತ್ತಿನಲ್ಲೇ ಹೊರಬಿದ್ದರೆ ಸೆಮಿಫೈನಲ್ ನಡೆಯುವುದು ಎಲ್ಲಿ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಕೊಲ್ಕತ್ತಾದಲ್ಲಿ.

ಅಂದರೆ ಪಾಕಿಸ್ತಾನ್ ಮತ್ತು ಶ್ರೀಲಂಕಾ ಸೆಮಿಫೈನಲ್​ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದರೆ ಮಾರ್ಚ್ 4 ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯವನ್ನು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಟೀಮ್ ಇಂಡಿಯಾ ಕೇವಲ 11 ಓವರ್​ಗಳಲ್ಲಿ ಪಂದ್ಯ ಮುಗಿಸಬೇಕು!

ಹಾಗೆಯೇ ಮಾರ್ಚ್ 5 ರಂದು ನಡೆಯಲಿರುವ ದ್ವಿತೀಯ ಸೆಮಿಫೈನಲ್ ಪಂದ್ಯಕ್ಕೆ ಮುಂಬೈನ ವಾಂಖೆಡೆ ಸ್ಟೇಡಿಯಂ ಆತಿಥ್ಯವಹಿಸಲಿದೆ. ಇನ್ನು ಫೈನಲ್ ಪಂದ್ಯವು ಮಾರ್ಚ್ 8 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಯೋಜಿಸಲಾಗುತ್ತದೆ.

Source link

ಷೇರುಪೇಟೆ ಕುಸಿತ; ಹೂಡಿಕೆದಾರರಿಗೆ 4 ಲಕ್ಷ ಕೋಟಿ ನಷ್ಟ; ಮಾರುಕಟ್ಟೆ ಕುಸಿಯಲು ಏನು ಕಾರಣ? – Kannada News | Stock Market indices falling on Tuesday, know the possible reasons for this fall

ನವದೆಹಲಿ, ಫೆಬ್ರುವರಿ 24: ಕಳೆದ ಕೆಲ ಟ್ರೇಡಿಂಗ್ ದಿನಗಳು ಪಾಸಿಟಿವ್ ಆಗಿದ್ದ ಷೇರುಪೇಟೆಯ (stock market) ಪ್ರಮುಖ ಸೂಚ್ಯಂಕಗಳು ಇವತ್ತು ಮಂಗಳವಾರ ಕೆಂಪು ಬಣ್ಣಕ್ಕೆ ತಿರುಗಿವೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಬೆಳಗಿನ ವಹಿವಾಟಿನಲ್ಲಿ ಶೇ. 1ರಷ್ಟು ಕುಸಿತ ಕಂಡಿದ್ದವು. ಈ ವರದಿ ಬರೆಯುವಾಗ ಸೆನ್ಸೆಕ್ಸ್ 746 ಅಂಕಗಳನ್ನು ಕಳೆದುಕೊಂಡು 82,544 ಮಟ್ಟದಲ್ಲಿತ್ತು. ನಿಫ್ಟಿ ಸೂಚ್ಯಂಕ 208 ಅಂಕ ಕಳೆದುಕೊಂಡು 25,506ರ ಮಟ್ಟದಲ್ಲಿತ್ತು.

ಇವತ್ತಿನ ಟ್ರೇಡಿಂಗ್​ನ ಒಂದು ಹಂತದಲ್ಲಿ ನಿಫ್ಟಿ 25,464 ಮಟ್ಟಕ್ಕೆ ಕುಸಿದಿತ್ತು. ಸೆನ್ಸೆಕ್ಸ್ 82,422 ಅಂಕಗಳ ಮಟ್ಟಕ್ಕೆ ಇಳಿದಿತ್ತು. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳಂತೂ ಹೆಚ್ಚಿನ ಹೊಡೆತ ಪಡೆದಿವೆ. ಒಂದು ಅಂದಾಜು ಪ್ರಕಾರ ಮಂಗಳವಾರ ಬೆಳಗ್ಗೆ ಟ್ರೇಡಿಂಗ್ ಆರಂಭವಾದ 30 ನಿಮಿಷದಲ್ಲಿ ಒಟ್ಟೂ ಮಾರುಕಟ್ಟೆ ಬಂಡವಾಳ 4 ಲಕ್ಷ ಕೋಟಿ ರೂನಷ್ಟು ಕಡಿಮೆ ಆಗಿ ಹೋಗಿತ್ತು. ಷೇರು ಮಾರುಕಟ್ಟೆ ಇವತ್ತು ಇಷ್ಟು ಕುಸಿಯಲು ಪ್ರಮುಖ ಕಾರಣಗಳೇನು?

ಇದನ್ನೂ ಓದಿ: ಐಡಿಯಾ ಯಾರದು ಅನ್ನೋದು ಮುಖ್ಯ ಅಲ್ಲ, ಅದನ್ನು ಜಾರಿಗೆ ತರೋನೇ ಜಾಣ: ಚ್ಯಾಟ್​ಜಿಪಿಟಿ ರೂವಾರಿ ಸ್ಯಾಮ್ ಆಲ್ಟ್​ಮ್ಯಾನ್ ಸಲಹೆ ಕೇಳಿ

ಇನ್ನೂ ನಿಂತಿಲ್ಲ ಅಮೆರಿಕದ ಟ್ಯಾರಿಫ್ ರಗಳೆ

ಅಮೆರಿಕದ ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶ ಮಾಡಿ ತೀರ್ಪು ನೀಡಿದರೂ ಟ್ರಂಪ್ ಅವರ ಟ್ಯಾರಿಫ್ ಕಿರಿಕ್ ಕಡಿಮೆ ಆಗಿಲ್ಲ. ಟ್ರಂಪ್ ಅವರ ಟ್ಯಾರಿಫ್ ಕ್ರಮವನ್ನು ಕೋರ್ಟ್ ಅಮಾನ್ಯಗೊಳಿಸಿ, ಎಲ್ಲಾ ದೇಶಗಳಿಗೂ ಟ್ಯಾರಿಫ್ ಅನ್ನು ಸಮಾನವಾಗಿ ಶೇ. 10ಕ್ಕೆ ಇಳಿಸಿತ್ತು. ಆದರೆ, ಟ್ರಂಪ್ ಅವರು ಟ್ರೇಡ್ ಎಕ್ಸ್​ಪ್ಯಾನ್ಷನ್ ಆ್ಯಕ್ಟ್​ನ 232 ಸೆಕ್ಷನ್ ಬಳಸಿ ಟ್ಯಾರಿಫ್ ಅನ್ನು ಮತ್ತೆ ಹಾಕಲು ಹೊರಟಿದ್ದಾರೆ. ಕೋರ್ಟ್ ತಾಳಕ್ಕೆ ಕುಣಿದರೆ ಸಿಕ್ಕಾಪಟ್ಟೆ ಟ್ಯಾರಿಫ್ ಹಾಕುವುದಾಗಿ ಎಲ್ಲಾ ದೇಶಗಳಿಗೂ ಎಚ್ಚರಿಕೆ ಕೊಟ್ಟಿದ್ದಾರೆ ಟ್ರಂಪ್. ಈ ಕಾರಣಕ್ಕೆ ಮಾರುಕಟ್ಟೆ ನೆಗಟಿವ್ ಆಗಿ ಸ್ಪಂದಿಸುತ್ತಿದೆ.

ಅಮೆರಿಕ ಮತ್ತು ಇರಾನ್ ಬಿಕ್ಕಟ್ಟು

ಇರಾನ್ ವಿರುದ್ಧ ದಾಳಿ ಮಾಡಲು ಅಮೆರಿಕ ಸಜ್ಜಾಗಿದೆ. ಯಾವಾಗ ಬೇಕಾದರೂ ಆಕ್ರಮಣ ಮಾಡಬಹುದು ಎನ್ನುವ ಸ್ಥಿತಿ ಇದೆ. ಇರಾನ್ ಪರಮಾಣು ಶಸ್ತ್ರಾಸ್ತ್ರ ತ್ಯಜಿಸಬೇಕು ಎಂಬುದು ಅಮೆರಿಕ ಹಿಡಿದಿರುವ ಬಿಗಿಪಟ್ಟು.

ಐಟಿ ಷೇರುಗಳ ಮಾರಾಟ ಭರಾಟೆ

ಆಂಥ್ರೋಪಿಕ್​ನ ಕ್ಲಾಡ್ ಎಐ ಟೂಲ್​ಗಳು ಕೋಡಿಂಗ್ ಕೆಲಸವನ್ನು ಸಲೀಸಾಗುವಂತೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಾರತದ ಐಟಿ ಉದ್ಯಮದ ಮೇಲೆ ಕರಿನೆರಳು ಬಿದ್ದಂತಾಗಿದೆ. ಇದರಿಂದಾಗಿ, ಐಟಿ ಷೇರುಗಳು ಕುಸಿಯುತ್ತಾ ಹೋಗುತ್ತಿವೆ.

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಗಳು ಅತಿಯಾಗಿ ಏರಿದ್ದು ಯಾಕೆಂದು ಕಾರಣ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್

ಷೇರು ಮಾರುಕಟ್ಟೆ ಕುಸಿಯಲು ಈ ಮೇಲಿನ ಕಾರಣಗಳು ಪ್ರಮುಖವಾಗಿ ಕಾಣುತ್ತಿವೆ. ಹಾಗೆಯೇ, ಇವತ್ತು ಮಂಗಳವಾರ ಡಾಲರ್ ಎದುರು ರುಪಾಯಿ ಮೌಲ್ಯ ಸ್ವಲ್ಪ ಕುಸಿದಿದೆ. ಜಾಗತಿಕವಾಗಿ ವಿವಿಧ ಷೇರುಪೇಟೆಗಳೂ ಕೂಡ ಕೆಂಪು ಬಣ್ಣದಲ್ಲಿ ಇವೆ. ಇವು ಭಾರತದ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ವಿಪಕ್ಷ ನಾಯಕ ಅಶೋಕ್​​ ಸ್ಫೋಟಕ ಆರೋಪ – Kannada News | Dharwad Students Protest: R Ashok Slams Karnataka Government Over Job Vacancies

ಧಾರವಾಡ, ಫೆಬ್ರವರಿ 24: ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಕರು ಉದ್ಯೋಗ ನೀಡುವಂತೆ ಆಗ್ರಹಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ, ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ಒಬ್ಬ ನಿರುದ್ಯೋಗಿಗೂ ಉದ್ಯೋಗ ನೀಡಿಲ್ಲ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರದ ಕಚ್ಚಾಟದಲ್ಲಿ ಮುಳುಗಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಮತ್ತು ಸಂಬಳ ನೀಡಲು ಸಹ ಹಣವಿಲ್ಲ. ರಾಜ್ಯದಲ್ಲಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಹಣಕಾಸು ಇಲಾಖೆ 65,000 ಹುದ್ದೆಗಳನ್ನು ಭರ್ತಿ ಮಾಡಲು ಆದೇಶ ನೀಡಿ ಆರು ತಿಂಗಳಾದರೂ ಒಂದು ಸಂದರ್ಶನ ಸಹ ಕರೆದಿಲ್ಲ. ತಕ್ಷಣವೇ ನೇಮಕಾತಿ ಪ್ರಕ್ರಿಯೆಗಳನ್ನು ಆರಂಭಿಸದಿದ್ದರೆ ರಾಜ್ಯವ್ಯಾಪಿ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link