Category Archives: Blog

Your blog category

‘ಟಾಕ್ಸಿಕ್’ ಟೀಸರ್ ಡೈಲಾಗ್ ಮೂಲಕ ‘ಧುರಂಧರ್ 2’ಗೆ ಎಚ್ಚರಿಕೆ ಕೊಟ್ಟ ಯಶ್ – Kannada News | Yash’s Toxic Dialogue: A Fierce Reply to Ranveer Singh Dhurandhar 2 Movie

‘ಟಾಕ್ಸಿಕ್’ ಸಿನಿಮಾದ ಟೀಸರ್ (Toxic Teaser) ರಿಲೀಸ್ ಆಗಿ ಹಲ್​ಚಲ್​ ಎಬ್ಬಿಸುತ್ತಿದೆ. ಈ ಟೀಸರ್ ರಿಲೀಸ್ ಆದ ಕೆಲವೇ ಹೊತ್ತಿಗೆ ಮಿಲಿಯನ್ ವೀಕ್ಷಣೆ ಕಂಡಿದೆ. ಈ ಸಿನಿಮಾ ಹಿಂದಿಯ ‘ಧುರಂಧರ್ 2’ ಚಿತ್ರದ ಎದುರು ರಿಲೀಸ್ ಆಗುತ್ತಿದೆ. ರೇಸ್​​ಗೆ ಇಳಿದು ಯಶ್ ಸೋತ ದಾಖಲೆ ಇಲ್ಲ. ಹೀಗಾಗಿ, ‘ಧುರಂಧರ್ 2’ ಸಿನಿಮಾ ಎದುರು ಕೂಡ ಗೆಲ್ಲೋದು ‘ಟಾಕ್ಸಿಕ್’ ಎಂಬ ಮಾತು ಕೇಳಿ ಬಂದಿದೆ. ಈ ಮಧ್ಯೆ ಟೀಸರ್​ನಲ್ಲಿ ಬರೋ ಒಂದು ಡೈಲಾಗ್ ‘ಧುರಂಧರ್ 2’ ಚಿತ್ರಕ್ಕೆ ಕೊಟ್ಟ ಕೊಟ್ಟ ಕೌಂಟರ್ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಇದೆ.

ಯಶ್ ಅವರು ಸ್ವಭಾವದಲ್ಲಿ ಹಠವಾದಿ. ಏನೇ ಬಂದರೂ ಅದನ್ನು ಸಾಧಿಸಿಯೇ ತೀರುತ್ತೇನೆ ಎಂಬ ಹಠ ಅವರಿಗೆ ಇದೆ. ಒಂದೊಂದೇ ಮೆಟ್ಟಿಲು ಹತ್ತಿ ಅವರು ತುಂಬಾನೇ ಎತ್ತರಕ್ಕೆ ಹೋಗಿದ್ದಾರೆ. ಹೀಗಾಗಿ ಅವರಲ್ಲಿ ಹಠ ಮತ್ತಷ್ಟು ಹೆಚ್ಚಿದೆ. ‘ಧುರಂಧರ್ 2’ ಚಿತ್ರದ ಎದುರು ರಿಲೀಸ್ ಆಗಿ ಗೆದ್ದೇ ಗೆಲ್ಲುತ್ತೇನೆ ಎಂಬ ಛಲದಲ್ಲಿ ಅವರಿದ್ದಾರೆ. ಟೀಸರ್​​ನಲ್ಲಿ ಬರುವ ಸಂಭಾಷಣೆಯನ್ನು ಅನೇಕರು ‘ಧುರಂಧರ್ 2’ ಚಿತ್ರಕ್ಕೆ ಕೊಟ್ಟ ಕೌಂಟರ್ ಎಂದು ಹೇಳುತ್ತಿದ್ದಾರೆ.

‘ಈ ಸಲ ಯುದ್ಧನೇ ಬೇರೆ, ಅವರ ಕುತಂತ್ರನೇ ಬೇರೆ, ಎಲ್ಲರನ್ನೂ ಎದುರು ಹಾಕಿಕೊಂಡು ಬದುಕೋಕೆ ಆಗಲ್ಲ ರಾಯ. ಹಠ ಬಿಟ್ಬಿಡು, ಇಟ್ಸ್ ಓವರ್’ ಎಂದು ವ್ಯಕ್ತಿಯೋರ್ವನ ಧ್ವನಿ ಬರುತ್ತದೆ. ಆಗ ರಾಯ (ಯಶ್) ಇದಕ್ಕೆ ಉತ್ತರಿಸುತ್ತಾನೆ. ‘ನಾನು ಹೇಳಿದ್ರೆ ಮಾತ್ರ ಅದು ಓವರ್, ಇಲ್ಲದಿದ್ರೆ ಅಲ್ಲ’ ಎಂದು ರಾಯ ಹೇಳುತ್ತಾನೆ.

ಇದನ್ನೂ ಓದಿ: ಟಾಕ್ಸಿಕ್​ ಟೀಸರ್​: ಫ್ಯಾನ್ಸ್​​ಗೆ ಡಬಲ್ ಧಮಾಕ; ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಯಶ್

‘ಧುರಂಧರ್ ಸೀಕ್ವೆಲ್ ಎದುರು ಬರಬೇಡಿ. ಮುಂದಕ್ಕೆ ಹೋಗಿ’ ಎಂಬ ಕಿವಿಮಾತನ್ನು ಯಶ್​​ಗೆ ಅನೇಕರು ಹೇಳಿದ್ದು ಇದೆ. ಇದಕ್ಕೆ ಕೌಂಟರ್ ಕೊಡೋ ದೃಷ್ಟಿಯಲ್ಲಿ ಈ ರೀತಿ ಹೇಳಿರಬಹುದು ಎಂದು ಅನೇಕರು ಹೇಳಿದ್ದಾರೆ. ಹಠ ಬಿಡೋ ಮಾತೆ ಇಲ್ಲ ಎಂಬುದನ್ನು ಟೀಸರ್ ಮೂಲಕ ಯಶ್ ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:16 am, Fri, 20 February 26

Source link

Daily Devotional: ಮಕ್ಕಳು ಮಾತನಾಡುವಾಗ ತೊದಲುತ್ತಿದ್ದಾರಾ? ಜ್ಯೋತಿಷ್ಯ ಪರಿಹಾರ ಇಲ್ಲಿದೆ – Kannada News | Astrological and Spiritual Remedies for Childrens Delayed Speech and Stuttering

ಮಕ್ಕಳು ಮಾತನಾಡುವಾಗ ತೊದಲುತ್ತಿದ್ದರೆ ಅಥವಾ ಮಾತು ತಡವಾಗಿದ್ದರೆ ಪೋಷಕರಿಗೆ ಇದು ಸಾಮಾನ್ಯವಾಗಿ ಆತಂಕವನ್ನುಂಟು ಮಾಡುವ ಸಂಗತಿಯಾಗಿದೆ. ಸಾಮಾನ್ಯವಾಗಿ ವೈದ್ಯರು “ಏನೂ ತೊಂದರೆ ಇಲ್ಲ, ಸ್ವಲ್ಪ ದಿನ ಕಾಯಿರಿ, ಸರಿಹೋಗುತ್ತದೆ” ಎಂದು ಹೇಳುತ್ತಾರೆ. ಆದರೆ, ಜ್ಯೋತಿಷ್ಯ ಶಾಸ್ತ್ರ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ಇದಕ್ಕೆ ಕೆಲವು ನಿರ್ದಿಷ್ಟ ಕಾರಣಗಳು ಮತ್ತು ಪರಿಹಾರಗಳು ಇವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಮಕ್ಕಳ ಮಾತಿನ ಸಾಮರ್ಥ್ಯವನ್ನು ವೃದ್ಧಿಸಲು ಕೆಲವು ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯ ಪರಿಹಾರಗಳನ್ನು ಸೂಚಿಸಲಾಗಿದೆ. ಪುಟ್ಟ ಮಕ್ಕಳಿರುವ ಮನೆಗಳಲ್ಲಿ, ವಿಶೇಷವಾಗಿ ಮೂರರಿಂದ ಐದು ವರ್ಷದೊಳಗಿನ ಮಕ್ಕಳು ಮಲಗುವ ಅಥವಾ ಆಡುವ ಕೋಣೆಯಲ್ಲಿ ಆದಷ್ಟು ಹಸಿರು ಬಣ್ಣ ಹೆಚ್ಚಾಗಿ ಇರುವಂತೆ ನೋಡಿಕೊಳ್ಳಬೇಕು. ಗೋಡೆಯ ಬಣ್ಣ ತಿಳಿ ಹಸಿರಾಗಿರಬಹುದು ಅಥವಾ ವಾಲ್‌ಪೇಪರ್ ಹಸಿರು ಬಣ್ಣದ್ದಾಗಿರಬಹುದು. ಪಾಟ್‌ಗಳಲ್ಲಿ ಗಿಡಗಳನ್ನು ಇಡುವುದು ಸಹ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹಸಿರು ಬಣ್ಣವು ಬುಧ ಗ್ರಹಕ್ಕೆ ಸಂಬಂಧಿಸಿದ್ದು, ಇದು ಬುದ್ಧಿಶಕ್ತಿ ಮತ್ತು ಸಂವಹನ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿ.

ಐದು ಅಥವಾ ಆರು ವರ್ಷ ವಯಸ್ಸಾದರೂ ಮಕ್ಕಳು ತೊದಲು ಮಾತನಾಡುತ್ತಿದ್ದರೆ, ಡಾಕ್ಟರ್‌ಗಳ ಸಲಹೆಯ ಜೊತೆಗೆ ಜ್ಯೋತಿಷ್ಯ ಪರಿಹಾರಗಳನ್ನು ಅನುಸರಿಸಬಹುದು. ಪ್ರತಿ ಬುಧವಾರ ನೆನೆಸಿದ ಹೆಸರು ಕಾಳನ್ನು ಆ ಮಗುವಿನ ಕೈಯಿಂದ ದಾನ ಮಾಡಿಸುವುದರಿಂದ ಶುಭ ಫಲಗಳು ದೊರೆಯುತ್ತವೆ. ಬುಧವಾರದ ದಿನ ಹೆಸರು ಕಾಳು ದಾನ ಮಾಡುವುದು ಬುಧ ಗ್ರಹದ ಅನುಗ್ರಹಕ್ಕೆ ಕಾರಣವಾಗುತ್ತದೆ.

ವಾಕ್ಚಾತುರ್ಯದ ದೇವತೆ ಸಾಕ್ಷಾತ್ ಸರಸ್ವತಿ. ಮಕ್ಕಳ ಮಾತಿನ ಶಕ್ತಿಯನ್ನು ಹೆಚ್ಚಿಸಲು ಗುರುಗಳ (ಮಠಾಧೀಶರು ಅಥವಾ ಆಧ್ಯಾತ್ಮಿಕ ಶಕ್ತಿ ಹೊಂದಿದ ಮಹನೀಯರು) ಆಶೀರ್ವಾದ ಪಡೆಯಬಹುದು. ಗುರುವಾರದ ದಿನ, ಬೆಳಗಿನ ಸೂರ್ಯೋದಯದ ಸಮಯದಲ್ಲಿ, ಗುರುಗಳಿಗೆ ನಮಸ್ಕಾರ ಮಾಡಿ, ಅವರ ಕೈಯಿಂದ ಬೆಳ್ಳಿಯ ಕಡ್ಡಿಯಿಂದ ಮಗುವಿನ ನಾಲಿಗೆಯ ಮೇಲೆ ಐಂ ಬೀಜಾಕ್ಷರವನ್ನು ಬರೆಸುವುದು ಬಹಳ ಶುಭಕರ. ಇದು ಮಾತಿನ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಗುರೂಜಿ ಹೇಳಿದ್ದಾರೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಮನೆಯಲ್ಲಿ ಗಾಯತ್ರಿ ಮಂತ್ರವನ್ನು ಪಠಿಸುವುದು ಅಥವಾ ಫೋನ್‌ನಲ್ಲಿ ಕೇಳಿಸುವುದು ಸಹ ಉತ್ತಮ ಪರಿಹಾರ. ಗಾಯತ್ರಿ ಮಂತ್ರದ ಶಬ್ದ ತರಂಗಗಳು ಮಗುವಿನ ಕಿವಿಗೆ ತಲುಪಿದಾಗ, ಅದು ನಾಲಿಗೆ ಮತ್ತು ಕಂಠದ ಶಕ್ತಿಯನ್ನು ಹೆಚ್ಚಿಸುತ್ತದೆ. ಗಾಯತ್ರಿ ಮಂತ್ರವು ಗ್ರಹಣ ಶಕ್ತಿಯನ್ನು ಹೆಚ್ಚಿಸಿ, ಮೆದುಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಮನಸ್ಸಿಗೆ ತೀಕ್ಷ್ಣ ಶಕ್ತಿಯನ್ನು ನೀಡುತ್ತದೆ. ಹಯಗ್ರೀವ ಸ್ತೋತ್ರ “ಜ್ಞಾನಾನಂದಮಯಂ ದೇವಂ ನಿರ್ಮಲ ಸ್ಫಟಿಕಾಕೃತಿಂ ಆಧರಂ ಸರ್ವ ವಿದ್ಯಾ ನಾಮ್ ಹಯಗ್ರೀವ ಮುಪಾಸ್ಮಹೇ” ಇದನ್ನು ಪಠಿಸುವುದು ಹಾಗೂ ದಕ್ಷಿಣಾಮೂರ್ತಿ ದರ್ಶನ ಮಾಡಿಸುವುದು ಸಹ ಜ್ಞಾನ ಮತ್ತು ಮಾತಿನ ವೃದ್ಧಿಗೆ ಸಹಕಾರಿ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರತ್ಯೇಕ ರಸ್ತೆ ಅಪಘಾತ: ಮೂವರ ದಾರುಣ ಸಾವು, ಓರ್ವನ ಸ್ಥಿತಿ ಗಂಭೀರ – Kannada News | Karnataka Road Accidents: 3 Dead, 1 Injured in Mysuru, Chitradurga, Bengaluru Crashes

ಅಪಘಾತದ ಬಳಿಕ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿರುವ ಬೈಕ್​​Image Credit source: Tv9 Kannada

ಮೈಸೂರು/ಚಿತ್ರದುರ್ಗ, ಫೆಬ್ರವರಿ 20: ಮೈಸೂರು, ಚಿತ್ರದುರ್ಗ ಮತ್ತು ಬೆಂಗಳೂರು ಉತ್ತರ ತಾಲೂಕಿನಲ್ಲಿ ನಡೆದಿರುವ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯಲ್ಲಿ ಲಾರಿ-ಬೈಕ್​​ ನಡುವೆ ಅಪಘಾತ ನಡೆದು ಇಬ್ಬರು ಮೃತಪಟ್ಟಿದ್ದರೆ, ಚಿತ್ರದುರ್ಗದಲ್ಲಿ ನಡೆದ ಕಾರು ಮತ್ತು ಲಾರಿ ನಡುವಿನ ಡಿಕ್ಕಿಯಲ್ಲಿ ಓರ್ವ ಅಸುನೀಗಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಹುಣಸಮಾರನಹಳ್ಳಿಯಲ್ಲಿ ಗೂಡ್ಸ್​ ವಾಹನ ಡಿಕ್ಕಿಯಾಗಿ ಪೊಲೀಸ್​​ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದಾರೆ.

ಭೀಕರ ಅಪಘಾತ: ಬೈಕ್​​ ಸವಾರರು ಸಾವು

ಮೈಸೂರು ಜಿಲ್ಲೆ ಹುಣಸೂರಿನ ತಾಲೂಕಿನ ಅರಸು ಕಲ್ಲಹಳ್ಳಿ ಗ್ರಾಮದಲ್ಲಿ ಲಾರಿ-ಬೈಕ್​​ ನಡುವೆ ಸಂಭವಿಸಿದ ಭೀಕರ ಅಪಘಾತಕ್ಕೆ ಸವಾರರು ಬಲಿಯಾಗಿದ್ದಾರೆ. ಅಪಘಾತದ ರಭಸಕ್ಕೆ ಬೈಕ್​​ ಹೊತ್ತಿ ಉರಿದ್ದಿದ್ದು, ಸುರೇಶ್​(63), ಮಾದೇವ್​(52) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:  ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಅಪಘಾತ; ಬೈಕ್​​ ಸವಾರ ಸಾವು, ಪತ್ನಿ ಗಂಭೀರ

ಲಾರಿ-ಕಾರು ಮುಖಾಮುಖಿ ಡಿಕ್ಕಿ

ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿ ನಡೆದಿದೆ.

ಪೊಲೀಸ್​ ಸಿಬ್ಬಂದಿಗೆ ಗೂಡ್ಸ್​ ವಾಹನ ಡಿಕ್ಕಿ

ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್​ ಸಿಬ್ಬಂದಿಗೆ ಗೂಡ್ಸ್​ ವಾಹನ ಡಿಕ್ಕಿಯಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆ‌‌ಯ ಉತ್ತರ ತಾಲೂಕಿನ ಏರ್​ಪೋರ್ಟ್​​ ರಸ್ತೆಯ ಹುಣಸಮಾರನಹಳ್ಳಿ ಬಳಿ ನಡೆದಿದೆ. ಸಿಟಿಗೆ ಪ್ರವೇಶವಿಲ್ಲ ಎಂದು ವಾಹನ ತಡೆದಿದ್ದಕ್ಕೆ ಗುದ್ದಿಕೊಂಡು ಹೋಗಲು ಚಾಲಯ ಯತ್ನ ನಡೆಸಿದ್ದು, ಘಟನೆಯಲ್ಲಿ ಸಂಚಾರಿ ಪೊಲೀಸ್​ ಕಾನ್ಸ್​​ಟೇಬಲ್​ ವಿಕಾಸ್​ಗೆ ಗಂಭೀರ ಗಾಯಗಳಾಗಿವೆ. ನಿತ್ಯ ಬೆಳಗ್ಗೆ 7:30ರಿಂದ 11 ಗಂಟೆವರೆಗೆ ಏರ್​​ಪೋರ್ಟ್​ ರಸ್ತೆಯಲ್ಲಿ ಗೂಡ್ಸ್ ವಾಹನಗಳಿಗೆ ನಿಷೇಧವಿದೆ. ಹೀಗಿದ್ದರೂ ಏರ್​​ಪೋರ್ಟ್​ ಹೆದ್ದಾರಿಗೆ ಗೂಡ್ಸ್ ವಾಹನ ಎಂಟ್ರಿ ಕೊಟ್ಟಿತ್ತು. ಈ ವೇಳೆ‌‌ ವಾಹನ ನಿಲ್ಲಿಸುವಂತೆ ಸೂಚನೆ ನೀಡಿದರೂ ಚಾಲಕ ನಿಲ್ಲಿಸಿಲ್ಲ ಎನ್ನಲಾಗಿದೆ. ಗಂಭೀರ ಗಾಯಗೊಂಡ ವಿಕಾಸ್​​ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದ್ದು, ಅವರ ದೂರಿನನ್ವಯ ಗೂಡ್ಸ್ ಚಾಲಕನ‌ ವಿರುದ್ಧ ಕೇಸ್ ದಾಖಲಾಗಿದೆ. ಆರೋಪಿ ಭರಕತ್ ಖಾನ್ ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. ಗೂಡ್ಸ್​ ವಾಹನವನ್ನೂ ಸೀಜ್ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

World Day Of Social Justice 2026: ವಿಶ್ವ ಸಾಮಾಜಿಕ ನ್ಯಾಯ ದಿನದ ಆಚರಣೆ ಶುರುವಾದದ್ದು ಯಾವಾಗ? ಇಲ್ಲಿದೆ ಮಾಹಿತಿ – Kannada News | World Day of Justice 2026: Know the reason behind the celebration of World Day of Social Justice

ಸಮಾಜದಲ್ಲಿ ಐಕ್ಯತೆ, ಸಾಮರಸ್ಯ, ಸೌಹಾರ್ದತೆ , ಮೂಲಭೂತ ಹಕ್ಕುಗಳ ನ್ಯಾಯವಿದ್ದರೆ ದೇಶ ಅಭಿವೃದ್ಧಿಯಾಗಲು ಸಾಧ್ಯ. ಹೀಗಾಗಿ ಈ ಸಾಮಾಜಿಕ ಅಸಮಾನತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರತಿ ವರ್ಷ ಫೆಬ್ರವರಿ 20 ರಂದು ವಿಶ್ವ ಸಾಮಾಜಿಕ ನ್ಯಾಯ ದಿನವನ್ನು (World Day Of Social Justice) ಆಚರಿಸಲಾಗುತ್ತದೆ.

ವಿಶ್ವ ಸಾಮಾಜಿಕ ನ್ಯಾಯ ದಿನದ ಇತಿಹಾಸವೇನು?

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 2007 ಫೆಬ್ರವರಿ 20ರಂದು ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಅಂಗೀಕರಿಸಲಾಯಿತು. 2009ರಲ್ಲಿ ಈ ದಿನವನ್ನು ಆಚರಿಸಲು ಅನುಮೋದನೆ ನೀಡಲಾಯಿತು. ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕುವ ಪ್ರಯತ್ನಗಳಿಗೆ ಉತ್ತೇಜನ ನೀಡಿ, ಸಾಮಾಜಿಕ ನ್ಯಾಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶವು ಈ ದಿನದಾಗಿತ್ತು. ಹೀಗಾಗಿ ಅಂದಿನಿಂದ ಪ್ರತಿ ವರ್ಷ ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ:ಫೆಬ್ರವರಿ 14 ರಂದೇ ಪ್ರೇಮಿಗಳ ದಿನ ಆಚರಿಸುವುದು ಏಕೆ? ಇಲ್ಲಿದೆ ಕಾರಣ

ವಿಶ್ವ ಸಾಮಾಜಿಕ ನ್ಯಾಯ ದಿನದ ಮಹತ್ವವೇನು?

ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಪೂರ್ಣ ಉದ್ಯೋಗ , ಯೋಗ್ಯ ಕೆಲಸದ ಪ್ರಚಾರ, ಸಾರ್ವತ್ರಿಕ ಸಾಮಾಜಿಕ ರಕ್ಷಣೆ, ಲಿಂಗ ಸಮಾನತೆ, ಸಾಮಾಜಿಕ ಯೋಗಕ್ಷೇಮ ಹಾಗೂ ಎಲ್ಲರಿಗೂ ನ್ಯಾಯ ದೊರಕುವ ಪರಿಹಾರಗಳನ್ನು ಹುಡುಕುವ ಅಂತಾರಾಷ್ಟ್ರೀಯ ಸಮುದಾಯವನ್ನು ಒಗ್ಗೂಡಿಸುವ ಸಲುವಾಗಿ ಈ ದಿನವೂ ಮಹತ್ವದ್ದಾಗಿದೆ. ಈ ವಿಶೇಷ ದಿನದಂದು ಜನರಲ್ಲಿ ಜಾಗೃತಿ ಮೂಡಿಸಲು ಹತ್ತು ಹಲವು ಕಾರ್ಯಕ್ರಮಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ  ಹಮ್ಮಿಕೊಳ್ಳಲಾಗುತ್ತದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೈಲು ಈ ನಿಲ್ದಾಣಕ್ಕೆ ಬಂದಾಗ ಬೋಗಿಗಳಲ್ಲಿನ ದೀಪಗಳು ಆರಿ ಹೋಗುತ್ತೆ – Kannada News | Indian Railways: Tambaram Station’s Power Zone Switch and Brief Darkness Explained

ರೈಲ್ವೆ ನಿಲ್ದಾಣ-ಸಾಂದರ್ಭಿಕ ಚಿತ್ರ Image Credit source: iStock

ನವದೆಹಲಿ, ಫೆಬ್ರವರಿ 20: ಭಾರತೀಯ ರೈಲ್ವೆ(Indian Railways) ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದು. ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ದೇಶದಲ್ಲಿ ಒಂದು ರೈಲ್ವೆ ನಿಲ್ದಾಣವಿದೆ ಅಲ್ಲಿ ರೈಲು ಹಾದುಹೋದ ತಕ್ಷಣ ಇದ್ದಕ್ಕಿದ್ದಂತೆ ಬೋಗಿಗಳಲ್ಲಿ ಕತ್ತಲೆ ಆವರಿಸುತ್ತೆ, ದೀಪಗಳು ತನ್ನಿಂತಾನೆ ಆಫ್ ಆಗುತ್ತದೆ. ಇದು ಭಯಾನಕವೆನಿಸಬಹುದು. ಆದರೆ ಭಯ ಪಡುವ ಅಗತ್ಯವಿಲ್ಲ ಇದಕ್ಕೆ ಇರುವುದು ತಾಂತ್ರಿಕ ಕಾರಣ.

ನಿಲ್ದಾಣ ಎಲ್ಲಿದೆ?
ಈ ವಿಶಿಷ್ಟ ನಿಲ್ದಾಣವು ತಮಿಳುನಾಡಿನ ಚೆನ್ನೈ ಬಳಿ ಇರುವ ತಾಂಬರಂ ರೈಲು ನಿಲ್ದಾಣವಾಗಿದೆ. ಇದು ದಕ್ಷಿಣ ರೈಲ್ವೆ ಭಾಗವಾಗಿದೆ. ಚೆನ್ನೈನ ಸ್ಥಳೀಯ ರೈಲುಗಳಿಗೆ ಪ್ರಮುಖ ಕೇಂದ್ರವಾಗಿದೆ. ಪ್ರತಿದಿನ ಸಾವಿರಾರು ಪ್ರಯಾಣಿಕರು ಈ ನಿಲ್ದಾಣದ ಮೂಲಕ ಪ್ರಯಾಣಿಸುತ್ತಾರೆ. ಮುಂಬೈ, ಕೋಲ್ಕತ್ತಾ ಮತ್ತು ದೆಹಲಿಯಂತಹ ಸ್ಥಳಗಳಿಗೆ ರೈಲುಗಳು ಇಲ್ಲಿಂದ ಹೊರಡುತ್ತವೆ. ವಿಶೇಷವೆಂದರೆ ತಾಂಬರಂ ನಿಲ್ದಾಣದ ಬಳಿ ಒಂದು ಸಣ್ಣ ಪ್ರದೇಶವಿದ್ದು, ರೈಲು ಹಾದುಹೋದ ತಕ್ಷಣ ಅಲ್ಲಿ ದೀಪಗಳು ಆರಿ ಹೋಗುತ್ತವೆ. ಈ ವಿದ್ಯಮಾನವು ಸ್ಥಳೀಯ ರೈಲುಗಳಲ್ಲಿ ಮಾತ್ರ ಸಂಭವಿಸುತ್ತದೆ, ಮೇಲ್ ಅಥವಾ ಎಕ್ಸ್​​​ಪ್ರೆಸ್ ರೈಲುಗಳಲ್ಲಿ ಸಂಭವಿಸುವುದಿಲ್ಲ.

ವಿದ್ಯುತ್ ಕಡಿತಗೊಳ್ಳಲು ಕಾರಣವೇನು?
ಮೊದಲ ಬಾರಿ ಪ್ರಯಾಣಿಸುವ ಪ್ರಯಾಣಿಕರು ಭಯಪಡುವುದು ಸಹಜ ಆದರೆ ಅದರ ಅಗತ್ಯವಿಲ್ಲ, ಸ್ಥಳೀಯ ರೈಲುಗಳು ಓವರ್ ಹೆಡ್ ತಂತಿಗಳಿಂದ ವಿದ್ಯುತ್ ಪಡೆಯುತ್ತವೆ. ತಾಂಬರಂ ನಿಲ್ದಾಣದ ಬಳಿ ರೈಲು ಮಾರ್ಗವು ಎರಡು ವಿದ್ಯುತ್ ವಲಯಗಳ ನಡುವೆ ಇರುತ್ತವೆ. ರೈಲು ರೈಲು ಒಂದು ವಲಯದಿಂದ ಮತ್ತೊಂದು ವಲಯಕ್ಕೆ ದಾಟಿದಾಗ ಕೆಲವು ಸೆಕೆಂಡುಗಳ ಕಾಲ ವಿದ್ಯುತ್ ಸರಬರಾಜು ನಿಲ್ಲುತ್ತದೆ. ಇದರಿಂದಾಗಿ ರೈಲಿನ ದೀಪಗಳು ಮತ್ತು ಫ್ಯಾನ್​ಗಳು ಸ್ಥಗಿತಗೊಳ್ಳುತ್ತವೆ. ಕೇವಲ 2-3 ಸೆಕೆಂಡುಗಳ ವರೆಗೆ ಇರುತ್ತದೆ. ನಂತರ ಹೊಸ ವಿದ್ಯುತ್ ವಲಯಕ್ಕೆ ಮರಳಿದಾಗ ಎಲ್ಲವೂ ಸರಿಯಾಗುತ್ತದೆ.

ಮತ್ತಷ್ಟು ಓದಿ: ಉಚಿತ ಊಟ ನೀಡುವ ಭಾರತದ ಏಕೈಕ ರೈಲು ಎಲ್ಲಿದೆ ಗೊತ್ತಾ?

ಮೊದಲು ಪ್ರಯಾಣಿಕರು ಈ ಕತ್ತಲಿನಿಂದ . ರೈಲ್ವೆ ಈ ಬಗ್ಗೆ ಜಾಗೃತಿ ಮೂಡಿಸಿದ್ದು, ಇದು ಸಾಮಾನ್ಯ ಎಂದು ವಿವರಿಸುವ ಸೂಚನಾ ಫಲಕಗಳನ್ನು ನಿಲ್ದಾಣಗಳಲ್ಲಿ ಅಳವಡಿಸಿದೆ. ಹೊಸ ತಂತ್ರಜ್ಞಾನದೊಂದಿಗೆ ಭವಿಷ್ಯದಲ್ಲಿ ಈ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಚೆನ್ನೈ ಮೆಟ್ರೋ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಟಾಕ್ಸಿಕ್​ ಟೀಸರ್​: ಫ್ಯಾನ್ಸ್​​ಗೆ ಡಬಲ್ ಧಮಾಕ; ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಯಶ್ – Kannada News | Toxic Movie Teaser Launch Yash Starrer Geetu Mohandas Directional PAN India Movie Review

‘ಟಾಕ್ಸಿಕ್’ ಟ್ರೇಲರ್ ಬಗ್ಗೆ ಚರ್ಚೆ ನಡೆಯುವಾಗಲೇ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಈ ಚಿತ್ರ ಹೇಗಿರದಬಹುದು ಎಂಬ ಸ್ಪಷ್ಟ ಚಿತ್ರಣ ಸಿಕ್ಕಿದೆ. ಯಶ್ ಅವರ ಎದುರು ಬಂದವರು ಉಡೀಸ್ ಆಗುವ ಸೂಚನೆ ಟೀಸರ್ ನೋಡಿದವರಿಗೆ ಸಿಕ್ಕಿದೆ. ಈ ಹಿಂದೆ ಬಿಡುಗಡೆ ಆಗಿದ್ದ ಟೀಸರ್​ಗಿಂತ ಈ ಟೀಸರ್ ತುಂಬಾನೇ ಭಿನ್ನವಾಗಿದೆ. ಯಶ್ ಅವರ ರಾ ಲುಕ್ ಗಮನ ಸೆಳೆದಿದೆ. ಟೀಸರ್​​ನಲ್ಲಿ ಇರುವ ಅಂಶಗಳೇನು ಎಂಬುದರ ವಿವರ ಇಲ್ಲಿದೆ.

ಈ ಮೊದಲು ರಿಲೀಸ್ ಆದ ‘ಟಾಕ್ಸಿಕ್’ ಸಿನಿಮಾದ ಟೀಸರ್ ಹಲ್​ಚಲ್​ ಎಬ್ಬಿಸಿತ್ತು. ಲೈಂಗಿಕ ಕ್ರಿಯೆ ನಡೆಸೋ ದೃಶ್ಯವನ್ನು ಟೀಸರ್​​ನಲ್ಲಿ ತೋರಿಸಿದ್ದು ಅನೇಕರ ಕೋಪಕ್ಕೆ ಕಾರಣ ಆಯಿತು. ಈ ಸಂಬಂಧ ದೂರು ಕೂಡ ದಾಖಲಾಯಿತು. ಆದರೆ, ಅವ್ಯಾವುದು ಟ್ರೇಲರ್​​ನ ತಡೆಯಲಿಲ್ಲ. ಚಿತ್ರದ ಟೀಸರ್ ಯೂಟ್ಯೂಬ್ ಒಂದರಲ್ಲೇ ಮಿಲಿಯನ್ ವೀಕ್ಷಣೆ ಕಂಡಿತು. ಈಗ ಹೊಸ ಟೀಸರ್ ಮತ್ತಷ್ಟು ಗಮನ ಸೆಳೆದಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಟ್ರೇಲರ್ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಸರ್​​ಪ್ರೈಸ್ ಕೊಟ್ಟ ಯಶ್

‘ಟಾಕ್ಸಿಕ್’ ಚಿತ್ರವನ್ನು ಗೀತು ಮೋಹನ್​ದಾಸ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಕೆವಿಎನ್ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿದೆ. ಯಶ್ ಕೂಡ ನಿರ್ಮಾಪಕ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ ಮೊದಲಾದವರು ನಟಿಸಿದ್ದಾರೆ. ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:42 am, Fri, 20 February 26

Source link

Tumakuru: ಸಾಕು ಮಗ, ಸಹೋದರಿಯಿಂದಲೇ ಮಹಿಳೆಯ ಕೊಲೆ; ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರ! – Kannada News | Karnataka FDA Murder: Adopted Son and Sister Arrested for Shocking Tumakuru Crime

ಸಾಕು ಮಗ, ಸಹೋದರಿಯಿಂದಲೇ ಮಹಿಳೆಯ ಕೊಲೆImage Credit source: Tv9 Kannada

ತುಮಕೂರು, ಫೆಬ್ರವರಿ 20: ತುರುವೇಕೆರೆ ತಾಲೂಕಿನ ಬಿಇಒ ಕಚೇರಿಯಲ್ಲಿ ಎಫ್​​ಡಿಎ ಆಗಿ ಕೆಲಸ ಮಾಡುತಿದ್ದ ಮಹಿಳೆಯನ್ನ ಆಕೆಯ ಸಾಕು ಮಗ ಮತ್ತು ಸಹೋದರಿಯೇ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿರುವ ಘಟನೆ ಚಿಕ್ಕನಾಯಕನಹಳ್ಳಿಯ ಜೋಗಿಹಳ್ಳಿಯಲ್ಲಿ ನಡೆದಿದೆ. ಜಯಲಕ್ಷ್ಮೀ ಮೃತ ಮಹಿಳೆಯಾಗಿದ್ದು, ಆರೋಪಿಗಳಾದ ಅನುಸೂಯಾ ಮತ್ತು ಚಂದ್ರಶೇಖರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಜಯಲಕ್ಷ್ಮೀ ಹೃದಯಾಘಾತದಿಂದ ಮೃತಪಟ್ಟಿರೋದಾಗಿ ಎಲ್ಲರನ್ನೂ ನಂಬಿಸಿದ್ದ ಆರೋಪಿಗಳ ಬಂಡವಾಳ ಪೊಲೀಸ್​​ ತನಿಖೆ ವೇಳೆ ಬಯಲಾಗಿದ್ದು, ಗಂಡನನ್ನು ಕಳೆದುಕೊಂಡಿದ್ದ ಮೃತ ಮಹಿಳೆಗೆ ಮಕ್ಕಳೂ ಇರಲಿಲ್ಲ ಎನ್ನಲಾಗಿದೆ.

ಇನ್ನು ಜಯಲಕ್ಷ್ಮೀ ಸಾವಿನ ಬಗ್ಗೆ ಅನುಮಾನಗೊಂಡ ಶ್ರೀನಿವಾಸ್ ಎಂಬಾತ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಆಧಾರದ ಮೇಲೆ ತನಿಖೆಗಿಳಿದ ಪೊಲೀಸರು, ಅಂತ್ಯಕ್ರಿಯೆಗೆ ಸಿದ್ಧಗೊಂಡಿದ್ದ ಶವವನ್ನು ಮರಣೊತ್ತರ ಪರಿಕ್ಷೆಗೆ ರವಾನೆ ಮಾಡಿದ್ದಾರೆ. ಬಳಿಕ ಆಕೆಯ ಜೊತೆ ವಾಸವಿದ್ದ ಸಾಕು ಮಗ ಚಂದ್ರಶೇಖರ್ ಹಾಗೂ ತಂಗಿ ಅನುಸೂಯಾ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಇವರೇ ತಡರಾತ್ರಿ ಜಯಲಕ್ಷ್ಮೀ ಉಸಿರುಗಟ್ಟಿಸಿ ಕೊಂದಿರೊದು ಬೆಳಿಕಿಗೆ ಬಂದಿದೆ.

ಇದನ್ನೂ ಓದಿ: 3 ವರ್ಷದ ಮಗುವಿನ ಮೇಲೆ ಅಪ್ಪನ ಗೆಳೆಯನಿಂದಲೇ ಅತ್ಯಾಚಾರ

ಜಯಲಕ್ಷ್ಮೀ ಸಾವಿನ ಬಗ್ಗೆ ಅನುಮಾನಗೊಂಡು ದೂರು ನೀಡಿದ್ದ ಶ್ರೀನಿವಾಸ್ ಅಸಲಿಗೆ ಆಕೆಯ ಗೆಳಯ ಎಂಬುದು ಗೊತ್ತಾಗಿದೆ. ಪೊಲೀಸ್ ಮಾಹಿತಿ ಪ್ರಕಾರ ಗಂಡನ ಕಳೆದುಕೊಂಡಿದ್ದ ಜಯಲಕ್ಷ್ಮೀಗೆ ಕಳೆದ 20 ವರ್ಷಗಳ ಹಿಂದೆ ಶ್ರೀನಿವಾಸ್ ಪರಿಯವಾಗಿತ್ತು. ಆ ಬಳಿಕ ಇಬ್ಬರಲ್ಲೂ ಆತ್ಮೀಯತೆ ಹೆಚ್ಚಾಗಿ ಒಟ್ಟಿಗೆ ಸಂಸಾರ ಮಾಡುತಿದ್ದರು. ಇದರ ನಡುವೆ ಮಕ್ಕಳಿಲ್ಲದ ಕಾರಣಕ್ಕೆ ಈಕೆ ತನ್ನ ಸಹೋದರಿ ಅನುಸೂಯಾ ಮಗ ಚಂದ್ರಶೇಖರ್​​ನ ದತ್ತು ಪಡೆದುಕೊಂಡು ಸಾಕಿಕೊಂಡಿದ್ದಳು. ಇನ್ನು ತುಮಕೂರಿನಲ್ಲಿ ವಾಸವಾಗಿದ್ದ ಅನುಸೂಯಾ ಹಾಗೂ ಚಂದ್ರಶೇಖರ್ ಕಳೆದ ಎಂಟು ತಿಂಗಳ ಹಿಂದೆ ಚಿಕ್ಕನಾಯಕನಹಳ್ಳಿಯ ಜೋಗಿಹಳ್ಳಿಯ ಜಯಲಕ್ಷ್ಮೀ ನಿವಾಸಕ್ಕೆ ಬಂದಿದ್ದರು. ಈ ವೇಳೆ ಶ್ರೀನಿವಾಸ್​​ಗೆ ಒತ್ತಡ ಹಾಕಿದ್ದ ಇವರು, ಆತ ಮನೆ ಬಿಡುವಂತೆ ಮಾಡಿದ್ದರು. ಇಷ್ಟೆಲ್ಲ ನಡೆದ ಬಳಿಕ ಜಯಲಕ್ಷ್ಮೀ ತುರುವೆಕೆರೆಯಲ್ಲಿ ಮನೆ ಮಾಡಲು ನಿರ್ಧರಿಸಿದ್ದು, ಅದರಂತೆ ಬಾಡಿಗೆ ಮನೆಗೆ ಅಡ್ವಾನ್ಸ್ ಕೂಡ ಕೊಟ್ಟಿದ್ದರು. ಈಕೆ ಮನೆ ತೊರೆಯುತ್ತಿರುವ ವಿಚಾರ ತಿಳಿದ ಅನುಸೂಯಾ ಮತ್ತು ಚಂದ್ರಶೇಖರ್ ಉಸಿರುಗಟ್ಟಿಸಿ ಕೊಲೆಗೈದಿರೋದು ತನಿಖೆ ವೇಳೆ ಗೊತ್ತಾಗಿದೆ. ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು, ವಿಚಾರಣೆ ಮುಂದುವರಿಸಿದ್ದಾರೆ. ಕೊಲೆಗೆ ಆರ್ಥಿಕ ಹಾಗೂ ಅನುಕಂಪದ ಆಧಾರಿತ ಸರ್ಕಾರಿ ನೌಕರಿ ಕಾರಣ ಎಂಬ ಅನುಮಾನ ಮೂಡಿದ್ದು, ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Bengaluru Air Quality: ಮಂಗಳೂರಿನ ವಾಯುಗುಣಮಟ್ಟ ಮತ್ತಷ್ಟು ಕುಸಿತ! – Kannada News | Bangalore Air Pollution Crisis: Mangalore’s Air quality dropped again

ಮಂಗಳೂರಿನ ವಾಯುಗುಣಮಟ್ಟ ಮತ್ತಷ್ಟು ಕುಸಿತ!

ಬೆಂಗಳೂರು, ಫೆಬ್ರವರಿ 20: ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಮಂಗಳೂರು ಮತ್ತು ಉಡುಪಿಯ ವಾಯು ಗುಣಮಟ್ಟವೂ (Bengaluru Air Quality) ಹದಗೆಟ್ಟಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇಂದೂ ಸಹ ಹಲವೆಡೆ ಕಳಪೆ ಏರ್ ಕ್ವಾಲಿಟಿ ದಾಖಲಾಗಿದ್ದು, ಮಂಗಳೂರಿನ AQI ಇನ್ನಷ್ಟು ಹದಗೆಟ್ಟಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 135ಕ್ಕೆ ತಲುಪಿದೆ. ಅದಕ್ಕಿಂತ ಹೆಚ್ಚಾಗಿ ಮಂಗಳೂರಿನ ಏರ್ ಕ್ವಾಲಿಟಿ 194 ಆಗಿದೆ. ಹಲವು ದಿನಗಳಿಂದ ವಿಪರೀತ ಏರಿಕೆ ಕಾಣುತ್ತಿರುವ ಮಂಗಳೂರಿನ ಏರ್ ಕ್ವಾಲಿಟಿ ಇಂದು 200ರ ಗಡಿ ತಲುಪಿರುವುದು ಆತಂಕಕಾರಿಯಾಗಿದೆ. ಜೊತೆಗೆ ಬಳ್ಳಾರಿಯ ವಾಯು ಗುಣಮಟ್ಟವೂ ಸಹ 152 ಆಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –135
  • ಮಂಗಳೂರು-194
  • ಮೈಸೂರು –156
  • ಬೆಳಗಾವಿ – 170
  • ಕಲಬುರ್ಗಿ-146
  • ಶಿವಮೊಗ್ಗ – 179
  • ಬಳ್ಳಾರಿ – 152
  • ಹುಬ್ಬಳ್ಳಿ- 159
  • ಉಡುಪಿ –179
  • ವಿಜಯಪುರ –146

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:33 am, Fri, 20 February 26

Source link

ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ – Kannada News | Dhanush And Spandana Somanna acted together For Jinugo Male Album Song

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿಗಳಾದ ಧನುಷ್ ಹಾಗೂ ಸ್ಪಂದನಾ ಅವರು ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ್ದಾರೆ. ಹಾಗಂತ ಇದು ಸಿನಿಮಾ ಅಲ್ಲ, ಬದಲಿಗೆ ಆಲ್ಬಂ ಸಾಂಗ್. ‘ಜಿನುಗೋ ಮಳೆ’ ಅನ್ನೋದು ಆಲ್ಬಂ ಹೆಸರು. ಆಕಾಶ್ ಉನ್ನಿಕೃಷ್​ಣನ್ ಅವರು ಇದನ್ನು ನಿರ್ದೇಶನ ಮಾಡುತ್ತಿದ್ದಾರೆ. ಯುನಿಕಾರ್ನ್​ ಎಂಟರ್​​ಟೇನ್​​ಮೆಂಟ್ ಅವರು ಇದನ್ನು ನಿರ್ಮಾಣ ಮಾಡುತ್ತಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಗೊಂಬೆಯೇ ಈ ಕೋತಿ ಮರಿಯ ಕುಟುಂಬ, ಬೇರೆ ಕೋತಿಗಳು ಕೊಡುವ ಕಾಟ ನೋಡಿದ್ರೆ ನಿಮ್ಮ ಕಣ್ಣಲ್ಲೂ ನೀರು ಬರುತ್ತೆ – Kannada News | Viral Lonely Monkey Faces Another Beating, Sparks Online Outrage

ಜಪಾನ್, ಫೆಬ್ರವರಿ 20: ಒಂಟಿ ಕೋತಿ ಮರಿಯೊಂದು ಮೃಗಾಲಯದಲ್ಲಿ ಪಡುತ್ತಿರುವ ಪಾಡು ಯಾರಿಗೂ ಬೇಡ, ಅದಕ್ಕೆ ಒಂದು ಗೊಂಬೆಯೇ ತನ್ನ ಕುಟುಂಬ. ಆದರೆ ಅಲ್ಲಿರುವ ಬೇರೆ ಕೋತಿಗಳು ಆ ಕೋತಿಯನ್ನು ನೆಮ್ಮದಿಯಾಗಿರಲು ಬಿಡುತ್ತಿಲ್ಲ. ಜಪಾನ್​ನ ಇಚಿಕಾವಾ ಸಿಟಿ ಮೃಗಾಲಯದ ವಿಡಿಯೋಗಳು ಕಣ್ಣೀರು ತರಿಸುವಂತಿವೆ. ಆ ಮರಿಗೆ ದೊಡ್ಡ ಕೋತಿಗಳು ಹಲ್ಲೆ ನಡೆಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಆ ಮರಿಗೆ ಹುಟ್ಟಿನಿಂದಲೇ ತಾಯಿ ಜತೆ ಸಂಪರ್ಕ ಇರಲಿಲ್ಲ, ಈ ಮರಿಯನ್ನು ಬೇರೆ ಮಂಗಗಳನ್ನು ತಮ್ಮೊಟ್ಟಿಗೆ ಸೇರಿಸಿಕೊಳ್ಳಲು ಸಿದ್ಧವಿರಲಿಲ್ಲ.

ಆ ಸಮಯದಲ್ಲಿ ಆ ಮಂಗಕ್ಕೆ ಗೊಂಬೆಯೊಂದು ಸಂಗಾತಿಯಾಗಿ ಸಿಕ್ಕಿತ್ತು, ಅದು ಆ ಗೊಂಬೆಯ ಜತೆಯೇ ಸಮಯ ಕಳೆಯಲು ಶುರು ಮಾಡಿತ್ತು. ಆದರೆ ಉಳಿದ ಮಂಗಗಳು ಅದರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋಗಳು ಹೊರಬಿದ್ದಿವೆ. ಕೋತಿ ಹೆಸರು ಪಂಚ್ ಅದು ಬೇರೆ ಕೋತಿಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಲು ಕಷ್ಟಪಡುತ್ತಿದೆ ಯಾರೂ ಕೂಡ ಅದನ್ನು ತನ್ನ ಹತ್ತಿರ ಬಿಟ್ಟುಕೊಳ್ಳುತ್ತಿಲ್ಲ. ಪಂಚ್ ಜುಲೈ 26, 2025 ರಂದು ಜನಿಸಿದ್ದು, ಜನನದ ಸಮಯದಲ್ಲಿ ಕೇವಲ 500 ಗ್ರಾಂ ತೂಕವಿತ್ತು. ಮೊದಲ ಬಾರಿಗೆ ಪೋಷಕರಾಗಿದ್ದ ತಾಯಿ ಕೋತಿ, ಜನಿಸಿದ ನಂತರ ಅವನನ್ನು ನೋಡಿಕೊಳ್ಳಲು ವಿಫಲವಾಗಿತ್ತು. ಬೇರೆ ಕೋತಿಗಳು ಹೊಡೆದಾಗ ಆ ಮರಿ ತನ್ನ ಗೊಂಬೆ ಇದ್ದಲ್ಲಿಗೆ ಸಾಂತ್ವನಕ್ಕಾಗಿ ಓಡಿ ಹೋಗುವುದನ್ನು ನೋವು ಕಾಣಬಹುದು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link