Headlines

ಪರಸ್ತ್ರೀ ಸಹವಾಸ ಆರೋಪ; ಪತಿ ಗೋವಿಂದ ಕ್ಷಮಿಸಲು ಮುಂದಾದ ಪತ್ನಿ – Kannada News | Sunita Ahuja ready to Forgive Govinda with One condition

ನಟ ಗೋವಿಂದ (Govinda) ಮತ್ತು ಸುನೀತಾ ಅಹುಜಾ ಅವರ ವೈವಾಹಿಕ ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅವರ ಕೌಟುಂಬಿಕ ವಿವಾದಗಳು ಮುನ್ನೆಲೆಗೆ ಬಂದಿವೆ. ಗೋವಿಂದ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಸುನೀತಾ ಆರೋಪಿಸಿದ್ದರು. ಗೋವಿಂದ ತಮ್ಮ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು. ಅದಾದ ನಂತರ, ಸುನೀತಾ ಮತ್ತೊಮ್ಮೆ ಗೋವಿಂದನ ಬಗ್ಗೆ ತಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿರುವ ವ್ಲಾಗ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ವೇಳೆ ಕ್ಷಮಿಸೋದಾಗಿ ಹೇಳಿದ್ದಾರೆ. ‘ನನ್ನ ಮುಗ್ಧತೆಯ ಲಾಭವನ್ನು ಅನೇಕರು ಪಡೆದುಕೊಂಡಿದ್ದಾರೆ. ನಾನು…

Read More

ಉಂಡ ಮನೆಗೇ ಕನ್ನ ಹಾಕಿದ BSNL ಅಧಿಕಾರಿಗಳು: 70 ಲಕ್ಷ ಮೌಲ್ಯದ ಕಾಪರ್ ಕೇಬಲ್ ಕಳವು – Kannada News | BSNL Officials Arrested for 70 Lakh Value Copper Cable Theft in Mangaluru

ಮಂಗಳೂರು/ಬೆಂಗಳೂರು, ಫೆಬ್ರವರಿ 20:  ಬಿಎಸ್​ಎನ್ಎಲ್​​​​​ ಕಚೇರಿಯಲ್ಲಿ ಅಧಿಕಾರಿಗಳೇ 70 ಲಕ್ಷ ಮೌಲ್ಯದ ಕಾಪರ್ ಕೇಬಲ್ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಮಂಗಳೂರು ದಕ್ಷಿಣ ಪೊಲೀಸರಿಂದ ಮೂವರು ಆರೋಪಿಗಳ ಬಂಧಿಸಲಾಗಿದ್ದು, BSNL ಅಸಿಸ್ಟೆಂಟ್​​ ಆಫೀಸ್​​ ಸೂಪರಿಂಟೆಂಡೆಂಟ್ ತನ್ವೀರ್ ಪಾಷಾ(50), ಟೆಲಿಕಾಂ ಟೆಕ್ನಿಶಿಯನ್ ಕೆ.ಕೆ.ಚಾಮಿ(59) ಹಾಗೂ L&T ಕಂಪನಿ ಕೇಬಲ್ ಜಾಯಿಂಟರ್ ಡಿ.ಮಂಜುನಾಥ್ ಬಂಧಿತರಾಗಿದ್ದಾರೆ. ಆರೋಪಿಗಳಿಂದ 2.5 ಲಕ್ಷ ರೂ. ಮೌಲ್ಯದ ಕಾಪರ್ ಕೇಬಲ್ ಮತ್ತು 10 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ. ಉಂಡ ಮನೆಗೇ ಕನ್ನ…

Read More

ಕರ್ನಾಟಕ ಹವಾಮಾನ ವರದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಒಣ ಹವೆಯ ವಾತಾವರಣ – Kannada News | Bengaluru temperature: Dry weather all over Karnataka, Clear sky in Bengaluru

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಒಣ ಹವೆಯ ವಾತಾವರಣ ಬೆಂಗಳೂರು, ಫೆಬ್ರವರಿ 20: ರಾಜ್ಯದಲ್ಲಿ ಹಲವು ದಿನಗಳಿಂದ ಶುಷ್ಕ ವಾತಾವರಣವೇ (Weather Forecast) ಆವರಿಸಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹತ್ತಾರು ದಿನಗಳಿಂದ ರಾಜ್ಯದಲ್ಲಿ ಒಣ ಹವೆ ಆವರಿಸಿದೆ. ಇನ್ನೂ ಕೆಲ ದಿನಗಳ ಕಾಲ ಇದೇ ವಾತಾವರಣ ಮುಂದುವರೆಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಎಲ್ಲೆಲ್ಲಿ ಒಣಹವೆ? ದಕ್ಷಿಣ ಒಳನಾಡಿನ…

Read More

ಕೆಲವು ದಿನ ಧಾರಾವಾಹಿಯಿಂದ ದೂರ ಉಳಿಯಲಿದ್ದಾರೆ ‘ನಾ ನಿನ್ನ ಬಿಡಲಾರೆ’ ನಟಿ ನೀತಾ ಅಶೋಕ್ – Kannada News | Naa Ninna Bidalaare: Neetha Ashok’s Injury Halts Ambika Role; Surgery Success

ಜೀ ಕನ್ನಡದಲ್ಲಿ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ವೀಕ್ಷಕರನ್ನು ಸೆಳೆದುಕೊಂಡಿದೆ. ಈ ಧಾರಾವಾಹಿ ಸಾಮಾನ್ಯ ಅತ್ತೆ ಸೊಸೆಯ ಜಗಳದಂತೆ ಇಲ್ಲ ಎಂದೇ ಹೇಳಬಹುದು. ಏಕೆಂದರೆ, ಇದು ಹಾರರ್ ಥೀಮ್​​ನಲ್ಲಿ ಮೂಡಿ ಬಂದಿದೆ. ಈ ಧಾರಾವಾಹಿ ವೀಕ್ಷಕರ ಮನ ಗೆದ್ದಿದೆ. ಈಗ ಧಾರಾವಾಹಿಯ ಮುಖ್ಯ ಪಾತ್ರಧಾರಿ ನೀತಾ ಅಶೋಕ್ ವಿಷಯದಲ್ಲಿ ಬೇಸರದ ಘಟನೆ ನಡೆದಿದೆ. ನೀತಾ ಅವರು ಅಂಬಿಕಾ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಅಂಬಿಕಾ ಪಾತ್ರ ಧಾರಾವಾಹಿಯಲ್ಲಿ ಸತ್ತು ಹೋಗಿದೆ….

Read More

Daily Devotional: ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು! – Kannada News | Daily Devotional: Three Critical Decisions to Avoid When Angry

ಬೆಂಗಳೂರು, ಫೆಬ್ರವರಿ​ 20: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಕೋಪದಲ್ಲಿದ್ದಾಗ ಮನುಷ್ಯ ಯಾವ ಮೂರು ನಿರ್ಧಾರಗಳನ್ನು ತೆಗೆದುಕೋಬಾರದು ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಕೋಪವು ನಕಾರಾತ್ಮಕ ಶಕ್ತಿಯಾಗಿದ್ದು, ಅನೇಕ ದುರಂತಗಳಿಗೆ ಮತ್ತು ಅವಘಡಗಳಿಗೆ ಕಾರಣವಾಗುತ್ತದೆ. ಇದು ನಮ್ಮ ದೇಹ, ಆರೋಗ್ಯ ಮತ್ತು ಆಯಸ್ಸನ್ನು ಕುಗ್ಗಿಸಿ, ಧನಾತ್ಮಕ ಶಕ್ತಿಗಳನ್ನು ನಾಶಪಡಿಸುತ್ತದೆ. ಕೋಪದಿಂದಾಗಿ, ಶಿಕ್ಷಣದಲ್ಲಿ, ಕೆಲಸ ಕಾರ್ಯಗಳಲ್ಲಿ, ಮತ್ತು ಜೀವನ ನಿರ್ವಹಣೆಯಲ್ಲಿ ಯಶಸ್ಸು ಸಾಧಿಸುವುದು ಕಷ್ಟವಾಗುತ್ತದೆ. ಭಾರತದ ನೀತಿಶಾಸ್ತ್ರದಲ್ಲಿ, ಅನೇಕ ಸಮಸ್ಯೆಗಳಿಗೆ ಕೋಪವೇ ಮೂಲ ಕಾರಣ ಎಂದು ಹೇಳಲಾಗಿದೆ….

Read More

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಘಟನೆಗೆ ಕಾರಣ ಬಿಚ್ಚಿಟ್ಟ ಎಸ್ಪಿ – Kannada News | Bagalkot SP Siddharth Goyal Reacts to Stone, Slipper Pelting During Shivaji Procession

ಬಾಗಲಕೋಟೆ, ಫೆಬ್ರವರಿ 20: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಕಿಲಾ ಓಣಿ ಬಳಿ ಕಲ್ಲು ಹಾಗೂ ಚಪ್ಪಲಿ ತೂರಾಟ ಘಟನೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಪ್ರತಿಕ್ರಿಯೆ ನೀಡಿದ್ದು, ಪರಿಸ್ಥಿತಿ ಪ್ರಸ್ತುತ ನಿಯಂತ್ರಣದಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮೆರವಣಿಗೆ ಮಸೀದಿ ಬಳಿ ಬಂದಾಗ ಎರಡು ಕಲ್ಲುಗಳು ಮತ್ತು ಒಂದು ಚಪ್ಪಲಿ ತೂರಲಾಗಿದೆ. ಆದರೆ, ಸಾರ್ವಜನಿಕರಿಗೆ ಅಥವಾ ಶಿವಾಜಿ ಭಾವಚಿತ್ರಕ್ಕೆ ಯಾವುದೇ ಹಾನಿಯಾಗಿಲ್ಲ,ಬದಲಾಗಿ ಪೊಲೀಸರ ಮೇಲೆ ಕಲ್ಲು ಬಿದ್ದಿದೆ. ಘಟನೆ ಹಿಂದೆ ಯಾವುದೇ ಕೋಮು…

Read More

ವಿಜಯ್ ರಾಘವೇಂದ್ರ ಟಾರ್ಚರ್​​ಗೆ ಸುಸ್ತಾದ ಅನುಶ್ರೀ; ಕೊನೆಗೂ ಮೂಡಿತು ನಗು – Kannada News | Vijay Raghavendra and Anushree’s Fun Promo for ‘Second Case of Seetharam’ Film

ವಿಜಯ್ ರಾಘವೇಂದ್ರ ಹಾಗೂ ಆ್ಯಂಕರ್ ಅನುಶ್ರೀ (Anushree) ಮಧ್ಯೆ ಒಳ್ಳೆಯ ಗೆಳೆತನ ಇದೆ. ವಿಜಯ್ ರಾಘವೇಂದ್ರ ಅವರು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋಗೆ ಜಡ್ಜ್ ಆಗಿದ್ದು, ಅನುಶ್ರೀ ಆ್ಯಂಕರಿಂಗ್ ಮಾಡುತ್ತಿದ್ದಾರೆ. ಸೆಟ್​​ನಲ್ಲಿ ನಡೆದ ಒಂದು ಫನ್ ವಿಡಿಯೋನ ಅನುಶ್ರೀ ಹಂಚಿಕೊಂಡಿದ್ದಾರೆ. ಈ ವಾರ ರಿಲೀಸ್ ಆದ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ’ ಸಿನಿಮಾದ ಪ್ರಚಾರ ಮಾಡಲು ಈ ವಿಡಿಯೋ ಮಾಡಲಾಗಿದೆ. ವಿಜಯ್ ರಾಘವೇಂದ್ರ ಅವರು 60ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಕೆಲವು ಹಿಟ್ ಆಗಿವೆ….

Read More

Video: ತಿಂದು ಬಿಸಾಡಿದ್ದ ತಟ್ಟೆಗಳಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ – Kannada News | UPSC Aspirant Seen Collecting Leftover Food From Discarded Plates, Video Goes Viral

ನವದೆಹಲಿ, ಫೆಬ್ರವರಿ 20: ಯುಪಿಎಸ್​​ಸಿ ಆಕಾಂಕ್ಷಿಯೊಬ್ಬರು ತಿಂದು ಬಿಸಾಡಿದ್ದ ತಟ್ಟೆಗಳಲ್ಲಿದ್ದ ಆಹಾರ ಪದಾರ್ಥಗಳನ್ನು ಒಟ್ಟು ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅವರು ಬುಲಂದ್​ಶೆಹರ್​ನ ವಿದ್ಯಾರ್ಥಿ ಅಶುತೋಷ್. ಈ ವಿಡಿಯೋವನ್ನು ಮೊಬೈಲ್ ಅಂಗಡಿ ಮಾಲೀಕ ಉಪಲಕ್ಷ್ ಮಾಡಿದ್ದು, ಆ ಸಮಯದಲ್ಲಿ ಈ ವ್ಯಕ್ತಿಗೆ ಹುಚ್ಚಿರಬೇಕು, ಸೂಟು ಬೂಟು ಧರಿಸಿ ವಿದ್ಯಾವಂತನಂತೆ ಕಾಣುತ್ತಿದ್ದಾರೆ ಆದರೆ ಯಾಕೆ ತಿಂದು ಬಿಸಾಡಿದ ತಟ್ಟೆಗಳನ್ನು ಮುಟ್ಟುತ್ತಿದ್ದಾರೆ, ಅದರಲ್ಲಿರುವ ಆಹಾರವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ತುಂಬಾ ತಲೆ ಕೆಡಿಸಿಕೊಂಡಿದ್ದರಂತೆ. ಆದರೆ ಅಶುತೋಶ್ ಆಲೋಚನೆ ಎಲ್ಲರನ್ನು ನಿಬ್ಬೆರಗಾಗಿಸಿತ್ತು,…

Read More

Horoscope Today 20 February​: ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 20, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ,ಉತ್ತರಾಯಣ, ಉತ್ತರಾಯಣ, ಪಾಲ್ಗುಣ ಮಾಸ, ಶಿಶಿರ ಋತು, ಶುಕ್ಲ ಪಕ್ಷದ ತದಿಗೆ, ಉತ್ತರ ಭಾದ್ರ ನಕ್ಷತ್ರ, ಸಾಧ್ಯ ಯೋಗ ಮತ್ತು ಗರಜೆ ಕರಣ ಇರತಕ್ಕಂತಹ ಈ ದಿನದಂದು ರಾಹುಕಾಲವು ಬೆಳಗ್ಗೆ 11:04 ರಿಂದ ಮಧ್ಯಾಹ್ನ 12:32 ರ ತನಕ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ…

Read More

ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು; ಕರ್ನಾಟಕವೇ ನಂಬರ್​​ 1 – Kannada News | Indian Hotel Industry Exposed: 70,000 Crore Tax Evasion Uncovered in IT Raids

ಬೆಂಗಳೂರು, ಫೆಬ್ರವರಿ 20: ದೇಶಾದ್ಯಂತ ಹೋಟೆಲ್ ಉದ್ಯಮದಿಂದ ಬರೋಬ್ಬರಿ 70 ಸಾವಿರ ಕೋಟಿ ರೂಪಾಯಿಗಳ ಭಾರಿ ತೆರಿಗೆ ವಂಚನೆ ಬಹಿರಂಗವಾಗಿದೆ. ಆದಾಯ ತೆರಿಗೆ (ಐಟಿ) ಇಲಾಖೆ ನಡೆಸಿದ ದಾಳಿಗಳಲ್ಲಿ ಈ ಬೃಹತ್ ಅಕ್ರಮ ವಹಿವಾಟು ಪತ್ತೆಯಾಗಿದೆ. ಹೋಟೆಲ್ ಮಾಲೀಕರು 2019ರಿಂದ 2026ರವರೆಗಿನ ಬಿಲ್ಲಿಂಗ್ ಡೇಟಾದಲ್ಲಿ ಗ್ರಾಹಕರಿಂದ ಪಡೆದ ಹಣದ ವಿವರಗಳನ್ನು ಅಳಿಸಿಹಾಕಿ, ಕಡಿಮೆ ಆದಾಯವನ್ನು ತೋರಿಸುವ ಮೂಲಕ ತೆರಿಗೆ ತಪ್ಪಿಸುತ್ತಿದ್ದರು. ಐಟಿ ಅಧಿಕಾರಿಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಫೋರೆನ್ಸಿಕ್ ತಪಾಸಣೆಯ ಮೂಲಕ ಈ ವಂಚನೆಯನ್ನು ಪತ್ತೆಹಚ್ಚಿದ್ದಾರೆ….

Read More