Category Archives: Blog

Your blog category

ಪರಸ್ತ್ರೀ ಸಹವಾಸ ಆರೋಪ; ಪತಿ ಗೋವಿಂದ ಕ್ಷಮಿಸಲು ಮುಂದಾದ ಪತ್ನಿ – Kannada News | Sunita Ahuja ready to Forgive Govinda with One condition

ನಟ ಗೋವಿಂದ (Govinda) ಮತ್ತು ಸುನೀತಾ ಅಹುಜಾ ಅವರ ವೈವಾಹಿಕ ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅವರ ಕೌಟುಂಬಿಕ ವಿವಾದಗಳು ಮುನ್ನೆಲೆಗೆ ಬಂದಿವೆ. ಗೋವಿಂದ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಸುನೀತಾ ಆರೋಪಿಸಿದ್ದರು. ಗೋವಿಂದ ತಮ್ಮ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು. ಅದಾದ ನಂತರ, ಸುನೀತಾ ಮತ್ತೊಮ್ಮೆ ಗೋವಿಂದನ ಬಗ್ಗೆ ತಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿರುವ ವ್ಲಾಗ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ವೇಳೆ ಕ್ಷಮಿಸೋದಾಗಿ ಹೇಳಿದ್ದಾರೆ.

‘ನನ್ನ ಮುಗ್ಧತೆಯ ಲಾಭವನ್ನು ಅನೇಕರು ಪಡೆದುಕೊಂಡಿದ್ದಾರೆ. ನಾನು ಬಹಳಷ್ಟು ಸಹಿಸಿಕೊಂಡಿದ್ದೇನೆ. ಆದರೆ ನಾನು ಇನ್ನು ಮುಂದೆ ಅದನ್ನು ಸಹಿಸುವುದಿಲ್ಲ. ನಾನು ಈಗ ನನ್ನದೇ ಆದ ಐಡೆಂಟಿಟಿ ಮಾಡಿಕೊಂಡಿದ್ದೇನೆ. 40 ವರ್ಷಗಳ ಸಂಬಂಧವು ರಾತ್ರೋರಾತ್ರಿ ಮುರಿಯುವುದಿಲ್ಲ. ಆದ್ದರಿಂದ ನಾನು ಸ್ವಲ್ಪ ಭಾವನಾತ್ಮಕವಾಗಿರುವುದು ಹೌದು. ಆದರೆ ಈಗ ನನ್ನ ಮನಸ್ಸು ಬಲವಾಗಿದೆ’ ಎಂದು ಸುನೀತಾ ಹೇಳಿದರು.

‘ನಾನು ಯಾವಾಗಲೂ ಸತ್ಯವನ್ನೇ ಹೇಳುತ್ತೇನೆ. ನಾನು ಪ್ರತಿ ಮಹಿಳೆಗೂ ತನ್ನ ಹಕ್ಕುಗಳಿಗಾಗಿ ಹೋರಾಡಬೇಕೆಂದು ಹೇಳುತ್ತೇನೆ. ನನ್ನ ಅತ್ತೆ-ಮಾವಂದಿರು ಇದ್ದಾಗ, ನಾನು ಸುಮ್ಮನಿರುತ್ತಿದ್ದೆ. ಏಕೆಂದರೆ ನಾನು ಅವರನ್ನು ತುಂಬಾ ಗೌರವಿಸುತ್ತಿದ್ದೆ. ಆದರೆ ಈಗ ಗೋವಿಂದ ಮತ್ತು ನಾನು ಸ್ನೇಹಿತರಾಗಿರುವುದರಿಂದ, ನಾನು ಯಾಕೆ ಸುಮ್ಮನಿರಬೇಕು ಮತ್ತು ಅವರ ಮಾತುಗಳನ್ನು ಕೇಳಬೇಕು ಅಥವಾ ಭಯಪಡಬೇಕು’ ಎಂದು ಪ್ರಶ್ನಿಸಿದ್ದಾರೆ.

‘ಗೋವಿಂದ ಬದಲಾದರೆ ಮತ್ತು ನನ್ನ ನಿಯಮಗಳ ಪ್ರಕಾರ ಬದುಕಲು ಪ್ರಾರಂಭಿಸಿದರೆ, ನಾನು ಅವನನ್ನು ಕ್ಷಮಿಸುತ್ತೇನೆ. ಪ್ರತಿದಿನ ನನ್ನ ಬಗ್ಗೆ ಸುದ್ದಿಗಳಲ್ಲಿ ಏನಿದೆ ಎಂಬುದರ ಬಗ್ಗೆ ನಾನು ಗಮನ ಹರಿಸುವುದಿಲ್ಲ. ನಾನು ಇಷ್ಟೊಂದು ಒತ್ತಡವನ್ನು ಸಹಿಸಿಕೊಳ್ಳುವ ವಯಸ್ಸಿನಲ್ಲಿಲ್ಲ. ಈಗ ನಿಮಗೆ ನಿಮ್ಮ ಗಂಡ ಮತ್ತು ಮಕ್ಕಳ ಬೆಂಬಲ ಬೇಕು, ಒತ್ತಡವಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ನನ್ನ ಗೋವಿಂದ ಮಧ್ಯೆ ಏನು ಇರಲಿಲ್ಲ’; ಸ್ಪಷ್ಟನೆ ಕೊಟ್ಟ ನಟಿ

ಈ ವಿಷಯದ ಬಗ್ಗೆ ಗೋವಿಂದ ಅವರಿಂದ ಸ್ಪಷ್ಟ ಉತ್ತರ ಬಂದಿಲ್ಲ ಎಂದು ಸುನೀತಾ ದೂರಿದ್ದಾರೆ . ‘ಅವನು ನಗುವ ಮೂಲಕ ಈ ವಿಷಯವನ್ನು ತಪ್ಪಿಸುತ್ತಾನೆ. ಅವನ ಉತ್ತರಗಳು ನಮಗೆ ಅರ್ಥವಾಗುವುದಿಲ್ಲ. ಗೋವಿಂದನಿಗೆ ತನ್ನ ತಾಯಿಯ ಬಗ್ಗೆ ಭಯವಿತ್ತು. ಆಕೆಯ ಮರಣದ ನಂತರ, ಅವನು ನಿರಾತಂಕನಾಗಿದ್ದಾನೆ. ಈಗ ಅವನು ಯಾರಿಗೂ ಹೆದರುವುದಿಲ್ಲ ಮತ್ತು ಅವನ ಮನಸ್ಸಿಗೆ ಬಂದಂತೆ ವರ್ತಿಸುತ್ತಾನೆ. ಅವರ ಸಹವಾಸ ಒಳ್ಳೆಯದಲ್ಲ. ಅವನು ಯಾರೊಂದಿಗಾದರೂ ಸಂಬಂಧ ಹೊಂದಿದ್ದರೆ ಏನಾಗುತ್ತದೆ ಎಂದು ನಾನು ಮೊದಲೇ ಹೇಳಿದ್ದೆ? ಆದರೆ ಪ್ರತಿಯೊಂದಕ್ಕೂ ಅದರ ವಯಸ್ಸು ಇದೆ. ನನ್ನ ಯೌವನದಲ್ಲಿಯೂ ಸಹ, ನಾನು ಬಹಳಷ್ಟು ಪಾರ್ಟಿಗಳನ್ನು ಮಾಡಿದ್ದೆ ಮತ್ತು ಜೀವನವನ್ನು ಆನಂದಿಸಿದೆ, ಆದರೆ ಎಲ್ಲದಕ್ಕೂ ಒಂದು ವಯಸ್ಸು ಇದೆ’ ಎಂದು ಸುನೀತಾ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉಂಡ ಮನೆಗೇ ಕನ್ನ ಹಾಕಿದ BSNL ಅಧಿಕಾರಿಗಳು: 70 ಲಕ್ಷ ಮೌಲ್ಯದ ಕಾಪರ್ ಕೇಬಲ್ ಕಳವು – Kannada News | BSNL Officials Arrested for 70 Lakh Value Copper Cable Theft in Mangaluru

ಮಂಗಳೂರು/ಬೆಂಗಳೂರು, ಫೆಬ್ರವರಿ 20:  ಬಿಎಸ್​ಎನ್ಎಲ್​​​​​ ಕಚೇರಿಯಲ್ಲಿ ಅಧಿಕಾರಿಗಳೇ 70 ಲಕ್ಷ ಮೌಲ್ಯದ ಕಾಪರ್ ಕೇಬಲ್ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಮಂಗಳೂರು ದಕ್ಷಿಣ ಪೊಲೀಸರಿಂದ ಮೂವರು ಆರೋಪಿಗಳ ಬಂಧಿಸಲಾಗಿದ್ದು, BSNL ಅಸಿಸ್ಟೆಂಟ್​​ ಆಫೀಸ್​​ ಸೂಪರಿಂಟೆಂಡೆಂಟ್ ತನ್ವೀರ್ ಪಾಷಾ(50), ಟೆಲಿಕಾಂ ಟೆಕ್ನಿಶಿಯನ್ ಕೆ.ಕೆ.ಚಾಮಿ(59) ಹಾಗೂ L&T ಕಂಪನಿ ಕೇಬಲ್ ಜಾಯಿಂಟರ್ ಡಿ.ಮಂಜುನಾಥ್ ಬಂಧಿತರಾಗಿದ್ದಾರೆ. ಆರೋಪಿಗಳಿಂದ 2.5 ಲಕ್ಷ ರೂ. ಮೌಲ್ಯದ ಕಾಪರ್ ಕೇಬಲ್ ಮತ್ತು 10 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ. ಉಂಡ ಮನೆಗೇ ಕನ್ನ ಹಾಕಿದವರೀಗ ಕಂಬಿ ಹಿಂದೆ ಸೇರಿದ್ದಾರೆ.

ಹಣದ ಸಹಾಯ ಮಾಡುವ ನೆಪದಲ್ಲಿ ವಂಚನೆ ಆರೋಪ

ಎಜುಕೇಷನ್ ಟ್ರಸ್ಟ್​​ಗೆ ಹಣದ ಸಹಾಯ ಮಾಡುವ ನೆಪದಲ್ಲಿ ವಂಚನೆ ನಡೆಸಿದ ಆರೋಪ ಹಿನ್ನೆಲೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಒಟ್ಟು 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. CSR ಫಂಡ್​​ನಲ್ಲಿ ಬರೋಬ್ಬರಿ 100 ಕೋಟಿ ನೀಡುವುದಾಗಿ ಬೆಂಗಳೂರಿನ ಹೆಣ್ಣೂರಿನಲ್ಲಿರುವ ಖಾಸಗಿ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿಯೋರ್ವರಿಗೆ ನಂಬಿಸಿದ್ದ ಆರೋಪಿಗಳು, ಹಣ ರಿಲೀಸ್​​ ಮಾಡುವ ನೆಪದಲ್ಲಿ ಹಂತ ಹಂತವಾಗಿ ಸುಮಾರು 35 ಲಕ್ಷ ರೂಪಾಯಿ ಪಡೆದು ವಂಚಿಸಿರೋದಾಗಿ ದೂರುದಾರೆ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಮೋಹನ್ ದಾಸ್ ಪೈ ಕೆಂಡಾಮಂಡಲ

ಟ್ರಸ್ಟ್​​ ಅಭಿವೃದ್ಧಿ ಮಾಡುವ ಉದ್ದೇಶದ ಹಿನ್ನೆಲೆ ಅಮರಪಲ್ಲಿ ಸುರೇಶ್ ಎಂಬುವವರನ್ನು ದೂರುದಾರೆ ಭೇಟಿಯಾಗಿದ್ದರು. ಸುರೇಶ್​​ ದೂರುದಾರರ ಸ್ವಂತ ಊರು ತೀರ್ಥಹಳ್ಳಿಯವರೇ ಆಗಿರುವ ವಿಚಾರ ತಿಳಿದು ವೈಯಕ್ತಿಕ ಸಮಸ್ಯೆ ಕೂಡ ಹೇಳಿಕೊಂಡಿದ್ದರು ಎನ್ನಲಾಗಿದೆ. ಇನ್ನು ನೂರು ಕೋಟಿ ಹಣ ಕೊಡಿಸೋದಾಗಿ ನಂಬಿಸಿದ್ದ ಸುರೇಶ್​​, ನಂತರ ಸಹಾಯದ ನೆಪದಲ್ಲಿ ವೆಂಕಟರಾಮ ಭಟ್, ಹೈದರಾಬಾದ್​​ನಲ್ಲಿರುವ ಅತುಲ್ ಕುಮಾರ್​​ ಎಂಬುವವರ ಪರಿಚಯ ಮಾಡಿಸಿದ್ದರು. ಈ ವೇಳೆ 100 ಕೋಟಿ ಹಣ ಟ್ರಸ್ಟ್​​ಗೆ ನೀಡುವ ಸಂಬಂಧ ದಾಖಲೆಗಳ ಪರಿಶೀಲನೆ ಮಾಡಬೇಕು ಎಂದು ಅತುಲ್ ಹೇಳಿದ್ದರು.  ವೆಂಕಟರಾಮ ಭಟ್​​ ಕೂಡ ದೂರುದಾರೆಗೆ ಕರೆ ಮಾಡಿ ಕೆಲ ದಾಖಲೆ ಮಿಸ್ ಆಗಿದೆ ಎಂದಿದ್ದರು. ಅಲ್ಲದೆ ಅತುಲ್ ಬೆಂಗಳೂರಿಗೆ ಬರೋದಾಗಿ ತಿಳಿಸಿದ್ದ ಕಾರಣ ಫ್ಲೈಟ್ ಟಿಕೆಟ್, ಉಳಿದುಕೊಳ್ಳುವ ಹೋಟೆಲ್ ಖರ್ಚುವೆಚ್ಚವನ್ನು ದೂರುದಾರರೇ ಭರಿಸಿದ್ದರು. ಆದರೆ ಹಣ ರಿಲೀಸ್ ನೆಪದಲ್ಲಿ ಲಕ್ಷಾಂತರ ರೂಪಾಯಿ ಪಡೆದಿರುವ ಆರೋಪಿಗಳು, ಬಳಿಕ ದೂರುದಾರರ ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ಪ್ಲ್ಯಾನ್​​ ಮಾಡಿ ವಂಚಿಸಿರೋದಾಗಿ ಆರೋಪಿಸಿ ಖಾಸಗಿ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:59 am, Fri, 20 February 26

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಒಣ ಹವೆಯ ವಾತಾವರಣ – Kannada News | Bengaluru temperature: Dry weather all over Karnataka, Clear sky in Bengaluru

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಒಣ ಹವೆಯ ವಾತಾವರಣ

ಬೆಂಗಳೂರು, ಫೆಬ್ರವರಿ 20: ರಾಜ್ಯದಲ್ಲಿ ಹಲವು ದಿನಗಳಿಂದ ಶುಷ್ಕ ವಾತಾವರಣವೇ (Weather Forecast) ಆವರಿಸಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹತ್ತಾರು ದಿನಗಳಿಂದ ರಾಜ್ಯದಲ್ಲಿ ಒಣ ಹವೆ ಆವರಿಸಿದೆ. ಇನ್ನೂ ಕೆಲ ದಿನಗಳ ಕಾಲ ಇದೇ ವಾತಾವರಣ ಮುಂದುವರೆಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಒಣಹವೆ?

ದಕ್ಷಿಣ ಒಳನಾಡಿನ ಮೈಸೂರು , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ , ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಶುಷ್ಕ ವಾತಾವರಣ

ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 17°C ಇದ್ದು, ಗರಿಷ್ಠ 31°C ಇರಲಿದೆ ಎಂದು ಇಲಾಖೆ ತಿಳಿಸಿದೆ. ನಗರದ ತಾಪಮಾನದಲ್ಲಿ ತಕ್ಕಮಟ್ಟಿಗೆ ಸುಧಾರಣೆಯಾಗಿದ್ದು, ಶುಷ್ಕ ವಾತಾವರಣ ಮುಂದುವರೆದಿದೆ. ಇಂದು ಬೆಂಗಳೂರಿನಲ್ಲಿ ಸ್ಪಷ್ಟ ಆಕಾಶವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೆಲವು ದಿನ ಧಾರಾವಾಹಿಯಿಂದ ದೂರ ಉಳಿಯಲಿದ್ದಾರೆ ‘ನಾ ನಿನ್ನ ಬಿಡಲಾರೆ’ ನಟಿ ನೀತಾ ಅಶೋಕ್ – Kannada News | Naa Ninna Bidalaare: Neetha Ashok’s Injury Halts Ambika Role; Surgery Success

ಜೀ ಕನ್ನಡದಲ್ಲಿ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ವೀಕ್ಷಕರನ್ನು ಸೆಳೆದುಕೊಂಡಿದೆ. ಈ ಧಾರಾವಾಹಿ ಸಾಮಾನ್ಯ ಅತ್ತೆ ಸೊಸೆಯ ಜಗಳದಂತೆ ಇಲ್ಲ ಎಂದೇ ಹೇಳಬಹುದು. ಏಕೆಂದರೆ, ಇದು ಹಾರರ್ ಥೀಮ್​​ನಲ್ಲಿ ಮೂಡಿ ಬಂದಿದೆ. ಈ ಧಾರಾವಾಹಿ ವೀಕ್ಷಕರ ಮನ ಗೆದ್ದಿದೆ. ಈಗ ಧಾರಾವಾಹಿಯ ಮುಖ್ಯ ಪಾತ್ರಧಾರಿ ನೀತಾ ಅಶೋಕ್ ವಿಷಯದಲ್ಲಿ ಬೇಸರದ ಘಟನೆ ನಡೆದಿದೆ.

ನೀತಾ ಅವರು ಅಂಬಿಕಾ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಅಂಬಿಕಾ ಪಾತ್ರ ಧಾರಾವಾಹಿಯಲ್ಲಿ ಸತ್ತು ಹೋಗಿದೆ. ಆದರೆ, ಆಕೆ ಆತ್ಮವಾಗಿ ಕಾಣಿಸಿಕೊಳ್ಳುತ್ತಿದ್ದಾಳೆ. ನಿಜ ಹೇಳಬೇಕು ಎಂದರೆ ಅವಳು ದೆವ್ವ. ಆದರೆ, ಕೆಟ್ಟ ದೆವ್ವ ಅಲ್ಲ ಒಳ್ಳೆಯ ದೆವ್ವ. ಈ ಪಾತ್ರ ಮಾಡುತ್ತಿರುವ ನೀತಾ ಅವರು ಶೂಟಿಂಗ್ ಮಾಡುವಾಗ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನೀತಾ ನೀಡಿರುವ ಮಾಹಿತಿ ಪ್ರಕಾರ, ಶೂಟ್ ವೇಳೆ ಅವ ಕಾಲು ಟ್ವಿಸ್ಟ್ ಆಗಿತ್ತಂತೆ. ನಂತರ ಅದು ಫ್ರ್ಯಾಕ್ಚರ್ ಆಗಿ ಬದಲಾಯಿತು. ಈಗ ಅವರು ಸರ್ಜರಿ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಬಂತು. ಈಗ ಸರ್ಜರಿ ಯಶಸ್ವಿಯಾಗಿದೆ. ಅಪೋಲೋ ಆಸ್ಪ್ತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದೆ. ಅವರು ಅಭಿಮಾನಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗಕ್ಕೆ ಧನ್ಯವಾದ ಹೇಳಿದ್ದಾರೆ. ‘ನನ್ನನ್ನು ಕೆಲವು ಸಮಯ ಮಿಸ್ ಮಾಡಿಕೊಳ್ಳಿ’ ಎಂದು ನೀತಾ ಹೇಳಿದ್ದಾರೆ. ಹೀಗಾಗಿ, ಅಂಬಿಕಾ ಪಾತ್ರ ಕೆಲವು ದಿನ ತೆರೆಮೇಲೆ ಕಾಣಿಸಿಕೊಳ್ಳೋದಿಲ್ಲ.

ಇದನ್ನೂ ಓದಿ: ಧಾರಾವಾಹಿಯಲ್ಲಿ ದೆವ್ವ, ನಿಜ ಜೀವನದಲ್ಲಿ ಎಷ್ಟು ಕ್ಯೂಟ್ ನೋಡಿ ನೀತಾ ಅಶೋಕ್

ನೀತಾ ಅಶೋಕ್ ಅವರು ಕಿರುತೆರೆ ಹಾಗೂ ಹಿರಿತೆರೆ ಇಬ್ಬರಿಗೂ ಪರಿಚಿತರು. ಇವರು ಮೂಲತಃ ಉಡುಪಿ ಜಿಲ್ಲೆಯ ಕೋಟಾದವರು. 2014ರಲ್ಲಿ ಪ್ರಸಾರ ಕಂಡ ‘ಯಶೋಧ’ ಧಾರಾವಾಹಿ ಮೂಲಕ ಬಣ್ಣದ ಬದುಕು ಆರಂಭಿಸಿದರು. ನೀಲಾಂಬರಿ ಹೆಸರಿನ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ. 2019ರ ‘ಜಬರ್ದಸ್ತ್ ಶಂಕರ’ ಹೆಸರಿನ ತುಳು ಸಿನಿಮಾದಲ್ಲಿ ನೀತಾ ಅಶೋಕ್ ನಟಿಸಿದರು. ಈ ತುಳು ಸಿನಿಮಾ ಸಾಕಷ್ಟು ಮೆಚ್ಚುಗೆ ಪಡೆಯಿತು. 2022ರಲ್ಲಿ ರಿಲೀಸ್ ಆದ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ದೀಪ್ ಪತ್ನಿಯ ಪಾತ್ರದಲ್ಲಿ ಅಪರ್ಣಾ ಬಲ್ಲಾಳ್ ಪಾತ್ರದಲ್ಲಿ ನೀತಾ ಮಿಂಚಿದರು. ಈಗ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:44 am, Fri, 20 February 26

Source link

Daily Devotional: ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು! – Kannada News | Daily Devotional: Three Critical Decisions to Avoid When Angry

ಬೆಂಗಳೂರು, ಫೆಬ್ರವರಿ​ 20: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಕೋಪದಲ್ಲಿದ್ದಾಗ ಮನುಷ್ಯ ಯಾವ ಮೂರು ನಿರ್ಧಾರಗಳನ್ನು ತೆಗೆದುಕೋಬಾರದು ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಕೋಪವು ನಕಾರಾತ್ಮಕ ಶಕ್ತಿಯಾಗಿದ್ದು, ಅನೇಕ ದುರಂತಗಳಿಗೆ ಮತ್ತು ಅವಘಡಗಳಿಗೆ ಕಾರಣವಾಗುತ್ತದೆ. ಇದು ನಮ್ಮ ದೇಹ, ಆರೋಗ್ಯ ಮತ್ತು ಆಯಸ್ಸನ್ನು ಕುಗ್ಗಿಸಿ, ಧನಾತ್ಮಕ ಶಕ್ತಿಗಳನ್ನು ನಾಶಪಡಿಸುತ್ತದೆ. ಕೋಪದಿಂದಾಗಿ, ಶಿಕ್ಷಣದಲ್ಲಿ, ಕೆಲಸ ಕಾರ್ಯಗಳಲ್ಲಿ, ಮತ್ತು ಜೀವನ ನಿರ್ವಹಣೆಯಲ್ಲಿ ಯಶಸ್ಸು ಸಾಧಿಸುವುದು ಕಷ್ಟವಾಗುತ್ತದೆ.

ಭಾರತದ ನೀತಿಶಾಸ್ತ್ರದಲ್ಲಿ, ಅನೇಕ ಸಮಸ್ಯೆಗಳಿಗೆ ಕೋಪವೇ ಮೂಲ ಕಾರಣ ಎಂದು ಹೇಳಲಾಗಿದೆ. ಲಕ್ಷ್ಮೀ ಕಟಾಕ್ಷವು ಸಹನೆ ಮತ್ತು ತಾಳ್ಮೆಯಲ್ಲಿ ನೆಲೆಯಾಗಿದೆ. ಕೋಪದಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರವು ಶುಭಕರವಾಗಿರುವುದಿಲ್ಲ. ವಿಶೇಷವಾಗಿ, ಮೂರು ನಿರ್ಧಾರಗಳನ್ನು ಕೋಪದಲ್ಲಿ ತೆಗೆದುಕೊಳ್ಳುವುದರಿಂದ ದೂರವಿರಬೇಕು. ಸದಾ ಹಸನ್ಮುಖಿಯಾಗಿರುವ ವ್ಯಕ್ತಿ ಯಶಸ್ಸು ಮತ್ತು ಶ್ರೇಯಸ್ಸನ್ನು ಪಡೆಯುತ್ತಾನೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

Source link

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಘಟನೆಗೆ ಕಾರಣ ಬಿಚ್ಚಿಟ್ಟ ಎಸ್ಪಿ – Kannada News | Bagalkot SP Siddharth Goyal Reacts to Stone, Slipper Pelting During Shivaji Procession

ಬಾಗಲಕೋಟೆ, ಫೆಬ್ರವರಿ 20: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಕಿಲಾ ಓಣಿ ಬಳಿ ಕಲ್ಲು ಹಾಗೂ ಚಪ್ಪಲಿ ತೂರಾಟ ಘಟನೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಪ್ರತಿಕ್ರಿಯೆ ನೀಡಿದ್ದು, ಪರಿಸ್ಥಿತಿ ಪ್ರಸ್ತುತ ನಿಯಂತ್ರಣದಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮೆರವಣಿಗೆ ಮಸೀದಿ ಬಳಿ ಬಂದಾಗ ಎರಡು ಕಲ್ಲುಗಳು ಮತ್ತು ಒಂದು ಚಪ್ಪಲಿ ತೂರಲಾಗಿದೆ. ಆದರೆ, ಸಾರ್ವಜನಿಕರಿಗೆ ಅಥವಾ ಶಿವಾಜಿ ಭಾವಚಿತ್ರಕ್ಕೆ ಯಾವುದೇ ಹಾನಿಯಾಗಿಲ್ಲ,ಬದಲಾಗಿ ಪೊಲೀಸರ ಮೇಲೆ ಕಲ್ಲು ಬಿದ್ದಿದೆ. ಘಟನೆ ಹಿಂದೆ ಯಾವುದೇ ಕೋಮು ಕಾರಣಗಳಿಲ್ಲ ಎಂದು ತಿಳಿಸಿದ್ದಾರೆ. ಘಟನೆಯ ನಂತರ ಹೆಚ್ಚುವರಿ ಭದ್ರತೆಯನ್ನು ಒದಗಿಸಲಾಗಿದೆ. ಘಟನೆಗೆ ಸಂಬಂಧಿಸಿದ ವೀಡಿಯೊಗಳನ್ನು ಪರಿಶೀಲಿಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಜಯ್ ರಾಘವೇಂದ್ರ ಟಾರ್ಚರ್​​ಗೆ ಸುಸ್ತಾದ ಅನುಶ್ರೀ; ಕೊನೆಗೂ ಮೂಡಿತು ನಗು – Kannada News | Vijay Raghavendra and Anushree’s Fun Promo for ‘Second Case of Seetharam’ Film

ವಿಜಯ್ ರಾಘವೇಂದ್ರ ಹಾಗೂ ಆ್ಯಂಕರ್ ಅನುಶ್ರೀ (Anushree) ಮಧ್ಯೆ ಒಳ್ಳೆಯ ಗೆಳೆತನ ಇದೆ. ವಿಜಯ್ ರಾಘವೇಂದ್ರ ಅವರು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋಗೆ ಜಡ್ಜ್ ಆಗಿದ್ದು, ಅನುಶ್ರೀ ಆ್ಯಂಕರಿಂಗ್ ಮಾಡುತ್ತಿದ್ದಾರೆ. ಸೆಟ್​​ನಲ್ಲಿ ನಡೆದ ಒಂದು ಫನ್ ವಿಡಿಯೋನ ಅನುಶ್ರೀ ಹಂಚಿಕೊಂಡಿದ್ದಾರೆ. ಈ ವಾರ ರಿಲೀಸ್ ಆದ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ’ ಸಿನಿಮಾದ ಪ್ರಚಾರ ಮಾಡಲು ಈ ವಿಡಿಯೋ ಮಾಡಲಾಗಿದೆ.

ವಿಜಯ್ ರಾಘವೇಂದ್ರ ಅವರು 60ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಕೆಲವು ಹಿಟ್ ಆಗಿವೆ. ಆದರೆ, ಯಾವುದೇ ಸಿನಿಮಾದಲ್ಲಿ ಅವರಿಗೆ ಮಾಸ್ ಡೈಲಾಗ್ ಇಲ್ಲ. ಈ ಮಾಸ್ ಡೈಲಾಗ್ ಅಥವಾ ನೆನಪಿಕೊಳ್ಳುವ ಡೈಲಾಗ್ ಇಲ್ಲ ಎಂಬ ವಿಷಯದೊಂದಿಗೆ ವಿಡಿಯೋ ಆರಂಭ ಆಗುತ್ತದೆ. ‘ವಿಜಯ್ ನಿನ್ನ ಸಿನಿಮಾದ ಒಂದೊಳ್ಳೆಯ ಡೈಲಾಗ್ ಹೇಳು’ ಎಂದು ಅನುಶ್ರೀ ಕೇಳುತ್ತಾರೆ. ಆದರೆ, ಏನೇ ಮಾಡಿದರೂ ಯಾವ ಸಿನಿಮಾದಲ್ಲೂ ಡೈಲಾಗ್ ಸಿಗಲ್ಲ.

ಹಲವು ಸಿನಿಮಾಗಳ ಹೆಸರನ್ನು ಅನುಶ್ರೀ ಹೇಳುತ್ತಾರೆ. ಆದರೆ, ವಿಜಯ್ ರಾಘವೇಂದ್ರ ಅವರಿಂದ ನಕಾರಾತ್ಮಕ ಉತ್ತರವೇ ಬರುತ್ತದೆ. ಈ ವಿಷಯದಲ್ಲಿ ಅನುಶ್ರೀ ಫ್ರೆಸ್ಟ್ರೇಟ್ ಆಗುತ್ತಾರೆ. ಅವರಿಗೆ ಟಾರ್ಚರ್ ರೀತಿಯ ಫೀಲ್ ಆಗುತ್ತದೆ.

ಇದನ್ನೂ ಓದಿ: ವಿಜಯ್ ರಾಘವೇಂದ್ರ ಮತ್ತು ಅನುಶ್ರೀ ಕಾಮಿಡಿ ಪ್ರಮೋಷನ್: ವಿಡಿಯೋ

ವಿಜಯ್ ‘ಕಳ್ಳ ಮಳ್ಳ ಸುಳ್ಳ’ ಸಿನಿಮಾ ಹೆಸರು ಹೇಳುತ್ತಿದ್ದಂತೆ, ‘ಆ ಮೂರು ನೀನೇ’ ಎನ್ನುತ್ತಾರೆ ಅನುಶ್ರೀ.
‘ನಾನು ಕಳ್ಳನೂ ಅಲ್ಲ, ಮಳ್ಳನೂ ಅಲ್ಲ, ಸುಳ್ಳನೂ ಅಲ್ಲ’ ಎಂದು ವಿಜಯ್ ಉತ್ತರಿಸುತ್ತಾರೆ. ಆಗ, ಅನುಶ್ರೀ, ‘ಇವನು ಸೀತಾರಾಮ್’ ಎನ್ನುತ್ತಾರೆ. ‘ನೀನು ಮೆಂಟಲ್ ಕೇಸ್ ರೀತಿ ಆಡ್ತಾ ಇದೀಯಾ’ ಎಂದು ವಿಜಯ್ ಹೇಳುತ್ತಾರೆ. ‘ಇದು ಮೆಂಟಲ್ ಕೇಸ್ ಅಲ್ಲ, ಸೆಕೆಂಡ್ ಕೇಸ್ ಆಫ್ ಸೀತಾರಾಮ’ ಎಂದರು ಅವರು. ‘20ಕ್ಕೆ ಸೆಕೆಂಡ್ ಕೇಸ್ ಆಫ್ ಸೀತಾರಾಮ ಸಿನಿಮಾ ರಿಲೀಸ್ ಆಗುತ್ತಿದೆ. ದಯವಿಟ್ಟು ನೋಡಿ’ ಎಂದು ವಿಜಯ್ ಹಾಗೂ ಅನುಶ್ರೀ ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ತಿಂದು ಬಿಸಾಡಿದ್ದ ತಟ್ಟೆಗಳಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ – Kannada News | UPSC Aspirant Seen Collecting Leftover Food From Discarded Plates, Video Goes Viral

ನವದೆಹಲಿ, ಫೆಬ್ರವರಿ 20: ಯುಪಿಎಸ್​​ಸಿ ಆಕಾಂಕ್ಷಿಯೊಬ್ಬರು ತಿಂದು ಬಿಸಾಡಿದ್ದ ತಟ್ಟೆಗಳಲ್ಲಿದ್ದ ಆಹಾರ ಪದಾರ್ಥಗಳನ್ನು ಒಟ್ಟು ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅವರು ಬುಲಂದ್​ಶೆಹರ್​ನ ವಿದ್ಯಾರ್ಥಿ ಅಶುತೋಷ್. ಈ ವಿಡಿಯೋವನ್ನು ಮೊಬೈಲ್ ಅಂಗಡಿ ಮಾಲೀಕ ಉಪಲಕ್ಷ್ ಮಾಡಿದ್ದು, ಆ ಸಮಯದಲ್ಲಿ ಈ ವ್ಯಕ್ತಿಗೆ ಹುಚ್ಚಿರಬೇಕು, ಸೂಟು ಬೂಟು ಧರಿಸಿ ವಿದ್ಯಾವಂತನಂತೆ ಕಾಣುತ್ತಿದ್ದಾರೆ ಆದರೆ ಯಾಕೆ ತಿಂದು ಬಿಸಾಡಿದ ತಟ್ಟೆಗಳನ್ನು ಮುಟ್ಟುತ್ತಿದ್ದಾರೆ, ಅದರಲ್ಲಿರುವ ಆಹಾರವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ತುಂಬಾ ತಲೆ ಕೆಡಿಸಿಕೊಂಡಿದ್ದರಂತೆ.

ಆದರೆ ಅಶುತೋಶ್ ಆಲೋಚನೆ ಎಲ್ಲರನ್ನು ನಿಬ್ಬೆರಗಾಗಿಸಿತ್ತು, ಎಲ್ಲೂ ಪ್ರಚಾರ ಮಾಡದೆ, ಸಾಮಾಜಿಕ ಕಾರ್ಯದಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂಬುದು ಅರಿವಾಗಿತ್ತು. ಆ ತಟ್ಟೆಯಲ್ಲಿ ಬಿಟ್ಟಿದ್ದ ಆಹಾರವನ್ನು ಬೀದಿ ನಾಯಿಗಳು ಹಾಗೂ ಬೀದಿ ಬದಿ ಇರುವ ಹಸುಗಳಿಗೆ ಕೊಡಲು ಅವರು ತೆಗೆದುಕೊಂಡು ಹೋಗುತ್ತಿದ್ದರು. ಆಹಾರವನ್ನು ವ್ಯರ್ಥ ಮಾಡುವುದು ಸುಲಭ, ಆದರೆ ನಿಜವಾದ ಮಾನವೀಯತೆ ಆ ತ್ಯಾಜ್ಯವನ್ನು ಜೀವಸೆಲೆಯಾಗಿ ಮರುಬಳಕೆ ಮಾಡುವಲ್ಲಿದೆ ಎಂದು ‘ದಿ ಬೆಟರ್ ಇಂಡಿಯಾ’ ಎಂಬ ಎಕ್ಸ್​ ಅಕೌಂಟ್​ನಿಂದ ಈ ಪೋಸ್ಟ್​ ಮಾಡಲಾಗಿದೆ. ಈ ವಿಡಿಯೋವನ್ನು ನಾರ್ತ್​ ಕ್ಯಾಂಪಸ್ ಬಾಯ್ಸ್ ಎನ್ನುವ ಇನ್​ಸ್ಟಾಗ್ರಾಂ ಅಕೌಂಟ್​ನಿಂದ ಪಡೆಯಲಾಗಿದೆ ಎಂದು ಬರೆಯಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Horoscope Today 20 February​: ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 20, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ,ಉತ್ತರಾಯಣ, ಉತ್ತರಾಯಣ, ಪಾಲ್ಗುಣ ಮಾಸ, ಶಿಶಿರ ಋತು, ಶುಕ್ಲ ಪಕ್ಷದ ತದಿಗೆ, ಉತ್ತರ ಭಾದ್ರ ನಕ್ಷತ್ರ, ಸಾಧ್ಯ ಯೋಗ ಮತ್ತು ಗರಜೆ ಕರಣ ಇರತಕ್ಕಂತಹ ಈ ದಿನದಂದು ರಾಹುಕಾಲವು ಬೆಳಗ್ಗೆ 11:04 ರಿಂದ ಮಧ್ಯಾಹ್ನ 12:32 ರ ತನಕ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಮತ್ತು ಶುಭಕಾಲವು ಮಧ್ಯಾಹ್ನ 1:35 ರಿಂದ 2:53 ರ ತನಕವಿದೆ. ಇದು ಮಹಾಲಕ್ಷ್ಮಿಯ ಅನುಗ್ರಹವನ್ನು ಪಡೆಯಲು ಶುಭಕರವಾದ ಶುಕ್ರವಾರವಾಗಿದೆ.

ಈ ದಿನದಂದು ಹೊರನಾಡು ಅನ್ನಪೂರ್ಣೇಶ್ವರಿ ರಥೋತ್ಸವ, ವಿಶ್ವ ಸಾಮಾಜಿಕ ನ್ಯಾಯದ ದಿನ, ಹಾಗೂ ಪಾಂಡವಪುರ, ಚಿನಕುರುಳಿ ಸಿದ್ದಲಿಂಗೇಶ್ವರ ಸ್ವಾಮಿಗಳ ರಥೋತ್ಸವವೂ ನಡೆಯಲಿದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.

 

Source link

ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು; ಕರ್ನಾಟಕವೇ ನಂಬರ್​​ 1 – Kannada News | Indian Hotel Industry Exposed: 70,000 Crore Tax Evasion Uncovered in IT Raids

ಬೆಂಗಳೂರು, ಫೆಬ್ರವರಿ 20: ದೇಶಾದ್ಯಂತ ಹೋಟೆಲ್ ಉದ್ಯಮದಿಂದ ಬರೋಬ್ಬರಿ 70 ಸಾವಿರ ಕೋಟಿ ರೂಪಾಯಿಗಳ ಭಾರಿ ತೆರಿಗೆ ವಂಚನೆ ಬಹಿರಂಗವಾಗಿದೆ. ಆದಾಯ ತೆರಿಗೆ (ಐಟಿ) ಇಲಾಖೆ ನಡೆಸಿದ ದಾಳಿಗಳಲ್ಲಿ ಈ ಬೃಹತ್ ಅಕ್ರಮ ವಹಿವಾಟು ಪತ್ತೆಯಾಗಿದೆ. ಹೋಟೆಲ್ ಮಾಲೀಕರು 2019ರಿಂದ 2026ರವರೆಗಿನ ಬಿಲ್ಲಿಂಗ್ ಡೇಟಾದಲ್ಲಿ ಗ್ರಾಹಕರಿಂದ ಪಡೆದ ಹಣದ ವಿವರಗಳನ್ನು ಅಳಿಸಿಹಾಕಿ, ಕಡಿಮೆ ಆದಾಯವನ್ನು ತೋರಿಸುವ ಮೂಲಕ ತೆರಿಗೆ ತಪ್ಪಿಸುತ್ತಿದ್ದರು. ಐಟಿ ಅಧಿಕಾರಿಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಫೋರೆನ್ಸಿಕ್ ತಪಾಸಣೆಯ ಮೂಲಕ ಈ ವಂಚನೆಯನ್ನು ಪತ್ತೆಹಚ್ಚಿದ್ದಾರೆ. ಹೈದರಾಬಾದ್‌ನ ಐಟಿ ಡಿಜಿಟಲ್ ಲ್ಯಾಬ್‌ನಲ್ಲಿ ನಡೆಸಿದ ತಪಾಸಣೆಯಿಂದ ಈ ಸ್ಫೋಟಕ ಮಾಹಿತಿ ಬಯಲಾಗಿದೆ. ತೆರಿಗೆ ವಂಚನೆ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದ್ದು, 2,000 ಕೋಟಿಗೂ ಹೆಚ್ಚು ಮೌಲ್ಯದ ಡೇಟಾ ಇಲ್ಲಿ ಡಿಲೀಟ್ ಮಾಡಲಾಗಿದೆ. ತೆಲಂಗಾಣದಲ್ಲಿ 1,500 ಕೋಟಿ ರೂ. ಮತ್ತು ತಮಿಳುನಾಡಿನಲ್ಲಿ 1,200 ಕೋಟಿ ರೂ. ಮೌಲ್ಯದ ಡೇಟಾ ಅಳಿಸಲಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲೂ ಭಾರಿ ವಂಚನೆ ನಡೆದಿದೆ. ದೇಶದ ಒಂದು ಲಕ್ಷಕ್ಕೂ ಹೆಚ್ಚು ಹೋಟೆಲ್‌ಗಳಲ್ಲಿ ಈ ರೀತಿಯ ಬಿಲ್ಲಿಂಗ್ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link