Category Archives: Blog

Your blog category

ಬಾಗಲಕೋಟೆ ಬೂದಿ ಮುಚ್ಚಿದ ಕೆಂಡ: ಹಿಂದೂ ಸಂಘಟನೆಗಳ ತಂತ್ರಕ್ಕೆ ಪೊಲೀಸ್ ಪ್ರತಿತಂತ್ರ – Kannada News | Bagalkote Shivaji Jayanti Violence: Section 144 Extended, SP Warns Against Protests

ಕಲ್ಲು ತೂರಾಟ ಪ್ರಕರಣImage Credit source: tv9 kannada

ಬಾಗಲಕೋಟೆ, ಫೆಬ್ರವರಿ 23: ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದ (Stone pelting) ಕಾವು ಇನ್ನೂ ಆರಿಲ್ಲ. ಕಲ್ಲೆಸೆದ ಎರಡು ಕೋಮಿನ ಕೆಲ ಕಿಡಿಗೇಡಿಗಳು ಅಂದರ್ ಆಗಿದ್ದಾರೆ. ಶಾಂತಿ ಸಭೆಗಳೂ ವಿಫಲವಾಗಿದ್ದು, ದ್ವೇಷದ ಕಿಚ್ಚು ಬುಸುಗುಡುತ್ತಿದೆ. ಇದೇ ತಿಂಗಳ 26ರಂದು ಬೃಹತ್ ಹೋರಾಟಕ್ಕೆ ಹಿಂದೂ ಸಂಘಟನೆಗಳು ಮುಂದಾಗಿವೆ. ಹೀಗಾಗಿ ಫೆ. 28ರವರೆಗೂ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ. ಜೊತೆಗೆ ಯಾವುದೇ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಪ್ರತಿಭಟನೆಗೆ ಮುಂದಾದರೆ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದು ಎಸ್​​ಪಿ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರ ಆರ್.ಬಿ.ತಿಮ್ಮಾಪುರ, ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಹಿಂದೂ, ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಸಭೆ ಮಾಡಲಾಗಿದೆ. ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸಭೆಯಲ್ಲಿ ಮನವಿ ಮಾಡಲಾಗಿದೆ. ಫೆಬ್ರವರಿ 28ರಂದು ಪಿಯುಸಿ ಪರೀಕ್ಷೆ, ಹೋಳಿ ಹಬ್ಬವಿದೆ. ಎಲ್ಲರೂ ಅಣ್ಣ ತಮ್ಮಂದಿರಂತೆ ಸಹಬಾಳ್ವೆಯಿಂದ ಇರಲು ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ಮನವಿ ಮಾಡಿದ್ದಾರೆ.

ಎಸ್​ಪಿ ಸಿದ್ದಾರ್ಥ ಗೋಯಲ್ ಹೇಳಿದ್ದಿಷ್ಟು 

ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್. ಫೆ. 28ರವರೆಗೂ ಬಾಗಲಕೋಟೆ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ. ಯಾವುದೇ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಪ್ರತಿಭಟನೆಗೆ ಮುಂದಾದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಸ್ಲಿಮರ ನಮಾಜ್​ಗೆ ಅನುಮತಿ, ಹಿಂದೂಗಳ ಪ್ರಾರ್ಥನೆಗೆ ನಿರ್ಬಂಧ: ಪ್ರಲ್ಹಾದ್ ಜೋಶಿ ವಾಗ್ದಾಳಿ

ಪ್ರತಿಭಟನೆ ನಡೆಸಿದರೆ ರಸ್ತೆ ಬದಿ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ. ಫೆ.28ರಿಂದ ಪರೀಕ್ಷೆಗಳು ಆರಂಭವಾಗುತ್ತಿದ್ದು ಓದಿಕೊಳ್ಳಲು ಅವಕಾಶ ನೀಡಿ. ಮಕ್ಕಳು ಓದಿಕೊಳ್ಳಬೇಕು, ಚೆನ್ನಾಗಿ ಪರೀಕ್ಷೆ ಬರೆಯಲು ಎಲ್ಲರೂ ಸಹಕರಿಸಿ ಎಂದು ಎಸ್​ಪಿ ಸಿದ್ದಾರ್ಥ ಗೋಯಲ್ ಮನವಿ ಮಾಡಿದ್ದಾರೆ.

ಫೆ.26ರಂದು ಬೃಹತ್ ಹೋರಾಟಕ್ಕೆ ಹಿಂದೂ ಸಮುದಾಯ ಕರೆ

ನಿನ್ನೆ ಸಂಜೆ ಹಿಂದೂ ಮುಖಂಡರ ಸಭೆ ಮಾಡಲಾಗಿದೆ. ಬಾಗಲಕೋಟೆಯಲ್ಲಿ ಫೆ.26ರಂದು ಬೃಹತ್ ಹೋರಾಟಕ್ಕೆ ಮುಂದಾಗಿದ್ದಾರೆ. ಇಂದು ಹೋರಾಟದ ರೂಪುರೇಷೆ ಬಗ್ಗೆ ನಿರ್ಧರಿಸಲಿದ್ದಾರೆ. ಮಸೀದಿ ಅಧ್ಯಕ್ಷ ಸೇರಿದಂತೆ ಸದಸ್ಯರ ವಿರುದ್ಧ ಕೇಸ್ ಹಾಕಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕಲ್ಲು ತೂರಾಟ ಕೇಸ್​: ಇಬ್ಬರು ಹಿಂದೂ ಕಾರ್ಯಕರ್ತರ ಬಂಧನ; ಮುತಾಲಿಕ್, ಕೆರೆಹಳ್ಳಿಗೆ ನಿರ್ಬಂಧ

ಸದ್ಯ ಬೂದಿ ಮುಚ್ಚಿದ ಕೆಂಡದಂತಿರೋ ಬಾಗಲಕೋಟೆಯಲ್ಲಿ ಪಂಕಾ ಮಸೀದಿ ಮತ್ತು ಕೊತ್ತಲೇಶ್ವರ ಮಂದಿರದ ಬಳಿ ಪೊಲೀಸ್ ಸರ್ಪ ಗಾವಲಿದೆ. ಈಗಾಗಲೇ ನಡೆದ ಎರಡು ಶಾಂತಿ ಸಭೆಗಳು ವಿಫಲವಾಗಿವೆ. ಮುಸ್ಲಿಂ ಕಡೆಯ 8 ಜನರ ಬಂಧನ ವಾಗಿದೆ. ಇನ್ನು ಮಾಂಸದಂಗಡಿಗಳ ಮೇಲೆ ಕಲ್ಲೆಸೆದ ಇಬ್ಬರು ಹಿಂದು ಕಾರ್ತಕರ್ತರನ್ನೂ ಬಂಧಿಸಲಾಗಿದೆ. ಇಂದು ಆಸ್ಪತ್ರೆಗೆ ಭೇಟಿ ಕೊಟ್ಟ ಮಾಜಿ ಸಚಿವ ಬಿ ಶ್ರೀರಾಮುಲು, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜಮ್ಮು ಕಾಶ್ಮೀರದಲ್ಲಿ 17 ಬಾರಿ ತಪ್ಪಿಸಿಕೊಂಡಿದ್ದ ಉಗ್ರ ಸೇರಿ 7 ಭಯೋತ್ಪಾದಕರ ಎನ್​ಕೌಂಟರ್ – Kannada News | 7 terrorists eliminated in Jammu and Kashmir including Saifullah Who Escaped 17 Times

ಶ್ರೀನಗರ, ಫೆಬ್ರವರಿ 23: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಜಾಲಗಳ ನಿರ್ಮೂಲನೆಯ ಪ್ರಮುಖ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಕಳೆದ 1 ತಿಂಗಳಲ್ಲಿ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ)ಗೆ ಸಂಬಂಧಿಸಿದ 7 ಉಗ್ರರನ್ನು ತಟಸ್ಥಗೊಳಿಸಿವೆ. ಇದರಲ್ಲಿ ಹಿಂದಿನ ದಾಳಿಗಳಿಗೆ ಸಂಬಂಧಿಸಿದ ಉನ್ನತ ಕಮಾಂಡರ್ ಕೂಡ ಸೇರಿದ್ದಾನೆ. ಕಿಶ್ತ್ವಾರ್‌ನಲ್ಲಿ ನಡೆದ ಭಾನುವಾರದ ಎನ್‌ಕೌಂಟರ್​ನಲ್ಲಿ (Encounter) ಮೂವರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿತ್ತು. ಇದಕ್ಕೂ ಮೊದಲು, ಫೆಬ್ರವರಿ 4ರಂದು ಉಧಂಪುರದಲ್ಲಿರುವ ರಾಮನಗರ ಕಾಡಿನಲ್ಲಿ ಇಬ್ಬರು ಭಯೋತ್ಪಾದಕರನ್ನು ಕೊಲ್ಲಲಾಗಿತ್ತು. ಜನವರಿ 23ರಂದು ಕಥುವಾದ ಪರ್ಹೆತಾರ್ ಗ್ರಾಮದಲ್ಲಿ ಒಬ್ಬನನ್ನು ತಟಸ್ಥಗೊಳಿಸಲಾಗಿತ್ತು.

“ನಮ್ಮ ಪ್ರದೇಶಕ್ಕೆ ಯಾರೇ ಬಂದರೂ ಭಯೋತ್ಪಾದಕರನ್ನು ನಾವು ತಟಸ್ಥಗೊಳಿಸುತ್ತಲೇ ಇರುತ್ತೇವೆ. ಫೆಬ್ರವರಿಯಲ್ಲಿ ನಾವು 6 ಜೆಇಎಂ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಿದೆ. ಭಯೋತ್ಪಾದಕರಿಗೆ ಸಹಾಯ ಮಾಡಿದ ಸ್ಥಳೀಯರ ಬಗ್ಗೆಯೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಕಣ್ಣಿಟ್ಟಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಮದುವೆ ಮನೆಗೆ ಬಂದು ಗ್ರಾಮದ ಮುಖ್ಯಸ್ಥರನ್ನು ಗುಂಡಿಕ್ಕಿ ಕೊಂದಿದ್ದ ಗ್ಯಾಂಗ್​ಸ್ಟರ್ ಹರ್ನೂರ್​ ಎನ್​ಕೌಂಟರ್​ನಲ್ಲಿ ಸಾವು

ಕಿಶ್ತ್ವಾರ್ ಎನ್‌ಕೌಂಟರ್‌ನಲ್ಲಿ ಭಾನುವಾರ ಭದ್ರತಾ ಪಡೆಗಳು ತಟಸ್ಥಗೊಳಿಸಿದ ಮೂವರು ಭಯೋತ್ಪಾದಕರಲ್ಲಿ ಈ ಹಿಂದೆ ಹಲವಾರು ಎನ್‌ಕೌಂಟರ್‌ಗಳಿಂದ ತಪ್ಪಿಸಿಕೊಂಡಿದ್ದ ಕುಖ್ಯಾತ ಜೆಇಎಂ ಕಮಾಂಡರ್ ಸೈಫುಲ್ಲಾ ಕೂಡ ಒಬ್ಬ. ಗುಂಡಿನ ಚಕಮಕಿಯ ಸಮಯದಲ್ಲಿ ಆತ ಅಡಗಿಕೊಂಡಿದ್ದ ಮಣ್ಣಿನ ಮನೆ ಬೆಂಕಿಗೆ ಆಹುತಿಯಾದ ಕಾರಣದಿಂದ ಹತ್ಯೆಗೀಡಾದ ಎಲ್ಲಾ ಭಯೋತ್ಪಾದಕರ ಶವಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ. ಅವರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಭದ್ರತಾ ಪಡೆಗಳು ತಿಳಿಸಿವೆ.

ಸೈಫುಲ್ಲಾ ಸುಮಾರು 5 ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಿದ್ದನೆಂದು ತಿಳಿದು ಬಂದಿದೆ. ಅಂದಿನಿಂದ ಈ ಪ್ರದೇಶದಲ್ಲಿ ಸಕ್ರಿಯನಾಗಿದ್ದ. ಭದ್ರತಾ ಪಡೆಗಳ ಮೇಲೆ ಹಲವಾರು ಮಾರಕ ದಾಳಿಗಳ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿದೆ. ಇದರಲ್ಲಿ ಜುಲೈ 2024ರಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಸೈನಿಕರು ಸಾವನ್ನಪ್ಪಿದ್ದರು. ಅವನು 17 ಬಾರಿ ಸಿಕ್ಕಿಬಿದ್ದಿದ್ದರೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ 12 ನಕ್ಸಲರ ಎನ್‌ಕೌಂಟರ್‌, ಮೂವರು ಜವಾನರ ಸಾವು

ಈ ತಿಂಗಳ ಆರಂಭದಲ್ಲಿ, ಜೆಇಎಂನ ಇನ್ನೊಬ್ಬ ಕಮಾಂಡರ್ ಸೇರಿದಂತೆ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಉಧಂಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ತಟಸ್ಥಗೊಳಿಸಿದವು. ತಟಸ್ಥಗೊಂಡ ಭಯೋತ್ಪಾದಕರಿಂದ ಎಂ4 ಕಾರ್ಬೈನ್ ಮತ್ತು ಎಕೆ ಅಸಾಲ್ಟ್ ರೈಫಲ್ ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಪ್ರಮುಖ ಜೈಶ್ ಭಯೋತ್ಪಾದಕ ಆದಿಲ್‌ನನ್ನು ಛಾತ್ರೂ ಪ್ರದೇಶದಲ್ಲಿ ಇತ್ತೀಚೆಗೆ ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿದ್ದವು. ಆದಿಲ್ ಪಾಕಿಸ್ತಾನಿ ಪ್ರಜೆಯಾಗಿದ್ದು, ಸೈಫುಲ್ಲಾನ ಬಲಗೈ ಬಂಟ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳೆಯರೇ… 35 ಆಯ್ತಾ? ಹಾಗಿದ್ರೆ ನಿಮ್ಮ ಊಟದ ಪ್ಲೇಟ್ ನಲ್ಲಿ ಇವು ಇರಲೇಬಾರದು!

ಸಾಮಾನ್ಯವಾಗಿ 35 ವರ್ಷ ವಯಸ್ಸಿನ ನಂತರ, ಮಹಿಳೆಯರ ದೇಹದಲ್ಲಿ ಹಲವಾರು ರೀತಿಯ ಹಾರ್ಮೋನುಗಳ ಬದಲಾವಣೆಗಳಾಗುತ್ತದೆ. ಚಯಾಪಚಯ ಕ್ರಿಯೆ ಕ್ರಮೇಣ ನಿಧಾನಗೊಳ್ಳುತ್ತದೆ, ತೂಕ ಹೆಚ್ಚಾಗುವ ಸಾಧ್ಯತೆ ಕೂಡ ಹೆಚ್ಚಾಗಿಯೇ ಇರುತ್ತದೆ. ಈ ವಯಸ್ಸಿನ ನಂತರ, ಥೈರಾಯ್ಡ್ ಅಸಮತೋಲನ, ರಕ್ತಹೀನತೆ, ಮೂಳೆ ದೌರ್ಬಲ್ಯ, ವಿಟಮಿನ್ ಡಿ (Vitamin D) ಮತ್ತು ಬಿ 12 ಕೊರತೆಗಳು, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಅನೇಕ ಮಹಿಳೆಯರಲ್ಲಿ ಪಿಸಿಓಎಸ್, ಅನಿಯಮಿತ ಮುಟ್ಟು ಅಥವಾ ಮುಟ್ಟು ನಿಲ್ಲುವ ರೋಗಲಕ್ಷಣಗಳು ಕಂಡುಬರುತ್ತದೆ. ಹಾಗಾಗಿ 35ರ ನಂತರ ಪ್ರತಿನಿತ್ಯ ಸೇವನೆ ಮಾಡುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ಆಹಾರದಿಂದ ಈ ರೀತಿ ಕಂಡುಬರುವ ಸಮಸ್ಯೆಗಳನ್ನು ತಡೆಗಟ್ಟಬಹುದು. ಹಾಗಾದರೆ ಯಾವ ಆಹಾರಗಳ ಸೇವನೆ ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪ್ರತಿನಿತ್ಯ ಸೇವನೆ ಮಾಡುವ ಆಹಾರದಲ್ಲಿ ಏನೇನಿರಬೇಕು?

ಲೇಡಿ ಹಾರ್ಡಿಂಗ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಎಚ್‌ಒಡಿ ಡಾ. ಎಲ್.ಎಚ್. ​​ಘೋಟೇಕರ್ ಹೇಳುವ ಪ್ರಕಾರ, 35 ವರ್ಷದ ನಂತರ ಮಹಿಳೆಯರು ಸಮತೋಲಿತ ಮತ್ತು ಪೌಷ್ಟಿಕ- ಭರಿತ ಆಹಾರವನ್ನು ಸೇವನೆ ಮಾಡಬೇಕು. ಸ್ನಾಯುಗಳನ್ನು ಬಲಪಡಿಸಿಕೊಳ್ಳಲು ಬೇಳೆ, ಪನೀರ್, ಮೊಟ್ಟೆ, ಸೋಯಾ ಮತ್ತು ಕಡಲೆ ಮುಂತಾದ ಪ್ರೋಟೀನ್ ಭರಿತ ಆಹಾರಗಳನ್ನು ದಿನನಿತ್ಯ ಸೇವನೆ ಮಾಡಬೇಕು. ಹಾಲು, ಮೊಸರು, ಎಳ್ಳು ಮತ್ತು ರಾಗಿಯಂತಹ ಕ್ಯಾಲ್ಸಿಯಂ- ಭರಿತ ಆಹಾರಗಳು ಕೂಡ ಮೂಳೆಗಳಿಗೆ ಅತ್ಯಗತ್ಯವಾಗಿದ್ದು ನಿಯಮಿತವಾಗಿ ಈ ರೀತಿಯ ಪದಾರ್ಥಗಳನ್ನು ಕೂಡ ಸೇವನೆ ಮಾಡಬೇಕು.

ಇದನ್ನೂ ಓದಿ: 35 ವರ್ಷದ ನಂತರ ಪ್ರೆಗ್ನನ್ಸಿಗೆ ಪ್ಲಾನ್ ಮಾಡುವವರು ಕಡ್ಡಾಯವಾಗಿ ಈ 3 ಪರೀಕ್ಷೆಗಳನ್ನು ಮಾಡಿಸಬೇಕು!

ಎಲೆ ತರಕಾರಿಗಳು, ದಾಳಿಂಬೆ, ಬೀಟ್ರೂಟ್ ಮತ್ತು ಬೆಲ್ಲ ಕಬ್ಬಿಣಾಂಶಕ್ಕೆ ಪ್ರಯೋಜನಕಾರಿ. ಧಾನ್ಯಗಳು, ಓಟ್ಸ್ ಮತ್ತು ಹಣ್ಣುಗಳು ಫೈಬರ್ ಅನ್ನು ಒದಗಿಸುತ್ತವೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಒಮೆಗಾ- 3 ಗಾಗಿ ವಾಲ್ನಟ್ಸ್ ಮತ್ತು ಅಗಸೆ ಬೀಜಗಳ ಸೇವನೆ ಮಾಡಬಹುದು. ವಿಟಮಿನ್ ಡಿ ಗಾಗಿ, ಸೂರ್ಯನ ಬೆಳಕನ್ನು ಪಡೆಯಿರಿ, ಅಗತ್ಯವಿದ್ದರೆ ವೈದ್ಯರ ಸಲಹೆಯಂತೆ ಪೂರಕ ಮಾತ್ರೆಗಳ ಸೇವನೆ ಮಾಡಿ. ಸಾಕಷ್ಟು ನೀರು ಕುಡಿಯುವುದನ್ನು ಮರೆಯಬೇಡಿ.

ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬಾರದು?

35ರ ನಂತರ ಹೆಚ್ಚು ಹುರಿದ, ಕರಿದ, ಸಂಸ್ಕರಿಸಿದ ಮತ್ತು ಜಂಕ್ ಫುಡ್ ಅನ್ನು ತಿನ್ನಬಾರದು. ಸಕ್ಕರೆ ಮತ್ತು ಉಪ್ಪಿನ ಸೇವನೆಯನ್ನು ಕಡಿಮೆ ಮಾಡಬೇಕು. ಏಕೆಂದರೆ ಇದು ತೂಕ ಹೆಚ್ಚಾಗುವುದು, ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಸಕ್ಕರೆ ಪಾನೀಯಗಳು ಮತ್ತು ಪ್ಯಾಕ್ ಮಾಡಿದ ತಿಂಡಿಗಳನ್ನು ತಪ್ಪಿಸುವುದು ಒಳ್ಳೆಯದು. ಆಗಾಗ ಹೊರಗೆ ತಿನ್ನುವುದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಆಹಾರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಕೇವಲ ಆಹಾರ ಪದ್ಧತಿ ಮಾತ್ರವಲ್ಲ, ಜೀವನಶೈಲಿಯೂ ಬಹಳ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ, ಚುರುಕಾದ ನಡಿಗೆ, ಒಳ್ಳೆಯ ನಿದ್ರೆ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದೆಲ್ಲದರ ಜೊತೆಗೆ ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಏನಾಗುತ್ತೆ ಗೊತ್ತಾ? – Kannada News | Know the side effects of hot water bath

ನೈರ್ಮಲ್ಯದ ದೃಷ್ಟಿಯಿಂದ ಪ್ರತಿನಿತ್ಯ ಸ್ನಾನ ಮಾಡುವುದು ತುಂಬಾನೇ ಒಳ್ಳೆಯದು. ಹಾಗಾಗಿ ಪ್ರತಿಯೊಬ್ಬರೂ ಪ್ರತಿದಿನ ತಪ್ಪದೇ ಸ್ನಾನ ಮಾಡ್ತಾರೆ. ಕೆಲವರು ತಣ್ಣೀರಿನಿಂದ, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದ್ರೆ, ಇನ್ನೂ ಕೆಲವರು ಚಳಿಗಾಲ ಮಾತ್ರವಲ್ಲ ಬೇಸಿಗೆಕಾಲದಲ್ಲೂ ಸುಡು ಬಿಸಿ ನೀರಿನಿಂದಲೇ (Hot Water) ಸ್ನಾನ ಮಾಡುತ್ತಾರೆ. ಹೀಗೆ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ದೇಹಕ್ಕೆ ರಿಲ್ಯಾಕ್ಸ್‌ ಸಿಗಬಹುದು, ಸ್ನಾಯುಗಳ ಬಿಗಿತದಿಂದ ಪರಿಹಾರ ದೊರೆಯಬಹುದು. ಆದರೆ ಹೆಚ್ಚು ಬಿಸಿನೀರಿನಿಂದ ಸ್ನಾನ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಇದು ಚರ್ಮ ಹಾಗೂ ಕೂದಲಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಂತೆ. ಹಾಗಾದರೆ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಆಗುವ ತೊಂದರೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಉಂಟಾಗುವ ಪರಿಣಾಮಗಳೇನು?

ಚರ್ಮ ಒಣಗುತ್ತದೆ: ಬಿಸಿನೀರಿನ ಸ್ನಾನ ಚರ್ಮದ ನೈಸರ್ಗಿಕ ತೇವಾಂಶ ಮತ್ತು ರಕ್ಷಣಾತ್ಮಕ ತೈಲಗಳನ್ನು ತೆಗೆದುಹಾಕುತ್ತದೆ. ಇದು ಚರ್ಮವನ್ನು ಒಣಗಿಸುತ್ತದೆ, ತುರಿಕೆ , ಕಿರಿಕಿರಿ ಇತ್ಯಾದಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ.  

ಕೂದಲು ಮತ್ತು ನೆತ್ತಿಗೆ ಹಾನಿ: ಬಿಸಿನೀರು ಚರ್ಮಕ್ಕೆ ಮಾತ್ರವಲ್ಲದೆ ಕೂದಲು ಮತ್ತು ನೆತ್ತಿಗೂ ಹಾನಿಕಾರಕವಾಗಿದೆ. ಇದು ನೆತ್ತಿಯ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕುತ್ತದೆ, ಇದು ಒಣಗಲು ಕಾರಣವಾಗುತ್ತದೆ ಮತ್ತು ತಲೆಹೊಟ್ಟು ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಅಲ್ಲದೆ ಇದು ಕೂದಲಿನ ಹೊರಪೊರೆಗಳನ್ನು ಹಾನಿಗೊಳಿಸುತ್ತದೆ, ಕೂದಲು ಉದುರುವಿಕೆಯ ಸಮಸ್ಯೆಯನ್ನೂ ಹೆಚ್ಚಿಸುತ್ತದೆ.

ರಕ್ತದೊತ್ತಡ: ಸುಡು ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹದ ರಕ್ತನಾಳಗಳು ಹಿಗ್ಗುತ್ತವೆ, ಇದು ಹಠಾತ್ ರಕ್ತದೊತ್ತಡ ಕಡಿಮೆಯಾಗಿ ತಲೆತಿರುಗುವಿಕೆ ಅಥವಾ ಆಯಾಸಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ಧೂಮಪಾನ ಮಾಡುವುದರಿಂದ ನಿಜಕ್ಕೂ ಒತ್ತಡ ಕಡಿಮೆಯಾಗುತ್ತದೆಯೇ? ತಜ್ಞರು ಬಗ್ಗೆ ಏನೆನ್ನುತ್ತಾರೆ

ಕಣ್ಣಿನ ಸಮಸ್ಯೆಗಳು: ಬಿಸಿನೀರಿನ ಆವಿಯ ನೇರ ಸಂಪರ್ಕವು ಕಣ್ಣುಗಳ ನೈಸರ್ಗಿಕ ತೇವಾಂಶವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಕಣ್ಣುಗಳು ಕೆಂಪಾಗುತ್ತವೆ ಮತ್ತು ತುರಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ತಾಪಮಾನ ಅಸಮತೋಲನ: ಬಿಸಿನೀರಿನ ಅಭ್ಯಾಸವು ದೇಹದ ನೈಸರ್ಗಿಕ ತಾಪಮಾನವನ್ನು ಕಾಯ್ದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ, ಇದು ಶೀತ ಹವಾಮಾನವನ್ನು ಎದುರಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

ಹಾಗಾಗಿ ಸ್ನಾನಕ್ಕೆ ಯಾವಾಗಲೂ ಉಗುರು ಬೆಚ್ಚಗಿನ ನೀರನ್ನು ಬಳಸಿ, ಇದರಿಂದ ಚರ್ಮ ಒಣಗುವುದಿಲ್ಲ ಮತ್ತು ಅದರ ನೈಸರ್ಗಿಕ ಎಣ್ಣೆಗಳು ಹಾಗೆಯೇ ಉಳಿಯುತ್ತವೆ. ಜೊತೆಗೆ ಕೂದಲಿಗೂ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಕ್ರಮವಾಗಿ ಜಾನುವಾರುಗಳ ಸಾಗಾಟ: ಸಿನೆಮಾ ಮಾದರಿ ದಾಳಿ ನಡೆಸಿದ ಮಂಗಳೂರಿನ ಕದ್ರಿ ಪೊಲೀಸರು – Kannada News | Mangaluru Police Bust Illegal Cattle Transport: 34 Rescued, 3 Arrested

ರಕ್ಷಿಸಲಾದ ಜಾನುವಾರುಗಳುImage Credit source: Tv9 Kannada

ಮಂಗಳೂರು, ಫೆಬ್ರವರಿ 23: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 34 ಜಾನುವಾರುಗಳನ್ನು ಮಂಗಳೂರಿನ ಕದ್ರಿ ಠಾಣೆ ಪೊಲೀಸರು ರಕ್ಷಣೆ ಮಾಡಿದ್ದಾರೆ. ಜಾನುವಾರು ಸಾಗಾಟ ಬಗ್ಗೆ ಖಚಿತ ಮಾಹಿತಿ ಮೇರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ‌ ಕಾರ್ಯಾಚರಣೆ ನಡೆಸಿರುವ ಖಾಕಿ ತಂಡ ಜಾಲವನ್ನು ಭೇದಿಸಿದೆ. ಜಾನುವಾರುಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಈ ವೇಳೆ ಕಂಡುಬಂದಿದ್ದು, ಕೇರಳದ ಕಸಾಯಿಖಾನೆಗೆ ಇವುಗಳನ್ನು ಸಾಗಿಸಲಾಗುತ್ತಿತ್ತು. ಪ್ರಕರಣ ಸಂಬಂಧ ದಸ್ತಗೀರ್ ಸಾಬ್, ಖತಿಪ್ ಪಾಷಾ ಮತ್ತು ಅಯೂಬ್ ಖಾನ್ ಎಂಬವರನ್ನು ಬಂಧಿಸಲಾಗಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಿಂದ ಆರೋಪಿಗಳು ಜಾನುವಾರು ತಂದಿದ್ದರು ಎನ್ನಲಾಗಿದ್ದು, ಬಂಧಿತರ ವಿಚಾರಣೆ ತೀವ್ರಗೊಂಡಿದೆ. ಶಿರಾಳಕೊಪ್ಪದ ಒಂದೇ ಕಡೆಯಿಂದ ಜಾನುವಾರು ತಂದಿರುವುದಾಗಿ ಆರೋಪಿಗಳು ಹೇಳುತ್ತಿದ್ದರೂ, ಬೇರೆ ಬೇರೆ ಕಡೆ ರೈತರಿಂದ ಜಾನುವಾರು ಖರೀದಿಸಿ ಸಾಗಾಟ ಮಾಡುತ್ತಿದ್ದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಬಂಧಿತ ಮೂವರೂ ಸಹ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮೂಲದವರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಇದನ್ನೂ ಓದಿ: ಗೋವು ಸಾಗಿಸುತ್ತಿದ್ದ ಲಾರಿ ತಡೆದಿದ್ದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ

ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಕರಾವಳಿ ಭಾಗದಲ್ಲಿ ನಿರಂತರವಾಗಿ ಅಕ್ರಮ ಗೋ ಸಾಗಾಟ ಆಗ್ತಿದೆ. ಬಿಜೆಪಿ‌ ಸರ್ಕಾರ ಇದ್ದಾಗ ಅಕ್ರಮ ಗೋ ಸಾಗಾಟ ತಡೆಗೆ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅಕ್ರಮ ಗೋ ಸಾಗಾಟಗಾರರಿಗೆ ಸಹಕಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ನಮ್ಮ‌ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ ಗೋವನ್ನು ರಕ್ಷಿಸಿದ್ದಾರೆ. ದಿನನಿತ್ಯ ಪೊಲೀಸ್ ಇಲಾಖೆ ಈ ರೀತಿ ಅಕ್ರಮ ಗೋ ಸಾಗಾಟ ತಡೆಯುವ ಧೈರ್ಯ ಮಾಡಬೇಕು. ಡ್ರಗ್ಸ್ ಮುಕ್ತ ಮಂಗಳೂರು ಮಾಡಿದ ಹಾಗೆ ಅಕ್ರಮ ಗೋ ಸಾಗಾಟ ತಡೆಗೆ ಕ್ರಮ ಕೈಗೊಳ್ಳಬೇಕು. ತಲವಾರು ಹಿಡಿದುಕೊಂಡು ಮನೆ ಮನೆಗೆ ಬಂದು ಗೋ ಕಳ್ಳತನ ಮಾಡ್ತಿದ್ದಾರೆ. ಇಂತವರನ್ನು ಬೇರು‌ ಸಹಿತ ಕಿತ್ತೆಸೆಯಬೇಕು ಎಂದು ಆಗ್ರಹಿಸಿದ್ದಾರೆ.

ಘಟನೆ ಬಗ್ಗೆ ಕಿಡಿ ಕಾರಿರುವ ಮಂಗಳೂರು ಉತ್ತರ ಶಾಸಕ ಡಾ .ವೈ. ಭರತ್ ಶೆಟ್ಟಿ, ಕಾಯ್ದೆ ಜಾರಿಯಲ್ಲಿದ್ದರೂ ಯಾವುದೇ ಹೆದರಿಕೆಯಿಲ್ಲದೆ ಜಾನುವಾರುಗಳ ಸಾಗಾಟ ಮಾಡಲಾಗಿದೆ. ಸಂಘಟನೆಯವರು ವಾಹನ ತಡೆದ್ರೆ ಅವರ ಮೇಲೆ ಕೇಸು ಹಾಕ್ತಾರೆ. ಸಾರ್ವಜನಿಕರು, ಸಂಘಟನೆ ಕಾರ್ಯಕರ್ತರು ಕೈ ಕಟ್ಟಿ ಕೂರಬೇಕಾ? ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ – Kannada News | Pesticides Found In Vegetables, food Export Doctor keerthi hirisave explained about It

ಬೆಂಗಳೂರು, (ಫೆಬ್ರವರಿ 23): ತರಕಾರಿಗಳು (Vegetables) ಆರೋಗ್ಯಕ್ಕೆ ಪ್ರಯೋಜನದ ಜೊತೆಗೆ ಕೆಲವು ಅಡ್ಡ ಪರಿಣಾಮವನ್ನೂ ಉಂಟು ಮಾಡುತ್ತವೆ. ಹೌದು… ಕರ್ನಾಟಕ ತರಕಾರಿಗಳಲ್ಲಿ ಭಾರೀ ಲೋಹ ಹಾಗೂ ಕೀಟನಾಶಕಗಳ ಅಂಶ ಪತ್ತೆಯಾಗಿದ್ದು, ಹಿಂದಿನ ವರದಿಯು ಮತ್ತೊಮ್ಮೆ ದೃಢಪಟ್ಟಿದೆ. CPCB ಸಮಿತಿಯ FSSAI-ಮಾನ್ಯತೆ ಪಡೆದ ಪ್ರಯೋಗಾಲಯ ಪರೀಕ್ಷೆಯಲ್ಲಿ, 72 ಮಾದರಿಗಳಲ್ಲಿ 19 ಸೀಸದ ಅಂಶದ ಮಿತಿ ಮೀರಿವೆ. ಕೆಲ ತರಕಾರಿಗಳಲ್ಲಿ 20 ಪಟ್ಟು ಹೆಚ್ಚು ಸೀಸ, ನಿಷಿದ್ಧ ಕೀಟನಾಶಕಗಳು ಪತ್ತೆಯಾಗಿವೆ.

ಈ ಬಗ್ಗೆ ಆಹಾರ ತಜ್ಞೆ ಕೀರ್ತಿ ಹಿರಿಸಾವೆ ಮಾತನಾಡಿ, ಬೆಂಗಳೂರು ನಗರಕ್ಕೆ ವಿವಿಧ ಕಡೆ ಗಳಿಂದ ತರಕಾರಿಗಳು ಬರುತ್ತೆ. FSSAI ವರದಿ ಪ್ರಕಾರ ಕಲುಷಿತವಾಗಿರುವುದು ಕಂಡು ಬಂದಿದೆ.ಬೆಂಗಳೂರಿಗೆ ಬೇರೆ ಬೇರೆ ಕಡೆಯಿಂದ ತರಕಾರಿಗಳು ಬರುತ್ತವೆ. ಕೆಲವೊಂದು ತರಕಾರಿಗಳಲ್ಲಿ ಸೀಸದ ಪ್ರಮಾಣ ಹೆಚ್ಚಾಗಿರುತ್ತೆ . ಕೆಲವು ತರಕಾರಿಗಳಲ್ಲಿ ಕಡಿಮೆ ಇರುತ್ತೆ. ತಿನ್ನೋ ಅನ್ನವನ್ನು ಗೊಂದಲದಲ್ಲಿ ತಿನ್ನಬಾರದು. ಕೆಲವು ಪೆಷ್ಠಿಸೈಟ್, ಫರ್ಟಿಲಿಸರ್ಸ್ ಜಾಸ್ತಿ ಹಾಕಿದಾಗ ಮೆಟಲ್ ಪ್ರಮಾಣ ಹೆಚ್ಚಾಗುತ್ತೆ.ಇಂಡಸ್ಟ್ರೀಯಲ್ ವೇಸ್ಟ್ ನಿಂದ ಮೆಟಲ್ ಪ್ರಮಾಣ ಹೆಚ್ಚಾಗಬಹುದು.ಇಂಡಸ್ಟ್ರೀಯಲ್ ವೇಸ್ಟ್ ಗಳನ್ನ ನದಿಗೆ, ಕೆರೆ ಗಳಿಗೆ ಹರಿ ಬಿಡೋದ್ರಿಂದ ಜಾಸ್ತಿ ಆಗುತ್ತೆ. ಕಲುಷಿತ ನೀರನ್ನ ತರಕಾರಿಗಳಿಗೆ ಹಾಕಿದಾಗ ಈ ರೀತಿ ಆಗುತ್ತೆ. ತರಕಾರಿಗಳಿಗೆ ಸರಿಯಾದ ನೀರನ್ನ ಹಾಕಬೇಕು. ಗಲೀಜು ನೀರು ಸೇರ್ಕೊಂಡಾಗ ಮೆಟಲ್ ಪ್ರಮಾಣ ಹೆಚ್ಚಾಗಬಹುದು. ಆಹಾರದಲ್ಲೂ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತೆ. ಕಲುಷಿತ ನೀರಿನಿಂದನೇ ಈ ರೀತಿಯ ಅಂಶ ಕಂಡು ಬರುತ್ತೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ರಾಜ್ಯದ ತರಕಾರಿಗಳಲ್ಲಿ ಹೇರಳವಾಗಿ ಸಿಕ್ತು ಸೀಸದ ಅಂಶ!ನೀವು ತಿನ್ನುವುದು ನಿಜವಾಗಲೂ ಆರ್ಗ್ಯಾನಿಕ್ ತರಕಾರಿನಾ?

Source link

ಮಣಿರತ್ನಂ ಹೊಸ ಚಿತ್ರದಲ್ಲಿ ಸಾಯಿ ಪಲ್ಲವಿ, ವಿಜಯ್ ಸೇತುಪತಿ ಜೋಡಿ – Kannada News | Vijay Sethupathi and Sai Pallavi likely to act in Mani Ratnam new movie

ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ಅವರ ಮುಂದಿನ ಚಿತ್ರದ ಬಗ್ಗೆ ಸಿನಿರಂಗದಲ್ಲಿ ಒಂದಷ್ಟು ಚರ್ಚೆ ನಡೆಯುತ್ತಿದೆ. ‘ಥಗ್ ಲೈಫ್’ ಸಿನಿಮಾಗೆ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ, ಮಣಿರತ್ನಂ ಈಗ ಪ್ರೇಮಕಥೆಯೊಂದನ್ನು ತೆರೆಯ ಮೇಲೆ ತರಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ದಕ್ಷಿಣ ಭಾರತದ ಪ್ರತಿಭಾವಂತ ಕಲಾವಿದರಾದ ವಿಜಯ್ ಸೇತುಪತಿ (Vijay Sethupathi) ಮತ್ತು ಸಾಯಿ ಪಲ್ಲವಿ ಮೊದಲ ಬಾರಿಗೆ ಜೋಡಿಯಾಗಿ ನಟಿಸಲಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ.

ಮೂಲಗಳ ಪ್ರಕಾರ, ಮಣಿರತ್ನಂ ಈ ಕಥೆಯನ್ನು ಮೊದಲು ನಟ ಧನುಷ್ ಅವರಿಗೆ ವಿವರಿಸಿದ್ದರು. ಧನುಷ್ ಅವರಿಗೆ ಕಥೆ ಇಷ್ಟವಾಗಿದ್ದರೂ, ಸಂಭಾವನೆಯ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಅವರು ಈ ಯೋಜನೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಆನಂತರ ಸಿಂಬು ಹಾಗೂ ಧ್ರುವ್ ವಿಕ್ರಮ್ ಅವರ ಹೆಸರುಗಳು ಕೇಳಿಬಂದರೂ, ಅಂತಿಮವಾಗಿ ವಿಜಯ್ ಸೇತುಪತಿ ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.

‘ಚೆಕ್ಕ ಚಿವಂತ ವಾನಂ’ ನಂತರ ಮಣಿರತ್ನಂ ಮತ್ತು ಸೇತುಪತಿ ಜೊತೆಯಾಗಿ ಮಾಡಲಿರುವ ಎರಡನೇ ಸಿನಿಮಾ ಇದಾಗಿದೆ. ಈ ಸಿನಿಮಾಗೆ ನಾಯಕಿಯಾಗಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದು, ಇದು ಮಣಿರತ್ನಂ ನಿರ್ದೇಶನದಲ್ಲಿ ಅವರು ನಟಿಸುತ್ತಿರುವ ಮೊದಲ ಸಿನಿಮಾ. ಈ ಹಿಂದೆ ರುಕ್ಮಿಣಿ ವಸಂತ್ ಅವರ ಹೆಸರು ಕೇಳಿಬಂದಿತ್ತಾದರೂ, ಅಂತಿಮವಾಗಿ ಸಾಯಿ ಪಲ್ಲವಿ ಅವರು ಆಯ್ಕೆ ಆಗಿದ್ದಾರೆ.

ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಇಬ್ಬರೂ ಅದ್ಭುತ ಕಲಾವಿದರು ಎಂಬುದು ಈಗಾಗಲೇ ಸಾಬೀತಾಗಿದೆ. ಅವರಿಬ್ಬರ ಫ್ರೆಶ್ ಕಾಂಬಿನೇಷನ್ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ. ಈ ಸಿನಿಮಾವನ್ನು ‘ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆಯು ನಿರ್ಮಾಣ ಮಾಡಲಿದೆ. ಆಸ್ಕರ್ ಪ್ರಶಸ್ತಿ ವಿಜೇತ ಮ್ಯೂಸಿಕ್ ಕಂಪೋಸರ್ ಎ.ಆರ್. ರೆಹಮಾನ್ ಅವರು ಸಂಗೀತ ನೀಡಲಿದ್ದಾರೆ.

ಇದನ್ನೂ ಓದಿ: ಪ್ರಭಾಸ್ ಸಿನಿಮಾನಲ್ಲಿ ನಟಿಸಲಿರುವ ಸಾಯಿ ಪಲ್ಲವಿ ಆದರೆ ಜೋಡಿ ಆಗಿ ಅಲ್ಲ

ಈ ಸಿನಿಮಾಗೆ ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆಯಿದೆ. ಸಿನಿಪ್ರೇಮಿಗಳಿಗೆ ಮಣಿರತ್ನಂ ಅವರ ದೃಶ್ಯ ವೈಭವದ ಜೊತೆಗೆ ರೆಹಮಾನ್ ಅವರ ಮೆಲೋಡಿ ಹಾಡುಗಳ ರಸದೌತಣ ಸಿಗುವುದರಲ್ಲಿ ಸಂಶಯವಿಲ್ಲ. ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಅವರ ಕೆಮಿಸ್ಟ್ರಿ ತೆರೆಯ ಮೇಲೆ ಹೇಗೆ ಮೂಡಿಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಈ ರಾಶಿಯವರಿಗೆ ಮಾರ್ಚ್ ನಲ್ಲಿ ಭೋಗಕ್ಕೆ ಹೆಚ್ಚು ಒತ್ತು ಸಿಗಲಿದೆ.. – Kannada News | Tula Rashi March 2026: Jupiter, Saturn and Venus Bring Fortune and Prosperity

2026ರ ಮೂರನೇ ಮಾರ್ಚ್ ತಿಂಗಳು ತುಲಾ ರಾಶಿಯವರಿಗೆ ಒಂದು ಪರಿವರ್ತನೆಯ ಕಾಲಘಟ್ಟವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಚಲನೆ ಮತ್ತು ದಶೆಗಳು ಈ ಸಮಯದಲ್ಲಿ ನಿಮ್ಮ ಜೀವನದ ಮೇಲೆ ಗಾಢವಾದ ಪ್ರಭಾವ ಬೀರುತ್ತವೆ. ಈ ರಾಶಿಗೆ ಯಾವ ದಶೆಗಳು ಮತ್ತು ಗ್ರಹಗಳ ಸ್ಥಿತಿ ಉತ್ತಮ ಫಲ ನೀಡಲಿವೆ ಎಂಬ ವಿವರ ಇಲ್ಲಿದೆ.

ಈ ರಾಶಿಯವರಿಗೆ ಅದೃಷ್ಟ ತರುವ ದಶೆಗಳು ​ಮಾರ್ಚ್ ತಿಂಗಳಲ್ಲಿ ಮುಖ್ಯವಾಗಿ ಮೂರು ಪ್ರಮುಖ ಗ್ರಹಗಳ ಪ್ರಭಾವವು ತುಲಾ ರಾಶಿಯವರಿಗೆ ವರದಾನವಾಗಲಿದೆ.

ಗುರು ದಶೆ :

ಭಾಗ್ಯದ ಬಾಗಿಲು ತೆರೆಯುವುದು. ​ಮಾರ್ಚ್ ನಲ್ಲಿ ಗುರುವು ನಿಮ್ಮ ರಾಶಿಯಿಂದ ಒಂಭತ್ತನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ.

ಒಂಬತ್ತನೇ ಮನೆಯು ಭಾಗ್ಯ ಸ್ಥಾನವಾಗಿದ್ದು, ಈ ಸಮಯದಲ್ಲಿ ನಡೆಯುವ ಗುರು ಮಹಾದಶೆ ಅಥವಾ ಅಂತರ್ದಶೆಯು ನಿಮಗೆ ಅನಿರೀಕ್ಷಿತ ಧನಲಾಭ ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ನೀಡುತ್ತದೆ.

ಈ ಕಾಲದಲ್ಲಿ ಉನ್ನತ ಶಿಕ್ಷಣಕ್ಕೆ ಪ್ರಯತ್ನಿಸುತ್ತಿರುವವರಿಗೆ ಮತ್ತು ವಿದೇಶ ಪ್ರವಾಸದ ಹಂಬಲ ಇರುವವರಿಗೆ ಉತ್ತಮ ಅವಕಾಶಗಳು ಒದಗಿ ಬರುತ್ತವೆ. ತಂದೆಯ ಕಡೆಯಿಂದ ಆಸ್ತಿ ಲಾಭವಾಗುವ ಸಾಧ್ಯತೆ ಇದೆ.

​ಶನಿ ದಶೆ :

ಶಿಸ್ತು ಮತ್ತು ವಿಜಯವನ್ನು ಪಡೆಯಲು ಸಾಧ್ಯ. ​ತುಲಾ ರಾಶಿಗೆ ಶನಿಯು ಯೋಗಕಾರಕ ಗ್ರಹ. ಮಾರ್ಚ್ ತಿಂಗಳಲ್ಲಿ ಶನಿಯು ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ ಅಂದರೆ ಮೀನ ರಾಶಿ ಇರುತ್ತಾನೆ.

ಆರನೇ ಮನೆಯಲ್ಲಿ ಶನಿಯ ಸಂಚಾರವು ಶತ್ರುಹಂತ ಯೋಗವನ್ನು ಸೃಷ್ಟಿಸುತ್ತದೆ. ನಿಮ್ಮ ಮೇಲೆ ನಡೆಯುತ್ತಿರುವ ಶನಿ ದಶೆಯು ನಿಮಗೆ ಸವಾಲುಗಳನ್ನು ಗೆಲ್ಲುವ ಶಕ್ತಿ ನೀಡುತ್ತದೆ.

​ಹಳೆಯ ಸಾಲಗಳಿಂದ ಮುಕ್ತಿ ಸಿಗಲಿದೆ ಮತ್ತು ಕಾನೂನು ಸಂಬಂಧಿತ ಸಮಸ್ಯೆಗಳಲ್ಲಿ ಜಯ ನಿಮ್ಮದಾಗಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಸಮಯವಿದು.

​ಶುಕ್ರ ದಶೆ :

ಸುಖ ಮತ್ತು ಸೌಲಭ್ಯ ನಿಮ್ಮದಾಗಲಿದೆ. ​ನಿಮ್ಮ ರಾಶ್ಯಾಧಿಪತಿಯಾದ ಶುಕ್ರನ ದಶೆಯು ಈ ತಿಂಗಳಲ್ಲಿ ವಿಶೇಷವಾಗಿ ಮಾರ್ಚ್ 24ರ ಅನಂತರ ಅತ್ಯಂತ ಶುಭವಾಗಿರಲಿದೆ.

​ಶುಕ್ರ ಮತ್ತು ಗುರುವಿನ ಸಂಯೋಗವು ಸುಖ-ಸಂತೋಷವನ್ನು ಹೆಚ್ಚಿಸುತ್ತದೆ. ಹೊಸ ವಾಹನ ಅಥವಾ ಆಭರಣ ಖರೀದಿಗೆ ಇದು ಸಕಾಲ. ಕುಟುಂಬದಲ್ಲಿ ಶುಭ ಕಾರ್ಯಗಳು ಜರುಗುವ ಸಾಧ್ಯತೆ ಇದೆ ಮತ್ತು ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚುತ್ತದೆ.

– ಲೋಹಿತ ಹೆಬ್ಬಾರ್

Source link

ನಾಳೆ ಕೊಪ್ಪಳ ಬಂದ್​​ ಹಿನ್ನೆಲೆ ಖಾಸಗಿ ಶಾಲೆಗಳಿಗೆ ರಜೆ, ವಿವಿ ಪರೀಕ್ಷೆ ಮುಂದೂಡಿಕೆ – Kannada News | Koppal Bandh Tomorrow Over Baldota Factory Issue; Schools Shut, University Exams Postponed

ಕಾರ್ಖಾನೆ ವಿರೋಧಿಸಿ ಈ ಹಿಂದೆ ನಡೆದ ಹೋರಾಟImage Credit source: Google

ಕೊಪ್ಪಳ, ಫೆಬ್ರವರಿ 23: ಬಲ್ಡೋಟಾ ಕಾರ್ಖಾನೆ ವಿರೋಧಿ ಹೋರಾಟಕ್ಕೆ ಒಂದು ವರ್ಷ ಪೂರೈಸಿದ ಹಿನ್ನಲೆ ಜಿಲ್ಲಾ‌ ಬಚಾವೋ ಆಂದೋಲನ‌ ಸಮಿತಿ ಮತ್ತು ಪರಿಸರ ಹಿತರಕ್ಷಣಾ ಸಮಿತಿ ವತಿಯಿಂದ ನಾಳೆ ಕೊಪ್ಪಳ‌ದಲ್ಲಿ ಸ್ವಯಂಪ್ರೇರಿತ ಬಂದ್ ಗೆ ಕರೆ ನೀಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಹೋರಾಟದ ಸಂಚಾಲಕ ಮಂಜುನಾಥ್ ಗೊಂಡಬಾಳ, ಕಳೆದ ವರ್ಷ ಫೆಬ್ರವರಿ 24ರಂದು ಗವಿಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ‌ ಸ್ವಾಮೀಜಿ ಬಲ್ಡೋಟಾ ಕಾರ್ಖಾನೆ ಶಾಶ್ವತ ಬಂದ್ ಮಾಡಿಸಬೇಕೆಂದು ಜಿಲ್ಲೆಯ ಜನಪ್ರತಿನಿಧಿಗಳಿಗೆ ಕರೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಕಾರ್ಖಾನೆ ಶಾಶ್ವತವಾಗಿ ಸ್ಥಗಿತಗೊಂಡಿಲ್ಲ. ಈ ಹಿನ್ನಲೆ ಜಂಟಿ ಕ್ರಿಯಾ ಸಮಿತಿ ಬಂದ್​​ಗೆ ಕರೆ ನೀಡಿದೆ ಎಂದು ತಿಳಿಸಿದ್ದಾರೆ.

ಕಳೆದ 116 ದಿನಗಳಿಂದ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಪ್ರತಿಭಟನೆ ನಡೆಸಿಕೊಂಡುಬಂದಿದ್ದು, ನಾಳೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6ರ ವರೆರೆಗೂ ಸ್ವಯಂಪ್ರೇರಿತ ಬಂದ್​​ಗೆಗೆ ಕರೆ ನೀಡಲಾಗಿದೆ. ವಕೀಲರ ಸಂಘ ಸೇರಿ ಹಲವು ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿದ್ದು, ಖಾಸಗಿ ಶಾಲೆಗಳ ಒಕ್ಕೂಟ ಸಹ ಹೋರಾಟಗಾರರ ಬೆನ್ನಿಗೆ ನಿಂತಿದೆ. ಭಾಗ್ಯನಗರದಲ್ಲಿ ಬೆಳಿಗ್ಗೆ 7 ಗಂಟೆಗೆ ಬೈಕ್, ಆಟೋ ರ‍್ಯಾಲಿ ನಡೆಯಲಿದ್ದು, 10 ಗಂಟೆಗೆ ಗವಿ ಮಠದಿಂದ ರ‍್ಯಾಲಿ ಇರಲಿದೆ. ಗಡಿಯಾರ ಕಂಬ, ಅಶೋಕ ವೃತ್ತದ ಮೂಲಕ ನಗರಸಭೆಯ ಪ್ರತಿಭಟನಾ ಸ್ಥಳಕ್ಕೆ ತಲುಪಿ ಅದು ಅಂತ್ಯಗೊಳ್ಳಲಿದೆ. ನಗರಸಭೆ ಮುಂಭಾಗ ವೇದಿಕೆ ಕಾರ್ಯಕ್ರಮ‌ ಜರುಗಲಿದ್ದು, ಸಾಣೆಹಳ್ಳಿ, ಗದಗಿನ ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳು, ಕಬೀರಾನಾನಂದ ಸ್ವಾಮೀಜಿಗಳು, ಪರಿಸರಕ್ಕಾಗಿ ನಾವು ಸಂಘಟನೆಯ ಎ. ಟಿ. ರಾಮಸ್ವಾಮಿ ಅವರು ಈ ವೇಳೆ ಉಪಸ್ಥಿತರಿರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 

ಖಾಸಗಿ ಶಾಲೆಗಳಿಗೆ ರಜೆ, ಕೊಪ್ಪಳ‌ ವಿವಿ ಪರೀಕ್ಷೆ ಮುಂದೂಡಿಕೆ

ಕೊಪ್ಪಳ ಬಂದ್​​ಗೆ ಕರೆ ನೀಡಿರುವ ಹಿನ್ನೆಲೆ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಖಾಸಗಿ ಶಾಲೆಗಳ ಒಕ್ಕೂಟ ಖಾಸಗಿ ಶಾಲೆಗಳಿಗಸ ರಜೆ ಘೋಷಿಸಿದೆ. ಕೊಪ್ಪಳ‌ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳನ್ನೂ ಮುಂದೂಡಿ ‌ವಿವಿ ಪರೀಕ್ಷಾಂಗ ಕುಲಸಚಿವರು ಆದೇಶಿಸಿದ್ದಾರೆ. ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನಿಗದಿಯಂತೆ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:35 pm, Mon, 23 February 26

Source link

ಐಡಿಯಾ ಯಾರದು ಅನ್ನೋದು ಮುಖ್ಯ ಅಲ್ಲ, ಅದನ್ನು ಜಾರಿಗೆ ತರೋನೇ ಜಾಣ: ಚ್ಯಾಟ್​ಜಿಪಿಟಿ ರೂವಾರಿ ಸ್ಯಾಮ್ ಆಲ್ಟ್​ಮ್ಯಾನ್ ಸಲಹೆ ಕೇಳಿ – Kannada News | Sam Altman says, no one cares about your idea, success is on executing that

ನವದೆಹಲಿ, ಫೆಬ್ರುವರಿ 23: ಇವತ್ತು ಬೆಳೆಯುತ್ತಿರುವ ಪ್ರಪಂಚದಲ್ಲಿ ಹೊಸ ಹೊಸ ಆಲೋಚನೆಗಳು, ಬ್ಯುಸಿನೆಸ್ ಐಡಿಯಾಗಳು ಹೊರಹೊಮ್ಮುತ್ತಲೇ ಇರುತ್ತವೆ. ಯಾರಿಗೋ ಬಂದಿದ್ದ ಐಡಿಯಾವನ್ನು ಇನ್ಯಾರೋ ಸಮರ್ಪಕವಾಗಿ ಜಾರಿಗೆ ತಂದು ಯಶಸ್ವಿಯಾಗಿರುವ ಹಲವು ನಿದರ್ಶನಗಳಿವೆ. ಮೊದಲು ಐಡಿಯಾ ಹೊಂದಿದ್ದವರು ಅದನ್ನು ಜಾರಿಗೆ ತರಲು ವಿಫಲರಾಗಿರುವ ನಿದರ್ಶನಗಳೂ ಬಹಳ ಇವೆ. ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ (Sam Altman) ಈ ವಿಚಾರದ ಬಗ್ಗೆ ಕಡ್ಡಿ ತುಂಡು ಮಾಡಿದಂತೆ ಮಾತನಾಡಿದ್ದಾರೆ. ನಿಮ್ಮಲ್ಲಿ ಐಡಿಯಾ ಇದೆಯಾ ಅನ್ನೋದು ಯಾರಿಗೂ ಬೇಕಾಗಿಲ್ಲ. ಆ ಐಡಿಯಾವನ್ನು ಹೇಗೆ ಜಾರಿಗೆ ತರುತ್ತೀರಿ ಎಂಬುದು ಮುಖ್ಯ ಎಂದು ಚ್ಯಾಟ್​ಜಿಪಿಟಿ ರೂವಾರಿ ಹೇಳಿದ್ದಾರೆ.

‘ಹೊಸ ಐಡಿಯಾಗಳಿಗೆ ಜನರು ಬಹಳ ಪ್ರಾಮುಖ್ಯತೆ ಕೊಡುತ್ತಾರೆ ಎಂದು ಭಾವಿಸುವವರು ಅನೇಕರಿದ್ದಾರೆ. ಮೂಲ ಪರಿಕಲ್ಪನೆ ಯಾರದ್ದೇ ಇರಲಿ, ಅದನ್ನು ಸರಿಯಾಗಿ ಎಕ್ಸಿಕ್ಯೂಟ್ ಮಾಡುವುದು ಹೆಚ್ಚು ಮುಖ್ಯ. ನಿಮ್ಮ ಐಡಿಯಾ ಎಷ್ಟೇ ಗ್ರೇಟ್ ಆಗಿರಲಿ, ಯಾರಿಗೂ ಅದರಿಂದ ಆಗಬೇಕಾದ್ದೇನಿಲ್ಲ’ ಎಂದು ಹಳೆಯ ವಿಡಿಯೋವೊಂದರಲ್ಲಿ ಸ್ಯಾಮ್ ಆಲ್ಟ್​ಮ್ಯಾನ್ ಹೇಳುತ್ತಿರುವುದು ಕಂಡು ಬಂದಿದೆ.

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಗಳು ಅತಿಯಾಗಿ ಏರಿದ್ದು ಯಾಕೆಂದು ಕಾರಣ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್

ಹೊಸ ಐಡಿಯಾ ಅನುಷ್ಠಾನಕ್ಕೆ ಏನು ಮಾಡಬೇಕು?

‘ನೀವು ಹೊಸ ಕಾನ್ಸೆಪ್ಟ್​ನ ಪೂರ್ಣ ಪ್ಲಾನ್ ಅನ್ನು ದೊಡ್ಡ ಕಂಪನಿಗೆ ನೇರವಾಗಿ ಕೊಟ್ಟು ನೋಡಿ. ಅವರು ಅದನ್ನು ಸರಿಯಾಗಿ ನಕಲು ಮಾಡುವ ಸಾಧ್ಯತೆ ಕಡಿಮೆ ಇರುತ್ತದೆ. ಯಾಕೆಂದರೆ, ಹೊಸ ಐಡಿಯಾವನ್ನು ಯಶಸ್ವಿಯಾಗಿ ಜಾರಿಗೆ ತರಲು ಗಮನ, ಛಲ ಮತ್ತು ಪ್ರಾಬ್ಲಮ್ ಸಾಲ್ವಿಂಗ್ ಚಾತುರ್ಯ ಬೇಕಾಗುತ್ತದೆ’ ಎಂದು ಸ್ಯಾಮ್ ಆಲ್ಟ್​ಮ್ಯಾನ್ ಹೇಳುತ್ತಾರೆ.

ರಹಸ್ಯವಾಗಿಡುವುದು ತಪ್ಪು

ಹೊಸ ಸ್ಟಾರ್ಟಪ್​ಗಳು ತಮ್ಮ ಬ್ಯುಸಿನೆಸ್ ಐಡಿಯಾವನ್ನು ರಹಸ್ಯವಾಗಿ ಇಡುವುದನ್ನು ಸ್ಯಾಮ್ ಆಲ್ಟ್​ಮ್ಯಾನ್ ಅಲ್ಲಗಳೆಯುತ್ತಾರೆ. ‘ಸಂಸ್ಥಾಪಕರು ತಾವು ಏನು ನಿರ್ಮಿಸುತ್ತಿದ್ದೇವೆ ಎಂಬುದನ್ನು ಮುಕ್ತವಾಗಿ ಹೇಳಿಕೊಳ್ಳಬೇಕು. ಹಾಗಾದಾಗ ಉದ್ಯೋಗಿಗಳನ್ನು ಆಕರ್ಷಿಸಬಹುದು, ಹೂಡಿಕೆದಾರರನ್ನು ಸಮಾಧಾನಗೊಳಿಸಬಹುದು, ಗ್ರಾಹಕರನ್ನು ಪಡೆಯಬಹುದು. ಮತ್ತು ಉತ್ಪನ್ನದ ಗುಣಮಟ್ಟ ಸುಧಾರಿಸಲು ಬೇಕಾದ ಸಲಹೆ ಸೂಚನೆಗಳನ್ನು ಪಡೆಯಬಹುದು’ ಎಂದು ಓಪನ್​ಎಐ ಸಿಇಒ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನಲ್ಲಿ ನೂರಾರು ಕೋಟಿ ರೂ ಲೂಟಿ; ಹೂಡಿಕೆದಾರರಿಗೆ 14,000 ಕೋಟಿ ರೂ ನಷ್ಟ; ಏನಿದು ಹಗರಣ?

ಕಂಪನಿಗಳು ತಮ್ಮ ಹೊಸ ಐಡಿಯಾವನ್ನು ಮುಚ್ಚಿಟ್ಟುಕೊಂಡರೆ ಪ್ರಯೋಜನವಿಲ್ಲ. ಬೇಕೆಂದರೆ, ಅದನ್ನು ಎಕ್ಸಿಕ್ಯೂಟ್ ಮಾಡುವ ಕಾರ್ಯವಿಧಾನಗಳ ವಿವರವನ್ನು ರಹಸ್ಯವಾಗಿಟ್ಟುಕೊಳ್ಳಬಹುದು ಎಂದೂ ಹೇಳಿದ ಸ್ಯಾಮ್ ಆಲ್ಟ್​ಮ್ಯಾನ್, ತಾನು ಹಿಂದೆ ಕೆಲಸ ಮಾಡುತ್ತಿದ್ದ ವೈ ಕಾಂಬಿನೇಟರ್ ಎನ್ನುವ ಹೂಡಿಕೆ ಸಂಸ್ಥೆಯಲ್ಲಿನ ಅನುಭವಗಳನ್ನು ಮೆಲುಕು ಹಾಕಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link