Category Archives: Blog

Your blog category

ರಾಜ್​​ನಿಂದ ವಿಚ್ಛೇದವಾಯ್ತಾ? ಟ್ರೋಲ್ ಮಾಡುವವರಿಗೆ ಉತ್ತರಿಸಿದ ಸಮಂತಾ – Kannada News | Samantha Ruth Prabhu Clarifies Raj Nidimoru Marriage, Debunks Divorce Rumors

ಸಮಂತಾ ರುತ್ ಪ್ರಭು (Samantha) ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಅವರು ರಾಜ್ ನಿಧಿಮೋರು ಜೊತೆ ಎರಡನೇ ಮದುವೆ ಆಗಿದ್ದಾರೆ. ರಾಜ್​​ಗೂ ಇದು ಎರಡನೇ ವಿವಾಹ. ರಾಜ್ ಆಗಮದಿಂದಲೇ ಸಮಂತಾ ವಿಚ್ಛೇದನ ಆಯಿತು ಎಂಬ ವದಂತಿ ಹಬ್ಬಿತ್ತು. ಇದಕ್ಕೆಲ್ಲ ಸಮಂತಾ ಉತ್ತರ ನೀಡಿದ್ದಾರೆ. ಅವರ ಉತ್ತರದಿಂದ ಎಲ್ಲರೂ ಗಪ್​ ಚುಪ್ ಆಗಿದ್ದಾರೆ.

ಸಮಂತಾ ವಿಚ್ಛೇದನ ಪಡೆದಿದ್ದು 2021ರ ಅಕ್ಟೋಬರ್​​ನಲ್ಲಿ. ಆದರೆ, ಅವರಿಗೆ ರಾಜ್ ಪರಿಚಯ ಆಗಿದ್ದು 2019ರಲ್ಲಿ. ಹೀಗಾಗಿ, ಇದೆರಡನ್ನೂ ತಾಳೆ ಹಾಕಿ ಕೆಲವರು ರಾಜ್ ಅವರನ್ನು ಟೀಕಿಸಿದ್ದರು. ರಾಜ್ ಜೊತೆಗಿನ ಪ್ರೀತಿ ಕಾರಣದಿಂದಲೇ ನಾಗ ಚೈತನ್ಯ ಅವರು ಸಮಂತಾಗೆ ಡಿವೋರ್ಸ್ ನೀಡಿರಬಹುದು ಎಂದು ಕೆಲವರು ಊಹಿಸಿದ್ದಾರೆ. ಆದರೆ, ಈ ಊಹೆ ತಪ್ಪು ಎಂಬುದನ್ನು ಸಮಂತಾ ಸಾಬೀತು ಮಾಡಿದ್ದಾರೆ.

ಸಮಂತಾ ಅವರು ರಾಜ್ ಜೊತೆ ಕ್ಲೋಸ್ ಆಗಿದ್ದು ಯಾವಾಗ ಎಂಬುದನ್ನು ಹೇಳಿದ್ದಾರೆ. ಡಿವೋರ್ಸ್ ಬಳಿಕ ಯಾರ ಜೊತೆಯೂ ಕ್ಲೋಸ್ ಆಗೋದಿಲ್ಲ ಎಂದು ಸಮಂತಾ ಭಾವಿಸಿದ್ದರಂತೆ. ಆದರೆ, ಅವರಿಗೆ ರಾಜ್ ನೀಡಿದ ಆಪ್ಯಾಯತೆ ಖುಷಿ ಕೊಟ್ಟಿತು. ಮತ್ತೆ ಪ್ರೀತಿಯಲ್ಲಿ ಬೀಳುವಂತೆ ಆಯಿತು.

‘ನಾನು ವಿಚ್ಛೇದನ ಪಡೆದಾಗ ನಾನು ಹೊರ ಜಗತ್ತಿನ ಜೊತೆಗಿನ ಸಂಪರ್ಕವನ್ನು ಸಂಪೂರ್ಣವಾಗಿ ಕಟ್ ಮಾಡಿದೆ. ಬೇರೆಯವರ ಮೇಲೆ ಮತ್ತೆ ಅವಲಂಬಿತರಾಗಬಹುದು ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಅದೃಷ್ಟವಶಾತ್ ಆ ರೀತಿಯ ಪ್ರೀತಿ ಮತ್ತು ಸ್ನೇಹವನ್ನು ಸ್ವೀಕರಿಸಿದೆ. ರಾಜ್ ಅವರಿಂದ ಸಾಕಷ್ಟು ಪ್ರೀತಿ ಪಡೆದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಹೆಮ್ಮೆಯಿಂದ ತಾಳಿ ಧರಿಸಿ ಓಡಾಡುತ್ತಿರುವ ನಟಿ ಸಮಂತಾ ರುತ್ ಪ್ರಭು

‘ವಿಚ್ಛೇದನ ಪಡೆದ ಸಮಯದಲ್ಲಿ ಸಮಂತಾ ತುಂಬಾನೇ ಲೋ ಆಗಿದ್ದರು. ಆದರೆ ರಾಜ್ ಜೊತೆ ಸ್ನೇಹ ಬೆಳೆಸಿದ ನಂತರ ನನ್ನ ಜೀವನವನ್ನು ನೋಡುವ ರೀತಿಯಲ್ಲಿ ಬದಲಾವಣೆಗಳನ್ನು ಕಂಡೆ’ ಎಂದು ಅವರು ಹೇಳಿದ್ದಾರೆ. ಅಂದರೆ, ನಾಗ ಚೈತನ್ಯ ಜೊತೆ ಸಂಬಂಧ ಹೊಂದಿರುವಾಗ ಸಮಂತಾ ಅವರು ರಾಜ್ ಜೊತೆ ಪ್ರೊಫೆಷನಲ್ ಆಗೇ ವರ್ತಿಸುತ್ತಿದ್ದರು ಎಂಬುದು ಈ ಮಾತುಗಳಿಂದ ಸ್ಪಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today 24 February​: ಇಂದು ಈ ರಾಶಿಯವರ ವ್ಯಾಪಾರದಲ್ಲಿ ಯಶಸ್ಸು – Kannada News | Daily Horoscope for February​ ​​24th 20​26: Dr. Basavaraj Gurujis Predictions for Zodiac Signs

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 24, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ,ಉತ್ತರಾಯಣ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಶುಕ್ಲಪಕ್ಷ, ಸಪ್ತಮಿ ತಿಥಿಯಾಗಿದೆ. ಈ ದಿನ ಕೃತಿಕಾ ನಕ್ಷತ್ರದಲ್ಲಿ ಚಂದ್ರ ಸಂಚರಿಸಲಿದ್ದು, ರವಿ ಕುಂಭ ರಾಶಿಯಲ್ಲಿದ್ದಾನೆ. ಇಂದು ಸರ್ವ ಸಿದ್ಧಿ ಕಾಲವು 11:04 ರಿಂದ 12:33 ರ ವರೆಗೆ ಇರುತ್ತದೆ. ಸುಬ್ರಮಣ್ಯ ಮತ್ತು ಹನುಮಂತನ ಅನುಗ್ರಹಕ್ಕೆ ವಿಶೇಷ ದಿನವಾಗಿದೆ.

ದ್ವಾದಶ ರಾಶಿಗಳಲ್ಲಿ ಮೇಷ ರಾಶಿಯವರಿಗೆ ಇಂದು ನಾಲ್ಕು ಗ್ರಹಗಳ ಶುಭಫಲವಿದ್ದು, ಜವಾಬ್ದಾರಿಗಳು ಹೆಚ್ಚಲಿವೆ. ಆದಾಯ ಮತ್ತು ಕುಟುಂಬದ ಬೆಂಬಲ ಚೆನ್ನಾಗಿರುತ್ತದೆ. ವೃಷಭ ರಾಶಿಯವರಿಗೆ ಐದು ಗ್ರಹಗಳ ಶುಭಫಲ ದೊರೆಯಲಿದ್ದು, ಆರ್ಥಿಕ ವೃದ್ಧಿ, ವೃತ್ತಿಯಲ್ಲಿ ಉತ್ತಮ ಸ್ಥಿತಿ ಮತ್ತು ಹಳೆಯ ಬಾಕಿ ವಸೂಲಿ ಯೋಗವಿದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

 

Source link

‘ಟಾಕ್ಸಿಕ್’ ಸಿನಿಮಾನ ಯಾವ ರಾಜ್ಯಗಳಲ್ಲಿ ಯಾರು ಹಂಚಿಕೆ ಮಾಡ್ತಾರೆ? ಇಲ್ಲಿದೆ ಸಂಪೂರ್ಣ ಪಟ್ಟಿ – Kannada News | Toxic Movie Pre Release Distribution Rights Soar: Yash Film Secures Mega Deals Globally

‘ಟಾಕ್ಸಿಕ್’ ಸಿನಿಮಾ (Toxic Movie) ರಿಲೀಸ್​​ಗೆ ಇನ್ನು ಬಾಕಿ ಇರೋದು ಕೆಲವೇ ವಾರಗಳು ಮಾತ್ರ. ಈ ಮೊದಲು ರಿಲೀಸ್ ಆದ ಟೀಸರ್​​ಗಳು ಗಮನ ಸೆಳೆದಿವೆ. ಶೀಘ್ರದಲ್ಲೇ ಚಿತ್ರದ ಟ್ರೇಲರ್ ಲಾಂಚ್ ಕೂಡ ಆಗಲಿದೆ. ಅದಕ್ಕೂ ಮೊದಲು ‘ಟಾಕ್ಸಿಕ್’ ಸಿನಿಮಾದ ಹಂಚಿಕೆ ಹಕ್ಕು ಮಾರಾಟ ಆಗಿದೆ. ದೇಶ ಹಾಗೂ ವಿದೇಶದ ಹಕ್ಕುಗಳನ್ನು ದೊಡ್ಡ ದೊಡ್ಡ ಸಂಸ್ಥೆಗಳು ಪಡೆದುಕೊಂಡಿವೆ. ಇದರಿಂದ ‘ಟಾಕ್ಸಿಕ್’ ಚಿತ್ರಕ್ಕೆ ದೊಡ್ಡ ಮೊತ್ತದ ಹಣ ಹರಿದು ಬಂದಿದೆ.

‘ಟಾಕ್ಸಿಕ್’ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. ಈ ಕಾರಣದಿಂದ ಕರ್ನಾಟಕದಲ್ಲಿ ಅವರೇ ಹಂಚಿಕೆ ಮಾಡಲಿದ್ದಾರೆ. ಕರ್ನಾಟಕದಲ್ಲಿ ಅವರ ಹಂಚಿಕೆ ನೆಟ್ವರ್ಕ್ ತುಂಬಾನೇ ದೊಡ್ಡದಾಗಿದೆ. ಇದು ಚಿತ್ರಕ್ಕೆ ಸಹಕಾರಿ ಆಗಲಿದೆ. ಕರ್ನಾಟಕದಲ್ಲಿರುವ ಬಹುತೇಕ ಚಿತ್ರಮಂದಿರಗಳಲ್ಲಿ ‘ಟಾಕ್ಸಿಕ್’ ಸಿನಿಮಾ ಪ್ರದರ್ಶನ ಕಾಣುವ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಎ ಪ್ರಮಾಣಪತ್ರ ಸಿಕ್ಕರೆ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಕ್ಕೆ ತೆರಳೋದು ಕಷ್ಟ ಆಗಬಹುದು.

ಇನ್ನು, ತಮಿಳುನಾಡಿನಲ್ಲೂ ಕೆವಿಎನ್ ತನ್ನ ನೆಟ್ವರ್ಕ್ ಮೂಲಕವೇ ಹಂಚಿಕೆ ಮಾಡಲಿದೆ. ಈಗಾಗಲೇ ಅವರು ತಮಿಳಿನಲ್ಲಿ ‘ಜನ ನಾಯಗನ್’ ಸಿನಿಮಾ ನಿರ್ಮಾಣ ಮಾಡಿ ಸಾಕಷ್ಟು ಸಂಪರ್ಕ ಸಾಧಿಸಿಕೊಂಡಿದೆ. ತೆಲುಗಿನಲ್ಲಿ ಈ ಚಿತ್ರವನ್ನು ಖ್ಯಾತ ನಿರ್ಮಾಪಕ ಹಾಗೂ ಹಂಚಿಕೆದಾರ ದಿಲ್ ರಾಜು ಅವರು ಡಿಸ್ಟ್ರಿಬ್ಯೂಟ್ ಮಾಡುತ್ತಿದ್ದಾರೆ.
ಕೇರಳದಲ್ಲಿ ‘ಎ4 ಎಂಟರ್​ಟೇನ್​​ಮೆಂಟ್’ ಸಿನಿಮಾನ ಹಂಚಿಕೆ ಮಾಡುತ್ತಿದೆ. ‘ಅನಿಮಲ್’, ‘ಪುಷ್ಪ 2’ ರೀತಿಯ ಸಿನಿಮಾಗಳನ್ನು ಕೇರಳ ರಾಜ್ಯದಲ್ಲಿ ಹಂಚಿಕೆ ಮಾಡಿದ ಅನುಭವ ಇವರಿಗೆ ಇದೆ.

ಇದನ್ನೂ ಓದಿ: ‘ಧುರಂಧರ್ 2’ ಚಿತ್ರಕ್ಕಿಂತ ‘ಟಾಕ್ಸಿಕ್’ ಚಿತ್ರಕ್ಕೆ ಸಿಕ್ತು ಹೆಚ್ಚುವರಿ 1200 ಪರದೆಗಳು?

ಅನಿಲ್ ತಡಾನಿ ಒಡೆತನದ ‘ಎಎ ಫಿಲ್ಮ್ಸ್’ ಉತ್ತರ ಭಾರತದ ಹಂಚಿಕೆ ಹಕ್ಕು ಪಡೆದಿದೆ. ಈ ಮೊದಲು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರವನ್ನು ಉತ್ತರ ಭಾರತದಲ್ಲಿ ಹಂಚಿಕೆ ಮಾಡಲು ಇವರು ಸಹಾಯ ಮಾಡಿದ್ದರು. ಈಗ ಯಶ್ ಅವರು ಅನಿಲ್ ಜೊತೆಗಿನ ಗೆಳೆತನವನ್ನು ಮುಂದುವರಿಸಿದ್ದಾರೆ. ಅವರಿಗೆ ‘ಟಾಕ್ಸಿಕ್’ ಚಿತ್ರದ ಉತ್ತರ ಭಾರತದ ಜವಾಬ್ದಾರಿ ನೀಡಲಾಗಿದೆ. ಇನ್ನು ವಿದೇಶದಲ್ಲಿ ಫಾರ್ಸ್​ ಫಿಲ್ಮ್ಸ್ ಹಂಚಿಕೆ ಮಾಡುತ್ತಿದೆ. ಅರಬ್ ರಾಷ್ಟ್ರಗಳಲ್ಲಿ ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

+5.350, +3.800: ಸಂಕಷ್ಟಕ್ಕೆ ಸಿಲುಕಿದ ಟೀಮ್ ಇಂಡಿಯಾ – Kannada News | T20 World Cup 2026: The “India Effect” and Qualification Scenarios

ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಸೂಪರ್- 8 ಸುತ್ತಿನಲ್ಲಿ ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾ ತಂಡಗಳು ಭರ್ಜರಿ ಜಯ ಸಾಧಿಸಿದೆ.  ಗ್ರೂಪ್-1 ರ ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾ ಟೀಮ್ ಇಂಡಿಯಾವನ್ನು 76 ರನ್​ಗಳಿಂದ ಸೋಲಿಸಿದರೆ, ದ್ವಿತೀಯ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ ವೆಸ್ಟ್ ಇಂಡೀಸ್ ತಂಡ 107 ರನ್​ಗಳ ಅಮೋಘ ಗೆಲುವು ದಾಖಲಿಸಿದೆ. ಈ ಎರಡು ತಂಡಗಳ ಭರ್ಜರಿ ಪ್ರದರ್ಶನದಿಂದಾಗಿ ಭಾರತ ತಂಡದ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ.

ಏಕೆಂದರೆ ಈ ಎರಡು ತಂಡಗಳು ಮುಂದಿನ ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದರೆ ಸೆಮಿಫೈನಲ್​ಗೇರುವುದು ಬಹುತೇಕ ಖಚಿತವಾಗಲಿದೆ. ಇದಕ್ಕೆ ಮುಖ್ಯ ಕಾರಣ ಉಭಯ ತಂಡಗಳ ನೆಟ್​ ರನ್ ರೇಟ್. ಇಲ್ಲಿ ಸೌತ್ ಆಫ್ರಿಕಾ ತಂಡವು +3.800 ನೆಟ್ ರನ್ ರೇಟ್ ಹೊಂದಿದ್ದರೆ, ವೆಸ್ಟ್ ಇಂಡೀಸ್ ತಂಡವು +5.350 ನೆಟ್ ರನ್ ರೇಟ್ ಹೊಂದಿದೆ.

ಈ ಎರಡು ತಂಡಗಳ ನೆಟ್ ರನ್​ ರೇಟ್ ಅನ್ನು ಹಿಂದಿಕ್ಕಲು ಟೀಮ್ ಇಂಡಿಯಾ ಮುಂದಿನ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದರೆ ಸಾಕಾಗದು. ಬದಲಾಗಿ ಅಮೋಘ ಗೆಲುವು ಅನಿವಾರ್ಯ. ಅಂದರೆ ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಕನಿಷ್ಠ 70 ರಿಂದ 80 ರನ್​ಗಳ ಅಂತರದಿಂದ ಗೆದ್ದರೆ ಮಾತ್ರ ನೆಟ್ ರನ್​ ರೇಟ್ ಪಾಸಿಟಿವ್ ಆಗಲಿದೆ.

ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲೂ ಭರ್ಜರಿ ಜಯಗಳಿಸುವ ಮೂಲಕ ಮಾತ್ರ ಸೌತ್ ಆಫ್ರಿಕಾ ಹಾಗೂ ವಿಂಡೀಸ್ ಅನ್ನು ನೆಟ್ ರನ್ ರೇಟ್​ನಲ್ಲಿ ಹಿಂದಿಕ್ಕಬಹುದು. ಹೀಗಾಗಿಯೇ ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾ ತಂಡಗಳ ಅತ್ಯುತ್ತಮ ಪ್ರದರ್ಶನ ಟೀಮ್ ಇಂಡಿಯಾದ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುವ ಸಾಧ್ಯತೆಯಿದೆ.

ಟೀಮ್ ಇಂಡಿಯಾದ ‘ಸೆಮಿಫೈನಲ್‘ ಲೆಕ್ಕಾಚಾರ:

  • ಮೂರು ತಂಡಗಳ ಸಮಬಲದ ಭೀತಿ: ಒಂದು ವೇಳೆ ಭಾರತ ತನ್ನ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದರೂ, ವೆಸ್ಟ್ ಇಂಡೀಸ್ ತಂಡ ಸೌತ್ ಆಫ್ರಿಕಾವನ್ನು ಸೋಲಿಸಿದರೆ, ಮೂರು ತಂಡಗಳು ತಲಾ 4 ಅಂಕಗಳನ್ನು ಪಡೆಯುತ್ತವೆ. ಆಗ ರನ್ ರೇಟ್ ಆಧಾರದ ಮೇಲೆ ಭಾರತ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಹೆಚ್ಚಿದೆ (ಏಕೆಂದರೆ ಭಾರತದ NRR ಪ್ರಸ್ತುತ ತುಂಬಾ ಮೈನಸ್‌ನಲ್ಲಿದೆ).
  • ದೊಡ್ಡ ಅಂತರದ ಗೆಲುವಿನ ಅನಿವಾರ್ಯತೆ: ಭಾರತ ತನ್ನ ಮುಂದಿನ ಪಂದ್ಯಗಳಲ್ಲಿ (ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ) ಕೇವಲ ಗೆದ್ದರೆ ಸಾಲದು, ರನ್ ರೇಟ್ ಸುಧಾರಿಸಿಕೊಳ್ಳಲು ಸುಮಾರು 70-100 ರನ್‌ಗಳ ಬೃಹತ್ ಅಂತರದಿಂದ ಗೆಲ್ಲಬೇಕಿದೆ.
  • ಸೌತ್ ಆಫ್ರಿಕಾದ ಸಹಾಯ: ಭಾರತ ತಂಡದ ಸೆಮಿಫೈನಲ್ ಹಾದಿ ಸುಗಮವಾಗಬೇಕಿದ್ದರೆ, ಸೌತ್ ಆಫ್ರಿಕಾ ತಂಡವು ತನ್ನ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಆಗ ಭಾರತ ತನ್ನ ಮುಂದಿನ ಎರಡೂ ಪಂದ್ಯ ಗೆದ್ದರೆ ಸುಲಭವಾಗಿ 2ನೇ ಸ್ಥಾನದೊಂದಿಗೆ ಸೆಮಿಫೈನಲ್‌ಗೆ ಹೋಗಬಹುದು.

ಅಂದರೆ ಟೀಮ್ ಇಂಡಿಯಾ ನೇರವಾಗಿ ಸೆಮಿಫೈನಲ್​ಗೇರಬೇಕಿದ್ದರೆ ಸೌತ್ ಆಫ್ರಿಕಾ ತಂಡವು ತನ್ನ ಮುಂದಿನ ಎರಡೂ ಮ್ಯಾಚ್​ಗಳಲ್ಲೂ ಗೆಲ್ಲಬೇಕು. ಒಂದು ವೆಸ್ಟ್ ಇಂಡೀಸ್ ವಿರುದ್ಧ ಸೋತು, ಝಿಂಬಾಬ್ವೆ ವಿರುದ್ಧ ಗೆದ್ದರೆ ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವಾಗಲಿದೆ. ಅಂದರೆ ಟೀಮ್ ಇಂಡಿಯಾ ತನ್ನ ಎರಡೂ ಪಂದ್ಯಗಳನ್ನು ನೆಟ್ ರನ್ ರೇಟ್ ಆಧಾರದ ಮೇಲೆ ಗೆಲ್ಲಬೇಕು. ಇಲ್ಲದಿದ್ದರೆ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಬರೋಬ್ಬರಿ 17 ಸಿಕ್ಸ್​… ಶಿಮ್ರಾನ್ ಸಿಡಿಲಬ್ಬರ

ಭಾರತದ ಮುಂದಿನ ಪಂದ್ಯಗಳು:

  • ಭಾರತ vs ಝಿಂಬಾಬ್ವೆ: ಫೆಬ್ರವರಿ 26, 2026 (ಚೆನ್ನೈ).
  • ಭಾರತ vs ವೆಸ್ಟ್ ಇಂಡೀಸ್: ಮಾರ್ಚ್ 1, 2026 (ಕೋಲ್ಕತ್ತಾ).

Source link

Bengaluru Air Quality: ಬೆಂಗಳೂರು, ಉಡುಪಿಯಲ್ಲಿ ತೀರ ಕಳಪೆ ಏರ್ ಕ್ವಾಲಿಟಿ! – Kannada News | Bangalore Air Pollution Crisis: Udupi’s Air quality is getting worse

ಬೆಂಗಳೂರು, ಉಡುಪಿಯಲ್ಲಿ ತೀರ ಕಳಪೆ ಏರ್ ಕ್ವಾಲಿಟಿ!

ಬೆಂಗಳೂರು, ಫೆಬ್ರವರಿ 24: ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಮಂಗಳೂರು ಮತ್ತು ಉಡುಪಿಯ ವಾಯು ಗುಣಮಟ್ಟವೂ (Bengaluru Air Quality) ಹದಗೆಟ್ಟಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇಂದೂ ಸಹ ಹಲವೆಡೆ ಕಳಪೆ ಏರ್ ಕ್ವಾಲಿಟಿ ದಾಖಲಾಗಿದ್ದು, ಉಡುಪಿಯ AQI ಇನ್ನಷ್ಟು ಹದಗೆಟ್ಟಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 135ಕ್ಕೆ ತಲುಪಿದೆ. ಅದಕ್ಕಿಂತ ಹೆಚ್ಚಾಗಿ ಉಡುಪಿಯ ಏರ್ ಕ್ವಾಲಿಟಿ 176 ಆಗಿದೆ. ಹಲವು ದಿನಗಳಿಂದ ವಿಪರೀತ ಏರಿಕೆ ಕಾಣುತ್ತಿರುವ ಉಡುಪಿಯ ಏರ್ ಕ್ವಾಲಿಟಿ ಇಂದು 200ರ ಗಡಿ ತಲುಪಿರುವುದು ಆತಂಕಕಾರಿಯಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –135
  • ಮಂಗಳೂರು-176
  • ಮೈಸೂರು –145
  • ಬೆಳಗಾವಿ – 175
  • ಕಲಬುರ್ಗಿ-136
  • ಶಿವಮೊಗ್ಗ – 170
  • ಬಳ್ಳಾರಿ – 114
  • ಹುಬ್ಬಳ್ಳಿ- 152
  • ಉಡುಪಿ –176
  • ವಿಜಯಪುರ –144

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೃತಿ ಸನೋನ್ ಮನಗೆದ್ದ ನಾಲ್ಕು ಸಾವಿರ ಕೋಟಿ ಒಡೆಯ; ಧೋನಿಗೆ ಅತ್ಯಾಪ್ತ – Kannada News | Kriti Sanon Dating with Kabir Bahia video and Photo Goes viral who is Kabir Bahia

ಬಾಲಿವುಡ್​​ನ ಬೇಡಿಕೆಯ ನಟಿ ಕೃತಿ ಸನೋನ್ ಅವರು ಕಬೀರ್ ಬಹಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇವರು ಲಂಡನ್​​ನಲ್ಲಿ ಸುತ್ತಾಡುತ್ತಿರುವ ಫೋಟೋ ವೈರಲ್ ಆಗಿದೆ. ಕೃತಿ ಹಾಗೂ ಕಬಿರ್ ಲಂಡನ್​ ಅಲ್ಲಿ ಕಾಣಿಸಿಕೊಂಡಿದ್ದು ಯಾವಾಗ ಎನ್ನುವ ಸ್ಪಷ್ಟನೆ ಸಿಕ್ಕಿಲ್ಲ. ಕಬೀರ್ ಅವರು ಮಾಜಿ ಕ್ರಿಕೆಟರ್ ಎಂಎಸ್​ ಧೋನಿಗೆ ಅತ್ಯಾಪ್ತರು. ಲಂಡನ್ ಅಲ್ಲಿ ತಮ್ಮದೆ ಟ್ರಾವೆಲ್ ಏಜೆನ್ಸಿ ಹೊಂದಿರೋ ಕಬೀರ್ ಅವರ ಆಸ್ತಿ 4 ಸಾವಿರ ಕೋಟಿ ರೂಪಾಯಿ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಿವಮೊಗ್ಗದಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಯ ಕೊಲೆ: ಅಸಲಿಗೆ ಅಲ್ಲಿ ನಡೆದಿದ್ದೇನು ಗೊತ್ತೇ? ಆಘಾತಕಾರಿ ಮಾಹಿತಿ ಬಯಲು – Kannada News | Shivamogga SSLC Student Murder: surprising Details Emerge in Soolabailu Assault Case

ಶಿವಮೊಗ್ಗ, ಫೆಬ್ರವರಿ 24: ಶಿವಮೊಗ್ಗದ (Shivamogga) ಹೊರವಲಯದ ಸೂಳೆಬೈಲು ಸರಕಾರಿ ಪ್ರೌಢಶಾಲೆಯಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಯ (SSLC Exam) ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಪೇಶಲ್ ಕ್ಲಾಸ್ ತೆಗೆದುಕೊಳ್ಳಲಾಗುತ್ತಿತ್ತು. ಇದೇ ಸೂಳೆಬೈಲು ಬಡಾವಣೆಯ ಸಂಕೇತ್ ಕ್ಲಾಸ್ ಮುಗಿಸಿಕೊಂಡು ವಾಪಸ್ ಮನೆಯತ್ತ ಹೋಗುವಾಗ ಸ್ನೇಹಿತ ಗಿರೀಶ್ ಮೇಲೆ ಅದೇ ಬಡಾವಣೆಯ ಐವರು ಬಾಲಕರು ಏಕಾಏಕಿ ಹಲ್ಲೆ ಮಾಡುತ್ತಿದ್ದರು. ಈ ನಡುವೆ ಗಿರೀಶ್​ನನ್ನು ಬಚಾವ್ ಮಾಡಲು ಅಲ್ಲಿಗೆ ಸಂಕೇತ್ ಹೋಗಿದ್ದಾನೆ. ಆ ಐವರು ಬಾಲಕರು ಸಂಕೇತ್ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಸಂಕೇತ್ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಗಿರೀಶ್ ತನ್ನ ಮನೆಯವರಿಗೆ ಮತ್ತು ಅಕ್ಕಪಕ್ಕದವರಿಗೆ ಗಲಾಟೆ ಬಗ್ಗೆ ಮಾಹಿತಿ ಕೊಟ್ಟಿದ್ದಾನೆ. ಇದರಿಂದ ಅಕ್ಕಪಕ್ಕದವರು ಅಲ್ಲಿಗೆ ಹೋಗಿ ನೋಡಿದಾಗ ಹಲ್ಲೆಗೊಳಗಾದ ಸಂಕೇತ್ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ಕೆರೆದುಕೊಂಡು ಹೋದರು. ಆದರೆ ಮಾರ್ಗ ಮಧ್ಯೆಯೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು.

ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ಇರುವ ಒಬ್ಬ ಮಗನನ್ನು ಕಳೆದುಕೊಂಡ ಹೆತ್ತವರು ಆಘಾತಕ್ಕೊಳಗಾಗಿದ್ದಾರೆ. ಮಗನ ಸಾವಿನ ಸುದ್ದಿಯಿಂದ ಇಡೀ ಕುಟುಂಬಸ್ಥರು ದೊಡ್ಡ ಆಘಾತಗೊಳಗಾಗಿದ್ದಾರೆ. ಅವರ ಅಕ್ರಂದನ ಮುಗಿಲು ಮುಟ್ಟಿದೆ.

ಸೋಮವಾರ ಸಂಜೆ ಸೂಳೆಬೈಲಿನಲ್ಲಿ ನಡೆದಿದ್ದೇನು?

ಸೂಳೆಬೈಲು ಸರಕಾರಿ ಪ್ರೌಢಶಾಲೆಯಲ್ಲಿ ಎಸ್​ಎಸ್​ಎಲ್​ಸಿ ಮಕ್ಕಳಿಗೆ ಪರೀಕ್ಷೆ ಹಿನ್ನಲೆಯಲ್ಲಿ ಸ್ಪೆಷಲ್ ಕ್ಲಾಸ್ ಇತ್ತು. ಕ್ಲಾಸ್ ಮುಗಿಸಿಕೊಂಡು ಹೋಗುವಾಗ ಅದೇ ಬಡಾವಣೆಯ ಮೂವರು ಬಾಲಕರು ಕಿರಿಕ್ ಮಾಡಿದ್ದಾರೆ. ಈ ನಡುವೆ ಬಾಲಕರ ನಡುವೆ ಗಲಾಟೆಯಾಗಿದೆ. ಅನ್ಯಕೋಮಿನ ಬಾಲಕರು ಮೊದಲು ಗಿರೀಶ್ ಹಾಗೂ ನಂತರ ಸಂಕೇತ್ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಸಂಕೇತ್ ಕುಸಿದು ಬೀಳುತ್ತಿದ್ದಂತೆಯೇ ಮೂವರು ಬಾಲಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ತುಂಗಾ ನಗರ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಹಲ್ಲೆ ಮಾಡಿ ಕೊಲೆಗೆ ಕಾರಣವಾದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಕುರಿತು ತನಿಖೆಯು ಚುರುಕುಗೊಂಡಿದೆ.

ಕೋಮು ಗಲಭೆ ಸಂಭವಿಸದಂತೆ ಪೊಲೀಸ್ ಕಟ್ಟೆಚ್ಚರ

ಬಾಲಕನ ಕೊಲೆಯ ನಂತರ, ನಗರದಲ್ಲಿ ಕೋಮು ಗಲಭೆ ಆಗದಂತೆ ಜಿಲ್ಲಾ ಪೊಲೀಸರು ಎಲ್ಲ ರೀತಿಯ ಮುಂಜಾಗ್ರತೆ ವಹಿಸಿದ್ದಾರೆ. ಘಟನಾ ಸ್ಥಳ, ಮೆಗ್ಗಾನ್ ಜಿಲ್ಲಾಸ್ಪತ್ರೆ ಸೇರಿದಂತೆ ನಗರದಲ್ಲಿ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಗಿರೀಶ್ ಮತ್ತು ಸಂಕೇತ್ ನಡುವೆ ಇತ್ತು ಉತ್ತಮ ಸ್ನೇಹ

ಗಿರೀಶ್ ಮತ್ತು ಮೃತ ಸಂಕೇತ್ ಅತ್ಯುತ್ತಮ ಸ್ನೇಹಿತರಾಗಿದ್ದರು. ಈ ಹಿನ್ನಲೆಯಲ್ಲಿ ಗಿರೀಶ್ ಮೇಲೆ ಅನ್ಯಕೋಮಿನ ಬಾಲಕರು ಹಲ್ಲೆ ಮಾಡುವ ಸಂದರ್ಭದಲ್ಲಿ ಸ್ನೇಹಿತನ ಬಚಾವ್ ಮಾಡಲು ಸಂಕೇತ್ ಎಂಟ್ರಿಕೊಟ್ಟಿದ್ದ. ಗಿರೀಶ್​​ನನ್ನು ಬಚಾವ್ ಮಾಡುವ ಸಂದರ್ಭದಲ್ಲಿ ಬಾಲಕರು ಗಿರೀಶ್​​ನನ್ನು ಬಿಟ್ಟು ಸಂಕೇತ್ ಮೇಲೆ ಹಲ್ಲೆ ಮಾಡಿದ್ದಾರೆ. ಎದೆ, ಮುಖ, ಹೊಟ್ಟೆ ಮೇಲೆ ಹೊಡೆದಿದ್ದಾರೆ. ಇದರಿಂದ ಸಂಕೇತ್ ಅಸ್ವಸ್ಥಗೊಂಡು ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಆಸ್ಪತ್ರೆಗೆ ದಾಖಲಿಸುವ ಮೊದಲೇ ಅಸುನೀಗಿದ್ದಾನೆ.

ಆಸ್ಪತ್ರೆಗೆ ಶಾಸಕ ಚನ್ನಬಸಪ್ಪ ಭೇಟಿ

ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಗಿರೀಶ್​​ನ ಆರೋಗ್ಯ ವಿಚಾರಿಸಿ, ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ. ಏತನ್ಮಧ್ಯೆ, ಸಂಕೇತ್ ಸಾವಿನ ಕುರಿತು ಶಾಸಕರು ಸರಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸ್ ಇಲಾಖೆ ಅಂದರೆ ಹಿಂದೂಗಳ ಹೆಣಹೊರುವ ಇಲಾಖೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಹಿಂದೂಗಳ ಜೀವ ಹೋಗಿದೆ. ಇದಕ್ಕೆ ಹೊಣೆ ಯಾರು ಎಂದು ಪ್ರಶ್ನೆ ಮಾಡಿದ್ಧಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral Video: ರೈಲಿನಲ್ಲಿ ಚಿಪ್ಸ್​ ಚೆಲ್ಲಿದ ಮಗ, ಆತನ ಕೈಯಿಂದಲೇ ಸ್ವಚ್ಛಗೊಳಿಸಿದ ತಂದೆ – Kannada News | Father Teaches Accountability as Son Cleans Up Mess on Train

ಟ್ರಾವೆಲ್ ವ್ಲಾಗರ್ ದೀಪಕ್ ಸಮಲ್ ಹಂಚಿಕೊಂಡಿರುವ ವಿಡಿಯೋ ಭಾರತದಲ್ಲಿ ನಾಗರಿಕ ಜವಾಬ್ದಾರಿ ಮತ್ತು ಪೋಷಕರ ಕರ್ತವ್ಯದ ಕುರಿತ ಚರ್ಚೆಗೆ ನಾಂದಿ ಹಾಡಿದೆ. ಮಕ್ಕಳು ಎಂದ ಮೇಲೆ ಕೈಯಲ್ಲಿರುವ ವಸ್ತುಗಳನ್ನು ಗೊತ್ತಿಲ್ಲದೆ ಚೆಲ್ಲುವುದು ಅಥವಾ ಗೊತ್ತಿದ್ದೇ ಬಿಸಾಡುವುದು ಸಾಮಾನ್ಯ, ಆದರೆ ಪೋಷಕರಾದವರು ಹೇಗಿರಬೇಕು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ರೈಲಿನಲ್ಲಿ ಮಗು ಚೆಲ್ಲಿದ್ದ ಚಿಪ್ಸ್(Chips)​ ಅನ್ನು ಅದರ ಕೈಯೊಂದಲೇ ತಂದೆ ಆರಿಸಲು ಹೇಳಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಗಲೀಜನ್ನು ಸ್ವತಃ ಸ್ವಚ್ಛಗೊಳಿಸುವ ಅಥವಾ ರೈಲು ಸಿಬ್ಬಂದಿಯನ್ನು ಅವಲಂಬಿಸುವ ಬದಲು, ಸಮಲ್ ತನ್ನ ಮಗುವಿಗೆ ತಂದೆ ಅದರ ಪಾಠ ಮಾಡಿದ್ದಾರೆ.

ಸಮಲ್ ತನ್ನ ಎರಡು ವರ್ಷದ ಮಗನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಪ್ಪನ ಬಳಿ ಮಾತನಾಡುತ್ತಾ ತಮಾಷೆಯಾಗಿ ಮಗು ನೆಲದಲ್ಲಿ ಚಿಪ್ಸ್​ ಹರಡಿತ್ತು. ತಾನೇ ಸದ್ದಿಲ್ಲದೆ ಅದನ್ನು ಎರಡು ನಿಮಿಷಗಳಲ್ಲಿ ಸ್ವಚ್ಛಗೊಳಿಸಬಹುದಿತ್ತು. ಆದರೆ ಸಮಲ್ ಹಾಗೆ ಮಾಡಲಿಲ್ಲ, ಮಗನ ಬಳಿ ನೆಲದ ಮೇಲೆ ಎಸೆದ ವಸ್ತುಗಳನ್ನು ಯಾರು ಸ್ವಚ್ಛಗೊಳಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಆಗ ಮಗುವಿಗೆ ಏನೂ ತಿಳಿಯದೆ ಗಲಿಬಿಲಿ ಗೊಂಡಿತ್ತು.

ಮತ್ತಷ್ಟು ಓದಿ: Video: ಪುಟ್ಟ ಬಾಲಕ ಸಿಎಂ ಯೋಗಿ ಬಳಿ ಇಟ್ಟ ಬೇಡಿಕೆ ಏನು ಗೊತ್ತೇ?

ಆಗ ನಿಧಾನವಾಗಿ ವಿವರಿಸುತ್ತಾ, ಇದು ನಮ್ಮ ಮನೆಯಲ್ಲ ನಿಜ ಆದರೆ ರೈಲು ಎಲ್ಲರಿಗೂ ಸೇರಿದ್ದು, ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ. ನಾವು ಗಲೀಜಿ ಮಾಡಿದಾಗ ನಾವೇ ಅದನ್ನು ಸ್ವಚ್ಛಗೊಳಿಸಬೇಕು ಎಂದು ಹೇಳಿದ ಸ್ವಲ್ಪ ಸಮಯದ ಬಳಿಕ ಮಗು ನಿಧಾನವಾಗಿ ಚಿಪ್ಸ್​ ಎತ್ತಿಕೊಳ್ಳಲು ಶುರು ಮಾಡಿತ್ತು.

ವಿಡಿಯೋ

ಮಕ್ಕಳಿಗೆ ಗದರಿಸಬಾರದು, ನಿಧಾನವಾಗಿ ಮಾಡಿರುವ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ಕೊಡುವ ಮೂಲಕ ಪಾಠ ಕಲಿಸಬೇಕು. ಭಾರತೀಯ ರೈಲ್ವೆಯ ಮೂಲಕ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ರೈಲುಗಳನ್ನು ಸ್ವಚ್ಛವಾಗಿಡುವುದು ಕೇವಲ ಸಿಬ್ಬಂದಿಯ ಕರ್ತವ್ಯವಲ್ಲ, ಅದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸಮಲ್ ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

117 ವಿಲ್ಲಾ; ರಶ್ಮಿಕಾ ಮದುವೆ ಆಗ್ತಿರೋ ಜಾಗದ ವಿವರ ಹೇಗಿದೆ ನೋಡಿ – Kannada News | Rashmika Vijay Wedding 2026: Udaipur Date, ViRoSh, Private Ceremony and Security

ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ (Vijay Devarakonda) ಮದುವೆ: ದಕ್ಷಿಣ ಚಿತ್ರರಂಗದ ಜನಪ್ರಿಯ ದಂಪತಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹದ ಬಗ್ಗೆ ಅಭಿಮಾನಿಗಳು ತುಂಬಾ ಕುತೂಹಲದಿಂದಿದ್ದರು. ಈಗ, ಈ ಕಾಯುವಿಕೆ ಕೊನೆಗೊಳ್ಳಲಿದೆ. ಮಾಧ್ಯಮ ವರದಿಗಳ ಪ್ರಕಾರ, ಇಬ್ಬರೂ ಫೆಬ್ರವರಿ 26, 2026 ರಂದು ಉದಯಪುರದಲ್ಲಿ ವಿವಾಹವಾಗಲಿದ್ದಾರೆ. ಇವರ ಮದುವೆಗೆ ಫ್ಯಾನ್ಸ್ ಕಾದಿದ್ದಾರೆ.

ಮದುವೆಗೆ ಆಯ್ಕೆ ಮಾಡಿದ ಸ್ಥಳವನ್ನು ಬಹಳ ಖಾಸಗಿ ಮತ್ತು ರಹಸ್ಯವಾಗಿಡಲಾಗಿದೆ. ವಿವಾಹ ಸಮಾರಂಭವು ಉದಯಪುರದ ಐಟಿಸಿ ಮೆಮೆಂಟೋಸ್‌ನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಾ ಇದೆ. ಉದಯಪುರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಅರಾವಳಿ ಬೆಟ್ಟಗಳಲ್ಲಿರುವ ಈ ಐಷಾರಾಮಿ ರೆಸಾರ್ಟ್ ಸಂಪೂರ್ಣವಾಗಿ ಖಾಸಗಿ ಮತ್ತು ಸುರಕ್ಷಿತವಾಗಿದೆ. ಇದು 117 ಖಾಸಗಿ ವಿಲ್ಲಾಗಳು, ನದಿ-ಕೊಳ, ಖಾಸಗಿ ಹೆಲಿಪ್ಯಾಡ್ ಹೊಂದಿದೆ. ಆದ್ದರಿಂದ, ಈ ಸ್ಥಳವನ್ನು ಗೌಪ್ಯತೆ ಮತ್ತು ಭದ್ರತೆಯ ದೃಷ್ಟಿಯಿಂದ ಸೂಕ್ತವೆಂದು ಪರಿಗಣಿಸಲಾಗಿದೆ.

ಮದುವೆ ಮೂರು ದಿನಗಳ ಕಾಲ ನಡೆಯಲಿದ್ದು, ಸುಮಾರು 100 ಅತಿಥಿಗಳನ್ನು ಆಹ್ವಾನಿಸಲಾಗಿದೆ. ಎರಡೂ ಕುಟುಂಬಗಳು ಮತ್ತು ಆಪ್ತ ಸ್ನೇಹಿತರು ಇದರಲ್ಲಿ ಭಾಗವಹಿಸಲಿದ್ದಾರೆ. ವಿಮಾನದ ಮೂಲಕ ಸುಮಾರು 50 ಜನರು ದಂಪತಿಗಳೊಂದಿಗೆ ಉದಯಪುರಕ್ಕೆ ಬರಲಿದ್ದಾರೆ ಎಂದು ಹೇಳಲಾಗಿದೆ.

ಉದಯಪುರ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಕೆಲವು ಸೆಲೆಬ್ರಿಟಿಗಳು ಮತ್ತು ವಿಐಪಿ ಅತಿಥಿಗಳು ಉಪಸ್ಥಿತರಿರುವ ಸಾಧ್ಯತೆಯಿದೆ. ಆದಾಗ್ಯೂ, ಬಾಲಿವುಡ್ ಅಥವಾ ದಕ್ಷಿಣ ಉದ್ಯಮದ ಹೆಚ್ಚಿನ ಸಂಖ್ಯೆಯ ಪ್ರಸಿದ್ಧ ನಟರು ಉಪಸ್ಥಿತರಿರುವುದಿಲ್ಲ ಎಂದು ತಿಳಿದುಬಂದಿದೆ. ತೆಲಂಗಾಣದ ಕೆಲವು ನಾಯಕರು ಮತ್ತು ಕೆಲವು ನಿರ್ದೇಶಕರು ಸಮಾರಂಭದಲ್ಲಿ ಭಾಗವಹಿಸಬಹುದು.

ರಶ್ಮಿಕಾ ಮತ್ತು ವಿಜಯ್ ಅವರ ಅಭಿಮಾನಿಗಳು ವರ್ಷಗಳ ಹಿಂದೆಯೇ ಅವರ ಹೆಸರುಗಳನ್ನು ಒಟ್ಟುಗೂಡಿಸಿ ‘ವಿರೋಶ್’ ಎಂದು ಹೆಸರಿಸಿದ್ದರು. ಈಗ ಇಬ್ಬರೂ ತಮ್ಮ ಮದುವೆಗೆ ‘ದಿ ವೆಡ್ಡಿಂಗ್ ಆಫ್ ವಿರೋಶ್’ ಎಂದು ಹೆಸರಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಭಾವನಾತ್ಮಕ ಸಂದೇಶದಲ್ಲಿ, ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ‘ನೀವು ಪ್ರೀತಿಯಿಂದ ನಮಗೆ ‘ವಿರೋಶ್’ ಎಂದು ಹೆಸರಿಸಿದ್ದೀರಿ. ಆದ್ದರಿಂದ ನಾವು ನಮ್ಮ ಮದುವೆಗೆ ಅದೇ ಹೆಸರಿಡುತ್ತಿದ್ದೇವೆ. ನೀವು ಯಾವಾಗಲೂ ನಮ್ಮೊಂದಿಗೆ ಇರುತ್ತೀರಿ’ ಎಂದು ಬರೆದಿದ್ದಾರೆ.

ಇದನ್ನೂ ಓದಿ: 2017 To 2026: ಆ ಒಂದು ಘಟನೆಯಿಂದ ಗಟ್ಟಿ ಆಯ್ತು ವಿಜಯ್ ದೇವರಕೊಂಡ-ರಶ್ಮಿಕಾ ಬಂಧ

ಮದುವೆಯನ್ನು ಸಂಪೂರ್ಣವಾಗಿ ಖಾಸಗಿಯಾಗಿಡಲು ಅಂತರರಾಷ್ಟ್ರೀಯ ಭದ್ರತಾ ಸಂಸ್ಥೆಯನ್ನು ನೇಮಿಸಲಾಗಿದೆ. ರಾಜಸ್ಥಾನ ಪೊಲೀಸರೊಂದಿಗೆ ಸಮನ್ವಯದೊಂದಿಗೆ ಇಡೀ ರೆಸಾರ್ಟ್ ಪ್ರದೇಶದಲ್ಲಿ ಬಿಗಿ ಭದ್ರತೆಯನ್ನು ನಿರ್ವಹಿಸಲಾಗುವುದು. ಯಾವುದೇ ಮಾಹಿತಿ ಸೋರಿಕೆಯಾಗದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇತ್ತೀಚೆಗೆ, ರಶ್ಮಿಕಾ ಮತ್ತು ವಿಜಯ್ ಉದಯಪುರಕ್ಕೆ ತೆರಳುವಾಗ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಲಘು ಮಳೆಯ ಸೂಚನೆ – Kannada News | Bengaluru temperature: Heat wave alert in Bengaluru, Thunderstorm in few places of Karnataka

ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಲಘು ಮಳೆಯ ಸೂಚನೆ

ಬೆಂಗಳೂರು, ಫೆಬ್ರವರಿ 24: ರಾಜ್ಯದಲ್ಲಿ ಹಲವು ದಿನಗಳಿಂದ ಶುಷ್ಕ ವಾತಾವರಣವೇ (Weather Forecast) ಆವರಿಸಿದ್ದು, ಇನ್ನು ಕೆಲ ದಿನಗಳಲ್ಲಿ ಬೆಂಗಳೂರು ಬಿಸಿಲಿನ ಬೇಗೆಯಿಂದ ತತ್ತರಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ ಇಂದು ರಾಜ್ಯದ ಹಲವೆಡೆ ಗುಡುಗು, ಸಿಡಿಲು ಕಾಣಿಸಿಕೊಳ್ಳುವ ಸಂಭವವಿದ್ದು, 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ. ರಾಜ್ಯದಲ್ಲಿ ಬೇಸಿಗೆ ತೀವ್ರಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನ 38ರಿಂದ 39 ಡಿಗ್ರಿ ಸೆಲ್ಸಿಯಸ್‌ ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬೀದರ್, ಕಲಬುರ್ಗಿ, ಹಾಸನ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಅಬ್ಬರಿಸಲಿದ್ದು, ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ. ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.

ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳಿವೆ.

ಎಲ್ಲೆಲ್ಲಿ ಒಣ ಹವೆ?

ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ , ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮೈಸೂರು, ಮಂಡ್ಯ, ಶಿವಮೊಗ್ಗ, ಚಿಕ್ಕಮಗಳೂರು,ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link